Tag: bbmp

  • ನ.15 ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಬಿಬಿಎಂಪಿ ಆಯುಕ್ತರ ಸೂಚನೆ

    ನ.15 ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಬಿಬಿಎಂಪಿ ಆಯುಕ್ತರ ಸೂಚನೆ

    ಬೆಂಗಳೂರು: ನವೆಂಬರ್‌ 15ರೊಳಗೆ ರಾಜಕಾಲುವೆ ಒತ್ತುವರಿ (Rajkaluve Encroachment) ತೆರವುಗೊಳಿಸುವಂತೆ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

    ನವೆಂಬರ್ 15ರ ಒಳಗಡೆ ರಾಜಕಾಲುವೆ ತೆರವು ಕಾರ್ಯಾಚರಣೆ ಮಾಡುವಂತೆ ಬಿಬಿಎಂಪಿಯ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ತಹಶೀಲ್ದಾರ್ ಅವರು ಪರಾಮರ್ಶಿಸಿ ಕೂಡಲೇ ತೆರವಿಗೆ ಆದೇಶ ಮಾಡಬೇಕು ಅಂತಾ ಸೂಚಿಸಿದ್ದಾರೆ.

    ಬಿಬಿಎಂಪಿಯ ದಾಖಲೆಗಳ ಪ್ರಕಾರ ಒಟ್ಟು 1,712 ರಾಜಕಾಲುವೆ ಒತ್ತುವರಿಯಾಗಿದೆ. ಈ ಪೈಕಿ ಬರೋಬ್ಬರಿ 1,348 ಪ್ರಕರಣಗಳು ಸರ್ವೇ ಹಾಗೂ ವಿಚಾರಣೆ ಹಂತದಲ್ಲಿವೆ. ನ್ಯಾಯಾಲಯದಿಂದ ತೆರವಿಗೆ ಆದೇಶವಿರುವ 167 ಒತ್ತುವರಿಯನ್ನು ಸಹ ಬಿಬಿಎಂಪಿ ಇನ್ನೂ ತೆರವುಗೊಳಿಸಿಲ್ಲ.

    ರಾಜಕಾಲುವೆ ಒತ್ತುವರಿ ವಿವರ ಹೀಗಿದೆ:

    ವಲಯ                              ಒತ್ತುವರಿ ಸಂಖ್ಯೆ                        ತೆರವು ಆದೇಶ
    ಪೂರ್ವ ವಲಯ                   123                                          13
    ಪಶ್ಚಿಮ ವಲಯ                   46                                           0
    ದಕ್ಷಿಣ ವಲಯ                     46                                           0
    ಕೋರಮಂಗಲ ಕಣಿವೆ          104                                         0
    ಯಲಹಂಕ                          359                                        55
    ಮಹದೇವಪುರ                    492                                        16
    ಬೊಮ್ಮನಹಳ್ಳಿ                     201                                        25
    ಆರ್ ಆರ್ ನಗರ                  104                                        13
    ದಾಸರಹಳ್ಳಿ                        287                                        45
    ಒಟ್ಟು                                1,712                                  167

  • ಬೆಂಗಳೂರು| ಬೀಳುವ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಆರಂಭ

    ಬೆಂಗಳೂರು| ಬೀಳುವ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಆರಂಭ

    ಬೆಂಗಳೂರು: ಬಾಬುಸಪಾಳ್ಯ ಕಟ್ಟಡ ದುರಂತ ಬಳಿಕ ಬಿಬಿಎಂಪಿ ಎಚ್ಚರಗೊಂಡಿದ್ದು ಬೀಳುವ ಹಂತದಲ್ಲಿದ್ದ ಮತ್ತೊಂದು ಅನಧಿಕೃತ ಕಟ್ಟಡದ ತೆರವು ಕಾರ್ಯಾಚರಣೆ ಆರಂಭವಾಗಿದೆ.

    ಮಹಾದೇವಪುರ ವಲಯದ ಹೊರಮಾವಿನ ನಂಜಪ್ಪ ಗಾರ್ಡನ್‌ನಲ್ಲಿ ಪುಟ್ಟಪ್ಪ ಎಂಬವರು 10*25 ಅಡಿಯಲ್ಲಿ ಜಾಗದಲ್ಲಿ 6 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದರು.

    ವಾಲಿಕೊಂಡಿರುವ ಕಟ್ಟಡವನ್ನು ತೆರವುಗೊಳಿಸಲು ಬಿಬಿಎಂಪಿ ಸೂಚನೆ ನೀಡುತ್ತಿದ್ದಂತೆ ಸ್ವಯಂಪ್ರೇರಿತವಾಗಿ ಮಾಲೀಕರೇ ಈಗ ಕಟ್ಟಡ ತೆರವು ಮಾಡಲು ಮುಂದಾಗಿದ್ದಾರೆ.  ಇದನ್ನೂ ಓದಿ: ಶಿವಮೊಗ್ಗ| ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ದ ಕಾರು

    ಕಟ್ಟಡ ತೆರವು ಮಾಡದಿದ್ದರೆ ಕ್ರಿಮಿನಲ್‌ ಕೇಸ್‌ ಹಾಕುವ ಎಚ್ಚರಿಕೆಯನ್ನು ಪಾಲಿಕೆ ನೀಡಿತ್ತು. ಈ ಬೆನ್ನಲ್ಲೇ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಮಾಲೀಕರೇ ಈ ಕಟ್ಟಡವನ್ನು ತೆರವು ಮಾಡಲು ಮುಂದಾಗಿದ್ದಾರೆ.

    ಅಕ್ಕಪಕ್ಕದಲ್ಲಿ ಮನೆಗಳು ಇರುವ ಕಾರಣ ಈಗ ಕೆಲಸಗಾರರು ಸುತ್ತಿಗೆಯಿಂದ ಬಡಿದು ಕಟ್ಟಡವನ್ನು ಒಡೆಯುತ್ತಿದ್ದಾರೆ. ಮೇಲ್ಭಾಗ ಕಟ್ಟಡ ತೆರವು ಮುಗಿದ ಬಳಿಕ ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಲಾಗುತ್ತದೆ.

