Tag: bbk 11

  • ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್‌ ಇರುತ್ತದೆ: ರಿಟೈರ್‌ಮೆಂಟ್‌ ಬಗ್ಗೆ ಸುದೀಪ್‌ ಮಾತು

    ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್‌ ಇರುತ್ತದೆ: ರಿಟೈರ್‌ಮೆಂಟ್‌ ಬಗ್ಗೆ ಸುದೀಪ್‌ ಮಾತು

    ಸುದೀಪ್ ಅವರು ‘ಮ್ಯಾಕ್ಸ್’ (Max) ಸಿನಿಮಾ ಗೆದ್ದ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಸುದೀಪ್ (Sudeep) ನಿವೃತ್ತಿ ಬಗ್ಗೆ ಮಾತೆತ್ತಿದ್ದಾರೆ. ಎಲ್ಲಾ ಹೀರೋಗೂ ಒಂದು ಟೈಮ್ ಲೈನ್ ಅಂತ ಇರುತ್ತದೆ. ಕೊನೆಗೆ ಅವರು ಬೋರ್ ಆಗಿಬಿಡುತ್ತಾರೆ ಅಂತ ರಿಟೈರ್‌ಮೆಂಟ್ ಬಗ್ಗೆ ಸುದೀಪ್ (Sudeep) ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಅನಯಾ ವಸುಧಾ ಜೊತೆ ಚಾರ್ಲಿ-777 ನಿರ್ದೇಶಕ ಕಿರಣ್ ರಾಜ್ ಎಂಗೇಜ್

    ಸಂದರ್ಶನವೊಂದರಲ್ಲಿ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದ ಸುದೀಪ್, ಟೆನ್ಶನ್ ಅಂತ ಅಲ್ಲ, ಸುಸ್ತಾಗಬಹುದು. ಆದರೆ ನೀವು ಮಾಡೋದೆಲ್ಲಾ ಕರೆಕ್ಟ್ ಮಾಡಿದ್ರೆ ಎಲ್ಲಿ ಸುಸ್ತಾಗುತ್ತೆ? ನಮಗೆಲ್ಲರಿಗೂ ವಿಶ್ರಾಂತಿ ಬೇಕು. ಹೊಟ್ಟೆ ಇದೆ ಅಂತಾ ಸಿಕ್ಕಾಪಟ್ಟೆ ತಿನ್ನೋನಲ್ಲ. ನಿದ್ದೆ ಮಾಡೋಕೆ ಹಾಸಿಗೆ ಇದೆ ಅಂತ ಸುಮ್ನೆ ನಿದ್ದೆ ಮಾಡೋನಲ್ಲ. ರಿಟೈರ್‌ಮೆಂಟ್ ಆದ ಮೇಲೆ ರೆಸ್ಟ್ ಇದ್ದೇ ಇರುತ್ತೆ ಅಲ್ವಾ? ಅಲ್ಲಿಯವರೆಗೂ ಯಾಕೆ ರಿಟೈರ್ ಆಗಬೇಕು. ಕೆಲಸ ಮಾಡೋಣ ಎಂದಿದ್ದಾರೆ.

    ಪ್ರತಿಯೊಬ್ಬ ಹೀರೋಗೂ ಒಂದು ಟೈಮ್‌ಲೈನ್ ಅಂತ ಇರುತ್ತದೆ. ಕೊನೆಗೆ ಬೋರ್ ಆಗಿಬಿಡ್ತಾರೆ. ನಮ್ಮಂತವರಿಗೆಲ್ಲಾ ಅಣ್ಣನ ರೋಲ್, ತಮ್ಮನ ರೋಲ್, ಚಿಕ್ಕಪ್ಪ ರೋಲ್ ಸೂಟ್ ಆಗಲ್ಲ. ಮಾಡೋದು ಇಲ್ಲ. ಆಗ ನಮಗೆ ಏನು ಅನಿಸುತ್ತೆ ಅಂದ್ರೆ, ಏನಾದರೂ ಹೊಸದು ಮಾಡಬೇಕು ಅಂತ ಅನಿಸುತ್ತದೆ. ನಾನು ಹೀರೋ ಆಗಿ ಇನೊಬ್ಬರಿಗೆ ಕಾಯಿಸೋನಲ್ಲ, ಸೆಟ್‌ಗೆ ಬೇಗ ಹೋಗಿರುತ್ತೇನೆ. ಇನ್ನೂ ಹೀರೋ ಆಗಿ ಇಳಿದ ಮೇಲೆ ಬೇರೆ ಪಾತ್ರ ಮಾಡೋಕೆ ಹೋಗಿ ಮತ್ತೊಬ್ಬರಿಗೆ ಕಾಯುತ್ತಾ ಇರೋಕೆ ಆಗುತ್ತಾ? ಎಂದಿದ್ದಾರೆ. ಸೆಟ್‌ಗೆ ಅವರು ಬಂದಿಲ್ಲ. ಇವರು ಬಂದಿಲ್ಲ ಅನ್ನೋದು ನಮಗೆ ಸೂಟ್ ಆಗುತ್ತಾ? ಎಂದಿದ್ದಾರೆ.

    ಮುಂದೆ ಸಿನಿಮಾ ಇನ್ನೂ ಮಾಡಬಹುದು, ನಿರ್ದೇಶನ ಅಥವಾ ನಿರ್ಮಾಣ ಮಾಡಬಹುದು ಗೊತ್ತಿಲ್ಲ. ಸಿನಿಮಾ ನಮಗೆ ಬಹಳ ಹತ್ತಿರವಾಗಿರುವುದರಿಂದ, ಅದರಿಂದ ದೂರ ಆಗ್ತೀನಿ ಅಂತ ಹೇಳೋಕೆ ಆಗಲ್ಲ. ಒಬ್ಬ ನಾಯಕ ನಟನೆಯಿಂದ ದೂರ ಆಗಬಹುದು. ಅದನ್ನ ಇವತ್ತು ಅಟ್ಯಾಚ್‌ಮೆಂಟ್ ಮಾಡಿಕೊಂಡು ಕೂತಿಲ್ಲ. ಪೋಷಕ ನಟನಾಗಿ ಸೈರಾ ನರಸಿಂಹ ರೆಡ್ಡಿ, ‘ದಬಾಂಗ್’ನಲ್ಲಿ ಬೇರೆ ತರಹದ ಪಾತ್ರ ಮಾಡುತ್ತಾ ಇರಲಿಲ್ಲ. ನಾನು ಯಾವತ್ತೂ ಹೀರೋ ಇಮೇಜ್‌ಗೆ ಅಂಟಿಕೊಂಡಿಲ್ಲ. ಆ ಪಾತ್ರಗಳನ್ನ ಮಾಡೋಕೆ ಖುಷಿ ಇದೆ. ತೃಪ್ತಿ ಇದೆ ಎಂದು ಮಾತನಾಡಿರುವ ಸುದೀಪ್ ಮುಂದಿನ ಸಿನಿಮಾ ಕೆರಿಯರ್ ಪ್ಲ್ಯಾನ್‌ ಬಗ್ಗೆ ತಿಳಿಸಿದ್ದಾರೆ.

