Tag: bbmp

  • ಏ.10 ರಂದು ಬೆಂಗಳೂರಲ್ಲಿ ಮಾಂಸ ಮಾರಾಟ ನಿಷೇಧ

    ಏ.10 ರಂದು ಬೆಂಗಳೂರಲ್ಲಿ ಮಾಂಸ ಮಾರಾಟ ನಿಷೇಧ

    ಬೆಂಗಳೂರು: ಇದೇ ಏಪ್ರಿಲ್‌ 10ರಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

    ಅಂದು ʻಮಹಾವೀರ ಜಯಂತಿʼ (MahavirJ ayanti) ಇರುವ ಕಾರಣ ಕಸಾಯಿಖಾನೆಯಲ್ಲಿ ಹಾಗೂ ಮಾಂಸ ಮಾರಾಟ ಮಳಿಗೆಗಳಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ (Meat Sale) ನಿಷೇಧಿಸಿ ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: 2024ರಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಿಂದ ಹೊಸ ಮೈಲಿಗಲ್ಲು – 41 ದಶಲಕ್ಷ ಮಂದಿ ಪ್ರಯಾಣ

    ಏಪ್ರಿಲ್‌ 10ರಂದು ಮಹಾವೀರ ಜಯಂತಿ
    ಜೈನ ಧರ್ಮದ ಅನುಯಾಯಿಗಳಿಗೆ ಮಹಾವೀರ ಜಯಂತಿ ಬಹಳ ವಿಶೇಷವಾದ ಹಬ್ಬ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನದಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಏ.10 ರಂದು ಆಚರಣೆ ಮಾಡಲಾಗುತ್ತದೆ. ಆಚರಣೆ ಹೇಗೆ? ಆಚರಣೆಯ ಮಹತ್ವ ಏನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.  ಇದನ್ನೂ ಓದಿ: ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಮರುಜೀವ ನೀಡುವಂತೆ ಡಾ. ಮಂಜುನಾಥ್ ಮನವಿಗೆ ಸ್ಮಂದಿಸಿದ ಕೇಂದ್ರ

    ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾವೀರ ಸ್ವಾಮಿಯು ಕ್ರಿ.ಪೂ 599 ರಲ್ಲಿ ಚೈತ್ರ ಮಾಸದ 13ನೇ ದಿನ ಬಿಹಾರದ ಕುಂದಾಗ್ರಾಮದಲ್ಲಿ ರಾಜಮನೆತನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಅವರ ಬಾಲ್ಯದ ಹೆಸರು ವರ್ಧಮಾನ್. ಅವರು 30ನೇ ವಯಸ್ಸಿನಲ್ಲಿ, ಸಿಂಹಾಸನವನ್ನು ತ್ಯಜಿಸಿ ಆಧ್ಯಾತ್ಮಿಕತೆಯ ಮಾರ್ಗವನ್ನು ಆರಿಸಿಕೊಂಡರು. ಇನ್ನೂ ಮಹಾವೀರ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಜೈನ ಸಮುದಾಯವರು ಆಚರಿಸುತ್ತಾರೆ.  ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಸ್ಫೋಟಕ ಶತಕ – ಎಬಿಡಿ, ಕೊಹ್ಲಿ ದಾಖಲೆ ಪುಡಿಗಟ್ಟಿದ 24ರ ಯುವಕ

  • ಇನ್ಮುಂದೆ ಮನೆ ಪಾರ್ಕಿಂಗ್‌ಗೂ ಟ್ಯಾಕ್ಸ್

    ಇನ್ಮುಂದೆ ಮನೆ ಪಾರ್ಕಿಂಗ್‌ಗೂ ಟ್ಯಾಕ್ಸ್

    -ಚದರಡಿ ಲೆಕ್ಕದಲ್ಲಿ ತೆರಿಗೆ ವಿಧಿಸಲು ಮುಂದಾದ ಬಿಬಿಎಂಪಿ

    ಬೆಂಗಳೂರು: ಬೆಲೆ ಏರಿಕೆಯಿಂದ ಬೇಸತ್ತ ಬೆಂಗಳೂರಿಗರಿಗೆ (Bengaluru) ಬಿಬಿಎಂಪಿ (BBMP) ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಇದೀಗ ಮನೆ ಪಾರ್ಕಿಂಗ್ ಸ್ಥಳಕ್ಕೆ ಚದರಡಿ ಲೆಕ್ಕದಲ್ಲಿ ತೆರಿಗೆ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.ಇದನ್ನೂ ಓದಿ:ರಾಜೇಂದ್ರ ಕೊಲೆ ಸಂಚು ಪ್ರಕರಣ – ಮುಖ್ಯ ಆರೋಪಿ ಸೋಮ ಪೊಲೀಸರಿಗೆ ಶರಣು

    ವಸತಿ ಸ್ವತ್ತುಗಳಿಗೆ ಚದರ ಅಡಿಗೆ 2 ರೂ. ಹಾಗೂ ಕಮರ್ಷಿಯಲ್ ಸಂಸ್ಥೆಗಳಿಗೆ ಚದರ ಅಡಿಗೆ 3 ರೂ.ಯೆಂದು ನಿರ್ಧರಿಸಿದೆ.

    ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಮಾತನಾಡಿ, ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಮನೆಯಿದ್ದರೂ 2 ರೂ. ದರ ನಿಗದಿ ಮಾಡಲಾಗಿದೆ. ಈ ಹೊಸ ಪಾರ್ಕಿಂಗ್ ನೀತಿಯಿಂದ 45 ಕೋಟಿ ರೂ. ನಷ್ಟವಾಗಲಿದೆ. ಒಂದು ವೇಳೆ ಈ ನೀತಿಗೆ ಆಕ್ಷೇಪಣೆಗಳು ಹೆಚ್ಚಾಗಿ ಬಂದರೆ ಪಾರ್ಕಿಂಗ್ ನೀತಿ ಬದಲಾಗಬಹುದು ಎಂದು ಹೇಳಿದ್ದಾರೆ.ಇದನ್ನೂ ಓದಿ:6 ವಾರಗಳಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ

  • ನಾಳೆಯಿಂದ ಕಸಕ್ಕೆ ಸೆಸ್ ಜಾರಿ – ಎಷ್ಟು ಚದರ ಕಟ್ಟಡಕ್ಕೆ ಎಷ್ಟು ತೆರಿಗೆ?