     

  • ಬಿಬಿಎಂಪಿಗೆ ಡಿಸಿಎಂ ಖಡಕ್ ವಾರ್ನಿಂಗ್ – ಸೋಮವಾರದಿಂದ ಅನಧಿಕೃತ ಕಟ್ಟಡಗಳ ಸರ್ವೆ ಆರಂಭ

    ಬಿಬಿಎಂಪಿಗೆ ಡಿಸಿಎಂ ಖಡಕ್ ವಾರ್ನಿಂಗ್ – ಸೋಮವಾರದಿಂದ ಅನಧಿಕೃತ ಕಟ್ಟಡಗಳ ಸರ್ವೆ ಆರಂಭ

    – ಸದೃಢ ಇಲ್ಲದ, ಅನಧಿಕೃತ ಕಟ್ಟಡಗಳ ತೆರವಿಗೆ ಸೂಚನೆ

    ಬೆಂಗಳೂರು: ಬಾಬುಸಾಬ್ ಪಾಳ್ಯ ಕಟ್ಟಡ ದುರಂತ (Babusapalya Building Collapse) ಬಳಿಕ ನಗರದ ಕಟ್ಟಡಗಳ ಸಂಬಂಧ ಬಿಬಿಎಂಪಿ (BBMP) ಅಧಿಕಾರಿಗಳಿಗೆ ಡಿಸಿಎಂ ಖಡಕ್ ವಾರ್ನಿಂಗ್‌ ಕೊಟ್ಟಿದ್ದಾರೆ. ಅನಧಿಕೃತ ಕಟ್ಟಡ ತೆರವಿಗೆ‌ ಡಿಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದು, ಸೋಮವಾರದಿಂದಲೇ ಅಧಿಕಾರಿಗಳು ಅಖಾಡಕ್ಕಿಳಿದು ಸರ್ವೆ (Survey) ನಡೆಸಲಿದ್ದಾರೆ.

    ಮೂರು ದಿನದ ಹಿಂದೆ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ದುರಂತ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ನಗರದಲ್ಲಿ ಅನಧಿಕೃತ, ಸದೃಢ ಇಲ್ಲದ ಕಟ್ಟಡಗಳ ಸರ್ವೆಗೆ ಸೂಚಿಸಿದ್ದು, ಸರ್ವೆ ಬಳಿಕ ಮುಲಾಜಿಲ್ಲದೇ ಅಂತಹ ಕಟ್ಟಡಗಳನ್ನು ತೆರವು ಮಾಡುವಂತೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಒಡಿಶಾ ತೀರಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ – ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ

    ಬಾಬುಸಾಬ್ ಪಾಳ್ಯ ದುರಂತ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಕೇವಲ ಜನರನ್ನು ಮಾತ್ರ ಅಲ್ಲದೇ ಸದ್ಯ ಈ ಸಂಬಂಧ ಡಿಸಿಎಂ ಹೊರಡಿಸಿರುವ ಆದೇಶ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದವರಿಗೂ ಕೂಡ ನಿದ್ದೆ ಹಾಳು ಮಾಡಿದೆ. ಕಟ್ಟಡ ದುರಂತ ಬಳಿಕ ಎಚ್ಚೆತ್ತಿರುವ ಸರ್ಕಾರ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣ ಆಗುತ್ತಿರುವ ಕಟ್ಟಡಗಳ ಸರ್ವೆಗೆ ಮುಂದಾಗಿದೆ. ಇದೇ ಸೋಮವಾರದಿಂದ ಬಿಬಿಎಂಪಿ ವಲಯ ಆಯುಕ್ತರ ನೇತೃತ್ವದಲ್ಲಿ ಫೀಲ್ಡಿಗಿಳಿಯಲಿರುವ ಅಧಿಕಾರಿಗಳು ಖುದ್ದು ಸರ್ವೆ ನಡೆಸಿ ಅನಧಿಕೃತ ನಿರ್ಮಾಣ, ಸಡಿಲಗೊಂಡ ಕಟ್ಟಡಗಳು, ಹೊಸ ಕಟ್ಟಡಗಳ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಈ ಮೂಲಕ ನಗರದಲ್ಲಿ ಅಪಾಯದಲ್ಲಿರುವ, ನಿಯಮ ಬಾಹಿರವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನ ತೆರವು ಮಾಡುವ ಮೊದಲ ಹೆಜ್ಜೆ ಆರಂಭವಾಗಲಿದೆ. ಇದನ್ನೂ ಓದಿ: ಐದು ಲಕ್ಷ ಕೋಟಿಯ ಸಾಮ್ರಾಜ್ಯ ಕಟ್ಟುವ ಕನಸಿದೆ: ಬಾಬಾ ರಾಮ್‌ದೇವ್‌

    ಇನ್ನೂ ಈ ಹಿಂದೆಯೇ ಡ್ರೋಣ್ ಮೂಲಕ ಅನಧಿಕೃತ ಕಟ್ಟಡ, ಹೆಚ್ಚುವರಿ ಅಂತಸ್ತು ನಿರ್ಮಾಣ ಸೇರಿದಂತೆ ನಿಯಮಬಾಹಿರ ನಿರ್ಮಾಣ ಕಟ್ಟಡಗಳ ಸರ್ವೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಖುದ್ದು ಅಧಿಕಾರಿಗಳಿಗೆ ದೈಹಿಕವಾಗಿ ಸರ್ವೆ ನಡೆಸಿ ರಿಪೋರ್ಟ್ ಸಿದ್ಧ ಮಾಡುವಂತೆ ಡಿಸಿಎಂ ಸೂಚಿಸಿದ್ದಾರೆ. ಅದು ಕೂಡ ಒಂದು ವಾರದಲ್ಲೇ ಈ ರಿಪೋರ್ಟ್ ಸಿದ್ಧವಾಗಬೇಕು. ಸಿದ್ಧವಾದ ರಿಪೋರ್ಟ್ ಪರಿಶೀಲನೆಗೊಂಡ ತಕ್ಷಣದಲ್ಲೇ ಅಂತಹ ಕಟ್ಟಡಗಳ ತೆರವು ಮಾಡುವಂತೆ ಡಿಸಿಎಂ ಸೂಚಿಸಿದ್ದಾರೆ. ಇದನ್ನೂ ಓದಿ: ರಸ್ತೆ ಮಧ್ಯೆ ಜೋತಾಡುತ್ತಿದ್ದ ವಿದ್ಯುತ್ ವೈರ್‌ಗೆ ಇಬ್ಬರು ರೈತರು ಬಲಿ

  • ಬೆಂಗಳೂರಿನಲ್ಲಿ ಮತ್ತೊಂದು ಡೇಂಜರ್ ಬಿಲ್ಡಿಂಗ್‌ – ಕುಸಿಯುವ ಆತಂಕದಲ್ಲಿ ಜನ!

    ಬೆಂಗಳೂರಿನಲ್ಲಿ ಮತ್ತೊಂದು ಡೇಂಜರ್ ಬಿಲ್ಡಿಂಗ್‌ – ಕುಸಿಯುವ ಆತಂಕದಲ್ಲಿ ಜನ!

    – ಕಟ್ಟಡ ನೆಲಸಮಕ್ಕೆ ಬಿಬಿಎಂಪಿ ಸೂಚನೆ

    ಬೆಂಗಳೂರು: ಬಾಬುಸಾಪಾಳ್ಯ ಔಟರ್‌ರಿಂಗ್ ರೋಡ್‌ನ ಹೊರಮಾವು ನಂಜಪ್ಪ ಗಾರ್ಡನ್‌ನಲ್ಲಿರುವ ಮತ್ತೊಂದು ಕಟ್ಟಡ ಬಿರುಕು ಬಿಟ್ಟಿದ್ದು ಕುಸಿಯುವ ಹಂತ ತಲುಪಿದೆ. ಇದರಿಂದ ಸುತ್ತಮುತ್ತಲಿನ ಜನ ಆತಂಕಕ್ಕೆ ಒಳಗಾಗಿದ್ದಾರೆ.

    ನಗರದಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಎರಡು ದಿನಗಳ ಹಿಂದೆಯಷ್ಟೇ ಬಾಬುಸಾಪಾಳ್ಯದ ಕಟ್ಟಡವೊಂದು ಬುಡಮೇಲಾಗಿ ಉರುಳಿತ್ತು. ಇದೀಗ ನಿರ್ಮಾಣ ಹಂತದಲ್ಲಿರುವ 6 ಅಂತಸ್ತಿನ ಕಟ್ಟಡ ಬಿರುಕು ಬಿಟ್ಟಿದ್ದು, ಕೊಂಚ ವಾಲಿದಂತೆ ಕಾಣುತ್ತಿದೆ. ಪುಟ್ಟಪ್ಪ ಎಂಬುವರಿಗೆ ಈ ಕಟ್ಟಡ ಸೇರಿದ್ದು, ಈಗಾಗಲೇ ಕಟ್ಟಡ ತೆರವಿಗಾಗಿ ಬಿಬಿಎಂಪಿ ಅಧಿಕಾರಿಗಳಿಂದ ಸೂಚನೆಯನ್ನು ನೀಡಲಾಗಿದೆ.ಇದನ್ನೂ ಓದಿ: ಕೊನೆಗೂ ಅಲ್ಪಸಂಖ್ಯಾತ ಅಭ್ಯರ್ಥಿಗೆ ಶಿಗ್ಗಾಂವಿ ಟಿಕೆಟ್‌ ನೀಡಿದ ಕಾಂಗ್ರೆಸ್‌

    ನಂಜಪ್ಪ ವಾರ್ಡ್ನ ಸರ್ವೇ ನಂಬರ್ 54/1ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಸೆ.20 ರಂದು ಕಟ್ಟಡ ತೆರವಿಗಾಗಿ ಬಿಬಿಎಂಪಿಯಿAದ ನೋಟಿಸ್ ನೀಡಲಾಗಿತ್ತು. ಅ.14 ರಂದು ತೆರವಿಗಾಗಿ ಉತ್ತರ ನೀಡಿದ್ದ ಮಾಲೀಕ ಅ.24 ರಂದು ಅಂದರೆ ಇಂದು ತೆರವುಗೊಳಿಸುವುದಾಗಿ ತಿಳಿಸಿದ್ದರು. ಜೊತೆಗೆ ತಮ್ಮ ಸ್ವಂತ ಹಣದಲ್ಲಿ ಕಟ್ಟಡವನ್ನು ತೆರವುಗೊಳಿಸುವುದಾಗಿ ತಿಳಿಸಿದ್ದರು. ನೆಲಮಹಡಿ ಸೇರಿದಂತೆ ಒಟ್ಟು 6 ಅಂತಸ್ತಿನ ಮಹಡಿಯ ಮನೆಯನ್ನು ಉರುಳಿಬಿದ್ದ ಕಟ್ಟಡದಂತೆಯೇ ಕಟ್ಟಿಸಲಾಗಿತ್ತು. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ನಿರ್ಮಾಣದ ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ. ಮಂಜೂರಾತಿ ನಕ್ಷೆ, ನಡು ಜಾಗಗಳನ್ನು ಬಿಡದೇ ಕಟ್ಟಡವನ್ನು ಕಟ್ಟಿಸಿದ್ದರು.

    ಕಟ್ಟಡ ಈಗಾಗಲೇ ಕೆಲವು ಕಡೆ ಬಿರುಕು ಬಿಟ್ಟಿದ್ದು, ಇಂದಿನಿಂದಲೇ ತೆರವು ಕಾರ್ಯ ಆರಂಭಿಸಲಾಗಿದೆ. ಕಟ್ಟಡದ ಅಕ್ಕಪಕ್ಕ ಇದ್ದ ಮೂರ್ನಾಲ್ಕು ಕುಟುಂಬಗಳನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿದೆ.

    ಒಟ್ಟು ಎರಡು ಕಟ್ಟಡಗಳು ಬಿರುಕು ಬಿಟ್ಟಿದ್ದು, ಬಿಬಿಎಂಪಿ (BBMP) ಎಂಜಿನಿಯರ್ಸ್ ಪರಿಶೀಲನೆ ಮಾಡುತ್ತಿದ್ದಾರೆ. ಒಂದು ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲಿದೆ. ಇನ್ನೊಂದು ಕಂಪ್ಲೀಟ್ ಆಗಿದೆ. ಪರಿಶೀಲನೆ ನಂತರ ನೋಟೀಸ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಬಿಬಿಎಂಪಿ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಆಸ್ತಿ ಒಡೆಯ; ಆದ್ರೂ ಸ್ವಂತ ಕಾರು ಇಲ್ಲ!

  • Bengaluru Rain | ಸಾಂಕ್ರಾಮಿಕ ರೋಗ ಭೀತಿ – ಬೀದಿಬದಿ ಆಹಾರ, ಕತ್ತರಿಸಿದ ಹಣ್ಣು ಮಾರಾಟಕ್ಕೆ ನಿಷೇಧ

    Bengaluru Rain | ಸಾಂಕ್ರಾಮಿಕ ರೋಗ ಭೀತಿ – ಬೀದಿಬದಿ ಆಹಾರ, ಕತ್ತರಿಸಿದ ಹಣ್ಣು ಮಾರಾಟಕ್ಕೆ ನಿಷೇಧ

    – ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಮಳೆಯಿಂದ (Bengaluru Rain) ತಗ್ಗು ಪ್ರದೇಶ, ರಾಜಕಾಲುವೆ, ಕೆರೆಯ ಆಸುಪಾಸಿನ ಜಾಗಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾದ ಬೆನ್ನಲ್ಲೇ ಬಿಬಿಎಂಪಿ (BBMP) ಕೆಲ ಮಾರ್ಗಸೂಚಿಯನ್ನು ಹೊರಡಿಸಿದೆ.

    ನಿರಂತರ ಮಳೆಯಿಂದ ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಲರಾ, ಜಾಂಡಿಸ್, ಡೆಂಘೀ, ಕರುಳಬೇನೆ, ಚಿಕನ್ ಗುನ್ಯಾ ಮಲೇರಿಯಾ ರೋಗಗಳ ಆತಂಕ ಎದುರಾಗಿದೆ.

    ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೂಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಅದೇಶ ನೀಡಲಾಗಿದೆ. ಅರ್ ಅರ್ ನಗರ, ಮಹಾದೇವಪುರ, ಯಲಹಂಕ, ಬೊಮ್ಮನಹಳ್ಳಿ ವಲಯಗಳಲ್ಲಿ ಕುಡಿಯುವ ನೀರಿನ ಪರೀಕ್ಷೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: Dana Cyclone | ಒಡಿಶಾ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ 10 ಲಕ್ಷ ಜನರ ಸ್ಥಳಾಂತರ

    ಮಾರ್ಗಸೂಚಿಯಲ್ಲಿ ಏನಿದೆ?
    – ಬೆಂಗಳೂರಿನ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ನೀಡುವುದು ಕಡ್ಡಾಯ.
    – ಬೀದಿಬದಿ ಆಹಾರ, ಕತ್ತರಿಸಿದ ಹಣ್ಣು (ಫ್ರೂಟ್ ಬೌಲ್) ಮಾರಾಟ ನಿಷೇಧ.
    – ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಹಾಲೋಜೆನ್ ಮಾತ್ರೆಗಳನ್ನು ನೀಡಬೇಕು.
    – ನೆರೆ ಪೀಡಿತ ಪ್ರದೇಶ ಜನರಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಔಷಧಿಗಳನ್ನು ಒದಗಿಸಬೇಕು.
    – ಪ್ರತಿ ವಾರ್ಡ್ ಗಳ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಹೆರಿಗೆ ಆಸ್ಪತ್ರೆಗಳಲ್ಲಿ ಔಷಧಿ ಸಿಗುವಂತೆ ಕ್ರಮ.
    – ತುರ್ತು ಪರಿಸ್ಥಿತಿ ನಿಭಾಯಿಸಲು ಪಾಲಿಕೆಯ ಎಲ್ಲಾ ಸಿಬ್ಬಂದಿ ಸನ್ನದ್ಧರಾಗಿರಬೇಕು.
    – ನೀರು ಸಂಗ್ರಹಿಸುವ ಟ್ಯಾಂಕರ್ ಗಳನ್ನು ಶುದ್ಧಗೊಳಿಸಿ ಅಗತ್ಯಕ್ಕೆ ತಕ್ಕಂತೆ ಸಿಗುವಂತೆ ನೋಡಿಕೊಳ್ಳಬೇಕು.

     

  • ಬಾಬುಸಾಬ್ ಪಾಳ್ಯ ಕಟ್ಟಡ ದುರಂತಕ್ಕೆ ಟ್ವಿಸ್ಟ್ – ಹಳೇ ಕಟ್ಟಡದಲ್ಲಿ ಹೊಸ ಬಿಲ್ಡಿಂಗ್ ನಿರ್ಮಾಣ

    ಬಾಬುಸಾಬ್ ಪಾಳ್ಯ ಕಟ್ಟಡ ದುರಂತಕ್ಕೆ ಟ್ವಿಸ್ಟ್ – ಹಳೇ ಕಟ್ಟಡದಲ್ಲಿ ಹೊಸ ಬಿಲ್ಡಿಂಗ್ ನಿರ್ಮಾಣ

    – 2 ತಿಂಗಳ ಹಿಂದೆಯೇ ನಿಯಮ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡಿದ್ದ ಸ್ಥಳೀಯರು

    ಬೆಂಗಳೂರು: ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ (Babusapalya Building Collapse) ಪ್ರಕರಣದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು, ಇನ್ನೂ ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಈ ಮಧ್ಯೆ ಬಿಬಿಎಂಪಿ (BBMP) ಅಧಿಕಾರಿಗಳು, ಕಟ್ಟಡದ ಮಾಲೀಕನ ನಿರ್ಲಕ್ಷ್ಯದ ವಿಚಾರಗಳು ಒಂದೊಂದೇ ಹೊರಗೆ ಬರುತ್ತಿದೆ.

    ಬಾಬುಸಾಬ್ ಪಾಳ್ಯ ಕಟ್ಟಡ ದುರಂತದಲ್ಲಿ ಈಗಾಗಲೇ ಎಂಟು ಜನ ದಾರುಣಾವಾಗಿ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಡಿಸಿಎಂ, ಸಚಿವರು, ಶಾಸಕರು, ಲೋಕಾಯುಕ್ತ ನ್ಯಾಯಾಧೀಶರು ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಮಾಲೀಕನ ಕಳಪೆ ಕಾಮಗಾರಿ, ನಿಯಮ ಉಲ್ಲಂಘನೆ ಬಗ್ಗೆ ಕ್ರಮ ಕೈಗೊಳ್ಳುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಆಯುಕ್ತರು, ಸೇರಿದಂತೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲಿನ ಸ್ಥಳೀಯರು ಪತ್ರ ಬರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿ ಖಾತಾ ಇರುವ ಜಾಗದಲ್ಲಿ ಆರು ಅಂತಸ್ತಿನ ಕಟ್ಟಡ ಕಟ್ಟುತ್ತಿರೋದು, ಕಳಪೆ ಕಾಮಗಾರಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಸ್ಥಳೀಯರು ಪತ್ರ ಬರೆದು ಎಚ್ಚರಿಸಿದ್ದಾರೆ. ಆದರೆ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ – ಇಂದು ಮಧ್ಯಾಹ್ನ ತೆರೆಯಲಿದೆ ಗರ್ಭಗುಡಿ ಬಾಗಿಲು

    ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ, ಕಳೆದ ಎರಡು ವರ್ಷಗಳ ಹಿಂದೆ ಬಿ ಖಾತಾ ಜಾಗದಲ್ಲಿ 40-60 ಅಡಿಯ ಒಂದು ಅಂತಸ್ತಿನ ಬಿಲ್ಡಿಂಗ್ ಖರೀದಿ ಮಾಡಿದ್ದಾರೆ. ಇದೇ ವೇಳೆ ಕಂಟ್ರಾಕ್ಟರ್ ಈ ಕಟ್ಟಡವನ್ನು ನಾನೇ ಕಟ್ಟಿರೋದು, ಕಟ್ಟಡ ತುಂಬಾ ಗಟ್ಟಿಯಾಗಿದೆ ಎಂದು ಮಾಲೀಕನಿಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಹಳೇ ಕಟ್ಟಡದ ಮೇಲೆಯೇ, ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟುವ ಪ್ಲಾನ್ ಮಾಡಿದ್ದಾರೆ. ಕಟ್ಟಡ ಕಟ್ಟೋಕೆ ಶುರು ಮಾಡಿದ ಬಳಿಕ ನಾಲ್ಕು ಅಂತಸ್ತು ಹೋಗಿ ಆರು ಅಂತಸ್ತು ಕಟ್ಟಿದ್ದಾರೆ. ಅಪಾರ್ಟ್‌ಮೆಂಟ್ ಅಂತಾ ಶುರುವಾಗಿ ಪಿಜಿ ಮಾಡುವ ಪ್ಲಾನ್ ಇತ್ತು ಎಂದು ತಿಳಿದುಬಂದಿದೆ. ಮಾಲೀಕ ಮುನಿರಾಜು ರೆಡ್ಡಿ, ಕಂಟ್ರಾಕ್ಟರ್ ಮುನಿರಾಜುಗೆ ಸಂಪೂರ್ಣ ಜವಾಬ್ದಾರಿ ನೀಡಿ ಬೇಕಾಬಿಟ್ಟಿ ಕಟ್ಟಡ ನಿರ್ಮಿಸಿರೋದು ಅವಘಡಕ್ಕೆ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಟ್ಟಡ ದುರಂತ – ಮೂವರು ಅರೆಸ್ಟ್‌

    ಸದ್ಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಾಲೀಕ ಮುನಿರಾಜು ರೆಡ್ಡಿ, ಮಗ ಭುವನ್ ರೆಡ್ಡಿ, ಕಂಟ್ರಾಕ್ಟರ್ ಮುನಿರಾಜುವನ್ನು ಬಂಧಿಸಲಾಗಿದೆ. ಮತ್ತೊಂದು ಕಡೆ ಸ್ಥಳೀಯ ಎಇಇಯನ್ನು ಅಮಾನತು ಮಾಡಲಾಗಿದೆ. ಆದರೆ ಅಧಿಕಾರಿಗಳು, ಮಾಲೀಕರ ಹಣದಾಸೆ, ನಿರ್ಲಕ್ಷ್ಯಕ್ಕೆ ಜೀವನ ಅರಸಿ ದೂರದ ಊರುಗಳಿಂದ ಬಂದಿದ್ದ ಅಮಾಯಕ ಜೀವಗಳು ಬಲಿಯಾಗಿರೋದು ಮಾತ್ರ ದುರಂತವೇ ಸರಿ.‌ ಇದನ್ನೂ ಓದಿ: ಹಬ್ಬಕ್ಕೆ ಬಂದಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವು?

  • ಬೆಂಗಳೂರು ಕಟ್ಟಡ ಕುಸಿತ- ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಮಾಲೀಕ ಅರೆಸ್ಟ್

    ಬೆಂಗಳೂರು ಕಟ್ಟಡ ಕುಸಿತ- ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಮಾಲೀಕ ಅರೆಸ್ಟ್

    ಬೆಂಗಳೂರು: ಬಾಬುಸಾಬ್‌ಪಾಳ್ಯ (Babusapalya) ನಿರ್ಮಾಣ ಹಂತದ ಕಟ್ಟಡ ಬಿದ್ದ ಪ್ರಕರಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಕಟ್ಟಡ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಭುವನ್ ರೆಡ್ಡಿ ಬಂಧಿತ ವ್ಯಕ್ತಿ. ಅವಘಡ ಸಂಭವಿಸಿದ ಕಟ್ಟಡ ಭುವನ್ ರೆಡ್ಡಿ ಹೆಸರಿನಲ್ಲಿತ್ತು. ಈತ ಮೊದಲನೇ ಆರೋಪಿ ಮುನಿರಾಜ ರೆಡ್ಡಿಯ ಮಗ. ಹೆಣ್ಣೂರು ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ. ಕಾಂಟ್ರಾಕ್ಟರ್ ಮುನಿಯಪ್ಪನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿಯಪ್ಪ 4ನೇ ಮಹಡಿವರೆಗೆ ಕಟ್ಟಡ ನಿರ್ಮಾಣ ಮಾಡಿದ್ದ. ಹೀಗಾಗಿ ಪೊಲೀಸರು ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಿಎನ್‌ಎಸ್ (BNS), ಬಿಬಿಎಂಪಿ(BBMP) ಆರ್‌ಇಆರ್‌ಎ (RERA) ಆ್ಯಕ್ಟ್ ಹಾಗೂ ರೇರಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಇವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ಉತ್ತರ ಪ್ರದೇಶ | ಅಕ್ರಮ ಸಂಬಂಧದ ಶಂಕೆ – ಕತ್ತು ಸೀಳಿ ಪತ್ನಿಯ ಕೊಲೆಗೈದ ಪತಿ

    ಈಗ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಆರಕ್ಕೇರಿದೆ. ಮೃತ ತ್ರಿಪಾಲ್‌ನ ಮೃತದೇಹವನ್ನ ಅವಶೇಷಗಳಿಂದ ಸಿಬ್ಬಂಗಳು ಹೊರತೆಗೆದಿದ್ದಾರೆ. ಬಿಎನ್‌ಎಸ್, ಬಿಬಿಎಂಪಿ ಆರ್‌ಇಆರ್‌ಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕ ಮೊಹಮ್ಮದ್ ಹರ್ಷದ್ ನೀಡಿರೋ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಜೈಲು ನಿಯಮ ಉಲ್ಲಂಘನೆ – ದರ್ಶನ್ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆ

    ಬಿಎನ್ ಎಸ್ 105, 125(A) 125(B), 270,3(5) ಬಿಬಿಎಂಪಿ ಆ್ಯಕ್ಟ್ 326, 327,328 RERA (u/s3) ಅಡ್ಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ

    ಯಾವ ಆ್ಯಕ್ಟ್ ಏನು ಹೇಳುತ್ತೆ?
    ಬಿಎನ್‌ಎಸ್ 105 – ಮಾನವ ನರಹತ್ಯೆ
    ಬಿಎನ್‌ಎಸ್ 125(A) – ಇತರರ ಪ್ರಾಣಕ್ಕೆ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟುಮಾಡುವುದು
    ಬಿಎನ್‌ಎಸ್ 125(B)-ನಿರ್ಲಕ್ಷ್ಯದಿಂದ ತೀವ್ರವಾಗಿ ಗಾಯ ಉಂಟುಮಾಡುವುದು
    ಬಿಎನ್‌ಎಸ್ 270- ಸಾರ್ವಜನಿಕ ಉಪದ್ರವ,ಇತರರಿಗೆ ಕಿರಿಕಿರಿ ಉಂಟು ಮಾಡುವುದು
    3(5) – ಅವಘಡ ಮುನ್ಸೂಚನೆ ಇದ್ದರು ಕೂಡಾ ನಿರ್ಲಕ್ಷ್ಯ ವಹಿಸುವುದು
    ಬಿಬಿಎಂಪಿ ಆ್ಯಕ್ಟ್ 326- ಬಿಬಿಎಂಪಿ ಕಾಯ್ದೆ ಉಲ್ಲಂಘನೆ ಬಗ್ಗೆ ಒಂದು ವರ್ಷ ಜೈಲು, 2 ಲಕ್ಷ ದಂಡ
    ಬಿಬಿಎಂಪಿ ಆ್ಯಕ್ಟ್ 327- ಬಿಬಿಎಂಪಿ ನಿಯಮಗಳ ಬಗ್ಗೆ 6 ವರ್ಷ ಜೈಲು,2 ಲಕ್ಷ ದಂಡ
    ಬಿಬಿಎಂಪಿ ಆ್ಯಕ್ಟ್ 328 – ನಿಯಮ ಉಲ್ಲಂಘನೆ ದಂಡ
    RERA (u/s 3)  ಆ್ಯಕ್ಟ್ – ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸದೆ ಇರುವುದು. ಇದನ್ನೂ ಓದಿ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವೇನಿಲ್ಲ – ನಿಖಿಲ್ ಕುಮಾರಸ್ವಾಮಿ

  • ಬಿಬಿಎಂಪಿಯಿಂದ ತುರ್ತು ಇ-ಖಾತಾ ಪಡೆಯಲು ಮಾರ್ಗಸೂಚಿ ಬಿಡುಗಡೆ – ಗೈಡ್‌ಲೈನ್‌ನಲ್ಲಿ ಏನಿದೆ?

    ಬಿಬಿಎಂಪಿಯಿಂದ ತುರ್ತು ಇ-ಖಾತಾ ಪಡೆಯಲು ಮಾರ್ಗಸೂಚಿ ಬಿಡುಗಡೆ – ಗೈಡ್‌ಲೈನ್‌ನಲ್ಲಿ ಏನಿದೆ?

    ಬೆಂಗಳೂರು: ಬಿಬಿಎಂಪಿ (BBMP) ಇ-ಖಾತಾ (E-Katha) ಶೀಘ್ರದಲ್ಲಿಯೇ ಪಡೆಯಲು ಬಿಬಿಎಂಪಿಯಿಂದ ವ್ಯವಸ್ಥೆ ಕಲ್ಪಿಸಲಾಗಿದ್ದು, ತುರ್ತಾಗಿ ಅಂತಿಮ ಇ-ಖಾತಾ ಪಡೆದುಕೊಳ್ಳುವ ಸಂಬಂಧ ಬಿಬಿಎಂಪಿ ಮಾರ್ಗಸೂಚಿ ನೀಡಿದೆ.

    ಬಿಬಿಎಂಪಿಯಿಂದ ತುರ್ತಾಗಿ ಅಂತಿಮ ಇ-ಖಾತಾ ಪಡೆಯಬೇಕಾದರೆ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ನಿಯಮಾನುಸಾರ ಒಂದೇ ದಿನದಲ್ಲಿ ಪಡೆಯಬಹುದು. ಅಕ್ಟೋಬರ್ ತಿಂಗಳಲ್ಲಿಯೇ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳುವ ಉದ್ದೇಶವಿರುವವರು ತುರ್ತಾಗಿ ಅಂತಿಮ ಇ-ಖಾತಾ ಪಡೆದುಕೊಳ್ಳಬಹುದಾಗಿದೆ.

    ಬಿಬಿಎಂಪಿಯಿಂದ ಕರಡು ಇ-ಖಾತಾ ಮತ್ತು ಅಂತಿಮ ಇ-ಖಾತಾ ಪಡೆಯಲು ಅನುಸರಿಸಬೇಕಾದ ಕ್ರಮಗಳು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಿಕೆ ಹಾಗೂ ಸಲ್ಲಿಸಬೇಕಾದ ದಾಖಲೆಗಳ ಕುರಿತು ಮಾರ್ಗಸೂಚಿ ಇಲ್ಲಿದೆ.ಇದನ್ನೂ ಓದಿ: ಮುಡಾದಲ್ಲಿ 1992ರ ಪ್ರಮುಖ ದಾಖಲೆಗಳೇ ನಾಪತ್ತೆ – ಇ.ಡಿ ಅಧಿಕಾರಿಗಳು ಶಾಕ್!

    ಒಂದೇ ದಿನದಲ್ಲಿ ಅಂತಿಮ ಇ-ಖಾತಾ ಪಡೆಯೋದು ಹೇಗೆ? ಮಾರ್ಗಸೂಚಿ ಏನು?

    1. ಆನ್‌ಲೈನ್ bbmpeaasthi.karnataka.gov.in ನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ನಿಮ್ಮ ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿ.

    2. ತಮ್ಮ ಸ್ವತ್ತಿನ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ತಿಳಿದುಕೊಳ್ಳಬಹುದು.

    3. ಅಂತಿಮ ಇ-ಖಾತಾ ಪಡೆಯಲು ಕೆಳಗಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಿ/ಅಪ್‌ಲೋಡ್ ಮಾಡಿ:

    (a) ತಮ್ಮ ಸ್ವತ್ತಿನ ಆಸ್ತಿ ತೆರಿಗೆ ಅರ್ಜಿ ಸಂಖ್ಯೆಯ 10-ಅಂಕಿಗಳು.

    (b) ಮಾಲೀಕರ ಆಧಾರ್ ಆಧಾರಿತ E-KYC (ಇ-ಖಾತಾ ನಲ್ಲಿರುವ ಎಲ್ಲಾ ಮಾಲೀಕರು E-KYC ಮಾಡಬೇಕಾಗಿದೆ – ಯಾವುದೇ ಮಾಲೀಕರು ಆಧಾರ್ ಹೊಂದಿಲ್ಲದಿದ್ದರೆ, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಪಾಸ್‌ಪೋರ್ಟ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಿ ದೃಢೀಕರಿಸಿ).

    (c) ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ/ದಾನ ಪತ್ರ ಇತ್ಯಾದಿ) (ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಪಡೆಯಲಾಗುವುದು)

    (d) ಆಸ್ತಿಯ ಹಕ್ಕು ನಿರೂಪಿಸುವ ನೋಂದಾಯಿತ ಪತ್ರವು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ ದಿ:18.10.2024 ರವರೆಗೆ ಆಸ್ತಿಯ ಋಣಭಾರ ಪ್ರಮಾಣಪತ್ರ
    .
    (e) ಆಸ್ತಿಯ ಮಾಲೀಕರು, ಆಸ್ತಿಯ ಹೊರಗೆ ಹಾಗೂ ಮುಂದೆ ನಿಂತಿರುವ ಆಸ್ತಿಯ ಛಾಯಾಚಿತ್ರ.

    (f) ಬೆಸ್ಕಾಂ 10-ಅಂಕಿಯ ಎಸಿಸಿ ಐಡಿ (ಬೆಸ್ಕಾಂ ಬಿಲ್ ನೋಡಿ & ಖಾಲಿ ಭೂಮಿಗೆ ಕಡ್ಡಾಯವಲ್ಲ).

    (g) BWSSB (ಐಚ್ಛಿಕ).

    4. ಮೇಲೆ ತಿಳಿಸಿರುವಂತೆ ಮಾಹಿತಿ ಹಾಗೂ ದಾಖಲೆಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ಸಲ್ಲಿಸಿದ ನಂತರ, ಎಲ್ಲವೂ ಕ್ರಮದಲ್ಲಿದ್ದರೆ, ಒಂದೇ-ದಿನದಲ್ಲಿ ಅಂತಿಮ ಇ-ಖಾತಾವನ್ನು ಪಡೆಯಬಹುದಾಗಿದ್ದು, ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಅವರನ್ನು ಭೇಟಿ ಮಾಡತಕ್ಕದ್ದು.

    5. ಮೇಲಿನ ವಿಧಾನವನ್ನು ಪೂರ್ಣಗೊಳಿಸಲು ಯಾವುದೇ ಸವಾಲುಗಳಿದ್ದಲ್ಲಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ಸಹಾಯವನ್ನು ಪಡೆಯಬಹುದು. ನೀವು ತುರ್ತು ನೋಂದಣಿಯನ್ನು ಹೊಂದಿದ್ದರೆ, ನೀವು ತಮ್ಮ ಎಲ್ಲಾ ದಾಖಲೆಗಳು ಮತ್ತು ತಹಲ್‌ವರೆಗಿನ ಋಣಭಾರ ಪ್ರಮಾಣಪತ್ರವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿ ಸಹಾಯ ಫಲಕದ ಸಿಬ್ಬಂದಿಯು ತಮಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಮತ್ತು ಒಂದು ದಿನದಲ್ಲಿ ನಿಯಮಗಳ ಪ್ರಕಾರ ನಿಮಗೆ ಅಂತಿಮ ಇ-ಖಾತಾಯನ್ನು ಹೊಂದಲು ಸಹಾಯವನ್ನು ಪಡೆಯಬಹುದು.

    6. ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ತುರ್ತು ಆಸ್ತಿ ನೋಂದಣಿಯನ್ನು ಹೊಂದಿರದ ನಾಗರಿಕರು, ಬಿಬಿಎಂಪಿ ಹಿಂಬರಹದ ಮೂಲಕ ನಿರ್ದಿಷ್ಟವಾಗಿ ಸೂಚನೆಯ ಹೊರತು ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗದಂತೆ ವಿನಂತಿಸಲಾಗಿದೆ.

    ಅಂತಹ ಪ್ರಕರಣಗಳಲ್ಲಿ ತಮ್ಮ ಅಗತ್ಯಕ್ಕೆ, ಅನುಕೂಲದ ಸಮಯದಲ್ಲಿ ತಮ್ಮ ಅಂತಿಮ ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಅಂತಹ ಸಂದರ್ಭಗಳಲ್ಲಿ ಋಣಭಾರ ಪ್ರಮಾಣಪತ್ರ (ಇಸಿ) ಅಗತ್ಯವನ್ನು ಕೈಬಿಡಲಾಗಿದೆ.

    7. ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗಾಗಿ 1533 ಗೆ ಕರೆ ಮಾಡಿ ಅಥವಾ bbmpekhata@gmail.comಗೆ ಇಮೇಲ್ ಮಾಡಿ.ಇದನ್ನೂ ಓದಿ: ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ – ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

  • ಬಿಬಿಎಂಪಿ ಬಂಡವಾಳ ಬಯಲು- ಎರಡು ದಿನದ ಮಳೆಗೆ ಕಿತ್ತು ಬಂತು ಹೊಸದಾಗಿ ಹಾಕಿದ್ದ ಡಾಂಬರು ರಸ್ತೆ

    ಬಿಬಿಎಂಪಿ ಬಂಡವಾಳ ಬಯಲು- ಎರಡು ದಿನದ ಮಳೆಗೆ ಕಿತ್ತು ಬಂತು ಹೊಸದಾಗಿ ಹಾಕಿದ್ದ ಡಾಂಬರು ರಸ್ತೆ

    ಬೆಂಗಳೂರು: ಎರಡು ದಿನದ ಮಳೆಯ ಪ್ರಭಾವದಿಂದ ಬೆಂಗಳೂರಿನಲ್ಲಿ (Bengaluru) ಹೊಸದಾಗಿ ನಿರ್ಮಿಸಿದ ರಸ್ತೆಗಳು ಬಾಯಿ ತೆರೆದಿವೆ. ಒಂದು ಕಡೆ ಮಳೆ ಜನರನ್ನು ಪರದಾಡುವಂತೆ ಮಾಡಿದರೆ ಇನ್ನೊಂದೆಡೆ ರಸ್ತೆ ಗುಂಡಿಗಳಿಂದ ಅನಾಹುತ ಹೆಚ್ಚಾಗುತ್ತಿದೆ.

    ಕೆಲವು ದಿನಗಳ ಹಿಂದೆ ನಗರದ ಎಲ್ಲಾ ವಲಯದಲ್ಲೂ ಗುಂಡಿ ಲೆಕ್ಕ ಮಾಡಿ ಮುಚ್ಚುವ ಕೆಲಸ ಮಾಡಿದ್ದೇವೆ ಎಂದು ಎದೆಯುಬ್ಬಿಸಿದ್ದ ಬಿಬಿಎಂಪಿಗೆ (BBMP) ಎರಡೇ ದಿನದಲ್ಲಿ ಮಳೆರಾಯ ಗುಂಡಿ ಶಾಕ್ ಕೊಟ್ಟಿದ್ದಾನೆ. ನಗರದಲ್ಲಿ ಸುರಿದ ಎರಡು ದಿನದ ಮಳೆಗೆ ಹೊಸದಾಗಿ ಹಾಕಿದ ಡಾಂಬಾರು ರಸ್ತೆಗಳಲ್ಲಿ ಗುಂಡಿ ಬಾಯ್ತೆರೆದಿವೆ. ಇದನ್ನೂ ಓದಿ: ಬೆಂಗಳೂರು ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಬಂಗಾಳದಲ್ಲಿ ಅರೆಸ್ಟ್‌

    ಎರಡು ದಿನದ ಮಳೆಗೆ ಕೇವಲ ಒಂದೇ ವಾರದಲ್ಲಿ ಡಾಂಬರು ಕಿತ್ತು ಬಂದಿದೆ. ಜಯನಗರದ ಸೌತ್ ಎಂಡ್ ಸರ್ಕಲ್‌ನ ಶೆಲ್ ಪೆಟ್ರೋಲ್ ಬಂಕ್ ಹಿಂಭಾಗದ ರಸ್ತೆಯಲ್ಲಿ ಬಿಡಬ್ಯೂಎಸ್‌ಎಸ್‌ಬಿ ಪೈಪ್ ಲೈನ್ ಕಾಮಗಾರಿ ಮುಗಿಸಿ 150 ಮೀಟರ್ ರಸ್ತೆಯಲ್ಲಿ ಮಾಡಿದ್ದ ರಸ್ತೆ ಕೆಲಸ ಸಂಪೂರ್ಣ ಎದ್ದು ಬಂದಿದೆ. ಮಾತ್ರವಲ್ಲ ಅತ್ತಿಗುಪ್ಪೆ ಸರ್ಕಲ್, ಕಾಮಾಕ್ಷಿ ಪಾಳ್ಯ-ಸುಮ್ಮನಹಳ್ಳಿ ರಸ್ತೆಯಲ್ಲೂ ಗುಂಡಿ ಬಾಯಿ ತೆರೆದಿದೆ. ಇದನ್ನೂ ಓದಿ: ಸಿಸಿಬಿ ಪೊಲೀಸರ ಭರ್ಜರಿ ಬೇಟೆ – 21 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

    ಎರಡು ದಿನದ ಮಳೆಗೆ ನಗರದ ರಸ್ತೆಗಳು ಮತ್ತೆ ಗುಂಡಿಮಯವಾಗಿದೆ. ಯಾವಾಗಲೋ ಒಮ್ಮೆ ಗುಂಡಿ ಮುಚ್ಚೋದಲ್ಲ. ಅದನ್ನ ನಿರ್ವಹಣೆ ಮಾಡುವ ಕೆಲಸ ಬಿಬಿಎಂಪಿ ಮಾಡಬೇಕಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: MUDA Scam: ಮೈಸೂರು ಮುಡಾ ಕಚೇರಿ ಮೇಲೆ ಇ.ಡಿ ದಾಳಿ

  • ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ

    ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ

    ಮಂಡ್ಯ: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ (Cauvery Drinking Water Project) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಚಾಲನೆ ನೀಡಿದರು.

    ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕೆ.ಹಳ್ಳಿಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಇದನ್ನೂ ಓದಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ, ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ಯೋಜನೆಯನ್ನು ಲೋಕಾರ್ಪಣೆಗೊಳಿಸುವುದಕ್ಕೂ ಮುನ್ನ ಚಂಡಿಕಾ ಹೋಮ, ಗಣಪತಿ ಪೂಜೆ, ಯಜಮಾನ ಸಂಕಲ್ಪ, ಮಹಾ ಸುದರ್ಶನ ಚಕ್ರ ಪೂಜೆ, ಸುದರ್ಶನ ಹೋಮ, ಮಹಾಚಂಡಿ ಕಳಾಸರಾಧನೆ, ಮಹಮಂಗಳಾರತಿ ನೆರವೇರಿಸಲಾಯಿತು. ಮಹಾಸಂಕಲ್ಪ, ಚಂಡಿ ನವ ಬ್ರಹ್ಮ ಪೂಜೆ, ದುರ್ಗಾ ಸಪ್ತ ಸತಿ ನಾರಾಯಾಣ ಸೇರಿದಂತೆ 13 ಅಧ್ಯಾಯ, ಗಂಗಾ, ಯಮುನಾ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಮೊದಲಾದ ಸಪ್ತ ನದಿಗಳ ಕಳಸ ಸ್ಥಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಾ ಪೂರ್ಣಾವತಿ, ಮಂಗಳ ದ್ರವ್ಯ ಸಮರ್ಪಣೆ ಮಹಾ ಮಂಗಳಾರತಿ ಸೇರಿ ಹೋಮ-ಹವನ ನೆರವೇರಿಸಲಾಯತು.

    ಶೈವಾಗಮ ವಿಶಾರಾಧ ಜ್ಞಾನ ಸ್ಕಂದ ದೀಕ್ಷಿತರ ನೇತೃತ್ವದಲ್ಲಿ ಪೂಜಾ ಕೈಂಕಾರ್ಯ ನಡೆಯಿತು. ಡಿಸಿಎಂ ಡಿ.ಕೆ ಶಿವಕುಮಾರ್‌ ಪೂಜಾ ಕೈಂಕಾರ್ಯ ನೆರವೇರಿಸಿದರು. ಡಿಕೆಶಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಾಥ್‌ ನೀಡಿದರು. ಇದೇ ವೇಳೆ ಜಾನಪದ ಕಲಾ ತಂಡಗಳ ಮೆರವಣಿಗೆಯೂ ನಡೆಯಿತು. ಇದನ್ನೂ ಓದಿ: ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್ ಮಹಾನಿರ್ದೇಶಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ

    ಬಿಬಿಎಂಪಿ ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ. 50 ಲಕ್ಷ ಫಲಾನುಭವಿಗಳಿಗೆ 4 ಲಕ್ಷ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಸುಮಾರು 4,336 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದ್ದು, 775 ಎಂ.ಎಲ್.ಡಿ ಹೆಚ್ಚುವರಿ ನೀರು ಸರಬರಾಜು ಮಾಡುವ ಗುರಿ ಹೊಂದಿದೆ. ಇದರಿಂದ ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ವಲಯದ ಮನೆ-ಮನೆಗೂ ಕಾವೇರಿ ನೀರು ಪೂರೈಕೆಯಾಹಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.