Tag: bbmp

  • ಮೈದಾನದ ಗೇಟ್‌ ಮುರಿದು ಬಿದ್ದು ಬಾಲಕ ಸಾವು – ಪೋಷಕರಿಂದ ಪುತ್ರನ ನೇತ್ರದಾನ

    ಮೈದಾನದ ಗೇಟ್‌ ಮುರಿದು ಬಿದ್ದು ಬಾಲಕ ಸಾವು – ಪೋಷಕರಿಂದ ಪುತ್ರನ ನೇತ್ರದಾನ

    – ಮಗನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಪೋಷಕರು

    ಬೆಂಗಳೂರು: ಆಟದ ಮೈದಾನದಲ್ಲಿ ಗೇಟ್‌ ಮುರಿದು ಮೈಮೇಲೆ ಬಿದ್ದು ಸಾವನ್ನಪ್ಪಿದ ಬಾಲಕನ ನೇತ್ರದಾನಕ್ಕೆ ಪೋಷಕರು ಮುಂದಾಗಿದ್ದಾರೆ. ಪುತ್ರನ ಸಾವಿನ ನೋವಿನಲ್ಲೂ ಪೋಷಕರು ಮಾನವೀಯತೆ ಮೆರೆದಿದ್ದಾರೆ.

    ಮೃತ ನಿರಂಜನ್ ಕಣ್ಣುಗಳನ್ನು ಲಯನ್ಸ್ ಇಂಟರ್‌ನ್ಯಾಷನಲ್‌ ಐ ಬ್ಯಾಂಕ್‌ಗೆ ದಾನ ಮಾಡಲು ಆತನ ತಂದೆ ವಿಜಯ್ ಪವಾರ್ ಮುಂದಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುವುದು. ಇದನ್ನೂ ಓದಿ: ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ

    ಮೃತ ಬಾಲಕನ ತಂದೆ ಸ್ನೇಹಿತ ಮಾತನಾಡಿ, ನಿರಂಜನ್‌ ಕಳೆದುಕೊಂಡು ಅವರ ತಂದೆ ದುಃಖದಲ್ಲಿದ್ದಾರೆ. ನಿನ್ನೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಬಾಲಕನ ಪೋಷಕರನ್ನು ಭೇಟಿ ಮಾಡಿ ಸಂತೈಸಿದ್ದಾರೆ. ನಾವು ನಿರಂಜನ್‌ನನ್ನು ಕಳೆದುಕೊಂಡಿದ್ದೇವೆ. ಬೇರೆಯವರಿಗೆ ಉಪಯೋಗವಾಗಲಿ ಎಂದು ಆತನ ಕಣ್ಣುಗಳನ್ನು ದಾನ ಮಾಡಲು ಬಾಲಕನ ಪೋಷಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್‌ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ (10) ಮೃತಪಟ್ಟಿದ್ದ. ಆಟ ಆಡಲು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಬಾಲಕ ಮೃತಪಟ್ಟಿದ್ದ. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ- ಪಶ್ಚಿಮ ಬಂಗಾಳದಲ್ಲಿ ಹಂತಕ ತಲೆಮರೆಸಿಕೊಂಡಿರೋ ಶಂಕೆ

  • ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ

    ಬೆಂಗಳೂರಲ್ಲಿ ಮೈದಾನದ ಗೇಟ್ ಬಿದ್ದು ಬಾಲಕ ದುರ್ಮರಣ

    ಬೆಂಗಳೂರು: ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾಗಿರುವ ಘಟನೆ ಮಲ್ಲೇಶ್ವರಂ (Malleshwaram) ಬಿಬಿಎಂಪಿ (BBMP) ಗ್ರೌಂಡ್‌ನಲ್ಲಿ ನಡೆದಿದೆ.

    ನಿರಂಜನ್ (10) ಮೃತ ಬಾಲಕ. ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಟ ಆಡಲು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದು, ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿದೆ. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಣಕಾಸು ವಿಚಾರಕ್ಕೆ ವ್ಯಕ್ತಿಗೆ ಜೀವ ಬೆದರಿಕೆ – ಯುಪಿ ಸಂಸದನ ಪುತ್ರನ ವಿರುದ್ಧ ಎಫ್‍ಐಆರ್

    ಮಲ್ಲೇಶ್ವರಂ ಫೈಪ್‌ಲೈನ್‌ನಲ್ಲಿ ವಾಸವಾಗಿದ್ದ ಆಟೋ ಚಾಲಕ ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮೊದಲನೇ ಪುತ್ರ ನಿರಂಜನ್. ಮಲ್ಲೇಶ್ವರಂನ ಬಿಬಿಎಂಪಿ ಶಾಲೆಯಲ್ಲಿ ಬಾಲಕ 5ನೇ ತರಗತಿಯಲ್ಲಿ ಓದುತ್ತಿದ್ದ. ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

  • ಬಿಬಿಎಂಪಿ ಅಧಿಕಾರಿಗಳು ಹಗಲು-ರಾತ್ರಿ ಗುಂಡಿ ಮುಚ್ಚೋ ಕೆಲಸ ಮಾಡ್ತಿದ್ದಾರೆ: ಡಿಕೆಶಿ

    ಬಿಬಿಎಂಪಿ ಅಧಿಕಾರಿಗಳು ಹಗಲು-ರಾತ್ರಿ ಗುಂಡಿ ಮುಚ್ಚೋ ಕೆಲಸ ಮಾಡ್ತಿದ್ದಾರೆ: ಡಿಕೆಶಿ

    ಬೆಂಗಳೂರು: ಬಿಬಿಎಂಪಿ (BBMP) ಅಧಿಕಾರಿಗಳು ಹಗಲು-ರಾತ್ರಿ ಗುಂಡಿ ಮುಚ್ಚೋ ಕೆಲಸ ಮಾಡುತ್ತಿದ್ದಾರೆ. ಗುಂಡಿ ಮುಚ್ಚೋದು ನಮ್ಮ ಬದ್ಧತೆ. ನಮ್ಮ ಕರ್ತವ್ಯ ಇದನ್ನು ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

