Tag: Beat

  • ಪೊಲೀಸ್ ಬೀಟ್‍ಗೆ ಡಿಜಿಟಲ್ ಟಚ್!

    ಪೊಲೀಸ್ ಬೀಟ್‍ಗೆ ಡಿಜಿಟಲ್ ಟಚ್!

    ಬೆಂಗಳೂರು: ಈಗೇನಿದ್ರೂ ಡಿಜಿಟಲ್ ಜಮಾನ. ನಾವು ಮಾಡುವ ಪ್ರತಿ ಕೆಲಸನೂ ಡಿಜಿಟಲಿಕರಣಗೊಂಡಿರುತ್ತದೆ. ಈ ಡಿಜಿಟಲೀಕರಣ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸರು ಸಹ ಅಳವಡಿಸಿಕೊಂಡಿದ್ದಾರೆ.

    ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸ್ ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ರಾತ್ರಿ ಹಾಗೂ ಹಗಲು ಬೀಟ್ ನಲ್ಲಿರುವ ಪೊಲೀಸರು, ತಾವು ಕೈಗೊಳ್ಳುವ ಬೀಟ್‍ನ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ‘ಇ-ಬೀಟ್’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕಾಗಿ ಆಗ್ನೇಯ ಡಿಸಿಪಿ ವಿಭಾಗ Subhahu Beat ಎಂಬ ಅಂಡ್ರಾಯ್ಡ್ ಅಪ್ಲಿಕೇಶನ್ ಪ್ರಾರಂಭಿಸಿದೆ. ಇದಕ್ಕೆ ಗೃಹ ಇಲಾಖೆ ಮೆಚ್ಚುಗೆ ಸೂಚಿಸಿದ್ದು, ಪ್ರಾಯೋಗಿಕವಾಗಿ ಆರಂಭವಾಗಿರುವ ‘ಸುಬಾಹು’ವನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅನ್ವಯಿಸಲು ಇಲಾಖೆ ಮುಂದಾಗಿದೆ.

    ಅಂಡ್ರಾಯ್ಡ್ ಮೊಬೈಲ್‍ನಲ್ಲಿ ‘ಸುಬಾಹು’ ಡೌನ್‍ಲೋಡ್ ಮಾಡಿಕೊಂಡು ತಮ್ಮ ಫೋಟೋಗಳನ್ನು ಅಪ್‍ಲೋಡ್ ಮಾಡಬೇಕು. ಬಳಿಕ ಬೀಟ್ ಸಿಬ್ಬಂದಿ ಸ್ಥಳಕ್ಕೆ ಹೋಗಿ ಅಲ್ಲಿರುವ ಕ್ಯುಆರ್ ಕೋಡ್‍ನ್ನು ತಮ್ಮ ಮೊಬೈಲ್‍ನಿಂದಲೇ ಸ್ಕ್ಯಾನ್ ಮಾಡಬೇಕು. ಆಗ ಸರ್ವರ್ ಮೂಲಕ ಸಿಬ್ಬಂದಿಯ ಹಾಜರಾತಿ ಸಂದೇಶ ಮೇಲಾಧಿಕಾರಿಗಳಿಗೆ ರವಾನೆಯಾಗುತ್ತದೆ. ಇದರಿಂದ ಪೊಲೀಸ್ ಬೀಟ್ ಮೇಲೆ ಇಲಾಖೆ ನಿಗಾ ಇಡಬಹುದಾಗಿದೆ.

  • ಮದ್ಯದ ಅಮಲಿನಲ್ಲಿ ಅವಾಚ್ಯ ಪದ ಬಳಸಿದ ಯುವಕನಿಗೆ ಥಳಿತ

    ಮದ್ಯದ ಅಮಲಿನಲ್ಲಿ ಅವಾಚ್ಯ ಪದ ಬಳಸಿದ ಯುವಕನಿಗೆ ಥಳಿತ

    ಚಿಕ್ಕಬಳ್ಳಾಪುರ: ಇನ್ನೊಬ್ಬರ ನೆಮ್ಮದಿಗೆ ದಕ್ಕೆ ತರುವುದು, ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದ ಬಳಕೆ ಮಾಡುವುದು ಅಪರಾಧ. ಹೀಗಿದ್ದರೂ ನಗರದ ಬಿಬಿ ರಸ್ತೆಯ ವಾಣಿ ಚಿತ್ರಮಂದಿರದ ಬಳಿ ಯುವಕನೊಬ್ಬ ಕುಡಿದ ಅಮಲಿನಲ್ಲಿ ಸಾರ್ವಜನಿಕರನ್ನು ಅವಾಚ್ಯ ಪದಗಳಿಂದ ನಿಂತಿಸಿ, ಥಳಿಸಿಕೊಂಡಿದ್ದಾನೆ.

    ಆಗಿದ್ದೇನು?:
    ಇಂದು ಮಧ್ಯಾಹ್ನ ವಾಣಿ ಚಿತ್ರಮಂದಿರದ ಬಳಿ ಯುವಕನೊಬ್ಬ ಮದ್ಯದ ಅಮಲಿನಲ್ಲಿ ರಸ್ತೆಯ ಮೇಲೆ ತೂರಾಡುತ್ತಾ, ಸಾರ್ವಜನಿಕರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಯವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಯುವಕ ನಡು ರಸ್ತೆಯಲ್ಲಿಯೇ ಮುಗುಚಿ ಬಿದ್ದಿದ್ದ. ಅಲ್ಲಿಯೂ ಆತನನ್ನು ಏಳೆದು ಹೊಡೆದಿದ್ದಾರೆ.

    ಇದನ್ನು ನೋಡಿದ ಯುವಕನ ಸ್ನೇಹಿತರು ಹಾಗೂ ಕೆಲ ಹಿರಿಯರು ಆತನನ್ನು ರಕ್ಷಿಸಿದ್ದಾರೆ. ಬಳಿಕ ಸ್ನೇಹಿತ ಅವನನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದಾಗಲೂ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • 4ನೇ ಕ್ಲಾಸ್ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    4ನೇ ಕ್ಲಾಸ್ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಶಿವಮೊಗ್ಗ: ನಾಲ್ಕನೇ ತರಗತಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನ ಸ್ಥಳೀಯರು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.

    ಮೂಲತಃ ಉಡುಪಿ ಜಿಲ್ಲೆಯವನಾದ ಜಾಕೀರ್ ಅತ್ಯಾಚಾರಕ್ಕೆ ಯತ್ನಿಸಿ, ಥಳಿತಕ್ಕೆ ಒಳಗಾದ ಯುವಕ. ಬಾಲಕಿಯ ತಂದೆ ಕೆಲ ತಿಂಗಳ ಹಿಂದೆ ತೀರಿಕೊಂಡಿದ್ದರು. ತಾಯಿ ತಿಂಡಿ ಅಂಗಡಿ ನಡೆಸುತ್ತಿದ್ದರು. ತಾಯಿ-ಮಗಳು ಮಾತ್ರ ಇರುವುದನ್ನು ಗಮನಿಸಿದ್ದ ಈತ ಕಳೆದ ಮೂರು ದಿನಗಳಿಂದ ಆಕೆಯ ಬೆನ್ನು ಬಿದ್ದಿದ್ದ.

    ಸೋಮವಾರ ರಾತ್ರಿ ಬಾಲಕಿಯನ್ನು ಹಿಡಿದು ಎಳೆದೊಯ್ಯಲು ಯತ್ನಿಸಿದಾಗ ಬಾಲಕಿ ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ಸ್ಥಳೀಯರು ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ಜಾಕೀರ್ ಗೆ ತೀವ್ರವಾಗಿ ಥಳಿಸಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೋಕ್ಸೋ ಕಾಯ್ದೆಯಡಿ ಜಾಕೀರ್ ನನ್ನು ಬಂಧಿಸಿರುವ ಪೊಲೀಸರು ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಗೆ ಒಳಪಡಿಸಿದ್ದಾರೆ.