Tag: BBMP Bangalore

  • ಚಿನ್ನದ ನಾಡು ಕೆಜಿಎಫ್‌ನ ಬಿಜಿಎಂಎಲ್ ಪ್ರದೇಶದಲ್ಲಿ ಕಸ ಸುರಿಯಲು ಬಿಬಿಎಂಪಿ ಪ್ಲಾನ್!

    ಚಿನ್ನದ ನಾಡು ಕೆಜಿಎಫ್‌ನ ಬಿಜಿಎಂಎಲ್ ಪ್ರದೇಶದಲ್ಲಿ ಕಸ ಸುರಿಯಲು ಬಿಬಿಎಂಪಿ ಪ್ಲಾನ್!

    – ಜಾಗ ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚನೆ, ಸ್ಥಳೀಯರ ವಿರೋಧ
    – 300 ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿಗೆ ಬಿಬಿಎಂಪಿ ಪ್ಲ್ಯಾನ್

    ಕೋಲಾರ : ಅದು ವಿಶ್ವಕ್ಕೆ ಚಿನ್ನವನ್ನು ಬೆಳೆದು ಕೊಟ್ಟ ಚಿನ್ನದ ನೆಲ, ಅಲ್ಲಿ ಚಿನ್ನ ಬೆಳೆಯೋದು ನಿಂತು 2 ದಶಕಗಳೇ ಕಳೆದ ಹಿನ್ನೆಲೆ ಚಿನ್ನದ ಗಣಿ ಪ್ರದೇಶದಲ್ಲಿ ಬೆಂಗಳೂರಿನ (Bengaluru) ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ.

    ಹೌದು ಮತ್ತೊಮ್ಮೆ ಬೆಂಗಳೂರು ಮಹಾನಗರದ ಘನ ತ್ಯಾಜ್ಯವನ್ನು ಚಿನ್ನದ ನಾಡಿನಲ್ಲಿ ವಿಲೇವಾರಿ ಮಾಡುವ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಈ ಮೊದಲು 2015 ರಲ್ಲಿ ಇದೇ ರೀತಿ ಪ್ರಸ್ತಾಪವೊಂದು ಮಾಡಲಾಗಿತ್ತು, ಬಿಬಿಎಂಪಿ(BBMP) ತ್ಯಾಜ್ಯವನ್ನು ಚಿನ್ನದ ಗಣಿ ಗುಂಡಿಗಳಲ್ಲಿ ಸುರಿಯುವ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರಸ್ತಾಪ ಕೈಬಿಡಲಾಗಿತ್ತು. ಈಗ ಮತ್ತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಬೆಂಗಳೂರು ಮಹಾನಗರದ ಘನ ತ್ಯಾಜ್ಯವನ್ನು ಚಿನ್ನದ ಗಣಿ ಪ್ರದೇಶದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಯೋಜನೆಯೊಂದರ ಪ್ರಸ್ತಾಪ ಶುರುವಾಗಿದೆ. ಕೆಜಿಎಫ್(Kolar Gold Fields) ತಾಲ್ಲೂಕಿನಲ್ಲಿ ಚಿನ್ನದ ಗಣಿಗೆ ಸೇರಿದ ಸುಮಾರು 12,500 ಎಕರೆ ಪ್ರದೇಶವಿದೆ. ಸದ್ಯ ಚಿನ್ನದ ಗಣಿಗಾರಿಕೆ ಸ್ಥಗಿತವಾಗಿ 23 ವರ್ಷಗಳು ಕಳೆದಿದೆ ಹಾಗಾಗಿ ಕೇಂದ್ರ ಸರ್ಕಾರ ಚಿನ್ನದ ಗಣಿಯನ್ನು ಪುನರಾರಂಭ ಮಾಡುವುದಿಲ್ಲ ಅನ್ನೋದನ್ನ ಸ್ಪಷ್ಟ ಪಡಿಸಿದೆ. ಇದನ್ನೂ ಓದಿ: ಭ್ರಷ್ಟಾಚಾರದ ವಿರುದ್ಧ ಸಮರ – ಉ.ಪ್ರದೇಶದ 13 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಿಗಳಿಗೆ ಆಗಸ್ಟ್‌ ಸಂಬಳ ಸಿಗಲ್ಲ

