Tag: beer

  • ಆದಾಯ ನಷ್ಟ ತಡೆಗೆ ಪ್ಲ್ಯಾನ್‌ – ಬಿಯರ್ ಕುಡಿಯುವ ಕಾನೂನುಬದ್ಧ ವಯಸ್ಸು 21ಕ್ಕೆ ಇಳಿಕೆ

    ಆದಾಯ ನಷ್ಟ ತಡೆಗೆ ಪ್ಲ್ಯಾನ್‌ – ಬಿಯರ್ ಕುಡಿಯುವ ಕಾನೂನುಬದ್ಧ ವಯಸ್ಸು 21ಕ್ಕೆ ಇಳಿಕೆ

    ನವದೆಹಲಿ: ಆದಾಯ ನಷ್ಟ ತಡೆಯಲು ಚಿಂತನೆ ನಡೆಸಿರುವ ದೆಹಲಿ ರಾಜ್ಯ ಸರ್ಕಾರ (Delhi Government) ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಅದರ ಪ್ರಕಾರ, ಬಿಯರ್‌ (Beer) ಕುಡಿಯುವ ಕಾನೂನು ಬದ್ಧ ವಯಸ್ಸನ್ನು 25‌ ರಿಂದ 21 ವರ್ಷಕ್ಕೆ ಇಳಿಸಲು ಪ್ಲ್ಯಾನ್‌ ಮಾಡಿದೆ.

    ಮೂಲಗಳ ಪ್ರಕಾರ, ಇತ್ತೀಚೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ದೆಹಲಿ ಸರ್ಕಾರ ಈ ಬಗ್ಗೆ ಚರ್ಚಿಸಿದೆ. ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ಗಳಲ್ಲಿ ಈಗಾಗಲೇ ಬಿಯರ್‌ ಕುಡಿಯುವ ಕಾನೂನುಬದ್ಧ ವಯೋಮಿತಿಯನ್ನ 21 ವರ್ಷಕ್ಕೆ ಇಳಿಸಲಾಗಿದೆ. ದೆಹಲಿಯಲ್ಲೂ ವಯೋಮಿತಿ ಕಡಿಮೆ ಮಾಡುವುದರಿಂದ ಅಕ್ರಮ ಮದ್ಯ ಮಾರಾಟ ತಪ್ಪುತ್ತದೆ. ಜೊತೆಗೆ ಬ್ಲ್ಯಾಕ್‌ ಮಾರ್ಕೆಟ್‌ ಅನ್ನೂ ನಿಯಂತ್ರಿಸಬಹುದು ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ.

    ಇದಲ್ಲದೇ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಅಂಗಡಿಗಳನ್ನ ನಡೆಸಲು ಹೈಬ್ರಿಡ್ ಮಾದರಿ ಅನುಸರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಂದ್ರೆ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾರಾಟ ನಡೆಯಬೇಕು. ಪ್ರಸ್ತುತ, ದೆಹಲಿಯಲ್ಲಿ ಕೇವಲ 4 ಸರ್ಕಾರಿ ನಿಗಮಗಳು ಮಾತ್ರ ಮದ್ಯದ ಅಂಗಡಿಗಳನ್ನು ನಡೆಸುತ್ತಿವೆ. ಹೀಗಾಗಿ ಸರ್ಕಾರಿ ಮಾರಾಟಗಾರರ ಜೊತೆಗೆ ಖಾಸಗಿ ಸಹಭಾಗಿತ್ವ ತೊಡಗಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ.

    ಆದಾಯ ನಷ್ಟ ತಡೆಯಲು ಪ್ಲ್ಯಾನ್‌
    ಮೂಲಗಳ ಪ್ರಕಾರ, ಹೊಸ ಅಬಕಾರಿ ನೀತಿಯ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಪರಿಗಣಿಸಲಾಗುತ್ತಿದೆ. ನೆರೆಯ ರಾಜ್ಯಗಳ ಮದ್ಯದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿ ದೆಹಲಿ ನಷ್ಟ ಅನುಭವಿಸದಂತೆ ನೋಡಿಕೊಳ್ಳುವುದು ಹೊಸ ನೀತಿಯ ಗುರಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪ್ರೀಮಿಯಂ ಬ್ರಾಂಡ್‌ಗಳ ಲಭ್ಯತೆ
    ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರೀಮಿಯಂ ಬ್ರ್ಯಾಂಡ್‌ಗಳು ದೆಹಲಿಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದನ್ನು ಸಮಿತಿ ಪರಿಶೀಲಿಸುತ್ತಿದೆ. ಪ್ರಸ್ತುತ, ಅವುಗಳ ಕೊರತೆಯಿಂದಾಗಿ, ಗ್ರಾಹಕರು ಹರಿಯಾಣ ಮತ್ತು ಯುಪಿಯತ್ತ ಮುಖ ಮಾಡುತ್ತಾರೆ, ಇದರಿಂದಾಗಿ ದೆಹಲಿಗೆ ಆದಾಯ ನಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಜನನಿಬಿಡ ವಸತಿ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ.

  • ಬೈಕ್‌ನಲ್ಲಿ ಬಿಯರ್‌ ಕುಡಿದು ಹುಚ್ಚಾಟ – ಆರೋಪಿ ಅರೆಸ್ಟ್‌

    ಬೈಕ್‌ನಲ್ಲಿ ಬಿಯರ್‌ ಕುಡಿದು ಹುಚ್ಚಾಟ – ಆರೋಪಿ ಅರೆಸ್ಟ್‌

    ಬಳ್ಳಾರಿ: ಚಲಿಸುತ್ತಿರುವ ಬೈಕ್ (Bike) ಹಿಂಬದಿ ಕುಳಿತು ಯುವಕನೊಬ್ಬ ಬಿಯರ್ (Beer) ಕುಡಿದ ವಿಡಿಯೋ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಬಳ್ಳಾರಿ ಸಂಚಾರಿ ಠಾಣೆ ಪೊಲೀಸರು ಬೈಕ್ ಸಮೇತ ಆರೋಪಿಯನ್ನ ಬಂಧಿಸಿದ್ದಾರೆ.

    ಬಳ್ಳಾರಿಯ (Ballari) ಕರ್ಚೇಡು ಗ್ರಾಮದ ಕೇಶವ ಬಂಧಿತ ಆರೋಪಿ. ನಗರದ ರೈಲ್ವೇ ಫಸ್ಟ್ ಗೇಟ್ ಬಳಿ ಬೈಕಿನ ಹಿಂಬದಿಯಲ್ಲಿ ಕುಳಿತು ಕೇಶವ ಬಿಯರ್‌ ಕುಡಿದಿದ್ದ.  ಇದನ್ನೂ ಓದಿ: ಕಾವೇರಿ ನದಿಗೆ ಹಾರಿ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ – 3 ದಿನಗಳ ಬಳಿಕ ಶವ ಪತ್ತೆ

     

    ಬಿಯರ್‌ ಕುಡಿಯುತ್ತಿದ್ದ ದೃಶ್ಯವನ್ನ ಸಾರ್ವಜನಿಕರು ಸೆರೆ ಹಿಡಿದಿದ್ದರು. ವಿಷಯ ಗಮನಕ್ಕೆ ಬರುತ್ತಲೇ ಕಾರ್ಯಪ್ರವೃತ್ತರಾಗಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲು

  • ಬಿಯರ್ ರೇಟ್ ಕೇಳಿ ಶಾಕ್ – ಹಾಟ್ ಡ್ರಿಂಕ್ಸ್ ಮೊರೆಹೋದ ಮದ್ಯಪ್ರಿಯರು

    ಬಿಯರ್ ರೇಟ್ ಕೇಳಿ ಶಾಕ್ – ಹಾಟ್ ಡ್ರಿಂಕ್ಸ್ ಮೊರೆಹೋದ ಮದ್ಯಪ್ರಿಯರು

    ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಬಿಯರ್ ಬೆಲೆ ಹೆಚ್ಚಳ (Beer Rate Hike) ಮಾಡಿದ ಹಿನ್ನಲೆ ದುಬಾರಿ ಹಣ ತೆತ್ತು ಬಿಯರ್ ಕುಡಿಯುವುದರ ಬದಲು, ಮದ್ಯಪ್ರಿಯರು ಹಾಟ್ ಡ್ರಿಂಕ್ಸ್ (Hot Drinks) ಮೊರೆ ಹೋಗಿದ್ದಾರೆ. ಇದ್ರಿಂದ ಬಿಯರ್ ಮಾರಾಟ ಹಾಗೂ ಬೇಡಿಕೆಯಲ್ಲಿ ಗಣನೀಯವಾಗಿ ಕುಂಠಿತವಾಗಿದ್ದು, ಹಾಟ್ ಡ್ರಿಂಕ್ಸ್ ಬೇಡಿಕೆ ಹೆಚ್ಚಳವಾಗಿದೆ.

    ಹೌದು.. ಜನವರಿ 20, 2025ರಂದು ರಾಜ್ಯ ಸರ್ಕಾರ ಕರ್ನಾಟಕ ಅಬಕಾರಿ ನಿಯಮಗಳಲ್ಲಿ ತಿದ್ದುಪಡಿ ತಂದು ಬಿಯರ್ ಬೆಲೆ ಹೆಚ್ಚಳ ಮಾಡಿದೆ. ಹೊಸ ಅಬಕಾರಿ ನಿಯಮಗಳ ಪ್ರಕಾರ ಲೀಟರ್ ಬಿಯರ್ ಮೇಲೆ ಶೇ.12 ರಿಂದ ಶೇ.20ರಷ್ಟು ಬೆಲೆ ಹೆಚ್ಚಳವಾಗಿದೆ. ಇದರ ಪರಿಣಾಮ ಬಿಯರ್ ಪ್ರಿಯರು ದುಬಾರಿ ಬಿಯರ್ ಕುಡಿಯುವುದರ ಬದಲು, ಹಾಟ್ ಡ್ರಿಂಕ್ಸ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ – ‘ಡೆವಿಲ್’ ಸಿನಿಮಾದ ಟೀಸರ್ ರಿಲೀಸ್

    ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ ಒಂದು ತಿಂಗಳಲ್ಲಿ ಶೇ.30 ರಷ್ಟು ಬಿಯರ್ ಬೇಡಿಕೆ ಕುಂಠಿತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2024ರ ಡಿಸೆಂಬರ್ ತಿಂಗಳಿನಲ್ಲಿ ಬರೋಬ್ಬರಿ 63,303 ಕೇಸ್ ಬಿಯರ್ ಮಾರಾಟವಾಗಿದ್ರೆ ಜನವರಿ 2025 ಜನವರಿಯಲ್ಲಿ 44,428 ಕೇಸ್ ಮಾರಾಟವಾಗಿದ್ದು, ಕೇವಲ ಒಂದೇ ತಿಂಗಳಲ್ಲಿ ಬರೋಬ್ಬರಿ 18,875 ಕೇಸ್ ಬಿಯರ್ ಮಾರಾಟ ನಿಲ್ ಆಗಿದೆ. ಇದನ್ನೂ ಓದಿ: ಶಿವಮೊಗ್ಗ | ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು – ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು

    ಇನ್ನೂ ಮದ್ಯ ಪ್ರಿಯ ಹೊಸ ಗ್ರಾಹಕರು, ಮೊದಲು ಬಿಯರ್ ಅಭ್ಯಾಸ ಮಾಡಿಕೊಂಡು ನಂತರ ಹಾಟ್ ಡ್ರಿಂಕ್ಸ್ ಸೇವನೆ ಸರ್ವೆ ಸಾಮಾನ್ಯವಾಗಿತ್ತು. ಆದ್ರೆ ಬಿಯರ್ ಖರೀದಿಗೆ ಹೋದ ಅದೇಷ್ಟೊ ಗ್ರಾಹಕರು ಬಿಯರ್ ಬೆಲೆ ಕೇಳಿ ಶಾಕ್ ಆಗ್ತಿದ್ದು ಹಾಟ್ ಡ್ರಿಂಕ್ಸ್ ಖರೀದಿ ಮಾಡ್ತಿದ್ದಾರಂತೆ, ಸ್ವತಃ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಬಾರ್‌ನಲ್ಲಿ ಒಂದು ಬಾಟಲ್ ʻಕೆಎಫ್ʼ ಬಿಯರ್ ಬೆಲೆ 185 ರೂ., ಹಾಗೆ ಟೂಬೊರ್ಗೊ 195 ರೂ., ಯು.ಬಿ 160 ರೂ., ಬುಲೆಟ್ 150 ರೂ., ಬಡ್‍ವೈಜರ್ 245 ರೂ., ಕಾಲ್ಸ್ ಬರ್ಗ್ 250 ರೂ. ಸೇರಿದಂತೆ ಯಾವುದೆ ಬಿಯರ್ ಕೇಳಿದ್ರೂ 150 ರೂಪಾಯಿ ಮೇಲಿದೆ. ಇದ್ರಿಂದ ಬಿಯರ್ ಪ್ರಿಯರು ಬಿಯರ್ ಬಾಟಲ್ ಸಹವಾಸ ಬಿಟ್ಟು ನೈಂಟಿ ಹಾಟ್ ಡ್ರಿಂಕ್ಸ್ ಹೊಡೆದು ಕಿಕ್ ಏರಿಸಿಕೊಳ್ತಿದ್ದಾರೆ.

