Tag: BC Patil

  • ಕಾಂಗ್ರೆಸ್‍ನವರು ಸತ್ಯ ಹರಿಶ್ಚಂದ್ರನ ತುಂಡುಗಳಲ್ಲ: ಬಿ.ಸಿ. ಪಾಟೀಲ್

    ಕಾಂಗ್ರೆಸ್‍ನವರು ಸತ್ಯ ಹರಿಶ್ಚಂದ್ರನ ತುಂಡುಗಳಲ್ಲ: ಬಿ.ಸಿ. ಪಾಟೀಲ್

    ಬೆಂಗಳೂರು: ಕಾಂಗ್ರೆಸ್‍ನ (Congress) ಸೇ ಸಿಎಂ ಅಭಿಯಾನದ ವಿರುದ್ಧ ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil) ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಕಾಂಗ್ರೆಸ್ ಮಾತು ಇದೆ. ಕಾಂಗ್ರೆಸ್‍ನವರು ಸತ್ಯ ಹರಿಶ್ಚಂದ್ರನ ತುಂಡು ಆಡಿದ ಹಾಗೆ ಆಡ್ತಿದ್ದಾರೆ ಎಂದು ಕಿಡಿಕಾರಿದರು.

    Congress

    ಕಾಂಗ್ರೆಸ್ ಅವರಿಗೆ ಮಾಡೋಕೆ ಕೆಲಸ ಇಲ್ಲದೆ ಇಂತಹ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸ ಸಹಿಸಲು ಆಗದೆ ಇಂತಹ ಆರೋಪ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಆದರೆ ಅದು ಕನಸಾಗಿಯೇ ಇರುತ್ತದೆ. ಸುಮ್ಮನೆ ಕಾಂಗ್ರೆಸ್‍ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾವು ಕೊಟ್ಟ ಬಹುತೇಕ ಪ್ರಣಾಳಿಕೆ ಕಾರ್ಯಕ್ರಮಗಳನ್ನು ಈಡೇರಿಕೆ ಮಾಡಿದ್ದೇವೆ. ಎಲ್ಲ ದಾಖಲೆ ಕೊಡುತ್ತೇವೆ. ವಿದ್ಯಾನಿಧಿ ಯೋಜನೆ ರೈತರ ಮಕ್ಕಳಿಗೆ ಕೊಡ್ತಿದ್ದೇವೆ. ಮೋದಿ ಅವರು ನೇರವಾಗಿ ರೈತರ ಖಾತೆಗೆ ಹಣ ಹಾಕ್ತಿದ್ದಾರೆ. ಡಿಸೇಲ್‌ಗೆ ರೈತರಿಗೆ ಹಣ ಕೊಡ್ತಿದ್ದೇವೆ. ಇವೆಲ್ಲ ಕಾಂಗ್ರೆಸ್ ಕಣ್ಣಿಗೆ ಕಾಣೋದಿಲ್ಲವಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬೊಮ್ಮಾಯಿ ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ RSS ನಾಯಕರ ಪಾದಪೂಜೆ ಮಾಡಲೇಬೇಕು: ಸಿದ್ದರಾಮಯ್ಯ

    ಕಾಂಗ್ರೆಸ್ ಬರೀ ಅಹಿಂದಾ ಅಂತ ಹೇಳಿದ್ದು ಅಷ್ಟೆ. SC-ST ಮೀಸಲಾತಿ ಹೆಚ್ಚಳ ಮಾಡಿದ್ದು ನಾವು. ಕಾಂಗ್ರೆಸ್ ಕೇವಲ ಹೇಳಿದ್ದು ಅಷ್ಟೆ. ನಾವು ಮಾಡಿ ತೋರಿಸಿದ್ದೇವೆ ಎಂದು ತಿರುಗೇಟು ಕೊಟ್ಟರು. ಕಾಂಗ್ರೆಸ್ ಅವರಿಗೆ ಕಾಮಾಲೆ ಕಣ್ಣು. ಅದಕ್ಕೆ ಎಲ್ಲವೂ ಅವರಿಗೆ ಹಳದಿ ಕಾಣುತ್ತಿದೆ. ಹೀಗಾಗಿ ಅವರ ಸಹವಾಸ ಬೇಡ ಅಂತ ನಾವು ಡೈವೋರ್ಸ್ ಮಾಡಿ ಬಂದಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಖರ್ಗೆಗೆ ಭರ್ಜರಿ ಗೆಲುವು – 24 ವರ್ಷಗಳ ಬಳಿಕ ಗಾಂಧೀಯೇತರ ವ್ಯಕ್ತಿಗೆ ಕಾಂಗ್ರೆಸ್‌ ಪಟ್ಟ

    Live Tv
    [brid partner=56869869 player=32851 video=960834 autoplay=true]