    ಪರಿಣಾಮ ಚಿನ್ನದ ಗಣಿಗೆ ಸೇರಿದ 300 ಎಕರೆ ಪ್ರದೇಶವನ್ನು ಬಿಬಿಎಂಪಿ ಖರೀದಿ ಮಾಡಿ, ಅದರಲ್ಲಿ ನೂರು ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿ, ಅದರ ಸುತ್ತಲೂ 200 ಎಕರೆ ಪ್ರದೇಶದಲ್ಲಿ ದಟ್ಟವಾದ ಕಾಡು ಬೆಳೆಸಿ ಬಯೋ ಫೆನ್ಸಿಂಗ್ ನಿರ್ಮಾಣ ಮಾಡುವುದು ಯೋಜನೆಯ ಪ್ಲಾನ್. ಸದ್ಯ ಜಿಲ್ಲಾಡಳಿತ ಗುರುತು ಮಾಡಿರುವ ಪ್ರದೇಶದ ಸುತ್ತಮುತ್ತ ಯಾವುದೇ ಹಳ್ಳಿ ಇಲ್ಲ, ಜೊತೆಗೆ ಇದು ಹೊಸದಾಗಿ ನಿರ್ಮಾಣವಾಗಿರುವ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ಹೈವೇಗೆ ಹೊಂದಿಕೊಂಡಂತೆ ಇರುವ ಜಾಗ ಅನ್ನೋ ಕಾರಣಕ್ಕೆ ಈ ಪ್ರದೇಶ ಸೂಕ್ತ ಎಂದು ಹೇಳಲಾಗುತ್ತಿದೆ. ಆದರೆ ಬೆಂಗಳೂರು ನಗರದಿಂದ ಬರೊಬ್ಬರಿ 100 ಕಿ.ಮೀ. ಆಗುವುದರಿಂದ ಸಾಗಾಣಿಕಾ ವೆಚ್ಚ ಹೆಚ್ಚಾಗುತ್ತದೆ ಅನ್ನೋ ಆತಂಕವೂ ಇದೆ. ಇದನ್ನೂ ಓದಿ: ಅರ್ಹತೆ ಹೊಂದಿರದ ಸಿಬ್ಬಂದಿ ಬಳಕೆ – ಏರ್ ಇಂಡಿಯಾಗೆ 90 ಲಕ್ಷ ರೂ. ದಂಡ

    ಇನ್ನೂ ಜಿಲ್ಲಾಡಳಿತ ಗುರುತು ಮಾಡಿರುವ ಪ್ರದೇಶ ಚಿನ್ನದ ಗಣಿಗೆ ಸೇರಿದ ಜಾಗ ಮೊದಲು ಕೇಂದ್ರ ಸರ್ಕಾರದಿಂದ ಈ ಜಾಗವನ್ನು ಬಿಬಿಎಂಪಿ ಖರೀದಿ ಮಾಡಬೇಕಿದೆ. ಆ ನಂತರ ಈ ಪ್ರದೇಶದಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದ ರೀತಿ, ಸುತ್ತಮುತ್ತ ಬರುವ ಜನವಸತಿ ಪ್ರದೇಶಗಳಿಗೆ ಯಾವ ಹಾನಿಯಾಗದ ರೀತಿ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ವಿಲೇವಾರಿ ಮಾಡುವುದರಿಂದ ಅಲ್ಲಿ ವಿದ್ಯುತ್ ಹಾಗೂ ಕಾಂಪೋಸ್ಟ್ ಗೊಬ್ಬರ ತಯಾರು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಕೋಲಾರ(Kolar) ಜಿಲ್ಲೆಯ ಕಸವನ್ನು ಇಲ್ಲೇ ವಿಲೇವಾರಿ ಮಾಡಲು ಅನುಕೂಲ ಅನ್ನೋ ಹಲವು ಉದ್ದೇಶ ಇಟ್ಟುಕೊಂಡು ಯೋಜನೆ ಸಿದ್ಧವಾಗುತ್ತಿದೆ. ಇದನ್ನೂ ಓದಿ: ಮುಡಾ ಹಗರಣಕ್ಕೆ ಅಧಿಕಾರಿ ಕಾರಣವೇ ಹೊರತು ಪ್ರಾಧಿಕಾರ ಸಮಿತಿಯಲ್ಲ – ರಮೇಶ ಬಂಡಿಸಿದ್ದೇಗೌಡ