    ಬಿಯರ್ ಬೇಡಿಕೆ ಗಮನಿಸಿದ ರಾಜ್ಯ ಸರ್ಕಾರ, ಸ್ವತಃ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತಂದು ಬಿಯರ್ ಬೆಲೆ ಹೆಚ್ಚಳ ಮಾಡಿದೆ, ಇದ್ರಿಂದ ಬಿಯರ್ ಪ್ರೀಯರು ಬಿಯರ್ ಮೇಲೆ ಮುನಿಸಿಕೊಳ್ಳುವಂತಾಗಿದೆ. ಇನ್ನೂ ಬೇಸಿಗೆಗೂ ಆರಂಭಕ್ಕೂ ಮುನ್ನವೇ ಬಿಸಿಲಿನ ತಾಪ ತಾರಕಕ್ಕೇರಿದ್ದು ತಣ್ಣನೆಯ ಬಿಯರ್ ಕುಡಿದು ದೇಹ ತಣ್ಣಗೆ ಮಾಡಿಕೊಳ್ಳೋಣ ಅಂದುಕೊಂಡಿದ್ದ ಬಿಯರ್ ಪ್ರಿಯರಿಗೆ ಸರ್ಕಾರದ ದರ ಏರಿಕೆಯಿಂದ ಬಿಯರ್ ಬಿಟ್ಟು ಐಎಂಎಲ್ ಹಾಟ್‍ಡ್ರಿಂಕ್ಸ್ ಕುಡಿಯುವಂತಾಗಿದೆ. ಇದನ್ನೂ ಓದಿ: ಮೆಟ್ಟಿಲುಗಳ ಮೇಲೆ ಉಸಿರು ಚೆಲ್ಲಿದ ಪ್ರಯಾಣಿಕರು – ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತಕ್ಕೆ ಕಾರಣವೇನು?

  • ತೆಲಂಗಾಣದಲ್ಲಿ ಇನ್ನು ಮುಂದೆ ಕಿಂಗ್‌ಫಿಷರ್, ಹೈನೆಕೆನ್ ಬಿಯರ್‌ ಸಿಗೋದು ಡೌಟ್‌ – ಕಾರಣವೇನು ಗೊತ್ತಾ?

    ತೆಲಂಗಾಣದಲ್ಲಿ ಇನ್ನು ಮುಂದೆ ಕಿಂಗ್‌ಫಿಷರ್, ಹೈನೆಕೆನ್ ಬಿಯರ್‌ ಸಿಗೋದು ಡೌಟ್‌ – ಕಾರಣವೇನು ಗೊತ್ತಾ?

    – ಪ್ರತಿ ಕೇಸ್‌ ಮೇಲೆ 100 ರೂ. ನಷ್ಟ!

    ಕಿಂಗ್‌ಫಿಶರ್ ಮತ್ತು ಹೈನೆಕೆನ್ ಬಿಯರ್‌ಗಳ (Beer) ತಯಾರಕರಾದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (UB), ತೆಲಂಗಾಣ (Telangana) ಬೆವರೇಜಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ (TGBCL) ತನ್ನ ಬಿಯರ್ ಪೂರೈಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

    ಈ ಬಿಯರ್‌ಗಳು ತನ್ನದೇ ಆದ ಮದ್ಯ ಪ್ರಿಯ ಗ್ರಾಹಕರನ್ನು ಹೊಂದಿದೆ. ಈಗ ಯುವ ಜನತೆ ಹಾಟ್‌ ಡ್ರಿಂಕ್ಸ್‌ಗಿಂತ ಬಿಯರ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರಲ್ಲಿಯೂ ಕಿಂಗ್ ಫಿಶರ್ ಬಿಯರ್ ಕ್ರೇಜ್ ಬೇರೆಯದೇ ಇದೇ! ಇದೀಗ ಸ್ಥಗಿತಗೊಳಿಸಲು ನಿರ್ಧರಿಸಿರುವುದು ಬಿಯರ್‌ ಪ್ರಿಯರಿಗೆ ಶಾಕ್‌ ಆಗಿದೆ.

    ಪೂರೈಕೆ ನಿಲ್ಲಿಸಲು ಕಾರಣವೇನು?
    2 ವರ್ಷದಿಂದಲೂ ತೆಲಂಗಾಣದಲ್ಲಿ ಬಿಯರ್‌ ಮೂಲ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕಂಪನಿ ಮನವಿ ಮಾಡಿತ್ತು. ಆದರೆ ತೆಲಂಗಾಣ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಭಾರೀ ಪ್ರಮಾಣದ ನಷ್ಟವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ 2019-20ನೇ ಹಣಕಾಸು ವರ್ಷದಿಂದ ಯುನೈಟೆಡ್ ಬ್ರೇವರಿಸ್‌ ಬಿಯರ್‌ನ ಮೂಲ ಬೆಲೆಯನ್ನು TGBCL ಪರಿಷ್ಕರಿಸಿಲ್ಲ, ಇದು ರಾಜ್ಯದಲ್ಲಿ ಕಂಪನಿಗೆ ಆರ್ಥಿಕ ನಷ್ಟಕ್ಕೆ ಕಾರಣ ಎಂದು ಕಂಪನಿ ದೂರಿದೆ.

    ಹೆಚ್ಚುತ್ತಿರುವ ಬಿಯರ್‌ ತಯಾರಿಕೆಗೆ ಕಚ್ಚಾ ವಸ್ತುಗಳ ಬೆಲೆಗಳಿಂದ ಉತ್ಪಾದನಾ ವೆಚ್ಚದಲ್ಲಿ 40% ಹೆಚ್ಚಳವನ್ನು ಸರಿದೂಗಿಸಲು 2024ರ ನವೆಂಬರ್‌ನಲ್ಲಿ ತೆಲಂಗಾಣ ಸರ್ಕಾರವನ್ನು ಕಂಪನಿ ಒತ್ತಾಯಿಸಿತ್ತು. ಅಂದರೆ ಪ್ರತಿ ಬಾಟಲಿಗೆ ಕನಿಷ್ಠ 10 ರೂ.ಗಳಷ್ಟು ಬಿಯರ್ ಬೆಲೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿತ್ತು. ಇನ್ನೂ ಡಿಸೆಂಬರ್‌ನಲ್ಲಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಿಯರ್ ಕಂಪನಿಗಳ ಬೇಡಿಕೆಗಳನ್ನು ತಿರಸ್ಕರಿಸಿದ್ದರು.