  • ಬೊಮ್ಮಾಯಿ ಸಿಎಂ ಆದಾಗಿಂದ ಕಾಂಗ್ರೆಸ್‌ನವರು ಅಪಪ್ರಚಾರ ಮಾಡ್ತಿ‌ದ್ದಾರೆ: ಬಿ.ಸಿ.ಪಾಟೀಲ್

    ಬೊಮ್ಮಾಯಿ ಸಿಎಂ ಆದಾಗಿಂದ ಕಾಂಗ್ರೆಸ್‌ನವರು ಅಪಪ್ರಚಾರ ಮಾಡ್ತಿ‌ದ್ದಾರೆ: ಬಿ.ಸಿ.ಪಾಟೀಲ್

    ಹಾವೇರಿ: ಬೊಮ್ಮಾಯಿಯವರು ಸಿಎಂ ಆದಾಗಿನಿಂದ ಕಾಂಗ್ರೆಸ್‌ನವರು ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ (BC Patil) ಕಿಡಿಕಾರಿದರು.

    ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ಬೊಮ್ಮಾಯಿಯವರು (Basavaraj Bommai) ಹೋಗಿ ಬಿಡುತ್ತಾರೆ. ಅವರನ್ನು ಮಂತ್ರಿ ಸ್ಥಾನದಿಂದ ತೆಗೆದು ಬಿಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬೊಮ್ಮಾಯಿಯವರ ಯಶಸ್ವಿಯಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದಾರೆ. ಬೊಮ್ಮಾಯಿ ಹದಿನೈದು ಗಂಟೆ ಕೆಲಸ ಮಾಡಿ ಜನಾನುರಾಗಿ ಸಿಎಂ ಆಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನವರಿಗೆ ಭಯ ಹುಟ್ಟಿದೆ ಎಂದು ಹೇಳಿದರು.

    ಬೊಮ್ಮಾಯಿ, ಯಡಿಯೂರಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್‌ನವರು (Congress) ನಾವೆಲ್ಲಿ ಠೇವಣಿ ಕಳೆದುಕೊಳ್ತೇವೋ ಅನ್ನೋ ಭಯದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಅದು ನಾಚಿಕೆಗೇಡಿನ ಸಂಗತಿಯಾಗಿದೆ. ಸಂವಿಧಾನಾತ್ಮಕ ಸಿಎಂ ವಿರುದ್ಧ ಈ ರೀತಿ ಹೇಳೋದು ಸರಿಯಲ್ಲ. ಅವರೆಷ್ಟು ಸತ್ಯಹರಿಶ್ಚಂದ್ರರು ಅನ್ನೋ ಬಗ್ಗೆ ಅವರು ಆತ್ಮಮುಟ್ಟಿ ನೋಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: SIMI ಸಂಘಟನೆ ಹುಟ್ಟಿಕೊಂಡಿದ್ದೇ ವಿಜಯಪುರದಿಂದ: ಯತ್ನಾಳ್

    Congress

    ಮುಂಜಾಗ್ರತಾ ಕ್ರಮವಾಗಿ ಪಿಎಫ್‌ಐ (PFI) ಸಂಘಟನೆಯ ಮುಖಂಡರನ್ನು ಬಂಧಿಸುತ್ತಿದ್ದಾರೆ. ಮುಂದೆ ಆ ಸಂಘಟನೆಯನ್ನು ಬ್ಯಾನ್ ಮಾಡಬೇಕೋ ಏನೋ ಅನ್ನೋದರ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆಯಿಲ್ಲ. ದೇಶವನ್ನು ಉಳಿಸೋದು, ಶಾಂತಿ ಕಾಪಾಡೋದು ಬಹಳ ಮುಖ್ಯ. ಲಾಭ ನಷ್ಟದ ಬಗ್ಗೆ ಚಿಂತನೆ ಮಾಡೋ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: HALಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ: ದ್ರೌಪದಿ ಮುರ್ಮು

    Live Tv
    [brid partner=56869869 player=32851 video=960834 autoplay=true]

  • ಪ್ರಿಯಾಂಕ್ ಖರ್ಗೆ ಜೊಲ್ಲು ಸುರಿಸೋದ್ರಲ್ಲಿ ನಿಸ್ಸೀಮ – ಬಿಸಿ ಪಾಟೀಲ್ ಲೇವಡಿ

    ಪ್ರಿಯಾಂಕ್ ಖರ್ಗೆ ಜೊಲ್ಲು ಸುರಿಸೋದ್ರಲ್ಲಿ ನಿಸ್ಸೀಮ – ಬಿಸಿ ಪಾಟೀಲ್ ಲೇವಡಿ

    ಧಾರವಾಡ: ಹೈಫೈ ಲೈಫ್‌ನಲ್ಲಿ ಬೆಳೆದ ಶಾಸಕ ಪ್ರಿಯಾಂಕ್ ಖರ್ಗೆ ʼPriyank Kharge) ಅವರು ಜೊಲ್ಲು ಸುರಿಸುವುದರಲ್ಲಿ ನಿಸ್ಸೀಮರು ಎಂದು ಸಚಿವ ಬಿ.ಸಿ ಪಾಟೀಲ್ (BC Patil) ಲೇವಡಿ ಮಾಡಿದ್ದಾರೆ.

