Tag: bbmp

  • ಸರ್ಕಾರಿ ಸಂಸ್ಥೆಗಳಿಂದಲೇ ಸಾವಿರಾರು ಕೋಟಿ ಕರೆಂಟ್ ಬಿಲ್ ಬಾಕಿ – BBMP ಮೇಲೆ ಬೆಸ್ಕಾಂ ಅಧಿಕಾರಿಗಳು ಗರಂ

    ಸರ್ಕಾರಿ ಸಂಸ್ಥೆಗಳಿಂದಲೇ ಸಾವಿರಾರು ಕೋಟಿ ಕರೆಂಟ್ ಬಿಲ್ ಬಾಕಿ – BBMP ಮೇಲೆ ಬೆಸ್ಕಾಂ ಅಧಿಕಾರಿಗಳು ಗರಂ

    ಬೆಂಗಳೂರು: ಬೆಸ್ಕಾಂ (BESCOM) ಪಾಡು ಹೇಳತೀರದ್ದಾಗಿದೆ. ಅತ್ತ ಗೃಹಜ್ಯೋತಿ ಯೋಜನೆ (GruhaJyoti Scheme) ಜಾರಿಯಾದ ಮೇಲೆ ಜನರು ಕರೆಂಟ್ ಬಿಲ್ ಕಟ್ತಿಲ್ಲ. ಇತ್ತ BBMP ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳೂ ಸಾವಿರಾರು ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿವೆ. ಜನರಿಗೆಲ್ಲಾ ಬುದ್ಧಿ ಹೇಳೋ ಬಿಬಿಎಂಪಿಯೇ 800 ಕೋಟಿಗೂ ರೂ.ಗಿಂತ ಅಧಿಕ ಬಿಲ್ ಬಾಕಿ ಉಳಿಸಿಕೊಂಡಿದೆ.

    ಗೃಹಜ್ಯೋತಿ ಜಾರಿಯಾದ ಮೇಲೆ ಮತ್ತಷ್ಟು ಸಮಸ್ಯೆಗಳ ಸುಳಿಗೆ ಬೆಸ್ಕಾಂ ಸಿಲುಕಿಕೊಂಡಂತಿದೆ. ಒಂದುಕಡೆ ಜನರು ಕರೆಂಟ್ ಬಿಲ್ ಕಟ್ಟೋಕೆ ಮೀನಮೀಷ ಎಣಿಸಿದ್ರೆ, ಇತ್ತ ಸರ್ಕಾರಿ ಸಂಸ್ಥೆಗಳೂ ಕರೆಂಟ್ ಬಿಲ್ ಕಟ್ಟದೇ ಕಳ್ಳಾಟ ಆಡ್ತಿದೆ. ಅದರಲ್ಲೂ ತೆರಿಗೆ, ದಂಡ, ಶುಲ್ಕ ಅಂತ ಜನರ ಪ್ರಾಣ ತೆಗೆಯೋ ಬಿಬಿಎಂಪಿಯೇ ನೂರಾರು ಕೋಟಿ ರೂಪಾಯಿ ಬೆಸ್ಕಾಂಗೆ ಕರೆಂಟ್ (Electricity Bill) ಬಾಕಿ ಉಳಿಸಿಕೊಂಡಿದೆ ಎಂದರೆ ನೀವು ನಂಬಲೇ ಬೇಕು.

    ಹೌದು, ಬಿಬಿಎಂಪಿ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಸಂಸ್ಥೆಗಳು ಕೆಲವು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಿಲ್ಲ. ಇದರಿಂದ ಬೆಸ್ಕಾಂಗೆ 6,374 ಕೋಟಿ ರೂಪಾಯಿ ಬಿಲ್ ಬರುವುದು ಬಾಕಿ ಇದೆ. ಇದನ್ನೂ ಓದಿ: ಇಂದಿನಿಂದ ಬೆಳಗಾವಿ ಅಧಿವೇಶನ – ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ BJP-JDS ಸಜ್ಜು

    ಬೆಸ್ಕಾಂಗೆ ಸರ್ಕಾರಿ ಸಂಸ್ಥೆಗಳೇ ಹೊರೆ: ಬೆಸ್ಕಾಂಗೆ ಸರ್ಕಾರಿ ಸಂಸ್ಥೆಗಳೇ ಹೆಚ್ಚಿನ ಹೊರೆಯಾಗಿದೆ. ಪ್ರತಿಷ್ಠಿತ ಸಂಸ್ಥೆಗಳೇ ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿ, ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ, ಸಣ್ಣ ಮತ್ತು ದೊಡ್ಡ ನೀರಾವರಿ ಇಲಾಖೆ, ಇತರೆ ಸರ್ಕಾರಿ ಸಂಸ್ಥೆಗಳಿಂದ ಒಟ್ಟು 6,000 ಕೋಟಿ ರೂ. ಗಿಂತ ಅಧಿಕ ಬಿಲ್ ಬಾಕಿ ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯಾವ ಸಂಸ್ಥೆ – ಎಷ್ಟು ಬಾಕಿ?
    ಬಿಬಿಎಂಪಿ : 820 ಕೋಟಿ ರೂ.
    ಜಲಮಂಡಳಿ : 495 ಕೋಟಿ ರೂ.
    ನಗರಾಭಿವೃದ್ಧಿ ಇಲಾಖೆ : 113 ಕೋಟಿ ರೂ.
    ಸಣ್ಣ & ದೊಡ್ಡ ನೀರಾವರಿ ಇಲಾಖೆ : 51 ಕೋಟಿ ರೂ.
    ಇತರೆ ಸರ್ಕಾರಿ ಸಂಸ್ಥೆಗಳು : 4,885 ಕೋಟಿ ರೂ.
    ಒಟ್ಟು : 6,374 ಕೋಟಿ

