Tag: bear

  • ಪಾಳು ಬಾವಿಗೆ ಬಿದ್ದ ಕರಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು!

    ಪಾಳು ಬಾವಿಗೆ ಬಿದ್ದ ಕರಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು!

    ಬಳ್ಳಾರಿ: ಹೊಲದ ಬಾವಿಯಲ್ಲಿ ಬಿದ್ದಿದ್ದ ಕರಡಿಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಜೀವಂತವಾಗಿ ದಹನವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಡೇಕೊಳ್ಳದ ಬಳಿ ಜರಿಮಲೆ ಆರಣ್ಯದಲ್ಲಿ ನಡೆದಿದೆ.

    ಆಹಾರ ಹುಡುಕಿಕೊಂಡು ಕರಡಿಯೊಂದು ಸಮೀಪದ ರೈತರ ವೀಳ್ಯದೆಲೆ ತೋಟಕ್ಕೆ ಭಾನುವಾರ ಮಧ್ಯಾಹ್ನ ಬಂದಿದೆ. ಈ ಸಂದರ್ಭದಲ್ಲಿ ಕರಡಿಯನ್ನು ನೋಡಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಕೂಡ್ಲಿಗಿ ವಲಯ ಆರಣ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೇರಿ ಕರಡಿಯನ್ನು ಅರಣ್ಯಕ್ಕೆ ಓಡಿಸಿದ್ದಾರೆ.

    ಆದರೆ ಕರಡಿ ಅರಣ್ಯಕ್ಕೆ ಹೋಗದೆ ಕಡೇಕೊಳ್ಳದ ಕಡೆ ಓಡಿ ಹೋಗಿ ಪಾಳು ಬಾವಿಯೊಂದರಲ್ಲಿ ಬಿದ್ದಿದೆ. ಇದನ್ನು ನೋಡಿದ ಯಾರೋ ಕಿಡಿಗೇಡಿಗಳು ಸಂಜೆ 6 ಗಂಟೆ ಸುಮಾರಿಗೆ ಬಾವಿಯಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ಹಚ್ಚಿಹೋಗಿದ್ದಾರೆ. ಪರಿಣಾಮ ಕರಡಿ ಬಾವಿಯಲ್ಲಿಯೇ ಸಜೀವ ದಹನವಾಗಿದೆ.

    ವಿಷಯ ತಿಳಿದ ಗುಡೇಕೋಟೆ ವಲಯ ಉಪಅರಣ್ಯಾಧಿಕಾರಿಗಳಾದ ಪಿ. ಮಹೇಶ್, ಎಚ್. ವೆಂಕಟೇಶ್ ನಾಯ್ಕ್ ಅವರು ಕೂಡ್ಲಿಗಿ ಅಗ್ನಿ ಶಾಮಕ ಸಿಬ್ಬಂದಿ ಸಹಾಯದೊಂದಿಗೆ ಕರಡಿ ಮೃತ ದೇಹವನ್ನು ಮೇಲೆಕ್ಕೆತ್ತಿದ್ದಾರೆ.

  • ವಿಡಿಯೋ: ಕರಡಿ ಜೊತೆ ಹೋರಾಡಲಾಗದೆ ಸೋಲೊಪ್ಪಿಕೊಂಡ ಹುಲಿ!

    ವಿಡಿಯೋ: ಕರಡಿ ಜೊತೆ ಹೋರಾಡಲಾಗದೆ ಸೋಲೊಪ್ಪಿಕೊಂಡ ಹುಲಿ!

    ಮುಂಬೈ: ಹುಲಿ ತನ್ನ ಆಹಾರಕ್ಕಾಗಿ ಹಾಗೂ ತನ್ನ ಉಳಿವಿಗಾಗಿ ಎಂತಹ ಪ್ರಾಣಿಯ ಜೊತೆ ಬೇಕಾದರು ಹೋರಾಟ ನಡೆಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಆದ್ರೆ ತನಗಿಂತ ಚಿಕ್ಕ ಪ್ರಾಣಿ ಜೊತೆ ಹೋರಾಟ ನಡೆಸಲಾಗದೆ ಸೋಲನ್ನೊಪ್ಪಿಕೊಂಡು ಹೋಗಿರುವ ಘಟನೆ ಮಹಾರಾಷ್ಟ್ರದಲ್ಲಿ  ನಡೆದಿದೆ.

    ಹುಲಿ ಕರಡಿಯೊಂದಿಗೆ ಹೋರಾಟ ನಡೆಸಲಾಗದೆ ಹೆದರಿ ಹಿಂದಿರುಗಿ ಹೋಗಿದೆ. ಈ ಘಟನೆ ಮಹಾರಾಷ್ಟ್ರದ ತೊಡಬ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ. ಹುಲಿಯೊಂದು ತನ್ನ ಬೇಟೆಗಾಗಿ ಹುಡುಕಾಟ ನಡೆಸುತ್ತಿರುವ ವೇಳೆ ಕರಡಿ ಕಾಣಿಸಿದೆ. ಹುಲಿ ಹಾಗೂ ಕರಡಿ ಎರಡೂ ಮುಖಾಮುಖಿಯಾದ ವೇಳೆ ಹುಲಿ ಕರಡಿ ಮೇಲೆ ಎಗರಿ ಕರಡಿಯನ್ನು ಸೋಲಿಸಲು ಪ್ರಯತ್ನ ಪಟ್ಟಿದೆ. ಆದರೆ ಈ ಸಂದರ್ಭದಲ್ಲಿ ಕರಡಿಯೂ ಸಹ ಹುಲಿಯನ್ನು ಸೋಲಿಸಲು ಮುಂದಾಗುತ್ತದೆ. ಹುಲಿ ತನ್ನ ಬಲಿಷ್ಟವಾದ ಬಾಯಿ ಹಾಗೂ ಉಗುರಿನಿಂದ ಕರಡಿಯನ್ನು ಅದುಮಿ ಹಿಡಿದುಕೊಳ್ಳುತ್ತದೆ. ಸುಮಾರು 10 ನಿಮಿಷಗಳ ಕಾಲ ಹುಲಿ ಕರಡಿಯನ್ನು ತನ್ನ ಬಾಹುಗಳಿಂದ ಬಂಧಿಸುತ್ತದೆ.

    ಕರಡಿ ಇದರಿಂದ ಕುಪಿತಗೊಂಡು ಹುಲಿಯನ್ನು ಕೆಳಗೆ ಬೀಳಿಸಿ ಹುಲಿಯ ಮೇಲೆ ದಾಳಿ ನಡೆಸುತ್ತದೆ. ಇದಕ್ಕೆ ಹೆದರಿದ ಹುಲಿ ಕರಡಿಯಿಂದ ದೂರ ಸರಿಯುತ್ತದೆ. ಇಂತಹ ಅಪರೂಪದ ದೃಶ್ಯ ತೊಡಬ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮೆರದಲ್ಲಿ ಸೆರೆಯಾಗಿದೆ. ಸದ್ಯ ಹುಲಿ ಹಾಗೂ ಕರಡಿಯ ಫೈಟ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    https://www.youtube.com/watch?v=oIQ9I9fCoS8

  • ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿದ ಕರಡಿಯ ರಕ್ಷಣೆ

    ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿದ ಕರಡಿಯ ರಕ್ಷಣೆ

    ರಾಮನಗರ: ಕಾಡು ಹಂದಿಗಳ ಬೇಟೆಗಾಗಿ ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಕರಡಿಯೊಂದು ಸಿಕ್ಕಿಬಿದ್ದು, ನರಕಯಾತನೆ ಅನುಭವಿಸಿದ ಘಟನೆ ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ನಡೆದಿದೆ.

