Tag: Beautician

  • ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ನಂಬಿಸಿ ಹುಡುಗಿಗೆ ಮೋಸ ಮಾಡಿದ ನಟ

    ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ನಂಬಿಸಿ ಹುಡುಗಿಗೆ ಮೋಸ ಮಾಡಿದ ನಟ

    ಬೆಂಗಳೂರಿನ ಸಲೂನ್ ಶಾಪ್ ವೊಂದರಲ್ಲಿಬ್ಯೂಟಿಷಿಯನ್ (Beautician) ಆಗಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ (cheating) ಮಾಡಿರುವ ಘಟನೆ ನಡೆದಿದೆ. ಸಿನಿಮಾದಲ್ಲಿ ಅವಕಾಶ ಕೊಡಿಸ್ತೀನಿ ಅಂತಾ ಪರಿಚಯ ಮಾಡಿಕೊಂಡಿದ್ದ ಸಹ ನಟನೊಬ್ಬ ಲೈಂಗಿಕವಾಗಿಯೂ ಆ ಹುಡುಗಿಯನ್ನು ಬಳಸಿಕೊಂಡಿದ್ದಾನೆ ಎಂದು ಆ ಹುಡುಗಿ ದೂರು ನೀಡಿದ್ದಾಳೆ.

    ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದ ಸಹನಟ ಸಂತೋಷ್ (Santosh), ಆ ಹುಡುಗಿಗೆ ಪ್ರೀತಿಯ ನಾಟಕವಾಡಿ, ಚಿತ್ರದಲ್ಲಿ ನಾಯಕಿಯನ್ನಾಗಿ ಮಾಡುತ್ತೇನೆ ಎಂಧು ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟು ಪರಾರಿ ಆಗಿದ್ದಾನೆ ಎಂದು ಹುಡುಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

     

    ಆ ಹುಡುಗನ ಸಹವಾಸ ಬೇಡ ಅಂತಾ ಯುವತಿಸುಮ್ಮನಿದ್ರು ಆಗಾಗ ಮನೆ ಬಳಿ ಬಂದು ತನ್ನ ಜೊತೆ ಬರುವಂತೆ ಕಾಟ ಕೊಡುತ್ತಿದ್ದ ಹಾಗೂ ಬರದಿದ್ದರೇ ರಸ್ತೆ ರಸ್ತೆಯಲ್ಲಿ ಹೊಡೆತಿದ್ದ ಎಂದೂ ದೂರಿನಲ್ಲಿ ಹುಡುಗಿ ಉಲ್ಲೇಖ ಮಾಡಿದ್ದಾಳೆ. ಅವನ ಕಾಟಕ್ಕೆ ಮನ ನೊಂದು ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾಳೆ. ಠಾಣೆ ಎದುರೇ ಆ ಹುಡುಗ ಹಲ್ಲೆ ಮಾಡಿದರೂ ಕಣ್ಣು ಕಾಣದೆ ಕುರುಡರಂತೆ ಪೊಲೀಸರು ವರ್ತನೆ ಮಾಡಿದ್ದಾರೆ ಎಂದು ಹುಡುಗಿ ಆರೋಪ ಮಾಡಿದ್ದಾಳೆ.

     

    ಕಳೆದ ಆರು ತಿಂಗಳಿಂದ ನ್ಯಾಯಕ್ಕಾಗಿ ಅಲೆದಾಟ ಮಾಡುತ್ತಿರುವೆ. ಫೆಬ್ರವರಿ 15 ರಂದುಎರಡನೆ ಬಾರಿಗೆ ಎಫ್ಐಆರ್ ದಾಖಲಿಸಿದ್ದೇನೆ. ಆರು ತಿಂಗಳಹಿಂದೆಒಂದು ಎಫ್ಐಆರ್ ದಾಖಲಾಗಿತ್ತು ಎಂದು ಹುಡುಗಿ ಆರೋಪಿಸಿದ್ದಾರೆ.

  • ಸರಿಯಾಗಿ ಮೇಕಪ್ ಮಾಡ್ಲಿಲ್ಲ ಅಂತ ಬ್ಯೂಟಿ ಪಾರ್ಲರ್ ವಿರುದ್ಧ ವಧು ಕೇಸ್

    ಸರಿಯಾಗಿ ಮೇಕಪ್ ಮಾಡ್ಲಿಲ್ಲ ಅಂತ ಬ್ಯೂಟಿ ಪಾರ್ಲರ್ ವಿರುದ್ಧ ವಧು ಕೇಸ್

    ಭೋಪಾಲ್: ವಧುವಿನ (Bride) ಮೇಕಪ್ (Makeup) ಸರಿಯಾಗಿ ಮಾಡದ್ದಕ್ಕೆ ಬ್ಯೂಟಿ ಪಾರ್ಲರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ ವಿಚಿತ್ರ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್ಪುರದಲ್ಲಿ ಬೆಳಕಿಗೆ ಬಂದಿದೆ.

    ಡಿ.3 ರಂದು ವಧುವಿನ ಮದುವೆಯಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಮೋನಿಕಾ ಮೇಕಪ್ ಸ್ಟುಡಿಯೋಕ್ಕೆ ಕರೆದೊಯ್ದಿದ್ದಾರೆ. ಪಾರ್ಲರ್‌ನಲ್ಲಿದ್ದ ಸಿಬ್ಬಂದಿ ವಧುವಿಗೆ ಕೆಟ್ಟದಾಗಿ ಮೇಕಪ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಧು ಬ್ಯೂಟಿ ಪಾರ್ಲರ್‌ನ ಮಾಲೀಕೆ ಮೋನಿಕಾ ಪಾಠಕ್ ಅವರಿಗೆ ಕರೆ ಮಾಡಿ ಮುಖದ ಅಂದ ಕೆಡಿಸಿದ್ದಕ್ಕೆ ಅಕ್ಷೇಪಿಸಿದ್ದಾಳೆ. ಆದರೆ ಮೋನಿಕಾ ಅವಳಿಗೆ ಕ್ಷಮೆಯಾಚಿಸುವ ಬದಲು ವಧುವನ್ನು ನಿಂದಿಸಿದ್ದಾಳೆ. ಅಷ್ಟೇ ಅಲ್ಲದೇ ಜಾತಿ ನಿಂದನೆಯನ್ನು ಮಾಡಿದ್ದಾಳೆ. ಜೊತೆಗೆ ಮೇಕಪ್‍ನ ಹಣವನ್ನು ಮೊದಲೇ ಪಡೆದಿದ್ದಳು.

    ಈ ಹಿನ್ನೆಲೆಯಲ್ಲಿ ಕೋಪಗೊಂಡ ವಧು ಹಾಗೂ ವಧುವಿನ ಕುಟುಂಬಸ್ಥರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬ್ಯೂಟಿ ಪಾರ್ಲರ್‌ನ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೋನಿಕಾಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಕಬ್ಬಿನ ಉಪ ಉತ್ಪನ್ನ ಲಾಭಾಂಶ ರೈತರಿಗೆ; ಪ್ರತಿ ಮೆಟ್ರಿಕ್ ಟನ್‌ಗೆ 50 ರೂ. ಹೆಚ್ಚುವರಿ ಪಾವತಿ – ಸರ್ಕಾರ ಆದೇಶ

    ಈ ಬಗ್ಗೆ ಠಾಣಾಧಿಕಾರಿ ಅನಿಲ್ ಗುಪ್ತಾ ಮಾತನಾಡಿ, ವಧು ಹಾಗೂ ಆಕೆಯ ಕುಟುಂಬಸ್ಥರ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ವಿಚಾರದಲ್ಲಿ ಮೋನಿಕಾ ಪಾಠಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಮನಸ್ಥಿತಿ ಗೊತ್ತಿಲ್ಲ, ನಾನು ಬಿಜೆಪಿ ಬಿಟ್ಟು ಹೋಗಲ್ಲ: ಎಂಟಿಬಿ

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗಲು ಪ್ರಿಯಕರ ನಿರಾಕರಿಸಿದಕ್ಕೆ ಬ್ಯೂಟಿಷಿಯನ್ ಸೂಸೈಡ್

    ಮದುವೆಯಾಗಲು ಪ್ರಿಯಕರ ನಿರಾಕರಿಸಿದಕ್ಕೆ ಬ್ಯೂಟಿಷಿಯನ್ ಸೂಸೈಡ್

    – ಫೋನ್ ಪಿಕ್ ಮಾಡದಿದ್ದರಿಂದ ಖಿನ್ನತೆಗೆ ಜಾರಿದ್ದ ಯುವತಿ

    ಗುರುಗ್ರಾಮ: ಪ್ರೀತಿಸಿ ಮದುವೆಯಾಗಲು ಪ್ರಿಯಕರ ನಿರಾಕರಿಸಿದ ಕಾರಣ 25 ವರ್ಷದ ಬ್ಯೂಟಿಷಿಯನ್ ಒಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಸಾಂದರ್ಭಿಕ ಚಿತ್ರ

    ಆತ್ಮಹತ್ಯೆಗೆ ಶರಣಾದವಳನ್ನು ಪೂನಂ(25) ಎಂದು ಗುರುತಿಸಲಾಗಿದೆ. ಈಕೆ ಡಿಸೆಂಬರ್ 24ರಂದು ಸಾವಿಗೀಡಾಗಿದ್ದಾಳೆ. ಪೂನಂಳನ್ನು ಪ್ರಿಯಕರ ಮದುವೆಯಾಗಲು ಒಪ್ಪದೇ ದ್ರೋಹ ಬಗೆದ ಕಾರಣ ಈಕೆ ವಿಷ ಸೇವಿಸಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಡಿಸೆಂಬರ್ 31ರಂದು ದೂರು ದಾಖಲಿಸಿದ್ದಾರೆ.

    ತನಿಖೆಯಲ್ಲಿ ಪೂನಂ ನಗರದ ಸಲೂನ್ ಒಂದರಲ್ಲಿ ಸುಮಾರು 1 ವರ್ಷದಿಂದ ಕೆಲಸ ಮಾಡುತ್ತಿದ್ದು, 6 ತಿಂಗಳ ಹಿಂದೆ ಕುಲದೀಪ್ ಎಂಬಾತನನ್ನು ಭೇಟಿಯಾಗಿ ಇಬ್ಬರು ಸ್ನೇಹಿತರಾಗಿದ್ದರು. ಯುವತಿ ಕುಟುಂಬಸ್ಥರು ಹೇಳುವ ಪ್ರಕಾರ, ಆಕೆಯನ್ನು ಕುಲದೀಪ್ ಮದುವೆಯಾಗುವುದಾಗಿ ಮಾತುಕೊಟ್ಟಿದ್ದನು. ಆದ್ರೆ ದೀಪಾವಳಿ ಸಮಯದಲ್ಲಿ ಆತ ನನ್ನನ್ನು ಮದುವೆಯಾಗಲು ನಿರಾಕರಿಸಿರುವುದಾಗಿ ನಮಗೆ ತಿಳಿಸಿದ್ದಳು. ನಂತರ ಎಷ್ಟೋ ಬಾರಿ ಕುಲದೀಪ್‍ಗೆ ಕರೆ ಮಾಡಿ ಮಾತನಾಡಲು ಪ್ರಯತ್ನಿಸಿಸಿದ್ದಳು. ಆದ್ರೆ ಆತ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದನು. ಹೀಗಾಗಿ ಆಕೆ ಖಿನ್ನತೆಗೆ ಒಳಗಾಗಿದ್ದಳು. ಇದು ಅವಳನ್ನು ತಪ್ಪು ಹೆಜ್ಜೆ ಇಡಲು ಪ್ರೇರೇಪಿಸಿತು ಎಂದು ಆಕೆಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದರು.

    ಪೂನಂ ಪ್ರೀತಿಸುತ್ತಿದ್ದ ವ್ಯಕ್ತಿ ಅವಳನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳೆ. ಇದೇ ಕಾರಣದಿಂದ ಸಾಯುವ ನಿರ್ಧಾರ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಸೆಕ್ಟರ್-29 ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಅಮನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬಸ್ಥರು ಸಲ್ಲಿಸಿರುವ ದೂರಿನ ಅನ್ವಯ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

  • ಪಾರ್ಟಿಗೆ ಬಂದ ಬ್ಯೂಟಿಷಿಯನ್ ಮೇಲೆ ಗೆಳೆಯರಿಂದ ರೇಪ್

    ಪಾರ್ಟಿಗೆ ಬಂದ ಬ್ಯೂಟಿಷಿಯನ್ ಮೇಲೆ ಗೆಳೆಯರಿಂದ ರೇಪ್

    -ಮದ್ಯ ಕುಡಿಸಿ ಸ್ನೇಹಿತರಿಂದಲೇ ಅತ್ಯಾಚಾರ

    ಲಕ್ನೋ: ಹುಟ್ಟುಹಬ್ಬದ ಪಾರ್ಟಿಗೆ ಬಂದಿದ್ದ 20 ವರ್ಷದ ಯುವತಿಯ ಮೇಲೆ ಗೆಳೆಯರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದಿದೆ.

    ಬೆನಿಗಂಜ್ ಮೂಲದ ಸಂತ್ರಸ್ತೆ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದರು. ಯುವತಿಯನ್ನ ಆಕೆಯ ಗೆಳೆಯರು ಸುಲೇಮ ಸರಾಯದಲ್ಲಿಯ ಬರ್ತ್ ಡೇ ಪಾರ್ಟಿಗೆ ಆಹ್ವಾನಿಸಿದ್ದರು. ಆಹ್ವಾನದ ಮೇರೆಗೆ ಯುವತಿ ಸಹ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಯುವತಿಗೆ ಮದ್ಯ ಕುಡಿಸಿದ ಗೆಳೆಯರು ಅತ್ಯಾಚಾರ ಎಸಗಿದ್ದಾರೆ.

    ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಮಧ್ಯರಾತ್ರಿ ಧೂಮನ್‍ಗಂಜ್ ಪೊಲೀಸ್ ಠಾಣೆಗೆ ಆಗಮಿಸಿದ ಯುವತಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಯಾರ ಬಂಧನವೂ ಆಗಿಲ್ಲ. ಶೀಘ್ರದಲ್ಲಿಯೇ ಆರೋಪಿಗಳನ್ನ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಎರಡು ರಾತ್ರಿ ನನ್ನೊಂದಿಗೆ ಕಳೆದ್ರೆ ಬಾಕಿ ಸಾಲ ಮನ್ನಾ – ಬ್ಯೂಟಿಷಿಯನ್‍ಗೆ ಕಿರುಕುಳ

    ಎರಡು ರಾತ್ರಿ ನನ್ನೊಂದಿಗೆ ಕಳೆದ್ರೆ ಬಾಕಿ ಸಾಲ ಮನ್ನಾ – ಬ್ಯೂಟಿಷಿಯನ್‍ಗೆ ಕಿರುಕುಳ

    – 4 ಸಾವಿರ ಸಾಲ ನೀಡಿ, 8,000 ವಾಪಸ್ ಕೊಡುವಂತೆ ಒತ್ತಾಯ

    ಬೆಂಗಳೂರು: ಎರಡು ರಾತ್ರಿ ನನ್ನೊಂದಿಗೆ ಕಳೆದರೆ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವುದಾಗಿ ಏಜೆಂಟ್ ಓರ್ವ ಬ್ಯೂಟಿಷಿಯನ್‍ಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಜೀವನ್ ಭೀಮಾನಗರ ನಿವಾಸಿ ಅಕ್ಷತಾಗೆ (ಹೆಸರು ಬದಲಾಯಿಸಲಾಗಿದೆ) ಸಾಲ ನೀಡಿದ್ದ ಏಜೆಂಟ್ ಓರ್ವ ಕಿರುಕುಳ ನೀಡಿದ್ದಾನೆ. ಅಕ್ಷತಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದು, ಆರ್ಥಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಲಾಕ್‍ಡೌನ್ ಜಾರಿಗೆ ಬರುವ ಮೊದಲು ಸಾಲವನ್ನು ತೆಗೆದುಕೊಂಡಿದ್ದರು. ಆದರೆ ಸಾಲವನ್ನು ಮರು ಪಾವತಿಸುವಂತೆ ಏಜೆಂಟರು ಆಕೆಗೆ ನಿರಂತರವಾಗಿ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಬ್ಯೂಟಿಷಿಯನ್ ಏಜೆಂಟರ ಕಿರುಕುಳವನ್ನು ಸಹಿಸಲಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಬ್ಯೂಟಿಷಿಯನ್ ಜೀವನ್‍ಭೀಮಾನಗರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಬ್ಯೂಟಿಷಿಯನ್ ಆರೋಪಿಸಿದ್ದಾರೆ. ನನಗೆ ಬಂದಂತಹ ಮೆಸೇಜ್ ಮತ್ತು ಏಜೆಂಟರ ನಂಬರ್‌ಗಳನ್ನು ಸ್ಕ್ರೀನ್‍ಶಾಟ್ ತೆಗೆದು ಪೊಲೀಸರಿಗೆ ನೀಡಿದ್ದೇನೆ. ಆದರೂ ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ. ಮೇಲ್ ಮಾಡುವ ಮೂಲಕ ನಾನು ಪೊಲೀಸರಿಗೆ ದೂರು ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ.

    ನಾನು ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗಾಗಿ 4,000 ರೂ. ಸಾಲ ಪಡೆದುಕೊಂಡಿದ್ದೆ. ಸಾಲವನ್ನು ಮರುಪಾವತಿಸಲು ನನಗೆ 15 ದಿನಗಳ ಕಾಲ ಸಮಯ ನೀಡಿದ್ದರು. ಆದರೆ ನಾನು ಕೆಲಸವನ್ನು ಕಳೆದುಕೊಂಡಿದ್ದರಿಂದ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಆಗ ನನಗೆ ಇನ್ನೂ ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿಕೊಂಡೆ. ಆದರೆ ಅವರು ಸಾಲ ಹಿಂದಿರುಗಿಸಲು ವಿಳಂಬ ಮಾಡಿದ್ದಕ್ಕೆ ದಂಡವನ್ನು ಸೇರಿಸಲು ಪ್ರಾರಂಭಿಸಿದರು. ಅದು ಏಪ್ರಿಲ್ ಅಂತ್ಯದ ವೇಳೆಗೆ 8,000 ಆಗಿತ್ತು. ನನಗೆ ಯಾವುದೇ ಕೆಲಸವಿಲ್ಲದ ಕಾರಣ ಹಣ ವಾಪಸ್ ನೀಡಲು ಸಾಧ್ಯವಾಗಿಲ್ಲ ಎಂದು ಬ್ಯೂಟಿಷಿಯನ್ ಹೇಳಿದ್ದಾರೆ.

    ಏಜೆಂಟ್ ಓರ್ವ ನನಗೆ ನಿರಂತರವಾಗಿ ಮೆಸೇಜ್ ಕಳುಹಿಸುತ್ತಿದ್ದನು. ಒಂದು ವೇಳೆ ನಾನು ಹಣ ಮರುಪಾವತಿ ಮಾಡದಿದ್ದರೆ ಸಾರ್ವಜನಿಕವಾಗಿ ಅವಮಾನಿಸುವುದಾಗಿ ಬೆದರಿಕೆ ಹಾಕಿದನು. ಕೊನೆಗೆ ನಾನು ಹೇಗೋ ಸ್ವಲ್ಪ ಹಣವನ್ನು ಹೊಂದಿಸಿ ಸಾಲ ತೀರಿಸಿದೆ. ಆದರೂ ಏಜೆಂಟ್ ಎರಡು ರಾತ್ರಿ ನನ್ನೊಂದಿಗೆ ಕಳೆಯಲು ಒಪ್ಪಿದರೆ ಉಳಿದ ಬಾಕಿ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದನು. ಅಲ್ಲದೇ ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡುತ್ತಿದ್ದಾನೆ ಎಂದು ನೊಂದ ಬ್ಯೂಟಿಷಿಯನ್ ಹೇಳಿಕೊಂಡಿದ್ದಾರೆ.

    ನಾನು ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ಆ ನಂಬರಿಗೆ ಫೋನ್ ಮಾಡಿದರೆ ಕನೆಕ್ಟ್ ಆಗುತ್ತಿಲ್ಲ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

  • ತಲೆ ಕೂದಲು ಉದುರಿದ್ದಕ್ಕೆ ಯುವತಿ ಆತ್ಮಹತ್ಯೆ: ನಿಜವಾಗಿ ಆಗಿದ್ದೇನು? ಆಡಿಯೋದಲ್ಲಿ ಏನಿದೆ?

    ತಲೆ ಕೂದಲು ಉದುರಿದ್ದಕ್ಕೆ ಯುವತಿ ಆತ್ಮಹತ್ಯೆ: ನಿಜವಾಗಿ ಆಗಿದ್ದೇನು? ಆಡಿಯೋದಲ್ಲಿ ಏನಿದೆ?

    ಮಡಿಕೇರಿ: ಹೇರ್ ಸ್ಟ್ರೈಟ್ನಿಂಗ್ ನಿಂದ ಕೂದಲು ಕಳೆದುಕೊಂಡು ಮಡಿಕೇರಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಕೆಯ ಕೊನೆಯ ಮಾತುಗಳು ಏನು ಹಾಗೂ ಪಾರ್ಲರ್ ಗೆ ಬಂದಿದ್ದ ಆಕೆ ಬ್ಯೂಟಿಷನ್ ಜೊತೆ ಹೇಳಿದ್ದೇನು ಎಂಬುದು ಆಡಿಯೋದಲ್ಲಿ ರಿವಿಲ್ ಆಗಿದೆ.

