Tag: BBMP Commissioner Manjunath Prasad

  • 12 ಕೋವಿಡ್ ಕೇರ್ ಸೆಂಟರ್ ಕ್ಲೋಸ್ ಬಗ್ಗೆ ಚರ್ಚೆ: ಮಂಜುನಾಥ್ ಪ್ರಸಾದ್

    12 ಕೋವಿಡ್ ಕೇರ್ ಸೆಂಟರ್ ಕ್ಲೋಸ್ ಬಗ್ಗೆ ಚರ್ಚೆ: ಮಂಜುನಾಥ್ ಪ್ರಸಾದ್

    – ನಿತ್ಯ 30 ಸಾವಿರ ಕೊರೊನಾ ಟೆಸ್ಟ್ ಮಾಡಿದ್ದೇವೆ
    – ಪ್ರಕರಣಗಳ ಬಗ್ಗೆ ಆತಂಕ ಬೇಡ

    ಬೆಂಗಳೂರು: ನಗರದಲ್ಲಿ ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಕೇಸ್ ಬಂದಿದೆ. ಏಕೆಂದರೆ ಅತೀ ಹೆಚ್ಚು ಪರೀಕ್ಷೆ ಮಾಡಿದ್ದು, ದಿನಕ್ಕೆ 3 ಸಾವಿರ ಇದ್ದ ಟೆಸ್ಟ್ ಸಂಖ್ಯೆನ್ನು 30 ಸಾವಿರಕ್ಕೆ ಹೆಚ್ಚಿಸಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಮಾಹಿತಿ ನೀಡಿದ ಅವರು, ಕಳೆದ ಮೂರು ದಿನಗಳಿಂದ ದಿನಕ್ಕೆ 30 ಸಾವಿರ ಕೋವಿಡ್ ಪರೀಕ್ಷೆ ಮಾಡಿದ್ದೇವೆ. ಪರೀಕ್ಷೆ ಮಾಡಿದ ಸ್ಯಾಂಪಲ್ ನಲ್ಲಿ ಶೇ.10 ರಷ್ಟು ಪಾಸಿಟಿವ್ ಬಂದಿದೆ. ಕಳೆದ 7 ದಿನದಲ್ಲಿ ಅಂಕಿ ಅಂಶದ ಅನ್ವಯ ಆಗಸ್ಟ್ 31ರಂದು 31,961 ಟೆಸ್ಟ್ ಮಾಡಲಾಗಿದೆ. ಆದರೆ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಚಿಂತೆ ಬೇಡ. ಪರೀಕ್ಷೆ ಜಾಸ್ತಿ ಮಾಡಿ ವರದಿ ಸಹ ಅದಕ್ಕೆ ತಕ್ಕಂತೆ ಬಂದಿದೆ ಎಂದು ತಿಳಿಸಿದರು.

    ನಗರದ ಕಂಟೈನ್‍ಮೆಂಟ್ ಝೋನ್‍ಗಳ ಬಗ್ಗೆ ಹಲವು ಬದಲಾವಣೆಗಳಾಗಿವೆ. 17,159 ಪ್ರಕರಣಗಳಲ್ಲಿ ಬ್ಯಾರಿಕೇಟ್ ಮಾಡುತ್ತಿಲ್ಲ. ಒಂದೇ ಸ್ಥಳದಲ್ಲಿ 3 ಪ್ರಕಣಗಳಿಗಿಂತ ಹೆಚ್ಚಿದ್ದರೆ ಆ ಸ್ಥಳದಲ್ಲಿ ಮಾತ್ರ ಕಂಟೈನ್‍ಮೆಂಟ್ ಮಾಡುತ್ತಿದ್ದು, 1,018 ಇದೆ. ಅಲ್ಲದೇ ಕೊರೊನಾ ಸೋಂಕಿತ ವ್ಯಕ್ತಿಯ ಮನೆಯ ಎದುರು ಪೋಸ್ಟರ್ ಕೂಡ ಇರಲ್ಲ. ಅಕ್ಕ ಪಕ್ಕದ ಮನೆಯವರಿಗೆ ಮಾಹಿತಿ ನೀಡುತ್ತೇವೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

    ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡಲು ಮಾತ್ರ ಸೂಚನೆ ನೀಡಲಾಗಿದೆ. ಯಾವುದೇ ಟಾರ್ಗೆಟ್ ನೀಡಲ್ಲ. ಸಾರಿ, ಐಎಲ್‍ಐ ಇರುವವರು ಟೆಸ್ಟ್ ಮಾಡಿಸಿಕೊಳ್ಳಿ. 50 ವರ್ಷದ ಮೇಲೆ ಬೇರೆ ಬೇರೆ ಕಾಯಿಲೆ ಇದ್ದವರಿಗೆ ಮಾತ್ರ ಟೆಸ್ಟ್ ಹೆಚ್ಚು ಮಾಡಲಾಗುತ್ತಿದೆ. ಬಿಬಿಎಂಪಿ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಟಾರ್ಗೆಟ್ ಮಾಡಿ ಮನೆ ಮನೆ ಸರ್ವೆ ಮಾಡಲಾಗುತ್ತಿದೆ. ಇತ್ತ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಜನರು ಕಡಿಮೆ ಆಗುತ್ತಿದ್ದಾರೆ. ಈಗ ಶೇ.50 ರಷ್ಟು ಬೆಡ್ ಖಾಲಿ ಇದ್ದು, ಆಸ್ಪತ್ರೆ ಸೇವೆ ಬೇಕಾದವರು ಮಾತ್ರ ಹೋಗುತ್ತಿದ್ದಾರೆ. ಪರಿಣಾಮ ಹೋಂ ಐಸೋಲೇಷನ್ ಪ್ರಕರಣ ಹೆಚ್ಚು ಮಾಡುತ್ತಿದ್ದೇವೆ. ಇದನ್ನು ಕುಶಾಲ ಪೋರ್ಟಲ್ ಮೂಲಕ ಸ್ವತ್ಯ ಎಂಬ ಟೀಂ ಮೂಲಕ ಮಾನಿಟರ್ ಮಾಡಲಾಗುತ್ತದೆ ಎಂದು ತಿಳಿಸಿದರು.

    ಖಾಸಗಿ ಆಸ್ಪತ್ರೆಗಳ ಶೇ.50 ರಷ್ಟು ಬೆಡ್ ಕಾಯ್ದಿರಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಶೇ.40 ರಷ್ಟು ಸರ್ಕಾರಿ ಬೆಡ್‍ಗಳು ಖಾಲಿ ಇದೆ. ಸರ್ಕಾರದ ಗಮನಕ್ಕೆ ವಿಚಾರ ತಂದಿದೆ. 12 ಕೋವಿಡ್ ಕೇರ್ ಸೆಂಟರ್ ಕ್ಲೋಸ್ ಬಗ್ಗೆ ಚರ್ಚೆ ನಡೆಯುತ್ತಿದ್ದೆ. ಸದ್ಯಕ್ಕಂತೂ 2 ಸೆಂಟರ್ ಕ್ಲೋಸ್ ಬೇಗ ಆಗಲಿದೆ. ಬಿಐಇಸಿ ಕೆಲ ವಸ್ತುಗಳ ಶಿಫ್ಟಿಂಗ್ ಬಗ್ಗೆ ತೀರ್ಮಾನ ಆಗಿದೆ. ಹೋಂ ಐಸೋಲೇಷನ್ ಗೆ ಯಾರು ತೊಂದರೆ ಕೊಡುವಂತಿಲ್ಲ, ಮನೆಯಲ್ಲಿ ಸೌಲಭ್ಯ ಇದ್ದರೆ ಮನೆಯಲ್ಲೇ ಇರಬಹುದು ಎಂದರು.

    ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರೆಫರೆಲ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕಡ್ಡಾಯ ಮಾಡಲಾಗುತ್ತಿದೆ. ನಗರದ ಎಲ್ಲಾ ವಾರ್ಡ್ ಗಳಿಗೂ ಈ ಕೆಲಸ ಮಾಡಲು ಚಾಲನೆ ಸಿಕ್ಕಿದೆ. 10 ದಿನಗಳಲ್ಲಿ ಎಲ್ಲ ಕಡೆ ಸೌಲಭ್ಯ ಸಿಗಬಹುದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

  • ಏರಿಯಾ ಸೀಲ್ ಬದಲು ಮನೆ ಬಾಗಿಲೇ ಸೀಲ್‍ಡೌನ್- ಚೀನಾದಲ್ಲಿ ಕಂಡು ಬರ್ತಿದ್ದ ದೃಶ್ಯ ಬೆಂಗಳೂರಲ್ಲಿ

    ಏರಿಯಾ ಸೀಲ್ ಬದಲು ಮನೆ ಬಾಗಿಲೇ ಸೀಲ್‍ಡೌನ್- ಚೀನಾದಲ್ಲಿ ಕಂಡು ಬರ್ತಿದ್ದ ದೃಶ್ಯ ಬೆಂಗಳೂರಲ್ಲಿ

    – ಬಿಬಿಎಂಪಿ ಮಹಾ ಎಡವಟ್ಟಿಗೆ ಭಾರೀ ಆಕ್ರೋಶದ ಬಳಿಕ ತೆರವು

    ಬೆಂಗಳೂರು: ಕೊರೊನಾ ಪಾಸಿಟಿವ್ ಬಂದ ಸಂದರ್ಭದಲ್ಲಿ ಏರಿಯಾ ಸೀಲ್ ಮಾಡುವ ಬದಲು ಮನೆ ಬಾಗಿಲನ್ನೇ ಸೀಲ್‍ಡೌನ್ ಮಾಡಿರುವ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ.

    ಬಿಬಿಎಂಪಿಯ ಮಹಾ ಎಡವಟ್ಟು ಮಾಡಿಕೊಂಡಿದ್ದು, ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯ ಮನೆ ಬಾಗಿಲಿಗೆ ಅಡ್ಡಲಾಗಿ ಕಬ್ಬಿಣದ ಶೀಟ್ ಅಳವಡಿಕೆ ಮಾಡಿದ್ದರು. ಆ ಮೂಲಕ ಸೋಂಕಿತ ವ್ಯಕ್ತಿ ಮನೆಯಿಂದ ಹೊರಬರದಂತೆ ಸೀಲ್‍ಡೌನ್ ಮಾಡಲಾಗಿತ್ತು. ಶಾಂತಿನಗರದ ಅಪಾರ್ಟ್‍ಮೆಂಟ್ ಒಂದರಲ್ಲಿ ಘಟನೆ ನಡೆದಿದೆ.

    ಅಧಿಕಾರಿಗಳ ಯಡ್ಡವಟ್ಟು ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಹಂಚಿಕೊಂಡಿದ್ದರು. ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ, ಸೀಲ್‍ಡೌನ್ ಮಾಡಿದ್ದ ಮೂರು ಗಂಟೆಯ ಬಳಿಕ ಶೀಟನ್ನು ತೆರವು ಮಾಡಿದೆ.

    ಸೀಲ್‍ಡೌನ್ ಮಾಡಿದ್ದ ಮನೆಯಲ್ಲಿ ಮಕ್ಕಳು ಮತ್ತು ವೃದ್ಧರು ವಾಸಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ಸದ್ಯ ಅವರು ನಿಟ್ಟುಸಿರುಬಿಟ್ಟಿದ್ದಾರೆ. ಅಧಿಕಾರಿಗಳ ಯಡವಟ್ಟಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿ, ಕ್ಷಮೆ ಕೇಳಿದ  ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು, ಮನೆಯ ಬಾಗಿಲಿಗೆ ಅಳವಡಿಸಿದ್ದ ಬ್ಯಾರಿಕೇಡ್‍ಗಳನ್ನು ತಕ್ಷಣ ತೆರವು ಮಾಡಲಾಗಿದೆ. ಎಲ್ಲಾ ವ್ಯಕ್ತಿಗಳನ್ನು ಗೌರವದಿಂದ ಕಾಣಲು ನಾವು ಬದ್ಧರಾಗಿದ್ದು, ಸೋಂಕಿತರನ್ನು ರಕ್ಷಿಸುವುದು ಹಾಗೂ ಸೋಂಕು ಇಲ್ಲದ ಸಾರ್ವಜನರ ಸುರಕ್ಷಿತರಾಗಿದ್ದಾರೆ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು ಉದ್ದೇಶವಾಗಿತ್ತು ಎಂದಿದ್ದಾರೆ.

    ನಿರ್ಲಕ್ಷ್ಯ ವಹಿಸಿ ಮನೆ ಸೀಲ್‍ಡೌನ್ ಮಾಡಿದ್ದ ಅಧಿಕಾರಿಗಳಿಗೆ ಕಾರಣ ಕೇಳಿ ಬಿಬಿಎಂಪಿ ಆಯುಕ್ತರು ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ಖುದ್ದು ಹಾಜರಾಗಿ ಸಮಜಾಯಿಷಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಅಧಿಕಾರಿ ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಬಿಎಂಟಿಸಿ ಚಾಲಕರನ್ನು ಆಂಬುಲೆನ್ಸ್ ಚಾಲಕರನ್ನಾಗಿ ಬಳಿಸಿಕೊಳ್ಳಲು ಚಿಂತನೆ- ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್

    ಬಿಎಂಟಿಸಿ ಚಾಲಕರನ್ನು ಆಂಬುಲೆನ್ಸ್ ಚಾಲಕರನ್ನಾಗಿ ಬಳಿಸಿಕೊಳ್ಳಲು ಚಿಂತನೆ- ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್

    ಬೆಂಗಳೂರು: ಬಿಬಿಎಂಪಿ ನೂತನ ಆಯುಕ್ತರಾಗಿ ಇಂದು ಮಂಜುನಾಥ್ ಪ್ರಸಾದ್ ಅಧಿಕಾರ ಸ್ವೀಕಾರ ಮಾಡಿದರು.

    ಅಧಿಕಾರ ಸ್ವೀಕಾರದ ಬಳಿಕ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಮಾಡುವುದು ಚಾಲೆಂಜ್ ಎಂದು ಹೇಳಿದ್ದಾರೆ. ಅಲ್ಲದೇ ಕಂದಾಯ ಇಲಾಖೆ ಹೆಚ್ಚುವರಿ ಜವಾಬ್ದಾರಿಯಿಂದ 2 ದಿನಗಳಲ್ಲಿ ಮುಕ್ತವಾಗಿ ಬಿಬಿಎಂಪಿ ಕಮಿಷನರ್ ಆಗಿ ಫುಲ್ ಟೈಮ್ ಆಗಿ ಕಾರ್ಯನಿರ್ವಹಿಸಲು ಸೂಚನೆ ಲಭಿಸಿದೆ ಎಂದು ಸ್ಪಷ್ಟಪಡಿಸಿದರು.

    ಕೋವಿಡ್ ನಿಯಂತ್ರಣ ಎಂಬುವುದು ಒಬ್ಬ ಕಮಿಷನರ್ ಮಾತ್ರ ಮಾಡುವ ಕೆಲಸವಲ್ಲ. ಹಿರಿಯ ಅಧಿಕಾರಿಗಳು, ಸಚಿವರು, ಮೇಯರ್, ವಲಯವರು ಉಸ್ತುವಾರಿಗಳು ಸೇರಿದಂತೆ ಬೆಂಗಳೂರಿನ ಜನರ ಸಹಕಾರದೊಂದಿಗೆ ಸೋಂಕಿನ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು. ನಗರದಲ್ಲಿ ಸದ್ಯ ಹೆಚ್ಚಾಗುತ್ತಿರುವ ಕೋವಿನ್ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಮೊದಲ ಹಂತದಲ್ಲೇ ಸೋಂಕಿತರನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವತ್ತ ಹೆಚ್ಚಿನ ನೀಡುತ್ತೇವೆ ಎಂದರು.

    ಮೊದಲ ಹಂತದಲ್ಲೇ ಸೋಂಕಿತರನ್ನು ಗುರುತಿಸಿ ಅಗತ್ಯವಿರುವವರಿಗೆ ಚಿಕಿತ್ಸೆ ನೀಡಲು ಕ್ರಮಕೈಗೊಂಡರೇ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು. ಹೋಂ ಐಶೋಲೇಶನ್, ಟೆಸ್ಟೆಡ್ ರಿಪೋರ್ಟ್, ಕೋವಿಡ್ ಕೇರ್ ಸೆಂಟರ್ ನಲ್ಲಿ ಸೌಲಭ್ಯಗಳಲ್ಲಿ ಸಮರ್ಪಕವಾಗಿ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪವಿದ್ದು, ನಾಳೆಯಿಂದಲೇ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.

    ಮುಂದಿನ ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರತಿಯೊಂದು ಝೋನ್‍ನಲ್ಲೂ ಮಾಡುತ್ತೇವೆ. ಕೋವಿಡ್ ಗೆಲ್ಲಲು ಜನ ಪ್ರತಿನಿಧಿಗಳ ಸಹಕಾರ ಜೊತೆಗೆ ಜನರ ಸಹಕಾರವೂ ಅಗತ್ಯವಿದೆ. ನಗರದದಲ್ಲಿ ಸೋಂಕಿತರಿಗೆ ಅಗತ್ಯ ಬೆಡ್ ನೀಡುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಈ ಕುರಿತು ಹೆಚ್ಚಿನ ಗಮನ ನೀಡಲಾಗುವುದು. ಸದ್ಯ ಕರ್ತವ್ಯಕ್ಕೆ ಹಾಜರಾಜದ ಬಿಬಿಎಂಪಿ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗುವುದು. ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳುತ್ತೇವೆ. ಆದರೆ ಇದು ನಮಗೆ ಕೊನೆ ಆಯ್ಕೆ ಆಗಿರುತ್ತದೆ. ನಮ್ಮ ಸಿಬ್ಬಂದಿ ಮೇಲೆ ನಾವೇ ಕ್ರಮಕೈಗೊಳ್ಳುವ ಬದಲು ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗುವುದು ಎಂದರು.

    ನಗರದಲ್ಲಿ ಅಗತ್ಯವಿರುವ ಆಂಬುಲೆನ್ಸ್ ತೆಗೆದುಕೊಳ್ಳಲಾಗಿದೆ. 24 ಗಂಟೆ ಆಂಬುಲೆನ್ಸ್ ಸಿಗುವಂತೆ ನೋಡಿಕೊಳ್ಳಲು ಬಿಎಂಟಿಸಿ ಚಾಲಕರನ್ನು ಆಂಬುಲೆನ್ಸ್ ಚಾಲಕರನ್ನಾಗಿ ಬಳಿಸಿಕೊಳ್ಳಲು ಚಿಂತನೆ ಮಾಡಲಾಗಿದೆ. ಅಲ್ಲದೇ ಹೋಂ ಐಸೋಲೇಷನ್ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗುವುದು. ಈಗಾಗಲೇ ಸೋಂಕಿನಿಂದ ಐಸೋಲೇಷನ್ ಆಗಿರುವ ಸಿಬ್ಬಂದಿಗೆ ಬೆಂಬಲ ನೀಡುತ್ತೇನೆ. ಸಿಬ್ಬಂದಿ ಕೊರತೆಯನ್ನು ನೀಗಿಸಲು ಸ್ವಯಂಸೇವಕರನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೇ ಪಾಲಿಕೆ ಕೋವಿಡ್-19 ಸಂಬಂಧಿಸಿದಂತೆ ಏನೇ ಖರೀದಿ ಮಾಡಿದ್ದರೂ ಪ್ರತಿ ಪೈಸೆ ಲೆಕ್ಕವನ್ನು ಪಾಲಿಕೆ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತದೆ. ತೆರಿಗೆ ಹಣದಲ್ಲಿ ಮಾಡುವ ಕೆಲಸ ಎಲ್ಲವನ್ನು ಜನರ ಮುಂದಿಡುವ ಕೆಲಸ ಮಾಡಲಾಗುತ್ತೆ ಎಂದರು.