Tag: bee

  • ಹೆಜ್ಜೇನು ದಾಳಿಗೆ ಕೊಡಗಿನಲ್ಲಿ ವ್ಯಕ್ತಿ ಬಲಿ

    ಹೆಜ್ಜೇನು ದಾಳಿಗೆ ಕೊಡಗಿನಲ್ಲಿ ವ್ಯಕ್ತಿ ಬಲಿ

    ಮಡಿಕೇರಿ: ಹೆಜ್ಜೇನು (Honeybee) ದಾಳಿಗೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.

    ಕೊಟ್ಟಂಗಡ ಪೂಣಚ್ಚಅವರು ಬಲಿಯಾದ ವ್ಯಕ್ತಿ. ಇಂದು ಸಂಜೆ ಕಾಲಭೈರವ ದೇವಸ್ಥಾನ ರಸ್ತೆಯಲ್ಲಿ ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿವೆ.

    ಜೇನು ನೊಣಗಳ ದಾಳಿಯಿಂದ ಕಿರುಚಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದು ಪೂಣಚ್ಚ ನರಳಾಡಿದ್ದಾರೆ. ಸ್ಥಳೀಯರು ಅವರನ್ನು ಗೋಣಿಕೊಪ್ಪಲು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

  • ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ಹರಾರೆ: ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆ ಸಂದರ್ಭ ಮೈದಾನದಲ್ಲಿದ್ದ ಟೀಂ ಇಂಡಿಯಾದ ಆಟಗಾರ ಇಶನ್ ಕಿಶನ್‍ಗೆ ಜೇನುನೊಣವೊಂದು ಕಚ್ಚಿದೆ.

    ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮೊದಲು ಎರಡೂ ತಂಡದ ಆಟಗಾರರು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಆಗಮಿಸಿದ್ದರು. ಭಾರತದ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಕುಲ್‍ದೀಪ್ ಯಾದವ್ ಜೊತೆ ನಿಂತು ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಜೇನುನೊಣವೊಂದು ಹಾರಿ ಬಂದು ಕಚ್ಚಿದೆ. ಕೂಡಲೇ ಇಶನ್ ಕಿಶನ್ ಎಚ್ಚೆತ್ತುಕೊಂಡು ಜೇನುನೊಣದಿಂದ ಪಾರಾಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೌಲರ್‌, ಬ್ಯಾಟ್ಸ್‌ಮ್ಯಾನ್‌ಗಳ ಆಟಕ್ಕೆ ಥಂಡಾ ಹೊಡೆದ ಜಿಂಬಾಬ್ವೆ – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಇಶನ್ ಕಿಶನ್ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೂ, ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ತ್ರಿವಳಿ ಬೌಲರ್‌ಗಳಾದ ದೀಪಕ್‌ ಚಹರ್‌, ಪ್ರಸಿದ್ಧ್‌ ಕೃಷ್ಣ, ಅಕ್ಷರ್‌ ಪಟೇಲ್ ಘಾತಕ ದಾಳಿ ಮತ್ತು ಶಿಖರ್ ಧವನ್, ಶುಭಮನ್ ಗಿಲ್ ಜೋಡಿಯ ಬೊಂಬಾಟ್ ಬ್ಯಾಟಿಂಗ್‍ನಿಂದಾಗಿ ಭಾರತ ವಿಕೆಟ್ ನಷ್ಟವಿಲ್ಲದೆ 10 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತ್ತು. ಎರಡನೇ ಏಕದಿನ ಪಂದ್ಯ ಆಗಸ್ಟ್ 20 ರಂದು ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಚೆಲುವನಾರಾಯಣಸ್ವಾಮಿ ಜಾತ್ರೆ ವೇಳೆ ಹೆಜ್ಜೇನು ದಾಳಿ: ಹರಕೆ ಹೊತ್ತವರಿಗೆ ಬಿಟ್ಟು, ಉಳಿದವರಿಗೆ ಕಡಿದ ಜೇನುಹುಳಗಳು!

    ಚೆಲುವನಾರಾಯಣಸ್ವಾಮಿ ಜಾತ್ರೆ ವೇಳೆ ಹೆಜ್ಜೇನು ದಾಳಿ: ಹರಕೆ ಹೊತ್ತವರಿಗೆ ಬಿಟ್ಟು, ಉಳಿದವರಿಗೆ ಕಡಿದ ಜೇನುಹುಳಗಳು!