    ಕರ್ನಾಟಕ ಬ್ಯೂಟಿಷನ್ ಅಧ್ಯಕ್ಷೆ ಅನಿತಾ ಶೆರ್ಲಿ ಜೊತೆ ಮಡಿಕೇರಿ ಬ್ಯೂಟಿಷನ್ ಮಾತಾನಾಡಿರುವ ಆಡಿಯೋ ಬಿಡುಗಡೆಯಾಗಿದ್ದು, ಘಟನೆಯ ಬಗ್ಗೆ ಬ್ಯೂಟಿಷನ್ ಮಾತನಾಡಿದ್ದಾರೆ. ನೇಹಾಳ ಹೇರ್ ತುಂಬಾ ತುಂಬಾ ಕರ್ಲಿಯಾಗಿತ್ತು. ಮೊದಲು ನೇಹಾ ಇಡೀ ಕೂದಲು ಸ್ಟ್ರೈಟ್ ಮಾಡಿ ಎಂದು ಹೇಳಿದ್ದಳು, ನಂತರ ಫ್ರಂಟ್ ಸೈಡ್ ಮಾತ್ರ ಸಾಕು ಎಂದಳು. ಸಾಮಾನ್ಯವಾಗಿ ಬ್ಯೂಟಿಷನ್ ಈ ರೀತಿ ಮಾಡೋದೆ ಇಲ್ಲ. ಪರ್ಮೆನೆಂಟ್ ಸ್ಟ್ರೈಟ್ನಿಂಗ್ ಮಾಡುವ ಸಂದರ್ಭದಲ್ಲಿ ಇಡೀ ಕೂದಲು ಸಂಪೂರ್ಣ ಮಾಡಬೇಕಾಗುತ್ತೆ. ಅಲ್ಲದೇ ಸ್ಟ್ರೈಟ್ನಿಂಗ್ ಮಾಡುವವರು ತುಂಬಾ ಎಕ್ಸ್ಪರ್ಟ್ ಇರಬೇಕಾಗುತ್ತೆ. ಆದರೆ ಇಲ್ಲಿ ಆಕೆ ಅಸಿಸ್ಟೆಂಟ್ ಈ ಕೆಲಸವನ್ನು ಮಾಡಿದ್ದಾರೆ.

    ಕೂದಲು ಸ್ಟ್ರೈಟ್ನಿಂಗ್ ಮಾಡಿಸಿದ ಮರುದಿನ ಮತ್ತೆ ಬಂದಿರುವ ನೇಹಾ ಇದು ಚೆನ್ನಾಗಿ ಕಾಣುತ್ತಿಲ್ಲ ಎಂದು ಫ್ರೆಂಡ್ಸ್ ತಮಾಷೆ ಮಾಡುತ್ತಿದ್ದಾರೆ. ಮತ್ತೆ ಹೇರ್ ಸ್ಮೂತ್ನಿಂಗ್ ಮಾಡಿ ಅಂತಾ ಕೇಳಿದ್ದಾಳೆ. ಆದರೆ ನಿನ್ನೆಯೇ ನಾನು ಫ್ರೆಂಟ್ ಹೇರ್ ಸ್ಟ್ರೈಟ್ ಮಾಡಿರೋದರಿಂದ ಇದು ಮಾಡೋಕೆ ಸಾಧ್ಯವಿಲ್ಲ. ಎರಡು ಮೂರು ದಿನ ನೀರು ತಾಕಿಸುವಂತಿಲ್ಲ ಅಂತಾ ಹೇಳಿದೆ. ಈ ಮಾತು ಹೇಳಿ ನಾನು ಬೇರೆ ಕೆಲಸಕ್ಕೆ ತೆರಳಿದೆ. ಆಗ ಆಕೆ ನನ್ನ ಆಸಿಸ್ಟೆಂಟ್ ಜೊತೆ ಮಾತಾನಾಡಿ ಮತ್ತೆ ಹೇರ್ ಡ್ರೈ ಮಾಡಿಸಿಕೊಂಡಿಸಿಕೊಂಡಿದ್ದಾಳೆ ಎಂಬ ಸತ್ಯ ಬ್ಯೂಟಿಷನ್ ಆಡಿಯೋದಿಂದಲೇ ಬಯಲಾಗಿದೆ. ಎರಡು ಮೂರು ದಿನ ಕೂದಲಿಗೆ ನೀರು ತಾಕಿಸಬಾರದು, ಸ್ಮೂತ್ನಿಂಗ್ ಮಾಡಬಾರದು ಅಂತಾ ಇದ್ರೂ ಆಕೆಯ ಆಸಿಸ್ಟೆಂಟ್ ಮಾಡಿರುವ ಎಡವಟ್ಟಿಗೆ ಕೂದಲು ಸಂಪೂರ್ಣ ಉದುರಿಹೋಗಿರುವ ಸಾಧ್ಯತೆ ಇದೆ. ಸದ್ಯ ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬ್ಯೂಟಿಪಾರ್ಲರ್ ಓನರ್ ರೋಹಿಣಿ ಮತ್ತು ಬ್ಯೂಟಿಷಿಯನ್ ಸಂಘದ ಅಧ್ಯಕ್ಷೆ ಅನಿತಾ ಶೆರ್ಲಿ ಮಾತನಾಡಿದ ಆಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದ್ದು ಇಬ್ಬರ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ತಲೆ ಕೂದಲು ಮೇಲಿನ ಪ್ರೀತಿಗೆ ಯುವತಿ ಆತ್ಮಹತ್ಯೆ

