Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಸಿಡ್ನಿ: ಬಿಗ್‍ಬಾಶ್ ಲೀಗ್‍ನಲ್ಲಿ (Big Bash league) ಮೆಲ್ಬರ್ನ್ ಸ್ಟಾರ್ ತಂಡ ಬೌಲರ್ ಆ್ಯಡಂ ಜಂಪಾ (Adam Zampa) ಮಾಡಿದ ಮಂಕಡ್ ರನೌಟ್‌ನ್ನು (Mankad Run Out) ಅಂಪೈರ್ ನಾಟೌಟ್ ನೀಡಿರುವುದು ವಿವಾದಕ್ಕಿಡಾಗಿದೆ.

ಮೆಲ್ಬರ್ನ್ ರೆನೆಗೇಡ್ಸ್ ತಂಡದ ಪರ ನಾನ್‍ಸ್ಟ್ರೈಕ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಟಾಮ್ ರೋಜರ್ಸ್ ಇತ್ತ ಬೌಲಿಂಗ್ ಆರಂಭಿಸುತ್ತಿದ್ದ ಜಂಪಾರನ್ನು ನೋಡಿ ಕ್ರಿಸ್ ಬಿಟ್ಟು ಮುಂದೆ ಓಡಿದ್ದಾರೆ. ಈ ವೇಳೆ ಜಂಪಾ ಮಂಕಡ್ ರನೌಟ್ ಮಾಡಿದ್ದಾರೆ. ಇದನ್ನೂ ಓದಿ: ಬುಮ್ರಾ ಈಸ್ ಬ್ಯಾಕ್ – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ

ಈ ವೇಳೆ ಅನ್‍ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ ನಿರ್ಧರಿಸುವಂತೆ ತಿಳಿಸಿದ್ದಾರೆ. ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಈ ವೇಳೆ ಪ್ರಶ್ನಿಸಿದಾಗ ಜಾಂಪ ಬೌಲಿಂಗ್ ಆಕ್ಷನ್ ಮಾಡಿ ಕ್ರಿಸ್‍ನಲ್ಲಿ ಕೈ ಇದ್ದ ಕಾರಣ ಈ ನಿರ್ಧಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್
ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಹಲವು ಮಂಕಡ್ ರನೌಟ್ ಕೂಡ ಮಾಡಿ ಅಂಪೈರ್‌ಗಳು ಔಟ್ ಎಂಬ ತೀರ್ಮಾನ ನೀಡಿದ್ದಾರೆ. ಆದರೆ ಇಲ್ಲಿ ಅಂಪೈರ್ ನಾಟೌಟ್ ನೀಡಿ ಚರ್ಚೆಗೆ ಗ್ರಾಸವಾಗಿದೆ.
Spicy, spicy scenes at the MCG.
Not out is the call…debate away, friends! #BBL12 pic.twitter.com/N6FAjNwDO7
— KFC Big Bash League (@BBL) January 3, 2023
ಮಂಕಡ್ ಔಟ್:
ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರಿಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್ ಎಂದೇ ಪರಿಗಣಿಸಲಾಗುವುದಾಗಿ ಐಸಿಸಿ ನಿಯಮ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ಟಿ20 ಲೀಗ್ ಬಿಗ್‍ಬಾಶ್ ಲೀಗ್‌ನಲ್ಲಿ (BBL) ಭಾರತೀಯ ಆಟಗಾರರನ್ನು ಖರೀದಿಸಿ ಆಡಿಸುವಷ್ಟು ಹಣ ನಮ್ಮಲ್ಲಿಲ್ಲ ಎಂದು ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಹೇಳಿದ್ದಾರೆ.

