Tag: BC Patil

  • ಬಜೆಟ್‍ನಲ್ಲಿ ಮುಂದಿನ 25 ವರ್ಷಗಳ ಮುಂದಾಲೋಚನೆಯಿದೆ: ಬಿ.ಸಿ.ಪಾಟೀಲ್

    ಬಜೆಟ್‍ನಲ್ಲಿ ಮುಂದಿನ 25 ವರ್ಷಗಳ ಮುಂದಾಲೋಚನೆಯಿದೆ: ಬಿ.ಸಿ.ಪಾಟೀಲ್

    ಹಾವೇರಿ: ಮುಂದಿನ ಇಪ್ಪತ್ತೈದು ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

    ನಿಟ್ಟೂರು ಗ್ರಾಮದಲ್ಲಿ ಬಜೆಟ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಮುಂದಿನ ಇಪ್ಪತ್ತೈದು ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಬಜೆಟ್ ಮಂಡನೆ ಆಗಿದೆ. ಬಜೆಟ್‍ನಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಮಾಡಿದ್ದಾರೆ. ಬೆಳೆ ಸಮೀಕ್ಷೆಗೆ ಡ್ರೋಣ್ ತಂತ್ರಜ್ಞಾನದ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಿದೆ. ಒಂಬತ್ತು ಲಕ್ಷ ಹೆಕ್ಟೇರ್ ಜಮೀನಿನ ನೀರಾವರಿಗೆ ಒತ್ತು ನೀಡಿದೆ. ನದಿಗಳ ಜೋಡಣೆ ಮೂಲಕ ನೀರಾವರಿ ಮಾಡುವ ವಿಚಾರ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಮುಖಂಡರು ಪಕ್ಷ ಬಿಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡಾ ಕಾಂಗ್ರೆಸ್ ತ್ಯಜಿಸಿದರೆ ಆಶ್ಚರ್ಯವಿಲ್ಲ. ಅಲ್ಲಿ ಆ ರೀತಿಯ ವಾತಾವರಣವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಬ್ಬರ ಮುಖವನ್ನೊಬ್ಬರು ನೋಡದ ಪರಿಸ್ಥಿತಿ ಅಲ್ಲಿದೆ. ಅವರ ಪಿಸುಮಾತು, ಇವರ ಪಿಸುಮಾತು ನೋಡಿದರೆ ಅಲ್ಲಿ ಆ ರೀತಿಯ ಪರಿಸ್ಥಿತಿ ಇದೆ. ಮುಂಬರುವ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಅವರು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಅನ್ನುವುದಕ್ಕಿಂತ ನಾನು ಸಿಎಂ ಆಗುತ್ತೇನೆ, ನಾನು ಸಿಎಂ ಆಗುತ್ತೇನೆ ಅಂತ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ನಡೆದಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮೋದಿಯವರು ದೇವರ ಸ್ವರೂಪ: ಶಿವರಾಜ್ ಸಿಂಗ್ ಚೌಹಾಣ್

    ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ ಜಿಗರಿ ದೋಸ್ತರು. ಇಬ್ರಾಹಿಂ ಸಾಹೇಬರು ಬಹಳ ಚೆನ್ನಾಗಿ ಪ್ರಾಸಬದ್ಧವಾಗಿ ಮಾತನಾಡ್ತಾರೆ. ಜಾತಿಯ ಅಧಾರದ ಮೇಲೆ ರಾಜಕೀಯ ಮಾಡುತ್ತೇವೆ ಅನ್ನುವುದು ಮೂರ್ಖತನದ ಪರಮಾವಧಿ ಎಂದರು. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

    ನದಿ ಜೋಡಣೆಗೆ ರಾಜ್ಯದಲ್ಲಿ ಕೆಲವರ ವಿರೋಧದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಪಿಆರ್ ನೋಡಿಕೊಂಡು ರಾಜ್ಯ ಸರ್ಕಾರ ಮುಂದಿನ ತೀರ್ಮಾನ ಮಾಡುತ್ತದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿಪಿಆರ್‍ನಲ್ಲಿ ರಾಜ್ಯಕ್ಕೆ ಅನುಕೂಲ ಆಗುತ್ತದೆ ಇಲ್ಲವೋ ನೋಡುತ್ತಾರೆ. ಡಿಪಿಆರ್ ನಲ್ಲಿ ನಮ್ಮ ರಾಜ್ಯಕ್ಕೆ ಅನುಕೂಲ ಆಗುವುದಿಲ್ಲ ಅಂದರೆ ಅದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

    ಕೆಲವು ಸಚಿವರು ಕರೆ ಮಾಡಿದರು ಕರೆಯನ್ನು ಎತ್ತುತ್ತಿಲ್ಲ, ಬಹಳ ದುರಹಂಕಾರಿಗಳಿದ್ದಾರೆ ಅನ್ನುವ ಶಾಸಕ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ರೇಣುಕಾಚಾರ್ಯ ಅವರು ಯಾರು ಅಂಥವರಿದ್ದಾರೆ ಅವರ ಹೆಸರು ಹೇಳಬೇಕು. ಸುಮ್ಮನೆ ಕಂಬಳಕ್ಕೆ ಕಲ್ಲು ಕಟ್ಟಿ ಹೊಡೆಯೋದು ಸರಿಯಲ್ಲ. ಯತ್ನಾಳರು ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಾರೆ ಅಂತಾರೆ. ಆದರೆ ರೇಣುಕಾಚಾರ್ಯರು ಹೀಗೆ ಹೇಳುತ್ತಾರೆ. ಹೀಗೆ ಹೇಳಿಕೊಂಡು ಹೋಗೋದು ಒಳ್ಳೆಯದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದ ಸರ್ಕಾರ

    ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದ ಸರ್ಕಾರ

    ಬೆಂಗಳೂರು: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೃಷಿ ಸಚಿವ ಬಿ.ಸಿ.ಪಾಟೀಲ್‍ರೊಂದಿಗೆ ಸಮಿತಿಯಲ್ಲಿ ಚರ್ಚಿಸಿ ನೀಡಿದ ಭರವಸೆಯಂತೆ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದೆ.