    ಬಿಜೆಪಿ (BJP) ಜೊಲ್ಲು ಸುರಿಸುತ್ತಿದೆ ಎನ್ನುವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು (Minister), ಪ್ರಿಯಾಂಕ್ ಖರ್ಗೆ ಅವರಿಗೆ ಗೊತ್ತಿದೆ. ಅವರು ಜೊಲ್ಲು ಸುರಿಸುವುದರಲ್ಲಿ ನಿಸ್ಸೀಮರು. ಅವರೆಲ್ಲ ಹೈಫೈ ಲೈಫ್‌ (Life)ನಲ್ಲಿ ಬೆಳೆದವರು ವಾಸ್ತವಾಂಶದ ಅರಿವಿಲ್ಲ, ರೈತರ ಬಗ್ಗೆ ಕಾಳಜಿಯೂ ಇಲ್ಲ, ಹೀಗಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಈ ಹಿಂದೆಯೂ ಹೆಣ್ಣು ಮಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದು, ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಭಾರತದ ವೀಸಾ ನಿಯಮ ಉಲ್ಲಂಘನೆ – 17 ಬಾಂಗ್ಲಾ ಪ್ರಜೆಗಳು ಅರೆಸ್ಟ್

    ಮುಂದುವರಿದು ಸಿಎಂ ಟೀಕಿಸಿದ ವಿಚಾರವಾಗಿ ಮಾತನಾಡಿದ ಬಿಸಿ ಪಾಟೀಲ್, ಬೊಮ್ಮಾಯಿ (Basavaraj Bommai) ದಡ್ಡರಿಲ್ಲ, ಅತ್ಯಂತ ಚಾಣಾಕ್ಷರಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿ ಕಾಲಿಗೆ ಚಪ್ಪಲಿ ತೊಡಿಸಿದ ರಾಹುಲ್‌ ಗಾಂಧಿ – ಸರಳಜೀವಿ ಎಂದ ನೆಟ್ಟಿಗರು

    ಸಿಎಂಗೆ ಭಾಷಣ ಮಾಡುವುದು ಗೊತ್ತಿದೆ, ಯಾವುದೇ ಕಾರ್ಯಕ್ರಮ ನಿಭಾಯಿಸುವ ಶಕ್ತಿ ಬೊಮ್ಮಾಯಿ ಅವರಿಗೆ ಇದೆ. ಯಾವುದೇ ವಿಷಯ ತೆಗೆದುಕೊಂಡರೂ ಅದನ್ನು ನಿಭಾಯಿಸುವ ಶಕ್ತಿ ಅವರಿಗಿದೆ. ಪ್ರಿಯಾಂಕ ಖರ್ಗೆಯಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಂಪಣ್ಣನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಸಬೇಕು: ಬಿ.ಸಿ. ಪಾಟೀಲ್

    ಕೆಂಪಣ್ಣನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಸಬೇಕು: ಬಿ.ಸಿ. ಪಾಟೀಲ್

    ಬೆಂಗಳೂರು: ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಂಪಣ್ಣ ಅವರನ್ನು ಮೊದಲು ಮೆಂಟಲ್ ಆಸ್ಪತ್ರೆ ಸೇರಿಸಿ ಚೆಕ್ ಮಾಡಿಸಬೇಕು. ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡೋದು ಸರಿಯಲ್ಲ. ಇದು ಕಾಂಗ್ರೆಸ್ ಪ್ರಾಯೋಜಿತ ಆರೋಪ. ಇದನ್ನು ಹೇಳೋಕೆ ಯಾವುದೇ ಹಿಂಜರಿಕೆ ಇಲ್ಲ. ಇದನ್ನು ಕಾಂಗ್ರೆಸ್ ಮಾಡಿಸಿದೆ. ಯಾವುದೇ ದಾಖಲೆ ಇಲ್ಲದೆ ಮಾತಾಡಿದ್ರೆ ಹೇಗೆ. ಮೊದಲು ಅವ್ರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಚೆಕ್ ಮಾಡಿಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡ್ತೀವಿ – ಅಶೋಕ್ ಘೋಷಣೆ

