Tag: Beast Cinema

  • ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ರ್ನಾಟಕ ಮೂಲದ ದಕ್ಷಿಣದ ಚೆಲುವೆ ಪೂಜಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆದುಕೊಂಡ ವಿಚಾರ ವಾರದಿಂದ ಸಿನಿಮಾ ರಂಗದಲ್ಲಿ ಗಿರಿಕಿ ಹೊಡೆಯುತ್ತಿದೆ. ಸಾಲು ಸಾಲು ಸೋಲುಗಳನ್ನೇ ಉಂಡಿರುವ ಪೂಜಾ, ನಿಜಕ್ಕೂ ಅಷ್ಟೊಂದು ಸಂಭಾವನೆ ಪಡೆದರಾ ಅನ್ನುವ ಅನುಮಾನ ಕೂಡ ಮೂಡಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೂಜಾ, ತಮ್ಮ ಪಾಡಿಗೆ ತಾವು ಒಪ್ಪಿಕೊಂಡಿರುವ ಹಾಡಿಗೆ ಹೆಜ್ಜೆ ಹಾಕಿ ಬಂದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಹೌದು, ಪೂಜಾ ಇದೀಗ ‘ಎಫ್ 3’ ಹೆಸರಿನ ಸಿನಿಮಾವೊಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಷ್ಟೇ ಆ ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದೆ. ದಟ್ಟ ಪಿಂಕ್ ಬಣ್ಣದ ತುಂಡುಡುಗೆಯಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ಇದೊಂದು ಪಾರ್ಟಿ ಸಾಂಗ್ ಆಗಿದ್ದು, ಪಡ್ಡೆಗಳಿಗೆ ಕಿಕ್ ಏರಿಸುವಂತಹ ಸಾಹಿತ್ಯ ಈ ಹಾಡಿನಲ್ಲಿ ಇದೆಯಂತೆ. ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

    ‘ಎಫ್ 3’ ಅಂದರೆ ಏನು? ಅನ್ನುವುದರ ಕುರಿತು ಸಿನಿಮಾ ರಂಗವು ಈವರೆಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಫೋಸ್ಟರ್ ನಲ್ಲಿ ಇರುವಂತೆ ‘ಎಫ್’ ಅಂದರೆ ಫನ್, ‘ಎಫ್’ ಅಂದರೆ ಫ್ರಸ್ಟ್ರೇಷನ್. ಇವೆರಡರ ಸಂಗಮವೇ ಈ ಸಿನಿಮಾ ಎನ್ನಬಹುದು. ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ಕಾಂಬಿನೇಷನ್ ನ ಈ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಪೂಜಾ ಡ್ಯಾನ್ಸ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆ

    ಪೂಜಾ ಹೆಗ್ಡೆ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅಂದುಕೊಂಡಷ್ಟು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಪ್ರಭಾಸ್ ಜತೆ ನಟಿಸಿದ್ದ ರಾಧೆ ಶ್ಯಾಮ್ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂದು ನಂಬಲಾಗಿತ್ತು. ಆ ನಂಬಿಕೆ ಹುಸಿ ಆಯಿತು. ಅಲ್ಲದೇ, ಮೊನ್ನೆಯಷ್ಟೇ ರಿಲೀಸ್ ಆಗಿರುವ ದಳಪತಿ ವಿಜಯ್ ಅವರ ಬೀಸ್ಟ್ ನಲ್ಲೂ ಪೂಜಾ ನಟಿಸಿದ್ದಾರೆ. ಈ ಸಿನಿಮಾ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಹಿಂದೆ ಬಿದ್ದಿದೆ.

  • ಬೊಟ್ಟಬೊಮ್ಮ ಬೆಡಗಿಗೆ ಡ್ಯಾನ್ಸ್ ಫ್ಲೋರ್ ರೆಡಿ: `ಎಫ್ 3′ ಸೆಟ್‌ನಲ್ಲಿ ಪೂಜಾ ಹೆಗ್ಡೆ

    ಬೊಟ್ಟಬೊಮ್ಮ ಬೆಡಗಿಗೆ ಡ್ಯಾನ್ಸ್ ಫ್ಲೋರ್ ರೆಡಿ: `ಎಫ್ 3′ ಸೆಟ್‌ನಲ್ಲಿ ಪೂಜಾ ಹೆಗ್ಡೆ

    ಕ್ಷಿಣ ಭಾರತದ ಸದ್ಯ ಬ್ಯುಸಿಯೆಸ್ಟ್ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಸಾಲು ಸಾಲು ಸ್ಟಾರ್ ನಟರ ಚಿತ್ರಗಳಲ್ಲಿ ಕರಾವಳಿ ಬ್ಯೂಟಿ ನಟಿಸುತ್ತಿದ್ದಾರೆ. ಇದೀಗ ಸ್ಟಾರ್ ನಟ ವೆಂಕಟೇಶ್ ಮತ್ತು ವರುಣ್ ತೇಜ್ ನಟನೆಯ `ಎಫ್ 3′ ಚಿತ್ರದಲ್ಲಿ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಲು ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.

    ಟಾಲಿವುಡ್‌ನ ಬ್ಯೂಟಿ ಜೊತೆ ಪ್ರತಿಭೆಯಿರೋ ನಟಿ ಪೂಜಾ ಹೆಗ್ಡೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗ್ತಿದೆ. `ಅಲ್ಲಾ ವೈಕುಂಠಪುರಂಮುಲೋʼ ಬಾಕ್ಸ್ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆದಮೇಲಂತೂ ಪೂಜಾ ಎಲ್ಲಿಲ್ಲದ ಬೇಡಿಕೆ ಕ್ರಿಯೇಟ್ ಆಗಿತ್ತು.

    ಇತ್ತೀಚಿನ `ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಿದ್ರು. ಕಲೆಕ್ಷನ್ ಅಷ್ಟು ಕಮಾಲ್ ಮಾಡದೇಯಿದ್ರು. ಪೂಜಾ ಬೇಡಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಸಾಲು ಸಾಲು ಪ್ರಾಜೆಕ್ಟ್ಗಳು ಪೂಜಾರನ್ನ ಅರಸಿ ಬರುತ್ತಿದೆ. ಸದ್ಯ ನಟ ವೆಂಕಟೇಶ್ ಮತ್ತು ವರುಣ್ ತೇಜ್ ಅಭಿನಯ `ಎಫ್ 3′ ಚಿತ್ರಕ್ಕೆ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲು 1 ಕೋಟಿ ಸಂಭಾವನೆ ಪಡೆದಿದ್ದು, ಇದೀಗ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಇದನ್ನೂ ಓದಿ:ಇಂಥದ್ದೊಂದು ‘ಕಿಸ್’ (Kiss) ಗಾಗಿ ಆರು ವರ್ಷ ಕಾದಿದ್ದ ಆಲಿಯಾ ಭಟ್

    `ಎಫ್ 3′ ಚಿತ್ರ ಮೇ 27ಕ್ಕೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸದ್ಯ ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲು ಪೂಜಾ ಹೆಗ್ಡೆ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಹಿಂದೆಯೇ ರಾಮ್ ಚರಣ್ ನಟನೆಯ `ರಂಗಸ್ಥಳಂ’ ಚಿತ್ರದಲ್ಲಿ ಐಟಂ ಡ್ಯಾನ್ಸ್ಗೆ ಹೆಜ್ಜೆ ಹಾಕಿ ಬಂದಿದ್ರು. ಆ ಸಾಂಗ್ ಬಿಗ್ ಹಿಟ್ ಕೂಡ ಆಗಿತ್ತು. ಇದೀಗ ಸ್ಪೆಷಲ್ ಸಾಂಗ್‌ನಿಂದ ಹಲ್‌ಚಲ್ ಎಬ್ಬಿಸಲು ಕರಾವಳಿ ಬ್ಯೂಟಿ ಪೂಜಾ ಸಜ್ಜಾಗಿದ್ದಾರೆ. ಈ ಸುದ್ದಿ ಕೇಳಿ ಪೂಜಾ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಕಾಲಿವುಡ್‌ಗೆ ದಳಪತಿ ವಿಜಯ್ ಪುತ್ರನ ಎಂಟ್ರಿ!

    ಕಾಲಿವುಡ್‌ಗೆ ದಳಪತಿ ವಿಜಯ್ ಪುತ್ರನ ಎಂಟ್ರಿ!

    ಕಾಲಿವುಡ್‌ನ ಸೂಪರ್ ಸ್ಟಾರ್ ಆಗಿ ಮಿರ ಮಿರ ಅಂತಾ ಮಿಂಚ್ತಿರೋ ಖ್ಯಾತ ನಟ ದಳಪತಿ ವಿಜಯ್ ನಟನೆಯ `ಬೀಸ್ಟ್’ ಚಿತ್ರ ರಿಲೀಸ್ ಆಗಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಇದರ ಮಧ್ಯೆ ಹೊಸ ವಿಚಾರವೊಂದು ಸಿನಿಗಲ್ಲಿಯಲ್ಲಿ ಸೌಂಡ್ ಮಾಡ್ತಿದೆ. ಸೂಪರ್‌ಸ್ಟಾರ್ ದಳಪತಿ ವಿಜಯ್ ಪುತ್ರ ಸಂಜಯ್ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

    ತಮಿಳು ಚಿತ್ರರಂಗದಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ನಾನಾ ಪಾತ್ರಗಳ ರಂಜಿಸಿ ಸೈ ಎನಿಸಿಕೊಂಡಿದ್ದಾರೆ. `ಬೀಸ್ಟ್’ ಚಿತ್ರದ ಕುರಿತು ಸಿಕ್ಕಾಪಟ್ಟೆ ಸುದ್ದಿಯಲ್ಲಿರಬೇಕಾದ್ರೆ, ದಳಪತಿ ವಿಜಯ್ ಮಗ ಸಂಜಯ್, ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದರ ಕುರಿತು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಈ ವಿಷ್ಯವಾಗಿ ದಳಪತಿ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಇಂಡಸ್ಟ್ರಿಗೆ ವಿಜಯ್ ಮಗನ ಎಂಟ್ರಿಯಾಗುತ್ತೆ ಅಂತಾ ಭಾರೀ ಚರ್ಚೆ ಆಗ್ತಿತ್ತು. ಅದಕ್ಕೆ ಪೂರಕವೆನ್ನುವಂತೆ ಸಾಕಷ್ಟು ಕಥೆಗಳು ವಿಜಯ್ ಪುತ್ರ ಸಂಜಯ್‌ರನ್ನ ಅರಸಿ ಬಂದಿತ್ತು. `ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಒಮ್ಮೆ ವಿಜಯ್‌ರನ್ನ ಸಂಪರ್ಕಿಸಿ ಕಥೆ ಹೇಳಾಗಿತ್ತಂತೆ, ಕಥೆ ಕೇಳಿ ಇಷ್ಟಪಟ್ಟಿದ್ರಂತೆ ವಿಜಯ್, ಆದರೆ ಆ ಕಥೆಯನ್ನ ಸಂಜಯ್‌ಗಾಗಿ ಸಿದ್ಧಪಡಿಸಿದ್ರಂತೆ.

    ನಂತರ ಸಂಜಯ್ ಚಿತ್ರರಂಗಕ್ಕೆ ಬರೋದಕ್ಕೆ ಸ್ವಲ್ವ ಸಮಯ ಬೇಕು ಅಂತಾ ನಿರ್ದೇಶಕ ಅಲ್ಫೋನ್ಸ್ಗೆ ತಿಳಿಸಿದ್ರಂತೆ. ಚಿತ್ರರಂಗಕ್ಕೆ ಬರೋದು ಸಂಜಯ್‌ಗೆ ಬಿಟ್ಟಿದ್ದು, ಪುತ್ರ ಸಂಜಯ್‌ಗೆ ಯಾವ ಕ್ಷೇತ್ರದಲ್ಲಿ ಬೆಳೆಯಲು ಇಷ್ಟವೋ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ `ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

    ಇನ್ನು ಪುತ್ರ ವಿಜಯ್ ಕೂಡ ಒಂದೊಳ್ಳೆ ಗಟ್ಟಿ ಕಥೆಯ ಮೂಲಕ ಕಾಲಿವುಡ್ ರಂಗಕ್ಕೆ ಬರಲು ತೆರೆಮರೆಯಲ್ಲಿ ಸಿಧ್ಧತೆ ನಡೆಸುತ್ತಿದ್ದಾರೆ. ಒಂದೊಳ್ಳೆ ಪಾತ್ರದ ಮೂಲಕ ಸಂಜಯ್ ಸ್ಕ್ರೀನ್‌ಗೆ ಶೇರ್ ಮಾಡೋದು ಗ್ಯಾರೆಂಟಿ. ಒಟ್ನಲ್ಲಿ ಈ ಶುಭ ಸುದ್ದಿ ಕೇಳಿ ದಳಪತಿ ವಿಜಯ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