  • BBK 11: ವರಸೆ ಬದಲಿಸಿದ ಭವ್ಯಾಗೆ ಪುಂಗಬೇಡ ಎಂದ ತ್ರಿವಿಕ್ರಮ್‌

    BBK 11: ವರಸೆ ಬದಲಿಸಿದ ಭವ್ಯಾಗೆ ಪುಂಗಬೇಡ ಎಂದ ತ್ರಿವಿಕ್ರಮ್‌

    ದೊಡ್ಮನೆಯಲ್ಲಿ (Bigg Boss Kannada 11) ಪ್ರೇಮ ಪಕ್ಷಿಗಳಾಗಿದ್ದ ತ್ರಿವಿಕ್ರಮ್ ಮತ್ತು ಭವ್ಯಾ ನಡುವೆ ಬಿರುಕಾಗಿದೆ. ಇದೀಗ ಭವ್ಯಾ (Bhavya Gowda) ವಿರುದ್ಧ ತ್ರಿವಿಕ್ರಮ್ ತಿರುಗಿ ಬಿದ್ದಿದ್ದಾರೆ. ನಿನ್ನ ಬಂಡವಾಳ ಬಯಲಾಯ್ತು ಪುಂಗಬೇಡ ಅಂತ ಭವ್ಯಾ ವಿರುದ್ಧ ತ್ರಿವಿಕ್ರಮ್‌ (Trivikram) ಗುಡುಗಿದ್ದಾರೆ. ಇದನ್ನೂ ಓದಿ:ಶ್ರೇಯಸ್ ಜೊತೆ ದಿಲ್ ದಾರ್ ಅಖಾಡಕ್ಕಿಳಿದ ಕೀರ್ತಿ ಕೃಷ್ಣ!

    ದೊಡ್ಮನೆ ಆಟಕ್ಕೆ ಬ್ರೇಕ್‌ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಸ್ಪರ್ಧಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಬಿಗ್ ಬಾಸ್‌ನಲ್ಲಿ ಇನ್ನೊಬ್ಬರ ಮೇಲೆ ದೂರಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟು ದಿನ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಬಿರುಕು ಮೂಡಿದೆ. ಯಾರು ಯಾರನ್ನ ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಕುರಿತು ಇಬ್ಬರ ನಡುವೆ ಬಿರುಸಿನ ಚರ್ಚೆ ನಡೆದಿದೆ.

    105 ದಿನಗಳಿಂದ ಇರದಿದ್ದ ಬಾಂಡಿಂಗ್ ಈಗ ಇನ್ನೊಬ್ಬರ ಜೊತೆ ಸೇರಿಕೊಂಡು ಆಚೆ ಇಡುತ್ತಿದ್ದೀಯ. ತುಂಬಾ ಬಂಡವಾಳಗಳು ಗೊತ್ತಾದಾಗ ಯಾರು ಏನು ಮಾಡೋಕೆ ಆಗಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭವ್ಯಾ ನೀನು ಏನೇನೋ ತಲೆಗೆ ಹಾಕ್ಕೊಂಡು ಮಾತನಾಡಬೇಡ. ನೀವೇ ಹಾಳಾಗುತ್ತಿದ್ದೀರಾ ಅಷ್ಟೇ ಎಂದು ಭವ್ಯಾ ಉತ್ತರಿಸಿದ್ದಾರೆ. ಈ ವೇಳೆ ತ್ರಿವಿಕ್ರಮ್, ನೀನೇನು ನನಗೆ ಹೇಳುವುದು. ಇಷ್ಟೆಲ್ಲಾ ಪುಂಗೋ ಅವಶ್ಯಕತೆ ಇಲ್ಲ ಎಂದ ತ್ರಿವಿಕ್ರಮ್‌ಗೆ ನಿನ್ನ ಫ್ರೆಂಡ್‌ಶಿಪ್‌ ಅನ್ನು ಎಲ್ಲೂ ನಾನು ಬಳಸಿಕೊಂಡಿಲ್ಲ ಎಂದಿದ್ದಾರೆ. ಮೊದಲ ದಿನ ಇದ್ದ ಹಾಗೇ ಈಗ ನೀನಿಲ್ಲ ಎಂದು ಭವ್ಯಾಗೆ ನೇರವಾಗಿಯೇ ಹೇಳಿದ್ದಾರೆ.

    ತ್ರಿವಿಕ್ರಮ್ ಹಾಗೂ ಭವ್ಯಾ ಇಬ್ಬರು ಸೋಫಾ ಮೇಲೆ ಕುಳಿತು ಈ ರೀತಿಯಾಗಿ ಮಾತನಾಡಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಭವ್ಯಾ ಎದ್ದು ಹೋಗಿದ್ದಾರೆ. ಸದ್ಯ ನೋಡುಗರಿಗೆ ಇಬ್ಬರ ನಡುವಿನ ಸ್ನೇಹ, ಪ್ರೀತಿ ಈಗ ಇಲ್ಲ ಎಂದು ಅನಿಸುತ್ತಿದೆ. ಟ್ರೋಫಿ ಗೆಲ್ಲುವ ಉದ್ದೇಶದಿಂದ ಹೀಗೆ ಒಬ್ಬರನೊಬ್ಬರು ದೂರ ಮಾಡಿಕೊಳ್ಳುತ್ತಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ. ಇಬ್ಬರೂ ದೂರವಾಗೋ ಸೂಚನೆ ಸಿಕ್ಕಿದೆ.

  • ಗೋವು ಅಂದ್ರೆ ದೇವಸ್ಥಾನವಿದ್ದಂತೆ, ವಿಕೃತಿ ಮೆರೆದವರಿಗೆ ತಕ್ಕ ಶಿಕ್ಷೆಯಾಗಬೇಕು: ಚೈತ್ರಾ ಕುಂದಾಪುರ

    ಗೋವು ಅಂದ್ರೆ ದೇವಸ್ಥಾನವಿದ್ದಂತೆ, ವಿಕೃತಿ ಮೆರೆದವರಿಗೆ ತಕ್ಕ ಶಿಕ್ಷೆಯಾಗಬೇಕು: ಚೈತ್ರಾ ಕುಂದಾಪುರ

    ಹಸುವಿನ ಕೆಚ್ಚಲು ಕೊಯ್ದ ಘಟನೆಗೆ ಖಂಡಿಸಿದ ‘ಬಿಗ್ ಬಾಸ್’ ಸ್ಪರ್ಧಿ

    ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ‘ಬಿಗ್ ಬಾಸ್’ (Bigg Boss Kannada 11) ಚೈತ್ರಾ ಕುಂದಾಪುರ (Chaithra Kundapura) ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ಜೀವನಪೂರ್ತಿ ಹಾಲನ್ನು ಕೊಟ್ಟು ಸಾಕುವ ಗೋವಿನ ಕೆಚ್ಚಲು ಕೊಯ್ಯುವ ವಿಕೃತಿ ಮರೆಯುತ್ತಾರೆ ಅಂದರೆ ನಾಳೆ ಅವರು ಮನುಷ್ಯರ ಮೇಲೆಯೂ ಮರೆಯಬಹುದು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಚೈತ್ರಾ ಗರಂ ಆಗಿದ್ದಾರೆ.

    ಹಸುವಿನ ಕೆಚ್ಚಲು ಕೊಯ್ದ ಘಟನೆ ಬಗ್ಗೆ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಚೈತ್ರಾ ಕುಂದಾಪುರ ಖಂಡಿಸಿದ್ದಾರೆ. ಇದನ್ನು ನಾನು ಭಾರೀ ಕಠಿಣವಾದ ಶಬ್ಧಗಳಿಂದ ಖಂಡಿಸುತ್ತೇನೆ. ಗೋವು ಅಂದರೆ ದೇವಸ್ಥಾನ ಇದ್ದ ಹಾಗೆ. ಮುಕ್ಕೋಟಿ ದೇವತೆಗಳ ಆವಾಸ ಸ್ಥಾನ ಅಂತ ನಾನು ನಂಬುತ್ತೇನೆ. ಗೋವು ಧಾರ್ಮಿಕ ಭಾವನೆ ಜೊತೆ ಒಂದು ಕುಟುಂಬದ ಆರ್ಥಿಕ ಆಧಾರ ಸ್ತಂಭ ಕೂಡ ಆಗಿತ್ತು. ಆ ಗೋವುಗಳ ಕೆಚ್ಚಲನ್ನು ಕೊಯ್ಯುತ್ತಾರೆ ಅಂದರೆ ಅದು ವಿಕೃತಿ ಎಂದು ಚೈತ್ರಾ ಮಾತನಾಡಿದ್ದಾರೆ.

    ಕುಡಿದ ಮತ್ತಿನಲ್ಲಿ ಮಾಡಿದ್ದಾರೆ ಎಂದೆಲ್ಲಾ ತೆಪೆ ಹಚ್ಚುವ ಕೆಲಸ ನಡೆಯುತ್ತಿದೆ. ಖಂಡಿತವಾಗಿಯೂ ಅದರ ಉದ್ದೇಶ ಹಾಗೇ ಆಗಿರೋದಕ್ಕೆ ಸಾಧ್ಯವಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಈ ಘಟನೆ ಜರುಗಿದೆ ಎಂದಿದ್ದಾರೆ. ಆ ಗೋವು ಮಾಲೀಕರ ಆರ್ಥಿಕ ಸಂಕಷ್ಟ ಮತ್ತು ಅವರ ಭಾವನ್ಮಾಕ ಬಾಂಧವ್ಯಕ್ಕೆ ಸಾಥ್ ನೀಡಬೇಕು. ನಾವು ಕೂಡ ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕಿರೋದರಿಂದ ಗೋವುಗಳ ಜೊತೆಗಿನ ಭಾವನಾತ್ಮಕ ಬಾಂಧವ್ಯದ ಬಗ್ಗೆ ನನಗೆ ಗೊತ್ತು. ಈ ಘಟನೆ ಬಗ್ಗೆ ಪ್ರಾಣಿ ದಯ ಸಂಘದವರು ಇದನ್ನು ಖಂಡಿಸಬೇಕು.

    ಗೋವು ನಮಗೆ ಪ್ರತಿನಿತ್ಯ ಹಾಲು ಕೊಡುವ ತಾಯಿ ಅವಳು. ಒಬ್ಬ ತಾಯಿಯ ಎದೆಹಾಲನ್ನು ನಾವು 3 ವರ್ಷ ಕುಡಿಯುತ್ತೇವೆ. ಅದರ ನಂತರ ಜನ್ಮ ಪೂರ್ತಿ ಗೋವಿನ ಹಾಲನ್ನೇ ಕುಡಿಯುತ್ತೇವೆ. ನಮಗೆ ಜೀವನಪೂರ್ತಿ ಹಾಲನ್ನು ಕೊಟ್ಟು ಸಾಕುವ ಗೋವನ್ನು ಕೆಚ್ಚಲು ಕೊಯ್ಯುವ ವಿಕೃತಿ ಮರೆಯುತ್ತಾರೆ ಅಂದರೆ ನಾಳೆ ಅವರು ಮನುಷ್ಯರ ಮೇಲೆಯೂ ಮರೆಯಬಹುದು. ಹಾಗಾಗಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಚೈತ್ರಾ ಮಾತನಾಡಿದ್ದಾರೆ.

    ಇನ್ನೂ ‘ಬಿಗ್ ಬಾಸ್ ಕನ್ನಡ 11’ರ (BBK 11) ಸ್ಪರ್ಧಿಯಾಗಿರೋ ಚೈತ್ರಾ ಅವರು ಫಿನಾಲೆ ತಲುಪಲು ಇನ್ನೇನು 2 ವಾರಗಳು ಇರಬೇಕಾದ್ರೆ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿದ್ದಾರೆ.

  • BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    ಬಿಗ್ ಬಾಸ್ ಮನೆಯ ಆಟ (Bigg Boss Kannada 11)  ಇನ್ನೇನು 2 ವಾರಗಳಲ್ಲಿ ಮುಗಿಯಲಿದೆ. ಜ.26ರಂದು ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಇನ್ನೂ ಚೈತ್ರಾ ಕುಂದಾಪುರ ಎಲಿಮಿನೇಷನ್ ಬಳಿಕ ಮನೆಯಲ್ಲಿ 8 ಸ್ಪರ್ಧಿಗಳಿದ್ದಾರೆ. ತಮ್ಮ ಉಳಿವಿಕೆಗಾಗಿ ಗುದ್ದಾಟ ಶುರುವಾಗಿದೆ. ಇನ್ನೂ ಈ ವಾರ ಮೀಡ್ ವೀಕ್ ಎಲಿಮಿನೇಷನ್ ಇರೋದ್ರಿಂದ ಇದರಿಂದ ಪಾರಾಗಲು ರಜತ್‌ಗೆ ಮೋಕ್ಷಿತಾ ಹಾಗೂ ಭವ್ಯಾ ಸ್ಕೆಚ್ ಹಾಕಿದ್ದಾರೆ.

    ಇಂದಿನ ಪ್ರೋಮೋದಲ್ಲಿ ವಾರದ ಮಧ್ಯೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಒಬ್ಬರು ಮನೆಯಿಂದ ಹೋಗೋದು ಖಚಿತ ಎಂದು ಘೋಷಿಸಿದ್ದಾರೆ. ಈ ವಾರದ ಟಾಸ್ಕ್ ಗೆಲ್ಲುವ ಒಬ್ಬ ಸದಸ್ಯ ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗುತ್ತಾರೆ ಎಂದು ತಿಳಿಸಿದ್ದಾರೆ. ಆ ನಂತರ ಟಾಸ್ಕ್ ವೇಳೆ, ರಜತ್‌ರನ್ನ ಮನೆಯಿಂದ ಹೊರ ಕಳುಹಿಸಲು ಮೋಕ್ಷಿತಾ ಮತ್ತು ಭವ್ಯಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:BBK 11: ಕೊರಗಜ್ಜನ ಪವಾಡದಿಂದ ಸೇಫ್‌ ಆದ ಧನರಾಜ್‌- ಫೈರ್‌ ಬ್ರ್ಯಾಂಡ್ ಚೈತ್ರಾ ಔಟ್

    ಹೆಚ್ಚು ಮರದ ತುಂಡುಗಳನ್ನು ನೆಟ್‌ನಲ್ಲಿ ಹೊಂದಿರುವ ಸದಸ್ಯ ಟಾಸ್ಕ್‌ನಿಂದ ಔಟ್ ಆಗಲಿದ್ದಾರೆ ಎಂಬುದು ಆಟದ ನಿಯಮವಾಗಿತ್ತು. ಅದರಂತೆ ರಜತ್ ಫೋಟೋವಿದ್ದ ಬುಟ್ಟಿಗೆ ಮರದ ತುಂಡುಗಳನ್ನು ಭವ್ಯಾ ಹಾಗೂ ಮೋಕ್ಷಿತಾ ಹಾಕಲು ಪ್ರಯತ್ನಿಸಿದ್ದಾರೆ. ಇನ್ನೂ ತನ್ನನ್ನು ಔಟ್ ಮಾಡಲು ಭವ್ಯಾ ಮತ್ತು ಮೋಕ್ಷಿತಾ ಮ್ಯಾಚ್ ಫಿಕ್ಸಿಂಗ್ ಬಗ್ಗೆ ರಜತ್ ಅರಿವಿಗೆ ಬಂದಿದ್ದು, ಅವರು ರಾಂಗ್ ಆಗಿದ್ದಾರೆ. ನಿಮ್ಮಿಬ್ಬರಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

    ಟಿಕೆಟ್ ಟು ಫಿನಾಲೆ ಹೋಗಬಾರದು ಅಂತ ಭವ್ಯಾ ಹೆಸರನ್ನು ನೀವು ತೆಗೆದುಕೊಳ್ಳೀರಿ, ಈಗ ನಾಮಿನೇಷನ್‌ನಿಂದ ಉಳಿಯಬೇಕು ಅಂತ ಭವ್ಯಾ ಜೊತೆ ಸೇರಿಕೊಳ್ತೀರಾ ಅಂತ ಮೋಕ್ಷಿತಾಗೆ ತ್ರಿವಿಕ್ರಮ್ ಟಾಂಗ್ ಕೊಟ್ಟಿದ್ದಾರೆ. ನಾವು ನಿಯತ್ತಾಗಿ ಆಟ ಆಡಿದ್ದೇವೆ ಎಂದ ಮೋಕ್ಷಿತಾಗೆ ಸಮರ್ಥನೆ ಬೇಡ ಅಂತ ರಜತ್ ತಿರುಗೇಟು ನೀಡಿದ್ದಾರೆ. ಇನ್ನೂ ಭವ್ಯಾಗೆ ಅನೇಕ ಬಾರಿ ರಜತ್ ಕಿವಿಮಾತು ಹೇಳಿದ್ದು ಇದೆ. ಆದರೆ, ಈಗ ಆಟದಲ್ಲಿ ಭವ್ಯಾ ಈ ರೀತಿ ಮೋಸ ಮಾಡಿದ್ದಕ್ಕೆ ರಜತ್ ಸಿಟ್ಟಾಗಿದ್ದಾರೆ. ಅವರಿಗೆ ಬೇಸರವೂ ಉಂಟಾಗಿದೆ.

    ಭವ್ಯಾ, ಮೋಕ್ಷಿತಾ, ರಜತ್‌, ಧನರಾಜ್‌, ಉಗ್ರಂ ಮಂಜು, ತ್ರಿವಿಕ್ರಮ್‌, ಗೌತಮಿ ಈ ಸ್ಪರ್ಧಿಗಳಲ್ಲಿ ಫಿನಾಲೆಗೆ ಹೋಗಲು ಫೈಟ್‌ ನಡೆಯುತ್ತಿದೆ. ಇದೆಲ್ಲದರ ನಡುವೆ ಮಿಡ್ ವೀಕ್ ಎಲಿಮಿನೇಷನ್‌ನಿಂದ ಯಾರ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದನ್ನು ಕಾದುನೋಡಬೇಕಿದೆ.

  • BBK 11: ಕೊರಗಜ್ಜನ ಪವಾಡದಿಂದ ಸೇಫ್‌ ಆದ ಧನರಾಜ್‌- ಫೈರ್‌ ಬ್ರ್ಯಾಂಡ್ ಚೈತ್ರಾ ಔಟ್

    BBK 11: ಕೊರಗಜ್ಜನ ಪವಾಡದಿಂದ ಸೇಫ್‌ ಆದ ಧನರಾಜ್‌- ಫೈರ್‌ ಬ್ರ್ಯಾಂಡ್ ಚೈತ್ರಾ ಔಟ್

    ಮಾತೇ ಮುತ್ತು ಮಾತೇ ಮೃತ್ಯು ಎಂಬ ಮಾತು ಚೈತ್ರಾ ಕುಂದಾಪುರ (Chaithra Kundapura) ವಿಚಾರದಲ್ಲಿ ನಿಜವಾಗಿದೆ. ಮಾತಿನಿಂದಲೇ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದ ಚೈತ್ರಾ ಕುಂದಾಪುರ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ. ಎಲ್ಲರಿಗೂ ಭಾವುಕವಾಗಿ ವಿದಾಯ ಹೇಳಿದ ಚೈತ್ರಾ ಅವರು ದೊಡ್ಮನೆಯಿಂದ ಬಂದಿದ್ದಾರೆ.

    ಆದರೆ ಬಾರಿ ಎಲಿಮಿನೇಷನ್‌ ಪ್ರಕ್ರಿಯೆ ಮಾಡುವಾಗ ಸುದೀಪ್‌ ಟ್ವಿಸ್ಟ್‌ವೊಂದನ್ನು ಕೊಟ್ಟಿದ್ದಾರೆ. ಯಾರು ಔಟ್‌ ಆಗುತ್ತಾರೆ ಎಂಬುದನ್ನು ತಿಳಿಯಲು ಲಕೋಟೆ ಹುಡುಕುವ ಟಾಸ್ಕ್‌ ಅನ್ನು ಸುದೀಪ್‌ ನೀಡಿದ್ದಾರೆ.  ಅದರಲ್ಲಿ ಸೇಫ್ ಆದವರ ಹೆಸರು ಬರೆದಿರುತ್ತದೆ ಎಂದು ಸುದೀಪ್ ತಿಳಿಸಿದ್ದರು. ಮನೆ ಪೂರ್ತಿ ಸುತ್ತಾಡಿ ಧನರಾಜ್ (Dhanraj Achar) ಮತ್ತು ಚೈತ್ರಾ ಅವರು ಲಕೋಟೆ ಹುಡುಕಿದರು. ಹುಡುಕುವ ವೇಳೆ, ಧನರಾಜ್ ಅವರು ‘ಸ್ವಾಮಿ ಕೊರಗಜ್ಜ’ (Swami Koragajja) ಎಂದು ದೇವರನ್ನು ಸ್ಮರಿಸಿದರು. ಅಚ್ಚರಿ ಎಂದರೆ, ಧನರಾಜ್ ಅವರು ಸೇಫ್ ಆಗಿದ್ದಾರೆ.

    ಚೈತ್ರಾ ಕುಂದಾಪುರ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಹೋಗಿ ಬಂದಿದ್ದಾಗ ಹೊರ ಜಗತ್ತಿನ ವಿಷಯಗಳನ್ನೆಲ್ಲ ಅವರು  ಮನೆಯ ಒಳಗೆ ಹೇಳಿದ್ದರು. ಆಗ ಅವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಸುದೀಪ್ ಬುದ್ಧಿ ಹೇಳಿದ ಮೇಲೆ ಕೂಡ ಚೈತ್ರಾ ಅವರು ತಮ್ಮದೇ ಸರಿ ಎಂಬಂತೆ ವರ್ತಿಸಿದ್ದರು.

    2ಕ್ಕೂ ಹೆಚ್ಚು ಬಾರಿ ಕಳಪೆ ಪಟ್ಟ ತೆಗೆದುಕೊಂಡಿದ್ದ ಚೈತ್ರಾ ಕೊನೇ ವಾರದಲ್ಲಿ ಮಾತ್ರ ಅವರಿಗೆ ಎಲ್ಲರಿಂದ ಉತ್ತಮ ಪಟ್ಟ ಸಿಕ್ಕಿತ್ತು. ಕ್ಯಾಪ್ಟನ್ ಆಗಲು ಅವರಿಗೆ ಸಾಧ್ಯವಾಗಲಿಲ್ಲ. ಕಿಚ್ಚನ ಚಪ್ಪಾಳೆ ಕೂಡ ಸಿಗಲಿಲ್ಲ. ಆ ಬೇಸರದಲ್ಲೇ ಅವರು ಬಿಗ್ ಬಾಸ್ ಆಟವನ್ನು ಅಂತ್ಯಗೊಳಿಸಿದ್ದಾರೆ. ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ ಮನೆಗೆ ಚೈತ್ರಾ ಗುಡ್‌ ಬೈ ಹೇಳಿದ್ದಾರೆ.