    ಯಾವ ಮಂತ್ರಿ ಮೇಲೆ ಆರೋಪ ಮಾಡಿದ್ದಾರೋ ಅ ಮಂತ್ರಿಗಳು ಕೆಂಪಣ್ಣ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿ. ನ್ಯಾಯಾಂಗ ತನಿಖೆ ಬಗ್ಗೆ ಸಿಎಂ ಬೊಮ್ಮಾಯಿ ನಿರ್ಧಾರ ಮಾಡ್ತಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಡವಟ್ಟು ಬೆನ್ನಲ್ಲೇ ಟ್ರಸ್ಟ್‌, ಪ್ರತಿಷ್ಠಾನ ಅಧ್ಯಕ್ಷರು ಸದಸ್ಯರ ನೇಮಕಾತಿ ಆದೇಶ ವಾಪಸ್‌

    Live Tv
    [brid partner=56869869 player=32851 video=960834 autoplay=true]

  • ನಾನು ಉತ್ಸವ ಮಾಡೋಕೆ ಹೋಗಿಲ್ಲ- ಸಚಿವರು ಕಾಣೆಯಾಗಿದ್ದಾರೆ ಎಂದ ಕಾಂಗ್ರೆಸ್‌ಗೆ ಬಿ.ಸಿ ಪಾಟೀಲ್ ಟಾಂಗ್

    ನಾನು ಉತ್ಸವ ಮಾಡೋಕೆ ಹೋಗಿಲ್ಲ- ಸಚಿವರು ಕಾಣೆಯಾಗಿದ್ದಾರೆ ಎಂದ ಕಾಂಗ್ರೆಸ್‌ಗೆ ಬಿ.ಸಿ ಪಾಟೀಲ್ ಟಾಂಗ್

    ಧಾರವಾಡ: ನಾನು ಯಾವುದೇ ಶಿವಕುಮಾರ ಉತ್ಸವ, ಸಿದ್ದರಾಮೋತ್ಸವ ಮಾಡಲು ಹೋಗಿರಲಿಲ್ಲ. ಗ್ಲೋಬಲ್ ಸಮಿತಿ ಸಭೆಗೆ ಹೋಗಿದ್ದೆ. ಅಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳನ್ನು ಮಾಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದರು.

    ಕೃಷಿ ಸಚಿವರು ಕಾಣೆಯಾಗಿದ್ದಾರೆ, ಅವರನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದಕ್ಕೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ್, ಆರ್ಗಾನಿಕ್ ಬಯೋಫ್ಯಾಕ್ಟ್ಸ್‌ನಲ್ಲಿ ಗ್ಲೋಬಲ್ ಸಮಿತಿ ಸಭೆಗೆ ನಾನು ಹೋಗಿದ್ದೆ. ಸಭೆಗೆ ಹೋಗಿದ್ದರೂ ಅಧಿಕಾರಿಗಳೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೆ. ಕಾಂಗ್ರೆಸ್‌ನವರಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಡಿಕೆಶಿ ಭೇಟಿಗೆ ಬಂದ ಮಧ್ಯಪ್ರದೇಶದ ಮಹಿಳೆ ಕಣ್ಣೀರು

    ಕಾಂಗ್ರೆಸ್‌ನವರ ಹಾಗೆ ಉತ್ಸವ ಮಾಡಿಕೊಳ್ಳುತ್ತಾ ಹೋದರೆ ಜನ ಮೆಚ್ಚುವುದಿಲ್ಲ. ನಾವು ಜನಪರ ಕೆಲಸಗಳನ್ನು ಮಾಡಿ ಜನರ ಬಳಿ ಹೋಗುತ್ತೇವೆ. ಕಾಂಗ್ರೆಸ್‌ನವರ ಹಾಗೆ ಉತ್ಸವಗಳನ್ನು ನಾವು ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು

    ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ರೈತರಿಗೆ ಡೀಸೆಲ್ ಸಬ್ಸಿಡಿ, ವಿದ್ಯಾನಿಧಿ ಕೊಡುವ ಕೆಲಸ ಮಾಡಿದೆ. ಜನರು ಉತ್ಸವ ನೋಡಿ ಸಂತೋಷ ಪಡಬಹುದು, ಆದರೆ ಅವರು ಕೆಲಸ ಮಾಡುವವರ ಕೈ ಮಾತ್ರ ಹಿಡಿಯುತ್ತಾರೆ ಎಂದು ಬಿ.ಸಿ ಪಾಟೀಲ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು ಉ.ಕ ಪ್ರತ್ಯೇಕ ರಾಜ್ಯ ಕೂಗಿಗೆ ದನಿಗೂಡಿಸಿದ ಬಿಸಿ.ಪಾಟೀಲ್

    ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು ಉ.ಕ ಪ್ರತ್ಯೇಕ ರಾಜ್ಯ ಕೂಗಿಗೆ ದನಿಗೂಡಿಸಿದ ಬಿಸಿ.ಪಾಟೀಲ್

    ಹಾಸನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎಂಬ ವಿಚಾರದಲ್ಲಿ ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು ‘ಕಾಲೈ ತಸ್ಮೈ ನಮಃ’ ಎಂದು ಹೇಳುವ ಮೂಲಕ ಉಮೇಶ್ ಕತ್ತಿ ಹೇಳಿಕೆಯನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಪರೋಕ್ಷವಾಗಿ ಸಮರ್ಥಿಸಿ ಕೊಂಡಿದ್ದಾರೆ.

    ಜಿಲ್ಲೆಯ ಹಾಸನ ತಾಲೂಕಿನ ಕಾರೆಕೆರೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ವಸತಿ ನಿಲಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎಂಬುದು ಉಮೇಶ್ ಕತ್ತಿ ಅವರ ಅಭಿಪ್ರಾಯ ಆಗಿದೆ. ಅವರ ಅಭಿಪ್ರಾಯಕ್ಕೆ ಎಲ್ಲರೂ ಮನ್ನಣೆ ಕೊಡಬೇಕು ಅಂತ ಏನು ಇಲ್ಲ. ಆದರೆ ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು. ಆ ರೀತಿ ಆಗುವುದಿಲ್ಲ ಎಂದು ಪ್ರತಿಪಾದನೆ ಮಾಡುತ್ತಿಲ್ಲ ಹಾಗೂ ಯಾವುದು ಆಗಲ್ಲ ಅಂತ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗಣಿತ ನೋಟ್ಸ್ ತರದಿದ್ದಕ್ಕೆ ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

    ನಿಜವಾದ ಸರ್ವೆ ಜನರದ್ದು:
    ರಾಜ್ಯದಲ್ಲಿ ಕಾಂಗ್ರೆಸ್ ಸಮೀಕ್ಷೆ ನಡೆಸಿ 120ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ವೆ ಯಾರೂ ಮಾಡಿಸಿದ್ದಾರೆ ಅವರವರ ಸರ್ವೇ ಅವರು ಹೇಳಿಕೊಳ್ಳುತ್ತಾರೆ. ನಿಜವಾದ ಸರ್ವೇ ಮಾಡುವವರು ರಾಜ್ಯದ ಜನತೆ. ನಮ್ಮ ಸರ್ವೆ ಪ್ರಕಾರ ಬಿಜೆಪಿ ಪಕ್ಷ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತ ಚುಕ್ಕಾಣಿ ಮರು ಸ್ಥಾಪಿಸಲಿದೆ ಎಂದು ಹೇಳಿದರು.

    ಕಾಂಗ್ರೆಸ್ ನಾಯಕರಲ್ಲೆ ಕಚ್ಚಾಟ:
    ಕಾಂಗ್ರೆಸ್‍ನಲ್ಲಿ ಏನು ನಡೆಯುತ್ತಿದೆ ಎಂದು ಜನ ನೋಡುತ್ತಿದ್ದಾರೆ. ಒಂದು ಕಡೆ ಸಿದ್ದರಾಮಯ್ಯೋತ್ಸವ ಅಂತ ಹೇಳುತ್ತಾರೆ ಮತ್ತೊಂದು ಕಡೆ ಡಿ.ಕೆ ಶಿವಕುಮಾರ್ ಸಾಮೂಹಿಕ ನಾಯಕತ್ವ ಅಂತ ಹೇಳುತ್ತಿದ್ದು, ಅವರಲ್ಲಿಯೇ ಹೊಂದಾಣಿಕೆಯ ಕೊರತೆ ಇದ್ದು, ಪಕ್ಷದಲ್ಲಿ ಕಚ್ಚಾಟ ನಡೆಯುತ್ತಿದೆ. ಅವರ ಕಚ್ಚಾಟ ಅವರ ವೈಯಕ್ತಿಕ ವಿಚಾರ ನಮಗೂ ಸಂಬಂಧವಿಲ್ಲ ಆದರೆ. ಇಂದು ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ನಿರ್ನಾಮವಾಗಿದ್ದು ಇತ್ತೀಚೆಗೆ ಮಹಾರಾಷ್ಟ್ರದಲ್ಲೂ ಸಹ ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ ಹಾಗೂ ಪಂಜಾಬ್ ನಲ್ಲಿಯೂ ಸಹ ಹೀನಾಯ ಸೋಲು ಕಂಡಿರುವುದು ಕಾಂಗ್ರೆಸ್‍ನ ವಾಸ್ತವ ಸ್ಥಿತಿಯನ್ನು ತೋರಿಸುತ್ತಿದೆ. ಆದ್ದರಿಂದ ಕರ್ನಾಟಕದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಭ್ರಮಾಲೋಕದಲ್ಲಿ ಇರುವಂತಹ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಮತ ಹಾಕಿ ವ್ಯರ್ಥ ಮಾಡಬೇಡಿ, ಬಿಜೆಪಿಯಿಂದ ತೃಪ್ತಿ ಹೊಂದದವರು ನಮಗೆ ಮತ ಹಾಕಿ: ಕೇಜ್ರಿವಾಲ್

