Tag: BC Patil

  • ಆಪರೇಷನ್ ಕಮಲಕ್ಕೆ ಹೊಸ ಲೀಡರ್

    ಆಪರೇಷನ್ ಕಮಲಕ್ಕೆ ಹೊಸ ಲೀಡರ್

    ಬೆಂಗಳೂರು: ಇಷ್ಟು ದಿನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿದ್ದ ಆಪರೇಷನ್ ಕಮಲಕ್ಕೆ ಇದೀಗ ಬಿಜೆಪಿಯವರು ಹೊಸ ಲೀಡರ್ ಹುಡುಕಿದ್ದಾರೆ ಎನ್ನಲಾಗಿದೆ.

    ರಮೇಶ್ ಜಾರಕಿಹೊಳಿ ನಂಬಿಕೊಂಡರೆ ಕೆಲಸ ಆಗಲ್ಲ ಎಂದು ಹೊಸ ಲೀಡರ್‍ಗಾಗಿ ಬಿಜೆಪಿ ಹುಡುಕಾಟ ನಡೆಸಿದೆ. ಪಕ್ಷೇತರರಿಗೆ ಸಚಿವ ಸ್ಥಾನ ಸಿಕ್ಕ ಬಳಿಕವೂ ಜಾರಕಿಹೊಳಿ ಸೈಲೆಂಟ್ ಆಗಿದ್ದಾರೆ. ಈ ಹಿಂದೆ ಜಾರಕಿಹೊಳಿ ನೇತೃತ್ವದಲ್ಲಿ ನಡೆದಿದ್ದ ಆಪರೇಷನ್ ಕಮಲ ಯತ್ನಗಳೆಲ್ಲ ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಈಗ ಶಾಸಕ ಬಿ.ಸಿ. ಪಾಟೀಲ್ ಅವರನ್ನು ಆಪರೇಷನ್ ಕಮಲದ ಸಾರಥ್ಯ ವಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಸರ್ಕಾರ ಉಳಿಯಲ್ಲ, ಕಾಂಗ್ರೆಸ್ ಉಳಿಯಲ್ಲ, ನಾನು ಕಾಂಗ್ರೆಸ್‍ನಲ್ಲಿ ಇರುತ್ತೀನೋ ಇರಲ್ವೋ ಗೊತ್ತಿಲ್ಲ ಎಂದು ಸಂಪುಟ ವಿಸ್ತರಣೆ ಮಾರನೇ ದಿನವೇ ಶಾಸಕ ಬಿ.ಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಜಾರಕಿಹೊಳಿ ಬದಲು ಬಿ.ಸಿ ಪಾಟೀಲ್ ನೇತೃತ್ವದಲ್ಲಿ ಅಪರೇಷನ್ ಕಮಲಕ್ಕೆ ಮತ್ತೆ ಚಾಲನೆ ಸಿಗಲಿದೆ ಎನ್ನಲಾಗಿದೆ.

    ಈ ಆಪರೇಷನ್ ಕಮಲದ ಸಾರಥ್ಯವನ್ನು ಬಿ.ಸಿ. ಪಾಟೀಲ್ ಅವರು ಒಪ್ಪಿಕೊಳ್ಳುತ್ತಾರಾ ಅಥವಾ ಅತೃಪ್ತ ಶಾಸಕರನ್ನು ಕರೆದುಕೊಂಡು ಬರುತ್ತಾರಾ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಮೂಡಿದೆ.

  • ಪಕ್ಷ ಬಿಡುವ ಮುನ್ಸೂಚನೆ ನೀಡಿದ ಬಿ.ಸಿ ಪಾಟೀಲ್

    ಪಕ್ಷ ಬಿಡುವ ಮುನ್ಸೂಚನೆ ನೀಡಿದ ಬಿ.ಸಿ ಪಾಟೀಲ್

    ಬೆಂಗಳೂರು: ನಾನು ಈ ಪಕ್ಷದಲ್ಲಿ ಇದ್ದೆ ಇರುತ್ತೀನಿ ಎಂದು ಹೇಳಲಿಕ್ಕೆ ಬರಲ್ಲ, ಹೋಗುತ್ತೀನಿ ಅಂತಾನು ಹೇಳಲ್ಲ. ಕಾಲಾಯ ತಸ್ಮೈ ನಮಃ. ಎಲ್ಲವನ್ನು ಕಾಲ ತೀರ್ಮಾನ ಮಾಡುತ್ತೆ ಎಂದು ಪಕ್ಷ ಬಿಡುವ ಮುನ್ಸೂಚನೆಯನ್ನು ಹೀರೇಕೆರೂರು ಶಾಸಕ ಬಿ.ಸಿ ಪಾಟೀಲ್ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿ.ಸಿ. ಪಾಟೀಲ್ , ಕಾಂಗ್ರೆಸ್ ಪಕ್ಷ ಉಳಿಯುದಕ್ಕಿಂದ ಹೆಚ್ಚಾಗಿ ಸರ್ಕಾರ ಉಳಿದುಕೊಂಡರೆ ಸಾಕು ಎಂಬ ಸ್ಥಿತಿಗೆ ತಲುಪಿದೆ. ಪಕ್ಷ ಉಳಿದರೆ ಸರ್ಕಾರ, ಇಲ್ಲವಾದರೆ ಯಾವ ಸರ್ಕಾರನೂ ಉಳಿಯುದಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷ 28 ಸ್ಥಾನದಲ್ಲಿ 27 ಸ್ಥಾನವನ್ನು ಕಳೆದುಕೊಂಡು ಕೊನೆಯ ಘಟ್ಟ ತಲುಪಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರನ್ನ ಬಿಟ್ಟು ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷದ ವಿರುದ್ಧ ಗೆದ್ದು ಬಂದವರಿಗೆ ಅಧಿಕಾರ ಕೊಡುತ್ತಿದ್ದಾರೆ. ಪಕ್ಷದಲ್ಲಿ ದುಡಿದವರಿಗೆ ಗೌರವ ಕೊಡಲ್ಲ. ಈ ರೀತಿ ಆದರೆ ಸರ್ಕಾರ ಉಳಿಯುವದಿಲ್ಲ. ಪಕ್ಷ ಸರ್ಕಾರ ಬೀಳಲಿ ಅಂತಾನೆ ಈ ರೀತಿ ಮಾಡುತ್ತಿದ್ದಾರೆ ಎಂದರು.

    ನನಗೆ ಯಾವ ಸಚಿವ ಸ್ಥಾನನೂ ಬೇಡ, ಯಾವ ನಿಗಮ ಮಂಡಳಿ ಬೇಡ. ಅತ್ತು ಕರೆದುಕೇಳುವ ಅಗತ್ಯ ನನಗಿಲ್ಲ. ನಾನು ಈ ಪಕ್ಷದಲ್ಲಿ ಇದ್ದೆ ಇರುತ್ತೀನಿ ಎಂದು ಹೇಳಲಿಕ್ಕೆ ಬರಲ್ಲ, ಹೋಗುತ್ತೀನಿ ಅಂತಾನು ಹೇಳಲ್ಲ. ಕಾಲಯ ತಸ್ಮೈನಮಃ. ಕಾಲ ತೀರ್ಮಾನ ಮಾಡುತ್ತೆ. ಅಸಮಾಧಾನ ಶಾಸಕರೆಲ್ಲಾ ಕುಳಿತುಕೊಂಡು ಮಾತಾಡುತ್ತಿದ್ದೀವಿ. ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪಕ್ಷ ಬಿಡುವ ಮುನ್ಸೂಚನೆಯನ್ನು ಬಿ.ಸಿ ಪಾಟೀಲ್ ನೀಡಿದ್ದಾರೆ.

    ಈ ಹಿಂದೆಯೇ ಸಿದ್ದರಾಮಯ್ಯ ಅವರು ಸಚಿವ ಸ್ಥಾನ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೂ ನನಗೆ ಸ್ಥಾನ ಕೊಡಲಿಲ್ಲ. ಯಾಕೆ ಕೊಡಲಿಲ್ಲ ಎಂದು ಇದುವರೆಗೂ ಕಾಂಗ್ರೆಸ್ ನಾಯಕರು ಫೋನ್ ಮಾಡಿಯೂ ಹೇಳಿಲ್ಲ. ಬಹುಶಃ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಯಾರಿಗೂ ನೈತಿಕ ಧೈರ್ಯ ಇಲ್ಲದ್ದಂತಾಗಿದೆ. ನನ್ನ ಪಕ್ಷದಲ್ಲೆ ಯಾವುದೋ ಧ್ವನಿ ನನ್ನ ತುಳಿಯುವಂತ ಕೆಲಸ ಮಾಡುತ್ತಿದೆ ಅನ್ನಿಸುತ್ತಿದೆ ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನನಗೆ ಅಸಮಾಧಾನ ಖಂಡಿತಾ ಇದೆ. ನಾನು ಕಷ್ಟ ಪಟ್ಟು ಬಂದವನು ಯಾರ ಬೆಂಬಲದಿಂದ ಈ ಸ್ಥಾನಕ್ಕೆ ಬಂದಿಲ್ಲ. ಪೊಲೀಸ್ ಆಗಿದ್ದವನು ರೈತರ ಸೇವೆಗಾಗಿ ಬಂದೆ. ಅನೇಕ ಬಾರಿ ಜೈಲಿಗೂ ಹೋಗಿ ಬಂದಿದ್ದೇನೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಒಂದು ಬಾರಿ ಗೆದ್ದವರಿಗೆ ಕರೆದುಕೊಂಡು ಬಂದು ಮಂತ್ರಿ ಮಾಡುತ್ತೀರಿ. ಮೂರು ಬಾರಿ ಗೆದ್ದವರನ್ನ ಕಡೆಗಣನೆ ಮಾಡುತ್ತೀರಿ ಇದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದರು.

  • ನಾನು ಕಾಂಗ್ರೆಸ್ ಶಾಸಕ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ – ಬಿ.ಸಿ ಪಾಟೀಲ್

    ನಾನು ಕಾಂಗ್ರೆಸ್ ಶಾಸಕ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ – ಬಿ.ಸಿ ಪಾಟೀಲ್

    ಹಾವೇರಿ: ನಾನು ಕಾಂಗ್ರೆಸ್ ಶಾಸಕ ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ. ಆದರ ಬಗ್ಗೆ ಬಿಜೆಪಿಯವರನ್ನು ಕೇಳಿ ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಜಿಲ್ಲೆಯ ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಈ ಬಾರಿ ನಡೆಯೋ ಮಂತ್ರಿ ಮಂಡಲದ ವಿಸ್ತರಣೆಯ ವೇಳೆ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಮನ್ವಯ ಸಮಿತಿ ಅಧ್ಯಕ್ಷರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಸಿಎಂ ಪರಮೇಶ್ವರ್ ಈ ಬಗ್ಗೆ ಸಂಪೂರ್ಣ ಭರವಸೆ ನೀಡಿದ್ದಾರೆ. ಮಂತ್ರಿ ಸ್ಥಾನ ಸಿಗದೆ ಇರುವ ಅಸಮಾಧಾನಕ್ಕೆ ಯಾವಾಗ ತೆರೆ ಬೀಳುತ್ತೆ ಅನ್ನೋದನ್ನು ಕಾದು ನೋಡಿ. ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ ಎಂದರು.

    ಇದೇ ವೇಳೆ ಸಿ.ಎಲ್.ಪಿ ಮೀಟಿಂಗ್ ವೇಳೆ ಅರ್ಧಕ್ಕೆ ಎದ್ದು ಬಂದಿದ್ದರ ಬಗ್ಗೆ ಕೇಳಿದಾಗ, ನನಗೆ ಖಾಸಗಿ ಕಾರ್ಯಕ್ರಮ ಇದ್ದರಿಂದ ಬೇಗ ಹೋದೆ. ಅದಕ್ಕೆ ಬೇರೆ ಯಾವುದೇ ಅರ್ಥ ಬೇಡ. ನಾನು ಸಿ.ಎಲ್.ಪಿ ಮೀಟಿಂಗ್ ನಲ್ಲಿ ಮಂತ್ರಿ ಸ್ಥಾನಕ್ಕೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿಎಂ ಕುಮಾರಸ್ವಾಮಿಗೆ ಸ್ಪೀಕರ್ ರಮೇಶ ಕುಮಾರ್ ಪತ್ರ ಬರೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅಭಿಪ್ರಾಯ. ಕುಮಾರಸ್ವಾಮಿ ಆಡಳಿತ ತೃಪ್ತಿ ತಂದಿದೆ ಚೆನ್ನಾಗಿ ಆಡಳಿತ ನಡೆಸಿದ್ದಾರೆ. ಇದರ ಮಧ್ಯದಲ್ಲಿ ಲೋಕಸಭಾ ಚುನಾವಣೆ, ಬರಗಾಲ ಹಾಗೂ ಸ್ವಲ್ಪ ಸಮಸ್ಯೆ ಬಂದಿದೆ ಎಲ್ಲವನ್ನು ನಿಭಾಸಿಕೊಂಡು ಹೋಗುತ್ತಿದ್ದಾರೆ. ನನಗೆ ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸುತ್ತದೆ ಅನ್ನೋ ಭರವಸೆಯವನ್ನು ವ್ಯಕ್ತಪಡಿಸಿದರು.

  • ನಾನು ಕಾಂಗ್ರೆಸ್ಸಿನಲ್ಲೇ ಇರಬೇಕೇ – ಕಾರ್ಯಕರ್ತರ ಬಳಿ ಕೌರವ ಪ್ರಶ್ನೆ

    ನಾನು ಕಾಂಗ್ರೆಸ್ಸಿನಲ್ಲೇ ಇರಬೇಕೇ – ಕಾರ್ಯಕರ್ತರ ಬಳಿ ಕೌರವ ಪ್ರಶ್ನೆ

    ಹಾವೇರಿ: ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದಿದ್ದು ಸತತ ಮೂರು ಬಾರಿ ಎಂಎಲ್‍ಎ ಆಗಿ ಅಯ್ಕೆಯಾಗಿರುವ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್‍ಗೆ ಸಚಿವ ಸ್ಥಾನ ದೊರಕುತ್ತಿಲ್ಲ. ಇದರಿಂದ ಬೇಸರಗೊಂಡಿರುವ ಪಾಟೀಲ್ ಈಗ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎಲ್ಲ ಕಡೆ ಚರ್ಚೆಯಾಗುತ್ತಿದೆ.

    ಈ ಹಿಂದೆ ಸಚಿವ ಸ್ಥಾನದ ಸಿಗದೇ ಇರುವ ಕಾರಣ ಬಿ.ಸಿ ಪಾಟೀಲ್ ಅವರು ಮೈತ್ರಿ ಸರ್ಕಾರದ ಮೇಲೆ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈಗ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ಮತ್ತೆ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿ ಇರಬೇಕಾ? ಬೇಡವೇ ಎಂದು ಕ್ಷೇತ್ರದ ಕಾರ್ಯಕರ್ತರನ್ನು ಮತ್ತು ಕೆಲ ಶಾಸಕರನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.

    ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಿಂದ ಮೊದಲ ಬಾರಿ ಜೆಡಿಎಸ್‍ನಿಂದ ಶಾಸಕರಾಗಿದ್ದ ಪಾಟೀಲ್, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹೀಗೆ ಮೂರು ಬಾರಿ ಎಂಎಲ್‍ಎ ಆಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಿ.ಸಿ ಪಾಟೀಲ್, ಸಚಿವ ಸ್ಥಾನ ನೀಡದ ಮೈತ್ರಿ ಸರ್ಕಾರದ ಮೇಲೆ ಮೊದಲಿನಿಂದಲೂ ಅಸಮಾಧಾನಗೊಂಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್ ಪಕ್ಷ ಭಾರೀ ಅನ್ಯಾಯ ಮಾಡಿದೆ. ವೀರಶೈವ ಲಿಂಗಾಯತರಿಗೆ ಏಕೆ ಮಂತ್ರಿ ಸ್ಥಾನವನ್ನು ನೀಡಿಲ್ಲ ಎಂದು ಬಹಿರಂಗವಾಗಿ ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

    ಮೂರು ದಿನಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ. ರಾಜ್ಯ ಹಾಗೂ ದೇಶದಲ್ಲಿ ಮೋದಿ ಅಲೆಗೆ ಕಾಂಗ್ರೆಸ್ ಧೂಳೀಪಟವಾಗಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಮತ್ತು ಅತೃಪ್ತ ಶಾಸಕರು ಚುರುಕುಗೊಂಡಿದ್ದಾರೆ. ಮತ್ತೆ ರೆಸಾರ್ಟ್ ರಾಜಕಾರಣ ಪ್ರಾರಂಭವಾಗಿದೆ. ಈ ಸಮಯದಲ್ಲೇ ಬಿ.ಸಿ ಪಾಟೀಲ್ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಪಕ್ಷದವರು ಕಡೆಗಣಿಸಿದ್ದಾರೆ. ಆದರ ಪ್ರತಿಫಲ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಕಡೆಗೆ ಬಂದಿದೆ. ಹಾಗಾಗಿ ಕ್ಷೇತ್ರದ ಜನರ ತೀರ್ಮಾನವನ್ನು ಕೇಳುತ್ತಿದ್ದೇನೆ ಅವರು ಏನೂ ತೀರ್ಮಾನ ನೀಡುತ್ತಾರೆ ನೋಡೋಣ ಎಂದು ಹೇಳಿದ್ದರು. ಆದರೆ ಕೆಲವು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಹೋಗಿ ಎಂದು ಹೇಳಿದ್ದರೆ, ಇನ್ನೂ ಕೆಲವು ಕಾರ್ಯಕರ್ತರು ನಮ್ಮ ಸಿದ್ದಾಂತ ಬೇರೆ ಹಾಗಾಗಿ ಬಿಜೆಪಿ ಹೋಗುವುದು ಬೇಡ ಎಂದು ಸಲಹೆ ನೀಡಿದ್ದಾರಂತೆ.