    ಬೆಸ್ಕಾಂಗೆ ಬಿಬಿಎಂಪಿ 820 ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಇಟ್ಟಿದೆ. ಬಿಬಿಎಂಪಿಗೆ ಹಲವು ಬಾರಿ ನೋಟೀಸ್ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೇಲಿನ ಹೊರೆ ತಪ್ಪಿಸಲು ನಾವು ಅನಿವಾರ್ಯವಾಗಿ ವಸೂಲಿ ಮಾಡಲೇಬೇಕಾದ ಸ್ಥಿತಿಗೆ ಬಂದಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್

  • ಬಿಗ್‍ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‍ಗೆ ಸಂಕಷ್ಟ..!

    ಬಿಗ್‍ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‍ಗೆ ಸಂಕಷ್ಟ..!

    ಬಿಗ್‍ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್‍ಗೆ ಸಂಕಷ್ಟ ಎದುರಾಗಿದೆ. ಕ್ವಾರಂಟೈನ್ ಕಹಾನಿ ಹೇಳಿಕೊಂಡು ಡ್ರೋನ್ ಪ್ರತಾಪ್ (Drone Prathap) ಬಿಬಿಎಂಪಿ ನೋಡಲ್ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

    ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್‍ಸ್ಟೇಬಲ್ ಅಂತಾ ಸಹಿ ಮಾಡುವಂತೆ ತಲೆತಲೆಗೆ ಹೊಡೆದು ಕಿರುಕುಳ ಕೊಟ್ಟರು. ಹೋಟೆಲ್‍ನಿಂದ ಕೆಳಗೆ ಬಂದ್ಮೇಲೆ ನನಗೆ ಏನೇನು ಮಾಡಿದ್ರೋ, ಅದನ್ನ ಸ್ವಲ್ಪ ಹೇಳಿದೆ. ಇವ್ನು ಹೇಗಿದ್ರೂ ಸುಳ್ಳು ಹೇಳ್ತಾನೆ. ಇವ್ನು ಹೇಳೋದೇ ಸುಳ್ಳು.. ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಕಳುಹಿಸಿದರು. ಕ್ವಾರಂಟೈನ್‍ನಲ್ಲಿ ಮಾನಸಿಕ ಹಿಂಸೆ ಕೊಟ್ರು, ಹುಚ್ಚ ಅಂತಾ ಪೇಪರ್ ಗೆ ಸಹಿಹಾಕು ಅಂತಾ ಹೇಳಿದ್ರು ಎಂದು ಡ್ರೋನ್ ಪ್ರತಾಪ್ ಆರೋಪ ಮಾಡಿದ್ರು.

    ಕ್ಷಮೆ ಕೇಳದಿದ್ದರೆ ಕೇಸ್: ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ಕಾರ್ಯನಿರ್ವಹಿಸಿದ್ದೆ. ಇಡೀ ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಾನೇ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಆದರೆ ಈತ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ಆತನಿಗೆ ನಾನು ಯಾವುದೇ ಮಾನಸಿಕ ಹಿಂಸೆ ಕೊಟ್ಟಿಲ್ಲ. ಆತನ ತಲೆಯ ಮೇಲೆ ಹೊಡೆದಿಲ್ಲ. ಪ್ರತಾಪ್ ಮಹಾನ್ ಸುಳ್ಳುಗಾರ, ಈತ ಹೇಳುವ ಮಾತಿಗೆ ಒಂದೇ ಒಂದು ಸಾಕ್ಷ್ಯ ಒದಗಿಸಲಿ. ಆತನ ಆರೋಪ ನಿಜವಾಗಿದ್ದರೆ ನಾನು ರಾಜೀನಾಮೆ ಕೊಟ್ಟು ಹೊರಟು ಹೋಗುತ್ತೇನೆ ಎಂದು ಬಿಬಿಎಂಪಿ (BBMP) ನೋಡಲ್ ಅಧಿಕಾರಿ ಹೇಳಿದ್ದಾರೆ.  ಇದನ್ನೂ ಓದಿ: Breaking: ಮೈಕಲ್ ಉಳಿಸೋಕೆ ಎಲಿಮಿನೇಷನ್ ಕ್ಯಾನ್ಸಲ್ ಮಾಡಿದ್ರಾ ಸುದೀಪ್?: ಇಲ್ಲಿದೆ ಇನ್ ಸೈಡ್ ಸ್ಟೋರಿ

    ಆತನ ವೈಯಕ್ತಿಕ ವಿಚಾರ…. ತಂಗಿ, ಮದುವೆ, ತಾಯಿ ಯಾವುದೂ ನಾನು ಮಾತಾನಾಡಿಲ್ಲ. ಪ್ರತಾಪ್ ತಂದೆ ಬಹಳ ಒಳ್ಳೆಯವರು. ಬೇಕಾದ್ರೇ ಅವರನ್ನು ಕೇಳಲಿ. ಇದುವರೆಗೆ ಆತನಿಗೆ ಹಿಂಸೆ ಆಗಿದ್ದರೆ ಯಾಕೆ ನನ್ನ ವಿರುದ್ಧ ದೂರು ಕೊಡಲಿಲ್ಲ..?. ಆತನ ಮನೆಯ ವಾಚ್ ಮ್ಯಾನ್ ಇದ್ದ. ನಾವು ಅಪಾರ್ಟ್‍ಮೆಂಟ್ ಬೀಗ ಒಡೆದಿಲ್ಲ. ಪ್ರತಾಪ್ ಸುಳ್ಳು ಹೇಳ್ಕೊಂಡು ಟೋಪಿ ಹಾಕೋನು. ಆತನನ್ನು ಒಳ್ಳೆ ಹೋಟೆಲ್‍ನಲ್ಲಿ ಇರಿಸಿ ಉತ್ತಮ ಊಟ ಕೊಟ್ಟು ಇರಿಸಿದ್ದೇವೆ. ಇನ್ನೆರಡು ದಿನದಲ್ಲಿ ಕ್ಷಮೆಯಾಚನೆ ಮಾಡದೇ ಇದ್ರೇ ಕಾನೂನು ಹೋರಾಟ ಮಾಡುತ್ತೇನೆ. ಬಿಗ್ ಬಾಸ್ ವೇದಿಕೆಯಲ್ಲಿ ಕ್ಷಮೆಯಾಚನೆ ಮಾಡದೆ ಇದ್ರೇ ಮಾನನಷ್ಟ ಮೊಕದ್ದಮೆ ಹಾಕ್ತೇನೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.

  • ಬೆಂಗ್ಳೂರಿನಲ್ಲೂ ಆತಂಕ ಹುಟ್ಟಿಸಿದ ಚೀನಾದ ಹೊಸ ವೈರಸ್ – BBMP ಫುಲ್ ಅಲರ್ಟ್!

    ಬೆಂಗ್ಳೂರಿನಲ್ಲೂ ಆತಂಕ ಹುಟ್ಟಿಸಿದ ಚೀನಾದ ಹೊಸ ವೈರಸ್ – BBMP ಫುಲ್ ಅಲರ್ಟ್!

    – ಪಾಲಿಕೆಯಿಂದ ಚಿಕ್ಕ ಮಕ್ಕಳಿಗೆ ನ್ಯುಮೋನಿಯಾ ಲಸಿಕೆ ವಿತರಣೆ
    – ಆಸ್ಪತ್ರೆಗಳ ಮೇಲೆ ಹದ್ದಿನ ಕಣ್ಣಿಡಲು ಸೂಚನೆ

    ಬೆಂಗಳೂರು: ಚೀನಾದಲ್ಲಿ ಹೊಸ ನ್ಯುಮೋನಿಯಾ ಮಾದರಿಯ ವೈರಸ್ ಪತ್ತೆಯಾಗಿದ್ದು, ವಿಶ್ವವನ್ನೇ ಆತಂಕಕ್ಕೆ ದೂಡಿದೆ. ಕೇಂದ್ರ ಸರ್ಕಾರ ಕೂಡ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಸ್ಪತ್ರೆಗಳ ಸೌಲಭ್ಯ ಪರಿಶೀಲಿಸುವಂತೆ ಸೂಚನೆ ನೀಡಿದೆ. ಈ ಮಧ್ಯೆ ಬಿಬಿಎಂಪಿ ಕೂಡ ಕಟ್ಟೆಚ್ಚರ ವಹಿಸಲು ಮುಂದಾಗಿದ್ದು, ಖಾಸಗಿ ಆಸ್ಪತ್ರೆಗಳಿಂದಲೂ ಮಾಹಿತಿ ನೀಡುವಂತೆ ಕೇಳಿದೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್‌ ವಾರ್ನಿಂಗ್‌

    ಕೊರೊನಾ ಬಳಿಕ ಚೀನಾದಲ್ಲಿ ನ್ಯುಮೋನಿಯಾ ಮಾದರಿ ಜ್ವರ ಕಾಣಿಸಿಕೊಳ್ತಿದೆ. ಅದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನಾದಿಂದ ವರದಿ ತರಿಸಿಕೊಂಡಿದೆ. ಇದರಿಂದ ಆತಂಕ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ಕೂಡ ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಈಗಾಗಲೇ ಕೋವಿಡ್ ಸಾಂಕ್ರಾಮಿಕ ಕಾಲವನ್ನ ಎದುರಿಸಿರುವ ಬಿಬಿಎಂಪಿ ನ್ಯುಮೋನಿಯಾ ಮಾದರಿಯ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಆಸ್ಪತ್ರೆಗಳು ಮತ್ತು ನಗರ ಪ್ರಾಥಮಿಕ ಚಿಕಿತ್ಸಾ ಕೇಂಗಳಲ್ಲಿ ನಿಗಾ ವಹಿಸುವಂತೆ ನಿಗಾವಹಿಸುವಂತೆ ಸೂಚನೆ ನೀಡಿದೆ.

    ಸದ್ಯ ಚಳಿಗಾಲ ಆಗಿರುವುದರಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ ನ್ಯುಮೋನಿಯಾ ಖಾಯಿಲೆಯಿಂದ ಬಳಲುವ ಮಕ್ಕಳ ವರದಿ ಕೇಳುತ್ತಿದೆ. ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆಯೇ ರೇಪ್ ಮಾಡಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ 40 ವರ್ಷ ಜೈಲು ಶಿಕ್ಷೆ

    ಆಸ್ಪತ್ರೆಗೆ ಬಿಬಿಎಂಪಿ ಸೂಚನೆ ಏನು?
    * ನ್ಯುಮೋನಿಯಾ ಅಂತ ದಾಖಲಾದ ಮಕ್ಕಳ ವರದಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
    * ಖಾಸಗಿ ಆಸ್ಪತ್ರೆಯವರು ನ್ಯುಮೋನಿಯಾ ಕಾಯಿಲೆ ಅಂತ ದಾಖಲಾಗುವ ಮಕ್ಕಳ ವರದಿ ನೀಡಬೇಕು
    * 3 ತಿಂಗಳು, 9 ತಿಂಗಳು, ಒಂದೂವರೆ ವರ್ಷ ಮಗುವಿಗೆ ನ್ಯುಮೋನಿಯಾ ಲಸಿಕೆ ಹಾಕಲು ಸೂಚನೆ
    * ಪ್ರತಿ ಮಗುವಿಗೂ ನ್ಯುಮೋನಿಯಾ ಲಸಿಕೆಯನ್ನ ಕಡ್ಡಾಯವಾಗಿ ಹಾಕಿಸಬೇಕು
    * ಕೆಸಿ ಜನರಲ್, ಬೌರಿಂಗ್, ಯಲಹಂಕ ಜನರಲ್ ಆಸ್ಪತ್ರೆ ಮೇಲೆ ನಿಗಾ ಇಡಲು ಆರೋಗ್ಯಾಧಿಕಾರಿಗಳಿಗೆ ಸೂಚನೆ
    * ಮಕ್ಕಳ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೂಚನೆ.

  • ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿಧನ

    ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿಧನ

    ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ (Ambikapati) ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

    ಕಳೆದ ತಿಂಗಳು ಅಂಬಿಕಾಪತಿ ನಿವಾಸಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಐಟಿ ರೇಡ್ (IT Raid) ವೇಳೆ ಅಂಬಿಕಾಪತಿ ಮನೆಯಲ್ಲಿ ಬರೋಬ್ಬರಿ 44 ಕೊಟಿ ರೂ. ಪತ್ತೆಯಾಗಿತ್ತು. ಈ ಘಟನೆಯಾದ ತಿಂಗಳಲ್ಲೇ ಅಂಬಿಕಾಪತಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ತಮ್ಮ ಮನೆಯಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾದ ಬಳಿಕ ಅಂಬಿಕಾಪತಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಹೃದಯಾಘಾತಕ್ಕೆ ಒಳಗಾಗಿ ಅಂಬಿಕಾಪತಿ ನಿಧನರಾಗಿದ್ದಾರೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ದುಬೈ ಪ್ರಯಾಣಕ್ಕೆ ಡಿಕೆಶಿಗೆ ಕೋರ್ಟ್ ಅನುಮತಿ

    ಇದೀಗ ಅಂಬಿಕಾಪತಿ ಮೃತದೇಹವನ್ನು ಕುಟುಂಬಸ್ಥರು ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ದಿದ್ದಾರೆ. ಇದನ್ನೂ ಓದಿ: ಮಂಗಳವಾರ ನಿಗಮ ಮಂಡಳಿ ಪಟ್ಟಿ ಫೈನಲ್‌ ಸಾಧ್ಯತೆ

  • ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪಾಲಿಕೆ ಪ್ಲ್ಯಾನ್ – ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ

    ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪಾಲಿಕೆ ಪ್ಲ್ಯಾನ್ – ಅಂಡರ್‌ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಪಾಲಿಕೆ

    ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್  (Traffic) ಸಮಸ್ಯೆ ಜಾಸ್ತಿ ಆಗುತ್ತಿದೆ. ಯಾವ ಭಾಗಕ್ಕೆ ಹೋದರೂ ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ಬಿಬಿಎಂಪಿ (BBMP) ಟ್ರಾಫಿಕ್ ಸ್ಪಾಟ್‌ಗಳನ್ನು ಗುರುತಿಸಿ ಸರ್ವೆಗೆ ಮುಂದಾಗಿದೆ. ಸರ್ವೆ ನಡೆಸಲು ಟೆಂಡರ್ ಕರೆದಿದೆ. ಸರ್ವೆ ಮುಗಿದ ಬಳಿಕ 12 ಕಡೆ ಮೇಲ್ಸೇತುವೆ ಅಂಡರ್ ಪಾಸ್ (Underpass) ನಿರ್ಮಾಣಕ್ಕೆ ಮುಂದಾಗಿದೆ.

    ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಸಂಚಾರ ದಟ್ಟಣೆ ಬಗ್ಗೆ ಚರ್ಚೆ ಆಗುತ್ತಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಈಗಾಗಲೇ ಹಲವಾರು ಕ್ರಮಗಳನ್ನು ಜರುಗಿಸಿದ್ದಾರೆ. ಈಗ ಮತ್ತೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಬಿಬಿಎಂಪಿ ನಗರದಲ್ಲಿ ಸರ್ವೆ ನಡೆಸಲು ಮುಂದಾಗಿದೆ. ಖಾಸಗಿ ಸಂಸ್ಥೆಗೆ ಟೆಂಡರ್ ನೀಡಿ ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಪರಿಹಾರ ಏನು ಎಂಬುದನ್ನು ವರದಿ ನೀಡಲು ಸೂಚಿಸಿದೆ. ಶೀಘ್ರದಲ್ಲೇ ಸರ್ವೆ ಆರಂಭ ಆಗಲಿದೆ. ಇದನ್ನೂ ಓದಿ: ಹಣ ಲಪಟಾಯಿಸಿದ್ರೂ ಬಿಡದಿ ಇನ್ಸ್‌ಪೆಕ್ಟರ್‌ ಸಸ್ಪೆಂಡ್ ಯಾಕಿಲ್ಲ?- ಭ್ರಷ್ಟನಿಗೆ ರಾಜಕೀಯ ರಕ್ಷಣೆ ಎಂದ ಮಾಜಿ ಶಾಸಕ

    ಟ್ರಾಫಿಕ್ ಜಾಮ್ ಆಗುವ ರಸ್ತೆಯಲ್ಲಿ ದಿನಕ್ಕೆ ಎಷ್ಟು ವಾಹನ ಓಡಾಡುತ್ತಿವೆ. ಟ್ರಾಫಿಕ್ ಜಾಮ್ ಆಗಲಿಕ್ಕೆ ಕಾರಣ ಹುಡುಕಬೇಕಿದೆ. ಎಲ್ಲೆಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ಫ್ಲೈಓವರ್ ನಿರ್ಮಾಣ ಮಾಡಬೇಕು ಎಂದು ವರದಿ ನಿರ್ಧಾರ ಮಾಡಲಿದ್ದಾರೆ. ಈಗಾಗಲೇ ಗೊರಗುಂಟೆಪಾಳ್ಯ, ತುಮಕೂರು ರಸ್ತೆ, ಸ್ಯಾಂಡಲ್‌ಸೋಪ್ ಫ್ಯಾಕ್ಟರಿ, ಹೆಬ್ಬಾಳ, ಟಿನ್ ಫ್ಯಾಕ್ಟರಿ, ಸಿಲ್ಕ್ ಬೋರ್ಡ್ ಈ ಭಾಗಗಳಲ್ಲಿ ಫ್ಲೈಓವರ್ ಇದ್ದರೂ ಟ್ರಾಫಿಕ್ ಜಾಮ್ ಆಗುತ್ತಿದೆ. ಇದಕ್ಕೆ ಸೂಕ್ತ ಕಾರಣ ಪತ್ತೆ ಹಚ್ಚಿ ಪರಿಹಾರ ಏನು ಎಂದು ಕಂಡುಕೊಂಡು ವರದಿ ನೀಡಲಿದ್ದಾರೆ. ಇದನ್ನೂ ಓದಿ: ಮಡಿಕೇರಿಯ ಈ ಗ್ರಾಮದ 30 ಯುವಕರಿಗಿಲ್ಲ ಕಂಕಣ ಭಾಗ್ಯ

    ಬಿಬಿಎಂಪಿ ಟ್ರಾಫಿಕ್ ಜಾಮ್ ಬಗ್ಗೆ ಸರ್ವೆ ನಡೆಸಲು ಮುಂದಾಗಿದ್ದು, ಸರ್ವೆ ಆದ ಬಳಿಕ ಎಲ್ಲೆಲ್ಲಿ ಅಂಡರ್ ಪಾಸ್ ನಿರ್ಮಾಣ, ಮತ್ತೆ ಫ್ಲೈಓವರ್ ನಿರ್ಮಾಣ ಮಾಡಲಿದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

  • ಕಂಬಳ ಆಯೋಜಕರಿಗೆ ಶಾಕ್- ಠಾಣೆ ಮೆಟ್ಟಿಲೇರಿದ ಬಿಬಿಎಂಪಿ

    ಕಂಬಳ ಆಯೋಜಕರಿಗೆ ಶಾಕ್- ಠಾಣೆ ಮೆಟ್ಟಿಲೇರಿದ ಬಿಬಿಎಂಪಿ

    ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿ ಕಂಬಳ (Kambala) ಆಯೋಜನೆ ಮಾಡಿದ್ದು, ಈ ನಡುವೆ ಬೃಹತ್ ಬೆಂಗಳೂರು ಮಹಾಮನಗರ ಪಾಲಿಕೆ (BBMP) ಆಯೋಜಕರಿಗೆ ಶಾಕ್ ನೀಡಿದೆ.

    ಇತಿಹಾಸ ಪ್ರಸಿದ್ಧ ಕರಾವಳಿ ಕಂಬಳ ಉತ್ಸವಕ್ಕೆ ಶುಭ ಕೋರಿ ಅರಮನೆ ಮೈದಾನದ (Palace Ground) ಮುಂದೆ ಹಾಗೂ ಬಳ್ಳಾರಿ ರಸ್ತೆಯ ಪಕ್ಕದಲ್ಲಿ ಫ್ಲೆಕ್ಸ್ ಹಾಕಲಾಗಿತ್ತು. ಈ ಸಂಬಂಧ ಬಿಬಿಎಂಪಿಯು ಸದಾಶಿವನಗರ ಠಾಣೆಗೆ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅರಮನೆ ಮೈದಾನದ ಸುತ್ತಮುತ್ತ ಹಾಕಿರುವ ಬ್ಯಾನರ್ ತೆರವುಗೊಳಿಸಲಾಗಿದೆ. ಅಲ್ಲದೆ ಬಿಬಿಎಂಪಿಯು ಆಯೋಜಕರಿಗೆ 50 ಸಾವಿರ ದಂಡ ವಿಧಿಸಲಿದೆ.

    ಇದೇ ಮೊದಲ ಬಾರಿಗೆ ಕರಾವಳಿ ಕಂಬಳಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. ಎರಡು ದಿನಗಳ ನಡೆಯಲಿರುವ ಕಂಬಳ ಉತ್ಸವದಲ್ಲಿ 200 ಜೋಡಿ ಕೋಣಗಳು ಕಮಾಲ್ ಮಾಡಲಿವೆ. ಶನಿವಾರ ಹಾಗೂ ಭಾನುವಾರ ನಡೆಯುತ್ತಿದ್ದರಿಂದ ಹಾಗೂ ಕಂಬಳ ವೀಕ್ಷಿಸಲು ಪ್ರವೇಶ ಉಚಿತವಾಗಿದೆ. ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕಂಬಳ : ಮೊದಲ ಕೆರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜಕುಮಾರ್

     

  • ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ – ಡಿಕೆಶಿಗೆ ಪ್ರಸ್ತಾವನೆ ಸಲ್ಲಿಕೆ

    ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ – ಡಿಕೆಶಿಗೆ ಪ್ರಸ್ತಾವನೆ ಸಲ್ಲಿಕೆ

    ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು‌ (Brand Bengaluru) ಹೆಸರಲ್ಲಿ ಬಿಬಿಎಂಪಿ (BBMP) ಪಾಲಿಕೆ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ನಗರದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಸಸ್ಯಕಾಶಿ ತಲೆ ಎತ್ತಲಿದೆ.

    ಗಾರ್ಡನ್ ಸಿಟಿಯಲ್ಲಿ ಸುಮಾರು 150 ಎಕರೆ ವಿಸ್ತೀರ್ಣದ ಸಸ್ಯತೋಟ (Plantation) ನಿರ್ಮಿಸಲು ಬಿಬಿಎಂಪಿ ಪ್ಲಾನ್ ಮಾಡಿದೆ. ಈಗಾಗಲೇ ಸಸ್ಯಕಾಶಿ ನಿರ್ಮಾಣಕ್ಕೆ ಅರಣ್ಯ ಇಲಾಖೆ (Forest Department) ಬ್ಲೂ ಪ್ರಿಂಟ್ (Blue Print) ರೆಡಿ ಮಾಡಿದೆ. ಬೆಂಗಳೂರಿನ ಹೊರಭಾಗದಲ್ಲಿ ಸಸ್ಯಕಾಶಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಯಲಹಂಕ (Yelahanka) ಬಳಿ ಬಿಬಿಎಂಪಿ 150 ಎಕರೆ ಜಾಗ ಗುರುತಿಸಿದ್ದು, ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಸಸ್ಯಕಾಶಿ ನಿರ್ಮಾಣವಾಗಲಿದೆ. ಇದನ್ನೂ ಓದಿ: ಉಡುಪಿಯಲ್ಲಿ ನಾಲ್ವರ ಕೊಂದ ಕೇಸ್- ಸರ್ಕಾರದ ಮುಂದೆ ಬೇಡಿಕೆ ಇಟ್ಟ ಕುಟುಂಬ

    ಸಸ್ಯಕಾಶಿಯಲ್ಲಿ ವಿವಿಧ ಬಗ್ಗೆಯ ಮರಗಳು, ಔಷಧೀಯ ಅಂಶವುಳ್ಳ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಲಾಲ್ ಬಾಗ್, ಕಬ್ಬನ್ ಪಾರ್ಕ್‌ಗಿಂತ ವಿನೂತನವಾಗಿ ಸಸ್ಯಕಾಶಿ ನಿರ್ಮಾಣವಾಗಲಿದೆ. ಈ ಕುರಿತು ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಕೆ ಶಿವಕುಮಾರ್ ಅವರಿಂದ ಅನುಮತಿ ಸಿಕ್ಕ ಕೂಡಲೇ ಸಸ್ಯಕಾಶಿ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗುತ್ತದೆ. ಇದನ್ನೂ ಓದಿ: ಮೈಸೂರಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿವೇಕಾನಂದ ವರ್ಗಾವಣೆ – ಯತೀಂದ್ರ ಪ್ರಸ್ತಾಪಿಸಿದ್ದ ವಿವೇಕಾನಂದ ಇವರೇನಾ?

  • ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

    ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

    ಬೆಂಗಳೂರು: ಹಲಸೂರು ಕೆರೆಯಲ್ಲಿ (Halasuru Lake) ಸೂರ್ಯ ದೇವರ ಆರಾಧನೆಗೆ (Chhath Puja) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯವಸ್ಥೆ ಮಾಡಿದೆ. ನವೆಂಬರ್ 19 ರಿಂದ ನವೆಂಬರ್ 20 ರವರೆಗೆ ಹಲಸೂರು ಕೆರೆಯಲ್ಲಿ ‘ಛಠ್ ಪೂಜೆ’ (ಸೂರ್ಯದೇವರ ಆರಾಧನೆ) ನಡೆಯಲಿದೆ.

    ಹಲಸೂರು ಕೆರೆಯ ಗಣಪತಿ ವಿಸರ್ಜನೆ ಮಾಡುವ ಕಲ್ಯಾಣಿಯಲ್ಲಿ ಛಠ್ ಪೂಜೆಗೆ ಬಿಬಿಎಂಪಿ ವ್ಯವಸ್ಥೆಗೊಳಿಸಿದೆ. ಸದರಿ ಛಠ್ ಪೂಜೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಹಲಸೂರು ಕೆರೆಯ ಉತ್ತರ ದಿಕ್ಕಿನಲ್ಲಿರುವ ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯ (ಕಾರಾ ಕೆಫೆ ರೆಸ್ಟೋರೆಂಟ್ ಮುಂಭಾಗದ) ಮುಖ್ಯ ದ್ವಾರದ ಮೂಲಕವೇ ಬಂದು, ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಮಾತ್ರವೇ ಛಠ್ ಪೂಜೆಯನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

    ಸದರಿ ಪೂಜೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಯಾವುದೇ ರೀತಿಯ ಪ್ಲಾಸ್ಟಿಕ್ ಪೇಪರ್ ಮುಂತಾದ ವಿಷಯುಕ್ತ ವಸ್ತುಗಳನ್ನು ಕೆರೆಯ ಬಳಿ ತರಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ

    ಹಲಸೂರು ಕೆರೆಯ ಬೇರೆ ದಿಕ್ಕಿನ ದ್ವಾರಗಳು ಮುಚ್ಚಿರುತ್ತದೆ. ಪೂರ್ವ ವಲಯದ ಬೇರೆ ಯಾವುದೇ ಸ್ಥಳದಲ್ಲಿ ಛಠ್ ಪೂಜೆಗೆ ವ್ಯವಸ್ಥೆ ಕಲ್ಪಿಸಿರುವುದಿಲ್ಲ ಎಂದು ಪೂರ್ವ ವಲಯ ಆಯುಕ್ತರಾದ ಶ್ರೀಮತಿ ಆರ್ ಸ್ನೇಹಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಲೋ ಅಪ್ಪ, ನಾನು ಕೊಟ್ಟಿರೋದು ನಾಲ್ಕೋ ಐದೋ ಅಷ್ಟು ಮಾತ್ರ ಮಾಡಿ – ಯತೀಂದ್ರ ಮಾತಿನ ಮರ್ಮ ಏನು?

  • ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

    ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

    ಬೆಂಗಳೂರು: ಕಳೆದ ಒಂದು ವಾರದಿಂದ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮುಂದುವರೆದಿದೆ. ಈ ಬಿಸಿ ಈಗ ಮಲ್ಲೇಶ್ವರಂ ಮಾರ್ಕೆಟ್‌ಗೂ (Malleshwaram Market) ತಟ್ಟಿದ್ದು, ಬೀದಿಬದಿ ವ್ಯಾಪಾರಿಗಳ (Street Vendors) ಗೋಳು ಹೇಳತೀರದಂತಿದೆ.

    ಬೆಂಗಳೂರಿನಲ್ಲಿ (Bengaluru) ಕಳೆದ ಒಂದು ವಾರದಿಂದ ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿರುವ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮಲ್ಲೇಶ್ವರಂ ಮಾರ್ಕೆಟ್‌ಗೂ ಕಾಲಿಟ್ಟಿದೆ. ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ವ್ಯಾಪಾರ ಮಾಡದಂತೆ ಅಂಗಡಿಗಳನ್ನು ಎತ್ತಿಸಲಾಗಿದ್ದು, ವ್ಯಾಪಾರಿಗಳು ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಹ್ಯಾಕ್ – ಬಿಲ್ ಕಟ್ಟೋಕೆ ಹೋದ್ರೆ ಅಕೌಂಟ್‌ನಲ್ಲಿದ್ದ ಹಣ ಮಾಯ

    ನಗರದ ಬೇರೆ ಬೇರೆ ಕಡೆ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ತೆರವು ಆರಂಭಿಸಿರುವ ಬಿಬಿಎಂಪಿ ಬುಧವಾರ ಸಂಜೆ ದಿಢೀರ್ ಅಂತಾ ಮಲ್ಲೇಶ್ವರಂ 8ನೇ ಕ್ರಾಸ್‌ನ ಮಾರ್ಕೆಟ್‌ನಲ್ಲೂ ಕಾರ್ಯಚರಣೆ ಆರಂಭಿಸಿತ್ತು. ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ಪೊಲೀಸರು ಮತ್ತು ಮಾರ್ಷಲ್‌ಗಳ ಸಹಾಯದಿಂದ ತೆರವು ಮಾಡಲಾಯಿತು. ಆರಂಭದಲ್ಲಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಆದರೆ ಪೊಲೀಸರು ದೊಡ್ಡ ಮಟ್ಟದ ವಿರೋಧಕ್ಕೆ ಆಸ್ಪದ ನೀಡದೆ ಸಂಪೂರ್ಣ ವ್ಯಾಪಾರವನ್ನು ಸ್ಥಗಿತಗೊಳಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ವ್ಯಾಪಾರಿಗಳು ಕೂಡ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್

    ಈ ಮಧ್ಯೆ ವ್ಯಾಪಾರಿಗಳ ತೆರವು ವಿಚಾರ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಜಿಎಸ್‌ಟಿ ವ್ಯಾಪ್ತಿಗೆ ಬರುವ ವಸ್ತುಗಳನ್ನು ಫುಟ್‌ಪಾತ್‌ನಲ್ಲಿ ಮಾರುತ್ತಿದ್ದಾರೆ. ತಾವು ಬೀದಿಬದಿ ವ್ಯಾಪಾರಿ ಅಂತಾ ಗುರುತಿನ ಚೀಟಿ ಇದ್ದರೆ ವ್ಯಾಪಾರ ಮಾಡಬಹುದು. ರಸ್ತೆಯಿಂದ 10 ಮೀಟರ್ ದೂರದಲ್ಲಿ ಪಾದಚಾರಿಗಳಿಗೆ ತೊಂದರೆ ಆಗದಂತೆ ಮಾಡಬಹುದು ಎಂದಿದ್ದಾರೆ. ಆದರೆ, ಈ ಮಧ್ಯೆ ಕಾರ್ಡ್ ಇರುವ ಭಾಗಗಳಲ್ಲೂ ತೆರವು ಕಾರ್ಯ ನಡೆಯುತ್ತಿದ್ದು, ಬಿಬಿಎಂಪಿ ಕಮಿಷನರ್ ಹುಸಿ ಭರವಸೆ ನೀಡುತ್ತಿದ್ದಾರಾ ಎಂಬ ಅನುಮಾನ ಕೂಡ ವ್ಯಕ್ತವಾಗ್ತಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆ – 5 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

    ಮಲ್ಲೇಶ್ವರಂ, ಜಯನಗರ (Jayanagar), ಸೇರಿ ಹಲವೆಡೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿಸುತ್ತಿರುವುದನ್ನು ಖಂಡಿಸಿ ಇಂದು ಬೀದಿಬದಿ ವ್ಯಾಪಾರಿಗಳ ಸಂಘ ಪ್ರತಿಭಟನೆ ನಡೆಸುತ್ತಿದೆ. ಬೆಳಗ್ಗೆ 11 ಘಂಟೆಗೆ ಜಯನಗರ 4 ಬ್ಲಾಕ್‌ನಲ್ಲಿ ಬಿಡಿಎ ಮಾರ್ಕೆಟ್ ಕಾಂಪ್ಲೆಕ್ಸ್ ಹತ್ತಿರ ಬಿಬಿಎಂಪಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಒಟ್ಟಾರೆ ಬಿಬಿಎಂಪಿ ನಿರ್ಧಾರ ಬೀದಿಬದಿಯಲ್ಲಿ ಜೀವನ ಮಾಡುತ್ತಿದ್ದ ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಿರುವುದಂತು ಸತ್ಯ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ

  • ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ: ಬಿಬಿಎಂಪಿ ಕಮಿಷನರ್‌ ಕರೆ

    ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ: ಬಿಬಿಎಂಪಿ ಕಮಿಷನರ್‌ ಕರೆ

    ಬೆಂಗಳೂರು: ನವೆಂಬರ್‌ 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ವಿಶೇಷ ರೀತಿಯಲ್ಲಿ ಮನೆಯಲ್ಲಿ ಆಚರಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ (Tushar Girinath) ಕರೆ ನೀಡಿದ್ದಾರೆ.

    ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ಆಯುಕ್ತರು, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಎಂದು ಜನತೆಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: KSRTC ನೌಕರರ ಕುಟುಂಬ ಕಲ್ಯಾಣ ಯೋಜನೆ ಪರಿಹಾರ ಮೊತ್ತ 3 ರಿಂದ 10 ಲಕ್ಷಕ್ಕೆ ಹೆಚ್ಚಳ

    ಬಿಬಿಎಂಪಿ ಸಲಹೆ ಏನು?
    * ಬಿಬಿಎಂಪಿ ವ್ಯಾಪ್ತಿಯಲ್ಲಿ ನವೆಂಬರ್ 01 ರಂದು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮ ವೇಳಾಪಟ್ಟಿಯಲ್ಲಿರುವಂತೆ ಧ್ವಜಾರೋಹಣ ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ ಐದು ಕನ್ನಡ ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವುದು.

    * ನವೆಂಬರ್ 1 ರಂದು ಬೆಂಗಳೂರು ನಗರದ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ ಕರ್ನಾಟಕ ಸಂಭ್ರಮ-50 “ಹೆಸರಾಯಿತು. ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷ ವಾಕ್ಯವನ್ನು ಬರೆಯುವಂತೆ ನಾಗರಿಕರಲ್ಲಿ ಮನವಿ ಮಾಡುವುದು. ಇದನ್ನೂ ಓದಿ: ಹೀಗೆ ಆದ್ರೆ ಮುಂದೆ ಕುಡಿಯೋಕು ಸಹ ನೀರು ಇರಲ್ಲ: ಕಾವೇರಿ ಹೋರಾಟದಲ್ಲಿ ಅಜ್ಜಿ ಕಣ್ಣೀರು

    * ನವೆಂಬರ್ 1 ರ ಬೆಳಗ್ಗೆ 9 ಗಂಟೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೋ) ನಾಡಗೀತೆಯನ್ನು ಪ್ರಸಾರ ಮಾಡಲಾಗುವುದು. ಆ ಸಮಯದಲ್ಲಿ ಕನ್ನಡ ನಾಡಿನ ಸಮಸ್ತ ನಾಗರಿಕರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡಗೀತೆಗೂ ಗೌರವ ಸಲ್ಲಿಸಲು ಮನವಿ ಮಾಡುವುದು.

    ನವೆಂಬರ್ 1ರ ಸಂಜೆ 50 ಗಂಟೆಗೆ ಬೆಂಗಳೂರು ನಗರದ ಎಲ್ಲಾ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಲು ಮನವಿ ಮಾಡುವುದು. ಇದನ್ನೂ ಓದಿ: ಮುಂದಿನ 15 ದಿನ ನಿತ್ಯ ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಬಿಡಿ – ಕರ್ನಾಟಕಕ್ಕೆ CWRC ನಿರ್ದೇಶನ

    * ನವೆಂಬರ್ 1ರ ಸಂಜೆ 7 ಗಂಟೆಗೆ ಬೆಂಗಳೂರು ನಗರದ ಎಲ್ಲಾ ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಬೇಕು ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]