Tag: bbmp

  • BBMP Budget 2024: ಪಾಲಿಕೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್‌ ಭಾರತ್‌’ ವಿಮೆ!

    BBMP Budget 2024: ಪಾಲಿಕೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್‌ ಭಾರತ್‌’ ವಿಮೆ!

    ಬೆಂಗಳೂರು: ಬಿಬಿಎಂಪಿಯು (BBMP) ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್‌ ನೀಡಿವೆ. ಪಾಲಿಕೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮೆ ಯೋಜನೆಯಡಿ ಉಚಿತ ಆರೋಗ್ಯ ವಿಮೆ (Ayushman Bharat) ಮಾಡಿಸಲು ನಿರ್ಧರಿಸಿದೆ.

    ಇಂದು (ಗುರುವಾರ) ಮಂಡಿಸಿದ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಈ ಘೋಷಣೆ ಮಾಡಲಾಯಿತು. ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಾಲಿಕೆಯ ಶಾಲಾ/ಕಾಲೇಜುಗಳ ಮತ್ತು ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗಾಗಿ ವೈದ್ಯಕೀಯ ತಪಾಸಣೆ, ಔಷಧಿಗಳ ವಿತರಣೆಗಾಗಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದೆ. ಇದನ್ನೂ ಓದಿ: BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌

    ಬ್ರ್ಯಾಂಡ್‌ ಬೆಂಗಳೂರು- ಶಿಕ್ಷಣ ಬೆಂಗಳೂರು ಅಡಿ ಸಿಕ್ಕಿದ್ದೇನು?
    – ಪಾಲಿಕೆಯ ಶಾಲಾ ಮತ್ತು ಕಾಲೇಜುಗಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಕಂಪ್ಯೂಟರ್‌ ಲ್ಯಾಬ್‌, ಡಿಜಿಟಲ್‌ ಲ್ಯಾಬ್‌, ಮಾಹಿತಿ ಮತ್ತು ತಂತ್ರಜ್ಞಾನ ಲ್ಯಾಬ್‌, ಸೈನ್ಸ್‌ ಲ್ಯಾಬ್‌, ಇ-ಗ್ರಂಥಾಲಯ ಸ್ಥಾಪನೆಗೆ 10 ಕೋಟಿ ರೂ.
    – ಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ 19 ಶಾಲಾ ಕಟ್ಟಡ ಪೂರ್ಣ ತೆರವು ಮತ್ತು ಪುನರ್‌ ನಿರ್ಮಾಣ
    – 67 ಶಾಲಾ/ಕಾಲೇಜುಗಳ ಕಟ್ಟಡ ದುರಸ್ತಿ ಕಾರ್ಯ
    – ಶೌಚಾಲಯ ನಿರ್ವಹಣೆ, ಕುಡಿಯುವ ನೀರಿನ ಘಟಕ
    – ಈ ಎಲ್ಲ ಕಾಮಗಾರಿಗಳಿಗೆ ಒಟ್ಟು 35 ಕೋಟಿ ರೂ. ಅನುದಾನ

    ʼಶಾಲೆ ತೋಟʼ ಕಾರ್ಯಕ್ರಮ
    ಪಾಲಿಕೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಕ್ಕಳಿಗೆ ಕೃಷಿ ಮತ್ತು ತೋಟಗಾರಿಕೆಯ ಪರಿಕಲ್ಪನೆ ಹಾಗೂ ಪರಿಸರದ ಕಾಳಜಿ ಮೂಡಿಸಲು ಶಾಲೆ ತೋಟ ವಿಶಿಷ್ಟ ಕಾರ್ಯಕ್ರಮ. ಈ ಯೋಜನೆಯಡಿ ಶಾಲೆಯ ಆವರಣದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕೃಷಿ ಬೆಳೆಗಳು, ತರಕಾರಿ ಮತ್ತು ಹೂ ಬೆಳೆಯಲು ಒಟ್ಟು 5 ಕೋಟಿ ರೂ. ಅನುದಾನ ನೀಡಲಾಗಿದೆ. ಇದನ್ನೂ ಓದಿ: BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್‌ ನಿರ್ಮಾಣ

  • BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌

    BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌

    ಬೆಂಗಳೂರು: ನಗರದ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಹೊಸ ಸೂತ್ರ ಕಂಡು ಹಿಡಿದಿದೆ. ನೀವು ಆಟವಾಡುವ ಬಿಬಿಎಂಪಿ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಬರುವ ಸಾಧ್ಯತೆ ದಟ್ಟವಾಗಿ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಗೋಚರಿಸಿದೆ.

    ವಾಹನ ಸಾಂದ್ರತೆ ಇರುವ ಪ್ರದೇಶದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್‌ (Underground Parking facilities below Play Grounds) ಎಂಬ ವಿನೂತನ ಯೋಜನೆ ಜಾರಿಗೆ ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್‌ ನಿರ್ಮಾಣ

    ಆಟದ ಮೈದಾನಕ್ಕೆ ಏನೂ ಆಗಲ್ಲ!
    ಅಂಡರ್‌ ಗ್ರೌಂಡ್‌ ಪಾರ್ಕಿಂಗ್‌ ಯೋಜನೆಯಿಂದ ಆಟದ ಮೈದಾನದ ಸೌಲಭ್ಯಕ್ಕೆ ಯಾವುದೇ ತೊಂದರೆಯಾಗದಂತೆ ಪಿಪಿಪಿ ಆಧಾರದಲ್ಲಿ ಅನುಷ್ಠಾನಗೊಳಿಸಲು ಈ ವರ್ಷ 5 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದನ್ನೂ ಓದಿ: BBMP Budget 2024: ಬೆಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ 2 ಸುರಂಗ ಮಾರ್ಗ

  • BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್‌ ನಿರ್ಮಾಣ

    BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್‌ ನಿರ್ಮಾಣ

    ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ (Bengaluru) ಹೆಸರನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಬಿಬಿಎಂಪಿ ಹಲವಾರು ಯೋಜನೆಗಳನ್ನು (BBMP Projects) ಹಮ್ಮಿಕೊಂಡಿದೆ. ಬ್ರ್ಯಾಂಡ್‌ ಬೆಂಗಳೂರು – ವೈಬ್ರೆಂಟ್‌ ಬೆಂಗಳೂರು ಯೋಜನೆಯಡಿ 250 ಮೀಟರ್‌ ಎತ್ತರದ ಸ್ಕೈ-ಡೆಕ್‌ (Skydeck) ನಿರ್ಮಾಣ ಮಾಡುವುದಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರ ಒಟ್ಟು ವೆಚ್ಚ 350 ಕೋಟಿ ಎಂದು ಅಂದಾಜಿಸಲಾಗಿದೆ.

    ಸ್ಕೈ-ಡೆಕ್‌ ಯೋಜನೆಯ ಅನುಷ್ಠಾನಕ್ಕಾಗಿ 2024-25ರ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಪ್ರಾರಂಭಿಕ ಯೋಜನಾ ವೆಚ್ಚ 50 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಈ ಯೋಜನೆ ಎಲ್ಲಿ ಪ್ರಾರಂಭವಾಗಲಿದೆ ಎಂಬ ಯಾವುದೇ ಮಾಹಿತಿ ಬಜೆಟ್‌ನಲ್ಲಿ ಲಭ್ಯವಿಲ್ಲ. ಇದನ್ನೂ ಓದಿ: BBMP Budget 2024: ಬೆಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ 2 ಸುರಂಗ ಮಾರ್ಗ

    ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ
    ಆಸ್ಟ್ರಿಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್‌ ಡಿಸೈನ್‌ ಆರ್ಗನೈಸೇಷನ್‌ ಸಹಕಾರದೊಂದಿಗೆ ಈ ಸ್ಕೈ ಡೆಕ್‌ ನಿರ್ಮಾಣ ಮಾಡಲಿದೆ. ಯೋಜನೆ ಪೂರ್ಣಗೊಂಡ ಬಳಿಕ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಸ್ಕೈ-ಡೆಕ್‌ ಪಾತ್ರವಾಗಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ 6 ಕಾಂಗ್ರೆಸ್‌ ಶಾಸಕರು ಅನರ್ಹ

    ಬೈಯಪ್ಪನಹಳ್ಳಿ ಬಳಿಯ ಎನ್‌ಜಿಇಎಫ್‌ ಅಥವಾ ಸೋಪ್‌ ಫ್ಯಾಕ್ಟರಿಯ ಭೂಮಿಯಲ್ಲಿ ಈ ಸ್ಕೈ-ಡೆಕ್‌ ನಿರ್ಮಾಣ ಮಾಡುವ ಪ್ರಸ್ತಾಪವಿತ್ತು. ಇದರಲ್ಲಿ ಬಹುತೇಕ ಎನ್‌ಜಿಎಫ್‌ ಭೂಮಿಯೇ ಯೋಜನೆಗೆ ಆಯ್ಕೆಯಾಗಿದೆ. ಎನ್‌ಜಿಎಫ್‌ 105 ಎಕರೆ ವಿಸ್ತೀರ್ಣದಲ್ಲಿದ್ದು ಇದರಿಂದ 10 ಎಕರೆ ಪ್ರದೇಶವನ್ನು ಸ್ಕೈಡೆಕ್‌ ಯೋಜನೆಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ಬಿಬಿಎಂಪಿ ಮೂಲಗಳು ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿವೆ.

    ಸ್ಕೈ-ಡೆಕ್‌ ನಿರ್ಮಾಣವಾದ ಬಳಿಕ ಶುಲ್ಕ ಪಾವತಿಸಿ ನೀವು ಪ್ರವೇಶ ಪಡೆಯಬಹುದು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತ್ತೆ ‘ಪಾಕಿಸ್ತಾನ್ ಜಿಂದಾಬಾದ್’ ಗದ್ದಲ; ದೋಸ್ತಿಗಳಿಂದ ಸಭಾತ್ಯಾಗ

  • ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ

    ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ

    – ನಾಳೆಯೊಳಗೆ ನಾಮಫಲಕ ಹಾಕದಿದ್ದರೆ ನಾವೇ ತೆರವು ಮಾಡ್ತೀವಿ
    – ಅಂಗಡಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಎಚ್ಚರಿಕೆ

    ಬೆಂಗಳೂರು: ಕಡ್ಡಾಯ ಕನ್ನಡ ನಾಮಫಲಕ (Kannada Name Board) ಅಳವಡಿಕೆಗೆ ಇಂದು ಕೊನೆಯ ದಿನವಾಗಿದ್ದು, ಈ ಗಡುವನ್ನು ಒಂದು ದಿನ ವಿಸ್ತರಣೆ ಮಾಡಿ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಆದೇಶ ಹೊರಡಿಸಿದ್ದಾರೆ.