    2019 ರಿಂದ ಉತ್ಪಾದನಾ ವೆಚ್ಚವನ್ನು ಆಧರಿಸಿದ ದರವೇ ಇಂದಿಗೂ ಇದೆ. ಇದು ಪ್ರತಿ ಬಿಯರ್ ಕೇಸ್‌ ಮೇಲೆ ಅಂದಾಜು 100 ರೂ. ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಕಂಪನಿ ಅಳಲು ತೋಡಿಕೊಂಡಿದೆ.

    TGBCL ಉಳಿಸಿಕೊಂಡ ಹಳೆಯ ಬಾಕಿ 3,900 ಕೋಟಿ!
    TGBCL ಕಂಪನಿಗೆ 3,900 ಕೋಟಿ ರೂ. ಪಾವತಿಸಿಲ್ಲ. ಇದು ಕಂಪನಿಯ ನಷ್ಟಕ್ಕೆ ಕಾರಣವಾಗಿದೆ. ಬ್ರೇವರಿಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಕೂಡ ಮದ್ಯ ತಯಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದೆ. ಇಲ್ಲಿಯವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆದರೂ ಆರ್ಥಿಕ ಒತ್ತಡ ಪರಿಸ್ಥಿತಿಯ ನಡುವೆಯೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಮದ್ಯ ಪೂರೈಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

    ಯುನೈಟೆಡ್ ಬ್ರೇವರಿಸ್‌ ಕಂಪನಿ ಹೇಳೋದೇನು?
    ನಷ್ಟದಿಂದಾಗಿ ಬಿಯರ್‌ನ್ನು ಟಿಜಿಬಿಸಿಎಲ್‌ಗೆ ನಿರಂತರವಾಗಿ ಪೂರೈಸಲು ಸಾಧ್ಯವಿಲ್ಲ. ಇದಲ್ಲದೇ ತೆಲಂಗಾಣ ಸರ್ಕಾರಕ್ಕೆ ಸೇರಿದ ಸಾರ್ವಜನಿಕ ವಲಯದ ಕಂಪನಿಯಾದ TGBCL ರಾಜ್ಯದಲ್ಲಿ ಮದ್ಯದ ಸಗಟು ಮತ್ತು ಚಿಲ್ಲರೆ ಮಾರಾಟದ ಮೇಲೆ ಹಿಡಿತವಿದೆ. ಆದರೂ ನಮ್ಮ ಮನವಿಗೆ ಸ್ಪಂದಿಸಿ ಬೆಲೆ ಏರಿಸಿಲ್ಲ ಎಂದು ಕಂಪನಿ ಹೇಳಿದೆ. ಈ ಬಗ್ಗೆ TGBCL ಇನ್ನೂ ಯಾವುದೇ ಹೇಳಿಕೆಯನ್ನೂ ನೀಡಿಲ್ಲ.

    ರಾಜ್ಯಕ್ಕೆ ಭಾರೀ ಆದಾಯ!
    ಯುನೈಟೆಡ್ ಬ್ರೇವರಿಸ್‌ ಕಂಪನಿಯು ಮದ್ಯ ಪೂರೈಕೆ ಮತ್ತು ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 24,500 ಕೋಟಿ ರೂ. ಆದಾಯ ಬರುತ್ತಿದೆ. ಆದರೆ, ಕಂಪನಿಗಳಿಗೆ ಲಾಭವಾಗುತ್ತಿಲ್ಲ. ಸರ್ಕಾರವು ಕೂಡಲೇ ಮದ್ಯದ ಬೆಲೆ ಏರಿಕೆಗೆ ಕ್ರಮಕೈಗೊಳ್ಳಬೇಕು ಎಂದು ಮದ್ಯ ತಯಾರಕರು ಒತ್ತಾಯಿಸಿದ್ದಾರೆ. ಇದಕ್ಕೆ ಸರ್ಕಾರ ಒಪ್ಪದಿದ್ದರೆ ಇನ್ಮುಂದೆ ತೆಲಂಗಾಣದಲ್ಲಿ ಕಿಂಗ್‌ ಫಿಶರ್‌ ಬಿಯರ್‌ ಪೂರೈಕೆ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಎಚ್ಚರಿಕೆ ನೀಡಿದೆ.

    302 ಲಕ್ಷಕ್ಕೂ ಹೆಚ್ಚು ಬಿಯರ್‌ಗಳ ಮಾರಾಟ
    ತೆಲಂಗಾಣವು ಬಿಯರ್‌ಗೆ ಪ್ರಮುಖ ಮಾರುಕಟ್ಟೆಯಾಗಿ ಬೆಳದಿದೆ. ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆ (NIPFP) ಇತ್ತೀಚಿನ ಸಮೀಕ್ಷೆಯು ಬಿಯರ್ ಮಾರಾಟದಲ್ಲಿ ದಕ್ಷಿಣ ಭಾರತದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ. ಏಪ್ರಿಲ್ ಮತ್ತು ಅಕ್ಟೋಬರ್ 2024 ರ ನಡುವೆ, ತೆಲಂಗಾಣದಲ್ಲಿ 302 ಲಕ್ಷಕ್ಕೂ ಹೆಚ್ಚು ಬಿಯರ್‌ಗಳು ಮಾರಾಟವಾಗಿದೆ.

  • ಮೈಸೂರಿನಲ್ಲಿ 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ

    ಮೈಸೂರಿನಲ್ಲಿ 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ

    ಮೈಸೂರು: ಇಲ್ಲಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಘಟಕದ ಮೇಲೆ ಅಬಕಾರಿ (Excise) ಜಂಟಿ ಆಯುಕ್ತರು ದಾಳಿ ನಡೆಸಿದ್ದು, ಒಟ್ಟು 98.52 ಕೋಟಿ ರೂ. ಮೊತ್ತದ ಬಿಯರ್ ದಾಸ್ತಾನು ಜಪ್ತಿ ಮಾಡಿದ್ದಾರೆ.

