Tag: bbk 11

  • BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

    BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ (Bigg Boss Kannada 11)  ಆಟ 70ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದರ ನಡುವೆ ವಾಹಿನಿ ಹೊಸ ಪ್ರೋಮೋವೊಂದನ್ನು ಹಂಚಿಕೊಂಡಿದ್ದು, ಬಹಳ ವಿಶೇಷವಾದ ಸಂಗತಿಗಳಿವೆ. ಅದೇನಪ್ಪ ಅಂದ್ರೆ ‘ಬಿಗ್ ಬಾಸ್’ ಮನೆಗೆ ಈ ಹಿಂದಿನ 10ನೇ ಸೀಸನ್‌ನ (BBK 10) ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಜೊತೆಗೆ ಕಳೆದ ವಾರ ಎಲಿಮಿನೇಷನ್ ಗೊಂದಲಕ್ಕೂ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

    ಕಳೆದ ವಾರಾಂತ್ಯ ಎಲಿಮಿನೇಷನ್‌ ಟ್ವಿಸ್ಟ್‌ ಇತ್ತು. ಆದರೂ ಚೈತ್ರಾ ಕುಂದಾಪುರ (Chaithra Kundapura) ಅವರನ್ನು ಎಲಿಮಿನೇಟ್ ಮಾಡಿರುವ ರೀತಿಯಲ್ಲಿ ಕರೆದುಕೊಂಡು ಬಂದು ಕನ್ಫೆಷನ್ ರೂಮ್‌ನಲ್ಲಿ ಕೂರಿಸಲಾಗಿತ್ತು. ಆದರೆ ಈಗ ರಿಲೀಸ್ ಆಗಿರುವ ಹೊಸ ಪ್ರೋಮೋದಲ್ಲಿ ಅದು ಗೊತ್ತಾಗಿದೆ. ಚೈತ್ರಾ ಅವರನ್ನು ಪುನಃ ಬಿಗ್ ಬಾಸ್‌ಗೆ ಕಳುಹಿಸಲಾಗಿದೆ.

    ‘ಬಿಗ್ ಬಾಸ್’ ಕನ್ನಡ ಸೀಸನ್ 10ರ ಸ್ಪರ್ಧಿಗಳು ಈಗ ಮನೆಯೊಳಗೆ ಕಾಲಿಟ್ಟಿದ್ದಾರೆ. ತುಕಾಲಿ ಸಂತು, ವರ್ತೂರು ಸಂತೋಷ್ Varthur Santhosh), ತನಿಷಾ ಕುಪ್ಪಂಡ (Tanisha Kuppanda), ಡ್ರೋನ್ ಪ್ರತಾಪ್ (Drone Prathap) ಮುಂತಾದವರು ಆಗಮಿಸಿದ್ದಾರೆ. ಇನ್ನು, ಚೈತ್ರಾಗೆ ಮಾತಿಗೆ ಮುಂಚೆ ಅಣ್ಣ ಅಣ್ಣ ಎನ್ನುವುದು ರೂಢಿ. ಮನೆಗೆ ಬಂದಿರುವ ಡ್ರೋನ್ ಪ್ರತಾಪ್‌ಗೂ ಕೂಡ ಪ್ರತಾಪಣ್ಣ ಅಂತ ಚೈತ್ರಾ ಕರೆದಿದ್ದಾರೆ. ಅದಕ್ಕೆ ಪ್ರತಾಪ್, ಚೈತ್ರಕ್ಕ, ಅಣ್ಣ ಅಂತೆಲ್ಲಾ ಕರೆಯಬೇಡಿ ಎಂದು ಹೇಳಿದ್ದಾರೆ. ಆಗ ಇಡೀ ಮನೆಯ ಸದಸ್ಯರು ಬಿದ್ದು ಬಿದ್ದು ನಕ್ಕಿದ್ದಾರೆ.

    ಸಂತೋಷ್ ಅವರನ್ನು ಕಂಡ ಕೂಡಲೇ ಹನುಮಂತು, ಮಾವ ಅಂತ ಬೆನ್ನೇರಿದ್ದಾರೆ. ಆಗ ಅವರು ಮಾವ ಅಂತ್ಹೇಳಿ ನನ್ನ ಮಾನಸನ್ನೇ ಹೊರಗೆ ಕಳಿಸಿದ್ಯಲ್ಲೋ ಎಂದು ಕಾಮಿಡಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಸಂತೋಷ್ ಮತ್ತು ಬೀನ್ ಬ್ಯಾಗ್ ಇಲ್ಲ ಅಂದರೆ ಹೇಗೆ? ಅದು ಸ್ವತಃ ಬಿಗ್ ಬಾಸ್‌ಗೂ ಗೊತ್ತಿದೆ. ಹಾಗಾಗಿ, ವರ್ತೂರು ಸಂತೋಷ್ ಅವರನ್ನು ಕೂಡ ಒಳಗೆ ಕರೆಸಿಕೊಂಡಿದ್ದಾರೆ. ಒಳಗೆ ಬರುವಾಗಲೇ ಎರಡು ಬೀನ್ ಬ್ಯಾಗ್‌ಗಳ ಜೊತೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ತುಕಾಲಿ ಸಂತು ಅವರು ವರ್ತೂರು ಸಂತೋಷ್ ಒಳಗೆ ಬರುವುದನ್ನು ಕಂಡೊಡನೆ ಜೋರಾಗಿ ಕೂಗುತ್ತಾ ಅವರನ್ನು ತಬ್ಬಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರೋ ಪ್ರೋಮೋ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    https://youtu.be/2Haq3NSydBU?si=SPGCoHmPzlMdpro3

  • ಎಲಿಮಿನೇಷನ್‌ನಲ್ಲಿ ಟ್ವಿಸ್ಟ್- ಚುಚ್ಚು ಮಾತು ಕೇಳಿ ಕಣ್ಣೀರಿಟ್ಟ ಚೈತ್ರಾ

    ಎಲಿಮಿನೇಷನ್‌ನಲ್ಲಿ ಟ್ವಿಸ್ಟ್- ಚುಚ್ಚು ಮಾತು ಕೇಳಿ ಕಣ್ಣೀರಿಟ್ಟ ಚೈತ್ರಾ

    ದೊಡ್ಮನೆಯಲ್ಲಿ ಸದ್ಯ ಉಳಿದಿರೋದು ಈಗ 12 ಸ್ಪರ್ಧಿಗಳು. ಈ ವಾರ ಇಬ್ಬರಲ್ಲಿ ಒಬ್ಬರು ಎಲಿಮಿನೇಷನ್ ಆಗೋ ಸಾಧ್ಯತೆ ಇದೆ. ಆ ಇಬ್ಬರು ಯಾರು ಅನ್ನೋದು ಈಗಾಗಲೇ ಫೈನಲ್ ಆಗಿದೆ. ಐಶ್ವರ್ಯಾ ಹಾಗೂ ಚೈತ್ರಾ ಕುಂದಾಪುರ ಡೇಂಜರ್ ಜೋನ್‌ಗೆ ಹೋಗಿದ್ದು, ಇಬ್ಬರಿಗೂ ಬಿಗ್ ಬಾಸ್ ಮನೆಯಲ್ಲಿ ಬೇರೆ, ಬೇರೆ ದಾರಿ ತೋರಿಸಲಾಗಿದೆ. ಇನ್ನೂ ಎಲಿಮಿನೇಷನ್‌ನಲ್ಲಿ ಟ್ವಿಸ್ಟ್‌ ಕೊಡಲಾಗಿದ್ದು, ಸ್ಪರ್ಧಿಗಳ ಚುಚ್ಚು ಮಾತು ಕೇಳಿ ಕಣ್ಣೀರಿಟ್ಟಿದ್ದಾರೆ.

    ಈ ವಾರಾಂತ್ಯ ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಸುದೀಪ್ (Sudeep) ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಐಶ್ವರ್ಯಾ ಹಾಗೂ ಚೈತ್ರಾ ಕುಂದಾಪುರ ಅವರನ್ನ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆ. ಐಶ್ವರ್ಯಾ ಅವರನ್ನ ಆಕ್ಟಿವಿಟಿ ರೂಮ್‌ಗೆ ಕಳುಹಿಸಿದ್ರೆ, ಚೈತ್ರಾ ಅವರು ಕನ್ಫೆಷನ್ ರೂಮ್‌ಗೆ ಎಂಟ್ರಿ ಕೊಟ್ಟಿದ್ದಾರೆ.

    ವೀಕೆಂಡ್‌ ಎಪಿಸೋಡ್‌ನಲ್ಲಿ ಸುದೀಪ್ ಅವರು ಚೈತ್ರಾ ಮತ್ತು ಐಶ್ವರ್ಯ ಅವರೇ ಒಬ್ಬರು ಹೋಗ್ತಿರೋ, ಇಬ್ಬರು ಹೋಗ್ತಿರೋ ಅನ್ನೋ ಸಸ್ಪೆನ್ಸ್ ಹೆಚ್ಚಿಸಿದ್ದಾರೆ. ಅಂತಿಮವಾಗಿ ಇಬ್ಬರು ಹೊರಗಡೆ ಹೋಗ್ತಾರೆ. ಆದರೆ ಐಶ್ವರ್ಯಾ ಹಾಗೂ ಚೈತ್ರಾ ಮೇನ್ ಡೋರ್ ಇಂದ ಹೊರಗಡೆ ಹೋಗಿಲ್ಲ.

    ಚೈತ್ರಾ ಅವರು ಬಿಗ್ ಬಾಸ್ ಹೇಳೋ ತನಕ ಕನ್ಫೆಷನ್ ರೂಮ್‌ನಿಂದ ಹೊರಗೆ ಬರುವಂತಿಲ್ಲ. ಅಲ್ಲಿಂದನೇ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಾ ಇರೋದನ್ನೆಲ್ಲಾ ನೋಡ್ತಿದ್ದಾರೆ. ಐಶ್ವರ್ಯಾ ಔಟ್ ಆದ್ರಾ? ಹೇಗೆ ಎಂಬುದನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಹನುಮಂತ ‘ಚೈತ್ರ ಅಲ್ಲ ಹೋದಳು ಪಾಪ’ ಎಂದರೆ ಧನರಾಜ್ ಅವರು ಚೈತ್ರಾಗೆ ಟಾ ಟಾ, ಬೈ, ಬೈ ಮಾಡಿದ್ದಾರೆ. ಚೈತ್ರಾ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ರಜತ್ ಅವರು ಜನಕ್ಕೆ ಈ ಯಮ್ಮ ಮಾತಾಡಿದ್ದೇ ಮಾತನಾಡುತ್ತಿದ್ದಾಳೆ ಅಂತ ಇರಿಟೇಟ್ ಅನ್ನಿಸಿರಬಹುದು ಎಂದಿದ್ದಾರೆ. ಈ ಎಲ್ಲಾ ಮಾತುಗಳನ್ನ ಚೈತ್ರಾ ಅವರು ಕೇಳಿಸಿಕೊಂಡಿದ್ದು, ನಿಜವಾದ ಬಿಗ್ ಬಾಸ್ ಮನೆಯ ಆಟ ಅಂದ್ರೆ ಇದೆ ಎಂದು ಚುಚ್ಚು ಮಾತುಗಳನ್ನ ಕೇಳಿ ಗಳಗಳನೇ ಅತ್ತಿದ್ದಾರೆ. ಹಾಗಾದ್ರೆ ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ.

  • BBK 11: ಹನುಮಂತ ಪ್ರೊಫೆಷನಲ್ ಕಿಲಾಡಿ: ತಿವಿದ ರಜತ್

    BBK 11: ಹನುಮಂತ ಪ್ರೊಫೆಷನಲ್ ಕಿಲಾಡಿ: ತಿವಿದ ರಜತ್

    ‘ಬಿಗ್ ಬಾಸ್ ಕನ್ನಡ 11ರ’ (Bigg Boss Kannada 11) ಆಟದಲ್ಲಿ ಒಬ್ಬೊಬ್ಬರೇ ಮನೆ ಖಾಲಿ ಮಾಡುತ್ತಿದ್ದಾರೆ. ಕಳೆದ ವಾರ ಶೋಭಾ ಶೆಟ್ಟಿ ಹೋಗಿದ್ದರು. ಇವರ ಬೆನ್ನಲ್ಲೇ ಈ ವಾರ ಹೊರಗಡೆ ಹೋಗುವುದು ಯಾರು ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದೆಲ್ಲದರ ನಡುವೆ ಮನೆಯ ಟಿಆರ್‌ಪಿ ಸ್ಪರ್ಧಿ ಯಾರು? ಎಂಬ ಪ್ರಶ್ನೆಯನ್ನು ಮನೆ ಮಂದಿಗೆ ಸುದೀಪ್ (Sudeep) ಭಾನುವಾರ ಎಪಿಸೋಡ್‌ನಲ್ಲಿ ಕೇಳಿದ್ದಾರೆ. ಇದರ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಈ ವೇಳೆ, ಹನುಮಂತ, ಸುರೇಶ್ ವಿರುದ್ಧ ರಜತ್ ತಿರುಗಿಬಿದ್ದಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ನನ್ನದು: ಬಾಲಯ್ಯ

    ಸುದೀಪ್ ಅವರ ಸೂಪರ್ ಸಂಡೇಯ ವಿಡಿಯೋ ರಿಲೀಸ್ ಮಾಡಲಾಗಿದ್ದು, ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಮಾತಿನ ಸಮರ ನಡೆದಿದೆ. ಸುದೀಪ್ ಮುಂದೆ ಇಬ್ಬರು ಒಬ್ಬರ ಮೇಲೆ ಒಬ್ಬರು ದೂರು ಹೇಳಿದ್ದಾರೆ. ಹನುಮಂತ (Hanumantha) ಮೇಲೆ ಎರಗಿದ್ದ ರಜತ್ ಅವರು ನಂತರ ಗೋಲ್ಡ್ ಸುರೇಶ್ ಮೇಲೆಯೂ ದೂರುಗಳನ್ನ ಹೇಳಿದ್ದಾರೆ. ಹನುಮಂತು ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ ಎನ್ನುವಂತೆ ಇರುತ್ತಾರೆ ಎಂದಿದ್ದರು. ಇದಾದ ಮೇಲೆ ರಜತ್ ಅವರ ಫೋಟೋ ತೆಗೆದುಕೊಂಡು ಗೋಲ್ಡ್ ಸುರೇಶ್ 2ನೇ ಸ್ಥಾನಕ್ಕೆ ಇಡುತ್ತಾರೆ. ಇದಕ್ಕೆ ಸುದೀಪ್ ಯಾಕೆ ಎಂದು ಗೋಲ್ಡ್ ಸುರೇಶ್‌ರನ್ನ ಪ್ರಶ್ನಿಸುತ್ತಾರೆ.

    ಆಗ ಮನೆಗೆ ಬಂದು 3 ವಾರ ಕಳೆದರೂ ರಜತ್ ಅಷ್ಟೇನು ಕೊಡುಗೆ ಕೊಟ್ಟಿಲ್ಲ ಎಂದು ಸುರೇಶ್ ಹೇಳಿದ್ದಾರೆ. ಇದಾದ ಮೇಲೆ ರಜತ್, ಫಸ್ಟ್ ಜಗಳ ಆಗಿದ್ದಕ್ಕೆ ಗಾಬರಿ ಬಿದ್ದು ಹೋಗಿ ಡೋರ್ ಬಡೆದವರು ಟಾಸ್ಕ್ ಬಿಟ್ಟು ಮತ್ತೆ ಏನೂ ಕೂಡ ಅವರ ಕೊಡುಗೆ ಕಾಣಿಸಿಲ್ಲ. ಅವರು ಹೆಂಗೇ ಕೊಡುತ್ತಾರೋ ನಾವು ಹಂಗೆ ಕೊಡುತ್ತೇವೆ. ನಾವು ಒಳ್ಳೆಯ ಮನುಷ್ಯರಲ್ಲ, ನಾವು ಕೆಟ್ಟೋರೇ ಎಂದು ಗೋಲ್ಡ್ ಸುರೇಶ್ ವಿರುದ್ಧ ಗುಡುಗಿದ್ದಾರೆ. ಈ ಮೂಲಕ ಸುರೇಶ್‌ಗೆ ರಜತ್‌ (Rajath) ಟಾಂಗ್ ಕೊಟ್ಟಿದ್ದಾರೆ.

  • 2ನೇ ಬಾರಿ ಜೈಲು ಪಾಲಾದ ಚೈತ್ರಾ ಕುಂದಾಪುರ

    2ನೇ ಬಾರಿ ಜೈಲು ಪಾಲಾದ ಚೈತ್ರಾ ಕುಂದಾಪುರ

    ದೊಡ್ಮನೆ ಆಟ (Bigg Boss Kannada 11) ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದು 70ನೇ ದಿನದತ್ತ ಮುನ್ನುಗ್ಗುತ್ತಿದೆ. ಇದೀಗ ಈ ವಾರ ಕಳಪೆ ಪ್ರದರ್ಶನ ಅಂತ ಮನೆ ಮಂದಿ ಮತ್ತೆ ಚೈತ್ರಾರನ್ನು (Chaithra Kundapura) ಜೈಲಿಗೆ ಅಟ್ಟಿದ್ದಾರೆ. ಕೆಲವರ ಪಿತೂರಿಯಿಂದ ನನಗೆ ಕಳಪೆ ಸಿಕ್ಕಿದೆ ಅಂತ ಚೈತ್ರಾ ಕೂಗಾಡಿದ್ದಾರೆ. ಈ ಕುರಿತ ಪ್ರೋಮೋ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ:ಗುರುಪ್ರಸಾದ್‌ಗೆ ಕೋಟಿಗಟ್ಟಲೇ ಸಾಲ, ರಮ್ಮಿ ಗೀಳು, ಖಿನ್ನತೆ ಇತ್ತಾ?: ಪತ್ನಿ ಸುಮಿತ್ರಾ ಸ್ಪಷ್ಟನೆ

    ಗೌತಮಿ, ಉಗ್ರಂ ಮಂಜು, ಚೈತ್ರಾ ಸೇರಿದಂತೆ ಅನೇಕರು ಚೈತ್ರಾ ಹೆಸರನ್ನು ಕಳಪೆಗೆ ಸೂಚಿಸಿದ್ದಾರೆ. ಇದು ಚೈತ್ರಾ ಸಿಟ್ಟಿಗೆ ಕಾರಣವಾಗಿದೆ. ನಾನು ಪ್ರದರ್ಶನ ಕೊಟ್ಟರೂ ಕೂಡ ಅದು ಹೇಗೆ ನೀವು ಕಳಪೆ ಎನ್ನುತ್ತೀರಿ ಎಂದು ಚೈತ್ರಾ ರೇಗಿದ್ದಾರೆ. ನೀವು ಜಾಸ್ತಿ ಮಾತನಾಡಿತ್ತೀರಿ, ವಾದ ವಿವಾದ ಮಾಡುತ್ತೀರಿ ಅದು ಸರಿ ಇಲ್ಲ. ಹಾಗಾಗಿ ಕಳಪೆ ಕೊಡುತ್ತೇನೆ ಎಂದು ಮಂಜು ನೇರವಾಗಿ ಚೈತ್ರಾ ಹೇಳಿದ್ದಾರೆ.