    ಡೆಡ್ ಲೈನ್ ಮುಗಿದರೂ ಬಿಬಿಎಂಪಿಯಿಂದ ಗುಂಡಿ ಮುಚ್ಚದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಪಾಲಿಕೆ ಅಧಿಕಾರಿಗಳು ನಾನು ಹೇಳಿದ ಮೇಲೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತೀ ಗುಂಡಿ ಲೆಕ್ಕ ನನ್ನ ಬಳಿ ಇದೆ. ನನ್ನ ಫೋನ್‌ನಲ್ಲಿ ಇದೆ. 2-3 ದಿನಗಳಲ್ಲಿ ನಾನು ರಾತ್ರಿ ರೌಂಡ್ಸ್ ಮಾಡುತ್ತಿದ್ದೇನೆ. ದೊಡ್ಡ ಅಭಿಯಾನದ ರೀತಿ ಗುಂಡಿ ಮುಚ್ಚೋ ಕೆಲಸ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ: ನಿಖಿಲ್ ಕುಮಾರಸ್ವಾಮಿ 

    ಇದೊಂದು ದೊಡ್ಡ ಸಾಧನೆ ಅಂತ ನಾನು ಹೇಳುತ್ತಿಲ್ಲ. ಆದರೆ ಒಂದು ಪ್ರಯತ್ನ ಎಂದು ಮಾಡಿದ್ದೇವೆ. ಕ್ವಾಲಿಟಿ ಹೇಗಿದೆ ಅಂತ ನಾನೇ ಪರಿಶೀಲನೆ ಮಾಡುತ್ತೇನೆ. ಕೆಲಸ ಆಗುತ್ತಿದೆ. ಒಂದೇ ದಿನಕ್ಕೆ ಆಗಲ್ಲ. ಮಳೆ, ಬೇರೆ ವಿಚಾರ ಎಲ್ಲಾ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ನಮ್ಮ ಬದ್ಧತೆ ಇದೆ. ನಮ್ಮ ಕರ್ತವ್ಯ ಇದು. ನಾಗರೀಕರಿಗೆ ಜನರಿಗೆ ಅನುಕೂಲ ಮಾಡೋ ಕೆಲಸ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ನಾನು ಹೋಗಿದ್ದೇನೆ. ದೆಹಲಿಯಲ್ಲಿ ಹೋಗಿದ್ದೇನೆ. ಆ ವಿಡಿಯೋ ನಾನು ಹಾಕಿದರೆ ಅವರ ರಾಜ್ಯಕ್ಕೆ ಅವಮಾನ ಆಗುತ್ತದೆ. ಅದಕ್ಕಿಂತ ನಮ್ಮವರು ಚೆನ್ನಾಗಿ ಪರಿವರ್ತನೆ ಮಾಡಬೇಕು ಎಂದು ಪ್ರಯತ್ನ ಮಾಡಿದ್ದೇನೆ. ಯಶಸ್ವಿ ಆಗುತ್ತಿದ್ದೇವೆ ಎಂದು ಬಿಬಿಎಂಪಿ ಗುಂಡಿ ಮುಚ್ಚುವ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ಟೆಸ್ಟ್ ಮಾಡಲು ತೀರ್ಮಾನ: ರಾಮಲಿಂಗಾ ರೆಡ್ಡಿ

  • 70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!

    70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!

    -ಬಡವರ ಆಸ್ಪತ್ರೆ ಎಂದೇ ಖ್ಯಾತಿ ಪಡೆದಿದ್ದ ಪೂರ್ ಹೌಸ್ ಹೆರಿಗೆ ಆಸ್ಪತ್ರೆ

    ಬೆಂಗಳೂರು: ಬಡವರಿಗೆ ಸಹಾಯ ಆಗಲೆಂದು ನಿರ್ಮಾಣವಾಗಿದ್ದ ಹೆರಿಗೆ ಆಸ್ಪತ್ರೆ (Maternity Hospital) ಕಳೆದ ಮೂರು ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಬೀಗ ಹಾಕಲಾಗಿದೆ.

    ನಗರದ ಶಿವಾಜಿನಗರದಲ್ಲಿರುವ (Shivaji Nagara) ಪೂರ್ ಹೌಸ್ ಹೆರಿಗೆ ಆಸ್ಪತ್ರೆಯು (Poor House Hospital) 1957ರಲ್ಲಿ ಬಡವರಿಗೆ ಸಹಾಯ ಆಗಲೆಂದು ನಿರ್ಮಾಣವಾಗಿತ್ತು. ಯಾರೂ ಕೇಳವವರೂ ಹೇಳುವವರೂ ಇಲ್ಲದಂತಾಗಿ ಕಳೆದ ಮೂರು ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಆಸ್ಪತ್ರೆಗೆ ಬೀಗ ಹಾಕಿಲಾಗಿದೆ.ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಘಾತ – 4 ದಿನಗಳಲ್ಲಿ 4 ಸಾವು

    ಶಿವಾಜಿನಗರ ವಿಧಾನಸಭಾ ಕ್ಷೇತ್ರದ ನಾರಯಣ ಪಿಳ್ಳೈ ರಸ್ತೆಯಲ್ಲಿರುವ ಬಡವರ ಆಸ್ಪತ್ರೆ ಎಂದೆ ಖ್ಯಾತಿ ಪಡೆದಿದ್ದ ಪೂರ್ ಹೌಸ್ ಹೆರಿಗೆ ಆಸ್ಪತ್ರೆ ದುಸ್ಥಿತಿಯಲ್ಲಿದೆ. ಕಟ್ಟಡ ದೂಳು ಹಿಡಿದು ಪಾಳು ಬಿದ್ದಿದ್ದು, ಅದರ ಸುತ್ತಮುತ್ತಲೂ ಗಿಡ ಗಟಿಂಗಳು ದಟ್ಟವಾಗಿ ಬೆಳೆದು ನಿಂತಿವೆ.