    ಬಿಳಗುಂಬ ಗ್ರಾಮದ ರಮೇಶ್ ಎಂಬವರ ಗಂಧ ಹಾಗೂ ಮಾವಿನ ಮರದ ತೋಪಿನಲ್ಲಿ ಕಿಡಿಗೇಡಿಗಳು ರಾತ್ರಿ ಹಂದಿ ಬೇಟೆಗಾಗಿ ಬೈಕ್‍ನ ಕ್ಲಚ್ ವೈರ್‍ಗಳ ಉರುಳನ್ನು ಹಾಕಿದ್ದಾರೆ. ಬೆಳಗ್ಗಿನ ಜಾವದ ವೇಳೆ ಆಹಾರ ಅರಸಿ ಬಂದ ಒಂದೂವರೆ ವರ್ಷದ ಹೆಣ್ಣು ಕರಡಿ ಉರುಳಿನಲ್ಲಿ ಸಿಕ್ಕಿಬಿದ್ದಿದೆ. ಉರುಳಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಹರಸಾಹಸ ಮಾಡಿದೆ. ಆದದೂ ಏನು ಪ್ರಯೋಜನವಾಗಿಲ್ಲ. ಈ ವೇಳೆ ತೋಟದ ಕಡೆಗೆ ಬಂದಿದ್ದ ಗ್ರಾಮದ ಜನ ಅರಣ್ಯ ಇಲಾಖೆಗೆ ಕರಡಿ ಸಿಲುಕಿಬಿದ್ದಿರುವ ಮಾಹಿತಿಯನ್ನ ರಾಮನಗರ ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ನೀಡಿದ್ದಾರೆ.

    ಮಾಹಿತಿ ತಿಳಿದ ಬನ್ನೇರುಘಟ್ಟ ವನ್ಯಜೀವಿಧಾಮದ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಅರವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನು ಉರುಳಿನಿಂದ ಬಿಡಿಸಿದ್ದಾರೆ. ಗಾಯಗೊಂಡಿದ್ದ ಕರಡಿಗೆ ಚಿಕಿತ್ಸೆ ನೀಡಿ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲು ರವಾನಿಸಲಾಯಿತು. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಆತಂಕದಲ್ಲೇ ಕಾಲ ಕಳೆಯುತ್ತಿರುವುದಾಗಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

  • 3 ತಿಂಗಳಿಂದ ಪ್ರತಿನಿತ್ಯ ಗ್ರಾಮಕ್ಕೆ ಬಂದುಹೋಗ್ತಿರೋ ಕರಡಿ- ಸ್ಥಳೀಯರಲ್ಲಿ ಆತಂಕ

    3 ತಿಂಗಳಿಂದ ಪ್ರತಿನಿತ್ಯ ಗ್ರಾಮಕ್ಕೆ ಬಂದುಹೋಗ್ತಿರೋ ಕರಡಿ- ಸ್ಥಳೀಯರಲ್ಲಿ ಆತಂಕ

    ಬಳ್ಳಾರಿ: ನಿನ್ನೆ ತಾನೆ ತುಮಕೂರು ನಗರದ ಮನೆಯೊಂದರಲ್ಲಿ ಚಿರತೆ ನುಗ್ಗಿದ ಸುದ್ದಿಯನ್ನು ಕೇಳಿದ್ದೇವೆ. ಇದೀಗ ಕರಡಿಯೊಂದು ಜಿಲ್ಲೆಯ ಹೊಸಪೇಟೆ ತಾಲೂಕಿನ ಮೆಟ್ರಿ ಗ್ರಾಮಕ್ಕೆ ಪ್ರತಿನಿತ್ಯ ಬಂದು ಹೋಗುತ್ತಿದೆ.