    ಮೈಸೂರು (Mysuru) ಜಿಲ್ಲೆಯ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಬಿಯರ್ (Beer) ತಯಾರಿಕಾ ಘಟಕದಲ್ಲಿ ಸರ್ಕಾರಕ್ಕೆ ತೋರಿಸಿರುವ ದಾಸ್ತಾನು ಲೆಕ್ಕಕ್ಕಿಂತ ಅಧಿಕ ದಾಸ್ತಾನು ಸಂಗ್ರಹ ಪತ್ತೆಯಾಗಿದೆ. 7000 ಸಾವಿರ ವಿವಿಧ ಬ್ರಾಂಡಿನ ಪೆಟ್ಟಿಗೆಗಲ್ಲಿ ಬಿಯರ್ ಬಾಟಲಿಗಳು ಪತ್ತೆಯಾಗಿದೆ. ಯುಟಿ ಟ್ಯಾಂಕ್, ಸೈಲೋಸ್ ಟ್ಯಾಂಕ್‌ಗಳಲ್ಲಿರುವ ಕಚ್ಚಾ ವಸ್ತು ಸಮೇತ ಜಪ್ತಿ ಮಾಡಿದ್ದು, ಈ ಸಂಬಂಧ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಶೂನ್ಯ ಮಳೆ ದಾಖಲು

    ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅನಾಮಧೇಯ ಕರೆಯ ಮೇರೆಗೆ ಚುನಾವಣಾಧಿಕಾರಿಗಳು ಹಾಗೂ ಅಬಕಾರಿ ಜಂಟಿ ಆಯುಕ್ತರು ಘಟಕಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದಾಗ ಲೆಕ್ಕಪುಸ್ತಕದ ದಾಸ್ತಾನಿಗಿಂತ ಹೆಚ್ಚಿನ ಬಿಯರ್ ದಾಸ್ತಾನು ಕಂಡುಬಂದಿದೆ. ಈ ಹಿನ್ನೆಲೆ ಅವುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

  • ಕಿಂಗ್ ಫಿಷರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ – 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ

    ಕಿಂಗ್ ಫಿಷರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ – 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ

    ಮೈಸೂರು: ಕಿಂಗ್ ಫಿಷರ್ (Kingfisher) ಬಿಯರ್‌ನಲ್ಲಿ (Beer) ಅಪಾಯಕಾರಿ ಅಂಶ ಪತ್ತೆಯಾಗಿರುವ ಆತಂಕದ ವಿಚಾರ ಬಯಲಾಗಿದ್ದು, ಈ ಹಿನ್ನೆಲೆ 25 ಕೋಟಿ ರೂ. ಮೌಲ್ಯದ ಕಿಂಗ್ ಫಿಷರ್ ಬಿಯರ್ ಅನ್ನು ಮೈಸೂರಿನ ಅಬಕಾರಿ ಇಲಾಖೆ (Department of Excise) ಜಪ್ತಿ ಮಾಡಿದೆ.

    ಜುಲೈ 15ರಂದು ಬಾಟಲಿಂಗ್ ಆದ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವುದು ದೃಢವಾಗಿದ್ದು, ಬಿಯರ್‌ನಲ್ಲಿರುವ ಸೆಡಿಮೆಂಟ್ ಎಂಬ ಅಂಶ ದೇಹಕ್ಕೆ ಅಪಾಯಕಾರಿ ಎಂಬುದು ಲ್ಯಾಬ್‌ನಲ್ಲಿ ದೃಢವಾಗಿದೆ. ವಿವಿಧ ಕೆಎಸ್‌ಬಿಸಿಎಲ್ ಹಾಗೂ ಆರ್‌ವಿಬಿ ಸನ್ನದುದಾರರಿಗೆ ಈ ಬಿಯರ್ ಅನ್ನು ಸಾಗಣೆ ಮಾಡಲಾಗಿದೆ. ಈ ಮದ್ಯವನ್ನು ಅಂಗಡಿಗಳಿಗೆ ವಿತರಣೆ ಮಾಡದಂತೆ ಸೂಚನೆ ನೀಡಲಾಗಿದ್ದು, ಬಿಯರ್ ವಿತರಣೆ ಮಾಡದಂತೆ ಸುತ್ತೋಲೆ ಹೊರಡಿಸಲಾಗಿದೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವು – ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

    ಲ್ಯಾಬ್ ವರದಿಯಲ್ಲಿ ಅಪಾಯಕಾರಿ ಅಂಶ ದೃಢವಾದ ಹಿನ್ನೆಲೆ ಎಲ್ಲಾ ಬಿಯರ್ ಅನ್ನು ಅಬಕಾರಿ ಇಲಾಖೆ ಜಪ್ತಿ ಮಾಡಿದೆ. ನಂಜನಗೂಡಿನ ಯುನೈಟೆಡ್ ಬ್ರಿವರಿಸಿಸ್ ಕಂಪನಿ ಘಟಕದಲ್ಲಿ ತಯಾರಿಸಿದ್ದ ಬಿಯರ್ ಇದಾಗಿದ್ದು, ಈ ಬಗ್ಗೆ ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಜುಲೈ 15 ರಂದು ಬಾಟಲಿಂಗ್ ಆದ ಬಿಯರ್‌ನಲ್ಲಿ ಈ ಅಂಶ ಪತ್ತೆಯಾಗಿದೆ. ಬಿಯರ್ ಸ್ಯಾಂಪಲ್ ಅನ್ನು ಕೆಮಿಕಲ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಆಗಸ್ಟ್ 2ರಂದು ಕೆಮಿಕಲ್ ವರದಿ ಬಂದಿದೆ. ವರದಿಯಲ್ಲಿ ಈ ಬಿಯರ್ ಮಾನವ ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಿದೆ ಎಂದರು. ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು 4ರ ಬಾಲಕಿ ಸಾವು

    ಹೀಗಾಗಿ ಒಟ್ಟು 78,678 ಬಾಕ್ಸ್ ಬಿಯರ್ ಅನ್ನು ಜಪ್ತಿ ಮಾಡಲಾಗಿದೆ. ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೆಲ ಡಿಪೋದಿಂದ ಅಂಗಡಿಗಳಿಗೂ ಇದು ವಿತರಣೆಯಾಗಿತ್ತು. ರಿಟೇಲ್‌ನಲ್ಲಿ ಮಾರಾಟವಾಗದಂತೆ ಆಗದಂತೆ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎದೆ ಹಾಲು ಕುಡಿದು ಮಲಗಿದ್ದ 3 ತಿಂಗಳ ಪುಟ್ಟ ಕಂದಮ್ಮ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಕ್‍ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ- 170 ಇದ್ದ ಕಿಂಗ್‍ಫಿಷರ್ ಬೆಲೆ 190 ರೂ.ಗೆ ಏರಿಕೆ!

