Tag: beauty parlour

  • ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

    ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

    ಬೆಂಗಳೂರು: ಬ್ಯೂಟಿ ಪಾರ್ಲರ್‌ಗೆ ಹೆಣ್ಣುಮಕ್ಕಳು ಹೋಗೋದು ಕಾಮನ್. ಕೆಲವರಂತೂ ತಿಂಗಳಿಗೆ ಒಂದು ಬಾರಿಯಾದ್ರೂ ಹೋಗೇ ಹೋಗ್ತಾರೆ. ಆದರೆ ಈಗ ಶಾಕಿಂಗ್ ವಿಷಯ ಬಯಲಾಗಿದೆ.

    ಬ್ಯೂಟಿಷಿಯನ್ಸ್ ಗಳು ನೋಂದಾಯಿತ ಬ್ಯೂಟಿಪಾರ್ಲರ್ ನಲ್ಲಿ ವರ್ಷಗಟ್ಟಲೇ ಟ್ರೈನಿಂಗ್‌ ಮಾಡಿ ಪ್ರಾಕ್ಟಿಕಲ್ ತರಬೇತಿಯನ್ನೂ ಪಡೆದುಕೊಂಡು ಅದಾದ ಬಳಿಕ ಅವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಆದರೀಗ ನೋಂದಾಯಿತ ಪಾರ್ಲರ್ ಅಸೋಸಿಯೇಷನ್ ಹೆಸರಿನಲ್ಲಿಯೇ 10 ಸಾವಿರ ದುಡ್ಡು ಕೊಟ್ರೇ ಯಾರಿಗೆ ಬೇಕಾದ್ರೂ, ಎಷ್ಟು ಬೇಕಾದ್ರೂ ಪಟಾಫಟ್ ಅಂತಾ ಟ್ರೈನಿಂಗ್‌ ಕೇಳದೇ ಸರ್ಟಿಫಿಕೇಟ್ ಕೊಡುವ ಏಜೆಂಟರು ಹುಟ್ಟುಕೊಂಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

    ಸ್ವತಃ ಈ ಆರೋಪ ಮಾಡ್ತಾ ಇರೋದು ಕರ್ನಾಟಕ ಬ್ಯೂಟಿ ಪಾರ್ಲರ್ ಅಸೋಸಿಯೇಷನ್. ಇವರದ್ದೇ ಸಂಸ್ಥೆಯ ಹೆಸರು ಬಳಸಿಕೊಂಡು ಸರ್ಟಿಫಿಕೇಟ್ ಮಾಡಿ ಕೆಲ ಏಜೆಂಟ್‌ರು ಮಾರಾಟ ಮಾಡುತ್ತಾ ಇದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಈ ಸಂಬಂಧ ಮಾತನಾಡಿರುವ ಆಡಿಯೋ ಸಹ ಲೀಕ್ ಆಗಿದೆ. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    ಈ ರೀತಿ ಬೇಕಾಬಿಟ್ಟಿ ದುಡ್ಡಿಗೆ ಸರ್ಟಿಫಿಕೇಟ್ ಮಾರಾಟ ಮಾಡೋದ್ರಿಂದ ಸೈಡ್‌ಎಫೆಕ್ಟ್ ಉಂಟಾಗುತ್ತದೆ. ಸಾಮಾನ್ಯವಾಗಿ ಆಯಾಯ ಚರ್ಮಕ್ಕೆ ಹೊಂದುವ ಪ್ರಾಡೆಕ್ಟ್ ಬಳಕೆ ಮಾಡಬೇಕು. ಕೆಲವು ಬಿಪಿ ಶುಗರ್ ಸಮಸ್ಯೆ ಇರೋರಿಗೆ ಕೆಲ ಪ್ರಾಡೆಕ್ಟ್ ಅಲರ್ಜಿ ಇರುತ್ತೆ. ಇದೆಲ್ಲವನ್ನು ತರಬೇತಿ ಪಡೆದುಕೊಂಡವರಿಗೆ ಅಷ್ಟೇ ಅರ್ಥವಾಗುತ್ತದೆ. ಆದರೆ ಹೀಗೆ ಟ್ರೈನಿಂಗ್‌ ಇಲ್ಲದೇ ಸರ್ಟಿಫಿಕೇಟ್ ಕೊಡುವ ದಂಧೆಯಿಂದ ನಿಜವಾಗಿಯೂ ತರಬೇತಿ ಪಡೆದವರಿಗೆ ಸಮಸ್ಯೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

    ಆಡಿಯೋ ನಲ್ಲಿ ಏನಿದೆ?