    ಈ ಭಾಗದ ಜನರಿಗೆ ತುಂಬಾ ಅನುಕೂಲ ಆಗಿತ್ತು. ಹಳೆಯ ಆಸ್ಪತ್ರೆ ಆಗಿದ್ದರಿಂದ ಇದಕ್ಕೆ ಬೀಗ ಜಡಿದು, ಹೊಸ ಕಟ್ಟಡವನ್ನು ಬ್ರ‍್ಯಾಂಡ್ ಬೆಂಗಳೂರು ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ದುರಸ್ತಿ ಹೆಸರಿನಲ್ಲಿ ಪೂರ್ ಹೌಸ್ ಹೆರಿಗೆ ಆಸ್ಪತ್ರೆಗೆ ಬೀಗ ಹಾಕಿದ್ದರಿಂದ ಆದರೆ ಕಳೆದ ಮೂರು ವರ್ಷಗಳಿಂದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದಿಲ್ಲ. ನಿತ್ಯ ಆರೋಗ್ಯ ಸೇವೆ ಸಿಗದೇ ಈ ಭಾಗದ ಜನ ಪರದಾಡುವಂತಾಗಿದೆ.ಇದನ್ನೂ ಓದಿ: ಸಿಖ್ಖರ ವಿರುದ್ಧ ಹೇಳಿಕೆಗೆ ತೀವ್ರ ಆಕ್ಷೇಪ – ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌

    ಆಸ್ಪತ್ರೆಯ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸುವಂತೆ ಸ್ಥಳೀಯರು ಹಲವು ಬಾರಿ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನು ಪ್ರಯೋಜನವಾಗಲಿಲ್ಲ. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದಲೂ ಬಿಬಿಎಂಪಿ (BBMP) ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೂ ಪತ್ರ ಬರೆದಿದ್ದಾರೆ. ಬಡವರಿಗೆ ಅನುಕೂಲವಾಗಿದ್ದ ಈ ಆಸ್ಪತ್ರೆಗೆ ಆದಷ್ಟು ಬೇಗ ಉದ್ಘಾಟನೆಯ ಭಾಗ್ಯ ಸಿಗಲಿ ಎಂದು ಅಲ್ಲಿನ ಜನ ಕಾದು ಕೂರುವಂತಾಗಿದೆ.

  • ಬೆಂಗಳೂರಿನಲ್ಲಿ 21 ಲಕ್ಷ ಖಾತೆಗಳ ಡಿಜಿಟಲೀಕರಣ ಮಾಡಿದ ಬಿಬಿಎಂಪಿ

    ಬೆಂಗಳೂರಿನಲ್ಲಿ 21 ಲಕ್ಷ ಖಾತೆಗಳ ಡಿಜಿಟಲೀಕರಣ ಮಾಡಿದ ಬಿಬಿಎಂಪಿ

    – ಫೇಸ್‌ಲೆಸ್ ಸಂಪರ್ಕ ರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ
    – ಕೆಲವೇ ದಿನಗಳಲ್ಲಿ ಖಾತೆಗಳಿಗೆ ಜಿಪಿಎಸ್ ಆಧಾರಿತ ಮಾಹಿತಿ ಅಳವಡಿಕೆ

    ಬೆಂಗಳೂರು: ಆಸ್ತಿ ಮಾಲೀಕರಿಗೆ, ಖಾತಾದಾರರಿಗೆ ಬಿಬಿಎಂಪಿ ಗುಡ್‌ನ್ಯೂಸ್ ಕೊಟ್ಟಿದೆ. 21 ಲಕ್ಷ ಖಾತೆಗಳನ್ನ ಡಿಜಿಟಲೀಕರಣ ಮಾಡಿ, ಫೇಸ್‌ಲೆಸ್ ಮಾಡಿದೆ. ಪಾಲಿಕೆ ಶೀಘ್ರದಲ್ಲೇ ರೂಲ್ ಔಟ್ ಬಿಡುಗಡೆ ಆಗಲಿದ್ದು, ಖಾತೆಗಳಿಗೆ ಜಿಪಿಎಸ್ ಆ್ಯಡ್ ಮಾಡಲಿದೆ.

    ಜನ ಖಾತೆ ಮಾಡಿಸಬೇಕು, ಖಾತೆ ಪಡೆಯುಬೇಕು, ಖಾತೆ ಬಗ್ಗೆ ಮಾಹಿತಿ ಬೇಕು ಎಂದರೆ ಕಂದಾಯ ಕಚೇರಿಗಳಿಗೆ ಹೋಗಿ ಮಾಹಿತಿ ಪಡೆಯಬೇಕಿತ್ತು. ಈಗ ಬಿಬಿಎಂಪಿ ಮತ್ತಷ್ಟು ಸುಲಭ ಮಾಡಿದೆ. ಒಂದೆರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2,500 ಆಸ್ತಿಗಳನ್ನು ಇ-ಖಾತಾ ಮಾಡಿದ್ದ ಬಿಬಿಎಂಪಿ 21 ಲಕ್ಷ ಆಸ್ತಿ ಖಾತೆಗಳನ್ನು ಈಗ ಡಿಜಿಟಲೀಕರಣ ಮಾಡಿದೆ. ಇದೀಗ ಫೇಸ್‌ಲೆಸ್ ಸಂಪರ್ಕ ರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜಿಪಿಎಸ್ ಆಧಾರಿತ ಮಾಹಿತಿಯನ್ನು ಪಡೆದು ಅದನ್ನು ಡಿಜಿಟಲೀಕರಣಗೊಳಿಸಲಿದೆ.