    ಅದಕ್ಕೂ ಮೊದಲು ಸ್ಥಳೀಯರ ಅಭಿಪ್ರಾಯ ಸಂಗ್ರಹದ ನಂತರವೇ ಯೋಜನೆ ಅನುಷ್ಠಾನ ಮಾಡುತ್ತೇವೆ ಅನ್ನೋದು ಅಧಿಕಾರಿಗಳ ಮಾತು. ಆದರೆ ಇನ್ನು ಈ ಯೋಜನೆ ಕುರಿತು ಪ್ರಸ್ತಾಪ ಶುರುವಾಗುತ್ತಿದ್ದಂತೆ ಈಗಾಗಲೇ ಕೆಜಿಎಫ್ ಭಾಗದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ದೇಶದಲ್ಲೇ ಅಪರೂಪ ಎನ್ನಲಾಗುವ ಕೃಷ್ಣಮೃಗ, ಚಿರತೆ, ಜಿಂಕೆ, ನವಿಲು, ಸೇರಿದಂತೆ ಪ್ರಾಣಿ ಸಂಕುಲ ಈ ಪ್ರದೇಶದಲ್ಲಿ ವಾಸವಾಗಿವೆ, ಇಲ್ಲಿನ ಪ್ರಾಣಿ ಸಂಕುಲ ನಶಿಸಿಹೋಗುತ್ತವೆ. ಇದನ್ನೂ ಓದಿ: ಬೆಂಗ್ಳೂರು ಎಸಿಗಳು ಅಂದ್ರೆ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? – ಕೃಷ್ಣಭೈರೇಗೌಡ ತರಾಟೆ

    ಸರ್ಕಾರ ಜೀವ ಪಣಕ್ಕಿಟ್ಟು ಚಿನ್ನ ಕೊಟ್ಟ ಕೆಜಿಎಫ್ ಜನರಿಗೆ ಕಸ ಕೊಟ್ಟು, ಜನರ ಆರೋಗ್ಯವನ್ನು ಕಿತ್ತುಕೊಳ್ಳುವ ಯೋಜನೆ ರೂಪಿಸುತ್ತಿದೆ. ಹೊಸ ಕೈಗಾರಿಕಾ ವಲಯ ಸ್ಥಾಪನೆ ಮಾಡುತ್ತೇವೆಂದು ಹೇಳಿ ಇಂಥ ಯೋಜನೆ ತರುತ್ತಿದ್ದೀರಿ, ಐಟಿ ಕಂಪನಿಗಳನ್ನು ಸ್ಥಾಪನೆ ಮಾಡುವುದಾಗಿ ಭರವಸೆ ಕೊಟ್ಟು ಬೆಂಗಳೂರಿನ ಕಸ ತಂದು ಸುರಿದು ಕೆಜಿಎಫ್ ಜನರ ಮೇಲೆ ನಿಮ್ಮ ಕಾಳಜಿಯನ್ನು ಪ್ರದರ್ಶನ ಮಾಡುತ್ತಿದ್ದೀರಿ ಎಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಕಳೆದ 10 ವರ್ಷದಿಂದ ನೀರಿನ ದರ ಏರಿಸಿಲ್ಲ, ಈಗ ಏರಿಕೆ ಮಾಡೋದ್ರಲ್ಲಿ ತಪ್ಪಿಲ್ಲ: ಸಚಿವ ರಾಮಲಿಂಗಾರೆಡ್ಡ