    ಕಿಕ್‍ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ- 170 ಇದ್ದ ಕಿಂಗ್‍ಫಿಷರ್ ಬೆಲೆ 190 ರೂ.ಗೆ ಏರಿಕೆ!

    – ಯಾವುದಕ್ಕೆ ಎಷ್ಟು ಬೆಲೆ ಏರಿಕೆ..?

    ಬೆಂಗಳೂರು: ಎಣ್ಣೆ ಪ್ರಿಯರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ಮಂಡಿಸಿದ್ದ ರಾಜ್ಯ ಬಜೆಟ್‍ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿ ಶಾಕ್ ಕೊಟ್ಟಿದ್ದರು. ಈ ಬೆನ್ನಲ್ಲೇ ಇನ್ನೊಂದು ವಾರದಲ್ಲಿ ಮದ್ಯಪಾನದ ದರದಲ್ಲಿ (Alcohol Rate) ಏರಿಕೆಯಾಗಲಿದೆ.

    ಅಬಕಾರಿ ಶುಂಕ 20% ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದ ಇನ್ನು ಮುಂದೆ ಬ್ರಾಂಡೆಡ್ ಮದ್ಯಗಳು ದುಬಾರಿಯಾಗಲಿದೆ. ಈಗಾಗಲೇ ಹೊಸ ದರ ಪಟ್ಟಿಯನ್ನು ಅಬಕಾರಿ ಇಲಾಖೆ ಬಿಡುಗಡೆ ಮಾಡಿದ್ದು, ಇದರ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬ್ಲಾಕ್ & ವೈಟ್: ಹಿಂದಿನ ಬೆಲೆ 2,464- ಏರಿಕೆ ಬೆಲೆ – 2,800
    ಜಾನಿ ವಾಕರ್ ಬ್ಲಾಕ್ ಲೇಬಲ್: ಹಿಂದಿನ ಬೆಲೆ – 6,250, ಏರಿಕೆ ಬೆಲೆ – 7,150
    ಚಿವಾಸ್ ರೀಗಲ್: ಹಿಂದಿನ ಬೆಲೆ – 6,200, ಏರಿಕೆ ಬೆಲೆ – 7,000

    ಟೀಚರ್ಸ್ (750 ML): ಹಿಂದಿನ ದರ – 2,451, ಏರಿಕೆ ದರ – 2,800
    ಬ್ಲಾಕ್ & ವೈಟ್ (750 ML): ಹಿಂದಿನದರ – 2,415, ಏರಿಕೆ ದರ – 2, 800
    ರೊಮನೊವಾ ವೋಡ್ಕಾ: ಹಿಂದಿನ ಬೆಲೆ – 915, ಏರಿಕೆ ಬೆಲೆ – 1,000
    ಬ್ಯಾಗ್‌ಪೈಪರ್: ಹಿಂದಿನ ಬೆಲೆ – 106, ಏರಿಕೆ ಬೆಲೆ – 120

    ಬಿಯರ್ ಗಳ ಮೇಲೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತಿದೆ. ತೆರಿಗೆ ಹೆಚ್ಚಳದಿಂದ ಬಿಯರ್ ಗಳೂ (Beer Price) ದುಬಾರಿಯಾಗಲಿದ್ದು, ಕನಿಷ್ಠ 20 ರೂ. ಹೆಚ್ಚಳ ಮಾಡಲಾಗುತ್ತಿದೆ. ಕಿಂಗ್‍ಫಿಷರ್ (King Fisher) ಬೆಲೆ 170 ಇದ್ದಿದು 190 ರೂ., ಬಡ್ ವೈಸರ್ (Budweiser) ಬೆಲೆ 220 ಇದ್ದಿದ್ದು 240 ರೂ., ಟ್ಯೂಬರ್ಗ್ ( Tuborg) ಬೆಲೆ 170 ಇದ್ದಿದ್ದು 190 ರೂ. ಹಾಗೂ ಕಾರ್ಲ್ಸ್ ಬರ್ಗ್ ಬೆಲೆ 220 ಇದ್ದಿದ್ದು 250 ರೂ. ಆಗಲಿದೆ.‌

    ಅಬಕಾರಿ ಶುಂಕ ಹೆಚ್ಚಳದಿಂದ ಮದ್ಯ ದುಬಾರಿಯಾಗಲಿದೆ. ಹೀಗಾಗಿ ಇನ್ನೊಂದು ವಾರದ ಬಳಿಕ ದರ ಏರಿಕೆಯಾಗಲಿದೆ. 4-5 ದಿನ ಅಥವಾ ವಾರದಲ್ಲಿ ಸರ್ಕಾರದಿಂದ ಅನುಮೋದನೆ ಸಿಗಲಿದೆ. ಸರ್ಕಾರ ಅನುಮೋದನೆ ಬಳಿಕ ಹೊಸ ದರ ಜಾರಿಗೊಳಿಸಲಾಗುವುದು ಎಂದು ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಕರುಣಾಕರ ಹೆಗ್ಡೆ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ಯ ಪ್ರಿಯರಿಗೆ ಶಾಕ್ – ಬಿಯರ್ ದರ ಏರಿಕೆ

    ಮದ್ಯ ಪ್ರಿಯರಿಗೆ ಶಾಕ್ – ಬಿಯರ್ ದರ ಏರಿಕೆ

    ಬೆಂಗಳೂರು: ಮದ್ಯ (Alcohol) ಪ್ರಿಯರಿಗೆ ಇದೀಗ ಬೆಲೆ ಏರಿಕೆ (Price Hike) ಬಿಸಿ ಕಾಡುತ್ತಿದೆ. ಕುಡಿಯೋ ಮೊದಲೇ ಬಿಯರ್ (Beer) ಉತ್ಪಾದನಾ ಕಂಪನಿಗಳು ಮದ್ಯ ಪ್ರಿಯರ ಕಿಕ್ ಏರಿಸಿದೆ. ಪ್ರತಿ ಬಿಯರ್ ಮೇಲೂ 10 ರಿಂದ 15 ರೂ. ದರ ಏರಿಕೆಯಾಗಿದೆ.

    ಇತ್ತ ಸರ್ಕಾರ ಸುಂಕ ಏರಿಕೆ ಮಾಡದಿದ್ದರೂ, ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿರೋ ಬಿಯರ್ ಉತ್ಪಾದನಾ ಕಂಪನಿಗಳು ಪ್ರತಿ ವರ್ಷದಂತೆ ಈ ವರ್ಷವೂ ದರ ಏರಿಕೆ ಮಾಡಿದೆ. ಬಿಯರ್ ಉತ್ಪಾದನೆಗೆ ತಗಲುವ ವೆಚ್ಚವನ್ನು ಹೊಂದಾಣಿಕೆ ಮಾಡಿಕೊಳ್ಳಲು ಬಿಯರ್ ದರವನ್ನು ಪ್ರತಿ ಬಾಟಲ್‌ಗೆ ಸುಮಾರು 10 ರೂ.ಗಳಷ್ಟು ಹೆಚ್ಚಳ ಮಾಡಿವೆ.

