Tag: BC Patil

  • ಪಾಪು ಆರೋಗ್ಯ ವಿಚಾರಿಸಿದ ಬಿ.ಸಿ ಪಾಟೀಲ್, ಖಂಡ್ರೆ

    ಪಾಪು ಆರೋಗ್ಯ ವಿಚಾರಿಸಿದ ಬಿ.ಸಿ ಪಾಟೀಲ್, ಖಂಡ್ರೆ

    ಹುಬ್ಬಳ್ಳಿ: ಕೆಲವು ದಿನಗಳಿಂದ ನಗರದ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಅವರನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿಯಾಗಿ ಪಾಪು ಅವರ ಆರೋಗ್ಯ ವಿಚಾರಿಸಿದ್ದಾರೆ.

    ಹಾಲಿ ಹಾಗೂ ಮಾಜಿ ಸಚಿವರಿಬ್ಬರು ಪಾಪು ಅವರ ಆರೋಗ್ಯದ ಬಗ್ಗೆ ಅವರ ಸಂಬಂಧಿಗಳು ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಪಾಟೀಲ್ ಪುಟ್ಟಪ್ಪವರು ನಾಡಿನ ಹಿರಿಯ ಚಿಂತಕರು, ಅವರು ಬೇಗನೆ ಗುಣಮುಖರಾಗಿ ಮತ್ತೆ ಮೊದಲಿನಂತೆ ನೆಲ, ಜಲ ಹಾಗೂ ಕನ್ನಡಕ್ಕಾಗಿ ಅವರ ಹೋರಾಟ ಮುಂದುವರೆಸಲು ಎಂದು ಬಿ.ಸಿ ಪಾಟೀಲ್ ಹಾಗೂ ಈಶ್ವರ ಖಂಡ್ರೆ ಹಾರೈಸಿದರು.

    ಇದೇ ವೇಳೆ ಕೃಷಿ ಸಚಿವರು ಕಿಮ್ಸ್ ವೈದ್ಯರ ಜೊತೆ ಕೆಲಕಾಲ ಚರ್ಚೆ ನಡೆಸಿ ಆರೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಂಡರು. ಬಳಿಕ ಪಾಪು ಅವರ ಆರ್ಶಿವಾದ ಪಡೆದರು. ಸಚಿವ ಬಿಸಿ ಪಾಟೀಲ್ ಜೊತೆ ಅವರ ಪುತ್ರಿ ಸೃಷ್ಠಿ ಪಾಟೀಲ್ ಸಹ ಪಾಪುರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

  • ಸೈನಿಕರ ಸಮಾಧಿ ಮೇಲೆ ರಾಜಕೀಯ ಮಾಡೋ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ: ಬಿ.ಸಿ ಪಾಟೀಲ್

    ಸೈನಿಕರ ಸಮಾಧಿ ಮೇಲೆ ರಾಜಕೀಯ ಮಾಡೋ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ: ಬಿ.ಸಿ ಪಾಟೀಲ್

    ಹಾವೇರಿ: ರಾಜಕೀಯ ಲಾಭಕ್ಕಾಗಿ ಪುಲ್ವಾಮಾ ದಾಳಿ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರ ಅದು ಅವರ ಬಾಲಿಶತನದ ಹೇಳಿಕೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿ ಕಾರಿದ್ದಾರೆ.

    ಹಾವೇರಿ ಜಿಲ್ಲೆ ರಟ್ಟಿಹಳ್ಳಿಯ ಬತ್ತಿಕೊಪ್ಪ ಕ್ರಾಸ್ ನಲ್ಲಿ ಅವರು ಮಾತನಾಡಿದ ಅವರು, ಸೈನಿಕರ ಸಮಾಧಿ ಮೇಲೆ ರಾಜಕೀಯ ಮಾಡೋ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ. ರಾಹುಲ್ ಗಾಂಧಿಯವರು ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ರೈತರಿಗೆ ಬರಬೇಕಾದ ಕೃಷಿ ಸಮ್ಮಾನ್ ಹಣ ಆದಷ್ಟು ಬೇಗ ರೈತರಿಗೆ ಜಮಾ ಮಾಡಿಸುತ್ತೇನೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು. 40 ವರ್ಷಗಳ ನಂತರ ತಾಲೂಕಿಗೆ ಮಂತ್ರಿ ಭಾಗ್ಯ ಸಿಕ್ಕಿದೆ. ರೈತನ ಮಗನಾಗಿ ಕೃಷಿ ಸಚಿವನಾಗಿ ಬಂದಿದ್ದಕ್ಕೆ ಸಂತೋಷವಾಗುತ್ತಿದೆ.

    ಅರಣ್ಯ ಇಲಾಖೆಯನ್ನ ಯಾರೂ ಬಿಡೋದಿಲ್ಲ. ಸಿಎಂಗೆ ಪ್ರಾಣಿಗಳಿದ್ದಲ್ಲಿಗೆ ಬೇಡ, ಜನರಿದ್ದಲ್ಲಿಗೆ ಕಳಿಸಿ ಅಂದೆ. ಸಿಎಂ ಕೃಷಿ ಖಾತೆ ಅಂದು ಕೃಷಿ ಖಾತೆ ಕೊಟ್ಟಿದ್ದಾರೆ. ಉತ್ತಮ ಕೆಲಸ ಮಾಡುತ್ತೆನೆ ಎಂದರು. ಇದಕ್ಕೂ ಮೊದಲು ಸಚಿವರಾದ ಬಳಿಕ ಮೊದಲ ಬಾರಿಗೆ ಆಗಮಿಸಿದ ಬಿ.ಸಿ ಪಾಟೀಲರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

    ರಾಹುಲ್ ಗಾಂಧಿ ಹೇಳಿದ್ದೇನು?
    ಕರಾಳ ದಿನದ ಬಗ್ಗೆ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ನಾವು ಇಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸುತ್ತಿದ್ದೇವೆ. ಈ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳೋಣ, ಈ ದಾಳಿಯಿಂದ ಯಾರಿಗೆ ಹೆಚ್ಚು ಲಾಭ ಆಯ್ತು? ದಾಳಿಯ ಕುರಿತು ನಡೆಸಿದ ತನಿಖೆಯ ಸತ್ಯಾಂಶ ಏನು? ದಾಳಿಗೆ ಅವಕಾಶ ನೀಡಿದ ಭದ್ರತಾ ವೈಫಲ್ಯಕ್ಕೆ ಬಿಜೆಪಿ ಸರ್ಕಾರದಲ್ಲಿ ಹೊಣೆಗಾರರು ಯಾರು ಎಂದು ಬರೆದು ಪುಲ್ವಾಮಾ ಹುತಾತ್ಮರನ್ನು ಇರಿಸಿದ್ದ ಫೋಟೋವನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಾಯಕತ್ವದ ನಿಯತ್ತು ಬದಲಿಸಿದ ಬಿ.ಸಿ.ಪಾಟೀಲ್

    ನಾಯಕತ್ವದ ನಿಯತ್ತು ಬದಲಿಸಿದ ಬಿ.ಸಿ.ಪಾಟೀಲ್

    ಬೆಂಗಳೂರು: ರಮೇಶ್ ಜಾರಕಿಹೊಳಿ ನಮ್ಮ ನಾಯಕರಲ್ಲ. ಅವರು ನನ್ನ ಸ್ನೇಹಿತರು ಅಷ್ಟೇ. ಯಡಿಯೂರಪ್ಪ, ಅಮಿತ್ ಶಾ, ಜೆ.ಪಿ.ನಡ್ಡಾ, ನಳಿನ್ ಕುಮಾರ್ ಕಟೀಲ್ ನಮ್ಮ ನಾಯಕರು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಕಾಂಗ್ರೆಸ್ಸಿನಲ್ಲಿ ಬಂಡಾಯದ ಬಾವುಟ ಹಾರಿಸಿದ ದಿನದಿಂದ ಪ್ರತಿ ಹಂತದಲ್ಲೂ ಬಿ.ಸಿ.ಪಾಟೀಲ್ ರಮೇಶ್ ಜಾರಕಿಹೊಳಿಯನ್ನು ನೆರಳಿನಂತೆ ಹಿಂಬಾಲಿಸಿದ್ದರು. ಅನರ್ಹರಾಗಿ ನ್ಯಾಯಾಲಯದಲ್ಲೂ ಕೇಸು ಎದುರಿಸುವಾಗಲು ರಮೇಶ್ ಜಾರಕಿಹೊಳಿಯೇ ನಮ್ಮ ನಾಯಕ ಎಂದು ಎಲ್ಲರು ಹಿಂಬಾಲಿಸಿದ್ದರು. ಉಪ ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾಗಲೂ ಜಾರಕಿಹೊಳಿ ನಾಯಕತ್ವದಲ್ಲೇ ಸಂಪುಟ ವಿಸ್ತರಣೆಗೆ ಲಾಬಿ ಮಾಡಿದ್ದರು.

