Tag: bbk 11

  • BBK 11: ಗೌತಮಿ ಪಕ್ಷಪಾತಿ ಎಂದು ದೂರಿದ ಮೋಕ್ಷಿತಾ

    BBK 11: ಗೌತಮಿ ಪಕ್ಷಪಾತಿ ಎಂದು ದೂರಿದ ಮೋಕ್ಷಿತಾ

    ದೊಡ್ಮನೆಯ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. 80 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸ್ಪರ್ಧಿಗಳ ಅಳಿವು ಉಳಿವಿಗಾಗಿ ಹೋರಾಟ ನಡೆಯುತ್ತಿದೆ. ಹೀಗಿರುವಾಗ ಟಾಸ್ಕ್‌ವೊಂದರಲ್ಲಿ ಮನೆಯ ಪಕ್ಷಪಾತಿ ಯಾರು? ಎಂದು ಕೇಳಿದ್ರೆ ಗೌತಮಿ ಹೆಸರು ಹೇಳಿ ಮೋಕ್ಷಿತಾ (Mokshitha Pai) ನೀರಿಗೆ ತಳ್ಳಿದ್ದಾರೆ. ಇದನ್ನು ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಯುಐ ಚಿತ್ರಕ್ಕೆ ಬಾಲಿವುಡ್‌ನಲ್ಲೂ ಬಹುಪರಾಕ್

    ಮಂಜು, ಮೋಕ್ಷಿತಾ, ಗೌತಮಿ (Gouthami Jadav) ನಡುವಿನ ಸ್ನೇಹಕ್ಕೆ ಬ್ರೇಕ್ ಬಿದ್ದು ಹಲವು ದಿನಗಳಾಗಿದೆ. ಮೂವರು ಜಿದ್ದಿಗೆ ಬಿದ್ದಿದ್ದು ಇದೆ. ಹೀಗಿರುವಾಗ ಗೌತಮಿ ಮೇಲೆ ಮೋಕ್ಷಿತಾ ಸೇಡು ತೀರಿಸಿಕೊಳ್ಳುವ ಕೆಲಸ ಶುರು ಮಾಡಿದ್ದಾರೆ. ಸದ್ಯ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ‘ಬಿಗ್ ಬಾಸ್’ ಟಾಸ್ಕ್‌ವೊಂದರಲ್ಲಿ ನೀಡಿದ್ದಾರೆ. ಪಕ್ಷಪಾತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ ಎಂಬ ಆಯ್ಕೆಗೆ ಸ್ಪರ್ಧಿಗಳನ್ನು ಸೂಚಿಸುವಂತೆ ‘ಬಿಗ್ ಬಾಸ್’ ಸೂಚನೆ ನೀಡಿದ್ದಾರೆ. ಟಾಸ್ಕ್‌ ಮುಂದುವರಿದ ಭಾಗವಾಗಿ ತಾವು ತೆಗೆದುಕೊಂಡ ವ್ಯಕ್ತಿಯ ಹೆಸರನ್ನು ಹೇಳಿ, ಅದಕ್ಕೆ ಸೂಕ್ತ ಕಾರಣ ನೀಡಿ ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಬೇಕು ಎಂದು ಆದೇಶ ನೀಡಿದರು.

    ಅದರಂತೆಯೇ ಮೋಕ್ಷಿತಾ, ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ ಸ್ಥಾನಕ್ಕೆ ಗೌತಮಿ ಹೆಸರನ್ನು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಕ್ಸಮರ ನಡೆದಿದೆ. ನಮ್ಮ ಮೂರು ಜನರ ಫ್ರೆಂಡ್‌ಶಿಪ್ ಕಡೆವರೆಗೂ ಕಾಪಾಡುತ್ತೇನೆ ಎಂದಿದ್ರಿ ಎಂದ ಮೋಕ್ಷಿತಾಗೆ ನೀವು ಒಮ್ಮೆ ನಮ್ಮಿಂದ ದೂರಾದ ಮೇಲೆ ಆಟದ ಸಲುವಾಗಿ ನಿಮ್ಮಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಗೌತಮಿ ತಿರುಗೇಟು ನೀಡಿದರು.

