Tag: bbk 11

  • BBK 11: ಟಾಸ್ಕ್‌ನಲ್ಲಿ ರೊಚ್ಚಿಗೆದ್ದ ಸ್ಪರ್ಧಿ- ಹನುಮಂತನ ಬೆನ್ನಿಗೆ ಬಾರಿಸಿದ ಭವ್ಯಾ

    BBK 11: ಟಾಸ್ಕ್‌ನಲ್ಲಿ ರೊಚ್ಚಿಗೆದ್ದ ಸ್ಪರ್ಧಿ- ಹನುಮಂತನ ಬೆನ್ನಿಗೆ ಬಾರಿಸಿದ ಭವ್ಯಾ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇದೀಗ 100ನೇ ದಿನಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಟಿಕೆಟ್ ಬಾಚಿಕೊಳ್ಳಲು 9 ಸ್ಪರ್ಧಿಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇದೀಗ ಬಾಲ್ ಟಾಸ್ಕ್‌ನಲ್ಲಿ ಭವ್ಯಾ (Bhavya Gowda) ರೊಚ್ಚಿಗೆದ್ದಿದ್ದಾರೆ. ಆಟ ಆಡುವ ಭರದಲ್ಲಿ ಹನುಮಂತನ (Hanumantha) ಬೆನ್ನಿಗೆ ಭವ್ಯಾ ಬಾರಿಸಿದ್ದಾರೆ. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

    ಸಾಕಷ್ಟು ಚೆಂಡುಗಳನ್ನು ಸಂಗ್ರಹಿಸಿದ್ದ ಅವರು ಒಂದಷ್ಟು ತಂತ್ರಗಳನ್ನು ಬಳಸಲು ಪ್ರಯತ್ನಿಸಿದರು. ಬಟ್ಟೆಯಿಂದ ಬಾಸ್ಕೆಟ್ ಮುಚ್ಚಿಕೊಳ್ಳುವಂತಿಲ್ಲ ಎಂದು ಕ್ಯಾಪ್ಟನ್ ರಜತ್ ಹೇಳಿದರು. ಹಾಗಾಗಿ ಚೆಂಡುಗಳನ್ನು ಕಾಪಾಡಿಕೊಳ್ಳುವುದು ಇನ್ನಷ್ಟು ಕಷ್ಟ ಆಯಿತು. ಆ ಸಂದರ್ಭವನ್ನು ಬಳಸಿಕೊಂಡು ಹನುಮಂತ ಟಾಸ್ಕ್ ವೇಳೆ, ಭವ್ಯಾ ಸಂಗ್ರಹಿಸಿದ್ದ ಬಾಲ್ ಕಸಿಯಲು ಬಂದಿದ್ದಾರೆ. ಇದರಿಂದ ಹನುಮಂತ ಹಾಗೂ ಭವ್ಯಾ ಅವರ ಮಧ್ಯೆ ನಡೆದ ಗಲಾಟೆ ಕೈ, ಕೈ ಮಿಲಾಯಿಸೋ ಹಂತಕ್ಕೆ ತಲುಪಿದೆ.

    ಚೈತ್ರಾ, ಗೌತಮಿ, ಭವ್ಯಾ, ಧನರಾಜ್, ಹನುಮಂತ ಅವರಲ್ಲಿ ಬಾಲ್‌ಗಳನ್ನು ಬುಟ್ಟಿಗೆ ಹಾಕುವ ಹೋರಾಟ ನಡೆದಿದೆ. ಇದರಲ್ಲಿ ಪ್ರತಿಯೊಬ್ಬರು ಎದುರಾಳಿಯ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಕಿತ್ತುಕೊಳ್ಳಲು ಮುಂದಾಗುತ್ತಾರೆ. ಇದೇ ವೇಳೆ, ಹನುಮಂತ ಅವರು ಭವ್ಯಾ ಅವರ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಹಿಡಿದು ಎಳೆಯುತ್ತಾರೆ. ಹನುಮಂತ ತನ್ನ ಬುಟ್ಟಿಗೆ ಕೈ ಹಾಕಿದ್ದಕ್ಕೆ ಸಿಟ್ಟಿಗೆದ್ದ ಸ್ಪರ್ಧಿ ಭವ್ಯಾ ಅವರ ಟಾಸ್ಕ್ನಲ್ಲಿ ಹನುಮಂತು ಅವರ ಬೆನ್ನಿನ ಮೇಲೆ ಬಾರಿಸಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಕಾಲ್ತುಳಿತ ಪ್ರಕರಣ: ಮೃತ ರೇವತಿ ಪುತ್ರನನ್ನು ಭೇಟಿಯಾದ ಅಲ್ಲು ಅರ್ಜುನ್

    ಭವ್ಯಾ ಅವರು ಹೊಡೆದಿದ್ದಕ್ಕೆ ಖಂಡಿಸಿದ ಹನುಮಂತ ಅದನ್ನ ಕ್ಯಾಪ್ಟನ್ ರಜತ್ ಅವರ ಗಮನಕ್ಕೆ ತರುತ್ತಾರೆ. ರಜತ್ ಅವರು ಭವ್ಯಾ ನೀವು ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದು, ಆಟದಲ್ಲಿ ಪಾಜ್ ಕೊಡುತ್ತಾರೆ. ಇಷ್ಟಾದರೂ ಭವ್ಯಾ ಅವರು ಹನುಮಂತು ಮೇಲೆ ಕೈ ಮಾಡಿದ್ದು, ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ.

    ಇನ್ನೂ ಟಾಸ್ಕ್ ಮುಗಿದ ಬಳಿಕ ಭವ್ಯಾ ಹನುಮಂತನ ಬಳಿ ಹೋಗಿ ಕಾಲಿಗೆ ನಮಿಸುತ್ತಾರೆ. ತಪ್ಪಾಯ್ತು ಕ್ಷಮಿಸಿ ಬೇಕಂತ ಮಾಡಿದ್ದಲ್ಲ ಎಂದು ಹನುಮಂತನ ಬಳಿ ಭವ್ಯಾ ಕ್ಷಮೆಯಾಚಿಸಿದ್ದಾರೆ. ಈ ಕುರಿತು ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ನಡೆಯೇನು? ಎಂದು ಕಾಯಬೇಕಿದೆ.

