Tag: Beauty Parlor

  • ನನ್ನ ಗಂಡ ಮೇಕಪ್‌ಗೆ ಹಣ ಕೊಡ್ತಿಲ್ಲ – ಡಿವೋರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ

    ನನ್ನ ಗಂಡ ಮೇಕಪ್‌ಗೆ ಹಣ ಕೊಡ್ತಿಲ್ಲ – ಡಿವೋರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು (Women) ಆಕರ್ಷಕವಾಗಿ ಕಾಣಬೇಕು ಅಂತಾ ಬ್ಯೂಟಿ ಬಗ್ಗೆ ಕೇರ್ (Beauty Care) ಮಾಡೋದು ಜಾಸ್ತಿ. ಊಟ ಇಲ್ಲದಿದ್ರೂ ಸರಿ, ಟೈಂ ಟು ಟೈಂ ಮೇಕಪ್ ಮಾತ್ರ ಪಕ್ಕಾ ಆಗ್ಬೇಕು. ಕೆಲವರಂತೂ ವಿತೌಟ್ ಮೇಕಪ್ (Makeup) ಮನೆಯಿಂದ ಕಾಲಿಡೋ ಹಾಗೇ ಇಲ್ಲ. ಪ್ರಪಂಚವೇ ಮುಳುಗಿ ಹೋಯ್ತೇನೊ ಅನ್ನೂ ಹಾಗೇ ಕೂತಿರ್ತಾರೆ. ಇದೆಲ್ಲವೂ ಇಂದು ಸಹಜವಾಗಿಬಿಟ್ಟಿದೆ.

    ಆದ್ರೆ ಇಲ್ಲಿ ಓರ್ವ ಮಹಿಳೆ ತನ್ನ ಗಂಡನಿಗೆ ವಿಚ್ಛೇದನ (Divorce) ನೀಡಲು ಕೋರ್ಟ್ (Court) ಮೆಟ್ಟಿಲೇರಿದ್ದಾಳೆ. ಆಕೆ ನೀಡಿದ ಕಾರಣ ಕೇಳಿದ್ರೆ ಜನರು ಬೆಚ್ಚಿ ಬೀಳ್ತಾರೆ. ಹೌದು. ತನ್ನ ಪತಿ ಬ್ಯೂಟಿಪಾರ್ಲರ್‌ಗೆ (Beauty Parlor) ಹೋಗಲು ಎಷ್ಟು ಕೇಳಿದ್ರೂ ಹಣ ಕೊಡ್ತಾ ಇಲ್ಲ ಅಂತಾ ಡಿವೋರ್ಸ್‌ಗೆ ಅಪ್ಲೇ ಮಾಡಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

    ಸಿವಿಲ್ ಲೈನ್ ಪ್ರದೇಶದಲ್ಲಿ ವಾಸವಿರುವ 25 ವರ್ಷದ ಗೃಹಿಣಿ ದೆಹಲಿ ನಿವಾಸಿ ಅಮಿತ್ ಎಂಬಾತನನ್ನು 2015ರಲ್ಲಿ ವಿವಾಹವಾಗಿದ್ದರು. ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಲವಲವಿಕೆಯಿಂದ, ಖುಷಿಖುಷಿಯಾಗಿ ಇದ್ದರು. ಆದರೆ 3 ವರ್ಷಗಳ ಹಿಂದೆ ಇವರಿಬ್ಬರ ನಡುವೆ ಕಲಹ ಶುರುವಾಯಿತು. ನಂತರದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ದಂಪತಿಗೆ ಇನ್ನೂ ಮಕ್ಕಳು ಆಗಿಲ್ಲ.

    ಇದೀಗ ಮೇಕಪ್ ವಿಷಯಕ್ಕಾಗಿ ವಿಚ್ಛೇದನಕ್ಕೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇವರನ್ನು ನ್ಯಾಯಾಲಯದಲ್ಲಿ ಕೌನ್ಸೆಲಿಂಗ್‌ಗೆ ಕರೆಯಲಾಗಿದೆ ಎಂದು ನ್ಯಾಯಾಲಯದ ಸಲಹೆಗಾರ ಪ್ರದೀಪ್ ಸಾರಸ್ವತ್ ಹೇಳಿದ್ದಾರೆ. ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಿರಾತಕರ ಗ್ಯಾಂಗ್‌

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯಂತೆ ವೇಷಧರಿಸಿ ಬ್ಯೂಟಿ ಪಾರ್ಲರ್‌ಗೆ ಬಂದು ವ್ಯಕ್ತಿ ಕಿರುಕುಳ

    ಮಹಿಳೆಯಂತೆ ವೇಷಧರಿಸಿ ಬ್ಯೂಟಿ ಪಾರ್ಲರ್‌ಗೆ ಬಂದು ವ್ಯಕ್ತಿ ಕಿರುಕುಳ

    ಗಾಂಧಿನಗರ: ವ್ಯಕ್ತಿಯೊಬ್ಬ ಹೆಣ್ಣಿನಂತೆ ವೇಷಧರಿಸಿ ಬ್ಯೂಟಿ ಪಾರ್ಲರ್‌ಗೆ ಬಂದು, ಪಾರ್ಲರ್ ಮಹಿಳೆಗೆ ಕಿರುಕುಳ ನೀಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಸಂತ್ರಸ್ತೆ ಮಹಿಳೆ ಗಂಡನನ್ನು ಕಳೆದುಕೊಂಡಿದ್ದಾರೆ. ಒಬ್ಬಂಟಿಯಾಗಿ 12 ವರ್ಷದ ಮಗನೊ0ದಿಗೆ ವಾಸವಾಗಿದ್ದಾರೆ. ಇವರು ಬ್ಯೂಟಿ ಪಾರ್ಲರ್ ನಡೆಸಿ ಜೀವನವನ್ನು ಸಾಗಿಸುತ್ತಿದ್ದಾರೆ.

    ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮಹಿಳೆ ಒಬ್ಬರೇ ಪಾರ್ಲರ್‌ನಲ್ಲಿ ಇದ್ದರು. ಈ ವೇಳೆ ವ್ಯಕ್ತಿಯೊಬ್ಬ ಬಿಳಿ ಕುರ್ತಾ ಧರಿಸಿ ಮಹಿಳೆಯಂತೆ ವೇಷಧರಿಸಿ ಬಂದಿದ್ದಾನೆ. ಪಾರ್ಲರ್ ಮಹಿಳೆಗೆ ಅವರ ಧ್ವನಿ ಕೇಳಿ ಅನುಮಾನ ಬಂದಿದೆ. ಹೊರಗೆ ಹೋಗಿ ಎಂದು ಹೇಳಿದ್ದಾಳೆ. ಆಗ ಮಹಿಳೆಯಂತೆ ವೇಷ ಧರಿಸಿರುವ ವ್ಯಕ್ತಿ, ಮಹಿಳೆಯ ಕೈ ಹಿಡಿದು ಎಳೆದು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ಅವನನ್ನು ತಳ್ಳಿ ಹಾಕಿ ಹೊರಗೆ ಓಡಿ ಹೋಗಿದ್ದಾಳೆ. ಆಗ ಮಹಿಳಾ ವೇಷಧಾರಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಆರೋಪಿ ದ್ವಿಚಕ್ರವಾಹನದಲ್ಲಿ ಪಾರ್ಲರ್‌ಗೆ ಬಂದಿದ್ದಾನೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿಟಿವಿಗಳಲ್ಲಿ ಈ ದೃಶ್ಯಾವಳಿ ಸೆರೆಯಾಗಿವೆ. ನಾವು ಪರಿಶೀಲಿಸಿ ಆರೋಪಿಯನ್ನು ಬಂಧಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬ್ಯೂಟಿ ಪಾರ್ಲರ್ ಬಂದ್

    ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬ್ಯೂಟಿ ಪಾರ್ಲರ್ ಬಂದ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಬ್ಯೂಟಿಪಾರ್ಲರ್ ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ.

    ದ.ಕ ಜಿಲ್ಲಾ ಬ್ಯೂಟಿಪಾರ್ಲರ್ ಅಸೋಸಿಯೇಷನ್ ಸಭೆ ನಡೆಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾದ್ಯಂತ ದಿನೇ ದಿನೇ ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿದ್ದು, ಗ್ರಾಹಕರು ಹಾಗೂ ಸೌಂದರ್ಯ ತಜ್ಞೆಯರ ಆರೋಗ್ಯದ ಹಿತ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಬ್ಯೂಟಿ ಪಾರ್ಲರ್ ಗಳನ್ನು ಬಂದ್ ಮಾಡಲಾಗುತ್ತಿದೆ.

    ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ನೋಡಿ ಬ್ಯೂಟಿ ಪಾರ್ಲರ್ ಓಪನ್ ಮಾಡಲು ತೀರ್ಮಾನಿಸಲಾಗುವುದು ಎಂದು ಅಸೋಸಿಯೇಷನ್ ನ ಅಧ್ಯಕ್ಷೆ ಬಬಿತಾ ಶೆಟ್ಟಿ ತಿಳಿಸಿದ್ದಾರೆ.

  • ಮದ್ವೆಗೆ ಕೆಲ ಗಂಟೆ ಇರುವಾಗ್ಲೇ ಬ್ಯೂಟಿ ಪಾರ್ಲರಿನಲ್ಲಿ ವಧು ಕೊಲೆ

    ಮದ್ವೆಗೆ ಕೆಲ ಗಂಟೆ ಇರುವಾಗ್ಲೇ ಬ್ಯೂಟಿ ಪಾರ್ಲರಿನಲ್ಲಿ ವಧು ಕೊಲೆ

    – ಮಾಜಿ ಪ್ರಿಯಕರನ ಫೋನ್ ರಿಸೀವ್ ಮಾಡಿದ್ದೇ ತಪ್ಪಾಯ್ತು
    – ಪ್ರೇಮಿಯ ಮನವೊಲಿಸಿ ಸ್ಥಳ ತಿಳಿದುಕೊಂಡ

    ಭೋಪಾಲ್: ಮದುವೆಗೆ ಇನ್ನೂ ಕೆಲವೇ ಗಂಟೆಗಳು ಇರುವಾಗಲೇ ಬ್ಯೂಟಿ ಪಾರ್ಲರಿನಲ್ಲಿ ವಧುವನ್ನು ಕೊಲೆ ಮಾಡಿರುವ ಘಟನೆ ಮಧ್ಯ ಪ್ರದೇಶದ ರತ್ನಂ ಜಿಲ್ಲೆಯಲ್ಲಿ ನಡೆದಿದೆ.

    ಸೋನು ಯಾದವ್ ಕೊಲೆಯಾದ ವಧು. ಜಿಲ್ಲೆಯ ಜೌರಾ ಪಟ್ಟಣದಲ್ಲಿ ಭಾನುವಾರ ವಧು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಮಾಜಿ ಪ್ರಿಯಕರ ರಾಮ್ ಯಾದವ್ ಕೊಲೆ ಮಾಡಿರಬಹುದು. ಆತ ವಧುವಿನ ಕತ್ತನ್ನು ಕೊಯ್ದು ಕೊಲೆ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯಕ್ಕೆ ಈ ಕೊಲೆಗೆ ಸಹಾಯ ಮಾಡಿದ ಮತ್ತು ಗಡಿ ದಾಟಲು ಸಹಾಯ ಮಾಡಿದ ಆರೋಪಿಯ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

    ಸೋನು ಯಾದವ್ ಮದುವೆ ಭಾನುವಾರ ನಿಗದಿಯಾಗಿತ್ತು. ಹೀಗಾಗಿ ಶಜಾಪುರ ಜಿಲ್ಲೆಯ ನಿವಾಸಿ ಸೋನು ವಿವಾಹ ದಿನದಂದು ಬೆಳಗ್ಗೆ ಕುಟುಂಬದೊಂದಿಗೆ ಜೌರಾ ಪಟ್ಟಣಕ್ಕೆ ಬಂದಿದ್ದಾಳೆ. ಸ್ವಲ್ಪ ಸಮಯದ ನಂತರ ಸೋನು ತನ್ನ ಸಂಬಂಧಿಯೊಂದಿಗೆ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಾಳೆ. ಸೋನು ಬ್ಯೂಟಿ ಪಾರ್ಲರ್ ತಲುಪಿದ ಕೂಡಲೇ ಶಂಕಿತ ಪ್ರಿಯಕರ ರಾಮ್ ಯಾದವ್ ಅನೇಕ ಬಾರಿ ಫೋನ್ ಮಾಡಿದ್ದಾನೆ. ಆದರೆ ಸೋನು ಆತನ ಎಲ್ಲಾ ಕರೆಗಳನ್ನು ನಿರ್ಲಕ್ಷಿಸಿದಳು.

    ರಾಮ್ ಯಾದವ್ ತನ್ನ ಸ್ನೇಹಿತನ ಮೊಬೈಲ್ ಫೋನಿನಿಂದ ಸೋನುಗೆ ಫೋನ್ ಮಾಡಿದ್ದಾನೆ. ಬೇರೆ ನಂಬರ್ ಆಗಿದ್ದರಿಂದ ಸೋನು ಫೋನ್ ರಿಸೀವ್ ಮಾಡಿ ಮಾತನಾಡಿದ್ದಾಳೆ. ಆಗ ರಾಮ್ ಯಾದವ್ ಆಕೆಯ ಮನವೊಲಿಸಿ ಸೋನು ಇರುವ ಸ್ಥಳವನ್ನು ತಿಳಿದುಕೊಂಡಿದ್ದಾನೆ. ಆಕೆಯ ಇರುವ ಸ್ಥಳ ತಿಳಿಯುತ್ತಿದ್ದಂತೆ ರಾಮ್ ಯಾದವ್ ಬ್ಯೂಟಿ ಪಾರ್ಲರ್‌ಗೆ ಬಂದು ಸೋನುವಿನ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಪರಿಣಾಮ ಸೋನು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಸೋನುವನ್ನು ಕೊಲೆ ಮಾಡಿದ ನಂತರ ರಾಮ್ ಯಾದವ್ ತನ್ನ ಸ್ನೇಹಿತ ಪವನ್ ಪಂಚಲ್ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಪಂಚಲ್ ರಾಜಸ್ಥಾನದ ಬಸ್ ನಿಲ್ದಾಣದಲ್ಲಿ ಇಳಿಸಿದ್ದಾನೆಂದು ತಿಳಿದುಬಂದಿದೆ. ರತ್ನಂನಿಂದ ರಾಜಸ್ಥಾನದ ಗಡಿ ಕೇವಲ 25 ಕಿ.ಮೀ ದೂರದಲ್ಲಿದೆ. ಪಂಚಲ್ ರತ್ನಂಗೆ ಹಿಂದಿರುಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿ ರಾಮ್ ಯಾದವ್‍ನನ್ನು ಬಂಧಿಸಲು ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

    ಸೋನು ಯಾದವ್ ಮೂರು ವರ್ಷಗಳ ಹಿಂದೆ ಒಂದು ಸಮಾರಂಭದಲ್ಲಿ ಆರೋಪಿ ರಾಮ್‍ನನ್ನು ಭೇಟಿಯಾಗಿದ್ದಳು. ಬಳಿಕ ಇಬ್ಬರ ಮಧ್ಯೆ ಸಂಬಂಧ ಇತ್ತು ಎಂದು ಬಂಧಿತ ಆರೋಪಿ ಪಂಚಲ್ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೇ ಆರೋಪಿ ರಾಮ್ ಯಾದವ್ ಪ್ರಿಯತಮೆ ಸೋನುವಿನ ಮದುವೆ ಬಗ್ಗೆ ತಿಳಿದುಕೊಂಡಿದ್ದು, ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದನು. ಸೋನುವನ್ನು ಕೊಲೆ ಮಾಡುವ ಪ್ಲಾನ್ ಬಗ್ಗೆ ಸ್ನೇಹಿತ ಪಂಚಲ್‍ಗೆ ತಿಳಿಸಿದ್ದನು.

    ಎಸ್‍ಪಿ ಗೌರವ್ ತಿವಾರಿ ಈ ಪ್ರಕರಣದ ಬಗ್ಗೆ ಮಾತನಾಡಿ, ಕೊಲೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ಕೂಡಲೇ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದೇವೆ. ಆಗ ಇಬ್ಬರು ಪುರುಷುರು ಆ ಪ್ರದೇಶದಲ್ಲಿ ನಿಂತಿರುವುದು ಕಂಡು ಬಂದಿದೆ. ಒಬ್ಬ ಬ್ಯೂಟಿ ಪಾರ್ಲರಿಗೆ ಹೋಗಿದ್ದಾನೆ. ನಾವು ವಾಹನದ ನಂಬರ್ ಮತ್ತು ವಧುವಿಗೆ ಬಂದಿದ್ದ ಎರಡು ನಂಬರ್‌ಗಳನ್ನು ಪತ್ತೆ ಮಾಡಿದ್ದೇವೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದರು.

  • ಕೊರೊನಾ ಎಫೆಕ್ಟ್- ಸಂಕಷ್ಟದಲ್ಲಿ ಬ್ಯೂಟಿಷಿಯನ್‍ಗಳು

    ಕೊರೊನಾ ಎಫೆಕ್ಟ್- ಸಂಕಷ್ಟದಲ್ಲಿ ಬ್ಯೂಟಿಷಿಯನ್‍ಗಳು

    – ಮನೆ, ಅಂಗಡಿ ಬಾಡಿಗೆ ಕಟ್ಟಲಾಗದೆ ಕಂಗಾಲು
    – ನೆರವು ನೀಡುವಂತೆ ಮನವಿ

    ದಾವಣಗೆರೆ: ಕೊರೊನಾ ಮಹಾಮಾರಿಯಿಂದಾಗಿ ಬ್ಯೂಟಿಷಿಯನ್ಸ್ ಗಳು ಜೀವನ ನಡೆಸುವುದೇ ಕಷ್ಟವಾಗಿದ್ದು, ಅವರ ಗೋಳು ಹೇಳತೀರದಾಗಿದೆ.

    ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ ಗಳಿವೆ. 1,500 ಕ್ಕೂ ಹೆಚ್ಚು ಕುಟುಂಬಗಳು ಈ ಉದ್ಯೋಗದಿಂದಲೇ ಜೀವನ ನಡೆಸುತ್ತಿವೆ. ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ನಲ್ಲಿ 103 ಮಂದಿ ಸದಸ್ಯರಿದ್ದಾರೆ. ಜೊತೆಗೆ ಕೆಲಸ ಮಾಡಲು ಯುವತಿಯರು ಹಾಗೂ ಮಹಿಳೆಯರು ಬರುತ್ತಾರೆ. ಕೊರೊನಾ ಹಿನ್ನೆಲೆ ಇವರೆಲ್ಲರ ಬದುಕು ಮೂರಾಬಟ್ಟೆಯಾಗಿದೆ. ಯಾರೂ ಪಾರ್ಲರ್ ಗೆ ಬಾರದ ಹಿನ್ನೆಲೆ ಬಾಡಿಗೆ, ಕುಟುಂಬ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.

    ಲಾಕ್‍ಡೌನ್ ಹಿನ್ನೆಲೆ ಮದುವೆ, ಶುಭ ಸಮಾರಂಭಗಳು, ದೇವಸ್ಥಾನಗಳ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಬ್ಯೂಟಿಷಿಯನ್‍ಗಳಿಗೆ ಮಾರ್ಚ್ ನಿಂದ ಮೂರ್ನಾಲ್ಕು ತಿಂಗಳ ಕಾಲ ಅಧಿಕ ದುಡಿಮೆ ಇರುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾಗಿರುವುದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಪಾರ್ಲರ್ ಬಾಡಿಗೆಯ ಜೊತೆಗೆ ಮನೆಯ ಬಾಡಿಗೆಯನ್ನೂ ಸಹ ಕಟ್ಟಬೇಕು. ಸಂಕಷ್ಟದಲ್ಲಿರುವ ನಮ್ಮ ನೆರವಿಗೆ ಯಾರೂ ಬಂದಿಲ್ಲ, ಮುಂದೆ ಮಳೆಗಾಲ, ನಂತರ ಆಷಾಢ ಬರುತ್ತದೆ. ಆಗ ಕೆಲಸ ಇರುವುದಿಲ್ಲ, ಮಹಿಳೆಯರು ಈ ವೃತ್ತಿಯಿಂದಲೇ ಜೀವನ ಸಾಗಿಸಬೇಕು. ಖಾಲಿ ಕುಳಿತಿರುವುದರಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೇವೆ. ಸರ್ಕಾರ ಬೇರೆ ಬೇರೆ ವರ್ಗದವರನ್ನು ಗುರುತಿಸಿ ಸಹಾಯ ಹಸ್ತ ನೀಡಿದೆ. ಆದರೆ ನಮಗೆ ಯಾವುದೇ ಸಹಾಯ ಮಾಡಿಲ್ಲ. ಈ ವೃತ್ತಿಯಲ್ಲಿ ಎಷ್ಟೋ ಹೆಣ್ಣು ಮಕ್ಕಳು ಗಂಡನನ್ನು ಕಳೆದುಕೊಂಡವರು ಇದ್ದಾರೆ. ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕು ಎಂದು ಬ್ಯೂಟಿಷಿಯನ್‍ಗಳು ಮನವಿ ಮಾಡಿದ್ದಾರೆ.

    ಕಳೆದ ಎರಡು ತಿಂಗಳಿಂದ ಬ್ಯೂಟಿ ಪಾರ್ಲರ್‍ಗಳನ್ನು ತೆಗೆದಿಲ್ಲ. ಮಾತ್ರವಲ್ಲದೆ ಕೆಲವೊಂದು ಸೌಂದರ್ಯವರ್ಧಕಗಳ ಅವಧಿ ಮುಗಿದಿರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಂದಿಟ್ಟಿರುವ ಪರಿಕರಗಳು ಹಾಳಾಗುತ್ತಿವೆ. ಬಾಡಿಗೆಯನ್ನೂ ಪಾವತಿಸಬೇಕು. ಬ್ಯೂಟಿಷಿಯನ್‍ಗಳ ಕಷ್ಟಕ್ಕೆ ಯಾರೂ ಸ್ಪಂದಿಸಿಲ್ಲ, ಆಹಾರ ಪದಾರ್ಥಗಳ ಕಿಟ್ ಸಹ ನೀಡಿಲ್ಲ. ಅಲ್ಲದೆ ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸುವ ಜೊತೆಗೆ ಆರ್ಥಿಕ ಸಹಾಯ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

  • ಹೊರಗೆ ಸ್ಪಾ & ಬ್ಯೂಟಿ ಪಾರ್ಲರ್- ಒಳಗೆ ಬ್ಯೂಟಿಗಳ ಮಾಂಸ ದಂಧೆ

    ಹೊರಗೆ ಸ್ಪಾ & ಬ್ಯೂಟಿ ಪಾರ್ಲರ್- ಒಳಗೆ ಬ್ಯೂಟಿಗಳ ಮಾಂಸ ದಂಧೆ

    -ಛೋಟಾ ಮುಂಬೈನಲ್ಲಿ ವೇಶ್ಯಾವಾಟಿಕೆ ಅಡ್ಡ

    ಧಾರವಾಡ/ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ದಂಧೆ ಜೋರಾಗಿ ಸಾಗಿದೆ. ಸ್ಪಾ ಹಾಗೂ ಬ್ಯೂಟಿ ಪಾರ್ಲರ ಹೆಸರಿನಲ್ಲಿ ಮಾಂಸದ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಸ್ಪಾ ಹಾಗೂ ಬ್ಯೂಟಿ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ದಾಳಿ ನಡೆಸಿ ಒಬ್ಬನನ್ನ ಬಂಧಿಸಿ ನಾಲ್ವರು ಮಹಿಳೆಯರ ರಕ್ಷಣೆ ಮಾಡಿದ್ದಾರೆ.

    ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್ ಬಳಿಯ ನೇತ್ರಾವತಿ ಸ್ವ್ಕೇರ್ ನಲ್ಲಿ ಲೋಟಸ್ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮಾಲೀಕ ತುಳಸಿದಾಸ ಬೋರಕರ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿದ್ಯಾನಗರ ಪೊಲೀಸರು ಆರೋಪಿ ತುಳಸಿದಾಸನನ್ನ ಬಂಧಿಸಿ ನಾಲ್ವರು ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ದಾಳಿ ವೇಳೆ ನಗದು ಹಣ ಹಾಗೂ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಬಳಸುತ್ತಿದ್ದ ವಸ್ತುಗಳನ್ನ ಪೊಲೀಸರು ಜಪ್ತಿ ಮಾಡಿ ಆರೋಪಿಯನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ವಿದ್ಯಾನಗರ ಪೊಲೀಸರ ಈ ಕಾರ್ಯಾಚರಣೆಗೆ ಪೊಲೀಸ ಆಯುಕ್ತ ಆರ್ ದಿಲೀಪ್ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ. ಘಟನೆಯ ಕುರಿತು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಹೆಸರಿಗೆ ಬ್ಯೂಟಿಪಾರ್ಲರ್, ನಡೆಯೋದು ವೇಶ್ಯಾವಾಟಿಕೆ – ನಡೀತಿತ್ತು ಬ್ಲೂ ಫಿಲ್ಮ್ ಶೂಟಿಂಗ್!

    ಹೆಸರಿಗೆ ಬ್ಯೂಟಿಪಾರ್ಲರ್, ನಡೆಯೋದು ವೇಶ್ಯಾವಾಟಿಕೆ – ನಡೀತಿತ್ತು ಬ್ಲೂ ಫಿಲ್ಮ್ ಶೂಟಿಂಗ್!

    ಮೈಸೂರು: ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸಿದ ಪೊಲೀಸರು 7 ಯುವತಿಯರನ್ನು ರಕ್ಷಿಸಿದ್ದಾರೆ. ಇದೇ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಪುರುಷರನ್ನು ಬಂಧಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಮೈಸೂರಿನ ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯವರು ಜಂಟಿಯಾಗಿ ಶನಿವಾರ ಸಂಜೆ 7 ಗಂಟೆಗೆ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಇದೇ ವೇಳೆ ಬ್ಯೂಟಿ ಪಾರ್ಲರ್ ಗಳಲ್ಲಿ ಬ್ಲೂಫಿಲ್ಮ್ ಚಿತ್ರೀಕರಿಸುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ.

    ಹೂಟಗಳ್ಳಿಯಲ್ಲಿರುವ ಐಶ್ವರ್ಯ ಬ್ಯೂಟಿ ಪಾರ್ಲರ್ ಹಾಗೂ ವಿಜಯನಗರ ವಾಟರ್ ಟ್ಯಾಂಕ್ ಸಮೀಪ ಚಂದನ್ ಬ್ಯೂಟಿ ಪಾರ್ಲರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 7 ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ಪುರುಷರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಪಾರ್ಲರ್ ಗಳಿಗೆ ಬರುತ್ತಿದ್ದ ಕೆಲವು ಯುವತಿರ ನಗ್ನ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ಬಳಿಕ ಇದೇ ವೀಡಿಯೋ ಮುಂದಿಟ್ಟುಕೊಂಡು ಪಾರ್ಲರ್ ಗೆ ಬರುತ್ತಿದ್ದ ಗ್ರಾಹಕರಿಗೆ ಬ್ಲ್ಯಾಕ್ ಮೇಲೆ ಮಾಡಿ ಅವರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದರು. ಇದರ ಚಿತ್ರೀಕರಣವನ್ನೂ ಆರೋಪಿಗಳು ಮಾಡುತ್ತಿದ್ದರು ಎಂಬ ಅಂಶ ಬಯಲಾಗಿದೆ. ಈ ಪ್ರಕರಣದ ಕಿಂಗ್ ಪಿನ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಎನ್ನಲಾಗಿದೆ.