    ಇಂದು ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಲಾಗಿತ್ತು. ಆದರೆ ಇದನ್ನು ಕಮೀಷನರ್ ಒಂದು ದಿನ ವಿಸ್ತರಣೆ ಮಾಡಿದ್ದಾರೆ. 3,000 ಅಂಗಡಿಗಳು ಇನ್ನೂ ಕನ್ನಡ ನಾಮಫಲಕ ಹಾಕಿಲ್ಲ. ನಾಳೆಯೊಳಗೆ (ಫೆ.29) ನಾಮಫಲಕ ಹಾಕದಿದ್ದರೆ ನಾವೇ ತೆರವು ಮಾಡುತ್ತೇವೆ. ಕೂಡಲೇ ನಾಮಫಲಕ ಬದಲಾಯಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್‌ – ಅಖಿಲೇಶ್‌ ಯಾದವ್‌ಗೆ ಸಿಬಿಐ ಸಮನ್ಸ್‌

    ಕಡ್ಡಾಯ ಕನ್ನಡ ನಾಮಫಲಕ ಬಳಸದವರಿಗೆ ಮತ್ತೊಂದು ದಿನ ಅವಕಾಶ ನೀಡಲಾಗಿದೆ. ನಾಳೆ ಸಂಜೆಯವರೆಗೆ ನಾಮಫಲಕ ಬದಲಾವಣೆಗೆ ಅವಕಾಶ ನೀಡಿದ್ದು, ನಾಳೆಯೊಳಗೆ ಬದಲಾಯಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ಕೊಡಲಾಗಿದೆ. ಈಗಾಗಲೇ 90% ರಷ್ಟು ನಾಮಫಲಕ ಬದಲಾಗಿದೆ. ಇನ್ನು ಉಳಿದಿರೋದು 3 ಸಾವಿರ ನಾಮಫಲಕ ಮಾತ್ರ. ಅವರು ನಾಳೆ ಸಂಜೆಯೊಳಗೆ ಬದಲಾಯಿಸಬೇಕು. ಕೆಲವು ಅಂತಾರಾಷ್ಟ್ರೀಯ ಕಂಪನಿಗಳು ಹಾಗೂ ಎಸ್‌ಬಿಐ, ಕೆನರಾ ಬ್ಯಾಂಕ್ ಮನವಿ ಕೊಟ್ಟಿವೆ. ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ಕೇಳಿದ್ದಾರೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    ಇನ್ನು ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿದ್ದು, ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಬಿಬಿಎಂಪಿ ಹಾಗೂ ಸರ್ಕಾರ ನಾಮಫಲಕ ಜಾರಿಗೊಳಿಸಲು ಇವತ್ತಿನವರೆಗೂ ಗಡುವು ಕೇಳಿತ್ತು. ಒಟ್ಟು 50,216ಗಳಲ್ಲಿ 40,600 ಉದ್ಯಮಿಗಳಿಗೆ ನೋಟಿಸ್ ಕೊಟ್ಟಿದ್ದೇವೆ. 3,600 ಉದ್ಯಮಿಗಳು ಕನ್ನಡ ನಾಮಫಲಕ ಹಾಕಿಕೊಳ್ಳಬೇಕು. ಒಂದು ವೇಳೆ ನಾಳೆಯೊಳಗೆ ಕನ್ನಡ ನಾಮಫಲಕ ಜಾರಿಯಾಗದಿದ್ದರೆ ಅವರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಕಮೀಷನರ್ ಹೇಳಿದ್ದಾರೆ. 100% ಕನ್ನಡೀಕರಣ ಆಗದಿದ್ದರೇ ಮತ್ತೆ ಬೀದಿಗೆ ಇಳಿಯುತ್ತೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಕನ್ನಡ ನಾಮಫಲಕಗಳು ಇರಬೇಕು. ಇಲ್ಲದಿದ್ದರೆ ಎಲ್ಲಾ ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರು ಬೀದಿಗಿಳಿಯುತ್ತಾರೆ. ಬೆಂಗಳೂರಲ್ಲಿ 3,500-4,000 ಉದ್ಯಮಿಗಳು ಕನ್ನಡ ಬಳಸದೇ ಇರೋರು ನಾಮಫಲಕದಲ್ಲಿ 60% ಕನ್ನಡ ನಾಮಫಲಕ ಹಾಕಬೇಕು. ನುಡಿದಂತೆ ನಡೆಯದಿದ್ದರೇ, ಕನ್ನಡ ಬಳಸದೇ ಇದ್ದರೇ ಮತ್ತೆ ಬೆಂಗಳೂರಲ್ಲಿ ಕರವೇ ಕಾರ್ಯಕರ್ತರು ಬೀದಿಗೆ ಇಳಿಯುತ್ತೇವೆ. ನಾಮಫಲಕ ಹಾಕದೇ ಇರೋರ ಮೇಲೆ ಮಾರ್ಚ್ 1 ರವರೆಗೂ ಬಿಬಿಎಂಪಿ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡುತ್ತೇವೆ. ಬಿಬಿಎಂಪಿಯಿಂದ ಯಾವುದೇ ಕ್ರಮ ಆಗದಿದ್ದರೇ ಮತ್ತೆ ಮಾರ್ಚ್ 5 ರಂದು ಬೀದಿಗಿಳಿಯುತ್ತೇವೆ. ಮಾರ್ಚ್ 5 ರಂದು ಬಿಬಿಎಂಪಿ ವಿರುದ್ಧ ಕರವೇ ಪ್ರೊಟೆಸ್ಟ್ ಮಾಡುವುದಾಗಿ ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: 15 ಬಿಜೆಪಿ ಶಾಸಕರ ಅಮಾನತುಗೊಳಿಸಿದ ಸ್ಪೀಕರ್‌

  • ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ: ಬಿಬಿಎಂಪಿ ಆಯುಕ್ತ

    ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ: ಬಿಬಿಎಂಪಿ ಆಯುಕ್ತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಆ ಬಳಿಕ ಎಚ್ಚೆತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೂಚನೆ ಮೇರೆಗೆ ಸಮನ್ವಯ ಸಮಿತಿ ರಚನೆ ಮಾಡಲಾಯಿತು. ಸಮಿತಿ ರಚನೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂ ಆಯುಕ್ತರು, ಬಿಬಿಎಂಪಿ ಹಾಗೂ BWSSB ಸಹಯೋಗದಲ್ಲಿ ಕೆಲಸ ಮಾಡಲಿದೆ. ಬಿಬಿಎಂಪಿಯಿಂದ ನೀರಿನ ಸರಬರಾಜಿಗಾಗಿ 131 ಕೋಟಿ ಹಣ ಖರ್ಚು ಮಾಡಲಾಗುವುದು. ಆರ್ ಆರ್ ನಗರ, ಮಹದೇವಪುರದಲ್ಲಿ ಹೆಚ್ಚಿನ ಸಮಸ್ಯೆಯಾಗಿವೆ. ಆರ್ ಆರ್ ನಗರದ 25 ಕಡೆ ನೀರಿನ ಸಮಸ್ಯೆಯಾಗಿದೆ ಎಂದರು.

    1477 ದಶಲಕ್ಷ ಲೀಟರ್ ನೀರು (Water Problem In Bengaluru) ಈಗ ಲಭ್ಯತೆಯಿದೆ. ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ ನೀರನ್ನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತೆ. ಹೀಗಾಗಿ ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಯಲು ನಿರ್ಧಾರ ಮಾಡಲಾಗಿದೆ. ಜಲಮಂಡಳಿ ಬೋರ್ ಕೊರೆಯುವ ಕೆಲಸ ಮಾಡಲಾಗುತ್ತೆ. ಬಿಬಿಎಂಪಿ ಇದಕ್ಕೆ ದುಡ್ಡನ್ನ ವ್ಯಯಿಸಲಿದೆ. ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೂ ನೀರು ಒದಗಿಸಲಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ ಗ್ರಾಮಸ್ಥ!

    1450 ಎಂಎಲ್ ಡಿ ನೀರಿನ ಕ್ಯಾಪಸಿಟಿ ಇದೆ. ನೀರಿನ ಸಾಮರ್ಥ್ಯ ಸದ್ಯ ಇದೆ. 110 ಹಳ್ಳಿಗಳಿಗೆ ಏಪ್ರಿಲ್ ಕಡೆಯಲ್ಲಿ ಕಾವೇರಿ ನೀರು (Cauvery Water) ಕೊಡಲಾಗುತ್ತದೆ. ಬಿಬಿಎಂಪಿ ಕಡೆಯಿಂದ ಹಣ ಟ್ರಾನ್ಸ್ ಫರ್ ಆಗುತ್ತದೆ. ಒಟ್ಟು 58 ಕಡೆಗಳಲ್ಲಿ ಸಾಕಷ್ಟು ಸಮಸ್ಯೆ ಕಂಡು ಬಂದಿದೆ. ಆಡಳಿತಾಧಿಕಾರಿ ನೇತೃತ್ವದಲ್ಲಿ ಬೇಸಿಗೆಯಲ್ಲಿ ನೀರಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಸಿಎಸ್ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಬಿಬಿಎಂಪಿ ಹಾಗೂ ಜಲಮಂಡಳಿ ಕಡೆಯಿಂದ ಹಲವು ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

    ಇದೇ ವೇಳೆ ಖಾಸಗಿ ಟ್ಯಾಂಕರ್ ಹಾವಳಿ ಕುರಿತು ಪ್ರತಿಕ್ರಿಯಿಸಿ ಅವರು, ಖಾಸಗಿ ಟ್ಯಾಂಕರ್ ದರ ನಿಗದಿಯಿಲ್ಲ. ಬಿಡಬ್ಲ್ಯೂಎಸ್‍ಎಸ್‍ಬಿ ಹಾಗೂ ಬಿಬಿಎಂಪಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತೆ ಎಂದು ತಿಳಿಸಿದರು.