  • BBK 11: ಪತಿ ಜೊತೆಗಿನ ಗೌತಮಿ ರೊಮ್ಯಾನ್ಸ್ ಕದ್ದು ನೋಡಿದ ದೋಸ್ತರಿಗೆ ಕಾಲೆಳೆದ ಕಿಚ್ಚ

    BBK 11: ಪತಿ ಜೊತೆಗಿನ ಗೌತಮಿ ರೊಮ್ಯಾನ್ಸ್ ಕದ್ದು ನೋಡಿದ ದೋಸ್ತರಿಗೆ ಕಾಲೆಳೆದ ಕಿಚ್ಚ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಇದೀಗ ಭಾನುವಾರ ಎಪಿಸೋಡ್‌ನಲ್ಲಿ ಹನುಮಂತ (Hanumantha) ಮತ್ತು ಧನರಾಜ್ (Dhanraj) ಫುಲ್ ಟ್ರೋಲ್ ಆಗಿರೋದನ್ನು ತೋರಿಸಿ ಸುದೀಪ್ (Sudeep) ಕಾಲೆಳೆದಿದ್ದಾರೆ. ಪತಿ ಜೊತೆ ಗೌತಮಿ ಇರುವಾಗ ಕದ್ದು ನೋಡಿದ್ದರ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಫುಲ್ ತಮಾಷೆ ಮಾಡಿದ್ದಾರೆ. ಈ ಕುರಿತು ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.

    ಗೌತಮಿ ದಂಪತಿಯನ್ನು ಹನುಮಂತ ಮತ್ತು ಧನರಾಜ್ ನೋಡುತ್ತಿದ್ದ ರೀತಿಗೆ ಸುದೀಪ್ ಸಖತ್ ಆಗಿ ಕಾಲೆಳೆದಿದ್ದಾರೆ. ಅವರ ಮಾತುಗಳಿಗೆ ಮನೆ ಸದಸ್ಯರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹೊರಗಡೆ ಟ್ರೋಲ್ ಅಂತ ನಡೆಯುತ್ತಿರುತ್ತೆ. ನಿಮಗೆ ಯಾವ ಥರ ಇಮೇಜ್ ಇರಬಹುದು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಅವರ ವಿಡಿಯೋಗಳನ್ನು ಬಿಗ್ ಬಾಸ್‌ನಲ್ಲಿ ಪ್ಲೇ ಮಾಡಿಸಿದ್ದಾರೆ.

    ಫ್ಯಾಮಿಲಿ ರೌಂಡ್ ವೇಳೆ, ಗೌತಮಿ ದಂಪತಿ ‘ಬಿಗ್ ಬಾಸ್’ನಲ್ಲಿ ಮದುವೆ ಆ್ಯನಿವರ್ಸರಿ ಆಚರಿಸುವ ಅವಕಾಶ ಸಿಕ್ಕಿತ್ತು. ಈ ವೇಳೆ, ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು. ಆಗ ರೂಮ್‌ನಿಂದ ಹೊರಗೆ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕುತೂಹಲ ಇತ್ತು ಎಂದು ಕೇಳಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ.

    ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ನಿರೀಕ್ಷೆ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್ ಎನ್ನುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಒಂದು ವೇಳೆ, ನೀವಿಬ್ಬರು ನೋಡುವಾಗ ಏನಾದರೂ ಕಂಟೆಂಟ್ ಸಿಕ್ಕಿದ್ದರೇ ಆಗಿದ್ದಲ್ಲಿ ಏನ್ ಮಾಡುತ್ತಿದ್ದೀರಿ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅದನ್ನೇ ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ. ಧನರಾಜ್ ಮಾತಿಗೆ ಸುದೀಪ್ ನಕ್ಕು ನಕ್ಕು ಸುಸ್ತಾಗಿದ್ದಾರೆ.

  • ನಿಮಗೆ ಕಪ್‌ ಗೆಲ್ಲಲು ಸಾಮರ್ಥ್ಯ ಇಲ್ವಾ?: ಭವ್ಯಾಗೆ ಸುದೀಪ್ ಕ್ಲಾಸ್

    ನಿಮಗೆ ಕಪ್‌ ಗೆಲ್ಲಲು ಸಾಮರ್ಥ್ಯ ಇಲ್ವಾ?: ಭವ್ಯಾಗೆ ಸುದೀಪ್ ಕ್ಲಾಸ್

    ನ್ನಡದ ‘ಬಿಗ್ ಬಾಸ್’ (Bigg Boss Kannada 11) ಆಟ ಇನ್ನು 3 ವಾರಗಳು ನಡೆಯಲಿದೆ. 9 ಸ್ಪರ್ಧಿಗಳು ರೇಸ್‌ನಲ್ಲಿದ್ದಾರೆ. ಯಾರಿಗೆ ಗೆಲುವಿನ ಪಟ್ಟ ಸಿಗಲಿದೆ ಎಂದು ಫ್ಯಾನ್ಸ್ ಕಾತರದಿಂದ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಟಾಸ್ಕ್‌ವೊಂದರಲ್ಲಿ ತಮ್ಮ ಬದಲು ಹನುಮಂತ ಆಟ ಆಡಲು ಭವ್ಯಾ ನೀಡಿರುವ ಕಾರಣಕ್ಕೆ ಸುದೀಪ್ ಸಿಟ್ಟಾಗಿದ್ದಾರೆ. ನಿಮಗೆ ಕಪ್ ಗೆಲ್ಲಲು ಸಾಮರ್ಥ್ಯ ಇಲ್ವಾ? ಅಂತ ಸುದೀಪ್ ಭವ್ಯಾಗೆ (Bhavya Gowda) ಪ್ರಶ್ನೆ ಮಾಡಿದ್ದಾರೆ.

    ಗ್ರಾಸರಿ ಟಾಸ್ಕ್‌ಗೆ ಬರೋಣ. ಭವ್ಯಾ ಅವರೊಂದು ಕಾರಣ ಕೊಡ್ತಾರೆ. ಹಾಡು, ಮನರಂಜನೆ ವಿಚಾರದಲ್ಲಿ ಹನುಮಂತ ಮುಂದೆ ಇದ್ದಾರೆ. ಈ ಟಾಸ್ಕ್ ಅವರು ಆಡಿದ್ರೆ ಬೆಟರ್ ಅನಿಸುತ್ತದೆ ಎಂದು ಭವ್ಯಾ ಕಾರಣ ನೀಡಿದ್ರು. ಇದು ಸಿಲ್ಲಿಯಾಗಿತ್ತು ಎಂದು ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ಕುರಿತು ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ:ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

    ಭವ್ಯಾ ಕೊಟ್ಟಿರುವ ಕಾರಣದ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಭವ್ಯಾ ನೀವು ಕೊಟ್ಟಿದ್ದ ಕಾರಣ ಸೂಟ್ ಆಗಲಿಲ್ಲ. ಕಾರಣ ಕೊಡೋದಕ್ಕೆ ನೀವು ಸಾವಿರ ಹೇಳಬಹುದಿತ್ತು. ಇಲ್ಲಾಂದ್ರೆ ಆಟ ಆಡೋಕೆ ನನಗೆ ಆಸಕ್ತಿ ಇಲ್ಲ ಅಂತ ಹೇಳಿದ್ರು ಮುಗಿದು ಹೋಗಿರೋದು. ಗ್ರಾಸರಿ ಟಾಸ್ಕ್‌ನಲ್ಲಿ ಎಂದೂ ಹಾಡು & ಡ್ಯಾನ್ಸ್‌ಗೆ ಸಂಬಂಧಪಟ್ಟ ಟಾಸ್ಕ್ ಬಂದೇ ಇಲ್ಲ ಅಂತ ಸುದೀಪ್ (Sudeep) ಸ್ಪಷ್ಟನೆ ನೀಡಿದರು. ಬ್ಯಾಲೆನ್ಸ್ ಅಂತ ಬಂದಾಗ ನನಗಿಂತ ಹನುಮಂತ (Hanumantha) ಬೆಸ್ಟ್ ಇದ್ದಾರೆ ಎಂದು ಹೇಳಿದ ಭವ್ಯಾಗೆ, ಹನುಮಂತನೇ ಕಪ್ ಗೆಲ್ಲಲಿ ಇದನ್ನು ನೀವು ಒಪ್ಪುತ್ತೀರಾ ಎಂದು ಸುದೀಪ್ ಖಡಕ್ ಆಗಿ ಕೇಳಿದ್ದಾರೆ. ಆಟ ಬಿಟ್ಟು ಕೊಡುವ ಸಲುವಾಗಿ ಕೊಟ್ಟಿರುವ ಸಿಲ್ಲಿ ಕಾರಣಕ್ಕೆ ಸುದೀಪ್‌ ಭವ್ಯಾಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಎಲ್ಲಾ ವಿಷಯದಲ್ಲೂ ಸಾಮರ್ಥ್ಯ ಇರೋರು ಈ ಕಪ್ ಗೆಲ್ಲಬೇಕು ಭವ್ಯಾ. ಹಾಗಾಗಿ, ಬಿಗ್‌ ಬಾಸ್‌ಗೆ ನೀವು ಫಿಟ್ ಇಲ್ಲ ಎಂಬುದನ್ನು ನೀವೇ ಡಿಕ್ಲೇರ್ ಮಾಡಿದ್ರಿ ಎಂದು ಭವ್ಯಾಗೆ ಸುದೀಪ್ ಬೆಂಡೆತ್ತಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಭವ್ಯಾ ಗೌಡ (Bhavya Gowda) ಜೊತೆಗೆ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.

  • BBK 11: ‘ಬಿಗ್ ಬಾಸ್’ ಫಿನಾಲೆಗೆ ಇನ್ನೆಷ್ಟು ದಿನಗಳಿವೆ?- ಅನೌನ್ಸ್ ಮಾಡಿದ ಕಿಚ್ಚ

    BBK 11: ‘ಬಿಗ್ ಬಾಸ್’ ಫಿನಾಲೆಗೆ ಇನ್ನೆಷ್ಟು ದಿನಗಳಿವೆ?- ಅನೌನ್ಸ್ ಮಾಡಿದ ಕಿಚ್ಚ

    ನ್ನಡ ‘ಬಿಗ್ ಬಾಸ್’ ಸೀಸನ್ 11ರ (Bigg Boss Kannada 11)  ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 97 ದಿನಗಳು ಪೂರೈಸಿರುವ ಬಿಗ್ ಬಾಸ್ ಆಟ ಇನ್ನೆಷ್ಟು ದಿನಗಳು ಇರಲಿದೆ ಎಂಬುದನ್ನು ಸುದೀಪ್ ದೊಡ್ಮನೆ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ಬಗ್ಗೆ ಸುದೀಪ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.

    2024ರಲ್ಲಿ ಸೆ.29ರಂದು ‘ಬಿಗ್ ಬಾಸ್ ಕನ್ನಡ 11’ಕ್ಕೆ ಅದ್ಧೂರಿ ಚಾಲನೆ ನೀಡಲಾಗಿತ್ತು. 17 ಸ್ಪರ್ಧಿಗಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಪ್ರಸ್ತುತ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 97 ದಿನಗಳು ಪೂರೈಸಿರುವ ಈ ಆಟಕ್ಕೆ ಅಂತ್ಯ ಯಾವಾಗ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಅಮೆರಿಕದಲ್ಲಿ ಸರ್ಜರಿ ನಂತರ ಡಿಸ್ಚಾರ್ಜ್‌ ಆದ ನಟ ಶಿವಣ್ಣ

    ಸುದೀಪ್ (Sudeep) ವೇದಿಕೆಯಲ್ಲಿ ಹೇಳಿರುವಂತೆ ಇನ್ನೂ ಫಿನಾಲೆಗೆ ಇನ್ನು ಮೂರು ವಾರ ಇದೆ. ಅಂದರೆ ಇನ್ನು 21 ದಿನದಲ್ಲಿ ಫಿನಾಲೆ ನಡೆದು ಈ ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ. ಶೋ ಅಂತ್ಯವಾಗಲಿದೆ. ಈ ಸೀಸನ್ ಮೂಲಕ ಬಿಗ್ ಬಾಸ್ ಜೊತೆ ಸುದೀಪ್ ಅವರ ಪಯಣವೂ ಅಂತ್ಯವಾಗಲಿದೆ.

    ಅಂದಹಾಗೆ, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲ. ಫ್ಯಾಮಿಲಿ ರೌಂಡ್ ಆಗಿದ್ದ ಹಿನ್ನೆಲೆ ವೋಟಿಂಗ್ ಲೈನ್ ಕ್ಲೋಸ್ ಇತ್ತು. ಹಾಗಾಗಿ ಮುಂದಿನ ವಾರ ಡಬಲ್ ಎಲಿಮಿನೇಷನ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. 9 ಸ್ಪರ್ಧಿಗಳಿರುವ ಮನೆಯಲ್ಲಿ ಫಿನಾಲೆಗೆ 5 ಮಂದಿಯಷ್ಟೇ ಆಯ್ಕೆಯಾಗಲಿದ್ದಾರೆ. ಉಗ್ರಂ ಮಂಜು, ಗೌತಮಿ, ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ರಜತ್, ಧನರಾಜ್, ಹನುಮಂತ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾವ 5 ಸ್ಪರ್ಧಿಗಳಿಗೆ ಫಿನಾಲೆ ಟಿಕೆಟ್ ಸಿಗಲಿದೆ. ಯಾರು ಬಿಗ್ ಬಾಸ್ ವಿನ್ನರ್ ಪಟ್ಟ ಗೆಲ್ತಾರೆ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

  • BBK 11: ಸ್ಪರ್ಧಿಗಳಿಗೆ ಕಿಚ್ಚನ ಕೈರುಚಿಯ ಭಾಗ್ಯ

    BBK 11: ಸ್ಪರ್ಧಿಗಳಿಗೆ ಕಿಚ್ಚನ ಕೈರುಚಿಯ ಭಾಗ್ಯ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋಗೆ ಅತೀ ಹೆಚ್ಚು ಟಿಆರ್‌ಪಿ ಗಳಿಸಿ ಮುನ್ನುಗ್ಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೊಡ್ಮನೆ ಆಟ ಅಂತ್ಯವಾಗಲಿದೆ. ಹೀಗಿರುವಾಗ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸುದೀಪ್ ಸರ್ಪ್ರೈಸ್ ಕೊಟ್ಟಿದ್ದಾರೆ. ಮನೆಮಂದಿಗೆ ಕಿಚ್ಚನ ಕೈರುಚಿ ತಿನ್ನುವ ಭಾಗ್ಯ ಸಿಕ್ಕಿದೆ. ಈ ಕುರಿತ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿದೆ.

    ಮನೆಯಲ್ಲಿರುವ ಸ್ಪರ್ಧಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ಸುದೀಪ್ (Sudeep) ಕಳುಹಿಸಿದ್ದಾರೆ. ಊಟ ಸವಿದು ಸ್ಪರ್ಧಿಗಳು ಖುಷಿಪಟ್ಟಿದ್ದಾರೆ. ಸ್ಪರ್ಧಿಗಳಿಗೆ ಡಿನ್ನರ್ ನೈಟ್ ಅರೆಂಜ್ ಮಾಡಿ ಅವರವರ ಅಭಿರುಚಿ ತಕ್ಕಂತೆ ಊಟವನ್ನು ಕಿಚ್ಚ ಕಳುಹಿಸಿದ್ದಾರೆ. ಇದನ್ನೂ ಓದಿ:ಈ ವಾರಾಂತ್ಯ ಮನೆಯಿಂದ ಔಟ್ ಆಗೋರು ಯಾರು?- ಟ್ವಿಸ್ಟ್ ಕೊಟ್ಟ ‘ಬಿಗ್ ಬಾಸ್’

    ಸುದೀಪ್ ಕಳುಹಿಸಿದ ಊಟ ಸವಿದ ಬಳಿಕ ರಜತ್ (Rajath Kishan) ಮಾತನಾಡಿ, ಇಂತಹವೊಂದು ಸರ್ಪ್ರೈಸ್ ಅನ್ನು ಕ್ರಿಯೆಟ್ ಮಾಡೋಕೆ ನಿಮ್ಮಿಂದ ಮಾತ್ರ ಸಾಧ್ಯ ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಕೈಯಲ್ಲಿ ನನ್ನ ಹೆಸರು ಬರೆದಿರೋದೆ ನನ್ನ ಭಾಗ್ಯ ಎಂದು ಚೈತ್ರಾ ಖುಷಿಪಟ್ಟಿದ್ದಾರೆ. ಇತ್ತ ಹನುಮಂತ ಮತ್ತು ಧನರಾಜ್ ನಾವು ಬಿಗ್ ಬಾಸ್‌ಗೆ ಬಂದಿದ್ದು, ಸಾರ್ಥಕವಾಯ್ತು ಎಂದು ಮಾತನಾಡಿದ್ದಾರೆ. ಒಟ್ನಲ್ಲಿ ಕಿಚ್ಚನ ಕೈ ರುಚಿಗೆ ಮನೆ ಮಂದಿ ಕಳೆದು ಹೋಗಿರೋದು ಗ್ಯಾರಂಟಿ.

    ಕಳೆದ ವಾರಾಂತ್ಯ ಐಶ್ವರ್ಯಾ ಶಿಂಧೋಗಿ ಮನೆಯಿಂದ ಹೊರಬಂದಿದ್ದಾರೆ. ಆದರೆ ಈ ವಾರದಲ್ಲಿ ಎಲಿಮಿನೇಷನ್ ಟ್ವಿಸ್ಟ್ ಏನೆಂದರೆ, ಯಾವ ಸ್ಪರ್ಧಿಯೂ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಈ ವಾರ ಫ್ಯಾಮಿಲಿ ರೌಂಡ್ ಇದ್ದ ಕಾರಣ ವೋಟಿಂಗ್ ಲೈನ್ ತೆರೆದಿಲ್ಲ. ಹಾಗಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಯೋದಿಲ್ಲ. ಹಾಗಾಗಿ 9 ಸ್ಪರ್ಧಿಗಳು ಈ ವಾರ ಸೇಫ್ ಆಗಿದ್ದು, ಮುಂದಿನ ವಾರ ಯಾರ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಕಾದುನೋಡಬೇಕಿದೆ.

    ಇದೀಗ ಚೈತ್ರಾ ಕುಂದಾಪುರ, ರಜತ್, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಗೌತಮಿ, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ ಬಿಗ್ ಬಾಸ್ ಆಟದ ರೇಸ್‌ನಲ್ಲಿದ್ದಾರೆ. ಯಾರಿಗೆ ‘ಬಿಗ್ ಬಾಸ್’ ಗೆಲುವಿನ ಪಟ್ಟ ಸಿಗಲಿದೆ ಕಾದುನೋಡಬೇಕಿದೆ.

  • BBK 11: ಸೊಸೆ ಹೇಗಿರಬೇಕು ಅಂತ ಸುಳಿವು ಕೊಟ್ಟ ಹನುಮಂತನ ತಾಯಿ

    BBK 11: ಸೊಸೆ ಹೇಗಿರಬೇಕು ಅಂತ ಸುಳಿವು ಕೊಟ್ಟ ಹನುಮಂತನ ತಾಯಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಕಾರ್ಯಕ್ರಮ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಈ ಹಿನ್ನೆಲೆ ಮನೆಯಲ್ಲಿ ಇದೀಗ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ದೊಡ್ಮನೆಗೆ ಹನುಮಂತನ ಪೋಷಕರು ಬಂದಿದ್ದಾರೆ. ಅವರು ನಮ್ಮನೆ ಸೊಸೆ ಹೇಗಿರಬೇಕು ಎಂದು ಹನುಮಂತನ (Hanumantha) ತಾಯಿ ಬಣ್ಣಿಸಿದ್ದಾರೆ. ಇದನ್ನೂ ಓದಿ:ಕನ್ನಡದ ಹೊಸ ಸಿನಿಮಾದಲ್ಲಿ ‘ಜೇಮ್ಸ್’ ನಟಿ ಪ್ರಿಯಾ ಆನಂದ್

    ಸ್ಪರ್ಧಿಗಳು ಈ ವಾರ ಜಾಲಿ ಮೂಡ್‌ನಲ್ಲಿದ್ದಾರೆ. ಸ್ಪರ್ಧಿಗಳು ಕುಟುಂಬದವರು ಒಬ್ಬೊಬ್ಬರೇ ಮನೆಗೆ ಬರುತ್ತಿರುವ ಹಿನ್ನೆಲೆ ಎಲ್ಲರ ಪಾಲಿಗೆ ವಿಶೇಷವಾಗಿದೆ. ಹನುಮಂತನ ನೋಡಲು ಅವರ ಪೋಷಕರು ಮನೆಗೆ ಕಾಲಿಟ್ಟಿದ್ದಾರೆ. ಈ ವೇಳೆ, ರಜತ್ ಅವರು ಹನುಮಂತನ ತಾಯಿಗೆ ನಿಮ್ಮನೆ ಸೊಸೆ ನಿಮ್ಮ ಹಾಗೇ ಧಿರಿಸನ್ನು ಧರಿಸಬೇಕಾ ಎಂದು ಕೇಳಿದ್ದಾರೆ.

    ರಜತ್ (Rajath) ಮಾತಿಗೆ ಹನುಮಂತನ ತಾಯಿ, ಹೌದು ನಮ್ಮಂತೆಯೇ ಬಟ್ಟೆ (ಲಂಬಾಣಿ ಡ್ರೆಸ್) ಧರಿಸಬೇಕು. ಅದಕ್ಕೆ ಈಗಲೇ ಬಟ್ಟೆ ಹೊಲಿದು ಇಟ್ಟಿದ್ದೇನೆ ಎಂದಿದ್ದಾರೆ. ಅವರು ಹಾಕಲ್ಲ ಅಂದರೆ ಏನು ಮಾಡ್ತೀರಾ ಎಂದು ರಜತ್ ಮರುಪ್ರಶ್ನೆ ಹಾಕಿದ್ದಾರೆ. ಯಾಕೆ ಹಾಕಲ್ಲ, ಹಾಕೋಬೇಕು. ಆ ನಂತರ ಅಭ್ಯಾಸವಾಗುತ್ತದೆ ಎಂದಿದ್ದಾರೆ. ಬೇರೇ ತರಹ ಬಟ್ಟೆ ಹಾಕುವಂತಿಲ್ಲ. ನನಗೆ ಹಾಗೇ ಆಕೆ ರೆಡಿಯಾಗಬೇಕು ಎಂದಿದ್ದಾರೆ.

    ಅಮ್ಮನ ಮಾತಿಗೆ ಹೇ ನಡೆಯುತ್ತದೆ ಎಂದ ಹನುಮಂತಗೆ ನಡೆಯುತ್ತೆ ಅನ್ನೋ ಮಾತು ನಡೆಯೋದಿಲ್ಲ ನಮ್ಮ ಮನೆಯಲ್ಲಿ ಎಂದಿದ್ದಾರೆ. ನಮ್ಮ ಮನೆ ಹೆಣ್ಣು ದೇವತೆ ಮನೆ ಆಗಿದೆ. ಬೇರೇ ಬಟ್ಟೆ ನಡೆಯೋದಿಲ್ಲ ನಾನು ಈಗಲೇ ಹೇಳಿದ್ದೀನಿ ಅಂತ ಮಗನಿಗೆ ಪರೋಕ್ಷವಾಗಿ ಹನುಮಂತನ ತಾಯಿ ಮಾತನಾಡಿದ್ದಾರೆ. ಹನುಮಂತನ ತಾಯಿಯ ಮಾತಿಗೆ ಮನೆ ಮಂದಿ ನಕ್ಕಿದ್ದಾರೆ.

  • ಈ ವಾರಾಂತ್ಯ ಮನೆಯಿಂದ ಔಟ್ ಆಗೋರು ಯಾರು?- ಟ್ವಿಸ್ಟ್ ಕೊಟ್ಟ ‘ಬಿಗ್ ಬಾಸ್’

    ಈ ವಾರಾಂತ್ಯ ಮನೆಯಿಂದ ಔಟ್ ಆಗೋರು ಯಾರು?- ಟ್ವಿಸ್ಟ್ ಕೊಟ್ಟ ‘ಬಿಗ್ ಬಾಸ್’

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 17 ಸ್ಪರ್ಧಿಗಳಿದ್ದ ಈ ಮನೆಯಲ್ಲಿ ಒಬ್ಬೊಬ್ಬರೇ ಎಲಿಮಿನೇಟ್ ಆಗಿ 9 ಸ್ಪರ್ಧಿಗಳು ಉಳಿದಿದ್ದಾರೆ. ಹಾಗಾಗಿ ಆಟ ಮತ್ತಷ್ಟು ರೋಚಕವಾಗಿ ಮೂಡಿ ಬರುತ್ತಿದೆ. ಹಾಗಾದ್ರೆ ಈ ವಾರ ಮನೆಯಿಂದ ಹೊರ ಹೋಗುವ ಆ ಸ್ಪರ್ಧಿ ಯಾರು? ಎಂಬ ಪ್ರೇಕ್ಷಕರ ಕಾತರಕ್ಕೆ ‘ಬಿಗ್ ಬಾಸ್’ ಟ್ವಿಸ್ಟ್ ಕೊಟ್ಟಿದ್ದಾರೆ.

    ಕಳೆದ ವಾರಾಂತ್ಯ ಐಶ್ವರ್ಯಾ ಶಿಂಧೋಗಿ (Aishwarya) ಮನೆಯಿಂದ ಹೊರಬಂದಿದ್ದಾರೆ. ಆದರೆ ಈ ವಾರದಲ್ಲಿ ಎಲಿಮಿನೇಷನ್ ಟ್ವಿಸ್ಟ್ ಏನೆಂದರೆ, ಯಾವ ಸ್ಪರ್ಧಿಯೂ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಈ ವಾರ ಫ್ಯಾಮಿಲಿ ರೌಂಡ್ ಇದ್ದ ಕಾರಣ ವೋಟಿಂಗ್ ಲೈನ್ ತೆರೆದಿಲ್ಲ. ಹಾಗಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಯೋದಿಲ್ಲ.

    ಹಾಗಾಗಿ 9 ಸ್ಪರ್ಧಿಗಳು ಈ ವಾರ ಸೇಫ್ ಆಗಿದ್ದು, ಮುಂದಿನ ವಾರ ಯಾರ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಕಾದುನೋಡಬೇಕಿದೆ.

    ಇದೀಗ ಚೈತ್ರಾ ಕುಂದಾಪುರ, ರಜತ್, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಗೌತಮಿ, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ ಬಿಗ್ ಬಾಸ್ ಆಟದ ರೇಸ್‌ನಲ್ಲಿದ್ದಾರೆ. ಯಾರಿಗೆ `ಬಿಗ್ ಬಾಸ್’ ಗೆಲುವಿನ ಪಟ್ಟ ಸಿಗಲಿದೆ ಕಾದುನೋಡಬೇಕಿದೆ.

  • BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್‌- ನಾಚಿ ನೀರಾದ ಪತ್ನಿ

    BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್‌- ನಾಚಿ ನೀರಾದ ಪತ್ನಿ

    ‘ಬಿಗ್ ಬಾಸ್’ ಮನೆಯಲ್ಲಿ (Bigg Boss Kannada 11) ಈ ವಾರ ಫ್ಯಾಮಿಲಿ ವೀಕ್‌ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೋಕ್ಷಿತಾ, ಉಗ್ರಂ ಮಂಜು, ರಜತ್‌, ಭವ್ಯಾ, ತ್ರಿವಿಕ್ರಮ್‌ ಮನೆಯವರೆಲ್ಲಾ ಬಿಗ್‌ ಬಾಸ್‌ಗೆ ಬಂದು ಖುಷಿಪಟ್ಟಿದ್ದಾರೆ. ಇದೀಗ ಧನರಾಜ್‌ ಪತ್ನಿ ಪ್ರಜ್ಞಾ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ವೇಳೆ, ಧನರಾಜ್ ಅವರು ಪತ್ನಿ ಬಳಿ ಎರಡನೇ ಮಗುವನ್ನು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಜನವರಿ 2ರ ಎಪಿಸೋಡ್‌ನಲ್ಲಿ ಧನರಾಜ್ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಫನ್ ಆಕ್ಟಿವಿಟಿ ನಡೆದಿದೆ. ಧನರಾಜ್‌ ಅವರದ್ದು ಕೂಡು ಕುಟುಂಬ ಆಗಿದ್ದು, ಮೊದಲಿಗೆ ಇಡೀ ಫ್ಯಾಮಿಲಿ ಬಿಗ್‌ ಬಾಸ್‌ಗೆ ಆಗಮಿಸಿ ಧನರಾಜ್‌ ಜೊತೆ ಹುಲಿ ಡ್ಯಾನ್ಸ್‌ ಮಾಡಿ ಖುಷಿಪಟ್ಟಿದ್ದಾರೆ. ಆ ನಂತರ ಧನರಾಜ್‌ಗೆ ಧೈರ್ಯ ತುಂಬಿ  ಆಲ್‌ ಬಿ ಬೆಸ್ಟ್‌ ಹೇಳಿ ಮನೆಯಿಂದ ನಿರ್ಗಮಿಸಿದ್ದಾರೆ. ಇದನ್ನೂ ಓದಿ:ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್‌ ಭೇಟಿ

    ಆ ನಂತರ ಧನರಾಜ್ ಅವರ ಪತ್ನಿ ಪ್ರಜ್ಞಾ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಐಶ್ವರ್ಯಾಗೆ ಯಾವಾಗಲೂ ಉತ್ತಮ ಕೊಡುತ್ತಾ ಇದ್ರಿ. ಏನು ಸಮಾಚಾರ ಅವರಿಗೆ ಲೈನ್‌ ಹೊಡೀತಾ ಇದ್ರಿ ಅಂತ ಡೌಂಟ್‌ ನನಗೆ ಎಂದು ಧನರಾಜ್‌ಗೆ ಪತ್ನಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಆ ನಂತರ‌ ಇತರೆ ಸ್ಪರ್ಧಿಗಳನ್ನು ಪತ್ನಿಗೆ ಪರಿಚಯಿಸಿದ ಬಳಿಕ ಕೆಲ ಕಾಲ ಪತ್ನಿ ಜೊತೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

    ‘ಬಿಗ್ ಬಾಸ್’ ಮನೆಯ ಮುಖ್ಯದ್ವಾರದ ಎದುರು ಕುಳಿತುಕೊಳ್ಳಲು ಜಾಗವಿದೆ. ಅದು ಧನರಾಜ್ ಹಾಗೂ ಹನುಮಂತ ಅವರ ಫೇವರಿಟ್ ಜಾಗ. ಅಲ್ಲಿಯೇ ಕುಳಿತು ಧನರಾಜ್ ಅವರು ಕ್ಯಾಪ್ಟನ್ ಆಗುವ, ಉತ್ತಮ ಪಡೆಯುವ ಹಾಗೂ ಕಿಚ್ಚನ ಚಪ್ಪಾಳೆ ಪಡೆಯುವ ಕನಸು ಕಂಡಿದ್ದರು. ಅದು ನಿಜವಾಗಿದೆ ಎಂದು ಈ ವಿಚಾರವನ್ನು ಅವರು ಪತ್ನಿ ಬಳಿ ಹೇಳಿಕೊಂಡಿದ್ದಾರೆ. ಅದಕ್ಕೆ ಹೌದಾ, ಹಾಗಾದರೆ ಈಗೇನು ಕೇಳಿಕೊಳ್ಳುತ್ತೀರಿ ಎಂದು ಧನರಾಜ್‌ಗೆ ಪತ್ನಿ ಕೇಳಿದ್ದಾರೆ. ಆಗ ಧನರಾಜ್ ಅವರು ಮುಚ್ಚು ಮರೆ ನೇರವಾಗಿ ಮಾತನಾಡಿದ್ದಾರೆ.

    ನನಗೆ ಎರಡನೇ ಮಗು ಬೇಕು ಎಂದಾಗ ಪ್ರಜ್ಞಾ ಅವರು ಎಂತ ಮರ್ರೆ ನೀವು ಎಂದು ನಾಚಿ ನೀರಾದರು. ಆಗ ಧನರಾಜ್, ನೀನು ರೆಡಿ ಇಲ್ವ? ಬೇಡ್ವಾ? ಎಂದು ಕೇಳಿದರು. ಈಗ ಮಾತನಾಡೋದು ಬೇಡ, ಇದನ್ನೆಲ್ಲ ಮನೆಗೆ ಬಂದು ಮಾತಾಡಬೇಕಲ್ವ ಎಂದರು ಪ್ರಜ್ಞಾ. ಆ ಬಳಿಕ ಧನರಾಜ್ ಅವರು ಸೈಲೆಂಟ್ ಆದರು. ಆ ನಂತರ ಮನೆಗೆ ಬಂದ ಮುದ್ದು ಮಗಳನ್ನು ಎತ್ತಿ ಖುಷಿಪಟ್ಟರು.

  • BBK 11: ನನ್ನ ಮಗಳು ಕಳಪೆಯಲ್ಲ: ಚೈತ್ರಾ ಪರ ನಿಂತ ತಾಯಿ

    BBK 11: ನನ್ನ ಮಗಳು ಕಳಪೆಯಲ್ಲ: ಚೈತ್ರಾ ಪರ ನಿಂತ ತಾಯಿ

    ದೊಡ್ಮನೆಯಲ್ಲಿ (Bigg Boss Kannada 11)  ಫ್ಯಾಮಿಲಿ ರೌಂಡ್ ಶುರುವಾಗಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಬಿಗ್‌ ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಇಂದು ಹನುಮಂತನ ಪೋಷಕರು ಮತ್ತು ಚೈತ್ರಾ ತಾಯಿ ಹಾಗೂ ತಂಗಿ ಮನೆಗೆ ಬಂದಿದ್ದಾರೆ. ಈ ವೇಳೆ, ಸ್ಪರ್ಧಿಗಳ ಮುಂದೆ ನನ್ನ ಮಗಳು ಕಳಪೆಯಲ್ಲ ಅಂತ ಚೈತ್ರಾ ಪರ ಅವರ ತಾಯಿ ಮಾತನಾಡಿದ್ದಾರೆ.

    ‘ಬಿಗ್‌ ಬಾಸ್’ 11 ಶುರುವಾಗಿ ಇಂದಿಗೆ 95 ದಿನಗಳು ಕಳೆದಿವೆ. ಈ ವಾರ ಸ್ಪರ್ಧಿಗಳಿಗೆ ವಿಶೇಷವಾಗಿತ್ತು. ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟು ಮಕ್ಕಳಿಗೆ ಹೊಸ ಹುರುಪನ್ನು ತುಂಬಿದ್ದರು. ಇಂದಿನ ಸಂಚಿಕೆಯಲ್ಲಿ ಧನರಾಜ್ ಆಚಾರ್, ಹನುಮಂತ ಹಾಗೂ ಚೈತ್ರಾ ಕುಂದಾಪುರ ಫ್ಯಾಮಿಲಿಯವರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ತಾಯಿ ಹಾಗೂ ತಂಗಿ ಎಂಟ್ರಿ ಕೊಟ್ಟಿದ್ದು, ಅಮ್ಮನನ್ನು ನೋಡುತ್ತಿದ್ದಂತೆ ಚೈತ್ರಾ ಭಾವುಕರಾಗಿದ್ದಾರೆ. ಈ ವೇಳೆ, ನಿಮಗೆ ನನ್ನ ಅಕ್ಕ ಬಾಸ್, ನನಗೆ ನೀವು ಬಾಸ್ ಎಂದು ರಜತ್‌ಗೆ ಚೈತ್ರಾ ತಂಗಿ ಡೈಲಾಗ್ ಹೊಡೆದಿದ್ದಾರೆ. ಆ ನಂತರ ಸ್ಪರ್ಧಿಗಳ ಮುಂದೆ ತಾಯಿ ಆಡಿದ ಮಾತಿಗೆ ಚೈತ್ರಾ ಕಣ್ಣೀರಿಟ್ಟಿದ್ದಾರೆ. ಮನೆಯಲ್ಲಿ ಚೈತ್ರಾ ಸತತವಾಗಿ 4 ಬಾರಿ ಸ್ಪರ್ಧಿಗಳಿಂದ ಕಳಪೆ ಪಟ್ಟ ಸಿಕ್ಕಿತ್ತು. ಇದೇ ವಿಚಾರವಾಗಿ ಚೈತ್ರಾ ಅವರ ತಾಯಿ ಮಾತಾಡಿ, ನನ್ನ ಮಗಳಿಗೆ ಇಷ್ಟು ವಾರದಲ್ಲಿ ಕಳಪೆ ಕೊಟ್ಟಿದ್ದೀರಾ. ಆದರೆ ನಮ್ಮ ಮಗಳು ಯಾವತ್ತಿದ್ರೂ ನಮಗೆ ಉತ್ತಮನೇ ಅಂತ ಹೇಳುತ್ತಾ ಮೆಡಲ್ ಹಾಕಿದ್ದಾರೆ. ಅದಕ್ಕೆ ಚೈತ್ರಾ ಭಾವುಕರಾಗಿದ್ದಾರೆ.

    ಇದಾದ ಬಳಿಕ ಮಾತಾಡಿದ ಚೈತ್ರಾ, ನನ್ನ ತಂಗಿ ಹುಟ್ಟಿದ್ದಾಗ ನಮಗೆ ನಿಜವಾದ ಚಾಲೆಂಜ್ ಶುರುವಾಯಿತು. 3ನೇಯದು ಹೆಣ್ಣಾಯ್ತು, ಅಪ್ಪ ಅಮ್ಮನ ಹೆಣಕ್ಕೆ ಬೆಂಕಿ ಇಡೋಕು ಇವರ ಮನೆಯಲ್ಲಿ ಗಂಡು ದಿಕ್ಕಿಲ್ಲ ಅಂತ ಜನ ಆಡಿಕೊಂಡಿದ್ದರು ಎಂದು ಚೈತ್ರಾ ಕಣ್ಣೀರು ಹಾಕಿದ್ದಾರೆ. ಅವರ ಮಾತಿಗೆ ಮನೆ ಮಂದಿ ಕೂಡ ಎಮೋಷನಲ್‌ ಆಗಿದ್ದಾರೆ.

  • ಐಶ್ವರ್ಯಾಗೆ ಲೈನ್‌ ಹೊಡೀತಿದ್ರಾ ಅಂತ ನನಗೆ ಡೌಟ್‌: ಧನರಾಜ್‌ಗೆ ಪತ್ನಿ ಫುಲ್‌ ಕ್ಲಾಸ್

    ಐಶ್ವರ್ಯಾಗೆ ಲೈನ್‌ ಹೊಡೀತಿದ್ರಾ ಅಂತ ನನಗೆ ಡೌಟ್‌: ಧನರಾಜ್‌ಗೆ ಪತ್ನಿ ಫುಲ್‌ ಕ್ಲಾಸ್

    ದಾ ಕಿತ್ತಾಟದಿಂದಲೇ ಹೈಲೆಟ್‌ ಆಗುತ್ತಿದ್ದ ಬಿಗ್ ಬಾಸ್ ಮನೆ (Bigg Boss Kannada 11) ಇದೀಗ ಕಳೆದ ಎರಡು ದಿನಗಳಿಂದ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ಸ್ಪೆಷಲ್‌ ಎಪಿಸೋಡ್‌ನಿಂದ ಪ್ರೇಕ್ಷಕರ ಮನ ಮುಟ್ಟುತ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗುತ್ತಿದೆ. ಇದನ್ನೂ ಓದಿ:ರೊಮ್ಯಾಂಟಿಕ್ ಪ್ರಿ ವೆಡ್ಡಿಂಗ್ ವಿಡಿಯೋ ಹಂಚಿಕೊಂಡ ‘ಸೀತಾರಾಮ’ ನಟಿ

    ಇದೀಗ ಧನರಾಜ್ ಆಚಾರ್‌ (Dhanraj Achar) ಅವರ ಕೂಡು ಕುಟುಂಬ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ. ಇಡೀ ಕುಟುಂಬವನ್ನು ನೋಡಿ ಧನರಾಜ್ ಫುಲ್ ಹ್ಯಾಪಿ ಆಗಿದ್ದಾರೆ. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಧನರಾಜ್‌ ಜೊತೆ ಹುಲಿ ಕುಣಿತದ ಸ್ಟೆಪ್ಸ್ ಹಾಕಿ ಖುಷಿ ಪಟ್ಟಿದ್ದಾರೆ. ಮನೆ ಮಂದಿಯೆಲ್ಲಾ ಬಿಗ್‌ ಬಾಸ್‌ಗೆ ಬಂದಿರೋದು ಧನರಾಜ್‌ ಸಂತಸ ದುಪ್ಪಟ್ಟು ಮಾಡಿದೆ.

    ಧನರಾಜ್‌ಗೆ ಮತ್ತೊಂದು ಸರ್ಪ್ರೈಸ್ ಅವರ ಮುದ್ದಿನ ಮಗಳು ಕೂಡ ಬಿಗ್ ಬಾಸ್‌ಗೆ ಬಂದಿದ್ದಾಳೆ. ಮೊದಲಿಗೆ ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಮಗುವನ್ನು ಫೋಟೋವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಪ್ಲೀಸ್ ಮಗುವನ್ನು ಎತ್ತಿಕೊಳ್ಳಲು ಬಿಡಿ ಎಂದು ಬಿಗ್ ಬಾಸ್‌ಗೆ ಧನರಾಜ್‌ ಮನವಿ ಮಾಡಿಕೊಂಡಿದ್ದಾರೆ. ಅವರು ಭಾವುಕರಾಗಿದ್ದನ್ನು ನೋಡಿದ ಬಿಗ್ ಬಾಸ್, ಕೊನೆಗೆ ಮಗುವಿನ ಜೊತೆ ಕಾಲ ಕಳೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಓಡಿ ಹೋಗಿ ಮಗುವನ್ನು ಎತ್ತಿಕೊಂಡ ಭಾವುಕರಾಗಿ ಎತ್ತಿ ಮುದ್ದಾಡಿದ್ದಾರೆ. ಮಗುವಿನ ಪಕ್ಕದಲ್ಲಿ ಮಲಗಿ ಕೆಲ ಸಮಯ ಕಳೆದಿದ್ದಾರೆ.

    ಬಳಿಕ ಪತ್ನಿ ಪ್ರಜ್ಞಾ ಧನರಾಜ್‌ಗೆ ಮುದ್ದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶ್ವರ್ಯಾ ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶ್ವರ್ಯಾಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎನ್ನುತ್ತಾ ಕೆನ್ನೆಗೆ ಹೊಡೆದಿದ್ದಾರೆ. ಪತಿಯ ಕಾಲೆಳೆದಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.