Tag: BBK 12

  • BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ

    BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ

    ಬಿಗ್‌ಬಾಸ್ ಮನೆಯ ರೆಬೆಲ್ ಕಂಟೆಸ್ಟೆಂಟ್‌ ಅಶ್ವಿನಿ ಗೌಡ (Ashwini Gowda) ಗಳಗಳನೆ ಅತ್ತಿದ್ದಾರೆ. ಬಿಗ್‌ ಬಾಸ್ ಮನೆಯಲ್ಲಿ ಅವಮಾನ ಆಗ್ತಿದೆ. ಅದನ್ನ ಮರೆಯೋಕೆ ಸಾಧ್ಯವಿಲ್ಲ, ಮರೆತು ಮುಂದೆ ಹೋಗೋಕೂ ಸಾಧ್ಯವಿಲ್ಲ ಎಂದು ಬಿಕ್ಕಿದ್ದಾರೆ.

    ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಎಂದೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ತಿರಸ್ಕಾರ ಭಾವನೆ ಅನುಭವಿಸಿದ್ದಕ್ಕೆ ಬೇಸರದಿಂದ ಅತ್ತು ಕರೆದು ಗೋಳಾಡಿದ್ದಾರೆ.

    ಬಿಗ್‌ ಬಾಸ್ ಕನ್ನಡ (Bigg Boss Kannada) ಸೀಸನ್ 12ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್ ನಡೆಯೋದಕ್ಕೆ ಘೋಷಣೆಯಾಗಿತ್ತು. ಆದರೆ ಈ ಟಾಸ್ಕ್‌ನಿಂದ ಒಬ್ಬ ಕಂಟೆಸ್ಟೆಂಟ್‌ನ್ನು ಕೈಬಿಡಲು ಸೂಚಿಸುವ ಅಧಿಕಾರವನ್ನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿರೋ ಕಂಟೆಸ್ಟೆಂಟ್‌ಗಳಿಗೆ ನೀಡಲಾಗಿತ್ತು. ರಿಶಾ ಗೌಡ, ಸೂರಜ್ ಸಿಂಗ್ ಹಾಗೂ ಮ್ಯೂಟಂಟ್ ರಘು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಅಶ್ವಿನಿ ಗೌಡರನ್ನ ಟಾರ್ಗೆಟ್ ಮಾಡಿದ್ದಾರೆ.

    ʻಈಗಲೇ ಸರ್ವಾಧಿಕಾರಿ ಧೋರಣೆ ತೋರಿಸುತ್ತಿರುವ ಅಶ್ವಿನಿ ಗೌಡ ಕ್ಯಾಪ್ಟನ್ ಆಗ್ಬಿಟ್ರೆ ಉಳಿದ ಕಂಟೆಸ್ಟೆಂಟ್‌ಗಳಿಗೆ ಕಷ್ಟ ಆಗಬಹುದುʼ ಎಂಬ ಕಾರಣ ಕೊಟ್ಟು ಕ್ಯಾಪ್ಟೆನ್ಸಿ ಟಾಸ್ಕ್‌ನಕಿಂದ ಹೊರಗಿಟ್ಟಿದ್ದಾರೆ. ಈ ವಿರೋಧದಿಂದ ತೀವ್ರವಾಗಿ ಅಸಮಾಧಾನಗೊಂಡ ಅಶ್ವಿನಿ ನೊಂದು ಬಿಕ್ಕಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್‌ನಿಂದ ದೂರ ಉಳಿಯುವಂತೆ ಮಾಡಿದ್ದಕ್ಕೆ ʻಬಿಗ್‌ಬಾಸ್ ಮನೆಯಲ್ಲಿ ತಮಗೆ ಅವಮಾನ ಆಗುತ್ತಿದೆ. ಇದನ್ನ ಯಾವತ್ತೂ ಮರೆಯೋಕಾಗಲ್ಲ. ರೇಸ್‌ಗೆ ಬಿಡದಿದ್ದರೆ ಯಾವ್ ಕುದುರೆ ಸ್ಟ್ರಾಂಗ್‌ ಅಂತ ಹೇಗೆ ಡಿಸೈಡ್ ಮಾಡೋದುʼ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಅಶ್ವಿನಿ.

    ಇದು ಮೊದಲ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಆಗಿದ್ದು ಇಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋದು ಅಶ್ವಿನಿ ಆಸೆಯಾಗಿತ್ತು. ಇದ್ರಿಂದ ಬೇಸರವಾಗಿ ತಿರಸ್ಕಾರವನ್ನ ಮನಸ್ಸಿಗೆ ತೆಗೆದುಕೊಂಡು ಅಶ್ವಿನಿ ಗೌಡ ಗಳಗಳನೆ ಅತ್ತಿದ್ದಾರೆ.

