Tag: Bed sheet

  • ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದ ಯುವಕ

    ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದ ಯುವಕ

    ಬೀದರ್: ಕೊರೆಯುವ ಚಳಿಗೆ ಗಡಗಡ ನಡುಗುತ್ತಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಯುವಕನೊಬ್ಬ ಮಾನವೀಯತೆ ಮೆರೆದಿದ್ದಾರೆ.

    ಬೀದರ್ ಜಿಲ್ಲೆಯಲ್ಲಿ ಸದ್ಯ 9 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಜಿಲ್ಲೆಯ ಜನ ಕೊರೆಯುವ ಚಳಿಗೆ ಹೈರಾಣಾಗಿ ಹೋಗಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೊರವಾಡಿ ಗ್ರಾಮದ ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧ ಸ್ಥಿತಿ ನೋಡಿ ಶಂಕರ್ ಎಂಬವರು ಬೆಡ್‍ಶೀಟ್ ಹಂಚಿದ್ದಾರೆ.

    ವಯೋವೃದ್ಧನಿಗೆ ಈಗಾಗಲೇ ಸ್ಟ್ರೋಕ್ ಹೊಡೆದಿದ್ದು, ಅವರನ್ನು ನೋಡಿಕೊಳ್ಳಲ್ಲಿ ಮನೆಯಲ್ಲಿ ಯಾರು ಇಲ್ಲ. ಅಲ್ಲದೆ ಕೊರೆಯುವ ಚಳಿಗೆ ವಯೋವೃದ್ಧ ತತ್ತರಿಸಿ ಹೋಗಿದ್ದರು. ಇದನ್ನು ಕಂಡ ಯುವಕ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಶಂಕರ್, ಈ ವಯೋವೃದ್ಧನಿಗೆ ಯಾರು ಇಲ್ಲ. ಹೀಗಾಗಿ ನಾನು ಈ ಪುಟ್ಟ ಸಹಾಯ ಮಾಡಿದ್ದೇನೆ ಎಂದು ಯುವಕ ಶಂಕರ್ ತಿಳಿಸಿದ್ದಾರೆ.

  • ರೋಗಿಯನ್ನು ಎಕ್ಸ್‌ರೇ ರೂಮಿಗೆ ಬೆಡ್‍ಶೀಟ್‍ನಲ್ಲೇ ಎಳೆದ್ಕೊಂಡು ಹೋದ ಸಿಬ್ಬಂದಿ: ವಿಡಿಯೋ

    ರೋಗಿಯನ್ನು ಎಕ್ಸ್‌ರೇ ರೂಮಿಗೆ ಬೆಡ್‍ಶೀಟ್‍ನಲ್ಲೇ ಎಳೆದ್ಕೊಂಡು ಹೋದ ಸಿಬ್ಬಂದಿ: ವಿಡಿಯೋ

    ಭೋಪಾಲ್: ಮಧ್ಯಪ್ರದೇಶದ ಜಬಲ್‍ಪುರ್ ನ ನೇತಾಜಿ ಸುಭಾಷ್ ಚಂದ್ರ ಬೋಸ್ ಆಸ್ಪತ್ರೆಯಲ್ಲಿ ರೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದಕ್ಕೆ ರೋಗಿಯನ್ನು ಎಕ್ಸ್‌ರೇ ರೂಮಿಗೆ ಬೆಡ್‍ಶೀಟ್‍ನಲ್ಲೇ ಸಿಬ್ಬಂದಿ ಎಳೆದುಕೊಂಡು ಹೋಗಿರುವುದೇ ಸಾಕ್ಷಿಯಾಗಿದೆ.

    ಹೌದು. ಎಕ್ಸ್-ರೇ ರೂಂಗೆ ರೋಗಿಯನ್ನು ಸ್ಟ್ರಕ್ಚರ್ ನಲ್ಲಿ ಕರೆದೊಯ್ಯುವ ಬದಲು ಹಾಗೇ ಬೆಡ್‍ಶೀಟ್‍ನಲ್ಲಿ ದರದರನೇ ಎಳೆದುಕೊಂಡು ಹೋಗಿದ್ದಾರೆ. ಸಿಬ್ಬಂದಿ ರೋಗಿಯನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿದೆ.

    ಈ ವಿಡಿಯೋ ನೋಡಿ ಸಾಕಷ್ಟು ಜನರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮೂವರು ಸಿಬ್ಬಂದಿಯನ್ನು ಅಮಾನತು ಕೂಡ ಮಾಡಲಾಗಿದೆ. ವಿಡಿಯೋದಲ್ಲಿ ಆಸ್ಪತ್ರೆಯ ಸಿಬ್ಬಂದಿ ರೋಗಿಯನ್ನು ಎಕ್ಸ್ ರೇ ರೂಮಿಗೆ ಬೆಡ್‍ಶೀಟ್‍ನಲ್ಲಿ ಎಳೆದುಕೊಂಡು ಹೋಗುತ್ತಿದ್ದಾನೆ. ಈ ವೇಳೆ ಇನ್ನೂ ಕೆಲವು ರೋಗಿಗಳು ಆಸ್ಪತ್ರೆಯಲ್ಲೇ ನೆಲದ ಮೇಲೆ ಮಲಗಿರುವುದು ಕಂಡು ಬಂದಿದೆ.

    ಈ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ನವ್‍ನೀತ್ ಸಕ್ಸೆನಾ ಮೂವರನ್ನು ಸಸ್ಪೆಂಡ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ, ತಪ್ಪಿತಸ್ಥರು ಯಾರು ಎಂದು ಗೊತ್ತಾದರೆ, ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.