Tag: BBMP Hospital

  • BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    ಬೆಂಗಳೂರು: ಬಿಬಿಎಂಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತವನ್ನು ಮಾಡಲಾಗಿದೆ.

    ಬಸವನಗುಡಿಯ ಎನ್‍ಆರ್ ಕಾಲೋನಿಯ ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 60 ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್‌ ಬಂದ್

    ಕಟ್ಟೆ ಸತ್ಯ ಫೌಂಡೇಷನ್ ಮತ್ತು ರಾಧಕೃಷ್ಣ ಆಸ್ಪತ್ರೆ ಸಹಯೋಗದೊಂದಿಗೆ ಡಾ.ಸಿ ಅಶ್ವಥ್ ಕಲಾ ಭವನನಲ್ಲಿನಡೆದ ಕಾರ್ಯಕ್ರಮವನ್ನ ನಟಿ ಸುಧಾರಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ನಟಿ ಸುಧಾರಾಣಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷವಾಗುತ್ತಿದೆ. ಎಷ್ಟೋ ಹೆಣ್ಣು ಮಕ್ಕಳಿಗೆ ಸೀಮಂತದ ಕ್ಷಣಗಳನ್ನ ಆನಂದಿಸೋಕೆ ಸಾಧ್ಯವಾಗುವುದಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಸಾಧ್ಯವಾಗದ ಗರ್ಭಿಣಿಯರಿಗೆ ಸೀಮಂತ ಮಾಡುತ್ತಿರುವುದು ಬಹಳ ಸಂತೋಷ ಎಂದಿದ್ದಾರೆ. ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೊರೊನಾ

    ಹೆಣ್ಣು ಮಕ್ಕಳಿಗೆ ತಾಯ್ತನದ ಹಂತ ಬಹಳ ಶ್ರೇಷ್ಠವಾದದ್ದು. ಇಂತಹ ಸಂಧರ್ಭದಲ್ಲಿ ಸಂತೋಷದಿಂದ ಮತ್ತು ಎಚ್ಚರದಿಂದಿರಬೇಕು. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ, ನಿಮ್ಮ ತಾಯಿ ತನದ ದಿನಗಳನ್ನ ಆರೋಗ್ಯದಿಂದ ಆನಂದಿಸಿ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಮೇಯರ್ ಸತ್ಯನಾರಾಯಣ, ಶಾಸಕ ರವಿ ಸುಬ್ರಹ್ಮಣ್ಯ, ಫೌಂಡೇಶನ್ ಅಧ್ಯಕ್ಷ ಸುಧೀಂದ್ರ ಭಾಗಿಯಾಗಿದ್ದರು.

  • ಬಿಬಿಎಂಪಿ ಆಸ್ಪತ್ರೆಗೆ ಹಾಲು ವಿತರಣೆ ಟೆಂಡರ್ ಗೆ ಗುತ್ತಿಗೆದಾರರ ನಿರ್ಲಕ್ಷ್ಯ

    ಬಿಬಿಎಂಪಿ ಆಸ್ಪತ್ರೆಗೆ ಹಾಲು ವಿತರಣೆ ಟೆಂಡರ್ ಗೆ ಗುತ್ತಿಗೆದಾರರ ನಿರ್ಲಕ್ಷ್ಯ

    ಬೆಂಗಳೂರು: ಬಿಬಿಎಂಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಾಣಂತಿಯರಿಗೆ ಪೌಷ್ಟಿಕಾಂಶ ನೀಗಿಸಲು ದಿನಕ್ಕೆ 2 ಬಾರಿ ಹಾಲು ವಿತರಿಸಲು ಕರೆದಿದ್ದ ಟೆಂಡರ್ ಪ್ರಕ್ರಿಯೆಗೆ ಯಾವೊಬ್ಬ ಗುತ್ತಿಗೆದಾರರು ಮುಂದೆ ಬಂದಿಲ್ಲ. ಹೀಗಾಗಿ ಆಸ್ಪತ್ರೆಯ ಅಧಿಕಾರಿಗಳೇ ನೇರವಾಗಿ ಹಾಲು ಖರೀದಿಸಿ, ವಿತರಿಸುವ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ ತೀರ್ಮಾನಿಸಿದೆ.

    ರಾಜ್ಯ ಸರ್ಕಾರದ “ಜನನಿ ಸುರಕ್ಷಾ” ಮೂಲಕ ಪೌಷ್ಟಿಕ ಆಹಾರವನ್ನು ವಿತರಿಸುವ ಯೋಜನೆ ಜಾರಿಗೆ ಬಂದ ನಂತರ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹಾಲು ವಿತರಿಸುವ ಯೋಜನೆಯನ್ನ ನಿಲ್ಲಿಸಲಾಗಿತ್ತು. ಆದರೆ ಈಗ ಪಾಲಿಕೆ ಹಾಲು ವಿತರಣೆ ಪುನರಾಂಭಿಸಲು ನಿರ್ಧರಿಸಿದೆ.

    ಬಿಬಿಎಂಪಿಯ 32 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬಾಣಂತಿಯರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಬಾರಿಯಂತೆ 250 ಮಿಲಿ ಲೀಟರ್ ಹಾಲನ್ನ ವಿತರಿಸಲು ಯೊಜನೆ ಸಿದ್ಧಪಡಿಸಿ ಹಾಲು ಸರಬರಾಜಿಗೆ ಎರಡು ಬಾರಿ ಟೆಂಡರ್ ನ್ನು ಆಹ್ವಾನಿಸಿತ್ತು. ಆದರೆ ಈ ಟೆಂಡರ್ ಗೆ ಯಾವ ಗುತ್ತಿಗೆದಾರರು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಪಾಲಿಕೆ ಆಸ್ಪತ್ರೆಯ ಅಧಿಕಾರಿಗಳೇ ಅವಶ್ಯಕತೆಗೆ ತಕ್ಕಂತೆ ಹಾಲು ಖರೀದಿಸಿ ಬಾಣಂತಿಯರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

    ಬಿಬಿಎಂಪಿ ಆಸ್ಪತ್ರೆಯಲ್ಲಿ ವರ್ಷಕ್ಕೆ 11 ಸಾವಿರ ಹೆರಿಗೆ ಆಗಲಿವೆ ಅಂತ ಅಂದಾಜಿಸಲಾಗಿದ್ದು, ಸುಮಾರು ಮೂವತ್ತು ಸಾವಿರ ಲೀಟರ್ ಹಾಲು ಬೇಕಾಗಲಿದೆ. ಈ ಯೋಜನೆಗಾಗಿ ಸುಮಾರು 15 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಪ್ರತಿದಿನ ಆಸ್ಪತ್ರೆಗಳೇ ಹಾಲು ಖರೀದಿ ಮಾಡಿದ ನಂತರ ಆಸ್ಪತ್ರೆ ಸಿಬ್ಬಂದಿ ಹಾಲು ಕಾಯಿಸಿ ಬೆಳಗ್ಗೆ- ಸಂಜೆ ಹಾಲು ವಿತರಣೆ ಮಾಡಲಿದ್ದಾರೆ.