    ಈ ಎಲ್ಲಾ ವಿದ್ಯಮಾನಗಳು ನೋಡಿದರೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಹೋದರೆ ಬಿ.ಸಿ ಪಾಟೀಲ್ ಬಿಜೆಪಿಗೆ ಹೋಗುತ್ತಾರೆ ಎನ್ನುವ ಗುಸುಗುಸು ಮಾತುಗಳು ಬಹಳ ಚರ್ಚೆ ಆಗುತ್ತಿವೆ. ಆದರೆ ಬಿಸಿ.ಪಾಟೀಲ್ ಮಾತ್ರ ಕಾದುನೋಡುವ ತಂತ್ರ ಅನುಸರಿಸಿ ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡುತ್ತಿದ್ದಾರೆ.

  • ಕುಮಾರಣ್ಣ ಇನ್ ಸಂಕಟ್-ಚಕ್ರವ್ಯೂಹದಲ್ಲಿ ‘ಬ್ರದರ್’ ಅತೃಪ್ತರ ಹೊಸ ಆಟ!

    ಕುಮಾರಣ್ಣ ಇನ್ ಸಂಕಟ್-ಚಕ್ರವ್ಯೂಹದಲ್ಲಿ ‘ಬ್ರದರ್’ ಅತೃಪ್ತರ ಹೊಸ ಆಟ!

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಮೈತ್ರಿ ನಾಯಕರಿಗೆ ಸರ್ಕಾರ ಉಳಿಸಿಕೊಳ್ಳುವ ಸವಾಲು ಮುಂದಾಗಿದೆ. ಇದೇ ಸಮಯದಲ್ಲಿ ಹೊಸ ಅತೃಪ್ತ ಶಾಸಕರು ಹೊಸ ಬೇಡಿಕೆಗಳನ್ನು ಮೈತ್ರಿ ನಾಯಕರ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಅತೃಪ್ತರ ಕಂಡೀಷನ್ ಕೇಳಿದ ಸಿಎಂ ಕುಮಾರಸ್ವಾಮಿ ಒಂದು ಕ್ಷಣ ಶಾಕ್ ಆಗಿದ್ದು, ಬೇಡಿಕೆಗಳನ್ನು ಈಡೇರಿಸುತ್ತಾರಾ ಪ್ರಶ್ನೆ ಹುಟ್ಟಿಕೊಂಡಿದೆ.

    ಏನದು ಕಂಡಿಷನ್?
    ನಮಗೆ ಸಂಪುಟದಲ್ಲಿ ಸಚಿಬ ಸ್ಥಾನವೂ ಬೇಡ. ನಿಗಮ ಮಂಡಳಿಯೂ ಬೇಡ. ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರದ ಪರವಾಗಿ ಇರಬೇಕಾದ್ರೆ ಸಿದ್ದರಾಮಯ್ಯರನ್ನು ಮತ್ತೆ ಸಿಎಂ ಮಾಡಿ ಎಂಬ ಷರತ್ತನ್ನು ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಬಿ.ಸಿ.ಪಾಟೀಲ್ ಇಟ್ಟಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

    ಬೆಂಗಳೂರಿನ ನಿವಾಸದಲ್ಲಿರುವ ಶಾಸಕ ಬಿಸಿ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ಸರ್ಕಾರದ ವಿರುದ್ಧ ನನಗೆ ಅಸಮಾಧಾನ ಅನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ನನಗೆ ಸಮಾಧಾನವೇ ಆಗಿಲ್ಲ. ನನಗೆ ಸಚಿವ ಸ್ಥಾನ ನೀಡದ ಬಗ್ಗೆ ಅಸಮಾಧಾನ ಇದ್ದೇ ಇದೆ. ಜಿಲ್ಲೆಯಲ್ಲಿ ಏಕೈಕ ಶಾಸಕನಾಗಿ ಆಯ್ಕೆ ಆಗಿದ್ದರೂ ಕೂಡ ಮಂತ್ರಿ ಸ್ಥಾನ ನೀಡಿಲ್ಲ ಎಂದರು. ಅಲ್ಲದೇ ರಮೇಶ್ ಜಾರಕಿಹೊಳಿ ಅವರನ್ನು ನಾನು ಈಗ ಭೇಟಿ ಮಾಡಿಲ್ಲ. ಇದೇ ವೇಳೆ ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾನು ಸನ್ಯಾಸಿಯಲ್ಲ ನನ್ನೂರಿನ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಜನ ಏನು ಹೇಳುತ್ತಾರೆ ಅದನ್ನು ಕೇಳೋಣ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

  • ನನಗೆ ಬೇಸರವಾಗಿದ್ದು ನಿಜ, ಮುಂಬೈಗೆ ಹೋಗಿಲ್ಲ: ಬಿ.ಸಿ ಪಾಟೀಲ್

    ನನಗೆ ಬೇಸರವಾಗಿದ್ದು ನಿಜ, ಮುಂಬೈಗೆ ಹೋಗಿಲ್ಲ: ಬಿ.ಸಿ ಪಾಟೀಲ್

    ಬೆಂಗಳೂರು: ನನಗೆ ಬೇಸರ ಆಗಿದ್ದು ಸತ್ಯ. ಸಚಿವ ಸ್ಥಾನ ನೀಡುವಾಗ ನಮ್ಮ ಜಿಲ್ಲೆಯನ್ನು ಪರಿಗಣಿಸಿಲ್ಲ. ನನಗೂ ಆದ್ಯತೆ ನೀಡಿಲ್ಲ ಅನ್ನೋ ಬೇಸರ ಇದೆ. ಹಾಗಂತ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಹಿರೆಕೇರೂರು ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಬೆಳಗ್ಗೆ ಸಿದ್ದರಾಮಯ್ಯರನ್ನ ಭೇಟಿಮಾಡಿ ನನ್ನ ನೋವನ್ನ ಹೇಳಿಕೊಂಡಿದ್ದೇನೆ. ನಾನು ಮುಂಬೈಗೆ ಹೋಗಿದ್ದೆ ಎನ್ನುವುದು ಸುಳ್ಳು. ನಾನು ಎಲ್ಲೂ ಹೋಗಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ. ಈಗ ನನ್ನ ಕ್ಷೇತ್ರ ಹಿರೆಕೇರೂರಿಗೆ ಹೋಗುತ್ತಿದ್ದೇನೆ. ಸೋಮವಾರದಿಂದ ಅಧಿವೇಶನಕ್ಕೆ ಬರುತ್ತೇನೆ ಎಂದು ಸ್ಪಷ್ಟ ಪಡಿಸಿದರು.

    ಆಪರೇಷನ್ ಕಮಲದ ಬೆಳವಣಿಗೆಗಳಲ್ಲಿ ಕೊನೆಯ ಘಳಿಗೆಯಲ್ಲಿ ಬಿಸಿ ಪಾಟೀಲ್ ಅವರು ಕಮಲ ಪಾಳಯ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದ್ರೆ ಈ ಬೆಳವಣಿಗೆ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ನಾನು ಯಾವುದೇ ಕಾರಣಕ್ಕೂ ಮುಂಬೈಗೆ ಹೋಗಿಲ್ಲ ಎಂದು ಸ್ವತಃ ಬಿಸಿ ಪಾಟೀಲ್ ಅವರೇ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿ ಪ್ರತಿನಿಧಿ ಜೊತೆ ಬಿಸಿ ಪಾಟೀಲ್ ಮಾತುಕತೆ:
     ಪ್ರತಿನಿಧಿ: ತಾವು ಬೇಸರವಾಗಿದ್ದು ಏನಕ್ಕೆ?
    ಬಿಸಿ ಪಾಟೀಲ್: ಏನ್ ಬೇಸರಾಗ್ತಾ ಇರುತ್ತಾಲ್ಲ ಏನ್ಮಡೋದು
     ಪ್ರತಿನಿಧಿ: ತಾವು ಮುಂಬೈಗೆ ಹೋಗಿದ್ರಿ ಅಂತಾ ಮಾಹಿತಿ ಇತ್ತು
    ಬಿಸಿ ಪಾಟೀಲ್: ಇಲ್ಲ ಇಲ್ಲ ಅದು ಸುಳ್ಳು
     ಪ್ರತಿನಿಧಿ: ಸಿದ್ದರಾಮಯ್ಯರೊಂದಿಗೆ ಏನ್ ವಿಷಯ ಚರ್ಚೆ ಆಯ್ತು
    ಬಿಸಿ ಪಾಟೀಲ್: ನಿನ್ನೆ ಮೀಟಿಂಗ್‍ಗೆ ಬರಕ್ಕಾಗಲ್ಲ ಅಂತಾ ಹೇಳಿದ್ದೆ ಅದಕ್ಕೆ ಭೇಟಿ ಆಗು ಅಂತಾ ಹೇಳಿದ್ರು. ನಿನ್ನೆ ರಾತ್ರಿ ಅವರು ಮೈಸೂರಿನಿಂದ ಬರೋದು ಲೇಟ್ ಆಯ್ತು ಅದಕ್ಕೆ ನಿನ್ನೆ ಭೇಟಿಯಾಗೋಕೆ ಹೇಳಿದ್ರು. ಅದ್ರೆ ಸಿದ್ದರಾಮಯ್ಯ ಲೇಟಾಗಿ ಬಂದಿದ್ರಿಂದ ಭೇಟಿ ಮಾಡಲು ಆಗಿರಲಿಲ್ಲ. ಅವರು ಡೆಲ್ಲಿಗೆ ಹೊರಟಿದ್ರು ಭೇಟಿಯಾದೆ ಅಷ್ಟೇ.


     ಪ್ರತಿನಿಧಿ: ಅಲ್ಲ ಸರ್ ಅಗ್ಲೇ ನೀವು ಬೇಸರ ಆಗಿದೆ ಅಂತಾ ಹೇಳಿದ್ರಿ ಯಾಕೆ ಏನಾಯ್ತು
    ಬಿಸಿ ಪಾಟೀಲ್: ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ಕೊಡಲಿಲ್ಲ ಅವಕಾಶ ಇದ್ದಾಗ ನಮ್ಮಗೆ ಮಂತ್ರಿಗಿರಿಯನ್ನ ಸಹ ಕೊಡಲಿಲ್ಲ ಯಾಕೋ ಅದಕ್ಕೆ ಬೇಜರಾಗಿತ್ತು
     ಪ್ರತಿನಿಧಿ: ಹಾಗಾದ್ರೆ ಬಿಸಿ ಪಾಟೀಲ್ ಅವರು ಕಾಂಗ್ರೆಸ್ ಬಿಟ್ಟು ಹೋಗಲ್ಲ. ಬಿಸಿ ಪಾಟೀಲ್ ಅವರು ಮುಂಬೈಗೆ ಹೋಗಿದ್ದಾರೆ ಅಂತಾ ಇತ್ತು ಅದೆಲ್ಲ ಸುಳ್ಳು
    ಬಿಸಿ ಪಾಟೀಲ್ : ಹೌದು ಸರ್
     ಪ್ರತಿನಿಧಿ: ಹಾಗಾದ್ರೆ ಸೋಮವಾರದಿಂದ ಅಧಿವೇಶನಕ್ಕೆ ಹಾಜರಾಗ್ತಿರ
    ಬಿಸಿ ಪಾಟೀಲ್: ಹೌದು ಈಗ ಊರಿಗೆ ಹೊರಟಿದ್ದೇನೆ ಸೋಮವಾರ ಅಧಿವೇಶನಕ್ಕೆ ಬರುತ್ತೇನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧೈರ್ಯಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ- ಬಿ.ಸಿ ಪಾಟೀಲ್‍ಗೆ ಸುತ್ತೂರು ಶ್ರೀ ಧೈರ್ಯ

    ಧೈರ್ಯಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ- ಬಿ.ಸಿ ಪಾಟೀಲ್‍ಗೆ ಸುತ್ತೂರು ಶ್ರೀ ಧೈರ್ಯ

    ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಧೈರ್ಯ ತುಂಬಿದ್ದಾರೆ.

    ಈ ವಿಚಾರವನ್ನು ಸ್ವತಃ ಬಿಸಿ ಪಾಟೀಲ್ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಧೈರ್ಯಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಅಂತ ಶಾಸಕ ಬಿ.ಸಿ.ಪಾಟೀಲ್ ಹೇಳಿಕೊಂಡಿದ್ದಾರೆ.

