Tag: BBK 8

  • ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ

    ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ

    ‘ಲಕ್ಷ್ಮಿ ಬಾರಮ್ಮ’ (Lakshmi Baramma) ನಟ ಶಮಂತ್ ಬ್ರೋ ಗೌಡ (Shamanth Bro Gowda) ಅವರು ಇಂದು (ಮೇ 18) ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳತಿ ಮೇಘನಾ (Meghana) ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

    ಪ್ರೀತಿಸಿದ ಹುಡುಗಿ ಮೇಘನಾಗೆ ಖುಷಿ ಖುಷಿಯಾಗಿ ಶಮಂತ್ ತಾಳಿ ಕಟ್ಟುತ್ತಿರುವ ಫೋಟೋ ಸದ್ದು ಮಾಡುತ್ತಿದೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

    ನಿನ್ನೆ ರಾತ್ರಿ ನಡೆದ ಆರತಕ್ಷತೆಗೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್, ಬಿಗ್ ಬಾಸ್ ನವಾಜ್, ರ‍್ಯಾಪರ್ ಆಲ್ ಓಕೆ, ನಟಿ ಮೌನ ಗುಡ್ಡೆಮನೆ, ‘ಭಾಗ್ಯಲಕ್ಷ್ಮಿ’ ಸೀರಿಯಲ್ ಬಾಲನಟ ಗುಂಡಣ್ಣ ಅಲಿಯಾಸ್ ನಿಹಾರ್, ತನ್ವಿ ಅಲಿಯಾಸ್ ಅಮೃತಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ನಿಮ್ಮದು ಕೋಳಿ ಕಾಲುಗಳು- ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅನನ್ಯಾ ಪಾಂಡೆ

    ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಮನೆಯವರ ಸಮ್ಮತಿ ಪಡೆದು ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಶಮಂತ್ ಮೂಲತಃ ಉತ್ತರ ಕರ್ನಾಟಕದವರು. ಶಮಂತ್ ಹಿರೇಮಠ ಅವರ ಪೂರ್ಣ ಹೆಸರು. ಇನ್ನೂ ಮೇಘನಾ ಮರಾಠಿಗರು. ಹೀಗಾಗಿ ಎರಡು ರೀತಿಯ ಪದ್ಧತಿಯಂತೆ ಮದುವೆ ಶಾಸ್ತ್ರಗಳು ನಡೆಯಲಿದೆ.

    ‘ಬಿಗ್ ಬಾಸ್ ಕನ್ನಡ 8’ರಲ್ಲಿ ಶಮಂತ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಮಂಜು ಪಾವಗಡ ಗೆದ್ದಿದ್ದರು. ಈ ಕಾರ್ಯಕ್ರಮ ಬಳಿಕ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಶಮಂತ್ ಲೀಡ್ ಹೀರೋ ಆಗಿ ನಟಿಸಿದ್ದರು.

  • ಬಿಗ್ ಮನೆಯಿಂದ ಹೊರ ಬಂದ್ರು ಶಂಕರ್ ಅಶ್ವಥ್

    ಬಿಗ್ ಮನೆಯಿಂದ ಹೊರ ಬಂದ್ರು ಶಂಕರ್ ಅಶ್ವಥ್

    ದನೇ ವಾರ ಮನೆಯಿಂದ ಯಾರು ಹೊರ ಹೋಗ್ತಾರೆ ಅನ್ನೋ ತವಕಕ್ಕೆ ತೆರೆ ಬಿದ್ದಿದೆ. ಮನೆಯ ಹಿರಿಯ ಸ್ಪರ್ಧಿ ಶಂಕರ್ ಅಶ್ವಥ್ ಈ ಬಿಗ್‍ಬಾಸ್ ನಿಂದ ಹೊರ ಬಂದಿದ್ದಾರೆ.

