ಪಟ್ಟೇಗಾಳಿಯ ನಿವಾಸಿ ಸಂತೋಷ ಸದಾನಂದ ಗಾವಡೆ ಎಂಬವರ ಮನೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಕರಡಿಯೊಂದು ಹಾಡಹಗಲೇ ಮನೆಯ ಒಳಗಡೆ ನುಗ್ಗಿದೆ. ಈ ಸಮಯದಲ್ಲಿ ಸಂತೋಷ ಸದಾನಂದ ಗಾವಡೆ ಹಾಗೂ ಅವರ ಮನೆಯವರೆಲ್ಲರೂ ಹೊಲಕ್ಕೆ ಹೋಗಿದ್ದರಿಂದ ಆಗಬಹುದಾದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಹೊಲದಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಕರಡಿ ದಾಂಧಲೆ ಮಾಡಿತ್ತು. ಕರಡಿ ಮನೆ ಒಳಗಡೆ ನುಗ್ಗಿರುವುದರ ಜೊತೆಗೆ ಮಲವಿಸರ್ಜನೆ ಮಾಡಿ ಮನೆಯ ಸಿಮೆಂಟ್ ಶೀಟನ್ನು ಒಡೆದಿತ್ತು. ಪದೇ ಪದೆ ಈ ಭಾಗದಲ್ಲಿ ಕರಡಿ ದಾಳಿ ನಡೆಸುತ್ತಿದ್ದು, ಜನ ಭಯದಲ್ಲಿ ದಿನ ಕಳೆಯುವಂತಾಗಿದೆ.
ಚಿತ್ರದುರ್ಗ: ಇಲ್ಲಿಯವರೆಗೆ ಬೆಟ್ಟಗುಡ್ಡದ ಪಕ್ಕದಲ್ಲಿನ ಹಳ್ಳಿಗಳಿಗೆ ವನ್ಯಮೃಗಗಳು ಲಗ್ಗೆ ಇಡುತ್ತಿದ್ದವು. ಇದೀಗ ಚಿತ್ರದುರ್ಗದ (Chitradurga) ಶಾಂತಿನಗರದ ಜನವಸತಿ ಪ್ರದೇಶಕ್ಕೆ ಕರಡಿ ನಿತ್ಯ ಬರುತ್ತಿರುವ ಪರಿಣಾಮ ಕೋಟೆನಾಡಿನ ನಾಗರಿಕರಲ್ಲಿ ಆತಂಕ ಮನೆಮಾಡಿದೆ.
ಚಿತ್ರದುರ್ಗದ ಮಾಳಪ್ಪನಹಟ್ಟಿ ಬಳಿಯ ಶಾಂತಿನಗರದಲ್ಲಿ (Shantinagar) ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಇಲ್ಲಿನ ಜನರು ಇದೇ ರಸ್ತೆಯಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಇಲ್ಲಿಯೇ ಒಡಾಡುತ್ತಾರೆ. ನಿತ್ಯ ಮನೆ ಪಾಠಕ್ಕೆ ತೆರಳುತ್ತಾರೆ. ಆದರೆ ಕಳೆದ ಒಂದು ವಾರದಿಂದ ಈ ಬಡಾವಣೆ ಪಕ್ಕದಲ್ಲಿರುವ ಬನ್ನಿಮರದ ಬಳಿಗೆ ಕರಡಿಯೊಂದು (Bear) ಬರುತ್ತಿದೆ. ಅಲ್ಲಿ ಕೈಗೆ ಸಿಗುವ ಆಹಾರ ಸೇವಿಸಿ ಪರಾರಿಯಾಗುತ್ತದೆ. ಇದನ್ನೂ ಓದಿ: ಒಡೆದ ಮನೆಯಾಯ್ತು ಪಂಚಮಸಾಲಿ ಮೀಸಲಾತಿ ಹೋರಾಟ – ಯತ್ನಾಳ್, ಶ್ರೀಗಳ ವಿರುದ್ಧ ಕಾಶಪ್ಪನವರ್ ಕಿಡಿ
ಇನ್ನೂ ಕರಡಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಕರಡಿ ಓಡಾಟದ ವೀಡಿಯೋ ವೀಕ್ಷಿಸಿರುವ ಬಡಾವಣೆಯ ಜನರಲ್ಲಿ ಭೀತಿ ಸೃಷ್ಠಿಯಾಗಿದೆ. ಹೀಗಾಗಿ ಮನೆಯಿಂದ ಹೊರಬರಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಈ ಬಡಾವಣೆಯ ಮಕ್ಕಳು, ಮಹಿಳೆಯರು ಸಂಜೆಯಾದರೆ ಮನೆಯೊಳಗೆ ಅಡಗಿಕೊಳ್ಳಲಿದ್ದು, ಭಯದಿಂದ ಬದುಕುವ ವಾತಾವರಣವಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ನಾಗರಿಕರು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್
ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ವೇಳೆ ನಗರ ಪ್ರದೇಶದೊಳಗೆ ಎಂಟ್ರಿಯಾಗುವ ಕರಡಿ ಉಪಟಳ ಮಿತಿಮೀರಿದೆ. ಹೀಗಾಗಿ ಆ ಕರಡಿ ಮನೆಯೊಳಗೆ ನುಗ್ಗಿದರೆ ನಮ್ಮ ಗತಿಯೇನು ಎಂಬ ಪ್ರಾಣಭಯ ಮಹಿಳೆಯರು ಹಾಗು ಮಕ್ಕಳಲ್ಲಿದೆ. ಕೂಡಲೇ ಕರಡಿಯನ್ನು ಸೆರೆಹಿಡಿದು ಬೇರೆಡೆಗೆ ಶಿಫ್ಟ್ ಮಾಡಬೇಕೆಂಬ ಆಗ್ರಹ ಬಡಾವಣೆ ಮುಖಂಡರಿಂದ ಕೇಳಿಬಂದಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೋಸ್ಟ್ – ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ FIR
ಹಾವೇರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿಯೊಂದು (Bear) ದಾಳಿ (Attack) ಮಾಡಿದ್ದು, ಪತ್ನಿ ಮಚ್ಚಿನಿಂದ (Machete) ಕರಡಿಯನ್ನು ಹೊಡೆದು ಪತಿ ಹಾಗೂ ಸಹೋದರನನ್ನು ರಕ್ಷಿಸಿದ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಜಿಲ್ಲೆಯ ಶಿಗ್ಗಾಂವಿ (Shiggavi) ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಘಟನೆ ನಡೆದಿದ್ದು, ಕರಡಿ ದಾಳಿಯಿಂದಾಗಿ ರೈತ ಬಸೀರಸಾಬ್ (45) ಹಾಗೂ ರಜಾಕ್ (30) ಗಾಯಗೊಂಡಿದ್ದಾರೆ. ಇವರಿಬ್ಬರೂ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿ ಮಾಡಿದೆ. ಕರಡಿ ಇಬ್ಬರ ಮೇಲೂ ದಾಳಿ ನಡೆಸಿದ್ದು, ಪತಿ ಬಸೀರಸಾಬ್ ಸವದತ್ತಿ ಜೀವ ಉಳಿಸುವ ಸಲುವಾಗಿ ಪತ್ನಿ ಸಬೀನಾ ಮಚ್ಚಿನಿಂದ 3 ಬಾರಿ ಕರಡಿಯ ಮೇಲೆ ಹೊಡೆದಿದ್ದಾಳೆ. ಇದನ್ನೂ ಓದಿ: ಪತ್ನಿಯನ್ನು ರಕ್ಷಿಸಲು ನೀರಿಗೆ ಧುಮುಕಿದ ಪತಿಯೂ ಸಾವು!