    ಕಳೆದ 2021 ಆಗಸ್ಟ್ 25 ರಂದು ಸೆಕೆಂಡರಿ ಅಗ್ರಿಕಲ್ಚರ್ ಸ್ಥಾಪಿಸುವ ನಿಟ್ಟಿನಲ್ಲಿ ಸಿಎಂ ಜೊತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರದ ಆದಾಯ ದ್ವಿಗುಣಗೊಳಿಸುವ ಸಮಿತಿಯ ಮುಖ್ಯಸ್ಥರೊಂದಿಗೆ ಸಮಿತಿ ಸಭೆ ನಡೆಸಿದ್ದು, ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಸರ್ಕಾರ ಕೃಷಿ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ 13 ಜನರ ಸದಸ್ಯರನ್ನೊಳಗೊಂಡ ಸಮಿತಿ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶಾನಲಯ ಸ್ಥಾಪಿಸಿ ಆದೇಶಿಸಲಾಗಿದೆ. ಇದನ್ನೂ ಓದಿ: ಮನೆಯೊಂದರಲ್ಲಿ ಕುಳಿತು ಬಿ.ಇಡಿ ವಿದ್ಯಾರ್ಥಿಗಳ ಸಾಮೂಹಿಕ ನಕಲು – ವೀಡಿಯೋ ವೈರಲ್‌

    ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ಯ್ರಾಂಡ್ ಮೂಲಕ ಮಾರುಕಟ್ಟೆ ಕಲ್ಪಿಸುವುದು ಸೆಕೆಂಡರಿ ಅಗ್ರಿಕಲ್ಚರ್‌ನ ಮುಖ್ಯ ಧ್ಯೇಯೋದ್ದೇಶವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ಏನಿದು ಸೆಕೆಂಡರಿ ಅಗ್ರಿಕಲ್ಚರ್..?

    ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎಂದು ಪರಿಗಣಿಸಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುವ ಪ್ರಮಾಣದಲ್ಲಿ ಇರುವುದು ಸೆಕೆಂಡರಿ ಕೃಷಿಯಾಗಿದ್ದಉದ್ಯಮ ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ ಹಾಗೂ ಕಚ್ಚಾ ವಸ್ತುಗಳ್ನು ಮಾನವ ಶಕ್ತಿ ಕೌಶಲ್ಯಗಳನ್ನು ಮೂಲವಾಗಿ ಸದಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿಯಡಿ ಪರಿಗಣಿಸಬಹುದಾಗಿದೆ. ಇದನ್ನೂ ಓದಿ: ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕರು!

    ಸ್ಥಳೀಯವಾಗಿ ಉತ್ಪಾದಿಸಲಾದ ಕಚ್ಚಾ ವಸ್ತುವು ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಸಂಸ್ಕರಣೆಗೆ ಒಳಗಾಗಿದ್ದರೆ ಮತ್ತು ಅಂತಹ ಕಚ್ಚಾವಸ್ತುಗಳಿಂದ ಮೌಲ್ಯವರ್ಧಿತಗೊಳಿಸಿವ ಪ್ರಾಥಮಿಕ ಉತ್ಪಾದನೆಯನ್ನು ಉದ್ಯಮಕ್ಕೆ ಸರಬರಾಜು ಮಾಡಿದರೆ ಅದನ್ನು ಸೆಕೆಂಡರಿ ಕೃಷಿಗೆ ಪರಿಗಣಿಸಬಹುದಾಗಿದೆ. ಜೇನುಸಾಕಾಣೆ, ಜೈವಿಕ ಗೊಬ್ಬರ ಘಟಕಗಳು, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ಅಣಬೆ, ರೇಷ್ಮೆ ಹುಳು ಸಾಕಣೆ, ನರ್ಸರಿ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ.

    ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ/ಕಚ್ಛಾ ವಸ್ತುಗಳನ್ನು ಮಾನವ ಶಕ್ತಿ, ಕೌಶಲ್ಯಗಳನ್ನು ಮೂಲವಾಗಿ ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿವೆ. ರೇಸ್ ಕುದುರೆಗಳ ಸಾಕಣೆ, ವನ್ಯಜೀವಿ ಮೀಸಲು ಪ್ರದೇಶಗಳ ಅಭಿವೃದ್ಧಿ, ದೊಡ್ಡ ಔಷಧೀಯ ಮತ್ತು ಕೃಷಿ ರಾಸಾಯನಿಕ ಉದ್ಯಮಗಳು, ದೊಡ್ಡ ಕೃಷಿ ಕೈಗಾರಿಕೆಗಳನ್ನು ಸೆಕೆಂಡರಿ ಅಗ್ರಿಕಲ್ಚರ್ ಎಂದು ಪರಿಗಣಿಸಲಾಗದು. ಇದನ್ನೂ ಓದಿ: ಗಾಂಜಾ ಮಾರುತ್ತಿದ್ದ ಪೊಲೀಸರನ್ನು ಅರೆಸ್ಟ್ ಮಾಡಿದ್ದ ಇನ್‌ಸ್ಪೆಕ್ಟರ್ ಸಸ್ಪೆಂಡ್

    ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪಉತ್ಪನ್ನಗಳ ಕಚ್ಚಾ ವಸ್ತುವಾಗಿ ಬಳಸಿಕೊಂಡು ಉತ್ಪಾದಕ ಚಟುವಟಿಕೆ ಮಾಡುವುದು. ಸ್ಥಳೀಯವಾಗಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಕೆಗಾಗೊ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯಮ ಚಟುವಟಿಕೆ ಮಾಡುವುದು.ಎಂ.ಎಸ್.ಎಂ.ಈ.ಡಿ ಕಾಯಿದೆ 2006 ಅಡಿಯಲ್ಲಿ ವರ್ಗೀಕರಿಸಲಾದ ಸಣ್ಣ ಅಥವಾ ಮಧ್ಯಮ ಉದ್ಯಮಗಳನ್ನು ಅಭಿವೃದ್ಧಿಪಡಿಸುವುದು.

    ಸಾವಯವ ಗೊಬ್ಬರ ತಯಾರಿಕೆ, ತೋಟಗಾರಿಕೆ ಹೂವು ಅರಣ್ಯ ಕೃಷಿ ಬೆಳೆಗಳ ನರ್ಸರಿ, ಜೈವಿಕ ಕೀಟನಾಶಕಗಳ ತಯಾರಿಕೆ, ನೀರು ಮತ್ತು ಮಣ್ಣು ಪರೀಕ್ಷೆ, ಪಶು ಆಹಾರ ಮೇವು ಉತ್ಪಾದನೆ ಇತ್ಯಾದಿಗಳ ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ ಮಾಡುವುದು. ಕಟಾವು ಆದ ನಂತರ ಹೂವು, ಹಣ್ಣು, ಸಾಂಬಾರು ಪದಾರ್ಥಗಳ ಇತ್ಯಾದಿಗಳನ್ನು ಪೂರ್ವಸಿದ್ಧತೆಗೊಳಿಸಿ ಮಾರುಕಟ್ಟೆಗೆ ತಲುಪಿಸುವುದು. ಅತಿಸಣ್ಣ, ಸಣ್ಣ ಉದ್ದಿಮೆಗಳಾದ ಉಪ್ಪಿನಕಾಯಿ, ಜಾಮ್ ತಯಾರಿಕೆ ಅರಿಶಿನ ಪುಡಿ, ಶುಂಠಿಬೆಳ್ಳುಳ್ಳಿ ಪೇಸ್ಟ್ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಅಗ್ರಿ ಟೂರಿನಂ, ಆಯುಷ್ ಮೆಡಿಸಿನ್ಸ್, ನೇಯ್ಗೆ ಉತ್ಪನ್ನಗಳು, ಸುಗಂಧ ದ್ರವ್ಯ, ಡೈಗಳನ್ನು ಇತ್ಯಾದಿ ಮೌಲ್ಯ ವರ್ದನೆ ಕೇಂದ್ರಿತ ಚಟುವಟಿಕೆಗಳನ್ನು ಮಾಡುವುದು. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ

    ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ, ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು. ಹತ್ತಿ ಬೆಳೆ ಉಳಿಕೆಯ ಉತ್ಪನ್ನಗಳು, ಹತ್ತಿ ಭತ್ತದ ಉಳಿಕೆಯಿಂದ ಪೈಬರ್ ಬೋರ್ಡ್ ಯಾರಿಸುವುದು, ಕತ್ತಾಳೆ ಬಾಳೆ ನಾರಿನ ತ್ಪನ್ನಗಳು, ಅಡಿಕೆ ಹಾಳೆ ಉತ್ಪನ್ನಗಳು, ಬಯೋಗ್ಯಾಸ್ ಉತ್ಪಾದನೆ, ಯೂರಿಯಾ ಲೇಪಿಸಿಸಿ ಮೇವಿನ ಬ್ಲಾಕ್‍ಗಳ ತಯಾರಿಕೆ, ಕಬ್ಬು ಸೋಗೆಯಿಂದ ಉತ್ಪನ್ನಗಳ ತಯಾರಿಕೆ ಸೇರಿದಂತೆ ಮುಂತಾದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನಾ ತ್ಯಾಜ್ಯಗಳನ್ನು ಮರುಬಳಸಬಹುದಾಗಿದೆ.

  • ಮೋದಿ ಆಶಯದಂತೆ ಅನ್ನದಾತ ರೈತರ ಸಂರಕ್ಷಣೆಗೆ ಸರ್ಕಾರ ಬದ್ಧ: ಬಿ.ಸಿ.ಪಾಟೀಲ್

    ಮೋದಿ ಆಶಯದಂತೆ ಅನ್ನದಾತ ರೈತರ ಸಂರಕ್ಷಣೆಗೆ ಸರ್ಕಾರ ಬದ್ಧ: ಬಿ.ಸಿ.ಪಾಟೀಲ್

    ಕಲಬುರಗಿ: ಅನ್ನದಾತ ರೈತರ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ 5.45 ಕೋಟಿ ರೂ. ವೆಚ್ಚದಲ್ಲಿ ಮಹಾವಿದ್ಯಾಲಯದ ವಿಸ್ತರಣಾ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ರೈತರ ಬಗ್ಗೆ ಸರ್ಕಾರಕ್ಕೆ ವಿಶೇಷ ಕಾಳಜಿ ಇದೆ. ವಿಧಾನಸೌಧದಲ್ಲಿ ಕೂತು ಕೆಲಸ ಮಾಡುವ ಸರ್ಕಾರ ಇದಲ್ಲ, ರೈತರ ಬಾಗಿಲಿಗೆ, ಹೊಲಗಳಿಗೆ ಸರ್ಕಾರ ಹೋಗಲಿದೆ ಎಂದ ಅವರು ಮುಂದಿನ ದಿನದಲ್ಲಿ ಕಲಬುರಗಿಗೆ ಬಂದು ಒಂದು ರೈತರೊಂದಿಗಿದ್ದು, ಅವರ ಸಂಕಷ್ಟಗಳನ್ನು ಆಲಿಸುವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸಿ- ಸರ್ಕಾರ ಆದೇಶ

    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿದ ಕೂಡಲೇ ಜಾತಿ-ಧರ್ಮ ನೋಡದೆ ರೈತರ ಮಕ್ಕಳ ಉನ್ನತ ವ್ಯಾಸಂಗ ಮಾಡಬೇಕು ಎಂಬ ಕಾರಣದಿಂದ 2,500 ರೂ. ಗಳಿಂದ 11,500 ರೂ.ವರೆಗೆ ವಿದ್ಯಾರ್ಥಿ ವೇತನ ಘೋಷಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ 8 ರಿಂದ 10ನೇ ತರಗತಿ ಓದುವ ರೈತರ ಹೆಣ್ಣು ಮಕ್ಕಳಿಗೆ ವಾರ್ಷಿಕ 3,000 ರೂ. ವಿದ್ಯಾರ್ಥಿ ವೇತನವು ಜಾತಿಗೊಳಿಸಲಾಗಿದೆ. ಒಟ್ಟಾರೆಯಾಗಿ ರೈತಾಪಿ ಕುಟುಂಬವನ್ನು ಮೇಲಕ್ಕೆತ್ತುವ ಸರ್ವ ಪ್ರಯತ್ನ ನಡೆದಿದೆ ಎಂದು ಅಭಿಪ್ರಾಯಪಟ್ಟರು.

    ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಮಾತನಾಡಿ, ಕೃಷಿ ಮಹಾವಿದ್ಯಾಲಯಕ್ಕೆ ಮುಖ್ಯ ರಸ್ತೆಯಿಂದ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೆಕೆಅರ್‌ಡಿಬಿ ಯಿಂದ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಾದಯಾತ್ರೆ ಕುರಿತು ನ್ಯಾಯಾಲಯ ನೀಡುವ ಆದೇಶವನ್ನು ಪಾಲನೆ ಮಾಡುತ್ತೇವೆ: ಸಿದ್ದರಾಮಯ್ಯ

    ಕಾರ್ಯಕ್ರಮದಲ್ಲಿ ಸಂಸದ ಡಾ. ಉಮೇಶ್, ಜಿ. ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ್ ವಿಧಾನ ಪರಿಷತ್ ಶಾಸಕರಾದ ಡಾ. ಬಿ.ಜಿ.ಪಾಟೀಲ್, ಶಶೀಲ್ ಜಿ. ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಉಪಸ್ಥಿತರಿದ್ದರು.

  • ಆರೋಗ್ಯ ಕೇಂದ್ರದಲ್ಲೇ ಬೂಸ್ಟರ್ ಡೋಸ್ ಪಡೆದ ಬಿ.ಸಿ.ಪಾಟೀಲ್

    ಆರೋಗ್ಯ ಕೇಂದ್ರದಲ್ಲೇ ಬೂಸ್ಟರ್ ಡೋಸ್ ಪಡೆದ ಬಿ.ಸಿ.ಪಾಟೀಲ್

    ಹಾವೇರಿ: ಇಂದಿನಿಂದ ದೇಶಾದ್ಯಂತ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಅಭಿಯಾನ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾವೇರಿ ಜಿಲ್ಲೆಯಲ್ಲಿ ಲಸಿಕೆಯನ್ನು ಪಡೆದರು.

    ಹಾವೇರಿಯ ಹಿರೇಕೆರೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಚಿವ ಬಿ.ಸಿ. ಪಾಟೀಲ್ 60 ವರ್ಷ ಮೇಲ್ಪಟ್ಟ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್ ಅವರು, ದೇಶದಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಜನರಿಗೆ ಕೊರೋನಾ ವೈರಸ್ ವಿರುದ್ಧ ಹೋರಾಡಲು ಬೂಸ್ಟರ್ ಡೋಸ್‌ನ್ನು ಇಂದಿನಿಂದ ನೀಡಲಾಗುತ್ತಿದೆ. ಬೂಸ್ಟರ್ ಡೋಸ್ ಲಸಿಕೆ ವೇಳೆ ಮಿಕ್ಸ್ ಡೋಸ್ ನೀಡಲು ಅವಕಾಶವಿಲ್ಲ ಎಂದರು. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    ಈ ಹಿಂದೆ ಮೊದಲ ಮತ್ತು ಎರಡನೇ ಡೋಸ್ ಯಾವ ಲಸಿಕೆ ಪಡೆಯಲಾಗಿದೆಯೋ ಅದೇ ಲಸಿಕೆ ಪಡೆಯಬೇಕು. ಕೋವಿಶೀಲ್ಡ್, ಕೋವ್ಯಾಕ್ಸಿನ್ 2 ಡೋಸ್ ಲಸಿಕೆ ಪಡೆದವರು, ಬೂಸ್ಟರ್ ಡೋಸ್‌ನ್ನೂ ಕೂಡ ಅವುಗಳನ್ನೇ ಪಡೆಯಬೇಕು. ಮಿಕ್ಸ್ ಬೂಸ್ಟರ್ ಡೋಸ್ ನೀಡಲು ಅನುಮತಿಸುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್

    ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಆರೋಗ್ಯ ಸೇವಕರು, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಮೂರನೇ ಡೋಸ್ ಲಸಿಕೆಯನ್ನು ಪಡೆಯುವುದರಿಂದ ಓಮಿಕ್ರಾನ್ ರೂಪಾಂತರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ವಿರುದ್ಧ ಶೇ. 88ರಷ್ಟು ರಕ್ಷಣೆ ನೀಡುತ್ತದೆ ಎಂದು ಯುಕೆ ಅಧ್ಯಯನವು ಕಂಡುಹಿಡಿದಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಒಬ್ಬ ಸಾಮಾನ್ಯ ಮನುಷ್ಯ ಸಚಿವನಾಗಿದ್ದಕ್ಕೆ ಹೊಟ್ಟೆ ಉರಿ – ಎಂಬಿಪಿಗೆ ಕಾರಜೋಳ ತಿರುಗೇಟು

    ಕಳೆದ ವರ್ಷ ಬಿಸಿ ಪಾಟೀಲ್ ಮನೆಯಲ್ಲೇ ಪ್ರಥಮ ಕೋವಿಡ್ ಲಸಿಕೆಯನ್ನು ಪಡೆದಿದ್ದರು. ಈ ವಿಚಾರ ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು.

  • ತಾವು ಮಾಡಿದ ತಪ್ಪು, ಅಕ್ರಮಕ್ಕೆ ಬಿಜೆಪಿ ಮೇಲೆ ಏಕೆ ಆಪಾದನೆ ಮಾಡ್ತಾರೆ: ಬಿ.ಸಿ.ಪಾಟೀಲ್

    ತಾವು ಮಾಡಿದ ತಪ್ಪು, ಅಕ್ರಮಕ್ಕೆ ಬಿಜೆಪಿ ಮೇಲೆ ಏಕೆ ಆಪಾದನೆ ಮಾಡ್ತಾರೆ: ಬಿ.ಸಿ.ಪಾಟೀಲ್

    ಹಾವೇರಿ: ತಾವು ಮಾಡಿದ ತಪ್ಪಿಗೆ, ತಮ್ಮ ಅಕ್ರಮಕ್ಕೆ ಬಿಜೆಪಿ ಮೇಲೆಕೆ ಆಪಾದನೆ ಮಾಡುತ್ತಾರೆ. ಬಿಜೆಪಿ ಸೇರದವರನ್ನೆಲ್ಲ ಜೈಲಿಗೆ ಕಳಿಸೋಕೆ ಆಗಿದೆಯಾ? ಎಲುಬಿಲ್ಲದ ನಾಲಿಗೆ ಏನೋ ಮಾತನಾಡಿದರೆ ಜನರು ನಂಬುವಷ್ಟು ದಡ್ಡರಿಲ್ಲ, ಮಾತನಾಡಬೇಕಾದರೆ ಅರ್ಥ ಇಟ್ಕೊಂಡು ಮಾತಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಟಾಂಗ್‍ಕೊಟ್ಟಿದ್ದಾರೆ.

    BJP - CONGRESS

    ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಪ್ರಶ್ನೆ ಇಲ್ಲ. ಕಳೆದ ಬಾರಿಯೂ ಇಲ್ಲಿ ಒಂದೇ ಅಭ್ಯರ್ಥಿ ಹಾಕಿದ್ದೇವು. ಈ ಬಾರಿಯೂ ಒಂದೇ ಅಭ್ಯರ್ಥಿ ಹಾಕಿದ್ದೇವೆ. ಪ್ರಧಾನಿ ಮೋದಿ ಗೋದ್ರಾ ಸಮಯದಲ್ಲಿದ್ದಂತಿಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಪ್ರತಿದಿನ ಸೂರ್ಯ ಹುಟ್ಟಿ ಸೂರ್ಯ ಮುಳುಗ್ತಾನೆ. ಬದಲಾವಣೆ ಸಹಜ. ಶತಮಾನ, ವಯಸ್ಸು, ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಹಿಂದೆ ಹೆಚ್ಚು ಕಡಿಮೆ ಇರಬಹುದು. ಇವತ್ತು ಬದಲಾವಣೆ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ

    ದೇವೇಗೌಡರು ಪ್ರಧಾನಿಯವರನ್ನ ಹೊಗಳ್ತಾರೆ ಅಂದರೆ ಅದನ್ನ ಮೆಚ್ಚಬೇಕಾಗುತ್ತೆ. ಪ್ರಧಾನಿ ಮೋದಿಯವರು ಜಗತ್ತಿನ ಪ್ರಭಾವಿ ನಾಯಕರು. ಮಾಜಿ ಪ್ರಧಾನಿ ದೇವೇಗೌಡರು ಅನುಭವಿ ರಾಜಕಾರಣಿ. ಅವರು ಹೇಳಿದ್ದರಲ್ಲಿ ಅರ್ಥ ಇರುತ್ತೆ. ದೇವೇಗೌಡರು ವಾಸ್ತವಾಂಶವನ್ನೆ ಹೇಳಿದ್ದಾರೆ. ಹೊಂದಾಣಿಕೆಯನ್ನ ಯಾರೇ ಮಾಡಿಕೊಂಡರೂ ಅದು ಹೊಂದಾಣಿಕೆಯೆ. ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು, ಬಿಜೆಪಿ ಮತ್ತು ಜೆಡಿಎಸ್ ಅಥವಾ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಯಾರೇ ಹೊಂದಾಣಿಕೆ ಮಾಡಿಕೊಂಡರೂ ಅದು ಹೊಂದಾಣಿಕೆಯೆ. ಗಂಡ, ಹೆಂಡತಿ ಸರಿಯಾಗಿ ಸಂಸಾರ ಮಾಡಿಕೊಂಡು ಹೋದರೆ ಸಾಕು ಹೇಳಿದ್ದಾರೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

  • ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ಉತ್ಪಾದಕತೆ ಹೆಚ್ಚಿಸಿ: ಬಿ.ಸಿ ಪಾಟೀಲ್

    ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ಉತ್ಪಾದಕತೆ ಹೆಚ್ಚಿಸಿ: ಬಿ.ಸಿ ಪಾಟೀಲ್

    -ಮಣ್ಣು ಅಳಿದರೆ ಮಾನವ ಅಳಿದಂತೆ

    -ಡಿಸೆಂಬರ್ 5 ಅಂತರಾಷ್ಟ್ರೀಯ ಮಣ್ಣು ದಿನ

    ಬೆಂಗಳೂರು: ಮಣ್ಣಿನಿಂದ ಜೀವ, ಮಣ್ಣಿನಿಂದ ಕಾಯ, ಮಣ್ಣು ಅಳಿದರೆ ಮಾನವ ಅಳಿದಂತೆ. ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತಾಗಿರುವುದರಿಂದ ಇದನ್ನು ಉಳಿಸಲೇಬೇಕಾದ ಮಹತ್ತರ ಜವಾಬ್ದಾರಿ ಹಾಗೂ ಕರ್ತವ್ಯ ಪ್ರತಿಯೊಬ್ಬರದ್ದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

    ಮಣ್ಣು ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಧ್ಯೇಯವಾಕ್ಯದೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. ವಿಶ್ವ ಮಣ್ಣು ದಿನ-5 ಡಿಸೆಂಬರ್ 2021ರ ಧ್ಯೇಯ ‘ಮಣ್ಣಿನ ಸವುಳಾಗುವಿಕೆಯನ್ನು ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ’ ಎಂದು ಘೋಷಿಸಿದೆ. ಮಣ್ಣು ಪ್ರಕೃತಿಯ ಒಂದು ಅಮೂಲ್ಯ ಕೊಡುಗೆ. ಮನುಷ್ಯ , ಪ್ರಾಣಿ, ಜೀವಿಗಳು, ಸಸ್ಯಗಳಿಗೆ ಆಧಾರವೇ ಮಣ್ಣು. ಮಣ್ಣಿನಿಂದ ಜೀವ, ಮಣ್ಣಿನಿಂದ ಕಾಯ, ಮಣ್ಣು ಅಳಿದರೆ ಮಾನವ ಅಳಿದಂತೆ ಎಂದು ತಿಳಿಸಿದ ಪುರಂದರದಾಸರ ಮಾರ್ಮಿಕ ನಿಲುವು ನಿತ್ಯ ಸತ್ಯವಾಗಿದೆ. ಇದನ್ನೂ ಓದಿ: ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟದಿಂದ 13 ಮಂದಿ ಸಾವು