    ಮನೆಯಿಂದ ಹೊರ ಬಂದ ಬಳಿಕ ಮಾತನಾಡಿದ ಶಂಕರ್ ಅಶ್ವಥ್, 35 ದಿನ ಸಾಕಾಯ್ತಾ ಅನ್ನಿಸಲ್ಲ. ಆದ್ರೆ ಮನೆಯಲ್ಲಿ ಮನಸ್ಸಿದೆ. ಶಕ್ತಿ ಮೀರಿ ನೀಡಿದ ಟಾಸ್ಕ್ ಮಾಡಿದೆ. ನನಗೆ ಸ್ಪೈನಲ್ ಕಾರ್ಡ್ ಆಪರೇಷನ್ ಆಗಿದೆ. ಟಾಸ್ಕ್ ವೇಳೆ ಏನಾದ್ರೂ ಆದ್ರೆ ಅನ್ನೋ ಭಯ. 82 ವಯಸ್ಸಿನ ತಾಯಿ ಇದ್ದಾರೆ. ಹೆಂಡ್ತಿ ಇದ್ದಾರೆ. ಇವರಿಗೆಲ್ಲ ನಾನು ಭಾರ ಆಗ್ತೀನಿ ಅನ್ನೋ ಭಯ ಶುರುವಾಗಿತ್ತು ಎಂದರು.

    ನಿಧಿ ಸುಬ್ಬಯ್ಯ, ಶಮಂತ್ ಗೌಡ, ನಿಧಿ ಸುಬ್ಬಯ್ಯ, ಅರವಿಂದ್ ಮತ್ತು ಶಂಕರ್ ಅಶ್ವಥ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಅಂತಿಮವಾಗಿ ಶಂಕರ್ ಅಶ್ವಥ್ ಹೊರ ಬಂದಿದ್ದು, ಕಳೆದ ವಾರ ಕೇಳಿ ಬಂದಿದ್ದ ಗಾಳಿ ಸುದ್ದಿಗಳಿಗೆ ಪೂರ್ಣ ವಿರಾಮ ಬಿದ್ದಿದೆ. ನಾಲ್ಕನೇ ವಾರ ಎಲಿಮಿನೇಟ್ ಆಗಿದ್ದ ಚಂದ್ರಕಲಾ ಮೋಹನ್ ಪ್ರಕಾರ ತಮ್ಮ ನಂತರ ನಿಧಿ ಔಟ್ ಆಗ್ತಾರೆ ಎಂದು ಗೆಸ್ ಮಾಡಿದ್ದರು.

    ಮೊದಲ ವಾರ ಟಿಕ್‍ಟಾಕ್ ಚೆಲುವೆ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ, ಮೂರನೇ ವಾರ ಗೀತಾ ಭಾರತಿ ಮತ್ತು ನಾಲ್ಕನೇ ವಾರ ಚಂದ್ರಕಲಾ ಮೋಹನ್ ಹೊರ ಬಂದಿದ್ದರು. ಸತತವಾಗಿ ಮಹಿಳಾ ಸ್ಪರ್ಧಿಗಳೇ ಹೊರ ಬಂದಿದ್ದರಿಂದ ಸೇವ್ ಆಗಿದ್ದವರು ನಾವು ಸ್ಟ್ರಾಂಗ್ ಆಗಬೇಕೆಂದು ಮಾತಾಡಿಕೊಂಡಿದ್ದರು.

    ಈ ವಾರ ಕಳಪೆ ಪ್ರದರ್ಶನ ನೀಡಿದ್ದ ಸ್ಪರ್ಧಿಯೆಂದು ಶಂಕರ್ ಅಶ್ವಥ್ ಅವರನ್ನ ಮನೆ ಮಂದಿ ಆಯ್ಕೆ ಮಾಡಿದ್ದರು. ಇತ್ತ ದಿವ್ಯಾ ಸುರೇಶ್ ಬೆಸ್ಟ್ ಪ್ಲೇಯರ್ ಆಗಿದ್ದರು. ಈ ವಾರ ಮಂಜು ಪಾವಗಡ ಮನೆಯ ಕ್ಯಾಪ್ಟನ್ ಆಗಿದ್ದಾರೆ.

  • ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

    ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

    ಬಿಗ್‍ಬಾಸ್ ಮನೆಗೆ ಬಂದಿರೋ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಹಳೆಯ ಆಟಗಾರರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ತಿಂಗಳು ಮನೆಯ ಮಂದಿ ಹೊರಗೆ ಹೇಗೆ ಬಿಂಬಿತರಾಗಿದ್ದಾರೆ ಅನ್ನೋ ವಿಷಯ ಸದ್ಯ ಅಲ್ಲಿರುವ ಚಕ್ರವರ್ತಿ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಬಂದ ಮೊದಲ ದಿನವೇ ಮನೆಯ ಸದಸ್ಯರಿಗೆ ಅಂಕ ಸಹ ನೀಡಿದ್ರು. ಇದೀಗ ವಿಶ್ವನಾಥ್ ಮುಂದೆ ಕೆಲ ವಿಷಯಗಳನ್ನ ಹಂಚಿಕೊಂಡಿರುವ ಚಕ್ರವರ್ತಿ, ಆಟ ಸೇರಿದಂತೆ ಮನೆಯಲ್ಲಿ ಹೆಚ್ಚು ಸಕ್ರಿಯನಾಗುವಂತೆ ಸಲಹೆ ನೀಡಿದ್ದಾರೆ.

    ರಘು, ನಿಧಿ, ನನಗೆ ಸೇರಿದಂತೆ ಬಹುತೇಕರಿಗೆ ಈ ಅವಕಾಶ ಸಿಕ್ಕಿದ್ದು ನಮ್ಮ ಜೀವನದ ಸೆಕೆಂಡ್ ಹಾಫ್. ನಾವೆಲ್ಲ 40 ವರ್ಷ ಮೇಲ್ಪಟ್ಟವರು. ಆದ್ರೆ ನೀನು ಇನ್ನೂ ಚಿಕ್ಕವನು. ನಿನ್ನಲ್ಲಿರುವ ಟ್ಯಾಲೆಂಟ್ ಜನತೆಗೆ ತೋರಿಸು. ನಾವೆಲ್ಲ ಇಲ್ಲಿ ಬಂದಿರೋದು ನಮ್ಮ ಪ್ರತಿಭೆ ತೋರಿಸಲು ಎಂದು ಚಕ್ರವರ್ತಿ ಹೇಳಿದ್ರು. ನೀನು ನಿನ್ನ ಪ್ರತಿಭೆ ತೋರಿಸಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದರು.

    ಚಕ್ರವರ್ತಿ ಮಾತುಗಳಿಗೆ ಉತ್ತರಿಸಿದ ವಿಶ್ವನಾಥ್, ಬರೆಯೋದಕ್ಕೆ ಪೆನ್ನು, ಪೇಪರ್ ಇಲ್ಲ ಅನ್ನೋ ನೆಪ ಹೇಳಲ್ಲ. ಆದ್ರೆ ಇಲ್ಲಿಯ ಒತ್ತಡದಿಂದ ಆಗ್ತಿಲ್ಲ ಅಂದ ಸಮಜಾಯಿಷಿ ಕೊಟ್ರು. ಅದೇನೇ ಸ್ಟ್ರೆಸ್ ಇರಲಿ, ನಾನು ನಿಂಗೆ ಸಾಹಿತ್ಯ ಬರೆದುಕೊಡ್ತೀನಿ ಅಂತ ಮಾತು ಕೊಟ್ಟರು.

