Tag: BBMP Commissioner

  • ಓಮಿಕ್ರಾನ್‌ ಪೀಡಿತ 2ನೇ ವ್ಯಕ್ತಿ ಟ್ರಾವೆಲ್‌ ಹಿಸ್ಟರಿ ಗೊತ್ತಿಲ್ಲ, ಸಂಪರ್ಕಿತರಲ್ಲಿ ರೂಪಾಂತರಿ ಇರಬಹುದು: ಗೌರವ್‌ ಗುಪ್ತ

    ಓಮಿಕ್ರಾನ್‌ ಪೀಡಿತ 2ನೇ ವ್ಯಕ್ತಿ ಟ್ರಾವೆಲ್‌ ಹಿಸ್ಟರಿ ಗೊತ್ತಿಲ್ಲ, ಸಂಪರ್ಕಿತರಲ್ಲಿ ರೂಪಾಂತರಿ ಇರಬಹುದು: ಗೌರವ್‌ ಗುಪ್ತ

    ಬೆಂಗಳೂರು: ಕೊರೊನಾ ವೈರಸ್‌ ಹೊಸ ರೂಪಾಂತರಿ ಓಮಿಕ್ರಾನ್‌ ಇಬ್ಬರಲ್ಲಿ ದೃಢಪಟ್ಟಿದ್ದು, ಒಬ್ಬರ ಸಂಪರ್ಕಿತರ ಟ್ರಾವೆಲ್‌ ಹಿಸ್ಟರಿ ಲಭ್ಯವಾಗಿಲ್ಲ. ಹೀಗಾಗಿ ಹಲವರಲ್ಲಿ ರೂಪಾಂತರಿ ಇರುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡು ಪ್ರಕರಣ ದೃಢಪಟ್ಟಿರುವ ಬಗ್ಗೆ ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಓಮಿಕ್ರಾನ್‌ ದೃಢಪಟ್ಟ 66 ವಯಸ್ಸಿನ ಒಬ್ಬ ವ್ಯಕ್ತಿ ನ.20ಕ್ಕೆ ಬೆಂಗಳೂರಿಗೆ ಬಂದಿದ್ದರು. ಪರೀಕ್ಷೆ ವೇಳೆ ಅವರಿಗೆ ಕೋವಿಡ್‌ ಪಾಸಿಟಿವ್‌ ಇರುವುದು ದೃಢಪಟ್ಟಿತ್ತು. ಅವರ ಸ್ವಾಬ್ ಅನ್ನು ಜಿನೋಟಿಕ್ ಲ್ಯಾಬ್‌ಗೆ ಕಳಿಸಲಾಗಿತ್ತು. ಒಮಿಕ್ರಾನ್ ಎಂದು ದೃಢಪಟ್ಟಿದೆ. ಅವರನ್ನು ಹೋಟೆಲ್‌ನಲ್ಲಿ ಕ್ವಾರಂಟೈನ್‌ಲ್ಲಿರಿಸಲಾಗಿತ್ತು. ಮೊದಲ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕದಲ್ಲಿದ್ದವರ ಮೇಲೆ ನಿಗಾವಹಿಸಲಾಗಿದೆ. ಎಲ್ಲರ ವರದಿಯೂ ನಗೆಟಿವ್ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್: ಸುಧಾಕರ್

    ಎರಡನೇ ವ್ಯಕ್ತಿ 46 ವಯಸ್ಸಿನವರಾಗಿದ್ದು, ನ.24 ರಂದು ಬೆಂಗಳೂರಿಗೆ ಆಗಮಿಸಿದ್ದರು. ಮೊದಲು ಹೋಂ ಐಸೋಲೇಷನ್ ಮಾಡಲಾಗಿತ್ತು. ಅ ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ 12 ಹಾಗೂ ದ್ವಿತೀಯ ಸಂಪರ್ಕದಲ್ಲಿ 205 ಮಂದಿ ಇದ್ದಾರೆ ಎಂದು ಗುರುತಿಸಲಾಗಿದೆ. ಅದರಲ್ಲಿ 5 ಜನರಿಗೆ ಕೋವಿಡ್‌ ಪಾಸಿಟಿವ್ ಬಂದಿದೆ. ಈಗ 5 ಜನರ ಸ್ವಾಬ್ ಅನ್ನು ಜಿನೋಟಿಕ್ ಲ್ಯಾಬ್‌ಗೆ ಕಳಿಸಲಾಗಿದೆ. ಆದರೆ ಈ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇಲ್ಲ. ಅತನಿಗೆ ಸ್ಥಳೀಯವಾಗಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಇಬ್ಬರಿಗೆ ಪಾಸಿಟಿವ್ ಬಂದಿದೆ. ಓಮಿಕ್ರಾನ್‌ ದೃಢಪಟ್ಟಿರುವ ಎರಡನೇ ವ್ಯಕ್ತಿ ಆಸ್ಪತ್ರೆಯಲ್ಲಿದ್ದು, ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಎರಡನೆಯ ವ್ಯಕ್ತಿ ಟ್ರಾವಲ್ ಹಿಸ್ಟರಿ ಇಲ್ಲ. ಹೀಗಾಗಿ ಇನ್ನೂ ಹೆಚ್ಚಿನ ಜನರಿಗೆ ಈ ರೂಪಾಂತರಿ ಇರುವ ಸಾಧ್ಯತೆ ಇದೆ. ಜನ ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಹಾಕಿಕೊಳ್ಳದೇ ಹೊರಗಡೆ ಬರಬೇಡಿ. ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತರನ್ನು ಐಸೋಲೇಟ್ ಮಾಡಲಾಗಿದೆ: ಅಶ್ವಥ್ ನಾರಾಯಣ್

    ಬೌರಿಂಗ್ ಆಸ್ಪತ್ರೆಯಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಸೋಂಕಿತರಿಗೆ ಬೆಡ್‌ ಮೀಸಲಿಡಲಾಗಿದೆ. ಓಮಿಕ್ರಾನ್‌ ಸೋಂಕಿತರು ಕೋವಿಡ್‌ ಲಸಿಕೆಯ ಎರಡು ಡೋಸ್‌ ಪಡೆದುಕೊಂಡಿದ್ದಾರೆ. ಅವರ ಸಂಪರ್ಕದಲ್ಲಿದ್ದು, ಕೋವಿಡ್‌ ಪಾಸಿಟಿವ್‌ ಬಂದವರ ಸ್ವಾಬ್‌ ಅನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದರು.

  • ಬೆಂಗಳೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷಾ ಕಾರ್ಯ

    ಬೆಂಗಳೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷಾ ಕಾರ್ಯ

    – 15 ದಿನಗಳಲ್ಲಿ ಪೂರ್ಣಗೊಳಸಲು ಆಯುಕ್ತರ ಸೂಚನೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಲ್ಲಿ 185 ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡಲಾಗಿದ್ದು, ಅದರಲ್ಲಿ 10 ಕಟ್ಟಡಗಳನ್ನು ನೆಲಸಮ ಮಾಡಲಾಗಿರುತ್ತದೆ. ಇದೀಗ ಯೋಜನಾ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿಕೊಂಡು 15 ದಿನಗಳಲ್ಲಿ ಮರು ಸಮೀಕ್ಷೆ ಮಾಡಿ, ನಗರದಲ್ಲಿ ಎಷ್ಟು ಶಿಥಿಲಾವಸ್ಥೆಗೊಂಡಿರುವ ಕಟ್ಟಡಗಳಿವೆ ಎಂಬುದರ ಬಗ್ಗೆ ನಿಖರ ವರದಿ ನೀಡಲು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಎಲ್ಲಾ ವಲಯ ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡುವ ಸಂಬಂಧ ಇಂದು ವರ್ಚುವಲ್ ಮೂಲಕ ಸಭೆ ನಡೆಸಲಾಯಿತು. ನಗರದಲ್ಲಿ 2019ರಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡಿರುವ ಬಗ್ಗೆ, ಹಾಗೂ ಸಮೀಕ್ಷೆಯ ಪ್ರಕಾರ ಇದುವರೆಗೆ ಎಷ್ಟು ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಎಷ್ಟು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂಬುದರ ಬಗ್ಗೆ ಆಯುಕ್ತರು ಎಂಟೂ ವಲಯಗಳಿಂದ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಹೃದಯ ಪರೀಕ್ಷೆ ನಡೆಸಲು ನಿಮ್ಮ ಮನೆ ಬಾಗಿಲಿಗೇ ಬರಲಿದೆ ಮೊಬೈಲ್ ವಾಹನ

    ನಗರದಲ್ಲಿ 2019ರಲ್ಲಿ ಮಾಡಿದ್ದ ಸಮೀಕ್ಷೆಯಲ್ಲಿ ಗುರುತಿಸಿದ್ದ 185 ಶಿಥಿಲಾವಸ್ಥೆಯ ಕಟ್ಟಡಗಳ ಪೈಕಿ ಈಗಾಗಲೇ 10 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಬಾಕಿ 175 ಕಟ್ಟಡಗಳ ಮಾಲೀಕರಿಗೆ ಕೂಡಲೇ ನೋಟಿಸ್ ನೀಡಿ, ಕಟ್ಟಡಗಳನ್ನು ನೆಲಸಮ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಲಯ ಜಂಟಿ ಆಯುಕ್ತರುಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ತಾಲೂಕು ಕಚೇರಿಯಲ್ಲಿ ಕುಸಿದು ಬೀಳುತ್ತಿದೆ ಮೇಲ್ಛಾವಣಿ

    ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಪುನರ್ ಪರಿಶೀಲಿಸುವ ಸಂಬಂಧ, ಆಯಾ ವಲಯಗಳಲ್ಲಿ ಸಂಬಂಧಪಟ್ಟ ಎಂಜಿನಿಯರ್‍ಗಳು ಕಟ್ಟಡಗಳ ಸ್ಥಳಕ್ಕೆ ಭೇಟಿ ನೀಡಿ ಮರು ಪರಿಶೀಲಿಸಬೇಕು. ನಂತರ ನಿಖರ ಮಾಹಿತಿಯನ್ನು ನೀಡಬೇಕು ಎಂದರು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷೆ ನಡೆಸಿದ ಬಳಿಕ ಆ ಕಟ್ಟಡಗಳನ್ನು ನೆಲಸಮ ಮಾಡುವ ಸಲುವಾಗಿ 15 ದಿನಗಳಲ್ಲಿ ವಲಯವಾರು ಗುತ್ತಿಗೆದಾರರನ್ನು ನೇಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ಎಲ್ಲಾ ವಲಯ ವಿಶೇಷ ಆಯುಕ್ತರುಗಳು, ಜಂಟಿ ಆಯುಕ್ತರುಗಳು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ಎಲ್ಲಾ ವಿಭಾಗೀಯ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಆಗಸ್ಟ್ 21 ರಿಂದ 90 ದಿನ ಗೂಡ್‍ಶೆಡ್ ರಸ್ತೆ ಬಂದ್

    ಆಗಸ್ಟ್ 21 ರಿಂದ 90 ದಿನ ಗೂಡ್‍ಶೆಡ್ ರಸ್ತೆ ಬಂದ್

    – ಪರ್ಯಾಯ ಮಾರ್ಗ ಹೀಗಿದೆ

    ಬೆಂಗಳೂರು: ವೈಟ್ ಟ್ಯಾಪಿಂಗ್ ಕಾಮಗಾರಿ ಹಿನ್ನೆಲೆ ಮುಂದಿನ 90 ದಿನ ಬೆಂಗಳೂರಿನ ಪ್ರಮುಖ ರಸ್ತೆ ಗೂಡ್ ಶೆಡ್ ರೋಡ್ ಬಂದ್ ಆಗುತ್ತಿದೆ. ಗೂಡ್ ಶೆಡ್ ರೋಡ್ ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

    ಬಿಜಿಎಸ್ ಮೇಲ್ಸೇತುವೆಯ ಅಂಬೇಡ್ಕರ್ ಡೌನ್ ರ‍್ಯಾಂಪ್ ನಿಂದ ಡಾ.ಟಿಸಿಎಂ ರಾಯನ್ ಸರ್ಕಲ್ ವರೆಗೂ 1.5 ಕಿಮೀ ವರೆಗೂ ವೈಟ್ ಟ್ಯಾಪಿಂಗ್ ಕೆಲಸ ನಡೆಯಲಿದ್ದು, 90 ದಿನಗಳ ಕಾಲ ರಸ್ತೆ ಬಂದ್ ಆಗಲಿದೆ. ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತವೆ. ಈಗ ರಸ್ತೆ ಬಂದ್ ಆಗುತ್ತಿರೋದರಿಂದ ಪರ್ಯಾಯ ಮಾರ್ಗ ಅನುಸರಿಸಬೇಕಾಗುತ್ತದೆ.

