ದೊಡ್ಮನೆಗೆ ವಿಶೇಷ ಅತಿಥಿಗಳ ಎಂಟ್ರಿಯಾಗಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ರಾಮಚಾರಿ’ (Ramachari) ಖ್ಯಾತಿಯ ಜೋಡಿ ರಿತ್ವಿಕ್ ಕೃಪಾಕರ್ (Rithvik Krupakar) ಮತ್ತು ಚಾರು ಅಲಿಯಾಸ್ ಮೌನ ಗುಡ್ಡೆಮನೆ (Mouna Guddemane) ಬಿಗ್ ಬಾಸ್‌ಗೆ ಅತಿಥಿಗಳಾಗಿ ಭಾಗವಹಿಸಿ ಮನರಂಜನೆ ಡಬಲ್ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ನೇಹಾ ಗೌಡ

ಈ ಜೋಡಿ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ಸ್ಪರ್ಧಿಗಳು ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ನಂತರ ಆತ್ಮೀಯವಾಗಿ ಬರಮಾಡಿಕೊಂಡ ಸ್ಪರ್ಧಿಗಳು, ಬಿಗ್ ಬಾಸ್ ಮನೆಯನ್ನು ಪರಿಚಯಿಸಿದ್ದಾರೆ. ವಿಶೇಷ ಅಂದ್ರೆ ಮನೆಗೆ ಎಂಟ್ರಿ ಆಗ್ತಿದ್ದಂತೆ ‘ಬಿಗ್ ಬಾಸ್’ ಇಬ್ಬರಿಗೂ ಟಾಸ್ಕ್ ಒಂದನ್ನು ನೀಡಿದ್ದಾರೆ.

ಅದೇನೆಂದರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಟಾಸ್ಕ್ ನಡೆಯುತ್ತಿದೆ. ಹೀಗಾಗಿ ತಾವಿಬ್ಬರು ಜೋಡಿಯಾಗಿ ಇರುವಂತೆ ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ ಜೊತೆಯಾಗಿರಲು ಹಗ್ಗವನ್ನು ನೀಡಿದ್ದಾರೆ. ಸ್ಪರ್ಧಿಗಳಂತೆ ರಾಮಚಾರಿ ಮತ್ತು ಚಾರು ಕೂಡ ಹಗ್ಗವನ್ನು ಕಟ್ಟಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಮನರಂಜನೆ ನೀಡಲು ‘ರಾಮಾಚಾರಿ’ ಸೀರಿಯಲ್ (Ramachari) ಜೋಡಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದಾರೆ. ಬಿಗ್ ಬಾಸ್ ಶೇರ್ ಮಾಡಿರುವ ವಿಡಿಯೋದಲ್ಲಿ, ಚಾರು ಅವರು ಹನುಮಂತಗೆ ತಮ್ಮನ್ನು ಇಂಪ್ರೆಸ್ ಮಾಡುವಂತೆ ಗುಲಾಬಿ ಹೂ ನೀಡಿದ್ದಾರೆ. ಹನುಮಂತ ಅವರು ತಮ್ಮ ಶೈಲಿಯಲ್ಲಿ ಹಾಡನ್ನು ಹೇಳಿ, ಮಂಡಿಯೂರಿ ಚಾರುಗೆ ಇಂಪ್ರೆಸ್ ಮಾಡಲು ಪ್ರಯತ್ನಿಸಿದ್ದಾರೆ. ನನ್ನ ಕಣ್ಣು ನಿನ್ನ ಮೇಲೆ ಎಂದು ಹಾಡುತ್ತಾ ಗುಲಾಬಿ ಹೂ ಕೊಟ್ಟು ಮಂಡಿಯೂರಿ ಪ್ರಪ್ರೋಸ್ ಮಾಡಿದ್ದಾರೆ. ಹನುಮಂತನ ಪ್ರೇಮ ನಿವೇದನೆಗೆ ಚಾರು ನಾಚಿ ನೀರಾಗಿದ್ದಾರೆ. ಹನುಮಂತನ ನಡೆಗೆ ಸಹಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ.






















ಯಾವಾಗ ತಾವು ನೀಡಿದ ಟಾಸ್ಕ್ ಅನ್ನು ಸ್ಪರ್ಧಿಗಳು ಸರಿಯಾಗಿ ಆಡಲಿಲ್ಲವೋ, ಆಗ ಸ್ಪರ್ಧಿಗಳ ಮೇಲೆ ಬಿಗ್ ಬಾಸ್ ಕೆಂಡವಾದರು. ರಾಜಕೀಯ ಮಾಡಲು ಬೇಕಿರುವುದು ತಂತ್ರಗಳು ಮತ್ತು ಯುಕ್ತಿ. ಹೆಚ್ಚಾಗಿ ದೈಹಿಕ ಬಲದ ಪ್ರದರ್ಶನಕ್ಕೆ ಒತ್ತು ನೀಡಿದ್ದೀರಿ ಎಂದು ಬಿಗ್ ಬಾಸ್ ಆಕ್ರೋಶ ವ್ಯಕ್ತಪಡಿಸಿದರು. ಈ ಟಾಸ್ಕ್ ವಿಚಾರಕ್ಕೆ ಬಂದರೆ, ಎರಡು ಸುತ್ತು ನಡೆದರೂ, ಫಲಿತಾಂಶ ಘೋಷಣೆ ಮಾಡಲು ಸಾಧ್ಯವಾಗದಂತೆ ಆಗಿದೆ. ಹಾಗಾಗಿ ಈ ಟಾಸ್ಕ್ ಅನ್ನು ರದ್ದು ಮಾಡಿದರು ಬಿಗ್ ಬಾಸ್. ಇಂದಿನ ತಪ್ಪು ಮುಂದಿನ ಪಾಠವಾಗುತ್ತದೆ ಮರೆಯದಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿವಿಹಿಂಡಿದರು. ಇನ್ನಾದರೂ ಬಲ ಪ್ರದರ್ಶನ ಬಿಟ್ಟು ಯುಕ್ತಿಯಿಂದ ಸ್ಪರ್ಧಿಗಳು ಆಟ ಆಡುತ್ತಾರಾ? ಕಾದುನೋಡಬೇಕಿದೆ.