    ಆದರೆ ಚುನಾವಣೆ ಗೆದ್ದು ಸಚಿವರಾದ ಮರು ದಿನವೇ ಬಿ.ಸಿ.ಪಾಟೀಲ್ ಹೊಸ ಬಾಂಬ್ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ನನ್ನ ನಾಯಕನಲ್ಲ ಅವರು ನನ್ನ ಸ್ನೇಹಿತ ಅಷ್ಟೇ ಎನ್ನುವ ಮೂಲಕ ನಿಯತ್ತು ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.

  • ಎಲ್ಲಾ 17 ಜನಕ್ಕೂ ಸಚಿವ ಸ್ಥಾನ ಸಿಗುತ್ತೆ: ಬಿ.ಸಿ ಪಾಟೀಲ್ ವಿಶ್ವಾಸ

    ಎಲ್ಲಾ 17 ಜನಕ್ಕೂ ಸಚಿವ ಸ್ಥಾನ ಸಿಗುತ್ತೆ: ಬಿ.ಸಿ ಪಾಟೀಲ್ ವಿಶ್ವಾಸ

    ದಾವಣಗೆರೆ: ಯಾವುದೇ ಕಾರಣಕ್ಕೂ ಈ ತಿಂಗಳ 30ರೊಳಗೆ ಸಂಪುಟ ವಿಸ್ತರಣೆ ಆಗಿಯೇ ಆಗುತ್ತದೆ. ಸೋತವರಿಗೂ ಕೂಡ ಸಚಿವ ಸ್ಥಾನ ಸಿಗುತ್ತೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದರು.

    ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಸೋತವರಿಗೆ ಸಚಿವ ಸ್ಥಾನ ಇಲ್ಲಾ ಎಂಬುದು ತಪ್ಪು. ಈಗ ಸೋತವರಿಗೆ ಎಂಎಲ್‍ಸಿ ನೀಡಬೇಕು, ಆಗ ಸಚಿವ ಸ್ಥಾನ ನೀಡಲು ಸಾಧ್ಯ. ಇದಕ್ಕಾಗಿ ಸ್ವಲ್ಪ ವಿಳಂಬ ಆಗಬಹುದು. ಅಲ್ಲದೆ ಈ ಕಾರಣಕ್ಕೆ ಸೋತವರಿಗೆ ಸದ್ಯಕ್ಕೆ ಸಚಿವ ಸ್ಥಾನ ನೀಡಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 17 ಜನಕ್ಕೂ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಅಥವಾ ಬಿಜೆಪಿ ಹೈಕಮಾಂಡ್ ಯಾವುದೇ ರೀತಿಯ ಬೇಸರ ವ್ಯಕ್ತಪಡಿಸಿಲ್ಲ ಎಂದರು.


    ಈ ಹಿಂದೆ ಯತ್ನಾಳ್ ಬಿಜೆಪಿಗರು ಬಹಳಷ್ಟು ಅಧಿಕಾರ ಅನುಭವಿಸಿದ್ದಾರೆ. ಅವರಿಂದ ಸಚಿವ ಸ್ಥಾನ ತೆಗೆದುಕೊಂಡು ಬಿಜೆಪಿ ಸೇರ್ಪಡೆಯಾದ ಶಾಸಕರಿಗೆ ನೀಡಲಿ ಎಂದು ಹೇಳಿದ್ದರು. ಯತ್ನಾಳ್ ಹೇಳಿಕೆಗೆ ಉತ್ತರ ನೀಡದ ಬಿ.ಸಿ ಪಾಟೀಲ್, ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ 30ರೊಳಗೆ ಸಂಪುಟ ವಿಸ್ತರಣೆ ಆಗುತ್ತದೆ. ಅವರು ಕೊಟ್ಟ ಖಾತೆ ನಿರ್ವಹಣೆ ಮಾಡುವೆ. ಇದೇ ಖಾತೆ ಬೇಕು ಎಂದು ನಾನು ಕೇಳಿಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.

  • ಬಿಎಸ್‍ವೈ ಕೊಟ್ಟ ಮಾತು ಉಳಿಸಿಕೊಳ್ತಾರೆ, ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗುತ್ತೆ: ಬಿಸಿ ಪಾಟೀಲ್

    ಬಿಎಸ್‍ವೈ ಕೊಟ್ಟ ಮಾತು ಉಳಿಸಿಕೊಳ್ತಾರೆ, ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗುತ್ತೆ: ಬಿಸಿ ಪಾಟೀಲ್

    ಬೆಂಗಳೂರು: ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಯಾವತ್ತೂ ತಪ್ಪಿಲ್ಲ. ಅವರು ಕೊಟ್ಟ ಮಾತಿನಂತೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡೋ ವಿಶ್ವಾಸ ಇದೆ ಎಂದು ಬಿಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಆಗದೇ ಇರೋದಕ್ಕೆ ನಮಗೂ ಬೇಸರ ಆಗಿದೆ. ರಾಜ್ಯದ ಜನರಿಗೂ ಬೇಸರ ಆಗಿದೆ. ಆದಷ್ಟು ಬೇಗ ವಿಸ್ತರಣೆ ಆಗೋ ವಿಶ್ವಾಸ ಇದೆ ಅಂತ ತಿಳಿಸಿದರು.

    ಸಿಎಂ ಯಡಿಯೂರಪ್ಪನವರು 17 ಜನರಿಗೂ ಸ್ಥಾನ ನಿಡುವ ಭರವಸೆ ಕೊಟ್ಟಿದ್ದಾರೆ. ಅವರು ವಿದೇಶದಿಂದ ಬಂದು ನಂತರ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತಾಡಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡುತ್ತಾರೆ. ಕೇವಲ 16- 17 ಜನ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ. ಆಡಳಿತ ಚುರುಕು ಮಾಡಬೇಕಿದೆ. ಹೀಗಾಗಿ ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಅಂತ ಅಸಮಾಧಾನ ಹೊರ ಹಾಕಿದರು. ಅಮಿತ್ ಶಾ ಅವರ ಜೊತೆ ನೇರವಾಗಿ ಚರ್ಚೆ ಮಾಡೋಕೆ ಆಗಲ್ಲ. ಅದಕ್ಕೆ ಹಂತ ಇರುತ್ತೆ. ರಾಜ್ಯ ಬಿಜೆಪಿ ಅಧ್ಯಕ್ಷರು, ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡುತ್ತಾರೆ. ಹೊಸದಾಗಿ ಜೆಪಿ ನಡ್ಡಾ ಅವರು ಅಧ್ಯಕ್ಷರಾದ ಹಿನ್ನೆಲೆ ಎಲ್ಲಾ ಮಾಹಿತಿಗಳು ಅವರಿಗಿದೆ. ಯಡಿಯೂರಪ್ಪರವರು ವಿದೇಶದಿಂದ ಬಂದ ಬಳಿ ಅಧ್ಯಕ್ಷರ ಜೊತೆ ಮಾತಾಡ್ತಾರೆ ಅಂದ್ರು.

    ಇದೇ ವೇಳೆ ಬಾಂಬ್ ಪ್ರಕರಣದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವಿರುದ್ಧ ಕಿಡಿಕಾರಿದ ಬಿಸಿ ಪಾಟೀಲ್, ಕುಮಾರಸ್ವಾಮಿ ಅವರ ಹೇಳಿಕೆ ಬಹಳ ಬಾಲಿಶವಾದದ್ದು. ಒಂದು ಬಾಂಬ್ ಘಟನೆಯನ್ನ ಅಣಕು ಅಂತ ಹೇಳಿದ್ದಾರೆ. ಒಂದು ವೇಳೆ ಬಾಂಬ್ ಬ್ಲಾಸ್ಟ್ ಆಗಿದ್ರೆ ಇವ್ರೇ ಪೊಲೀಸ್ ವೈಫಲ್ಯ, ಸರ್ಕಾರದ ವೈಫಲ್ಯ ಅಂತಿದ್ದರು. ಹೀಗೆ ಮಾತಾಡೋದ್ರಿಂದ ಪೊಲೀಸರ ನೈತಿಕತೆಗೆ ಪೆಟ್ಟು ಬಿದ್ದಂತೆ ಆಗುತ್ತೆ. ಮಾಜಿ ಪ್ರಧಾನಿಗಳ ಮಗ ಹೀಗೆ ಮಾತಾಡಿ ಕಾಮಿಡಿ ವ್ಯಕ್ತಿ ಆಗೋದು ಬೇಡ ಅಂತ ಹೆಚ್‍ಡಿಕೆ ವಿರುದ್ಧ ಲೇವಡಿ ಮಾಡಿದ್ರು.

  • ಅವಿವೇಕಿತನ ಹೇಳಿಕೆ ನಿಮಗೆ ಶೋಭೆ ತರಲ್ಲ- ಹೆಚ್‍ಡಿಕೆ ವಿರುದ್ಧ ಬಿ.ಸಿ ಪಾಟೀಲ್ ಗರಂ

    ಅವಿವೇಕಿತನ ಹೇಳಿಕೆ ನಿಮಗೆ ಶೋಭೆ ತರಲ್ಲ- ಹೆಚ್‍ಡಿಕೆ ವಿರುದ್ಧ ಬಿ.ಸಿ ಪಾಟೀಲ್ ಗರಂ

    ಹಾವೇರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕರು, ಮಾಜಿ ಮುಖ್ಯಮಂತ್ರಿ ಆಗಿರೋ ನೀವು ಈ ರೀತಿಯ ಹೇಳಿಕೆ ನೀಡುವುದಕ್ಕೆ ನೂರು ಸಾರಿ ಯೋಚನೆ ಮಾಡಬೇಕು. ಮಾಜಿ ಸಿಎಂ ಆದ ನೀವು ಪೊಲೀಸ್ ಇಲಾಖೆಯನ್ನ ಪದೇ ಪದೇ ಹೀಯಾಳಿಸಿ, ಶಂಕಿಸಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಬಾರದು. ಇಂಥ ಅವಿವೇಕಿತನದ ಹೇಳಿಕೆ ನೀಡಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಕುಮಾರಸ್ವಾಮಿ ಹೇಳಿದ್ದೇನು?
    ಮಂಗಳೂರಿನ ಉಳ್ಳಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ನ್ನು ಹರಸಾಹಸಪಟ್ಟು ನಿಷ್ಕರಿಯಗೊಳಿಸಿದ್ದೆಲ್ಲವೂ ಪೊಲೀಸರು ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವದಂದು ನಡೆಸುವ ಅಣುಕು ಪ್ರದರ್ಶನದಂತಿತ್ತು ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್

    ಅಲ್ಲದೆ ಜನರ ಮಧ್ಯೆ ಕಂಕದ ನಿರ್ಮಿಸುವ ಉದ್ದೇಶದಿಂದ ಯಾವುದೋ ಸಂಘಟನೆ ಮುಖಾಂತರ ಈ ಪ್ರಹಸನ ನಡೆಸಿದ್ದು ಸರ್ಕಾರವೇ ಅದರ ಸತ್ಯಾಸತ್ಯತೆ ಜನತೆ ಮುಂದೆ ಇಡಬೇಕಾಗಿದೆ ಎಂದು ಕೂಡ ಅವರು ಹೇಳಿದ್ದರು. ಇದನ್ನೂ ಓದಿ: ಏರ್‌ಪೋರ್ಟ್‌ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ

  • ಗೃಹ ಖಾತೆ, ಲೋಕೋಪಯೋಗಿ ಖಾತೆಗಳ ಮೇಲೆ ಬಿ.ಸಿ ಪಾಟೀಲ್ ಕಣ್ಣು

    ಗೃಹ ಖಾತೆ, ಲೋಕೋಪಯೋಗಿ ಖಾತೆಗಳ ಮೇಲೆ ಬಿ.ಸಿ ಪಾಟೀಲ್ ಕಣ್ಣು

    ಬೆಂಗಳೂರು: ಮುಂದಿನ ವಾರ ಮುಖ್ಯಮಂತ್ರಿಗಳು ದೆಹಲಿಗೆ ಹೋಗುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಖಾತೆ ಡಿಮ್ಯಾಂಡ್ ಇರಲಾರಂಭಿಸಿದ್ದಾರೆ. ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ ಎಲ್ಲರಿಗಿಂತ ಮುಂಚೆಯೇ ಪ್ರಬಲ ಖಾತೆಗೆ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿರುವ ಶಾಸಕ ಬಿ.ಸಿ ಪಾಟೀಲ್ ತಮಗೆ ಗೃಹ ಖಾತೆ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

    ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಶಾಸಕ ಬಿ.ಸಿ ಪಾಟೀಲ್, ನಾನು ಪೊಲೀಸ್ ಇಲಾಖೆಗೆ ಬರಲಿ ಅಂತ ಪೊಲೀಸರ ನಿರೀಕ್ಷೆ ಇದೆ. ಬಹುಶಃ ಇಲ್ಲಿವರೆಗೆ ಪೊಲೀಸ್ ಇಲಾಖೆಯವರು ಇಂಥವರೇ ಗೃಹ ಸಚಿವರಾಗಬೇಕು ಎಂದು ಕೇಳಿಲ್ಲ. ನಾನು ಶಾಸಕನಾಗುವ ಮೊದಲು ಪೊಲೀಸ್ ಆಗಿದ್ದೆ. ಹೀಗಾಗಿ ಕೆಲ ಪೊಲೀಸರಿಗೆ ನಾನು ಗೃಹ ಸಚಿವನಾಗಬೇಕೆಂಬ ಬಯಕೆ ಇದೆ. ನಾನು ಈ ಮುಂಚೆ ಪೊಲೀಸ್ ಅಧಿಕಾರಿಯಾಗಿದ್ದರಿಂದ ಅವರು ಈಗ ನಾನೇ ಸಚಿವನಾಗಲಿ ಕೇಳುತ್ತಿದ್ದಾರಂತೆ. ಆದರೆ ನಾನು ಇದೇ ಖಾತೆ ಬೇಕು ಅಂತ ಕೇಳಿಲ್ಲ. ಯಾವ ಖಾತೆ ಕೊಟ್ಟರೂ ಸ್ವೀಕರಿಸುತ್ತೇನೆ. ಪಕ್ಷ ಮತ್ತು ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ ಎಂದು ತಿಳಿಸಿದರು.

    ಮುಂದುವರಿದು ಮಾತನಾಡಿದ ಬಿ.ಸಿ ಪಾಟೀಲ್, ಇನ್ನೂ ಕೆಲವರು ಲೋಕೋಪಯೋಗಿ ಖಾತೆ ತಗೊಳ್ಳಿ ಅಂದಿದ್ದಾರೆ. ಸಿಎಂ ಅಂತಿಮವಾಗಿ ನನಗೆ ಯಾವ ಖಾತೆ ಕೊಡುತ್ತಾರೆ ಅಂತ ನೋಡೋಣ. ಅವರು ಯಾವುದೇ ಖಾತೆ ಕೊಟ್ಟರೂ ನಾನು ನಿಭಾಯಿಸೋಕೆ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಸಂಕ್ರಾಂತಿ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ನಾವೆಲ್ಲ ಸಚಿವರಾಗಿಯೇ ಅಧಿವೇಶನಕ್ಕೆ ಹಾಜರಾಗಲಿದ್ದೇವೆ. ಅಧಿವೇಶನ ಇರೋದು ಫೆಬ್ರವರಿ 17ಕ್ಕೆ. ಅಷ್ಟರೊಳಗೆ ಸಂಪುಟ ವಿಸ್ತರಣೆ ಆಗುವ ಭರವಸೆ ಇದೆ ಎಂದು ಇದೇ ವೇಳೆ ಶಾಸಕ ಬಿ.ಸಿ ಪಾಟೀಲ್ ತಿಳಿಸಿದರು.

  • ಎಂಟಿಬಿ ಸಚಿವರಾಗ್ತಾರೆ – ನಾಗರಾಜ್ ಪರ ಕೌರವ ಬ್ಯಾಟಿಂಗ್

    ಎಂಟಿಬಿ ಸಚಿವರಾಗ್ತಾರೆ – ನಾಗರಾಜ್ ಪರ ಕೌರವ ಬ್ಯಾಟಿಂಗ್

    ಹುಬ್ಬಳ್ಳಿ: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲಾ ಅರ್ಹ ಶಾಸಕರಿಗೂ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಹೊಸಕೋಟೆ ಉಪಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ಸಚಿವರಾಗುತ್ತಾರೆ ಎಂದು ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಪರ ಬಿಜೆಪಿ ನಡೆಸುತ್ತಿರುವ ಪ್ರಮುಖರ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಬಿಸಿ ಪಾಟೀಲ್, ನಾವು ಸಚಿವರಾಗೋದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

    ಎಂಟಿಬಿ ನಾಗರಾಜ್ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಜನವರಿ ಮೊದಲ ವಾರದಲ್ಲಿ ಸಿಎಂ, ಅಮಿತ್ ಶಾ ಜೊತೆ ಚರ್ಚೆ ನಡೆಸಲಿದ್ದಾರೆ. ಸಂಕ್ರಾತಿ ಬಳಿಕ ನಡೆಯುವ ಸಂಪುಟ ವಿಸ್ತರಣೆಯಲ್ಲಿ ನಮ್ಮ ಜೊತೆ ಎಂಟಿಬಿ ನಾಗರಾಜ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆಂದು ಬಿಸಿ ಪಾಟೀಲ್ ಹೇಳಿದ್ದಾರೆ. ಅಲ್ಲದೇ ನಾವೂ ಯಾರು ಇಂತಹದ್ದೇ ಸಂಪುಟ ಖಾತೆಗಳು ಬೇಕು ಎಂದು ಪಟ್ಟುಹಿಡಿದಿಲ್ಲ. ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಖಾತೆಗಳ ಬಗ್ಗೆ ನಿರ್ಧಾರ ಮಾಡಲಿದ್ದೇವೆ ಎಂದರು.

    ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕರು ಮಾತ್ರ ಸಚಿವರಾಗುತ್ತಾರೆ. ಸೋಲುಂಡವರಿಗೆ ಸಚಿವ ಸ್ಥಾನ ಸಿಗಲ್ಲವೆಂದು ಬಿಜೆಪಿ ನಾಯಕರಾದ ಆರ್.ಅಶೋಕ್ ಹಾಗೂ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದರು. ಆದರೆ ಇದೀಗ ಎಂಟಿಬಿ ನಾಗರಾಜ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

  • ಕಾನೂನು ಸುವ್ಯವಸ್ಥೆ ಕಾಪಾಡೋದ್ರಲ್ಲಿ ಸಿಎಂ ಬ್ಯುಸಿ: ಬಿ.ಸಿ.ಪಾಟೀಲ್

    ಕಾನೂನು ಸುವ್ಯವಸ್ಥೆ ಕಾಪಾಡೋದ್ರಲ್ಲಿ ಸಿಎಂ ಬ್ಯುಸಿ: ಬಿ.ಸಿ.ಪಾಟೀಲ್

    -ಮುಂದಿನ ವರ್ಷ ಸಚಿವ ಸಂಪುಟ ವಿಸ್ತರಣೆ

    ಹಾವೇರಿ: ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಸಿಎಂ ಯಡಿಯೂರಪ್ಪ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ವರ್ಷ ಇಲ್ಲ, ಮುಂದಿನ ವರ್ಷ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಎಂದು ಹಿರೇಕೆರೂರು ಬಿಜೆಪಿ ಶಾಸಕ ಬಿ.ಸಿ.ಪಾಟೀಲ ಹೇಳಿದರು.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ನವದೆಹಲಿಗೆ ಹೋಗುವುದು ವಿಳಂಬ ಆಗಿದೆ. ಅವರು ದೆಹಲಿಗೆ ಹೋಗಿ ಬಂದ ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಹೀಗಾಗಿ ಮುಂದಿನ ವರ್ಷ ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ಈಗ ಸಿಎಂ ಯಡಿಯೂರಪ್ಪ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದರು.

    ಮಂಗಳೂರು ಘಟನೆ ವಿಚಾರದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಖಂಡಿಸಿದ ಪಾಟೀಲ್, ಸಿದ್ದರಾಮಯ್ಯ ಸಿಎಂ ಆಗಿದ್ದವರು. ದುಷ್ಕರ್ಮಿಗಳು ಕಾನೂನು ಸುವ್ಯವಸ್ಥೆ ಹಾಳು ಮಾಡುವಾಗ ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ. ಹೀಗಾಗಿ ಪೊಲೀಸರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಅಲ್ಲದೇ ಮಂಗಳೂರು ಘಟನೆ ವಿಚಾರಕ್ಕೆ ಗೃಹ ಸಚಿವರು ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿರಿಲ್ಲ ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.

  • ಸಿದ್ದರಾಮಯ್ಯ ನಮ್ಮಿಂದ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ: ಬಿಸಿ ಪಾಟೀಲ್

    ಸಿದ್ದರಾಮಯ್ಯ ನಮ್ಮಿಂದ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ: ಬಿಸಿ ಪಾಟೀಲ್

    ಹಾವೇರಿ: ಸಿದ್ದರಾಮಯ್ಯ ನಮ್ಮಿಂದ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಬೋಗಾವಿ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಸಿದ್ದರಾಮಯ್ಯ ಯಾರದೋ ಹೆಸರಿನ ಬಂಗಲೆಯಲ್ಲಿ ಇದ್ದರು. ನಾವು ರಾಜೀನಾಮೆ ಕೊಟ್ಟಿದ್ದಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿದೆ. ಸ್ವಂತ ಕಾರು ಬಿಟ್ಟು ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಹೇಳಿದರು.

    2004ರಿಂದ ಪಕ್ಷ ಸಂಘಟನೆಯಲ್ಲಿ ಸಿದ್ದರಾಮಯ್ಯ ನಾವು ಒಂದಾಗಿದ್ದೆವು. ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ನಾವು ಅವರನ್ನು ಬಿಟ್ಟು ಬಂದಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವ ಇದೆ. ನಾವು ಯಾರು ಸಿದ್ದರಾಮಯ್ಯರ ಬೆನ್ನಿಗೂ ಚೂರಿ ಹಾಕಿಲ್ಲ. ಅವರಿಗೆ ನಾವು ಒಳ್ಳೆಯದನ್ನೆ ಮಾಡಿದ್ದೇವೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ದೇವೇಗೌಡರು ಒಂದಾಗಿದ್ದರು. ಸಿದ್ದರಾಮಯ್ಯ ಅವರಿಂದ ಹೊರಬಂದು ತೊಡೆತಟ್ಟಿದರು ಎಂದು ತಿಳಿಸಿದರು.

    ಯಾವ ಕಾಲಕ್ಕೂ ದೇವೇಗೌಡರು ಸಿದ್ದರಾಮಯ್ಯರನ್ನ ಸಿಎಂ ಮಾಡುತ್ತ ಇರಲಿಲ್ಲ. ಯಡಿಯೂರಪ್ಪ ಅವರದ್ದು ದೊಡ್ಡ ಗುಣ. ನಾವು ರಾಜೀನಾಮೆ ಕೊಟ್ಟಿದ್ದಕ್ಕೆ ಸಿಎಂ ನಮ್ಮ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ. ನಮ್ಮ ತಾಲೂಕಿಗೆ ಮೂವತ್ತು ವರ್ಷಗಳಿಂದ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಈಗ ಯಡಿಯೂರಪ್ಪ ಮಂತ್ರಿ ಸ್ಥಾನ ಕೊಡುತ್ತೇನೆ ಅಂದಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.