    ಒಟ್ಟು ಎರಡು ಹಂತದಲ್ಲಿ ವೈಟ್ ಟ್ಯಾಪಿಂಗ್ ನಡೆಯಲಿದೆ. ಮೊದಲ ಹಂತದಲ್ಲಿ ಅಂಬೇಡ್ಕರ್ ಡೌನ್ ರ‍್ಯಾಂಪ್ ನಿಂದ ಬೇಲಿ ಮಠದ ರಸ್ತೆವರೆಗೆ ಮತ್ತು ಎರಡನೇ ಹಂತದ ಕಾಮಗಾರಿ ಕಾಟನ್‍ಪೇಟೆಯ ಅಡ್ಡ ರಸ್ತೆವರೆಗೆ ನಡೆಯಲಿದೆ. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ಪರ್ಯಾಯ ಮಾರ್ಗ ಹೇಗೆ?
    ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಸಾಗುವ ವಾಹನಗಳು ಮೈಸೂರು ರಸ್ತೆಯ ಬಾಡಿ ಬಿಲ್ಡರ್ ಜಂಕ್ಷನ್ ನಿಂದ ಸರ್ವಿಸ್ ರಸ್ತೆಯ ಮೂಲಕ ಸಿರ್ಸಿ ಜಂಕ್ಷನ್ ಬಂದು ಬಳಿಕ ಎಡ ತಿರುವು ಪಡೆದು ಬಿನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆಯ ಬಾಳೆಕಾಯಿ ಮಂಡಿ ಜಂಕ್ಷನ್ ಗೆ ಬಂದು ಬಿನ್ನಿ ಮಿಲ್ ಜಂಕ್ಷನ್ ನಿಂದ ಬಲ ತಿರುವು ಪಡೆದು ಟಿಸಿಎಂ ರಾಯನ್ ಸರ್ಕಲ್ ಗೆ ಬಂದು ಶಾಂತಲ ಸಿಲ್ಕ್ ರೋಡ್ ಮೂಲಕ ಮೆಜೆಸ್ಟಿಕ್ ತಲುಪಬಹುದು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಶಾಪಿಂಗ್ – ಕೊರೊನಾ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ ಜನ

  • ಇನ್ಮುಂದೆ ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್‌ಗಳಲ್ಲಿ ಕೋವಿಡ್ ಟೆಸ್ಟ್: ಬಿಬಿಎಂಪಿ

    ಇನ್ಮುಂದೆ ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್‌ಗಳಲ್ಲಿ ಕೋವಿಡ್ ಟೆಸ್ಟ್: ಬಿಬಿಎಂಪಿ

    ಬೆಂಗಳೂರು: ಕೊರೊನಾ ವಿರುದ್ಧ ಪಾಲಿಕೆ ಹೊಸ ಪ್ಲ್ಯಾನ್ ಮಾಡಿದ್ದು, ಇನ್ನೂ ಮುಂದೆ ಜನಸಂದಣಿ ಜಾಸ್ತಿ ಇರುವ ಕಡೆ ಕೊರೊನಾ ಟೆಸ್ಟ್ ಮಾಡಿಸಲು ನಿರ್ಧರಿಸಲಾಗಿದೆ.

    ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್‌ಗಳಲ್ಲಿ ಕೊರೊನಾ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಕಬ್ಬನ್ ಪಾರ್ಕ್ ಮತ್ತು ಲಾಲ್‍ಬಾಗ್ ಗೇಟ್ ಬಳಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ, ದ್ವಿತೀಯ ಸಂಪರ್ಕ ಹಾಗೂ ಅನ್ಯ ರೋಗಗಳಿಗೆ ತುತ್ತಾದವರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ನೂರಾರು ಸಂಖ್ಯೆಯ ಜನ ಓಡಾಡುವ ಕಡೆಯೂ ಟೆಸ್ಟ್ ಮಾಡಲಾಗುತ್ತದೆ ಎಂದರು.

    ಮಾಲ್‍ಗಳಲ್ಲಿ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಸೂಪರ್ ಮಾರ್ಕೆಟ್, ಮಾಲ್‍ನಲ್ಲಿ ನಿಯಮ ಉಲ್ಲಂಘನೆಯಾದರೆ ಮಾಲೀಕರೇ ಹೊಣೆಯಾಗುತ್ತಾರೆ. ಹೀಗಾಗಿ ಮಾಲ್ ಮಾಲೀಕರು, ಶಾಪ್‍ನ ಮಾಲೀಕರು ಕೊರೊನಾ ರೂಲ್ಸ್ ಪಾಲಿಸುವಂತೆ ಕಾಯಬೇಕು.

    ಒಂದು ವೇಳೆ ಪದೇ ಪದೇ ನಿಯಮ ಉಲ್ಲಂಘಿಸಿದರೆ ಮಾಲ್ ಹಾಗೂ ಶಾಪನ್ನು ಕ್ಲೋಸ್ ಮಾಡಲು ಆದೇಶ ನೀಡಲಾಗುತ್ತದೆ. ಹೀಗಾಗಿ ಮಾಲ್‍ನಲ್ಲಿ ಸಾಮಾಜಿಕ ಅಂತರ ಕಾಯಲೇಬೇಕು. ಇಲ್ಲವಾದರೇ ದಂಡ ಹಾಕಲಾಗುತ್ತದೆ. 60 ವರ್ಷ ಮೇಲ್ಪಟ್ಟವರು, 10 ವರ್ಷ ಕೆಳಗಿನ ಮಕ್ಕಳು ಮನೆಯಿಂದ ಹೊರಗೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದರು.

    ಇನ್ನೂ ದುರ್ಗಾ ಪೂಜೆ ವೇಳೆ ಪ್ರತಿಮೆಯಿಡುವ ವೇಳೆಯೂ ಕ್ರಮ ವಹಿಸಲಾಗುತ್ತದೆ. ಮೈದಾನದಲ್ಲಿ ಕಾರ್ಯಕ್ರಮ ಮಾಡಿದರೂ ನಿಯಮ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾರ್ಯಕ್ರಮ ಆಯೋಜಕರ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಓಪನ್ ಜಾಗದಲ್ಲಿ ಕಾರ್ಯಕ್ರಮ ಮಾಡುವುದಾದರೆ ಪಾಲಿಕೆ ನಿರ್ಧಾರ ಮಾಡಲಿದೆ. ಆರೋಗ್ಯ ಇಲಾಖೆಯು ಈ ಸಂಬಂಧ ಆದೇಶ ಹೊರಡಿಸಲಿದೆ ಎಂದು ನವರಾತ್ರಿ ವೇಳೆ ಜನಸಂದಣಿ ವಿಚಾರವಾಗಿ ಪ್ರತಿಕ್ರಿಯಿಸಿದರು.

    ಟೆಸ್ಟಿಂಗ್ ಕೇಸ್‍ಗಳ ಸಂಖ್ಯೆ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದ್ದು, ನಿತ್ಯ 50 ಸಾವಿರ ಟೆಸ್ಟ್ ಮಾಡಲು ಚಿಂತನೆ ಮಾಡಲಾಗಿದೆ. ಸದ್ಯಕ್ಕೆ ನಿತ್ಯ 38 ಸಾವಿರ ಕೇಸ್ ಟೆಸ್ಟ್ ಆಗುತ್ತಿದೆ. ಅರದಲ್ಲಿ ಈಗ 5 ಸಾವಿರ ಕೇಸ್ ಬರುತ್ತಿದೆ. ಇನ್ನೂ ಶೇ.1.23 ಸಾವು ಆಗುತ್ತಿದೆ. ನಾವು ಸಾವಿನ ಪ್ರಮಾಣವನ್ನು ಶೇ.1 ರಷ್ಟು ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿ ಉಸಿರಾಟದ ತೊಂದರೆಯಾದಾಗ ಆಸ್ಪತ್ರೆಗೆ ಬಂದರೆ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

  • ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ – ಬಿಬಿಎಂಪಿ ಕಮಿಷನರ್ ಸ್ಪಷ್ಟನೆ

    ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ – ಬಿಬಿಎಂಪಿ ಕಮಿಷನರ್ ಸ್ಪಷ್ಟನೆ

    – ಕೊರೊನಾ ನಿಯಂತ್ರಿಸಲು ದಂಡವೇ ಕೊನೆಯ ಅಸ್ತ್ರ

    ಬೆಂಗಳೂರು: ಮಾಸ್ಕ್ ಧರಿಸಿಲ್ಲ ಅಂದರೆ ದುಬಾರಿ ದಂಡ ಹಾಕುತ್ತಿರುವುದಕ್ಕೆ ಜನಸಾಮಾನ್ಯರು ಕಿಡಿಕಾರುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಂಜುನಾಥ್ ಪ್ರಸಾದ್, ಯಾವುದೇ ಕಾರಣಕ್ಕೂ ದಂಡದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಸ್ತಾಪನೂ ಇಲ್ಲ. ಕಡಿಮೆ ಮಾಡುವುದಿಲ್ಲ. ಕೊರೊನಾ ನಿಯಂತ್ರಿಸಲು ದಂಡ ಅನ್ನೋದು ಕೊನೆಯ ಅಸ್ತ್ರ. ಹೀಗಾಗಿ ಜನರೇ ಪಾಲನೆ ಮಾಡಬೇಕಾಗುತ್ತದೆ. ಮನೆಯಲ್ಲೇ ತಯಾರಿಸಿಕೊಂಡು ಮಾಸ್ಕ್ ಧರಿಸಬಹುದು. ಆದರೂ ಮಾಸ್ಕ್ ಧರಿಸದೇ ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಾರೆ. ಅಂತಹವರು ದಂಡ ಕಟ್ಟಲಿ ಎಂದರು.

    ಕೊರೊನಾ ವ್ಯಕ್ತಿಯನ್ನ ಹಿಂಸಿಸುತ್ತದೆ. ಅಲ್ಲದೇ ಇದು ಜನರ ಸುತ್ತಮುತ್ತಲಿನವರಿಗೂ ಹರಡುತ್ತದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ಅಡಿಯಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ದಂಡ ಇಳಿಸಲು ಸಾಧ್ಯವಾಗಲ್ಲ. 200 ರೂಪಾಯಿ ಇದ್ದಾಗ ಸಾಕಷ್ಟು ಜನ ನಿಯಮ ಉಲ್ಲಂಘಿಸುತ್ತಿದ್ದರು. ಇಂತಹ ಕೊರೊನಾ ಕಾಲದಲ್ಲಿ ಜನರು ಕೂಡ ಸಹಕಾರ ನೀಡಲೇಬೇಕು ಎಂದು ಬಿಬಿಎಂಪಿ ಕಮಿಷನರ್ ಹೇಳಿದರು.

    ಕೊರೊನಾ ಟೆಸ್ಟ್‌ಗೆ ಸ್ಯಾಂಪಲ್ ಕೊಡುತ್ತಾರೆ, ನಂತರ ಅವರೇ ನಾಪತ್ತೆಯಾಗುತ್ತಾರೆ. ಪೂರ್ವ ವಲಯದಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಬರೋಬ್ಬರಿ 874 ಜನರು ನಾಪತ್ತೆಯಾಗಿದ್ದಾರೆ. ಇವರಿಂದಲೇ ಕೊರೊನಾ ಚೈನ್ ಲಿಂಕ್ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರು ತಪ್ಪು ವಿಳಾಸ ಕೊಟ್ಟು ಮೊಬೈಲ್ ನಂಬರ್ ಸ್ವಿಚ್ ಆಪ್ ಮಾಡಿಕೊಳ್ಳುತ್ತಾರೆ. ಈ ಕೇಸ್‍ಗಳ ಮಾಹಿತಿ ಈಗ ಪೊಲೀಸ್ ಇಲಾಖೆಗೆ ಹೋಗಲಿದೆ. ಪೊಲೀಸ್ ಇಲಾಖೆ ವತಿಯಿಂದ ಪಾಸಿಟಿವ್ ಕೇಸ್ ಜಾಲ ಪತ್ತೆ ಮಾಡಲಾಗುತ್ತದೆ ಎಂದರು.

    ಕೊರೊನಾ ಟೆಸ್ಟ್ ನಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಬೇಕಾಗಿಲ್ಲ. ಬೀದಿ ಬೀದಿಗೆ ಟೆಸ್ಟ್ ಮಾಡಿಸಲಾಗುತ್ತದೆ. ಪ್ರತಿದಿನ ಕೇಸ್‍ಗಳ ಸಂಖ್ಯೆ ಹೆಚ್ಚಾದರೂ ಕೊರೊನಾ ಟೆಸ್ಟ್ ಮಾತ್ರ ಕಡಿಮೆ ಮಾಡಲ್ಲ. ನಮ್ಮ ಟೆಸ್ಟ್ ನಿತ್ಯ ಏರಿಕೆಯಾಗುತ್ತಲೇ ಇದೆ. ಪ್ರಧಾನ ಮಂತ್ರಿಗಳ ಸೂಚನೆ ಮೇರೆಗೆ 40 ಸಾವಿರಕ್ಕೆ ಕೋವಿಡ್ ಸೋಂಕು ಪರೀಕ್ಷೆ ಹೆಚ್ಚಳ ಮಾಡಲಾಗುತ್ತಿದೆ.

    ರಾಟ್ ಕಿಟ್, ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‍ಗಳಿಗೆ ಕೊರತೆ ಇಲ್ಲ. ರಾಜ್ಯ ಸರ್ಕಾರವೂ ಕೊಡುತ್ತಿದೆ, ಬಿಬಿಎಂಪಿಯೂ ಟೆಂಡರ್ ಕರೆದಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿನ್ನೂ ನೇಮಕ ಮಾಡಲು ಅವಕಾಶ ಇದೆ. ಯಾರ‍್ಯಾರಿಗೆ ಟೆಸ್ಟ್ ಮಾಡಬೇಕು ಎಂಬ ಟಾರ್ಗೆಟ್ ಇದೆ. ಬೇರೆ ಬೇರೆ ಖಾಯಿಲೆ ಇರುವವರು, ಉಸಿರಾಟದ ಸಮಸ್ಯೆ, ಕಂಟೈನ್‍ಮೆಂಟ್ ಪ್ರದೇಶದ ಜನ, ವಯಸ್ಸಾದವರನ್ನು ಟೆಸ್ಟ್ ಮಾಡಿದರೆ ದಿನಕ್ಕೆ 40 ಸಾವಿರ ಆಗಲಿದೆ. ಪೂರ್ವ ವಲಯದಲ್ಲಿ ಶೇ.13.11 ಪಾಸಿಟಿವ್ ರೇಟ್ ಇದೆ. ಶೇ.13.11 ನಿಂದ ಶೇ.5ಕ್ಕೆ ಇಳಿಸಬೇಕಿದೆ. ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

  • ಇನ್ಮುಂದೆ ಬೆಂಗ್ಳೂರಲ್ಲಿ ಸೀಲ್‍ಡೌನ್ ಇರಲ್ಲ – 3 ಕೇಸ್ ಇದ್ದರಷ್ಟೇ ಸೀಲ್

    ಇನ್ಮುಂದೆ ಬೆಂಗ್ಳೂರಲ್ಲಿ ಸೀಲ್‍ಡೌನ್ ಇರಲ್ಲ – 3 ಕೇಸ್ ಇದ್ದರಷ್ಟೇ ಸೀಲ್

    ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಇನ್ಮುಂದೆ ಸೀಲ್‍ಡೌನ್ ಇರಲ್ಲ. ಬದಲಾಗಿ ಮೂವರು ಪ್ರಕರಣಗಳು ಇದ್ದರಷ್ಟೇ ಸೀಲ್‍ಡೌನ್ ಮಾಡಲಾಗುತ್ತದೆ.

    ಕೊರೊನಾ ಬೆಂಗಳೂರಿನಲ್ಲಿ ಗರಿಷ್ಟ ಮಟ್ಟದಲ್ಲಿದ್ದರೂ ಬಿಬಿಎಂಪಿ ಸೀಲ್‍ಡೌನ್ ಮತ್ತು ಕಂಟೈನ್ಮೆಂಟ್ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಬೆಂಗಳೂರಿನಲ್ಲಿ ಸೀಲ್‍ಡೌನ್ ಬೇಕಾ ಅಥವಾ ಬೇಡ್ವಾ ಎಂದು ಬಿಬಿಎಂಪಿ ಕಮೀಷನರ್ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ. ಬಿಬಿಎಂಪಿಯ ಎಲ್ಲಾ ವಲಯದ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸೀನ್‍ಡೌನ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

    ಜಿಯೋ ಟ್ಯಾಗ್ ಮೂಲಕವೂ ಪಾಸಿಟಿವ್ ಪ್ರಕರಣಗಳ ಜಾಡು ಪತ್ತೆ ಮಾಡಲಾಗುತ್ತದೆ. ಎಲ್ಲೆಲ್ಲಿ ಕೊರೊನಾ ಪಾಸಿಟಿವ್ ಇದೆ ಎಂದು ಅದರ ಲೊಕೇಶನ್ ಪಡೆಯಲಾಗುತ್ತದೆ. ಆಗ 100 ಮೀಟರ್ ಅಂತರದಲ್ಲಿ ಕೊರೊನಾ ಪಾಸಿಟಿವ್ 3ಕ್ಕಿಂತ ಹೆಚ್ಚು ಇದ್ದರೆ ಮಾತ್ರ ಸೀಲ್‍ಡೌನ್ ಮಾಡಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಸೀಲ್ ಡೌನ್ ಇರಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

    ನಾಳೆಯಿಂದ ಎಲ್ಲ ಕಡೆ ಬ್ಯಾರಿಕೇಡ್ ಹಾಕುವುದು ನಿಲ್ಲುತ್ತದೆ. ಬ್ಯಾರಿಕೇಡ್, ಕಂಟೈನ್‍ಮೆಂಟ್ ಬದಲು ಪೋಸ್ಟರ್ ಅಂಟಿಸಿ ಜನರಿಗೆ ಜವಾಬ್ದಾರಿ ಮೂಡಿಸಲಾಗುತ್ತಿದೆ. ನಾವೇ ಕೋವಿಡ್ ವಿರುದ್ಧ ಬ್ಯಾರಿಕೇಡ್ ಹಾಕಿ ಜನರಿಗೆ ಭಯದ ವಾತಾವರಣ ಕಲ್ಪಿಸಬಾರದು. ಜೊತೆಗೆ ಈವರೆಗೂ ನಗರದಲ್ಲಿ ಕಂಟೈನ್‍ಮೆಂಟ್‍ಗಾಗಿ ವೆಚ್ಚವಾಗಿರುವ ಮಾಹಿತಿಯೂ ಪಡೆಯಲಾಗುತ್ತದೆ ಎಂದು ಮಂಜುನಾಥ್ ಹೇಳಿದರು.

    ಸೀಲ್‍ಡೌನ್ ಬದಲಾವಣೆಗೆ ಕಾರಣ?
    1. ಸೀಲ್‍ಡೌನ್, ಕಂಟೈನ್‍ಮೆಂಟ್ ಝೋನ್ ಕಿರಿಕ್‍ಗಳಿಂದ ಜನ ರೋಸಿ ಹೋಗಿದ್ದಾರೆ.
    2. ಕೊರೊನಾ ಭಯಕ್ಕಿಂತ ಹೆಚ್ಚಾಗಿ ಈಗ ರೋಗಿಗಳಿಗೆ ಸೀಲ್‍ಡೌನ್ ಮಾಡುವುದರಿಂದ ಅಕ್ಕ-ಪಕ್ಕದ ಮನೆಯವರಿಂದ ಮುಜುಗರ, ಅವಮಾನ ಎದುರಿಸುವ ಆತಂಕದಿಂದ ಬೇಸರಗೊಳ್ಳುತ್ತಿದ್ದಾರೆ.
    3. ಸೀಲ್‍ಡೌನ್‍ಗಳ ಆತಂಕಕ್ಕೆ ಇತ್ತೀಚೆಗೆ ಬೆಂಗಳೂರು ಜನ ಕೊರೊನಾ ಗುಣಲಕ್ಷಣಗಳು ಕಾಣಿಸಿಕೊಂಡರು ಟೆಸ್ಟ್‌ಗೆ ಮುಂದೆ ಬರುತ್ತಿಲ್ಲ ಎನ್ನುವ ಭಾವನೆ ರಿಪೋರ್ಟ್ ಬಿಬಿಎಂಪಿ ಕೈ ಸೇರಿದೆ.


    4. ಬೆಂಗಳೂರಿನಲ್ಲಿ ಕಂಟೈನ್‍ಮೆಂಟ್ ಝೋನ್‍ಗಳು ಇದ್ದರೂ ಸಮರ್ಪಕವಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ.
    5. ಸೀಲ್‍ಡೌನ್ ಆದ ಕೆಲ ಭಾಗದಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಹಾಗೂ ಅವರಿಗೆ ಮೂಲಭೂತ ವಸ್ತುಗಳನ್ನು ಓದಗಿಸೋದು ಕೇಸ್ ಹೆಚ್ಚದಾದಂತೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ.
    6. ಸೀಲ್‍ಡೌನ್ ನೆಪದಲ್ಲಿ ಸಿಕ್ಕಾಪಟ್ಟೆ ದುಡ್ಡು ಸರ್ಕಾರಕ್ಕೆ ಖರ್ಚು ಆಗುತ್ತಿದೆ. ಸುಖಾಸುಮ್ಮನೆ ಸಾವಿರಾರು ರೂಪಾಯಿ ಲೆಕ್ಕದಲ್ಲಿ ಅಧಿಕಾರಿಗಳುಜೇಬಿಗೆ ದುಡ್ಡು ಹೋಗುತ್ತಿದೆ ಎಂಬ ಆರೋಪ.
    7. ಇತ್ತೀಚಿನ ದಿನದಲ್ಲಿ ಬ್ಯಾರಿಕೇಡ್‍ಗಳ ಕೊರತೆಯೂ ಎದುರಾಗಿತ್ತು.

  • ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ

    ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ

    ಬೆಂಗಳೂರು: ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಕೊರೊನಾನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಗಣೇಶ ಹಬ್ಬ ಮನೆಯಲ್ಲೇ ಮಾಡಿ. ಕೊರೊನಾ ವಿರುದ್ಧ ಹೋರಾಟ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಗಣಪತಿ ಕೂರಿಸಲು ಅವಕಾಶವೇ ಇಲ್ಲ. ಈ ಮೂಲಕ ಹಬ್ಬಗಳನ್ನ ಮನೆಯಲ್ಲಿ ಮಾಡಬೇಕು ಎಂದು ಪಬ್ಲಿಕ್ ಟಿವಿಗೆ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಹಬ್ಬದ ಶಾಪಿಂಗ್ ನೆಪದಲ್ಲಿ ನಿಯಮಗಳನ್ನು ಮೀರಿದರೆ ದಂಡ ವಿಧಿಸಲಾಗುತ್ತಿದೆ. ಎಲ್ಲ ವಿಚಾರಕ್ಕೂ ಮಾರ್ಗಸೂಚಿ ಮಾಡಲು ಆಗಲ್ಲ. ಆದರೆ ಕೊರೊನಾ ವಿಚಾರವಾಗಿ ನಿಯಮ ಮೀರಿದರೆ ದಂಡ ಪಕ್ಕಾ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತರೆ ಜೇಬಿಗೆ ಕತ್ತರಿ ಬೀಳುತ್ತದೆ. ಹಬ್ಬದ ಹಿಂದಿನ ದಿನ ಪೊಲೀಸ್ ಹಾಗೂ ಬಿಬಿಎಂಪಿ ದಂಡ ಹಾಕಲಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

    ಮಹಾಮಾರಿ ಕೊರೊನಾ ವೈರಸ್‍ನಿಂದ ಈ ವರ್ಷ ರಸ್ತೆಯಲ್ಲಿ ಗಣೇಶ ಕೂರಿಸಿ ಅದ್ಧೂರಿಯಾಗಿ ಹಬ್ಬ ಮಾಡಲು ಅವಕಾಶ ಇಲ್ಲದಂತಾಗಿದೆ. ಈ ಮೂಲಕ ಬೆಂಗಳೂರಿನ ರೋಡ್, ರೋಡಿನಲ್ಲಿ ಗಣೇಶ್ ಕೂರಿಸುತ್ತಿದ್ದವರಿಗೆ ಬೇಸರವಾಗಿದೆ. ಆದರೆ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಬಿಬಿಎಂಪಿ ಮುಂಜಾಗ್ರತೆಯಾಗಿ ಈ ಕ್ರಮವನ್ನು ಕೈಗೊಂಡಿದೆ.

    https://twitter.com/BBMPCOMM/status/1288012896060887041

  • ಮಾಸ್ಕ್ ಇಲ್ಲದೆ ಓಡಾಟ- ಬೆಂಗಳೂರಲ್ಲಿ 51 ಸಾವಿರ ದಂಡ ಸಂಗ್ರಹ

    ಮಾಸ್ಕ್ ಇಲ್ಲದೆ ಓಡಾಟ- ಬೆಂಗಳೂರಲ್ಲಿ 51 ಸಾವಿರ ದಂಡ ಸಂಗ್ರಹ

    ಬೆಂಗಳೂರು: ಮೊನ್ನೆಯಷ್ಟೇ ಬಿಬಿಎಂಪಿ ದಂಡ ಹಾಕುವ ನಿಯಮವನ್ನು ರೂಪಿಸಿದ್ದು, ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದವರಿಂದ ಒಟ್ಟು 51,700 ರೂ.ದಂಡವನ್ನು ಸಂಗ್ರಹಿಸಲಾಗಿದೆ.

    ಈ ಕುರಿತು ಟ್ವೀಟ್ ಮಾಡಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ 51,700 ರೂ. ದಂಡವನ್ನು ಮಾರ್ಷಲ್‍ಗಳು ಸಂಗ್ರಹಿಸಿದ್ದು, ನಿಯಮ ಉಲ್ಲಂಘಿಸಬೇಡಿ ಸುರಕ್ಷತೆಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಮೊನ್ನೆಯೇ ಆದೇಶ ಹೊರಡಿಸಿದ್ದ ಬಿಬಿಎಂಪಿ ಮಾಸ್ಕ್ ಧರಿಸದವರಿಗೆ ಮೊದಲ ಬಾರಿಗೆ 1 ಸಾವಿರ ರೂ. ದಂಡ, ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 2 ಸಾವಿರ ರೂ.ದಂಡ ವಿಧಿಸಲಾಗುತ್ತದೆ. ಅಲ್ಲದೆ ಶಿಕ್ಷೆಯನ್ನೂ ವಿಧಿಸಲಾಗುತ್ತಿದೆ ಎಂದು ತಿಳಿಸಿತ್ತು.

    ಇದಾವುದಕ್ಕೂ ಸಾರ್ವಜನಿಕರು ಕ್ಯಾರೆ ಎನ್ನದೆ ಸಂಚರಿಸಿದ್ದು, ಹೀಗಾಗಿ ದಂಡ ವಿಧಿಸಲಾಗುತ್ತಿದೆ. 51 ಸಾವಿರ ರೂ.ಗೂ ಅಧಿಕ ದಂಡ ಸಂಗ್ರಹಿಸಲಾಗಿದೆ. ಕೊರೊನಾ ಅವಾಂತರದ ಹಿನ್ನೆಲೆ ಮಾಸ್ಕ್ ಧರಿಸುವ ಕುರಿತು, ಎಲ್ಲೆಂದರಲ್ಲಿ ಉಗುಳುವ ಕುರಿತು ಈಗಾಗಲೇ ಹಲವು ರಾಜ್ಯಗಳಲ್ಲಿ ದಂಡ ಹಾಕಲಾಗುತ್ತಿದ್ದು, ಅದೇ ರೀತಿ ಬೆಂಗಳೂರಿನಲ್ಲೂ ಬಿಬಿಎಂಪಿಯಿಂದ ದಂಡ ಹಾಕಲಾಗುತ್ತಿದೆ.

    ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ಶುಕ್ರವಾರದಿಂದಲೇ ದಂಡ ಹಾಕಲಾಗುತ್ತಿದೆ. ಸಾರ್ವಜನಿಕವಾಗಿ ಮಾಸ್ಕ್ ಹಾಕದಿದ್ದರೆ, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ ಮೂತ್ರ ವಿರ್ಸಜನೆ ಮಾಡಿದರೆ, ಮಾಸ್ಕ್ ವಿಲೇವಾರಿ ಸರಿಯಾಗಿ ಮಾಡದಿದ್ದರೆ ದಂಡ ಬೀಳುವುದು ಖಚಿತ. ಮುಲಾಜಿಲ್ಲದೆ ದಂಡ ವಿಧಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

  • ಅನುಮತಿ ಕೇಳಿದ ಬಿಬಿಎಂಪಿ ಆಯುಕ್ತನಿಗೆ ಸರ್ಕಾರದಿಂದ ಮುಖಭಂಗ

    ಅನುಮತಿ ಕೇಳಿದ ಬಿಬಿಎಂಪಿ ಆಯುಕ್ತನಿಗೆ ಸರ್ಕಾರದಿಂದ ಮುಖಭಂಗ

    ಬೆಂಗಳೂರು: 10 ಕೋಟಿ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರವನ್ನ ಬಿಬಿಎಂಪಿ ಆಯುಕ್ತ ಸರ್ಕಾರದ ಬಳಿ ಕೇಳಿದ್ದಾರೆ. ಆದರೆ ಸರ್ಕಾರ ನಯವಾಗಿಯೇ ಈ ಬೇಡಿಕೆ ತಿರಸ್ಕರಿಸಿ ಮುಖಭಂಗ ಮಾಡಿದೆ.

    ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪ್ರಕಾರ ಒಂದು ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ಕಮಿಷನರ್ ಗೆ ಇದೆ. 1 ಕೋಟಿಯಿಂದ 3 ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ಸ್ಥಾಯಿ ಸಮಿತಿಗಳಿಗೆ ಇದೆ. 3 ಯಿಂದ 10 ಕೋಟಿವರೆಗಿನ ಕಾಮಗಾರಿಗಳಿಗೆ ಕೌನ್ಸಿಲ್ ಅನುಮೋದನೆ ನೀಡುತ್ತದೆ. ಆದರೆ ಬಿಬಿಎಂಪಿ ಕಮಿಷನರ್ ಇದೆಲ್ಲವನ್ನ ಬೀಟ್ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದರು.

    10 ಕೋಟಿವರೆಗಿನ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರ ತಮಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರದಿಂದ ಆಯುಕ್ತರಿಗೆ ಮುಖಭಂಗ ಮಾಡಿ ಕೌನ್ಸಿಲ್‍ನಿಂದ ಅನುಮೋದನೆ ಪಡೆದುಕೊಂಡು ಪತ್ರ ಬರೆಯುವಂತೆ ಸೂಚನೆ ಸಿಕ್ಕಿದೆ.

  • ಇಂದಿರಾ ಕ್ಯಾಂಟೀನ್‍ಗೆ ಅನುದಾನ ನೀಡಲು ಬಿಜೆಪಿ ಸರ್ಕಾರ ನಕಾರ

    ಇಂದಿರಾ ಕ್ಯಾಂಟೀನ್‍ಗೆ ಅನುದಾನ ನೀಡಲು ಬಿಜೆಪಿ ಸರ್ಕಾರ ನಕಾರ

    ಬೆಂಗಳೂರು: ಮಹಾನಗರದ ಬಡಜನತೆಯ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್‍ಗೆ ಅನುದಾನದ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರದ ನಡುವೆ ಅನುದಾನಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ.

    ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಮನವಿಗೆ ರಾಜ್ಯ ಸರ್ಕಾರ ನಕಾರ ಎಂದಿದೆ. ಕೇವಲ ಶೇ. 25ರಷ್ಟು ಅನುದಾನ ಕೊಡುವುದಕ್ಕೆ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಶೇ. 100ರ ಬದಲು ಐವತ್ತು ಪರ್ಸೆಂಟ್ ಆದರೂ ಅನುದಾನ ಕೊಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

    ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಅವಧಿಯು ಆಗಸ್ಟ್ ತಿಂಗಳಿಗೆ ಮುಗಿದಿದ್ದು, ಹೊಸ ಟೆಂಡರ್ ಕರೆಯುವವರೆಗೂ ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ಇಂದಿರಾ ಕ್ಯಾಂಟೀನ್‍ನ ಅವ್ಯವಹಾರ ಆರೋಪದ ಹಿನ್ನಲೆ ಸರ್ಕಾರ ತನಿಖೆಗೂ ಆದೇಶ ನೀಡಿದೆ. ಆದರೆ 150 ಕೋಟಿ ರೂ. ಇಂದಿರಾ ಕ್ಯಾಂಟೀನ್ ನಿರ್ವಹಣಾ ವೆಚ್ಚ ಬಿಬಿಎಂಪಿಗೆ ಹೊರೆಯಾಗಿದೆ ಎಂದು ಹೇಳಿದರು.

    ಸರ್ಕಾರದ ಆರ್ಥಿಕ ಇಲಾಖೆಯ ತೀರ್ಮಾನದ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು. ಬಳಿಕ ಅವರ ತೀರ್ಮಾನದ ಮೇಲೆ ಇಂದಿರಾ ಕ್ಯಾಂಟೀನ್ ಅನುದಾನದ ಬಗ್ಗೆ ಅಂತಿಮ ಕೈಗೊಳ್ಳಲಾಗುವುದು ಎಂದು ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದರು.

    ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರು, ಇಂದಿರಾ ಕ್ಯಾಂಟೀನ್ ನಡೆಸಲು ದುಡ್ಡಿಲ್ಲ, ಮುಚ್ಚುವ ಹಂತ ತಲುಪಿವೆ ಎಂದು ಹೇಳಿದ್ದರು.

    ಆಗಸ್ಟ್ 28ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಉತ್ತರಿಸಿದ್ದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟೀನ್‍ಗಳಿವೆ. 14.40 ಕೋಟಿ ಜನ ಈವರೆಗೆ ಊಟ ಮಾಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿತ್ತು. ವಿವಿಧ ಕಾಮಗಾರಿಗೆ ಹೆಚ್ಚುವರಿಯಾಗಿ 24.37 ಕೋಟಿ ರೂ. ಖರ್ಚಾಗಿದೆ. ರಾಜ್ಯ ಸರ್ಕಾರ 15 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತು ಎಂದು ಮಾಹಿತಿ ನೀಡಿದ್ದರು.

    2019-20ರ ಸಾಲಿನ ಬಜೆಟ್‍ನಲ್ಲಿ 210 ಕೋಟಿ ರೂ. ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ಯಾವುದೇ ಹಣ ಮೀಸಲಿಡಲಿಲ್ಲ. ಎರಡು ಮತ್ತು ಮೂರನೇ ಪತ್ರವನ್ನು ಕೂಡ ಬರೆದಿದ್ದೆ. ಇವತ್ತಿಗೂ ಸರ್ಕಾರವಾಗಲಿ, ಪಾಲಿಕೆಯಲ್ಲಾಗಲಿ ಹಣ ಮೀಸಲಿಟ್ಟಿಲ್ಲ. ಇದೀಗ ಮುಚ್ಚುವ ಪರಿಸ್ಥಿತಿ ಬಂದಿದ್ದು, ನೀವು ಚರ್ಚಿಸಿ ನಿರ್ಧಾರ ಮಾಡಿ ಎಂದು ಬಿಬಿಎಂಪಿ ಸದಸ್ಯರ ಮುಂದೆ ವಿವರಿಸಿದ್ದರು.