    ಸದ್ಯ ಪೊಲೀಸರು ಒಂದು ಕಾರು ಹಾಗೂ ಮೂರು ಬೈಕ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ಬ್ಯೂಟಿ ಪಾರ್ಲರ್ ಗೆ ಹೋಗೋ ಮಹಿಳೆಯರೇ ಹುಷಾರು- ನೀವು ಈ ಸುದ್ದಿ ಓದ್ಲೇಬೇಕು

    ಬ್ಯೂಟಿ ಪಾರ್ಲರ್ ಗೆ ಹೋಗೋ ಮಹಿಳೆಯರೇ ಹುಷಾರು- ನೀವು ಈ ಸುದ್ದಿ ಓದ್ಲೇಬೇಕು

    ಬೆಂಗಳೂರು: ಬ್ಯೂಟಿ ಪಾರ್ಲರ್ ನಲ್ಲಿ ವ್ಯಾಕ್ಸ್, ಫೇಶಿಯಲ್ ಅಂತೆಲ್ಲಾ ಮಾಡಿಸೋಕೆ ಹೋಗುವ ಯುವತಿಯರು, ಮಹಿಳೆಯರು ಎಚ್ಚರವಾಗಿರಬೇಕು. ಸೌಂದರ್ಯ ಹೆಚ್ಚಿಸಬೇಕು ಎಂದು ಬ್ಯೂಟಿ ಪಾರ್ಲರ್ ಗೆ ಹೋದ್ರೆ ನಿಮ್ಮ ಅಂದ ಶಾಶ್ವತವಾಗಿ ಮಾಯವಾಗಬಹುದು.

    ಬೆಂಗಳೂರಿನ ಪಟ್ಟೇಗಾರಪಾಳ್ಯದ ನಿವಾಸಿ ಲಕ್ಷ್ಮೀ ಎಂಬವರು ಇದೇ ಏರಿಯಾದಲ್ಲಿರುವ ಮಮತಾ ಬ್ಯೂಟಿ ಪಾರ್ಲರ್ ನಲ್ಲಿ ವ್ಯಾಕ್ಸ್ ಮಾಡಿಸಿಕೊಂಡಿದ್ದಾರೆ. ಬ್ಯೂಟಿಶಿಯನ್ ವ್ಯಾಕ್ಸ್ ಮಾಡಿರೋ ಪರಿಣಾಮ ಕಂಕುಳಿನ ಭಾಗ ಸಂಪೂರ್ಣ ಸುಟ್ಟು ಹೋಗಿದೆ. ಹೀಗಾಗಿ ಲಕ್ಷ್ಮೀ ಅವರು ಬ್ಯೂಟಿ ಪಾರ್ಲರ್ ನಲ್ಲಿ ಆದ ಸಮಸ್ಯೆ ಬಗ್ಗೆ ಫೇಸ್‍ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಕರ್ನಾಟಕ ಬ್ಯೂಟಿ ಪಾರ್ಲರ್ ಆಸೋಸಿಯೇಷನ್ ಅಧ್ಯಕ್ಷೆ ಕೂಡ ಕಿಡಿ ಕಾರಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಬ್ಯೂಟಿ ಪಾರ್ಲರ್ ಗೆ ಸಂಬಂಧಿಸಿದ ದೂರುಗಳು ಹೆಚ್ಚಾಗುತ್ತಿದ್ದು, ವ್ಯಾಕ್ಸ್ ಮಾಡಿ ಕೈ ಸುಡೋದು, ಹೇರ್ ಸ್ಟೈಲ್ ಮಾಡೋಕೆ ಹೋಗಿ ಇರೋ ಬರೋ ಕೂದಲನ್ನು ಕತ್ತರಿಸೋದು, ಐಬ್ರೋ ಮಾಡೋದಕ್ಕೆ ಹೋಗಿ ಚರ್ಮವನ್ನೇ ಕೀಳೋದು ಹೀಗೆ ದೂರಿನ ಸರಮಾಲೆಯೇ ಬರುತ್ತಿದೆಯಂತೆ.

    ಒಟ್ಟಾರೆ ಇರೋ ಸೌಂದರ್ಯದ ಜೊತೆಗೆ ಮತ್ತಷ್ಟು ಸೌಂದರ್ಯ ಹೆಚ್ಚಿಸಲು ಹೋಗುವ ಹುಡುಗಿಯರು ಇನ್ನು ಮುಂದೆಯಾದ್ರೂ ಹುಷಾರಾಗಿದ್ದರೆ ಒಳಿತು.

  • ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸಬಾರದು: ಫತ್ವಾಗೆ ಟೀಕೆ

    ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸಬಾರದು: ಫತ್ವಾಗೆ ಟೀಕೆ

    ಲಕ್ನೋ: ಮುಸ್ಲಿಂ ಮಹಿಳೆಯರು ಇನ್ನೂ ಮುಂದೇ ಐಬ್ರೊ ಮಾಡಿಸುವಂತಿಲ್ಲ ಹಾಗೂ ಕೂದಲನ್ನು ಕತ್ತರಿಸುವಂತಿಲ್ಲ ಎಂದು ಉತ್ತರ ಪ್ರದೇಶದ ದರುಲ್ ಉಲೂಮ್ ದಿಯೋಬಂದ್ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ.

    ಆದರೆ ದರುಲ್ ಉಲೂಮ್ ದಿಯೋಬಂದ್ ಉನ್ನತ ಶಿಕ್ಷಣ ಸಂಸ್ಥೆಯ ಶಾಸನಗಳನ್ನು ಪ್ರಕಟಿಸುವ ದರುಲ್ ಇಫ್ತಾ ಈ ಫತ್ವಾವನ್ನು ಟೀಕಿಸಿದೆ.

    ಫತ್ವಾದಲ್ಲಿ ಏನಿದೆ?

    ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ಕೂದಲು ಕತ್ತರಿಸುವುದು ಹಾಗೂ ಐಬ್ರೊ ಮಾಡಿಸುವುದು ನಿಷೇಧಿಸಲಾಗಿದೆ, ಅಲ್ಲದೇ ಇನ್ನೂ ಇಂತಹ ಹತ್ತು ನಿಷೇಧಗಳು ಮಹಿಳೆಯರ ವಿಧಿಸಲಾಗಿದೆ. ಮಹಿಳೆಯರಿಗೆ ಬ್ಯೂಟಿ ಪಾರ್ಲರ್‍ಗೆ ತೆರಳಲು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ, ಅಷ್ಟೇ ಅಲ್ಲ ಪುರುಷರಿಗೂ ಗಡ್ಡವನ್ನು ಶೇವ್ ಮಾಡಿಸಲು ಅನುಮತಿ ಇಲ್ಲ. ದೇಶಾದ್ಯಂತ ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್‍ಗೆ ತೆರಳುವುದು ಅಭ್ಯಾಸವಾಗಿದೆ. ಇದು ಸಾಂಪ್ರದಾಯಿಕ ಮುಸ್ಲಿಂರ ಲಕ್ಷಣವಲ್ಲ. ಇದನ್ನು ಕೂಡಲೇ ನಿಲ್ಲಸಬೇಕು ಎಂದು ತಿಳಿಸಲಾಗಿದೆ.

    ಮುಸ್ಲಿಂ ಮಹಿಳೆಯರಿಂದಲೂ ಫತ್ವಾ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇವರಿಗೆ ಫತ್ವಾ ಹೊರಡಿಸಲು ಯಾವುದೇ ಹಕ್ಕಿಲ್ಲ, ಪ್ರಪಂಚ ಬದಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಾದ ಗಲ್ಫ್ ದೇಶಗಳಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿಯನ್ನು ನೀಡಲಾಗಿದೆ. ಆದರೇ ನಮ್ಮ ದೇಶದಲ್ಲಿ ಇನ್ನೂ ಮಹಿಳೆಯ ಐಬ್ರೊ ಬಗ್ಗೆ ಫತ್ವಾ ಹೊರಡಿಸಲಾಗುತ್ತಿದೆ. ಇದು ನಮ್ಮ ವಿದ್ವಾಂಸರು ಹಾಗೂ ಮೌಲ್ವಿಗಳಿಗೆ ಅವಮಾನ ಎಂದು ತ್ರಿವಳಿ ತಲಾಕ್ ಸಂತ್ರಸ್ತೆ ಸೋಫಿಯಾ ಅಹ್ಮದ್ ಕಿಡಿಕಾರಿದ್ದಾರೆ.

    ಈ ಫತ್ವಾ ಇಸ್ಲಾಂ ಪುರುಷರಿಗೂ ಅನ್ವಯವಾಗುತ್ತದೆ, ಇಂದು ಎಷ್ಟು ಜನ ಮುಸ್ಲಿಂ ಪುರುಷರು ಈ ನಿಯಮವನ್ನು ಪಾಲಿಸುತ್ತಿದ್ದಾರೆ ಇಂತಹ ನಕಲಿ ಮೌಲ್ವಿಗಳನ್ನು ಬಿಟ್ಟು, ನಾವು ಎಲ್ಲವನ್ನು ಬುರ್ಕಾದಾಡಿಯಲ್ಲಿ ಮುಚ್ಚಿಡಲು ಯತ್ನಿಸುತ್ತಿದ್ದೇವೆ. ಇಂತಹ ವ್ಯಕ್ತಿಗಳು `ಲಿಪ್‍ಸ್ಪಿಕ್ ಅಂಡರ್ ಮೈ ಬುರ್ಕಾ’ ಸಿನಿಮಾವನ್ನು ಒಮ್ಮೆ ವಿಕ್ಷೀಸಬೇಕು ಎಂದು ಸಾಫಿಯಾ ಬೇಗಂ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.