Tag: BBMP Budget

  • ಬಿಬಿಎಂಪಿ ಬಜೆಟ್ ಮಂಡನೆ – 19,927 ಕೋಟಿ ಬೃಹತ್ ಯೋಜನೆಗಳ ಘೋಷಣೆ

    ಬಿಬಿಎಂಪಿ ಬಜೆಟ್ ಮಂಡನೆ – 19,927 ಕೋಟಿ ಬೃಹತ್ ಯೋಜನೆಗಳ ಘೋಷಣೆ

    – ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್‌ನಲ್ಲಿ ಹೆಚ್ಚಿನ ಮಹತ್ವ

    ಬೆಂಗಳೂರು: 2025-26ನೇ ಸಾಲಿನ ಬಿಬಿಎಂಪಿ ಬಜೆಟ್ (BBMP Budget) ಮಂಡನೆಯಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದ್ದು, ಸತತ ಐದನೇ ಬಾರಿಗೆ ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಿದ್ದಾರೆ.

    19,927 ಕೋಟಿ ಬೃಹತ್ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್ ಅನುಮೋದನೆ ನೀಡಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡನೆ ಮಾಡಿದ್ದಾರೆ.

    ಬ್ರ‍್ಯಾಂಡ್ ಬೆಂಗಳೂರು (Brand Bengaluru) ದೃಷ್ಟಿಕೋನಕ್ಕೆ ಅನುಗುಣವಾಗಿ ಬೆಂಗಳೂರನ್ನು ಅಧುನಿಕ ನಗರವನ್ನಾಗಿಸುವ ಘೋಷಣೆ ಮಾಡಲಾಗಿದೆ. ಬ್ರ‍್ಯಾಂಡ್ ಬೆಂಗಳೂರಿಗೆ ಬಿಬಿಎಂಪಿ ಬಜೆಟ್‌ನಲ್ಲಿ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಟ್ರಾಫಿಕ್ ಮುಕ್ತ, ಗ್ರೀನ್ ಸಿಟಿ, ಟೆಕ್, ಶಿಕ್ಷಣ, ಆರೋಗ್ಯ, ರೋಮಾಂಚಕ ಬೆಂಗಳೂರು, ನೀರಿನ ಭದ್ರತೆಗೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಬ್ರ‍್ಯಾಂಡ್ ಬೆಂಗಳೂರಿಗೆ 1,790 ಕೋಟಿ ವೆಚ್ಚ ಮಾಡಲು ನಿರ್ಧಾರ ಮಾಡಲಾಗಿದೆ.

    ಯಾವುದಕ್ಕೆ ಎಷ್ಟು ಅನುದಾನ ಮೀಸಲು?
    *ಘನತ್ಯಾಜ್ಯ ನಿರ್ವಹಣೆ ಯೋಜನೆಗಾಗಿ 1,400 ಕೋಟಿ ಮೀಸಲು ಇರಿಸಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕ, ಒಣ ತ್ಯಾಜ್ಯ ನಿರ್ವಹಣಾ ಘಟಕ, ಮೆಕ್ಯಾನಿಕ್ ಸ್ವೀಪಿಂಗ್ ಯಂತ್ರಗಳು, ಇನ್ನಿತರ ಘನತ್ಯಾಜ್ಯ ನಿರ್ವಹಣೆ ಯೋಜನೆಗೆ 1,400 ಕೋಟಿ ಅನುದಾನ ಮೀಸಲಿರಿಸಲಾಗಿದೆ.
    *ಬೆಂಗಳೂರು ಶಿಕ್ಷಣ ಯೋಜನೆ ಅನುಷ್ಠಾನಗಳಿಗೆ 183 ಕೋಟಿ ಮೀಸಲಿಡಲಾಗಿದೆ. 15 ಶಾಲೆಗಳ ನವೀಕರಣ, 60 ಶಾಲೆಗಳ ಸ್ಮಾರ್ಟ್ ಬೋರ್ಡ್, ಶಾಲಾ ಕಟ್ಟಡಗಳ ನಿರ್ವಹಣೆಗೆ 23 ಕೋಟಿ, ಶಾಲಾ ಮೈದಾನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
    *ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ಅನುದಾನ ಕೊಟ್ಟಿದ್ದು, 19 ಹೊಸ ಆಸ್ಪತ್ರೆಗಳು, 26 ಹೊಸ ಡೆಂಟಲ್ ಆಸ್ಪತ್ರೆ, ಬೀದಿನಾಯಿಗಳ ನಿರ್ವಹಣೆಗೆ 60 ಕೋಟಿ ಅನುದಾನ ನೀಡಲಾಗಿದೆ.
    *ಬೆಂಗಳೂರು ನಗರವನ್ನು ಸುಂದರೀಕರಿಸಲು, ಆಕರ್ಷಣೆ ಮಾಡಲು 50 ಕೋಟಿ, ಜಂಕ್ಷನ್ ಮತ್ತು ಸಾರ್ವಜನಿಕ ಸ್ಥಳಗಳ ಸುಂದರೀಕರಣಕ್ಕೆ 25 ಕೋಟಿ ಮೀಸಲು ಇಡಲಾಗಿದೆ.
    *ಸ್ಕೈ ಡೆಕ್ ನಿರ್ಮಾಣಕ್ಕಾಗಿ 50 ಕೋಟಿ ಅನುದಾನ ನೀಡಲಾಗಿದೆ.
    *ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ 247.25 ಕೋಟಿ ಮೀಸಲು ಇಡಲಾಗಿದೆ.
    *225 ವಾರ್ಡ್‌ಗಳ ಅಭಿವೃದ್ಧಿಗಾಗಿ ವಾರ್ಡ್‌ಗೆ ತಲಾ 2.50 ಕೋಟಿಯಂತೆ 675 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
    *ಪ್ರೀಮಿಯರ್ ಎಫ್‌ಎಆರ್ ನೀತಿ ಜಾರಿ ಮಾಡಿದ್ದು, ಇದರಿಂದ 2 ಕೋಟಿ ಆದಾಯ ನೀರಿಕ್ಷೆ ಮಾಡಲಾಗಿದೆ.
    *ಪಾಲಿಕೆ ಸಿಬ್ಬಂದಿ ವರ್ಗಗಳಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಅವಕಾಶ ಕೊಡಲಾಗಿದೆ.
    *ಸಿಬ್ಬಂದಿ ಹಾಜರಾತಿ ಕಠಿಣಗೊಳಿಸಲು ಜಿಯೋ ಫೆನ್ಸಿಂಗ್ ವ್ಯವಸ್ಥೆ ಮಾಡಲಾಗಿದೆ.
    *12,692 ಪೌರಕಾರ್ಮಿಕರ ಕಾಯಂಗೊಳಿಸಿ 500 ಕೋಟಿ ಮೀಸಲು ಇರಿಸಲಾಗಿದೆ.
    *5,716 ಕೋಟಿ ಕಂದಾಯ ನಿರೀಕ್ಷೆ ಪಾಲಿಕೆ ವ್ಯಾಪ್ತಿಯ 20 ಲಕ್ಷ ಸ್ವತ್ತುಗಳ ಸರ್ವೇಗೆ ಪ್ರತ್ಯೇಕ ವಿಭಾಗ ಸ್ಥಾಪನೆ ಮಾಡಲಾಗುವುದು.
    *ಅನಧಿಕೃತ ಜಾಹೀರಾತಿಗೆ ಬ್ರೇಕ್ ಹಾಕಲು ಹೊಸ ನಿಯಮ ಜಾರಿ ಮಾಡಿದ್ದು, ಇದರಿಂದ 750 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

  • ಇಂದು ಬಿಬಿಎಂಪಿ ಬಜೆಟ್‌ ಮಂಡನೆ – ಪ್ರಸಕ್ತ ವರ್ಷ 6,000 ಕೋಟಿ ತೆರಿಗೆ ವಸೂಲಿಗೆ ಪ್ರಸ್ತಾವನೆ ಸಾಧ್ಯತೆ!

    ಇಂದು ಬಿಬಿಎಂಪಿ ಬಜೆಟ್‌ ಮಂಡನೆ – ಪ್ರಸಕ್ತ ವರ್ಷ 6,000 ಕೋಟಿ ತೆರಿಗೆ ವಸೂಲಿಗೆ ಪ್ರಸ್ತಾವನೆ ಸಾಧ್ಯತೆ!

    – 19,000 ಕೋಟಿ ಆಯವ್ಯಯ, ಬೆಟ್ಟದಷ್ಟು ನಿರೀಕ್ಷೆ!

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025 – 26ನೇ ಸಾಲಿನ ಬಜೆಟ್ (BBMP Budget 2025-26) ಇಂದು ಮಂಡನೆ ಆಗ್ತಿದೆ. 19,000 ಕೋಟಿ ರೂ. ಬಜೆಟ್ ಮಂಡಿಸಲು ತಯಾರಿ ಮಾಡಲಾಗಿದೆ.

    ಚುನಾಯಿತ ಪ್ರತಿನಿಧಿಗಳು ಇಲ್ಲದೇ 5ನೇ ಬಾರಿಗೆ ಬಿಬಿಎಂಪಿಯ ಅಧಿಕಾರಿಗಳು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ತುಷಾರ್ ಗಿರಿನಾಥ್ (tushar girinath) ಅಧ್ಯಕ್ಷತೆಯಲ್ಲಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ಭಾರೀ ನಿರೀಕ್ಷೆ ಇಡಲಾಗಿದೆ. 7 ಸಾವಿರ ಕೋಟಿ ರೂ. ರ್ಕಾರದಿಂದ ನಿರೀಕ್ಷೆ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗ್ತಿದೆ. ಟೌನ್ ಹಾಲ್‌ನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್ ಮಂಡನೆ ಮಾಡ್ತಿದ್ದು. ಈ ಭಾರೀ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳನ್ನ ಇಡಲಾಗಿದೆ.

    ಬಿಬಿಎಂಪಿ ಬಜೆಟ್ ನಿರೀಕ್ಷೆಗಳೇನು ?
    1. ರಸ್ತೆ ಗುಂಡಿ ಮುಕ್ತಿ, ನಗರದ ಸ್ವಚ್ಛತೆ, ಸುಗಮ ಸಂಚಾರ, ಹಸೀರಕರಣ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಸಿಗಲಿದೆ.
    2. ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹರಿಸುವ ಯೋಜನೆ ರೂಪಿಸಲಾಗಿದೆ.
    3. ಪೂರ್ವ ಮತ್ತು ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗದ ಸುರಂಗ ನಿರ್ಮಾಣದ ಯೋಜನೆ ಪ್ರಸ್ತಾಪ ಆಗಲಿದೆ.
    4. ರಸ್ತೆಗಳಲ್ಲಿ ನೀರು ನಿಲ್ಲದಂತೆ ಪ್ರವಾಹ ನಿಯಂತ್ರಣಕ್ಕೆ ಯೋಜನೆ ರೂಪಿಸುವ ಸಾಧ್ಯತೆ.
    5. ಇಂದಿರಾ ಕ್ಯಾಂಟೀನ್ ಗೆ ಹೆಚ್ಚಿನ ಅನುದಾನ.. ಹೆಚ್ಚುವರಿಯಾಗಿ 52 ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣ ಸಾಧ್ಯತೆ.
    6. ಪ್ರತಿ ವಿಧಾನಸಭ ಕ್ಷೇತ್ರಕ್ಕೆ ಅಂಬ್ಯೂಲೆನ್ಸ್ ಘೋಷಣೆ ಸಾಧ್ಯತೆ.
    7. ಬಿಬಿಎಂಪಿ 20 ಆಸ್ಫತ್ರೆ ಗಳನ್ನ ಮೇಲ್ದರ್ಜೆಗೆ ಏರಿಸಲಿದ್ದಾರೆ.
    8. ಬಿಬಿಎಂಪಿ ಶಾಲೆ.ಕಾಲೇಜು ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ.. ಪ್ರತಿ ಶಾಲೆ.ಕಾಲೇಜು ಗಳಿಗೂ ಮೂಲಭೂತ ಸೌಕರ್ಯ ವ್ಯವಸ್ಥೆ.
    9. ಸರ್ಕಾರದ ಸಹಭಾಗಿತ್ವದಲ್ಲಿ ಬೃಹತ್ ಕಾಮಗಾರಿಗಳ ನಿರ್ಮಾಣಕ್ಕೆ ನಿಗಮ ಸ್ಥಾಪನೆ ಸಾಧ್ಯತೆ
    10. ನಗರದ ಟ್ರಾಫಿಕ್ ಕಂಟ್ರೋಲ್‌ಗೆ ಪ್ಲೈಓವರ್.. ಟನಲ್ ರಸ್ತೆ, ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ.
    11. ಮಳೆಗಾಲದಲ್ಲಿ ರಾಜಕಾಲುವೆ ನೀರು ರಸ್ತೆಗೆ ಬರದಂತೆ ತಡೆಗೋಡೆ ನಿರ್ಮಾಣ.
    12. ಮೆಟ್ರೋ ನಿಗಮದ ಜೊತೆ ಸೇರಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಸಾಧ್ಯತೆ.
    13. ಸಾರ್ವಜನಿಕರಿಗೆ ತೆರಿಗೆ ಕಟ್ಟಲು ದಿನದ 24 ಗಂಟೆ ಅನ್ ಲೈನ್ ವ್ಯವಸ್ಥೆ.
    14. ಪ್ರಸಕ್ತ ವರ್ಷ 6 ಸಾವಿರ ಕೋಟಿ ತೆರಿಗೆ ವಸೂಲಿಗೆ ಪ್ರಸ್ತಾವನೆ ಸಾಧ್ಯತೆ
    15. ಮಳೆಗಾಲದಲ್ಲಿ ಒಣಗಿದ ಮರ.ಕೊಂಬೆಗಳ ತೆರವಿಗೆ ಹೆಚ್ಚಿನ ಅನುದಾನ. ಮಳೆಗಾಲದಲ್ಲಿ ಒಣಗಿದ ಮರ.ಕೊಂಬೆಗಳ ತೆರವಿಗೆ ಹೆಚ್ಚುವರಿ ಸಿಬ್ಬಂದಿಗಳ ನೇಮಕ.

  • ಮಾ.27ಕ್ಕೆ ಬಿಬಿಎಂಪಿ ಬಜೆಟ್ – ಡಿಕೆಶಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

    ಮಾ.27ಕ್ಕೆ ಬಿಬಿಎಂಪಿ ಬಜೆಟ್ – ಡಿಕೆಶಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

    ಬೆಂಗಳೂರು: ಮಾರ್ಚ್ 27ಕ್ಕೆ ಬಿಬಿಎಂಪಿ ಬಜೆಟ್ (BBMP Budget) ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.

    ಸಭೆ ಮುಗಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ನಗರದ ಶಾಸಕರು, ಸಂಸದರು ಸೇರಿದಂತೆ ಚುನಾಯಿತ ಸದಸ್ಯರ ಸಲಹೆ ಪಡೆದಿದ್ದೇವೆ. ಬಜೆಟ್ ಗಾತ್ರದ ಬಗ್ಗೆ ಅನೇಕರು ಸಲಹೆ ಕೊಟ್ಟಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದಿದ್ದೇನೆ. ಇಂಡಿಪೆಂಡೆಂಟ್ ಆಗಿ ಕಮಿಷನರ್ ಬಜೆಟ್ ಮಂಡನೆ ಮಾಡುತ್ತಾರೆ ಎಂದರು. ಇದನ್ನೂ ಓದಿ: Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

    ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಏನು ಹೇಳಿಲ್ಲ. ಬಿಜೆಪಿ ಅವರು ತಿರುಚುತ್ತಿದ್ದಾರೆ. ನನ್ನ ಹೇಳಿಕೆ ಬೇಕಿದ್ರೆ ತೆಗೆದು ನೋಡಿ. ನಾನು ಅಸೆಂಬ್ಲಿಗೆ ಬಂದು 36 ವರ್ಷಗಳು ಆಗಿವೆ. ನನ್ನ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪ ಮಾಡಿರೋರಿಗೆ ಪಾಪ ಅರ್ಥ ಆಗಿಲ್ಲ ಅನ್ನಿಸುತ್ತದೆ. ನನ್ನ ಭಾಷೆ, ನನ್ನ ಮಾತು, ನನ್ನ ವಿಚಾರ ನಾನು ಅಸೆಂಬ್ಲಿಯಲ್ಲೇ ಇರಲಿಲ್ಲ. ಬಿಲ್ ಮಂಡನೆ ಮಾಡಿದಾಗ ನಾನು ಅಸೆಂಬ್ಲಿಯಲ್ಲಿ ಇರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಚಿವರು, ಶಾಸಕರಿಂದ ಫೋನ್ ಟ್ಯಾಪಿಂಗ್ ಆರೋಪ, ಸಿಎಂಗೆ ದೂರು – ನನಗೆ ಗೊತ್ತಿಲ್ಲ: ಪರಮೇಶ್ವರ್

    ಸಭೆ ಅಲ್ಲದೆ ಹೊರಗಡೆಯೂ ನಾನು ಎಲ್ಲೂ ಹೇಳಿಕೆ ಕೊಡಲಿಲ್ಲ. ರಾಷ್ಟ್ರೀಯ ಮಾಧ್ಯಮದಲ್ಲಿ ಭಾಗವಹಿಸಿದ ವೇಳೆಯೂ ನಾನು ಬದಲಾವಣೆ ಬಗ್ಗೆ ಮಾತನಾಡಿಲ್ಲ. 4% ಮೀಸಲಾತಿ ವಿಚಾರ ನಾನು ಪ್ರಸ್ತಾಪ ಮಾಡಿಯೇ ಇಲ್ಲ. ಸಂವಿಧಾನ ತಂದಿರೋರು ನಾವು, ಸಂವಿಧಾನ ರಕ್ಷಣೆ ಮಾಡೋರು ನಾವು. ಎಲ್ಲರಿಗೂ ನ್ಯಾಯ ಒದಗಿಸುವ ಬದ್ಧತೆ ನಮಗೆ ಇದೆ. ಅದರಂತೆ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ, ಬೇಸಿಗೆಯಲ್ಲೂ ತೊಂದರೆಯಾಗಲ್ಲ: ಕೆಪಿಟಿಸಿಎಲ್ ಎಂಡಿ

    ಈ ಹೇಳಿಕೆ ಬಗ್ಗೆ ಹೈಕಮಾಂಡ್ ನಾಯಕರು ಕೇಳಿದ್ದಾರೆ. ನಮ್ಮ ಪಾರ್ಟಿ ಅವರು ಕೇಳಿದ್ದಾರೆ. ನಾನು ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಟ್ವೀಟ್ ಕೂಡಾ ಮಾಡಿದ್ದೇನೆ. ಅದಕ್ಕೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಬಿಜೆಪಿ ಅವರು ಏನಾದರೂ ಹೇಳೋದು ಇದ್ದರೆ ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ದೂರು ಕೊಡಲಿ ಎಂದರು. ಇದನ್ನೂ ಓದಿ: IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌- ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್‌ ಪುತ್ತೂರು ಯಾರು?

  • ಬಿಬಿಎಂಪಿ ಬಜೆಟ್ ತಿರಸ್ಕರಿಸಿದ ಮೈತ್ರಿ ಸರ್ಕಾರ

    ಬಿಬಿಎಂಪಿ ಬಜೆಟ್ ತಿರಸ್ಕರಿಸಿದ ಮೈತ್ರಿ ಸರ್ಕಾರ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಅನ್ನು ಮೈತ್ರಿ ಸರ್ಕಾರ ತಿರಸ್ಕರಿಸಿದೆ. ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಬಜೆಟ್ ತಿರಸ್ಕರಿಸಿದೆ.

    2019-20ನೇ ಸಾಲಿನ ಬಜೆಟ್ ಅನ್ನು ಫೆ.19 ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದ್ದರು. ಆರಂಭದಲ್ಲಿ 10,688 ಕೋಟಿ ರೂ. ಇದ್ದ ಬಜೆಟ್‍ಗೆ ಕೆಲ ಮಾರ್ಪಾಡುಗಳನ್ನು ಮಾಡಿದ್ದರಿಂದ ಮೊತ್ತ 12,74.77 ಕೋಟಿ ರೂ.ಗೆ ಹಿಗ್ಗಿತ್ತು. ಈ ಪರಿಷ್ಕ್ರತ ಬಜೆಟ್‍ಗೆ ಪಾಲಿಕೆಯ ಕೌನ್ಸಿಲ್ ಒಪ್ಪಿಗೆ ನೀಡಿತ್ತು.

    ಬಿಬಿಎಂಪಿ ಇತಿಹಾಸದಲ್ಲಿ 12,574 ಕೋಟಿ ರೂ. ವೆಚ್ಚದ ಬೃಹತ್ ಬಜೆಟ್ ಮಂಡಿಸಿರುವುದು ಇದೇ ಮೊದಲು ಆಗಿತ್ತು. ಈಗ 4 ಸಾವಿರ ಕೋಟಿ ಇಳಿಸಿ ಎಂದು ಆರ್ಥಿಕ ಇಲಾಖೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ಗಾತ್ರ 9,0574 ಕೋಟಿ ರೂ.ಗೆ ಇಳಿಕೆಯಾಗಲಿದೆ.

    ಬಜೆಟ್ ತಿರಸ್ಕರಿಸಿದ್ದಕ್ಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ. ನಾವು ನೀಡಿದ ಸಲಹೆಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ.