Tag: BBMP Garbage Truck

  • ಕಸದ ಲಾರಿಯಲ್ಲಿ ಶವ ಪತ್ತೆ | ದಿನಾ ಕುಡಿದು ಬಂದು ರಂಪಾಟ ಮಾಡಿದ್ದಕ್ಕೆ ಮಹಿಳೆಯ ಕೊಲೆ!

    ಕಸದ ಲಾರಿಯಲ್ಲಿ ಶವ ಪತ್ತೆ | ದಿನಾ ಕುಡಿದು ಬಂದು ರಂಪಾಟ ಮಾಡಿದ್ದಕ್ಕೆ ಮಹಿಳೆಯ ಕೊಲೆ!

    – ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಆಶಾ, ಸಂಶುದ್ದೀನ್
    – ತಡರಾತ್ರಿ ಫೋನ್‌ನಲ್ಲಿ ಮಾತಾಡ್ತಿದ್ಳು, ಇದ್ರಿಂದ ಜಗಳವಾಗಿ ಹತ್ಯೆ

    ಬೆಂಗಳೂರು: ಮಹಿಳೆಯೊಬ್ಬರನ್ನ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಸಂಗತಿಯೊಂದು ಬಯಲಾಗಿದೆ. ದಿನಾ ಕುಡಿದು ಬಂದು ರಂಪಾಟ ಮಾಡುತ್ತಿದ್ದಳು, ಇದೇ ವಿಷಯಕ್ಕಾಗಿ ಸ್ನೇಹಿತ ಕೊಲೆ ಮಾಡಿದ ವಿಚಾರ ತನಿಖೆ ವೇಳೆ ತಿಳಿದುಬಂದಿದೆ.

    ಪ್ರಕರಣ ದಾಖಲಾದ 20 ಗಂಟೆಯೊಳಗಾಗಿ ಸಿ.ಕೆ.ಅಚ್ಚುಕಟ್ಟು (Chennamanakere Police Station) ಠಾಣಾ ಪೊಲೀಸರು ಅಸ್ಸಾಂ ಮೂಲದ ಸಂಶುದ್ದೀನ್‌ನನ್ನು ಬಂಧಿಸಿದ್ದರು.ಇದನ್ನೂ ಓದಿ: ಬೆಂಗಳೂರು | ಮಹಿಳೆಯ ಭಯಾನಕ ಹತ್ಯೆ ಕೇಸ್‌ – ಅಸ್ಸಾಂ ಮೂಲದ ಲಿವ್‌ ಇನ್‌ ಗೆಳೆಯ ತಮ್ಸುದ್ದಿನ್ ಅರೆಸ್ಟ್‌

    ಪ್ರಾಥಮಿಕ ತನಿಖೆ ವೇಳೆ, ಹುಳಿಮಾವು ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೊಲೆಯಾದ ಪುಷ್ಪಾ @ ಆಶಾ ಹಾಗೂ ಆರೋಪಿ ಸಂಶುದ್ದೀನ್‌ಗೆ ಪರಿಚಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಇಬ್ಬರು ಲಿವ್ ಇನ್ ರಿಲೇಷನ್‌ನಲ್ಲಿದ್ದರು. ಆದರೆ ಮೃತ ಮಹಿಳೆ ದಿನಾಲೂ ಮನೆಗೆ ಬರುವಾಗ ಕುಡಿದು ಬಂದು ರಂಪಾಟ ಮಾಡುತ್ತಿದ್ದಳು. ಜೊತೆಗೆ ತಡರಾತ್ರಿವರೆಗೂ ಫೋನ್‌ನಲ್ಲಿ ಮಾತಾಡುತ್ತಿದ್ದಳು. ಇದೇ ಕಾರಣದಿಂದ ಇಬ್ಬರ ನಡುವೆ ಜಗಳವಾಗಿತ್ತು. ಜಗಳ ಅತಿರೇಕಕ್ಕೆ ಹೋಗಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಬಳಿಕ ಮೃತದೇಹವನ್ನು ಮೂಟೆಗೆ ಹಾಕಿ, ಬೈಕ್‌ನಲ್ಲಿ ತಂದು ಕಸದ ಲಾರಿಗೆ ಹಾಕಿ ಹೋಗಿದ್ದ ಎಂದು ತಿಳಿದುಬಂದಿದೆ.

    ಆಶಾಗೆ ಇದಕ್ಕೂ ಮೊದಲು ಮದುವೆಯಾಗಿದ್ದು, ಗಂಡ ಮೃತಪಟ್ಟಿದ್ದ. ಆಕೆಗೆ ಇಬ್ಬರು ಮಕ್ಕಳಿದ್ದರು. ಜೊತೆಗೆ ಆರೋಪಿ ಸಂಶುದ್ದೀನ್‌ಗೆ ಮದುವೆಯಾಗಿ ಹೆಂಡತಿ ಹಾಗೂ ಇಬ್ಬರು ಮಕ್ಕಳು ಅಸ್ಸಾಂನಲ್ಲಿದ್ದರು ಎಂದು ಬಯಲಾಗಿದೆ.

    ಏನಿದು ಘಟನೆ?
    ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವಾಪ್ತಿಯಲ್ಲಿ ಮಹಿಳೆಯೊಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿ, ಮೃತದೇಹವನ್ನ ಮೂಟೆ ಕಟ್ಟಿ ಕಸದ (Garbage Truck) ಲಾರಿಯಲ್ಲಿಡಲಾಗಿತ್ತು.

    ರಾತ್ರಿ 1:40ಕ್ಕೆ ಕಸ ಹಾಕಲು ಬಂದಿದ್ದ ಸ್ಥಳೀಯ ವ್ಯಕ್ತಿ ಚೀಲ ಬಿಚ್ಚಿದಾಗ ಮೊದಲಿಗೆ ಕೂದಲು ಕಂಡಿತ್ತು. ಬಳಿಕ ಮೃತದೇಹ ಇರೋದು ಗೊತ್ತಾಗಿ ತಕ್ಷಣ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಬಂದಾಗ ಮಹಿಳೆ ಕೊಲೆ ವಿಚಾರ ಬಯಲಾಗಿತ್ತು.

    ಇನ್ನು ಸ್ಥಳಕ್ಕೆ ಆಗಮಿಸಿದ ಸಿಕೆ ಅಚ್ಚುಕಟ್ಟು ಪೊಲೀಸರು ಸ್ಥಳೀಯ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರು. ಸಿಸಿಟಿವಿ ಆಧಾರದ ಮೇಲೆ ಕೊಲೆ ಹಂತಕರಿಗಾಗಿ 2 ತಂಡಗಳ ರಚಿಸಿ ಶೋಧ ನಡೆಸುತ್ತಿದ್ದರು. ಬಳಿಕ ಮಹಿಳೆಯ ಗುರುತು ಪತ್ತೆ ಮಾಡಿದ್ದರು. ಕೊಲೆಯಾದ ಮಹಿಳೆ ಹುಳಿಮಾವು ನಿವಾಸಿ ಪುಷ್ಪಾ @ ಆಶಾ ಎಂದು ಗುರುತಿಸಲಾಗಿತ್ತು. ಅಲ್ಲದೇ, ಶವ ಸಾಗಾಟಕ್ಕೆ ದ್ವಿಚಕ್ರ ವಾಹನ ಬಳಕೆ ಮಾಡಿರೋದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

    ಪ್ರಕರಣ ದಾಖಲಾದ 20 ಗಂಟೆ ಒಳಗಾಗಿಯೇ ಹಂತಕನನ್ನು ಇನ್ಸ್‌ಪೆಕ್ಟರ್‌ ಗಿರೀಶ್ ನಾಯ್ಕ್ ನೇತೃತ್ವದ ತಂಡ ಬಂಧಿಸಿದೆ. ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿ ಹಂತಕನನ್ನ ಬಂಧಿಸಿದ್ದರು.ಇದನ್ನೂ ಓದಿ: ಅನ್ಯಕೋಮಿನ ವ್ಯಕ್ತಿಯನ್ನ ಪ್ರೀತಿಸಿ ಮದ್ವೆಯಾಗಿದ್ದ ಮಹಿಳೆ – ಗಂಡನೇ ಕೊಲೆ ಮಾಡಿ ಹೆಣ ತಂದು ಬಿಸಾಡಿರುವ ಶಂಕೆ

  • ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ

    ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ

    ಬೆಂಗಳೂರು: ಇತ್ತ ಬೆಂಗಳೂರಿಗರಿಗೆ ಬಿಎಂಟಿಸಿ ಬಸ್ ಯಮಸ್ವರೂಪಿಯಾದ್ರೆ… ಅತ್ತ ಬಿಬಿಎಂಪಿ ಕಸದ ಲಾರಿಯೂ (BBMP Garbage Truck) ಅಮಾಯಕರ ಜೀವಗಳನ್ನು ಬಲಿ ಪಡೆಯುತ್ತಿದೆ. ಕಸದ ಲಾರಿಗಳಿಂದ ಸಾಲು-ಸಾಲು ಆಕ್ಸಿಡೆಂಟ್ ಆಗುತ್ತಿದ್ರೆ, ಬಲಿಯಾದವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.

    ನಿನ್ನೆ 12 ವರ್ಷದ ಬಾಲಕನನ್ನು ಕಸದ ಲಾರಿ ಬಲಿ ಪಡೆದಿದೆ. ಯಮಸ್ವರೂಪಿ ಕಸದ ಲಾರಿ ವಿರುದ್ಧ ಜನ ನಿಗಿನಿಗಿ ಕೆಂಡವಾಗಿದ್ದಾರೆ. ಅಡ್ಡಾದಿಡ್ಡಿ ಚಾಲನೆ, ಓವರ್ ಸ್ಪೀಡ್, ರೂಲ್ಸ್ ಬ್ರೇಕ್‌ನಿಂದಲೇ ಅಪಘಾತಗಳ (Accident) ಸರಮಾಲೆ ಹೆಚ್ಚಾಗಿದೆ. ಸಾಲು-ಸಾಲು ಸಾವಾದ್ರೂ ಬಿಬಿಎಂಪಿಯಿಂದ ಯಾವ್ದೇ ಶಿಸ್ತು ಕ್ರಮವಾಗಿಲ್ಲ. ಹಾಗಿದ್ರೆ, ಕಸದ ಲಾರಿಗಳ ಬಲಿಯಾಟಕ್ಕೆ ಬ್ರೇಕ್ ಯಾವಾಗ.. ಈವರೆಗೂ ಬಲಿಯಾದವರೆಷ್ಟು ಅಂತ ನೋಡೋದಾದ್ರೆ..

    * ದಿನಾಂಕ ಸೆಪ್ಟೆಂಬರ್ -22 – 2018
    * ಸ್ಥಳ: ಯಶವಂತಪುರ ಟ್ರಾಫಿಕ್ ಪೊಲೀಸ್ ಠಾಣೆ
    * 30 ವರ್ಷದ ಭುವನೇಶ್ವರಿ ಎಂಬ ಮಹಿಳೆ ಬಲಿ
    * ಇದು ಕಸದ ಲಾರಿಗೆ ವರದಿಯಾಗಿರೋ ಮೊದಲ ಬಲಿ

    * ದಿನಾಂಕ ಮಾರ್ಚ್/21/ 2022
    * ಸ್ಥಳ: ಹೆಬ್ಬಾಳ
    * ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅಕ್ಷತಾ ಬಲಿ

    * ದಿನಾಂಕ: ಮಾರ್ಚ್ 31/2022
    * ಸ್ಥಳ: ಥಣಿಸಂದ್ರ ಮುಖ್ಯರಸ್ತೆ
    * ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಸವಾರ ಸಾವು
    * ವಿ. ರಾಮಯ್ಯ 76 ವರ್ಷದ ವೃದ್ಧ ಬಲಿ

    * ದಿನಾಂಕ: ಏಪ್ರಿಲ್ 18/2022
    * ಸ್ಥಳ: ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್
    * ಸ್ಕೂಟರ್‌ನಲ್ಲಿ ಹೋಗ್ತಿದ್ದ ಮಹಿಳೆ ಮೇಲೆ ಹರಿದ ಕಸದ ಲಾರಿ
    * ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಪದ್ಮಿನಿ (40) ಬಲಿ

    ದಿನಾಂಕ ಮೇ 14/2022
    * ಸ್ಥಳ: ನಾಗವಾರ ಮುಖ್ಯರಸ್ತೆ
    * ಸ್ವಿಗ್ಗಿ ಡಿಲವರಿ ಬಾಯ್‌ನ ಪ್ರಾಣ ತೆಗೆದ ಕಸದ ಲಾರಿ
    * ದೇವಣ್ಣ (25) ಯುವಕ ಕಸದ ಲಾರಿಗೆ ಬಲಿ

    * ದಿನಾಂಕ: ಜುಲೈ 10/2022
    * ಸ್ಥಳ: ನಾಗರಬಾವಿ ಸರ್ಕಲ್
    * ದ್ವಿಚಕ್ರ ವಾಹನದ ಮೇಲೆ ಹರಿದ ಕಸದ ಲಾರಿ
    * ಕಲಾ (37) ವರ್ಷದ ಮಹಿಳೆ ಸಾವು
    * ಪತಿ ಯೋಗೇಂದ್ರ ಗಂಭೀರ ಗಾಯ

    * ದಿನಾಂಕ: ನವೆಂಬರ್ 29/2022
    * ಸ್ಥಳ: ದೊಡ್ಡಬಳ್ಳಾಪುರದ ಚಿಗರೇನಹಳ್ಳಿ ಡಂಪ್ ಯಾರ್ಡ್
    * ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಯುವಕರು ಬಲಿ
    * ಮಾರುತಿ ಮತ್ತು ಮಹೇಶ್ ಮೃತ ದುರ್ದೈವಿಗಳು

    * ದಿನಾಂಕ: ಜುಲೈ 17/2023
    * ಸ್ಥಳ: ಹಡ್ಸನ್ ಸರ್ಕಲ್
    * ರಸ್ತೆ ದಾಟುತ್ತಿದ್ದ ಮಹಿಳೆಗೆ ಗುದ್ದಿದ್ದ ಕಸದ ಲಾರಿ
    * ಮುನಿಯಮ್ಮ 60 ವರ್ಷದ ವೃದ್ದೆ ಸಾವು

    * ದಿನಾಂಕ: ಸೆಪ್ಟೆಂಬರ್ 25/2023
    * ಸ್ಥಳ: ಜಯನಗರ ಮೆಟ್ರೋ ನಿಲ್ದಾಣ
    * ನವವಿವಾಹಿತ ಬಲಿ ಪಡೆದ ಬಿಬಿಎಂಪಿ ಕಸದ ಲಾರಿ
    * ವೈಜ್ಞಾನಿಕ ಪಾರ್ಕಿಂಗ್ ಮಾಡಿದ್ದ ಲಾರಿ
    * ಲಾರಿ ಕಾಣದೆ ಬೈಕ್‌ನಲ್ಲಿ ಗುದ್ದಿ ಸಾವು
    * ರಾಮನಗರದ ಯಶವಂತ ಬಲಿಯಾದ ಯುವಕ

    * ದಿನಾಂಕ: ಜನವರಿ 29/2024
    * ಸ್ಥಳ: ಪುಲಕೇಶಿನಗರದ ಮಸೀದಿ ರೋಡ್
    * 14 ವರ್ಷದ ವಿದ್ಯಾರ್ಥಿನಿ ಮೇಲೆ ಹರಿದ ಕಸದ ಲಾರಿ

    * ದಿನಾಂಕ: ಜುಲೈ 28/2024
    * ಸ್ಥಳ: ಶೇಷಾದ್ರಿ ರೋಡ್, ಕೆಆರ್ ಸರ್ಕಲ್
    * ಇಬ್ಬರ ಸಾವಿಗೆ ಕಾರಣವಾಗಿರೋ ಬಿಬಿಎಂಪಿ ಕಸದ ಲಾರಿ
    * ಪ್ರಶಾಂತ್ (25), ಶಿಲ್ಪಾ(27) ಇಬ್ಬರು ಟೆಕ್ಕಿಗಳು ಬಲಿ

    * ದಿನಾಂಕ: ಜನವರಿ 05/2025
    * ಸ್ಥಳ: ನಾಗವಾರ ಮುಖ್ಯರಸ್ತೆ ಥಣಿಸಂದ್ರ..
    * ಸಹೋದರಿಯರನ್ನ ಬಲಿ ಪಡೆದಿದ್ದ ಕಸದ ಲಾರಿ
    * ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಕಸದ ಲಾರಿ ಡಿಕ್ಕಿ
    * ನಾಸೀಯಾ ಸುಲ್ತಾನ್, ನಾಸೀಯಾ ಇರ್ಫಾನ್ ಬಲಿ

  • ಬಿಬಿಎಂಪಿ ಕಸದ ಲಾರಿಗೆ 10 ವರ್ಷದ ಬಾಲಕ ಬಲಿ – ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿದ ಜನ

    ಬಿಬಿಎಂಪಿ ಕಸದ ಲಾರಿಗೆ 10 ವರ್ಷದ ಬಾಲಕ ಬಲಿ – ರೊಚ್ಚಿಗೆದ್ದು ಲಾರಿಗೆ ಬೆಂಕಿ ಹಚ್ಚಿದ ಜನ

    ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಸದ ಲಾರಿಗೆ (BBMP Garbage Truck) 10 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರಿನ (Bengaluru) ಥಣಿಸಂಧ್ರ ರೈಲ್ವೆ ಟ್ರ‍್ಯಾಕ್ ಬಳಿ ನಡೆದಿದೆ.

    ಐಮಾನ್ (10) ಮೃತ ಬಾಲಕ. 12 ಸುಮಾರಿಗೆ ಸ್ಕೂಲ್ ಅಡ್ಮಿಷನ್‌ ವಿಚಾರಿಸಲು ಮನೆಯಿಂದ ಹೊರಟಿದ್ರು. ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಬಾಲಕ ತೆರಳಿದ್ದ. ಈ ವೇಳೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲ್ಲಿದ್ದ ಬಾಲಕನ ತಂದೆಗೂ ಗಾಯಗಳಾಗಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದೃಶ್ಯಕಂಡು ರೊಚ್ಚಿಗೆದ್ದ ಸ್ಥಳೀಯರು ಕಸದ ಲಾರಿಗೆ ಬೆಂಕಿ ಹೆಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಬಿಬಿಎಂಪಿ (BBMP) ಕಸದ ಲಾರಿಗೆ ಥಣಿಸಂದ್ರದಲ್ಲಿ ಇದು 4ನೇ ಬಲಿಯಾಗಿದೆ. ಇದನ್ನೂ ಓದಿ: ಬೆಂಗಳೂರು| ಬಿಬಿಎಂಪಿ ಕಸದ ಲಾರಿಗೆ ಅಕ್ಕ-ತಂಗಿ ಬಲಿ

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಯಲಹಂಕ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಯಾರದ್ದು ತಪ್ಪು? ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ | ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – 16 ನಕ್ಸಲರ ಹತ್ಯೆ

    ಕಳೆದ ಮೂರು ತಿಂಗಳ ಹಿಂದೆಯಷ್ಟೇ ಧಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದ ಘಟನೆ ನಡೆದಿತ್ತು. ಇದನ್ನೂ ಓದಿ: 2ನೇ ಗಂಡನೊಂದಿಗೆ ನಂಟು -3ನೇ ಗಂಡನಿಂದ ಪತ್ನಿ ಸೇರಿ ನಾಲ್ವರ ಬಾಳಿಗೆ ಕತ್ತಿಯೇಟು

  • ಬೆಂಗಳೂರು| ಬಿಬಿಎಂಪಿ ಕಸದ ಲಾರಿಗೆ ಅಕ್ಕ-ತಂಗಿ ಬಲಿ

    ಬೆಂಗಳೂರು| ಬಿಬಿಎಂಪಿ ಕಸದ ಲಾರಿಗೆ ಅಕ್ಕ-ತಂಗಿ ಬಲಿ

    ಬೆಂಗಳೂರು: ಬಿಬಿಎಂಪಿ (BBMP Garbage Truck) ಕಸದ ಲಾರಿಗೆ ಇಬ್ಬರು ಮಹಿಳೆಯರು ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಗೋವಿಂದಪುರ ನಿವಾಸಿಗಳಾದ ನಾಜಿಯಾ ಸುಲ್ತಾನ್, ನಾಜಿಯಾ ಇರ್ಫಾನ್ ಮೃತ ಮಹಿಳೆಯರು. ಇದನ್ನೂ ಓದಿ: 1 ವಾರದೊಳಗೆ ತೆರವು ಮಾಡಿ: ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳಿಗೆ ಬ್ಯಾನರ್‌ ಹಾಕಿ BBMP ನೋಟಿಸ್‌

    ಧಣಿಸಂದ್ರ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಚಾಲಕ ಲಾರಿ ಹತ್ತಿಸಿದ್ದಾನೆ.

    ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ. ಲಾರಿ ಚಾಲಕನನ್ನು ಹೆಣ್ಣೂರು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ದಟ್ಟ ಮಂಜು – ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಸಾಧ್ಯತೆ

  • ಭೀಕರ ರಸ್ತೆ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಎರಡು ಜೀವ ಬಲಿ

    ಭೀಕರ ರಸ್ತೆ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಎರಡು ಜೀವ ಬಲಿ

    ಬೆಂಗಳೂರು: ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನ (BBMP Garbage Truck )ಹಾಗೂ ದ್ಬಿಚಕ್ರ ವಾಹನದ ನಡುವೆ ಡಿಕ್ಕಿ (Road Accident) ಸಂಭವಿಸಿ, ವಾಹನ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ನಡೆದಿದೆ. ಭಾನುವಾರ (ಜು.28) ರಾತ್ರಿ 8.45 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

    ಮೃತರನ್ನ ಪ್ರಶಾಂತ್‌ (25), ಬಯ್ಯಣ್ಣಗಿರಿ ಶಿಲ್ಪ ಎಂದು ಗುರುತಿಸಲಾಗಿದೆ. ಬೆಂಗಳೂರಿನ ನಿವಾಸಿಯೇ ಆಗಿರುವ ಪ್ರಶಾಂತ್‌, ಶಿಲ್ಪಾ ಇಬ್ಬರೂ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

    ಇಬ್ಬರೂ ಮೆಜೆಸ್ಟಿಕ್‌ನಿಂದ ಕೆ.ಆರ್‌ ಸರ್ಕಲ್‌ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದರು. ಇದೇ ವೇಳೆ ಸಿಐಡಿ ಸಿಗ್ನಲ್‌ ಮಾರ್ಗದಿಂದ ಕೆ.ಆರ್‌ ವೃತ್ತದ ಮಾರ್ಗವಾಗಿ ಬಿಬಿಎಂಪಿ ಕಸದ ಲಾರಿ ವೇಗವಾಗಿ ಬರುತ್ತಿತ್ತು. ತಿರುವಿನ ಮಾರ್ಗದಲ್ಲೂ ವೇಗವಾಗಿ ಬಂದ ಲಾರಿ ಬೈಕ್‌ಗೆ ಡಿಕ್ಕಿಯೊಡೆದು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

    ಅಲ್ಲದೇ ಬೈಕ್‌ಗೆ ಡಿಕ್ಕಿ ಹೊಡೆದರೂ ಲಾರಿ ನಿಲ್ಲಿಸದೇ ಸುಮಾರು 10 ಮೀಟರ್‌ನಷ್ಟು ದೂರಕ್ಕೆ ಬೈಕ್‌ ಸವಾರರನ್ನ ಎಳೆದೊಯ್ದಿದೆ. ಇದರಿಂದ ರಕ್ತ ಹೆಚ್ಚಿನ ಪ್ರಮಾಣದಲ್ಲಿ ಹರಿದಿದೆ. ಕೂಡಲೇ ಅಪಘಾತಕ್ಕೀಡಾದವರನ್ನ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಮೃತದೇಹಗಳನ್ನ ಸೆಂಟ್ ಮಾರ್ಥಸ್ ಶವಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಉಪ್ಪಾರಪೇಟೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.