    ಇದು ಎರಡನೇ ಬಾರಿ ಈ ಮನೆಯಲ್ಲಿ ಅವರು ಜೈಲು ಸೇರುತ್ತಿದ್ದಾರೆ. ಈ ಮೊದಲೂ ಸಹ ಒಮ್ಮೆ ಕಳಪೆ ಪಟ್ಟ ತೆಗೆದುಕೊಂಡು ಅವರು ಜೈಲು ಪಾಲಾಗಿದ್ದರು. ಡಿ.3ರಂದು ಚೈತ್ರಾ ಅವರು ವಂಚನೆ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆಂದು ಬಿಗ್‌ಬಾಸ್‌ನಿಂದ ಹೊರಗೆ ಬಂದಿದ್ದರು. ಕಾಕತಾಳೀಯದಂತೆ ಅದೇ ವಾರದಲ್ಲಿ ಅವರು ಬಿಗ್ ಬಾಸ್ ಮನೆಯ ಜೈಲು ಸೇರಿದ್ದಾರೆ. ಆದರೆ ಈ ಬಾರಿ ಅವರಿಗೆ ಕಳಪೆ ಪಟ್ಟ ನೀಡಿರುವುದು ಚೈತ್ರಾ ಅವರಿಗೆ ಸುತಾರಾಂ ಹಿಡಿಸಿಲ್ಲ. ಉಗ್ರಂ ಮಂಜು ಹಾಗೂ ಕೆಲವರ ಪಿತೂರಿಯಿಂದಲೇ ತಮಗೆ ಕಳಪೆ ದೊರೆತಿದೆ ಎಂದು ಚೈತ್ರಾ ಆರೋಪಿಸಿದ್ದಾರೆ.

  • BBK 11: ಗೌತಮಿ ಜೊತೆ ಆಡಲ್ಲ ಎಂದ ಮೋಕ್ಷಿತಾಗೆ ಬಿಗ್‌ ಶಾಕ್ ಕೊಟ್ಟ ‘ಬಿಗ್‌ ಬಾಸ್‌’

    BBK 11: ಗೌತಮಿ ಜೊತೆ ಆಡಲ್ಲ ಎಂದ ಮೋಕ್ಷಿತಾಗೆ ಬಿಗ್‌ ಶಾಕ್ ಕೊಟ್ಟ ‘ಬಿಗ್‌ ಬಾಸ್‌’

    ದೊಡ್ಮನೆಯ (Bigg Boss Kannada 11) ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಆಟ ಬಿಟ್ಟು ಫ್ರೆಂಡ್‌ಶಿಪ್ ಅತೀ ಆದರೆ ದೊಡ್ಮನೆಯಲ್ಲಿ ಕಣ್ಣೀರು ಕಟ್ಟಿಟ್ಟ ಬುತ್ತಿ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಹೀಗಿರುವಾದ ಗೌತಮಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಮೋಕ್ಷಿತಾ ಪೈ ಇದೀಗ ರಾಂಗ್ ಆಗಿದ್ದಾರೆ. ನನ್ನ ಸ್ವಾಭಿಮಾನದ ಮುಂದೆ ಏನೂ ಇಲ್ಲ. ಯಾವುದೂ ದೊಡ್ಡದಲ್ಲ. ಕ್ಯಾಪ್ಟನ್ ಆಗಲು ಗೌತಮಿ (Gouthami) ಮುಂದೆ ತಲೆ ತಗ್ಗಿಸೋಲ್ಲ ಎಂದು ಮೋಕ್ಷಿತಾ ಪೈ ಪಟ್ಟು ಹಿಡಿದಿದ್ದಾರೆ.

    ಉಗ್ರಂ ಮಂಜು, ಗೌತಮಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಮೋಕ್ಷಿತಾ (Mokshitha Pai) ಅವರಿಂದ ದೂರ ಆಗಿ ತಮ್ಮದೇ ಶೈಲಿಯಲ್ಲಿ ಆಟ ಆಡುತ್ತಿದ್ದಾರೆ. ಇದೀಗ ಕ್ಯಾಪ್ಟನ್ಸಿ ರೇಸ್‌ನಲ್ಲಿ ನಿಲ್ಲಲ್ಲು ಗೌತಮಿ ಮುಂದೆ ನಿಲ್ಲುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಕ್ಯಾಪ್ಟನ್ ಆಗೋದಕ್ಕೆ ಗೌತಮಿ ಸಹಾಯ ತೆಗೆದುಕೊಳ್ಳಲೇ ಬೇಕಾ? ಹಾಗಾದ್ರೆ ನಾನು ಆಟವನ್ನೇ ಆಡೋದಿಲ್ಲ ಅಂತ ಹಠ ಹಿಡಿದಿದ್ದಾರೆ. ಕ್ಯಾಪ್ಟನ್ಸಿ ಓಟದಲ್ಲಿಇರಬೇಕು ಅಂದ್ರೆ, ಒಬ್ಬರನ್ನ ಸಹಾಯಕ್ಕೆ ತೆಗೆದುಕೊಳ್ಳಬೇಕಿದೆ. ಎಲ್ಲರೂ ಎಲ್ಲರನ್ನ ತೆಗೆದುಕೊಂಡಿದ್ದಾರೆ. ಆದರೆ, ಕೊನೆಗೆ ಗೌತಮಿನೇ ಮೋಕ್ಷಿತಾ ಪಾಲಿಗೆ ಉಳಿದಂತೆ ಇದೆ. ಹಾಗಾಗಿಯೇ ಮೋಕ್ಷಿತಾ ಪೈ ಟೆನ್ಷನ್ ಮಾಡಿಕೊಂಡಿದ್ದಾರೆ.

