Tag: BDPL

  • ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ

    ಐಟಿ ದಾಳಿಯಲ್ಲಿ 290 ಕೋಟಿ ರೂ. ಜಪ್ತಿ – ಎಣಿಸಿದಷ್ಟು ಹೆಚ್ಚುತ್ತಲೇ ಇದೆ ಹಣ

    ನವದೆಹಲಿ: ಕಳೆದ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆಯು (Income Tax Department) ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಣ ವಶಕ್ಕೆ ಪಡೆದಿದೆ. ಇದು ದೇಶದ ಅತಿದೊಡ್ಡ ಐಟಿ ದಾಳಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಆದಾಯ ತೆರಿಗೆ ಇಲಾಖೆಯು ಕಳೆದ ಎರಡು ದಿನಗಳಿಂದ 3 ರಾಜ್ಯಗಳಲ್ಲಿ ನಡೆಸಿದ ದಾಳಿಯಲ್ಲಿ ಈವರೆಗೆ ಕನಿಷ್ಠ 290 ಕೋಟಿ ರೂ.ಗಳಷ್ಟು ನಗದು ಹಣವನ್ನು ಜಪ್ತಿಮಾಡಿದೆ. ಐಟಿ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ನಗದು ಬಚ್ಚಿಟ್ಟಿರುವ ಬಗ್ಗೆ ಗುಪ್ತಚರ ಮಾಹಿತಿ ದೊರೆತಿದ್ದು, ನಗದಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶತ್ರು ಸೇನೆಗಳಿಂದ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಫೈಟರ್‌ ಜೆಟ್‌ಗಳಿಗೆ ಶೀಘ್ರವೇ ಬರಲಿದೆ ಡಿಜಿಟಲ್‌ ನಕ್ಷೆ

    ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳ ಮೂಲದ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈಗಾಗಲೇ ಮೂರು ರಾಜ್ಯಗಳ ಅನೇಕ ಕಡೆ ದಾಳಿ ನಡೆಸಿದ್ದು, ಜಪ್ತಿ ಮಾಡಲಾದ ಹಣದ ಪ್ರಮಾಣ 290 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನೂ ಮೂರು ಸ್ಥಳಗಳಲ್ಲಿ 7 ಕೊಠಡಿಗಳಲ್ಲಿರುವ 9 ಲಾಕರ್‌ಗಳನ್ನು ಪರಿಶೀಲಿಸಬೇಕಾಗಿದೆ. ನಗದು ಹಣವನ್ನು ಬೀರು ಸೇರಿದಂತೆ ಇನ್ನಿತರ ಪೀಠೋಪಕರಣಗಳ ಒಳಗೆ ತುಂಬಿರುವುದು ಗುಪ್ತಚರ ಮಾಹಿತಿಗಳಿಂದ ಪತ್ತೆಯಾಗಿದೆ. ಹಾಗಾಗಿ ಇನ್ನೂ ನೋಟು ಎಣಿಕೆ ಕಾರ್ಯ ನಡೆಯುತ್ತಿದ್ದು, ಚಿನ್ನಾಭರಣಗಳೂ ಸಿಗುವ ಸಾಧ್ಯತೆಗಳಿವೆ. ಜೊತೆಗೆ ದಾಳಿ ನಡೆಸಬೇಕಾದ ಇನ್ನಷ್ಟು ಸ್ಥಳಗಳ ಬಗ್ಗೆಯೂ ಮಾಹಿತಿ ಪಡೆದಿದ್ದೇವೆ ಎಂದು ಐಟಿ ಅಧಿಕಾರಿ ಮೂಲಗಳು ತಿಳಿಸಿವೆ.

    ಗುರುವಾರ (ಡಿ.7) ಆದಾಯ ತೆರಿಗೆ ಇಲಾಖೆಯು ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ 200 ಕೋಟಿ ರೂ.ಗಳಷ್ಟು ಹಣವನ್ನು ಜಪ್ತಿ ಮಾಡಲಾಗಿತ್ತು. ಭಾರೀ ಪ್ರಮಾಣದಲ್ಲಿ ನೋಟುಗಳ ಸಂಖ್ಯೆ ಇದ್ದ ಕಾರಣ ನೋಟು ಎಣಿಸುವ ಯಂತ್ರಗಳು ಕೆಲಸ ಮಾಡುವುದನ್ನೇ ನಿಲ್ಲಿಸಿದ್ದವು.

    2019 ರಿಂದ 2021ರ ಹಣಕಾಸು ವರ್ಷದಲ್ಲಿ ಕಂಪನಿ ಕಡಿಮೆ ಆದಾಯ ತೋರಿಸಿತ್ತು. ಲೆಕ್ಕ ಪತ್ರದಲ್ಲಿ ತೋರಿಸಲಾದ ಅನುಮಾನಾಸ್ಪದ ಇತರ ಪಾವತಿಗಳ ಬಗ್ಗೆ ಈಗ ಐಟಿ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಠಾಣೆಯಲ್ಲಿ ಸರ್ವೀಸ್ ರಿವಾಲ್ವರ್ ಕ್ಲೀನ್ ಮಾಡ್ತಿದ್ದಾಗ ಮಹಿಳೆಗೆ ಗುಂಡೇಟು – ಸ್ಥಿತಿ ಗಂಭೀರ

  • ಮದ್ಯ ಕಂಪನಿಯ ಮೇಲೆ ಐಟಿ ದಾಳಿ – 200 ಕೋಟಿ ಜಪ್ತಿ,  ನೋಟು ಎಣಿಕೆ ಮಾಡಿ ಮಾಡಿ ಕೈಕೊಟ್ಟ ಯಂತ್ರಗಳು

    ಮದ್ಯ ಕಂಪನಿಯ ಮೇಲೆ ಐಟಿ ದಾಳಿ – 200 ಕೋಟಿ ಜಪ್ತಿ, ನೋಟು ಎಣಿಕೆ ಮಾಡಿ ಮಾಡಿ ಕೈಕೊಟ್ಟ ಯಂತ್ರಗಳು

    ನವದೆಹಲಿ: ಆದಾಯ ತೆರಿಗೆ ಇಲಾಖೆಯು (Income Tax Department) ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ (BDPL) ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಣವನ್ನು ವಶಕ್ಕೆ ಪಡೆದಿದೆ.

    ಇಲ್ಲಿಯವರೆಗೆ 200 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ನೋಟುಗಳ ಸಂಖ್ಯೆ ಇದ್ದ ಕಾರಣ ನೋಟು ಎಣಿಸುವ ಯಂತ್ರಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ ಎಂದು ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮತ್ತೆ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ

    ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬಿಡಿಪಿಎಲ್ ಸೇರಿದ ಕೋಲ್ಕತ್ತಾ ಮತ್ತು ರಾಂಚಿಯಲ್ಲಿನ ನೋಂದಾಯಿತ ಕಚೇರಿಗಳು ಸೇರಿದಂತೆ ಬೌಧ್, ಬೋಲಂಗಿರ್, ರಾಯ್‌ಗಢ ಮತ್ತು ಸಂಬಲ್‌ಪುರದಲ್ಲಿನ ಡಿಸ್ಟಿಲರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಗಳನ್ನು ನಡೆಸಲಾಗಿತ್ತು.  ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಒಡಿಶಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಿಡಿಪಿಎಲ್‌ ಒಡಿಶಾದಾದ್ಯಂತ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಹಲವು ಸ್ಥಳಗಳಲ್ಲಿ ದಾಳಿ ನಡೆಯುತ್ತಿದ್ದು, ತೆರಿಗೆ ವಂಚನೆಯ ನಿಖರ ಮೊತ್ತ ಇನ್ನೂ ಬಹಿರಂಗವಾಗಿಲ್ಲ.

    2019 ರಿಂದ 2021 ರ ಹಣಕಾಸು ವರ್ಷದಲ್ಲಿ ಕಂಪನಿ ಕಡಿಮೆ ಆದಾಯ ತೋರಿಸಿತ್ತು. ಲೆಕ್ಕ ಪತ್ರದಲ್ಲಿ ತೋರಿಸಲಾದ ಅನುಮಾನಾಸ್ಪದ ಇತರ ಪಾವತಿಗಳ ಬಗ್ಗೆ ಈಗ ಐಟಿ ತನಿಖೆ ನಡೆಸುತ್ತಿದೆ.