    ಚಕ್ರವರ್ತಿ ಚಂದ್ರಚೂಡ ಓರ್ವ ಮಾಜಿ ಪತ್ರಕರ್ತ ಮತ್ತು ಬರಹಗಾರರು. ಇತ್ತ ವಿಶ್ವನಾಥ್ ಸಹ ಒಳ್ಳೆಯ ಗಾಯಕ. ಮುಂದೆ ಈ ಜೋಡಿಯಿಂದ ಹೊಸ ಹಾಡುಗಳನ್ನ ಬಿಗ್ ಮನೆಯಲ್ಲಿ ಕೇಳುವ ಸಾಧ್ಯತೆಗಳಿವೆ.

  • ಬಿಗ್ ಮನೆಯ ಇಬ್ಬರು ರಾಣಿಯರಿಗೆ ರಾಜನಾದ ವಿಶ್ವನಾಥ್

    ಬಿಗ್ ಮನೆಯ ಇಬ್ಬರು ರಾಣಿಯರಿಗೆ ರಾಜನಾದ ವಿಶ್ವನಾಥ್

    ಬಿಗ್ ಬಾಸ್ ಮನೆ ಅಂಗಳದಲ್ಲಿ ರಾಜನ ದರ್ಬಾರ್ ಶುರುವಾಗಿದೆ. ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಕ್ಯಾಪ್ಟನ್ ಆಗಿ ಮಿಂಚುತ್ತಿರುವ ಟೈಮ್ ನಲ್ಲಿಯೇ ರಾಜನಾಗುವ ಸದವಕಾಶವೊಂದು ಸಿಕ್ಕಿದೆ. ಒಂಟಿ ಮನೆಯ ರಾಜನಾದ ವಿಶ್ವನಾಥ್ ಗೆ ಇಬ್ಬರು ರಾಣಿಯರು. ನೆನಪಿರಲಿ ಮನೆಯ ಯಾವ ಸದಸ್ಯ ರಾಜನ ಮಾತು ಮೀರುವಂತಿಲ್ಲ. ಒಂದ್ ವೇಳೆ ಅದನ್ನು ಬ್ರೇಕ್ ಮಾಡಿದ್ರೆ ಶಿಕ್ಷೆ ತಪ್ಪಿದ್ದಲ್ಲ.

    ಬಿಗ್ ಬಾಸ್ ನಿನ್ನೆ ವಿಶೇಷ ಚಟುವಟಿಕೆಯೊಂದನ್ನು ನೀಡಿದ್ದರು. ಕ್ಯಾಪ್ಟನ್ ಆಗಿರುವ ವಿಶ್ವನಾಥ್ ಒಂದು ದಿನ ರಾಜನಾಗಿರುತ್ತಾರೆ. ಅವರಿಗೆ ಇಬ್ಬರು ರಾಣಿಯರು ಇರ್ತಾರೆ. ಆ ಇಬ್ಬರು ರಾಣಿಯರು ತಮ್ಮ ಕಾರ್ಯ ವೈಖರಿ ಮೂಲಕ ರಾಜನನ್ನು ಮೆಚ್ಚಿಸಿಬೇಕು. ಬಿಗ್ ಬಾಸ್ ಕೇಳಿದಾಗ ರಾಜ ಉತ್ತಮರಾಣಿ ಯಾರೆಂದು ತಿಳಿಸಬೇಕು. ಮಿಕ್ಕ ಮನೆಯ ಸದಸ್ಯರು ರಾಜನ ಮಾತು ಪಾಲಿಸಬೇಕು.

    ಅದರಂತೆ ವಿಶ್ವನಾಥ್ ಬಿಗ್‍ಬಾಸ್ ಮನೆಯ ಹುಡ್ಗಿಯರ ಪೈಕಿ ಯಾರನ್ನಾದ್ರೂ ಇಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ಆಗ ವಿಶ್ವನಾಥ್, ನಿಧಿ ಸುಬ್ಬಯ್ಯ ಹಾಗೂ ವೈಷ್ಣವಿ ಗೌಡ ಅವರನ್ನು ಆಯ್ಕೆ ಮಾಡಿಕೊಂಡರು. ಆಗ ರಾಜೀವ್ ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಹೇಳಿದ್ದು ಹಾಲು ಅನ್ನ ಎಂದು ಜೋರಾಗಿ ಹೇಳಿ ನಕ್ಕಾಗ ಮನೆಯವರು ಬಿದ್ದು ಬಿದ್ದು ನಕ್ಕರು.

    ನಿಧಿ ಹಾಗೂ ವೈಷ್ಣವಿ ರಾಣಿಯರಾದ ಬಳಿಕ ಉಳಿದ ಸದಸ್ಯರಿಗೂ ರಾಜ ವಿಶ್ವನಾಥ್ ಪಾತ್ರ ಹಂಚಿಕೆ ಮಾಡಿದರು. ಲ್ಯಾಗ್ ಮಂಜು ರಾಜನ ಸಲಹೆಗಾರನಾಗಿ, ಪ್ರಶಾಂತ್ ಸಂಬರ್ಗಿ ಹಾಗೂ ಶಂಕರ್ ಅಶ್ವತ್ಥ್ ಅವರನ್ನು ವಿದೂಷಕರಾಗಿ, ನರ್ತಕಿಯರನ್ನಾಗಿ ರಾಜೀವ್ ಹಾಗೂ ರಘು ಆಯ್ಕೆ ಮಾಡಿಕೊಂಡ್ರೆ ಅರವಿಂದ್ ಗೆ ರಾಣಿಯರ ದಾಸನ ಪಾತ್ರ ನೀಡಲಾಯಿತು.

    ಈ ವೇಳೆ ಪ್ರಜೆಗಳನ್ನು ನಗಿಸುವ ಕೆಲಸವನ್ನು ವಿದೂಷಕರಾದ ಪ್ರಶಾಂತ್ ಸಂಬರ್ಗಿ ಮಾಡಬೇಕು. ಆಗ ಪ್ರಶಾಂತ್ ಜೋಕ್ ಹೇಳಲು ಬರದೇ ಇದ್ದಾಗ ಮನೆಯವರು ಎಲ್ಲಾ ಸೇರಿ ಕಾಲೆಳೆಯುತ್ತಾರೆ. ಒಟ್ನಲ್ಲಿ ಅದೃಷ್ಟ ಅಂದ್ರೆ ಇದೇ ಇರಬೇಕು. ವಿಶ್ವನಾಥ್ ಗೆ ಕ್ಯಾಪ್ಟನ್ ಜೊತೆಗೆ ರಾಜನಾಗುವ ಅವಕಾಶ ದಕ್ಕಿದೆ. ಮನೆಯ ಇಬ್ಬರು ರಾಣಿಯರ ಸೇವೆಯೊಂದಿಗೆ, ಉಳಿದ ಕಂಟೆಸ್ಟೆಂಟ್ ಗೆ ಆಜ್ಞೆ ನೀಡುವ ವಿಶೇಷ ಅಧಿಕಾರವನ್ನು ವಿಶ್ವನಾಥ್ ಸರಿಯಾಗಿಯೇ ಬಳಸಿಕೊಂಡಿದ್ದಾರೆ.

  • ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

    ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

    ಬಿಗ್‍ಬಾಸ್ ಸೀಸನ್ 8ರ ಮೂರನೇ ವಾರದಲ್ಲಿ ಸ್ಪರ್ಧಿಗಳ ನಿಜವಾದ ಮುಖ ಪ್ರೇಕ್ಷಕರ ಮುಂದೆ ಬರ್ತಿದೆ. ನಿನ್ನೆ ಎಪಿಸೋಡ್ ನಲ್ಲಿ ಸಂಬರಗಿ ಕಣ್ಣೀರು, ಶುಭಾ ಮುನಿಸು, ಗೀತಾ ಲೆಕ್ಕಾಚಾರದ ಆಟ, ಮಂಜನ ಕಾಮಿಡಿ ನಡುವೆ ದೇಸಿ ಗೇಮ್, ಚಂದ್ರಕಲಾ ಮತ್ತು ಶಂಕರ್ ಅಶ್ವಥ್ ಸೇಫ್ ಜೋನ್ ಹೀಗೆ ಒಂದೊಂದು ಗುಣಗಳು ನೋಡಲು ಸಿಗುತ್ತಿವೆ. ಇಂದು ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ರಘು ಕೂದಲು ಉದುರಿದ್ಯಾಕೆ ಅಂತ ಮಂಜು ಹೇಳಿದ್ದಾರೆ.

