ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ 1 ಬಿಹೆಚ್‌ಕೆ, 2 ಬಿಹೆಚ್‌ಕೆ, 3 ಬಿ.ಹೆಚ್.ಕೆ. ಫ್ಲಾಟ್ ಮತ್ತು ವಿಲ್ಲಾ ಕ್ರಯಪತ್ರದ ಮೇಳವನ್ನು 2025 ಅಕ್ಟೋಬರ್ 03 ರಿಂದ 16ರವರೆಗೆ ಆಯೋಜಿಸಲಾಗಿದೆ.
ಫ್ಲಾಟ್ / ವಿಲ್ಲಾಗಳಿಗೆ ಸಂಬಂಧಿಸಿದಂತೆ ಸುಮಾರು 400 ಫ್ಲಾಟ್ ಗಳಿಗೆ ಕ್ರಯಪತ್ರ ನೋಂದಾಯಿಸಲು ಬಾಕಿ ಇರುತ್ತದೆ. ಪ್ರಾಧಿಕಾರವು ಆಯೋಜಿಸಿದ್ದ ಮೇಳ, ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಫ್ಲಾಟ್ ಗಳನ್ನು ಖರೀದಿಸಿ, ಹಂಚಿಕೆ ಪತ್ರವನ್ನು ಪಡೆದಿರುವ ಎಲ್ಲಾ ಫ್ಲಾಟ್ / ವಿಲ್ಲಾ ಖರೀದಿದಾರರು ಸೆ.30 ರ ಒಳಗಡೆ ಒಳಗಾಗಿ ತಮ್ಮ ತಮ್ಮ ಫ್ಲಾಟ್/ ವಿಲ್ಲಾಗಳಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಸ್ವಯಂ ದೃಢೀಕರಣ, ಬ್ಯಾಂಕ್ ಎನ್‌ಒಸಿ, ಫೋಟೋ, ಫೋಟೋಗಳೊಂದಿಗೆ ಫ್ಲಾಟ್ / ವಿಲ್ಲಾದ ಪೂರ್ತಿ ಹಣ ಪಾವತಿಸಿ, ಎಲ್ಲಾ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ, ಪೂರ್ಣ ದಾಖಲೆ ಮತ್ತು ಹಣ ಪಾವತಿಸಿದವರಿಗೆ “ಮೊದಲು ಬಂದವರಿಗೆ ಪ್ರಥಮ ಆದ್ಯತೆ”ಯ (“First Come First Service) ಆಧಾರದ ಮೇಲೆ ಅ.3 ರಿಂದ ಅ.16 ರ ಅವಧಿಯಲ್ಲಿ ಕ್ರಯ ಪತ್ರ ನೋಂದಣಿ” ಮೇಳವನ್ನು ಪ್ರಾಧಿಕಾರದ ಕೇಂದ್ರ ಕಛೇರಿ, ಟಿ. ಚೌಡಯ್ಯ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-20 ರಲ್ಲಿ ನಡೆಸಿ ಕ್ರಯಪತ್ರ ನೋಂದಾಯಿಸಿ ಕೊಡಲಾಗುವುದು. . ಇದನ್ನೂಓದಿ: ಲೈಬ್ರರಿಯ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ –ದಿನಕ್ಕೆ 522 ರೂ. ಸಂಬಳ
ಬೆಂಗಳೂರು: ಬಿಡಿಎಯು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ವಿಶ್ವೇಶ್ವರಯ್ಯ ಬಡಾವಣೆಯ (Vishweshwaraiah Layout) 6ನೇ ಬ್ಲಾಕ್‌ನಲ್ಲಿ 7 ಕೋಟಿ ರೂ. ಆಸ್ತಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿ, ಉಲ್ಲಾಳು ಗ್ರಾಮದ ಸರ್ವೆ ನಂ. 27/1ರಲ್ಲಿನ ಸುಮಾರು 6,400 ಚದರ ಅಡಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಶೆಡ್ ಅನ್ನು ತೆರವುಗೊಳಿಸಿ, ಸುಮಾರು 7 ಕೋಟಿ ರೂ. ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿತು. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್
ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಲಾಯಿತು.
