ಹಾವೇರಿ: ದೂರುದಾರ ಮಾನಸಿಕವಾಗಿ ಅಸ್ವಸ್ಥನೋ ಅಥವಾ ಸ್ವಸ್ಥನೋ ಎನ್ನುವುದನ್ನು ಮಾನಸಿಕ ತಜ್ಞರು ಮೊದಲು ಪರೀಕ್ಷಿಸಬೇಕು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ (B C Patil) ಒತ್ತಾಯಿಸಿದ್ದಾರೆ.
ಹಾವೇರಿ (Haveri) ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಅನಾಮಿಕ ದೂರುದಾರ ಮೊದಲು ಮಾನಸಿಕವಾಗಿ ಸ್ವಸ್ತನಾಗಿದ್ದಾನೋ ಅಥವಾ ಅಸ್ವಸ್ಥನಾಗಿದ್ದಾನೋ ಎನ್ನುವುದನ್ನು ಮಾನಸಿಕ ತಜ್ಞರಿಂದ ಮೊದಲು ಪರೀಕ್ಷಿಸಬೇಕು. ನಂತರ ಕ್ರಮ ಜರುಗಿಸುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಉತ್ಕನನ: 2 ಕಾರ್ಡ್, ಹರಿದ ರವಿಕೆ ಪತ್ತೆ
ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ದೂರುದಾರ ಮೊದಲು ಮಾನಸಿಕವಾಗಿ ಆರೋಗ್ಯವಾಗಿದ್ದಾನಾ ಅನ್ನೋದನ್ನ ದೃಢಪಡಿಸಿಕೊಂಡ ನಂತರ ಎಸ್‌ಐಟಿ ತಂಡ ತನಿಖೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗ: ಮಕ್ಕಳಾಗಿಲ್ಲ ಎಂಬ ವಿಚಾರದಲ್ಲಿ ಅಳಿಯನಿಗೆ ಕೊರಗಿತ್ತು ಎಂದು ಮಾಜಿ ಸಚಿವ ಬಿಸಿ ಪಾಟೀಲ್ (BC Patil) ಹೇಳಿದ್ದಾರೆ.
ಅಳಿಯ ಪ್ರತಾಪ್ ಕುಮಾರ್ (Pratap Kumar) ಆತ್ಮಹತ್ಯೆ (Suicide) ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಸಿ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
16 ವರ್ಷದ ಹಿಂದೆ ನಾನು ಪುತ್ರಿಯನ್ನು ಅವರಿಗೆ ಮದುವೆ ಮಾಡಿಕೊಟ್ಟಿದ್ದೆ. ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ನಾನು ನಮ್ಮ ಭಾಗದ ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯಿತು. ನಾಳೆ ಚನ್ನಗಿರಿಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ತಿಳಿಸಿದರು.
ಮಧ್ಯಾಹ್ನ 1:45ರ ವೇಳೆಗೆ ಪ್ರತಾಪ್ ಸಹೋದರ ಪ್ರಭುದೇವ ಕರೆಮಾಡಿ, ಪ್ರತಾಪ್ ಏನಾದ್ರೂ ನಿಮಗೆ ಸಿಕ್ಕಿದ್ನಾ ಅಂತಾ ಕೇಳಿದ್ರು. ನನ್ನ ಬಳಿ ಊರಿಗೆ ಹೋಗ್ತೀನಿ ಅಂತ ಹೇಳಿ ಹೋಗಿದ್ದಾರೆ ಅಂದೆ. ಅದೇನೋ ಮಾತ್ರೆ ತಗೊಂಡಿದ್ದಾನೆ ಅಂತ ಸುದ್ದಿಯಿದೆ. ಅವನ ಫೋನ್ ಸ್ವಿಚ್ ಆಫ್ ಆಗಿದೆ. ಕೂಡಲೇ ಮೊಬೈಲ್ ಟ್ರ್ಯಾಕ್ ಮಾಡಿ ಎಂದು ಸಹೋದರ ಹೇಳಿದರು.
ಪ್ರಭುದೇವ ಅವರ ಕರೆ ಬಂದ ಕೂಡಲೇ ಡಿಎಸ್‌ಪಿ, ಶಿವಮೊಗ್ಗ ಎಸ್‌ಪಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ. ನಂತರ ನಾನು ಪ್ರತಾಪ್‌ಗೆ ಕರೆ ಮಾಡಿದೆ. ಪ್ರತಾಪ್ ಫೋನ್ ರಿಸೀವ್ ಮಾಡಿ ಮಾತನಾಡಿದರು. ಎಲ್ಲಿದಿಯಾ ಅಂತಾ ಕೇಳಿದಾಗ, ಹೊನ್ನಳ್ಳಿ-ಮಲೆಬೆನ್ನೂರು ಮಾರ್ಗದಲ್ಲಿದಿನಿ ಅಂತಾ ಹೇಳಿದರು. ಸ್ಪಷ್ಟವಾಗಿ ಮಾತನಾಡಿತ್ತಿರಲಿಲ್ಲ. ಕರೆ ಸ್ವೀಕರಿಸಿದ ವಿಚಾರವನ್ನು ನಾನು ಪೊಲೀಸ್ ಸೇರಿದಂತೆ ಎಲ್ಲರಿಗೂ ತಿಳಿಸಿದೆ. ಈ ವೇಳೆ ಪ್ರಭು ಅವರು ದಾರಿಯಲ್ಲಿ ಬರುತ್ತಿದ್ದಾಗ ಪ್ರತಾಪ್ ಅವರ ಕಾರು ಸಿಕ್ಕಿತು. ಕೂಡಲೇ ಅವರು ಹೊನ್ನಾಳಿಗೆ ಪ್ರತಾಪ್ ಅವರನ್ನು ಕರೆ ತಂದರು. ಈ ವೇಳೆ ನೀವು ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸಲಹೆ ನೀಡಿದರು. ದಾವಣಗೆರೆಗೆ ದೂರ ಆಗುತ್ತದೆ ಎಂದು ತಿಳಿದು ಶಿವಮೊಗ್ಗಕ್ಕೆ ದಾಖಲಿಸಲು ಪ್ರಭು ಮುಂದಾದರು. ಶಿಕಾರಿಪುರದ ಹತ್ತಿರ ಬರುವಾಗ ದಾರಿ ಮಧ್ಯೆ ಪ್ರತಾಪ್ ಮೃತಪಟ್ಟರು.