    ಇಂದು ಬೆಳಗ್ಗೆ ಕರೆ ಮಾಡಿದ ಸುತ್ತೂರು ಶ್ರೀಗಳು, ಸಚಿವ ಸ್ಥಾನದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಸ್ವಾಮೀಜಿ ಬಿ.ಸಿ ಪಾಟೀಲ್ ಅವರಿಗೆ ಮಂತ್ರಿ ಪದವಿ ಸಿಗದಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಶಾಸಕರನ್ನು ಸಮಾಧಾನಿಸಿ ಸ್ವಾಮೀಜಿ ಧೈರ್ಯ ತುಂಬಿದ್ದಾರೆ. ಇಂತಹ ಶ್ರೀಗಳು ಲಿಂಗಾಯತರಲ್ಲಿ ಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಅಸಮಾಧಾನ ಹೊರ ಹಾಕಿದ್ರು:
    ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಳ ನೋವು, ಬೇಸರ ಆಗಿದೆ. ಜಾತಿವಾರು, ಪ್ರಾಂತ್ಯಾವಾರು ವಿಚಾರದಲ್ಲಿ ಹಾವೇರಿ ಜಿಲ್ಲೆ ಲೆಕ್ಕಕ್ಕೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ನಾನು ಏಕೈಕ ಕಾಂಗ್ರೆಸ್ ಶಾಸಕನಾಗಿದ್ದೇನೆ. ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ನಾನೊಬ್ಬನೆ ಲಿಂಗಾಯತ ಶಾಸಕ. ಈ ಬಾರಿ ಸಚಿವ ಸ್ಥಾನ ಸಿಗೋ ಭರವಸೆ ಇತ್ತು. ಪ್ರಥಮ ಬಾರಿ ಸಾದರ ಲಿಂಗಾಯತರನ್ನು ಹೊರಗಿಟ್ಟು ಸಚಿವ ಸಂಪುಟ ಆಗಿರೋದು. ಹಾವೇರಿ ಜಿಲ್ಲೆಗೆ ಹೇಳೋರು ಕೇಳೋರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಬಹುತೇಕ ಎಲ್ಲ ಸರ್ಕಾರಗಳು ಇದ್ದಾಗ ಸಾದರ ಲಿಂಗಾಯತರಿಗೆ ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ನಾನು ಸಿದ್ದರಾಮಯ್ಯರನ್ನ ನಂಬಿದ್ದೆ. ಇಷ್ಟು ವರ್ಷಗಳ ಕಾಲ ಸಿದ್ದರಾಮಯ್ಯನವರ ಜೊತೆಗಿದ್ದೆ. ಅವರೇ ನಮ್ಮ ಗಾಡ್ ಫಾದರ್. ನಾನು ಅವರನ್ನೇ ನಂಬಿದ್ದೆ, ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ನನಗೆ ಮಂತ್ರಿ ಸ್ಥಾನ ಸಿಗುತ್ತಿತ್ತು. ಹಾವೇರಿ ಜಿಲ್ಲೆ ಏನು ತಪ್ಪು ಮಾಡಿದೆ? ಜಿಲ್ಲೆಯ ಜನರು ಯಾವ ರೀತಿ ಪಕ್ಷವನ್ನು ನಂಬಬೇಕು ಅಂತ ಗೊತ್ತಾಗ್ತಿಲ್ಲ. ಸಚಿವ ಸ್ಥಾನ ಸಿಕ್ಕಿಲ್ಲ ಎಂದಾಗ ಯಾರೂ ನನ್ನ ಪರವಾಗಿಲ್ಲ ಎಂದು ನೊಂದುಕೊಂಡಿದ್ದರು.

    ಮುಂದಿನ ನಡೆ ಏನು ಅಂತ ಕಾದು ನೋಡಿ, ದಿಢೀರ್ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನಾನು ಎಲ್ಲೂ ಹೋಗಲ್ಲ, ಲೋಕಸಭಾ ಚುನಾವಣೆಯ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ. ನಾನು ಪಕ್ಷದ ಪರ ನಿಲ್ಲಲೇಬೇಕಾಗುತ್ತದೆ ಎಂದು ತಿಳಿಸಿದ್ದರು. ಇದಕ್ಕೂ ಮೊದಲು ಪುತ್ರಿ ಸೃಷ್ಠಿ ಪಾಟೀಲ್ ಅವರು ತಂದೆಗೆ ಸಚಿವ ಸ್ಥಾಸ ಸಿಗಲಿಲ್ಲ ಅಂತ ಹೈಕಮಾಂಡ್ ವಿರುದ್ಧ ಕಿಡಿಕಾರಿ ಅಸಮಾಧಾನ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲ ಆಡಿಯೋ ಔಟ್ – ಬಿಜೆಪಿಗೆ ಹೋಗ್ತೀರಾ ಎಂದು ಕೇಳಿದ್ದಕ್ಕೆ ಕೌರವನ ಖಡಕ್ ಉತ್ತರ

    ಆಪರೇಷನ್ ಕಮಲ ಆಡಿಯೋ ಔಟ್ – ಬಿಜೆಪಿಗೆ ಹೋಗ್ತೀರಾ ಎಂದು ಕೇಳಿದ್ದಕ್ಕೆ ಕೌರವನ ಖಡಕ್ ಉತ್ತರ

    ಬೆಂಗಳೂರು: ನಾವು ಎಲ್ಲೋ ಹೋಗುವುದಿಲ್ಲ, ಸದ್ಯಕ್ಕೆ ಅದು ದೂರವಾದ ಮಾತಾಗಿದೆ. ನಮ್ಮನ್ನು ಈ ಬಗ್ಗೆ ಯಾರು ಕೂಡ ಸಂಪರ್ಕ ಮಾಡಿಲ್ಲ ಎಂದು ಹಾವೇರಿಯ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

    ರಾಜ್ಯದಲ್ಲಿರುವ ದೋಸ್ತಿ ಸರ್ಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಮತ್ತೆ ಬಿಜೆಪಿ ಆಪರೇಷನ್ ಕಮಲವನ್ನು ಶುರುಮಾಡಿದೆ ಎನ್ನಲಾದ ಆಡಿಯೋ ಒಂದು ಔಟ್ ಆಗಿದ್ದು, ಅದರಲ್ಲಿ 10 ಕಾಂಗ್ರೆಸ್ ಶಾಸಕರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಇತ್ತು. ಶಾಸಕರ ಪಟ್ಟಿಯಲ್ಲಿ ಬಿ.ಸಿ ಪಾಟೀಲ್ ಹೆಸರು ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದ ದೋಸ್ತಿ ಸರ್ಕಾರವೇ ಬೆಚ್ಚಿ ಬೀಳುವಂತಹ ಬೆಳವಣಿಗೆ – ಗುಪ್ತಚರ ಇಲಾಖೆ ನೀಡಿದ್ದ ಆಡಿಯೋ ಔಟ್

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿ.ಸಿ ಪಾಟೀಲ್, ನಾವು ಎಲ್ಲೋ ಹೋಗುವುದಿಲ್ಲ, ಸದ್ಯಕ್ಕೆ ಅದು ದೂರವಾದ ಮಾತಾಗಿದೆ. ನಮ್ಮನ್ನು ಈ ಬಗ್ಗೆ ಯಾರು ಕೂಡ ಸಂಪರ್ಕ ಮಾಡಿಲ್ಲ. ಅವರು ನಮ್ಮನ್ನ ಕರೆದುಕೊಂಡು ಹೋಗೋಕೆ ಅವರು ನಮ್ಮನ್ನು ಗೆಲ್ಲಿಸಲಿಲ್ಲ. ಅದೆಲ್ಲಾ ಸುಳ್ಳಾಗಿದ್ದು, ಸತ್ಯಕ್ಕೆ ದೂರವಾದ ಮಾತಾಗಿದೆ. ನಾನು ಗ್ರಾಮದಲ್ಲಿ ಇದ್ದೀನಿ ನನಗೆ ಈ ಬಗ್ಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

    ಶ್ರೀರಾಮುಲು ಆಪ್ತ ಉದ್ಯಮಿ ಆಡಿಯೋ ಕೇಳಿದರೆ ನಗು ಬರುತ್ತದೆ ಎಂದು ಉತ್ತರಿಸಿದ್ದಾರೆ. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಕೇಳಬೇಕು ಎಂದು ಹೇಳಿದರು.

    ಇಂದು ಮುಂಜಾನೆ ಗುಪ್ತಚರ ಇಲಾಖೆ ಬಿಜೆಪಿ ನಾಯಕರ ಆಪರೇಷನ್ ಕಮಲದ ತಂತ್ರಗಾರಿಕೆ ಕುರಿತ ಆಡಿಯೋ ಒಂದನ್ನ ಸಿಎಂ ಕುಮಾರಸ್ವಾಮಿ ಅವರಿಗೆ ನೀಡಿದ್ದು ಈಗ ಅದು ಔಟ್ ಆಗಿತ್ತು. 3 ನಿಮಿಷ 44 ಸೆಕೆಂಡ್ ಇರುವ ಆಡಿಯೋದಲ್ಲಿ ರಾಮುಲು ಆಪ್ತ ಮತ್ತು ದುಬೈ ಮೂಲದ ಉದ್ಯಮಿ ಮಾತನಾಡಿದ್ದರು. ಮಾಜಿ ಸಚಿವ ಶ್ರೀರಾಮುಲು ಆಪ್ತರೊಬ್ಬರು ದುಬೈ ಮೂಲದ ಉದ್ಯಮಿ ಜೊತೆ ಆಪರೇಷನ್ ಕಮಲಕ್ಕೆ ಹಣಕಾಸಿನ ನೆರವು ಕೇಳಿ ಸಂಭಾಷಣೆ ನಡೆಸಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ. ಆಪರೇಷನ್ ಕಮಲದ ಯತ್ನ ದುಬೈವರೆಗೂ ತಲುಪಿದ್ದು, ಅಲ್ಲಿಂದಲು ಹಣಕಾಸಿನ ನೆರವು ಸಿಗುತ್ತಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆಗೆ ನೀಡಿದೆ ಎಂದು ಮೂಲಗಳು ತಿಳಿಸಿತ್ತು.

    ಈ ಆಡಿಯೋದಲ್ಲಿ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೋಳಿ, ಆನಂದ್ ಸಿಂಗ್, ನಾಗೇಂದ್ರ, ಗಣೇಶ್, ಭೀಮಾ ನಾಯಕ್, ಬಿ.ಸಿ.ಪಾಟೀಲ್, ಪ್ರತಾಪ ಗೌಡ ಪಾಟೀಲ್ ಸೇರಿದಂತೆ 10 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎನ್ನುವ ವಿಚಾರ ಪ್ರಸ್ತಾಪವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ರು ಶಾಸಕ ಬಿ.ಸಿ ಪಾಟೀಲ್!

    ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ರು ಶಾಸಕ ಬಿ.ಸಿ ಪಾಟೀಲ್!

    ಬೆಂಗಳೂರು: ಶಾಸಕ ಬಿಸಿ ಪಾಟೀಲ್ ಅವರು ಕಾಂಗ್ರೆಸ್ ವಿರುದ್ಧವೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಈ ಟ್ವೀಟ್ ನ್ನು ಅವರು ಐಎನ್‍ಸಿ ಕರ್ನಾಟಕ, ದಿನೇಶ್ ಗುಂಡೂರಾವ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಟ್ವೀಟ್ ನಲ್ಲೇನಿದೆ?
    ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ಕಾಂಗ್ರೆಸ್ ಶಾಸಕರಿಗೆ ಅವಮಾನ ಮಾಡುತ್ತಿದೆ. ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಮೂಲಕ ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಅಂತ ಸಂಪುಟ ವಿಸ್ತರಣೆ ಮುಂದೂಡಿಕೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಮೂಲಕ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ತೋರಿಸ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಪಕ್ಷ ತೊರೆಯುವ ಊಹಾಪೋಹಗಳ ಕುರಿತು ಜಿಲ್ಲೆಯ ಹಿರೇಕೆರೂರು ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸದ್ಯ ಬಿಜೆಪಿಯವರು ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ನನಗೆ ಸಚಿವ ಸ್ಥಾನ ಕೊಡಲೇಬೇಕು. ಸಚಿವನಾಗಲು ನನಗೆ ಎಲ್ಲ ಅರ್ಹತೆ ಇದೆ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ. ನನಗೆ ಅತೃಪ್ತರು ಯಾರು ಅನ್ನೋದೇ ಗೊತ್ತಿಲ್ಲ ಎಂದು ಹೇಳಿದ್ದರು.

    ಬಿಸಿ ಪಾಟೀಲ್ ಅವರು ಮುಂಬೈಗೆ ಹೋಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಈ ಕುರಿತು ಮಾತನಾಡಿದ ಅವರು, ನಾನು ಮುಂಬೈಗೆ ಹೋಗಬೇಕು ಅಂದಿದ್ದರೆ ನಾನು ಹಿರೇಕೆರೂರಿಗೆ ಬರುತ್ತಿರಲಿಲ್ಲ. ನಾನು ಕೊಲ್ಲಾಪುರಕ್ಕೆ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದೆ. ಅತೃಪ್ತರು ಯಾರು ಹೋಗಿಲ್ಲ. ನಾನು ನಮ್ಮ ಸಹೋದರ ಹೋಗಿದ್ದೆವು ಎಂದು ತಿಳಿಸಿದ್ದರು.

    ಕಾಂಗ್ರೆಸ್ ಶಾಸಕರೊಂದಿಗೆ ಪ್ರತಿದಿನ ಮಾತನಾಡುತ್ತಿರುತ್ತೇವೆ. ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಎಲ್ಲೂ ಬಿಡುಗಡೆ ಮಾಡಿಲ್ಲ. ಅಧಿಕೃತವಾಗಿಯೂ ಕೂಡ ಯಾರ ಹೆಸರನ್ನೂ ಹೇಳಿಲ್ಲ. ಸರ್ಕಾರ ಬೀಳುತ್ತೆ ಅಂತ ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಸರ್ಕಾರ ಬೀಳಲ್ಲ. ಇನ್ನು ಭದ್ರವಾಗಿದೆ. ನನ್ನ ಕ್ಷೇತ್ರದ ಜನರೇ ನನಗೆ ದೇವರು. ಅವರು ಹೇಳಿದ ರೀತಿ ನಾನು ಕೇಳುತ್ತೇವೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದ ನನಗೆ ಸಚಿವ ಸ್ಥಾನವನ್ನು ಕೊಡುತ್ತಾರೆ ಎಂದು ಬಿ.ಸಿ. ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಪಕ್ಷಕ್ಕೆ ಹೋಗುವ ಬಗ್ಗೆ ಶಾಸಕ ಬಿಸಿ ಪಾಟೀಲ್ ಸ್ಪಷ್ಟನೆ

    ಬಿಜೆಪಿ ಪಕ್ಷಕ್ಕೆ ಹೋಗುವ ಬಗ್ಗೆ ಶಾಸಕ ಬಿಸಿ ಪಾಟೀಲ್ ಸ್ಪಷ್ಟನೆ

    – ಸಚಿವ ಸ್ಥಾನ ನನಗೆ ಕೊಡಲೇಬೇಕು

    ಹಾವೇರಿ: ಮೈತ್ರಿ ಸರ್ಕಾರ ರಚನೆಯಾದ ನಂತರ ಕಾಂಗ್ರೆಸ್ ನ ಅತೃಪ್ತ ಶಾಸಕರು ಪಕ್ಷವನ್ನ ಬಿಟ್ಟು ಬೇರೆ ಪಕ್ಷಕ್ಕ ಹೋಗುವ ನಿರ್ಧಾರ ಮಾಡಿದ್ದಾರೆ ಅನ್ನೋ ಮಾತು ಹೆಚ್ಚು ಕೇಳಿಬರುತ್ತಿತ್ತು. ಈ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯ ಹಿರೇಕೆರೂರು ನಿವಾಸದಲ್ಲಿ ಶಾಸಕ ಬಿ.ಸಿ.ಪಾಟೀಲ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸದ್ಯ ಬಿಜೆಪಿಯವರು ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ನನಗೆ ಸಚಿವ ಸ್ಥಾನ ಕೊಡಲೇಬೇಕು. ಸಚಿವನಾಗಲು ನನಗೆ ಎಲ್ಲ ಅರ್ಹತೆ ಇದೆ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನ ಕೊಡುವ ವಿಶ್ವಾಸ ಇದೆ. ನನಗೆ ಅತೃಪ್ತರು ಯಾರು ಅನ್ನೋದೇ ಗೊತ್ತಿಲ್ಲ ಎಂದು ಹೇಳಿದ್ರು.

    ಬಿಸಿ ಪಾಟೀಲ್ ಅವರು ಮುಂಬೈಗೆ ಹೋಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಈ ಕುರಿತು ಮಾತನಾಡಿದ ಅವರು, ನಾನು ಮುಂಬೈಗೆ ಹೋಗಬೇಕು ಅಂದಿದ್ದರೆ ನಾನು ಹಿರೇಕೆರೂರಿಗೆ ಬರುತ್ತಿರಲಿಲ್ಲ. ನಾನು ಕೊಲ್ಲಾಪುರಕ್ಕೆ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದೆ. ಅತೃಪ್ತರು ಯಾರು ಹೋಗಿಲ್ಲ. ನಾನು ನಮ್ಮ ಸಹೋದರ ಹೋಗಿದ್ದೆವು ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ಶಾಸಕರೊಂದಿಗೆ ಪ್ರತಿದಿನ ಮಾತನಾಡುತ್ತಿರುತ್ತೇವೆ. ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಎಲ್ಲೂ ಬಿಡುಗಡೆ ಮಾಡಿಲ್ಲ. ಅಧಿಕೃತವಾಗಿಯೂ ಕೂಡ ಯಾರ ಹೆಸರನ್ನೂ ಹೇಳಿಲ್ಲ. ಸರ್ಕಾರ ಬೀಳುತ್ತೆ ಅಂತ ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಸರ್ಕಾರ ಬೀಳಲ್ಲ. ಇನ್ನು ಭದ್ರವಾಗಿದೆ. ನನ್ನ ಕ್ಷೇತ್ರದ ಜನರೇ ನನಗೆ ದೇವರು. ಅವರು ಹೇಳಿದ ರೀತಿ ನಾನು ಕೇಳುತ್ತೇವೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದ ನನಗೆ ಸಚಿವ ಸ್ಥಾನವನ್ನು ಕೊಡುತ್ತಾರೆ ಎಂದು ಬಿ.ಸಿ. ಪಾಟೀಲ್ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv