Tag: beauty parlour

  • ಹಾಸನ | ಸಲೂನ್‌ಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ಆರೋಪ – ಪ್ರಕರಣ ದಾಖಲು

    ಹಾಸನ | ಸಲೂನ್‌ಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ಆರೋಪ – ಪ್ರಕರಣ ದಾಖಲು

    ಹಾಸನ: ವೈಯಕ್ತಿಕ ದ್ವೇಷದಿಂದ ಸಲೂನ್ ಶಾಪ್‌ಗೆ ನುಗ್ಗಿ ಮಹಿಳೆ ಮೇಲೆ ಮಹಿಳೆಯರ ಗ್ಯಾಂಗ್‌ ಹಲ್ಲೆ ನಡೆಸಿರುವ ಘಟನೆ ಹಾಸನದ (Hassan) ಚನ್ನಪಟ್ಟಣ ಬಡಾವಣೆಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು ಶೀಲಾ.ಎಸ್.ಆರ್. ಎಂದು ಗುರುತಿಸಲಾಗಿದೆ. ಅರ್ಪಿತಾ, ಮೋನಿಕಾ, ಸುಚಿತ್ರಾ, ಪಂಕಜ, ತಿಲಕ್ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕೆಆರ್‌ಎಸ್ ಪಕ್ಷದ ಮುಖಂಡ ರಮೇಶ್ ಪತ್ನಿ ಅರ್ಪಿತಾ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಶೀಲಾ ಅದೇ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಶೀಲಾ ಮೇಲೆ ಅರ್ಪಿತಾ ಕಳ್ಳತನದ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ ಶೀಲಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗಿನಿಂದಲೂ ಶೀಲಾ ಮೇಲೆ ಅರ್ಪಿತಾ ಮೇಲೆ ಹಗೆತನ ಸಾಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಂಗಳೂರು| ನಿಷೇಧಿತ PFI ಸಂಘಟನೆ ಆಕ್ಟೀವ್ ಮಾಡಿದ್ದ ಧರ್ಮಗುರು ಅರೆಸ್ಟ್


    ಇದಾದ ಬಳಿಕ ಶೀಲಾ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದ ಅರ್ಪಿತಾ, ಶೀಲಾ ಕೆಲಸಕ್ಕೆ ಸೇರಿದ ಕಡೆಗಳಲ್ಲಿ ಕಳ್ಳತನ ಮಾಡಿದ್ದಾಳೆ ಎಂದು ಅಪಪ್ರಚಾರ ಮಾಡುತ್ತಿದ್ದರು.‌ ಇತ್ತೀಚಿಗೆ ಚನ್ನಪಟ್ಟಣದಲ್ಲಿರುವ ಸ್ಲ್ಯಾಶ್ ಯುನಿ ಸೆಕ್ಸ್ ಸಲೂನ್‌ನಲ್ಲಿ ಶೀಲಾ ಕೆಲಸ ಮಾಡುತ್ತಿದ್ದು, ಶೀಲಾ ವಿರುದ್ಧ ಅರ್ಪಿತಾ ಮಾಲೀಕರಿಗೆ ದೂರು ಹೇಳಿದ್ದರು. ಇದೇ ವಿಚಾರಕ್ಕೆ ಶೀಲಾ ಹಾಗೂ ಅರ್ಪಿತಾ ನಡುವೆ ಮಾತಿನ ಚಕಮಕಿ ನಡೆದಿತ್ತು.

    ಶುಕ್ರವಾರ (ಅ.10) ಸಲೂನ್‌ಗೆ ನುಗ್ಗಿದ ಅರ್ಪಿತಾ ಹಾಗೂ ಇತರರು ಶೀಲಾ ಮೇಲೆ ಹಲ್ಲೆ ನಡೆಸಿದ್ದರು.‌ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ

  • ಕೊಡಗಿನಲ್ಲಿ ವೇಶ್ಯಾವಾಟಿಕೆ ದಂಧೆ – ಕೇರಳ ಮೂಲದ ಇಬ್ಬರು ಅರೆಸ್ಟ್‌

    ಕೊಡಗಿನಲ್ಲಿ ವೇಶ್ಯಾವಾಟಿಕೆ ದಂಧೆ – ಕೇರಳ ಮೂಲದ ಇಬ್ಬರು ಅರೆಸ್ಟ್‌

    ಕೊಡಗು: ಇಲ್ಲಿನ ವಿರಾಜಪೇಟೆಯಲ್ಲಿ ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.

    ಕೇರಳ ಮೂಲದ ಶಿಜು ಮತ್ತು ಪ್ರದೀಪ್ ಬಂಧಿತರು. ವಿರಾಜಪೇಟೆಯಲ್ಲಿ ಬ್ಯೂಟಿಪಾರ್ಲರ್‌ (Beauty Parlour) ನಡೆಸುತ್ತಿದ್ದ ಆರೋಪಿಗಳು ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರನ್ನ ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇದನ್ನೂ ಓದಿ: ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್‌

    ಈ ಕುರಿತು ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಮಣಿಪುರ | ಅಸ್ಸಾಂ ರೈಫಲ್ಸ್‌ನ ಸೇನಾ ವಾಹನದ ಮೇಲೆ ಗುಂಡಿನ ದಾಳಿ – ಇಬ್ಬರು ಯೋಧರು ಹುತಾತ್ಮ, ಐವರಿಗೆ ಗಾಯ

  • ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    – ಪತಿಯೇ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿರುವ ಆರೋಪ

    ಆನೇಕಲ್: 12 ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಆ ಜೋಡಿ ಮದ್ವೆಯಾಗಿತ್ತು (Marriage). ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರ ಸುಃಖವಾಗಿತ್ತು ಅನ್ನುವಾಗಲೇ ದುರಂತ ನಡೆದುಬಿಟ್ಟಿದೆ. ಅದೊಂದು ವಿಚಾರ ಆ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿ, ಒಬ್ಬರ ಸಾವಿಗೂ ಕಾರಣವಾಗಿದೆ.

    ದುರಂತದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ ದೀಪು, ಹಲ್ಲೆ ಮಾಡಿದ ಪತಿ ಉದಯ್‌. ಮೂಲತಃ ಪಿರಿಯಾಪಟ್ಟಣದ (Piriyapatna) ನಿವಾಸಿಯಾದ ದೀಪು 12 ವರ್ಷಗಳ ಹಿಂದೆ ಗುರು ಹಿರಿಯರ ಸಮ್ಮುಖದಲ್ಲಿ ಉದಯ್‌ ಎಂಬಾತನನ್ನ ವಿವಾಹವಾಗಿದ್ದಳು. ದಂಪತಿಗೆ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ ಇತ್ತೀಚೆಗೆ ಉದಯ್-ದೀಪಾ ದಂಪತಿ ನಡುವೆ ಬ್ಯೂಟಿ ಪಾರ್ಲರ್ ಆಂಟಿ ಎಂಟ್ರಿ ಕೊಟ್ಟಿದ್ದು, ಸಂಸಾರಕ್ಕೆ ಹುಳಿ ಹಿಂಡಿತ್ತು. ಇದನ್ನೂ ಓದಿ: Ramanagara | ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ – ಇಬ್ಬರ ಮೇಲೆ ಪ್ರಕರಣ ದಾಖಲು

    ಚಾಮುಂಡಿಬೆಟ್ಟದಲ್ಲಿ ಮಾತುಕತೆ ನಡೆದು ಗಂಡ ಉದಯ್ ಬ್ಯೂಟಿ ಪಾರ್ಲರ್ ಆಂಟಿಗೆ (Beauty Parlour Aunty) ಕಟ್ಟಿದ ತಾಳಿ ತೆಗೆಸಿದ್ರು. ಆದರೂ ಸಂಸಾರದ ತಾಳ ಮೇಳ ಸರಿಯಾಗಲಿಲ್ಲ. ನಿತ್ಯ ಮನೆಯಲ್ಲಿ ಆಂಟಿ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ಹೊಡೆದಾಟ ಕಾಮನ್ ಆಗಿತ್ತು. ಇದೇ ತಿಂಗಳು 6ನೇ ತಾರೀಖು ಆಂಟಿ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಗಂಡ ಉದಯ್ ಹಲ್ಲೆ ನಡೆಸಿ ನೀನು ಎಲ್ಲಾದರೂ ಹೋಗಿ ಸಾಯಿ ಎಂದು ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಪತ್ನಿ ದೀಪಾ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಚಿಕಿತ್ಸೆ ಫಲಕಾರಿಯಾಗದೇ 9ನೇ ತಾರೀಖು ನಗರದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಗಂಡು ಹುಟ್ಟಲಿಲ್ಲ ಅಂತ ಬೇಸರಗೊಂಡು ಹೆಣ್ಣುಮಗಳಿಗೆ ವಿಷವಿಕ್ಕಿ ಕೊಂದ ಸೇನಾ ಸಿಬ್ಬಂದಿ

