Tag: bbk 11

  • BBK 11: ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ: ಭವ್ಯಾಗೆ ಗುರೂಜಿ ಭವಿಷ್ಯ

    BBK 11: ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ: ಭವ್ಯಾಗೆ ಗುರೂಜಿ ಭವಿಷ್ಯ

    ‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಭವ್ಯಾ ಗೌಡ ಅವರು ತ್ರಿವಿಕ್ರಮ್ (Trivikram) ಜೊತೆಗಿನ ಸ್ನೇಹ ವಿಚಾರವಾಗಿ ಹೈಲೆಟ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದಾರೆ. ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ ಎಂದು ಭವ್ಯಾಗೆ (Bhavya Gowda) ಗುರೂಜಿ ಕಿವಿ ಮಾತೊಂದನ್ನು ಹೇಳಿದ್ದಾರೆ. ಇದನ್ನೂ ಓದಿ:ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ

    ಭವ್ಯಾ ಅವರನ್ನು ಕರೆದು ವಿದ್ಯಾಶಂಕರಾನಂದ ಸರಸ್ವತಿ ಅವರು ಭವಿಷ್ಯ ಹೇಳಿದ್ದಾರೆ. ಈ ವೇಳೆ ಅವರಿಗೆ ಎಚ್ಚರಿಕೆ ನೀಡುವ ಕೆಲಸ ಆಗಿದೆ. ಜಾತಕದ ಅನ್ವಯ ಪ್ರಸ್ತುತ ಶನಿ ದಶಾ ನಡೆಯುತ್ತಿದೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಕೂದಲು ಉದುರುವುದು, ಹಲ್ಲು ನೋವು, ಜಾಯಿಂಟ್ ಪೇನ್ ಬರುತ್ತದೆ. ಶನಿ ಸಣ್ಣಪುಟ್ಟ ಸಮಸ್ಯೆ ಕೊಡುತ್ತಾನೆ. ಇದನ್ನು ನಿರ್ಲಕ್ಷ್ಯ ಮಾಡಬಹುದು. ಶನಿ ಹೋದಮೇಲೆ ಅದೂ ಹೋಗುತ್ತದೆ ಎಂದಿದ್ದಾರೆ ಗುರೂಜಿ.

    2027ರಿಂದ ನಿನ್ನ ಭವಿಷ್ಯದಲ್ಲಿ ಸುವರ್ಣಯುಗ. ನೀನು ಫ್ಯಾಷನ್ ಇಂಡಸ್ಟ್ರೀಗೆ ಸಂಬಂಧಿಸಿ ಉದ್ಯಮ ಆರಂಭಿಸುತ್ತೀಯ ಎಂದಿದ್ದಾರೆ ಅವರು. ಆ ಬಳಿಕ ವೀಳ್ಯದ ಎಲೆ ಎತ್ತಲು ಗುರೂಜಿ ಹೇಳಿದರು. 15 ಎಲೆಯನ್ನು ಭವ್ಯಾ ಎತ್ತಿಕೊಟ್ಟರು. ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:ಸೈಫ್‌ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಕೇಂದ್ರದ ವಶಕ್ಕೆ?

    ಇನ್ನೂ ಬಿಗ್ ಬಾಸ್‌ನಲ್ಲಿ ತ್ರಿವಿಕ್ರಮ್ ಅವರು ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಅದನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ನಮ್ಮೀಬ್ಬರ ನಡುವೆ ಏನಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಇದನ್ನೇ ಗುರೂಜಿ ಪರೋಕ್ಷವಾಗಿ ಭವ್ಯಾಗೆ ಹೇಳಿದ್ರಾ? ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