    ಹೌದು, ನಾನು ಗೌತಮಿ ಸಹಾಯ ತೆಗೆದುಕೊಂಡು ಕ್ಯಾಪ್ಟನ್ ಆಗೋದೇ ಇಲ್ಲ. ಆ ರೀತಿನೇ ಇದ್ದರೇ, ಆಟವನ್ನೆ ಆಡೋದಿಲ್ಲ. ಈ ಆಟದಿಂದ ದೂರವೇ ಉಳಿಯುತ್ತೇನೆ. ಗೌತಮಿಯನ್ನ ಹೋಗಿ ನಾನು ಕೇಳೋದೇ ಇಲ್ಲ. ಅದು ನನಗೆ ಆಗೋದೇ ಇಲ್ಲ ಅಂತಲೇ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಐಶ್ವರ್ಯಾ ಅವರು ಇದು ಗೇಮ್ ಅಷ್ಟೇ, ವೈಯಕ್ತಿವಾಗಿ ತೆಗೆದುಕೊಳ್ಳಬೇಡಿ ಎಂದು ಬೆಂಬಲಿಸಿದ್ದಾರೆ. ಆದರೆ ಅವರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ನನ್ನ ಸೆಲ್ಫ್ ರೆಸ್ಪೆಕ್ಟ್ ಮುಂದೆ ಏನೂ ಇಲ್ಲ. ಯಾವುದು ದೊಡ್ಡದಿಲ್ಲ. ಗೌತಮಿಯಿಂದ ನಾನು ಕ್ಯಾಪ್ಟನ್ ಆಗೋದೇ ಆದ್ರೆ, ಅದು ಬೇಡವೇ ಬೇಡ. ಬಿಗ್ ಬಾಸ್ ಮನೆಗೆ ಕಳಿಸಿದರೆ ನಾನು ರೆಡಿ ಇದ್ದೇನೆ. ಹೀಗೆ ಮನೆ ಮಂದಿಯ ಮುಂದೆ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.

    ಗೌತಮಿ ಜಾದವ್ ಮಂದಹಾಸ ಬೀರಿದ್ದಾರೆ. ಮೋಕ್ಷಿತಾ ಪೈ ಸ್ಥಿತಿಗೆ ಈ ರೀತಿ ಮಾಡಿದ್ರೋ ಏನೋ? ಗೊತ್ತಿಲ್ಲ. ಆದರೆ ಇವರ ನಗುವಿನಲ್ಲೆ ಸಾಕಷ್ಟು ಅರ್ಥ ಕೂಡ ಇದೆ. ಕ್ಯಾಪ್ಟನ್ ಆಗಲು ಗೌತಮಿ ಸಹಾಯ ತೆಗೆದುಕೊಳ್ಳಲ್ಲ ಎಂದ ಮೋಕ್ಷಿತಾಗೆ ‘ಬಿಗ್ ಬಾಸ್’ ಇಲ್ಲಿ ಒಂದು ಶಾಕ್ ಕೂಡ ಕೊಟ್ಟಿದ್ದಾರೆ. ಆ ಶಾಕ್ ಏನು ಅಂದ್ರೆ, ದೊಡ್ಡ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ದೊಡ್ಡ ಬೆಲೆನೂ ಕಟ್ಟಬೇಕಾಗುತ್ತದೆ ಅಂತಲೇ ಹೇಳಿದ್ದಾರೆ. ಇದನ್ನ ಕೇಳಿದ ಉಗ್ರಂ ಮಂಜು ತಮ್ಮ ಎಂದಿನಂತೆ ನಗುವಿನೊಂದಿಗೆ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾರೆ. ಅಂತಿಮವಾಗಿ ಏನು ಆಯ್ತು ಎಂಬುದನ್ನು ಎಪಿಸೋಡ್ ಪ್ರಸಾರ ಆಗುವವರೆಗೂ ಕಾದುನೋಡಬೇಕಿದೆ.

  • BBK 11: ಶಿಶಿರ್‌ ಹೆಣ್ಮಕ್ಕಳ ಹಿಂದೆ ಸುತ್ತೋ ಜೊಲ್ಲ ಎಂದ್ರಾ ಚೈತ್ರಾ?- ರಣರಂಗವಾಯ್ತು ದೊಡ್ಮನೆ

    BBK 11: ಶಿಶಿರ್‌ ಹೆಣ್ಮಕ್ಕಳ ಹಿಂದೆ ಸುತ್ತೋ ಜೊಲ್ಲ ಎಂದ್ರಾ ಚೈತ್ರಾ?- ರಣರಂಗವಾಯ್ತು ದೊಡ್ಮನೆ

    ಬಿಗ್ ಬಾಸ್ ಮನೆಯ (Bigg Boss Kannada 11) ಅಸಲಿ ಆಟ ಈಗ ಶುರುವಾಗಿದೆ. 70ನೇ ದಿನದತ್ತ ಆಟ ಮುನ್ನುಗ್ಗುತ್ತಿದೆ. ಇದೀಗ ಎಂದಿನಂತೆ ನಾಮಿನೇಷ್ ಪ್ರಕ್ರಿಯೆ  ನಡೆದಿದೆ. ಚೈತ್ರಾರವರು ತ್ರಿವಿಕ್ರಮ್‌ಗೆ ನಾಮಿನೇಟ್ ಮಾಡಿದ್ದಾರೆ. ಈ ವೇಳೆ, ತ್ರಿವಿಕ್ರಮ್ ವಿರುದ್ಧ ತಿರುಗಿಬಿದ್ದ ಚೈತ್ರಾಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಶಿಶಿರ್ (Shishir) ಹೆಣ್ಮಕ್ಕಳ ಹಿಂದೆ ತಿರುಗೋ ಜೊಲ್ಲ ಎಂದು ಚೈತ್ರಾ ಹೇಳಿದ್ದನ್ನು ತ್ರಿವಿಕ್ರಮ್ ಬಾಯ್ಬಿಟ್ಟಿದ್ದಾರೆ.

    ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ, ಬೆನ್ನಿಗೆ ಚೂರಿಯನ್ನು ಚುಚ್ಚಬೇಕು ಎಂಬ ‘ಬಿಗ್ ಬಾಸ್’ ಟಾಸ್ಕ್ ನೀಡಲಾಗಿದೆ. ಆಗ ಚೈತ್ರಾ ಅವರು ತ್ರಿವಿಕ್ರಮ್‌ಗೆ ನಾಮಿನೇಟ್ ಮಾಡಿ ಕೊಟ್ಟಿರುವ ಕಾರಣ ಸಿಟ್ಟು ತರಿಸಿದೆ. ತ್ರಿವಿಕ್ರಮ್ ರವರು ಎಲ್ಲರನ್ನು ಮ್ಯಾನಿಫುಲೇಟ್ ಮಾಡುತ್ತಾರೆ. ನೀವು ಮೋಕ್ಷಿತಾರನ್ನು ಸೈಕೋ ಎನ್ನುತ್ತೀರಾ ಎಂದು ಈ ವೇಳೆ ಚೈತ್ರಾ ಬಾಯ್ಬಿಟ್ಟಿದ್ದಾರೆ. ಅದಕ್ಕೆ ರಾಂಗ್ ಆದ ತ್ರಿವಿಕ್ರಮ್, ನೀವು ಅಣ್ಣ ಅಂತೀರಾ ಶಿಶಿರ್‌ಗೆ ಅವರನ್ನೇ ಹೆಣ್ಮುಕ್ಕಳ ಹಿಂದೆ ತಿರುಗೋ ಜೊಲ್ಲ ಎಂದಿದ್ದೀರಾ ಎಂದು ತ್ರಿವಿಕ್ರಮ್ ತಿರುಗೇಟು ನೀಡಿದ್ದಾರೆ.

    ಇದನ್ನು ಕೇಳಿ ಶಿಶಿರ್‌ಗೆ ಶಾಕ್ ಆಗಿದೆ. ನಾನು ಹೀಗೆಲ್ಲಾ ಹೇಳಿಯೇ ಎಂದು ಚೈತ್ರಾ ವಾದ ಮಾಡಿದ್ದಾರೆ. ನನಗೆ ಇದರ ಬಗ್ಗೆ ಕ್ಲ್ಯಾರಿಟಿ ಸಿಗೋವರೆಗೂ ನಾನ್ ಮುಂದೆ ಹೋಗಲ್ಲ ಎಂದು ಶಿಶಿರ್ ಪಟ್ಟು ಹಿಡಿದಿದ್ದಾರೆ. ಮಾನ, ಮರ್ಯಾದೆ ಕಳೆದುಕೊಳ್ಳೋಕೆ ಬಂದಿಲ್ಲ ಇಲ್ಲಿ ಎಂದು ಶಿಶಿರ್ ಗುಡುಗಿದ್ದಾರೆ.

    ಫೈರ್ ಬ್ರ್ಯಾಂಡ್ ಚೈತ್ರಾ ಮಾತು ಎಲ್ಲರ ತಲೆ ಕೆಡಿಸಿದೆ. ನಾಮಿನೇಷನ್ ಪ್ರಕ್ರಿಯೆಯಿಂದ ಸ್ಪರ್ಧಿಗಳ ನಡುವೆ ಬೆಂಕಿ ಬಿದ್ದಿದೆ. ಮುಂದೇನು ಆಗುತ್ತೆ ಎಂಬುದನ್ನು ಎಪಿಸೋಡ್ ನೋಡಿ ತಿಳಿದುಕೊಳ್ಳಬೇಕಿದೆ.

  • BBK 11: ಆಸ್ಪತ್ರೆಯ ಬೆಡ್‌ನಿಂದಲೇ ಫ್ಯಾನ್ಸ್‌ಗೆ ಶೋಭಾ ಶೆಟ್ಟಿ ಸಂದೇಶ

    BBK 11: ಆಸ್ಪತ್ರೆಯ ಬೆಡ್‌ನಿಂದಲೇ ಫ್ಯಾನ್ಸ್‌ಗೆ ಶೋಭಾ ಶೆಟ್ಟಿ ಸಂದೇಶ

    ‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ (Shobha Shetty) ಅನಾರೋಗ್ಯದ ಹಿನ್ನೆಲೆ ಅವರ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ದೊಡ್ಮನೆಯಿಂದ ಎಲಿಮಿನೇಟ್ ಆಗ್ತಿದ್ದಂತೆ ನಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಬೆಡ್ ಮೇಲಿಂದಲೇ ಫ್ಯಾನ್ಸ್‌ಗೆ ನಟಿ ಸಂದೇಶ ಕೊಟ್ಟಿದ್ದಾರೆ.

    ಕಳೆದ ವಾರ ‘ಬಿಗ್ ಬಾಸ್’ನಿಂದ ಎಲಿಮಿನೇಷನ್ ಆದ ಬಳಿಕ ಆಸ್ಪತ್ರೆಗೆ ನಟಿ ದಾಖಲಾಗಿದ್ದಾರೆ. ಉತ್ತಮಗೊಳ್ಳುತ್ತಿದ್ದೇನೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಆಸ್ಪತ್ರೆಯ ಬೆಡ್‌ನಿಂದಲೇ ಅಭಿಮಾನಿಗಳ ಪ್ರೀತಿಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಮೋಹಕ ತಾರೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್-‌ ಉಪೇಂದ್ರ ಜೊತೆ ‘ರಕ್ತ ಕಾಶ್ಮೀರ’ದ ಕಥೆ ಹೇಳಲು ಸಜ್ಜಾದ ರಮ್ಯಾ

    ಫೈರ್ ಲೇಡಿ ಆಗಿ ಗುರುತಿಸಿಕೊಂಡಿದ್ದ ಶೋಭಾ ಶೆಟ್ಟಿಗೆ ಆರೋಗ್ಯ ಕೈಕೊಟ್ಟಿದ್ದಕ್ಕೆ ವೀಕೆಂಡ್ ಶೋನಲ್ಲಿ ಸುದೀಪ್‌ಗೆ (Sudeep) ಬಿಗ್ ಬಾಸ್ ಆಟ ಕ್ವೀಟ್ ಮಾಡೋದಾಗಿ ಹೇಳಿದರು. ಇದರಿಂದ ಶಿಶಿರ್ ಮತ್ತು ಐಶ್ವರ್ಯಾಗೆ ದೊಡ್ಮನೆ ಆಟ ಆಡಲು ಮತ್ತೊಂದು ಚಾನ್ಸ್ ಸಿಕ್ಕಿತ್ತು. ಫ್ಯಾನ್ಸ್ ವೋಟ್ ಮಾಡಿ ಉಳಿಸಿದರು ಕೂಡ ಆರೋಗ್ಯ ಸಾಥ್ ನೀಡುತ್ತಿಲ್ಲ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದರು.

    ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಅನಾರೋಗ್ಯದ ಹಿನ್ನೆಲೆ ಅವರು ಬಿಗ್ ಬಾಸ್ ಆಟಕ್ಕೆ ಗುಡ್ ಬೈ ಹೇಳಿದರು.

  • ಟ್ವಿಸ್ಟ್ ಕೊಟ್ಟ ‘ಬಿಗ್ ಬಾಸ್’- ಈ ಬಾರಿ ಸ್ಪರ್ಧಿಗಳ ಭವಿಷ್ಯ ವೀಕ್ಷಕರ ಕೈಯಲ್ಲಿ

    ಟ್ವಿಸ್ಟ್ ಕೊಟ್ಟ ‘ಬಿಗ್ ಬಾಸ್’- ಈ ಬಾರಿ ಸ್ಪರ್ಧಿಗಳ ಭವಿಷ್ಯ ವೀಕ್ಷಕರ ಕೈಯಲ್ಲಿ

    ಝ’ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿರುವ ದೊಡ್ಮನೆ ಆಟದಲ್ಲಿ ‘ಬಿಗ್ ಬಾಸ್’ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಶೋಭಾ ಶೆಟ್ಟಿ ಎಲಿಮಿನೇಷನ್ ಬಳಿಕ ಇನ್ನೂಳಿದ ಸ್ಪರ್ಧಿಗಳು ಮನೆಯಲ್ಲಿ ಆಟ ಮುಂದುವರೆಸಲು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಸ್ಪರ್ಧಿಗಳು ಭವಿಷ್ಯ ವೀಕ್ಷಕರ ಕೈಯಲ್ಲಿದೆ.

    ದೊಡ್ಮನೆಯಲ್ಲಿ ಎರಡು ಚಾನೆಲ್‌ಗಳಾಗಿ ವಿಂಗಡಿಸಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಎರಡು ತಂಡಗಳಾಗಿ ಡಿವೈಡ್ ಆಗಿದ್ದಾರೆ. ಪರಸ್ಪರ ಪೈಪೋಟಿಗೆ ಬಿದ್ದಿದ್ದಾರೆ. ಬ್ರೇಕಿಂಗ್ ನ್ಯೂಸ್ ಆಟವನ್ನು ಆಡಿದ್ದಾರೆ. 2 ತಂಡಗಳಿಗೂ ಕೊಡ್ತಿರುವ ಟಾಸ್ಕ್‌ಗಳನ್ನು ಪೈಪೋಟಿಗೆ ಬಿದ್ದು ಆಟ ಆಡುತ್ತಿದ್ದಾರೆ. ಇದನ್ನೂ ಓದಿ:BBK 11: ಬಿಗ್ ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ

    ಈ ಎರಡು ತಂಡಗಳಲ್ಲಿ ಯಾರು ಹೆಚ್ಚು ಮನರಂಜನೆ ನೀಡಿದರು ಎಂಬುದನ್ನು ನಿರ್ಧರಿಸುವುದು ಮಾತ್ರ ವೀಕ್ಷಕರು. ಹೌದು, ‘ಬಿಗ್ ಬಾಸ್ ಕನ್ನಡ’ ಶೋನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಇಂಥದ್ದೊಂದು ಟ್ವಿಸ್ಟ್ ನೀಡಲಾಗಿದೆ. ಈ ವಾರ ಅತೀ ಹೆಚ್ಚು ಮನರಂಜನೆ ಕೊಡುವ ವಾಹಿನಿಯ ತಂಡ ಯಾವುದು ಎಂದು ವೀಕ್ಷಕರೇ ನಿರ್ಧರಿಸಿ ವೋಟ್ ಮಾಡಬೇಕಿದೆ. ಜಿಯೋ ಸಿನಿಮಾ ಆಪ್ ಮೂಲಕ ವೀಕ್ಷಕರು ವೋಟ್ ಮಾಡಲಿದ್ದಾರೆ.

    ಡಿ.2ರ ರಾತ್ರಿಯ ಬಿಗ್ ಬಾಸ್ ಕನ್ನಡ ಸಂಚಿಕೆ ಪ್ರಸಾರವಾದ ಬಳಿಕ ಜಿಯೋ ಸಿನಿಮಾ ಆಪ್‌ನಲ್ಲಿ ವೋಟಿಂಗ್ ಲೈನ್ ತೆರೆದುಕೊಳ್ಳಲಿವೆ. ಬುಧವಾರ (ಡಿ.4) ಬೆಳಗ್ಗೆಯವರೆಗೂ ವೋಟಿಂಗ್ ಲೈನ್ಸ್ ಓಪನ್ ಇರಲಿದೆ. ಈ ಮೂಲಕ 2 ತಂಡಗಳ ಭವಿಷ್ಯ ಪ್ರೇಕ್ಷಕರ ಕೈಯಲ್ಲಿದೆ.

  • BBK 11: ಬಿಗ್ ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ

    BBK 11: ಬಿಗ್ ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ

    ಕೋರ್ಟ್‌ಗೆ ಫೈರ್ ಬ್ರ್ಯಾಂಡ್‌ ಹಾಜರು

    ‘ಬಿಗ್ ಬಾಸ್ ಕನ್ನಡ 11’ರ (BBK 11) ಶೋನಿಂದ ಚೈತ್ರಾ ಕುಂದಾಪುರ (Chaithra Kundapura) ಹೊರಬಂದಿದ್ದಾರೆ. ವಂಚನೆ ಕೇಸ್ ಹಿನ್ನೆಲೆ ಇಂದು (ಡಿ.3) ಎಸಿಎಂಎಂ ಕೋರ್ಟ್ ಮುಂದೆ ಚೈತ್ರಾ ಹಾಜರಾಗಿದ್ದಾರೆ. ಇದನ್ನೂ ಓದಿ:UI ರಿಲೀಸ್‌ಗೂ ಮುನ್ನ ಉಪೇಂದ್ರ & ಟೀಮ್‌ ಟೆಂಪಲ್‌ ರನ್

    ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ 5 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಬಿಗ್ ಬಾಸ್‌ನಿಂದ ಹೊರಬಂದು ಎಸಿಎಂಎಂ ನ್ಯಾಯಾಲಯದ ಮುಂದೆ ಅಟೆಂಡ್ ಆಗಿದ್ದಾರೆ. ಚೈತ್ರಾ, ಶ್ರೀಕಾಂತ್ ಸೇರಿದಂತೆ ಮೂವರು ಕೋಟ್‌ಗೆ ಬಂದಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು 2025ರ ಜ.13ಕ್ಕೆ ಮುಂದಿನ ವಿಚಾರಣೆಗೆ ದಿನಾಂಕ ಸೂಚಿಸಿದ್ದಾರೆ.