    ಒಟ್ಟಿನಲ್ಲಿ ಚಿನ್ನದ ನಾಡು ಕೆಜಿಎಫ್‌ನಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಪ್ರಸ್ತಾಪ ಬಹುದೊಡ್ಡ ಚರ್ಚೆಯಾಗುತ್ತಿದೆ. ಸರ್ಕಾರ ಬೆಂಗಳೂರು ತ್ಯಾಜ್ಯ, ಕೆ.ಸಿ.ವ್ಯಾಲಿ ಕೊಟ್ಟು ನೀರು, ಮಣ್ಣು ಕಲುಷಿತವಾಗಿದೆ, ಈಗ ಕಸ ಹಾಕಿ ಗಾಳಿಯನ್ನೂ ಮಲೀನ ಮಾಡಲು ಮುಂದಾಗಿದೆ ಅನ್ನೋದು ಜಿಲ್ಲೆಯ ಜನರ ಮಾತಾಗಿದೆ. ಇದನ್ನೂ ಓದಿ: ಮಂಕಿಪಾಕ್ಸ್ ಕಾಯಿಲೆ ಮುಂಜಾಗ್ರತ ಕ್ರಮವಾಗಿ ವಿಕ್ಟೋರಿಯಾದಲ್ಲಿ 50 ಬೆಡ್ ಮೀಸಲು – ಶರಣ ಪ್ರಕಾಶ್ ಪಾಟೀಲ್

  • ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ – ಹೈ ರಿಸ್ಕ್ ಪಟ್ಟಿಯಲ್ಲಿದೆ 9 ವಾರ್ಡ್‌ಗಳು

    ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ – ಹೈ ರಿಸ್ಕ್ ಪಟ್ಟಿಯಲ್ಲಿದೆ 9 ವಾರ್ಡ್‌ಗಳು

    ಬೆಂಗಳೂರು: ದಿನೇ ದಿನೇ ಕೊರೋನಾ ಹೆಚ್ಚಳವಾಗುತ್ತಿದ್ದು ರಾಜ್ಯದಲ್ಲೇ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಿದೆ.

    ಜ.13ರ ಕೋವಿಡ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಒಟ್ಟು 1,15,733 ಸಕ್ರಿಯ ಪ್ರಕರಣಗಳಿದೆ. ಈ ಪೈಕಿ ಬೆಂಗಳೂರಿನಲ್ಲೇ 90,893 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನ 9 ನಗರಗಳು ಹೈ ರಿಸ್ಕ್ ಪಟ್ಟಿಗೆ ಸೇರಿವೆ. ಪ್ರತಿನಿತ್ಯ ಈ ವಾರ್ಡ್‌ಗಳಲ್ಲಿ ಸೋಂಕು ಹೆಚ್ಚುತ್ತಿದೆ.

    ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ 20121 ಕೇಸ್ ದಾಖಲಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿ ಸೇರಿ 20 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಲಿದೆ. ಇದನ್ನೂ ಓದಿ: ಉತ್ತುಂಗದಲ್ಲಿರುವ ಕೋವಿಡ್‌ ಸೋಂಕು: ಮೂರನೇ ಅಲೆ ಶೀಘ್ರವೇ ಅಂತ್ಯ?

    ಗುರುವಾರ ಎಷ್ಟು ಕೇಸ್?
    ಬೆಳ್ಳಂದೂರು – 356, ಬೇಗೂರು – 214, ನ್ಯೂ ತಿಪ್ಪಸಂದ್ರ – 181, ಎಚ್‌ಎಸ್‌ಆರ್ ಲೇಔಟ್ – 159, ಹೊರಮಾವು – 159, ದೊಡ್ಡನೆಕುಂದಿ – 150, ಕೋರಮಂಗಲ – 143, ಶಾಂತಲನಗರ – 141, ಆರ್‌ಆರ್ ನಗರ – 124 ಕೇಸ್‌ಗಳು ವರದಿಯಾಗಿವೆ. ಇದನ್ನೂ ಓದಿ: ಎಲ್ಲಾ ಸಿಬ್ಬಂದಿಗೂ ಕೊರೊನಾ – ಬ್ಯಾಂಕ್ ಸೀಲ್‌ಡೌನ್

  • ಬೆಂಗಳೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷಾ ಕಾರ್ಯ

    ಬೆಂಗಳೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷಾ ಕಾರ್ಯ

    – 15 ದಿನಗಳಲ್ಲಿ ಪೂರ್ಣಗೊಳಸಲು ಆಯುಕ್ತರ ಸೂಚನೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಲ್ಲಿ 185 ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡಲಾಗಿದ್ದು, ಅದರಲ್ಲಿ 10 ಕಟ್ಟಡಗಳನ್ನು ನೆಲಸಮ ಮಾಡಲಾಗಿರುತ್ತದೆ. ಇದೀಗ ಯೋಜನಾ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿಕೊಂಡು 15 ದಿನಗಳಲ್ಲಿ ಮರು ಸಮೀಕ್ಷೆ ಮಾಡಿ, ನಗರದಲ್ಲಿ ಎಷ್ಟು ಶಿಥಿಲಾವಸ್ಥೆಗೊಂಡಿರುವ ಕಟ್ಟಡಗಳಿವೆ ಎಂಬುದರ ಬಗ್ಗೆ ನಿಖರ ವರದಿ ನೀಡಲು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಎಲ್ಲಾ ವಲಯ ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡುವ ಸಂಬಂಧ ಇಂದು ವರ್ಚುವಲ್ ಮೂಲಕ ಸಭೆ ನಡೆಸಲಾಯಿತು. ನಗರದಲ್ಲಿ 2019ರಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಮಾಡಿರುವ ಬಗ್ಗೆ, ಹಾಗೂ ಸಮೀಕ್ಷೆಯ ಪ್ರಕಾರ ಇದುವರೆಗೆ ಎಷ್ಟು ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಎಷ್ಟು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂಬುದರ ಬಗ್ಗೆ ಆಯುಕ್ತರು ಎಂಟೂ ವಲಯಗಳಿಂದ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಹೃದಯ ಪರೀಕ್ಷೆ ನಡೆಸಲು ನಿಮ್ಮ ಮನೆ ಬಾಗಿಲಿಗೇ ಬರಲಿದೆ ಮೊಬೈಲ್ ವಾಹನ

    ನಗರದಲ್ಲಿ 2019ರಲ್ಲಿ ಮಾಡಿದ್ದ ಸಮೀಕ್ಷೆಯಲ್ಲಿ ಗುರುತಿಸಿದ್ದ 185 ಶಿಥಿಲಾವಸ್ಥೆಯ ಕಟ್ಟಡಗಳ ಪೈಕಿ ಈಗಾಗಲೇ 10 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಬಾಕಿ 175 ಕಟ್ಟಡಗಳ ಮಾಲೀಕರಿಗೆ ಕೂಡಲೇ ನೋಟಿಸ್ ನೀಡಿ, ಕಟ್ಟಡಗಳನ್ನು ನೆಲಸಮ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಲಯ ಜಂಟಿ ಆಯುಕ್ತರುಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ತಾಲೂಕು ಕಚೇರಿಯಲ್ಲಿ ಕುಸಿದು ಬೀಳುತ್ತಿದೆ ಮೇಲ್ಛಾವಣಿ

    ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಪುನರ್ ಪರಿಶೀಲಿಸುವ ಸಂಬಂಧ, ಆಯಾ ವಲಯಗಳಲ್ಲಿ ಸಂಬಂಧಪಟ್ಟ ಎಂಜಿನಿಯರ್‍ಗಳು ಕಟ್ಟಡಗಳ ಸ್ಥಳಕ್ಕೆ ಭೇಟಿ ನೀಡಿ ಮರು ಪರಿಶೀಲಿಸಬೇಕು. ನಂತರ ನಿಖರ ಮಾಹಿತಿಯನ್ನು ನೀಡಬೇಕು ಎಂದರು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷೆ ನಡೆಸಿದ ಬಳಿಕ ಆ ಕಟ್ಟಡಗಳನ್ನು ನೆಲಸಮ ಮಾಡುವ ಸಲುವಾಗಿ 15 ದಿನಗಳಲ್ಲಿ ವಲಯವಾರು ಗುತ್ತಿಗೆದಾರರನ್ನು ನೇಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ಎಲ್ಲಾ ವಲಯ ವಿಶೇಷ ಆಯುಕ್ತರುಗಳು, ಜಂಟಿ ಆಯುಕ್ತರುಗಳು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ಎಲ್ಲಾ ವಿಭಾಗೀಯ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ರಾಜ್ಯದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿಲ್ಲ: ಸುಧಾಕರ್

    ರಾಜ್ಯದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿಲ್ಲ: ಸುಧಾಕರ್

    ಬೆಂಗಳೂರು: ನಮ್ಮ ರಾಜ್ಯದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿಲ್ಲ. ನಿಫಾ ಸೋಂಕಿಗೆ ಲಸಿಕೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ರೋಗದ ಲಕ್ಷಣಗಳನ್ನು ಆಧಾರಿಸಿ ಚಿಕಿತ್ಸೆ ಕೊಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

    ಕೇರಳದಲ್ಲಿ ನಿಫಾಗೆ ಮಗುವೊಂದು ಮೃತಪಟ್ಟಿದ್ದು, ಅಲ್ಲಿನ ಸರ್ಕಾರ ಸೋಂಕಿತರ ಮೇಲೆ ತೀವ್ರ ನಿಗಾ ಇಟ್ಟಿದೆ. ಕೇರಳ ಸರ್ಕಾರ ನಿಫಾ ತಡೆಗೆ ಕೈಗೊಂಡ ಕ್ರಮಗಳು ನಮಗೆ ಸಮಾಧಾನ ತಂದಿದೆ ಎಂದರು. ಇದನ್ನೂ ಓದಿ: ಜಮೀರ್ ಕೂಡ  ತಾಲಿಬಾನ್ ಥರಾ: ಸೊಗಡು ಶಿವಣ್ಣ

    ಕೇರದಲ್ಲಿ ಮೂರನೇ ಸಲ ನಿಫಾ ಬಂದಿದ್ದು, ಕೇರಳದಲ್ಲಿ ಕಾಡು ಹೆಚ್ಚಿರೋದ್ರಿಂದ ಸೋಂಕು ಕಾಣಿಸಿಕೊಂಡಿರಬಹುದು. ಪ್ರಾಣಿಗಳು ತಿಂದು ಬಿಟ್ಟ ಹಣ್ಣನ್ನು ಮನುಷ್ಯ ತಿಂದರೆ ನಿಫಾ ಬರುತ್ತದೆ ಎಂದು ಸುಧಾಕರ್ ತಿಳಿಸಿದರು.

    ನಿಫಾ ಕುರಿತು ರಾಜ್ಯದ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನಷ್ಟು ಗಂಭೀರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿಫಾ ಬಗ್ಗೆ ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡುತ್ತೇನೆ. ರಾಜ್ಯದಲ್ಲಿ ನಿಫಾ ಬರದಂತೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು  ಇದನ್ನೂ ಓದಿ: ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಕರ ಸುಲಿಗೆ – ಹಬ್ಬದ ಸೀಸನ್‍ನಲ್ಲಿ ಸಾರಿಗೆ ದಂಧೆ ಬಯಲು

    ಗಣೇಶೋತ್ಸವಕ್ಕೆ ಬಿಬಿಎಂಪಿ ಮೂರು ದಿನದ ನಿಯಮ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ನಿಯಮದ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

    1-5 ನೇ ತರಗತಿಗಳ ಶಾಲೆ ಆರಂಭ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಈಗಷ್ಟೇ 6-8 ತರಗತಿಗಳು ಆರಂಭವಾಗಿವೆ. ಎಷ್ಟೋ ಪೋಷಕರು ಇನ್ನೂ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿಲ್ಲ. ಇನ್ನೂ ಸ್ವಲ್ಪ ಸಮಯ ಕಾದು ನೋಡೋಣ ಎಂದರು.

  • ನುಂಗಿದ್ದು ಸಾಕು ರಸ್ತೆ ನಿರ್ಮಿಸಿ – ಬಿಬಿಎಂಪಿ ವಿರುದ್ಧ ಕಸ್ತೂರಿ ನಗರ ನಿವಾಸಿಗಳ ಪ್ರತಿಭಟನೆ

    ನುಂಗಿದ್ದು ಸಾಕು ರಸ್ತೆ ನಿರ್ಮಿಸಿ – ಬಿಬಿಎಂಪಿ ವಿರುದ್ಧ ಕಸ್ತೂರಿ ನಗರ ನಿವಾಸಿಗಳ ಪ್ರತಿಭಟನೆ

    ಬೆಂಗಳೂರು: “ಬಿಬಿಎಂಪಿಗೆ ಮಾನ ಮರ್ಯಾದೆ ಇದೆಯೇ? ಮುಖ್ಯ ರಸ್ತೆಯನ್ನು ಸರಿ ಮಾಡಲು ಒಂದೂವರೆ ವರ್ಷ ಬೇಕೇ? ನುಂಗಿದ್ದು ಸಾಕು ರಸ್ತೆ ಬೇಕು. ಶಾಸಕರೇ ಸಂಸದರೇ ಎಲ್ಲಿದ್ದೀರಿ?” ಈ ರೀತಿಯ ಘೋಷಣೆ ಕೂಗಿ ಪಾಲಿಕೆ ವಿರುದ್ಧ ಕಸ್ತೂರಿ ನಗರದ ಜನತೆ ಇಂದು ಪ್ರತಿಭಟಿಸಿದ್ದಾರೆ.

    ಕಸ್ತೂರಿನಗರ ಬಡಾವಣೆಯ 2ನೇ ಮುಖ್ಯರಸ್ತೆ ಹಾಗೂ 4ನೇ ಮುಖ್ಯರಸ್ತೆಯಲ್ಲಿಯ ಮೂಲಕ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ರಸ್ತೆಯನ್ನು ಒಂದೂವರೆ ವರ್ಷದ ಹಿಂದೆ ಅಗೆಯಲಾಗಿದೆ. ಅಗೆಯಲಾಗಿದ್ದರೂ ರಸ್ತೆ ಮಾತ್ರ ಸರಿ ಮಾಡಲೇ ಇಲ್ಲ.

    https://twitter.com/Varsit_/status/1176065940821295106

    ಕೆಲ ದಿನಗಳ ಬಳಿಕ ರಸ್ತೆ ಸರಿ ಮಾಡಬಹುದು ಎಂದು ಬಡಾವಣೆಯ ನಿವಾಸಿಗಳು ನಿರೀಕ್ಷಿಸಿದ್ದರು. ದಿನ, ತಿಂಗಳು, ವರ್ಷ ಕಳೆದರೂ ಬಿಬಿಎಂಪಿ ಅಧಿಕಾರಿಗಳು ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಈ ಬಡಾವಣೆಗೆ ಮತ್ತು ನಮಗೆ ಸಂಬಂಧ ಇಲ್ಲದಂತೆ ವರ್ತಿಸಿದ್ದಾರೆ. ಕೊನೆಗೆ ಬಡಾವಣೆಯ ನಿವಾಸಿಗಳು ನಿದ್ದೆ ಮಾಡುತ್ತಿರುವ ಬಿಎಂಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಸಿವಿ ರಾಮನ್ ನಗರದದ ಶಾಸಕ ಎಸ್ ರಘು ಮತ್ತು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಅವರಿಗೆ ದೂರು ನೀಡಿದರೂ ಕೆಲಸ ಮಾತ್ರ ಆಗಲೇ ಇಲ್ಲ.

    ಸಾಕಷ್ಟು ಬಾರಿ ದೂರು ನೀಡಿದರೂ ಕೆಲಸ ಆಗದ ಕಾರಣ ಬಡಾವಣೆಯ ನಿವಾಸಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಹೀಗಾಗಿ ಇಂದು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಸ್ತೂರಿ ನಗರದ ಮುಖ್ಯ ರಸ್ತೆಯಲ್ಲಿರುವ ವಿವೇಕಾನಂದ ಪಾರ್ಕ್ ಬಳಿ ರಸ್ತೆ ತಡೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸಿದ್ದಾರೆ.

    ಚುನಾವಣೆಯ ಸಮಯದಲ್ಲಿ ಮತ ಕೇಳುವಾಗ ದಾರಿ ಸರಿ ಇಲ್ಲದೇ ಇದ್ದರೂ ನುಗ್ಗಿಕೊಂಡು ಮನೆ ಮನೆಗೆ ಬಂದು ಪ್ರಚಾರ ಮಾಡುತ್ತಾರೆ. ಈಗ ವಾಹನಗಳು ಸಂಚರಿಸುವ ಮುಖ್ಯ ರಸ್ತೆ ಹಾಳಾಗಿ ಹೋಗಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಜನರಿಗೆ ಸಮಸ್ಯೆ ಆಗುತ್ತದೆ ಎನ್ನುವ ಪರಿಜ್ಞಾನವೇ ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆ ವಿದ್ಯಾರ್ಥಿಗಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ಎಲ್ಲರಿಗೂ ಸಮಸ್ಯೆ ಆಗುತ್ತಲೇ ಇದೆ. ಶಾಸಕ ರಘು ಮತ್ತು ಸಂಸದ ಮೋಹನ್ ಅವರು ಸ್ಥಳಕ್ಕೆ ಬಂದೇ ಇಲ್ಲ. ಮಳೆಗಾಲದಲ್ಲಿ ರಸ್ತೆ ಗದ್ದೆಯಂತಾದರೆ ಮಳೆ ಇಲ್ಲದಾಗ ಧೂಳು ದೇಹದ ಒಳಗಡೆ ಹೋಗಿ ಮಕ್ಕಳು ಮತ್ತು ಹಿರಿಯ ವ್ಯಕ್ತಿಗಳ ಆರೋಗ್ಯ ಕೆಡುತ್ತಿದೆ. ರಸ್ತೆಗಳು ಚೆನ್ನಾಗಿ ಇದ್ದರೂ ಅಲ್ಲಿ ವೈಟ್ ಟಾಪಿಂಗ್ ಮಾಡಲು ಆಸಕ್ತಿ ತೋರಿಸುವ ಬಿಬಿಎಂಪಿ ಅಭಿವೃದ್ಧಿಗಾಗಿ ರಸ್ತೆ ಅಗೆದು ಸರಿ ಯಾಕೆ ಮಾಡುತ್ತಿಲ್ಲ? ರಾಜಕಾರಣಿ, ಅಧಿಕಾರಿಗಳಿರುವ ಕಡೆ ಕೂಡಲೇ ಸಮಸ್ಯೆ ಬಗೆ ಹರಿಸುವ ಬಿಬಿಎಂಪಿ ಜನ ಸಾಮಾನ್ಯರ ಸಮಸ್ಯೆಗೆ ಯಾಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.