ಪ್ರತಾಪ್ ಅವರಿಗೆ ಮಕ್ಕಳಾಗಿಲ್ಲ ಎಂಬ ಕೊರಗಿತ್ತು. ಕುಡಿತದ ಚಟವು ಇತ್ತು. ಲಿವರ್ ಹೋಗಿತ್ತು. ಬೆಂಗಳೂರಿನ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿ 2 ತಿಂಗಳು ಚಿಕಿತ್ಸೆ ಕೊಡಿಸಿದ್ದೆ. ಎಲ್ಲಾ ಸರಿ ಹೋಗಿತ್ತು. ಆದರೆ ಮತ್ತೆ ಕುಡಿತದ ಅಭ್ಯಾಸ ಶುರು ಮಾಡಿದ್ದರು. ನಾನು ಈ ರೀತಿ ಕುಡಿಯಬಾರದು ಎಂದು ಸಲಹೆ ಹೇಳಿದ್ದೆ. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರು ನೋಡಿಕೊಳ್ಳುತ್ತಿದ್ದರು ಎಂದು ಬಿಸಿ ಪಾಟೀಲ್ ಹೇಳಿದರು.
ಪ್ರತಾಪ್ ಕುಮಾರ್ ಕೆ.ಜಿ ಅವರು ಬಿ.ಸಿ ಪಾಟೀಲ್ ಪತ್ನಿ ವನಜಾ ಅವರ ಸಹೋದರ. ಗಂಡು ಮಕ್ಕಳು ಇಲ್ಲದ ಕಾರಣ ಹಿರಿಯ ಪುತ್ರಿಯಾದ ಸೌಮ್ಯಳನ್ನು ಬಿಸಿ ಪಾಟೀಲ್ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದ್ದರು. ಬಿ.ಸಿ ಪಾಟೀಲ್ ಅವರ ಕೃಷಿಗೆ ಸಂಬಂಧಿಸಿದ ವ್ಯವಹಾರವನ್ನು ಪ್ರತಾಪ್ ಕುಮಾರ್ ನೋಡಿಕೊಳ್ಳುತ್ತಿದ್ದರು. ಅಳಿಯನ ಆತ್ಮಹತ್ಯೆಯಿಂದ ಬಿಸಿ ಪಾಟೀಲ್ ಕುಗ್ಗಿದ್ದು ಹಿರೇಕೆರೂರಿನಲ್ಲಿ ಇದ್ದ ಅವರು ಶಿವಮೊಗ್ಗಲ್ಲಿರುವ ಮೆಗ್ಗಾನ್ ಆಸ್ಪತ್ರೆಗೆ ಈಗ ದೌಡಾಯಿಸಿದ್ದಾರೆ.
ಪ್ರತಾಪ್ ಕುಮಾರ್ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದು, ಮಧ್ಯಾಹ್ನ ಎರಡೂವರೆ ಗಂಟೆಗೆ ವಾಹನದಲ್ಲಿ ವಿಷವನ್ನು ಕುಡಿದಿರುವುದು ಕಂಡು ಬಂದಿದೆ. ವೈಯಕ್ತಿಕ ಕಾರಣದಿಂದ ಸಾವನ್ನಪ್ಪಿದ್ದಾರೆ ಎನ್ನುವ ಶಂಕೆ ಇದೆ. ಶಿವಮೊಗ್ಗದಿಂದ ಕತ್ತಲೆಗೆರೆಗೆ ಬರುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಅವರು ವಿಷ ಸೇವನೆ ಮಾಡಿದ ವಿಚಾರವನ್ನು ಪ್ರತಾಪ್ ಅವರ ಅಣ್ಣ ಪ್ರಭು ಎನ್ನುವರು ಮಾಹಿತಿ ನೀಡಿದ್ದರು. ಕಾರಿನಲ್ಲಿ ಪ್ರತಾಪ್ ಕುಮಾರ್ ಒಬ್ಬರೇ ಇದ್ದರು. ಇಲ್ಲಿಯವರೆಗೆ ಡೆತ್ ನೋಟ್ ಸಿಕ್ಕಿಲ್ಲ. ತನಿಖೆ ನಂತರ ಸಾವಿನ ಬಗ್ಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಪ್ರತಾಪ್ ಕುಮಾರ್ ಕೆ.ಜಿ ಅವರು ಬಿ.ಸಿ ಪಾಟೀಲ್ ಪತ್ನಿ ವನಜಾ ಅವರ ಸಹೋದರ. ಗಂಡು ಮಕ್ಕಳು ಇಲ್ಲದ ಕಾರಣ ಹಿರಿಯ ಪುತ್ರಿಯಾದ ಸೌಮ್ಯಳನ್ನು ಬಿಸಿ ಪಾಟೀಲ್ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದ್ದರು. ಬಿ.ಸಿ ಪಾಟೀಲ್ ಅವರ ಕೃಷಿಗೆ ಸಂಬಂಧಿಸಿದ ವ್ಯವಹಾರವನ್ನು ಪ್ರತಾಪ್ ಕುಮಾರ್ ನೋಡಿಕೊಳ್ಳುತ್ತಿದ್ದರು. ಅಳಿಯನ ಆತ್ಮಹತ್ಯೆಯಿಂದ ಬಿಸಿ ಪಾಟೀಲ್ ಕುಗ್ಗಿದ್ದು ಹಿರೇಕೆರೂರಿನಲ್ಲಿದ್ದ ಅವರು ಶಿವಮೊಗ್ಗಲ್ಲಿರುವ ಮೆಗ್ಗಾನ್ ಆಸ್ಪತ್ರೆಗೆ ಈಗ ದೌಡಾಯಿಸಿದ್ದಾರೆ.
ಹಾವೇರಿ: ಚಿತ್ರರಂಗದಿಂದ ದರ್ಶನ್ ಬ್ಯಾನ್ (Darshan) ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ (BC Patil) ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ತನಿಖೆ ಆಗಬೇಕು, ಆರೋಪಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಹಿಡಿದು ಹಾಕಬೇಕು. ಈಗ ಬ್ಯಾನ್ ಮಾಡುವುದರಿಂದ ಪ್ರಯೋಜನವಿಲ್ಲ. ಈಗವರು ಜೈಲಿನಲ್ಲಿದ್ದಾರೆ. ದರ್ಶನ್ ಈಗ ಆರೋಪಿ ಎಂದು ಹೇಳಿದರು.
ಕೇಸಿನಲ್ಲಿ ತನಿಖೆಯಲ್ಲಿ ಯಾರ್ಯಾರ ಕೈವಾಡವಿದೆ ಎಂಬುದು ಬೆಳಕಿಗೆ ಬರುತ್ತದೆ. ಎಫ್‍ಐಆರ್ ಪ್ರಕಾರ ತನಿಖೆ ನಡೆಯುತ್ತದೆ. ದರ್ಶನ ಕಲಾವಿದ, ಸ್ನೇಹಿತನಾಗಿ ಪರಿಚಯ. ಅವರ ಬಳಿ ಯಾರ್ಯಾರು ಇದ್ದರು, ಏನು ಎಂಬುದು ನನಗೆ ಗೊತ್ತಿಲ್ಲ ಎಂದರು.
ಜನಪ್ರಿಯ ನಟನನ್ನು ರಾಯಭಾರಿ ಮಾಡಿದರೆ ರೈತರಿಗೆ ಅನುಕೂಲ ಆಗುತ್ತದೆ ಎಂದು ಮಾಡಿದ್ದೆವು. ಆವತ್ತು ದರ್ಶನ್ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಮೊಬೈಲ್ ಹುಡುಕಾಟ
ಹಾವೇರಿ: ಈ ಕ್ಷೇತ್ರದ ಲೋಕಸಭಾ ಟಿಕೆಟ್ ನನಗೆ ಕೊಡಬೇಕು, ನಾವು ತ್ಯಾಗ ಮಾಡಿ ಬಂದವರು ಎಂದು ಮಾಜಿ ಸಚಿವ ಬಿಸಿ ಪಾಟೀಲ್ (BC Patil) ಹೇಳಿದ್ದಾರೆ.
ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮನೆಯಲ್ಲಿ ಕೂತುಕೊಂಡಿದ್ದೇವೆ. ನಮಗೆ ಹೆದರಿಸೋದು ಬೆದರಿಸೋದು ಗೊತ್ತಿಲ್ಲ. ಸೈಲೆಂಟ್ ಆಗಿ ಇದ್ದೀವಿ ಎಂದರೆ ಅದು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು. ಈಗಾಗಲೇ ಬೊಮ್ಮಾಯಿ ಸಿಎಂ ಆಗಿದ್ದಾರೆ. ನಾನು ಹಾವೇರಿ (Haveri) ಹಾಗೂ ಗದಗ ಜಿಲ್ಲೆಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ಮಾಜಿ ಕಾಂಗ್ರೆಸ್ ಶಾಸಕ ವಾಸು ಅನಾರೋಗ್ಯದಿಂದ ನಿಧನ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ಹಾಗೆಂದು ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗುವವನಲ್ಲ. ನನಗೆ ಕೊಡಬೇಕು ಎಂದು ವಾದ ಮಾಡುತ್ತಿದ್ದೇನೆ. ಸಿಗಲಿಲ್ಲ ಎಂದರೆ ಕಾರ್ಯಕರ್ತರ ಜೊತೆ ಮಾತಾನಾಡುತ್ತೇನೆ. ನನಗೆ ನಂದೇ ಹಾದಿ ಇದೆ. ಹೆಬ್ಬಾರ್, ಎಸ್.ಟಿ ಸೋಮಶೇಖರ್ ಹಾದಿ ಬೇಕಾಗಿಲ್ಲ ಎಂದಿದ್ದಾರೆ.
ಯಡಿಯೂರಪ್ಪನವರೇ ಕಾಂತೇಶ್ ಜೊತೆ ನಿಂತು ಗೆಲ್ಲಿಸಿಕೊಂಡು ಬರೋದಾಗಿ ಮಾತುಕೊಟ್ಟಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ, ಯಡಿಯೂರಪ್ಪನವರೇ ಆ ಮಾತು ಹೇಳಬೇಕಲ್ವಾ? ಅವರು ಹೇಳಿದರೆ ಆ ಪ್ರಕಾರ ನಡೆದುಕೊಳ್ಳಬೇಕಾಗುತ್ತೆ. ನಮಗೆ ಯಾವ ರೀತಿನೂ ಯಡಿಯೂರಪ್ಪ ಅವರು ಹೇಳಿಲ್ಲ. ನಾನು ಸೋತಿದ್ದೀನಿ, ಅವಕಾಶ ಕೊಡಿ ಗೆಲ್ತೀನಿ ಎಂದು ಕೇಳಿದ್ದೇನೆ. ಕಾಂತೇಶ್‍ಗೆ ಟಿಕೆಟ್ ಕೊಟ್ಟರೆ ವಿಚಾರ ಮಾಡುತ್ತೇನೆ. ಕಾಂತೇಶ್ ಅವರ ಬಗ್ಗೆ ಮಾತಾಡೋಕೆ ಹೋಗಲ್ಲ, ಕಾಂತೇಶ್‍ಗೂ ನನಗೂ ಸಂಬಂಧ ಇಲ್ಲ ಎಂದಿದ್ದಾರೆ.