ಟಿ20 ಕ್ರಿಕೆಟ್‍ನಲ್ಲಿ ವಿಶ್ವ ರ್‍ಯಾಕಿಂಗ್‌ನಲ್ಲಿ ನ.1 ಸ್ಥಾನದಲ್ಲಿರುವ ಸೂರ್ಯ ಕುಮಾರ್ ಯಾದವ್ (Suryakumar Yadav) ಕುರಿತಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮ್ಯಾಕ್ಸ್‌ವೆಲ್‌ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಮ್ಯಾಕ್ಸ್‌ವೆಲ್ ಸೂರ್ಯ ಕುಮಾರ್ ಯಾದವ್ ಉತ್ತಮ ಆಟಗಾರ ಆದರೆ ನಮ್ಮಲ್ಲಿ ನಡೆಯುವ ಬಿಬಿಎಲ್ ಟೂರ್ನಿಯಲ್ಲಿ ಅವರನ್ನು ಕರೆತಂದು ಆಡಿಸುವಷ್ಟು ದುಡ್ಡು ನಮ್ಮಲ್ಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಕೆ.ಎಲ್.ರಾಹುಲ್

ಸೂರ್ಯ ಕುಮಾರ್ ಯಾದವ್ ಭವಿಷ್ಯದಲ್ಲಿ ಬಿಬಿಎಲ್ ಟೂರ್ನಿಯಲ್ಲಿ ಆಡಬಹುದಾ ಎಂದು ಕೇಳಿದಾಗ ಮ್ಯಾಕ್ಸ್‌ವೆಲ್ ಇದು ಅಸಾಧ್ಯ. ನಾವು ದೊಡ್ಡ ಮೊತ್ತ ಪಾವತಿಸಿ ಆಟಗಾರರನ್ನು ತಂಡಕ್ಕೆ ಸೇರಿಸುವುದಿಲ್ಲ. ಹಾಗಾಗಿ ಬಿಬಿಎಲ್‍ನಲ್ಲಿ ಸೂರ್ಯ ಕುಮಾರ್ ಯಾದವ್ ಅವರಂತಹ ಭಾರತೀಯ ಆಟಗಾರರನ್ನು ನಿರೀಕ್ಷಿಸುವುದು ಕಷ್ಟ ಎಂದಿದ್ದಾರೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್

ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತೀಯ ಆಟಗಾರರನ್ನು ವಿದೇಶಿ ಟಿ20 ಲೀಗ್‍ನಲ್ಲಿ ಆಡಲು ಅವಕಾಶ ನೀಡಬೇಕೆಂಬ ಮಾತು ಕೇಳಿ ಬರುತ್ತಿದೆ. ಈವರೆಗೆ ಬಿಸಿಸಿಐ (BCCI) ಭಾರತೀಯ ಆಟಗಾರರಿಗೆ ಐಪಿಎಲ್ (IPL) ಬಿಟ್ಟು ಬೇರೆ ಯಾವುದೇ ವಿದೇಶಿ ಲೀಗ್‍ನಲ್ಲಿ ಆಡಲು ಅವಕಾಶ ನೀಡಿಲ್ಲ. ಬಿಸಿಸಿಐ ಈ ಬಗ್ಗೆ ಚಿಂತಿಸಿ ಆಟಗಾರರಿಗೆ ಅವಕಾಶ ನೀಡಿದರೆ, ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ವಿದೇಶಿ ಲೀಗ್‍ನಲ್ಲಿ ದೊಡ್ಡ ಮೊತ್ತಕ್ಕೆ ಸ್ಟಾರ್ ಆಟಗಾರರನ್ನು ಖರೀದಿಸಲು ಫ್ರಾಂಚೈಸ್‍ಗಳು ಮುಂದಾಗಬಹುದು. ಆದರೆ ಈ ಬಗ್ಗೆ ಬಿಸಿಸಿಐ ಒಲವು ತೋರಿದಂತೆ ಕಾಣಿಸುತ್ತಿಲ್ಲ.

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಬಿಗ್‍ಬಾಶ್ ಟಿ20 ಲೀಗ್ ನಡೆಯುತ್ತಿದ್ದು, ಡಗೌಟ್‍ನಲ್ಲಿ ಕುಳಿತಿದ್ದ ಮೆಲ್ಬರ್ನ್ ಸ್ಟಾರ್ಸ್ ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಹಿಡಿದ ಸಿಂಪಲ್ ಕ್ಯಾಚ್ ಕಂಡು ಎದುರಾಳಿ ತಂಡದ ಫೀಲ್ಡರ್ ದಂಗಾಗಿದ್ದಾರೆ.

ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವೆ ಪಂದ್ಯ ನಡೆಯುತ್ತಿತ್ತು. ಮೆಲ್ಬರ್ನ್ ಸ್ಟಾರ್ಸ್ ಪರ ಬ್ಯಾಟಿಂಗ್ ಮಾಡುತ್ತಿದ್ದ ಸ್ಟೋಯಿನಿಸ್ ಬಿಗ್ ಸಿಕ್ಸರ್ ಒಂದನ್ನು ಸಿಡಿಸಿದರು. ಈ ವೇಳೆ ಇದನ್ನು ಹಾರಿ ಹಿಡಿಯಲು ಬ್ರಿಸ್ಬೇನ್ ಹೀಟ್ ತಂಡದ ಫೀಲ್ಡರ್ ಪ್ರಯತ್ನ ಪಟ್ಟರು. ಆದರೆ ಕ್ಷಣ ಮಾತ್ರದಲ್ಲಿ ಡಗೌಟ್‍ನಲ್ಲಿ ಕುಳಿತಿದ್ದ ಮ್ಯಾಕ್ಸ್‌ವೆಲ್ ಆ ಚೆಂಡನ್ನು ಒಂದೇ ಕೈಯಲ್ಲಿ ಸಿಂಪಲ್ ಆಗಿ ಕ್ಯಾಚ್ ಹಿಡಿದು ಫೀಲ್ಡರ್‌ಗೆ ನೀಡಿದರು. ಇದನ್ನೂ ಓದಿ: ಆರ್ಸಿಬಿ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಪಾಸಿಟಿವ್
One more @Gmaxi_32 highlight… this time from when he wasn't even on the field! 🤯@KFCAustralia | #BBL11 pic.twitter.com/d6quQvc48N
— KFC Big Bash League (@BBL) January 16, 2022
ಇದೀಗ ಮ್ಯಾಕ್ಸಿ ಕ್ಯಾಚ್ ವೀಡಿಯೋ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಮೆಲ್ಬರ್ನ್ ಸ್ಟಾರ್ಸ್ ತಂಡ ಬ್ರಿಸ್ಬೇನ್ ಹೀಟ್ ವಿರುದ್ಧ 8 ವಿಕೆಟ್‍ಗಳ ಜಯ ಸಾಧಿಸಿದೆ. ಆಸ್ಟ್ರೇಲಿಯಾದಲ್ಲಿ ಕೊರೊನಾ ಸೋಂಕಿನ ನಡುವೆ ಬಿಬಿಎಲ್ ಲೀಗ್ ನಡೆಯುತ್ತಿದೆ. ಕೆಲದಿನಗಳ ಹಿಂದೆ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಇದೀಗ ಚೇತರಿಸಿಕೊಂಡು ತಂಡದೊಂದಿಗೆ ಮೈದಾನಕ್ಕಿಳಿದಿದ್ದಾರೆ. ಇದನ್ನೂ ಓದಿ: ಮುಂದಿನ ಟೀಂ ಇಂಡಿಯಾ ಟೆಸ್ಟ್ ನಾಯಕ ಯಾರು – ಪ್ರತಿಕ್ರಿಯಿಸಿದ ಬಿಸಿಸಿಐ

ಸಿಡ್ನಿ: ಬಿಗ್‍ಬಾಶ್ ಲೀಗ್‍ನಲ್ಲಿ ಆಡುತ್ತಿರುವ ಐಪಿಎಲ್‍ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