  • ರಾಜಕೀಯ ಪ್ರವೇಶದ ಸೂಚನೆ ಕೊಟ್ಟ ಖ್ಯಾತನಟ ದಳಪತಿ ವಿಜಯ್

    ರಾಜಕೀಯ ಪ್ರವೇಶದ ಸೂಚನೆ ಕೊಟ್ಟ ಖ್ಯಾತನಟ ದಳಪತಿ ವಿಜಯ್

    ನಾಳೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ‘ಬೀಸ್ಟ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ವಿಜಯ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇನು ಸಿನಿಮಾ ತೆರೆಗೆ ಬರಬೇಕಿದೆ. ಅದಕ್ಕೂ ಎರಡು ದಿನ ಮುನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿ, ಸಂಚಲನ ಸೃಷ್ಟಿಸಿದ್ದಾರೆ ವಿಜಯ್. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ವಿಜಯ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ವರ್ಷಗಳಿಂದ ತಮಿಳುನಾಡಿನಲ್ಲಿ ಹರಿದಾಡುತ್ತಲೇ ಇದೆ. ವಿಜಯ್ ಹೆಸರಿನಲ್ಲೇ ಪಕ್ಷವೊಂದನ್ನು ಅವರ ತಂದೆ ಸ್ಥಾಪಿಸಿದ್ದರು. ಆ ಪಕ್ಷದಲ್ಲಿ ನಾನು ಸಕ್ರೀಯನಾಗಿಲ್ಲ ಎಂದು ವಿಜಯ್ ಹೇಳಿದ್ದರೂ, ಅವರ ಹೆಸರಿನಲ್ಲಿಯೇ ಅನೇಕ ಚಟುವಟಿಕೆಗಳು ಆ ಪಕ್ಷದಲ್ಲಿ ನಡೆದಿವೆ. ಅಲ್ಲದೇ, ಕಳೆದ ಬಾರಿ ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ವಿಜಯ್ ಅವರ ತಂದೆಯ ಪಕ್ಷ ಸ್ಪರ್ಧಿಸಿತ್ತು. ಆ ವೇಳೆ ತಮ್ಮ ಫೋಟೋವನ್ನು ಬಳಸಿಕೊಳ್ಳಲು ವಿಜಯ್ ಅನುಮತಿ ಕೊಟ್ಟಿದ್ದರು. ಈಗ ತಾವೂ ರಾಜಕೀಯ ಪ್ರವೇಶ ಮಾಡುವ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ‘ಬೀಸ್ಟ್’ ಸಿನಿಮಾಗೆ ಸಂಬಂಧಿಸಿದ ಸಂದರ್ಶನದಲ್ಲಿ ಮಾತನಾಡಿರುವ ವಿಜಯ್, ‘ನಾನು ರಾಜಕೀಯ ರಂಗಕ್ಕೆ ಬರಬೇಕು ಎನ್ನುವುದು ನನ್ನ ಅಭಿಮಾನಿಗಳಿಗೆ ಆಸೆಯಿದೆ. ಹಲವು ಬಾರಿ ಅವರು ನನ್ನನ್ನು ಒತ್ತಾಯಿಸಿದ್ದಾರೆ. ಅವರು ಆಸೆ ಪಟ್ಟರೆ ಖಂಡಿತಾ ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆ’ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ರಾಜಕಾರಣಿ ಆಗುತ್ತೇನೆ ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    ವಿಜಯ್ ಈಗಾಗಲೇ ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾನಾ ಪಕ್ಷಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಪೆಟ್ರೊಲ್, ಡಿಸೈಲ್ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಸೈಕಲ್ ಮೇಲೆ ಸವಾರಿ ಮಾಡಿ ಮತದಾನ ಮಾಡಿದ್ದರು ವಿಜಯ್, ಅವರ ಈ ನಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ, ನಾಡು, ನುಡಿಗೆ ತೊಂದರೆ ಆದಾಗಲೂ ಅವರು ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೀಗಾಗಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ. ಮುಂದಿನ ದಿನಗಳಲ್ಲಿ ಅವರು ಈಡೇರಿಸುವುದರಲ್ಲಿ ಅಚ್ಚರಿಯಿಲ್ಲ.