    ಹಾಲ್ ನಲ್ಲಿ ಮಂಜು, ಅರವಿಂದ್, ರಘು, ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ ಕುಳಿತಿದ್ದರು. ದಿವ್ಯಾ ಸುರೇಶ್ ಮುಂದೆ ನಾನು ಸುಳ್ಳು ಹೇಳುವ ರೀತಿ ಕಾಣಬಹುದು. ಆದ್ರೆ ಸುಳ್ಳು ಹೇಳ್ತೀನಾ ಅಂತ ರಘು ಹೇಳಿದ್ರು. ರಘು ಮಾತು ಕೇಳಿದ ಅರವಿಂದ್ ನಗಲಾರಂಭಿಸಿದರು. ಅಲ್ಲಿಯೇ ಕುಳಿತಿದ್ದ ಮಂಜು, ಇಷ್ಟು ವರ್ಷದಲ್ಲಿ ರಘು ಇದುವರೆಗೂ ನಿಜನಾ ಹೇಳಿಲ್ಲ ಅನ್ನೋದು ನನ್ನ ಅನಿಸಿಕೆ. ನಿಜ ಹೇಳಿದ್ರೆ ಕೂದಲು ಜೋರಾಗಿ ಬೆಳೆದಿರೋದು ಅಂತ ಕಾಲೆಳೆದರು.

    ಸುಳ್ಳು ಹೇಳೋರಿಗೆ ಹೆಚ್ಚು ಕೂದಲು ಉದುರೋದು. ಬೇಕಿದ್ರೆ ನಮ್ಮ ಮಾವ ಸಂಬರಗಿಯನ್ನ ಕೇಳು. ಸೆಕ್ಷನ್ 56ರ ಪ್ರಕಾರ ಕೂದಲು ಉದುರೋದೇ ಸುಳ್ಳು ಹೇಳಲು ಅಂತ ಹೇಳ್ತಾರೆ. ಬೇಕಿದ್ರೆ ಕರಿ ಗೊಂಬೆ ಮತ್ತು ರಘುನನ್ನ ನೋಡಿ ಅಂತ ಹೇಳಿ ಹಾಲ್ ನಲ್ಲಿ ಕುಳಿತಿದ್ದ ಎಲ್ಲರನ್ನ ನಗಿಸಿದರು.

    ಈ ವಾರ ಜೋಡಿಯಾಗಿ ಟಾಸ್ಕ್ ನೀಡಿರುವ ಬಿಗ್‍ಬಾಸ್ ಎಲ್ಲರಿಗೂ ರಿಚಾರ್ಜ್ ಸ್ಟಿಕ್ ನೀಡಿದ್ದಾರೆ. ಅದನ್ನ ಕಾಪಾಡಿಕೊಳ್ಳುವದರ ಜೊತೆಗೆ ಬೇರೆಯವರ ಸ್ಟಿಕ್ ಪಡೆದುಕೊಂಡ ಜೋಡಿ ವಿನ್ ಆಗಲಿದೆ. ಹಾಗಾಗಿಯೇ ಎಲ್ಲರೂ ಬೇರೆಯವರ ರಿಚಾರ್ಜ್ ಸ್ಟಿಕ್ ಹುಡುಕೋದರಲ್ಲಿ ಬ್ಯುಸಿಯಾಗಿದ್ದಾರೆ.