ಇದರಿಂದ ಗಾಯಗೊಂಡ ಕರಡಿ ಇಬ್ಬರನ್ನೂ ಅಲ್ಲಿಯೇ ಬಿಟ್ಟು ಬೇರೆ ಜಮೀನಿಗೆ ತೆರಳಿ ಅಲ್ಲಿ ಪ್ರಾಣ ಬಿಟ್ಟಿದೆ. ಕರಡಿ ದಾಳಿಯಿಂದ ಗಾಯಗೊಂಡ ಇಬ್ಬರು ಹುಬ್ಬಳ್ಳಿಯ (Hubballi) ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೂ ಮುಖ, ಕೈ ಹಾಗೂ ದೇಹದ ಭಾಗಗಳಿಗೆ ಗಾಯಗಳಾಗಿವೆ. ದಾಳಿಯ ವೇಳೆ ಸಬೀನಾ ತನ್ನ ದಿಟ್ಟತನವನ್ನು ಪ್ರದರ್ಶಿಸಿ ಕರಡಿಯೊಂದಿಗೆ ಹೋರಾಡಿ ತನ್ನ ಪತ್ನಿ ಹಾಗೂ ಸಹೋದರನನ್ನು ಕಾಪಾಡಿಕೊಂಡಿದ್ದಾಳೆ. ಇದನ್ನೂ ಓದಿ: ಹೆಂಡತಿ ಮೊಬೈಲ್‌ನಲ್ಲಿ ಮಾತಾಡ್ತಾಳೆ ಅಂತ ಮಕ್ಕಳನ್ನು ಕೊಂದ ಪಾಪಿ ತಂದೆ
ತುಮಕೂರು: ಸಪೋಟ ಹಣ್ಣಿನ (Sapota Fruit) ಮರಕ್ಕೆ ಕಟ್ಟಿದ ತಂತಿಗೆ ಸಿಕ್ಕಿಕೊಂಡು ಗಾಯಗೊಂಡಿದ್ದ ಕರಡಿಯನ್ನು ಅರಣ್ಯಾಧಿಕಾರಿಗಳು ಅರವಳಿಕೆ ನೀಡಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಾಡಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂರು ವರ್ಷದ ಗಂಡು ಕರಡಿಯನ್ನು ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಸಂರಕ್ಷಿಸಿದ್ದಾರೆ. ತಾಲೂಕಿನ ಕಾಡಬೋರನಹಳ್ಳಿ ಗ್ರಾಮದ ರಾಜಣ್ಣ ಅವರ ಜಮೀನಿನಲ್ಲಿ ಸಪೋಟ ಸೇರಿದಂತೆ ವಿವಿಧ ಹಣ್ಣಿನ ಮರಗಳು ಬೆಳೆದಿವೆ. ಹೀಗಾಗಿ ಮರಕ್ಕೆ ತಂತಿಯನ್ನು ಕಟ್ಟಲಾಗಿತ್ತು. ಈ ವೇಳೆ ಆಹಾರಕ್ಕಾಗಿ ಅರಸಿ ಬಂದ ಕರಡಿ (Bear) ಮರ ಹತ್ತುವ ವೇಳೆ ಮರಕ್ಕೆ ಕಟ್ಟಿದ ತಂತಿಗೆ ಸಿಕ್ಕಿ ಹಾಕಿಕೊಂಡು ಕೆಳಕ್ಕೆ ಇಳಿಯಲಾಗದೇ ಜೋತು ಬಿದ್ದಿತು. ಇದನ್ನೂ ಓದಿ: ಜೇಬು ಸುಡ್ತಿದೆ ಬೆಲೆ ಏರಿಕೆ – ದುಬಾರಿಯಾಯ್ತು ಮೊಟ್ಟೆ
ಈ ಸಂಬಂಧ ಗ್ರಾಮಸ್ಥರು ದೂರವಾಣಿ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರ್, ಬನ್ನೇರುಘಟ್ಟ ವನ್ಯ ಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಉಮಾಶಂಕರ್ ಕರಡಿಗೆ ಅರವಳಿಕೆ ನೀಡಿ ಅದನ್ನು ರಕ್ಷಿಸಿ, ಆರೋಗ್ಯ ತಪಾಸಣೆ ಮಾಡಿ ಸೂಕ್ತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಿತ್ರದುರ್ಗ: ಜನರಿಗೆ ಬಾರಿ ಉಪಟಳ ನೀಡ್ತಿದ್ದ ಏಳು ವರ್ಷದ ಕರಡಿ (Bear) ಕೊನೆಗೂ ಸೆರೆಯಾಗಿದೆ.
ಚಿತ್ರದುರ್ಗ (Chitradurga) ಜಿಲ್ಲೆ ಹೊಸದುರ್ಗ (Hosadurga) ಪಟ್ಟಣದ ಬಳಿ ಕರಡಿ ಸೆರೆಯಾಗಿದೆ. ಕಳೆದ ಒಂದು ವಾರದಿಂದ ಹೊಸದುರ್ಗ ಪಟ್ಟಣದಲ್ಲಿ ಕರಡಿ ಉಪಟಳ ನೀಡುತ್ತಿದ್ದು, ಬೆಳಗ್ಗಿನ ಜಾವ ಹಾಗೂ ಸಂಜೆ ವೇಳೆ ಜನವಸತಿ ಪ್ರದೇಶಕ್ಕೆ ಧಾವಿಸಿ ಭಾರೀ ಆತಂಕ ಸೃಷ್ಟಿಸಿತ್ತು.
ಹೊಸದುರ್ಗದ ಸಾರಿಗೆ ಬಸ್ ನಿಲ್ದಾಣ ಬಳಿ ಕಾಣಿಸಿಕೊಂಡಿದ್ದ ಕರಡಿಯನ್ನು ಕಂಡಿದ್ದ ಹೊಸದುರ್ಗ ಪಟ್ಟಣದ ಜನರು ಬಾರಿ ಭಯ ಭೀತರಾಗಿದ್ದರು. ಬಳಿಕ ಜನರ ಗದ್ದಲದಿಂದ ಗಾಬರಿಗೊಂಡು ಹೊಸದುರ್ಗ ಹೊರವಲಯದಲ್ಲಿನ ಪೊದೆಯಲ್ಲಿ ಸೇರಿಕೊಂಡಿದ್ದ ಕರಡಿಗೆ ಅರವಳಿಕೆ ಮದ್ದು ನೀಡಿ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಗಾಬರಿಯಿಂದ ಪೊದೆ ಸೇರಿದ್ದ ಕರಡಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದ ಅಧಿಕಾರಿಗಳು ಅದನ್ನು ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಪ್ರಾಣಿಸಂಗ್ರಹಾಲಯಕ್ಕೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಚೆನ್ನೈ: ಕರಡಿ ದಾಳಿಯಿಂದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ (Tamil Nadu) ತೆಂಕಶಿ ಜಿಲ್ಲೆಯಲ್ಲಿ (Tenkasi district) ನಡೆದಿದೆ.
ಮಸಾಲಾ ಪೊಟ್ಟಣಗಳನ್ನು ಹೊತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಶಿವಶೈಲಂನಿಂದ ಪೇಠನ್‍ಪಿಳ್ಳೈಗೆ ಅರಣ್ಯ ಪ್ರದೇಶದ ಮಧ್ಯೆ ತೆರಳುತ್ತಿದ್ದ ವೇಳೆ ಕರುತಿಲಿಂಗಪುರದ ವೈಗುಂಡಮಣಿ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಇದ್ದಕ್ಕಿದ್ದಂತೆ ಪೊದೆಯಿಂದ ಜಿಗಿದ ಕರಡಿ, ಏಕಾಏಕಿ ವ್ಯಕ್ತಿ ಮೇಲೆ ದಾಳಿ ನಡೆಸಿದೆ. ಅಲ್ಲದೇ ವ್ಯಕ್ತಿಯನ್ನು ಕೆಳಗೆ ಮಲಗಿಸಿಕೊಂಡು ಕಚ್ಚಲು ಪ್ರಾರಂಭಿಸಿದೆ. ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆ ಧ್ವಂಸ – ಮಹಿಳೆಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
ಈ ವೇಳೆ ಅರಣ್ಯ ಪ್ರದೇಶದಲ್ಲಿಯೇ ಸಂಚರಿಸುತ್ತಿದ್ದ ಗ್ರಾಮಸ್ಥರು ವ್ಯಕ್ತಿಯನ್ನು ರಕ್ಷಿಸಲು ಕರಡಿ ಮೇಲೆ ಕಲ್ಲು ಎಸೆದಿದ್ದಾರೆ. ಹೀಗಾಗಿದ್ದರೂ ಕರಡಿ ಒಂದು ಚೂರು ಕೂಡ ಕದಲಲಿಲ್ಲ. ನಂತರ ಇನ್ನಷ್ಟು ಜನ ಸೇರುತ್ತಿದ್ದಂತೆಯೇ ಗಾಬರಿಗೊಂಡ ಕರಡಿ ಜನರ ಗುಂಪಿನ ಮಧ್ಯೆ ಓಡುತ್ತಾ ನಾಗೇಂದ್ರನ್ ಮತ್ತು ಸೈಲೇಂದ್ರ ಎಂಬ ಇಬ್ಬರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
ತೆಲಂಗಾಣ: ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ರೈತರು ತಮ್ಮ ಬೆಳೆಯನ್ನು ಮಂಗಗಳು ಮತ್ತು ಕಾಡುಹಂದಿಗಳಿಂದ ರಕ್ಷಿಸಲು ವಿಶಿಷ್ಟ ಉಪಾಯವೊಂದನ್ನು ಮಾಡಿದ್ದಾರೆ. ವ್ಯಕ್ತಿಯೊಬ್ಬನಿಗೆ ಕರಡಿ ವೇಷ ಹಾಕಿ ತಮ್ಮ ಹೊಲದಲ್ಲಿ ನಿಲ್ಲಿಸುವ ಮೂಲಕ ಅವರು ಕೋತಿಗಳಿಂದ ಬೆಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ.
ತೆಲಂಗಾಣದ ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಕೋತಿಗಳು ಮತ್ತು ಕಾಡುಹಂದಿಗಳು ಬೆಳೆ ಹಾನಿ ಮಾಡುವುದನ್ನು ತಡೆಯಲು ಕರಡಿಯ ವೇಷ ಧರಿಸಿ ಹೊಲದಲ್ಲಿ ಓಡಾಡಲು ವ್ಯಕ್ತಿಯನ್ನು ನೇಮಿಸಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೆ, ಕರಡಿ ವೇಷ ಧರಿಸಿ ಓಡಾಡುವ ವ್ಯಕ್ತಿಗೆ ದಿನಕ್ಕೆ 500 ರೂ. ವೇತನವನ್ನೂ ನಿಗದಿ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಹೊಲದ ಬೆಳೆಯನ್ನು ಸುರಕ್ಷಿತವಾಗಿಡಲು ವ್ಯಕ್ತಿಯೊಬ್ಬ ದಿನವಿಡೀ ಹೊಲದಲ್ಲಿ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೆಲಸಕ್ಕಾಗಿ ಅವರಿಗೆ ದಿನದ ವೇತನ 500 ರೂಪಾಯಿ ನೀಡಲಾಗುತ್ತಿದೆ. ಸದ್ಯ ಜಾಲತಾಣದಲ್ಲಿ ಈ ಮಾಹಿತಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಏನೇ ಆದರೂ ಪ್ರಾಣಿಗಳನ್ನು ನಿಯಂತ್ರಣಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಎತ್ತಿದರೆ, ಇನ್ನೂ ಕೆಲವರು ಕರಡಿ ವೇಷ ಹಾಕಿಕೊಳ್ಳಲು ತಿಂಗಳಿಗೆ 15,000 ರೂ. ಸಂಬಳವೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
₹15,000 per month to wear a costume & roam the fields to keep monkey & wild boars away. https://t.co/BmcCKAnlTT
ತಾಷ್ಕೆಂಟ್: ರಕ್ಷಿಸಿ ಸಲಹಬೇಕಾದ ತಾಯಿಯೇ ಪ್ರಾಣ ತೆಗೆದುಕೊಳ್ಳಲು ನಿಂತರೆ ಮಕ್ಕಳ ಗತಿ ಏನು? ಇಲ್ಲೊಬ್ಬ ತಾಯಿ ತನ್ನ 3 ವರ್ಷದ ಮಗಳನ್ನು ಕರಡಿ ಬಾಯಿಗೆ ನೂಕಿದ ಆಘಾತಕಾರಿಯಾದ ಘಟನೆ ಉಜ್ಬೇಕಿಸ್ತಾನ್‍ನಲ್ಲಿ ನಡೆದಿದೆ.
ನಡೆದಿದ್ದೇನು?
ಉಜ್ಬೇಕಿಸ್ತಾನ್‍ನಲ್ಲಿ ತಾಷ್ಕೆಂಟ್ ಮೃಗಾಲಯಕ್ಕೆ ತಾಯಿ ತನ್ನ ಮಗಳೊಂದಿಗೆ ಬಂದಿದ್ದಾಳೆ. ಈ ವೇಳೆ ಬಾಲಕಿ ಕರಡಿ ನೋಡುತ್ತ ಕಂಬಿ ಹಿಡಿದು ನಿಂತಿರುತ್ತಾಳೆ. ಆಗ ತಾಯಿ ಹಿಂದೆಯಿಂದ ಬಾಲಕಿಯ ಕೈಯನ್ನು ಕಂಬಿಯಿಂದ ಬಿಡಿಸಿ ಕರಡಿ ಇದ್ದ ಜಾಗಕ್ಕೆ ನೂಕಿದ್ದಾಳೆ. 3 ವರ್ಷದ ಬಾಲಕಿ 16 ಅಡಿಯಿಂದ ಕೆಳಗೆ ಕರಡಿ ಇದ್ದ ಜಾಗಕ್ಕೆ ಬೀಳುತ್ತಾಳೆ. ಆಗ ಕರಡಿ ಬಾಲಕಿ ಬಿದ್ದ ಜಾಗಕ್ಕೆ ಓಡಿ ಹೋಗುತ್ತೆ.
VIEWER DISCRETION IS ADVISED!
CCTV footage shows a woman throwing her daughter into a bear's enclosure in Uzbekistan's Tashkent Zoo.
The toddler was not harmed by the bear, but she was hospitalized with injuries due to the fall.
ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರೈಲಿಂಗ್‍ನಿಂದ ಸುಮಾರು 16 ಅಡಿ ಕೆಳಗೆ ಬಿದ್ದ ಬಾಲಕಿಯನ್ನು ಮೃಗಾಲಯದ ಸಿಬ್ಬಂದಿ ರಕ್ಷಿಸುತ್ತಿರುವುದನ್ನು ನೋಡಬಹುದು. ಗಾಯವಾಗಿದ್ದ ಪರಿಣಾಮ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆಗೆ ಯತ್ನಿಸಿದ ಮಹಿಳೆ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭುವನೇಶ್ವರ: ಕರಡಿಯೊಂದು ಆಹಾರ ಹುಡುಕುತ್ತಾ ಗ್ರಾಮಕ್ಕೆ ಬಂದು, ಗ್ರಾಮಸ್ಥರನ್ನು ಕಂಡು ಹೆದರಿ ಮರ ಏರಿ ಕುಳಿತಿದ್ದ ಘಟನೆ ಒಡಿಶಾದ ನಬ್ರಂಗ್ಪುರ ಜಿಲ್ಲೆಯ ನಾಯಕ್‌ಗುಡ ಗ್ರಾಮದಲ್ಲಿ ನಡೆದಿದೆ. ಸತತ 54 ಗಂಟೆಗಳ ಕಾಲ ಮರದಲ್ಲಿಯೇ ಹೆದರಿ ಕುಳಿತಿದ್ದ ಕರಡಿಯನ್ನು ಬಳಿಕ ರಕ್ಷಣೆ ಮಾಡಲಾಗಿದೆ.
ಮರವೇರಿ ಕುಳಿತಿದ್ದ ಕರಡಿಯ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕರಡಿಯನ್ನು ಕೆಳಗೆ ಇಳಿಸಲು ಶತಪ್ರಯತ್ನ ಪಟ್ಟಿದ್ದಾರೆ. 1 ದಿನದವರೆಗೆ ಕರಡಿಯನ್ನು ಕೆಳಗೆ ಇಳಿಸಲು ಪ್ರಯತ್ನಪಟ್ಟ 10 ಮಂದಿ ಅರಣ್ಯ ತಂಡ ಗ್ರಾಮಸ್ಥರನ್ನು ಅಲ್ಲಿಂದ ದೂರ ಕಳುಹಿಸುವುದರಿಂದ ಹಿಡಿದು ಬಗೆಬಗೆಯ ಭಕ್ಷ್ಯಗಳನ್ನು ಇರಿಸಿ ಅದನ್ನು ಕೆಳಗೆ ತರಲು ಪ್ರಯತ್ನ ಪಟ್ಟಿದ್ದಾರೆ. ಇದನ್ನೂ ಓದಿ: ಆಹಾರಕ್ಕಾಗಿ ನಾಡಿಗೆ ಬಂತು ಕಾಡು ಕರಡಿ
ಹಲವು ಪ್ರಯತ್ನಗಳ ಬಳಿಕ ಅರಣ್ಯಾಧಿಕಾರಿಗಳು ಕೊನೆಗೂ 54 ಗಂಟೆಗಳ ಬಳಿಕ ಕರಡಿಯನ್ನು ಕೆಳಗೆ ಇಳಿಸುವಲ್ಲಿ ಸಫಲರಾಗಿದ್ದಾರೆ. 2 ದಿನಗಳಿಂದ ಏನನ್ನೂ ತಿಂದಿರದ ಕರಡಿ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದು, ಅದಕ್ಕೆ ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ನ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಗೌರವ
ಕಾಡು ಕರಡಿಗಳು ಆಹಾರಕ್ಕಾಗಿ ಹಳ್ಳಿಗಳಿಗೆ ನುಗ್ಗಿ, ಜನರನ್ನು ಭಯಭೀತಗೊಳಿಸುತ್ತಿರುವ ಘಟನೆ ಆಗಾಗ ನಡೆಯುತ್ತಲೇ ಇದೆ. ಅವು ಜನವಸತಿ ಪ್ರದೇಶಗಳಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಭುವನೇಶ್ವರ: ಕಾಡು ಕರಡಿಗಳೆರಡು ಆಹಾರಕ್ಕಾಗಿ ನಾಡಿಗೆ ನುಗ್ಗಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿರುವ ಘಟನೆ ಒಡಿಶಾದ ನಬ್ರಂಗ್ಪುರ ಜಿಲ್ಲೆಯ ಉಮರ್ ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ನಡೆದಿದೆ. ಕರಡಿಗಳು ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.