    ಪ್ರತಿನಿತ್ಯ ಕಾಡಿನಿಂದ ಆಹಾರ ಅರಸಿ ಗ್ರಾಮಕ್ಕೆ ಬರುವ ಕರಡಿ ಅರಾಮಾಗಿ ಓಡಾಡುತ್ತಿರುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದೆ. ಪ್ರತಿರಾತ್ರಿ ಸ್ಥಳೀಯ ಸುಂಕಲಮ್ಮ ದೇವಸ್ಥಾನದಲ್ಲಿ ದೀಪ ಹಚ್ಚಿರುವ ಎಣ್ಣೆಯನ್ನು ಸವಿದು ವಾಪಾಸ್ ಹೋಗುತ್ತದೆ. ಒಂದು ವೇಳೆ ದೇವಸ್ಥಾನದ ಗೇಟ್ ಹಾಕಿದ್ದರೆ ಅದನ್ನು ಮುರಿದು, ಸರಿಸಿ ಒಳಹೋಗಿ ಎಣ್ಣೆ ತಿಂದು ಹೋಗುತ್ತದೆ.

    ಕಳೆದ ಮೂರು ತಿಂಗಳಿನಿಂದ ಕರಡಿ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಗ್ರಾಮದಲ್ಲಿ ಮನೆ ಮುಂದೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ವೇಳೆಯಲ್ಲಿ ಗ್ರಾಮದಲ್ಲಿ ಓಡಾಡುವ ಕರಡಿಯನ್ನು ಆದಷ್ಟು ಬೇಗ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

    https://youtu.be/S3BuYgLN6rc

  • ಗರ್ಭಿಣಿಯ ಕುತ್ತಿಗೆ ಬಳಿ ಕಚ್ಚಿ ಕೊಂದ ಕರಡಿ

    ಗರ್ಭಿಣಿಯ ಕುತ್ತಿಗೆ ಬಳಿ ಕಚ್ಚಿ ಕೊಂದ ಕರಡಿ

    ರಾಮನಗರ: ಬಹಿರ್ದೆಸೆಗೆ ಹೋಗಿದ್ದ ಗರ್ಭಿಣಿ ಮೇಲೆ ಕರಡಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚೌಕಸಂದ್ರ ಗ್ರಾಮದಲ್ಲಿ ನಡೆದಿದೆ.

    ಚೌಕಸಂದ್ರ ಗ್ರಾಮದ ಪ್ರದೀಪ್ ಕುಮಾರ್ ನಾಯಕ್ ಎಂಬವರ ಪತ್ನಿ ಸುಮಾಭಾಯಿ(25) ಮೃತ ದುರ್ದೈವಿ. ಇಂದು ಬೆಳಿಗ್ಗೆ ಸುಮಾರು 5 ಗಂಟೆಯ ವೇಳೆ ಬಹಿರ್ದೆಸೆಗೆ ಸುಮಾಭಾಯಿ ಮನೆಯ ಹಿಂಬದಿ ಹೋಗಿದ್ದರು. ಈ ವೇಳೆ ಕರಡಿ ದಾಳಿ ನಡೆಸಿದ್ದು ಕುತ್ತಿಗೆ ಭಾಗದಲ್ಲಿ ಕಚ್ಚಿ, ಕೊರಳನ್ನು ಪರಚಿದೆ.

    ಕರಡಿ ಕುತ್ತಿಗೆ ಭಾಗ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸುಮಾಭಾಯಿ ಸಾವನ್ನಪ್ಪಿದ್ದಾರೆ. ಸುಮಭಾಯಿಗೆ ಗಂಡು ಮಗುವಿದ್ದು, ಮತ್ತೊಂದು ಮಗುವಿಗೆ ಗರ್ಭಿಣಿಯಾಗಿದ್ದರು. ಗ್ರಾಮಸ್ಥರು ಚಿರತೆ ದಾಳಿಯಿಂದ ಸುಮಭಾಯಿ ಸಾವನ್ನಪ್ಪಿದ್ದಾಳೆ ಎಂದುಕೊಂಡಿದ್ದರು. ಆದ್ರೆ ಕರಡಿ ಕುತ್ತಿಗೆ ಭಾಗದಲ್ಲಿ ಕಚ್ಚಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ಕನಕಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರಡಿ ದಾಳಿಯಿಂದ ಆಗಿರುವ ಸಾವು ಎಂದು ದೃಢಪಡಿಸಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೊಪ್ಪಳದಲ್ಲಿ ಕರಡಿ ದಾಳಿಗೊಳಗಾಗಿ ಮಹಿಳೆ ಗಂಭೀರ