  • BBK 11: ನನ್ನ ಆಟಕ್ಕೆ ತ್ರಿವಿಕ್ರಮ್‌ ತೊಂದರೆ ಆಗಿದ್ದಾರೆ: ವರಸೆ ಬದಲಿಸಿದ ಭವ್ಯಾ

    BBK 11: ನನ್ನ ಆಟಕ್ಕೆ ತ್ರಿವಿಕ್ರಮ್‌ ತೊಂದರೆ ಆಗಿದ್ದಾರೆ: ವರಸೆ ಬದಲಿಸಿದ ಭವ್ಯಾ

    ‘ಬಿಗ್ ಬಾಸ್’ (Bigg Boss Kannada 11) ಮನೆಯ ಆಟ ಇನ್ನೇನು 2 ವಾರಗಳಲ್ಲಿ ಕೊನೆಗೊಳ್ಳಲಿದೆ. ಮನೆಯಲ್ಲಿ ಸ್ಪರ್ಧಿಗಳ ಆಟ ರೋಚಕವಾಗಿದೆ. ಹೀಗಿರುವಾಗ ಮನೆಯಲ್ಲಿ ತಮ್ಮ ಜರ್ನಿಗೆ ಯಾರು ಅಡ್ಡಿಯಾಗಿದ್ದಾರೆ ಎಂದು ತಿಳಿಸಬೇಕು ಎಂದು ಸುದೀಪ್ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದಾರೆ. ಆಗ ನನ್ನ ಆಟಕ್ಕೆ ತ್ರಿವಿಕ್ರಮ್ (Trivikram) ತೊಂದರೆ ಆಗಿದ್ದಾರೆ ಎಂದು ಭವ್ಯಾ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಹಿರಿಯ ನಟ ಸರಿಗಮ ವಿಜಯ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ವಾರಾಂತ್ಯದ ಎಪಿಸೋಡ್‌ನಲ್ಲಿ ಬಣ್ಣದಿಂದಲೇ ಮಾರಿಹಬ್ಬ ಶುರುವಾಗಿದೆ. ಸುದೀಪ್‌ ಕೊಟ್ಟ ಟಾಸ್ಕ್‌ನಲ್ಲಿ ತ್ರಿವಿಕ್ರಮ್ ನನ್ನ ಆಟಕ್ಕೆ ಅಡ್ಡಿ ಎಂದಿದ್ದಾರೆ. ಅವರು ಬಳಸುವ ತಂತ್ರಗಾರಿಕೆ ಮತ್ತು ಮಾತನಾಡುವ ರೀತಿಯಾಗಿರಲಿ ಅದು ನನ್ನ ಆಟಕ್ಕೂ ತೊಂದರೆ ಆಗಿದೆ ಎಂದು ತ್ರಿವಿಕ್ರಮ್‌ ವಿರುದ್ಧ ಭವ್ಯಾ ಮಾತನಾಡಿದ್ದಾರೆ. ಸುದೀಪ್ ಎದುರಲ್ಲಿ ಮುಲಾಜಿಲ್ಲದೇ ಕೆಲವು ವಿಚಾರಗಳನ್ನು ಭವ್ಯಾ (Bhavya Gowda) ಹೇಳಿದ್ದಾರೆ. ತ್ರಿವಿಕ್ರಮ್ (Trivikram) ಮುಖಕ್ಕೆ ಬಣ್ಣದ ಬಾಂಬ್ ಸಿಡಿಸುವಂತೆ ಮಾಡಿದ್ದಾರೆ.

    ಆಗ ಭವ್ಯಾ ಮಾತು ಕೇಳಿ ತ್ರಿವಿಕ್ರಮ್ ಅವರಿಗೆ ಜ್ಞಾನೋದಯ ಆಗಿದೆ. ಮಾರಿಹಬ್ಬ ಶುರುವಾಗಿದೆ. ಅದರ ಬಣ್ಣ ಈಗ ಕಾಣಿಸುತ್ತಿದೆ ಎಂದು ತ್ರಿವಿಕ್ರಮ್ ಅವರು ಒಪ್ಪಿಕೊಂಡಿದ್ದಾರೆ. ಭವ್ಯಾ ಬಣ್ಣ ಈಗ ಗೊತ್ತಾಯ್ತು ಎಂಬರ್ಥದಲ್ಲಿ ತ್ರಿವಿಕ್ರಮ್ ಹೇಳಿದ್ದಾರೆ.

    ಆ ನಂತರ ಗೌತಮಿ, ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಅವರು ಹನುಮಂತ ಹೆಸರು ಹೇಳಿದ್ದಾರೆ. ಅವರು ನಮ್ಮ ಆಟಕ್ಕೆ ಅಡ್ಡಿ ಎಂದಿದ್ದಾರೆ. ನನ್ನ ಗೆಲವು ಅಂತ ನೋಡಿದಾಗ ಹನುಮಂತ ನನಗೆ ಅಡ್ಡವಾಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ ಗೌತಮಿ. ಬಳಿಕ ಚೈತ್ರಾ ಮಾತನಾಡಿ, ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಂದು ಆಗಾಗ ಸ್ವಿಚ್ ಆಫ್ ಆಗುತ್ತಿದ್ದೇನೆ ಎಂದು ಹೇಳಿ ಮನೆನೇ ಸ್ವಿಚ್ ಆಫ್ ಮಾಡುತ್ತಿದ್ದಾರೆ ಎಂದು ಹನುಮಂತಗೆ ಕೆಣಕಿದ್ದಾರೆ. ಇತ್ತ ತ್ರಿವಿಕ್ರಮ್ ಅವರು ಹನುಮಂತ ಎಲ್ಲರಿಗೂ ಹಲ್ವಾ ತಿನಿಸುತ್ತಿದ್ದಾರೆ ಎಂದಿದ್ದಾರೆ. ಇದಾದ ನಂತರ ಹನುಮಂತ ಅವರ ಮುಖಕ್ಕೂ ಬಣ್ಣದ ಬಾಂಬ್ ಸಿಡಿಸಿದ್ದಾರೆ.

    ಆಗ ನಾನು ಆಟ ಶುರು ಮಾಡಿ ಬಹಳ ದಿನ ಆಗಿದೆ ಸರ್. ಅದು ಇವತ್ತು ಇವರಿಗೆ ಗೊತ್ತಾಗಿದೆ ಎಂದು ಸುದೀಪ್ ಮುಂದೆ ಹನುಮಂತ ಮನೆ ಮಂದಿಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಮನೆ ಮಂದಿಗೆ ಹನುಮಂತ ಠಕ್ಕರ್ ಕೊಟ್ಟಿದ್ದಾರೆ.

  • BBK 11: ಅದಿತಿ ಹನುಮಂತುಗೆ ಹೇಳಿದ ಮಾತಿಗೆ ನೆಟ್ಟಿಗರ ಚಪ್ಪಾಳೆ

    BBK 11: ಅದಿತಿ ಹನುಮಂತುಗೆ ಹೇಳಿದ ಮಾತಿಗೆ ನೆಟ್ಟಿಗರ ಚಪ್ಪಾಳೆ

    ಬಿಗ್ ಬಾಸ್ ಮನೆಗೆ (Bigg Boss Kannada 11) ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ದ ಹನುಮಂತಗೆ (Hanumantha) ಎದುರಾಳಿಗಳಿಗೆ ಸೈಲೆಂಟ್ ಆಗಿ ಠಕ್ಕರ್ ಕೊಟ್ಟಿದ್ದಾರೆ. ಫಿನಾಲೆ ಟಿಕೆಟ್ ಪಡೆದು ಡೈರೆಕ್ಟ್ ಆಗಿ ಕೊನೆಯ ವಾರಕ್ಕೆ ಹೋಗಿದ್ದಾರೆ. ಮನೆಗೆ ಗೆಸ್ಟ್‌ ಆಗಿ ಬಂದಿದ್ದ ನಟಿ ಅದಿತಿ ಪ್ರಭುದೇವ ಮತ್ತು ಶರಣ್ ಅವರು ಫಿನಾಲೆ ಟಿಕೆಟ್ ಅನ್ನು ಹನುಮಂತಗೆ ವಿತರಿಸಿದ್ದಾರೆ. ಈ ವೇಳೆ ಹನುಮಂತನ ಮನಸ್ಸು ಬೆಳ್ಳಗಿದೆ ಎಂದು ನಟಿ ಕೊಂಡಾಡಿದ್ದಾರೆ. ಇದನ್ನೂ ಓದಿ:ಯಾವುದೇ ಹಾಡನ್ನು ಕದ್ದಿಲ್ಲ, ಕಾನೂನು ಸಮರಕ್ಕೆ ಸಿದ್ಧ: ಚಂದನ್‌ ಶೆಟ್ಟಿ

