Tag: BC Patil

  • ಕೋಟ್ಯಂತರ ರೂ. ಭ್ರಷ್ಟಾಚಾರ – ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಯಲ್ಲಿ ದೂರು

    ಕೋಟ್ಯಂತರ ರೂ. ಭ್ರಷ್ಟಾಚಾರ – ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಯಲ್ಲಿ ದೂರು

    ಬೆಂಗಳೂರು: ಕೃಷಿ ಇಲಾಖೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.

    ಕೃಷಿ ಇಲಾಖೆ ವತಿಯಿಂದ ರೈತರಿಗೆ ಕೊಡುವ ಯಂತ್ರೋಪಕರಣಗಳ ಟೆಂಡರ್ ನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸಿ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಗೆ ಎಸಿಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಕೃಷ್ಣ ಮೂರ್ತಿ ದೂರು ನೀಡಿದ್ದಾರೆ.  ಇದನ್ನೂ ಓದಿ: ಪ್ರೀತಿಸಿದ ಯುವತಿಯನ್ನು ದೂರ ಮಾಡಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ 

    ಬಿ.ಸಿ. ಪಾಟೀಲ್ ಆಪ್ತ ನಿರ್ದೇಶಕ ದಿವಾಕರ್ ಮುಂದೆ ಇಟ್ಟುಕೊಂಡು ಸುಮಾರು 210 ಕೋಟಿಗೂ ಅಧಿಕ ಹಣ ಅಕ್ರಮ ಮಾಡಿದ್ದಾರೆ. ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುವಂತೆ ಆಗ್ರಹಿಸಿ ದೂರು ನೀಡಲಾಗಿದೆ. ಇದನ್ನೂ ಓದಿ: ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ

    ನಿರ್ದೇಶಕ ದಿವಾಕರ್ ಕೃಷಿ ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ನೀಡುವ ವಸ್ತುಗಳಿಗೆ ಬಿಲ್ ಮಂಜೂರು ಮಾಡಲು ಲಂಚ ಪಡೆದಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • ಕೃಷಿ ಕ್ಷೇತ್ರದ ಸಂಶೋಧನೆಗಳು ರೈತರ ಜಮೀನುಗಳಿಗೆ ತಲುಪಬೇಕು: ಬಿ.ಸಿ.ಪಾಟೀಲ್

    ಕೃಷಿ ಕ್ಷೇತ್ರದ ಸಂಶೋಧನೆಗಳು ರೈತರ ಜಮೀನುಗಳಿಗೆ ತಲುಪಬೇಕು: ಬಿ.ಸಿ.ಪಾಟೀಲ್

    ರಾಯಚೂರು: ಕೃಷಿ ಕ್ಷೇತ್ರದ ಸಂಶೋಧನೆಗಳು ರೈತರ ಜಮೀನುಗಳಿಗೆ ತಲುಪಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ನಗರದ ಕೃಷಿ ವಿಜ್ಞಾನಗಳ ವಿವಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳ ವಾಣಿಜ್ಜೀಕರಣ ಕುರಿತ ಸಂವಾದ ಸಭೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಆನ್‍ಲೈನ್ ಮೂಲಕ ಚಾಲನೆ ನೀಡಿದರು. ವಿವಿಯ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ವರ್ಚುವಲ್ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿನ ಹೊಸ ಸಂಶೋಧನೆ ಮತ್ತು ತಂತ್ರಜ್ಞಾನಗಳು ಕೇವಲ ವಿವಿಗಳ ಪ್ರಯೋಗಾಲಯಕ್ಕೆ ಸಿಮೀತವಾಗಿರದೆ ರೈತರ ಜಮೀನುಗಳಿಗೆ ತಲುಪಿದಾಗ ಮಾತ್ರ ಸಂಶೋಧನೆಗೆ ಅರ್ಥ ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ:  2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವುದೇ ನಮ್ಮ ಗುರಿ: ಅರುಣ್ ಸಿಂಗ್

    ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಹೆಚ್ಚಿನ ಆಸಕ್ತಿವಹಿಸಿ ಕೃಷಿ ಸಂಶೋಧನೆಗಳ ವಾಣಿಜ್ಜೀಕರಣ ಕಾರ್ಯಕ್ಕೆ ಮುಂದಾಗಿರುವುದು ರಾಜ್ಯದಲ್ಲಿ ಮೈಲುಗಲ್ಲಾಗಿದೆ. ರೈತರಿಗೆ ವರದಾನವಾಗಲಿದ್ದು, ಎಲ್ಲಾ ಕೃಷಿ ವಿವಿಗಳು ತಮ್ಮ ಸಂಶೋಧನೆಗಳನ್ನು ವಾಣಿಜ್ಜೀಕರಣಗೊಳಿಸಲು ಮುಂದಾಗಬೇಕು. ವಿವಿಗಳು ಆಧುನಿಕ ಕೃಷಿಯನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಗೆ ಮುಂದಾಗಬೇಕು. ರೈತ ಸ್ನೇಹಿಯಾಗಿರುವ ಸಂಶೋಧನೆಗಳು ನಡೆಯಬೇಕಾಗಿದೆ ಎಂದರು. ಇದನ್ನೂ ಓದಿ:  ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ- ಶಿಸ್ತು ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

    ಈ ನಿಟ್ಟಿನಲ್ಲಿ ಸರ್ಕಾರ ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ 770 ಕೋಟಿ ರೂ.ಗಳ ಯೋಜನೆ ರೂಪಿಸಿದ್ದು, ರಾಯಚೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಯಿಂದ 3 ವರ್ಷ ರೈತರಿಗೆ ತಂತ್ರಜ್ಞಾನ ಕಲಿಸಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

    ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ, ವಿವಿ ಕುಲಸಚಿವ ಡಾ.ಎಂ.ಬಿ.ಪಾಟೀಲ್, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ಮತ್ತಿತರರು ಭಾಗವಹಿಸಿದ್ದರು.

  • ಕುಮಾರಸ್ವಾಮಿ ಮಹಾನ್ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೇ ಕುಡಿ: ಬಿ.ಸಿ. ಪಾಟೀಲ್ ಕಿಡಿ

    ಕುಮಾರಸ್ವಾಮಿ ಮಹಾನ್ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೇ ಕುಡಿ: ಬಿ.ಸಿ. ಪಾಟೀಲ್ ಕಿಡಿ

    ಹಾವೇರಿ: ಕುಮಾರಸ್ವಾಮಿ ಮಹಾನ್ ಮಹಾನ್ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೆ ಕುಡಿ. ಪ್ರಾಮಾಣಿಕತೆಗೆ ಹೆಸರಾದವರು ಅಂದ್ರೆ ಕುಮಾರಸ್ವಾಮಿ. ಕುಮಾರಸ್ವಾಮಿ ನಾಮಿನೇಶನ್ ಕೊಟ್ಟ ಮೇಲೆ ಕ್ಷೇತ್ರಕ್ಕೆ ಹೋಗೋದಿಲ್ಲ. ಜನರು ಅವರನ್ನ ಆಯ್ಕೆ ಮಾಡ್ತಾರೆ. ಅವರು ಯಾವುದೇ ಒಂದು ಪೈಸೆ ಖರ್ಚು ಮಾಡೋದಿಲ್ಲ. ಅವರಂಥಾ ಪ್ರಾಮಾಣಿಕ ವ್ಯಕ್ತಿಯನ್ನ ನಾನು ಇದುವರೆಗೆ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು.

    ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಐತಿಹಾಸಿಕ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ಮಾಜಿ ಸಿ.ಎಂ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಹೋದ ನಂತರ ಮೀನನ್ನು ಹೊರಗೆ ಹಾಕಿದಂತಾಗಿದೆ. ಅವರು ದುರಹಂಕಾರದಿಂದ, ಸ್ವೇಚ್ಛಾಚಾರದಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಬೇರೆ ಯಾರೂ ಅವರ ಮುಖ್ಯಮಂತ್ರಿ ಸ್ಥಾನ ಕಳೆದಿಲ್ಲ. ಅವರಲ್ಲಿರುವ ಸ್ವಾರ್ಥ ಭಾವನೆ, ಎರಡು ಜಿಲ್ಲೆಗೆ ಸೀಮಿತವಾದ ರಾಜ್ಯದ ಆಡಳಿತ ಇತ್ತು. ಹೀಗಾಗಿ ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅಂತಾ ಕೆಳಗಿಳಿಸಿದ್ದೇವೆ.

    ಹಿರೇಕೆರೂರಲ್ಲಿ ಅಭಿವೃದ್ಧಿ ನೋಡಬೇಕು ಅಂದ್ರೆ ನಮಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಿಲ್ಲ. ನಮಗೆ ಜನತೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರು ಕೊಟ್ಟಿದ್ದಲ್ಲ, ಅವರಪ್ಪಾರ ಕಾಲದಲ್ಲಿ ಕೊಟ್ಟಿದ್ದು. ಅದರಿಂದಲೆ ಇನ್ನೂ ಅಭಿವೃದ್ಧಿ ನಡಿತಿದೆ. ದೇವೇಗೌಡರ ಕಾಲದಲ್ಲಿ ಕೊಟ್ಟಿದ್ದರಲ್ಲೇ ನಾವಿನ್ನೂ ಅಭಿವೃದ್ಧಿ ಮಾಡ್ತಿದ್ದೇವೆ ಅಂತಾ ಕುಮಾರಸ್ವಾಮಿಗೆ ಲೇವಡಿ ಮಾಡಿದರು. ಇದನ್ನೂ ಓದಿ: ಕಾಬೂಲ್‍ನಿಂದ ಉಕ್ರೇನ್ ವಿಮಾನ ಹೈಜಾಕ್

    ಅಧಿಕಾರ ಯಾರ ಮನೆಯೂ ಸ್ವತ್ತಲ್ಲ. ಅಧಿಕಾರ ನಮ್ಮ ಮನೆ ಸ್ವತ್ತು ಅಂತಾ ಯಾವ ಮೂರ್ಖನೂ ಹೇಳಲ್ಲ. ಯಾವ ಜನ ಯಾವ ಸರ್ಕಾರದ ಮೇಲೆ ಆಶೀರ್ವಾದ ಮಾಡ್ತಾರೆ, ಅಲ್ಲಿವರೆಗೂ ಆ ಸರ್ಕಾರ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರೀತಿ ಯಾವ ಸರ್ಕಾರದ ಮೇಲಿರುತ್ತೆ ಅಲ್ಲಿವರೆಗೂ ಆ ಸರ್ಕಾರ ಇರುತ್ತದೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ. ಕುಮಾರಸ್ವಾಮಿ ಅಧಿಕಾರ ಶಾಶ್ವತ ಅಂತಾ ತಿಳ್ಕೊಂಡಿರಬೇಕು. ಆದರೆ ಹಾಗಾಗಿಲ್ಲ. ಕುಮಾರಸ್ವಾಮಿ ಹಿರೇಕೆರೂರಿಗೆ ಬಂದಾಗ ನಾನೆ ಮಾಲೆ ತಗೊಂಡು ಹೋಗಿ ಹಾಕಿ, ಸ್ವಾಗತ ಮಾಡಿ ಮನೆಗೆ ಕರ್ಕೊಂಡು ಹೋಗಿ ಟೀ ಕುಡಿಸಿ ಕಳಿಸ್ತಿದ್ದೆ. ನೀವೆಲ್ಲ ಅದಕ್ಕೆ ಬೇರೆ ಅರ್ಥ ಕಲ್ಪಿಸ್ತೀರಿ ಅಂತಾ ಅದನ್ನ ಮಾಡಿಲ್ಲ ಎಂದರು.

  • ಹಂತ ಹಂತವಾಗಿ ತರಗತಿಗಳನ್ನು ಆರಂಭಿಸುವ ಚಿಂತನೆ ಇದೆ: ಬಿ.ಸಿ.ಪಾಟೀಲ್

    ಹಂತ ಹಂತವಾಗಿ ತರಗತಿಗಳನ್ನು ಆರಂಭಿಸುವ ಚಿಂತನೆ ಇದೆ: ಬಿ.ಸಿ.ಪಾಟೀಲ್

    – ಮಕ್ಕಳಲ್ಲಿ ಕೋವಿಡ್ ರಕ್ಷಣೆ ಬಗ್ಗೆ ಸ್ವಯಂ ಜಾಗೃತಿ ಮೂಡಿಸಿದ ಸಚಿವ

    ಹಾವೇರಿ: ಶಿಕ್ಷಕರು ನೋಡುತ್ತಾರೆ ಬೈಯುತ್ತಾರೆ ಎಂಬ ಕಾರಣಕ್ಕಾಗಿ ಮಕ್ಕಳು ಶಾಲೆಯಲ್ಲಿ ಮಾಸ್ಕ್ ಧರಿಸದೇ ನಿಮ್ಮ ಆರೋಗ್ಯಕ್ಕಾಗಿ, ಸಮಾಜದ ಆರೋಗ್ಯಕ್ಕಾಗಿ ಮಾಸ್ಕ್ ಧರಿಸಬೇಕು ಎಂಬ ಜಾಗೃತಿ ಮಕ್ಕಳಲ್ಲಿ ಸ್ವಯಂಜಾಗೃತವಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

    ಇಂದಿನಿಂದ ರಾಜ್ಯ ಸರ್ಕಾರ 9 ರಿಂದ 12 ನೇ ತರಗತಿಯ ಮಕ್ಕಳಿಗೆ ಭೌತಿಕವಾಗಿ ಶಾಲೆ ಆರಂಭಿಸಿದ್ದು, ಈ ಹಿನ್ನಲೆಯಲ್ಲಿ ಮತಕ್ಷೇತ್ರ ಹಿರೇಕೆರೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, ಕೌರವ ಶಿಕ್ಷಣ ಸಂಸ್ಥೆ ಬಾಳೆಂಬಿಡ, ಸಿಇಸ್ ವಿದ್ಯಾ ಸಂಸ್ಥೆಗೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಭೇಟಿ ನೀಡಿ ಶಾಲಾ ಸಿದ್ಧತೆ, ಮಕ್ಕಳ ಸುರಕ್ಷತೆ ಬಗ್ಗೆ ಬಿ.ಸಿ.ಪಾಟೀಲ್, ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಶಾಲೆಗೆ ಆಗಮಿಸಿದ ಸಚಿವ ಸುಧಾಕರ್‌ಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

    ಈ ಸಂದರ್ಭದಲ್ಲಿ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಇನ್ನೂ ಹೋಗಿಲ್ಲ, ಮೂರನೇ ಅಲೆ ಬರಲಿ ಬಿಡಲೀ ಜೀವ ಮತ್ತು ಜೀವನ ಮುಖ್ಯ. ಕೊರೊನಾ ಜೊತೆಗೆ ಬದುಕಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಮಕ್ಕಳು ಶಿಕ್ಷಣದಿಂದ ಬಹಳಷ್ಟು ದಿನ ವಂಚಿತರಾಗಬಾರದು ಎಂಬ ಸದುದ್ದೇಶದೊಂದಿಗೆ ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗಳನ್ನು ಆರಂಭಿಸಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಹಂತಹಂತವಾಗಿ ತರಗತಿಗಳನ್ನು ಆರಂಭಿಸುವ ಚಿಂತನೆ ಇದೆ ಎಂದರು. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

    ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರದ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಿದ ಬಿ.ಸಿ.ಪಾಟೀಲ್, ಯಾರಿಗಾದರೂ ಜ್ವರ, ಶೀತದ ಲಕ್ಷಣ ಕೆಮ್ಮು ಕಂಡುಬಂದಲ್ಲಿ ತುರ್ತಾಗಿ ವೈದ್ಯರಲ್ಲಿ ತಪಾಸಣೆ ನಡೆಸಬೇಕು. ಮಕ್ಕಳೊಂದಿಗೆ ಶಿಕ್ಷಕರು ಸಹ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.

  • ಸಿದ್ದರಾಮಯ್ಯನವರು ಕನಸಿನ ಲೋಕದಲ್ಲಿದ್ದಾರೆ: ಬಿ.ಸಿ ಪಾಟೀಲ್

    ಸಿದ್ದರಾಮಯ್ಯನವರು ಕನಸಿನ ಲೋಕದಲ್ಲಿದ್ದಾರೆ: ಬಿ.ಸಿ ಪಾಟೀಲ್

    ಹಾವೇರಿ: ಸಿದ್ದರಾಮಯ್ಯನವರು ಕನಸಿನ ಲೋಕದಲ್ಲಿದ್ದಾರೆ. ಆದಷ್ಟು ಬೇಗ ಸರ್ಕಾರ ಹೋಗುತ್ತದೆ ಎಂಬ ಯಾವುದೋ ಭ್ರಮೆಯಲ್ಲಿದ್ದಾರೆ. ಆದಷ್ಟು ಬೇಗ ಸರ್ಕಾರ ಹೋಗುತ್ತದೆ. ನಾನು ಮುಂದಿನ ಮುಖ್ಯಮಂತ್ರಿ ಆಗ್ತೀನಿ ಅಂತಾ ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ಲೇವಡಿ ಮಾಡಿದ್ದಾರೆ.

    ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಪ್ರವಾಹದಿಂದ ಉಂಟಾಗಿರೋ ಹಾನಿ ಪರಿಶೀಲನೆ ಮತ್ತು ಕೆರೆಗೆ ಬಾಗಿನ ಅರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ನಂತರ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ. ಇದನ್ನೂ ಓದಿ: ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ಅವರದ್ದು, ಅವರ ಯಾವ ಕನಸುಗಳು ನನಸಾಗೋದಿಲ್ಲ. ಅವರು ಕಾಣ್ತಾ ಇರೋದು ಹಗಲುಗನಸು. ಮತ್ತೆ ಮುಂದಿನ ಬಾರಿ 2023ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾವೇ ಆಡಳಿತ ನಡೆಸುತ್ತೇವೆ ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ.

  • ಭವಿಷ್ಯದಲ್ಲಿ ನಂಬಿಕೆ ಇಲ್ಲ ಅಂತಾರೆ,ಭವಿಷ್ಯ ಹೇಳಲು ಶುರು ಮಾಡಿದ್ದಾರೆ- ಸಿದ್ದರಾಮಯ್ಯ ವಿರುದ್ಧ ಬಿ.ಸಿ.ಪಾಟೀಲ್ ಕಿಡಿ

    ಭವಿಷ್ಯದಲ್ಲಿ ನಂಬಿಕೆ ಇಲ್ಲ ಅಂತಾರೆ,ಭವಿಷ್ಯ ಹೇಳಲು ಶುರು ಮಾಡಿದ್ದಾರೆ- ಸಿದ್ದರಾಮಯ್ಯ ವಿರುದ್ಧ ಬಿ.ಸಿ.ಪಾಟೀಲ್ ಕಿಡಿ

    – ಕಾಂಗ್ರೆಸ್ ನವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆ ಗೊತ್ತಿಲ್ಲ

    ಹಾವೇರಿ: ಮಾಜಿ ಸಿ.ಎಂ ಸಿದ್ದರಾಮಯ್ಯ ಭವಿಷ್ಯದಲ್ಲಿ ನಂಬಿಕೆ ಇಲ್ಲ ಅಂತಾರೆ. ಅದು ಹೇಗೆ ಭವಿಷ್ಯ ಹೇಳಲು ಶುರು ಮಾಡಿದ್ರೋ ಗೊತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಉದ್ಯಮಿಯಾಗಿ ಸಿಎಂ ಪುತ್ರ ಭರತ್ ಬೊಮ್ಮಾಯಿ ಭಾಗಿಯಾಗಿದ್ದಾರೆ. ಅದಕ್ಕೂ ಟೀಕೆ ಮಾಡೋದು ಅಂದ್ರೆ ಹೇಗೆ? ಕಾಂಗ್ರೆಸ್ ನವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆ ಗೊತ್ತಿಲ್ಲ. ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನ ಅಲ್ಲಾಡಿಸಲು ಯಾರಿಂದಲೂ ಆಗೋದಿಲ್ಲ. ನಾವು 118 ಜನ ಬಿಜೆಪಿ ಶಾಸಕರಿದ್ದೇವೆ. ಬೊಮ್ಮಾಯಿಯವರು ಸಿಎಂ ಆಗಿ ಅವಧಿ ಪೂರ್ಣಗೊಳಿಸ್ತಾರೆ. 2023ರಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ. ಇದನ್ನೂ ಓದಿ:  ನಾನು ಮಾಡಿದ ತಪ್ಪು ಯಾರು ಮಾಡಬೇಡಿ: ಚಂದನಾ

    ವಾಜಪೇಯಿ, ನೆಹರು ಅಂಥವರ ಬಗ್ಗೆ ನಾವು ಯಾರೇ ಆಗಲಿ ಅವರನ್ನ ಗೌರಿಸಬೇಕಾಗುತ್ತದೆ. ಅಂಥವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಬಾರದು ಎಂಬುದು ನನ್ನ ವೈಯಕ್ತಿಕ ಭಾವನೆಯಾಗಿದೆ. ಸಿದ್ದರಾಮಯ್ಯ ಭವಿಷ್ಯ ಹೇಳೋಕೆ ಶುರು ಮಾಡಿದ್ದಾರೆ. ಅವರಿಗೆ ಭವಿಷ್ಯದಲ್ಲಿ ನಂಬಿಕೆ ಇಲ್ಲ. ಅದು ಹೇಗೆ ಭವಿಷ್ಯ ಹೇಳಲು ಶುರು ಮಾಡಿದ್ದಾರೋ ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದ್ದಾರೆ.

  • ನೆಹರು ಫ್ಯಾಮಿಲಿ ಹೊಗಳಿದ್ರೆ ಮಾತ್ರ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಉಳಿಯುತ್ತಾರೆ: ಬಿ.ಸಿ ಪಾಟೀಲ್

    ನೆಹರು ಫ್ಯಾಮಿಲಿ ಹೊಗಳಿದ್ರೆ ಮಾತ್ರ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಉಳಿಯುತ್ತಾರೆ: ಬಿ.ಸಿ ಪಾಟೀಲ್

    ಹಾವೇರಿ: ನೆಹರು ಕುಟುಂಬವನ್ನು ಹೊಗಳಿದರೆ ಮಾತ್ರ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಉಳಿಯುತ್ತಾರೆ. ಇಲ್ಲದಿದ್ದರೆ ಅವರನ್ನು ಕಿತ್ತು ಬಿಸಾಕುತ್ತಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಬಿಸಾಕಬಾರದೆಂದು ಡಿಕೆಶಿಯವರು ನೆಹರು ಫ್ಯಾಮಿಲಿಯನ್ನು ಆಗಾಗ ಹೊಗಳುತ್ತಿರುತ್ತಾರೆ. ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರ ತ್ಯಾಗದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ತರುವ ಸಂದರ್ಭದಲ್ಲಿ ಯಾವುದೇ ಪಕ್ಷ, ಪಂಗಡಗಳು, ರಾಜಕೀಯ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಇಂಗ್ಲೀಷರ ಆಡಳಿತಕ್ಕೆ ಒಳಪಟ್ಟ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆ ದೇಶಕ್ಕೆ ಸ್ವಾತಂತ್ರ್ಯ ಬರಬೇಕು ಅಂತಾ ಹೋರಾಟ ಮಾಡಿದ್ದಾರೆ. ಅದರಲ್ಲಿ ನೆಹರು ದೊಡ್ಡವರಾದರು, ಪ್ರಧಾನ ಮಂತ್ರಿಗಳಾದರಷ್ಟೆ ಎಂದರು.

    ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ 15 ದಿನಗಳಾಗಿವೆ. ಶಾಸಕ ಯತ್ನಾಳರು ಆಕ್ಷೇಪ ವ್ಯಕ್ತಪಡಿಸ್ತಾರೆ ಅಂತಾ ಬೊಮ್ಮಾಯಿಯವರ ಆಡಳಿತವನ್ನ ಬದಲಾವಣೆ ಮಾಡಿಕೊಳ್ಳೋಕೆ ಆಗೋದಿಲ್ಲ. ಬಹಳ ಉತ್ತಮವಾದ ಆಡಳಿತವನ್ನ ಬೊಮ್ಮಾಯಿಯವರು ಕೊಡ್ತಿದ್ದಾರೆ. ಹಗಲಿರುಳು ಶ್ರಮಿಸ್ತಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮವಾದ ಆಡಳಿತವನ್ನ ನಾವು ನಿರೀಕ್ಷೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಟ್ವಿಟ್ಟರ್​ನಲ್ಲಿ ಅವಕಾಶ ಇಲ್ಲ, ಸಂಸತ್​ನಲ್ಲೂ ಮಾತಾಡೋಕೆ ಬಿಡಲ್ಲ: ರಾಹುಲ್ ಗಾಂಧಿ

    ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಯತ್ನಾಳರ ಹೇಳಿಕೆ ವೈಯಕ್ತಿಕವಾದುದು. ಬಿಎಸ್ ವೈ ಬಗ್ಗೆಯಾಗಲಿ, ವಿಜಯೇಂದ್ರ ಬಗ್ಗೆಯಾಗಲಿ ಪಕ್ಷದಲ್ಲಿ ಯಾವುದೇ ಅಸಮಾಧಾನ, ಅಸಹಕಾರ ಇಲ್ಲ. ಯಡಿಯೂರಪ್ಪನವರು ನಮ್ಮ ಪಕ್ಷದ ನಾಯಕರು. ವಿಜಯೇಂದ್ರ ನಮ್ಮ ಪಕ್ಷದ ಬಿಜೆಪಿಯ ರಾಜ್ಯದ ಉಪಾಧ್ಯಕ್ಷರು. ಆನಂದ್ ಸಿಂಗ್ ರಾಜೀನಾಮೆ ಕೊಡೋದಿಲ್ಲ. ನಾನು ನಿನ್ನೆ, ಮೊನ್ನೆ ಮಾತನಾಡಿದ್ದೇನೆ. ಸ್ವಲ್ಪ ಅಸಮಾಧಾನ ಇತ್ತು, ಎಲ್ಲವೂ ಸರಿಯಾಗುತ್ತೆ. ಮನೆಗೆ ಸೊಸೆ ಬಂದ್ಮೇಲೆ ಹದಿನೈದು ದಿನಗಳು ಅಥವಾ ಒಂದು ತಿಂಗಳಾದ್ರೂ ಗೊತ್ತು ಮಾಡಿಕೊಳ್ಳಬೇಕು. ಅವರ ನಡೆ, ನುಡಿ ಹೇಗಿದೆ ಅಂತಾ ನೋಡಬೇಕು. ಏನೂ ಗೊತ್ತಿಲ್ಲದೆ ಸಡನ್ ಆಗಿ ಹೋಗಿ ಮಾಡೋದು ಸರಿಯಲ್ಲ. ಪಕ್ಷದ ತತ್ವ ಸಿದ್ಧಾಂತಗಳಿಗೂ ಅದು ವಿರೋಧ ಆಗುತ್ತದೆ. ಪಕ್ಷದಲ್ಲಿದ್ದು ಮಾಡೋದು ಸರಿಯಲ್ಲ. ಅವರಿಗೆ ನೇರವಾಗಿ ಹೋಗಿ ಸಿಎಂ ಅವರನ್ನ ಕೇಳೋ ಅಧಿಕಾರವಿದೆ. ಅವರು ಶಾಸಕರಿದ್ದಾರೆ, ಹೋಗಿ ಕೇಳಲಿ. ಅದು ಬಿಟ್ಟು ಧರಣಿ ಮಾಡಿದ ತಕ್ಷಣ ಎಲ್ಲವೂ ಸರಿ ಹೋಗುತ್ತೆ ಅನ್ನೋದು ತಪ್ಪು ಎಂದು ಹೇಳಿದರು.

  • ಕೃಷಿ ಕೊಟ್ಟರೆ ಖುಷಿಯಿಂದ ಮಾಡ್ತೇನೆ ಅಂದಿದ್ದು ಅದೇ ಖಾತೆ ಸಿಕ್ಕಿದೆ: ಬಿ.ಸಿ ಪಾಟೀಲ್

    ಕೃಷಿ ಕೊಟ್ಟರೆ ಖುಷಿಯಿಂದ ಮಾಡ್ತೇನೆ ಅಂದಿದ್ದು ಅದೇ ಖಾತೆ ಸಿಕ್ಕಿದೆ: ಬಿ.ಸಿ ಪಾಟೀಲ್

    – ನಾನು ರೈತನ ಮಗ

    ಹಾವೇರಿ: ಕೃಷಿ ಇಲಾಖೆ ಯಾವತ್ತೂ ಮುಳ್ಳಿನ ಹಾಸಿಗೆ ಅಂತಾ ಗೊತ್ತಿದ್ದೆ, ಕೃಷಿ ಇಲಾಖೆ ಕೇಳಿದ್ದೆ ನಾನು ರೈತನ ಮಗನಾಗಿ ರೈತರ ಕಣ್ಣೀರು ಒರೆಸುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

    ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, ನಾವು ರೈತರ ಮಕ್ಕಳಾಗಿ ರೈತರ ಕಣ್ಣೀರು ಒರೆಸದೆ, ರೈತರ ಸಮಸ್ಯೆಗೆ ಸ್ಪಂದಿಸದೇ ಓಡಿ ಹೋದರೆ ರೈತರನ್ನುನೋಡಿಕೊಳ್ಳುವವರು ಯಾರು? ಕೃಷಿ ಕೊಟ್ಟರೆ ಖುಷಿಯಿಂದ ಖಾತೆ ನಿರ್ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಅವರೊಂದಿಗೆ ಹೇಳಿದ್ದೆ ಎಂದರು. ಇದನ್ನೂ ಓದಿ: ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    ಈ ಹಿಂದೆಯೂ ಕೃಷಿ ಸಚಿವನಾಗಿದ್ದೆ ಈಗಲೂ ಕೃಷಿ ಖಾತೆ ಸಿಕ್ಕಿದೆ. ಕೃಷಿ ಇಲಾಖೆಯಲ್ಲಿ ಅರ್ಧಕ್ಕೆ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಅನುಕೂಲ ಆಗುತ್ತದೆ. ಕೃಷಿ ಖಾತೆ ಸಿಕ್ಕಿರೋದು ಖುಷಿಯಾಗಿದೆ. ಕೃಷಿಯಲ್ಲಿ ಹೊಸ ಹೊಸ ತಾಂತ್ರಿಕ ವ್ಯವಸ್ಥೆ ತಂದು ರೈತಪರವಾಗಿ ಕೆಲಸ ಮಾಡಲು ಸಜ್ಜಾಗಿದ್ದೇನೆ. ಖಾತೆ ಹಂಚಿಕೆ ವಿಚಾರದಲ್ಲಿ ಕೆಲವರ ಅಸಮಾಧಾನ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಂದೆ ಏನಾಗುತ್ತೆ ನೋಡೋಣ ಎಂದರು.

  • ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್

    ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್

    – ಎಲ್ಲ ಸ್ಥಾನ ಲಿಂಗಾಯತರಿಗೆ ಸಿಕ್ರೆ ನಾವ್ ಏನ್ ಮಾಡೋದು?
    – ಜಾತಿ ರಾಜಕಾರಣದಿಂದ ಮುಖ್ಯಮಂತ್ರಿಗಳಿಂದಲೇ ಮೋಸ ಆಯ್ತು
    – ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

    ಬೆಂಗಳೂರು: ಮೋಸ, ವಂಚನೆ ಮತ್ತು ವಸೂಲಿಯಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿದೆ. ನಮ್ಮ ಜಿಲ್ಲೆಯವರಾದ ಮುಖ್ಯಮಂತ್ರಿಗಳಿಂದಲೇ ನನಗೆ ಮೋಸವಾಯ್ತು ಎಂದು ಶಾಸಕ ನೆಹರು ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ನೆಹರು ಓಲೇಕಾರ್, ಪಟ್ಟಿಯಲ್ಲಿಯೂ ನನ್ನ ಹೆಸರಿಲ್ಲ ಮತ್ತು ಸಿಎಂ ಸಹ ನನಗೆ ಕರೆ ಮಾಡಿಲ್ಲ. ನಮ್ಮ ಪಕ್ಷದಲ್ಲಿಯೂ ಮೋಸ, ವಂಚನೆ ಮಾಡೋರು ಇರೋದರಿಂದ ಸಚಿವ ಸ್ಥಾನ ತಪ್ಪಿದೆ. ಹಿಂದುಳಿದ ವರ್ಗದ ನಾಯಕನಾದ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನಕ್ಕೆ ಅರ್ಹ ವ್ಯಕ್ತಿ. ಆದ್ರೂ ಯಾರ್ ಯಾರಿಗೂ ಸಚಿವ ಸ್ಥಾನ ನೀಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಅಸಮಾಧಾನ ಹೊರ ಹಾಕಿದರು.

    ಹೈಕಮಾಂಡ್‍ನಿಂದ ಅಗೌರವ:
    ನೂತನ ಸಚಿವರ ಪಟ್ಟಿ ನೋಡಿದ್ರೆ ಇದು ವಸೂಲಿ ಮೇಲೆ ಆಯ್ಕೆಯಾಗಿದೆ ಅನ್ನೋದು ಗೊತ್ತಾಗುತ್ತೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಲಗೈ ಸಮುದಾಯಕ್ಕೆ ಸೇರಿದ ನಾಯಕ ಮೂರು ಬಾರಿ ಆಯ್ಕೆಯಾದ್ರೂ ಹೈಕಮಾಂಡ್ ನಮಗೆ ಅಗೌರವ ತೋರಿಸಿದೆ. ಸದ್ಯ ಹೈಕಮಾಂಡ್ ಮಾಡಿದ ಪಟ್ಟಿಯ ಬಗ್ಗೆ ಅಸಮಾಧಾನವಿದ್ದು, ಇನ್ನುಳಿದ ಸ್ಥಾನಗಳಲ್ಲಿ ಅವಕಾಶ ಮಾಡಿಕೊಡಬೇಕು. ಇಲ್ಲವಾದ್ರೆ ಅನಿವಾರ್ಯವಾಗಿ ಪಕ್ಷದಲ್ಲಿ ಇರುತ್ತೇವೆ.

    ನಾವು ಏನು ಮಾಡಬೇಕು?
    ಪಕ್ಷದಲ್ಲಿ ಜಾತಿ ರಾಜಕಾರಣ ಮಾಡಲಾಗುತ್ತಿದ್ದು, ಪ.ಪಂಗಡದವರನ್ನ ಕಡೆಗಣನೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮುಂದುವರಿದ ಕೋಮಿನವರೆಗೆ ಅವಕಾಶಗಳು ಸಿಗುತ್ತಿವೆ. ಎಲ್ಲ ಲಿಂಗಾಯತರಿಗೆ ನೀಡಿದ್ರೆ, ಪ.ಜಾತಿ ಮತ್ತು ಪ.ಪಂಗಡದವರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದರು. ಸಿಎಂ ಮತ್ತು ಬಿ.ಸಿ.ಪಾಟೀಲ್ ಮುಂದುವರಿದ ಕೋಮಿನವರು. ಅವರಿಗೆ ಸ್ಥಾನ ಕೊಟ್ರೆ, ಅವರೇನು ಹಿಂದುಳಿದ ವರ್ಗಕ್ಕೆ ಸಂಬಂಧಿಸಿದವರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾತ್ರಿಯಾಗ್ತಿದ್ದಂತೆ ನಾಪತ್ತೆಯಾಗುವ ಸಿಎಂ, ಹೋಗ್ತಿರುವುದು ಎಲ್ಲಿಗೆ? – ದೆಹಲಿಯಲ್ಲಿ ಬೊಮ್ಮಾಯಿ ನಿಗೂಢ ಹೆಜ್ಜೆ

    ಕಾದು ನೋಡಿ, ಎಚ್ಚರಿಕೆ ಕೊಟ್ರಾ?:
    ನಮ್ಮ ಜಿಲ್ಲೆಯವರಾದ ಮುಖ್ಯಮಂತ್ರಿಗಳಿಂದಲೇ ನನಗೆ ಸಚಿವ ಸ್ಥಾನ ತಪ್ಪಿದೆ. ಈ ಮೊದಲು ಮಾತನಾಡಿದಾಗ ದೆಹಲಿಗೆ ಹೋಗಿ ಬಂದು ಮಾತನಾಡುತ್ತೇನೆ ಎಂದು ಹೇಳಿದ್ದರು. ಇತ್ತ ಯಡಿಯೂರಪ್ಪ ಅವರ ಜೊತೆ ಸಹ ಚರ್ಚೆ ನಡೆಸಿದ್ದೇನೆ. ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರ ಜೊತೆ ಸಭೆ ನಡೆಸಿ ಚರ್ಚೆ ನಡೆಸುತ್ತೇನೆ. ಬಿಜೆಪಿಯಲ್ಲಿ ಹಿಂದಿನಿಂದಲೂ ಇದ್ದೇನೆ, ಮುಂದೆಯೂ ಇರುತ್ತೇನೆ. ಆದ್ರೆ ಪಕ್ಷದಲ್ಲಿ ಸದ್ಯದ ವ್ಯವಸ್ಥೆ ಮುಂದಿನ ದಿನಗಳಲ್ಲಿ ದೊಡ್ಡ ಹೊಡೆತ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ:ಬುಧವಾರ ಮಧ್ಯಾಹ್ನ 2:15ಕ್ಕೆ ನೂತನ ಸಚಿವರ ಪ್ರಮಾಣ ವಚನ- ಯಾರಿಗೆ ಮಂತ್ರಿಗಿರಿ?

  • ಪ್ರತಿ ಬಾರಿನೂ ದುರ್ಗಾದೇವಿ ಆಶೀರ್ವಾದ ಮಾಡ್ಕೊಂಡೇ ಬಂದಿದ್ದಾಳೆ: ಕೌರವ

    ಪ್ರತಿ ಬಾರಿನೂ ದುರ್ಗಾದೇವಿ ಆಶೀರ್ವಾದ ಮಾಡ್ಕೊಂಡೇ ಬಂದಿದ್ದಾಳೆ: ಕೌರವ

    ಹಾವೇರಿ: ಯಾವತ್ತೂ ನಮಗೆ ದುರ್ಗಾ ದೇವತೆ ಆಶೀರ್ವಾದ ಮಾಡಿಕೊಂಡೇ ಬಂದಿದ್ದಾಳೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ಬಿ.ಸಿ ಪಾಟೀಲ್ ಅವರು ಇಂದು ಹಾವೇರಿ ಜಿಲ್ಲೆ ಹಿರೇಕರೂರು ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ಕುಟುಂಬ ಸದಸ್ಯರು ತೆರಳಿ ಪೂಜೆ ಸಲ್ಲಿಸಿದರು. ಪುತ್ರಿ ಹಾಗೂ ಬೆಂಬಲಿಗರ ಜೊತೆ ತೆರಳಿ ದುರ್ಗಾದೇವಿಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯನವರ ಹೊಗಳಿಕೆ ನಮ್ಮ ಪಕ್ಷಕ್ಕೆ ಅಗತ್ಯ ಇಲ್ಲ: ಬಿ.ಸಿ.ಪಾಟೀಲ್

    ಬಳಿಕ ಮಾತನಾಡಿದ ಶಾಸಕರು, ನಾನು ಹಿರೆಕೇರೂರಿಗೆ ಬಂದಾಗಿಂದ ನನ್ನ ಪ್ರತಿ ಚುನಾವಣೆಯ ನಾಮಪತ್ರಕ್ಕೆ ಸಹಿ ಮಾಡಿದ್ದು ದುರ್ಗಾದೇವಿ ದೇವಸ್ಥಾನದಲ್ಲಿ. ಸಮಯ ಸಿಕ್ಕಾಗೆಲ್ಲ ಹಿರೆಕೇರೂರಿಗೆ ಬಂದಾಗೆಲ್ಲ ದೇವಸ್ಥಾನಕ್ಕೆ ಹೋಗಿ ಬರ್ತಿದ್ದೆ. ಅದರಂತೆ ಇಂದು ಕೂಡ ದೇವಸ್ಥಾನಕ್ಕೆ ಹೋಗಿ ದೇವಿ ಆಶೀರ್ವಾದ ಪಡೆದುಕೊಂಡು ಬಂದಿರುವೆ ಎಂದರು.

    ನಾನು ಆಶಾದಾಯಕ, ಯಾವಾಗ್ಲೂ ಒಳ್ಳೆಯದಾಗುತ್ತೆ ಅಂತಾ ಬಯಸುವವನು. ಒಳ್ಳೆಯದಾಗುತ್ತೆ ಅಂತಾ ಭರವಸೆ ಇದೆ, ಹಾಗೆಯೇ ಭರವಸೆ ಇಟ್ಟುಕೊಳ್ಳುವಂಥವನು. ಸಚಿವ ಸ್ಥಾನ ನೋಡೋಣ ಕಾದು ನೋಡೋಣ. ಯಾವತ್ತೂ ನಮಗೆ ದುರ್ಗಾ ದೇವತೆ ಆಶೀರ್ವಾದ ಮಾಡಿಕೊಂಡೆ ಬಂದಿದ್ದಾಳೆ ಎಂದು ಹೇಳಿದರು. ಇದನ್ನೂ ಓದಿ:ನೂತನ ಸಂಪುಟದಲ್ಲೂ ಸಚಿವ ಸ್ಥಾನಕ್ಕೆ ನಾರಾಯಣಗೌಡ ಕಸರತ್ತು