ಬೆಂಗಳೂರು: ಹೇಗಾದರೂ ಮಾಡಿ ಒಂದು ಸೂರು ಮಾಡಿಕೊಂಡು ನೆಮ್ಮದಿಯಾಗಿ ಬದುಕಬೇಕು ಎನ್ನುವುದು ಬೆಂಗಳೂರಿಗೆ ಬರುವ ಹಲವರ ಕನಸು. ಹೀಗೆ ಕನಸನ್ನು ನನಸು ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದವರಿಗೆ ಕಳೆದ ಒಂದು ವಾರದಿಂದ ಆತಂಕವೊಂದು ಶುರುವಾಗಿದೆ. ಬಿಡಿಎನಿಂದ (BDA) ಬಂದಿರುವ ನೋಟಿಸ್ ನೋಡಿ ಆಕಾಶವೇ ತಲೆಮೇಲೆ ಬಿದ್ದಂತೆ ಆಗಿದ್ದಾರೆ.
ಬೆಂಗಳೂರು ಉತ್ತರ (Bengaluru North) ತಾಲೂಕಿನ ದಾಸನಪುರ (Dasanapura) ಹೋಬಳಿಯ 15 ಕ್ಕೂ ಹೆಚ್ಚು ಗ್ರಾಮದ ಜಾಗದಲ್ಲಿ ಫೆರಿಫೆರಲ್ ರಸ್ತೆ, ಬಿಎಂಟಿಸಿ ಬಸ್ ಡಿಪೋ ಹಾಗೂ ಟ್ರಕ್ ಟರ್ಮಿನಲ್ ನಿರ್ಮಾಣ ಸಂಬಂಧ 2006ರ ನೋಟಿಫಿಕೇಶನ್ ಉಲ್ಲೇಖಿಸಿ ಭೂ ಸ್ವಾಧೀನಕ್ಕೆ ಭೂಮಿಯ ಮಾಲೀಕರಿಗೆ ಬಿಡಿಎ ನೋಟಿಸ್ ನೀಡಿದೆ.
ದಾಸನಪುರ ಹೋಬಳಿಯ ಆಲೂರು, ಅಡಕಮಾರನಹಳ್ಳಿ, ದೊಂಬರಹಳ್ಳಿ, ಲಕ್ಷ್ಮಿಪುರ ಮಾದವಾರ, ದಾಸನಪುರ, ಚಿಕ್ಕಬಿದರಕಲ್ಲು, ಭೋವಿ ಪಾಳ್ಯ ಹೀಗೆ ದಾಸನಪುರ ಹೋಬಳಿಯ ಸಾವಿರಾರು ಸರ್ವೆ ನಂಬರ್ ಗಳಿಗೆ ನೋಟಿಸ್ ನೀಡಲಾಗಿದೆ.
20 ವರ್ಷಗಳಿಂದ ಯಾವುದೇ ರೀತಿಯ ಉಲ್ಲೇಖ ಮಾಡದೇ ಈಗ ಜಮೀನುಗಳೆಲ್ಲ ಮನೆಗಳಾಗಿದ್ದು, ಜಮೀನು ಮಾಲೀಕರು ಸೈಟ್ ಮಾಡಿ ಮಾರಾಟ ಮಾಡಿ ಹೋಗಿದ್ದಾರೆ. ಸಾವಿರಾರು ಮನೆಗಳು ಈ ಜಾಗದಲ್ಲಿ ಈಗ ನಿರ್ಮಾಣವಾಗಿದ್ದು ಬಿಡಿಎ ನೋಟಿಸ್ ನೋಡಿದ ಜನ ನಾವು ಏನ್ ತಪ್ಪು ಮಾಡಿದ್ದೇವೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಬಿಡಿಎ ಪ್ರಾಥಮಿಕ ನೋಟಿಸ್ ನೀಡಿದ್ದು ನಿಮಗೆ ಅಕ್ಷೇಪವಿದ್ದರೆ ಆಕ್ಷೇಪಣೆ ಸಲ್ಲಿಸಿ ಎಂದು ಹೇಳಿದೆ. ಇಷ್ಟು ವರ್ಷ ಸುಮ್ಮನಿದ್ದ ಬಿಡಿಎ ಈಗ ಯಾಕೇ ಹೀಗೆ ಮಾಡುತ್ತಿದೆ? ನಮಗೆ ಮನೆ ಕಟ್ಟಲು ಅನುಮತಿ ನೀಡಿದ್ದಾರೆ. ಮನೆಗಳಿಗೆ ನೀರು ವಿದ್ಯುತ್ ಎಲ್ಲವನ್ನು ಕಾನೂನಿನ ಅಡಿಯಲ್ಲೇ ನೀಡಲಾಗಿದೆ. ನಾವು ಕಂದಾಯ ಸಹ ಕಟ್ಟಿದ್ದೇವೆ. ಈಗ ಜಮೀನನ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಆದರೆ ಅವರೆಲ್ಲ ಜಮೀನು ಮಾರಾಟ ಮಾಡಿದ್ದಾರೆ. ಈಗ ನಾವು ಏನು ಮಾಡಬೇಕು ಎಂದು ಗ್ರಾಮಸ್ಥರು ದಿಕ್ಕು ತೋಚದೇ ಆತಂಕದಲ್ಲಿದ್ದಾರೆ.