    • ಏಜೆಂಟ್ – ಅದು ಮಾಡಿಸಿರೋದು ಏಜೆಂಟ್
      ಅನಿತಾ – ಯಾರು?
    • ಏಜೆಂಟ್ – ಅದಕ್ಕೆ ಒಬ್ರು ಏಜೆಂಟ್ ರ‍್ತಾರೆ ಅವ್ರು ಮಾಡಿಸೋದು
      ಅನಿತಾ – ಹೋ ಅದಕ್ಕೆ ಏಜೆಂಟ್ ಬೇರೆ ರ‍್ತಾರಾ?
    • ಅನಿತಾ – ನಮ್ಗೆ ಬೇಕು ಅಂದ್ರೆ?
      ಏಜೆಂಟ್ – ಅದನ್ನು ಹತ್ತುಸಾವಿರ ಕೊಟ್ಟುಮಾಡಿಸಿರೋದು
    • ಏಜೆಂಟ್ – ನಿಮ್ಗೆ ಬೇಕಾದ್ರೇ ಹೇಳಿ ಮಾಡಿಸಿಕೊಡ್ತೀನಿ ನಾನು
      ಅನಿತಾ – ಹಂಗಾದ್ರೇ ಬೇಕು 2 ಸರ್ಟಿಫಿಕೇಟ್
    • ಏಜೆಂಟ್ – 2 ಯಾಕೆ 10 ಕೊಡ್ತೀನಿ ಬೇಕಾದ್ರೇ

  • ಮಂಗ್ಳೂರಿನಲ್ಲಿ ಸುರಕ್ಷತಾ ಕ್ರಮದೊಂದಿಗೆ ಸಲೂನ್, ಬ್ಯೂಟಿ ಪಾರ್ಲರ್ ಓಪನ್

    ಮಂಗ್ಳೂರಿನಲ್ಲಿ ಸುರಕ್ಷತಾ ಕ್ರಮದೊಂದಿಗೆ ಸಲೂನ್, ಬ್ಯೂಟಿ ಪಾರ್ಲರ್ ಓಪನ್

    ಮಂಗಳೂರು: ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಂಗಳೂರಿನಲ್ಲಿ ಇಂದಿನಿಂದ ಸಲೂನ್, ಬ್ಯೂಟಿ ಪಾರ್ಲರ್‍ಗಳು ಕಾರ್ಯ ಆರಂಭಿಸಿವೆ.

    ಆರೋಗ್ಯ ಇಲಾಖೆ ನಿರ್ದೇಶನದಂತೆ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮಂಗಳೂರಿನ ಬಳ್ಳಾಲ್ ಬಾಗ್‍ನ ಜನತಾ ಡಿಲಕ್ಸ್ ಹೋಟೆಲ್ ಬಳಿಯ ಡಿ ನೋವಾ ಯುನಿಸೆಕ್ಸ್ ಹೇರ್ ಸ್ಟುಡಿಯೋದಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಮಾದರಿಯ ಗಾರ್ಡ್ ಬಳಸಿ ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ.

    ಗ್ರಾಹಕರು ಶಾಪ್ ಒಳಗೆ ಬರುವಾದ ಇಡೀ ದೇಹಕ್ಕೆ ಸ್ಯಾನಿಟೈಜರ್ ಸ್ಪ್ರೇ ಮಾಡಲಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಕೂಡ ಕಡ್ಡಾಯವಾಗಿದ್ದು, ಒಳಗೆ ಹೆಚ್ಚು ಜನರು ಸೇರದಂತೆ ನೋಡಿಕೊಂಡು ಕಾರ್ಯಾನಿರ್ವಹಿಸಲಾಗುತ್ತಿದೆ. ಗ್ರಾಹಕರು ಕುಳಿತಿದ್ದ ಚೇರ್‌ಗೂ ಸಂಪೂರ್ಣ ಸ್ಯಾನಿಟೈರ್ ಸಿಂಪಡಣೆ ಮಾಡಲಾಗುತ್ತಿದೆ.

  • ಉಡುಪಿಯಲ್ಲಿ 10 ದಿನ ಬ್ಯೂಟಿ ಪಾರ್ಲರ್ ಬಂದ್

    ಉಡುಪಿಯಲ್ಲಿ 10 ದಿನ ಬ್ಯೂಟಿ ಪಾರ್ಲರ್ ಬಂದ್

    ಉಡುಪಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ 10 ದಿನ ಉಡುಪಿ ಜಿಲ್ಲೆಯ ಬ್ಯೂಟಿ ಪಾರ್ಲರ್ ಗಳು ಬಂದ್ ಆಗಲಿವೆ.

    ಈ ಕುರಿತು ಮಾಹಿತಿ ನೀಡಿರುವ ಮಹಿಳಾ ಸೌಂದರ್ಯ ತಜ್ಞರ ಉಡುಪಿ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷೆ ವೇದ ಸಂಜೀವ್ ಸುವರ್ಣ, ಕೋವಿಡ್ 19 ಮಹಾಮರಿಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಸ್ವಚ್ಛತೆ ಮತ್ತು ಜಾಗೃತಿ ವಹಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸ್ಥಳೀಯ ಆರೋಗ್ಯ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ನಮ್ಮ ಸೇವೆಯನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಗ್ರಾಹಕರ ಆರೋಗ್ಯ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಎಲ್ಲರೂ ಸಹಕರಿಸಬೇಕು. ನಮಗೂ ಕೊರೋನಾ ಬೇಡ- ನಮ್ಮಿಂದ ಕೊರೋನಾ ಹರಡೋದು ಬೇಡ ಎಂದು ಹೇಳುವ ಮೂಲಕ ಜನತಾ ಕರ್ಫ್ಯೂಗೆ ಮಹಿಳಾ ಸೌಂದರ್ಯ ತಜ್ಞರ ಉಡುಪಿ ಜಿಲ್ಲಾ ಸಂಘ ಬೆಂಬಲ ನೀಡಿದೆ.

    ಚಿಕ್ಕಬಳ್ಳಾಪುರ ಗೌರಿಬಿದನೂರಿನ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ವ್ಯಕ್ತಿ ಮೆಕ್ಕಾದಿಂದ ಹೈದರಾಬಾದ್ ಮಾರ್ಗವಾಗಿ ಕರ್ನಾಟಕಕ್ಕೆ ಆಗಮಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಶುಕ್ರವಾರದ ವರದಿ ಪ್ರಕಾರ, ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಇತ್ತ ಕೇರಳದ ಕಾಸರಗೋಡಿನಲ್ಲಿ 5 ಹೊಸ ಸೋಂಕು ಶಂಕಿತ ಪ್ರಕರಣ ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ.

    ಒಟ್ಟು 185 ರಾಷ್ಟ್ರ ಹಾಗೂ ಪ್ರಾಂತ್ಯಗಳ ಮೇಲೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ವೈರಸ್‍ಗೆ ಈವರೆಗೆ ಸುಮಾರು 2,75,953 ಮಂದಿಗೆ ಸೋಂಕು ತಗುಲಿದೆ. ಅಲ್ಲದೇ ವಿಶ್ವದೆಲ್ಲೆಡೆ ಒಟ್ಟು 11,399 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 91,912 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,72,642 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

  • ಲಾರಿ ಹರಿದು ಬ್ಯೂಟಿಪಾರ್ಲರ್ ಮಾಲಕಿ ಸಾವು

    ಲಾರಿ ಹರಿದು ಬ್ಯೂಟಿಪಾರ್ಲರ್ ಮಾಲಕಿ ಸಾವು

    ಮಂಗಳೂರು: ಲಾರಿ ಹರಿದು ಬ್ಯೂಟಿಪಾರ್ಲರ್ ಮಾಲಕಿ ಮೃತಪಟ್ಟ ದುರ್ಘಟನೆ ನಗರದ ಕುಂಟಿಕಾನ ಬಿಎಂಎಸ್ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.

    ಪಂಜಿಮೊಗರು ನಿವಾಸಿ ಯೋಗೇಶ್ ಎಂಬವರ ಪತ್ನಿ ಪ್ರಿಯಾ ಸುವರ್ಣ (43) ಮೃತ ದುರ್ದೈವಿ. ಪ್ರಿಯಾ ಅವರು ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದರು. ಹೀಗಾಗಿ ಇಂದು ಕೂಡ ತಮ್ಮ ಬ್ಯೂಟಿಪಾರ್ಲರ್‌ಗೆ ಭೇಟಿ ಕೊಟ್ಟು ಸ್ಕೂಟರ್ ನಲ್ಲಿ ಸಂಜೆ ಮನೆಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ತಪ್ಪಿ, ಪ್ರಿಯಾ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಷ್ಟೇ ಅಲ್ಲದೆ ಲಾರಿ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದ.

    ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪ್ರಿಯಾ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಶೋಧಕಾರ್ಯ ನಡೆಸಿ, ಪಣಂಬೂರು ಬಳಿ ಲಾರಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

    ಪ್ರಿಯಾ ಇಬ್ಬರು ಮಕ್ಕಳು ಹಾಗೂ ಪತಿಯನ್ನು ಅಗಲಿದ್ದಾರೆ. ಘಟನೆಯ ಸಂಬಂಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

  • ಮಹಿಳೆಯನ್ನ ಬ್ಯೂಟಿ ಪಾರ್ಲರ್ ಗೆ ಕರೆಸಿಕೊಂಡು ಗ್ಯಾಂಗ್ ರೇಪ್

    ಮಹಿಳೆಯನ್ನ ಬ್ಯೂಟಿ ಪಾರ್ಲರ್ ಗೆ ಕರೆಸಿಕೊಂಡು ಗ್ಯಾಂಗ್ ರೇಪ್

    ಕೋಲ್ಕತ್ತಾ: ಬ್ಯೂಟಿ ಪಾರ್ಲರ್ ನಲ್ಲಿ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.

    ಕೋಲ್ಕತ್ತಾದ ಟಿಲ್ಜಲಾ ಪ್ರದೇಶದಲ್ಲಿರು ಬ್ಯೂಟಿ ಪಾರ್ಲರ್ ಒಂದರಲ್ಲಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಈ ಕುರಿತು ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ನಿನ್ನೆ ಮಾಹಿತಿ ಮಾಹಿತಿ ನೀಡಿದ್ದಾರೆ.

    ಏನಿದು ಪ್ರಕರಣ?:
    ಸಂತ್ರಸ್ತ ಮಹಿಳೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಬ್ಯೂಟಿ ಪಾರ್ಲರ್ ಗೆ ಬರುವಂತೆ ತಿಳಿಸಿದ್ದಾನೆ. ಆತನ ಕರೆಯಿಂದಾಗಿ ಮಹಿಳೆಗೆ ಅಲ್ಲಿಗೆ ಬಂದಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ದೃಶ್ಯವನ್ನು ಮತ್ತಿಬ್ಬರು ವಿಡಿಯೋ ಮಾಡಿದ್ದಾರೆ. ನಂತರ ಅವರು ಕೂಡ ಅತ್ಯಾಚಾರ ಮಾಡಿದ್ದಾರೆ. ಒಂದು ವೇಳೆ ಈ ಕುರಿತು ಎಲ್ಲಿಯಾದರೂ ಹೇಳಿಕೊಂಡರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕವೂ ನಿರಂತರ ಅತ್ಯಾಚಾರ ಎಸಗಿದ್ದಾರೆ.

    ಈ ಕುರಿತು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಶುಕ್ರವಾರ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿತ್ತು. ಸಾಮೂಹಿಕ ಅತ್ಯಾಚಾರವಾಗಿದೆ ಎನ್ನುವ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬ್ಯೂಟಿ ಪಾರ್ಲರ್‌ಗೆ ಹೋಗೋ ಮಹಿಳೆಯರಿಗೆ ಸ್ಯಾಡ್ ನ್ಯೂಸ್

    ಬ್ಯೂಟಿ ಪಾರ್ಲರ್‌ಗೆ ಹೋಗೋ ಮಹಿಳೆಯರಿಗೆ ಸ್ಯಾಡ್ ನ್ಯೂಸ್

    ಬೆಂಗಳೂರು: ಫೇಶಿಯಲ್, ಥ್ರೆಡ್ಡಿಂಗ್, ಲೇಸರ್ ಟ್ರೀಟ್‍ಮೆಂಟ್, ಮೊಡವೆಗೆ ಬ್ಲೀಚಿಂಗ್ ಅಂತಾ ಬ್ಯೂಟಿಪಾರ್ಲರ್ ಎಡೆತಾಕುವ ಲೇಡಿಸ್‍ಗಳಿಗೆ ಇದು ಬೇಸರದ ಸುದ್ದಿ. ಯಾಕೆಂದರೆ ಬ್ಯೂಟಿ ಪಾರ್ಲರ್ ಗಳಿಗೆ ಮೇಜರ್ ಸರ್ಜರಿ ಮಾಡೋದಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ದೊಡ್ಡ ಬೆಳವಣಿಕೆ ನಡೆದಿದೆ.

    ಮುಖದಲ್ಲಿ ಮೊಡವೆ ಇದ್ದರೆ, ಟ್ಯಾನ್ ಆಗಿದ್ದರೆ, ತಲೆಗೂದಲು ಉದುರುವಿಕೆಗೆ ಹೆಣ್ಮಕ್ಕಳು ನೇರವಾಗಿ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಾರೆ. ಆದರೆ ಇನ್ನು ಮುಂದೆ ಹೀಗೆ ಡೈರೆಕ್ಟಾಗಿ ಹೋಗೋದಕ್ಕೆ ಸಾಧ್ಯವಿಲ್ಲ. ಏಕೆಂದರೆ ಪಾರ್ಲರ್ ಗಳಿಗೆ ಬ್ರೇಕ್ ಹಾಕಿ ಅಂತಾ ವೈದ್ಯರು ಫೈಟ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ಚರ್ಮದ ವೈದ್ಯರು ಎಲ್ಲಾ ಕೇಂದ್ರ ಆರೋಗ್ಯ ಇಲಾಖೆಗೆ ಬ್ಯೂಟಿ ಪಾರ್ಲರ್‌ಗೆ ಮೊದಲು ಕಾಯ್ದೆ ತನ್ನಿ ಎಂದು ಮನವಿ ಮಾಡಿದ್ದಾರೆ.

    ಸದ್ಯದಲ್ಲಿಯೇ ರಾಜ್ಯದಲ್ಲಿ ಬ್ಯೂಟಿಪಾರ್ಲರ್ ಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಮಡಿಕೇರಿಯಲ್ಲಿ ಬ್ಯೂಟೀಷನ್ ಎಡವಟ್ಟಿನಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯದ ಚರ್ಮರೋಗ ತಜ್ಞರ ತಂಡ ಕೇಂದ್ರ ಆರೋಗ್ಯ ಇಲಾಖೆಗೆ ದೂರು ನೀಡಿದೆ.

    ಬ್ಯೂಟೀಷನ್‍ಗಳು ವೈದ್ಯರಾಗುತ್ತಿದ್ದಾರೆ. ಅವರಿಗೆ ಯಾವುದೇ ಕಾನೂನು ಇಲ್ಲ. ಪಾರ್ಲರ್ ಗಳಲ್ಲಿ ಲೇಸರ್ ಟ್ರೀಟ್‍ಮೆಂಟ್ ಸೇರಿದಂತೆ, ಚರ್ಮರೋಗಕ್ಕೆ ಅವರೇ ಕ್ರೀಮ್ ಗಳನ್ನು ನೀಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಅಂತಾ ವೈದ್ಯರೆಲ್ಲ ದೂರು ಕೊಂಡೊಯ್ದಿದ್ದಾರೆ

    ಕೇಂದ್ರ ಆರೋಗ್ಯ ಇಲಾಖೆ ವೈದ್ಯರ ಮನವಿಗೆ ಸಕಾರತ್ಮಾಕವಾಗಿ ಸ್ಪಂದಿಸಿದ್ದು, ರಾಜ್ಯದಲ್ಲಿ ಬ್ಯೂಟಿ ಪಾರ್ಲರ್ ಗಳ ಮೇಲೆ ಕಾಯ್ದೆ ತರುವ ಸಾಧ್ಯತೆ ಇದೆ ಎಂದು ಚರ್ಮರೋಗ ತಜ್ಞರ ಟೀಂ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದೆ. ಇದರ ಜೊತೆಗೆ ರಾಜ್ಯದ ಆರೋಗ್ಯ ಇಲಾಖೆಯೂ ಬ್ಯೂಟಿಪಾರ್ಲರ್ ಗಳ ಮೇಲೆ ಪರಿಶೀಲನಾ ಕಾರ್ಯ ನಡೆಸಿ, ಪಾರ್ಲರ್ ಗಳ ಮೇಲೆ ನಿಗಾ ವಹಿಸುವಂತೆ ವೈದ್ಯರು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಸನದಲ್ಲಿ ಬ್ಯೂಟಿಪಾರ್ಲರ್ ಯುವತಿಯರ ಕಿತ್ತಾಟ – ನಡುಬೀದಿಯಲ್ಲಿ ಜಡೆ ಜಗಳ ಬಿಡಿಸಲು ಹರಸಾಹಸ

    ಹಾಸನದಲ್ಲಿ ಬ್ಯೂಟಿಪಾರ್ಲರ್ ಯುವತಿಯರ ಕಿತ್ತಾಟ – ನಡುಬೀದಿಯಲ್ಲಿ ಜಡೆ ಜಗಳ ಬಿಡಿಸಲು ಹರಸಾಹಸ

    ಹಾಸನ: ಇಬ್ಬರು ಯುವತಿಯರು ನಡುರಸ್ತೆಯಲ್ಲೇ ಪರಸ್ಪರ ಕೊರಳಪಟ್ಟಿ ಹಿಡಿದು ಜಗಳವಾಡಿದ ಘಟನೆ ಹಾಸನದಲ್ಲಿ ನಡೆದಿದೆ.

    ನಗರದ ಪ್ರತಿಷ್ಠಿತ ಎವಿಕೆ ಕಾಲೇಜು ಎದುರಿನ ರಸ್ತೆಯಲ್ಲೇ ಈ ಜಡೆ ಜಗಳ ನಡೆದಿದ್ದು, ಕಾರಣ ಏನೆಂಬುದು ತಿಳಿದುಬಂದಿಲ್ಲ. ಈ ಇಬ್ಬರು ಯುವತಿಯರು ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಣಕಾಸು ಇಲ್ಲವೇ ಬೇರಾವುದೋ ವೈಯಕ್ತಿಕ ಕಾರಣಕ್ಕೆ ಈ ಜಗಳ ನಡೆದಿರಬಹುದು ಎಂದು ಹೇಳಲಾಗಿದೆ.

    ಯಾರು ಎಷ್ಟೇ ಬುದ್ಧಿವಾದ ಹೇಳಿದ್ರೂ ಕೇಳದೇ ಯುವತಿಯರು ಪರಸ್ಪರ ನಿಂದಿಸುವ ಮೂಲಕ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ರು. ಕೊನೆಗೆ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ, ನೀವು ಹೆಣ್ಣಾಗಿ ಹೀಗೆ ಕಚ್ಚಾಡುವುದು ಸರಿಯೇ ಎಂದು ಮಂಗಳಾರತಿ ಮಾಡಿ, ಆಟೋ ಹತ್ತಿಸಿ ಪೊಲೀಸ್ ಠಾಣೆಗೆ ಕಳಿಸಿದರು. ಮಹಿಳಾ ಮಣಿಯರ ವಾಕ್ಸಮರದ ದೃಶ್ಯ ನೆರೆದಿದ್ದವರಿಗೆ ಪುಕ್ಕಟೆ ಮನರಂಜನೆ ನೀಡಿತು.