  • BBK 11: ಒಳ್ಳೆಯ ಸಂಗಾತಿ ಸಿಗುತ್ತಾಳೆ- ಮಂಜು ಮದುವೆ ಬಗ್ಗೆ ಭವಿಷ್ಯ ನುಡಿದ ಗುರೂಜಿ

    BBK 11: ಒಳ್ಳೆಯ ಸಂಗಾತಿ ಸಿಗುತ್ತಾಳೆ- ಮಂಜು ಮದುವೆ ಬಗ್ಗೆ ಭವಿಷ್ಯ ನುಡಿದ ಗುರೂಜಿ

    ಬಿಗ್ ಬಾಸ್ ಮನೆಗೆ (Bigg Boss Kannada 11) ಎಂಟ್ರಿ ಕೊಟ್ಟ ಉಗ್ರಂ ಮಂಜು ಉಗ್ರವಾಗಿ ಆಡಿ ಗಮನ ಸೆಳೆದಿದ್ದರು. ಸಹಸ್ಪರ್ಧಿಗಳಿಗೆ ಅವರು ಠಕ್ಕರ್ ಕೊಡುತ್ತಿದ್ದಾರೆ. ಇದೀಗ ‘ಮಹರ್ಷಿ ದರ್ಶನ’ ಖ್ಯಾತಿಯ ವಿದ್ಯಾಶಂಕರಾನಂದ ಸರಸ್ವತಿ ಬಿಗ್ ಬಾಸ್‌ಗೆ ಆಗಮಿಸಿದ್ದಾರೆ. ಇನ್ನೂ ಮಂಜುಗೆ ಈಗ 38 ವರ್ಷ ವಯಸ್ಸು. ಮದುವೆ (Wedding) ಯಾವಾಗ ಎನ್ನುವ ಪ್ರಶ್ನೆ ಅವರಲ್ಲಿ ಇದೆ. ಹಾಗಾಗಿ ಮಂಜು (Ugramm Manju) ಮದುವೆ ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಮನೆಗೆ ಎಂಟ್ರಿ ಕೊಟ್ಟ ಗುರೂಜಿ ಜೊತೆ ವೈಯಕ್ತಿಕ ಬದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಂಗಿಯರ ಮದುವೆ ಆದಮೇಲೆ ಆಗೋಣ ಎಂದುಕೊಂಡಿದ್ದೆ. ಈಗ 38 ವರ್ಷ ವಯಸ್ಸು ಎಂದರು ಮಂಜು ಅವರು. ಇದಕ್ಕೆ ಉತ್ತರಿಸಿದ ವಿದ್ಯಾಶಂಕರಾನಂದ ಸರಸ್ವತಿ, ನೀನು ಎಮೋಷನಲ್ ಫೂಲ್. ಹೊರಗಡೆ ನೋಡೋದಕ್ಕೆ ಹಲಸಿನ ಹಣ್ಣಿನ ರೀತಿ ಒರಟು ಆಗಿದ್ದೀಯಾ. ಆದರೆ, ನಿನ್ನ ಮನಸ್ಸು ತೊಳೆಗಳ ರೀತಿ ಮೃದು. ಯಾವಾಗಲೂ ಅಸ್ಥಿರತೆ ಕಾಡುತ್ತಿದೆ. ಮೋಸ ಹೋದರೆ ಅಥವಾ ಬೇರೆಯವರಿಗೆ ಅನ್ಯಾಯ ಆದರೆ ಎನ್ನುವ ಭಾವನೆಯಲ್ಲೇ ಬದುಕುತ್ತೀಯ ಎಂದು ಗುರೂಜಿ ಮಾತನಾಡಿದ್ದಾರೆ.

    ಬದುಕು ಯಾವಾಗಲೂ ಅಸ್ಥಿರವೇ, ಅದರಲ್ಲಿ ಸ್ಥಿರತೇ ಕಂಡುಕೊಳ್ಳಬೇಕು. ಮುಂದಿನ ನಾಲ್ಕು ವರ್ಷ ಅಂದರೆ 2029ರವರೆಗೆ ತಿರುಗಿ ನೋಡುವ ಮಾತೇ ಇಲ್ಲ. 2026ರವರೆಗೆ ಕಂಕಣ ಬಲ ಇದೆ. ಹೊರಗೆ ಹೋಗ್ತಾ ಇದ್ದ ಹಾಗೆ ಮದುವೆ ಆಗುತ್ತದೆ. ಒಳ್ಳೆಯ ಸಂಗಾತಿ ಬರುತ್ತಾಳೆ. ಮಂಜು ಎಂದರೆ, ಒಳ್ಳೆಯ ಹೆಸರು ಬರುತ್ತದೆ. ತಲೆಗೆ ಏರಿಸಿಕೊಳ್ಳಬೇಡ ಎಂದು ಕಿವಿ ಮಾತು ಹೇಳಿದರು. ಇದಕ್ಕೆ ಮಂಜು ಖುಷಿಯಿಂದ ತಲೆ ಆಡಿಸಿದರು. ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ. ತಾಯಿಯನ್ನು ಕಳೆದುಕೊಳ್ಳೋಕೆ ಹೋಗಲೇಬಾರದು ಎಂದು ಗುರೂಜಿ ಹೇಳುತ್ತಿದ್ದಂತೆ ನೀವು ಹೇಳಿದ್ದು ಸರಿ ಇದೆ ಎಂದರು ಮಂಜು.

    ಇನ್ನೂ ಫಿನಾಲೆ ವಾರದಲ್ಲಿ 6 ಸ್ಪರ್ಧಿಗಳಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್‌, ಭವ್ಯಾ ಗೌಡ, ಮೋಕ್ಷಿತಾ, ಹನುಮಂತ, ರಜತ್‌  ಈ ಸ್ಪರ್ಧಿಗಳು ಟಾಪ್‌ 6 ಫೈನಲಿಸ್ಟ್‌ ಆಗಿದ್ದಾರೆ. ಯಾರಿಗೆ ಬಿಗ್‌ ಬಾಸ್‌ ವಿನ್ನರ್‌ ಪಟ್ಟ ಯಾರ ಪಾಲಾಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

  • ಸುದೀಪ್ ಇಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ: ಧನರಾಜ್ ಆಚಾರ್

    ಸುದೀಪ್ ಇಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ: ಧನರಾಜ್ ಆಚಾರ್

    ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ (Kiccha Sudeep) ವಿದಾಯ ಘೋಷಿಸಿದ ಬೆನ್ನಲ್ಲೇ ಅಭಿಮಾನಿಗಳು ಬೇಸರ ವ್ಕಕ್ತಪಡಿಸುತ್ತಿದ್ದಾರೆ. ಈ ಕುರಿತು ‘ಬಿಗ್‌ ಬಾಸ್‌ ಕನ್ನಡ 11’ರ ರಿಯಾಕ್ಟ್ ಮಾಡಿ, ಸುದೀಪ್ ಇಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆ.

    ಸುದೀಪ್ ಅವರ ಈ ನಿರ್ಧಾರ ಬಿಗ್ ಬಾಸ್ ಕಂಟೆಸ್ಟಂಟ್‌ಗಳಿಗೂ ಬೇಸರ ತಂದಿದೆ. ಸುದೀಪ್ ಇಲ್ಲದೇ ಬಿಗ್‌ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಈ ಸೀಸನ್‌ನಲ್ಲೇ ಇಲ್ಲ ಎನ್ನಲಾಗಿತ್ತು. ನಮ್ಮ ಅದೃಷ್ಟಕ್ಕೆ ಸುದೀಪ್ ಇದ್ದಾರೆ. ಮುಂದೆ ಸುದೀಪ್ ಸರ್ ನಿರೂಪಣೆ ಇರೋದಿಲ್ಲ ಅಂದ್ರೆ ಮುಂದೆ ಬರುವ ಕಂಟೆಸ್ಟಂಟ್‌ಗಳಿಗೆ ಅದು ದೊಡ್ಡ ನಿರಾಸೆ. ಅವರ ಕೊನೆಯ ಪಂಚಾಯ್ತಿಯಲ್ಲಿ ನಾವಿದ್ವಿ ಅನ್ನೋದೇ ನಮ್ಮ ಸೌಭಾಗ್ಯ ಎಂದಿದ್ದಾರೆ ಧನ್‌ರಾಜ್.

