Tag: bbmp

  • ಇನ್ಮುಂದೆ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಅಂತ ಘೋಷಣೆ ಮಾಡಲು ಬಿಬಿಎಂಪಿಗೆ ಅಧಿಕಾರ: ವಿಧೇಯಕ ಅಂಗೀಕಾರ

    ಇನ್ಮುಂದೆ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಅಂತ ಘೋಷಣೆ ಮಾಡಲು ಬಿಬಿಎಂಪಿಗೆ ಅಧಿಕಾರ: ವಿಧೇಯಕ ಅಂಗೀಕಾರ

    ವಿಧಾನಸಭೆಯಲ್ಲಿ ಅಂಗೀಕಾರವಾದ ವಿಧೇಯಕಗಳು ಯಾವ್ಯಾವು?

    ಬೆಂಗಳೂರು: ಯಾವುದೇ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಅಂತ ಘೋಷಣೆ ಮಾಡಲು ಬಿಬಿಎಂಪಿಗೆ ಅಧಿಕಾರ ನೀಡುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

    ಹೆಚ್.ಕೆ.ಪಾಟೀಲ್ ಅವರು ವಿಧೇಯಕ ಬಗ್ಗೆ ಮಾಹಿತಿ ನೀಡಿದರು. ನಗರದ ಖಾಸಗಿ ರಸ್ತೆ, ಬೀದಿಗಳು ಇನ್ಮುಂದೆ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಬಿಬಿಎಂಪಿಯೇ ನಗರದ ಖಾಸಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಿದೆ. ಅನಧಿಕೃತ ಕಟ್ಟಡ ಅಥವಾ ಅದರ ಭಾಗ ಬಳಸುವುದರಿಂದ ಮಾಲೀಕ ಅಥವಾ ಇತರೆ ವ್ಯಕ್ತಿಗಳನ್ನು ತಡೆಯಲು ವಿಧೇಯಕದಲ್ಲಿ ಅವಕಾಶ ಇದೆ.

    ಇ-ಸ್ವತ್ತು ತಂತ್ರಾಂಶದಲ್ಲಿ ಕೇವಲ 44 ಲಕ್ಷ ಆಸ್ತಿಗಳು ಮಾತ್ರ ನಮೂದಾಗಿದೆ. ಅಂದರೆ, ಸುಮಾರು 96 ಲಕ್ಷ ಆಸ್ತಿಗಳು ಇ-ಸ್ವತ್ತು ತಂತ್ರಾಂಶದಿಂದ ಹೊರಗಡೆ ಇವೆ. ಇದೀಗ ಈ ಆಸ್ತಿಗಳಿಗೂ ಇ-ಖಾತಾ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂತಹ ಅನಧಿಕೃತ ಸ್ವತ್ತುಗಳ ಮೇಲೆ ಶುಲ್ಕ/ದಂಡ ವಿಧಿಸಿ ವಸೂಲಿ ಮಾಡಿ ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಢೀಕರಿಸಲು ಸರ್ಕಾರ ಮುಂದಾಗಿದೆ. ಭೂ ಪರಿವರ್ತನೆ ಆಗಿರದ ಅಥವಾ ಭೂಪರಿವರ್ತಿತವಾಗಿಯೂ ವಿನ್ಯಾಸ ನಕ್ಷೆ ಅನುಮೋದನೆ ಆಗಿರದ ರೆವಿನ್ಯೂ ಭೂಮಿಯಲ್ಲಿನ ನಿವೇಶನಗಳಿಗೆ ಇ-ಖಾತಾ ನೀಡಲು ತೀರ್ಮಾನಿಸಲಾಗಿದೆ.

    ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ
    ಇದೇ ವೇಳೆ, ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕವನ್ನೂ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಭೂನಿರ್ಬಂಧಿತ ಬಿ ಖರಾಬನ್ನು ಸುತ್ತ ಇರೋರಿಗೆ ಮಂಜೂರು ಮಾಡಲು ಅವಕಾಶ ಕೊಟ್ಟಿದ್ರು. ಇದರ ದುರುಪಯೋಗ ಆಗಿರೋದು ಪತ್ತೆಯಾಗಿದೆ. ಬಿ ಖರಾಬು ಭೂಮಿಯನ್ನು ಮಂಜೂರು ಮಾಡುವಲ್ಲಿ ಇರುವ ಲೋಪಗಳನ್ನು ಸರಿಪಡಿಸಲಾಗಿದೆ. 3800 ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲಾಗಿದೆ. ಈ ಕಂದಾಯ ಗ್ರಾಮಗಳಿಗೆ ಹೆಸರು ಇಡಲು, ಮರು ನಾಮಕರಣ ಮಾಡಲು ಹೊಸ ಸೆಕ್ಷನ್ ಸೇರಿಸಲಾಗಿದೆ. ಕಂದಾಯ ಕಚೇರಿಗಳ ಹಳೆಯ ದಾಖಲೆಗಳನ್ನು ಸ್ಕ್ಯಾನಿಂಗ್ ಹಾಗೂ ಡಿಜಿಟಲೈಸ್ ಮಾಡಲು ವಿಧೇಯಕದಲ್ಲಿ ತಿದ್ದುಪಡಿ ತಂದು ಅವಕಾಶ ನೀಡಲಾಗಿದೆ. ಡಿಜಿಟಲೀಕರಣಕ್ಕೆ ತಹಸಿಲ್ದಾರರು, ಎಸಿ, ಡಿಸಿಗಳನ್ನು ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಲು ವಿಧೇಯಕದಲ್ಲಿ ಅವಕಾಶ ಇದೆ. ರೆವಿನ್ಯೂ ಅಧಿಕಾರಿಗಳ ಸೀಲ್ ಹಾಗೂ ಸ್ಟಾಂಪುಗಳ ದುರುಪಯೋಗ ತಡೆಯಲು ವಿಧೇಯಕದಲ್ಲಿ ಅವಕಾಶ ಇದೆ. ಸೀಲು, ಸ್ಟಾಂಪು ದುರುಪಯೋಗಕ್ಕೆ ಈ ಹಿಂದೆ ಶಿಕ್ಷೆ ಇರಲಿಲ್ಲ, ಈಗ ಶಿಕ್ಷಾರ್ಹ ಅಪರಾಧ ಎಂದು ವಿಧೇಯಕದಲ್ಲಿ ಸೇರಿಸಲಾಗಿದೆ.

    ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕ
    ಜೊತೆಗೆ, ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕಕ್ಕೂ ಅಂಗೀಕಾರ ನೀಡಲಾಯಿತು. ಈ ವಿಧೇಯಕ ಮೂಲಕ ನೋಂದಣಿ ಪ್ರಕ್ರಿಯೆಗಳಲ್ಲಿ ಇನ್ನಷ್ಟು ಸುಧಾರಣೆಯನ್ನು ಸರ್ಕಾರ ತಂದಿದೆ. ಪಂಚಾಯ್ತಿ/ಮುನಿಸಿಪಾಲಿಟಿಗಗಳಲ್ಲಿ ಇ ಖಾತಾ ದಾಖಲೀಕರಣಕ್ಕೆ ಅವಕಾಶ ನೀಡಲಾಗಿದೆ. ನೋಂದಣಿಗಳಲ್ಲಿ ಅಕ್ರಮ ತಡೆಗೂ ಇದರಿಂದ ಕ್ರಮ ವಹಿಸಬಹುದು. ಜಿಪಿಎ ಆಧಾರಿತ ಸೇಲ್ ಡೀಡ್ ಮಾಡಿಕೊಳ್ಳುವಾಗ ಜಿಪಿಎ ಸಹ ನೋಂದಣಿ ಆಗಿರಬೇಕು ಎಂಬ ಷರತ್ತು ಸೇರ್ಪಡೆ ಮಾಡಲಾಗಿದೆ. ಇನ್ಮುಂದೆ ಸೇಲ್ ಡೀಡ್‌ಗೂ ಮುನ್ನ ಜಿಪಿಎ ಅನ್ನು ನೋಂದಣಿ ಮಾಡಿಕೊಂಡಿರಬೇಕು. ಇನ್ಮುಂದೆ ಜಿಪಿಎ ಆಧರಿಸಿ ಮಾಡಿಕೊಳ್ಳುವ ಸೇಲ್ ಡೀಡ್ ಮಾಡಲು ನೋಂದಾಯಿತ ಜಿಪಿಎ ಕಡ್ಡಾಯಗೊಳಿಸಲಾಗಿದೆ. ಸರ್ಕಾರದಿಂದ ಕೊಡುವ ಜಮೀನು, ನಿವೇಶನಗಳನ್ನು ನೋಂದಣಿ ಮಾಡಿಯೇ ಮಂಜೂರು ಮಾಡಲು ವಿದೇಯಕದಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ದಾಖಲೆ ಕಳೆದುಕೊಳ್ಳುವ ಆತಂಕ ಇರೋದಿಲ್ಲ. ಈ ವೇಳೆ ಜಿಪಿಎ ಆಧಾರಿತ ನೋಂದಣಿಯಲ್ಲೂ ಸಾಕಷ್ಟು ದುರುಪಯೋಗ ಆಗುತ್ತದೆ. ಹಳೆಯ ಜಿಪಿಎಗಳನ್ನೇ ಮತ್ತೆ ಸೃಷ್ಟಿ ಮಾಡ್ತಾರೆ. ಇದನ್ನು ತಡೆಯಲು ಕ್ರಮ ತಗೊಳ್ಳಿ ಅಂತ ಎಸ್.ಆರ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

    ಕರ್ನಾಟಕ ಭೂಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ
    ವಿಧಾನಸಭೆಯಲ್ಲಿ ಕರ್ನಾಟಕ ಭೂಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕಕ್ಕೂ ಅಂಗೀಕಾರ ನೀಡಲಾಯಿತು. ಕಂದಾಯ ಇಲಾಖೆಯ ಭೂ ಒತ್ತುವರಿ ತೆರವು ಪ್ರಕ್ರಿಯೆಗಳನ್ನು ಸುಲಭ ಮಾಡಲು ಕಾಯ್ದೆಗೆ ಮಹತ್ವದ ತಿದ್ದುಪಡಿ ಇದಾಗಿದೆ. ಭೂ ಒತ್ತುವರಿ ತೆರವು ಪ್ರಕ್ರಿಯೆ ಶುರು ಮಾಡಿದ ಮೇಲೆ ಬಾಧಿತರು ವಿಶೇಷ ಭೂಕಬಳಿಕೆ ಕೋರ್ಟ್ ಗಳಲ್ಲಿ ಪ್ರಶ್ನಿಸಲು ಅವಕಾಶ ನಿರಾಕರಿಸುವ ತಿದ್ದುಪಡಿಯನ್ನು ಸರ್ಕಾರ ತಂದಿದೆ. ಒತ್ತುವರಿ ತೆರವು ಪ್ರಕ್ರಿಯೆ ಮುಗಿದ ಮೇಲೆ ಬಾಧಿತರು ಕೋರ್ಟಿಗೆ ಹೋಗಬಹುದು ಅಥವಾ ಒತ್ತುವರಿ ತೆರವು ಪ್ರಕ್ರಿಯೆ ಆರಂಭಕ್ಕೂ ಮುನ್ನ ಕೋರ್ಟಿಗೆ ಹೋಗಬಹುದು. ಆದರೆ, ಒಮ್ಮೆ ತೆರವು ಕಾರ್ಯ ಶುರುವಾದ ನಂತರ ಕೋರ್ಟುಗಳಿಗೆ ಹೋಗದಂತೆ ತಡೆಯಲು ವಿಧೇಯಕದಲ್ಲಿ ಅವಕಾಶ ಇದೆ. ಇದರಿಂದ ಒತ್ತುವರಿ ತೆರವು ಕಾರ್ಯ ವರ್ಷಗಟ್ಟಲೆ ನನೆಗುದಿಗೆ ಬೀಳುವುದನ್ನು ತಡೆಯಬಹುದು.

    ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ
    ಈ ವಿಧೇಯಕಕ್ಕೂ ಅಂಗೀಕಾರ ಸಿಕ್ಕಿದೆ. ಮಂಡ್ಯದಲ್ಲಿ ಪ್ರತ್ಯೇಕ ಕೃಷಿ ವಿವಿ ಸ್ಥಾಪನೆಗೆ ವಿಧೇಯಕ ಅಂಗೀಕರಿಸಲಾಯಿತು. ಮಂಡ್ಯದ ವಿ.ಸಿ ಫಾರ್ಮ್ನಲ್ಲಿ ಪ್ರತ್ಯೇಕ ಕೃಷಿ ವಿವಿ ಸ್ಥಾಪನೆಗೆ ಈ ಮೂಲಕ ನಿರ್ಧಾರ ಮಾಡಲಾಗಿದೆ. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳ ಬೆಳೆಗಳ ಉತ್ಪಾದನೆ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ ನಡೆಸಲು ಅವಕಾಶ ಸಿಗಲಿದೆ. ಜಿಕೆವಿಕೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಗಳಿಂದ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು, ಹಾಸ್ಟೆಲ್‌ಗಳು, ಗ್ರಂಥಾಲಯಗಳನ್ನು ವರ್ಗಾವಣೆ ಮಾಡುವ ಬಗ್ಗೆಯೂ ವಿಧೇಯಕದಲ್ಲಿ ಉಲ್ಲೇಖ ಮಾಡಲಾಗಿದೆ. ಇದಕ್ಕೆ ಉತ್ತರ ಕರ್ನಾಟಕ ಮೂಲದ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಶಿಕ್ಷಣ ಸಂಸ್ಥೆ, ಕಾಲೇಜುಗಳನ್ನು ವರ್ಗಾವಣೆ ಮಾಡದಂತೆ ಒತ್ತಾಯ ಕೇಳಿಬಂದಿದೆ.

  • ಇಂದಿರಾನಗರ ಪಾರ್ಕ್‌ನಲ್ಲಿ ಹೊಸ ರೂಲ್ಸ್ – ಎದುರು ಬದುರು ವಾಕಿಂಗ್ ನಿಷೇಧ

    ಇಂದಿರಾನಗರ ಪಾರ್ಕ್‌ನಲ್ಲಿ ಹೊಸ ರೂಲ್ಸ್ – ಎದುರು ಬದುರು ವಾಕಿಂಗ್ ನಿಷೇಧ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳನ್ನು ಚೂಡಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಇಂದಿರಾನಗರ ಪಾರ್ಕ್‌ನಲ್ಲಿ (Indiranagar Park) ಮಹಿಳೆಯರ ಹಾಗೂ ಹಿರಿಯರ ಸುರಕ್ಷತೆಗಾಗಿ ಹೊಸ ರೂಲ್ಸ್‌ಗಳನ್ನು ಜಾರಿ ಮಾಡಿದೆ.

    ಟ್ರಾಫಿಕ್ ಜಂಜಾಟ, ರಣ ಬಿಸಿಲಿಗೆ ಬೆಂಗಳೂರಿಗರು ರೋಸಿ ಹೋಗಿದ್ದಾರೆ. ಜನರಿಗೆ ಆರೋಗ್ಯ ಸಮಸ್ಯೆ ಕಾಡ್ತಿದೆ. ಹೊಟ್ಟೆ ಬೊಜ್ಜು ಕರಗಿಸಲು ಜನರು ಬೆಳಗ್ಗೆ ಮತ್ತು ಸಂಜೆ ಪಾರ್ಕ್‌ನಲ್ಲಿ ಜಾಗಿಂಗ್ ಮಾಡೋದು ಸಾಮಾನ್ಯ. ಆದರೆ ಇಂದಿರಾನಗರದ ಬಿಬಿಎಂಪಿಯ ಪಾರ್ಕ್‌ನಲ್ಲಿ ಜಾಗಿಂಗ್ ನಿಷೇಧ ಹೇರಲಾಗಿದ್ದು, ವಾಕಿಂಗ್‌ಗೂ ರೂಲ್ಸ್ ಮಾಡಲಾಗಿದೆ. ಪಾರ್ಕ್‌ನಲ್ಲಿ `ಜಾಗಿಂಗ್, ಆಟ ಆಡುವುದು, ಪಾಶ್ಚಿಮಾತ್ಯ ಉಡುಪು, ಎದುರು ಬದುರು ಜಾಗಿಂಗ್ ನಿಷೇಧ’ ಎಂದು ಬೋರ್ಡ್ ಹಾಕಲಾಗಿದೆ. ಇದನ್ನೂ ಓದಿ: ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ

    ಇಂದಿರಾನಗರ ಪಾರ್ಕ್ನಲ್ಲಿ ಹೆಣ್ಣುಮಕ್ಕಳು ವಾಕ್ ಮಾಡುವಾಗ ಕೆಲ ಪುರುಷರು ಕೆಟ್ಟ ಉದ್ದೇಶದಿಂದಲೇ ವಿರುದ್ಧ ದಿಕ್ಕಿನಲ್ಲಿ ವಾಕ್ ಮಾಡುತ್ತಿದ್ದರು. ಹೆಣ್ಣುಮಕ್ಕಳು ಮುಖಕ್ಕೆ ನೇರವಾಗಿ ವಾಕಿಂಗ್ ಮಾಡುತ್ತಿದ್ದರು. ಇದರಿಂದ ಹೆಣ್ಣಮಕ್ಕಳಿಗೆ ಅಭದ್ರತೆ ಕಾಡುತ್ತಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಕೂಡ ಕೆಲವರು ಅಳಲು ತೋಡಿಕೊಂಡಿದ್ದರು. ಹಾಗಾಗಿ ಎದುರು ಬದುರಾಗಿ ವಾಕಿಂಗ್‌ಗೆ ನಿಷೇಧ ಹೇರಲಾಗಿದೆ. ಪಾರ್ಕ್‌ನಲ್ಲಿ ಕ್ಲಾಕ್ ವೈಸ್ ಡೈರೆಕ್ಷನ್‌ನಲ್ಲಿ ಮಾತ್ರ ವಾಕ್ ಮಾಡುವಂತೆ ನಿಯಮ ಮಾಡಲಾಗಿದೆ. ಜೊತೆಗೆ ವೆಸ್ಟರ್ನ್ ಡ್ರೆಸ್ ಸಹ ಹಾಕದಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಜಾತಿನಿಂದನೆ, ಲೈಂಗಿಕ ಕಿರುಕುಳ ಆರೋಪ – ಗ್ರಾಮ ಪಂಚಾಯತಿ ಸದಸ್ಯ ಅರೆಸ್ಟ್

    ಈ ಪಾರ್ಕ್‌ಗೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಹಿರಿಯರು ವಾಕ್ ಮಾಡುವಾಗ, ಬೇರೆಯವರು ಜಾಗಿಂಗ್ ಮಾಡಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಜಾಗಿಂಗ್‌ಗೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಆಸ್ತಿ ಬರೆಸಿ ವೃದ್ಧ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಮಕ್ಕಳು!

    ಪಾರ್ಕ್‌ನಲ್ಲಿ ಬಂದು ಕಾರ್ಡ್ ಆಡ್ತಾರೆ ಎನ್ನುವ ಕಾರಣಕ್ಕೆ ಪಾರ್ಕಿಂಗ್‌ನಲ್ಲಿ ಗೇಮಿಂಗ್ ಆಕ್ಟಿವಿಟೀಸ್‌ಗೆ ನಿಷೇಧ ಹೇರಲಾಗಿದೆ. ಸದ್ಯ ಬಿಬಿಎಂಪಿ ಹಾಗೂ ಇಂದಿರಾನಗರದ ಸಾಮಾಜಿಕ ಸೌಲಭ್ಯಗಳ ಸಂಘ ಮಾತುಕತೆ ಮಾಡಿ ಈ ರೀತಿಯ ನಿಯಮ ಮಾಡಿದೆ. ಹೊಸ ರೂಲ್ಸ್‌ನಿಂದ ಪಾರ್ಕ್‌ನಲ್ಲಿ ನೆಮ್ಮದಿಯಾಗಿ ವಾಕ್ ಮಾಡಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ತೆರವಿಗೆ ಸೂಚನೆ – ಆದೇಶ ಉಲ್ಲಂಘಿಸಿದ್ರೆ ಯಾವುದೇ ಪಕ್ಷದವರಾದ್ರೂ ಕ್ರಮ: ಡಿಕೆಶಿ

    ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ತೆರವಿಗೆ ಸೂಚನೆ – ಆದೇಶ ಉಲ್ಲಂಘಿಸಿದ್ರೆ ಯಾವುದೇ ಪಕ್ಷದವರಾದ್ರೂ ಕ್ರಮ: ಡಿಕೆಶಿ

    ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅರಮನೆ ಮೈದಾನ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಬಿಬಿಎಂಪಿ ಕಮಿಷನರ್ ಅವರಿಗೆ ಸೂಚನೆ ನೀಡಿದ್ದಾರೆ.

    ಮಾರ್ಚ್ 17 ರಂದು ಸೋಮವಾರ ಅರಮನೆ ಮೈದಾನದಲ್ಲಿ (ಸೋಮವಾರ) ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಾಕಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನ ಕೂಡಲೇ ತೆರವುಗೊಳಿಸಬೇಕು ಎಂದು ಡಿಸಿಎಂ ಅವರು ಸೂಚಿಸಿದ್ದಾರೆ.

    ಒಂದೊಮ್ಮೆ ತೆರವು ಮಾಡದಿದ್ದರೆ ಸಂಬಂಧಪಟ್ಟವರ ವಿರುದ್ಧ ದಂಡ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಅವರು ಸೂಚನೆ ನೀಡಿದ್ದಾರೆ.

    ಬೆಂಗಳೂರು ನಗರದ ಸೌಂದರ್ಯವನ್ನು ಹಾಳು ಮಾಡಬಾರದು ಎಂದು ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಈ ಆದೇಶವನ್ನು ಪದೇ ಪದೆ ನಿರ್ಲಕ್ಷಿಸಲಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಆದೇಶ ಉಲ್ಲಂಘಿಸಿರುವವರು ನಮ್ಮ ಪಕ್ಷದವರಾದರೂ ಸರಿ, ಬೇರೆ ಪಕ್ಷದವರಾದರೂ ಸರಿ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿರುವುದಾಗಿ ಡಿಸಿಎಂ ತಿಳಿಸಿದ್ದಾರೆ.

  • ಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಶುಲ್ಕ – ತಿಂಗಳಿಗೆ ವಸತಿ, ವಾಣಿಜ್ಯ ಕಟ್ಟಡಗಳಿಗೆ ಎಷ್ಟು?

    ಬೆಂಗಳೂರಿನಲ್ಲಿ ಇನ್ಮುಂದೆ ಕಸಕ್ಕೂ ಶುಲ್ಕ – ತಿಂಗಳಿಗೆ ವಸತಿ, ವಾಣಿಜ್ಯ ಕಟ್ಟಡಗಳಿಗೆ ಎಷ್ಟು?

    ಬೆಂಗಳೂರು: ದರ ಏರಿಕೆಯಿಂದ ತತ್ತರಿಸಿರುವ ಬೆಂಗಳೂರು ಮಂದಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮನೆಮನೆಯಿಂದ ಸಂಗ್ರಹಿಸುವ ತ್ಯಾಜ್ಯಕ್ಕೆ (Garbage) ಏಪ್ರಿಲ್ 1ರಿಂದ ಸೇವಾ ಶುಲ್ಕ (Service Charge) ವಿಧಿಸಲು ಸರ್ಕಾರ ಮುಂದಾಗಿದೆ.

    ಕಳೆದ ಐದಾರು ವರ್ಷದಿಂದ ಬೆಂಗಳೂರಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಕಾರ್ಯರೂಪಕ್ಕೆ ತರಲು ಬಿಬಿಎಂಪಿ (BBMP) ಮುಂದಾಗಿದೆ.

    ಆರು ತಿಂಗಳಿಗೊಮ್ಮೆ ಆಸ್ತಿ ತೆರಿಗೆ ಜೊತೆ ಈ ಸೇವಾ ಶುಲ್ಕ ಸಂಗ್ರಹಿಸಲಾಗುತ್ತದೆ. ವಾರ್ಷಿಕ 800 ಕೋಟಿ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ.

    ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಪ್ರತಿಕ್ರಿಯಿಸಿ, ಇದು ತೆರಿಗೆ (Tax) ಅಲ್ಲ. ಇದು ಸರ್ವಿಸ್ ಚಾರ್ಜ್ ಆಗಿದ್ದು, ಪ್ರಾಪಾರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದು ತಿಳಿಸಿದರು.

    ವಸತಿ ಕಟ್ಟಡಗಳಿಗೆ (ಮಾಸಿಕ)
    * 600 ಚದರಡಿವರೆಗೆ – 10 ರೂ.
    * 601-1000 ಚದರಡಿ – 50 ರೂ.
    * 1001-2000 ಚದರಡಿ – 100 ರೂ.
    * 2001-3000 ಚದರಡಿ – 150 ರೂ.
    * 3001-4000 ಚದರಡಿ – 200 ರೂ.
    * 4000 ಚದರಡಿ ಮೇಲ್ಪಟ್ಟು – 400 ರೂ.
    * ನಿವೇಶನ ಪ್ರತಿ ಚದರಡಿಗೆ – 20 ಪೈಸೆ

    ವಾಣಿಜ್ಯ ಕಟ್ಟಡಗಳಿಗೆ (ಮಾಸಿಕ)
    * ನಿತ್ಯ 5 ಕೆಜಿವರೆಗೆ – 500 ರೂ.
    * ನಿತ್ಯ 10 ಕೆಜಿವರೆಗೆ – 1400 ರೂ.
    * ನಿತ್ಯ 25 ಕೆಜಿವರೆಗೆ – 3500 ರೂ.
    * ನಿತ್ಯ 50 ಕೆಜಿವರೆಗೆ – 7000 ರೂ.
    * ನಿತ್ಯ 100 ಕೆಜಿವರೆಗೆ – 14000 ರೂ.

     

  • ಬಿಬಿಎಂಪಿ 2ಕ್ಕಿಂತ ಹೆಚ್ಚು ಹೋಳಾಗೋದು ಫಿಕ್ಸ್ – ಸದ್ಯದಲ್ಲೇ `ಗ್ರೇಟರ್ ಬೆಂಗಳೂರು’ ಆಡಳಿತ ಕಾಯ್ದೆ ಜಾರಿಗೆ ಸಿದ್ಧತೆ

    ಬಿಬಿಎಂಪಿ 2ಕ್ಕಿಂತ ಹೆಚ್ಚು ಹೋಳಾಗೋದು ಫಿಕ್ಸ್ – ಸದ್ಯದಲ್ಲೇ `ಗ್ರೇಟರ್ ಬೆಂಗಳೂರು’ ಆಡಳಿತ ಕಾಯ್ದೆ ಜಾರಿಗೆ ಸಿದ್ಧತೆ

    – ಇತಿಹಾಸ ಪುಟ ಸೇರಲಿದೆ ಬಿಬಿಎಂಪಿ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಆಗೋದು ಫಿಕ್ಸ್ ಆಗಿದೆ. ಹೌದು.. 2008 ರಲ್ಲಿ 110 ಹಳ್ಳಿಗಳನ್ನು ಸೇರಿಸಿ ರಚಿಸಿದ್ದ ಬಿಬಿಎಂಪಿಯನ್ನು ಸರ್ಕಾರ ಆಡಳಿತ ದೃಷ್ಟಿಯಿಂದ ವಿಭಜನೆ ಮಾಡಲು ಹೊರಟಿದೆ. ಈ ಸಂಬಂಧ ವಿಧಾನಸಭೆಯಲ್ಲಿ ಇಂದು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ ಬಿಜೆಪಿಯವರ ತೀವ್ರ ವಿರೋಧದ ನಡುವೆಯೂ ಸರ್ಕಾರ ಪಾಸ್ ಮಾಡಿಕೊಂಡಿದೆ.

    ಅಷ್ಟಕ್ಕೂ ಏನಿದು ಗ್ರೇಟರ್ ಬೆಂಗಳೂರು ಬಿಲ್? ಬಿಬಿಎಂಪಿ ಎಷ್ಟು ಹೋಳಾಗಲಿದೆ‌? ಅನ್ನೋದನ್ನ ತಿಳಿಯಬೇಕಿದ್ರೆ ಮುಂದೆ ಓದಿ…

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ ನಾಲ್ಕೂವರೆ ರ‍್ಷದಿಂದ ಚುನಾವಣೆ ನಡೆದಿಲ್ಲ. ಅಲ್ಲಿಂದೀಚೆಗೆ ಮೂರು ಸರ್ಕಾರ, ನಾಲ್ವರು ಸಿಎಂಗಳು ಬದಲಾಗಿದ್ದಾರೆ, ಆದ್ರೆ ಯಾರೂ ಬಿಬಿಎಂಪಿಗೆ ಚುನಾವಣೆ ನಡೆಸುವ ಮನಸು ಮಾಡ್ಲಿಲ್ಲ. ಪ್ರತೀ ಬಾರಿಯೂ ಬಿಬಿಎಂಪಿ ಚುನಾವಣೆ ವಿಚಾರ ಸದ್ದು ಮಾಡಿದಾಗ ಸರ್ಕಾರ ಏನಾದರೂ ನೆಪ ಹುಡುಕಿಕೊಳ್ಳುವ ಪರಿಪಾಠ ಶುರು ಮಾಡಿದೆ. ಇದನ್ನೂ ಓದಿ: ತಂಬಾಕು, ಮದ್ಯದ ಜಾಹೀರಾತು ನಿಯಂತ್ರಿಸಿ – ಬಿಸಿಸಿಐ ಅಧ್ಯಕ್ಷರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ

    ಈ ಸಲ ಬಿಬಿಎಂಪಿ ಚುನಾವಣೆಗೆ ರ‍್ಕಾರ ಕಂಡುಕೊಂಡಿರುವ ಹೊಸ ಕಾರಣ ʻಗ್ರೇಟರ್ ಬೆಂಗಳೂರುʼ ಬಿಲ್. ಹಾಲಿ ಇರುವ ಬಿಬಿಎಂಪಿ ವಿಭಜಿಸಿಯೇ ಚುನಾವಣೆ ಮಾಡ್ತೇವೆ ಅಂತ ಕಾಂಗ್ರೆಸ್ ಸರ್ಕಾರ ಹೊರಟಿದೆ. ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಸರ್ಕಾರ ಇಂದು ಮಹತ್ವದ ಹೆಜ್ಜೆ ಇರಿಸಿದೆ. ಬಿಬಿಎಂಪಿಗೆ ಬಿಗ್ ಆಪರೇಷನ್ ಮಾಡುವ ಗ್ರೇಟರ್ ಬೆಂಗಳೂರು ಬಿಲ್ ಅನ್ನು ಇಂದು ಸರ್ಕಾರ ವಿಧಾನಸಭೆಯಲ್ಲಿ ಪಾಸ್ ಮಾಡಿಕೊಂಡಿದೆ.

    ಬಿಜೆಪಿಯವರ ತೀವ್ರ ವಿರೋಧದ ನಡುವೆಯೂ ಸರ್ಕಾರ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಬಿಲ್‌ ಪಾಸ್ ಮಾಡಿಕೊಂಡಿದೆ. ಸರ್ಕಾರದ ನಡೆ ಖಂಡಿಸಿ ಬಿಜೆಪಿ ಸದಸ್ಯರು ಧಿಕ್ಕಾರ ಘೋಷಣೆ ಕೂಗಿದ್ದರಲ್ಲದೇ, ಸಭಾತ್ಯಾಗ ನಡೆಸಿ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುಜರಾತ್‌ | 5 ವರ್ಷದ ಬಾಲಕಿಯ ನರಬಲಿ – ದೇವಾಲಯದ ಮೆಟ್ಟಿಲುಗಳ ಮೇಲೆ ರಕ್ತ ಅರ್ಪಿಸಿದ ಪಾಪಿ!

    ಗ್ರೇಟರ್ ಬೆಂಗಳೂರು ಬಿಲ್‌ನಲ್ಲಿ ಏನಿದೆ? ಎಷ್ಟು ಪಾಲಿಕೆ ಬರಲಿವೆ?
    ಇನ್ನು ಮುಂದೆ ಬಿಬಿಎಂಪಿ ಹೆಸರಿನ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬರಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ. ಜನ ಪ್ರತಿನಿಧಿಗಳನ್ನು ವಿವಿಧ ಏಜೆನ್ಸಿಯವರನ್ನು ಒಳಗೊಳ್ಳಲಾಗಿದೆ. ಪೊಲೀಸರು, ನೀರು ಸರಬರಾಜು, ಸಾರಿಗೆ, ಅಗ್ನಿಶಾಮಕ, ನಗರ ಯೋಜನೆ ಸೇರಿ ಎಲ್ಲರೂ ಸಮಿತಿ ಸದಸ್ಯರಾಗಿರುತ್ತಾರೆ. ಬಿಬಿಎಂಪಿಯನ್ನು 2 ರಿಂದ 7 ನಗರ ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ.

    ಪ್ರತೀ ಪಾಲಿಕೆಗೆ 100 ಮೀರದಂತೆ 200ರ ಒಳಗೆ ವಾರ್ಡ್‌ಗಳ ಹಂಚಿಕೆ ಮಾಡಲಾಗುತ್ತದೆ. ಮೇಯರ್/ಉಪಮೇಯರ್‌ಗಳ ಅಧಿಕಾರವು 1 ವರ್ಷದ ಬದಲು 2.5 ವರ್ಷಕ್ಕೆ ನಿಗದಿಯಾಗಲಿದೆ. ಸದಸ್ಯರ ಅಧಿಕಾರದವಧಿ 5 ವರ್ಷಕ್ಕೆ ನಿಗದಿಯಾಗಲಿದೆ. ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಇರಬಾರದು. 300 ಕೋಟಿ ಕನಿಷ್ಠ ಆದಾಯ ಇರಬೇಕು. ಪ್ರತೀ ನಗರಪಾಲಿಕೆಗೆ ಬೆಂಗಳೂರಿನ ಹೆಸರಿನಿಂದಲೇ ಶೀರ್ಷಿಕೆ ಇರಬೇಕು. ಉದಾ. ಬೆಂ. ಉತ್ತರ, ಬೆಂ. ದಕ್ಷಿಣ ರೀತಿಯಲ್ಲಿರುತ್ತದೆ. ಅಲ್ಲದೇ 6 ತಿಂಗಳ ಮೊದಲು ಮೇಯರ್ ವಿರುದ್ಧ ಅವಿಶ್ವಾಸ ತರಲು ಅವಕಾಶ ಇಲ್ಲ. ಶಾಸಕರು ಮತ ಹಾಕಲು ಅದೇ ಪ್ರದೇಶದಲ್ಲೇ ವಾಸ ಇರುವವರಾಗಿರಬೇಕು. ಪಾಲಿಕೆಯ ವಾರ್ಡ್‌ಗಳಲ್ಲಿ ಎಲ್ಲಾ ಜಾತಿಗಳಿಗೆ ಮೀಸಲಾತಿ ಇರುತ್ತದೆ. ಸ್ಥಳೀಯ ಸಮಿತಿಗಳು ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗಲಿದೆ. ಇದನ್ನೂ ಓದಿ: ನಟಿ ರನ್ಯಾಗೆ KIADB ಜಾಗ ಕೊಟ್ಟಿದ್ದೇ ಬಿಜೆಪಿ, ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡೋ ನೈತಿಕತೆ ಅವರಿಗಿಲ್ಲ: ಹೆಚ್.ಸಿ ಬಾಲಕೃಷ್ಣ

    ಸರ್ಕಾರದ ವಾದವೇನು?
    ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಬಿಬಿಎಂಪಿಗೆ ಹೊಸ ರೂಪ ಸಿಗಲಿದೆ. ನಗರ ತಜ್ಞರು, ಹಲವು ವಲಯಗಳ ಗಣ್ಯರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡಲಾಗುತ್ತದೆ. ಬೆಂಗಳೂರನ್ನು ಒಡೆಯುತ್ತಿಲ್ಲ, ಬದಲಾಗಿ ಇನ್ನೂ ಗಟ್ಟಿ ಮಾಡುತ್ತಿದ್ದೇವೆ. ಈಗ ಇರುವ ಪರಿಸ್ಥಿತಿಯಲ್ಲಿ ಬೆಂಗಳೂರು ಆಡಳಿತ ಕಷ್ಟ ಸಾಧ್ಯವಾಗಿದೆ. ನಾವು ಮಾಡುತ್ತಿರುವುದು ಅಧಿಕಾರ ವಿಕೇಂದ್ರೀಕರಣ, ವಿಭಜನೆ ಅಲ್ಲ. ಬೆಂಗಳೂರಿಗೆ ಹೊಸ ದಿಕ್ಕನ್ನು ಕೊಡಬೇಕೆಂದು ಈ ಪ್ರಯತ್ನವನ್ನು ಮಾಡುತ್ತಿದ್ದೇವೆ. ರಚನೆ ಆಗಲಿರುವ ಹೊಸ ನಗರಪಾಲಿಕೆಗಳಿಗೆ ತಾರತಮ್ಯ ಆಗುವುದಿಲ್ಲ.

    ಶಾಸಕರಿಗೆ ವಾರ್ಡ್‌ಗಳ ಮೇಲೆ ಹಿಡಿತ ಇರುವಂತೆ ವಾರ್ಡ್ ಸಮಿತಿಗಳ ರಚನೆ ಮಾಡಲಾಗುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪೊಲೀಸರನ್ನು, ಬಿಡಿಎ ಆಯುಕ್ತರು, ಬಿಎಂಟಿಸಿ, ಬೆಸ್ಕಾಂ ಎಂಡಿಗಳನ್ನೂ, ಟ್ರಾಫಿಕ್, ಸ್ಲಂ ಬೋರ್ಡ್ ಪ್ರಮುಖರ ಸೇರ್ಪಡೆ ಮಾಡಲಾಗುವುದು. ಬಿಬಿಎಂಪಿ ಎಷ್ಟು ವಿಭಜನೆ ಮಾಡಬೇಕು ಎಂದು ಚರ್ಚಿಸಿ ತೀರ್ಮಾನ ಮಾಡಲಾಗುವುದು. ಹೊಸ ಪಾಲಿಕೆಗಳಿಗೆ ಬೆಂಗಳೂರು ಹೆಸರೇ ಇರಲಿದೆ. ಬೆಂಗಳೂರಿನ ಸ್ವಾಭಿಮಾನ ಉಳಿಸುತ್ತೇವೆ. ಮೇಯರ್, ಉಪಮೇಯರ್ ಅಧಿಕಾರದ ಅವಧಿಯನ್ನು 2.5 ವರ್ಷಕ್ಕೆ ನಿಗದಿ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ತಮಿಳಿನತ್ತ ನಟಿ- ಬಿಗ್ ಚಾನ್ಸ್ ಬಾಚಿಕೊಂಡ ಮೇಘಾ ಶೆಟ್ಟಿ

    ಬಿಜೆಪಿ ವಾದವೇನು?
    ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಕಾಂಗ್ರೆಸ್ ವಿಭಜನೆ ಮಾಡುತ್ತಿದೆ. ಬಿಬಿಎಂಪಿ ವಿಭಜಿಸಿ ಬೆಂಗಳೂರು ಖ್ಯಾತಿ ಹಾಳು ಮಾಡುತ್ತಿದ್ದಾರೆ. ಗ್ರೇಟರ್ ಬೆಂಗಳೂರು ಬಿಲ್‌ನಿಂದ ಕನ್ನಡಕ್ಕೆ, ಕನ್ನಡಿಗರಿಗೆ ಅಪಾಯ ಎದುರಾಗಲಿದೆ. ಐದಾರು ಭಾಗ ಮಾಡಿದರೆ ಕನ್ನಡದವರು ಮೇಯರ್ ಆಗಲ್ಲ, ಬದಲಾಗಿ ಬೇರೆ ಭಾಷಿಕರು ಆಗುತ್ತಾರೆ ಬಜೆಪಿಗರು ಕಿಡಿಕಾರಿದರು.

    ಈ ಬಿಲ್ ಬೆಂಗಳೂರು ಪಾಲಿಗೆ ಮರಣ ಶಾಸನವಾಗಲಿದೆ. ಇಂದು ಬೆಂಗಳೂರಿಗೆ ಕರಾಳ ದಿನವಾಗಿದೆ. ಬೆಂಗಳೂರಿನ 1 ಕೋಟಿ ಜನರನ್ನ ನೋಡಿಕೊಳ್ಳಲು ಒಬ್ಬ ಮೇಯರ್‌ನಿಂದ ಆಗುವುದಿಲ್ವಾ? ಕರ್ನಾಟಕಕ್ಕೆ ಒಬ್ಬರೇ ಸಿಎಂ, ದೇಶಕ್ಕೆ ಒಬ್ಬರೇ ಪ್ರಧಾನಿ ಇದ್ದಾರಲ್ವಾ? 5 ಪಾಲಿಕೆ ಬದಲು, ಐವರು ಆಯುಕ್ತರು ಮಾಡಿ, ಎಲ್ಲಾ ಅಧಿಕಾರ ಅವರಿಗೆ ಕೊಡಿ. ಬೆಂಗಳೂರು ಒಟ್ಟಾದ್ರೆ ಬ್ರ‍್ಯಾಂಡ್ ಬೆಂಗಳೂರು ಆಗಲಿದೆ. ಪಾಲಿಕೆಯನ್ನು ನಾಲ್ಕೈದು ವಿಭಜನೆ ಮಾಡಿದರೆ ಬೆಂಗಳೂರಿಗೆ ಸಮಸ್ಯೆ ಎದುರಾಗಲಿದೆ. ಒಂದೊಂದು ಪಾಲಿಕೆಗೆ ಒಬ್ಬೊಬ್ಬ ಮೇಯರ್ ಬಂದರೆ ಬೇಧಭಾವ ಶುರುವಾಗಲಿದೆ. ಮೇಯರ್‌ಗಳು ತಮ್ಮ ಪಾಲಿಕೆಗಳಿಗೆ ಬೇರೆಬೇರೆ ಕಾರ್ಯಕ್ರಮ ಘೋಷಣೆ ಮಾಡಿದರೆ ತಾರತಮ್ಯವಾಗುತ್ತದೆ. ಕೇಂದ್ರದ ಡೀಲಿಮಿಟೇಷನ್ ಬಳಿಕ ಮತ್ತೆ ವಾರ್ಡ್ ಮರು ಹಂಚಿಕೆ ಸಮಸ್ಯೆ ಬರಲಿದೆ ಎಂದು ವಿರೋಧ ವ್ಯಕ್ತಪಡಿಸಿತು. ಇದನ್ನೂ ಓದಿ: ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠೇಗೌಡ ಹೃದಯಾಘಾತದಿಂದ ನಿಧನ

    ಒಟ್ಟಾರೆ ಸರ್ಕಾರ ಗ್ರೇಟರ್ ಬೆಂಗಳೂರು ಬಿಲ್ ತರಲು ನಿಶ್ಚಯ ಮಾಡಿದೆ. ಪರಿಷತ್‌ನಲ್ಲೂ ಬಿಲ್ ಪಾಸ್ ಮಾಡಿಕೊಂಡು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ರಾಜ್ಯಪಾಲರು ಒಪ್ಪಿಗೆ ಕೊಟ್ಟಿದ್ದೇ ಆದಲ್ಲಿ ಈ ಬಿಲ್ ಜಾರಿ ಫಿಕ್ಸ್ ಆಗಲಿದೆ. ನಂತರ ಪಾಲಿಕೆಗಳ ರಚನೆ, ವಾರ್ಡ್‌ಗಳ ಹೆಚ್ಚಳ, ಹಂಚಿಕೆ, ಸದಸ್ಯರ ಮೀಸಲಾತಿ ನಿಗದಿ ಇತ್ಯಾದಿ ಪ್ರಕ್ರಿಯೆಗಳು ಇನ್ನೂ ಬಾಕಿ ಇದೆ. ಇದೆಲ್ಲವೂ ಮುಗಿದರೆ ಮುಂದಿನ ಸೆಪ್ಟೆಂಬರ್ ಹೊತ್ತಿಗೆ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸುವ ನಿರೀಕ್ಷೆ ಇದೆ.

  • ಬಿಬಿಎಂಪಿ ಯಡವಟ್ಟು – ಕರಗ ಸಂಭ್ರಮಕ್ಕೆ ಅಡ್ಡಿ!

    ಬಿಬಿಎಂಪಿ ಯಡವಟ್ಟು – ಕರಗ ಸಂಭ್ರಮಕ್ಕೆ ಅಡ್ಡಿ!

    – ಕರಗ ಸಾಗುವ ದಾರಿಯಲ್ಲಿ ಕಾಮಗಾರಿ
    – ಕರಗ ಸಮಿತಿಗೆ 800 ವರ್ಷಗಳ ಇತಿಹಾಸ ಮುರಿಯುವ ಭೀತಿ

    ಬೆಂಗಳೂರು: ಬೆಂಗಳೂರು ಇತಿಹಾಸದಲ್ಲಿ ಕರಗಕ್ಕೆ ತನ್ನದೇ ಆದ ಮಹತ್ವ ಇದೆ. ಪ್ರತಿ ವರ್ಷ ಕೂಡ ಕರಗ ಸಂಭ್ರಮಕ್ಕೆ ಯಾವುದೇ ಧಕ್ಕೆಯಾಗದಂತೆ ಸಾಂಪ್ರದಾಯಿಕ ಆಚರಣೆ ಮಾಡಲಾಗುತ್ತಿದೆ. ಆದರೆ ಈ ಬಾರಿಯ ಬಿಬಿಎಂಪಿ (BBMP) ಯಡವಟ್ಟಿನಿಂದ ಕರಗ ಇತಿಹಾಸದ ಕೆಲ ಸಂಪ್ರದಾಯವನ್ನ ಮುರಿಯುವ ಸ್ಥಿತಿ ಎದುರಾಗಿದೆ. ಕರಗ ಸಮಿತಿ ಟೆನ್ಷನ್ ಹೆಚ್ಚು ಮಾಡಿದೆ.

    ಬೆಂಗಳೂರು ಕರಗ (Bengaluru Karaga) ನಗರದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತನ್ನದೇ ಭಕ್ತರು, ಪ್ರಸಿದ್ಧಿಯನ್ನ ಹೊಂದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನೆರವೇರುತ್ತಾ ಬರುತ್ತಲೇ ಇದೆ. ಆದರೆ ಈ ಬಾರಿ ವಿಶ್ವವಿಖ್ಯಾತ ಕರಗಕ್ಕೆ ಬಿಬಿಎಂಪಿಯೇ ಅಡಚಣೆ ಮಾಡಿದಂತಿದೆ. ನೂರಾರು ವರ್ಷಗಳಿಂದ ನಡೆದು ಬಂದಿರುವ ಕೆಲವೊಂದು ಸಂಪ್ರದಾಯಗಳನ್ನ ಬದಲಾವಣೆ ಮಾಡಬೇಕಾದ ಗೊಂದಲಕ್ಕೆ ಕರಗ ಸಮಿತಿ ಸಿಲುಕಿದೆ. ಇದನ್ನೂ ಓದಿ: ಏ.4ರಿಂದ 14ರವರೆಗೆ ಬೆಂಗಳೂರು ಕರಗ – 20 ಲಕ್ಷ ಜನ ಭಾಗಿ ನಿರೀಕ್ಷೆ

    ಎಸ್.ಪಿ ರೋಡ್, ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಕಳೆದ ಮೂರು ತಿಂಗಳಿನಿಂದ ಒಳಚರಂಡಿ, ರಸ್ತೆ ಕಾಮಗಾರಿ ಆರಂಭಿಸಿದ ಬಿಬಿಎಂಪಿ ಇನ್ನೂ ಕೂಡ 10% ನಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕರಗ ಆರಂಭವಾಗೋಕೆ ಕೇವಲ 25 ದಿನ ಮಾತ್ರ ಬಾಕಿ ಇದೆ. ಹೀಗಿರುವಾಗ 3 ತಿಂಗಳಲ್ಲಿ ಮುಗಿಯದ ಕೆಲಸ 25 ದಿನದಲ್ಲಿ ಆಗೋಕೆ ಸಾಧ್ಯನಾ ಎನ್ನುವ ಪ್ರಶ್ನೆ ಮೂಡಿದೆ.

    ಕರಗ ಶಕ್ತ್ಯೋತ್ಸವ ದಿನ ರಥೋತ್ಸವ, ಕರಗ ಶಕ್ತ್ಯೋತ್ಸವ ಕೂಡ ಇದೇ ಮಾರ್ಗದಲ್ಲಿ ಸಾಗಬೇಕು. ಆದರೆ ಇಡೀ ರಸ್ತೆಯನ್ನ ಸಂಪೂರ್ಣ ಅಗೆದು ಕಾಮಗಾರಿ ಶುರು ಮಾಡಿರುವ ಕಾರಣ ಸಾಗಿಹೋಗೋದು ಸಾಧ್ಯವೇ ಇಲ್ಲ. ಇದರಿಂದ ಬೇರೆ ಮಾರ್ಗಗಳಲ್ಲಿ ಸಾಗಬೇಕಾದರೆ, ಇತಿಹಾಸವನ್ನ ಮುರಿದಂತಾಗಲಿದೆ. ಇದೇ ದಾರಿಯಲ್ಲಿ ಹೋಗುವುದು ಅಸಾಧ್ಯ. ಹೀಗಾಗಿ, ಮುಂದ್ಹೇಗೆ ಎನ್ನುವ ಚಿಂತೆ ಸಮಿತಿಗೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್‌ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ

    ಲಕ್ಷಾಂತರ ಜನ ಸಂಭ್ರಮದಲ್ಲಿ ಸೇರುವ ಕಾರಣ ಸಾಕಷ್ಟು ಅಪಾಯಗಳು ಈ ಮಾರ್ಗದಲ್ಲಿವೆ. ಅನೇಕ ಕಡೆ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳನ್ನ ಅಗೆದಿರುವ ಕಾರಣ ಬರುವವರು ಕತ್ತಲೆಯಲ್ಲಿ ಕೊಂಚ ಯಾಮಾರಿದರೂ ಅಪಾಯದ ಸಾಧ್ಯತೆ ಇದೆ.

  • ಆಸ್ತಿ ತೆರಿಗೆ ಬಾಕಿ – ವಿಧಾನಸೌಧ, ರಾಜಭವನ ಸೇರಿ 258 ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟೀಸ್

    ಆಸ್ತಿ ತೆರಿಗೆ ಬಾಕಿ – ವಿಧಾನಸೌಧ, ರಾಜಭವನ ಸೇರಿ 258 ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟೀಸ್

    ಬೆಂಗಳೂರು: ವಿಧಾನಸೌಧ, ರಾಜಭವನ (Raj Bhavan) ಸೇರಿ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಒಟ್ಟು 258 ಸರ್ಕಾರಿ ಕಟ್ಟಡಕ್ಕೆ ಬಿಬಿಎಂಪಿ ನೋಟಿಸ್‌ ನೀಡಿದೆ.

    ಈಗಾಗಲೇ ರಾಜ್ಯಾದ್ಯಂತ ಬಹುತೇಕ ಸರ್ಕಾರಿ ಇಲಾಖೆಗಳು (Government Departments) ಬರೋಬ್ಬರಿ 8 ಸಾವಿರ ಕೋಟಿ ರೂ.ಗಳಷ್ಟು ವಿದ್ಯುಲ್ ಬಿಲ್ ಬಾಕಿ ಉಳಿಸಿಕೊಂಡಿವೆ. ಈ ಬೆನ್ನಲ್ಲೇ ಇಂತಹದ್ದೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಖುದ್ದು ಬಿಬಿಎಂಪಿ ಅಧಿಕಾರಿಗಳೇ ಈ ಬಗ್ಗೆ ʻಪಬ್ಲಿಕ್‌ ಟಿವಿʼಗೆ ಮಾಹಿತಿ ನೀಡಿದ್ದಾರೆ.

    ಹೌದು. ವಿಧಾನಸೌಧ (Vidhana Soudha), ವಿಕಾಸ ಸೌಧ, ರಾಜಭವನ ಸೇರಿ ಅನೇಕ ಸರ್ಕಾರಿ ಕಟ್ಟಗಳು ಕೋಟಿಗಟ್ಟಲೆ ಆಸ್ತಿ ತೆರಿಗೆ (Property Tax) ಬಾಕಿ ಉಳಿಸಿಕೊಂಡಿವೆ. ಈಗಾಗಲೇ ನೋಟಿಸ್‌ ಸಹ ನೀಡಲಾಗಿದೆ. ಈ ಪೈಕಿ ಕೆಲವು ಕಟ್ಟಡಗಳು 17 ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಆಯಾ ಇಲಾಖೆ ಮುಖ್ಯಸ್ಥರಿಗೆ ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ.

    ಒಂದು ವೇಳೆ ತೆರಿಗೆ ಪಾವತಿ ಮಾಡದಿದ್ದರೆ, ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ.

  • ಬಿಜೆಪಿ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯೇ ಆಗಲಿಲ್ಲ – ರಾಮಲಿಂಗಾರೆಡ್ಡಿ

    ಬಿಜೆಪಿ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯೇ ಆಗಲಿಲ್ಲ – ರಾಮಲಿಂಗಾರೆಡ್ಡಿ

    ಬೆಂಗಳೂರನ್ನು ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿ ಮಾಡಿದ್ದು ಬಿಜೆಪಿಯವರು ಎಂದ ಸಚಿವ

    ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯೇ ಆಗಲಿಲ್ಲ. ನಗರವನ್ನೇ ಹಾಳು ಮಾಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವಾಗ್ದಾಳಿ ನಡೆಸಿದ್ದಾರೆ.

    ಶುಕ್ರವಾರ ಬಿಜೆಪಿ ನಿಯೋಗ ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ಭೇಟಿಯಾಗಿ ಬೆಂಗಳೂರು ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ಬೇಡಿಕೆ ಇಟ್ಟಿರುವ ಬಗ್ಗೆ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.ಇದನ್ನೂ ಓದಿ: ಕೇರಳ | ವಿದ್ಯಾರ್ಥಿಗಳ ನಡುವೆ ಮಾರಾಮಾರಿ – 10ನೇ ತರಗತಿ ಬಾಲಕ ಸಾವು

    ಯಡಿಯೂರಪ್ಪ-ಬೊಮ್ಮಾಯಿ ಅವಧಿಯಲ್ಲಿ ಬಿಬಿಎಂಪಿಗೆ 8 ಸಾವಿರ ಕೋಟಿ ರೂ. ಅನುದಾನ ಕೊಟ್ಟಿರಲಿಲ್ಲ. ಬಿಜೆಪಿಯವರು ಸುಳ್ಳು ಹೇಳ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ 2017 ರಿಂದ 2019 ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸೇರಿ 7 ಸಾವಿರ ಕೋಟಿ ರೂ.ಯನ್ನು ಘೋಷಣೆ ಮಾಡಿದ್ದರು. ನಮ್ಮ ಸರ್ಕಾರ ಬಿದ್ದ ಮೇಲೆ ಬಿಜೆಪಿಯುವರು ನಾವು ಕೊಟ್ಟ 7 ಸಾವಿರ ಕೋಟಿ ರೂ.ಯನ್ನು ಹಂಚಿಕೆ ಮಾಡಿಕೊಂಡಿದ್ದರು. ಆಗ ನಮ್ಮ ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಕೇವಲ 1,600 ಕೋಟಿ ರೂ. ಮಾತ್ರ ಕೊಟ್ಟಿದ್ದರು. ಆದರೆ ಬಿಜೆಪಿ ಶಾಸಕರು 5,400 ಕೋಟಿ ರೂ. ಅನುದಾನ ಪಡೆದುಕೊಂಡಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಬಿಜೆಪಿ ಶಾಸಕರಿಗೆ ನೂರು ಕೋಟಿ ಕಡಿಮೆ ಅನುದಾನ ಕೊಟ್ಟೇ ಇಲ್ಲ. ಬಿಜೆಪಿಯವರು ಬಂದ ಮೇಲೆ ಕಾಂಗ್ರೆಸ್ ಶಾಸಕರ ಅನುದಾನ ಕಡಿಮೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.

    ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 400 ಕಿ.ಮೀ ರಸ್ತೆ ನಿರ್ಮಾಣ ಆಗಿದೆ. ಪಾದಚಾರಿ ಮಾರ್ಗ, ರಸ್ತೆ ಅಗಲೀಕರಣ, ಟೆಂಡರ್ ಶ್ಯೂರ್, ಸಿಗ್ನಲ್ ಫ್ರೀ ಕಾರಿಡಾರ್, ವೈಟ್ ಟಾಪಿಂಗ್, 8 ಕಡೆ ಸ್ಕೈವಾಕ್, ಬಸ್ ಶೆಲ್ಟರ್, ಪಾರ್ಕಿಂಗ್ ವ್ಯವಸ್ಥೆ, 6 ಕಡೆ ಘನತ್ಯಾಜ್ಯ ನಿರ್ವಹಣೆ, ಇಂದಿರಾ ಕ್ಯಾಂಟಿನ್, ಕೆರೆಗಳ ಅಭಿವೃದ್ಧಿ ಎಲ್ಲ ಕೆಲಸಗಳು ನಮ್ಮ ಸರ್ಕಾರದ ಅವಧಿಯಲ್ಲಿ ಆಗಿವೆ. ಬಿಜೆಪಿಯವರು 4 ವರ್ಷ ಅಧಿಕಾರ ಮಾಡಿದ್ದರು. ಅವರ ಅವಧಿಯಲ್ಲಿ ನೆನಪಿಡುವ ಹಾಗೇ ಯಾವ ಕೆಲಸ ಮಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು.

    ನಾನು ಸಿಎಂ ಅವರಿಗೆ ಮನವಿ ಮಾಡುತ್ತೇನೆ. ಬಿಜೆಪಿ ಅವರು ಅಧಿಕಾರ ಬಿಟ್ಟು ಹೋಗುವಾಗ ಬಿಬಿಎಂಪಿಯಲ್ಲಿ 6 ಸಾವಿರ ಕೋಟಿ ರೂ. ಬಾಕಿ ಇಟ್ಟಿದ್ದರು. ಬಿಡಿಎದಲ್ಲಿ 2-3 ಸಾವಿರ ಕೋಟಿ ರೂ. ಸಾಲ ಇಟ್ಟಿದ್ದರು. ಬೆಸ್ಕಾಂನಲ್ಲಿ 2-3 ಸಾವಿರ ಕೋಟಿ ರೂ. ಬಾಕಿ ಇಟ್ಟಿದ್ದರು. ಈಗ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅವರು ಯಾಕೆ ಬಿಬಿಎಂಪಿ ಚುನಾವಣೆ ಮಾಡಲಿಲ್ಲ. ನಾವು ಚುನಾವಣೆ ಮಾಡ್ತೀವಿ. ಗ್ರೇಟರ್ ಬೆಂಗಳೂರು ಎಲ್ಲವೂ ಆಗುತ್ತಿದೆ ಎಂದರು.

    ಬಿಜೆಪಿ ಅವರು ಸಾಲ ಇಟ್ಟು ಹೋಗಿದ್ದರಿಂದ ನಮಗೂ ಸಮಸ್ಯೆ ಆಯ್ತು. ಈಗ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಕನಿಷ್ಠ 100 ಕೋಟಿ ರೂ. ಪ್ರತಿ ಕ್ಷೇತ್ರಕ್ಕೆ ಸಿಎಂ ಕೊಡಲಿ ಎಂದು ಮನವಿ ಮಾಡಿದ್ದರು. ಬೆಂಗಳೂರನ್ನು ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿ ಮಾಡಿದ್ದು ಬಿಜೆಪಿಯವರು. ಅವರ ಅವಧಿಯಲ್ಲಿ ಅನೇಕ ಕಟ್ಟಡಗಳನ್ನು ಅಡಮಾನ ಇಟ್ಟಿದ್ದರು. ಅದನ್ನೆಲ್ಲಾ ನಾವು ಬಿಡಿಸಿದ್ದೇವೆ. ಪ್ರತಿವರ್ಷ 8 ಸಾವಿರ ರೂ. ಕೊಟ್ಟಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಾರೆ. 4 ವರ್ಷ 32 ಸಾವಿರ ಕೋಟಿ ರೂ. ಆಗಬೇಕಿತ್ತು. ಆದರೆ 32 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಆಗಲಿಲ್ಲ. ಕೋರ್ಟ್ ಮಾನಿಟರ್ ಮಾಡುವ ಸ್ಥಿತಿಗೆ ತಂದಿದ್ದರು ಎಂದು ಕಿಡಿಕಾರಿದರು.ಇದನ್ನೂ ಓದಿ: ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ : ರಾಮಲಿಂಗಾರೆಡ್ಡಿ

     

  • ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ : ರಾಮಲಿಂಗಾರೆಡ್ಡಿ

    ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ : ರಾಮಲಿಂಗಾರೆಡ್ಡಿ

    ಬೆಂಗಳೂರು: ಬಿಬಿಎಂಪಿ (BBMP) ಚುನಾವಣೆಯು ಮೇ ತಿಂಗಳಲ್ಲಿ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy)  ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಪೀಕರ್‌ಗೆ ಗ್ರೇಟರ್ ಬೆಂಗಳೂರು ವರದಿಯನ್ನು ರಿಜ್ವಾನ್ ಅರ್ಷದ್ ಸಮಿತಿ ಕೊಟ್ಟಿದ್ದಾರೆ. ಬಿಲ್ ಬಗ್ಗೆ ಸದನದಲ್ಲಿ ಚರ್ಚೆ ಆಗಲಿದೆ. ಬಿಜೆಪಿ ಅವರಿಗೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ. ವೋಟ್ ಮಾತ್ರ ಬೇಕು. ಹೀಗಾಗಿ ಗ್ರೇಟರ್ ಬೆಂಗಳೂರು ವಿಧೇಯಕ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ UP ರಸ್ತೆ ಸಾರಿಗೆ ಸಂಸ್ಥೆಗೆ ಬಂಫರ್ – 45 ದಿನಗಳಲ್ಲಿ ವರ್ಷದ ಆದಾಯ

    ಮೇ ತಿಂಗಳಲ್ಲಿ 100% ಬಿಬಿಎಂಪಿ ಚುನಾವಣೆ ಆಗಲಿದೆ. ಗ್ರೇಟರ್ ಬೆಂಗಳೂರು ಆದರೆ ವಾರ್ಡ್ ಜಾಸ್ತಿ ಆಗಬಹುದು. 2-3 ಪಾಲಿಕೆ ಆಗಬಹುದು. ಈಗಿನ ಬೆಂಗಳೂರನ್ನ ಒಬ್ಬ ಮೇಯರ್, ಕಮಿಷನರ್ ಆಡಳಿತ ಮಾಡಲು ಸಾಧ್ಯವಿಲ್ಲ. ನನ್ನ ಪ್ರಕಾರ ಬೆಂಗಳೂರು ಅಭಿವೃದ್ಧಿ ಆಗಬೇಕಾದರೆ 2-3 ಪಾಲಿಕೆ ಆಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ : ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್‌ಗಳ ಅಬ್ಬರ- ಪ್ರಭಾಸ್ ಎಂಟ್ರಿಯೇ ಚಿಂದಿ

  • ಟ್ರಾಫಿಕ್‌ಗೆ ಮುಕ್ತಿ ಹಾಡಲು ಮುಂದಾದ ಬಿಬಿಎಂಪಿ – 10,000 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ

    ಟ್ರಾಫಿಕ್‌ಗೆ ಮುಕ್ತಿ ಹಾಡಲು ಮುಂದಾದ ಬಿಬಿಎಂಪಿ – 10,000 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ

    – ಮುಂದಿನ 25 ವರ್ಷ ಗುರಿಯಾಗಿಸಿ ಪಾಲಿಕೆ ಪ್ಲ್ಯಾನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಟ್ರಾಫಿಕ್‌ನಿಂದ (Traffic) ಮುಕ್ತಿ ಯಾವಾಗಪ್ಪ ಅಂತ ದೇವರತ್ತ ಮುಖ ಮಾಡುವ ಸ್ಥಿತಿ ವಾಹನ ಸವಾರರದ್ದು. ಇತ್ತ ಬೆಂಗಳೂರಿನ ಅಭಿವೃದ್ಧಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ದೇವರೇ ಧರೆಗೆ ಇಳಿದು ಬಂದ್ರೂ ಮುಂದಿನ ಮೂರು ವರ್ಷದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸೋಕೆ ಆಗಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಬಿಬಿಎಂಪಿ (BBMP) ಈ ವರ್ಷ ಟ್ರಾಫಿಕ್ ಸಮಸ್ಯೆ ನಿವಾರಣೆಗೆ 10,000 ಕೋಟಿ ರೂ. ಖರ್ಚು ಮಾಡಲು ಮುಂದಾಗಿದೆ.

    ಮುಂದಿನ 25 ವರ್ಷದವರೆಗೂ ರಸ್ತೆಗಳ ಸಮಸ್ಯೆ ಉದ್ಭವವಾಗದಂತೆ ಬಿಬಿಎಂಪಿ ಹಲವು ಯೋಜನೆ ರೂಪಿಸಿದೆ. 80 ರಿಂದ 90 ಕಿಲೋಮೀಟರ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಪ್ಲ್ಯಾನ್ ಹಾಕಿಕೊಂಡಿದೆ. ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ – 9,000 ನರ್ಸ್‌ಗಳಿಂದ ಅಹೋರಾತ್ರಿ ಧರಣಿ

    ಬೆಂಗಳೂರಿನಲ್ಲಿ ಇರುವ ಎಲ್ಲಾ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಮಗಾರಿ ಮಾಡೋದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಈ ವರ್ಷ ಒಂದೆರಡು ಫ್ಲೈ ಓವರ್‌ಗೆ ಚಾಲನೆ ನೀಡೋದಲ್ಲದೇ ಟನಲ್‌ಗೂ ಚಾಲನೆ ಕೊಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಪಕ್ಷಿಗಳ ನಿಗೂಢ ಸಾವು – ಹಕ್ಕಿ ಜ್ವರದ ಶಂಕೆ