    ಬಿಬಿಎಂಪಿ ರಿಜಿಸ್ಟರ್‌ಗಳಲ್ಲಿನ 21 ಲಕ್ಷ ಖಾತೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ರೋಲ್-ಔಟ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಆಗ ಜನ ತಮ್ಮ ಖಾತಾ ಡಿಜಿಟಲೀಕರಣ ಆಗಿರೋದನ್ನ ಸರಿಪಡಿಸಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಸಿಬ್ಬಂದಿ ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಮ್ಮ ಆಸ್ತಿಯ ಜಿಪಿಎಸ್ ಮಾಹಿತಿಯನ್ನು ಸೆರೆಹಿಡಿಯುತ್ತಾರೆ. ಪಾಲಿಕೆಯ ಇ-ಖಾತಾ ಪಡೆಯಲು ಪ್ರತಿ ಆಸ್ತಿಯ ಜಿಪಿಎಸ್ ಕಡ್ಡಾಯವಾಗಿದೆ. ಸದರಿ ಪ್ರಾಪರ್ಟಿ ಜಿಪಿಎಸ್ ನಿಮ್ಮ ಆಸ್ತಿಯ ವಿಶಿಷ್ಟ ಗುರುತು ಆಗಿರುತ್ತದೆ. ಎಲ್ಲಾ ಬಿಬಿಎಂಪಿಯ ಇ-ಖಾತಾ ಸೇವೆಗಳ ಫೇಸ್‌ಲೆಸ್, ಸಂಪರ್ಕ ರಹಿತ ಮತ್ತು ಆನ್‌ಲೈನ್ ವಿತರಣೆಗೆ ಇದು ಬಹಳ ಮುಖ್ಯವಾಗಿರುತ್ತದೆ.

    ಜಿಪಿಎಸ್‌ನಿಂದ ಅನುಕೂಲಗಳೇನು?
    * ಸ್ವತ್ತುಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿಡಲು ಜಿಪಿಎಸ್ ಅಳವಡಿಕೆ
    * ಜಿಪಿಎಸ್‌ನ್ನು ಸ್ಥಳಕ್ಕೆ ಅನುಗುಣವಾಗಿ ನಿಯೋಜಿಸುವುದು ಇದರ ಉದ್ದೇಶ
    * ಒಂದು ಬಾರಿ ಜಿಪಿಎಸ್ ಮಾಡಿಸಿದ್ರೆ ಬೇರೆ ಯಾರೂ ಭೂಮಿ ಪಡೆಯಲು ಸಾಧ್ಯವಿಲ್ಲ
    * ಬಿಬಿಎಂಪಿ ಬಳಿ ಸ್ವತ್ತುಗಳ ಪಟ್ಟಿಯಿದ್ದು ಸದರಿ ಸ್ವತ್ತುಗಳ ಸ್ಥಳ, ನಕ್ಷೆ ಇರುವುದಿಲ್ಲ
    * ಆಸ್ತಿಯ ಜಿಪಿಎಸ್ ಸಂಗ್ರಹಣೆಯಿಂದ ಇತರೆ ದಾಖಲೆ ಬಳಸಿ ಪರಭಾರೆ ಮಾಡುವುದರಿಂದ ರಕ್ಷಣೆ
    * ಬಹುಮಹಡಿ ಫ್ಲಾಟ್‌ಗಳು ಒಂದೇ ರೀತಿಯ ಜಿಪಿಎಸ್ ಹೊಂದಿರುತ್ತದೆ
    * ಫ್ಲಾಟ್ ಸಂಖ್ಯೆ, ಇತರ ವಿವರಗಳನ್ನ ಪಾಲಿಕೆ ದಾಖಲಿಸೋದ್ರಿಂದ ಆಸ್ತಿಯನ್ನ ಗುರುತಿಸಬಹುದು
    * ಇದು ಸುರಕ್ಷಿತ ಮತ್ತು ಸಂರಕ್ಷಿತ ಆಸ್ತಿ, ಭೂ ದಾಖಲೆಗಳ ಮೂಲಭೂತ ಬಿಲ್ಡಿಂಗ್ ಬ್ಲಾಕ್ ಆಗಿದೆ

    ಬಿಬಿಎಂಪಿ 21 ಲಕ್ಷ ಆಸ್ತಿ ಖಾತಾಗಳಿಗೆ ಡಿಜಿಟಲೀಕರಣ ಮಾಡಿ ಜಿಪಿಎಸ್ ಅಳವಡಿಕೆ ಮಾಡ್ತಿದೆ. ರೂಲ್ ಔಟ್ ಬಿಡುಗಡೆ ಆದ ಬಳಿಕ ಖಾತಾ ಡಿಜಿಟಲೀಕರಣ ಆಗಿದೆಯಾ ಇಲ್ವ ಅಂತಾ ಜನ ಪರಿಶೀಲನೆ ಮಾಡಿ ಕಂದಾಯ ಕಚೇರಿಗಳಿಗೆ ತೆರಳಿ ಇ-ಖಾತಾ ಮಾಡಿಕೊಳ್ಳಬಹುದು. ಜಿಪಿಎಸ್ ಅಳವಡಿಕೆ ಮಾಡ್ತೇವೆ ಅಂದಿದ್ದು, ಯಾವಾಗ ಅಳವಡಿಕೆ ಕಾರ್ಯ ಆರಂಭ ಆಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

  • PUBLiC TV Impact | ಡೆಡ್‌ಲೈನ್ ಟೆನ್ಶನ್‌ನಲ್ಲಿ ಪಾಲಿಕೆ ಯಡವಟ್ಟು – ಬಿಬಿಎಂಪಿಯಿಂದ ಗುಂಡಿ ಮುಚ್ಚುವ ಕಾರ್ಯ ಶುರು!

    PUBLiC TV Impact | ಡೆಡ್‌ಲೈನ್ ಟೆನ್ಶನ್‌ನಲ್ಲಿ ಪಾಲಿಕೆ ಯಡವಟ್ಟು – ಬಿಬಿಎಂಪಿಯಿಂದ ಗುಂಡಿ ಮುಚ್ಚುವ ಕಾರ್ಯ ಶುರು!

    ಬೆಂಗಳೂರು: ಟಾರ್ಗೆಟ್ ರೀಚ್ ಆಗುವ ಭರದಲ್ಲಿ ತರಾತುರಿಯಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದ ಬಿಬಿಎಂಪಿ, ಪಬ್ಲಿಕ್ ಟಿವಿ (PUBLiC TV) ವರದಿ ಬಳಿಕ ಎಚ್ಚೆತ್ತುಕೊಂಡಿದೆ.

    ಹೌದು. ಆಗಸ್ಟ್ 12ರಂದು ಜಾಲಹಳ್ಳಿ (Jalahalli) ರಸ್ತೆ ಗುಂಡಿ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿ ಪರಿಣಾಮ ಎಚ್ಚೆತ್ತ ಬಿಬಿಎಂಪಿ (BBMP) ಇದೀಗ ಗುಂಡಿ ಮುಚ್ಚುವ ಕೆಲಸ ಮಾಡಿಸಿದೆ. ಬಸವೇಶ್ವರ ನಗರದ (Basaveshwar Nagar) ವಾಟರ್ ಟ್ಯಾಂಕ್ ರಸ್ತೆಯಲ್ಲಿ ಬರೆ ಜೆಲ್ಲಿ ಕಲ್ಲು ಸುರಿದ ಬಿಬಿಎಂಪಿ ದುರಸ್ತಿ ಮಾಡಿತ್ತು. ಟಾರ್ಗೆಟ್ ರೀಚ್ ಆಗುವ ಬರದಲ್ಲಿ ತರಾತುರಿಯ ಕೆಲಸ ಮುಗಿಸಿತ್ತು. ಪ್ರಮುಖ ರಸ್ತೆ ದುರಸ್ತಿಗಾಗಿ 600 ಕೋಟಿಗೂ ಅಧಿಕ ಹಣವನ್ನು ಮೀಸಲಿಡಲಾಗುತ್ತು. ಆದರೆ ನೋಡಿದರೆ ಕೇವಲ ಜಲ್ಲಿ ಕಲ್ಲು ಹಾಗೂ ಸೀಮೆಂಟ್ ದುರಸ್ತಿ ಕೆಲಸ ಮಾಡಲಾಗಿತ್ತು.ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ತೀವ್ರ ವಾಗ್ದಾಳಿ

    ರಸ್ತೆಯ ಅರ್ಧಭಾಗ ಆವರಿಸಿರುವ ಗುಂಡಿಗೆ ಕೇವಲ ಜೆಲ್ಲಿಯನ್ನು ಸುರಿಯಲಾಗಿತ್ತು. ಇದರಿಂದ ಇನ್ನಷ್ಟು ಅಪಘಾತಗಳು ಹೆಚ್ಚಾಗುತ್ತವೆ ಎಂದು ವಾಹನ ಸವಾರರು ಕಿಡಿಕಾರಿದ್ದರು. ದಯವಿಟ್ಟು ಕೈ ಮುಗಿದು ಬೇಡಿಕೊಳ್ಳುತ್ತೇವೆ ರಸ್ತೆ ಗುಂಡಿ ಮುಚ್ಚಿ ಅಂತ ಸಾರ್ವಜನಿಕರು ಬೇಡಿಕೊಂಡಿದ್ದರು. ಈ ಕುರಿತಂತೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯ ಪರಿಣಾಮ ಇದೀಗ ಗುಂಡಿ ಮುಚ್ಚುವ ಆರಂಭವಾಗಿದೆ. ಜೊತೆಗೆ ಬೆಂಗಳೂರು ಗುಂಡಿ ಮುಕ್ತ ಮಾಡಲು ಡಿಸಿಎಂ ಸೆ.15ರ ವರೆಗೆ ಕೊನೆಯ ದಿನ ಎಂದು ಕೊಟ್ಟಿರುವ ಡೆಡ್‌ಲೈನ್ ಹಿನ್ನೆಲೆ ಕೆಲಸ ಜೋರಾಗಿ ನಡೆಯುತ್ತಿದೆ.

    ಇದೀಗ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದ್ದು, ಜಾಲಹಳ್ಳಿ ಮುಖ್ಯ ರಸ್ತೆ, ದಾಸರಹಳ್ಳಿ (Dasarhalli) ವಲಯ ರಸ್ತೆಯನ್ನು ಆಯುಕ್ತರ ನೇತೃತ್ವದಲ್ಲಿ ಮುಚ್ಚಲಾಗುತ್ತಿದೆ. ಪಬ್ಲಿಕ್ ಟಿವಿ ವರದಿ ನಂತರ ಅಯ್ಯಪ್ಪ ದೇವಾಲಯದ ಮುಂದೆ ಬಿಬಿಎಂಪಿ ಗುಂಡಿ ಮುಚ್ಚುತ್ತಿದೆ. ಇಂದು ಕಡೆ ದಿನವಾದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಭಾನುವಾರದಂದು ರಸ್ತೆ ಗುಂಡಿ ಮುಚ್ಚುವುದರಲ್ಲಿ ತೊಡಗಿದ್ದಾರೆ.ಇದನ್ನೂ ಓದಿ: ದೇಶದ ಮೊದಲ ವಂದೇ ಮೆಟ್ರೋ, 6 ವಂದೇ ಭಾರತ್‌ ರೈಲು ಸೇವೆಗೆ ಮೋದಿ ಚಾಲನೆ – ಏನಿದರ ವಿಶೇಷ!

  • ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಸೂದೆ: ಬಿಬಿಎಂಪಿ ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ, ಇದು ಕನ್ನಡಿಗರಿಗಾಗಿಯೇ ಇರಬೇಕು: ಆರ್‌.ಅಶೋಕ್

    ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಸೂದೆ: ಬಿಬಿಎಂಪಿ ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ, ಇದು ಕನ್ನಡಿಗರಿಗಾಗಿಯೇ ಇರಬೇಕು: ಆರ್‌.ಅಶೋಕ್

    -‌ ಕೆಲವು ತಿದ್ದುಪಡಿ ಮಾಡಲಿ, ವಿಳಂಬವಾದರೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಲಿ

    ಬೆಂಗಳೂರು: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು (Bengaluru) ವಿಭಜನೆಯಾಗಬಾರದು ಹಾಗೂ ಈ ನಗರ ಕನ್ನಡಿಗರಿಗಾಗಿಯೇ ಇರಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರದ ಬೆಂಗಳೂರು ವಿಭಜನೆ ತೀರ್ಮಾನವನ್ನು ವಿರೋಧಿಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಹೇಳಿದರು.

    ರಾಜ್ಯ ಸರ್ಕಾರದಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದಂತೆ ಸಾಧಕ-ಬಾಧಕ ಚರ್ಚಿಸಲು ಆಯೋಜಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಅವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯನವರ ಆಶೀರ್ವಾದ ಇದ್ದವರು ಸಿಎಂ ಆಗ್ತಾರೆ: ರಾಯರೆಡ್ಡಿ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಬ್ಭಾಗವಾಗದೆ ಹೀಗೆಯೇ ಉಳಿಯಬೇಕು. ಇಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಇದು ಕನ್ನಡಿಗರಿಗಾಗಿಯೇ ಉಳಿಯಬೇಕು. ಇಲ್ಲಿ ಕನ್ನಡದವರೇ ಮೇಯರ್‌ ಆಗಬೇಕು. ಇದಕ್ಕಾಗಿ ಬೆಂಗಳೂರು ವಿಭಜನೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ವಿರೋಧಿಸುತ್ತವೆ ಎಂದು ತಿಳಿಸಿದರು.

    ಬಿಬಿಎಂಪಿ ಅಡಿಯಲ್ಲಿ ಸ್ಲಂ ಬೋರ್ಡ್‌, ಜಲಮಂಡಳಿ, ಬಿಎಂಟಿಸಿ ಬರುವುದಿಲ್ಲ. ಇವೆಲ್ಲವೂ ಒಂದೇ ಕಡೆ ಬಂದು, ಬಿಬಿಎಂಪಿಯೇ ನಿರ್ವಹಣೆ ಮಾಡಿದರೆ ಪ್ರತ್ಯೇಕವಾಗಿ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡುವುದು ತಪ್ಪುತ್ತದೆ. ಸರ್ಕಾರಕ್ಕೆ ಖರ್ಚು ಕಡಿಮೆಯಾಗುವುದರ ಜೊತೆಗೆ, ಜನರು ಒಂದೇ ಕಡೆ ಸೇವೆಗಳನ್ನು ಪಡೆಯಬಹುದು. ಬೇರೆ ನಗರಗಳಲ್ಲೂ ಇದೇ ರೀತಿಯಿದ್ದು, ಬೆಂಗಳೂರಿಗೂ ಇಂತಹ ವ್ಯವಸ್ಥೆ ತರಬೇಕಿದೆ ಎಂದರು. ಇದನ್ನೂ ಓದಿ: ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

    ರಾಜ್ಯ ಸರ್ಕಾರದ ಈ ವಿಧೇಯಕದಿಂದ ಕೆಳಹಂತದ ಪುರಪಿತೃಗಳಿರುವ ಸಂಸ್ಥೆಯ ಅಧಿಕಾರ ಕುಂಠಿತವಾಗುವ ಅಪಾಯವಿದೆ. ಆದ್ದರಿಂದ ಇದರಲ್ಲಿ ಬದಲಾವಣೆ ತರಬೇಕಿದೆ. ಈ ತಿದ್ದುಪಡಿ ಮಾಡಲು ಹಾಗೂ ವಾರ್ಡ್‌ ಹೆಚ್ಚಳಕ್ಕೆ ವಿಳಂಬವಾದರೆ ಹಿಂದಿನಂತೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು. ಈ ಕುರಿತು ರಾಜ್ಯ ಸರ್ಕಾರಕ್ಕೆ ತಿಳಿಸಲಾಗುವುದು. ಮಂಡನೆಯಾಗಿರುವ ವಿಧೇಯಕದಿಂದ ಎಷ್ಟು ಸಮಸ್ಯೆಯಾಗಲಿದೆ ಎಂಬುದನ್ನು ಜನರಿಗೂ ತಿಳಿಸಲಾಗುವುದು ಎಂದರು.

    ಇಡೀ ದೇಶಕ್ಕೆ ಒಬ್ಬ ಪ್ರಧಾನಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಇರುವಂತೆ ಬೆಂಗಳೂರು ನಗರಕ್ಕೆ ಒಬ್ಬ ಮೇಯರ್ ಇರಲಿ. ಅವರ ಅಧಿಕಾರಾವಧಿ ಎರಡೂವರೆ ವರ್ಷ ಅಥವಾ ಐದು ವರ್ಷ ನಿಗದಿಪಡಿಸಿದರೂ ಅಡ್ಡಿಯಿಲ್ಲ ಎಂದರು.

    ಕಾಂಗ್ರೆಸ್ ಸರ್ಕಾರ ತಜ್ಞರು ನೀಡಿರುವ ವರದಿಯ ಶೇಕಡಾ ಇಪ್ಪತ್ತರಿಂದ ಮುವತ್ತರಷ್ಟನ್ನು ಮಾತ್ರ ವಿಧೇಯಕದಲ್ಲಿ ಅಳವಡಿಸಿಕೊಂಡಿದೆ ಎಂಬುದನ್ನು ವಿ.ರವಿಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಯಾರಾದರೂ ಕೊರ್ಟ್‌ನಲ್ಲಿ ಪ್ರಶ್ನೆ ಮಾಡಿದರೆ ಬಿದ್ದು ಹೋಗುತ್ತದೆ ಎಂದೂ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅದರಲ್ಲಿರುವ ಲೋಪಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು. ಒಂದು ವೇಳೆ ಒಪ್ಪದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಈ ಎಲ್ಲಾ ವಿಷಯಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರಮುಖರ ಸಮಿತಿ ರಚಿಸಿ ವಿವರವಾಗಿ ವಿಧೇಯಕದ ಬಗ್ಗೆ ಅಧ್ಯಯನ ನಡೆಸಿ ಬದಲಾವಣೆ ಕುರಿತು ವರದಿ ನೀಡಲಾಗುವುದು ಎಂದು ವಿವರಿಸಿದರು.

  • ರಸ್ತೆ ಗುಂಡಿ ಮುಚ್ಚಲು ಸೆ.15ರ ವರೆಗೆ ಗಡುವು, ದೂರು ಬಂದ್ರೆ ಅಧಿಕಾರಿಗಳೇ ನೇರ ಹೊಣೆ – ಡಿಕೆಶಿ ವಾರ್ನಿಂಗ್

    ರಸ್ತೆ ಗುಂಡಿ ಮುಚ್ಚಲು ಸೆ.15ರ ವರೆಗೆ ಗಡುವು, ದೂರು ಬಂದ್ರೆ ಅಧಿಕಾರಿಗಳೇ ನೇರ ಹೊಣೆ – ಡಿಕೆಶಿ ವಾರ್ನಿಂಗ್

    – ಎಷ್ಟು ಜನ ಅಧಿಕಾರಿಗಳು ಸಸ್ಪೆಂಡ್ ಆಗ್ತಾರೆ ಗೊತ್ತಿಲ್ಲ

    ಬೆಂಗಳೂರು: ಸೆಪ್ಟೆಂಬರ್‌ 15ರ ವರೆಗೆ ಬೆಂಗಳೂರು ನಗರದ ರಸ್ತೆಗಳಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲೇಬೇಕು. ಮುಚ್ಚಿಲ್ಲ ಅಂದರೆ ಕ್ರಮ ತೆಗೆದುಕೊಳ್ಳುತ್ತೇನೆ. ಸಾರ್ವಜನಿಕರಿಂದ ಯಾವುದೇ ದೂರು ಬರಬಾರದು. ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದು ಬಿಬಿಎಂಪಿ (BBMP) ಅಧಿಕಾರಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ವಾರ್ನಿಂಗ್ ಮಾಡಿದ್ದಾರೆ. 

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೆಪ್ಟಂಬರ್ 15ರ ವರೆಗೆ ಗಡುವು ಕೊಟ್ಟಿದ್ದೇನೆ. ನಂತರ ನಾನೇ ಸಿಟಿ ರೌಂಡ್ ಹಾಕುತ್ತೇನೆ. ಬೇಗ ಗುಂಡಿ ಮುಚ್ಚಬೇಕು. ಏನಾದರೂ ಸಮಸ್ಯೆಯಾದರೆ ಎಷ್ಟು ಜನ ಅಧಿಕಾರಿಗಳು ಸಸ್ಪೆಂಡ್ ಆಗುತ್ತಾರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ನಡುವೆ ಶಾಂತಿ ಮಾತುಕತೆಗೆ ಮೋದಿ ಪ್ರಯತ್ನ; ಮಾಸ್ಕೋಗೆ ಅಜಿತ್‌ ದೋವಲ್‌

    ನೀರು ನಿಲ್ಲುವ ಜಾಗಗಳ ಬಗ್ಗೆ ಗಮನ ಕೊಡಿ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಹಿನ್ನೆಲೆ ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸೂಟ್ ಹೊಲಿಸಿಕೊಳ್ಳೋರ ಸಂಖ್ಯೆ ಹೆಚ್ಚಾಗಿದೆ – ಕಾಂಗ್ರೆಸ್‍ಗೆ ಬಿಜೆಪಿ ಟಾಂಗ್

    ಡಿಸಿಎಂ ಅಮೆರಿಕ (America) ಪ್ರವಾಸಕ್ಕೆ ತೆರಳುವ ಮುನ್ನ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಲ್ಲೇಶ್ವರಂ (Malleshwaram) ಬಿಬಿಎಂಪಿ ಐಪಿಪಿ ಕಚೇರಿಯಲ್ಲಿ ಸಭೆ ನಡೆಸಿದರು. ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು ಗಡುವು ನೀಡಿದ ಹಿನ್ನೆಲೆಯಲ್ಲಿ, ಆಗಿರುವ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಹೆಚ್ಚಾಗಿರುವ ರಸ್ತೆ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರು ಹಾಜರಿದ್ದರು. ಇದನ್ನೂ ಓದಿ: ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಿ ಶಿವಮೊಗ್ಗ ಆಯ್ಕೆ ಮಾಡಲು ಹೆಚ್‌ಡಿಕೆಗೆ ಮನವಿ

  • ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯಿಂದ ಕ್ಯೂಆರ್‌ ಕೋಡ್ ಪ್ಲ್ಯಾನ್‌

    ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯಿಂದ ಕ್ಯೂಆರ್‌ ಕೋಡ್ ಪ್ಲ್ಯಾನ್‌

    – 462 ಸ್ಥಳದಲ್ಲಿ ಮೊಬೈಲ್ ಟ್ಯಾಂಕರ್, 41 ಕೆರೆಗಳ ಗುರುತಿಸಿದ ಪಾಲಿಕೆ

    ಬೆಂಗಳೂರು: ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯು (BBMP) ವಿನೂತನ ಪ್ಲ್ಯಾನ್‌ ಒಂದು ಮಾಡಿದ್ದು, ಸಾರ್ವಜನಿಕರು ಕ್ಯೂಆರ್‌ ಕೋಡ್ (QR Code) ಬಳಸುವ ಮೂಲಕ ಗಣೇಶನ ವಿಸರ್ಜನೆ ಸ್ಥಳದ ವಿವರ ಪಡೆಯಬಹುದಾಗಿದೆ.

    ಗಣಪತಿ ವಿಸರ್ಜನೆ (Ganapati Dissolution) ಯಾವ ಸ್ಥಳದಲ್ಲಿ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ಕ್ಯೂಆರ್‌ ಕೋಡ್ ಸ್ಕ್ಯಾನ್‌ ಮಾಡುವ ಮೂಲಕ ಪಡೆಯಬಹುದಾಗಿದೆ. ಗಣೇಶ ವಿಸರ್ಜನೆಗಾಗಿಯೇ 41 ಕೆರೆಗಳ ಶಾಶ್ವತ ಕಲ್ಯಾಣಿ ಸೇರಿದಂತೆ ಒಟ್ಟು 462 ಸ್ಥಳದಲ್ಲಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಕಲ್ಯಾಣಿಯಿಲ್ಲದ ಕೆರೆಯ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ‘ಮಿಸ್ಟರ್ ಬಚ್ಚನ್’ ಸೋತಿದ್ದಕ್ಕೆ 4 ಕೋಟಿ ಸಂಭಾವನೆ ಹಿಂದಿರುಗಿಸಿದ ರವಿತೇಜ

    ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಬಿಬಿಎಂಪಿಯು ಪ್ರತಿ ವಾರ್ಡಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಸಾರ್ವಜನಿಕರು ಕ್ಯೂಆರ್ ಕೋಡ್ ಬಳಸುವ ಮೂಲಕ ಆಯಾ ವಾರ್ಡ್‌ ನೋಡಲ್ ಅಧಿಕಾರಿಗಳ ವಿವರಗಳನ್ನೂ ಸಹ ಪಡೆಯಬಹುದಾಗಿದೆ.

    ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಕಂದಾಯ ಉಪಕಚೇರಿಯಲ್ಲಿ 63 ಏಕಗವಾಕ್ಷಿ ಕೇಂದ್ರಗಳು ತೆರೆಯಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಒಟ್ಟು 462 ತಾತ್ಕಾಲಿಕ ಮೊಬೈಲ್ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ.

    ಗಣೇಶ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಕೆರೆ ಹಾಗೂ ಕಲ್ಯಾಣಿ ಬಳಿ ಪೊಲೀಸ್, ಬ್ಯಾರಿಕೇಡ್, ಅಗ್ನಿಶಾಮಕ, ಬೆಸ್ಕಾಂ, ವಿದ್ಯುತ್ ದೀಪದ ವ್ಯವಸ್ಥೆ, ಈಜುಗಾರರು, ಧ್ವನಿವರ್ಧಕ ಜೊತೆಗೆ ಎನ್‌ಡಿಆರ್‌ಎಫ್ (NDRF) ತಂಡ ನಿಯೋಜನೆ ಮಾಡಲಾಗಿದೆ.

    ದುರ್ಘಟನೆಯ ಮುನ್ನೆಚ್ಚರಿಕಾ ಕ್ರಮವಾಗಿ ಅಂಬುಲೆನ್ಸ್, ವ್ಯೆದ್ಯರು ಮತ್ತು ಪ್ರಾಥಮಿಕ ಚಿಕಿತ್ಸೆ ನೀಡಲು ಶುಶ್ರೂಕಿಯರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಹೆಚ್ಚುವರಿಯಾಗಿ ಅಂಬುಲೆನ್ಸ್ ಮತ್ತು ವೈದ್ಯರ ವ್ಯವಸ್ಥೆ ಮಾಡಿದೆ.ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

    ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. https://apps.bbmpgov.in/ganesh2024/ ಪಾಲಿಕೆ ವೆಬ್‌ಸೈಟ್ ಲಿಂಕ್ ಮೂಲಕ ಮಾಹಿತಿ ಪಡೆಯಲು ಅವಕಾಶ ಇದೆ.

    ವಲಯವಾರು ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳ ವಿವರ

    ವಲಯ                      ಮೊಬೈಲ ಟ್ಯಾಂಕರ್                   ಕಲ್ಯಾಣಿ

    ಪೂರ್ವ                            138                                         01
    ಪಶ್ಚಿಮ                            84                                          01
    ದಕ್ಷಿಣ                              43                                           02
    ಬೊಮ್ಮನಹಳ್ಳಿ                  60                                           05
    ಆರ್‌ಆರ್ ನಗರ                 74                                          07
    ಮಹದೇವಪುರ                  40                                           14
    ದಾಸರಹಳ್ಳಿ                      19                                          01
    ಯಲಹಂಕ                         4                                          10

    ಒಟ್ಟು                             462                                       41

  • ಗಣೇಶ ಚತುರ್ಥಿ ಪ್ರಯುಕ್ತ ಸೆ.7ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

    ಗಣೇಶ ಚತುರ್ಥಿ ಪ್ರಯುಕ್ತ ಸೆ.7ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

    ಬೆಂಗಳೂರು: ಗಣೇಶ ಚತುರ್ಥಿ (Ganesh Chaturthi) ಹಬ್ಬದ ಪ್ರಯುಕ್ತ ಪ್ರಾಣಿವಧೆ (Animal Slaughter) ಹಾಗೂ ಮಾಂಸ ಮಾರಾಟ (Meat Sale) ನಿಷೇಧಿಸಿದೆ ಎಂದು ಬಿಬಿಎಂಪಿ (BBMP) ಆದೇಶ ಹೊರಡಿಸಿದೆ. ಅಲ್ಲದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

    ಸೆ.7ರಂದು ಗಣೇಶ ಚತುರ್ಥಿ ಹಬ್ಬದ ದಿನವಾಗಿದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ, ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರುವಂತಿಲ್ಲ. ಈ ಕುರಿತು ಬಿಬಿಎಂಪಿ ಜಂಟಿ ನಿರ್ದೇಶಕರು (ಪಶುಪಾಲನೆ) ಸುತ್ತೋಲೆ ಹೊರಡಿಸಿದ್ದಾರೆ. ನಿಯಮ ಮೀರಿದಲ್ಲಿ ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ. ಇದನ್ನೂ ಓದಿ: Punjab Economic Crisis | ವಿದ್ಯುತ್‌ ಸಬ್ಸಿಡಿ ರದ್ದುಗೊಳಿಸಿ ಪೆಟ್ರೋಲ್‌, ಡೀಸೆಲ್‌ ಜೊತೆ ಬಸ್‌ ಟಿಕೆಟ್‌ ದರ ಏರಿಸಿದ ಪಂಜಾಬ್‌

    ಇನ್ನು ನಗರದಾದ್ಯಂತ ಗಣೇಶ ಉತ್ಸವವನ್ನು ಆಯೋಜಿಸುವವರಿಗೆ ಈಗಾಗಲೇ ಬಿಬಿಎಂಪಿ ಕಡ್ಡಾಯವಾಗಿ ಪಾಲಿಸುವಂತೆ ಕೆಲ ನಿಯಮಗಳ ಪಟ್ಟಿ ಪ್ರಕಟಿಸಿತ್ತು. ನಗರದ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ರಸ್ತೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆದರೆ ಗಣೇಶ ಉತ್ಸವದ ಆಯೋಜಕರನ್ನೇ ಹೊಣೆ ಮಾಡುವ ಬಗ್ಗೆ ಬಿಬಿಎಂಪಿ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ರಾಜಕೀಯ ಪ್ರೇರಿತ: ಭಾರತದ ವಿರುದ್ಧವೇ ಪ್ರಶ್ನೆ ಎತ್ತಿದ ಯೂನಸ್