    ಜಗತ್ತಿನ ಶೇ. 95 ರಷ್ಟು ಆಹಾರ ಮಣ್ಣಿನಿಂದಲೇ ದೊರಕುವುದು. ಈಗಾಗಲೇ ಶೇ.33 ರಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಡಿರುವುದು ಕಂಡುಬಂದಿರುವುದರಿಂದ ಉತ್ಪಾದಕತೆಯಲ್ಲಿ ಶೇ.17 ರಷ್ಟು ಕಡಿಮೆಯಾಗಿದೆ. ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಜೀವವಾಗಿದೆ. ಮಣ್ಣಿನ ಫಲವತ್ತತೆ ಪೋಷಕಾಂಶಗಳು ಮಾತ್ರವಲ್ಲ, ಅನುಕೂಲಕರ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂದಗಳನ್ನು ಒಳಗೊಂಡಿದೆ. ಸಜೀವ ಮಣ್ಣು ಸಕಲ ಜೀವಿಗಳಿಗೆ ಆಹಾರ, ಮೇವು, ವಸತಿ, ಇಂಧನ ಇತ್ಯಾದಿ ಒದಗಿಸುತ್ತಿದೆ. ಮಳೆ ನೀರನ್ನು ಸಂಗ್ರಹಿಸಿ ಶುದ್ಧ ಮಾಡುತ್ತದೆ. ಸಾವಯವ ವಸ್ತುವನ್ನು ಪೋಷಕಾಂಶಗಳಾಗಿ ಬದಲಿಸುತ್ತದೆ. ಪ್ರವಾಹಗಳನ್ನು ಹಾಗೂ ಹವಾಮಾನ ಏರುಪೇರನ್ನು ತಡೆಯುತ್ತದೆ. ಭೂಮಿ ಮೇಲಿನ ಜೀವ ಜಂತುಗಳಿಗೆ ಆಶ್ರಯ ನೀಡುತ್ತದೆ. ಆದ್ದರಿಂದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ

    ಅಂತರಾಷ್ಟ್ರೀಯ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸುವಂತೆ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸು ಮಾಡಿದ್ದು, ನಂತರ 5 ಡಿಸೆಂಬರ್ 2014 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯಿತು. ಮಣ್ಣಿನ ಸವಕಳಿ, ರಾಸಾಯನಿಕ ಗೊಬ್ಬರದ ಅಸಮತೋಲನ ಬಳಕೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಲಕ್ಷಣಗಳು ನಾಶವಾಗುತ್ತಿದೆ. ಮಣ್ಣಿನಲ್ಲಿ ಸವುಳು, ಜವುಳು, ಆಮ್ಲ ಮತ್ತು ಕ್ಷಾರಮಯ ವಾಗಿ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತಿದೆ. ಕರಗುವ ಲವಣಗಳನ್ನು ಭೂಮಿಯಲ್ಲಿ ಉಳಿಸಿಕೊಂಡಾಗ ಮಣ್ಣಿನ ಸವುಳು ಸಂಭವಿಸುತ್ತದೆ. ಇದು ನೈಸರ್ಗಿಕವಾಗಿ ಅಥವಾ ಅನುಚಿತ ಮಾನವ ಚಟುವಟಿಕೆಗಳಿಂದ, ವಿಶೇಷವಾಗಿ ಕೃಷಿ ಪದ್ಧತಿಗಳಿಂದ ಸಂಭವಿಸುತ್ತದೆ. ಇದಲ್ಲದೆ, ಕಡಿಮೆ ಉಪ್ಪು ಕರಗುವಿಕೆಯಿಂದಾಗಿ ಕೆಲವು ಭೂಮಿಗಳು ಆರಂಭದಲ್ಲಿ ಚೌಳಾಗುತ್ತದೆ ಆದ್ದರಿಂದ ಕೃಷಿಕರು ಮಣ್ಣು ಸವುಳಾಗುವುದನ್ನು ತಪ್ಪಿಸುವುದನ್ನು ಗಮನದಲ್ಲಿಟ್ಟುಕೊಂಡೇ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬೇಕು. ಮಣ್ಣು ಸವಕಳಿ ತಪ್ಪಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡರು.

  • ಮುಂಬರುವ ಚುನಾವಣೆಗೆ ಪಕ್ಷ ಬಲಪಡಿಸುವುದಕ್ಕೆ ಜನ ಸ್ವರಾಜ್ ಯಾತ್ರೆ: ಬಿ.ಸಿ ಪಾಟೀಲ್

    ಮುಂಬರುವ ಚುನಾವಣೆಗೆ ಪಕ್ಷ ಬಲಪಡಿಸುವುದಕ್ಕೆ ಜನ ಸ್ವರಾಜ್ ಯಾತ್ರೆ: ಬಿ.ಸಿ ಪಾಟೀಲ್

    – ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದಿದ್ದರೆ, ರಾಜ್ಯವನ್ನೇ ಮಾರಿಬಿಡುತ್ತಿದ್ದರು

    ಗದಗ: ಮುಂಬರುವ ಚುನಾವಣೆಗಾಗಿ, ಪಕ್ಷ ಬಲಪಡಿವುದಕ್ಕೆ ಜನ ಸ್ವರಾಜ್ ಯಾತ್ರೆಯಾಗಿದೆ. ಜನ ಸ್ವರಾಜ್ ಯಾತ್ರೆ ಬಗ್ಗೆ ಕಾಂಗ್ರೆಸ್ ಟೀಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

    ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನರಗುಂದ ಪಟ್ಟಣದಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 2 ವರ್ಷದಲ್ಲಿ ಕೋವಿಡ್ ನಿಯಂತ್ರಣ ಮಾಡಿದ್ದೇ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಜೊತೆಗೆ ರಾಜ್ಯದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಕಾಂಗ್ರೆಸ್‍ನವರಿಗೆ ಕೇಳಿ ಬಿಜೆಪಿ ಜನ ಸ್ವರಾಜ್ ಕಾರ್ಯಕ್ರಮದ ಮಾಡಬೇಕಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಜಾಥಾ, ಅಭಿಮಾನ ನಡೆಸುವುದು ಸಾಮಾನ್ಯವಾಗಿದೆ. ಆ ಮೂಲಕ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತದೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದಿದ್ದರೆ, ರಾಜ್ಯವನ್ನೇ ಮಾರಿಬಿಡುತ್ತಿದ್ದರು. ಇಲ್ಲವೇ ಹಾದಿ ಬೀದಿಯಲ್ಲೇ ಸಾಲು ಸಾಲು ಹೆಣಗಳು ಬೀಳುತ್ತಿದ್ದವು. ಈ ಹಿಂದೆ 18 ತಿಂಗಳು ಅಧಿಕಾರ ನಡೆಸಿದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದ ಕೊಡುಗೆ ಏನು ಎಂದು ಕುಟುಕಿದರು. ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಮತ ಪೆಟ್ಟಿಗೆ ಮೂಲಕ ಉತ್ತರ ನೀಡುತ್ತೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ

    ರಮೇಶ್ ಜಾರಕಿಹೋಳಿಗೆ ಸಚಿವ ಸ್ಥಾನ ಕುರಿತು ಮಾತನಾಡಿದ್ದು, ಯಾರದ್ದೋ ಕುತಂತ್ರದಲ್ಲಿ ಸಿಲುಕಿದ್ದ ರಮೇಶ್ ಜಾರಕಿಹೊಳಿ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯ ದಿನಗಳು ಬರುತ್ತವೆ ಎಂದರು.

    ಮೇಕೆದಾಟು ಯೋಜನೆ ಕೋರ್ಟ್‍ನಲ್ಲಿದ್ದು, ಅಲ್ಲಿ ಕ್ಲಿಯರೆನ್ಸ್ ದೊರಕುತ್ತಿದ್ದಂತೆ ನಾವೇ ಮಾಡುತ್ತೇವೆ. ಈ ಬಗ್ಗೆ ಕಾಂಗ್ರೆಸನವರಿಂದ ಹೇಳಿಸಿಕೊಳ್ಳಬೇಕಿಲ್ಲ. ತಮ್ಮದೇ ಯೋಜನೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ತಮ್ಮ ಅಧಿಕಾರದಲ್ಲಿ ಏಕೆ ಮಾಡಲಿಲ್ಲ ಎಂದು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಸಂಸದ ಪಿ.ಸಿ.ಗದ್ದಿಗೌಡರ ಮತ್ತಿತರರು ಇದ್ದರು.

  • ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಮಜ್ಜಿಗೆ ತಯಾರಿಸಿದ ಬಿ.ಸಿ ಪಾಟೀಲ್

    ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಮಜ್ಜಿಗೆ ತಯಾರಿಸಿದ ಬಿ.ಸಿ ಪಾಟೀಲ್

    ಚಿಕ್ಕೋಡಿ: ರೈತನ ಮನೆಯಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ತಾವೇ ಖುದ್ದು ಮಜ್ಜಿಗೆ ತಯಾರಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಅರಗ ಜ್ಞಾನೇಂದ್ರ ತಿರುಗೇಟು

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಪ್ರವೀಣ ಶಾ ಎಂಬ ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಉತ್ತರ ಕರ್ನಾಟಕದ ಶೈಲಿಯಲ್ಲಿ ಕುಳಿತು ಮೊಸರು ಕಡಿದು ಮಜ್ಜಿಗೆ ತಯಾರಿಸಿದ್ದಾರೆ. ಇದನ್ನೂ ಓದಿ: ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ

    ಸಚಿವರ ಬಳಿಕ ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ್ ಜೊಲ್ಲೆ ಕೂಡ ಮಜ್ಜಿಗೆ ತಯಾರಿ ಮಾಡಿದ್ದಾರೆ. ಕೊನೆಗೆ ಮಜ್ಜಿಗೆ ಕುಡಿದು ಬಿ.ಸಿ ಪಾಟೀಲ್ ಖುಷಿ ಪಟ್ಟರು. ಬೆಳಿಗ್ಗಿನಿಂದಲೂ ಬಿ.ಸಿ ಪಾಟೀಲ್ ಹಾಗೂ ಶಶಿಕಲಾ ಜೊಲ್ಲೆ ನಿಪ್ಪಾಣಿ ಕ್ಷೇತ್ರದ ರೈತರ ಜಮೀನುಗಳಿಗೆ ತೆರಳಿ ರೈತರು ಅಳವಡಿಸಿಕೊಂಡಿರುವ ವಿಶೇಷ ತಂತ್ರಜ್ಞಾನಗಳನ್ನ ಪರಿಶೀಲಿಸಿ ರೈತರಿಗೆ ಸತ್ಕಾರ ಮಾಡಿದರು. ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಹಿರಿಯ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

  • ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ – ಕಬ್ಬು ನಾಟಿ ಮಾಡಿದ ಕೌರವ

    ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ – ಕಬ್ಬು ನಾಟಿ ಮಾಡಿದ ಕೌರವ

    ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಭೀವಶಿ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ರೈತರಿಗೊಂದು ದಿನ ಕಾರ್ಯಕ್ರಮದಲ್ಲಿ ನಾಟಿ ಮಾಡಿದ್ದಾರೆ.

    ಬಿ.ಸಿ ಪಾಟೀಲ್ ಅವರನ್ನು ಕುಂಭಮೇಳ ಮತ್ತು ವಿವಿಧ ಜಾನಪದ ಕಲಾತಂಡಗಳಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ಈ ವೇಳೆ ಭೀವಶಿ ಗ್ರಾಮದ ಕಳೋಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು. ಬಳಿಕ ಎತ್ತಿನ ಬಂಡಿಯ ಮೇಲೆ ನಿಂತು ದೇವಸ್ಥಾನ ಆವರಣದಿಂದ ಗ್ರಾಮದ ಹೊರವಲಯದಲ್ಲಿರುವ ನರಸಿಂಹ ಚೌಗುಲೆ ಅವರ ಕೃಷಿಭೂಮಿಗೆ ಹೋಗಿ ಸಚಿವರು ಕಬ್ಬಿನ ನಾಟಿ ಮಾಡಿದರು. ಇದನ್ನೂ ಓದಿ:  ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್‌ಗಳು

    ಎತ್ತಿನಬಂಡಿಯಲ್ಲಿ ಜಮೀನಿನವರೆಗೆ ಮೆರವಣಿಗೆ ಮೂಲಕ ಕೌರವ ಕಬ್ಬಿನ ಗದ್ದೆಗೆ ಬಂದು ನಾಟಿ ಮಾಡಿದರು. ಬಳಿಕ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳು, ಮುತ್ತೈದೆಯರ ಕುಂಭಮೇಳ ಮೆರವಣಿಗೆ ಕಳೆ ಹೆಚ್ಚಿಸಿದವು.

    ಈ ವೇಳೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇತರರು ಸಚಿವರಿಗೆ ಸಾಥ್ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತಾನಡಿದ ಅವರು, ರೈತರು ಸಮಸ್ಯೆಗಳನ್ನು ಹೊತ್ತು ಸರ್ಕಾರದ ಮುಂದೆ ಹೋಗಬಾರದು. ಸರ್ಕಾರವೇ ರೈತರ ಬಳಿಗೆ ಹೋಗಬೇಕು ಎಂಬ ನಿಟ್ಟಿನಲ್ಲಿ ರೈತರಿಗೊಂದು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಇಬ್ಬರ ಜಗಳದಲ್ಲಿ ಬೀದಿಯಲ್ಲಿ ನಿಂತ ದೇವರ ಬಸವ

    ಇಡೀ ದಿನ ರೈತರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಕೂಡ ಕಾರ್ಯಕ್ರಮದ್ದಾಗಿದ್ದು, ರೈತರು, ರೈತ ಮಕ್ಕಳೊಂದಿಗೆ ಸಂವಾದ ನಡೆಸಲಾಗುತ್ತಿದೆ. ನೆರೆ ಸಂತ್ರಸ್ತರ ಬಗ್ಗೆ ಈಗಾಗಲೇ ಸರ್ವೇ ಮಾಡಲಾಗಿದೆ. ಸರ್ವೇ ಕಾರ್ಯ ಮುಗಿದ ಮೇಲೆ ಪರಿಹಾರ ವಿತರಣೆ ಮಾಡಲಾಗುತ್ತೆ ಎಂದರು.

  • ಸಿ.ಎಂ.ಗೆ ಉಡುಗೊರೆ ನೀಡಿದ್ದ ಬೆಳ್ಳಿ ಗದೆಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ ಬಿ.ಸಿ.ಪಾಟೀಲ್

    ಸಿ.ಎಂ.ಗೆ ಉಡುಗೊರೆ ನೀಡಿದ್ದ ಬೆಳ್ಳಿ ಗದೆಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ ಬಿ.ಸಿ.ಪಾಟೀಲ್

    ಹಾವೇರಿ: ಸಿ.ಎಂ.ಗೆ ಉಡುಗೊರೆ ನೀಡಿದ್ದ ಬೆಳ್ಳಿ ಗದೆಯನ್ನ ಆಂಜನೇಯ ದೇವಸ್ಥಾನಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಮರ್ಪಣೆ ಮಾಡಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 28, ರಂದು ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ ಸಿಎಂಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೆಳ್ಳಿ ಗದೆಯನ್ನು ಉಡುಗೊರೆ ನೀಡಿದ್ದರು. ಇದನ್ನೂ ಓದಿ:  ಮಳೆಯಿಂದ ಹಾಸ್ಟೆಲ್ ಜಲಾವೃತ: ರಾತ್ರಿಯಿಡೀ ಛಾವಣಿ ಹತ್ತಿ ಕುಳಿತ ವಿದ್ಯಾರ್ಥಿಗಳು

    ಈ ಉಡುಗೊರೆಯನ್ನ ಆಂಜನೇಯ ದೇವಸ್ಥಾನಕ್ಕೆ ನೀಡುವಂತೆ ಸಿಎಂ ಬೊಮ್ಮಾಯಿ ಹೇಳಿದ್ದರು. ಹೀಗಾಗಿ ಇಂದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಆಂಜನೇಯ ದೇವಸ್ಥಾನಕ್ಕೆ ಬೆಳ್ಳಿ ಗದೆ ಸಮರ್ಪಣೆ ಮಾಡಲಾಗಿದೆ. ಆಂಜನೇಯ ದೇವಸ್ಥಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೆಸರಿನಲ್ಲಿ ಪೂಜೆ ಮಾಡಿಸಿ, ಗದೆಯನ್ನ ದೇವಸ್ಥಾನಕ್ಕೆ ಬಿ.ಸಿ.ಪಾಟೀಲ್ ಬೆಳ್ಳಿ ಗದೆ ಅರ್ಪಿಸಿದ್ದಾರೆ. ಇದನ್ನೂ ಓದಿ:  ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

    ಬಿ.ಸಿ.ಪಾಟೀಲ್ ಅವರಿಗೆ ಬ್ಯಾಡಗಿ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾದ ಆರ್.ಎನ್.ಗಂಗೋಳ, ರವಿ ಮೆಣಸಿನಕಾಯಿ ಸಾಥ್ ನೀಡಿದರು. ಸಿ.ಎಂ ಉಡುಗೊರೆಯನ್ನು ತೆಗೆದುಕೊಳ್ಳದೆ, ಅದನ್ನ ದೇವರಿಗೆ ನೀಡಿ ಸರಳತೆ ಮೆರೆದಿದ್ದಾರೆ.