    ಇತ್ತ ದೀಪಾಳ ಪೋಷಕರು ಕ್ರಿಮಿ ನಾಶಕ ಕುಡಿಸಿ ಮಗಳನ್ನ ಉದಯ್ ಕೊಂದಿರುವುದಾಗಿ ಆರೋಪಿಸಿದ್ದಾತೆ. ಮಹಿಳೆಯೊಬ್ಬಳ ಅಕ್ರಮ ಸಂಬಂಧ ವಿಚಾರಕ್ಕೆ ಪದೇ ಪದೇ ಹಲ್ಲೆ ನಡೆಸುತ್ತಿದ್ದ ಉದಯ್‌. ಕಿವಿ ಓಲೆ ಕೂಡ ಹಲ್ಲೆ ವೇಳೆ ಮುರಿದು ಹೋಗಿತ್ತು. ಬದುಕಲು ಸಾಧ್ಯವಿಲ್ಲ ಎಂದಾಗ ಬುದ್ಧಿ ಮಾತು ಹೇಳಿದ್ದೆವು. ಆದರೂ ಮನೆಯ ವಿಚಾರ ನಿಮ್ಮ ಕುಟುಂಬದವರಿಗೆ ತಿಳಿಸುತ್ತಿಯಾ ಎಂದು ಹಲ್ಲೆ ನಡೆಸಿದ್ದಾನೆ. ಹಣಕ್ಕಾಗಿಯು ಸಾಕಷ್ಟು ಪೀಡಿಸಿದ್ದಾನೆ. ಕೊನೆಗೆ ಕ್ರಿಮಿನಾಶಕ ಕುಡಿದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಕೊನೆ ಕ್ಷಣದಲ್ಲಿ ನಮಗೆ ತಿಳಿಸಿದ್ರು ಮಗಳ ಗಂಡ ಉದಯ್ ವಿಶ ಕುಡಿಸಿ ಕೊಂದಿರುವ ಸಾಧ್ಯತೆ ಇದೆ. ಪೊಲೀಸರು ನ್ಯಾಯ ಕೊಡಿಸಬೇಕು ಎಂದು ಮೃತ ದೀಪಾ ಕುಟುಂಬದವರು ಆಗ್ರಹಿಸಿದ್ದಾರೆ.

    ಸದ್ಯ ಮೃತ ದೀಪಾ ತಾಯಿ ಸುಗುಣಮ್ಮ ದೂರು ಆಧರಿಸಿ ಆತ್ಮಹತ್ಯೆ ಪ್ರಚೋದನೆ ಸೇರಿದಂತೆ ಜಾಮೀಜು ರಹಿತ ಸೆಕ್ಷನ್ ಅಡಿಯಲ್ಲಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರು. ಆರೋಪಿ ಉದಯ್‌ನನ್ನ ವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ನಾಗ್ಪುರ | ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನ ಬೈಕ್‌ನಲ್ಲೇ ಸಾಗಿಸಿದ ಪತಿ

  • ಪುರುಷರು ಕೆಲಸ ಮಾಡೋ ಬ್ಯೂಟಿ ಪಾರ್ಲರ್‌ಗಳಿಗೆ ಮುಸ್ಲಿಂ ಮಹಿಳೆಯರು ಹೋಗ್ಬಾರ್ದು: ಮುಫ್ತಿ ಅಸದ್ ಕಾಸ್ಮಿ

    ಪುರುಷರು ಕೆಲಸ ಮಾಡೋ ಬ್ಯೂಟಿ ಪಾರ್ಲರ್‌ಗಳಿಗೆ ಮುಸ್ಲಿಂ ಮಹಿಳೆಯರು ಹೋಗ್ಬಾರ್ದು: ಮುಫ್ತಿ ಅಸದ್ ಕಾಸ್ಮಿ

    ಲಕ್ನೋ: ಶುಕ್ರವಾರ ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರ (Saharanpur) ಜಿಲ್ಲೆಯ ಧರ್ಮಗುರುವೊಬ್ಬರು, ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್‌ಗಳಿಗೆ (Beauty Parlour) ಮುಸ್ಲಿಂ ಮಹಿಳೆಯರು (Muslim Women) ಹೋಗುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ಅಂತಹ ಪಾರ್ಲರ್‌ಗಳಲ್ಲಿ ಮಹಿಳೆಯರು ತಮ್ಮ ಮೇಕಪ್ ಮಾಡಿಕೊಳ್ಳುವುದು ‘ನಿಷಿದ್ಧ’ ಮತ್ತು ‘ಕಾನೂನುಬಾಹಿರ’ ಎಂದು ಕರೆದಿದ್ದಾರೆ.