    ಹಗ್ಗದಿಂದ ಮಾಡಿದ ದೊಡ್ಡ ಜಾಲದ ಮಾದರಿಯನ್ನು ಗಾರ್ಡನ್ ಏರಿಯಾದಲ್ಲಿ ನಿಲ್ಲಿಸಲಾಗಿತ್ತು. ಇದರ ಮೇಲೆ ವಿವಿಧ ಕೀ ಇರುತ್ತದೆ. ಈ ಕೀನ ತೆಗೆದುಕೊಂಡ ಸ್ಪರ್ಧಿ ಮರಳಿ ಬಂದು ಕೀ ಮೂಲಕ ಪೆಟ್ಟಿಗೆ ತೆಗೆಯಬೇಕು. ತೆಗೆದ ಬಳಿಕ ಆ ಬಾಕ್ಸ್‌ನಲ್ಲಿರುವ ಬಾವುಟವನ್ನು ಹಿಡಿದು ಮತ್ತೆ ಹಗ್ಗದ ಜಾಲವನ್ನು ಏರಿ, ಅದರ ಮೇಲಿರುವ ಒಂದು ಹಲಗೆಯ ಮೇಲೆ ನಿಂತು ಬಾವುಟವನ್ನು ಅಲ್ಲಿರುವ ಪೈಪ್‌ಗೆ ಸಿಕ್ಕಿಸಿ ಬಿಗ್ ಬಾಸ್ ಎಂದು ಕೂಗಿ ಹೇಳಬೇಕು. ಭವ್ಯಾ, ರಜತ್, ತ್ರಿವಿಕ್ರಮ್‌ಗಿಂತ ಮುನ್ನ ಹನುಮಂತ ಆಟ ಪೂರ್ಣಗೊಳಿಸಿದ್ದಾರೆ. ಹನುಮಂತ ಅವರು ಎರಡು ನಿಮಿಷ 27 ಸೆಕೆಂಡ್‌ನಲ್ಲಿ ಟಾಸ್ಕ್ ಪೂರ್ಣಗೊಳಿಸಿ ಭೇಷ್ ಎನಿಸಿಕೊಂಡರು. ಈ ಮೂಲಕ ಟಿಕೆಟ್ ಟು ಫಿನಾಲೆ ಟಿಕೆಟ್‌ನ ತಮ್ಮದಾಗಿಸಿಕೊಂಡರು.

    ಈ ಟಿಕೆಟ್ ನೀಡೋಕೆ ಶರಣ್ ಹಾಗೂ ಅದಿತಿ ಬಂದಿದ್ದರು. ಟಿಕೆಟ್ ನೀಡಿದ ಬಳಿಕ ಮನೆಯಿಂದ ತೆರಳುವ ಸಮಯದಲ್ಲಿ ಹನುಮಂತ ಹಾಗೂ ಅದಿತಿ (Aditi Prabhudeva) ಪ್ರತ್ಯೇಕವಾಗಿ ಹೋಗಿ ನಿಂತರು. ಈ ವೇಳೆ, ಅದಿತಿ ಹನುಮಂತನ ಕೈ ಸಹಾಯದಿಂದ ಹಾರ್ಟ್ ಮಾಡಲು ಹೋದರು. ಆಗ ಹನುಮಂತಗೆ ಅದಿತಿ ಕೈ ಬಣ್ಣ ನೋಡಿ,”ನನ್ನ ಕೈ ಬಣ್ಣ ಕಪ್ಪಗಿದೆ” ಎಂದು ಹೇಳಿದರು. ಕೂಡಲೇ ಅದಿತಿ,” ನಿಮ್ಮ ಮನಸ್ಸು ತುಂಬಾ ಬೆಳ್ಳಗಿದೆ” ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ಹನುಮಂತ ನಾಚಿ ನೀರಾದರು. ಅದಿತಿ ಹೇಳಿದ ಈ ಮಾತಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • BBK 11: ‘ಕರ್ನಾಟಕವೇ ಮೆಚ್ಚುವಂತೆ ಆಟ ಆಡುತ್ತೀದ್ದೀರಿ’- ಹನುಮಂತನ ಆಟಕ್ಕೆ ಕಿಚ್ಚನ ಮೆಚ್ಚುಗೆ

    BBK 11: ‘ಕರ್ನಾಟಕವೇ ಮೆಚ್ಚುವಂತೆ ಆಟ ಆಡುತ್ತೀದ್ದೀರಿ’- ಹನುಮಂತನ ಆಟಕ್ಕೆ ಕಿಚ್ಚನ ಮೆಚ್ಚುಗೆ

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ (Bigg Boss Kannada 11) ಫಿನಾಲೆಗೆ ಇನ್ನೊಂದು ವಾರವೇ ಬಾಕಿ ಇದೆ. ಈ ವಾರ ಮುಗಿಯಿತೆಂದರೆ ಶುರುವಾಗುವುದು ಫಿನಾಲೆಯಲ್ಲಿ ಗೆದ್ದುಗೆ ಗುದ್ದಾಟ. ಇದೆಲ್ಲದರ ಮಧ್ಯೆ ಕಳೆದ ವಾರ ಅದ್ಭುತವಾಗಿ ಆಡಿದ ಹನುಮಂತುಗೆ ಫಿನಾಲೆ ಟಿಕೆಟ್ ದೊರೆತಿದೆ. ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್, ಹನುಮಂತ (Hanumantha) ಅವರ ಆಟವನ್ನು ಬಹುವಾಗಿ ಕೊಂಡಾಡಿದರು. ಕರ್ನಾಟಕವೇ ಮೆಚ್ಚುವಂತೆ ಆಡುತ್ತಿದ್ದೀರಿ ಎಂದರು. ಇದನ್ನೂ ಓದಿ:ಈ ಬಾರಿಯೂ ಮೈಸೂರಿನಲ್ಲೇ ಸಂಕ್ರಾಂತಿ ಆಚರಿಸಲಿದ್ದಾರೆ ದರ್ಶನ್

    ಈ ವಾರ ಫಿನಾಲೆ ಟಿಕೆಟ್‌ ಬಾಚಿಕೊಳ್ಳಲು ಹನುಮಂತನ ಆಟದ ವೈಖರಿಯನ್ನು ಸುದೀಪ್‌ ಹಾಡಿಹೊಗಳಿದ್ದಾರೆ. ಇತರೆ ಸ್ಪರ್ಧಿಗಳಿಗೆ ಹನುಮಂತನ ಆಟ ಹೇಗನ್ನಿಸಿತು? ಎಂಬುದನ್ನು ಸುದೀಪ್ ಕೇಳಿದ್ದಾರೆ. ಆ ವೇಳೆ, ಒಬ್ಬೊಬ್ಬರು ಒಂದೊಂದು ರೀತಿ ಹನುಮಂತನ ಆಟವನ್ನು ವಿಶ್ಲೇಷಿಸಿದರು. ಹನುಮಂತ ಎಲ್ಲವನ್ನೂ ಬಚ್ಚಿಟ್ಟುಕೊಳ್ಳುತ್ತಾನೆ ಬಹಳ ಸ್ಮಾರ್ಟ್ ಎಂದು ಭವ್ಯಾ ಹೇಳಿದರು. ಆಗ ಸುದೀಪ್‌, ಆ ಗುಣ ನನ್ನಲ್ಲೂ ಇದೆ. ನಾನು ಸಹ ಏನೂ ಮಾತನಾಡುವುದಿಲ್ಲ, ಏನನ್ನೂ ಹೇಳುವುದಿಲ್ಲ. ನನಗೆ ಹೇಳಲು ಇಷ್ಟ ಇಲ್ಲ ಎಂದಲ್ಲ. ಹೇಳಿದರೆ ಅವರಿಗೆ ಅರ್ಥ ಆಗುವುದಿಲ್ಲ. ಬರೀ ವಾದ ನನಗೆ ಇಷ್ಟವಿಲ್ಲ. ಈ ವಿಷಯದಲ್ಲಿ ಹನುಮಂತನ ಗುಣ ನನ್ನಲ್ಲೂ ಇದೆ. ಹಾಗಿದ್ದರೆ ನಾನೂ ಸಹ ಸ್ಮಾರ್ಟ್ ಹಾ ಎಂದು ಪ್ರಶ್ನೆ ಮಾಡಿದರು.

    ಹನುಮಂತ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತನ್ನ ಮುಂದಿರುವ ಗುರಿ ನೋಡುತ್ತಾನೆ. ಅದನ್ನು ಆಡಿ ಗೆಲ್ಲುತ್ತಾನೆ ಬೇರೆ ಏನೇನೋ ಲೆಕ್ಕಾಚಾರ ಹಾಕುವುದಿಲ್ಲ, ಓವರ್ ಥಿಂಕಿಂಗ್ ಮಾಡುವುದಿಲ್ಲ ಅದೇ ಅವನ ಗೆಲುವಿನ ಸೂತ್ರ ಎಂದು ಸುದೀಪ್‌ (Sudeep) ಕೊಂಡಾಡಿದ್ದಾರೆ. ಎಲ್ಲರೂ ಕಪ್ ಗೆಲ್ಲೋಕೆ ಆಡುತ್ತಿದ್ದಾರೆ ನಾವು ಟಾಸ್ಕ್ ಗೆಲ್ಲೋಣ ಎನ್ನುತ್ತಾರೆ ಹನುಮಂತು. ಅವರಷ್ಟು ಸುಲಭವಾಗಿ ಆಟವನ್ನು ತೆಗೆದುಕೊಂಡಿರುವವರನ್ನು ನಾನು ಬಹಳ ಕಡಿಮೆ ಸ್ಪರ್ಧಿಗಳನ್ನು ನೋಡಿದ್ದೇನೆ. ಯಾರು ಹೀಗೆ ಸಿಂಪಲ್ ಆಗಿ ಆಟವನ್ನು ತೆಗೆದುಕೊಳ್ಳುತ್ತಾರೋ ಅವರೇ ಅಂತಿಮವಾಗಿ ಗೆಲ್ಲುತ್ತಾರೆ. ವಾರಾಂತ್ಯದಲ್ಲಿ ಎಲ್ಲರೂ ಚೆನ್ನಾಗಿ ಮೇಕಪ್ ಮಾಡಿಕೊಂಡು ಬರುತ್ತಾರೆ. ಈ ವ್ಯಕ್ತಿ ಒಂದು ಶರ್ಟ್, ಪಂಚೆ ತೊಟ್ಟು ಸರಳವಾಗಿ ಬರುತ್ತಾರೆ. ಅತಿಯಾಗಿ ಯಾವ ವಿಚಾರವನ್ನು ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.

    ಮೊದಲ ವಾರವೇ ಟಾಸ್ಕ್ ಆಡಲಾಗದೆ ತಲೆಸುತ್ತಿ ಬಿದ್ದು ಹೋಗಿದ್ದರು. ಈಗ ಕರ್ನಾಟಕವೇ ಮೆಚ್ಚುವಂತೆ ಹನುಮಂತ ಆಟ ಆಡುತ್ತಿದ್ದಾರೆ ಎಂದು ಸುದೀಪ್‌ ಮನಸಾರೆ ಹೊಗಳಿದರು.  ಹನುಮಂತ ಮಾತನಾಡಿ, ನಾನೇನು ಗೆಲ್ಲಲೇಬೇಕು ಎಂದು ಆಡುವುದಿಲ್ಲ ರೀ, ನನಗೆ ಹೇಗೆ ಬರುತ್ತದೆಯೋ ಹಾಗೆ ಆಡುತ್ತೇನೆ ಎಂದಿದ್ದಾರೆ.  ಮಾತನ್ನು ಸುದೀಪ್‌ ಮೆಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹನುಮಂತ ಆಟ ನೋಡಿ ಬಿಗ್‌ ಬಾಸ್‌ ಟ್ರೋಫಿಯನ್ನು ಇವರೇ ಗೆಲ್ಲಬಹುದು ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ.

  • BBK 11: ಗೆಲುವಿಗಾಗಿ ವರಸೆ ಬದಲಿಸಿದ ಭವ್ಯಾಗೆ ಕಿವಿಹಿಂಡಿದ ತ್ರಿವಿಕ್ರಮ್‌

    BBK 11: ಗೆಲುವಿಗಾಗಿ ವರಸೆ ಬದಲಿಸಿದ ಭವ್ಯಾಗೆ ಕಿವಿಹಿಂಡಿದ ತ್ರಿವಿಕ್ರಮ್‌

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ (Bigg Boss Kannada 11) ತ್ರಿವಿಕ್ರಮ್ ಹಾಗೂ ಭವ್ಯಾ (Bhavya Gowda) ನಡುವೆ ಉತ್ತಮ ಒಡನಾಟವಿದೆ. ಈ ಗೆಳೆತನ ಇತ್ತೀಚೆಗೆ ದೂರಾದಂತೆ ಕಂಡರೂ ಮತ್ತೆ ಇಬ್ಬರೂ ಒಂದಾಗುತ್ತಿದ್ದಾರೆ. ಇಷ್ಟು ದಿನ ಗೆಳತಿ ಭವ್ಯಾ ತಪ್ಪುಗಳನ್ನು ತ್ರಿವಿಕ್ರಮ್‌ (Trivikram) ಹೇಳುತ್ತಿರಲಿಲ್ಲ. ಈಗ ಅವರು ಓಪನ್ ಆಗಿ ತ್ರಿವಿಕ್ರಮ್ ತಪ್ಪುಗಳನ್ನು ಭವ್ಯಾಗೆ ಹೇಳುತ್ತಿದ್ದಾರೆ. ಭವ್ಯಾ ಮಾಡಿದ ತಪ್ಪುವೊಂದನ್ನು ಎತ್ತಿ ತೋರಿಸಿದ್ದಾರೆ.

    ನಿನ್ನೆಯ ಸಂಚಿಕೆಯಲ್ಲಿ ಟಾಸ್ಕ್ ಆಡುವಾಗ ಭವ್ಯಾ ಮೇಲೆ ಅಟ್ಯಾಕ್ ಮಾಡಲು ಸಹಸ್ಪರ್ಧಿಗಳು ಬಂದರು. ಆಗ ಅವರು ಹೊಟ್ಟೆ ನೋವಿದೆ ಎಂದು ರಾಗ ತೆಗೆದರು. ಇದಾದ ಮರುಕ್ಷಣವೇ ಗೌತಮಿ ಮೇಲೆ ಭವ್ಯಾ ಅಟ್ಯಾಕ್ ಮಾಡಲು ಮುಂದಾದರು. ಈಗ ಹೊಟ್ಟೆ ನೋವು ಎಲ್ಲೋಯ್ತು ಎಂದು ಗೌತಮಿ ಗುಡುಗಿದರು. ಆಗ ಭವ್ಯಾ ಅವರು ನಾಟಕ ಮಾಡುತ್ತಿದ್ದಾರೆ ಎಂದು ಮನೆ ಮಂದಿಗೆ ಅನಿಸಿದೆ. ಈ ವಿಚಾರವಾಗಿ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ:ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ – ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಧನಶ್ರೀ

    ನನಗೆ ಆಟದಿಂದಾಗಿ ಫ್ರಸ್ಟ್ರೇಷನ್ ಆಯಿತು. ನಾನು ಏನು ಮಾಡುತ್ತಿದ್ದೇನೆ ಎಂಬುದು ನನ್ನ ಅರಿವಿಗೆ ಬರಲಿಲ್ಲ. ಡಾಕ್ಟರ್ ಬಳಿ ಹೋದಾಗ ಅವರು ಎಲ್ಲವೂ ಚೆನ್ನಾಗಿಯೇ ಇದೆ ಎಂದರು. ನನಗೇನು ಆಗಿಲ್ಲ ಎಂದು ಹೇಳಿ ನಾನು ಬಂದೆ ಎಂದು ಭವ್ಯಾ ಹೇಳಿಕೊಂಡರು. ನೀನು ಮಾಡಿದ್ದು ನಾಟಕ ಎಂದು ಎಲ್ಲರಿಗೂ ಅನಿಸಿತು ಎಂದು ತಪ್ಪನ್ನು ತಿದ್ದುವ ಕೆಲಸ ಮಾಡಿದರು ತ್ರಿವಿಕ್ರಮ್. ಹತಾಶೆಯಿಂದ ಈ ರೀತಿ ಆಯಿತು ಎಂದು ಭವ್ಯಾ ಮತ್ತೆ ತ್ರಿವಿಕ್ರಮ್‌ಗೆ ಸ್ಪಷ್ಟನೆ ಕೊಡುವ ಕೆಲಸ ಮಾಡಿದರು.

    ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ಧನರಾಜ್ ಕೂಡ ನಾಮಿನೇಷನ್ ಲಿಸ್ಟ್‌ನಲ್ಲಿದ್ದಾರೆ. ವೀಕೆಂಡ್‌ನಲ್ಲಿ ಒಬ್ಬರು ದೊಡ್ಮನೆಯಿಂದ ಹೊರಹೋಗುವುದು ಖಚಿತ. ಎಲ್ಲದಕ್ಕೂ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.

  • BBK 11: ಭವ್ಯಾ ಇಲ್ಲಿಯವರೆಗೆ ಬರಲು ನಾನೇ ಕಾರಣ- ವರಸೆ ಬದಲಿಸಿದ ತ್ರಿವಿಕ್ರಮ್

    BBK 11: ಭವ್ಯಾ ಇಲ್ಲಿಯವರೆಗೆ ಬರಲು ನಾನೇ ಕಾರಣ- ವರಸೆ ಬದಲಿಸಿದ ತ್ರಿವಿಕ್ರಮ್

    ಬಿಗ್‌ ಬಾಸ್‌ ಮನೆಯಲ್ಲಿ (BBK 11) ಪ್ರೇಮ ಪಕ್ಷಿಗಳಾಗಿದ್ದ ಭವ್ಯಾ (Bhavya Gowda) ಮತ್ತು ತ್ರಿವಿಕ್ರಮ್‌ (Trivikram) ದೂರ ದೂರ ಆಗಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ಸ್ಪರ್ಧಿಗಳ ಫ್ಯಾಮಿಲಿ ಎಂಟ್ರಿ. ತ್ರಿವಿಕ್ರಮ್ ತಾಯಿ ಆಗಮಿಸಿ ಭವ್ಯಾನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ತ್ರಿವಿಕ್ರಮ್ ಅವರು ಭವ್ಯಾರಿಂದ ದೂರ ಆಗುವ ಪ್ರಯತ್ನದಲ್ಲಿದ್ದಾರೆ. ಈ ಮಧ್ಯೆ ಅವರು ಆಡಿದ ಮಾತೊಂದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ:ಮದುವೆ ಯಾವಾಗ? ಎಂದಿದ್ದಕ್ಕೆ ನಾಚಿ ನೀರಾದ ರಮ್ಯಾ

    ಭವ್ಯಾ ಹಾಗೂ ತ್ರಿವಿಕ್ರಮ್ ಮಧ್ಯೆ ಉತ್ತಮ ಒಡನಾಟ ಇತ್ತು. ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದರು. ಒಬ್ಬರ ನೆರಳು ಒಬ್ಬರ ಮೇಲೆ ಇತ್ತು. ಇತ್ತೀಚೆಗೆ ಕುಟುಂಬದವರು ಬಂದಾಗ ತ್ರಿವಿಕ್ರಮ್‌ಗೆ ಅವರ ತಾಯಿ ಬುದ್ಧಿ ಮಾತು ಹೇಳಿ ಹೋಗಿದ್ದರು. ಅಲ್ಲದೆ, ಸುದೀಪ್ ಕಡೆಯಿಂದಲೂ ಈ ವಿಚಾರವಾಗಿ ಸಾಕಷ್ಟು ಸಲಹೆ ನೀಡಿದ್ದರು. ಈಗ ತ್ರಿವಿಕ್ರಮ್ ಅವರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

    ಭವ್ಯಾಗೆ ಏನೇ ವಿಚಾರ ಇದ್ದರೂ ನೇರವಾಗಿ ಹೇಳುವ ಕೆಲಸವನ್ನೂ ಮಾಡಿದ್ದಾರೆ. ಇದು ಭವ್ಯಾಗೆ ಬೇಸರ ಮೂಡಿಸಿದೆ.  ಹಾಗಾದರೆ ಭವ್ಯಾ ಇಲ್ಲಿಯವರೆಗೆ ಬರೋಕೆ ತ್ರಿವಿಕ್ರಮ್ ಅವರು ಕಾರಣವಾ? ಹೀಗೊಂದು ಪ್ರಶ್ನೆ ಹುಟ್ಟುಹಾಕುವಂಥ ಮಾತು ಅವರ ಕಡೆಯಿಂದ ಬಂದಿದೆ. ನಿನ್ನೆಯ (ಜ.6) ಸಂಚಿಕೆಯಲ್ಲಿ ತ್ರಿವಿಕ್ರಮ್ ಹಾಗೂ ರಜತ್ ಅವರು ಕುಳಿತು ಮಾತನಾಡುತ್ತಿದ್ದರು. ಮನೆಗೆ ಬಂದು ಕಾಂಪಿಟೇಟರ್‌ನ ರೆಡಿ ಮಾಡಿ ನನಗೆ ಎದುರಾಳಿಯಾಗಿ ಬಿಟ್ಟುಕೊಂಡಂತೆ ಆಯಿತು ಎಂದರು ತ್ರಿವಿಕ್ರಮ್. ಅಂದರೆ, ಭವ್ಯಾನ ಒಳ್ಳೆಯ ಎದುರಾಳಿಯನ್ನಾಗಿ ಮಾಡಿ ಈಗ ಅವರ ಎದುರೇ ನಿಲ್ಲುವಂತೆ ಮಾಡಿಕೊಂಡಿದ್ದಾರೆ ಎಂಬರ್ಥದಲ್ಲಿ ತ್ರಿವಿಕ್ರಮ್‌ ಮಾತನಾಡಿದ್ದಾರೆ ಎಂದು ಫ್ಯಾನ್ಸ್‌ ಊಹಿಸಿದ್ದಾರೆ. ಒಟ್ನಲ್ಲಿ ಚೆನ್ನಾಗಿದ್ದ ಜೋಡಿಗಳ ನಡುವೆ ಬಿರುಕು ಮೂಡಿದೆ.