    ಆಡಿಯೋದಲ್ಲಿ ಏನಿದೆ?
    ರೋಹಿಣಿ: ಮೊನ್ನೆ ಅವರು ನನ್ನ ಹತ್ತಿರ ಬಂದು ಹೇಳಿದ್ದೆ ಬೇರೆ. ಈಗ ನೀಡುತ್ತಿರುವ ಹೇಳಿಕೆಯೇ ಬೇರೆ.
    ಅನಿತಾ ಶೆರ್ಲಿ: ಏನು ಹೇಳಿದ್ರು? ಈಗ ಏನು ಹೇಳುತ್ತಿದ್ದಾರೆ?
    ರೋಹಿಣಿ: ಕಳೆದ ತಿಂಗಳು ಯುವತಿ ನನ್ನ ಪಾರ್ಲರ್ ಗೆ ಸ್ಮೂತ್ನಿಂಗ್‍ಗೆ ಬಂದಿದ್ಲು. ಎಷ್ಟು ದುಡ್ಡು ಆಗುತ್ತೆ ಅಂತಾ ಕೇಳಿದ್ರು. ಸ್ಮೂತ್ನಿಂಗ್‍ಗೆ 5 ಸಾವಿರ ಆಗುತ್ತೆ ಅಂತಾ ಹೇಳಿದೆ.
    ಅನಿತಾ ಶೆರ್ಲಿ: ಯಾವಾಗ ಬಂದಿದ್ದಳು?
    ರೋಹಿಣಿ: ಕಳೆದ ತಿಂಗಳು 10 ರಿಂದ 13 ನೇ ತಾರಿಖು ಹಂಗೆ ಬಂದಿದ್ಲು. ಡೈರಿಯಲ್ಲಿ ಫುಲ್ ಡಿಟೇಲ್ ಇದೆ.
    ರೋಹಿಣಿ: ನಾನು ಹೇಳಿದೆ 5 ಸಾವಿರ ಆಗುತ್ತೆ ಅಂತಾ. ಅವಳ ಸ್ನೇಹಿತೆಯರು ಹೇಳಿದ್ರು ಅಂತಾ ನನ್ನ ಪಾರ್ಲರ್ ಗೆ ಬಂದಿದ್ದಳು. ಅಕ್ಕ ಡಿಸ್ಕೌಂಟ್ ಮಾಡಿ ಕೊಡ್ತಾರೆ ಕೇಳಿ ನೋಡು ಅಂತಾ ಹೇಳಿದ್ರಂತೆ. ನನ್ನ ಹತ್ತಿರ ಅಷ್ಟು ದುಡ್ಡಿಲ್ಲ. ಕಡಿಮೆ ಇದೆ ಅಂತಾ ಹೇಳಿದ್ಲು. ನಾನು ಬೇರೆ ಪಾರ್ಲರ್ ಅಲ್ಲಿ ಕೇಳಿದೆ. ಜಾಸ್ತಿ ಹೇಳಿದ್ದಾರೆ ಅಂತಾ ಹೇಳಿದ್ಲು.
    ಅನಿತಾ ಶೆರ್ಲಿ: ಎಷ್ಟು ಚಾರ್ಜ್ ಮಾಡಿದ್ರಿ?
    ರೋಹಿಣಿ: 3 ಸಾವಿರ ಹೇಳಿದೆ.
    ರೋಹಿಣಿ: ಅವಳ ಕೂದಲು ತುಂಬಾ ಶಾರ್ಟ್ ಇತ್ತು, ತುಂಬಾ ಕರ್ಲಿ ಇತ್ತು. ನಾನು ಮೊದಲು ಬೇರೆ ಪಾರ್ಲರ್ ಅಲ್ಲಿ ಮಾಡಿಸಿಕೊಂಡಿದ್ದೆ. ತುಂಬಾ ಹೇರ್ ಫಾಲ್ ಇತ್ತು. ನನ್ನ ಫ್ರೆಂಡ್ಸ್ ಹೇಳಿದ್ರು. ಎಲ್ಲಾರೂ ಚೆನ್ನಾಗಿದೆ ಅಂತಾ ಹೇಳಿದ್ರು ಅಂದ್ಲು.
    ರೋಹಿಣಿ: ಒಳಗೆ ಕಳಿಸಿದೆ. ಅಲ್ಲಿ ಡೇರ್ ಡ್ರಸರ್ಸ್ ಹತ್ತಿರ ಹೇಳಿದ್ದಾಳೆ. ಪೂರ್ತಿ ಬೇಡ ಫ್ರೆಂಟ್ ಲುಕ್ ಮಾತ್ರ ಬೇಕು ಅಂದ್ಲು. ಅದು ಚೆನ್ನಾಗಿ ಕಾಣಲ್ಲ ಅಂತಾ ಹೇಳಿದ್ರೂ, ಫ್ರೆಂಟ್ ಮಾತ್ರ ಸ್ಮೂತ್ನಿಂಗ್ ಮಾಡಿಸಿಕೊಂಡು ಹೋಗಿದ್ದಾಳೆ. ಅದಕ್ಕೆ 1.500 ರೂ ಕೊಟ್ಟಿದ್ದಾಳೆ.
    ರೋಹಿಣಿ: ನಾಳೆ ಬೆಳಗ್ಗೆ 9.30ಕ್ಕೆ ಬಂದು ಎಲ್ಲಾ ಚೆನ್ನಾಗಿಲ್ಲ ಅಂತಿದ್ದಾರೆ ಏನಾದ್ರೂ ಮಾಡಬೋದಾ ಅಂತಾ ಕೇಳಿದ್ದಾಳೆ. ಆಗಲ್ಲ. ಮೇಡಮ್‍ನ ಪರ್ಮಿಷನ್ ಇಲ್ಲದೇ ಮಾಡಕ್ಕೆ ಆಗಲ್ಲ ಅಂತಾ ಹೇಳಿದ್ದಾರೆ. ನನಗೆ ಕೇಳಿದ್ಲು. ಬ್ಯಾಕ್ ಹೇರ್ ಟಚ್ ಮಾಡಕ್ಕೆ ಆಗಲ್ಲ. ಬೇಜಾರು ಮಾಡ್ಕೊಬೇಡಾ ಅಂತಾ ಹೇಳಿದೆ. ಸ್ಟ್ರೈಟ್‍ನಿಂಗ್ ಮಾಡಿ, ಬ್ಲೋ ಡ್ರೈ ಆದ್ರೂ ಮಾಡಿಸಿಕೊಡಿ ಅಂತಾ ಹೇಳಿ, ಡ್ರೈ ಮಾಡಿಸಿಕೊಂಡು ಹೋಗಿದ್ದಾಳೆ.
    ರೋಹಿಣಿ: 3 ದಿನ ಆದ್ಮೇಲೆ 2 ಸಾವಿರ ಕೊಟ್ಟು ಸ್ಮೂತ್ನಿಂಗ್ ಮಾಡಿಸಿಕೊಂಡು ಹೋಗಿದ್ದಾಳೆ.
    ರೋಹಿಣಿ: ಲಾಸ್ಟ್ ಕಾಲ್ ಮಾಡಿರೋದು ನಾನು. ಅವಳಲ್ಲ
    ಅನಿತಾ ಶೆರ್ಲಿ: ಯಾವ ಪ್ರಾಡಕ್ಟ್ ಯೂಸ್ ಮಾಡಿದ್ರಿ?
    ರೋಹಿಣಿ: ಮ್ಯಾಟ್ರಿಕ್ಸ್ ಪ್ರಾಡಕ್ಟ್ ಯೂಸ್ ಮಾಡಿರೋದು ನಾನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=gB2YZWuuAJM&feature=youtu.be

  • ನೇಣು ಬಿಗಿದ ಸ್ಥಿತಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ!

    ನೇಣು ಬಿಗಿದ ಸ್ಥಿತಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ!

    ಮೈಸೂರು: ಬ್ಯೂಟಿಷಿಯನ್ ಒಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮೈಸೂರಿನ ದಾಮೋದರ ಬಡಾವಣೆಯಲ್ಲಿ ನಡೆದಿದೆ.

    ರಮ್ಯಾ(25) ಮೃತ ದುರ್ದೈವಿ. ಮೈಸೂರಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ರಮ್ಯಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ 6 ವರ್ಷಗಳ ಹಿಂದೆ ಮೈಸೂರಿನ ಆನಂದ್ ಜೊತೆ ವಿವಾಹವಾಗಿತ್ತು. ಎರಡು ವರ್ಷಗಳಿಂದ ಪತಿಯಿಂದ ಬೇರೆಯಾಗಿ ರಮ್ಯಾ, ಸುನೀಲ್ ಎಂಬಾತನ ಜೊತೆ ವಾಸವಾಗಿದ್ದರು.

    ಇದೀಗ ಕಳೆದ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾ ಶವ ಪತ್ತೆಯಾಗಿದ್ದು, ಸುನೀಲ್ ಕೊಲೆ ಮಾಡಿದ್ದಾನೆ ಎಂದು ರಮ್ಯಾ ಪೋಷಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಸದ್ಯ ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.