  • ಬಿಗ್‌ಬಾಸ್‌ನಿಂದ ಇದುವರೆಗೂ 1 ರೂಪಾಯಿ ಹಣ ಬಂದಿಲ್ಲ ಎಂದ ಕಂಟೆಸ್ಟೆಂಟ್‌ ಸತೀಶ್

    ಬಿಗ್‌ಬಾಸ್‌ನಿಂದ ಇದುವರೆಗೂ 1 ರೂಪಾಯಿ ಹಣ ಬಂದಿಲ್ಲ ಎಂದ ಕಂಟೆಸ್ಟೆಂಟ್‌ ಸತೀಶ್

    ಬಿಗ್‌ಬಾಸ್ (Bigg Boss Kannada 12) ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿದ್ದ ಸತೀಶ್ (Satish) ಈಗ ಎಲಿಮಿನೇಶನ್ ಆಗುವ ಮೂಲಕ ಹೊರಬಂದಿದ್ದಾರೆ. ವೇದಿಕೆಯಲ್ಲೇ ಈ ಕಾರ್ಯಕ್ರಮಕ್ಕಾಗಿ 25 ಲಕ್ಷದ ಬಟ್ಟೆ ಖರೀದಿಸಿರುವುದಾಗಿ ಸತೀಶ್ ಹೇಳಿದ್ದರು. ಹಾಗಾದರೆ ಸ್ಪರ್ಧಿಯಾಗಿ ಒಳ ಹೋಗಲು ಅದೆಷ್ಟು ಸಂಭಾವನೆ ಪಡೆದಿರಬಹುದು ಅನ್ನೋ ಕುತೂಹಲ ಸಹಜ. ಆದರೆ, ‘ಪಬ್ಲಿಕ್ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಡಾಗ್ ಸತೀಶ್, ಬಿಗ್‌ಬಾಸ್ ತಮಗೆ ನೀಡಿರುವ ಸಂಭಾವನೆ ವಿಚಾರ ಬಿಚ್ಚಿಟ್ಟಿದ್ದಾರೆ. ಇದುವರೆಗೂ ಬಿಗ್‌ಬಾಸ್ ಕಾರ್ಯಕ್ರಮದಿಂದ ತಮಗೆ 1 ರೂಪಾಯಿ ಹಣ ತಮಗೆ ಬಂದಿಲ್ಲ ಅನ್ನೋದಾಗಿ ಹೇಳಿದ್ದಾರೆ.

    ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹೋಗುವ ವೇಳೆ ಪ್ರತಿ ಸ್ಪರ್ಧಿಯೂ ಒಂದೊಂದು ಮೊತ್ತದ ಸಂಭಾವನೆ ಪಡೆದಿರುತ್ತಾರೆ. ಪ್ರತಿ ವಾರವೂ ಅವರಿಗೆ ಹಣ ಸಂದಾಯವಾಗುತ್ತದೆ. ಆದರೆ, ಕಾರ್ಯಕ್ರಮಕ್ಕೆ ಎಂಟ್ರಿ ಕೊಡುವ ಪೂರ್ವದಲ್ಲೂ ಅಡ್ವಾನ್ಸ್ ಹಣ ಹಾಗೂ ಬಳಿಕವೂ ತಮಗೆ ಹಣ ಬಂದಿಲ್ಲ ಎಂದಿದ್ದಾರೆ ಸತೀಶ್. ಇದನ್ನೂ ಓದಿ: 100 ಕೋಟಿ ನಾಯಿ ಲಾಂಚ್ ಮಾಡ್ತೀನಿ- ಸವಾಲೆಸೆದ ಬಿಗ್‌ಬಾಸ್ ಸ್ಪರ್ಧಿ ಸತೀಶ್

    ‘ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಆಗಿಲ್ಲ. ನಿಮಗೆ ಹಣ ಟ್ರಾನ್ಸ್‌ಫರ್‌ ಆಗುತ್ತಿಲ್ಲ ಎಂದು ಟೀಮ್ ಹೇಳಿತ್ತು. ಆಗ ನಾನು ಹಣವನ್ನ ಕೊಡಿ ಅಂತ ನಿಮ್ಮನ್ನು ಕೇಳಿದ್ನಾ ಎಂದೆ. ನನಗೆ ಹಣ ಮುಖ್ಯವಲ್ಲ, ನನ್ನ ಟರ್ನ್ವೋವರ್ ಚೆನ್ನಾಗಿದೆ. ನನಗೆ ಜನರ ಮುಂದೆ ಗುರುತಿಸಿಕೊಳ್ಳುವುದು ಮುಖ್ಯ. ವೇದಿಕೆ ಮುಖ್ಯವಾಗಿತ್ತು. ನಾನು ಒಂದು ಸಿನಿಮಾ ಕಾರ್ಯಕ್ರಮಕ್ಕೆ ನಾಯಿ ಹಿಡಿದುಕೊಂಡು ಹೋದ್ರೆ ಸಾಕು ಲಕ್ಷ ಲಕ್ಷ ಹಣ ಕೊಡ್ತಾರೆ. ಬಿಗ್‌ಬಾಸ್‌ ಮನೆಯಲ್ಲಿ ಇರೋವ್ರೆಲ್ಲ ಗೆಸ್ಟ್ ಆಗಿ ಹೋದ್ರೆ ಮೂವತ್ತೋ ನಲವತ್ತೋ ಸಾವಿರ ಕೊಡ್ತಾರಂತೆ’ ಎಂದಿದ್ದಾರೆ.

    ಈ ಮೂಲಕ ಬಿಗ್‌ಬಾಸ್ ಕಾರ್ಯಕ್ರಮದಿಂದ ಬರುವ ಹಣ ತಮಗೆ ಮುಖ್ಯವಲ್ಲ ಅಂತ ಸತೀಶ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂತಾರ ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ: ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ

  • ಅ.18, 19ಕ್ಕೆ ಬಿಗ್ ಬಾಸ್ ಕನ್ನಡ ಮಿಡ್ ಸೀಸನ್ ಫಿನಾಲೆ

    ಅ.18, 19ಕ್ಕೆ ಬಿಗ್ ಬಾಸ್ ಕನ್ನಡ ಮಿಡ್ ಸೀಸನ್ ಫಿನಾಲೆ

    ಬಿಗ್ ಬಾಸ್ ಕನ್ನಡ ಸೀಸನ್ 12, Expect The Unexpected ಎಂಬ ಥೀಮ್ ನಲ್ಲಿ ಅತ್ಯಂತ ರೋಚಕವಾಗಿ ಸಾಗುತ್ತಾ ಬಂದಿದೆ. ಈಗ ಇನ್ನೊಂದು ಅನಿರೀಕ್ಷಿತವನ್ನು ಕೊಡಲಿದೆ ಬಿಗ್ ಬಾಸ್! ಅದುವೇ ಮಿಡ್ ಸೀಸನ್ ಫಿನಾಲೆ.