ಆಸ್ಟ್ರೇಲಿಯಾದಲ್ಲಿ ಬಿಗ್‍ಬಾಶ್ ಟಿ20 ಲೀಗ್ ನಡೆಯುತ್ತಿದೆ. ಮಾಕ್ಸಿ, ಮೆಲ್ಬರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದಾರೆ. ನಿನ್ನೆ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಿದ ವೇಳೆ ಪಾಸಿಟಿವ್ ವರದಿಯಾಗಿದ್ದು, ಇದೀಗ ಆರ್ಟಿಪಿಸಿಆರ್ ವರದಿಗಾಗಿ ಕಾಯುತ್ತಿದ್ದೇವೆ ಎಂದು ಮೆಲ್ಬರ್ನ್ ಸ್ಟಾರ್ಸ್ ತಂಡ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಆಫ್ರಿಕಾಗೆ ಶಾರ್ದೂಲ್ ಶಾಕ್ – ಭಾರತಕ್ಕೆ ಅಲ್ಪ ಮುನ್ನಡೆ
The Melbourne Stars can confirm that Glenn Maxwell has returned a positive rapid antigen test.
— Melbourne Stars (@StarsBBL) January 5, 2022
ಸದ್ಯ ಮಾಕ್ಸಿ ಹೋಟೆಲ್‍ನಲ್ಲಿ ಕ್ವಾರಂಟೈನ್ ಆಗಿದ್ದು ಅಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಮೂಲಕ ಬಿಗ್‍ಬಾಶ್ ಟಿ20 ಲೀಗ್‍ನಲ್ಲಿ ಆಡುತ್ತಿರುವ ಮೆಲ್ಬರ್ನ್ ಸ್ಟಾರ್ಸ್ ತಂಡದ ಒಟ್ಟು 13 ಜನ ಆಟಗಾರರಲ್ಲಿ ಈಗಾಗಲೇ ಕೊರೊನಾ ಕಾಣಿಸಿಕೊಂಡಂತಾಗಿದೆ. ಈಗಾಗಲೇ ಬ್ರಿಸ್ಬೇನ್ ಹೀಟ್ ತಂಡ ಸೇರಿದಂತೆ ಹಲವು ತಂಡದ ಆಟಗಾರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಬಿಗ್‍ಬಾಶ್ ಲೀಗ್‍ನ ಮೂರು ಪಂದ್ಯಗಳನ್ನು ಕೊನೆ ಕ್ಷಣದಲ್ಲಿ ರದ್ದು ಪಡಿಸಲಾಗಿದೆ. ಈ ನಡುವೆ ಟೂರ್ನಿ ರದ್ದಾಗುವ ಲಕ್ಷಣಗಳು ಕಾಣಿಸಿಕೊಂಡಿದೆ. ಇದನ್ನೂ ಓದಿ: ಪಂತ್ ವಿವಾದಾತ್ಮಕ ಕ್ಯಾಚ್ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಪರ್ತ್: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಂಪೈರ್ ಧೋನಿ ಎಲ್‍ಬಿ ಔಟ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್(ಬಿಬಿಎಲ್) ನಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಭಾನುವಾರ ಪರ್ತ್ ಸ್ಕೋಚರ್ಸ್ ಮತ್ತು ಸಿಡ್ನಿ ಸಿಕ್ಸರ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಭಾರೀ ಮೊತ್ತವನ್ನು ಬೆನ್ನಟ್ಟಲು ಕ್ರೀಸ್ ಗೆ ಇಳಿದ ಆರಂಭಿಕ ಆಟಗಾರ ಮೈಕಲ್ ಕ್ಲಿಂಗರ್ ಔಟ್ ಆಗಿರುವ ವಿಷಯ ಈಗ ದೊಡ್ಡ ವಿವಾದವಾಗಿ ಹೊರಹೊಮ್ಮಿದೆ.

ಪಂದ್ಯದಲ್ಲಿ ಪರ್ಥ್ ಸ್ಕಾರ್ಚರ್ಸ್ ತಂಡದ ಮೈಕಲ್ ಕ್ಲಿಂಗರ್ ಎರಡನೇ ಓವರಿನ 7ನೇ ಎಸೆತದಲ್ಲಿ ಔಟ್ ಆಗಿದ್ದಾರೆ. 2 ರನ್ ಗಳಿಸಿದ ಮೈಕಲ್ ನೇರವಾಗಿ ಸ್ವೀವ್ ಓ ಕೀಫಿ ಅವರಿಗೆ ಕ್ಯಾಚ್ ನೀಡಿದ್ದಾರೆ. ಆದರೆ ಅದು ಎರಡನೇ ಓವರ್ ನ ಏಳನೇ ಎಸೆತ ಎನ್ನುವುದನ್ನು ಅಂಪೈರ್ ಸೇರಿದಂತೆ ಎಲ್ಲರು ಮರೆತಿದ್ದರು. ಇತ್ತ ಕ್ಯಾಚ್ ಪಡೆದ ಸ್ವೀವ್ ಸಂಭ್ರಮದಲ್ಲಿದ್ರೆ, ಮೈಕಲ್ ಸೇರಿದಂತೆ ಎಲ್ಲರು ಗೊಂದಲದಲ್ಲಿದ್ದರು.
ಬೌಲರ್ ಬೆನ್ ಆ ಓವರ್ ನಲ್ಲಿ ಯಾವುದೇ ವೈಡ್ ಅಥವಾ ನೋ ಬಾಲ್ ಹಾಕಿರಲಿಲ್ಲ. ಆದರೂ ಅಂಪೈರ್ ಏಳನೇ ಎಸೆತಕ್ಕೆ ಅವಕಾಶ ನೀಡಿದ್ದು ದೊಡ್ಡ ಚರ್ಚೆಗೆ ನಾಂದಿಯಾಗಿದೆ. ಔಟ್ ಬಳಿಕ ತೀರ್ಪನ್ನು ಮರು ಪರಿಶೀಲನೆ ನಡೆಸಿದಾಗ ಬೌಲರ್ ಒಂದು ಓವರ್ ನಲ್ಲಿ ಆರರ ಬದಲಾಗಿ ಏಳು ಎಸೆತ ಹಾಕಿರುವುದು ಖಚಿತವಾಗಿದೆ. ಬೌಲ್ ಸಂಖ್ಯೆಯನ್ನು ಅಂಪೈರ್ ಅಥವಾ ಕಮೆಂಟರಿ ನೀಡುವವರು ಅಥವಾ ಪಂದ್ಯದ ಯಾವ ಅಧಿಕಾರಿಗಳು ಗಮನಿಸದೇ ಇದ್ದಿದ್ದರಿಂದ ಈ ಎಡವಟ್ಟು ಸಂಭವಿಸಿದೆ.

ಲೈವ್ ಪ್ರಸಾರದ ಜೊತೆಗೆ ಈಗ ಕ್ರಿಕೆಟ್ ನಲ್ಲಿ ಸಾಕಷ್ಟು ತಂತ್ರಜ್ಞಾನಗಳು ಬಂದಿದ್ದರೂ ಈ ರೀತಿ ಎಡವಟ್ಟು ನಡೆದಿದ್ದು ಹೇಗೆ? ಈ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂಪೈರ್ ಈ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಬೇಕಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
178 ರನ್ ಗಳ ಗುರಿ ಬೆನ್ನಟ್ಟಿದ ಪರ್ತ್ ಸ್ಕೋಚರ್ಸ್ 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಕೆಮರೂನ್ ಬೆನ್‍ಕ್ರಾಫ್ಟ್ 87 ರನ್(61 ಎಸೆತ, 8 ಬೌಂಡರಿ, 1 ಸಿಕ್ಸರ್) ಅಸ್ಟಿನ್ ಟರ್ನರ್ 60 ರನ್(30 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.
Umpiring howler rocks BBL08 after disgraceful Michael Klinger dismissal in Scorchers-Sixers clash.https://t.co/6OXlHPZoFI #BBL08 crowd #BBL pic.twitter.com/J3KEPTAuPC
— 𝐓𝐡𝐞 𝐒𝐩𝐨𝐫𝐭𝐢𝐧𝐠 𝐍𝐞𝐰𝐬 Australia (@sportingnewsau) January 13, 2019
Cricket world reacts to Michael Klinger's seventh ball dismissal that marred the Scorchers seven wicket victory over the Sixers.
➡️https://t.co/7COWD03SC1#BBL08 pic.twitter.com/OL5QKYbJzt
— 𝐓𝐡𝐞 𝐒𝐩𝐨𝐫𝐭𝐢𝐧𝐠 𝐍𝐞𝐰𝐬 Australia (@sportingnewsau) January 14, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv