Tag: bbk 7

  • ಸೋಷಿಯಲ್ ಮೀಡಿಯಾದಿಂದ ದೀಪಿಕಾ ದಾಸ್ ದಿಢೀರ್ ಬ್ರೇಕ್- ಫ್ಯಾನ್ಸ್‌ಗೆ ಶಾಕ್

    ಸೋಷಿಯಲ್ ಮೀಡಿಯಾದಿಂದ ದೀಪಿಕಾ ದಾಸ್ ದಿಢೀರ್ ಬ್ರೇಕ್- ಫ್ಯಾನ್ಸ್‌ಗೆ ಶಾಕ್

    ‘ಬಿಗ್ ಬಾಸ್ ಕನ್ನಡ 7’ರ ಖ್ಯಾತಿಯ ದೀಪಿಕಾ ದಾಸ್ (Deepika Das) ಸೋಷಿಯಲ್ ಮೀಡಿಯಾದಲ್ಲಿ ಬ್ರೇಕ್ ತೆಗೆದುಕೊಳ್ಳೋದಾಗಿ ಪೋಸ್ಟ್ ಶೇರ್ ಮಾಡಿ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಇದನ್ನೂ ಓದಿ:ಟೈಗರ್ ಶ್ರಾಫ್ ಜೊತೆ ಜಾನ್ವಿ ಕಪೂರ್ ಡ್ಯುಯೆಟ್

    ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ, ನಾನು ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಧನ್ಯವಾದಗಳು ಎಂದು ನಟಿ ಬರೆದುಕೊಂಡಿದ್ದಾರೆ. ದಿಢೀರ್ ಎಂದು ನಟಿ ಹೀಗೆ ಪೋಸ್ಟ್ ಮಾಡಿದ್ದೇಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ಏನಾದರೂ ಗುಡ್ ನ್ಯೂಸ್ ಕೊಡ್ತಿದ್ದೀರಾ, ತಾಯಿ ಆಗಿದ್ದೀರಾ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ನಟಿಗೆ ಏನಾಯ್ತು ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ನಿಧಿ ಜೊತೆ ಪವನ್ ಕಲ್ಯಾಣ್ ಮಸ್ತ್ ಡ್ಯಾನ್ಸ್- ‘ಹರಿ ಹರ ವೀರ ಮಲ್ಲು’ ಚಿತ್ರದ ಸಾಂಗ್ ರಿಲೀಸ್

     

    View this post on Instagram

     

    A post shared by Deepika Das (@deepika__das)

    ಈ ವರ್ಷ ಜನವರಿ 31ರಂದು ದೀಪಿಕಾ ದಾಸ್ ನಟನೆಯ ‘ಪಾರು ಪಾರ್ವತಿ’ (Paaru Parvati) ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

    ನಾಗಿಣಿ, ಬಿಗ್ ಬಾಸ್  ಖ್ಯಾತಿಯ ದೀಪಿಕಾ ದಾಸ್‌ ಅವರು ಉದ್ಯಮಿ ದೀಪಕ್‌ (Deepak) ಜೊತೆ ಕಳೆದ ವರ್ಷ ಮಾರ್ಚ್‌ನಲ್ಲಿ ಹಸೆಮಣೆ ಏರಿದರು. ಕುಟುಂಬಸ್ಥರ ಸಮ್ಮುಖದಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾಯಕ ವಾಸುಕಿ ವೈಭವ್ ದಂಪತಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾಯಕ ವಾಸುಕಿ ವೈಭವ್ ದಂಪತಿ

    ‘ಬಿಗ್ ಬಾಸ್ ಕನ್ನಡ 7’ರ ಖ್ಯಾತಿಯ ವಾಸುಕಿ ವೈಭವ್ (Vasuki Vaibhav) ಅವರು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ವಿಶ್ವ ತಾಯಂದಿರ ದಿನದಂದು (ಮೇ 11) ತಂದೆಯಾಗುತ್ತಿರುವ ವಿಚಾರವನ್ನು ವಾಸುಕಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಪತ್ನಿ ಬೃಂದಾ ಅವರ ಬೇಬಿ ಬಂಪ್ ಫೋಟೋ ಶೇರ್ ಮಾಡಿ, ತಾಯಂದಿರ ದಿನದ ಶುಭಾಶಯಗಳು. ನೀವು ಇಲ್ಲದೇ ಈ ಜಗತ್ತು ಅಸ್ತಿತ್ವದಲ್ಲಿರುತ್ತಿರಲಿಲ್ಲ ಎಂದು ವಾಸುಕಿ ಬರೆದುಕೊಂಡಿದ್ದಾರೆ. ಪತ್ನಿ ತಾಯಿಯಾಗುತ್ತಿರುವ ಶುಭಸುದ್ದಿಯನ್ನು ಅವರು ತಿಳಿಸಿದ್ದಾರೆ. ಈ ಜೋಡಿಗೆ ಮಾನ್ವಿತಾ ಕಾಮತ್, ಅಮೃತಾ ಪ್ರೇಮ್, ಚೈತ್ರಾ ವಾಸುದೇವನ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ರಂಜಿತ್

     

    View this post on Instagram

     

    A post shared by Vasuki Vaibhav (@vasuki_vaibhav_)

    ರಂಗಭೂಮಿಯಲ್ಲಿ ಬೃಂದಾ ವಿಕ್ರಮ್ (Brunda Vikram) ಅವರು ವಾಸುಕಿಗೆ ಪರಿಚಯವಾಗಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. 2023ರಲ್ಲಿ ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾದರು.

  • ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಮಿಂಚಿಂಗ್

    ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಮಿಂಚಿಂಗ್

    ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್ (Deepika Das) ಹೊಸ ಫೋಟೋಶೂಟ್‌ವೊಂದರಲ್ಲಿ ಮಿಂಚಿದ್ದಾರೆ. ಕೂಲಿಂಗ್ ಗ್ಲಾಸ್‌  ಹಾಕಿಕೊಂಡು ಸಖತ್ ಸ್ಟೈಲ್‌  ಆಗಿ ಕಾಣಿಸಿಕೊಂಡಿದ್ದಾರೆ. ‘ಬಿಗ್ ಬಾಸ್’ ಬೆಡಗಿಯ ಫೋಟೋ ಕಂಡು ಪಡ್ಡೆಹೈಕ್ಳು ಫಿದಾ ಆಗಿದ್ದಾರೆ.

    ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ನಟಿ ದೀಪಿಕಾ ದಾಸ್ ಸದ್ದು ಮಾಡುತ್ತಲೇ ಇರುತ್ತಾರೆ. ಗುಲಾಬಿ ಬಣ್ಣದ ಧಿರಿಸಿನಲ್ಲಿ ನಟಿ ಮಿಂಚಿದ್ದಾರೆ.

    ಕಣ್ಣಿಗೆ ಕೂಲಿಂಗ್ ಗ್ಲಾಸ್‌  ಹಾಕಿಕೊಂಡು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ‘ಸೌಂದರ್ಯ ಸಮರ ಸೋತವನೇ ಅಮರ’ ಎಂದೆಲ್ಲಾ ನಟಿಗೆ ಬಣ್ಣಿಸಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

    ಕಳೆದ ವರ್ಷ ಮಾರ್ಚ್ 1ರಂದು ಉದ್ಯಮಿ ದೀಪಕ್ ಜೊತೆ ದೀಪಿಕಾ ದಾಸ್ ಮದುವೆಯಾದರು. ಗುರುಹಿರಿಯರ ಒಪ್ಪಿಗೆ ಪಡೆದು ಪ್ರೀತಿಸಿದ ಹುಡುಗನ ಜೊತೆ ಗೋವಾದಲ್ಲಿ ನಟಿ ಹಸೆಮಣೆ (Wedding) ಏರಿದರು. ಇದನ್ನೂ ಓದಿ:ಪತಿಯೊಂದಿಗೆ ಗರ್ಭಿಣಿ ಕಿಯಾರಾ ಅಡ್ವಾಣಿ ವೆಕೇಷನ್

    ನಟಿಯ ಸಿನಿಮಾ ಕನಸಿಗೆ ಪತಿ ದೀಪಕ್ (Deepak) ಜೊತೆಯಾಗಿ ನಿಂತಿದ್ದಾರೆ. ನಟನಾ ಕ್ಷೇತ್ರದಲ್ಲಿ ಮುಂದುವರಿಯಲು ದೀಪಿಕಾಗೆ ದೀಪಕ್ ಮತ್ತಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆಶಿಕಾ ರಂಗನಾಥ್

    ಈ ವರ್ಷ ‘ಪಾರು ಪಾರ್ವತಿ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಿದರು. ಆ ನಂತರ ಒಟಿಟಿಯಲ್ಲೂ ಸಿನಿಮಾ ರಿಲೀಸ್ ಆಯ್ತು.

    ನಾಗಿಣಿ ಸೀರಿಯಲ್‌, ಶೈನ್ ಶೆಟ್ಟಿ (Shine Shetty) ಗೆದ್ದಿದ್ದ ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ (Bigg Boss Kannada 7) ದೀಪಿಕಾ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ 9ರಲ್ಲೂ ಭಾಗವಹಿಸಿದ್ದರು. 2 ಸೀಸನ್‌ನಲ್ಲೂ ಟಾಪ್ ಫೈನಲಿಸ್ಟ್ ಆಗಿದ್ರು. 2 ಬಾರಿಯೂ ಬಿಗ್ ಬಾಸ್ ಗೆಲುವಿನ ಪಟ್ಟ ಮಿಸ್ ಆಗಿತ್ತು.

    ಕನ್ನಡದ ಜೊತೆ ತಮಿಳಿನಲ್ಲೂ ದೀಪಿಕಾ ದಾಸ್‌ ನಟಿಸಿ ಬಂದಿದ್ದಾರೆ.  ಆದರೆ ಕನ್ನಡ ಕಿರುತೆರೆ ಅವರಿಗೆ ಹೆಚ್ಚಿನ ಜನಪ್ರಿಯತೆ ಕೊಟ್ಟಿದೆ.

  • ‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ‌’ಬಿಗ್‌ ಬಾಸ್‌’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್‌

    ‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ‌’ಬಿಗ್‌ ಬಾಸ್‌’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್‌

    ‘ಬಿಗ್ ಬಾಸ್’ (Bigg Boss Kannada 7) ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ನಟಿಯರೊಂದಿಗೆ ಡ್ಯಾನ್ಸ್ ಮಾಡಿರುವ ರೀಲ್ಸ್ ಅನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ತನ್ವಿ ರಾವ್ (Tanvi Rao) ಜೊತೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.

    ‘ಲಕ್ಷ್ಮಿ ಬಾರಮ್ಮ’ಖ್ಯಾತಿಯ ಕೀರ್ತಿ ಅಲಿಯಾಸ್ ತನ್ವಿ ಜೊತೆ ಕಿಶನ್ ಅವರು ಸ್ಟೈಲೀಶ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ವಾಸುಕಿ ವೈಭವ ಹಾಡಿರುವ ‘ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು’ ಹಾಡಿಗೆ ಇಬ್ಬರೂ ಹೆಜ್ಜೆ ಹಾಕಿದ್ದಾರೆ. ತನ್ವಿ ಭರತನಾಟ್ಯ ಮಾಡುವ ಮೂಲಕ ಹೆಜ್ಜೆ ಹಾಕ್ತಿದ್ರೆ, ಕಿಶನ್ ಸ್ಟೈಲೀಶ್‌ ಆಗಿ ಕುಣಿದಿದ್ದಾರೆ. ಇಬ್ಬರ ನೃತ್ಯಕ್ಕೆ ಫ್ಯಾನ್ಸ್ ಬೆರಗಾಗಿದ್ದಾರೆ. ರೀಲ್ಸ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

     

    View this post on Instagram

     

    A post shared by Kishen Bilagali (@kishenbilagali)

    ಈಗಾಗಲೇ ರಾಗಿಣಿ, ರಾಧಿಕಾ ಚೇತನ್, ನಮ್ರತಾ ಗೌಡ, ಚೈತ್ರಾ ಆಚಾರ್, ಅನುಪಮಾ ಗೌಡ, ಶ್ರಾವ್ಯ, ಶ್ರುತಿ ಪ್ರಕಾಶ್ ಜೊತೆ ಕಿಶನ್‌ ಡ್ಯಾನ್ಸ್‌ ಮಾಡಿದ್ದಾರೆ. ಅವರ ರೀಲ್ಸ್‌ಗಳು ಮಿಲಿಯನ್‌ಗಟ್ಟಲೇ ವಿವ್ಸ್‌ ಪಡೆದಿದೆ.

    ಇನ್ನೂ ತನ್ವಿ ರಾವ್ ಪ್ರಸ್ತುತ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ನಾಯಕ ವೈಷ್ಣವ್ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಕಿಶನ್ ಅವರು ‘ನಿನಗಾಗಿ’ (Ninagagi Serial) ಸೀರಿಯಲ್‌ನ ವಿಲನ್ ಆಗಿದ್ದಾರೆ.