    ಹೌದು. ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ.

    ಈ ಫಿನಾಲೆಯಲ್ಲಿ ಭಾರೀ `ಎಲಿಮಿನೇಷನ್’ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ. ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ.

    ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ ಆಟಗಳನ್ನು ಆಡುವುದಲ್ಲದೇ, ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆ ನೀಡಲಿದ್ದಾರಂತೆ. ಒಟ್ಟು 6 ಗಂಟೆಗಳ ಮನರಂಜನಾ ಸಂಭ್ರಮ ಇದಾಗಿದೆ. ಅಕ್ಟೋಬರ್ 18 ಮತ್ತು 19 ರಂದು ಕಲರ್ಸ್ ಕನ್ನಡದಲ್ಲಿ ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಈಗಿನಿಂದಲೇ ಕುತೂಹಲ ಮೂಡಿಸಿದೆ.

  • ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್‌ ಬಾಸ್‌ ನಿಲ್ಲಲ್ಲ – ಮೌನ ಮುರಿದ ಕಿಚ್ಚ ಸುದೀಪ್‌

    ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್‌ ಬಾಸ್‌ ನಿಲ್ಲಲ್ಲ – ಮೌನ ಮುರಿದ ಕಿಚ್ಚ ಸುದೀಪ್‌

    – ಡಿಕೆ ಸಾಹೇಬ್ರು, ನಲಪಾಡ್‌ಗೆ ಧನ್ಯವಾದ ಎಂದ ಕಿಚ್ಚ

    ಜಾಲಿವುಡ್‌ ಸ್ಟುಡಿಯೋ ಮತ್ತೆ ತೆರೆಯಲು ಅನುಮತಿ ನೀಡಿದ ಬಳಿಕ ಬಿಗ್‌ ಬಾಸ್‌ ಶೂಟಿಂಗ್‌ ಮತ್ತೆ ಶುರುವಾಗಿದೆ. ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಎರಡನೇ ವಾರದ ಪಂಚಾಯಿತಿ ಇಂದು (ಅಕ್ಟೋಬರ್ 11) ನಡೆದಿದೆ. ಸುದೀಪ್ ಅವರು ಪ್ರತಿಬಾರಿಯಂತೆ ಈ ಬಾರಿಯೂ ಸಹ ಸ್ಪರ್ಧಿಗಳ ತಪ್ಪು-ಸರಿಗಳ ಪರಾಮರ್ಶೆ ಮಾಡಿದ್ರು. ಕಾಕ್ರೂಚ್ ಸುಧಿಗೆ ಕೊಟ್ಟಿದ್ದ ಅಸುರ ಟಾಸ್ಕ್​ ಬಗ್ಗೆ ಸುದೀಪ್ ಚರ್ಚೆ ಮಾಡಿದ್ರು.

    ಇದೇ ವೇಳೆ ವಿವಾದದ ಬಗ್ಗೆ ಕಿಚ್ಚ ಸುದೀಪ್‌ (Kichcha Sudeep) ಮೌನ ಮುರಿದು ಮಾತನಾಡಿದ್ರು. ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್ ಬಾಸ್ ಸುಲಭವಾಗಿ ನಿಲ್ಲಲ್ಲ. ಇಲ್ಲಿ ಆಗಿದ್ದೇ ಬೇರೆ.. ಹೊರಗಡೆ ನಡಿತಾ ಇದ್ದಿದ್ದೆ ಬೇರೆ. ಇಲ್ಲಿ ನಡೆದಿರುವ ವಿಚಾರಕ್ಕೂ ಬಿಗ್‌ ಬಾಸ್‌ಗೂ, ಕಲರ್ಸ್‌ ಕನ್ನಡಕ್ಕೂ ಯಾವುದೇ ಸಂಬಂಧ ಇಲ್ಲ. ವಿವಾದ ಬಂದಿದ್ದು ನಾವು ಶೋ ನಡೆಸುತ್ತಿದ್ದ ಜಾಗದ್ದು. ಕೆಲವೊಮ್ಮೆ ಖಾಲಿ ಜಾಗಕ್ಕೆ ಒಂದು ಅಡ್ರೆಸ್‌ ಬೇಕಾಗುತ್ತೆ. ಆ ಅಡ್ರೆಸ್ಸೆ ಬಿಸ್‌ ಬಾಸ್‌ ಆಗಿ ಹೋಯ್ತು ಅಂತ ಕಿಚ್ಚ ಸ್ಪಷ್ಟನೆ ಕೊಟ್ರು.

    ಇಲ್ಲಿ ನಡೆದ ಘಟನೆಗೂ ಬಿಗ್‌ ಬಾಸ್‌ಶೋಗೂ ಯಾವುದೇ ಸಂಬಂಧ ಇಲ್ಲ. ಬಿಗ್ ಬಾಸ್ ಎಷ್ಟೋ ಜನಕ್ಕೆ ಅನ್ನಹಾಕಿದೆ, ದಾರಿದೀಪ ಆಗಿದೆ. ಅತಿದೊಡ್ಡ ಶೋ ಕೆಲವರ ಕಣ್ಣು ಕುಕ್ಕುತ್ತಾ ಇರುತ್ತೆ. ಖಾಲಿ ಜಾಗಕ್ಕೆ ಬಿಗ್ ಬಾಸ್ ಅನ್ನೋ ಹೆಸರಿಟ್ಟರೂ ಅದಕ್ಕೊಂದು ತೂಕ ಇದೆ ಎಂದು ಹೇಳಿದ್ರು.

    ಇಂತಹ ಸಂದರ್ಭದಲ್ಲಿ ಶೋ ಮತ್ತೆ ಶುರುವಾಗಲು ಕಾರಣರಾದ ಡಿಕೆ ಸಾಹೇಬ್ರಿಗೆ ಹಾಗೂ ನನ್ನ ಸ್ನೇಹಿತ ನಲಪಾಡ್‌ ಅವರಿಗೆ ಧನ್ಯವಾದ ಹೇಳಲೇಬೇಕು. ಹಾಗೆಯೇ ಸಪೋರ್ಟ್‌ ಮಾಡಿದ ಆಡಳಿತ ಮಂಡಳಿಯ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ರು.

  • ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡ್ತಿರುವ ವೀಡಿಯೋ ರಿಲೀಸ್ ಮಾಡಿದ ಬಿಗ್‌ಬಾಸ್ ಟೀಂ

    ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡ್ತಿರುವ ವೀಡಿಯೋ ರಿಲೀಸ್ ಮಾಡಿದ ಬಿಗ್‌ಬಾಸ್ ಟೀಂ

    ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್ ಸ್ಟುಡಿಯೋಗೆ (Jollywood Studios) ಬೀಗ ಜಡಿದ ಪರಿಣಾಮ ಬಿಗ್‌ಬಾಸ್ ಸ್ಪರ್ಧಿಗಳನ್ನ (Bigg Boss Contestants) ಅಲ್ಲಿಂದ ಸ್ಥಳಾಂತರಗೊಳಿಸಿ ಚಿತ್ರೀಕರಣಕ್ಕೆ ಫುಲ್‌ಸ್ಟಾಪ್ ಇಡಲಾಗಿತ್ತು. ಬಳಿಕ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ ಕಳುಹಿಸಿದ ಬಳಿಕ ರಾತ್ರೋರಾತ್ರಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳನ್ನ ವಾಪಸ್ ಕರೆದುಕೊಂಡು ಬರಲಾಯಿತು. ಈ ದೃಶ್ಯ ಬಿಗ್‌ಬಾಸ್ (Bigg Boss Kannada 12) ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಸಂಭವ ಇದೆ. ಆ ಕುರಿತು ಪ್ರೋಮೋ ರಿಲೀಸ್ ಮಾಡಿದೆ ಟೀಂ.

    17 ಸ್ಪರ್ಧಿಗಳನ್ನೊಳಗೊಂಡ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದು ಎಲ್ಲರೂ ಮನೆಗೆ ಎಂಟ್ರಿ ಕೊಡ್ತಿರುವ ವೀಡಿಯೋ ಇದೀಗ ರಿಲೀಸ್ ಆಗಿದೆ. ಒಟ್ಟು 17 ಸ್ಪರ್ಧಿಗಳನ್ನ ಬಿಗ್‌ಬಾಸ್ ಹೌಸ್ ಹತ್ತಿರದ ಈಗಲ್‌ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಮಂಗಳವಾರ ರಾತ್ರಿ 7 ಗಂಟೆಯಿಂದ ಗುರುವಾರದವರೆಗೂ ಇದ್ದ ಸ್ಪರ್ಧಿಗಳು ರಾತ್ರೋರಾತ್ರಿ ಮತ್ತೆ ಬಿಗ್‌ಬಾಸ್ ಹೌಸ್‌ಗೆ ವಾಪಸ್ಸಾಗಿದ್ದಾರೆ.

    ಹೀಗೆ ವಾಪಸ್ಸಾದ ಸ್ಪರ್ಧಿಗಳನ್ನ ವೆಲ್‌ಕಮ್ ಬ್ಯಾಕ್ ಎಂದು ಹೇಳಿ ಬಿಗ್‌ಬಾಸ್ ಸ್ಪಾಗತಿಸುವ ದೃಶ್ಯವನ್ನ ವಾಹಿನಿಯು ಪ್ರೊಮೋದಲ್ಲಿ ತೋರಿಸಿದೆ. ಹೀಗೆ ರಾತ್ರೋರಾತ್ರಿ ಎಲ್ಲಾ ಸ್ಪರ್ಧಿಗಳು ಮತ್ತೆ ಬಿಗ್ ಮನೆಗೆ ಆಗಮಿಸಿದ್ದು, ಅಲ್ಪವಿರಾಮ ಪಡೆದಿದ್ದ ದೊಡ್ಮನೆಯ ಆಟ ಮತ್ತೆ ಶುರುವಾಗಿದೆ.

  • ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್ ಇರುತ್ತಾ?

    ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್ ಇರುತ್ತಾ?