    ಮುಫ್ತಿ ಅಸದ್ ಕಾಸ್ಮಿ (Mufti Asad Kasmi) ಅವರು ಈ ಹೇಳಿಕೆಗಳನ್ನು ನೀಡಿದ್ದು, ಮುಸ್ಲಿಂ ಮಹಿಳೆಯರು ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡುವುದನ್ನು ತಡೆಯಬೇಕು. ಬದಲಿಗೆ ಮಹಿಳೆಯರು ಮಾತ್ರ ಕೆಲಸ ಮಾಡುವ ಸಲೂನ್‌ಗಳನ್ನು ಆರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಐವರು ಲಷ್ಕರ್ ಭಯೋತ್ಪಾದಕರ ಹತ್ಯೆ

    ಕಳೆದ ತಿಂಗಳು, ಕಾನ್ಪುರದ ಮಹಿಳೆಯೊಬ್ಬರು ಐಬ್ರೋಸ್ ಮಾಡಿಸಿದ್ದಕ್ಕಾಗಿ ಆಕೆಯ ಪತಿ ಸೌದಿ ಅರೇಬಿಯಾದಿಂದ ಫೋನ್ ಮಾಡಿ ತ್ರಿವಳಿ ತಲಾಖ್ ನೀಡಿದ್ದಾರೆ. ಆಕೆಯ ಪತಿ ಸೌದಿಯಿಂದ ವೀಡಿಯೊ ಕಾಲ್ ಮಾಡಿ ಮಾತನಾಡುವ ಸಂದರ್ಭ ಪತ್ನಿ ಐಬ್ರೋಸ್ ಮಾಡಿಸಿರುವುದನ್ನು ಗಮನಿಸಿದ್ದಾರೆ. ಈ ಕುರಿತು ಆಕೆಯನ್ನು ಪತಿ ಪ್ರಶ್ನಿಸಿದ್ದು, ಆಕೆಯ ವಿವರಣೆಯಿಂದ ಅಸಮಾಧಾನಗೊಂಡು ವೀಡಿಯೋ ಕಾಲ್‌ನಲ್ಲಿಯೇ ತ್ರಿವಳಿ ತಲಾಖ್ ನೀಡಿದ್ದಾರೆ. ಇದನ್ನೂ ಓದಿ:  ಮಹಿಳೆಯಿಂದ ಬ್ಲ್ಯಾಕ್‌ಮೇಲ್ – ಎಂಪಿ ದೇವೇಂದ್ರಪ್ಪ ಪುತ್ರನಿಂದ ದೂರು, ಎಫ್‌ಐಆರ್ ದಾಖಲು

  • ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಬೆಂಗಳೂರು: ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದೂ ಪ್ರೀತಿಯಲ್ಲ. ಕಾಲ್ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ, ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತಾ ಅರ್ಥವಲ್ಲ. ನೀನು ಚಂದವಳ್ಳಿಯ ತೋಟದಲ್ಲಿ ಅರಳಿರುವ ಹೂವು ಅಂತಾ ಬಣ್ಣದ ಮಾತುಗಳನ್ನಾಡಿದರೆ ಅದು ಎದ್ವಾತದ್ವಾ ಪ್ರೀತಿ ಇದೆ ಅಂತಲ್ಲ. ಈ ಡೈಲಾಗ್‌ಗಳನ್ನ ನಿತ್ಯ ಪ್ರೇಮಿಗಳಿಂದ ಕೇಳುತ್ತಲೇ ಇರುತ್ತೇವೆ.

    ಬೆಂಗಳೂರಿನ ಮಹಿಳೆಯೊಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ಪತಿಯ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಈ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, `ಮುಂದಿನ ರೀಲ್‌ನಲ್ಲಿ ಅಂತಿಮ ಪ್ರೀತಿ’ ಎಂದೂ ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮಹಿಳೆಯ ಫೋಟೋ ಹಂಚಿಕೊಳ್ಳಲಾಗಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫೋಟೋದಲ್ಲಿನ ಮಹಿಳೆ ತನ್ನ ಪತಿ ಸತೀಶ್ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾಳೆ. 2.68 ಲಕ್ಷಕ್ಕೂ ಅಧಿಕ ಮಂದಿ ಫೋಟೋವನ್ನ ಲೈಕ್ ಮಾಡಿದ್ದಾರೆ.

    ಮಹಿಳೆಯ ಫೋಟೋವನ್ನು ನೋಡಿ ಕೆಲವರು ಇದು ಪಕ್ಕಾ ಟ್ರೂ ಲವ್ ಅಂತಾ ಹೊಗಳಿದರೆ, ಇನ್ನೂ ಕೆಲವರು ಇದು ಓವರ್ ಆಕ್ಷನ್, ನಾನು ನನ್ನ ಲೈಕ್ ಅನ್ನು ಕ್ಯಾನ್ಸಲ್ ಮಾಡ್ತೀನಿ. ಇದು ಮೂರ್ಖತನ, ನಿಜವಾದ ಪ್ರೀತಿಯನ್ನ ಈ ರೀತಿ ಸಾಬೀತು ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

  • ಬ್ಯೂಟಿ ಪಾರ್ಲರ್‌ಗೆ ಹೋಗೋದನ್ನ ತಡೆದ ಪತಿ – ಪತ್ನಿ ಆತ್ಮಹತ್ಯೆ

    ಬ್ಯೂಟಿ ಪಾರ್ಲರ್‌ಗೆ ಹೋಗೋದನ್ನ ತಡೆದ ಪತಿ – ಪತ್ನಿ ಆತ್ಮಹತ್ಯೆ

    ಭೋಪಾಲ್: ಬ್ಯೂಟಿ ಪಾರ್ಲರ್‌ಗೆ (Beauty Parlour) ಹೋಗುವುದನ್ನು ಪತಿ (Husband) ತಡೆದಿದ್ದಕ್ಕೆ ಮಹಿಳೆಯೊಬ್ಬಳು (Woman) ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

    ರೀನಾ ಯಾದವ್ (34) ಮೃತ ಮಹಿಳೆ. ರೀನಾ ಬ್ಯೂಟಿ ಪಾರ್ಲರ್‌ಗೆ ಹೋಗಲು ಸಿದ್ಧಳಾಗುತ್ತಿದ್ದಳು. ಈ ವೇಳೆ ಆಕೆಯ ಪತಿ ಬಲರಾಮ್ ಪಾರ್ಲರ್‌ಗೆ ಹೋಗುವುದು ಬೇಡ ಎಂದು ತಡೆದಿದ್ದಾನೆ. ಇದರಿಂದ ಕೋಪಗೊಂಡ ರೀನಾ ತನ್ನ ರೂಮ್‍ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಘಟನೆ ಬಳಿಕ ಆಕೆಯ ಪತಿ ಬಲರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಮದುವೆಯಾಗಿ 15 ವರ್ಷಗಳಾಗಿದ್ದು, ಬಲರಾಮ್ ಹಾಗೂ ರೀನಾ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಾನಾರೀತಿಯ ನಾಟಕಗಳನ್ನು ಮಾಡುತ್ತಿದೆ: ಮುನಿರತ್ನ

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾರಿನಿಂದ ಕುಸಿದಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ – ಬಿಎಸ್‍ವೈ

  • ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

    ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

    ಕೋಲಾರ: ತಾಲ್ಲೂಕಿನ ಮುದುವಾಡಿ ಬಳಿಯ ತೊಂಡಾಲ ಗ್ರಾಮದ ಕೆರೆಯಲ್ಲಿ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ (Women) ಶವ ಪತ್ತೆಯಾಗಿದೆ.

    ಸುಟ್ಟುಹೋದ ಸ್ಥಿತಿಯಲ್ಲಿದ್ದ ದೇಹದಲ್ಲಿ ಮಾಂಗಲ್ಯ ಸರ ಪತ್ತೆಯಾಗಿದ್ದು, ಮೃತದೇಹ ಮಹಿಳೆಯದ್ದೇ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಧನ್ಯಾ ರಾಮ್ ಕುಮಾರ್ ನಟನೆ ‘ಹೈಡ್ ಅಂಡ್ ಸೀಕ್’ ಚಿತ್ರದ ಫಸ್ಟ್ ಲುಕ್ ರಿಲೀಸ್

    ಮೃತದೇಹ ಶ್ರೀನಿವಾಸಪುರದ ಮಹಿಳೆ ಶೋಭಾ (37) ಅವರದ್ದು, ಎಂದು ಗುರುತಿಸಲಾಗಿದೆ. ಕಿಡಿಗೇಡಿಗಳು ಮಹಿಳೆಯನ್ನ ಕೊಲೆ ಮಾಡಿ, ಸುಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸೀರೆಯೇ ಚಂದ ಎಂದಿದ್ದ ವಿದ್ಯಾ ಬಾಲನ್ ಕೈಯಲ್ಲಿ ನ್ಯೂಸ್ ಪೇಪರ್

    ಕೋಲಾರ ಗ್ರಾಮಾಂತರ ಪೊಲೀಸರು (Kolar Rural Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಹಿಳೆಯ ಗುರುತು ಪತ್ತೆಯಾಗಿದೆ. ಇಲ್ಲಿನ ನಿವಾಸಿ ವೆಂಕಟರಮಣ ಈಕೆಯನ್ನ 2ನೇ ಮದುವೆಯಾಗಿದ್ದ. ಮಹಿಳೆ ಶೋಭಾ ಶ್ರೀನಿವಾಸಪುರದಲ್ಲೇ ಬ್ಯೂಟಿಪಾರ್ಲರ್ (Beauty Parlour) ನಡೆಸುತ್ತಿದ್ದರು ಎಂದು ಹೇಳಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

  • ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಮಂಡ್ಯ: ಸದಾ ಸುದ್ದಿಯಲ್ಲೇ ಇರುವ ಕಾಂಗ್ರೆಸ್‍ನ (Congress) ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‍ನ ಸಹೋದರ ಕೆ.ಬಿ.ರವಿಕುಮಾರ್ ಇದೀಗ ಮಹಿಳೆಯ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕೆಆರ್ ಪೇಟೆಯ (K.R.Pete) ಮಹಿಳೆಯೊಂದಿಗೆ ಕೆ.ಬಿ.ರವಿ ಟವಲ್ ಹಾಗೂ ಬನಿಯನ್‍ನಲ್ಲಿ ಸಿಕ್ಕಿಬಿದ್ದು ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    ನಗರದಲ್ಲಿರುವ ರವಿಯವರ ವಾಣಿಜ್ಯ ಕಟ್ಟಡದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದಳು. ಶುಕ್ರವಾರ ಮಹಿಳೆ ಮನೆಗೆ ಬಾರದ ಹಿನ್ನೆಲೆ ಗಂಡ ಹಾಗೂ ಆತನ ಮನೆಯವರು ರವಿಯವರ ಮನೆಯ ಬಳಿ ಬಂದು ನೋಡಿದಾಗ ಆಕೆಯ ಸ್ಕೂಟರ್ (Scooter) ಇರುವುದು ಪತ್ತೆಯಾಗಿದೆ. ಕುಟುಂಬ ಆಕೆಯನ್ನು ಕರೆದು ಕೇಳಿದಾಗ ನನಗೆ ನೀನು ಬೇಡ, ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಎಂದು ಗಂಡನಿಗೆ ಗದರಿಸಿದ್ದಾಳೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

    ಮಹಿಳೆಯ ಕುಟುಂಬದಲ್ಲಿ ಅಕ್ರಮ ಸಂಬಂಧ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಗಂಡ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ (Dowry) ಕಿರುಕುಳದ ದೂರನ್ನು ಸಹ ನೀಡಿದ್ದಳು. ಅಲ್ಲದೇ ನನಗೆ ವಿಚ್ಛೇದನ (Divorce) ಬೇಕು ಎಂದು ಕಳೆದ ತಿಂಗಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದಳು.

    ಒಂದು ಕಡೆ ಕೆ.ಬಿ.ಚಂದ್ರಶೇಖರ್ ರಾಜಕೀಯದಲ್ಲಿ ಬೆಳವಣಿಗೆ ಪಡೆಯಬೇಕೆಂದು ಸರ್ಕಸ್ ಮಾಡ್ತಾ ಇದ್ದಾರೆ. ಇತ್ತ ಸಹೋದರ ಮಹಿಳೆಯ ಜೊತೆ ಸಿಕ್ಕಿ ಬಿದ್ದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ಈ ಪ್ರಕರಣ ಯಾವ ಆಯಾಮ ಪಡೆದುಕೊಳ್ಳುತ್ತದೆ ಎಂದು ಜನ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ

  • ವಧುವಿನ ಬಾಳಿಗೆ ಗ್ರಹಣವಾದ ಮೇಕಪ್- ಮದುವೆಯೇ ಕ್ಯಾನ್ಸಲ್!

    ವಧುವಿನ ಬಾಳಿಗೆ ಗ್ರಹಣವಾದ ಮೇಕಪ್- ಮದುವೆಯೇ ಕ್ಯಾನ್ಸಲ್!

    ಹಾಸನ: ಆಕೆ ಮದುವೆಯಾಗಲು  ತಯಾರಾಗಿ ಹೊಸ ಜೀವನದ ಕನಸು ಕಂಡವಳು. ಹೊಸ ಬಾಳಿನ ಬಾಗಿಲಿಗೆ ಹೊಸ ಕನಸಿನ ಬೆಳಕು ಬರುವ ಮುನ್ನವೇ ಮೇಕಪ್ (Marriage Makeup) ಅವಳ ಮುಖವನ್ನು ಗ್ರಹಣದಂತೆ ಆವರಿಸಿ ಕನಸನ್ನು ಕಸಿದುಕೊಂಡಿದೆ.

    ಹೌದು, ಹೊಸ ಮಾದರಿಯ ಮೇಕಪ್‍ಗೆ ವಧುವಿನ (Bride) ಮುಖವೇ ವಿರೂಪಗೊಂಡು ಮದುವೆ ಕ್ಯಾನ್ಸಲ್ ಆದ ಘಟನೆ ಹಾಸನದ (Hassan) ಅರಸೀಕೆರೆಯಲ್ಲಿ (Arsikere) ನಡೆದಿದೆ. ಇದನ್ನೂ ಓದಿ: ನಿತ್ಯಾನಂದನಿಗೆ ಭಾರತದಲ್ಲಿರೋ ಹಿಂದೂ ವಿರೋಧಿಗಳಿಂದ ಕಿರುಕುಳ- ಕ್ರಮಕ್ಕೆ ಶಿಷ್ಯೆ ಒತ್ತಾಯ

    ಮದುವೆಗಾಗಿ ನಗರದ ಗಂಗಾಶ್ರೀ ಹರ್ಬಲ್ ಬ್ಯೂಟಿ ಪಾರ್ಲರ್ ಅಂಡ್ ಸ್ಪಾನಲ್ಲಿ ಮೇಕಪ್ ಮಾಡಿಸಿಕೊಂಡಿದ್ದ ಯುವತಿಗೆ ಈ ದುರ್ಗತಿ ಎದುರಾಗಿದೆ. ಬ್ಯೂಟಿಪಾರ್ಲರ್‌ನ (Beauty Parlour ಮಾಲೀಕರಾದ ಗಂಗಾ, ಹೊಸ ಬಗೆಯ ಮೇಕಪ್ ಮಾಡುವುದಾಗಿ ಹೇಳಿ ಸ್ಟೀಮ್ ನೀಡಿದ್ದಾರೆ. ಇದಾದ ಬಳಿಕ ವಧುವಿನ ಮುಖ ಊದಿಕೊಂಡು, ಸುಟ್ಟಂತೆ ಕಪ್ಪಾಗಿದೆ.

    ವಿರೂಪಗೊಂಡ ಯುವತಿಯ ಮುಖ ನೋಡಿ ಮದುವೆಯಾಗಲು ವರ ಹಾಗೂ ವರನ ಕುಟುಂಬ ನಿರಾಕರಿಸಿದೆ. ಕಳೆದ ಹತ್ತು ದಿನಗಳ ಹಿಂದೆ ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅವಘಡದ ಕುರಿತು ಅರಸೀಕೆರೆ ನಗರ ಪೊಲೀಸರು ಬ್ಯೂಟಿಪಾರ್ಲರ್ ಮಾಲಕಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: Exclusive Details- ಇಂದು ಯುವರಾಜ ಹೊಸ ಚಿತ್ರದ ಟೈಟಲ್, ಟೀಸರ್ ಅನಾವರಣ

  • ನಕಲಿ ಬ್ಯೂಟಿ ಪಾರ್ಲರ್‌ಗಳ ಹಾವಳಿ – ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಚರ್ಮ ಸಮಸ್ಯೆ

    ನಕಲಿ ಬ್ಯೂಟಿ ಪಾರ್ಲರ್‌ಗಳ ಹಾವಳಿ – ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಚರ್ಮ ಸಮಸ್ಯೆ

    ಬೆಂಗಳೂರು: ಮುಖದ ಸೌಂದರ್ಯ ವರ್ಧನೆಗೆ ಅಂತಾ ಮಹಿಳೆಯರು (Womens) ಬ್ಯೂಟಿ ಪಾರ್ಲರ್‌ಗೆ (Beauty Parlour) ಹೋಗೋದು ಸಾಮಾನ್ಯ. ಆದರೆ ಈಗ ಬ್ಯೂಟಿಪಾರ್ಲರ್‌ಗೆ ಹೋದ ಮಹಿಳೆಯರು, ಚರ್ಮದ (Skin) ವೈದ್ಯರನ್ನು ಕಾಣುವಂತಾಗಿದೆ. ಇದಕ್ಕೆ ಸ್ಫೋಟಕ ಕಾರಣವನ್ನು ವೈದ್ಯರ ಜೊತೆಗೆ ಬ್ಯೂಟಿಪಾರ್ಲರ್ ಅಸೋಸಿಯೇಷನ್ ಕೂಡ ಬಾಯಿಬಿಟ್ಟಿದೆ.

     

    ಫೇಸ್ ಬ್ಲೀಚ್, ಕ್ಲೀನ್‌ ಅಪ್‌, ಹೈಬ್ರೂ, ಪೆಡಿಕ್ಯೂರ್ ಅಂತಾ ಸೌಂದರ್ಯವರ್ಧನೆಗಾಗಿ ಬ್ಯೂಟಿಪಾರ್ಲರ್‌ಗೆ ಹೋಗೋದು ಕಾಮನ್. ಆದ್ರೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲ ಪಾರ್ಲರ್‌ಗಳಿಗೆ ಹೋಗಿ ಬಂದ ತಕ್ಷಣ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮುಖದಲ್ಲಿ ಬಿಳಿಗುಳ್ಳೆ, ಮುಖದಲ್ಲಿ ನವೆ ಸಮಸ್ಯೆ ಸೇರಿದಂತೆ ಕಲೆಗಳ ಸಮಸ್ಯೆ ಹೆಚ್ಚಾಗ್ತಿದೆಯಂತೆ. ಕೆಲವೊಂದು ಪಾರ್ಲರ್‌ನಲ್ಲಿ ಈ ಪ್ರಕ್ರಿಯೆಗಳಿಗೆ ಬಳಸುವ ಸಲಕರಣೆಗಳನ್ನು ಶುದ್ಧೀಕರಣ ಮಾಡದೇ ಇರೋದು, ಸ್ವಚ್ಛತೆ ಕಾಪಾಡದೇ ಇರೋದ್ರಿಂದ ಈ ಸಮಸ್ಯೆ ಎದುರಾಗುತ್ತಿದೆ ಅಂತಾರೆ ವೈದ್ಯರು. ಹೀಗಾಗಿ ಎಚ್ಚರಿಕೆಯಿಂದ ಪಾರ್ಲರ್‌ಗಳನ್ನು ಆರಿಸಿ ಹೋಗಿ ಅಂತಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಪರಮಾಣು ಬಾಂಬ್‌ ಯುದ್ಧದ ಬೆದರಿಕೆ ಹಾಕಿದ ಪಾಕ್‌ ಸಚಿವೆ

    ಈ ಸಮಸ್ಯೆಗಳಿಗೆ ಪ್ರಮುಖ ಕಾರಣ ನಕಲಿ ಪಾರ್ಲರ್ ಹಾವಳಿ ಅಂತಾ ಖುದ್ದು ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಸ್ಫೋಟಕ ವಿಚಾರ ಬಾಯಿ ಬಿಟ್ಟಿದೆ. ಬೆಂಗಳೂರಿನಲ್ಲಿ ಅನಾನುಭವಿ ಬ್ಯೂಟಿಷನ್‍ಗಳು ದುಡ್ಡಿನಾಸೆಗೆ ಪಾರ್ಲರ್ ತೆರೆಯುತ್ತಿರೋದ್ರಿಂದ ಈ ಸಮಸ್ಯೆ ಉದ್ಭವವಾಗಿದೆ ಅಂತಾ ಅಸೋಸಿಯೇಷನ್ ಹೇಳಿದ್ದು, ಆಯಾಯ ಜನರ ಚರ್ಮಕ್ಕನುಗುಣವಾಗಿ ಸೇವೆ ನೀಡಬೇಕು. ಆದರೆ, ಇದನ್ನು ತಿಳಿದುಕೊಳ್ಳದೇ ಮಾಡೋದ್ರಿಂದ ಸಮಸ್ಯೆಯಾಗುತ್ತಿದೆ ಅಂತಾ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸಂಸಾರದ ಜಂಜಾಟವೇ ಬೇಡವೆಂದು ದೇವರನ್ನೇ ವರಿಸಿದ ಚೆಲುವೆ

    ಒಟ್ಟಾರೆ ಸೌಂದರ್ಯವೃದ್ಧಿಗಾಗಿ ಪಾರ್ಲ್‍ರ್‍ಗಳಿಗೆ ಹೋಗುವ ಮುನ್ನ ಅಸಲಿಯೋ ನಕಲಿಯೋ ಎಂಬುದನ್ನು ಕನ್ಫರ್ಮ್‍ಮಾಡಿಕೊಂಡು ಹೋಗಿ. ಇಲ್ಲವಾದಲ್ಲಿ ನೀವೇ ದುಡ್ಡು ಕೊಟ್ಟು ನಿಮ್ಮ ಸೌಂದರ್ಯವನ್ನು ನೀವೇ ಹಾಳು ಮಾಡಿಕೊಳ್ಳುವುದು ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]