    ಮಂಡ್ಯ: ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ‘ತೊಟ್ಟಿಲ ಮಡು’ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ರಕ್ಷಣೆಗಾಗಿ ಭಕ್ತರು ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಓಡಿರುವ ಘಟನೆ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಮೇಲುಕೋಟೆಯಲ್ಲಿ ನಡೆದಿದೆ.

    ತೊಟ್ಟಿಲ ಮಡು ಜಾತ್ರೆಯಲ್ಲಿ ಪಾಲ್ಗೊಂಡು ಹರಕೆ ಹೊತ್ತರೆ ಮಕ್ಕಳಿಲ್ಲದವರಿಗೆ ಚೆಲುವನಾರಾಯಣಸ್ವಾಮಿ ಅಂತಹ ಮುದ್ದಾದ ಮಗು ಜನಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಪ್ರತಿ ವರ್ಷ ಜಾತ್ರೆಯಲ್ಲಿ ಮಕ್ಕಳಿಲ್ಲದ ಸಾವಿರಾರು ದಂಪತಿ ಭಾಗವಹಿಸುತ್ತಾರೆ. ಈ ವೇಳೆ ಚೆಲುವನಾರಾಯಣಸ್ವಾಮಿಯ ಪಾದುಕೆಯನ್ನು ಕಾಡಿನಲ್ಲಿ ಸುಮಾರು ಐದು ಕಿಲೋಮೀಟರ್ ನಷ್ಟು ದೂರದವರೆಗೆ ಮೆರವಣಿಗೆ ಮಾಡಲಾಗುತ್ತದೆ.

    ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಈ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಉತ್ಸವದ ವೇಳೆ ತೀರ್ಥಸ್ನಾನಕ್ಕಾಗಿ ಹೋಗುತ್ತಿರುವಾಗ ಕಾಡಿನ ದರ್ಭ ತೀರ್ಥದ ಬಳಿ ಭಕ್ತರು ಹಾಗೂ ದೇವಾಲಯದ ಸಿಬ್ಬಂದಿಯ ಮೇಲೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿವೆ. ಹೆಜ್ಜೇನುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಕಾಡಿನಲ್ಲಿ ಜನ ಚೆಲ್ಲಾಪಿಲ್ಲಾಯಾಗಿ ಓಡಿದ್ದಾರೆ. ಇದಾದ ಬಳಿಕ ಎರಡು ಗಂಟೆಗಳ ನಂತರ ಉತ್ಸವ ಪ್ರಾರಂಭವಾಗಿದೆ.

    ಇದರಲ್ಲಿ ವಿಶೇಷವೆಂದರೆ ಹೆಜ್ಜೇನುಗಳು ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತು ಬಂದ ಯಾವುದೇ ದಂಪತಿಗೆ ಕಚ್ಚದೇ ಬೇರೆಯವರಿಗೆ ಮಾತ್ರ ಕಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ಆಶ್ಚರ್ಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಭರಾಟೆ ಶೂಟಿಂಗ್ ವೇಳೆ ಮೇಲುಕೋಟೆ ಕಲ್ಯಾಣಿ ಅಶುಚಿತ್ವ – ಶ್ರೀ ಮುರುಳಿ ಸ್ಪಷ್ಟನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪರ್ಫ್ಯೂಮ್  ಹಾಕಿಕೊಂಡು ಈಗ ಲಾಲ್ ಬಾಗ್‍ಗೆ ಹೋಗಬೇಡಿ!

    ಪರ್ಫ್ಯೂಮ್ ಹಾಕಿಕೊಂಡು ಈಗ ಲಾಲ್ ಬಾಗ್‍ಗೆ ಹೋಗಬೇಡಿ!

    ಬೆಂಗಳೂರು: ಲಾಲ್‍ಬಾಗ್‍ನಲ್ಲಿ ಜೇನುಹುಳುಗಳ ಹಾವಳಿ ಹೆಚ್ಚಾಗಿದ್ದು ಪರ್ಫ್ಯೂಮ್ ಹಾಕಿಕೊಂಡು ಹೋಗಬೇಡಿ. ಕಪ್ಪು ಬಟ್ಟೆ ಅಂತೂ ಮೊದ್ಲೇ ಬೇಡ. ಏಕೆಂದರೆ ಅಂತವರನ್ನು ಜೇನುಹುಳುಗಳು ಹುಡುಕಿ ಹುಡುಕಿ ಕಚ್ಚುತ್ತಿವೆ.

    2016ನೇ ರಲ್ಲಿ ಈ ರೀತಿಯಾಗಿ ಜೇನುಹುಳುಗಳ ಕಿರಿಕ್ ನಡೆದಿತ್ತು. ಮಾರ್ಚ್, ಏಪ್ರಿಲ್ ನಲ್ಲಿ ಲಾಲ್‍ಬಾಗ್ ನಲ್ಲಿ ಜೇನು ಹುಳಗಳು ಹೆಚ್ಚಾಗಿ ಗೂಡು ಕಟ್ಟುತ್ತದೆ. ಈಗ ಲಾಲ್ ಬಾಗ್ ನ ಐದು ಕಡೆ ಜೇನುಹುಳಗಳು ದೊಡ್ಡ ಗೂಡು ಕಟ್ಟಿದ್ದು ಅಧಿಕಾರಿಗಳು ಮರದ ಹತ್ತಿರ ಗ್ರಿಲ್ ಹಾಕಿದ್ದಾರೆ.

    ಈಗಾಗಲೇ ಒಂದೇ ತಿಂಗಳಲ್ಲಿ ಐದು ಜನ ಬುರ್ಖಾ ಹಾಕಿಕೊಂಡು ಬಂದ ಮಹಿಳೆಯರಿಗೆ ಜೇನುಹುಳುಗಳು ಕಚ್ಚಿದೆ. ಪರ್ಫ್ಯೂಮ್ ಸ್ಮೆಲ್ ಮತ್ತು ಕಪ್ಪು ಬಟ್ಟೆ ಕಂಡರೆ ಜೇನುಗಳಿಗೆ ಆಗುವುದಿಲ್ಲ. ಇದರಿದಾಗಿ ಹೆಚ್ಚಾಗಿ ಅವರ ಮೇಲೆ ದಾಳಿ ನಡೆಸುತ್ತಿದೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.

    ಜೇನು ಹುಳುಗಳ ದಾಳಿಯಿಂದ ಎಚ್ಚೆತ್ತ ತೋಟಾಗಾರಿಕಾ ಇಲಾಖೆಯ ಸಿಬ್ಬಂದಿ, ಕಪ್ಪು ಬಟ್ಟೆ, ಪರ್ಫ್ಯೂಮ್ ಹಾಕಿಕೊಂಡು ಬಂದವರನ್ನು ದೂರ ಕಳುಹಿಸುತ್ತಿದ್ದಾರೆ. ಲಾಲ್‍ಬಾಗ್ ಹೊರಗಡೆಯಿಂದ ವಿಹಾರಿಗಳಿಗೆ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದೇವೆ ಎಂದು ತೋಟಗಾರಿಕಾ ಇಲಾಖೆಯ ಜಂಟಿ ಆಯುಕ್ತ ಚಂದ್ರಶೇಖರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಖಾಸಗಿ ಶಾಲೆಯಲ್ಲಿ 40 ಕ್ಕೂ ಅಧಿಕ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ ಹೆಜ್ಜೇನು

    ಖಾಸಗಿ ಶಾಲೆಯಲ್ಲಿ 40 ಕ್ಕೂ ಅಧಿಕ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ ಹೆಜ್ಜೇನು

    ಹಾವೇರಿ: ಬಿಸಿಲಿನ ತಾಪಮಾನ ಹೆಚ್ಚಳಗೊಂಡ ಪರಿಣಾಮ ಖಾಸಗಿ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಹಾವೇರಿಯ ವಿದ್ಯಾನಗರದಲ್ಲಿರೋ ಕೆ.ಎಲ್.ಇ ಶಿಕ್ಷಣಸಂಸ್ಥೆಯ ಕಟ್ಟಡದಲ್ಲಿರೋ ಜೇನುಹುಳುಗಳು ದಾಳಿ ಮಾಡಿ 40 ಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದಾರೆ. ಒಂದು, ಎರಡು ಹಾಗೂ ಮೂರನೇ ತರಗತಿಯ ವಿದ್ಯಾರ್ಥಿಗಳ ಕೊಠಡಿ ಬಳಿ ಇರೋ ಹೆಜ್ಜೇನು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿವೆ.

    ಕೂಡಲೇ ವಿದ್ಯಾರ್ಥಿಗಳನ್ನ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ಪೋಷಕರಿಗೆ ತಿಳಿಯುತ್ತಿದ್ದಂತೆ ಶಾಲೆಯ ಮುಂದೆ ಪೋಷಕರು ಜಮಾವಣೆಗೊಂಡಿದ್ದಾರೆ. ನಗರಸಭೆಯ ಸಿಬ್ಬಂದಿ ಹೆಜ್ಜೇನು ಇರೋ ಕಡೆ ಫಾಗಿಂಗ್ ವ್ಯವಸ್ಥೆ ಮಾಡಿ ಹೆಜ್ಜೇನು ನಿಯಂತ್ರಣ ಮಾಡುವ ವ್ಯವಸ್ಥೆ ಮಾಡಿದ್ದಾರೆ.

    ಈ ಘಟನೆಯಲ್ಲಿ ಯಾವುದೇ ಮಕ್ಕಳಿಗೆ ಪ್ರಾಣಾಪಾಯವಾಗಿಲ್ಲ. ಕೆಲಕಾಲ ಪೋಷಕರು ಆತಂಕಕ್ಕೆ ಒಳಗಾಗಿ, ಮಕ್ಕಳನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.

  • ಹೆಜ್ಜೇನು ದಾಳಿ, ಹೆದರಿ ಶವ ಬಿಟ್ಟು ಓಡಿ ಹೋದ ಜನ

    ಹೆಜ್ಜೇನು ದಾಳಿ, ಹೆದರಿ ಶವ ಬಿಟ್ಟು ಓಡಿ ಹೋದ ಜನ

    ರಾಮನಗರ: ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ ನಡೆಸಿ 30 ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಭಾನುವಾರ ನಡೆದಿದೆ.

    ಮಾಗಡಿ ಪಟ್ಟಣದ ಹೊಸಹಳ್ಳಿ ಗ್ರಾಮದ ಸಿದ್ದಲಿಂಗಪ್ಪ ಎಂಬವರು ಅನಾರೋಗ್ಯದಿಂದ ಶನಿವಾರ ಸಾವನ್ನಪ್ಪಿದ್ರು. ಭಾನುವಾರ ಮಧ್ಯಾಹ್ನದ ಬಳಿಕ ಅವರ ಅಂತ್ಯಕ್ರಿಯೆಯನ್ನು ಹೊಸಹಳ್ಳಿ ಗ್ರಾಮದ ಹೊರಭಾಗದಲ್ಲಿ ನಡೆಸಲಾಗುತ್ತಿತ್ತು.

    ಅಂತ್ಯಕ್ರಿಯೆ ವೇಳೆ ಗಂಧದಕಡ್ಡಿ ಹಾಗೂ ಹೊಗೆಯಿಂದ ರೊಚ್ಚಿಗೆದ್ದ ಹೆಜ್ಜೇನುಗಳು ಅಲ್ಲಿ ನರೆದ ಜನರ ಮೇಲೆ ದಾಳಿ ನಡೆಸಿವೆ. ಹೆಜ್ಜೇನುಗಳ ದಾಳಿಯಿಂದ ಪಾರಾಗಲು ಸಂಬಂಧಿಕರು ಹಾಗೂ ಗ್ರಾಮಸ್ಥರು ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಹೆಜ್ಜೇನು ದಾಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಗ್ರಾಮಸ್ಥರು ಗೋಣಿಚೀಲ ಹಾಗೂ ಟಾರ್ಪಲ್ ಗಳ ಸಹಾಯ ಪಡೆದು ಸಿದ್ದಲಿಂಗಪ್ಪನವರ ಅಂತ್ಯಸಂಸ್ಕಾರ ನಡೆಸಿ ನಿಟ್ಟುಸಿರುಬಿಟ್ಟಿದ್ದಾರೆ.