    ಬಿಗ್ ಬಾಸ್ ಸೀಸನ್ 12 (Bigg Boss 12) ಎರಡನೇ ವಾರಕ್ಕೆ ಬಿಗ್ ಶಾಕ್‌ಗೆ ಒಳಗಾಗಿದೆ. ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಗಕ್ಕೆ ಮಾಲಿನ್ಯ ನಿಯಂತ್ರ ಮಂಡಳಿಯಿಂದ ನೋಟಿಸ್ ನೀಡಿ ಬೀಗ ಜಡಿಯಲಾಗಿತ್ತು. ಹೀಗಾಗಿ ಬಿಗ್ ಬಾಸ್ ಸ್ಪರ್ಧಿಗಳನ್ನ ಎರಡು ದಿನಗಳ ಕಾಲ ಈಗಲ್‌ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ನಂತರ ಡಿಸಿಎಂ ಸೂಚನೆ ಮೆರೆಗೆ ಈಗ ಬಿಗ್ ಬಾಸ್ ಓಪನ್ ಆಗಿದೆ. ಆದರೆ ಶೋ ಶೂಟಿಂಗ್ ಪ್ರಾರಂಭ ಮಾಡಿಲ್ಲ.

    ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರಣದಿಂದ ಈ ವಾರದ ವೀಕೆಂಡ್ ಶೋ ಹೇಗಿರುತ್ತೆ? ಎಲಿಮಿನೇಷನ್ (Elimination) ಇರುತ್ತಾ? ಅಥವಾ ಎಲಿಮಿನೇಷನ್ ಪ್ರಕ್ರಿಯೆಯಿಂದ ನಾಮಿನೇಟ್ ಆದ ಸ್ಪರ್ಧಿಗಳು ಬಚಾವ್ ಆಗ್ತಾರಾ ಅನ್ನೋ ಕುತೂಹಲ ಮೂಡಿದೆ.

    ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿತ್ತು. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್ ಹೊರ ಬಂದಿದ್ದರು. ಆದ್ರೆ ಬಿಗ್ ಬಾಸ್ ಮನೆಗೆ ಉಂಟಾದ ಈ ತೊಡಕುಗಳ ಮಧ್ಯೆ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಜಾಸ್ತಿಯಾಗಿದೆ.

    ಆದರೆ ಈವರೆಗೂ ಬಿಗ್ ಬಾಸ್‌ನಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಬಿಗ್ ಬಾಸ್ ಮನೆ ಓಪನ್ ಆಗಿದೆ. ಒಳಗಡೆ ಇನ್ನೂ ಶೂಟಿಂಗ್ ಆರಂಭವಾಗಿಲ್ಲದ ಕಾರಣದಿಂದ ವೀಕೆಂಡ್ ಶೋ ಯಾವ ರೀತಿ ಇರುತ್ತೆ ಅನ್ನೋ ಪ್ರಶ್ನೆಗಳು ಎದುರಾಗಿವೆ. ಒಂದು ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಸಿಕ್ಕು ಶೂಟಿಂಗ್ ಶುರುವಾದ್ರೆ, ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಆಚೆ ಬರಲಿದ್ದಾರೆ ಕಾದು ನೋಡಬೇಕಿದೆ.

    ಸದ್ಯ ಒಂಟಿಗಳಲ್ಲಿ ಜಾಹ್ನವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ ನಾಮಿನೇಟ್ ಆಗಿದ್ರೆ, ಜಂಟಿಗಳ ಪೈಕಿ, ಸ್ಪಂದನಾ ಸೋಮಣ್ಣ-ಮಾಳು ನಿಪ್ಪನಾಳ, ಅಭಿಷೇಕ್-ಅಶ್ವಿನಿ ಎಸ್, ರಾಶಿಕಾ ಶೆಟ್ಟಿ-ಮಂಜು ಭಾಷಿಣಿ ನಾಮಿನೇಟ್ ಆಗಿದ್ದಾರೆ.

  • ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ಜಾಲಿವುಡ್ ಸ್ಟುಡಿಯೋಸ್‌ (Jollywood Studios) ಬೀಗ ಓಪನ್ ಆಗಿದೆ. ಒಂದು ಕಡೆ ಜಾಲಿವುಡ್ ಹಾಗೂ ಬಿಗ್‌ಬಾಸ್‌ಗೆ (Bigg Boss Kannada 12) ಗುಡ್ ನ್ಯೂಸ್ ಸಿಕ್ಕಿದೆ. ರಾತ್ರೋರಾತ್ರಿ ಬಿಗ್‌ಬಾಸ್ ಸ್ಪರ್ಧಿಗಳು ವಾಪಸ್ ಬಿಗ್‌ಹೌಸ್ ಸೇರಿದ್ದಾರೆ. ಆದರೆ, ಬಿಗ್‌ಬಾಸ್ ಮನೆಯೊಳಗೆ ಹೋದರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ.

    ಬಿಗ್‌ಬಾಸ್ ಆಡಳಿತ ಮಂಡಳಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆದೇಶ ಕಾಪಿ ಬರೋವರೆಗೂ ಶೂಟಿಂಗ್ ಶುರು ಮಾಡಲು ಹಿಂದೇಟು ಹಾಕಿದೆ. ಡಿಸಿಎಂ ಡಿಕೆ ಶಿವಕುಮಾರ್ ಜಾಲಿವುಡ್ ಸ್ಟುಡಿಯೋಸ್‌ ಓಪನ್ ಮಾಡಿಸಿದರೂ ಶುರುವಾಗಿಲ್ಲ ಬಿಗ್‌ಬಾಸ್ ಶೂಟಿಂಗ್. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಸಿಗುವ ತನಕ ಬಿಗ್‌ಬಾಸ್ ಆಯೋಜಕರ ತಂಡ ಶೂಟಿಂಗ್ ಶುರು ಮಾಡುತ್ತಿಲ್ಲ. ಇದನ್ನೂ ಓದಿ: ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಅಂದಹಾಗೆ ಇನ್ನು ಎರಡು ದಿನಗಳ ಕಾಲ ಆಗುವಷ್ಟು ಎಪಿಸೋಡ್ ಬ್ಯಾಂಕಿಂಗ್ ಇರುವ ಧೈರ್ಯ ಬಿಗ್‌ಬಾಸ್ ಆಡಳಿತ ಮಂಡಳಿಗಿದೆ. ಹೀಗಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಸಿಗುವವರೆಗೂ ಕಾಯುತ್ತಿದೆ. ಬಿಗ್‌ಬಾಸ್ ಆಡಳಿತ ಮಂಡಳಿ. ‘ಪಬ್ಲಿಕ್ ಟಿವಿ’ಗೆ ಬಿಗ್‌ಬಾಸ್ ಆಡಳಿತ ಮಂಡಳಿಯ ಉನ್ನತ ಮೂಲಗಳ ಮಾಹಿತಿ ಸಿಕ್ಕಿದೆ.

  • `ಬಿಗ್ ಬಾಸ್’ಗೆ ರಿಲೀಫ್ ಕೊಡುತ್ತಾ ಸರ್ಕಾರ? – ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?

    `ಬಿಗ್ ಬಾಸ್’ಗೆ ರಿಲೀಫ್ ಕೊಡುತ್ತಾ ಸರ್ಕಾರ? – ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?

    – ತಪ್ಪು ಸರಿಪಡಿಸಿಕೊಳ್ಳಲು ಅವಕಾಶಕ್ಕೆ ಡಿಕೆಶಿ ಸೂಚನೆ

    ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಆರೋಪದಿಂದಾಗಿ ಬಂದ್ ಆಗಿರೋ `ಬಿಗ್‌ಬಾಸ್’ (Bigg Boss Kannada) ರಿಯಾಲಿಟಿ ಶೋಗೆ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಮಾದರಿ ಕ್ಷಣಕ್ಕೊಂದು ತಿರುವು ಸಿಗುತ್ತಿದ್ದು, ಇಡೀ ಪ್ರಸಂಗ ಗೊಂದಲಮಯವಾಗಿದೆ. ಇವತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಮಧ್ಯಸ್ಥಿಕೆ ವಹಿಸಿ, ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೂಡ ಕೊಟ್ಟಿದ್ದರು.

    ಡಿಕೆಶಿ ಸೂಚನೆ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಡಿಸಿಯನ್ನು ಭೇಟಿಯಾಗಿದ್ದ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ, 10 ದಿನಗಳ ಕಾಲಾವಕಾಶ ನೀಡುವಂತೆ ಪರಿಪರಿಯಾಗಿ ಬೇಡಿಕೊಂಡಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್, ಕೋರ್ಟ್ ಅಫಿಡವಿಟ್ ಸಲ್ಲಿಕೆ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಪಡೆದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ವರ್ಗಾವಣೆ ಮಾಡಿದ್ದಾರೆ.

    ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಜಾಲಿವುಡ್ ಸ್ಟುಡಿಯೋಸ್ ಮೇಲಿನ ಹಳೆ ಆರೋಪದ ಅರ್ಜಿ ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೂ ನಾಳೆ ಜಾಲಿವುಡ್ ಅರ್ಜಿ ಸಲ್ಲಿಸಲಿದ್ದು, 10ರಿಂದ 15 ದಿನಗಳ ತಾತ್ಕಾಲಿಕ ರಿಲೀಫ್ ನೀಡೋ ಸಾಧ್ಯತೆ ಇದೆ. ಆದ್ರೆ, ಈಗಾಗಲೇ ನಮಗೆ ಜಿಲ್ಲಾಡಳಿತದಿಂದ ರಿಲೀಫ್ ಸಿಕ್ಕಿದೆ ಅಂತ ಜಾಲಿವುಡ್ ಪರ ವಕೀಲರು ಹೇಳಿದ್ದಾರೆ. ಆದ್ರೆ, ಇದನ್ನು ನಿರಾಕರಿಸಿರೋ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ, ಪ್ರಕರಣ ಕೋರ್ಟ್‌ನಲ್ಲಿದೆ. ಮಾನವೀಯತೆ ದೃಷ್ಟಿಯಿಂದ ಏನಾದ್ರೂ ಮಾಡಬಹುದು ಅಂದಿದ್ದಾರೆ.

    ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?
    * ಜಾಲಿವುಡ್ ಸ್ಟುಡಿಯೋದಲ್ಲಿ 400ಕ್ಕೂ ಕಾರ್ಮಿಕರಿದ್ದಾರೆ
    * ಬಿಗ್‌ಬಾಸ್ ರಿಯಾಲಿಟಿ ಶೋ ಕೂಡ ನಡೆಯುತ್ತಿದೆ
    * ಏಕಾಏಕಿ ಬಂದ್ ಮಾಡಿದ್ರೆ ಕಾರ್ಮಿಕರಿಗೆ ಕುತ್ತು
    * ತಮ್ಮಿಂದ ತಪ್ಪಾಗಿದೆ.. ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ
    * 10 ದಿನಗಳ ಸಮಯಾವಕಾಶ ಕೊಟ್ಟರೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ

    ರಾಮನಗರ ಜಿಲ್ಲಾಧಿಕಾರಿಯ ನಿಲುವೇನು..?
    * ಜಾಲಿವುಡ್ ಸ್ಟುಡಿಯೋ 10 ದಿನಗಳ ಕಾಲಾವಕಾಶ ಕೇಳಿದೆ
    * ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೇಳಿದ್ದಾರೆ
    * ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ವರ್ಗಾಯಿಸಿದ್ದೇವೆ
    * ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ

    ಮಾಲಿನ್ಯ ನಿಯಂತ್ರಣ ಮಂಡಳಿ ಹೇಳೋದೇನು…?
    * ಈ ಕೇಸ್ ಕೋರ್ಟಿನಲ್ಲಿದೆ; 10 ದಿನಗಳ ಕಾಲಾವಕಾಶ ನಿರ್ಧರಿಸಿಲ್ಲ
    * ಬಿಗ್‌ಬಾಸ್‌ಗೂ ಸ್ಟುಡಿಯೋಗೆ ಸಂಬAಧವಿಲ್ಲ
    * ಅಮ್ಯೂಸ್‌ಮೆಂಟ್ ಪಾರ್ಕ್‌ನಿಂದ ಸಮಸ್ಯೆ ಉಂಟಾಗಿದೆ
    * ಏಕಾಏಕಿ ಮುಚ್ಚಿಲ್ಲ; 3 ಬಾರಿ ನೋಟಿಸ್ ಕೊಟ್ಟಿದ್ದೇವೆ
    * ಅಫಿಡವಿಟ್ ಜೊತೆ ಮನವಿ ಕೊಟ್ಟರೆ ಪರಿಶೀಲನೆ ನಡೆಸಬಹುದು
    * ಕ್ಲೋಸರ್ ಆದೇಶ ಶಾಶ್ವತ, ತಾತ್ಕಾಲಿಕವೂ ಅಲ್ಲ.
    * ನಿಯಮ ಉಲ್ಲಂಘನಗೆ ದಂಡ ಕಟ್ಟಬೇಕಾಗುತ್ತದೆ.

  • ಬಿಗ್‌ ಬಾಸ್‌ ತಂಡಕ್ಕೆ ಮತ್ತೆ ಶಾಕ್‌ – ಕೆಲವೇ ಹೊತ್ತಲ್ಲಿ ಈಗಲ್‌ಟನ್ ರೆಸಾರ್ಟ್‌ನಿಂದ 17 ಸ್ಪರ್ಧಿಗಳು ಶಿಫ್ಟ್ ಬೇರೆಡೆಗೆ ಶಿಫ್ಟ್‌

    ಬಿಗ್‌ ಬಾಸ್‌ ತಂಡಕ್ಕೆ ಮತ್ತೆ ಶಾಕ್‌ – ಕೆಲವೇ ಹೊತ್ತಲ್ಲಿ ಈಗಲ್‌ಟನ್ ರೆಸಾರ್ಟ್‌ನಿಂದ 17 ಸ್ಪರ್ಧಿಗಳು ಶಿಫ್ಟ್ ಬೇರೆಡೆಗೆ ಶಿಫ್ಟ್‌

    ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ನಿರೂಪಣೆಯ, ಕನ್ನಡ ಕಿರುತೆರೆಯ ಅತಿ ದೊಡ್ಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12ರ (BBK 12) ಆಟ ಆರಂಭವಾಗಿ ಎರಡೇ ವಾರಕ್ಕೆ ಬ್ರೇಕ್ ಬಿದ್ದಿದೆ. ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದ ಹಿನ್ನೆಲೆ ಎಲ್ಲ ಸ್ಪರ್ಧಿಗಳನ್ನ ಈಗಲ್‌ಟನ್ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿತ್ತು. ಇದೀಗ ಈಗಲ್‌ಟನ್‌ ರೆಸಾರ್ಟ್‌ನಿಂದಲೂ (Eagleton Resort) ಸ್ಪರ್ಧಿಗಳನ್ನ ಬೇರೆಗೆಡೆ ಶಿಫ್ಟ್‌ ಮಾಡಲು ತಯಾರಿ ನಡೆದಿದೆ.

    ಮಂಗಳವಾರ ರಾತ್ರಿಯಿಂದಲೇ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ದೊಡ್ಮನೆ ಸ್ಪರ್ಧಿಗಳು (Bigg Boss Contestants) ತಂಗಿದ್ದಾರೆ. ಅದಕ್ಕಾಗಿ 9 ರೂಮ್‌ಗಳನ್ನು ಬಿಗ್‌ ಬಾಸ್‌ ಬುಕ್‌ ಮಾಡಿಕೊಂಡಿತ್ತು. ಆದ್ರೆ ಇದಕ್ಕೂ ಮೊದಲೇ ಬೇರೆ ಕಾರ್ಯಕ್ರಮಕ್ಕೆ ರೆಸಾರ್ಟ್‌ ಬುಕ್‌ ಆಗಿರುವ ಕಾರಣ, ಸಂಜೆ 7 ಗಂಟೆ ಒಳಗೇ ಚೆಕ್‌ ಔಟ್‌ ಮಾಡುವಂತೆ ಸೂಚಿಸಲಾಗಿತ್ತು. ಆದ್ರೆ ಬಿಗ್‌ ಬಾಸ್‌ ಸಮಯಾವಕಾಶ ಕೇಳಿದ್ದು, ಕೆಲವೇ ಹೊತ್ತಿನಲ್ಲೇ 17 ಸ್ಪರ್ಧಿಗಳು ಬೇರೆಡೆಗೆ ಶಿಫ್ಟ್‌ ಮಾಡಲು ತಯಾರಿ ನಡೆದಿದೆ.