  • ತಜ್ಞರ ಅಭಿಪ್ರಾಯ ಕೇಳದೆ ಬಿಬಿಎಂಪಿಯಿಂದ ಬೋರ್ ಕೊರೆತ – 25 ಬೋರ್ ಫೇಲ್ಯೂರ್

    ತಜ್ಞರ ಅಭಿಪ್ರಾಯ ಕೇಳದೆ ಬಿಬಿಎಂಪಿಯಿಂದ ಬೋರ್ ಕೊರೆತ – 25 ಬೋರ್ ಫೇಲ್ಯೂರ್

    ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದಲ್ಲಿ (Bengaluru) ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಕೊರತೆ ನಡುವೆ ಬಿಬಿಎಂಪಿ (BBMP) ಯಡವಟ್ಟಿನಿಂದ 10 ರಿಂದ 25 ಬೋರ್‌ವೆಲ್‌ಗಳು (Borwell) ಫೇಲ್ಯೂರ್ ಆಗಿವೆ. ತಜ್ಞರ ಅಭಿಪ್ರಾಯ ಪಡೆಯದೇ ಬಿಬಿಎಂಪಿ ಬೋರ್‌ವೆಲ್‌ಗಳು ಕೊರೆಯುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

    ಬೆಂಗಳೂರಿನಲ್ಲಿ ಹೊಸದಾಗಿ ರಚನೆಯಾದ 110 ಹಳ್ಳಿಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ಕೆಲಸವನ್ನ ಬಿಬಿಎಂಪಿ ಮಾಡುತ್ತಿದೆ. 110 ಹಳ್ಳಿಗಳಲ್ಲಿ 125 ಕಡೆ ಬೋರ್‌ವೆಲ್‌ಗಳು ಕೊರೆಸೊದಕ್ಕೆ ಬಿಬಿಎಂಪಿ ಮುಂದಾಗಿದ್ದು, ತಜ್ಞರ ಅಭಿಪ್ರಾಯ ಸಂಗ್ರಹಿಸದೇ ಬೋರ್ ಕೊರೆಯಲಾಗುತ್ತಿದ್ದು ಬೋರ್‌ಗಳು ಫೇಲ್ಯೂರ್ ಆಗುತ್ತಿವೆ. ಮಹಾದೇವಪುರ ವಲಯದ ವರ್ತೂರು ಸುತ್ತಮುತ್ತ 10 ರಿಂದ 15 ಬೋರ್‌ಗಳು ಫೇಲ್ಯೂರ್ ಆಗಿವೆ. ಇದನ್ನೂ ಓದಿ: ಸರ್ಕಾರದ ವಿರುದ್ದ ಸಮರ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

    ಬೋರ್ ಫೇಲ್ಯೂರ್ ಆಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಬೋರ್ ಕೊರೆಯುವ ಟೆಂಡರ್‍ದಾರರಿಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಬೋರ್ ಕೊರೆಯುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಹಾಗೂ ಭೂಗರ್ಭ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಜಾಗ ಗುರುತು ಮಾಡಿಕೊಳ್ಳಿ. ಇಲ್ಲವಾದಲ್ಲಿ ಬೋರ್ ಕೊರೆದು ಫೇಲ್ಯೂರ್ ಆದರೆ ಹಣ ಕೊಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಅಧಿಕಾರಿಗಳು ರವಾನಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಮತ್ತೆ ಒಕ್ಕಲಿಗ ಕಾರ್ಡ್, ಎರಡೂವರೆ ವರ್ಷ ನಂತರ ಡಿಕೆ ಸಿಎಂ ಸಾಧ್ಯತೆ – ಒಕ್ಕಲಿಗ ನಾಯಕರ ಸಭೆಯ ಇನ್‌ಸೈಡ್‌ ಸುದ್ದಿ

  • ರಾಕ್‌ಲೈನ್‌ ಮಾಲ್‌ಗೆ ಹಾಕಿರುವ ಸೀಲ್‌ ಕೂಡಲೇ ತೆಗೆಯಿರಿ: ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

    ರಾಕ್‌ಲೈನ್‌ ಮಾಲ್‌ಗೆ ಹಾಕಿರುವ ಸೀಲ್‌ ಕೂಡಲೇ ತೆಗೆಯಿರಿ: ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

    ಬೆಂಗಳೂರು: ರಾಕ್‌ಲೈನ್‌ ಮಾಲ್‌ಗೆ (Rockline Mall) ಬಿಬಿಎಂಪಿ ಹಾಕಿರುವ ಸೀಲ್‌ ಓಪನ್‌ ಮಾಡುವಂತೆ ಕರ್ನಾಟಕ ಹೈಕೋರ್ಟ್‌ (Karnataka High Court) ಆದೇಶ ಹೊರಡಿಸಿದೆ.

    ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿದ್ದ ಕ್ರಮವನ್ನು ಪ್ರಶ್ನಿಸಿ ರಾಕ್‌ಲೈನ್‌ ಮಾಲ್‌ ಆಡಳಿತ ಮಂಡಳಿ ಹೈಕೋರ್ಟ್‌ಗೆ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರ ಪೀಠವು ಈ ಆದೇಶ ಹೊರಡಿಸಿದೆ. ಇದನ್ನೂ ಓದಿ: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ

    ಕಳೆದ ಬುಧವಾರ ಬಿಬಿಎಂಪಿ ಜಾಲಹಳ್ಳಿ ಕ್ರಾಸ್ ಬಳಿ ಇರೋ ರಾಕ್‌ಲೈನ್ ಮಾಲ್ ಸೀಜ್ ಮಾಡಲಾಗಿತ್ತು. ಸೀಜ್ ಮಾಡಿದ್ದನ್ನ ಪ್ರಶ್ನಿಸಿ ರಾಕ್‌ಲೈನ್‌ ಮಾಲ್‌ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿತ್ತು. ಇಂದು (ಸೋಮವಾರ) ಹೈಕೋರ್ಟ್‌ ಸೀಲ್ ತೆರವಿಗೆ ಸೂಚನೆ ನೀಡಿದೆ.

    ತಕ್ಷಣವೇ ಸೀಲ್ ಓಪನ್ ಮಾಡಬೇಕು. ವ್ಯಾಪಾರಕ್ಕೆ ಯಾವುದೇ ತೊಂದರೆಗಳನ್ನು ಮಾಡಬಾರದು. ತೆರಿಗೆ ಹಣದ ವಿಚಾರವಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಎಂದು ಬಿಬಿಎಂಪಿಗೆ ಕೋರ್ಟ್‌ ಸೂಚಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಸುಪ್ರೀಂನಿಂದ ತಾತ್ಕಾಲಿಕ ರಿಲೀಫ್

    ಹೈಕೋರ್ಟ್‌ ಆದೇಶ ಕುರಿತು ಮಾತನಾಡಿರುವ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಬೀಗ ಯಾಕೆ ಹಾಕಿದರು, ಏನು ಉದ್ದೇಶ ಇತ್ತು ಗೊತ್ತಿಲ್ಲ. ಟ್ಯಾಕ್ಸ್ ಕಟ್ಟಿಕೊಂಡು ಬರ್ತಾ ಇದ್ರು. ಒಬ್ಬರು ಬಂದು ಅಬ್ ನಾರ್ಮಲ್ ಆಗಿ ಬಂದು ಟ್ಯಾಕ್ಸ್ ಕಟ್ಟಿ ಅಂತಾ ಹೇಳಿದ್ರು. ಏಳು ಪ್ಲೋರ್ ಇದೇ ಅಂತಾ ಕೇಳಿದ್ರು. ಅಲ್ಲಿ ಗ್ರೌಂಡ್ ಪ್ಲೋರ್ ಅಷ್ಟೇ ಇದ್ದಿದ್ದು 40 ಥಿಯೇಟರ್ ಕಟ್ಟಡ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

    ನಾನು ಸರಿಯಾಗಿ ಇದ್ದೀನಿ, ನಾನೇನು ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದೀನಿ ಅಂತಾ ತೋರಿಸಿ, ನಾನು ಬಹಿರಂಗವಾಗಿ ಕ್ಷಮೆ ಕೇಳ್ತೀನಿ. ಕತ್ತಲಲ್ಲಿ ಬಂದು ನೋಟಿಸ್ ಕೊಡೋದು ಏನಿದೆ? ಕತ್ತಲಲ್ಲಿ ಬಂದು ನೋಟಿಸ್ ಕೊಡೋದು ಯಾರು ಹೇಳಿ? ಇರೋದೆ 4 ಪ್ಲೋರ್. ಆದರೆ ಅವರು 7 ಪ್ಲೋರ್ ಅಂತಾ ಹೇಳಿದ್ರು. ಜಂಟಿ ಸರ್ವೆ ಮಾಡಿದ್ರು. ಆದ ಮೇಲೂ ನಾವೇ ತೆರಿಗೆ ಕಟ್ಟುತ್ತೇವೆ ಅಂದರೂ ಕಟ್ಟಿಸಿಕೊಳ್ಳಲಿಲ್ಲ. ಒಮ್ಮೆ ಬರೀ ಖಾಲಿ ಪೇಪರ್ ಕೊಟ್ಟಿದ್ರು. ಬರೀ ಎನ್‌ವಲಪ್ ಕೊಟ್ಟಿದ್ರು, ನೋಟಿಸ್ ಏನಿರಲಿಲ್ಲ. ಇವತ್ತು ಕೋರ್ಟ್ ಸೀಲ್ ಓಪನ್‌ ಮಾಡಿ ಅಂತಾ ಹೇಳಿದೆ. ವ್ಯಾಪಾರಕ್ಕೆ ಅಡ್ಡಿ ಪಡಿಸಬೇಡಿ ಅಂತಾ ಹೇಳಿದೆ ಎಂದು ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ: ಸರ್ಕಾರದ ಮುಟ್ಟಾಳತನ: ಜೋಶಿ ಆಕ್ರೋಶ

  • ಬೆಂಗಳೂರು ಸೇರಿ ಈ 11 ನಗರಗಳಲ್ಲಿ ರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟು

    ಬೆಂಗಳೂರು ಸೇರಿ ಈ 11 ನಗರಗಳಲ್ಲಿ ರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟು

    ಬೆಂಗಳೂರು: ರಾಜ್ಯದಲ್ಲಿ ನೈಟ್‍ಲೈಫ್ ಮತ್ತಷ್ಟು ರಂಗೇರಲಿದೆ. ಇದರ ಮುನ್ಸೂಚನೆಯನ್ನು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ (Karnataka Budget 2024) ನೀಡಿದ್ದಾರೆ.

    ಬೆಂಗಳೂರು (Bengaluru) ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ಸಮಯವನ್ನು ಹೆಚ್ಚಿಸಲಾಗಿದೆ. ರಾತ್ರಿಯ ವೇಳೆ ವ್ಯಾಪಾರ ವಹಿವಾಟಿನ ನಿಬರ್ಂಧವನ್ನು ಬೆಳಗಿನ ಜಾವ 1:00 ಗಂಟೆಯವರೆಗೆ ವಿಸ್ತರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದನ್ನೂ ಓದಿ: Karnataka Budget 2024 – ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್‍ಗಳನ್ನು ಐಐಟಿಯಂತೆ ಅಭಿವೃದ್ಧಿ

    ಬಿಬಿಎಂಪಿ (BBMP) ಸೇರಿ ರಾಜ್ಯದಲ್ಲಿ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ (Shivamogga), ತುಮಕೂರು, ವಿಜಯಪುರ ಮಹಾನಗರಪಾಲಿಕೆಗಳಿವೆ. ಈ ಎಲ್ಲಾ ಮಹಾನಗರ ವ್ಯಾಪ್ತಿಗಳಲ್ಲಿ ಇನ್ನೂ ಮುಂದೆ ರಾತ್ರಿ 1:00 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ. ಇದನ್ನೂ ಓದಿ: ನಾವು ಮನುಜರು ಹೆಸರಿನಲ್ಲಿ ವಾರಕ್ಕೆ ಎರಡು ಗಂಟೆ ಶಾಲಾ ಕಾಲೇಜುಗಳಲ್ಲಿ ವಿಮರ್ಶೆ, ಸಂವಾದ – ಶಿಕ್ಷಣಕ್ಕೆ ಸಿಕ್ಕಿದ್ದೇನು?

  • ಬೇಸಿಗೆಗೂ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ – ವಾಟರ್‌ ಟ್ಯಾಂಕರ್‌ ಮಾಲೀಕರಿಂದ ದುಪ್ಪಟ್ಟು ದರ ಸುಲಿಗೆ!

    ಬೇಸಿಗೆಗೂ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ – ವಾಟರ್‌ ಟ್ಯಾಂಕರ್‌ ಮಾಲೀಕರಿಂದ ದುಪ್ಪಟ್ಟು ದರ ಸುಲಿಗೆ!

    – ಪಬ್ಲಿಕ್ ಟಿವಿಯಲ್ಲಿ ಬಿಗ್ ಎಕ್ಸ್‌ಪೋಸ್‌

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕುಡಿಯುವ ನೀರು (Drinking Water) ಬೇಕಾದ್ರೇ ಜೇಬು ತುಂಬಾ ಕಾಸಿರಬೇಕು ಅನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿದ್ದು, ಕಾವೇರಿ ಬರಿದಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ (Bengaluru) ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಹೀಗಾಗಿ ಜನ ಅನಿವಾರ್ಯವಾಗಿ ಖಾಸಗಿ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.

    ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾದ ಬೆನ್ನಲ್ಲೇ ಟ್ಯಾಂಕರ್ ನೀರಿಗೆ (Tanker Water) ಬೇಡಿಕೆ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ಎರಡು, ಮೂರು ಪಟ್ಟು ಹೆಚ್ಚು ದರ ಕೇಳಿದ್ರೂ, ನೀರನ್ನು ಖರೀದಿಸಬೇಕಾಗಿದೆ. ಪ್ರಶ್ನೆ ಮಾಡಿದ್ರೆ ಬೇಕಾದ್ರೆ ತೆಗೆದುಕೊಳ್ಳಿ, ಇಲ್ಲವಾದ್ರೆ ಬಿಡಿ ಅಂತಾ ಮುಖಕ್ಕೆ ಹೊಡೆದಂತೆ ಹೇಳ್ತಾರೆ. ಅದರಲ್ಲೂ ಲಗ್ಗೆರೆ ಬ್ರಿಡ್ಜ್, ನವರಂಗ್, ದಾಸರಹಳ್ಳಿ, ಹೊಸಕೆರೆಹಳ್ಳಿ, ಮೂಡಲಪಾಳ್ಯಗಳಲ್ಲಿ ವಾಟರ್‌ ಟ್ಯಾಂಕರ್‌ ಮಾಲೀಕರು ಹೇಳಿದಷ್ಟೇ ದರ ಕೊಡಬೇಕಾಗಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ಮಾಡಿದ ರಿಯಾಲಿಟಿ ಚೆಕ್ ಇಲ್ಲಿದೆ.