    ಕೊಪ್ಪಳದಲ್ಲಿ ಕರಡಿ ದಾಳಿಗೊಳಗಾಗಿ ಮಹಿಳೆ ಗಂಭೀರ

    ಕೊಪ್ಪಳ: ಮಹಿಳೆಯೊಬ್ಬರ ಮೇಲೆ ಕರಡಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಮುಸಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಾಳಿಗೊಳಗಾದ ಮಹಿಳೆಯನ್ನು ಹನುಮಮ್ಮ ದ್ಯಾಮಣ್ಣ ಭೋವಿ ಎಂದು ಗುರುತಿಸಲಾಗಿದೆ.

    ಕರಡಿ ದಾಳಿ ಸುದ್ದಿ ತಿಳಿದು ಗ್ರಾಮಸ್ಥರು ಗಂಭೀರ ಗಾಯಗೊಂಡ ಮಹಿಳೆಯನ್ನು ರಕ್ಷಿಸಿ, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 3 ಕರಡಿಗಳು ಗ್ರಾಮದ ಪಕ್ಕದಲ್ಲಿನ ಹೊಲದಲ್ಲೇ ಅಡಗಿ ಕುಳಿತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ಕರಡಿ ಹಿಡಿಯಲು ಮುಂದಾಗದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಕೈಯಲ್ಲಿ ಬಡಿಗೆಗಳನ್ನು ಹಿಡಿದು ಕರಡಿಗಾಗಿ ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ.

  • ಮನೆಗೆ ನುಗ್ಗಿ ಫ್ರಿಡ್ಜ್ ಓಪನ್ ಮಾಡಿ ಆಹಾರ ತಿಂದ ಕರಡಿ: ವಿಡಿಯೋ ನೋಡಿ

    ಮನೆಗೆ ನುಗ್ಗಿ ಫ್ರಿಡ್ಜ್ ಓಪನ್ ಮಾಡಿ ಆಹಾರ ತಿಂದ ಕರಡಿ: ವಿಡಿಯೋ ನೋಡಿ

    ವಾಷಿಂಗ್ಟನ್: ಮನೆಯ ಮಾಲೀಕನೊಬ್ಬ ಗಾಢವಾದ ನಿದ್ದೆಯಲ್ಲಿದ್ದಾಗ ಹಸಿದಿದ್ದ ಕರಡಿಯೊಂದು ಮನೆಗೆ ಒಳನುಗ್ಗಿ ಫ್ರಿಡ್ಜ್ ನಲ್ಲಿ ಇದ್ದ ಬ್ರೆಡ್, ಜಾಮೂನು ಹಾಗೂ ಇನ್ನಿತರ ಆಹಾರವನ್ನು ತಿಂದ ವಿಡಿಯೋವೊಂದು ವೈರಲ್ ಆಗಿದೆ.

    ಹೌದು, ಅಮೆರಿಕಾದ ಕೊಲೊರಾಡೋದಲ್ಲಿ ಮನೆಗೆ ಒಳನುಗ್ಗಿ ಆಹಾರವನ್ನು ಕರಡಿಯೊಂದು ಸೇವಿಸಿದೆ. ಮಾಲೀಕ ಮಹಡಿಯಲ್ಲಿ ಮಲಗಿದ್ದ ವೇಳೆ ಕರಡಿ ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿ ಸುಮಾರು 6 ಗಂಟೆಗಳಷ್ಟು ಕಾಲ ಇದ್ದು, ಫ್ರಿಡ್ಜ್ ಓಪನ್ ಮಾಡಿ ಆಹಾರವನ್ನು ಹುಡುಕಿದೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಇತರೇ ಆಹಾರಗಳನ್ನು ತಿಂದಿದೆ.

    ಇದೇ ಕರಡಿ ಜೂನ್ ನಲ್ಲಿಯೂ ಮನೆಯೊಂದಕ್ಕೆ ನುಗ್ಗಿ ಐಸ್ ಕ್ರೀಂ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದಿತ್ತು ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕರಡಿ ಮನೆಯಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಬೇಟೆಗಾರರು ಅಳವಡಿಸಿದ ತಂತಿ ಬೇಲಿಗೆ ಸಿಲುಕಿ ಚಿರತೆ, ಕರಡಿ, ಮುಳ್ಳುಹಂದಿ ಸಾವು

    ಬೇಟೆಗಾರರು ಅಳವಡಿಸಿದ ತಂತಿ ಬೇಲಿಗೆ ಸಿಲುಕಿ ಚಿರತೆ, ಕರಡಿ, ಮುಳ್ಳುಹಂದಿ ಸಾವು

    ಚಿತ್ರದುರ್ಗ: ಬೇಟೆಗಾರರು ಅರಣ್ಯಪ್ರದೇಶದಲ್ಲಿ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಚಿರತೆ ಸೇರಿದಂತೆ ಮೂರು ಪ್ರಾಣಿಗಳು ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಜಿಲ್ಲೆಯ ಹೊಸದುರ್ಗ ತಾಲೂಕಿನ ಕಪ್ಪನಾಯಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ 5 ವರ್ಷದ ಗಂಡು ಚಿರತೆ, 3 ವರ್ಷದ ಹೆಣ್ಣು ಕರಡಿ, ಹಾಗೂ ಮುಳ್ಳುಹಂದಿ ಸಾವನ್ನಪ್ಪಿವೆ. ಈ ಮೂರು ಪ್ರಾಣಿಗಳು ಏಕಕಾಲದಲ್ಲಿ ಸಾವನ್ನಪ್ಪಿರುವುದರಿಂದ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಎರಡು ಮೂರು ದಿನಗಳ ಹಿಂದೆಯೇ ತಂತಿ ಬೇಲಿಯ ವಿದ್ಯುತ್ ಶಾಕ್‍ನಿಂದ ಪ್ರಾಣಿಗಳು ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ

    ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ

    ಚಿತ್ರದುರ್ಗ: ಜಿಲ್ಲೆಯ ಹೊಳಲ್ಕರೆ ತಾಲೂಕಿನ ತಿರುಮಲಾಪುರ ಗ್ರಾಮಕ್ಕೆ ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

    ಆಹಾರ, ನೀರು ಹುಡುಕುತ್ತಾ ನಾಡಿನತ್ತ ಬಂದ ಕರಡಿ ರೈತರು ಗದ್ದೆಗೆ ಹಾಕಿದ ತಂತಿಗೆ ಸಿಲುಕಿತ್ತು. ಗ್ರಾಮದ ವೆಂಕಟೇಶ್ ಎಂಬವರ ಗದ್ದೆಯಲ್ಲಿ ಕರಡಿ ತಂತಿ ಬೇಲಿಗೆ ಸಿಕ್ಕಿ ಹಾಕಿಕೊಂಡಿತ್ತು. ಆರಂಭದಲ್ಲಿ ಹತ್ತಿರ ಹೋಗುವುದಕ್ಕೂ ಹೆದರುತ್ತಿದ್ದ ಗ್ರಾಮಸ್ಥರು ಬಳಿಕ ಕರಡಿ ಸಂಪೂರ್ಣವಾಗಿ ನಿತ್ರಾಣಗೊಂಡಿರೋದನ್ನ ಖಚಿತಪಡಿಸಿಕೊಂಡು ತಂತಿಯಿಂದ ಬಿಡಿಸಿದ್ದಾರೆ.

    ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ನಿತ್ರಾಣಗೊಂಡಿದ್ದ ಕರಡಿಯನ್ನು ಸ್ಥಳಾಂತರಗೊಳಿಸಿದರು. ಗ್ರಾಮದ ಹತ್ತಿರ ಮೂರು ಕರಡಿಗಳು ಇರೋದನ್ನು ಕಂಡಿರುವ ಗ್ರಾಮಸ್ಥರು ಸದ್ಯ ಒಂದು ಕರಡಿ ಸಿಕ್ಕಿದ್ದು, ಮತ್ತೆರೆಡು ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಕರಡಿಯನ್ನ ದಾವಣೆಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

     

  • ನಾಗರಹೊಳೆ ಅರಣ್ಯದಲ್ಲಿ ಕರಡಿಗೆ ಹೆದರಿ ಓಟ ಕಿತ್ತ ಹುಲಿರಾಯ- ವೀಡಿಯೋ ನೋಡಿ

    ನಾಗರಹೊಳೆ ಅರಣ್ಯದಲ್ಲಿ ಕರಡಿಗೆ ಹೆದರಿ ಓಟ ಕಿತ್ತ ಹುಲಿರಾಯ- ವೀಡಿಯೋ ನೋಡಿ

    ಚಾಮರಾಜನಗರ: ಹುಲಿಯಂತಹ ಬಲಿಷ್ಠ ಪ್ರಾಣಿಯನ್ನೇ ಕರಡಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ನಾಗರಹೊಳೆ ಅರಣ್ಯದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರೊಬ್ಬರಿಗೆ ಸೆರೆಸಿಕ್ಕಿದೆ.

    ಬೆಂಗಳೂರಿನ ಅಭಿಷೇಕ್ ಎಂಬುವವರು ನಾಗರಹೊಳೆಯಲ್ಲಿ ಸಫಾರಿಗೆ ಹೋಗಿದ್ದ ಸಂದರ್ಭದಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ. ವನ್ಯಜೀವಿ ತಜ್ಞರು ಹೇಳುವ ಪ್ರಕಾರ ನೀರಿಗಾಗಿ ಇಂತಹ ಕಾದಟಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ. ನೀರಿಗೋಸ್ಕರ ಎದುರಾಳಿ ಪ್ರಾಣಿ ಎಷ್ಟೇ ಬಲಿಷ್ಠವಾಗಿದ್ದರು ಬದುಕುವ ಸಲುವಾಗಿ ಹೋರಾಟ ಮಾಡುತ್ತವೆ ಎನ್ನುತ್ತಾರೆ.

    ಸದ್ಯ ಕರಡಿ ಹುಲಿಯನ್ನು ಅಟ್ಟಿಸಿಕೊಂಡು ಹೋಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಈ ಹಿಂದೆ ಬಂಡಿಪುರದಲ್ಲಿ ಇಂತಹದೆ ದೃಶ್ಯವೊಂದು ಕ್ಯಾಮರಾಕ್ಕೆ ಸೆರೆಸಿಕ್ಕಿತ್ತು. ಆ ದೃಶ್ಯದಲ್ಲಿ ಕೆರೆಗೆ ಹುಲಿಯೊಂದು ನೀರು ಕುಡಿಯಲು ಆಗಮಿಸಿದ್ದ ವೇಳೆ ಕೆರೆಯ ಬಳಿ ಇದ್ದ ಆನೆಗಳು ಹುಲಿಯನ್ನು ಆ ಸ್ಥಳದಿಂದ ಓಡಿಸಿದ್ದವು.

    https://www.youtube.com/watch?v=tvSOw7XzuaQ