    ಇದರ ನಡುವೆ ಜುಲೈನ ಹೊಸ ಬಜೆಟ್‌ನಲ್ಲೂ ಕಾಂಗ್ರೆಸ್ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಬೆಸ್ಕಾಂ ಎಡವಟ್ಟು, ಮೀಟರ್ ರಿಡೀಂಗ್‌ಗಿಂತ ಹೆಚ್ಚು ಬಿಲ್ – ಜನರ ಜೇಬಿಗೆ ಕತ್ತರಿ

    ಯಾವ ಬ್ರ್ಯಾಂಡ್ ಎಷ್ಟು ದರ ಏರಿಕೆ?
    ಮದ್ಯ ಹಳೆಯ ದರ – ಹೊಸ ದರ
    ಬಡ್ ವೈಸರ್ 198 – 220 ರೂ.
    ಕಾರ್ಲ್ಸ್ ಬರ್ಗ್ 190 – 220 ರೂ.
    ಬ್ಲಾಕ್ ಫೋಟ್ 135 – 155 ರೂ.
    ಟುಬರ್ಗ್ 140 – 150 ರೂ.
    ಹೇನಿಕೇನ್ 210 – 235 ರೂ.
    ಕೊರೋನಾ 220 – 235 ರೂ.
    ಕಿಂಗ್ ಫಿಶರ್ 160 – 170 ರೂ.
    ಯುಬಿ ಪ್ರೀಮಿಯಂ 125 – 135 ರೂ.
    ಯುಬಿ ಸ್ಟ್ರಾಂಗ್ 130 – 135 ರೂ.
    ಕಿಂಗ್ ಫಿಶರ್ ಅಲ್ಟ್ರಾ 190 – 220 ರೂ. ಇದನ್ನೂ ಓದಿ: ಇಂದು ಬೆಂಗಳೂರಿನಲ್ಲಿ ಬೀಳಲಿದೆ ಮಳೆ – ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

  • ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಚಂಡೀಗಢ: ಕಚೇರಿ, ಸಾರ್ವಜನಿಕ ಸ್ಥಳ ಹೀಗೆ ಕೆಲವೆಡೆ ಮದ್ಯಪಾನ ಮಾಡೋದು ನಿಷೇಧ. ಆದರೆ ಹರ್ಯಾಣದ (Haryana) ಸರ್ಕಾರ ಎಣ್ಣೆ ಪ್ರಿಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಕಾರ್ಪೊರೇಟ್ ಕಚೇರಿಯಲ್ಲಿ (Corporate Office) ಕೆಲಸ ಮಾಡುತ್ತ ಸಹೋದ್ಯೋಗಿಗಳೊಂದಿಗೆ ಮದ್ಯಪಾನ ಮಾಡಬಹುದಾದಂತಹ ಹೊಸ ನಿಯಮವನ್ನು ಸರ್ಕಾರ ತಂದಿದೆ.

    ಹರಿಯಾಣ ಮದ್ಯ ನೀತಿಯ (Haryana Liquor Policy) ಪ್ರಕಾರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದಂತೆ ಜೂನ್ 12 ರಿಂದ ರಾಜ್ಯಾದ್ಯಂತ ದೊಡ್ಡ ಕಾರ್ಪೊರೇಟ್ ಕಚೇರಿಗಳಲ್ಲಿ ಕಡಿಮೆ ಕಂಟೆಂಟ್ ಆಲ್ಕೋಹಾಲ್ (Alcohol) ಪಾನೀಯಗಳಾದ ಬಿಯರ್, ವೈನ್ ಮತ್ತು ರೆಡಿ ಟು ಡ್ರಿಂಕ್ ಪಾನೀಯಗಳನ್ನು ಸೇವಿಸಲು ಸರ್ಕಾರ ಅನುಮತಿ ನೀಡುತ್ತಿದೆ.

    ಹರಿಯಾಣ ಮದ್ಯ ನೀತಿಯ ಈ ಹೊಸ ನಿಯಮವನ್ನು ಮೇ 9 ರಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಗಳು ಬಿಯರ್ (Beer) ಹಾಗೂ ವೈನ್‌ನಂತಹ (Wine) ಪಾನೀಯಗಳನ್ನು ಸೇವಿಸಬಹುದು. ಒಂದು ಲಕ್ಷ ಚದರ ಅಡಿ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಒಂದೇ ಆವರಣದೊಳಗೆ ಮದ್ಯಪಾನಕ್ಕೆ ಅನುಮತಿ ನೀಡಲಾಗುತ್ತಿದೆ.

    ಇದರರ್ಥ ನೀವು ದೊಡ್ಡ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೆ ಕಚೇರಿಯ ಆವರಣದಲ್ಲಿ ಬಿಯರ್ ಅಥವಾ ವೈನ್ ಕುಡಿಯಬಹುದು. ಇವುಗಳನ್ನು ಕಚೇರಿಯಲ್ಲಿಯೇ ನೀಡಬೇಕು ಎಂದೇನಿಲ್ಲ. ನೀವು ಸ್ವಂತವಾಗಿಯೂ ಖರೀದಿಸಿ ಕಚೇರಿಯಲ್ಲಿ ಸೇವನೆ ಮಾಡಬಹುದು. ಇದನ್ನೂ ಓದಿ: ಆಟೋ ರಿಕ್ಷಾ, ಖಾಸಗಿ ಬಸ್ ಡಿಕ್ಕಿ – 6 ಮಹಿಳೆಯರು ಸಾವು, ನಾಲ್ವರಿಗೆ ಗಾಯ

    ಹರಿಯಾಣ ಮದ್ಯ ನೀತಿಯ ಪ್ರಕಾರ ಕಾರ್ಪೊರೇಟ್ ಕಚೇರಿಗಳು ಎಲ್-10ಎಫ್ ಮದ್ಯದ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಬಿಯರ್ ಮತ್ತು ವೈನ್‌ನಂತಹ ಕಡಿಮೆ ಆಲ್ಕೋಹಾಲ್ ಅಂಶದ ಪಾನೀಯಗಳನ್ನು ಸೇವಿಸಲು ಅನುವು ಮಾಡಿಕೊಡುತ್ತದೆ. ಕ್ಯಾಂಟೀನ್ ಅಥವಾ ಉಪಾಹಾರ ಗೃಹದ ಕನಿಷ್ಠ ವಿಸ್ತೀರ್ಣವು 2,000 ಚದರ ಅಡಿಗಳಿಗಿಂತ ಕಡಿಮೆಯಿಲ್ಲದಿದ್ದರೆ ಕಾರ್ಪೊರೇಟ್ ಕಚೇರಿ ಪರವಾನಗಿ ಪಡೆಯಬಹುದು. ಪರವಾನಿಗೆ ಪಡೆಯುವ ಕಚೇರಿ 3 ಲಕ್ಷ ರೂ. ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು. ಇದನ್ನೂ ಓದಿ: ಹಾಸನದ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಉಪಟಳ – ಇಬ್ಬರಿಗೆ ತೀವ್ರ ಗಾಯ

  • ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!

    ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!

    ವಾಷಿಂಗ್ಟನ್: ಇಂಧನದ ಕೊರತೆ ಒಂದು ದೊಡ್ಡ ಸಮಸ್ಯೆ ಎನಿಸಿಕೊಂಡರೂ ದಿನೇ ದಿನೇ ಮಾನವನ ಹೊಸ ಹೊಸ ಆವಿಷ್ಕಾರ ಒಂದಷ್ಟು ಸಮಸ್ಯೆಗಳಿಗೆ ಪರಿಹಾರವನ್ನೂ ತಂದುಕೊಡುತ್ತಿದೆ. ಇಲ್ಲೊಬ್ಬ ವ್ಯಕ್ತಿ ಇಂಧನದ ಬದಲು ಬಿಯರ್‌ನಿಂದ (Beer) ಓಡುವ ಬೈಕ್ (Motorcycle) ಅನ್ನು ಕಂಡುಹಿಡಿದು ಅಚ್ಚರಿ ಮೂಡಿಸಿದ್ದಾರೆ.

    ಅಮೆರಿಕದ ಮೈಕೆಲ್ಸನ್ ಎಂಬ ವ್ಯಕ್ತಿ ಇಂತಹದ್ದೊಂದು ವಿಶೇಷ ಬೈಕ್ (Bike) ಅನ್ನು ಕಂಡುಹಿಡಿದಿದ್ದಾರೆ. ಈ ಬೈಕ್‌ಗೆ ಪೆಟ್ರೋಲ್ ಬೇಕಿಲ್ಲ. ಬದಲಿಗೆ ಇದು ಬಿಯರ್‌ನಿಂದ ಚಲಿಸುತ್ತದೆ. ಯಾವುದೇ ಇಂಧನ ಚಾಲಿತ ವಾಹನಗಳಿಗೆ ಕಮ್ಮಿ ಇಲ್ಲ ಎಂಬಂತೆ ಈ ಬೈಕ್ ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಮೈಕೆಲ್ಸನ್ ತಿಳಿಸಿದ್ದಾರೆ.

    ಈ ಬೈಕ್‌ಗೆ ಅನಿಲ ಚಾಲಿತ ಎಂಜಿನ್ ಬದಲು ಹೀಟಿಂಗ್ ಕಾಯಿಲ್ ಅನ್ನು ಬಳಸಲಾಗಿದೆ. ಈ ಕಾಯಿಲ್ ಬಿಯರ್ ಅನ್ನು 300 ಡಿಗ್ರಿಗಳ ವರೆಗೆ ಬಿಸಿ ಮಾಡಿ ಬೈಕ್ ಮುಂದೆ ಚಲಿಸುವಂತೆ ಮಾಡುತ್ತದೆ ಎನ್ನಲಾಗಿದೆ. ಇದನ್ನೂ ಓದಿ: 1,000 ಬಾಯ್‍ಫ್ರೆಂಡ್‍ಗಳ ಜೊತೆ ಡೇಟಿಂಗ್ – 1 ಗಂಟೆ ಡೇಟ್‍ಗೆ ಈಕೆಗೆ ಕೊಡ್ಬೇಕು 5 ಸಾವಿರ!

    ಮೈಕೆಲ್ಸನ್ ಈ ಬೈಕ್ ಅನ್ನು ಬ್ಲೂಮಿಂಗ್ಟನ್‌ನಲ್ಲಿರುವ ತನ್ನ ಗ್ಯಾರೇಜ್‌ನಲ್ಲಿ ನಿರ್ಮಿಸಿದ್ದಾರೆ. ಅತ್ತ ಇಂಧನದ ಬೆಲೆ ಏರಿಕೆಯಾಗುತ್ತಿದೆ. ನಾನು ಮದ್ಯಪಾನ ಮಾಡಲ್ಲ. ಹೀಗಾಗಿ ಬೈಕ್ ಚಲಿಸುವಂತೆ ಮಾಡಲು ಇಂಧನದ ಬದಲು ಬಿಯರ್ ಅನ್ನು ಬಳಸಿದರೆ ಹೇಗೆ ಎಂದು ನಾನು ಯೋಚಿಸಿದ್ದೆ ಎಂದು ಮೈಕೆಲ್ಸನ್ ಹೇಳಿದ್ದಾರೆ.

    ಮೈಕೆಲ್ಸನ್ ತಯಾರಿಸಿರುವ ಬಿಯರ್ ಚಾಲಿತ ಬೈಕ್ ಇನ್ನೂ ರಸ್ತೆಗೆ ಇಳಿದಿಲ್ಲ. ಆದರೆ ಇದು ಸ್ಥಳೀಯ ಪ್ರದರ್ಶನವೊಂದರಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. ಈ ಬೈಕ್‌ನ ಸಾಮರ್ಥ್ಯ ಪರೀಕ್ಷೆಯ ಬಳಿಕ ದೊಡ್ಡ ಮಟ್ಟದಲ್ಲಿ ಪ್ರದರ್ಶನಕ್ಕೆ ಕೊಂಡೊಯ್ಯುವ ಆಶಯವನ್ನು ಮೈಕೆಲ್ಸನ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಿಂಗಳಿಗೆ ಪಡೆಯುತ್ತಿದ್ದ ಸಂಬಳ 30,000 ರೂ.; ರೇಡ್‌ ಮಾಡಿದ ಪೊಲೀಸರಿಗೆ ಸಿಕ್ತು 10 ಕಾರು, 50 ವಿದೇಶಿ ನಾಯಿ, 30 ಲಕ್ಷ ರೂ. ಟಿವಿ!