    ಲಗ್ಗೆರೆ ಬ್ರಿಡ್ಜ್‌ ಸಮೀಪದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಟರ್‌ ಟ್ಯಾಂಕ್‌ ಮಾಲೀಕರು ಪ್ರತಿ 6,000 ಲೀಟರ್‌ ಟ್ಯಾಂಕರ್‌ ನೀರಿಗೆ 1,500 ರೂ.ಗೆ ಡಿಮ್ಯಾಂಡ್‌ ಮಾಡ್ತಿದ್ದಾರೆ. ಸ್ವಲ್ಪ ಕಡಿಮೆ ಮಾಡಕೊಳ್ಳಿ ಎಂದು ಸಾರ್ವಜನಿಕರು ಮನವಿ ಮಾಡಿದ್ರೆ, ಮತ್ತೊಂದು ಕಡೆ 3 ಸಾವಿರ ರೂಪಾಯಿ ಕೊಡ್ತಾರೆ, ಬೇಕಿದ್ದರೆ ತಗೊಳ್ಳಿ ಎಂದು ಹೇಳಿಹೋಗ್ತಾರೆ. ಇದನ್ನೂ ಓದಿ: ಇಂದು ರೈತರಿಂದ ʻದೆಹಲಿ ಚಲೋʼ – ಗಡಿಯಲ್ಲಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಅದೇ ರೀತಿ ನವರಂಗ್‌, ದಾಸರಹಳ್ಳಿ, ಹೊಸಕೆರೆಹಳ್ಳಿ, ಮೂಡಲಪಾಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ 3,000 ಲೀಟರ್‌ ಟ್ಯಾಂಕರ್‌ ನೀರಿಗೆ 700 ರೂಪಾಯಿಗಿಂತ ಕಡಿಮೆಯಿಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಅತ್ತ ಹಣಕೊಟ್ಟು ಖರೀದಿಸಲಾಗದೇ, ಇತ್ತ ಕಾವೇರಿ ನೀರೂ ಸರಿಯಾಗಿ ಸಿಗದೇ ಪರದಾಡುವಂತಾಗಿದೆ.

    ಸರ್ಕಾರ ಈ ರೀತಿ ಬೇಕಾಬಿಟ್ಟಿ ದರ ನಿಗದಿ ಮಾಡೋದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ  

  • ಪಲ್ಸ್ ಪೋಲಿಯೋ ಯಾವಾಗ? – ಗೊಂದಲಕ್ಕೆ ಒಳಗಾಗಿದ್ದ ಪೋಷಕರಿಗೆ ಗುಡ್ ನ್ಯೂಸ್

    ಪಲ್ಸ್ ಪೋಲಿಯೋ ಯಾವಾಗ? – ಗೊಂದಲಕ್ಕೆ ಒಳಗಾಗಿದ್ದ ಪೋಷಕರಿಗೆ ಗುಡ್ ನ್ಯೂಸ್

    ಬೆಂಗಳೂರು: ಪಲ್ಸ್ ಪೋಲಿಯೋ (Pulse Polio)ಯಾವಾಗ ಅಂತಾ ಗೊಂದಲಕ್ಕೆ ಒಳಗಾಗಿದ್ದ ಜನರಿಗೆ, ಮುಂದಿನ ತಿಂಗಳು ಅಭಿಯಾನ ಶುರುವಾಗಿಲಿದೆ ಎಂದು ಬಿಬಿಎಂಪಿ  (BBMP) ತಿಳಿಸಿದೆ.

    5 ವರ್ಷದ ಒಳಗಿನ ಮಕ್ಕಳಿಗೆ ಹಾಕುವ ಪೋಲಿಯೋ ಅಭಿಯಾನ ಯಾವಾಗ ಎಂದು ಜನರು ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಸರ್ಕಾರ ಮುಂದಿನ ತಿಂಗಳು 03 ರಿಂದ 06 ರವರೆಗೆ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ನಿಮಗೆ ಕೊಟ್ಟ ಕೆಲಸ ಮಾತ್ರ ಪೂರ್ಣ ಮಾಡಿ – ಟಾರ್ಗೆಟ್‌ 28 ಗೆಲ್ಲಲು ಶಾ ಕ್ಲಾಸ್‌

    ಈ ಅಭಿಯಾನ ಮೂರು ದಿನಗಳು ನಡೆಯಲ್ಲಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜಾಗೃತಿ ಅಭಿಯಾನವನ್ನು ಬಿಬಿಎಂಪಿ ಕೈಗೊಳುತ್ತಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರ, ನಗರ ಚಿಕಿತ್ಸಾ ಕೇಂದ್ರ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಇದನ್ನೂ ಓದಿ: 200 ಸಂಘಟನೆಗಳು, 20,000 ರೈತರಿಂದ ನಾಳೆ `ದೆಹಲಿ ಚಲೋ’ – ದೆಹಲಿ ಗಡಿ ಬಂದ್!