    ಕುಮಾರಸ್ವಾಮಿ ಎಷ್ಟು ಸ್ಥಾನ ಗೆಲ್ಲುತ್ತಾರೆ:
    ಮುಂದಿನ ಬಾರಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಷ್ಟು ಸೀಟ್ ತೆಗೆದುಕೊಂಡು ಸಿಎಂ ಆಗುತ್ತಾರೆ ಎಂದು ಕುಮಾರಸ್ವಾಮಿ ಅವರನ್ನೇ ಕೇಳಿ. 122 ಅಥವಾ ಮ್ಯಾಜಿಕ್ ನಂಬರ್ 113 ಬರುತ್ತದೆ ಗೊತ್ತಿಲ್ಲ ಆದರೆ 113 ಮ್ಯಾಜಿಕ್ ನಂಬರ್ ಬಂದರೆ. ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಹೇಳಿದರು.

    ಸಮಯಕ್ಕೆ ಗೊಬ್ಬರ-ಬಿತ್ತನೆ ಬೀಜ ಪೂರೈಕೆ:
    ರಾಜ್ಯದಲ್ಲಿ ರೈತರಿಗೆ ಸರಿಯಾದ ಸಮಯದಲ್ಲಿ ಗೊಬ್ಬರ ಹಾಗೂ ಬಿತ್ತನೆ ಬಿಜೆಪಿ ಪೂರೈಕೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಬಿತ್ತನೆ ಕಾರ್ಯ ಮುಗಿದಿರುವ ಪ್ರದೇಶಗಳಲ್ಲಿ ಸರಿಯಾದ ಸಮಯಕ್ಕೆ ಗೊಬ್ಬರ ಪೂರೈಕೆ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್

    ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್

    ಧಾರವಾಡ: ಅಗ್ನಿಪಥ್ ಯೋಜನೆ ವಿರುದ್ಧ ಕಾಂಗ್ರೆಸ್‍ ಬೇಕೆಂದು ಯುವಕರನ್ನು ಪ್ರಚೋದಿಸುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆಕ್ರೋಶ ಹೊರಹಾಕಿದರು.

    ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಮಹತ್ತರವಾದ ಯೋಜನೆಯಾಗಿದೆ. ಇಲ್ಲಿ ನಾಲ್ಕು ವರ್ಷದ ಸರ್ವಿಸ್ ಬಳಿಕ ಬೇಕಾದ ನೌಕರಿ ಸೇರಬಹುದು. ಅದರಲ್ಲಿ ಮೀಸಲಾತಿ ಸಹ ಕೂಡುತ್ತಿದ್ದಾರೆ ಎಂದು ವಿವರಿಸಿದರು.

    ಪ್ರತಿಭಟನೆ ಮಾಡುವವರೆಲ್ಲ ಆರ್ಮಿ ಸೇರಬಯಸುವವರು ಅಲ್ವಾ? ಆರ್ಮಿಗೆ ಹೋಗುವ ಉದ್ದೇಶ ದೇಶ ರಕ್ಷಣೆ. ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ? ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ? ಇದೆಲ್ಲವೂ ಕಿಡಿಗೇಡಿಗಳ ಕುತಂತ್ರವಾಗಿದೆ. ಉದ್ದೇಶಪೂರ್ವಕವಾಗಿ ಇದನ್ನುಪ್ರಚೋದಿಸುತ್ತಿದ್ದಾರೆ. ಇದಕ್ಕೆ ಯುವಕರು ಬಲಿಯಾಗಬಾರದು. ಕಾಂಗ್ರೆಸ್ ಪಕ್ಷ ಎಲ್ಲ ಕಡೆ ಅದೇ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ:  ಬಿ.ಶ್ರೀರಾಮುಲು

    ರಾಹುಲ್ ಗಾಂಧಿಗೆ ವಿಚಾರಣೆಗೆ ಕರೆದರೆ ಪ್ರತಿಭಟನೆ ಮಾಡಿದ್ರು. ಹಿಂದೆ ಖರ್ಗೆಯವರನ್ನೂ ಇಡಿ ವಿಚಾರಣೆಗೆ ಕರೆದಿತ್ತು. ಆಗ ಒಬ್ಬರೂ ಪ್ರತಿಭಟನೆಗೆ ಬರಲಿಲ್ಲ. ಓರ್ವ ಹಿರಿಯ ದಲಿತ ನಾಯಕ ಖರ್ಗೆ. ಅದೇ ರೀತಿ ರಾಹುಲ್, ಸೋನಿಯಾ ಅವರನ್ನು ಕರೆದು ವಿಚಾರಣೆ ಮಾಡಬಾರದು ಅಂದ್ರೆ ಹೇಗೆ? ಈ ದೇಶದಲ್ಲಿ ನ್ಯಾಯ, ಸಂವಿಧಾನಕ್ಕೆ ಎಲ್ಲರೂ ತಲೆಬಾಗಬೇಕು. ಕರೆಯಬಾರದು ಅಂತಾ ಧಮ್ಕಿ ಹಾಕಿದ್ರೆ ಹೇಗೆ ಎಂದು ಪ್ರಶ್ನಿಸಿದರು.

    ನಾಳೆ ಯಾರೋ ಒಬ್ಬ ಕೊಲೆ ಮಾಡ್ತಾನೆ. ಅವನನ್ನು ಬಂಧಿಸಬೇಡಿ ಅಂತಾ ಪ್ರತಿಭಟಿಸ್ತಾರಾ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ದೂರು ದಾಖಲಾಗಿದೆ. ಇಡಿ ಪ್ರಧಾನಿ ಮಾತು ಕೇಳುತ್ತೆ ಅಂತಾರೆ. ಹಾಗಾದ್ರೆ ಹಿಂದೆ ಪಿಎಂ ಆಗಿದ್ದ ಮನಮೋಹನ್ ಸಿಂಗ್ ಕೇಸ್ ಆಗದಂತೆ ಮಾಡುತ್ತಿದ್ದರಲ್ವಾ? ಇಡಿ ಸ್ವತಂತ್ರವಾದ ಸಂಸ್ಥೆ. ಕಾನೂನುಬದ್ಧವಾಗಿ ಕೆಲಸ ಮಾಡಲು ಬಿಡಬೇಕು ಎಂದು ಕಿಡಿಕಾರಿದರು.

    Live Tv

  • ಮಳೆಹಾನಿ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರವಾಗಿ ವರದಿ ನೀಡಬೇಕು: ಬಿ.ಸಿ.ಪಾಟೀಲ್

    ಮಳೆಹಾನಿ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರವಾಗಿ ವರದಿ ನೀಡಬೇಕು: ಬಿ.ಸಿ.ಪಾಟೀಲ್

    ಹುಬ್ಬಳ್ಳಿ: ರಾಜ್ಯದಲ್ಲಿ ಅಕಾಲಿಕ ಮಳೆ ಹಿನ್ನೆಲೆ, ಎಲ್ಲ ಕೃಷಿ ಅಧಿಕಾರಗಳು ತಮ್ಮ ಕಾರ್ಯಸ್ಥಾನದಲ್ಲಿರಬೇಕು. ಮಳೆಯಿಂದಾಗಿ ಹಾನಿಗೊಳಗಾದ ಬೆಳೆಯ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರವಾಗಿ ವರದಿ ನೀಡಬೇಕು. ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಎಂ ಸಿದ್ದರಾಮಯ್ಯ ಅವರು ತಾವು ಮಾತ್ರ ಸಮರ್ಥರು ಉಳಿದವರೆಲ್ಲರೂ ಅಸಮರ್ಥರು ಎಂದುಕೊಂಡಿದ್ದಾರೆ. ಅವರು ನಮ್ಮನ್ನು ಹೊಗಳಲು ಸಾಧ್ಯವಿಲ್ಲ. ಹೀಗಾಗಿ ಅವರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲ್ಲ. ಮುಂದಿನ ಚುನಾವಣಾ ದೃಷ್ಟಿಯಿಂದ ನಮ್ಮ ಪಕ್ಷದಲ್ಲಿ ಹಲವಾರು ಕಾರ್ಯತಂತ್ರ ನಡೆಯುತ್ತಿದೆ. ಮಿಷನ್ 150 ಉದ್ದೇಶದಿಂದ ಪೂರ್ವಭಾವಿಯಾಗಿ ಪಕ್ಷ ಸಂಘಟನೆ ನಡೆಯುತ್ತಿದೆ ಎಂದರು. ಇದನ್ನೂ ಓದಿ:  ‘ಪುಷ್ಪ’ ಮೂವೀ ಸ್ಟೈಲ್‍ನಲ್ಲಿ ಗಂಡನ ಕುತ್ತಿಗೆ ಕೊಯ್ದ ಪತ್ನಿ

    ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ದೊಡ್ಡ ದುರಂತ. ಈಗಾಗಲೇ ಈ ಬಗ್ಗೆ ಸಮಗ್ರವಾಗಿ ತನಿಖೆಯಾಗುತ್ತಿದೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿದೆ. ಹುಬ್ಬಳ್ಳಿ ಗಲಭೆ ಪೂರ್ವನಿಯೋಜಿನೆಯಿಂದ ಈಗಾಗಲೇ ಹಲವಾರು ಜನರ ಬಂಧನವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳುತ್ತಿದೆ ಎಂದರು.

  • ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ: ಬಿಸಿ ಪಾಟೀಲ್

    ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ: ಬಿಸಿ ಪಾಟೀಲ್

    ಮೈಸೂರು: ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ. ಆದರೆ ಇದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 25 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದ ಅವರು, ಅರಗ ಜ್ಞಾನೇಂದ್ರ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದರು.

    ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ನಿಜಕ್ಕೂ ದುರಂತ ವಿಚಾರವಾಗಿದೆ. ಪೊಲೀಸ್ ಆಗಲು ಪ್ರತಿಭೆ ಪ್ರಾಮಾಣಿಕತೆ ದಕ್ಷತೆ ಬೇಕು. ಹಣದಿಂದ ಬಂದವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗಿತ್ತಾ, ಇದರಿಂದ ಜನ ಸಾಮಾನ್ಯರಿಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಪ್ರಶ್ನಿಸಿದ ಅವರು, ನಾನು ಪೊಲೀಸ್ ಪರೀಕ್ಷೆ ಬರೆದಾಗ ಈ ರೀತಿ ಇರಲಿಲ್ಲ. ಯಾರು ಶಾಮೀಲಾಗಿದ್ದಾರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಮುಖ ಆರೋಪಿ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆಗೆ ಹಾಜರ್

    Hubballi Riot

    ರಾಜ್ಯದಲ್ಲಿ ಧರ್ಮ ದಂಗಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಶಾಂತಿ ಕೆಟ್ಟಿಲ್ಲ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಹುಬ್ಬಳ್ಳಿ ಪ್ರಕರಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಎಫ್ಐಆರ್ ಮಾಡಲಾಗಿತ್ತು. ಆದರೂ ಸಾವಿರಾರು ಜನರು ಗುಂಡಾವರ್ತನೆ ತೋರಿದ್ದಾರೆ. ಆರೋಪಿಗಳು ಯುವಕನ ಶಿರಚ್ಛೇದ ಮಾಡುತ್ತೇವೆ ಎನ್ನುತ್ತಾರೆ. ಯುವಕನನ್ನು ವಶಕ್ಕೆ ಕೊಡಿ ತಲೆ ಕಲಿಯುತ್ತೇವೆ ಎನ್ನುತ್ತಾರೆ. ಇದು ಭಾರತನಾ ತಾಲಿಬಾನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಹಿಜಬ್‌ ಹೋರಾಟಗಾರ್ತಿಯರು

    ಕಾಂಗ್ರೆಸ್ ಕಾನೂನು ಕೈಗೆತ್ತುಕೊಂಡವರ ರಕ್ಷಣೆ ಮಾಡುತ್ತಿದೆ. ಕಾಂಗ್ರೆಸ್ಸಿಗರು ದೇಶದ ಪರ ಇದ್ದಾರಾ ಅಥವಾ ದೇಶದ ವಿರುದ್ಧ ಇದ್ದವರಾ. ಕಾನೂನು ಪರನಾ ಕಾನೂನು ವಿರೋಧನಾ ಎಂದು ಕಾಂಗ್ರೆಸ್‍ನವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

  • ಬಿಜೆಪಿಯನ್ನು ಬೈದು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವುದು ಮೂರ್ಖತನ: ಬಿಸಿ ಪಾಟೀಲ್

    ಬಿಜೆಪಿಯನ್ನು ಬೈದು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವುದು ಮೂರ್ಖತನ: ಬಿಸಿ ಪಾಟೀಲ್

    ಚಿಕ್ಕಬಳ್ಳಾಪುರ: ಬಿಜೆಪಿಯನ್ನು ಬೈದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಕಂಡರೆ ಅದು ಮೂರ್ಖತನದ ಪರಮಾವಧಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕಿಡಿಕಾರಿದರು.

    ರೈತರಿಗೊಂದು ದಿನ ಕಾರ್ಯಕ್ರಮದ ಅಂಗವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಸುಮ್ಮನೆ ಬಿಜೆಪಿಯನ್ನು ಬೈಕೊಂಡು ಹೋಗುವುದೆ ಕಾಂಗ್ರೆಸ್‍ನವರು ಕೆಲಸ ಎಂದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಬಿಸಿ ನಾಗೇಶ್

    ಸುಮ್ಮನೆ ಕಾಂಗ್ರೆಸ್‍ನವರು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ನಮಗೆ ಅಭಿವೃದ್ಧಿ ಮಾಡುವ ಕೆಲಸ ಇದೆ. ಆದರೆ ಅವರಿಗೇನಿದೆ. ಕಾಂಗ್ರೆಸ್‍ನವರು ಜಾತಿ, ಧರ್ಮದ ಬಗ್ಗೆ ಚರ್ಚೆ ಮಾಡ್ತಾರೆ ಎಂದ ಅವರು, ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾಂಗ್ರೆಸ್‍ನವರೇ ಕಾರಣ: ಬಿಎಸ್‍ವೈ