Tag: beach

  • ಬಿಕಿನಿ ಎಐ ಫೋಟೋ ವೈರಲ್ ಮಾಡಿದವ್ರಿಗೆ ಸಾಯಿಪಲ್ಲವಿ ಟಾಂಗ್

    ಬಿಕಿನಿ ಎಐ ಫೋಟೋ ವೈರಲ್ ಮಾಡಿದವ್ರಿಗೆ ಸಾಯಿಪಲ್ಲವಿ ಟಾಂಗ್

    ತ್ತೀಚೆಗೆ ನಟಿ ಸಾಯಿಪಲ್ಲವಿ (Sai Pallavi) ಬಿಕಿನಿ ಧರಿಸಿರುವ ಫೋಟೋ ವೈರಲ್ ಆಗಿತ್ತು. ಆರಂಭದಲ್ಲಿ ಅಸಲಿಯಾ ನಕಲಿಯಾ ಎಂಬ ಹುಡುಕಾಟದಲ್ಲಿದ್ದ ಫ್ಯಾನ್ಸ್‌ ಗೆ ಇದು ಎಐ ಫೋಟೋ ಅನ್ನೋದು ಬಳಿಕ ತಿಳಿದುಬಂತು. ಇದೀಗ ಇದೇ ವೈರಲ್ ಫೋಟೋ ವಿಚಾರಕ್ಕೆ ಸಾಯಿಪಲ್ಲವಿ ಪರೋಕ್ಷವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರವಾಸದ ಅಷ್ಟೂ ವೀಡಿಯೋ ಫೋಟೋಗಳನ್ನ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಇಲ್ಲಿ ಕಾಣಿಸುವ ಫೋಟೋಗಳು ಎಐ ಫೋಟೋಗಳಲ್ಲ ಎಂದು ಹೇಳುವ ಮೂಲಕ ವೈರಲ್ ಮಾಡಿರೋ ಎಐ ಫೋಟೋ ದುರುಳರಿಗೆ ಟಾಂಗ್ ಕೊಟ್ಟಿದ್ದಾರೆ.

    ಸಾಯಿಪಲ್ಲವಿ ಇತ್ತೀಚೆಗೆ ತಂಗಿ ಪೂಜಾ ಹಾಗೂ ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳಿದ್ರು. ಅಲ್ಲಿನ ಒಂದಷ್ಟು ಫೋಟೋಗಳನ್ನ ಪೂಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಕ್ಕ ಸಾಯಿಪಲ್ಲವಿ ಜೊತೆ ಪೂಜಾ ಬೀಚ್‌ನಲ್ಲಿ ಸಮಯ ಕಳೆದಿರುವ ಫೋಟೋಗಳನ್ನ ಹಂಚಿಕೊಂಡಿದ್ದು ಅಕ್ಕ, ತಂಗಿ ಇಬ್ಬರೂ ಈಜುಡುಗೆ ಧರಿಸಿರುವ ಫೋಟೋವನ್ನೂ ಹಂಚಿಕೊಂಡಿದ್ದರು. ಆದರೆ ಈಜುಡುಗೆಗೂ ಬಿಕಿನಿಗೂ ವ್ಯತ್ಯಾಸ ಇರುತ್ತೆ. ಇದೇ ಫೋಟೋಗಳನ್ನ ಇಟ್ಟುಕೊಂಡು ಸಾಯಿಪಲ್ಲವಿ ಬಿಕಿನಿ ಧರಿಸಿ ನಿಂತಿರುವಂತೆ ಎಐ ಫೋಟೋಗಳನ್ನ ಜನರೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು.

     

    View this post on Instagram

     

    A post shared by Sai Pallavi (@saipallavi.senthamarai)

    ಸಾಯಿಪಲ್ಲವಿ ಇದುವರೆಗೂ ಹೀಗೆ ಯಾವತ್ತೂ ಕಾಣಿಸ್ಕೊಂಡಿಲ್ಲ. ಹೀಗಾಗಿ ಕೆಲವರ ಅಸಮಾಧಾನಕ್ಕೆ ಕಾರಣವಾಗಿದ್ದರು. ಜೊತೆಗೆ ಸಾಯಿಪಲ್ಲವಿ ರಾಮಾಯಣದಲ್ಲಿ ಸೀತೆ ಪಾತ್ರ ಮಾಡುತ್ತಿರುವ ಬಗ್ಗೆಯೂ ಅದೇ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗಿತ್ತು. ತಂತ್ರಜ್ಞಾನದ ದುರುಪಯೋಗಕ್ಕೆ ಬೇಸರಿಸಿಕೊಂಡ ಸಾಯಿಪಲ್ಲವಿ ಇದೀಗ ಏನನ್ನೂ ಹೇಳದೆ ಪ್ರವಾಸದ ನಿಜವಾದ ಚಿತ್ರಣ ಹೇಗಿತ್ತು ಅನ್ನೋದನ್ನ ಎಳೆ ಎಳೆಯಾಗಿ ದರ್ಶನ ಮಾಡಿಸಿದ್ದಾರೆ. ಇದ್ಯಾವ್ದೂ ಎಐ ಫೋಟೋಗಳಲ್ಲ ಅನ್ನೋದ್ರ ಮೂಲಕ ಸುಳ್ಳು ವದಂತಿ ಹಬ್ಬಿಸಿ ಸಾಯಿಪಲ್ಲವಿ ಬಗ್ಗೆ ಕೀಳರಿಮೆ ಮೂಡಿಸುವ ಪ್ರಯತ್ನದಲ್ಲಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ.

  • ಸ್ಪೇನ್‌ನಲ್ಲಿ ಬೀಚ್‌ಗಳನ್ನು ಬಂದ್‌ ಮಾಡಿಸಿದ ನೀಲಿ ಡ್ರ್ಯಾಗನ್‌ – ಏನಿದರ ವಿಶೇಷ? 

    ಸ್ಪೇನ್‌ನಲ್ಲಿ ಬೀಚ್‌ಗಳನ್ನು ಬಂದ್‌ ಮಾಡಿಸಿದ ನೀಲಿ ಡ್ರ್ಯಾಗನ್‌ – ಏನಿದರ ವಿಶೇಷ? 

    ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ..! ಈ ಡೈಲಾಗ್‌ ʻಕಾಂತಾರʼ ಸಿನಿಮಾದಲ್ಲಿ ಕೇಳಿರುತ್ತೀರಿ. ಅದೇ ರೀತಿ ಮಲೆನಾಡಲ್ಲಿಒಂದು ರೀತಿ ಸೊಪ್ಪು ಇರುತ್ತೆ.. ಅದನ್ನ ಮುಟ್ಟಿದ್ರೆ ಮೈ ಕೈಯೆಲ್ಲ ತುರಿಕೆ, ಅಲರ್ಜಿ ಆಗುತ್ತೆ. ಈಗ ಸ್ಪೇನ್‌ನ (Spain) ಕಡಲ ತೀರಕ್ಕೆ ಅಂತಹದ್ದೇ ಒಂದು ಸಮಸ್ಯೆ ಎದುರಾಗಿದೆ. ಇಲ್ಲಿನ  ಕಡಲ ತೀರಕ್ಕೆ (Beach) ಪುಟ್ಟ ಡ್ರ್ಯಾಗನ್‌ಗಳು (Blue Dragons) ದಾಳಿ  ಮಾಡಿ, ಬೀಚ್‌ಗಳನ್ನು ಮುಚ್ಚುವಂತೆ ಮಾಡಿವೆ. ಈ ಪುಟ್ಟ ನೀಲಿ ಡ್ರ್ಯಾಗನ್‌ಗಳು ನೋಡಲು ಸುಂದರವಾಗಿವೆ. ಹಾಗಂತ ಮುಟ್ಟಲು ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಅಂದ ಹಾಗೆ ಈ ಪುಟ್ಟ ದಾಳಿಕೋರರು ಯಾರು? ಇವುಗಳ ವಿಶೇಷ ಏನು? ಎಂಬುದನ್ನ ಇಲ್ಲಿ ವಿವರಿಸಲಾಗಿದೆ. 

    ಏನಿದು ನೀಲಿ ಡ್ರ್ಯಾಗನ್‌? 
    ಕಡಲ ಸೌಂದರ್ಯ ಹೆಚ್ಚಿಸುವ ನೀಲಿ ಅಪ್ಸರೆಯರು ಮೆಡಿಟರೇನಿಯನ್‌ ಸಮುದ್ರದಲ್ಲಿ ಕಾಣಸಿಗುತ್ತವೆ. ಮೇಲಿನಿಂದ ನೋಡಿದಾಗ ಈ ತೇಲುವ ಮೃದಂಗ್ವಿಗಳ (ಗ್ಲಾಕಸ್ ಅಟ್ಲಾಂಟಿಕಸ್) ಬಿಳಿ-ಬೂದು ಬಣ್ಣದ ಹೊಟ್ಟೆ ಕಾಣುವುದಿಲ್ಲ.  ಕೆಳಗಿನಿಂದ, ಅವು ಪ್ರಕಾಶಮಾನವಾದ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತವೆ. ನೀರಿನಲ್ಲಿ ಸಮುದ್ರದ ಬಣ್ಣದ್ಲಲ್ಲೇ ಇರುವುದರಿಂದ ಇವು ಪರಭಕ್ಷಕಗಳಿಂದ ಪಾರಾಗುತ್ತವೆ. ದೂರದಿಂದ ನೋಡಿದರೆ ಸುಂದರವಾಗಿ ಆಕರ್ಷಿಸುವ ಈ ಪುಟ್ಟ (1.2 ಇಂಚು) ಹುಳಗಳು ಮುಟ್ಟಲು ಯೋಗ್ಯವಲ್ಲ!  ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು

    ನೀಲಿ ಡ್ರ್ಯಾಗನ್‌ ಮುಟ್ಟಿದ್ರೆ ಗತಿ ಏನು?
    ಇವುಗಳನ್ನು ಅಕಸ್ಮಾತ್‌ ಮುಟ್ಟಿದ್ರೆ  ಭಾರೀ ಸಂಕಷ್ಟವನ್ನೇ ಅನುಭವಿಸಬೇಕಾಗುತ್ತದೆ. ಅಂದರೆ ಉರಿಯೂತ, ವಾಕರಿಕೆ, ನೋವು, ವಾಂತಿ ಅಥವಾ ತೀವ್ರವಾದ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ.  ಇಷ್ಟೇ ಅಲ್ಲದೇ ಅವು ಚರ್ಮದ ಮೇಲೆ ಗಾಯಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.

    ನೀಲಿ ಡ್ರ್ಯಾಗನ್‌ಗಳು ಪೋರ್ಚುಗೀಸ್ ಮ್ಯಾನ್-ಓ’-ವಾರ್‌ನಂತಹ (ಇದೊಂದು ಬಗೆಯ ಜೆಲ್ಲಿ ಫಿಶ್) ವಿಷಕಾರಿ ಜೀವಿಗಳನ್ನು ತಿನ್ನುತ್ತದೆ. ಈ ಮೂಲಕ ಮ್ಯಾನ್-ಓ’-ವಾರ್‌ನ ವಿಷಕಾರಿ ಅಂಶವನ್ನು ತನ್ನ ದೇಹದಲ್ಲಿ ಸಂಗ್ರಹಿಸಿ, ತನ್ನ ರಕ್ಷಣೆಗೆ ಮತ್ತು ಬೇಟೆಗೆ ಬಳಸುತ್ತದೆ. 

    ಈ ರೀತಿ ಸಂಗ್ರಹಿಸಿಟ್ಟ ವಿಷಕಾರಿ ಅಂಶಗಳನ್ನು ನೀಲಿ ಡ್ರ್ಯಾಗನ್‌ ಬಳಸಿದರೆ, ಮ್ಯಾನ್-ಓ’-ವಾರ್‌ಗಿಂತಲೂ ಮೂರು ಪಟ್ಟು ಹೆಚ್ಚು ತೀವ್ರವಾದ ನೋವು ಉಂಟಾಗಬಹುದು. ಇದು ಎಲ್ಲಾ ಕಡಲ ತೀರದಲ್ಲಿ ಕಂಡು ಬರುವುದಿಲ್ಲ ಎಂಬದು ನೆಮ್ಮದಿಯ ವಿಷಯ. 

    ಮುಟ್ಟಿದ್ರೆ ಏನ್ಮಾಡ್ಬೇಕು?
    ನೀಲಿ ಡ್ರ್ಯಾಗನ್‌ಗಳನ್ನು ಮುಟ್ಟಿದ್ರೆ, ಉಜ್ಜಬಾರದು. ಅವು ತಾಕಿದ ಭಾಗವನ್ನು ಸಮುದ್ರದ ನೀರಿನಿಂದ ತೊಳೆಯಬೇಕು. ಚಿಮುಟ ಅಥವಾ ಕಾರ್ಡ್‌ನಿಂದ ತಾಕಿದ ಜಾಗದಲ್ಲಿರುವ ಅಂಶವನ್ನು ತೆಗೆಯಬೇಕು. ಸಮಸ್ಯೆ ಆದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

    ಸ್ಪೇನ್‌ನಲ್ಲಿ ಕಡಲ ತೀರಕ್ಕೆ ಡ್ರ್ಯಾಗನ್‌ ದಾಳಿ! 
    ಇದೀಗ ಈ ಬ್ಲ್ಯೂ ಡ್ರ್ಯಾಗನ್‌ಗಳು ಸ್ಪೇನ್‌ನ ಸಮುದ್ರ ತೀರಗಳಿಗೆ ಲಗ್ಗೆ ಇಟ್ಟಿವೆ. ಇದರಿಂದ ಬೀಚ್‌ಗಳನ್ನು ಬಂದ್‌ ಮಾಡಲಾಗಿದೆ. ಇಷ್ಟಾದ್ರೂ ಗೊತ್ತಿಲ್ಲದೇ ಹೋಗಿ ಅಪಾಯಕ್ಕೆ ಸಿಲುಕುವ ಪ್ರವಾಸಿಗರ ರಕ್ಷಣೆಗೆ ಅಲ್ಲಲ್ಲಿ ಕೆಂಪು ಧ್ವಜಗಳನ್ನು ನೆಟ್ಟು ʻನೀಲಿʼ ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗುತ್ತಿದೆ. 

    ಆ.24 ರಂದು, ನೀಲಿ ಡ್ರ್ಯಾಗನ್‌ಗಳು ಗಾರ್ಡಮರ್ ಬೀಚ್‌ಗಳಲ್ಲಿ ಪತ್ತೆಯಾಗಿದ್ದವು. ಇದಾದ ಬಳಿಕ ನೀಲಿ ಡ್ರ್ಯಾಗನ್‌ಗಳು ಮರಳಿನ ಮೇಲೆ ಕಾಣಿಸಿಕೊಂಡರೆ ಅವುಗಳನ್ನು ಮುಟ್ಟಬಾರದು ಎಂದು ಸ್ಥಳೀಯ ಪೊಲೀಸರು ಎಚ್ಚರಿಸಿದ್ದರು. 

    ಸದ್ಯ ಈ ನೀಲಿ ಡ್ಯಾಗನ್‌ಗಳ ಹಾವಳಿಯಿಂದ ಸ್ಪೇನ್‌ನ ಡಿಜ್, ಅಲಿಕಾಂಟೆ ಮತ್ತು ಲ್ಯಾಂಜರೋಟ್‌ ಬೀಚ್‌ಗಳನ್ನುಜ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ( ಜನ ನೀಲಿ ಡ್ರ್ಯಾಗನ್‌ಗಳ ಇರುವಿಕೆಯನ್ನು ಕೆಲವು ಪ್ರದೇಶಗಳಲ್ಲಿ ಅಲ್ಲಗಳೆದಿದ್ದು, ಕೆಲವು ಬೀಚ್‌ಗಳನ್ನು ತೆರೆಯಲಾಗಿದೆ.)

    ಸ್ಪೇನ್‌ಗೆ ನೀಲಿ ಡ್ರ್ಯಾಗನ್‌ಗಳು ಲಗ್ಗೆ ಇಟ್ಟಿದ್ದು ಯಾಕೆ? 
    ನೀಲಿ ಡ್ರ್ಯಾಗನ್‌ಗಳು ಅವುಗಳ ವಿಶಿಷ್ಟ ಉಷ್ಣವಲಯದ ಸಮುದ್ರದಿಂದ ಏಕೆ ಸ್ಪೇನ್‌ನಲ್ಲಿ ಕಾಣಿಸಿಕೊಂಡಿವೆ ಎಂಬುದು ತಿಳಿದು ಬಂದಿಲ್ಲ.  ಇದಕ್ಕೆ ಹವಾಮಾನ ಬದಲಾವಣೆ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.  

    ಒಂದು ನೀಲಿ ಡ್ರ್ಯಾಗನ್‌ ತೀರ ಪ್ರದೇಶಗಳಲ್ಲಿ 20-30 ಮೊಟ್ಟೆ ಇಡುತ್ತದೆ. ಈ ಮೂಲಕ ತಮ್ಮ ಸಂತಾನವನ್ನು ಬಹು ಬೇಗ ಹೆಚ್ಚಿಸಿಕೊಳ್ಳುತ್ತವೆ. ಸುಮುದ್ರದ ಸಾವಿರಾರು ಅಡಿಗಳ ಕೆಳಗೆ ಸಹ ಈ ಜೀವಿಗಳು ಕಂಡುಬರುತ್ತವೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಸಹ ನಡೆಯುತ್ತಿದೆ.  

    ನೀಲಿ ಡ್ರ್ಯಾಗನ್‌ ಬಗ್ಗೆ ತಜ್ಞರ ಸಲಹೆ ಏನು? 
    ಈ ನೀಲಿ ಡ್ರ್ಯಾಗನ್‌ಗಳು ಕಂಡು ಬಂದರೆ ಮುಟ್ಟಬಾರದು. ಅವು ದಡದಲ್ಲಿರಲಿ ಅಥವಾ ಎಲ್ಲಾದರೂ ಸಿಕ್ಕಿಬಿದ್ದಿರಲಿ, ರಕ್ಷಣೆ ಮಾಡುವ ಗೋಜಿಗೆ ಹೋಗಬಾರದು. ಅಕಸ್ಮಿಕವಾಗಿ ಮುಟ್ಟಿದರೆ ಉಪ್ಪು ನೀರಿನಿಂದ ತೊಳೆಯಬೇಕು.  ಸ್ಪರ್ಶವಾದ ಜಾಗವನ್ನು ಕೈಯಿಂದ ಮುಟ್ಟದೇ ಸ್ವಚ್ಛಮಾಡಬೇಕು. ಅಲರ್ಜಿ ಮುಂದುವರಿದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

    ಮುಟ್ಟಲೇ ಬೇಕಾದ ಪರಿಸ್ಥತಿ ಬಂದ್ರೆ ಗ್ಲೌಸ್‌ ಹಾಕಿ ಮುಟ್ಟಬೇಕು. ಅವು ಕಂಡು ಬಂದ ಸಮುದ್ರದಲ್ಲಿ ಈಜುವುದು, ಸ್ನಾನ ಮಾಡಬಾರದು. ಅವುಗಳು ಕಾಣಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.  ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು

  • ಕುಂದಾಪುರ | ಪ್ರವಾಸಕ್ಕೆ ಬಂದಿದ್ದ ಬೆಂಗ್ಳೂರಿನ ಮೂವರು ಯುವಕರು ಸಮುದ್ರ ಪಾಲು

    ಕುಂದಾಪುರ | ಪ್ರವಾಸಕ್ಕೆ ಬಂದಿದ್ದ ಬೆಂಗ್ಳೂರಿನ ಮೂವರು ಯುವಕರು ಸಮುದ್ರ ಪಾಲು

    ಕಾರವಾರ: ಬೆಂಗಳೂರಿನಿಂದ (Bengaluru) ಕುಂದಾಪುರಕ್ಕೆ (Kundapura) ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರು ಸಮುದ್ರದ ಪಾಲಾಗಿದ್ದಾರೆ.

    ಕುಂದಾಪುರ ತಾಲೂಕಿನ ಗೋಪಾಡಿ ಚರ್ಕಿಕಡು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಹತ್ತು ಜನ ಯುವಕರು ಬಂದಿದ್ದರು. ಇದರಲ್ಲಿ 7 ಜನ ಜನ ಯುವಕರು ಸಮುದ್ರದ ತೀರದಲ್ಲಿ ಆಟವಾಡುತ್ತಾ ನೀರಿಗೆ ಇಳಿದಿದ್ದರು. ಅಲೆಗಳ ನಾಲ್ವರು ಕೊಚ್ಚಿಹೋಗಿದ್ದರು. ಓರ್ವನನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ಕಾರವಾರ| ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 3ನೇ ಪತ್ನಿಯಿಂದ ಬರ್ಬರ ಹತ್ಯೆಗೀಡಾದ ಪತಿ – ಮೃತದೇಹನ ಕಂಬಳಿಯಲ್ಲಿ ಸುತ್ತಿ ಬಾವಿಗೆ ಎಸೆದ್ರು

  • ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

    ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

    ಬಾಲಿವುಡ್ ನ ಹೆಸರಾಂತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇಂದು ತಮ್ಮ 43ನೇ ಹುಟ್ಟುಹಬ್ಬವನ್ನ ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬವನ್ನು (Priyanka Chopra Birthday) ಆಚರಿಸಿಕೊಳ್ಳುವುದಕ್ಕಾಗಿಯೇ ಅವರು ಪತಿ ಮತ್ತು ಮಗಳ ಜೊತೆ ವಿದೇಶ ಪ್ರಯಾಣ ಬೆಳೆಸಿದ್ದರು. ಸಮುದ್ರ ತೀರದಲ್ಲಿ ಬಿಂದಾಸ್ ಆಗಿ ಕಳೆದಿದ್ದಾರೆ.

    ಪತಿ ಜೊತೆ ಬಿಂದಾಸ್ ಆಗಿ ಕಳೆದಿರುವ ಕ್ಷಣಗಳನ್ನು ಅವರು ವಿಡಿಯೋ ರೂಪದಲ್ಲಿ ಪ್ರಕಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಓಡಿ ಬಂದು ಪತಿಯನ್ನು ಅಪ್ಪಿಕೊಳ್ಳುವುದು, ತುಟಿ ತುಟಿ ಸೇರಿಸಿ ಚುಂಬಿಸುವುದು, ಮಗಳ ಜೊತೆ ಸಮಯ ಕಳೆಯುವುದು ಮತ್ತು ಸಮುದ್ರದಲ್ಲಿ ಡ್ರೈವ್ ಮಾಡಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಾರ್ವತಮ್ಮ ರಾಜ್‌ಕುಮಾರ್ ಕನಸಿನ ಕೂಸಿಗೆ 50 ವರ್ಷ

    ಪ್ರತಿ ವರ್ಷವೂ ಅವರು ತಮ್ಮ ಹುಟ್ಟು ಹಬ್ಬದ ವೇಳೆ ಬೇರೆ ಬೇರೆ ದೇಶಗಳನ್ನು ಸುತ್ತುತ್ತಾ ಇರುತ್ತಾರೆ. ಈ ಬಾರಿಯೂ ಅದನ್ನೇ ಮುಂದುವರೆಸಿದ್ದಾರೆ. ಆ ಕ್ಷಣಗಳನ್ನು ಒಟ್ಟು ಮಾಡಿ, ಫ್ಯಾನ್ಸ್ ಮುಂದೆ ಇಟ್ಟಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಪ್ಲ್ಯಾನ್‌ – ಪ್ರವಾಸಿಗರಿಗೆ ಸಿಗಲಿದೆ ಥ್ರಿಲ್ಲಿಂಗ್‌ ಅನುಭವ

  • ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತ ಉ.ಕನ್ನಡ ಜಿಲ್ಲಾಡಳಿತ – ಪ್ರವಾಸಿಗರ ಸುರಕ್ಷತೆಗೆ ಕಡಲ ತೀರಕ್ಕೆ ವಿಶೇಷ ನಿಯಮ

    ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತ ಉ.ಕನ್ನಡ ಜಿಲ್ಲಾಡಳಿತ – ಪ್ರವಾಸಿಗರ ಸುರಕ್ಷತೆಗೆ ಕಡಲ ತೀರಕ್ಕೆ ವಿಶೇಷ ನಿಯಮ

    ಕಾರವಾರ: ಬೀಚ್‌ನಲ್ಲಿ ಮುಳುಗಿ ವಿದ್ಯಾರ್ಥಿನಿಯರ ಸಾವಿನ ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಪ್ರವಾಸಿಗರ ಸುರಕ್ಷತೆಗಾಗಿ ಕಡಲ ತೀರಕ್ಕೆ ವಿಶೇಷ ನಿಯಮ ಜಾರಿಗೆ ತರಲು ಮುಂದಾಗಿದೆ.

    ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ. ಕಡಲ ತೀರದ ಅಸುರಕ್ಷತೆ ಬಗ್ಗೆ ಮಾಧ್ಯಮದಲ್ಲಿ ಎಷ್ಟೆ ಸುದ್ದಿ ಮಾಡಿದ್ರು ಉತ್ತರ ಕನ್ನಡ (Uttara Kannada) ಜಿಲ್ಲಾಡಳಿತ ಎಚ್ಚೆತ್ಕೊಂಡಿರಲಿಲ್ಲ. ಮೊನ್ನೆ ಕೊಲಾರ ಜಿಲ್ಲೆಯ ಅಮಾಯಕ ನಾಲ್ವರು ವಿದ್ಯಾರ್ಥಿನಿಯರು ಸಾವನಪ್ಪಿದಾಗ, ಜಿಲ್ಲಾ ಮಂತ್ರಿ ಸೇರಿದಂತೆ ಎಲ್ಲರನ್ನೂ ಕೋಲಾರ ಶಾಸಕ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ಕೊಂಡಿರುವ ಉತ್ತರ ಕನ್ನಡ ಜಿಲ್ಲಾಡಳಿತ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಇದನ್ನೂ ಓದಿ: ಮರುಡೇಶ್ವರದಲ್ಲಿ ವಿದ್ಯಾರ್ಥಿನಿಯರ ಸಾವು ಕೇಸ್: ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ

    ಡಿ.11 ರಂದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೊತ್ತುರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಮುರುಡೇಶ್ವರ ಕಡಲ ತೀರದಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದರು. ಇದರ ಬೆನ್ನಲ್ಲೇ ಮುರುಡೇಶ್ವರ ಕಡಲ ತೀರಕ್ಕೆ ಸಾರ್ವಜನಿಕರನ್ನ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಮುರುಡೇಶ್ವರ ಕಡಲ ತೀರ ಈಗ ಫುಲ್ ಖಾಲಿ ಖಾಲಿ ಹೊಡೆಯುತ್ತಿದೆ. ಪದೇ ಪದೇ ಅವಘಡಗಳು ಸಂಭವಿಸಿದಾಗಲೆಲ್ಲ ತಾತ್ಕಾಲಿಕ ಕಡಲ ತೀರ ಕ್ಲೋಸ್ ಮಾಡಿ ಮತ್ತೆ ಯಥಾವತ್ತಾಗಿ ಆರಂಭ ಮಾಡುತ್ತಿದ್ದರು. ಇದರ ಪರಿಣಾಮ ಪ್ರತಿ ಒಂದೆರಡು ತಿಂಗಳಿಗೊಮ್ಮೆ ಒಂದೆರಡು ಪ್ರವಾಸಿಗರು ಸಾವನ್ನಪ್ಪುತ್ತಿದ್ದಾರೆ. ಸದ್ಯ ಪ್ರವಾಸಿಗರ ಸುರಕ್ಷತೆಯ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಪ್ರಮುಖ ಕಡಲ ತೀರಗಳಲ್ಲಿ ಸರ್ವೇ ಮಾಡಿ ಅಪಾಯ ಹೊಂದಿರುವ ಮತ್ತು ಅಪಾಯವಲ್ಲದ ಜಾಗವನ್ನ ಗುರುತಿಸಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

    ವರ್ಷಾಂತ್ಯದ ಹಿನ್ನೆಲೆ ಜಿಲ್ಲೆಯ ಕಡಲ ತೀರ ಅಷ್ಟೆ ಅಲ್ಲ. ಇನ್ನುಳಿದ ಪ್ರವಾಸಿ ತಾಣಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುವ ಸಾಧ್ಯತೆ ಇದೆ. ಹಾಗಾಗಿ, ಕಳೆದ ಹತ್ತು ದಿನಗಳಿಂದ ಸರಣಿ ಸಭೆ ಮಾಡುತ್ತಿರುವ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಸೇರಿದಂತೆ ಕರಾವಳಿ ಕಾವಲು ಪಡೆ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕಂದಾಯ ಇಲಾಖೆ ಹಾಗೂ ಸಂಬಂಧ ಪಟ್ಟ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸೇರಿಸಿ ಒಂದು ಸಮಿತಿ ರಚನೆಗೆ ಮುಂದಾಗಿದ್ದಾರೆ. ಅವರ ಸಲಹೆ ಮೇರೆಗೆ ಆಯಾ ಪ್ರವಾಸಿ ತಾಣಕ್ಕೆ ವಿಶೇಷ ನಿಯಮ ಜಾರಿಗೆ ತಂದು ಪ್ರವಾಸಿಗರ ಸುರಕ್ಷತೆ ಕೈಗೊಳ್ಳಬೇಕೆಂದು ಖಡಕ್ ಸೂಚನೆ ನೀಡಿದ್ಧಾರೆ. ಇದನ್ನೂ ಓದಿ: ಮುರುಡೇಶ್ವರ | ಸಮುದ್ರದಲ್ಲಿ ಆಟವಾಡುತ್ತಿದ್ದ 7 ವಿದ್ಯಾರ್ಥಿನಿಯರು ನೀರುಪಾಲು; ಮೂವರ ರಕ್ಷಣೆ

  • ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ – ಪ್ರವಾಸಿಗರಿಗೆ ಮನವಿ

    ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ – ಪ್ರವಾಸಿಗರಿಗೆ ಮನವಿ

    ಆಂಸ್ಟರ್ಡ್ಯಾಮ್: ದಯವಿಟ್ಟು ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ ಎಂದು ನೆದರ್ಲೆಂಡ್‌ನ (Netherland) ಆಂಸ್ಟರ್ಡ್ಯಾಮ್ ಪಟ್ಟಣ ಪ್ರವಾಸಿಗರಿಗೆ (Tourists) ಮನವಿ ಮಾಡಿದೆ. ಇದೇ ಮೊದಲಬಾರಿಗೆ ನೆದರ್‌ ಲ್ಯಾಂಡ್‌ನ ನಗರವೊಂದು ಬೀಚ್‌ ಮತ್ತು ದಿಬ್ಬಗಳಲ್ಲಿ ಸೆಕ್ಸ್‌ ಮಾಡುವುದನ್ನು ನಿಷೇಧಿಸಿದೆ. ದಕ್ಷಿಣ ನೆದರ್‌ಲ್ಯಾಂಡ್‌ನ ವೀರೆ ಎಂಬ ಪಟ್ಟಣವು No Sex On The Beach (ಬೀಚ್‌ನಲ್ಲಿ ಸೆಕ್ಸ್‌ ಬೇಡ) ಎಂಬ ಅಭಿಯಾನ ಕೈಗೊಂಡಿದೆ.

    ವೀರೆ ಮುನ್ಸಿಪಾಲಿಟಿಯು (Veere Municipality) ಬೀಚ್‌ನಲ್ಲಿ ಸೆಕ್ಸ್‌ ನಿಷೇಧದ ಫಲಕಗಳನ್ನ ಅಳವಡಿಸುವ ಮೂಲಕ ಪ್ರವಾಸಿಗರಿಗೂ ತಿಳಿಸಲಾಗುತ್ತಿದೆ. ವಿಶೇಷವಾಗಿ ಮರಳಿನ ದಿಬ್ಬಗಳಲ್ಲಿ ರತಿಕ್ರೀಡೆಗೆ ಅವಕಾಶವಿಲ್ಲ. ಅವುಗಳನ್ನ ಕಾನೂನುಬದ್ಧಗೊಳಿಸಲಾಗಿದೆ. ಮೀಸಲು ಅರಣ್ಯ ಮತ್ತು ಬೀಚ್‌ಗಳಲ್ಲಿ ಸೆಕ್ಸ್‌ ಮಾಡೋದನ್ನ ತಪ್ಪಿಸಲು ಮೇಲ್ವಿಚಾರಣೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಗುರುವಾರ ವೀರೆ ಮುನ್ಸಿಪಾಲಿಟಿ (Netherland Veere Municipality) ಈ ನಿರ್ಣಯ ಕೈಗೊಂಡಿದ್ದು, ಕಡಲ ತೀರಗಳು, ನೈಸರ್ಗಿಕ ಪ್ರದೇಶಗಳು ಹಾಗೂ ಮರಳಿನ ದಿಬ್ಬಗಳಲ್ಲಿ ಸಾರ್ವಜನಿಕ ಲೈಂಗಿಕತೆಯನ್ನ ನಿಷೇಧಿಸಿದೆ. ಇದನ್ನೂ ಓದಿ: ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ

    ಈ ಕುರಿತು ಪ್ರಕಟಣೆ ನೀಡಿರುವ ವೀರೆ ಪಟ್ಟಣದ ಮೇಯರ್ ಫ್ರೆಡೆರಿಕ್ ಶೌವೆನಾರ್‌, ಸ್ಥಳೀಯ ಸಮುದಾಯಕ್ಕೆ ಈ ಮರಳಿನ ದಿಬ್ಬಗಳು ತುಂಬ ಮಹತ್ವದ್ದಾಗಿವೆ. ಹಾಗಾಗಿ ನೈಸರ್ಗಿಕ ಪರಿಸರ ಹಾನಿಗೊಳಿಸುವಂತಹ ಅನಪೇಕ್ಷಿತ ನಡವಳಿಕೆಯಿಂದ ರಕ್ಷಿಸಬೇಕಾದ ಅಗತ್ಯವಿದೆ. ಪ್ರವಾಸಿಗರ ಸೆಕ್ಸ್ ಚಟುವಟಿಕೆಯು ರಜೆ ಆಸ್ವಾದಿಸಲು ಬರುವ ಇತರರಿಗೂ ತೊಂದರೆಯಾಗಬಹುದು. ಈ ನಿರ್ಧಾರವು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರ ಇನ್ನುಮುಂದೆ ಎಚ್ಚರಿಕೆಗಳನ್ನು ನೀಡುವುದಿಲ್ಲ ಬದಲಿಗೆ, ತ್ವರಿತ ಮೌಖಿಕವಾಗಿ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಎಂಟು ಹೊಸ ಮಾಹಿತಿ ಫಲಕಗಳನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಿದೆ. ಲೈಂಗಿಕ ನಡವಳಿಕೆಯಿಂದ ಬೆತ್ತಲೆ ಸೂರ್ಯ ಸ್ನಾನ ಪ್ರಕ್ರಿಯೆಯನ್ನು ಪ್ರತ್ಯೇಕಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

    ಬೆತ್ತಲೆ ಸೂರ್ಯ ಸ್ನಾನವು ಲೈಂಗಿಕತೆಯಲ್ಲ ಅದು ಸ್ವಾತಂತ್ರ್ಯದ ಭಾವನೆಯನ್ನು ನೀಡುತ್ತದೆ, ಫೋಟೋಶಾಪ್ ಮಾಡದ ನೈಜ, ಬೆತ್ತಲೆ ದೇಹಗಳನ್ನು ನೋಡುವುದು ತುಂಬಾ ಆರೋಗ್ಯಕರ. ಆದರೆ ನಾವು ಹೊರಾಂಗಣದಲ್ಲಿ ಲೈಂಗಿಕತೆಯಿಂದ ದೂರವಿರುತ್ತೇವೆ ಎಂದು ಸಂಘಟನೆಯೊಂದು ತಿಳಿಸಿದೆ.

  • ಕುಡಿದ ಅಮಲಿನಲ್ಲಿ ಜಗಳ- ಸ್ನೇಹಿತನ ಗುಪ್ತಾಂಗವನ್ನೇ ಕತ್ತರಿಸಿದ!

    ಕುಡಿದ ಅಮಲಿನಲ್ಲಿ ಜಗಳ- ಸ್ನೇಹಿತನ ಗುಪ್ತಾಂಗವನ್ನೇ ಕತ್ತರಿಸಿದ!

    ಭುವನೇಶ್ವರ್: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಜಗಳವಾಡಿದ ನಂತರ ತನ್ನ ಸ್ನೇಹಿತನ (Friend) ಗುಪ್ತಾಂಗವನ್ನು ಕತ್ತರಿಸಿದ ಘಟನೆ ಒಡಿಶಾದ (Odisha) ಕೇಂದ್ರಪಾರ ಜಿಲ್ಲೆಯಲ್ಲಿ ನಡೆದಿದೆ.

    ಭಗಬತ್ ದಾಸ್ (30) ಮತ್ತು ಆತನ ಸ್ನೇಹಿತ ಅಕ್ಷಯ್ ರೌತ್ (32) ಪೆಂಥಾ ಬೀಚ್‍ನಲ್ಲಿ (Beach) ಮದ್ಯ ಸೇವಿಸುತ್ತಿದ್ದರು. ಈ ವೇಳೆ ಅವರಿಬ್ಬರ ನಡುವೆ ಮಾರಾಮಾರಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಕ್ಷಯ್ ಅಲ್ಲೇ ಇದ್ದ ಹರಿತವಾದ ಆಯುಧದಿಂದ ಭಗಬತ್ ದಾಸ್‍ನ ಗುಪ್ತಾಂಗವನ್ನು ಕತ್ತರಿಸಿ ಹಾಕಿದ್ದಾನೆ. ಅದಾದ ಬಳಿಕ ಅಕ್ಷಯ್ ಸ್ಥಳದಿಂದ ಓಡಿಹೋಗಿದ್ದಾನೆ.

    crime

    ಇಬ್ಬರು ಸ್ನೇಹಿತರು ಬೀಚ್‍ಗೆ ಹೋಗಲು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದರು. ಪರಾರಿಯಾಗಿರುವ ಅಕ್ಷಯ್‍ಗಾಗಿ ಹುಡುಕಾಟ ನಡೆಸುತ್ತಿರುವಾಗ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಾರ್ಕಳ ಅಖಾಡದಲ್ಲಿ ಮುಟ್ಟಾಳ ಫೈಟ್- ಮುತಾಲಿಕ್ ಪೋಸ್ಟರ್‌ಗೆ ಬಿಜೆಪಿ ಕೌಂಟರ್

    ಘಟನೆಗೆ ಸಂಬಂಧಿಸಿದಂತೆ ಭಗಬತ್‍ನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಘಟನೆಗೆ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೆಖೆ ಅಂತಾ ಮನೆ ಮಹಡಿ ಮೇಲೆ ಹೋಗಿ ಮಲಗುವ ಮುನ್ನ ಎಚ್ಚರ!

  • ಕರಾವಳಿ ಸಮುದ್ರದಲ್ಲಿ ಅಪರೂಪದ ಬಾಲವಿಲ್ಲದ ಸನ್ ಫಿಶ್‌ ಪತ್ತೆ

    ಕರಾವಳಿ ಸಮುದ್ರದಲ್ಲಿ ಅಪರೂಪದ ಬಾಲವಿಲ್ಲದ ಸನ್ ಫಿಶ್‌ ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೊಡ(kasarkod) ಟೊಂಕಾದಲ್ಲಿ ಲಲಿತಾ ಕಂಪನಿಯ ಜಗದೀಶ್ ತಾಂಡೇಲರ ‘ಪ್ರೀಶಾ’ ಬೋಟಿಗೆ 15 ಕೆಜಿ ತೂಕದ ವಿರಳವಾಗಿ ಸಿಗುವ ಸನ್ ಫಿಶ್‌(Sunfish) ಬಲೆಗೆ ಬಿದ್ದಿದೆ.

    ಕರ್ನಾಟಕ ಕರಾವಳಿ ಭಾಗದಲ್ಲಿ ಈ ಮೀನು ಅಪರೂಪಕ್ಕೆ ಮೀನುಗಾರರ ಬಲೆಗೆ ಬೀಳುತ್ತವೆ. ಇಷ್ಟು ವರ್ಷದಲ್ಲಿ ಒಂದೆರೆಡು ಬಾರಿ ಮಾತ್ರ ಮೀನುಗಾರರ ಬಲೆಗೆ ಬಿದ್ದಿರುವ ಕುರಿತು ಕಡಲ ವಿಜ್ಞಾನಿಗಳು ದಾಖಲಿಸಿದ್ದಾಗಿ ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ತಜ್ಞ ಶಿವಕುಮಾರ್ ಹರಗಿಯವರು ಮಾಹಿತಿ ನೀಡಿದ್ದಾರೆ.

    ಇದರ ವೈಜ್ಞಾನಿಕ ಹೆಸರು Mola mola ಎಂದಾಗಿದ್ದು ಸನ್ ಫಿಶ್‌ ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ. ವಿಶ್ವದಲ್ಲೇ ಅತೀ ಹೆಚ್ಚು ಮೂಳೆಗಳನ್ನು ಹೊಂದಿರುವ ಮೀನು ಇದಾಗಿದ್ದು ಸಾಮಾನ್ಯ ಮೀನಿನಂತೆ ಬಾಲ ಇರುವುದಿಲ್ಲ. ಬಹುತೇಕ ದೇಹವು ಮೂಳೆಯಿಂದ ಕೂಡಿರುತ್ತದೆ. ಮೂಳೆಗಳು ಹೆಚ್ಚಿರುವುದರಿಂದ ಇವು ಆಳ ಸಮುದ್ರದಿಂದ ಮೇಲ್ಭಾಗದಲ್ಲಿ ತೇಲುತ್ತಾ ಸೂರ್ಯನ ಕಿರಣಗಳನ್ನು ಹೀರುತ್ತವೆ. ಜಲ್ಲಿ ಫಿಷ್‌, ಚಿಕ್ಕ ಮೀನುಗಳು ಇವುಗಳ ಆಹಾರವಾಗಿದೆ. ಇದನ್ನೂ ಓದಿ: ಟೆಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್

    ಹೆಚ್ಚಾಗಿ ಉಷ್ಣವಲಯ, ಸಮಶೀತೋಷ್ಣ ವಲಯದಲ್ಲಿ ವಾಸಿಸುತ್ತವೆ. ಜಪಾನ್, ಕೋರಿಯಾ, ತೈವಾನ್ ನಲ್ಲಿ ಅತೀ ಹೆಚ್ಚು ಕಂಡುಬರುತ್ತವೆ. ಔಷಧೀಯ ಗುಣ ಸಹ ಇದರ ಮಾಂಸಕ್ಕೆ ಇದ್ದು ಹೊರ ದೇಶದಲ್ಲಿ ಇವುಗಳ ಭಕ್ಷಣೆ ಮಾಡುತ್ತಾರೆ. ಅತೀ ಹೆಚ್ಚು ಮೂಳೆಗಳು ಇರುವುದರಿಂದ ಇದರ ತೂಕವೂ ಟನ್‌ಗಟ್ಟಲೇ ಇರುತ್ತದೆ.

    ಅದೃಷ್ಟದ ಸಂಕೇತ
    ಕರಾವಳಿ ಭಾಗದಲ್ಲಿ ಈ ಮೀನು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಈ ಮೀನು ಯಾರಿಗೆ ಸಿಗುತ್ತದೆಯೋ ಆ ಮೀನುಗಾರ ಶ್ರೀಮಂತನಾಗುತ್ತಾನೆ, ಹೆಚ್ಚು ಮೀನುಗಳು ಆತನಿಗೆ ದೊರಕುತ್ತವೆ ಎಂಬ ನಂಬಿಕೆ ಮೀನುಗಾರರಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಗೀತ ಕಾರ್ಯಕ್ರಮದಲ್ಲಿ ಬಿಯರ್ ಬಾಟಲಿ, ಕಲ್ಲು ತೂರಿ ಪೊಲೀಸರ ಮೇಲೆ ಹಲ್ಲೆ

    ಸಂಗೀತ ಕಾರ್ಯಕ್ರಮದಲ್ಲಿ ಬಿಯರ್ ಬಾಟಲಿ, ಕಲ್ಲು ತೂರಿ ಪೊಲೀಸರ ಮೇಲೆ ಹಲ್ಲೆ

    ತಿರುವನಂತಪುರಂ: ಬೀಚ್‍ನಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದ ವೇಳೆ ನಡೆದ ಘರ್ಷಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಓರ್ವನನ್ನು ಬಂಧಿಸಿ 50 ಜನರ ಮೇಲೆ ಪ್ರಕರಣ ದಾಖಲಾಗಿದೆ.

    ಸಂಗೀತ ಕಾರ್ಯಕ್ರಮದ ವೇಳೆ ಸ್ಥಳದಲ್ಲಿ ನಿಲ್ಲಲಾಗದವರು ಗಲಾಟೆ ಮಾಡಿದ್ದು, ಜನದಟ್ಟಣೆಯಿಂದ ಬ್ಯಾರಿಕೇಡ್‍ಗಳಿಗೂ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಕಾರ್ಯಕ್ರಮವನ್ನು ನಿಲ್ಲಿಸಲು ಒತ್ತಾಯಿಸಿದ್ದಾರೆ. ಆದರೆ ಅಲ್ಲಿ ನೆರೆದಿದ್ದ ಗುಪೊಂದು ಕಲ್ಲು ಹಾಗೂ ಬಿಯರ್ ಬಾಟಲಿಗಳನ್ನು ಪೊಲೀಸರ ಮೇಲೆ ತೂರಿ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿ ನಿಯಂತ್ರಿಸಲಾಯಿತು.

    POLICE JEEP

    ಘಟನೆಯಲ್ಲಿ 6 ಪೊಲೀಸರು ಹಾಗೂ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಕುರಿತು ವೆಲ್ಲಾಯಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 50 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹಿಜಬ್‍ಗೆ ಅವಕಾಶ ಇಲ್ಲದ ಕಾಲೇಜಿನಿಂದ ಟಿಸಿ ಪಡೆದ ವಿದ್ಯಾರ್ಥಿನಿಯರು

    ಸರಿಯಾದ ಸೌಲಭ್ಯಗಳಿಲ್ಲದೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಆಯೋಜಕರು ಹಾಗೂ ಜೆಡಿಟಿ ಕಾಲೇಜಿನವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ, ಶಕ್ತಿ ಪ್ರದರ್ಶನ ಸರಿಯಲ್ಲ: ವಿಶ್ವನಾಥ್

    Live Tv
    [brid partner=56869869 player=32851 video=960834 autoplay=true]

  • ಸುರತ್ಕಲ್‌ನಲ್ಲಿ ಬೀಚ್‌ನಲ್ಲಿ ಭಿನ್ನ ಕೋಮಿನ ಯುವಕನ ಜೊತೆ ಬಂದ ಯುವತಿ ಮೇಲೆ ರೇಪ್‌

    ಸುರತ್ಕಲ್‌ನಲ್ಲಿ ಬೀಚ್‌ನಲ್ಲಿ ಭಿನ್ನ ಕೋಮಿನ ಯುವಕನ ಜೊತೆ ಬಂದ ಯುವತಿ ಮೇಲೆ ರೇಪ್‌

    ಮಂಗಳೂರು: ಫಾಜಿಲ್‌ ಹತ್ಯೆಯಿಂದ ಸುದ್ದಿಯಾಗಿದ್ದ ಸುರತ್ಕಲ್ ಈಗ ಅತ್ಯಾಚಾರ ಪ್ರಕರಣದಿಂದ ಸುದ್ದಿಯಾಗಿದೆ. ಬೀಚ್‌ನಲ್ಲಿ ಪ್ರಿಯಕರನ ಜೊತೆಗೆ ಬಂದಿದ್ದ ಯುವತಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ.

    ಯುವತಿ ನೀಡಿದ ದೂರಿನ ಆಧಾರದಲ್ಲಿ ಮುನಾಜ್‌ ಅಹಮದ್‌ ಎಂಬಾತನನ್ನು ಬಂಧಿಸಲಾಗಿದೆ. ಮೀನು ಲಾರಿಯಲ್ಲಿ ಡ್ರೈವರ್ ಆಗಿರುವ ರೇಪಿಸ್ಟ್ ಮುನಾಜ್ ಈ ಹಿಂದೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಈಗ ಅತ್ಯಾಚಾರ ಆರೋಪಿಯಾಗಿರುವ ಮುನಾಜ್‌ನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಸುರತ್ಕಲ್ ಎನ್‌ಐಟಿಕೆ ಬೀಚ್ ಪರಿಸರಕ್ಕೆ ಜುಲೈ 27 ರಂದು ಹಿಂದೂ ಯುವಕನ ಜೊತೆ ಮಂಗಳೂರಿನ ಮುಸ್ಲಿಮ್‌ ಯುವತಿ ಬಂದಿದ್ದಳು. ಕಡಲ ತೀರದಲ್ಲಿ ಹಿಂದೂ ಯುವಕನ ಜೊತೆ ಮಾತನಾಡುತ್ತಿದ್ದ ವೇಳೆ ಮುನಾಜ್‌ ಅಹಮದ್‌ ಬಂದಿದ್ದಾನೆ.

    ಹಿಂದೂ ಯುವಕನ ಜೊತೆ ಯಾಕೆ ಸುತ್ತಾಡುತ್ತಿಯಾ ಎಂದು ಯುವತಿಯನ್ನು ಮುನಾಜ್‌ ತರಾಟೆಗೆ ತೆಗೆದುಕೊಂಡು ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಯುವಕ ಮತ್ತು ಯುವತಿಯ ವಿಡಿಯೋ ಚಿತ್ರೀಕರಿಸಿ ಮನೆಯವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ – ಓರ್ವ ಸಾವು, 6 ಮಂದಿಗೆ ಗಾಯ

    ಹಲ್ಲೆ ನಡೆದ ಮೇಲೆ ಯುವಕ ಸ್ಥಳದಿಂದ ಓಡಿ ಹೋಗಿದ್ದಾನೆ. ಬಳಿಕ ಬೀಚ್‌ ಪರಿಸರದಲ್ಲೇ ಯುವತಿಯ ಮೇಲೆ ಅತ್ಯಾಚಾರಗೈದಿದ್ದಾನೆ. ಅತ್ಯಾಚಾರ ಮಾಡಿದ ಬಳಿಕ ವೀಡಿಯೋ ಸೆರೆ ಹಿಡಿದು ಕಿರುಕುಳ ನೀಡಲು ಆರಂಭಿಸಿದ್ದಾನೆ. ಸಂತ್ರಸ್ತ ಯವತಿ ಈ ಬಗ್ಗೆ ಮಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]