    ಮೂಲಗಳ ಪ್ರಕಾರ, ದೇವನಹಳ್ಳಿ ಸಮೀಪದ ಗೋಲ್ಡನ್ ರೆಸಾರ್ಟ್‌ಗೆ ತೆರಳುವ ಸಾಧ್ಯತೆಯಿದೆ. ಅದಕ್ಕಾಗಿ 2 ಟಿಟಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಿಗಳೂ ಕೂಡ ತಮ್ಮ ಲಗೇಜ್‌ಗಳನ್ನ ಪ್ಯಾಕ್‌ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

    ಬಿಗ್‌ಬಾಸ್ ಶೋ ನಡೆಯುತ್ತಿದ್ದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿಯಲಾಗಿದೆ. ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೇ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆ ಮಾಲಿನ್ಯ ಇಲಾಖೆ ಇಲಾಖೆ ನೋಟಿಸ್ ನೀಡಿದ ಬೆನ್ನಲ್ಲೇ ತಾಲ್ಲೂಕು ಆಡಳಿತ ಬೀಗ ಜಡಿದಿದೆ.

    ಹೀಗಾಗಿ ಬಿಗ್‌ಬಾಸ್ ಸ್ಪರ್ಧಿಗಳಾದ ಕಾವ್ಯಾ, ಗಿಲ್ಲಿ ನಟ, ಡಾಗ್ ಸತೀಶ್, ಚಂದ್ರಪ್ರಭ, ಅಭಿಶೇಕ್, ಅಶ್ವಿನಿ, ಮಂಜುಭಾಷಿಣಿ, ರಾಶಿಕಾ, ಕಾಖ್ರೊಚ್ ಸುಧಿ, ಮಲ್ಲಮ್ಮ, ಜಾಹ್ನವಿ, ಧನುಷ್‌ಗೌಡ, ಧೃವಂತ್, ಅಶ್ವಿನಿಗೌಡ, ರಕ್ಷಿತಾ ಶೆಟ್ಟಿ ಸೇರಿ ಎಲ್ಲರೂ ಸ್ಪರ್ಧಿಗಳು ಬಿಗ್ ಮನೆಯಿಂದ ಹೊರಬಂದಿದ್ದಾರೆ.

  • ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ – ಲೀಗಲ್ ಆಕ್ಷನ್ ಬಗ್ಗೆ ಚರ್ಚೆ

    ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ – ಲೀಗಲ್ ಆಕ್ಷನ್ ಬಗ್ಗೆ ಚರ್ಚೆ

    ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಸೀಸನ್ 12 ಕಾರ್ಯಕ್ರಮ ಎರಡನೇ ವಾರಕ್ಕೆ ಕಾಲಿಟ್ಟಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಟ ಶುರು ಮಾಡುವ ಹೊತ್ತಿಗೆ ಬಿಗ್ ಬಾಸ್‌ಗೆ ಶಾಕ್ ಕೊಟ್ಟಿದ್ದಾರೆ ಅಧಿಕಾರಿಗಳು. ಹೀಗಾಗಿ ಜಾಲಿವುಡ್ ಸ್ಟುಡಿಯೋ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ತಂಡ ಕೆಂಡಾಮಂಡಲವಾಗಿದೆ.

    ಮಾಲಿನ್ಯ ನಿಯಂತ್ರಣ ಮಂಡಳಿ‌ ನೋಟೀಸ್ ಹಾಗೂ ಇತರೆ ವಿಚಾರಗಳನ್ನು ಗೌಪ್ಯವಾಗಿಟ್ಟಿರುವ ಜಾಲಿವುಡ್ ಆಡಳಿತ ಮಂಡಳಿ, ಎಲ್ಲಾ ಅನುಮತಿ ಇದೆ ಅಂತ ಸುಳ್ಳುಗಳನ್ನ ಹೇಳಿತ್ತು. ಇದರಿಂದ ಜಾಲಿವುಡ್ ತಂಡದ ವಿರುದ್ಧ ಬಿಗ್ ಬಾಸ್ ಆಡಳಿತ ಮಂಡಳಿ ಹರಿಹಾಯ್ದಿದೆ. ನಿನ್ನೆ ಜಾಲಿವುಡ್‌ಗೆ ಪೊಲೀಸ್ರು ಬರುವವರೆಗೂ ಗೌಪ್ಯತೆ ಕಾಪಾಡಿದ್ದ ಜಾಲಿವುಡ್, ಜಾಲಿವುಡ್ ಮ್ಯಾನೇಜ್ಮೆಂಟ್ ಎಡವಟ್ಟಿನಿಂದ 2 ದಿನ ಬಿಗ್ ಬಾಸ್ ಚಿತ್ರೀಕರಣ ಸ್ಥಗಿತವಾಗಿದೆ.

    ಈ ಎಲ್ಲಾ ಕಾರಣಗಳಿಂದ ಬಿಗ್ ಬಾಸ್ ಮುಂಬರುವ ಎಪಿಸೋಡ್ ಗಳಿಗೆ ತೊಂದರೆಯಾಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ ಆಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಯಿತ್ತಿದೆ. ಸ್ಪರ್ಧಿಗಳನ್ನ ಬಿಗ್ ಬಾಸ್ ಮನೆಯಿಂದ ಹೊರ ತಂದಿರುವ ಕಾರಣ, ಎರಡು ವಾರದ ಪರಿಶ್ರಮ ವ್ಯರ್ಥವೆಂದು ಅಸಮಧಾನ ಹೊರಹಾಕಿದೆ ಬಿಗ್ ಬಾಸ್ ಆಯೋಜನಾ ಮಂಡಳಿ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕು.