Tag: Bedroom

  • ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡ ಕಂಟೆಸ್ಟೆಂಟ್: ವಿಡಿಯೋ ವೈರಲ್

    ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡ ಕಂಟೆಸ್ಟೆಂಟ್: ವಿಡಿಯೋ ವೈರಲ್

    ಬಿಗ್ ಬಾಸ್ (Bigg Boss) ಮನೆಯಲ್ಲಿ ಏನೆಲ್ಲ ಆಗುತ್ತವೆ. ಆದರೆ, ಇದೇ ಮೊದಲ ಬಾರಿಗೆ ಜೋಡಿಯೊಂದು ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಮಲಗಿದ್ದಾರೆ. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದಾರೆ. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಗ್ ಬಾಸ್ ಕುರಿತಂತೆ ಹಲವು ರೀತಿಯ ಚರ್ಚೆಗೂ ಕಾರಣವಾಗಿದೆ.

    ಅಷ್ಟಕ್ಕೂ ಒಂದೇ ಬ್ಲ್ಯಾಂಕೆಟ್ ಅಡಿಯಲ್ಲಿ ಮಲಗಿದ್ದು ಬೇರೆ ಯಾರೂ ಅಲ್ಲ. ವಿಕ್ಕಿ ಜೈನ್ (Vicky Jain) ಮತ್ತು ಅಂಕಿತಾ ಲೋಖಂಡೆ (Ankita Lokhande) ದಂಪತಿ. ಬಿಗ್ ಬಾಸ್ ಮನೆಗೆ ಇವರು ಸ್ಪರ್ಧಿಗಳು. ಆದರೆ, ಗಂಡ ಹೆಂಡತಿ ರೀತಿಯಲ್ಲಿ ನಡೆದುಕೊಂಡಿದ್ದಕ್ಕೆ ನಾನಾ ರೀತಿಯ ಕಮೆಂಟ್ ಗಳು ಹರಿದಾಡುತ್ತಿವೆ. ಜೊತೆಗೆ ಅವರ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದಾರೆ.

    ಇದೇ ಜೋಡಿ ಕೆಲವು ದಿನಗಳ ಹಿಂದೆ ಇದೇ ಬಿಗ್ ಬಾಸ್ ಮನೆಯಲ್ಲಿ  ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು.  ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದಾರೆ.

    ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಈಗ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಮೊನ್ನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ವಿವಾಹಿತರ ಕಷ್ಟಗಳ ಬಗ್ಗೆ ಮಾತಾಡುತ್ತಾರೆ. ಅಷ್ಟೊಂದು ಕಷ್ಟವಾದರೆ, ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ ಅಂಕಿತಾ. ಆದರೆ, ಇವತ್ತು ಒಂದೇ ಬ್ಲ್ಯಾಂಕೆಟ್ ಅಡಿಯಲ್ಲಿ ಮಲಗಿ ಮತ್ತೊಂದು ಶಾಕ್ ನೀಡಿದ್ದಾರೆ. ಅದಕ್ಕೆ ಹೇಳೋದು ಗಂಡ ಹೆಂಡತಿ ಜಗಳ ಉಂಡು ಮಲಗೋತನಕ ಅಂತ.

  • ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ – ಕಚೇರಿಯಲ್ಲೇ ಮಲಗಲು ಬೆಡ್‌ರೂಂಗಳನ್ನೂ ಸಿದ್ಧಪಡಿಸಿದ ಮಸ್ಕ್

    ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ – ಕಚೇರಿಯಲ್ಲೇ ಮಲಗಲು ಬೆಡ್‌ರೂಂಗಳನ್ನೂ ಸಿದ್ಧಪಡಿಸಿದ ಮಸ್ಕ್

    ವಾಷಿಂಗ್ಟನ್: ತಿಂಗಳ ಹಿಂದಷ್ಟೇ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಖರೀದಿಸಿದ ಎಲೋನ್‌ ಮಸ್ಕ್ (Elon Musk) ಅದರ ಉದ್ಯೋಗಿಗಳನ್ನು (Employees) ಕಂಪನಿಯಲ್ಲಿ (Company) ಕಠಿಣವಾಗಿ ದುಡಿಸಿಕೊಳ್ಳುತ್ತಿದ್ದಾರೆ. ವಾರಕ್ಕೆ 80 ಗಂಟೆ ಕೆಲಸ ಮಾಡಿ, ಇಲ್ಲವೇ ಕಂಪನಿಯನ್ನು ತೊರೆಯಿರಿ ಎಂದು ಮಸ್ಕ್ ಕಟ್ಟುನಿಟ್ಟಾಗಿ ಹೇಳಿದ ಬಳಿಕ ನೂರಾರು ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

     

    ಇದೀಗ ಮಸ್ಕ್‌ನ ಉದ್ಯೋಗಿಗಳು ಕಂಪನಿಯಲ್ಲಿ ಉಳಿದುಕೊಳ್ಳಬೇಕಿದ್ದರೆ ಹಾರ್ಡ್‌ಕೋರ್ ನೀತಿಗೆ ಬದ್ಧರಾಗಬೇಕಿರುವುದು ಅಗತ್ಯವಾಗಿದೆ. ಇದರಿಂದ ಹಲವು ಉದ್ಯೋಗಿಗಳು ತಮ್ಮ ಕಚೇರಿಯಲ್ಲೇ ಉಳಿದುಕೊಳ್ಳುವಂತಹ ಸನ್ನಿವೇಶಗಳೂ ನಿರ್ಮಾಣವಾಗಿದೆ. ಈ ಹಿನ್ನೆಲೆ ಮಸ್ಕ್ ಉದ್ಯೋಗಿಗಳಿಗಾಗಿ ಕೆಲ ಕಚೇರಿಗಳಲ್ಲೇ ಮಲಗುವ ಕೋಣೆಗಳನ್ನು (Bedroom) ನಿರ್ಮಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಭಾರೀ ಏರಿಕೆ!

    ವರದಿಗಳ ಪ್ರಕಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್‌ನ ಪ್ರಧಾನ ಕಚೇರಿಯಲ್ಲಿ ಉದ್ಯೋಗಿಗಳಿಗೆ ಬೆಡ್‌ರೂಂನ ವ್ಯವಸ್ಥೆಯನ್ನು ಮಾಡಲಾಗಿದೆ. ವಾರಾಂತ್ಯದ ರಜೆ ಮುಗಿಸಿ, ಸೋಮವಾರ ಕಚೇರಿಗೆ ಮರಳಿದ ಉದ್ಯೋಗಿಗಳಿಗೆ ಅಚ್ಚರಿ ಉಂಟಾಗಿದೆ. ಕಚೇರಿಯಲ್ಲಿಯೇ ಮಲಗುವ ಕೋಣೆ, ಹಾಸಿಗೆ, ಕರ್ಟನ್ ಸೇರಿದಂತೆ ವಿಶ್ರಾಂತಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ವ್ಯವಸ್ಥೆ ಮಾಡಿರುವುದಾಗಿ ಕೆಲ ಉದ್ಯೋಗಿಗಳು ತಿಳಿಸಿದ್ದಾರೆ.

    ಮೇಲ್ನೋಟಕ್ಕೆ ಈ ಎಲ್ಲಾ ವ್ಯವಸ್ಥೆಗಳನ್ನೂ ಹಾರ್ಡ್ಕೋರ್ ಉದ್ಯೋಗಿಗಳಿಗೆ ಮಾಡಲಾಗಿಗೆ ಎಂದು ಭಾವಿಸಲಾಗಿದೆ. ಆದರೆ ಕಂಪನಿಯ ಈ ನಿರ್ಧಾರದ ಬಗ್ಗೆ ಮೊದಲೇ ಏನನ್ನೂ ತಿಳಿಸಿಲ್ಲ ಎಂದು ಉದ್ಯೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಟ್‍ಮ್ಯಾನ್ ಬ್ಯಾಟ್‍ನಲ್ಲಿ ಸೂರ್ಯ

    Live Tv
    [brid partner=56869869 player=32851 video=960834 autoplay=true]

  • ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ

    ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ

    ಕೊಲಂಬೊ: ಶ್ರೀಲಂಕಾದಲ್ಲಿ ಅರಾಜಕತೆ ತೀವ್ರಗೊಂಡಿದ್ದು, ಸತತ ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದಿರುವ ಜನರು ಪ್ರಧಾನಿ ಮನೆಗೇ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಪ್ರಧಾನಿ ಮನೆಗೆ ಸಂಪೂರ್ಣ ಮುತ್ತಿಗೆ ಹಾಕಿದ್ದಾರೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ `ಟೆಂಪಲ್ ಟ್ರೀ’ ಅನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಾಂ ಹೂಡಿ, ಅವರ ಮನೆಯ ಆವರಣದಲ್ಲಿಯೇ ಅಡುಗೆ ಮಾಡಿದ್ದಾರೆ. ದಿನನಿತ್ಯ ಒಂದಷ್ಟು ಮಂದಿ ಪೂಲ್‌ನಲ್ಲಿ ಈಜಾಡುತ್ತಿದ್ದಾರೆ. ಇದನ್ನೂ ಓದಿ: ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್

    ಈ ನಡುವೆ ಪ್ರತಿಭಟನಾ ನಿರತ ಯುವಕರು ಪ್ರಧಾನಿಯ ಶಯನಗೃಹದಲ್ಲಿ (ಬೆಡ್‌ರೂಂ) WWE ಆಡುತ್ತಾ ಸಖತ್ ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮದುವೆಯಲ್ಲಿ ಸ್ನೇಹಿತರಿಂದ ಥಳಿತಕ್ಕೊಳಗಾದ ವಕೀಲ- ಮನನೊಂದು ಆತ್ಮಹತ್ಯೆ

    https://twitter.com/SJIMYAKUS/status/1546005772920066049?ref_src=twsrc%5Etfw%7Ctwcamp%5Etweetembed%7Ctwterm%5E1546005772920066049%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fsri-lankan-protesters-find-millions-of-rupees-from-gotabaya-rajapaksas-house-amid-economic-turmoil%2F

    ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಶ್ರೀಲಂಕಾದಲ್ಲಿ ಸರ್ವಪಕ್ಷ ಮಧ್ಯಂತರ ಸರ್ಕಾರ ರಚಿಸಲು ಅಲ್ಲಿನ ಪ್ರಮುಖ ವಿರೋಧ ಪಕ್ಷಗಳು ನಿರ್ಧರಿಸಿವೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಬಗ್ಗೆ ಜನರಲ್ಲಿ ಭಾರಿ ಆಕ್ರೋಶ ಸೃಷ್ಟಿಯಾಗಿದೆ. ಹಾಗಾಗಿ, ಗೊಟಬಯ ಅವರು ಬುಧವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ರಾಜೀನಾಮೆಯಿಂದ ಸೃಷ್ಟಿಯಾಗುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಮುಖಂಡರು ಸಭೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿಯನ್ನು ಕೊಂದು ಬೆಡ್‍ರೂಮಿನಲ್ಲಿ ಸಮಾಧಿ ಮಾಡಿ ಪೊಲೀಸ್ ಠಾಣೆಗೆ ಬಂದ್ಳು

    ಪತಿಯನ್ನು ಕೊಂದು ಬೆಡ್‍ರೂಮಿನಲ್ಲಿ ಸಮಾಧಿ ಮಾಡಿ ಪೊಲೀಸ್ ಠಾಣೆಗೆ ಬಂದ್ಳು

    ಅಗರ್ತಲಾ: ತ್ರಿಪುರದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಂದು, ಶವವನ್ನು ಅವರು ಮಲಗುವ ಕೋಣೆಯಲ್ಲಿ ಸಮಾಧಿ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.

    ಪತಿಯನ್ನು ಕೊಲೆ ಮಾಡಿದ ಪತ್ನಿಯನ್ನು ಭಾರತಿ ರೇಂಗ್ (25) ಎಂದು ಗುರುತಿಸಲಾಗಿದೆ. 30 ವರ್ಷದ ಸಂಜಿತ್ ರೇಂಗ್ ಕೊಲೆಯಾದ ಪತಿ. ಭಾರತಿ ತನ್ನ ಗಂಡ ಸಂಜಿತ್ ಅನ್ನು ಮಧ್ಯಾಹ್ನದ ವೇಳೆಗೆ ಕೊಲೆ ಮಾಡಿ ತನ್ನ ಬೆಡ್ ರೂಮಿನಲ್ಲೇ ಸಮಾಧಿ ಮಾಡಿ, ಸಂಜೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.

    ಭಾರತಿ ನೀಡದ ಹೇಳಿಕೆ ಮೇರೆಗೆ ಪೊಲೀಸರು ಧಲೈ ಜಿಲ್ಲೆಯ ಗಂಡಚೆರಾ ಉಪವಿಭಾಗದ ಹಳ್ಳಿಯೊಂದಕ್ಕೆ ಹೋಗಿ ನೋಡಿದಾಗ ಪತಿಯ ಶವ ಬೆಡ್‍ರೂಮಿನಲ್ಲಿ ದೊರಕಿದೆ. ಶವವನ್ನು ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಭಾರತಿ ಪತಿಯನ್ನು ಹತ್ಯೆ ಮಾಡಲು ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಈ ದಂಪತಿಗೆ ಆರು ವರ್ಷದ ಮಗಳಿದ್ದು, ಭಾರತಿಯನ್ನು ಎಷ್ಟೇ ವಿಚಾರಣೆ ಮಾಡಿದರೂ ಆಕೆ ಗಂಡನ್ನು ಯಾಕೆ ಕೊಂದೆ ಎಂದು ಹೇಳುತ್ತಿಲ್ಲ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿಯ ಬೆಡ್ ರೂಂ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ!

    ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿಯ ಬೆಡ್ ರೂಂ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ!

    ಬೆಳಗಾವಿ: ಪತಿ ಮತ್ತು ಪತ್ನಿ ಇಬ್ಬರು ಬೆಡ್ ರೂಮ್ ನಲ್ಲಿ ಇರುವ ವಿಡಿಯೋ ಮಾಡಲು ಹೋಗಿ ಯುವಕನೊಬ್ಬ ಸಿಕ್ಕಿಹಾಕಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ನಡೆದಿದೆ.

    ಪೀರನವಾಡಿಯ ಬಾಡಿಗೆ ಮನೆಯಲ್ಲಿ ಸಿಂಧೆ ದಂಪತಿ ವಾಸವಾಗಿದ್ದರು. ಈ ದಂಪತಿಗೆ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪಕ್ಕದ ಮನೆಯ ನಿವಾಸಿ ಸುನಿಲ್ ವಡ್ಡರ ಈ ರೀತಿಯ ನೀಚ ಕೃತ್ಯವನ್ನು ಎಸಗಿದ್ದಾನೆ.

    ಆರೋಪಿ ಯುವಕ ಮನೆಯ ಕಿಟಕಿಯಲ್ಲಿ ತನ್ನ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದನು. ಮೊಬೈಲ್ ಗೆ ತಂತಿ ಕಟ್ಟಿ ಕಿಟಕಿಯಲ್ಲಿ ಇಡುತ್ತಿದ್ದನು. ಕೆಲವು ದಿನಗಳಿಂದ ಈ ರೀತಿಯ ಕೃತ್ಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಶನಿವಾರ ಮೊಬೈಲ್ ಇಡುವಾಗ ಸಪ್ಪಳವಾಗಿದೆ. ಆಗ ದಂಪತಿ ಗಮನಿಸಿ ನೋಡಿದ್ದಾರೆ. ಈ ವೇಳೆ ಮೊಬೈಲ್ ಇಟ್ಟಿರುವುದು ತಿಳಿದಿದೆ. ನಂತರ ಮೊಬೈಲ್ ತೆಗೆದು ನೋಡಿದಾಗ ಆತನ ಕೃತ್ಯ ಬೆಳಕಿಗೆ ಬಂದಿದೆ.

    ಆರೋಪಿ ಸುನಿಲ್ ತನ್ನ ಮೊಬೈಲ್ ನೀಡುವಂತೆ ದಂಪತಿಗೆ ಕೇಳಿದ್ದಾನೆ. ಆದರ ಪತಿ ಸಂಶಯಗೊಂಡು ಸುನಿಲ್ ಗೆ ಮೊಬೈಲ್ ಮರಳಿ ನೀಡಿಲಿಲ್ಲ. ಬಳಿಕ ದಂಪತಿ ಮೊಬೈಲ್ ಸಮೇತ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಸದ್ಯಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಸುನಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

  • ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

    ಮುಂಬೈ: ಬಾಲಿವುಡ್ ಬೆಡಗಿ ಸೋನಂ ಕಪೂರ್ ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಂ ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಆನಂದ್ ಅಹುಜಾ ಅವರನ್ನು ಮಂಗಳವಾರ ಬೆಳಗ್ಗೆ ಮದುವೆಯಾಗಿದ್ದಾರೆ.

    ಮಂಗಳವಾರ ಇಬ್ಬರ ಮದುವೆ ನಡೆದಿದ್ದರೂ ಭಾವಿ ಪತ್ನಿಗೆ ಮದುವೆಗೂ ಮೊದಲೇ ಆನಂದ್ ಷರತ್ತು ವಿಧಿಸಿದ್ದಾರೆ.

    ಹೌದು, ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ ಸೋನಂ, ಆನಂದ್ ಬೆಡ್ ರೂಮ್‍ಗೆ ಹೋಗುವ ಮೊದಲು ಒಂದು ಷರತ್ತು ಹಾಕಿದ್ದಾರೆ. ಏನೇ ಆದರೂ ಆ ಷರತ್ತು ಪಾಲಿಸಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದ್ದರು.

    ಬೆಡ್ ರೂಮ್‍ಗೆ ಹೋಗುವ ಮೊದಲು ಎಂದರೆ ಮಲಗಲು ಹೋಗುವಾಗ ನಾವಿಬ್ಬರು ಮೊಬೈಲ್ ಬಳಸಬಾರದು ಎಂದು ಷರತ್ತು ಹಾಕಿದ್ದಾರೆ. ರೂಮಿನಲ್ಲಿ ಮಲಗಲು ಹೋಗುವಾಗ ಆನಂದ್‍ಗೆ ನಾವಿಬ್ಬರೇ ಇರುವುದು ಇಷ್ಟ. ನಮ್ಮ ಮಧ್ಯೆ ಮೊಬೈಲ್ ಇರುವುದು ಅವರಿಗೆ ಇಷ್ಟವಿಲ್ಲ ಎಂದು ಸೋನಂ ಹೇಳಿದ್ದಾರೆ.

    ನಾನು ಪ್ರತಿ ದಿನವೂ ತಮ್ಮ ಸ್ಟೇಟಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತೇನೆ. ಈಗ ಪತಿ ಹೇಳಿದ ಷರತ್ತನ್ನು ಪಾಲಿಸುವುದು ನನಗೆ ಸ್ವಲ್ಪ ಕಷ್ಟವಾದರೂ ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಎಲ್ಲ ದಂಪತಿಗಳು ನಾವು ಅಳವಡಿಸಿಕೊಂಡಿರುವ ಈ ನಿಯಮ ಪಾಲಿಸಿ ಎಂದು ಸೋನಂ ಸಲಹೆ ಕೂಡ ನೀಡಿದ್ದಾರೆ.

    ಮದುವೆಯಾಗಿರುವ ಸೋನಂ ಕ್ಯಾನೆ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಅಕ್ಟೋಬರ್ ವರೆಗೂ ಸೋನಂ ಹಾಗೂ ಆನಂದ್ ಅವರಿಗೆ ಹನಿಮೂನ್‍ಗೆ ಹೋಗಲು ಸಮಯವಲ್ಲ ಎಂದು ವರದಿಯಾಗಿದೆ.

    ಆನಂದ್ ತನ್ನ ಪತ್ನಿ ಸೋನಂ ಜೊತೆ ಕ್ಯಾನೆ ಫಿಲ್ಮಂ ಫೆಸ್ಟಿವಲ್‍ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಸೋನಂ ಅಕ್ಟೋಬರ್‍ವರೆಗೂ ಬ್ಯುಸಿಯಿದ್ದು, ಈ ಜೋಡಿ ತಮ್ಮ ಹನಿಮೂನ್‍ಗೆ ನವೆಂಬರ್ ನಲ್ಲಿ ಹೋಗುತ್ತಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಸೋನಮ್ ಕಪೂರ್