ಸರ್ಕಾರ 2006 ರಲ್ಲೇ ಇಲ್ಲಿ ರಸ್ತೆ, ಡಿಪೋ, ಮತ್ತು ಟ್ರಕ್ ಟರ್ಮಿನಲ್ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದರೆ ಈ ಸರ್ವೆ ನಂಬರ್ ಬ್ಲಾಕ್ ಮಾಡಬೇಕಿತ್ತು. ಈಗ ನೋಟಿಸ್ ನೀಡುವ ಮೂಲಕ ಗೊಂದಲ ಸೃಷ್ಟಿಸಿದೆ. ನಾವು ಕಷ್ಟ ಪಟ್ಟು ಇಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಈಗ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎನ್ನುತ್ತಿದ್ದಾರೆ ಜನರು.
ನಾವು ಈ ಜಾಗದಿಂದ ಕದಲುವುದಿಲ್ಲ. ಸರ್ಕಾರ ನಮ್ಮನ್ನು ಸಾಯಿಸಿ ಅಮೇಲೆ ನಮ್ಮ ಜಾಗವನ್ನು ಸ್ವಾಧೀನಕ್ಕೆ ಪಡೆಯಲಿ. ಇದು ನಮ್ಮ ಜಾಗ. ನಮ್ಮ ನೋವನ್ನು ಯಾರೂ ಕೇಳುತ್ತಿಲ್ಲ. ಮುಂದೆ ದಾಸನಪುರ ಹೋಬಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಬೆಂಗಳೂರು: ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಗುರುವಾರ (ಜ.30) ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಬನಶಂಕರಿ 2ನೇ ಹಂತ ಬಡಾವಣೆಯಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು (CA Site) ವಶಪಡಿಸಿಕೊಂಡಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಕತ್ರಿಗುಪ್ಪೆ ಗ್ರಾಮದ (ಬನಶಂಕರಿ 2ನೇ ಹಂತ) ಸರ್ವೆ ನಂ. 15/1ರಲ್ಲಿನ 18513 ಚದರ ಅಡಿಯ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವಾಗಿದ್ದ ಶೆಡ್, ಹಳೇ ಗುಜರಿ ವಾಹನಗಳನ್ನು ತೆರವುಗೊಳಿಸಿ, ಸುಮಾರು 35 ಕೋಟಿ ರೂ. ಮೌಲ್ಯದ ಸಿಎ ನಿವೇಶನಗಳನ್ನು ಪ್ರಾಧಿಕಾರವು ವಶಪಡಿಸಿಕೊಂಡಿದೆ. ಇದನ್ನೂ ಓದಿ: 1 ಲಕ್ಷ ಸಾಲಕ್ಕೆ ತಿಂಗಳಿಗೆ 30 ಸಾವಿರ ಬಡ್ಡಿ – ಹಣ ಕಟ್ಟಲಾಗದೇ ಫೈನಾನ್ಸರ್‌ನನ್ನೇ ಕಿಡ್ನ್ಯಾಪ್ ಮಾಡಿದ್ರು!
ಬೆಂಗಳೂರು: ಇರುವ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ ಇರುವಾಗಲೇ ಬಿಡಿಎ (BDA) ಈಗ ಎರಡು ಪ್ರಮುಖ ಬಡಾವಣೆ ವಿಸ್ತರಣೆಗೆ ಮುಂದಾಗಿದೆ.
ಹೌದು. ಕೆಂಪೇಗೌಡ ಬಡಾವಣೆ (Kempegowda Layout) ಮತ್ತು ಶಿವರಾಮ ಕಾರಂತ ಬಡಾವಣೆ (Shivaram Karanth Layout) ವಿಸ್ತರಣೆಗೆ ಮುಂದಾಗಿರುವ ಬಿಡಿಎ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿದೆ.
ಈಗಾಗಲೇ ಶಿವರಾಮಕಾರಂತ ಬಡಾವಣೆಯಲ್ಲಿ 34,000 ಸಾಮಾನ್ಯ ಸೈಟ್‌ಗಳು ಮತ್ತು 4,500 ಕಾರ್ನರ್ ಸೈಟ್‌ಗಳೊಂದಿಗೆ 3,546 ಎಕರೆ ಜಮೀನಿನಲ್ಲಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಇದು ದೊಡ್ಡಬಳ್ಳಾಪುರ (Doddaballapura) ಮತ್ತು ಹೆಸರಘಟ್ಟ (Hesaraghatta) ನಡುವಿನ 17 ಹಳ್ಳಿಗಳನ್ನು ವ್ಯಾಪಿಸಿದೆ. ಈ ವರ್ಷದ ಆರಂಭದಲ್ಲಿ ಬಿಡಿಎ ಹೆಚ್ಚುವರಿಯಾಗಿ 2,095 ಎಕರೆಗಳಷ್ಟು ಬಡಾವಣೆಯನ್ನು ವಿಸ್ತರಿಸಲು ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?
ಇದೇ ಮಾದರಿಯಲ್ಲಿ ಕೆಂಪೇಗೌಡ ಬಡಾವಣೆಯನ್ನ ವಿಸ್ತರಣೆ ಮಾಡುತ್ತಿದೆ. ಬಿಡಿಎ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲಿದೆ ಎಂದು ತಿಳಿದು ಭೂ ಮಾಲೀಕರು ಅಕ್ರಮವಾಗಿ ಕಟ್ಟಡವನ್ನ ಕಟ್ಟಲು ಮುಂದಾಗುತ್ತಿದ್ದಾರೆ. ಇದನ್ನು ತಡೆಯಲು ಬಿಡಿಎ ವಿದ್ಯುತ್ ಕಡಿತಕ್ಕೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದೆ.
ಒಟ್ಟಾರೆ ಎರಡು ಬಡಾವಣೆಗಳಲ್ಲೂ ಸಾವಿರಾರು ಎಕರೆಯಲ್ಲಿ ಸೈಟ್ ನಿರ್ಮಾಣಕ್ಕೆ ಮುಂದಾಗಿದೆ. ವಿಸ್ತರಣಾ ಕಾರ್ಯ ಶುರುವಾಗಿದ್ದು ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.
ಬೆಂಗಳೂರು: ಬಿಡಿಎ (BDA) ನಿವೇಶನ ಹೊಂದಿರುವವರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಇದ್ದ ಅವಧಿಯನ್ನು ಕಡಿತ ಮಾಡಲಾಗಿದೆ.