    ಇನ್ನೂ ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಈ ಹಿಂದೆ ವರ್ತೂರು ಸಂತೋಷ್ ಅವರು ಒಂದು ವಾರಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಆ ನಂತರ ಬಿಗ್ ಬಾಸ್‌ಗೆ ಬಂದಿದ್ದರು. ಅದೇ ರೀತಿ ಇದೀಗ ಮತ್ತೆ ಚೈತ್ರಾ ಕೂಡ ಬಿಗ್ ಬಾಸ್‌ಗೆ ಹೋಗ್ತಾರಾ? ಎಂದು ಕಾದುನೋಡಬೇಕಿದೆ.

    ಅಂದಹಾಗೆ, ಉದ್ಯಮಿ ಗೋವಿಂದ ಪೂಜಾರಿಗೆ ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ ಚೈತ್ರಾ & ಟೀಮ್ 5 ಕೋಟಿ ರೂ. ವಂಚಿಸಿದ್ದಾರೆ ಎಂದು ಅರೆಸ್ಟ್ ಆಗಿದ್ದರು.

  • BBK 11: ಉಲ್ಟಾ ಹೊಡೆದ ಶೋಭಾ ಶೆಟ್ಟಿ- ‘ಬಿಗ್ ಬಾಸ್’ ನಾನು ಹೊರಗೆ ಹೋಗಲ್ಲ ಎಂದ ನಟಿ

    BBK 11: ಉಲ್ಟಾ ಹೊಡೆದ ಶೋಭಾ ಶೆಟ್ಟಿ- ‘ಬಿಗ್ ಬಾಸ್’ ನಾನು ಹೊರಗೆ ಹೋಗಲ್ಲ ಎಂದ ನಟಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 62 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೀಗಿರುವಾಗ ಭಾನುವಾರದ ಪಂಚಾಯಿತಿಯಲ್ಲಿ ಜನ ವೋಟ್ ಮಾಡಿ ಶೋಭಾರನ್ನು (Shobha Shetty) ಸೇವ್ ಮಾಡಿದ್ದರೂ ಕೂಡ ತಾವು ದೊಡ್ಮನೆ ಆಟ ಕ್ವೀಟ್ ಮಾಡೋದಾಗಿ ಹೇಳಿದ್ದರು. ಶೋಭಾ ಮನವಿಗೆ ಸುದೀಪ್ (Sudeep) ಸಮ್ಮತಿ ನೀಡಿದರು. ಇದೀಗ ಮತ್ತೆ ನಟಿ ಉಲ್ಟಾ ಹೊಡೆದಿದ್ದಾರೆ. ‘ಬಿಗ್ ಬಾಸ್’ ನಾನು ಹೊರಗೆ ಹೋಗಲ್ಲ ಎಂದು ಹೈಡ್ರಾಮಾ ಮಾಡಿದ್ದಾರೆ.

    ಮನೆಯಿಂದ ಹೊರ ಹೋಗಲು ನಿರ್ಧಾರ ಮಾಡಿದ ಶೋಭಾ ಶೆಟ್ಟಿಗೆ ಕಿಚ್ಚ ಸುದೀಪ್, ಬುದ್ಧಿ ಹೇಳಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಶೋಭಾ ಶೆಟ್ಟಿಗೆ ಬಿಗ್ ಬಾಸ್ ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಆದರೆ ಕಿಚ್ಚ ಸುದೀಪ್ ಎಪಿಸೋಡ್ ಮುಗಿದ ಮೇಲೆ ಮನೆಯಲ್ಲಿ ಏನೆಲ್ಲ ಆಯ್ತು ಅನ್ನೋ ಕುತೂಹಲ ಹೆಚ್ಚಾಗಿದೆ. ಇದೀಗ ವಾಹಿನಿ ಹೊಸ ಪ್ರೋಮೋವೊಂದು ಶೇರ್ ಮಾಡಿದೆ. ಇದನ್ನೂ ಓದಿ:ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್

    ಅದರಲ್ಲಿ ಶೋಭಾ ಶೆಟ್ಟಿ ಮತ್ತೆ ಮನೆಯಲ್ಲಿ ಇರುವ ಬಗ್ಗೆ ಮಾತನಾಡಿದ್ದಾರೆ. ಒಂದು ವಾರ ಇದ್ದು ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲಿಲ್ಲ ಅಂದರೆ ಕ್ಷಮಿಸಿಕೊಳ್ಳಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ. ಆಗ ಬಿಗ್ ಬಾಸ್, ಶೋಭಾ ನೀವು ಈ ಕೂಡಲೇ ಮನೆಯ ಮುಖ್ಯದ್ವಾರದಿಂದ ಹೊರಬರಬೇಕು ಎಂದು ಆಜ್ಞೆ ಮಾಡಿದ್ದಾರೆ.

    ಕಣ್ಣೀರು ಇಡುತ್ತಲೇ ಹೊರ ಬರುವ ಶೋಭಾ, ಯಾರೆಲ್ಲ ನನಗೆ ವೋಟ್ ಮಾಡಿದ್ದಿರೋ, ನಿಮ್ಮೆಲ್ಲರಿಗೂ ನೋವು ಕೊಡಬೇಕು ಅನ್ನೋ ಉದ್ದೇಶ ನನ್ನದಲ್ಲ. ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿಬಿಡಿ. ಬಿಗ್ ಬಾಸ್ ನನಗೆ ಹೋಗಬೇಕು ಅನಿಸ್ತಿಲ್ಲ ಎಂದು ಬಿಗ್ ಬಾಸ್ ಮನೆಗೆ ನಮಸ್ಕಾರ ಮಾಡಿದ್ದಾರೆ.