ನಾನು ಎಲ್ಲಾ ಹೇಳಿದರೆ ನಿಮಗೆ ರುಚಿ ಉಳಿಯಲ್ಲ. ನಾನು ಎಚ್ಚರಿಕೆ ಕೊಡುತ್ತಿಲ್ಲ. ಒಬ್ಬ ಗ್ರಾಮ ಪಂಚಾಯತಿ ಸದಸ್ಯ ತನ್ನ ಸ್ಥಾನ ತ್ಯಾಗ ಮಾಡಲ್ಲ. ನಾವು ತ್ಯಾಗ ಮಾಡಿದ್ದೇವೆ. ನಮಗೆ ಟಿಕೆಟ್ ಕೊಡುವುದರಲ್ಲಿ ನ್ಯಾಯ ಇದೆ. ನಮ್ಮ ತ್ಯಾಗದಿಂದ ಸರ್ಕಾರ ಬಂತು. ಇನ್ನೂ 2023ರಲ್ಲಿ ಬಿಜೆಪಿ ಸೋತಿದೆ. ನಾವೆಲ್ಲಾ ಸೋತಿದ್ದೇವೆ, ಈಗ ನಮ್ಮ ಹಿತವನ್ನೂ ಅವರು ಕಾಯಲಿ. ಆ ಜವಾಬ್ದಾರಿ ಅವರಿಗೆ ಇದೆ ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಳ್ಳಾರಿಯಲ್ಲಿ ತನಿಖೆ ಚುರುಕು, ಬಾಂಬರ್‌ನಂತೆ ಡ್ರೆಸ್ ಹಾಕಿ ಓರ್ವನ ವಿಚಾರಣೆ
– ಸಂತ್ರಸ್ತೆಯನ್ನು ಭೇಟಿಯಾದ ಬಿಜೆಪಿ ನಿಯೋಗ
– ಹಿಂದೂ ಜೊತೆ ಬಂದಿದ್ದೀಯಾ ಅಂತ ಸಾಯುವ ಹಾಗೆ ಹೊಡೆದರು
– ಹೆಣ್ಣುಮಗಳಿದ್ದಾಳೆ ಬಿಟ್ಟುಬಿಡಿ ಅಂದ್ರೂ ಬಿಡಲಿಲ್ಲ
ಹಾವೇರಿ: ನನಗೆ ಒಬ್ಬಳು ಮಗಳಿದ್ದಾಳೆ, ನನ್ನನ್ನ ಬಿಟ್ಟುಬಿಡಿ ಅಂತ ಕಾಲಿಗೆ ಬಿದ್ದು ಬೇಡಿಕೊಂಡೆ, ಅತ್ತು ಕರೆದು ಗೋಳಾಡಿದೆ, ಆದರೂ ಬಿಡದೇ ಅತ್ಯಾಚಾರ ಮಾಡಿದ್ರು, ಸಾಯುವ ಹಾಗೆ ಹೊಡದರು. ದೂರು ಕೊಟ್ಟಮೇಲೆ ಕೇಸ್ ವಾಪಸ್ ತೆಗದುಕೊ ದುಡ್ಡು ಕೊಡ್ತೀವಿ ಅಂತಾ ಹೇಳಿದ್ರು… ಹಾವೇರಿ (Haveri) ಜಿಲ್ಲೆಯ ಹಾನಗಲ್‌ನಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ನೋವಿನ ನುಡಿಗಳು ಕೇಳಿಬಂದಿದ್ದು ಹೀಗೆ…
ಹಾನಗಲ್ ಗ್ಯಾಂಗ್‌ರೇಪ್‌ಗೆ ಒಳಗಾದ ಸಂತ್ರಸ್ತೆಯನ್ನು ಮಾಜಿ ಸಚಿವ ಬಿ.ಸಿ ಪಾಟೀಲ್ (BC Patil) ನೇತೃತ್ವದ ಬಿಜೆಪಿ ನಿಯೋಗ ಭೇಟಿ ಮಾಡಿತ್ತು. ಈ ವೇಳೆ ಸಂತ್ರಸ್ತೆ ತನಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಹಿ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ:
ನಾವು ರೂಮಿನಲ್ಲಿ ಕುಳಿತಿದ್ದಾಗ ನೀರು ಬರುತ್ತಾ ನೋಡ್ತೀವಿ ಅಂತ ಆ ಹುಡುಗರು ಬಂದರು. ಹಿಂದೂ ಜೊತೆ ಬಂದಿದ್ದೀಯಾ ಅಂತಾ ತುಂಬಾ ಹೊಡೆದರು. ಅದಕ್ಕೂ ಮುನ್ನ ನಾನು ಆ ಹುಡುಗರನ್ನು ನೋಡಿಯೇ ಇರಲಿಲ್ಲ. ರೂಮಿನಲ್ಲಿ ಹೊಡೆದು, ಪುನಃ ಹೊಳೆ ಹತ್ರ ಕರಕೊಂಡು ಬಂದು ಮತ್ತೆ ಹೊಡೆದರು. ಸಿಕ್ಕ-ಸಿಕ್ಕ ಜಾಗಕ್ಕೆ ಸಾಯುವ ರೀತಿ ಹೊಡೆದರು.
ಹೊಡೆದು ನನ್ನನ್ನ ಕಾಡಿಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದರು. ನನ್ನನ್ನ ಬಿಟ್ಟು ಬಿಡಿ, ನಿಮ್ಮ ಕಾಲಿಗೆ ಬೀಳ್ತೀನಿ, ನನಗೆ ಒಬ್ಬಳು ಮಗಳಿದ್ದಾಳೆ ಅಂತ ಬೇಡಿಕೊಂಡರೂ ಬಿಡಲಿಲ್ಲ. ನನ್ನ ಮೇಲೆ ಅತ್ಯಾಚಾರ ಎಸಗಿದರು. ಅಲ್ಲಿಂದ ಬೈಕ್‌ನಲ್ಲಿ ಬೇರೆಡೆಗೆ ಕರೆದೊಯ್ದು ಮತ್ತೆ ಅತ್ಯಾಚಾರ ಎಸಗಿದರು. ಆ ಮೇಲೆ ರಸ್ತೆಗೆ ಕರೆದುಕೊಂಡು ಬಂದರು. ಇದನ್ನೂ ಓದಿ: ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್ – ಭಾರತ ಪ್ರತಿನಿಧಿಸಲಿದ್ದಾರೆ ಕರ್ನಾಟಕದ ಬೆಳ್ಳಿಯಪ್ಪ
ಅಲ್ಲಿಂದ ಕಾರಿನಲ್ಲಿ ಕರೆದುಕೊಂಡು ದಾಸನಕೊಪ್ಪ ಹಿಂಭಾಗದ ಬಸ್ ನಿಲ್ದಾಣದಲ್ಲಿ ಬಿಟ್ಟರು. 500 ರೂ. ಕೈಗೆ ಕೊಟ್ಟು, ಬ್ರೆಡ್ ತಂದುಕೊಟ್ಟರು. ಶಿರಸಿ ಬಸ್ ಹತ್ತಿಸಿ ಕಳುಹಿಸಿದರು. ವೀಡಿಯೋ ಎಲ್ಲಾ ಡಿಲೀಟ್ ಮಾಡ್ತೀವಿ ಅಂದಿದ್ದರು, ಆದ್ರೆ ವೀಡಿಯೋ ವೈರಲ್ ಆಗಿದೆ. ನಾನು ಮೊದಲ ದಿನ ಭಯದಿಂದ ಕುಟುಂಬದವರಿಗೆ ಏನೂ ಹೇಳಿರಲಿಲ್ಲ. ಬಳಿಕ ವಿಷಯ ನನ್ನ ಅಣ್ಣ ಮತ್ತು ಗಂಡನಿಗೆ ತಿಳಿಯಿತು. ನಂತರ ದೂರು ನೀಡಲು ಮುಂದಾದೆ. ಆ ಮೇಲೆ ಜಡ್ಜ್ ಮುಂದೆ ಎಲ್ಲಾ ಹೇಳಿದೆ.
ನನಗೆ ಈಗ 26 ವರ್ಷ ಮನೆಗೆಲಸ ಮಾಡುಕೊಂಡಿದ್ದೇನೆ. ನನಗೆ ಯಾರ ಭಯವೂ ಇಲ್ಲ. ಆದ್ರೆ ಅವರಿಗೆ ಮಾತ್ರ ಶಿಕ್ಷೆ ಆಗಬೇಕು. ಕೇಸ್ ವಾಪಸ್ ತೆಗೆದುಕೊಳ್ಳಿ ಹಣ ಕೊಡುತ್ತೇವೆ ಎಂದು ಹೇಳಿದ್ದರು. ಆದ್ರೆ ನನಗೆ ಅನ್ಯಾಯ ಆಗಿದೆ, ದೂರು ಕೊಡ್ತೀನಿ ಎಂದು ದೂರು ನೀಡಿದೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಕಲಬುರಗಿ: ರಾಜ್ಯದಲ್ಲಿ ಭೀಕರ ಬರ ಬಂದಿದೆ. ರೈತರಿಗೆ (Farmers) ಪರಿಹಾರ ನೀಡುವ ಬದಲು ಕಾಂಗ್ರೆಸ್ (Congress) ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುವಲ್ಲಿ ನಿರತವಾಗಿದ್ದು, ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ್ (BC Patil) ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಪಂಚ್ ಗ್ಯಾರಂಟಿಗಳಲ್ಲಿ ಮುಳುಗಿ ಹೋಗಿದೆ. ನಾವು ಅಧಿಕಾರದಲ್ಲಿದ್ದಾಗ ರೈತರಿಗೆ ಸಾಕಷ್ಟು ಪರಿಹಾರ ಕೊಟ್ಟಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ರೈತರಿಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬರ ಪರಿಸ್ಥಿತಿಯ ಅಧ್ಯಯನ ಮಾಡಿ, ವರದಿ ನೀಡುವಂತೆ ಸಚಿವರಿಗೆ ಸಿಎಂ ಪತ್ರ
ಸಿಎಂ ಸಿದ್ದರಾಮಯ್ಯ ಕಾಲದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ರಾಜ್ಯ ಸರ್ಕಾರ ದಿವಾಳಿ ಆಗಿದೆ. ಅಭಿವೃದ್ಧಿ ಮಾಡದ ಸರ್ಕಾರ ಯಾಕೆ ಬೇಕು? ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಬ್ಯಾಲೆನ್ಸ್ ತಪ್ಪಿದೆ. ಅವರಲ್ಲಿ ಒಳಜಗಳ ಹೆಚ್ಚಾಗಿದೆ. ಸರ್ಕಾರ ಚೇಂಜ್ ಆದರೆ ಕಾಂಗ್ರೆಸ್‌ನವರಿಂದಲೇ ಆಗಬೇಕು. ಬೇರೆಯವರಿಂದ ಆಗಲ್ಲ ಎಂದರು. ಇದನ್ನೂ ಓದಿ: ವರಿಷ್ಠರೇ ಎಲ್ಲಾ ಮಾಡೋದಾದ್ರೆ ನೀವೇನು ಬೆರಳು ಚೀಪ್ತಿದ್ರಾ – ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಚ್ಚಾಟವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಭಿವೃದ್ಧಿಗೆ ಆದ್ಯತೆ ನೀಡದ ಸರ್ಕಾರಕ್ಕೆ ರಾಜ್ಯದ ಜನರೇ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ಆಗಿ ಹುಟ್ಟಿದ್ದೇನೆ ಹಿಂದೂ ಆಗೇ ಸಾಯುತ್ತೇನೆ: ಸಿ.ಟಿ ರವಿ
ವನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ‘ಗರಡಿ’ (Garadi) ಚಿತ್ರದ ಮೂರನೇ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಯೋಗರಾಜ್ ಭಟ್ ಅವರು ಬರೆದಿರುವ ‘ಬಡವನ ಹೃದಯ’ ಎಂಬ ಮನಸ್ಸಿಗೆ ಹತ್ತಿರವಾಗುವ ಈ ಹಾಡು ಸೋಮವಾರ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ (Harikrishna)ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಕರುನಾಡ ಕಲಾರಸಿಕರು ತಲೆದೂಗುತ್ತಿದ್ದಾರೆ. ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಹಾಡು ಬಿಡುಗಡೆ ಮಾಡಿದ ಚಿತ್ರತಂಡ, ಪತ್ರಿಕಾಗೋಷ್ಠಿಯಲ್ಲಿ ಹಾಡಿನ ಬಗ್ಗೆ ವಿವರಣೆ ನೀಡಿತು.
ಎರಡನೇ ಲಾಕ್‌ಡೌನ್ ಸಮಯದಲ್ಲೇ ಈ ಹಾಡು ಬರೆದಿದ್ದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್, ಈ ಹಾಡು, ನನಗೆ ಹಾಗೂ ನಿರ್ಮಾಪಕರಿಗೆ ಅಚ್ಚುಮೆಚ್ಚು. ಬಾದಾಮಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ಹಾಡಿನ ಚಿತ್ರೀಕರಣ ನಡೆದಿದೆ. ಹರಿಕೃಷ್ಣರ ಸಂಗೀತ, ವಿಜಯ್ ಪ್ರಕಾಶ್ ಗಾಯನ, ಸೂರ್ಯ, ಸೋನಾಲ್ ಮೊಂತೆರೊ ಹಾಗೂ ಸುಜಯ್ ಅವರ ಅಭಿನಯ ಚೆನ್ನಾಗಿದೆ. ‘ದಯಮಾಡಿ ಉರಿಸ ಬೇಡ ಬಡವನ ಹೃದಯ’ ಎಂಬ ಮೊದಲ ಸಾಲೇ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ ಎಂದರು.
ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡು ಕೇಳಿದಾಗ ನನಗೆ “ಮುಂಗಾರು ಮಳೆ” ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಹಾಡು ನೆನಪಾಯಿತು. ಈ ಹಾಡಿನ ಸಾಹಿತ್ಯ, ಗಾಯನ ಹಾಗೂ ನಟನೆ ಎಲ್ಲವೂ ಚೆನ್ನಾಗಿದೆ. ನವೆಂಬರ್ 1 ರಂದು ರಾಣಿಬೆನ್ನೂರಿನಲ್ಲಿ ಅದ್ದೂರಿಯಾಗಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ದರ್ಶನ್ ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ನವೆಂಬರ್ 10 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಹಾಗೂ ನಟ ಬಿ.ಸಿ.ಪಾಟೀಲ್.
ಈ ಹಾಡಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ‘ಬಡವನ ಹೃದಯ’ ಹಾಡು ಯೋಗರಾಜ್ ಭಟ್ ಅವರು ನನಗಾಗಿ ಬರೆದ ಹಾಗಿದೆ. ಈ ಹಾಡನ್ನು ದರ್ಶನ್ ಸರ್‌ಗೆ ಕೇಳಿಸಿದ್ದೆ. ಹಾಡಿನ ಸಾಹಿತ್ಯವನ್ನು ಅವರು ಬಹಳ ಇಷ್ಟ ಪಟ್ಟಿದ್ದರು. ವಿ.ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ವಿಜಯ್ ಪ್ರಕಾಶ್ ಗಾಯನ ಹಾಗೂ ಮದನ್ – ಹರಿಣಿ ಅವರ ನೃತ್ಯ ನಿರ್ದೇಶನ ಹಾಡಿನ ಹೈಲೆಟ್ ಎಂದು ನಾಯಕ ಸೂರ್ಯ ತಿಳಿಸಿದರು.
ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ನೀಡುವ ಕಾಂಗ್ರೆಸ್ (Congress) ಸರ್ಕಾರವಿದೆ ಎಂದು ರಾಜ್ಯದ ಮಾಜಿ ಸಚಿವ ಬಿ.ಸಿ.ಪಾಟೀಲ್ (BC Patil) ಅವರು ಕಿಡಿಕಾರಿದರು.
ಮಲ್ಲೇಶ್ವರದ (Malleshwaram) ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಲೋಡ್ ಶೆಡ್ಡಿಂಗ್ ಇದೆ. ರಾಜ್ಯದಾದ್ಯಂತ ಬರಗಾಲದ ಛಾಯೆ ಆವರಿಸಿದೆ ಎಂದರು. ಇದನ್ನೂ ಓದಿ: ನಾನು ನನ್ನ ಕ್ಷೇತ್ರದ ಕೆಲಸಕ್ಕಾಗಿ ಯಾರ ಬಳಿ ಬೇಕಾದರೂ ಹೋಗುತ್ತೇನೆ: ಮುನಿರತ್ನ
ಈ ವರ್ಷ ಇದುವರೆಗೂ 11,18,527 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿ ಸಂಭವಿಸಿದೆ. ಆದರೆ, ಸರ್ಕಾರ ಒಬ್ಬನೇ ಒಬ್ಬ ರೈತರಿಗೆ ಒಂದೇ ಒಂದು ಹೆಕ್ಟೇರ್‌ಗೆ, ಒಂದು ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ಕಳೆದ ವರ್ಷ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ 39,74,741 ಹೆಕ್ಟೇರ್ ಭೂಮಿಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿತ್ತು. ಆಗ ನಾವು ಕೇಂದ್ರದಿಂದ ಬರ ಪರಿಹಾರಕ್ಕಾಗಿ ಕಾಯಲಿಲ್ಲ. ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್‌ಗೆ 6,800 ರೂ. ಇದ್ದರೆ, ನಮ್ಮ ಸರ್ಕಾರ 13,600 ರೂ. ಅಂದರೆ ದ್ವಿಗುಣ ಮೊತ್ತದ ಪರಿಹಾರವನ್ನು ಕೊಟ್ಟಿದ್ದೇವೆ. ತೋಟಗಾರಿಕಾ ಬೆಳೆಗೆ 13,000 ರೂ. ಬದಲು 25,000 ರೂ.ಗೆ ಏರಿಸಲಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ವರ್ಗಾವಣೆಗಾಗಿ ಶಾಸಕ ಜೆಟಿ ಪಾಟೀಲ್ ಪಿಎ ಬ್ಲ್ಯಾಕ್‌ಮೇಲ್- ದೂರು ದಾಖಲಿಸಿದ ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ
ನೀರಾವರಿ ಬೆಳೆಗೆ 18,000 ರೂ. ಬದಲು 28,000 ರೂ. ಕೊಟ್ಟಿದ್ದು, ಕಳೆದ ಸಾಲಿನಲ್ಲಿ ಒಟ್ಟು 2,100 ಕೋಟಿ ರೂ. ಅನ್ನು 14,62,841 ರೈತರಿಗೆ ಪರಿಹಾರವಾಗಿ ಕೊಟ್ಟಿದ್ದೇವೆ. ಆಗ ನಾವು ಕೇಂದ್ರ ಸರ್ಕಾರವನ್ನು ಕಾಯುತ್ತ ಕುಳಿತಿರಲಿಲ್ಲ. ನಮ್ಮ ರಾಜ್ಯದ ರೈತರು ಬದುಕಬೇಕು. ರೈತರು ಸಂಕಷ್ಟಕ್ಕೆ, ಅತಿವೃಷ್ಟಿಗೆ ಒಳಗಾಗಿದ್ದಾರೆ, ಬೆಳೆ ಹಾಳಾಗಿದೆ ಎಂದು ಕೂಡಲೇ ನಾವು ಸರ್ವೆ ಪ್ರಾರಂಭಿಸಿ ಅದರ ವರದಿ ಪಡೆದು 48 ಗಂಟೆಯೊಳಗೆ ಪರಿಹಾರವನ್ನು ರೈತರಿಗೆ ವಿತರಿಸಿ ರೈತರನ್ನು ಬದುಕಿಸಿದ್ದೇವೆ. ಅಲ್ಲದೇ ಗರಿಷ್ಠ ಬೆಳೆ ವಿಮೆ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.
ಇವತ್ತು ರಾಜ್ಯ ಸರ್ಕಾರ ಕೇವಲ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಕೇಂದ್ರ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದೇವೆ ಎನ್ನುತ್ತಿದೆ. ಹಾಗಿದ್ದರೆ ನಿಮ್ಮ ಜವಾಬ್ದಾರಿ ಏನು? ಕೇವಲ ಗ್ಯಾರಂಟಿ ಅನುಷ್ಠಾನವಷ್ಟೇ ನಿಮ್ಮ ಕೆಲಸವೇ? ರಾಜ್ಯದ ರೈತರು ಬದುಕಬೇಕೇ ಅಥವಾ ಬೇಡವೇ ಎಂದು ಪ್ರಶ್ನಿಸಿದರು. ಇದುವರೆಗೆ ಒಬ್ಬರೇ ಒಬ್ಬ ಸಚಿವರು ಒಬ್ಬ ರೈತರ ಹೊಲಕ್ಕೂ ಹೋಗಿಲ್ಲ. ರೈತರ ಬೆಳೆಹಾನಿ ಅಂದಾಜು ಮಾಡಿಲ್ಲ. ಎಷ್ಟು ಬೆಳೆ ನಷ್ಟ ಎಂದು ತಿಳಿಸಿಲ್ಲ. ಸುಮ್ಮನೆ ಊಹಾಪೋಹ ಮಾಡಿ, ಇವರೇ ಲೆಕ್ಕ ಬರೆದುಕೊಂಡು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಸಂಬಂಧ ಇಲ್ಲವೇ? ರಾಜ್ಯದ ರೈತರು (Farmers) ನಿಮಗೆ ಮತ ಕೊಟ್ಟಿಲ್ಲವೇ? ಅವರಿಂದಾಗಿ ನೀವು ಅಧಿಕಾರ ಮಾಡುತ್ತಿಲ್ಲವೇ? ರೈತರ ಕುರಿತು ಕಡೆಗಣನೆ ಏಕೆ? ರೈತರ ವಿಷಯದಲ್ಲಿ ಮಲತಾಯಿ ಧೋರಣೆ ಯಾಕೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ಇದನ್ನೂ ಓದಿ: ಸಣ್ಣ ಮಕ್ಕಳ ಹಾಲಿಗೆ 4, ದೊಡ್ಡ ಮಕ್ಕಳ ಕ್ವಾಟರ್‌ಗೆ 40 ರೂ. ಜಾಸ್ತಿ – ಸರ್ಕಾರದ ವಿರುದ್ಧ ಅಶೋಕ್ ಕಿಡಿ
ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ:
ಕಾಂಗ್ರೆಸ್ ಸರ್ಕಾರ ಆಡಳಿತ ಇದ್ದಾಗ ಅತಿ ಹೆಚ್ಚು ಆತ್ಮಹತ್ಯೆ ಆಗಿದೆ ಎಂದು ಬಿ.ಸಿ.ಪಾಟೀಲ್ ಅವರು ಅಂಕಿ ಅಂಶಗಳನ್ನು ಮುಂದಿಟ್ಟರು. 2015-16ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುವಾಗ 1,525 ರೈತರು ಆತ್ಮಹತ್ಯೆ ಮಾಡಿಕೊಂಡರೆ, 16-17ರಲ್ಲಿ 1,203 ರೈತರು, 17-18ರಲ್ಲಿ 1,320 ರೈತರು ಆತ್ಮಹತ್ಯೆ ಮಾಡಿಕೊಂಡರು. 18-19ರಲ್ಲಿ ಸರ್ಕಾರ ಬದಲಾಗಿದ್ದು, ಆತ್ಮಹತ್ಯೆ 1,085ಕ್ಕೆ ಇಳಿದಿದೆ. 2019-2020ರಲ್ಲಿ 1,091, 2020-21ರಲ್ಲಿ 855, 2021-22ರಲ್ಲಿ 963 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಈ ವರ್ಷ ಸೆಪ್ಟೆಂಬರ್ ಅಂತ್ಯದವರೆಗೆ ಈಗಾಗಲೇ 900 ಆತ್ಮಹತ್ಯೆ ಆಗಿದೆ. ಇನ್ನೂ 3 ತಿಂಗಳು ಉಳಿದಿದೆ ಎಂದು ತಿಳಿಸಿದರು.
ರೈತರು ಬೀದಿಗೆ ಬಿದ್ದಿದ್ದಾರೆ. ಆಗಸದತ್ತ ನೋಡುವ ಸ್ಥಿತಿ ಬಂದಿದೆ. ಸರ್ಕಾರದತ್ತ ನೋಡಿದರೂ ಅಲ್ಲಿಂದ ಪರಿಹಾರ ಸಿಗುತ್ತಿಲ್ಲ ಎಂದ ಅವರು, ಸರ್ಕಾರ ಕೇವಲ ಕೇಂದ್ರ ಸರ್ಕಾರದತ್ತ ತೋರಿಸುತ್ತಿದೆ. ಇದು ರೈತವಿರೋಧಿ ಸರ್ಕಾರ ಎಂದು ದೂರಿದರು. ಬರ ವೀಕ್ಷಣೆ ವರದಿ ಸಂಬಂಧ ತಂಡ ಬಂದಿದೆ. ಅವರ ವರದಿ ಸಿಕ್ಕಿದ ಬಳಿಕ ಕೇಂದ್ರ ತನ್ನ ಪಾಲಿನ ಹಣ ಕೊಡುತ್ತದೆ. ಕಳೆದ ವರ್ಷ ನಾವು ಕೇಂದ್ರದ ಪರಿಹಾರ ಮೊತ್ತ ಬರುವ ಮೊದಲೇ ದ್ವಿಗುಣ ಮೊತ್ತವನ್ನು ಕೊಟ್ಟಿದ್ದೇವೆ. ಈ ವರ್ಷ ಯಾಕೆ ಆಗುತ್ತಿಲ್ಲ? ನೀವು ಮಾಡಬೇಕಲ್ಲ? ನಮ್ಮದು ರೈತರನ್ನು ಬದುಕಿಸುವ ಧ್ಯೇಯವಾಗಿತ್ತು ಎಂದರು. ಇದನ್ನೂ ಓದಿ: ಅ.31 ರವರೆಗೆ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಿ – ಕರ್ನಾಟಕಕ್ಕೆ CWRC ಸೂಚನೆ
ರಾಜ್ಯ ಸರ್ಕಾರ ದಿವಾಳಿ ಆಗಿದೆ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಇದ್ದಬದ್ದ ಹಣವನ್ನೆಲ್ಲಾ ಕೇವಲ ಭಾಗ್ಯಗಳಿಗೆ ಕೊಡುತ್ತಿದ್ದಾರೆ. ಭಾಗ್ಯಗಳಿಗೆ ಕೊಡಬೇಡಿ ಎನ್ನುತ್ತಿಲ್ಲ. ಅಕ್ಕಿಯ ದುಡ್ಡನ್ನು ಒಂದು ತಿಂಗಳಿಗಷ್ಟೇ ಕೊಟ್ಟಿದ್ದಾರೆ. ಎರಡನೇ ತಿಂಗಳು ಅರ್ಧಕ್ಕರ್ಧ ಕೊಟ್ಟಿದ್ದಾರೆ. ಭಾಗ್ಯಗಳಿಗೆ ಹಣ ಕೊಡಲು ಆಗುತ್ತಿಲ್ಲ. ಪಡಿತರ ಚೀಟಿಗಳನ್ನು ಒಂದಲ್ಲ ಒಂದು ನೆಪ ಇಟ್ಟುಕೊಂಡು ರದ್ದು ಮಾಡುತ್ತಿದ್ದಾರೆ. ಕಂಡಿಷನ್ ಹಾಕಿ, ಸರ್ವರ್ ಬಂದ್ ಮಾಡುತ್ತಿದ್ದಾರೆ. ಇದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ವನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi) ಚಿತ್ರದ ಟೈಟಲ್ ಟ್ರ್ಯಾಕ್ (Title Track) ಇತ್ತೀಚೆಗೆ ಬಿಡುಗಡೆಯಾಗಿದೆ. ಯೋಗರಾಜ್ ಭಟ್ (Yogaraj Bhatt) ಅವರು ಬರೆದಿರುವ ‘ಲೋಕಾನೆ ಗರಡಿ.. ಬಾಳೇ ಅಖಾಡ’ ಎಂಬ ಅದ್ಭುತ ಹಾಗೂ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿ ಹಾಡನ್ನು ಹಾಡಿದ್ದಾರೆ. ಹರಿಕೃಷ್ಣ (Harikrishna) ಅವರ ಜೊತೆಗೆ ಸಾಕಷ್ಟು ಪ್ರತಿಭಾವಂತ ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಗರಡಿ ಎಂದರೆ ಒಂದು ಊರನ್ನು ಕಾಯುವ ಪೊಲೀಸ್ ಠಾಣೆ ಇದ್ದ ಹಾಗೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ಹಿಂದೆ ಒಂದು ಊರಿನ ರಕ್ಷಣೆಗೆ ಗರಡಿ ಬಹು ಮುಖ್ಯವಾಗಿತ್ತು. ಊರಿನವರು ಸಹ ಗರಡಿ ಮನೆಯ ಕುಸ್ತಿಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ ಗರಡಿ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್ (BC Patil) ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ ಅಭಿನಯಿಸಿದ್ದಾರೆ. ಇದು ಒಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು. ಇನ್ನು ಇಂದು ಬಿಡುಗಡೆಯಾಗಿರುವ ಹಾಡನ್ನು ಹರಿಕೃಷ್ಣ ಅದ್ಭುತವಾಗಿ ಸಂಯೋಜಿಸಿ ಹಾಡಿದ್ದಾರೆ. ಚಿತ್ರ ನವೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಹಾರೈಸಿ ಎಂದರು.
ಗರಡಿ ಚಿತ್ರ ಆರಂಭವಾಗಿ ಈ ನವೆಂಬರ್ 14ಕ್ಕೆ ಎರಡು ವರ್ಷಗಳಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಈ ಚಿತ್ರ ಆರಂಭವಾಗಿತ್ತು. ದರ್ಶನ್ ಅವರು ಶೀರ್ಷಿಕೆ ಅನಾವರಣ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ (ನವೆಂಬರ್ 10) ಚಿತ್ರ ಬಿಡುಗಡೆಯಾಗುತ್ತದೆ. ಯೋಗರಾಜ್ ಭಟ್ ಅವರು ಬಹಳ ಶ್ರಮವಹಿಸಿ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈಗಾಗಲೇ ಚಿತ್ರವನ್ನು ಸಾಕಷ್ಟು ಸಲ ನೋಡಿ ಖುಷಿ ಪಟ್ಟಿದ್ದೇನೆ. ನಿಮಗೂ ಚಿತ್ರ ಹಿಡಿಸಲಿದೆ ಎಂದರು ಹಿರಿಯ ನಟ ಬಿ.ಸಿ.ಪಾಟೀಲ್. ಇದನ್ನೂ ಓದಿ:‘ಲಿಯೋ’ ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಿಸಿದ ವಿಜಯ್
ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ ಅಂತ. ಎಲ್ಲರೂ ಗರಡಿ ಸೂರಿ ಅಂತ ಕರೆಯುತ್ತಿರುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್ ಅವರು ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಂದು ಬಿಡುಗಡೆಯಾಗಿರುವ ಟೈಟಲ್ ಸಾಂಗ್ ನಲ್ಲಿ ನಾನು ಸಖತ್ ಡ್ಯಾನ್ಸ್ ಮಾಡಿದ್ದೇನೆ. ಯೋಗರಾಜ್ ಭಟ್ ಅವರ ಸಾಹಿತ್ಯ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ನಾಯಕ ಸೂರ್ಯ.
ನಾಯಕಿ ಸೋನಾಲ್ ಮಾಂತೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ಧರ್ಮಣ್ಣ, ರಾಘು, ಛಾಯಾಗ್ರಾಹಕ ನಿರಂಜನ್ ಬಾಬು, ನೃತ್ಯ ನಿರ್ದೇಶಕ ಧನಂಜಯ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ವನಜಾ ಪಾಟೀಲ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ್ ಗರಡಿ ಚಿತ್ರ ಸಾಗಿಬಂದ ಬಗ್ಗೆ ವಿವರಣೆ ನೀಡಿದರು.