Tag: Beant Singh

  • ಮರಣದಂಡನೆಗೆ ಗುರಿಯಾದ ರಾಜೋನಾ ಕ್ಷಮಾದಾನ ಅರ್ಜಿ 2 ವಾರದಲ್ಲೇ ಇತ್ಯರ್ಥಗೊಳಿಸಿ: ಸುಪ್ರೀಂ

    ಮರಣದಂಡನೆಗೆ ಗುರಿಯಾದ ರಾಜೋನಾ ಕ್ಷಮಾದಾನ ಅರ್ಜಿ 2 ವಾರದಲ್ಲೇ ಇತ್ಯರ್ಥಗೊಳಿಸಿ: ಸುಪ್ರೀಂ

    ನವದೆಹಲಿ: ಪಂಜಾಬ್‌ನ (Punjab) ಮಾಜಿ ಸಿಎಂ ಬಿಯಾಂತ್ ಸಿಂಗ್ (Beant Singh) ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಬಲ್ವಂತ್ ಸಿಂಗ್ ರಾಜೋನಾ (Balwant Singh Rajoana) ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ಕೂಡಲೇ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ (Supreme Court), ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಸೂಚಿಸಿದೆ.

    ಬಲ್ವಂತ್ ಸಿಂಗ್ ರಾಜೋನಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಮಂಡಿಸಿ, ಎರಡು ವಾರಗಳಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸಬೇಕು ಎಂದು ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಕೋರ್ಟ್‌ ನಿರ್ದೇಶಿಸಿದೆ.

    90ರ ದಶಕದಲ್ಲಿ ಪಂಜಾಬ್‌ನಲ್ಲಿ ಖಾಲಿಸ್ತಾನಿ ಉಗ್ರರ ಉಪಟಳ ಹೆಚ್ಚಾಗಿದ್ದಾಗ, ಕಡಿವಾಣ ಹಾಕಲು ಬಿಯಾಂತ್ ಸಿಂಗ್ ಸರ್ಕಾರ ದಿಟ್ಟ ಕಾರ್ಯಾಚರಣೆ ಕೈಗೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ 1995ರ ಆಗಸ್ಟ್ 31ರಂದು ಪಂಜಾಬ್ ಸಚಿವಾಲಯದ ಹೊರಭಾಗದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಬಿಯಾಂತ್ ಸೇರಿದಂತೆ 16 ಜನರು ಮೃತಪಟ್ಟಿದ್ದರು.

    ಈ ಪ್ರಕರಣದಲ್ಲಿ 2007ರಲ್ಲಿಯೇ ಬಲ್ವಂತ್ ಸಿಂಗ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಆತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯು ಹಲವು ವರ್ಷಗಳಿಂದ ಇತ್ಯರ್ಥಗೊಂಡಿಲ್ಲ. ಹಾಗಾಗಿ, ಮಾನವೀಯ ನೆಲಗಟ್ಟಿನ ಮೇಲೆ ತನಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. 2023ರ ಮೇ 3ರಂದು ವಿಚಾರಣೆ ನಡೆಸಿದ್ದ ಕೋರ್ಟ್‌, ಬಲ್ವಂತ್ ಸಿಂಗ್ ಅರ್ಜಿಯನ್ನು ವಜಾಗೊಳಿಸಿತ್ತು.

  • ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

    ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

    ಚಂಡೀಗಢ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಹಂತಕನ ಪುತ್ರನೊಬ್ಬ ಪಂಜಾಬ್‌ನ (Punjab) ಸಂಸತ್ ಚುನಾವಣೆಯಲ್ಲಿ ಫರೀದ್‌ಕೋಟ್ (ಮೀಸಲು) ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

    12ನೇ ತರಗತಿಯಲ್ಲಿ ಡ್ರಾಪ್ಔಟ್ ಆಗಿದ್ದ ಸರಬ್ಜಿತ್ ಸಿಂಗ್ ಖಾಲ್ಸಾ (45) ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇವರು ದಿವಂಗತ ಪ್ರಧಾನಿಯ ಇಬ್ಬರು ಹಂತಕರಲ್ಲಿ ಒಬ್ಬನಾದ ಬಿಯಾಂತ್ ಸಿಂಗ್ (Beant Singh) ಮಗ. ಇದನ್ನೂ ಓದಿ: ನಕ್ಸಲ್ ಪೀಡಿತ ಭಾಗಗಳಲ್ಲಿ ಮೊದಲ ಬಾರಿಗೆ ಚುನಾವಣೆ ಸಿದ್ಧತೆ – 12 ಮಾವೋವಾದಿಗಳು ಶರಣು

    2014 ಮತ್ತು 2009 ರಲ್ಲಿ ಸರಬ್ಜಿತ್ ಸಿಂಗ್ ಖಾಲ್ಸಾ (Sarabjit Singh Khalsa) ಅವರು ಅನುಕ್ರಮವಾಗಿ ಫತೇಘರ್ ಸಾಹಿಬ್ (ಮೀಸಲು) ಮತ್ತು ಬಟಿಂಡಾ ಕ್ಷೇತ್ರಗಳಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 2019 ರಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿದ್ದರು.

    2014ರಲ್ಲಿ ಸರಬ್ಜಿತ್, ಚುನಾವಣಾ ಅಫಿಡವಿಟ್‌ನಲ್ಲಿ 3.5 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅವರ ತಾಯಿ ಬಿಮಲ್ ಕೌರ್ (ರೋಪರ್ ಕ್ಷೇತ್ರ) ಮತ್ತು ಅವರ ಅಜ್ಜ ಸುಚಾ ಸಿಂಗ್ (ಬಟಿಂಡಾ ಕ್ಷೇತ್ರ) 1989 ರಲ್ಲಿ ಸಂಸದರಾಗಿದ್ದರು. ಇದನ್ನೂ ಓದಿ: ರಕ್ತ ಚೆಲ್ಲಲು ಸಿದ್ಧ.. ದೇಶದಲ್ಲಿ ಸಿಎಎ, ಎನ್‌ಆರ್‌ಸಿ, ಯುಸಿಸಿ ಜಾರಿ ಒಪ್ಪಲ್ಲ: ಮಮತಾ ಬ್ಯಾನರ್ಜಿ

    1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ನಿವಾಸದಲ್ಲಿ ಅಂಗರಕ್ಷಕರಾಗಿದ್ದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್, ಪ್ರಧಾನಿಯನ್ನು ಗುಂಡಿಕ್ಕಿ ಕೊಂದಿದ್ದರು.