    ಇನ್ನೂ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ಪರ್ಧಿಗಳಿಗೆ ಅವರು ಆಡುತ್ತಿದ್ದ ಮಾತು ಸ್ಫೂರ್ತಿ ಕೊಡುತ್ತಿತ್ತು. ಸುದೀಪ್ ಸರ್ ಬಿಗ್ ಬಾಸ್‌ಗೆ ಬೇಕು ಎಂಬುದು ನಮ್ಮ ಆಸೆ ಎಂದಿದ್ದಾರೆ ಧನರಾಜ್. ಇದನ್ನೂ ಓದಿ:‘ಪುಷ್ಪ 2’ ಸಕ್ಸಸ್ ಬಳಿಕ ಮರಾಠಿ ಕ್ವೀನ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

    ಇನ್ನೂ ಜ.19ರ ಬಿಗ್ ಬಾಸ್ ಕೊನೆಯ ವೀಕೆಂಡ್ ಕಾರ್ಯಕ್ರಮ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಪ್ರತಿಕ್ರಿಯಿಸಿ, ಕಳೆದ 11 ಸೀಸನ್‌ಗಳಿಂದ ನಾನು ಬಿಗ್‌ಬಾಸ್ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

    ‘ಬಿಗ್ ಬಾಸ್’ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂಬ ಸಂತೋಷ ನನಗಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  • ಹನುಮಂತ ಆ ಹುಡುಗಿಯ ಮನಸ್ಸನ್ನು ಗೆದ್ದಿದ್ದಾನೆ: ಗೆಳೆಯನ ಮದುವೆ ಬಗ್ಗೆ ಧನರಾಜ್ ಮಾತು

    ಹನುಮಂತ ಆ ಹುಡುಗಿಯ ಮನಸ್ಸನ್ನು ಗೆದ್ದಿದ್ದಾನೆ: ಗೆಳೆಯನ ಮದುವೆ ಬಗ್ಗೆ ಧನರಾಜ್ ಮಾತು

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇನ್ನೇನು ಒಂದು ವಾರದಲ್ಲಿ ಅಂತ್ಯವಾಗಲಿದೆ. ಬಿಗ್ ಬಾಸ್ ಟ್ರೋಫಿಗಾಗಿ ಸ್ಪರ್ಧಿಗಳ ನಡುವೆ ಗುದ್ದಾಟ ನಡೆಯುತ್ತಿದೆ. ಹೀಗಿರುವಾಗ ಸದ್ಯ ಎಲಿಮಿನೇಟ್ ಆಗಿ ಬಂದಿರುವ ಸ್ಪರ್ಧಿ ಧನರಾಜ್ (Dhanraj Achar) ಅವರು ಗೆಳೆಯ ಹನುಮಂತನ ಮದುವೆ (Wedding) ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಇದು ನನ್ನ ಕೊನೆಯ ನಿರೂಪಣೆ, ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು: ಸುದೀಪ್‌ ಭಾವುಕ ಪೋಸ್ಟ್‌

    ಸಣ್ಣ ವಯಸ್ಸು, ಎಲ್ಲವೂ ಈಸಿಯಾಗಿ ಆಗುತ್ತದೆ ಅಂದುಕೊಂಡಿದ್ದಾರೆ. ಕಪ್ ಗೆದ್ದು ಅತ್ತೆಯ ಹತ್ತಿರ ಹೋದರೆ ಮಗಳನ್ನು ಕೊಡುವವರು ಯಾರು ನನಗೆ ಗೊತ್ತಿಲ್ಲ. ಜನರ ಮನಸ್ಸನ್ನು ಹನುಮಂತ (Hanumantha) ಗೆದ್ದಿದ್ದಾರೆ. ಜೊತೆಗೆ ಹುಡುಗಿಯ ಅಪ್ಪ, ಅಮ್ಮನ ಮನಸ್ಸು ಗೆಲ್ಲಲಿ ನಮ್ಮಷ್ಟು ಖುಷಿಪಡುವವರು ಯಾರಿಲ್ಲ. ಈಗಾಗಲೇ ಹುಡುಗಿಯ ಮನಸ್ಸು ಗೆದ್ದಿದ್ದಾರೆ ಅನ್ನೋದು ಅವರ ಮಾತಲ್ಲಿ ಗೊತ್ತಾಗುತ್ತಿದೆ. ಆ ಜೀವ ಹುಡುಗಿಗಾಗಿ ಕಾಯುತ್ತಿದೆ. ಯಾವತ್ತು ನೋಡಿದರೂ ಮದುವೆ ಮದುವೆ ಅಂತ ಹೇಳುತ್ತಿರುತ್ತಾರೆ ದೋಸ್ತ್. ಆದರೆ ಹುಡುಗಿ ವಿಚಾರದ ಬಗ್ಗೆ ಹೇಳೋಕೆ ತುಂಬಾ ಭಯಪಡುತ್ತಾನೆ ಎಂದಿದ್ದಾರೆ ಧನರಾಜ್.

    ಅವರು ಯಾವ ರೀತಿ ಹನುಮಂತನನ್ನು ಹುಡುಗಿಯ ಮನೆಯವರು ಒಪ್ಪಿಕೊಳ್ತಾರೆ ಗೊತ್ತಿಲ್ಲ. ಒಂದು ವೇಳೆ, ಹನುಮಂತ ಬಿಗ್ ಬಾಸ್ ಗೆದ್ದರೆ ಒಂದಿಷ್ಟು ಪ್ರೇಮಿಗಳಿಗೆ ಇದು ಪಾಠವಾಗಬಹುದು ಅನಿಸುತ್ತದೆ. ಅವರಂತೆ ಬಿಗ್ ಬಾಸ್‌ಗೆ ಹೋಗಿ ಕಪ್ ಗೆದ್ದು ಅಥವಾ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಹುಡುಗಿಯನ್ನು ಕೇಳೋಕೆ ಹೋಗೋಣ ಅನ್ನುವಂತೆ ಒಂದು ಪಾಠವಾಗಬಹುದು ಎಂದು ಧನರಾಜ್ ಅವರು ಹನುಮಂತ ಬಗ್ಗೆ ಮಾತನಾಡಿದ್ದಾರೆ.

    ನನ್ನ ದೋಸ್ತ್ ಹನುಮಂತ ನಿಷ್ಕಲ್ಮಷ ಮನಸಿನವನು. ಒಳ್ಳೆಯ ವ್ಯಕ್ತಿ, ಅವನ ಮನಸ್ಸಿನಲ್ಲಿ ಏನಿದೆ ಅದನ್ನು ನೇರವಾಗಿ ಹೇಳ್ತಾನೆ. ಒಬ್ಬರು ಇಷ್ಟ ಆಗಿದ್ದಾರೆ ಅಂದರೆ ಆ ಮನಸ್ಸು ಕೂಡ ಅಷ್ಟೇ ಒಳ್ಳೆಯದಿರಬಹುದು. ಆ ಮನಸ್ಸುಗಳು ಎರಡು ಇಷ್ಟಪಟ್ಟಿವೆ. ನೀವು ಮನಸ್ಸು ಮಾಡಿದ್ರೆ, ಆ ಮನಸ್ಸುಗಳನ್ನು ಒಂದು ಮಾಡಿದ್ರೆ ನೋಡೋ ಕರ್ನಾಟಕದ ಜನತೆ ಕೂಡ ಖುಷಿಪಡುತ್ತಾರೆ ಎಂದು ಹನುಮಂತನ ಮನದರಸಿಯ ಪೋಷಕರಿಗೆ ಧನರಾಜ್ ಮನವಿ ಮಾಡಿದ್ದಾರೆ.

    ಇನ್ನೂ ಬಿಗ್ ಬಾಸ್ ಮನೆಯಲ್ಲಿ ಇಷ್ಟಪಟ್ಟ ಹುಡುಗಿ ಬಗ್ಗೆ ಹನುಮಂತ ಮಾತನಾಡಿದ್ದಾರೆ. ಆದರೆ ಅವರು ಯಾರು? ಎಂಬುದನ್ನು ಎಲ್ಲೂ ರಿವೀಲ್ ಮಾಡಿಲ್ಲ. ಸುದೀಪ್ ಕೂಡ ವಾರಾಂತ್ಯದ ಎಪಿಸೋಡ್‌ನಲ್ಲಿ ಏನ್ರಿ ಕಪ್ ಗೆದ್ದರೆ ಮಗಳನ್ನು ಕೊಟ್ಟು ಅತ್ತೆ ಮದುವೆ ಮಾಡುತ್ತಾರಾ? ಎಂದು ಕಾಲೆಳೆದಿದ್ದಾರೆ. ಹನುಮಂತ ಆಗ ನಾಚಿ ನೀರಾಗಿದ್ದಾರೆ.

  • BBK 11: ಈ ಸಲ ಕಪ್‌ ನಮ್ಮದೇ: ತಾಯಿಗೆ ಹನುಮಂತ ಭಾವುಕ ಸಂದೇಶ

    BBK 11: ಈ ಸಲ ಕಪ್‌ ನಮ್ಮದೇ: ತಾಯಿಗೆ ಹನುಮಂತ ಭಾವುಕ ಸಂದೇಶ

    ‘ಬಿಗ್ ಬಾಸ್’ ಮನೆಗೆ (Bigg Boss Kannada 11) ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟು ಟಾಪ್ 6 ಸ್ಪರ್ಧಿಗಳಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಈಗ ಅವರು ತಾಯಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಫಿನಾಲೆ ವಾರ ತಲುಪಿದ ಖುಷಿಯನ್ನು ಕೂಗಿ ಹೇಳಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ. ವಿಶೇಷ ಎಂದರೆ ಅವರು ಈ ಸಲ ಕಪ್ ನಮ್ಮದೇ ಎಂದು ಕೂಗಿ ಹೇಳಿದ್ದಾರೆ. ಈ ಸಲ ಕಪ್‌ ನಮ್ಮದೇ ಎಂದು ತಾಯಿಗೆ ಭಾವುಕವಾಗಿ ಹನುಮಂತ ಸಂದೇಶ ನೀಡಿದ್ದಾರೆ.ಇದನ್ನೂ ಓದಿ:BBK 11: ಫಿನಾಲೆ ವಾರಕ್ಕೆ ಘಟಾನುಘಟಿ ಸ್ಪರ್ಧಿಗಳು ಎಂಟ್ರಿ

    ಇದು ಫಿನಾಲೆ ವಾರ. ಈ ವಾರ ಯಾವುದೇ ಟಾಸ್ಕ್‌ಗಳನ್ನು ನೀಡುವುದಿಲ್ಲ. ಬಿಗ್ ಬಾಸ್ ನೀಡುವುದಿಲ್ಲ. ಹಾಗಾಗಿ ಫಿನಾಲೆ ವಾರದ ಮೊದಲ ದಿನವೇ ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡಿದ್ದರು. ಈ ಚಟುವಟಿಕೆ ಪ್ರಕಾರ ಫಿನಾಲೆಗೆ ಬಂದಿದ್ದೀನಿ ಎಂಬುದನ್ನು ಕೂಗಿ ಹೇಳಬೇಕಿತ್ತು. ಈ ಬಗ್ಗೆ ಬಿಗ್ ಬಾಸ್ ಘೋಷಣೆ ಅಣತಿಯಂತೆ ಸ್ಪರ್ಧಿಗಳು ಕೂಗುತ್ತಾ ಮನದಾಸೆಯನ್ನು ಹಂಚಿಕೊಂಡಿದ್ದರು.

    ಬಿಗ್ ಬಾಸ್‌ಗೆ ಬರೋದು ನಮ್ಮ ಕನಸಾಗಿತ್ತು ಎಂದು ಇತರೆ ಸ್ಪರ್ಧಿಗಳು ಹೇಳಿಕೊಂಡರು. ಹನುಮಂತ (Hanumantha) ಮಾತ್ರ ಇದನ್ನು ಡಿಫರೆಂಟ್‌ ಆಗಿ ವ್ಯಕ್ತಪಡಿಸಿದರು. ಯವ್ವೋ ನಾನು ಫಿನಾಲೆ ತಲುಪಿದೀನಿ ಬೇ, ಈ ಸಲ ಕಪ್ ನಮ್ದೇ ಎಂದು ಕೂಗಿ ಹೇಳಿದ್ದಾರೆ. ಅವರ ಮಾತನ್ನು ಕೇಳಿ ಸ್ಪರ್ಧಿಗಳು ನಕ್ಕಿದ್ದಾರೆ. ಹನುಮಂತ ಅವರು ಕೂಡ ಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕಪ್ ಗೆದ್ದರೆ ಅವರಿಗೆ ಆರ್ಥಿಕವಾಗಿ ಕೂಡ ಸಹಾಯ ಆಗಲಿದೆ.

  • BBK 11: ಫಿನಾಲೆ ವಾರಕ್ಕೆ ಘಟಾನುಘಟಿ ಸ್ಪರ್ಧಿಗಳು ಎಂಟ್ರಿ

    BBK 11: ಫಿನಾಲೆ ವಾರಕ್ಕೆ ಘಟಾನುಘಟಿ ಸ್ಪರ್ಧಿಗಳು ಎಂಟ್ರಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಕಾರ್ಯಕ್ರಮ ಇನ್ನೇನು ಒಂದೇ ವಾರದಲ್ಲಿ ಮುಗಿಯಲಿದೆ. ಗೌತಮಿ ಮತ್ತು ಧನರಾಜ್ ಆಚಾರ್ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ವಾರಕ್ಕೆ 6 ಘಟಾನುಘಟಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಇದು ನನ್ನ ಕೊನೆಯ ನಿರೂಪಣೆ, ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು: ಸುದೀಪ್‌ ಭಾವುಕ ಪೋಸ್ಟ್‌

    ಯಾರು ಎಲಿಮಿನೇಟ್ ಆಗ್ತಾರೆ? ಯಾರು ಫಿನಾಲೆ ವಾರಕ್ಕೆ ತಲುಪುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಹನುಮಂತ, ತ್ರಿವಿಕ್ರಮ್, ಭವ್ಯಾ ಮೋಕ್ಷಿತಾ, ರಜತ್, ಉಗ್ರಂ ಮಂಜು ಫಿನಾಲೆ ವಾರಕ್ಕೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಮತ್ತಷ್ಟು ಆಟ ರೋಚಕವಾಗಿ ಮೂಡಿ ಬರುತ್ತಿದೆ.

    ಇನ್ನೂ ಬಿಗ್ ಬಾಸ್ ಶೋಗೆ ಅಧಿಕೃತವಾಗಿ ವಿದಾಯ ಹೇಳುತ್ತಿರುವ ಬಗ್ಗೆ ಸುದೀಪ್ ಸೋಶಿಯಲ್ ಕ್ಲ್ಯಾರಿಟಿ ನೀಡಿದ್ದಾರೆ. ಕಳೆದ 11 ಸೀಸನ್‌ಗಳಿಂದ ನಾನು ಬಿಗ್‌ಬಾಸ್ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯತ್ನಿಸುತ್ತೇನೆ.

    ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂಬ ಸಂತೋಷ ನನಗಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ.

  • BBK 11: ಕಿಚ್ಚನ ಕೊನೆಯ ಪಂಚಾಯ್ತಿಯಲ್ಲಿ ಡಬಲ್ ಎಲಿಮಿನೇಷನ್‌ಗೆ ಬಲಿಯಾಗೋದು ಯಾರು?

    BBK 11: ಕಿಚ್ಚನ ಕೊನೆಯ ಪಂಚಾಯ್ತಿಯಲ್ಲಿ ಡಬಲ್ ಎಲಿಮಿನೇಷನ್‌ಗೆ ಬಲಿಯಾಗೋದು ಯಾರು?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ರಿಯಾಲಿಟಿ ಶೋ ಇನ್ನೇನು 10 ದಿನಗಳಲ್ಲಿ ಮುಗಿಯಲಿದೆ. ಇನ್ನೂ ಈ ವಾರ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿರುವ ಹಿನ್ನೆಲೆ ಈ ವೀಕೆಂಡ್‌ನಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದೆ. 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಯಾವ ಡಬಲ್ ಎಲಿಮಿನೇಷನ್‌ಗೆ ಬಲಿಯಾಗ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಈ ವಾರ ಫಿನಾಲೆ ಹಂತ ತಲುಪಲು ಟಾಸ್ಕ್‌ಗಳಲ್ಲಿ ಸಾಕಷ್ಟು ಟ್ವಿಸ್ಟ್ ಮತ್ತು ಭಿನ್ನವಾಗಿರೋ ಆಟವನ್ನೇ ಬಿಗ್ ಬಾಸ್ ನೀಡಿದ್ದರು. ಅದರಲ್ಲಿ ಕನ್ನಡಿ ನೋಡಿ ಧನರಾಜ್ (Dhanraj Achar) ಆಟ ಪೂರ್ಣಗೊಳಿಸಿದರು ಎಂಬ ಕಾರಣಕ್ಕೆ ಅವರಿಗೆ ನೀಡಿದ್ದ ಇಮ್ಯೂನಿಟಿಯನ್ನು ಬಿಗ್ ಬಾಸ್ ಹಿಂಪಡೆದರು. ಹಾಗಾಗಿ ಮಿಡ್ ವೀಕ್ ಎಲಿಮಿನೇಷನ್ ಪ್ಲ್ಯಾನ್ ಅನ್ನು ರದ್ದು ಮಾಡಲಾಯ್ತು. ಇದನ್ನೂ ಓದಿ:BBK 11: ಗೆದ್ದರೆ ಅತ್ತೆ ಮನೆಗೆ ಹೋಗಿ ಹುಡುಗಿ ಕೇಳುತ್ತೇನೆ: ಹನುಮಂತ

    ಹಾಗಾಗಿ ಈ ವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಉಗ್ರಂ ಮಂಜು, ಭವ್ಯಾ, ಗೌತಮಿ, ರಜತ್, ಧನರಾಜ್ ಆಚಾರ್ ನಾಮಿನೇಟ್ ಆಗಿದ್ದಾರೆ. 5 ಮಂದಿ ನಾಮಿನೇಷನ್ ಹಾಟ್ ಸೀಟ್‌ನಲ್ಲಿದ್ದಾರೆ. ಇದರಲ್ಲಿ ಇಬ್ಬರೂ ಡಬಲ್ ಎಲಿಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್ ನಾಮಿನೇಟ್ ಆಗದ ಹಿನ್ನೆಲೆ ಅವರು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.

    ಇನ್ನೂ ಫಿನಾಲೆ ವಾರಕ್ಕೆ ಹನುಮಂತ, ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಅವರು ಸೇಫ್ ಝೋನ್‌ನಲ್ಲಿದ್ದಾರೆ. ಹಾಗಾದ್ರೆ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ? ಎಂದು ಕಾಯಬೇಕಿದೆ.

  • BBK 11: ಗೆದ್ದರೆ ಅತ್ತೆ ಮನೆಗೆ ಹೋಗಿ ಹುಡುಗಿ ಕೇಳುತ್ತೇನೆ: ಹನುಮಂತ

    BBK 11: ಗೆದ್ದರೆ ಅತ್ತೆ ಮನೆಗೆ ಹೋಗಿ ಹುಡುಗಿ ಕೇಳುತ್ತೇನೆ: ಹನುಮಂತ

    ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತ (Hanumantha) ಉತ್ತಮವಾಗಿ ಆಟ ಆಡುತ್ತಾ ಜನರ ಮನಗೆದ್ದಿದ್ದಾರೆ. ಫಿನಾಲೆ ವಾರಕ್ಕೆ ಮೊದಲ ಸ್ಪರ್ಧಿಯಾಗಿ ಈಗಾಗಲೇ ಎಂಟ್ರಿ ಕೊಟ್ಟಿರುವ ಹನುಮಂತ ಮೇಲೆ ಫ್ಯಾನ್ಸ್ ಅವರೇ ಗೆಲ್ಲಬಹುದು ಎಂದು ಭರವಸೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ಗೆಳೆಯ ಧನರಾಜ್‌ (Dhanraj Achar) ಬಳಿ ಬಿಗ್‌ ಬಾಸ್‌ ಶೋ ಮುಗಿದ ಮೇಲೆ ಮದುವೆ (Wedding) ಪ್ಲ್ಯಾನ್‌ ಬಗ್ಗೆ ಹನುಮಂತ ಮೌನ ಮುರಿದಿದ್ದಾರೆ. ‘ಬಿಗ್‌ ಬಾಸ್‌’ ಟ್ರೋಫಿ ಗೆದ್ದರೆ ಅತ್ತೆ ಮನೆಗೆ ಹೋಗಿ ಮದುವೆಗೆ ಹೆಣ್ಣು ಕೇಳ್ತೀನಿ ಎಂದು ಮಾತನಾಡಿದ್ದಾರೆ.

    ಧನರಾಜ್ ಬಳಿ ಆಟದ ಬಗ್ಗೆ ಹನುಮಂತ ಚರ್ಚಿಸುತ್ತಾ, ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ತಾವು ಆಟ ಆಡಿರುವುದರ ಬಗ್ಗೆ ತಮಗೆ ನೆಮ್ಮದಿ ಇದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಮುಂದಿನ ಪ್ಲ್ಯಾನ್ ಬಗ್ಗೆಯೂ ಮಾತನಾಡಿದ್ದಾರೆ. ಇಷ್ಟು ದಿನ ಚೆನ್ನಾಗಿ ಆಟ ಆಡಿದ್ದೇನೆ. ಒಂದು ವೇಳೆ ಔಟ್ ಆದರೆ ಖುಷಿಯಿಂದ ಹೊರಗೆ ಹೋಗುತ್ತೇನೆ. ಗೆದ್ದರೆ ನಮ್ಮ ಅತ್ತೆ ಮನೆಯ ಮುಂದೆ ಹೋಗಿ ನಿಲ್ಲುತ್ತೇನೆ. ಹುಡುಗಿ ಯಾಕೆ ಕೊಡಲ್ಲ ಅಂತ ಕೇಳುತ್ತೇನೆ ಎಂದು ಹನುಮಂತ (Hanumantha) ಮದುವೆ ಪ್ಲ್ಯಾನ್ ತಿಳಿಸಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಮೇಲಿನ ಹಲ್ಲೆಯಿಂದ ಶಾಕ್ ಆಗಿದೆ – ರಾಯಚೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿಕೆ

    ಇನ್ನೂ ಅವರ ಆಸೆ ಈಡೇರುತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಇದೆ. ಕೆಲವು ವಾರಗಳ ಹಿಂದೆ ಬಿಗ್ ಬಾಸ್ ಮನೆಗೆ ಹನುಮಂತ ಅವರ ತಂದೆ ತಾಯಿ ಬಂದಿದ್ದರು. ಆಗ ತಮ್ಮ ಸೊಸೆ ಹೇಗೆ ಇರಬೇಕು? ಎಂದು ಹನುಮಂತ ಅವರ ತಾಯಿ ಹೇಳಿದ್ದರು. ನಮ್ಮ ಮನೆಯ ಪದ್ಧತಿಯಂತೆಯೇ ಇರಬೇಕು ಎಂದು ದೊಡ್ಮನೆಯಲ್ಲಿ ಹನುಮಂತನ ಮುಂದೆ ಮಾತನಾಡಿದ್ದರು.

    ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಬಿಗ್‌ ಬಾಸ್‌ಗೆ ಹನುಮಂತ ಬಂದಿದ್ದರೂ ಕೂಡ ಇತರೆ ಸ್ಪರ್ಧಿಗಳಿಗೆ ಠಕ್ಕರ್‌ ಕೊಟ್ಟು ಫಿನಾಲೆ ವಾರಕ್ಕೆ ಹೋಗಿದ್ದಾರೆ. ಇನ್ನೂ ಅಭಿಮಾನಿಗಳ ಆಸೆಯಂತೆ ಬಿಗ್‌ ಬಾಸ್‌ (Bigg Boss)  ಟ್ರೋಫಿ ಅವರ ಪಾಲಾಗುತ್ತಾ? ಎಂದು ಕಾಯಬೇಕಿದೆ.

  • BBK 11: ಕ್ಯಾಪ್ಟನ್‌ ಹನುಮಂತ ಅಚ್ಚರಿಯ ನಿರ್ಧಾರ- ಫಿನಾಲೆ ವಾರಕ್ಕೆ ಕಾಲಿಟ್ಟ ಮೋಕ್ಷಿತಾ

    BBK 11: ಕ್ಯಾಪ್ಟನ್‌ ಹನುಮಂತ ಅಚ್ಚರಿಯ ನಿರ್ಧಾರ- ಫಿನಾಲೆ ವಾರಕ್ಕೆ ಕಾಲಿಟ್ಟ ಮೋಕ್ಷಿತಾ

    ‘ಬಿಗ್‌ ಬಾಸ್‌ ಕನ್ನಡ 11’ರ (Bigg Boss Kannada 11) ಆಟ ಇನ್ನೂ ಒಂದು ವಾರದಲ್ಲಿ ಮುಗಿಯಲಿದೆ. ಧನರಾಜ್ ಮಾಡಿದ ಒಂದು ತಪ್ಪಿನಿಂದ ಮಿಡ್‌ ವೀಕ್‌ ಎಲಿಮಿನೇಷನ್‌ ರದ್ದಾಗಿದ್ದು, ಹೊಸದಾಗಿ ನಾಮಿನೇಷನ್‌ ಪ್ರತಿಕ್ರಿಯೆ ನಡೆದಿದೆ. ಇದರಲ್ಲಿ ಹನುಮಂತನ ಅಚ್ಚರಿಯ ನಿರ್ಧಾರದಿಂದ ಮೋಕ್ಷಿತಾ (Mokshitha Pai) ನಾಮಿನೇಷನ್‌ ಹಾಟ್‌ ಸೀಟ್‌ನಿಂದ ಬಚಾವ್‌ ಆಗಿದ್ದು, ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್‌ಗೂ ಮುನ್ನ ಶಾರುಖ್ ಮೇಲೆ ದಾಳಿಗೂ ಸ್ಕೆಚ್?

    ನಿನ್ನೆಯ ಸಂಚಿಕೆಯಲ್ಲಿ ಕ್ಯಾಪ್ಟನ್ ಹನುಮಂತನಿಗೆ ಬಿಗ್‌ ಬಾಸ್ ಒಂದು ವಿಶೇಷ ಅಧಿಕಾರ ನೀಡಲಾಯಿತು. ಆಗ ನಾಮಿನೇಟ್ ಆದ ಒಬ್ಬರನ್ನು ಸೇಫ್ ಮಾಡಲು ಅವರಿಗೆ ಅವಕಾಶ ನೀಡಲಾಯಿತು. ಹನುಮಂತ ಅವರು ಗೆಳಯ ಧನರಾಜ್ ಹೆಸರು ಹೇಳಬಹುದು ಎಂದು ಅನೇಕರು ಊಹಿಸಿರಬಹುದು. ಆದರೆ ಆಗಿದ್ದೇ ಬೇರೆ. ಹನುಮಂತ (Hanumantha) ಅವರು ಮೋಕ್ಷಿತಾ ಪರವಾಗಿ ಬ್ಯಾಟ್ ಬೀಸಿದರು.

    ಮೋಕ್ಷಿತಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ಹಾಡು ಹೇಳಿ ಮನರಂಜನೆ ನೀಡುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ. ಕಲ್ಮಶ ಇಲ್ಲ. ತಪ್ಪನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕಾರಣವನ್ನು ನೀಡಿ ಮೋಕ್ಷಿತಾನ ನಾಮಿನೇಷನ್‌ನಿಂದ ಹನುಮಂತ ಬಚಾವ್ ಮಾಡಿದ್ದಾರೆ.

    ಒಟ್ಟಾರೆಯಾಗಿ ಮೋಕ್ಷಿತಾ ಅವರಿಗೆ ಈ ಚಾನ್ಸ್ ಸಿಕ್ಕಿದ್ದು ಹನುಮಂತನ ಕೃಪೆಯಿಂದಲೇ ಎಂಬುದು ನಿಜ. ಹನುಮಂತ ತೆಗೆದುಕೊಂಡ ಈ ನಿರ್ಧಾರವನ್ನು ಬಹುತೇಕ ಎಲ್ಲರೂ ಒಪ್ಪಿಕೊಂಡರು. ಇದರಿಂದ ಮೋಕ್ಷಿತಾಗೂ ಖುಷಿಯಾಯ್ತು. ನಾಮಿನೇಷನ್‌ನಿಂದ ಬಚಾವ್‌ ಮಾಡಿದ ಹನುಮಂತಗೆ ಧನ್ಯವಾದ ತಿಳಿಸಿದರು. ಇನ್ನೂ ಫಿನಾಲೆ ವಾರಕ್ಕೆ ಹನುಮಂತ, ಮೋಕ್ಷಿತಾ ಜೊತೆ ನಾಮಿನೇಟ್‌ ಆಗದೇ ಇದ್ದ ತ್ರಿವಿಕ್ರಮ್‌ ಕೂಡ ಎಂಟ್ರಿ ಕೊಟ್ಟಿದ್ದಾರೆ.

  • BBK 11: ಧನರಾಜ್‌ ಮೋಸದಾಟಕ್ಕೆ ಟ್ವಿಸ್ಟ್‌ ಕೊಟ್ಟ ‘ಬಿಗ್‌ ಬಾಸ್’-‌ ಸ್ಪರ್ಧಿಗಳು ಶಾಕ್

    BBK 11: ಧನರಾಜ್‌ ಮೋಸದಾಟಕ್ಕೆ ಟ್ವಿಸ್ಟ್‌ ಕೊಟ್ಟ ‘ಬಿಗ್‌ ಬಾಸ್’-‌ ಸ್ಪರ್ಧಿಗಳು ಶಾಕ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಹಿಂದೆ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ಎಚ್ಚರಿಕೆ ನೀಡಿದ್ದರು. ಈ ಬಾರಿ ಮಿಡ್‌ ವೀಕ್‌ ಎಲಿಮಿನೇಷನ್‌ನಿಂದ ಪಾರಾಗಲು ಧನರಾಜ್‌ (Dhanraj Achar) ಮೋಸದಾಟ ಆಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.

    ಹನುಮಂತ ಫಿನಾಲೆ ಟಿಕೆಟ್‌ ಗಿಟ್ಟಿಸಿಕೊಂಡು ಸೇಫ್‌ ಆಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಜೊತೆಗೆ ವಾರದ ಕೊನೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಎಚ್ಚರಿಕೆ ಕೊಟ್ಟಿದ್ದರು. ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್‌ನಿಂದ ಬಚಾವ್‌ ಎಂದು ಘೋಷಿಸಿದ್ದರು. ಇದನ್ನೂ ಓದಿ:ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ- ಆಸ್ಪತ್ರೆಗೆ ದಾಖಲು

    ಈ ವಾರದ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ಯ ಗೆದ್ದು ಬೀಗಿದ್ದರು. ಈ ವಾರದ ಮಿಡ್‌ ಎಲಿಮಿನೇಷನ್‌ನಿಂದ ಸೇಫ್‌ ಆಗಿದ್ದರು. ಆದರೆ ಇದೀಗ ಬಿಗ್ ಬಾಸ್ ಕೊಟ್ಟ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಕನ್ನಡಿಯನ್ನು ನೋಡಿ ಪಜಲ್ ಗೇಮ್ ಆಡಿದ್ದು, ರಿವೀಲ್‌ ಆಗಿದೆ.  ಹೀಗಾಗಿ ಬಿಗ್‌ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಅನ್ನು ಮುಂದೂಡಿಕೆ ಮಾಡಿದ್ದಾರೆ ಬಿಗ್‌ ಬಾಸ್.‌

    ಈ ಬಗ್ಗೆ ಖುದ್ದು ಬಿಗ್ ಬಾಸ್ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಮಾತನ್ನು ಕೇಳಿಸಿಕೊಂಡ ಧನರಾಜ್ ಅವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಲಿಲ್ಲ ಬಿಗ್ ಬಾಸ್. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೇ ಪ್ರಕ್ರಿಯೆ ಶುರು ಮಾಡಿ ಪ್ಲಿಸ್ ಅಂತ ಬೇಡಿಕೊಂಡಿದ್ದಾರೆ. ಈ ವಿಚಾರ ಕೇಳಿ ಮನೆ ಮಂದಿ ಶಾಕ್‌ ಆಗಿದ್ದಾರೆ.