ಹೌದು, ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಇದ್ದ ಅವಧಿಯನ್ನ ಕಡಿತ ಮಾಡಲಾಗಿದೆ. ಐದು ವರ್ಷದ ಕಾಲಮಿತಿಯನ್ನು ಕಡಿತಗೊಳಿಸಿ 3 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಖಾಲಿ ನಿವೇಶನದಲ್ಲಿ ಮೂರು ವರ್ಷಗಳಲ್ಲಿ ಮನೆ ನಿರ್ಮಾಣ ಮಾಡದೇ ಇದ್ದರೆ ಪ್ರಸ್ತುತ ಮಾರುಕಟ್ಟೆ ದರದ ಅನ್ವಯ ಶೇ.10% ದಂಡ ವಿಧಿಸಲಾಗುತ್ತೆ. ಇದನ್ನೂ ಓದಿ: ಕುಂಭಮೇಳಕ್ಕಾಗಿ ಮೈಸೂರಿನಿಂದ ಲಕ್ನೋಗೆ ವಿಶೇಷ ರೈಲು
ಸಾಲ ಮಾಡಿ ನಿವೇಶನ ಖರೀದಿ ಮಾಡಿರುತ್ತೇವೆ. ಇದರಿಂದ ಪ್ರತಿ ನಿವೇಶನದಾರರಿಗೆ ಲಕ್ಷ ಲಕ್ಷ ರೂ. ಆರ್ಥಿಕ ಹೊರೆಯಾಗುತ್ತೆ ಎಂದು ನಿಯಮದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳ ಬೋರ್ಡ್ ಮೀಟಿಂಗ್‌ನಲ್ಲಿ ಬಿಡಿಎ ಈ ನಿರ್ಣಯ ಮಾಡಲಾಗಿದೆ. ಇನ್ನು ಬಿಡಿಎಯ ಈ ನಿರ್ಧಾರಕ್ಕೆ ಖಾಲಿ ನಿವೇಶನ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಖರೀದಿಸಿದ ನಿವೇಶನಕ್ಕೆ ನಮಗೆ ದಂಡ ವಿಧಿಸಿದ್ರೆ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಿಡಿಎಯ ಈ ನಿರ್ಧಾರ ಅವೈಜ್ಞಾನಿಕ ಎಂದು ಆರೋಪಿಸುತ್ತಿದ್ದಾರೆ. ಸಾಲ ಮಾಡಿ ನಿವೇಶನ ಖರೀದಿ ಮಾಡಿದ ನಮಗೆ ನಿವೇಶನ ಉಳಿಸಿಕೊಂಡಿದ್ದೇ ತಪ್ಪು ಎನ್ನುವ ಸ್ಥಿತಿಗೆ ಬಿಡಿಎ ತಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸಾಗಿಸ್ತಿದ್ದ ಕ್ಯಾಂಟರ್‌ಗೆ ಲಾರಿ ಡಿಕ್ಕಿಯಾಗಿ ಸ್ಫೋಟ – ಇಬ್ಬರ ಸ್ಥಿತಿ ಗಂಭೀರ
ಬೆಂಗಳೂರು: ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು – BDA) ಅನಧಿಕೃತ ನಿರ್ಮಾಣಗಳನ್ನ ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ನಾಗರಬಾವಿ ಬಡಾವಣೆಯ 1ನೇ ಹಂತದಲ್ಲಿ 60 ಕೋಟಿ ರೂ. ಆಸ್ತಿಯನ್ನು (BDA Property) ವಶಪಡಿಸಿಕೊಂಡಿದೆ.
ಬೆಂಗಳೂರು ಉತ್ತರ (Bengakuru North) ತಾಲ್ಲೂಕು, ಯಶವಂತಪುರ ಹೋಬಳಿ, ನಾಗರಬಾವಿ ಗ್ರಾಮದ ಸರ್ವೆ ನಂ. 78ರ 28 ಗುಂಟೆ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವಾಗಿದ್ದ 8 ಶೆಡ್‌ಗಳನ್ನ ತೆರವುಗೊಳಿಸಿ, ಸುಮಾರು 60 ಕೋಟಿ ರೂ. ಮೌಲ್ಯದ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿದೆ. ಇದನ್ನೂ ಓದಿ: ಕೋವಿಡ್ ಅಕ್ರಮ ತನಿಖೆಗೆ ಎಸ್‌ಐಟಿ ರಚನೆ – ಬಿಎಸ್‌ವೈ ವಿರುದ್ಧ ಶೀಘ್ರ FIR ಸಾಧ್ಯತೆ!
ಬೆಂಗಳೂರು: ಗಂಗೇನಹಳ್ಳಿ ಡಿನೋಟಿಫಿಕೇಶನ್ (Gangenahalli Denotification) ಪ್ರಕರಣ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪನವರು (BS Yediyurappa) ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ.
ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬಳಿಕ ಯಡಿಯೂರಪ್ಪ ಲೋಕಾಯುಕ್ತ ಕಚೇರಿಯಿಂದ ನಿರ್ಗಮಿಸಿದರು.
ಈ ಸಂಬಂಧ ಗುರುವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ 2015ರಲ್ಲಿ ಲೋಕಾಯುಕ್ತದಲ್ಲಿ (Lokayukta) ಕೇಸ್ ದಾಖಲಾದರೂ ಈವರೆಗೂ ತನಿಖೆ ಪೂರ್ತಿಯಾಗಿಲ್ಲ. 2021ರಿಂದ ಲೋಕಾಯುಕ್ತದಲ್ಲಿ ಈ ಕೇಸ್ ವಿಚಾರದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕಿಡಿಕಾರಿದ್ದರು.
ಕಾಂಗ್ರೆಸ್ ಆರೋಪ ಏನಿತ್ತು?
1976 ರಲ್ಲಿ ಗಂಗೇನಹಳ್ಳಿಯಲ್ಲಿ ಬಿಡಿಎ (BDA) ನೋಟಿಫಿಕೇಶನ್ ಆಗಿದೆ. ಅದರಲ್ಲಿ 1.11 ಎಕ್ರೆ ಜಾಗ ಡಿನೋಟಿಫೈ ಮಾಡಲು 30 ವರ್ಷದ ನಂತರ ಅರ್ಜಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಿನೋಟಿಫೈಗೆ ರಾಜಶೇಖರಯ್ಯ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿಗೂ ರಾಜಶೇಖರಯ್ಯಗೂ ಯಾವುದೇ ಸಂಬಂಧ ಇಲ್ಲ.
ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಡಿನೋಟಿಫಿಕೇಶನ್‌ಗೆ ಸೂಚನೆ ಕೊಡುತ್ತಾರೆ. ಸೆಪ್ಟೆಂಬರ್ 11, 2007 ರಲ್ಲಿ ಇದೇ ಜಮೀನನ್ನು ಅನಿತಾ ಕುಮಾರಸ್ವಾಮಿ ತಾಯಿ ವಿಮಲಾ ಅವರಿಗೆ ಜಿಪಿಎ ಮಾಡಲಾಗಿದೆ. ಜಿಪಿಎ ರಾಜಶೇಖರಯ್ಯ ಮಾಡಿಸಿಕೊಳ್ಳದೇ ಮೂಲ ಮಾಲೀಕರ 21 ಮಂದಿ ವಾರಸುದಾರರಿಂದ ಆಗುತ್ತದೆ. ನಂತರ ಆ ಭೂಮಿ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರ ಹೆಸರಿಗೆ ರಿಜಿಸ್ಟ್ರರ್ ಆಗುತ್ತದೆ. ಇದನ್ನೂ ಓದಿ: ಕಾಂಗ್ರೆಸ್‌ನವರಿಂದಲೇ ಪಕ್ಷಕ್ಕೆ ಸೋಲು: ಈಶ್ವರ್ ಖಂಡ್ರೆ
2008ರಲ್ಲಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪನವರು ಡಿನೋಟಿಫೈಯಿಂದ ಕೈಬಿಡಿ ಅಂತ ಷರಾ ಬರೆಯುತ್ತಾರೆ. ಈ ರಾಜಶೇಖರಯ್ಯ ಎಂಬ ಬೇನಾಮಿ ಅರ್ಜಿ ಮೇರೆಗೆ ಈ ಷರಾ ಬರಯಲಾಗಿದೆ. 2015ರಲ್ಲಿ ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತದೆ. 2021 ರಲ್ಲಿ ಲೋಕಾಯುಕ್ತದಲ್ಲಿ ಕೊನೆಯ ಬಾರಿಗೆ ವಿಚಾರಣೆ ನಡೆಯುತ್ತದೆ.
ಕುಮಾರಸ್ವಾಮಿ ಇದ್ದಾಗ ಡಿನೋಟಿಫೈ ಮಾಡಲು ಮುಂದಾಗಿ ಯಡಿಯೂರಪ್ಪ ಸಿಎಂ ಆದಾಗ ಮಾಡಲು ಶಿಫಾರಸ್ಸು ಮಾಡಲಾಗಿದೆ. ಅಂದಿನ ಮುಖ್ಯ ಕಾರ್ಯದರ್ಶಿ ಡಿನೋಟಿಫೈ ಮಾಡಲು ಬರುವುದಿಲ್ಲ ಎಂದರೂ ಡಿನೋಟಿಫೈ ಮಾಡಲಾಗಿದೆ.
ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Yediyurappa) ವಿರುದ್ಧ ಮತ್ತೆ ಡಿನೋಟಿಫಿಕೇಶನ್ (Denotification) ಆರೋಪ ಕೇಳಿಬಂದಿದೆ. 2007ರಲ್ಲಿ ಬೆಂಗಳೂರಿನ ಗಂಗೇನಹಳ್ಳಿಯ 1.11 ಎಕೆರ ಭೂಮಿಯನ್ನು ಸತ್ತವರ ಹೆಸರಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಜಂಟಿಯಾಗಿ ಡಿನೋಟಿಫೈ ಮಾಡಿಸಿದ್ದರು ಎಂದು ಕಾಂಗ್ರೆಸ್ (Congress) ಆರೋಪಿಸಿದೆ.
ಕಾಂಗ್ರೆಸ್ ಸಚಿವರ ಆರೋಪ ಏನು?
1976 ರಲ್ಲಿ ಗಂಗೇನಹಳ್ಳಿಯಲ್ಲಿ ಬಿಡಿಎ (BDA) ನೋಟಿಫಿಕೇಶನ್ ಆಗಿದೆ. ಅದರಲ್ಲಿ 1.11 ಎಕ್ರೆ ಜಾಗ ಡಿನೋಟಿಫೈ ಮಾಡಲು 30 ವರ್ಷದ ನಂತರ ಅರ್ಜಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಿನೋಟಿಫೈಗೆ ರಾಜಶೇಖರಯ್ಯ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿಗೂ ರಾಜಶೇಖರಯ್ಯಗೂ ಯಾವುದೇ ಸಂಬಂಧ ಇಲ್ಲ.
ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಡಿನೋಟಿಫಿಕೇಶನ್‌ಗೆ ಸೂಚನೆ ಕೊಡುತ್ತಾರೆ. ಸೆಪ್ಟೆಂಬರ್ 11, 2007 ರಲ್ಲಿ ಇದೇ ಜಮೀನನ್ನು ಅನಿತಾ ಕುಮಾರಸ್ವಾಮಿ ತಾಯಿ ವಿಮಲಾ ಅವರಿಗೆ ಜಿಪಿಎ ಮಾಡಲಾಗಿದೆ. ಜಿಪಿಎ ರಾಜಶೇಖರಯ್ಯ ಮಾಡಿಸಿಕೊಳ್ಳದೇ ಮೂಲ ಮಾಲೀಕರ 21 ಮಂದಿ ವಾರಸುದಾರರಿಂದ ಆಗುತ್ತದೆ. ನಂತರ ಆ ಭೂಮಿ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರ ಹೆಸರಿಗೆ ರಿಜಿಸ್ಟ್ರರ್ ಆಗುತ್ತದೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!
2008ರಲ್ಲಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪನವರು ಡಿನೋಟಿಫೈಯಿಂದ ಕೈಬಿಡಿ ಅಂತ ಷರಾ ಬರೆಯುತ್ತಾರೆ. ಈ ರಾಜಶೇಖರಯ್ಯ ಎಂಬ ಬೇನಾಮಿ ಅರ್ಜಿ ಮೇರೆಗೆ ಈ ಷರಾ ಬರಯಲಾಗಿದೆ. 2015ರಲ್ಲಿ ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತದೆ. 2021 ರಲ್ಲಿ ಲೋಕಾಯುಕ್ತದಲ್ಲಿ ಕೊನೆಯ ಬಾರಿಗೆ ವಿಚಾರಣೆ ನಡೆಯುತ್ತದೆ.
ಕುಮಾರಸ್ವಾಮಿ ಇದ್ದಾಗ ಡಿನೋಟಿಫೈ ಮಾಡಲು ಮುಂದಾಗಿ ಯಡಿಯೂರಪ್ಪ ಸಿಎಂ ಆದಾಗ ಮಾಡಲು ಶಿಫಾರಸ್ಸು ಮಾಡಲಾಗಿದೆ. ಅಂದಿನ ಮುಖ್ಯ ಕಾರ್ಯದರ್ಶಿ ಡಿನೋಟಿಫೈ ಮಾಡಲು ಬರುವುದಿಲ್ಲ ಎಂದರೂ ಡಿನೋಟಿಫೈ ಮಾಡಲಾಗಿದೆ.