    ನಾಳೆಯಿಂದ ಕಸಕ್ಕೆ ಸೆಸ್ ಜಾರಿ – ಎಷ್ಟು ಚದರ ಕಟ್ಟಡಕ್ಕೆ ಎಷ್ಟು ತೆರಿಗೆ?

    ಬೆಂಗಳೂರು: ಮೆಟ್ರೋ ದರ, ಹಾಲಿನ ದರ, ವಿದ್ಯುತ್ ದರದ ಬಳಿಕ ಈಗ ಬೆಂಗಳೂರಿಗರಿಗೆ (Bengaluru) ಮತ್ತೊಂದು ದರ ಏರಿಕೆ ಬಿಸಿ ತಟ್ಟಲಿದೆ. ನಾಳೆಯಿಂದ (ಏ.1) ಕಸದ (Garbage) ಮೇಲೆ ಸೆಸ್ (Cess) ಜಾರಿ ಆಗಲಿದೆ.

    ಮನೆ ಮನೆ ಕಸ ಸಂಗ್ರಹಿಸಲು ಇನ್ನೂ ಮುಂದೆ ತೆರಿಗೆ ಕಟ್ಟಬೇಕು. ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯಿಂದ ಕಸದ ಮೇಲೆ ಸೆಸ್ ವಿಧಿಸಲಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಎಂದು ವಸೂಲಿ ಮಾಡಲು ಬಿಬಿಎಂಪಿ (BBMP) ಮುಂದಾಗಿದೆ. ಅಂಗಡಿ, ಹೋಟೆಲ್‍ಗಳಿಗೆ ಒಂದು ತೆರಿಗೆ, ರೆಸಿಡೆನ್ಷಿಯಲ್ ಕಟ್ಟಡಗಳಿಗೆ ಮತ್ತೊಂಡು ರೀತಿ ಕಸದ ಸೆಸ್ ವಿಧಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಐಸ್‌ಕ್ರೀಂ ಪ್ರಿಯರೇ ಎಚ್ಚರ – ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ

    ಹೋಟೆಲ್‍ಗಳಿಗೆ ಮೊದಲು ಒಂದು ಕೆಜಿ ಕಸಕ್ಕೆ 5 ರೂ. ನಿಗದಿ ಮಾಡಲಾಗಿತ್ತು. ಈಗ 12 ರೂ.ಗೆ ಏರಿಸಲಾಗಿದೆ. ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಲೆಕ್ಕದಲ್ಲಿ ಕಸಕ್ಕೆ ಸೆಸ್ ಹಾಕಲಿದ್ದಾರೆ. ಆಸ್ತಿ ತೆರಿಗೆಯಲ್ಲಿ ಕಸದ ತೆರಿಗೆಯನ್ನು ವಾರ್ಷಿಕವಾಗಿ ಬಿಬಿಎಂಪಿ ವಸೂಲಿ ಮಾಡಲಿದೆ.

    ಎಷ್ಟು ಚದರ ಕಟ್ಟಡಕ್ಕೆ ಎಷ್ಟು ತೆರಿಗೆ?
    600 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 10 ರೂ.
    600 ಚದರ ದಿಂದ 1000 ಚದರವರೆಗಿನ ಕಟ್ಟಡಗಳಿಗೆ ತಿಂಗಳಿಗೆ 50 ರೂ.
    1 ಸಾವಿರದಿಂದ 2 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 100 ರೂ.
    2 ಸಾವಿರದಿಂದ 3 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 150 ರೂ.
    3 ಸಾವಿರ ದಿಂದ 4 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 200 ರೂ.
    4 ಸಾವಿರ ಚದರ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 400 ರೂ.

    ಇದರಿಂದ ಘನತ್ಯಾಜ್ಯ ನಿರ್ವಹಣೆ ಸಂಸ್ಥೆಗೆ ವಾರ್ಷಿಕ 600 ಕೋಟಿ ರೂ. ಅದಾಯ ನಿರೀಕ್ಷೆ ಮಾಡಲಾಗಿದೆ. ಇದನ್ನೂ ಓದಿ: ಸೈಲೆಂಟ್ ಆಗಿದ್ದ ಶಾಸಕ ಯತ್ನಾಳ್ ಫುಲ್‌ ವೈಲೆಂಟ್ – ವಿಜಯದಶಮಿಗೆ ಹೊಸ ಪಕ್ಷ..?

  • ಬೆಂಗಳೂರು | ಆಸ್ತಿ ತೆರಿಗೆ ಪಾವತಿಗೆ ಇಂದೇ ಕೊನೇ ದಿನ – ತಪ್ಪಿದ್ರೆ 100% ದಂಡ ಫಿಕ್ಸ್

    ಬೆಂಗಳೂರು | ಆಸ್ತಿ ತೆರಿಗೆ ಪಾವತಿಗೆ ಇಂದೇ ಕೊನೇ ದಿನ – ತಪ್ಪಿದ್ರೆ 100% ದಂಡ ಫಿಕ್ಸ್

    – 2024-25ನೇ ಸಾಲಿನಲ್ಲಿ 4,604 ಕೋಟಿ ಆಸ್ತಿ ತೆರಿಗೆ ಸಂಗ್ರಹ

    ಬೆಂಗಳೂರು: ನಗರವಾಸಿಗಳಿಗೆ ಆಸ್ತಿ ತೆರಿಗೆ (Property Tax) ಪಾವತಿಗೆ ಇವತ್ತೇ ಕೊನೇ ದಿನವಾಗಿದೆ. ಇಂದು ಆಸ್ತಿ ತೆರಿಗೆ ಪಾವತಿ ಮಾಡದಿದ್ರೆ ತೆರಿಗೆ ಜೊತೆಗೆ 100% ದಂಡ ಪಾವತಿಸಬೇಕಾಗುತ್ತದೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

    ಹೌದು. 2024-25ರ ಸಾಲಿನ ಆಸ್ತಿ ತೆರಿಗೆ ಸಂಗ್ರಹಕ್ಕೆ ಇಂದು ಕಡೇ ದಿನ. ಇಂದು ತೆರಿಗೆ ಪಾವತಿ ಮಾಡದಿದ್ದರೆ ತೆರಿಗೆ ಜೊತೆಗೆ ಅದರ 100% ದಂಡ ಕಟ್ಟಬೇಕಾಗುತ್ತದೆ. ಆಸ್ತಿ ತೆರಿಗೆ ಎಷ್ಟು ಬಾಕಿ ಇದೆಯೋ ಅಷ್ಟೇ ದಂಡವನ್ನೂ ಆಸ್ತಿ ಮಾಲೀಕರು ಪಾವತಿಸಬೇಕಿದೆ. ಇದರ ಜೊತೆಗೆ ವಾರ್ಷಿಕ 15% ಬಡ್ಡಿ ದರವೂ ಇರಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ಬಿರುಗಾಳಿಗೆ ಉರುಳಿ ಬಿದ್ದ ಮರ – 6 ಕ್ಕೂ ಹೆಚ್ಚು ಮಂದಿ ಸಾವು

    ಈ ಹಿಂದೆ ಆಸ್ತಿ ತೆರಿಗೆಯ ದುಪ್ಪಟ್ಟು ಮೌಲ್ಯದ ದಂಡ ಪಾವತಿಸಬೇಕಿತ್ತು. ಆದರೆ ಸರ್ಕಾರ ಇದನ್ನು ಕಡಿತಗೊಳಿಸಿ ಆಸ್ತಿತೆರಿಗೆಯ ಸಮಾನ ಹಣವನ್ನು ದಂಡವಾಗಿ ಕಟ್ಟಲು ಸೂಚಿಸಿದೆ. ಅಂದರೆ 100 ರೂಪಾಯಿ ಆಸ್ತಿ ತೆರಿಗೆ ಬಾಕಿ ಇದ್ದರೆ, ಇದರ ಮೇಲೆ ಮತ್ತೆ 100 ರೂಪಾಯಿಯಷ್ಟು ದಂಡ ಬೀಳಲಿದೆ. ಆದರೆ ಈ ಅವಕಾಶವೂ ಮಾರ್ಚ್ 31ಕ್ಕೆ ಅಂದರೆ ಇಂದು ಕೊನೆಯಾಗಲಿದೆ. ನಂತರ 100% ದಂಡ ಹಾಗೂ 15% ಬಡ್ಡಿ ಜೊತೆಗೆ ಆಸ್ತಿ ತೆರಿಗೆ ಪಾವತಿಸಬೇಕಿದೆ. ಅಂದರೆ 1,000 ರೂ ಆಸ್ತಿ ತೆರಿಗೆ ಇದ್ದರೆ, 2,000 ರೂ ಜೊತೆಗೆ 15% ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ. ಇದನ್ನೂ ಓದಿ: ಹುಟ್ಟುಹಬ್ಬದ ಮುನ್ನಾ ದಿನ ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ IIIT ವಿದ್ಯಾರ್ಥಿ ಆತ್ಮಹತ್ಯೆ

    ಬಿಬಿಎಂಪಿಯು 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 5,210 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಈವರೆಗೆ 4,604 ಕೋಟಿ ರೂಪಾಯಿ ವಸೂಲಿ ಆಗಿದೆ. ಮಾರ್ಚ್ 31ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸದಿದ್ದರೆ ಡಬಲ್ ಹಣ ದಂಡದ ರೂಪದಲ್ಲಿ ವಸೂಲಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಇಂದು ರಾತ್ರಿ 11 ಗಂಟೆ ಒಳಗಡೆ ತೆರಿಗೆ ಪಾವತಿಸಿದ್ರೆ ದುಪ್ಪಟ್ಟು ತೆರಿಗೆ ಪಾವತಿಸುವ ಹೊರೆ ತಪ್ಪಲಿದೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

    ಒಟ್ಟಾರೆ ಆರ್ಥಿಕ ವರ್ಷ ಅಂತ್ಯ ಆಗ್ತಾ ಇದೆ.. ಆಸ್ತಿ ತೆರಿಗೆ ಪಾವತಿಗೆ ಮಾರ್ಚ್ 31ರ ವರೆಗೂ ಅವಕಾಶ ನೀಡಲಾಗಿತ್ತು. ಯಾರು ತೆರಿಗೆ ಪಾವತಿಸಿಲ್ಲವೋ ಅವರಿಗೆ 100% ದಂಡ ಹಾಕಿ ವಸೂಲಿ ಮಾಡಲಿದ್ದು ತೆರಿಗೆ ಪಾವತಿದಾರರು ಇಂದು ರಾತ್ರಿ 12 ಗಂಟೆ ಒಳಗಡೆ ತೆರಿಗೆ ಪಾವತಿಸಿದ್ರೆ ದಂಡದಿಂದ ಬಚಾವ್ ಆಗಬಹುದು. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ: ಲಕ್ಷಾಂತರ ಮಂದಿ ಭಾಗಿ 

  • ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ

    ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ

    ಬೆಂಗಳೂರು: ಇತ್ತ ಬೆಂಗಳೂರಿಗರಿಗೆ ಬಿಎಂಟಿಸಿ ಬಸ್ ಯಮಸ್ವರೂಪಿಯಾದ್ರೆ… ಅತ್ತ ಬಿಬಿಎಂಪಿ ಕಸದ ಲಾರಿಯೂ (BBMP Garbage Truck) ಅಮಾಯಕರ ಜೀವಗಳನ್ನು ಬಲಿ ಪಡೆಯುತ್ತಿದೆ. ಕಸದ ಲಾರಿಗಳಿಂದ ಸಾಲು-ಸಾಲು ಆಕ್ಸಿಡೆಂಟ್ ಆಗುತ್ತಿದ್ರೆ, ಬಲಿಯಾದವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.

    ನಿನ್ನೆ 12 ವರ್ಷದ ಬಾಲಕನನ್ನು ಕಸದ ಲಾರಿ ಬಲಿ ಪಡೆದಿದೆ. ಯಮಸ್ವರೂಪಿ ಕಸದ ಲಾರಿ ವಿರುದ್ಧ ಜನ ನಿಗಿನಿಗಿ ಕೆಂಡವಾಗಿದ್ದಾರೆ. ಅಡ್ಡಾದಿಡ್ಡಿ ಚಾಲನೆ, ಓವರ್ ಸ್ಪೀಡ್, ರೂಲ್ಸ್ ಬ್ರೇಕ್‌ನಿಂದಲೇ ಅಪಘಾತಗಳ (Accident) ಸರಮಾಲೆ ಹೆಚ್ಚಾಗಿದೆ. ಸಾಲು-ಸಾಲು ಸಾವಾದ್ರೂ ಬಿಬಿಎಂಪಿಯಿಂದ ಯಾವ್ದೇ ಶಿಸ್ತು ಕ್ರಮವಾಗಿಲ್ಲ. ಹಾಗಿದ್ರೆ, ಕಸದ ಲಾರಿಗಳ ಬಲಿಯಾಟಕ್ಕೆ ಬ್ರೇಕ್ ಯಾವಾಗ.. ಈವರೆಗೂ ಬಲಿಯಾದವರೆಷ್ಟು ಅಂತ ನೋಡೋದಾದ್ರೆ..

    * ದಿನಾಂಕ ಸೆಪ್ಟೆಂಬರ್ -22 – 2018
    * ಸ್ಥಳ: ಯಶವಂತಪುರ ಟ್ರಾಫಿಕ್ ಪೊಲೀಸ್ ಠಾಣೆ
    * 30 ವರ್ಷದ ಭುವನೇಶ್ವರಿ ಎಂಬ ಮಹಿಳೆ ಬಲಿ
    * ಇದು ಕಸದ ಲಾರಿಗೆ ವರದಿಯಾಗಿರೋ ಮೊದಲ ಬಲಿ

    * ದಿನಾಂಕ ಮಾರ್ಚ್/21/ 2022
    * ಸ್ಥಳ: ಹೆಬ್ಬಾಳ
    * ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅಕ್ಷತಾ ಬಲಿ

    * ದಿನಾಂಕ: ಮಾರ್ಚ್ 31/2022
    * ಸ್ಥಳ: ಥಣಿಸಂದ್ರ ಮುಖ್ಯರಸ್ತೆ
    * ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಸವಾರ ಸಾವು
    * ವಿ. ರಾಮಯ್ಯ 76 ವರ್ಷದ ವೃದ್ಧ ಬಲಿ

    * ದಿನಾಂಕ: ಏಪ್ರಿಲ್ 18/2022
    * ಸ್ಥಳ: ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್
    * ಸ್ಕೂಟರ್‌ನಲ್ಲಿ ಹೋಗ್ತಿದ್ದ ಮಹಿಳೆ ಮೇಲೆ ಹರಿದ ಕಸದ ಲಾರಿ
    * ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಪದ್ಮಿನಿ (40) ಬಲಿ

    ದಿನಾಂಕ ಮೇ 14/2022
    * ಸ್ಥಳ: ನಾಗವಾರ ಮುಖ್ಯರಸ್ತೆ
    * ಸ್ವಿಗ್ಗಿ ಡಿಲವರಿ ಬಾಯ್‌ನ ಪ್ರಾಣ ತೆಗೆದ ಕಸದ ಲಾರಿ
    * ದೇವಣ್ಣ (25) ಯುವಕ ಕಸದ ಲಾರಿಗೆ ಬಲಿ

    * ದಿನಾಂಕ: ಜುಲೈ 10/2022
    * ಸ್ಥಳ: ನಾಗರಬಾವಿ ಸರ್ಕಲ್
    * ದ್ವಿಚಕ್ರ ವಾಹನದ ಮೇಲೆ ಹರಿದ ಕಸದ ಲಾರಿ
    * ಕಲಾ (37) ವರ್ಷದ ಮಹಿಳೆ ಸಾವು
    * ಪತಿ ಯೋಗೇಂದ್ರ ಗಂಭೀರ ಗಾಯ

    * ದಿನಾಂಕ: ನವೆಂಬರ್ 29/2022
    * ಸ್ಥಳ: ದೊಡ್ಡಬಳ್ಳಾಪುರದ ಚಿಗರೇನಹಳ್ಳಿ ಡಂಪ್ ಯಾರ್ಡ್
    * ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಯುವಕರು ಬಲಿ
    * ಮಾರುತಿ ಮತ್ತು ಮಹೇಶ್ ಮೃತ ದುರ್ದೈವಿಗಳು

    * ದಿನಾಂಕ: ಜುಲೈ 17/2023
    * ಸ್ಥಳ: ಹಡ್ಸನ್ ಸರ್ಕಲ್
    * ರಸ್ತೆ ದಾಟುತ್ತಿದ್ದ ಮಹಿಳೆಗೆ ಗುದ್ದಿದ್ದ ಕಸದ ಲಾರಿ
    * ಮುನಿಯಮ್ಮ 60 ವರ್ಷದ ವೃದ್ದೆ ಸಾವು

    * ದಿನಾಂಕ: ಸೆಪ್ಟೆಂಬರ್ 25/2023
    * ಸ್ಥಳ: ಜಯನಗರ ಮೆಟ್ರೋ ನಿಲ್ದಾಣ
    * ನವವಿವಾಹಿತ ಬಲಿ ಪಡೆದ ಬಿಬಿಎಂಪಿ ಕಸದ ಲಾರಿ
    * ವೈಜ್ಞಾನಿಕ ಪಾರ್ಕಿಂಗ್ ಮಾಡಿದ್ದ ಲಾರಿ
    * ಲಾರಿ ಕಾಣದೆ ಬೈಕ್‌ನಲ್ಲಿ ಗುದ್ದಿ ಸಾವು
    * ರಾಮನಗರದ ಯಶವಂತ ಬಲಿಯಾದ ಯುವಕ

    * ದಿನಾಂಕ: ಜನವರಿ 29/2024
    * ಸ್ಥಳ: ಪುಲಕೇಶಿನಗರದ ಮಸೀದಿ ರೋಡ್
    * 14 ವರ್ಷದ ವಿದ್ಯಾರ್ಥಿನಿ ಮೇಲೆ ಹರಿದ ಕಸದ ಲಾರಿ

    * ದಿನಾಂಕ: ಜುಲೈ 28/2024
    * ಸ್ಥಳ: ಶೇಷಾದ್ರಿ ರೋಡ್, ಕೆಆರ್ ಸರ್ಕಲ್
    * ಇಬ್ಬರ ಸಾವಿಗೆ ಕಾರಣವಾಗಿರೋ ಬಿಬಿಎಂಪಿ ಕಸದ ಲಾರಿ
    * ಪ್ರಶಾಂತ್ (25), ಶಿಲ್ಪಾ(27) ಇಬ್ಬರು ಟೆಕ್ಕಿಗಳು ಬಲಿ

    * ದಿನಾಂಕ: ಜನವರಿ 05/2025
    * ಸ್ಥಳ: ನಾಗವಾರ ಮುಖ್ಯರಸ್ತೆ ಥಣಿಸಂದ್ರ..
    * ಸಹೋದರಿಯರನ್ನ ಬಲಿ ಪಡೆದಿದ್ದ ಕಸದ ಲಾರಿ
    * ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಕಸದ ಲಾರಿ ಡಿಕ್ಕಿ
    * ನಾಸೀಯಾ ಸುಲ್ತಾನ್, ನಾಸೀಯಾ ಇರ್ಫಾನ್ ಬಲಿ

  • ಬಿಬಿಎಂಪಿ ಬಜೆಟ್ ಮಂಡನೆ – 19,927 ಕೋಟಿ ಬೃಹತ್ ಯೋಜನೆಗಳ ಘೋಷಣೆ

    ಬಿಬಿಎಂಪಿ ಬಜೆಟ್ ಮಂಡನೆ – 19,927 ಕೋಟಿ ಬೃಹತ್ ಯೋಜನೆಗಳ ಘೋಷಣೆ

    – ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್‌ನಲ್ಲಿ ಹೆಚ್ಚಿನ ಮಹತ್ವ

    ಬೆಂಗಳೂರು: 2025-26ನೇ ಸಾಲಿನ ಬಿಬಿಎಂಪಿ ಬಜೆಟ್ (BBMP Budget) ಮಂಡನೆಯಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದ್ದು, ಸತತ ಐದನೇ ಬಾರಿಗೆ ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಿದ್ದಾರೆ.

    19,927 ಕೋಟಿ ಬೃಹತ್ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್ ಅನುಮೋದನೆ ನೀಡಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡನೆ ಮಾಡಿದ್ದಾರೆ.

    ಬ್ರ‍್ಯಾಂಡ್ ಬೆಂಗಳೂರು (Brand Bengaluru) ದೃಷ್ಟಿಕೋನಕ್ಕೆ ಅನುಗುಣವಾಗಿ ಬೆಂಗಳೂರನ್ನು ಅಧುನಿಕ ನಗರವನ್ನಾಗಿಸುವ ಘೋಷಣೆ ಮಾಡಲಾಗಿದೆ. ಬ್ರ‍್ಯಾಂಡ್ ಬೆಂಗಳೂರಿಗೆ ಬಿಬಿಎಂಪಿ ಬಜೆಟ್‌ನಲ್ಲಿ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಟ್ರಾಫಿಕ್ ಮುಕ್ತ, ಗ್ರೀನ್ ಸಿಟಿ, ಟೆಕ್, ಶಿಕ್ಷಣ, ಆರೋಗ್ಯ, ರೋಮಾಂಚಕ ಬೆಂಗಳೂರು, ನೀರಿನ ಭದ್ರತೆಗೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಬ್ರ‍್ಯಾಂಡ್ ಬೆಂಗಳೂರಿಗೆ 1,790 ಕೋಟಿ ವೆಚ್ಚ ಮಾಡಲು ನಿರ್ಧಾರ ಮಾಡಲಾಗಿದೆ.

    ಯಾವುದಕ್ಕೆ ಎಷ್ಟು ಅನುದಾನ ಮೀಸಲು?
    *ಘನತ್ಯಾಜ್ಯ ನಿರ್ವಹಣೆ ಯೋಜನೆಗಾಗಿ 1,400 ಕೋಟಿ ಮೀಸಲು ಇರಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕ, ಒಣ ತ್ಯಾಜ್ಯ ನಿರ್ವಹಣಾ ಘಟಕ, ಮೆಕ್ಯಾನಿಕ್ ಸ್ವೀಪಿಂಗ್ ಯಂತ್ರಗಳು, ಇನ್ನಿತರ ಘನತ್ಯಾಜ್ಯ ನಿರ್ವಹಣೆ ಯೋಜನೆಗೆ 1,400 ಕೋಟಿ ಅನುದಾನ ಮೀಸಲಿರಿಸಲಾಗಿದೆ.
    *ಬೆಂಗಳೂರು ಶಿಕ್ಷಣ ಯೋಜನೆ ಅನುಷ್ಠಾನಗಳಿಗೆ 183 ಕೋಟಿ ಮೀಸಲಿಡಲಾಗಿದೆ. 15 ಶಾಲೆಗಳ ನವೀಕರಣ, 60 ಶಾಲೆಗಳ ಸ್ಮಾರ್ಟ್ ಬೋರ್ಡ್, ಶಾಲಾ ಕಟ್ಟಡಗಳ ನಿರ್ವಹಣೆಗೆ 23 ಕೋಟಿ, ಶಾಲಾ ಮೈದಾನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
    *ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ಅನುದಾನ ಕೊಟ್ಟಿದ್ದು, 19 ಹೊಸ ಆಸ್ಪತ್ರೆಗಳು, 26 ಹೊಸ ಡೆಂಟಲ್ ಆಸ್ಪತ್ರೆ, ಬೀದಿನಾಯಿಗಳ ನಿರ್ವಹಣೆಗೆ 60 ಕೋಟಿ ಅನುದಾನ ನೀಡಲಾಗಿದೆ.
    *ಬೆಂಗಳೂರು ನಗರವನ್ನು ಸುಂದರೀಕರಿಸಲು, ಆಕರ್ಷಣೆ ಮಾಡಲು 50 ಕೋಟಿ, ಜಂಕ್ಷನ್ ಮತ್ತು ಸಾರ್ವಜನಿಕ ಸ್ಥಳಗಳ ಸುಂದರೀಕರಣಕ್ಕೆ 25 ಕೋಟಿ ಮೀಸಲು ಇಡಲಾಗಿದೆ.
    *ಸ್ಕೈ ಡೆಕ್ ನಿರ್ಮಾಣಕ್ಕಾಗಿ 50 ಕೋಟಿ ಅನುದಾನ ನೀಡಲಾಗಿದೆ.
    *ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ 247.25 ಕೋಟಿ ಮೀಸಲು ಇಡಲಾಗಿದೆ.
    *225 ವಾರ್ಡ್‌ಗಳ ಅಭಿವೃದ್ಧಿಗಾಗಿ ವಾರ್ಡ್‌ಗೆ ತಲಾ 2.50 ಕೋಟಿಯಂತೆ 675 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
    *ಪ್ರೀಮಿಯರ್ ಎಫ್‌ಎಆರ್ ನೀತಿ ಜಾರಿ ಮಾಡಿದ್ದು, ಇದರಿಂದ 2 ಕೋಟಿ ಆದಾಯ ನೀರಿಕ್ಷೆ ಮಾಡಲಾಗಿದೆ.
    *ಪಾಲಿಕೆ ಸಿಬ್ಬಂದಿ ವರ್ಗಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಅವಕಾಶ ಕೊಡಲಾಗಿದೆ.
    *ಸಿಬ್ಬಂದಿ ಹಾಜರಾತಿ ಕಠಿಣಗೊಳಿಸಲು ಜಿಯೋ ಫೆನ್ಸಿಂಗ್ ವ್ಯವಸ್ಥೆ ಮಾಡಲಾಗಿದೆ.
    *12,692 ಪೌರಕಾರ್ಮಿಕರ ಕಾಯಂಗೊಳಿಸಿ 500 ಕೋಟಿ ಮೀಸಲು ಇರಿಸಲಾಗಿದೆ.
    *5,716 ಕೋಟಿ ಕಂದಾಯ ನಿರೀಕ್ಷೆ ಪಾಲಿಕೆ ವ್ಯಾಪ್ತಿಯ 20 ಲಕ್ಷ ಸ್ವತ್ತುಗಳ ಸರ್ವೇಗೆ ಪ್ರತ್ಯೇಕ ವಿಭಾಗ ಸ್ಥಾಪನೆ ಮಾಡಲಾಗುವುದು.
    *ಅನಧಿಕೃತ ಜಾಹೀರಾತಿಗೆ ಬ್ರೇಕ್ ಹಾಕಲು ಹೊಸ ನಿಯಮ ಜಾರಿ ಮಾಡಿದ್ದು, ಇದರಿಂದ 750 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

  • ಬಿಬಿಎಂಪಿ ಕಸದ ಲಾರಿಗೆ 10 ವರ್ಷದ ಬಾಲಕ ಬಲಿ – ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿದ ಜನ

    ಬಿಬಿಎಂಪಿ ಕಸದ ಲಾರಿಗೆ 10 ವರ್ಷದ ಬಾಲಕ ಬಲಿ – ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿದ ಜನ

    ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಸದ ಲಾರಿಗೆ (BBMP Garbage Truck) 10 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರಿನ (Bengaluru) ಥಣಿಸಂಧ್ರ ರೈಲ್ವೆ ಟ್ರ‍್ಯಾಕ್ ಬಳಿ ನಡೆದಿದೆ.

    ಐಮಾನ್ (10) ಮೃತ ಬಾಲಕ. 12 ಸುಮಾರಿಗೆ ಸ್ಕೂಲ್ ಅಡ್ಮಿಷನ್‌ ವಿಚಾರಿಸಲು ಮನೆಯಿಂದ ಹೊರಟಿದ್ರು. ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಬಾಲಕ ತೆರಳಿದ್ದ. ಈ ವೇಳೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲ್ಲಿದ್ದ ಬಾಲಕನ ತಂದೆಗೂ ಗಾಯಗಳಾಗಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದೃಶ್ಯಕಂಡು ರೊಚ್ಚಿಗೆದ್ದ ಸ್ಥಳೀಯರು ಕಸದ ಲಾರಿಗೆ ಬೆಂಕಿ ಹೆಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಬಿಬಿಎಂಪಿ (BBMP) ಕಸದ ಲಾರಿಗೆ ಥಣಿಸಂದ್ರದಲ್ಲಿ ಇದು 4ನೇ ಬಲಿಯಾಗಿದೆ. ಇದನ್ನೂ ಓದಿ: ಬೆಂಗಳೂರು| ಬಿಬಿಎಂಪಿ ಕಸದ ಲಾರಿಗೆ ಅಕ್ಕ-ತಂಗಿ ಬಲಿ

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಯಲಹಂಕ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಯಾರದ್ದು ತಪ್ಪು? ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ | ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – 16 ನಕ್ಸಲರ ಹತ್ಯೆ

    ಕಳೆದ ಮೂರು ತಿಂಗಳ ಹಿಂದೆಯಷ್ಟೇ ಧಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದ ಘಟನೆ ನಡೆದಿತ್ತು. ಇದನ್ನೂ ಓದಿ: 2ನೇ ಗಂಡನೊಂದಿಗೆ ನಂಟು -3ನೇ ಗಂಡನಿಂದ ಪತ್ನಿ ಸೇರಿ ನಾಲ್ವರ ಬಾಳಿಗೆ ಕತ್ತಿಯೇಟು

  • ಇಂದು ಬಿಬಿಎಂಪಿ ಬಜೆಟ್‌ ಮಂಡನೆ – ಪ್ರಸಕ್ತ ವರ್ಷ 6,000 ಕೋಟಿ ತೆರಿಗೆ ವಸೂಲಿಗೆ ಪ್ರಸ್ತಾವನೆ ಸಾಧ್ಯತೆ!

    ಇಂದು ಬಿಬಿಎಂಪಿ ಬಜೆಟ್‌ ಮಂಡನೆ – ಪ್ರಸಕ್ತ ವರ್ಷ 6,000 ಕೋಟಿ ತೆರಿಗೆ ವಸೂಲಿಗೆ ಪ್ರಸ್ತಾವನೆ ಸಾಧ್ಯತೆ!

    – 19,000 ಕೋಟಿ ಆಯವ್ಯಯ, ಬೆಟ್ಟದಷ್ಟು ನಿರೀಕ್ಷೆ!

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025 – 26ನೇ ಸಾಲಿನ ಬಜೆಟ್ (BBMP Budget 2025-26) ಇಂದು ಮಂಡನೆ ಆಗ್ತಿದೆ. 19,000 ಕೋಟಿ ರೂ. ಬಜೆಟ್ ಮಂಡಿಸಲು ತಯಾರಿ ಮಾಡಲಾಗಿದೆ.

    ಚುನಾಯಿತ ಪ್ರತಿನಿಧಿಗಳು ಇಲ್ಲದೇ 5ನೇ ಬಾರಿಗೆ ಬಿಬಿಎಂಪಿಯ ಅಧಿಕಾರಿಗಳು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ತುಷಾರ್ ಗಿರಿನಾಥ್ (tushar girinath) ಅಧ್ಯಕ್ಷತೆಯಲ್ಲಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ಭಾರೀ ನಿರೀಕ್ಷೆ ಇಡಲಾಗಿದೆ. 7 ಸಾವಿರ ಕೋಟಿ ರೂ. ರ್ಕಾರದಿಂದ ನಿರೀಕ್ಷೆ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗ್ತಿದೆ. ಟೌನ್ ಹಾಲ್‌ನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್ ಮಂಡನೆ ಮಾಡ್ತಿದ್ದು. ಈ ಭಾರೀ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳನ್ನ ಇಡಲಾಗಿದೆ.

    ಬಿಬಿಎಂಪಿ ಬಜೆಟ್ ನಿರೀಕ್ಷೆಗಳೇನು ?
    1. ರಸ್ತೆ ಗುಂಡಿ ಮುಕ್ತಿ, ನಗರದ ಸ್ವಚ್ಛತೆ, ಸುಗಮ ಸಂಚಾರ, ಹಸೀರಕರಣ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಸಿಗಲಿದೆ.
    2. ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹರಿಸುವ ಯೋಜನೆ ರೂಪಿಸಲಾಗಿದೆ.
    3. ಪೂರ್ವ ಮತ್ತು ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗದ ಸುರಂಗ ನಿರ್ಮಾಣದ ಯೋಜನೆ ಪ್ರಸ್ತಾಪ ಆಗಲಿದೆ.
    4. ರಸ್ತೆಗಳಲ್ಲಿ ನೀರು ನಿಲ್ಲದಂತೆ ಪ್ರವಾಹ ನಿಯಂತ್ರಣಕ್ಕೆ ಯೋಜನೆ ರೂಪಿಸುವ ಸಾಧ್ಯತೆ.
    5. ಇಂದಿರಾ ಕ್ಯಾಂಟೀನ್ ಗೆ ಹೆಚ್ಚಿನ ಅನುದಾನ.. ಹೆಚ್ಚುವರಿಯಾಗಿ 52 ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣ ಸಾಧ್ಯತೆ.
    6. ಪ್ರತಿ ವಿಧಾನಸಭ ಕ್ಷೇತ್ರಕ್ಕೆ ಅಂಬ್ಯೂಲೆನ್ಸ್ ಘೋಷಣೆ ಸಾಧ್ಯತೆ.
    7. ಬಿಬಿಎಂಪಿ 20 ಆಸ್ಫತ್ರೆ ಗಳನ್ನ ಮೇಲ್ದರ್ಜೆಗೆ ಏರಿಸಲಿದ್ದಾರೆ.
    8. ಬಿಬಿಎಂಪಿ ಶಾಲೆ.ಕಾಲೇಜು ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ.. ಪ್ರತಿ ಶಾಲೆ.ಕಾಲೇಜು ಗಳಿಗೂ ಮೂಲಭೂತ ಸೌಕರ್ಯ ವ್ಯವಸ್ಥೆ.
    9. ಸರ್ಕಾರದ ಸಹಭಾಗಿತ್ವದಲ್ಲಿ ಬೃಹತ್ ಕಾಮಗಾರಿಗಳ ನಿರ್ಮಾಣಕ್ಕೆ ನಿಗಮ ಸ್ಥಾಪನೆ ಸಾಧ್ಯತೆ
    10. ನಗರದ ಟ್ರಾಫಿಕ್ ಕಂಟ್ರೋಲ್‌ಗೆ ಪ್ಲೈಓವರ್.. ಟನಲ್ ರಸ್ತೆ, ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ.
    11. ಮಳೆಗಾಲದಲ್ಲಿ ರಾಜಕಾಲುವೆ ನೀರು ರಸ್ತೆಗೆ ಬರದಂತೆ ತಡೆಗೋಡೆ ನಿರ್ಮಾಣ.
    12. ಮೆಟ್ರೋ ನಿಗಮದ ಜೊತೆ ಸೇರಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಸಾಧ್ಯತೆ.
    13. ಸಾರ್ವಜನಿಕರಿಗೆ ತೆರಿಗೆ ಕಟ್ಟಲು ದಿನದ 24 ಗಂಟೆ ಅನ್ ಲೈನ್ ವ್ಯವಸ್ಥೆ.
    14. ಪ್ರಸಕ್ತ ವರ್ಷ 6 ಸಾವಿರ ಕೋಟಿ ತೆರಿಗೆ ವಸೂಲಿಗೆ ಪ್ರಸ್ತಾವನೆ ಸಾಧ್ಯತೆ
    15. ಮಳೆಗಾಲದಲ್ಲಿ ಒಣಗಿದ ಮರ.ಕೊಂಬೆಗಳ ತೆರವಿಗೆ ಹೆಚ್ಚಿನ ಅನುದಾನ. ಮಳೆಗಾಲದಲ್ಲಿ ಒಣಗಿದ ಮರ.ಕೊಂಬೆಗಳ ತೆರವಿಗೆ ಹೆಚ್ಚುವರಿ ಸಿಬ್ಬಂದಿಗಳ ನೇಮಕ.

  • ಮಾ.27ಕ್ಕೆ ಬಿಬಿಎಂಪಿ ಬಜೆಟ್ – ಡಿಕೆಶಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

    ಮಾ.27ಕ್ಕೆ ಬಿಬಿಎಂಪಿ ಬಜೆಟ್ – ಡಿಕೆಶಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

    ಬೆಂಗಳೂರು: ಮಾರ್ಚ್ 27ಕ್ಕೆ ಬಿಬಿಎಂಪಿ ಬಜೆಟ್ (BBMP Budget) ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.

    ಸಭೆ ಮುಗಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ನಗರದ ಶಾಸಕರು, ಸಂಸದರು ಸೇರಿದಂತೆ ಚುನಾಯಿತ ಸದಸ್ಯರ ಸಲಹೆ ಪಡೆದಿದ್ದೇವೆ. ಬಜೆಟ್ ಗಾತ್ರದ ಬಗ್ಗೆ ಅನೇಕರು ಸಲಹೆ ಕೊಟ್ಟಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದಿದ್ದೇನೆ. ಇಂಡಿಪೆಂಡೆಂಟ್ ಆಗಿ ಕಮಿಷನರ್ ಬಜೆಟ್ ಮಂಡನೆ ಮಾಡುತ್ತಾರೆ ಎಂದರು. ಇದನ್ನೂ ಓದಿ: Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

    ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಏನು ಹೇಳಿಲ್ಲ. ಬಿಜೆಪಿ ಅವರು ತಿರುಚುತ್ತಿದ್ದಾರೆ. ನನ್ನ ಹೇಳಿಕೆ ಬೇಕಿದ್ರೆ ತೆಗೆದು ನೋಡಿ. ನಾನು ಅಸೆಂಬ್ಲಿಗೆ ಬಂದು 36 ವರ್ಷಗಳು ಆಗಿವೆ. ನನ್ನ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪ ಮಾಡಿರೋರಿಗೆ ಪಾಪ ಅರ್ಥ ಆಗಿಲ್ಲ ಅನ್ನಿಸುತ್ತದೆ. ನನ್ನ ಭಾಷೆ, ನನ್ನ ಮಾತು, ನನ್ನ ವಿಚಾರ ನಾನು ಅಸೆಂಬ್ಲಿಯಲ್ಲೇ ಇರಲಿಲ್ಲ. ಬಿಲ್ ಮಂಡನೆ ಮಾಡಿದಾಗ ನಾನು ಅಸೆಂಬ್ಲಿಯಲ್ಲಿ ಇರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಚಿವರು, ಶಾಸಕರಿಂದ ಫೋನ್ ಟ್ಯಾಪಿಂಗ್ ಆರೋಪ, ಸಿಎಂಗೆ ದೂರು – ನನಗೆ ಗೊತ್ತಿಲ್ಲ: ಪರಮೇಶ್ವರ್

    ಸಭೆ ಅಲ್ಲದೆ ಹೊರಗಡೆಯೂ ನಾನು ಎಲ್ಲೂ ಹೇಳಿಕೆ ಕೊಡಲಿಲ್ಲ. ರಾಷ್ಟ್ರೀಯ ಮಾಧ್ಯಮದಲ್ಲಿ ಭಾಗವಹಿಸಿದ ವೇಳೆಯೂ ನಾನು ಬದಲಾವಣೆ ಬಗ್ಗೆ ಮಾತನಾಡಿಲ್ಲ. 4% ಮೀಸಲಾತಿ ವಿಚಾರ ನಾನು ಪ್ರಸ್ತಾಪ ಮಾಡಿಯೇ ಇಲ್ಲ. ಸಂವಿಧಾನ ತಂದಿರೋರು ನಾವು, ಸಂವಿಧಾನ ರಕ್ಷಣೆ ಮಾಡೋರು ನಾವು. ಎಲ್ಲರಿಗೂ ನ್ಯಾಯ ಒದಗಿಸುವ ಬದ್ಧತೆ ನಮಗೆ ಇದೆ. ಅದರಂತೆ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ, ಬೇಸಿಗೆಯಲ್ಲೂ ತೊಂದರೆಯಾಗಲ್ಲ: ಕೆಪಿಟಿಸಿಎಲ್ ಎಂಡಿ

    ಈ ಹೇಳಿಕೆ ಬಗ್ಗೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಮ್ಮ ಪಾರ್ಟಿ ಅವರು ಕೇಳಿದ್ದಾರೆ. ನಾನು ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಟ್ವೀಟ್ ಕೂಡಾ ಮಾಡಿದ್ದೇನೆ. ಅದಕ್ಕೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಬಿಜೆಪಿ ಅವರು ಏನಾದರೂ ಹೇಳೋದು ಇದ್ದರೆ ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ದೂರು ಕೊಡಲಿ ಎಂದರು. ಇದನ್ನೂ ಓದಿ: IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌- ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

  • ಬೆಂಗಳೂರು | ಮಳೆಗೆ ಬೈಕ್ ಮೇಲೆ ಬಿದ್ದ ಮರ – ಮೂರು ವರ್ಷದ ಮಗು ಸಾವು

    ಬೆಂಗಳೂರು | ಮಳೆಗೆ ಬೈಕ್ ಮೇಲೆ ಬಿದ್ದ ಮರ – ಮೂರು ವರ್ಷದ ಮಗು ಸಾವು

    ಬೆಂಗಳೂರು: ನಗರದಲ್ಲಿ (Bengaluru) ಸಂಜೆ ಸುರಿದ ಮಳೆಗೆ (Rain) ಮರ ಬೈಕ್ (Bike) ಮೇಲೆ ಮುರಿದು ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಜೀವನಹಳ್ಳಿಯ ಪೂರ್ವ ಪಾರ್ಕ್ ಬಳಿ ನಡೆದಿದೆ.

    ಮೃತ ಮಗುವನ್ನು ರಕ್ಷಾ ಎಂದು ಗುರುತಿಸಲಾಗಿದೆ. ತಂದೆಯ ಜೊತೆ ಮಗು ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮರ ಬಿದ್ದು ಮಗುವಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಮಗುವನ್ನು ಫೋಷಕರು ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

    ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.