    ಅದಕ್ಕೆ ನಿಮಗೆ ಮಂಜುರವರು ಬೇಜಾರ್ ಆದರೆ ಫೀಲ್ ಆಗುತ್ತದೆ. ಅದೇ ಮೋಕ್ಷಿತಾಗೆ ಫೀಲ್ ಆದರೆ ಅಲ್ಲಿ ಗೌತಮಿ ಇರುತ್ತಿರಲಿಲ್ಲ ಎಂದು ಮೋಕ್ಷಿತಾ ತಿವಿದಿದ್ದಾರೆ. ಅವರ ಮಾತಿಗೆ ನನಗೆ ನಿಮ್ಮ ಹಾಗೆ ಯೋಚನೆ ಮಾಡೋಕೆ ಬರಲ್ಲ. ಇಂದಿಗೂ ಈ ಸ್ನೇಹವನ್ನು ನಿಭಾಯಿಸುತ್ತಿರೋದು ನಾನು ಎಂದಿದ್ದಾರೆ ಗೌತಮಿ. ನಂತರ ಗೌತಮಿರನ್ನು ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ. ಇದರ ಜೊತೆಗೆ ಪಕ್ಷಪಾತಿ ವ್ಯಕ್ತಿಗಳ ಸಾಲಿನಲ್ಲಿ ಹೆಚ್ಚು ಮಂದಿ ಚೈತ್ರಾ ಕುಂದಾಪುರ ಹೆಸರನ್ನು ಟಾರ್ಗೆಟ್ ಮಾಡಿದ್ದಾರೆ.

  • BBK 11: ಹದ್ದು ಮೀರಿದ ವರ್ತನೆ- ಉಗ್ರಂ ಮಂಜು, ರಜತ್ ನಡುವೆ ಕಿರಿಕ್

    BBK 11: ಹದ್ದು ಮೀರಿದ ವರ್ತನೆ- ಉಗ್ರಂ ಮಂಜು, ರಜತ್ ನಡುವೆ ಕಿರಿಕ್

    ದೊಡ್ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ರಜತ್ (Rajath) ಆರ್ಭಟ ಜೋರಾಗಿದೆ. ಸ್ಪರ್ಧಿ ರಜತ್ ಅವರ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದೆ ವರ್ತನೆ ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ. ಉಗ್ರಂ ಮಂಜು (Ugramm Manju) ಹಾಗೂ ರಜತ್ ನಡುವೆ ಜೋರು ಗಲಾಟೆ ನಡೆದಿದೆ. ಇದನ್ನೂ ಓದಿ:ಆಕೆ ಮುಗ್ಧೆ, ತಪ್ಪು ಮಾಡಿಲ್ಲ: ಪವಿತ್ರಾಗೆ ಬೇಲ್ ಸಿಕ್ಕಿದ್ದಕ್ಕೆ ಮಾಜಿ ಪತಿ ಸಂತಸ

    ‘ಚೆಂಡು ಸಾಗಲಿ ಮುಂದೆ ಹೋಗಲಿ’ ಎನ್ನುವ ಟಾಸ್ಕ್‌ನಲ್ಲಿ ಬಿಗ್ ಬಾಸ್ ಚೈತ್ರಾ ಅವರು ಆಟದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ, ಚೈತ್ರಾ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರ ಕಥೆ ಇದೆ ಎಂದು ರಜತ್ ಬಗ್ಗೆ ಮಂಜು ಕೆಂಡಕಾರಿದ್ದಾರೆ. ಆಗ ಯೋಗ್ಯತೆಯ ಮಾತುಗಳು ಬಂದಿವೆ. ಮಂಜು ಅವರು ರಜತ್ ಅವರ ಮೈ ಮೇಲೆ ಹೋಗಿದ್ದಾರೆ.

    ಕಳೆದ ವಾರಾಂತ್ಯ ಧನರಾಜ್ ಜೊತೆಗಿನ ರಜತ್ ಜಗಳದ ವಿಚಾರವಾಗಿ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಜೊತೆಗೆ ಶಿಕ್ಷೆ ನೀಡಿದ್ದರು. ಆದರೂ ಇದೀಗ ಮತ್ತೆ ಮಂಜು ಹಾಗೂ ರಜತ್ ಅವರ ನಡುವೆ ಮಾರಾಮಾರಿಯಾಗಿದೆ. ಹಾಗಾದ್ರೆ ಈ ವಾರಾಂತ್ಯವು ಕೂಡ ರಜತ್‌ಗೆ ಸುದೀಪ್ ಬೆಂಡೆತ್ತುತ್ತಾರಾ? ಕಾದುನೋಡಬೇಕಿದೆ.

    ಇನ್ನೂ ಬಿಗ್ ಬಾಸ್‌ನಿಂದ ಕಳೆದ ವಾರ ಶಿಶಿರ್ ಎಲಿಮಿನೇಟ್ ಆಗಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಕುಟುಂಬದಲ್ಲಿನ ತುರ್ತು ಪರಿಸ್ಥಿತಿ ಹಿನ್ನೆಲೆ ಗೋಲ್ಡ್ ಸುರೇಶ್ ಕೂಡ ಮನೆಯಿಂದ ನಿರ್ಗಮಿಸಿದ್ದಾರೆ. ಅಸಲಿಗೆ ಏನಾಗಿದೆ ಎಂಬುದು ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

  • ಸೋತು ಹೋಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ- ಸುರೇಶ್ ನಿರ್ಗಮನದ ಬಗ್ಗೆ ಸುದೀಪ್ ಮಾತು

    ಸೋತು ಹೋಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ- ಸುರೇಶ್ ನಿರ್ಗಮನದ ಬಗ್ಗೆ ಸುದೀಪ್ ಮಾತು

    ನ್ನಡದ ‘ಬಿಗ್ ಬಾಸ್ ಸೀಸನ್ 11’ರಿಂದ (Bigg Boss Kannada 11) ಗೋಲ್ಡ್ ಮ್ಯಾನ್ ಸುರೇಶ್ (Suresh) ಹೊರಬಂದಿದ್ದಾರೆ. ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಹಿನ್ನೆಲೆ ಗೋಲ್ಡ್ ಸುರೇಶ್ ದೊಡ್ಮನೆಯಿಂದ ನಿರ್ಗಮಿಸಿದ್ದಾರೆ. ಈ ವೇಳೆ, ಸುದೀಪ್ ಮಾತನಾಡಿ, ನೀವು ಸೋತು ಮನೆಯಿಂದ ಹೋಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ ಎಂದು ಸುರೇಶ್ ಕುರಿತು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಕೈಗೆತ್ತಿಕೊಂಡ ‘ಫಾರ್ ರಿಜಿಸ್ಟ್ರೇಷನ್’ ಡೈರೆಕ್ಟರ್

    ನಿನ್ನೆಯ (ಡಿ.16) ಸಂಚಿಕೆಯಲ್ಲಿ ಸುರೇಶ್ ನಿರ್ಗಮನದ ಬಗ್ಗೆ ತೋರಿಸಲಾಗಿದೆ. ಅವರ ಕುಟುಂಬದಲ್ಲಿ ಏನಾಗಿದೆ ಎಂಬುದನ್ನು ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲ. ಇಂದು ಈ ಮನೆಯಲ್ಲಿ ಒಬ್ಬರ ಪ್ರಯಾಣ ಮುಕ್ತಾಯಗೊಂಡು, ನಿಮಗೆ ಹಾಗೂ ಈ ಮನೆಗೆ ವಿದಾಯ ಹೇಳಲಿದ್ದಾರೆ. ಈ ಸಂದರ್ಭದಲ್ಲೇ ಒಂದು ಮುಖ್ಯವಾದ ವಿಷಯವನ್ನು ಹೇಳಬೇಕಿದೆ. ಕೆಲ ಸಮಯದ ಹಿಂದೆ `ಬಿಗ್ ಬಾಸ್’ ತಂಡಕ್ಕೆ ಒಂದು ಸಂದೇಶ ತಲುಪಿದೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ.

    ಸ್ಪರ್ಧಿಯೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಅವರ ಅವಶ್ಯಕತೆ ಈ ಮನೆಗಿಂತ, ಅವರ ಸ್ವಗೃಹದಲ್ಲಿ, ಅವರ ಕುಟುಂಬ ಸದಸ್ಯರಿಗೆ ಹೆಚ್ಚು ಅವಶ್ಯಕತೆ ಇದೆ. ಸುರೇಶ್, ಈ ಮನೆಗಿಂತ ನಿಮ್ಮ ಸ್ವಗೃಹದಲ್ಲಿ ನಿಮ್ಮ ಉಪಸ್ಥಿತಿ ಬಹಳ ಮುಖ್ಯ ಎಂದು ಬಿಗ್ ಬಾಸ್ ಹೇಳಿದರು. ಆಗ ಸುರೇಶ್ ಗಾಬರಿಯಿಂದ, ಏನು ಕಾರಣ ತಿಳಿಸಿ ಎಂದು ಕೇಳಿಕೊಂಡರು.

    ಬಳಿಕ ದೊಡ್ಮನೆಯ ಟಿವಿ ಪರದೆ ಮೇಲೆ ಸುದೀಪ್ ಅವರು ಕಾಣಿಸಿಕೊಂಡರು.ಸುರೇಶ್, ಗಾಬರಿ ಆಗುವಂತಹದ್ದು ಏನಿಲ್ಲ. ಆದರೆ ತಾವು ಮನೆಗೆ ಹೋಗಲೇಬೇಕಾದ ಸಂದರ್ಭ. ನಿಮ್ಮನ್ನು ಕಳುಹಿಸಿಕೊಡಬೇಕು ನಾವು. ನಿಮ್ಮ ಕುಟುಂಬಕ್ಕೆ ನಿಮ್ಮ ಅವಶ್ಯಕತೆ ಇದೆ. ನೀವು ಇಲ್ಲಿದ್ದಷ್ಟು ವಾರಗಳು ತುಂಬ ಮನರಂಜನೆ ನೀಡಿದ್ದೀರಿ. ನಿಮ್ಮ ಇನ್ನೊಂದು ಸೈಡ್ ಏನು ಅಂತ ಜನರಿಗೆ ತೋರಿಸಿಕೊಟ್ಟಿದ್ದೀರಿ. ಒಂದು ಕ್ಯಾಪ್ಟನ್ ಆಗಿ ಮನೆಯಿಂದ ಆಚೆ ಹೋಗುತ್ತಿದ್ದೀರಿ. ಸೋತು ಹೊಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ ಎಂದು ಹೇಳುತ್ತಾ, ಬಿಗ್ ಬಾಸ್ ಮನೆಯಲ್ಲಿ ಖಂಡಿತ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸುರೇಶ್. ನಿಮಗೆ ಧನ್ಯವಾದಗಳು ಎಂದು ಸುದೀಪ್ ಹೇಳಿದ್ದಾರೆ. ಇನ್ನೂ ಅವರ ನಿರ್ಗಮನದ ಬಗ್ಗೆ ಅಸಲಿ ವಿಚಾರ ಏನೆಂಬುದು ಹೊರ ಬೀಳುತ್ತಾ? ಎಂದು ಕಾದುನೋಡಬೇಕಿದೆ.

  • BBK 11: ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ- ಮಂಜುಗೆ ಗೌತಮಿ ತಿರುಗೇಟು

    BBK 11: ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ- ಮಂಜುಗೆ ಗೌತಮಿ ತಿರುಗೇಟು

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಸ್ನೇಹಿತರಾಗಿದ್ದ ಉಗ್ರಂ ಮಂಜು, ಗೌತಮಿ ಜಾಧವ್ ನಡುವೆ ಬಿರುಕು ಮೂಡಿದೆ. ತ್ರಿವಿಕ್ರಮ್ ಜೊತೆ ಆಟದ ಲಾಜಿಕ್ ಮತ್ತು ಸ್ಟ್ರಾಟಜಿ ಮಾತನಾಡುವಾಗ ಮಂಜು ಮಧ್ಯೆ ಎಂಟ್ರಿ ಕೊಟ್ಟಿದ್ದಾರೆ. ಇದು ನಟಿಗೆ ಕೋಪ ತರಿಸಿದೆ. ಟೇಕ್ ಆಫ್ ಆಗಿದೆ, ಬಗ್ಗೋ ಮಾತೇ ಇಲ್ಲ ಎಂದು ಉಗ್ರಂ ಮಂಜುಗೆ (Ugramm Manju) ಗೌತಮಿ ಜಾಡಿಸಿದ್ದಾರೆ.

    ಗೌತಮಿ (Gouthami) ಅವರು ಟಾಸ್ಕ್ ವಿಚಾರವಾಗಿ ತ್ರಿವಿಕ್ರಮ್ ಜತೆ ಮಾತನಾಡಿದ್ದಾರೆ. ಲಾಜಿಕ್ ಹಾಗೂ ಸ್ಟ್ರಾಟಜಿ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ನಡುವೆ ಮಂಜು ಬಂದಿದ್ದಾರೆ. ಆಗ ಮಂಜು ಅವರು ನಾನು ಚಪ್ಪಾಳೆ ಹೊಡೆದೆ ಎಂದಿದ್ದಾರೆ. ಅದಕ್ಕೆ ಗೌತಮಿ ಅವರು, ಮಂಜುಗೆ ಚೆನ್ನಾಗಿ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್‌ ನೀನಾಸಂ, ರಚಿತಾ ರಾಮ್

    ನಿಮಗೆ ಚಪ್ಪಾಳೆಯ ಧ್ವನಿ ಕೇಳೆ ಇಲ್ಲ. ನಾನು ಕೇಳಿದ್ದು. ನಮ್ಮ ಕಥೆ ಜೊತೆ ನಿಮ್ಮ ಕಥೆ ಸೇರಿಸಿಕೊಂಡು ಹೇಳಿದ್ರಿ ಅಂತ. ಇದೇ ಪ್ಲಾಬ್ಲಮ್ ಇರೋದು. ಎಲ್ಲರಿಗೂ ನಿಮ್ಮ ನರೇಶನ್ ಕೊಡುತ್ತೀರಾ. ಇದಕ್ಕೆ ಎಲ್ಲರಿಗೂ ಅನ್ಸೋದು, ಮಂಜು ನಾನು ನಾನು ಅಂತ ಎನ್ನುತ್ತಾರೆ ಅಂತ. ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ ಎಂದು ಗೌತಮಿ ತಿರುಗೇಟು ನೀಡಿದ್ದಾರೆ.

    ನಾನು ಕ್ಯಾಪ್ಟನ್ ಆಗಿದ್ದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವಾಯ್ಸ್‌ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ನಟಿ ಮಂಜುಗೆ ಎಚ್ಚರಿಕೆ ನೀಡಿದ್ದಾರೆ.

  • BBK 11: ರಜತ್, ತ್ರಿವಿಕ್ರಮ್ ನಡುವೆ ಫೈಟ್- ಮತ್ತೆ ರದ್ದಾಗುತ್ತಾ ಟಾಸ್ಕ್?

    BBK 11: ರಜತ್, ತ್ರಿವಿಕ್ರಮ್ ನಡುವೆ ಫೈಟ್- ಮತ್ತೆ ರದ್ದಾಗುತ್ತಾ ಟಾಸ್ಕ್?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆ ಆಟ ಶುರುವಾದ ದಿನದಿಂದ ಒಂದಲ್ಲಾ ಒಂದು ಕಿರಿಕ್‌ನಿಂದಲೇ ಹೈಲೆಟ್ ಆಗುತ್ತಲೇ ಇದೆ. ಈಗ ಟಾಸ್ಕ್‌ವೊಂದರಲ್ಲಿ ರಜತ್ (Rajath) ಮತ್ತು ತ್ರಿವಿಕ್ರಮ್ (Trivikram) ನಡುವೆ ಕಿರಿಕ್ ಆಗಿದೆ. ಇದರಿಂದ ಆಟವೇ ರದ್ದಾಗುವ ಹಂತಕ್ಕೆ ಬಂದಿದೆ.

    ಇತ್ತೀಚೆಗೆ ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗಳು ಸಾಕಷ್ಟು ಅರ್ಧಕ್ಕೆ ನಿಂತು ಹೋಗಿದ್ದು ಇದೆ. ಇದೀಗ ಟಾಸ್ಕ್ ಆಡುತ್ತಿದ್ದಾಗ ಉಸ್ತುವಾರಿಗಳು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರ ನಡೆಗೆ ಮನೆ ಮಂದಿ ಗರಂ ಆಗಿದ್ದಾರೆ. ಇದನ್ನೂ ಓದಿ:ಯಾರನ್ನೂ ದ್ವೇಷಿಸಲಿಲ್ಲ – ಎಸ್.ಎಂ ಕೃಷ್ಣ ಅಗಲಿಕೆಯ‌ ಕುರಿತು ನೋವು ಹಂಚಿಕೊಂಡ ನಟಿ ರಮ್ಯಾ

    ಒಂದು ತಂಡಕ್ಕೆ ರಜತ್ ಉಸ್ತುವಾರಿಯಾದರೇ, ಮತ್ತೊಂದು ತಂಡದಲ್ಲಿ ತ್ರಿವಿಕ್ರಮ್ ಉಸ್ತುವಾರಿಯಾಗಿದ್ದಾರೆ. ಡ್ರಮ್ ಅನ್ನು ಉರುಳಿಸುತ್ತಾ ಚೀಲಗಳನ್ನು ಸಂಗ್ರಹಿಸಿ, ಬಾರದ ವಸ್ತುವನ್ನು ಮೇಲೆ ಏರಿಸುವ ತಂಡ ಗೆಲ್ಲುತ್ತದೆ. ಇದೇ ಟಾಸ್ಕ್ ಆಡುತ್ತಿದ್ದಾಗ ತ್ರಿವಿಕ್ರಮ್ ತಂಡದವರು ಡ್ರಮ್‌ನಿಂದ ಆಚೆ ಬರುತ್ತಾರೆ. ಆಗ ಉಸ್ತುವಾರಿ ರಜತ್ ಟಾಸ್ಕ್ ಆಡುತ್ತಿದ್ದವರನ್ನು ತಡೆಯುತ್ತಾರೆ. ಹೀಗಾಗಿ ಇದೇ ವಿಚಾರಕ್ಕೆ ಇಬ್ಬರು ಉಸ್ತುವಾರಿಗಳ ಮಧ್ಯೆ ಗಲಾಟೆ ನಡೆದಿದೆ. ಆದರೆ ಈ ಬಾರಿಯೂ ಕೂಡ ಬಿಗ್ ಬಾಸ್ ಕೊಟ್ಟ ಟಾಸ್ಕ್ ರದ್ದಾಗುತ್ತಾ? ಎಂಬ ಕುತೂಹಲದಲ್ಲಿದ್ದಾರೆ ವೀಕ್ಷಕರು.

    ಅಂದಹಾಗೆ, ಈ ಬಾರಿ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಮೋಕ್ಷಿತಾ, ಭವ್ಯಾ, ಧನರಾಜ್, ಚೈತ್ರಾ, ತ್ರಿವಿಕ್ರಮ್, ಶಿಶಿರ್, ರಜತ್, ಹನುಮಂತ ನಾಮಿನೇಟ್ ಹಾಟ್ ಸೀಟ್‌ನಲ್ಲಿದ್ದಾರೆ. ಕಳೆದ ಎಲಿಮಿನೇಷನ್ ನಡೆಯದ ಹಿನ್ನೆಲೆ ಈ ಬಾರಿ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಎಲ್ಲದ್ದಕ್ಕೂ ವಾರಾಂತ್ಯ ಉತ್ತರ ಸಿಗಲಿದೆ.

  • ನಾಮಿನೇಷನ್ ಹಾಟ್ ಸೀಟ್‌ನಲ್ಲಿ 8 ಮಂದಿ- ಈ ಬಾರಿ ಡಬಲ್ ಎಲಿಮಿನೇಷನ್?

    ನಾಮಿನೇಷನ್ ಹಾಟ್ ಸೀಟ್‌ನಲ್ಲಿ 8 ಮಂದಿ- ಈ ಬಾರಿ ಡಬಲ್ ಎಲಿಮಿನೇಷನ್?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ಶೋಭಾ ಶೆಟ್ಟಿ (Shobha Shetty) ಎಲಿಮಿನೇಷನ್ ನಂತರ ಕಳೆದ ವಾರ ಯಾರ ಎಲಿಮಿನೇಷನ್ ಕೂಡ ನಡೆದಿಲ್ಲ. ಈ ವಾರ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಯಾರಿಗೆ ಈ ವಾರ ಮನೆಯಿಂದ ಗೇಟ್ ಪಾಸ್ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಸ್ಪರ್ಧಿಗಳು ಅಳಿವು- ಉಳಿವಿಗಾಗಿ ಜಟಾಪಟಿ ನಡೆಯುತ್ತಿದೆ. ಸದ್ಯ ಈ ವಾರ ಕ್ಯಾಪ್ಟನ್ ಗೌತಮಿ ಕಡೆಯಿಂದ ಮೋಕ್ಷಿತಾ ಅವರು ನೇರವಾಗಿ ನಾಮಿನೇಟ್ ಆದರೆ, ಮನೆಯ ಸದಸ್ಯರಿಂದ ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಭವ್ಯಾ ಕೂಡ ಇದ್ದಾರೆ. ಒಟ್ಟು ಈ ಎಂಟು ಮಂದಿಯಲ್ಲಿ ಭವ್ಯಾ ಮತ್ತು ಮೋಕ್ಷಿತಾ ಅವರೇ ಅತೀ ಹೆಚ್ಚು ಬಾರಿ ನಾಮಿನೇಟ್ ಆಗಿರುವುದು. ಉಳಿದಂತೆ, ಚೈತ್ರಾ ಕುಂದಾಪುರ (Chaithra Kundapura), ತ್ರಿವಿಕ್ರಮ್, ಶಿಶಿರ್, ಧನರಾಜ್ ಆಚಾರ್, ರಜತ್ ಕಿಶನ್, ಹನುಮಂತ ಲಮಾಣಿ (Hanumantha Lamani) ಇದ್ದಾರೆ.

    ಈ ಎಂಟು ಮಂದಿಯಲ್ಲಿ ಈ ವಾರ ಯಾರು ಹೊರಗೆ ಹೋಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಕಳೆದ ವಾರ ಯಾರೂ ಎಲಿಮಿನೇಟ್ ಆಗಿಲ್ಲ. ಹಾಗಾಗಿ, ಈ ವಾರ ಡಬಲ್ ಎಲಿಮಿನೇಷನ್ ಮಾಡಿದರೂ ಅಚ್ಚರಿ ಇಲ್ಲ. ವಿಶೇಷವೆಂದರೆ, ಪದೇಪದೇ ನಾಮಿನೇಟ್ ಆಗುತ್ತಿದ್ದ ಗೋಲ್ಡ್ ಸುರೇಶ್ ಈ ಬಾರಿ ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ.

  • BBK 11: ಮೋಕ್ಷಿತಾ ಹೇಳಿದ್ದು ಸರಿ- ಮಂಜು ಜೊತೆಗಿನ ಫ್ರೆಂಡ್‌ಶಿಪ್‌ ಕಟ್‌ ಎಂದ ಗೌತಮಿ

    BBK 11: ಮೋಕ್ಷಿತಾ ಹೇಳಿದ್ದು ಸರಿ- ಮಂಜು ಜೊತೆಗಿನ ಫ್ರೆಂಡ್‌ಶಿಪ್‌ ಕಟ್‌ ಎಂದ ಗೌತಮಿ

    ‘ಬಿಗ್‌ ಬಾಸ್‌ ಕನ್ನಡ 11’ರ (Bigg Boss Kannada 11) ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಸಾಕಷ್ಟು ಟಿಸ್ಟ್‌ಗಳನ್ನು ನೋಡಿ ಪ್ರೇಕ್ಷಕರಿಗೂ ಶೋ ರೋಚಕ ಎನಿಸುತ್ತಿದೆ. ಉಗ್ರಂ ಮಂಜು ಸ್ನೇಹಕ್ಕೆ ಮೋಕ್ಷಿತಾ ಗುಡ್‌ ಬೈ ಹೇಳಿರುವ ಬೆನ್ನಲ್ಲೇ ಈಗ ಗೌತಮಿ ಕೂಡ ಇಬ್ಬರ ಸ್ನೇಹ ಕಟ್‌ ಎಂದು ಹೇಳಿ ಶಾಕ್‌ ಕೊಟ್ಟಿದ್ದಾರೆ. ಗೆಳೆಯ-ಗೆಳತಿ ಎಂದೇ ಫೇಮಸ್ ಆಗಿದ್ದ ಗೌತಮಿ ಜಾಧವ್ (Gouthami) ಹಾಗೂ ಮಂಜು (Ugramm Manju) ನಡುವೆ ಬಿರುಕು ಮೂಡಿದೆ.

    ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಅದರಲ್ಲಿ ಗೌತಮಿ ಹಾಗೂ ಮಂಜು ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ. ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ವಾಯ್ಸ್‌ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ಮಂಜುಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ ಎಸ್ಎಂಕೆ – ರಾಧಿಕಾ ಪಂಡಿತ್ ಭಾವುಕ ಪೋಸ್ಟ್

    ನಂತರ ನಡೆದ ಟಾಸ್ಕ್ ಮಧ್ಯದಲ್ಲಿ ಮಂಜು ಏನೋ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಗೌತಮಿ, ಮಂಜು ಅವರ ನಾನು 20 ಸಾರಿ ಹೇಳಲು ಸಾಧ್ಯವಿಲ್ಲ. ನೀವು ಹೇಳಿದ ಹಾಗೆ ಇಲ್ಲ ಎಂದು ಮಂಜುಗೆ ಟಾಂಗ್ ಕೊಟ್ಟಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಗೌತಮಿ, ಕ್ಯಾಪ್ಟನ್ಸಿ ಓಟದಿಂದ ಮಂಜು ಅವರನ್ನು ಹೊರಗೆ ಇಟ್ಟಿದ್ದಾರೆ. ಇದು ಮನೆ ಮಂದಿಗೆ ಅಚ್ಚರಿ ಮೂಡಿಸಿದೆ. ಇಲ್ಲಿ ಗೆಳೆಯ, ಗೆಳತನ ಇರಲ್ಲ ಅದೆಲ್ಲ ಮುಗಿಸುತ್ತ ಇದ್ದೀನಿ ಅನ್ನುವ ಮೂಲಕ ಗೌತಮಿ ಶಾಕ್ ನೀಡಿದ್ದಾರೆ. ಮಂಜುಗೆ ಗೌತಮಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವ ವೇಳೆ, ಗೌತಮಿ ಮಂಜುಗೆ ಬುದ್ಧಿ ಹೇಳಿದ್ದಾರೆ. ಆಗ ಮೋಕ್ಷಿತಾ ಅವರ ಏನು ಹೇಳಿದರು ಅವರು ಇಬ್ಬರೇ ಮಾತನಾಡುತ್ತಾರೆ ಎಂದು ಆರೋಪಿಸಿದರು. ಮೋಕ್ಷಿತಾ ಹೇಳಿದ್ದು ಸರಿ ಎನಿಸುತ್ತಿದೆ ಎಂದಿದ್ದಾರೆ.

    ನಾವು ಇಬ್ಬರೇ ಇರಬೇಕಾದರೂ ಕೂಡ ನೀವೇ ಮಾತನಾಡುತ್ತೀರಿ ಎಂದು ನನಗೆ ಅನಿಸುತ್ತಾ ಇದೆ. ಅವರು ಹೇಳಿದ ಲೈನ್‌ಗಳು ನನಗೆ ಸರಿಯಾಗಿ ಇದೆ ಎಂದು ಅನಿಸಿತು. ನಾವು ಹೇಳುವ ಹಾಗೆ ನೀವೇ ಇಲ್ಲ. ಇಲ್ಲಿ ಗೆಳೆಯ, ಗೆಳತಿ ಗೆಳತನ ಇರಲ್ಲ ಎಂದಿರುವ ಗೌತಮಿ, ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಇದು ಮಂಜು ಅವರ ಕೋಪಕ್ಕೆ ಕಾರಣವಾಗಿದೆ. ಅಲ್ಲದೇ ಮುನಿಸು ಬಿಟ್ಟು ಗೌತಮಿ ಮತ್ತು ಮೋಕ್ಷಿತಾ (Mokshitha Pai) ಮತ್ತೆ ಒಂದು ಆಗ್ತಾರಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಕಾಡುತ್ತಿದೆ.

  • ವರಸೆ ಬದಲಿಸಿದ ಗೌತಮಿ- ಉಗ್ರಂ ಮಂಜು ಮುಂದೆ ಮೋಕ್ಷಿತಾರನ್ನು ಹೊಗಳಿದ ಸ್ಪರ್ಧಿ

    ವರಸೆ ಬದಲಿಸಿದ ಗೌತಮಿ- ಉಗ್ರಂ ಮಂಜು ಮುಂದೆ ಮೋಕ್ಷಿತಾರನ್ನು ಹೊಗಳಿದ ಸ್ಪರ್ಧಿ

    ದೊಡ್ಮನೆಯ (Bigg Boss Kannada 11) ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು 70ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಉಗ್ರಂ ಮಂಜುಗೆ ಕೈ ಕೊಟ್ಟು ಮೋಕ್ಷಿತಾಗೆ ಗೌತಮಿ ಹತ್ತಿರವಾಗ್ತಿದ್ದಾರಾ? ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಉಗ್ರಂ ಮಂಜು ಮುಂದೆಯೇ ಮೋಕ್ಷಿತಾರನ್ನು ಗೌತಮಿ ಹಾಡಿಹೊಗಳಿದ್ದಾರೆ.

    ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ದಿನದಿಂದ ಮೋಕ್ಷಿತಾ, ಮಂಜು (Ugramm Manju) ಹಾಗೂ ಗೌತಮಿ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಇದು ವೀಕ್ಷಕರಿಗೂ ಗೊತ್ತಿರುವ ವಿಚಾರ. ಆದರೆ ಆ ಸ್ನೇಹ ಹೆಚ್ಚು ದಿನ ಉಳಿಯೋಕೆ ಸಾಧ್ಯವಾಗಲಿಲ್ಲ. ಆದರೆ ಟಾಸ್ಕ್ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಮೋಕ್ಷಿತಾ ಇಬ್ಬರಿಂದಲೂ ದೂರ ಸರಿದರು. ಇದನ್ನೂ ಓದಿ:ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು ಎಸ್‌ಎಂಕೆ: ಅಭಿಷೇಕ್ ಅಂಬರೀಶ್

    ಆದರೆ ಇದೀಗ ಮಂಜುಗೆ ಕೈ ಕೊಟ್ಟು ಮೋಕ್ಷಿತಾಗೆ (Mokshitha Pai) ಹತ್ತಿರವಾಗೋಕೆ ಗೌತಮಿ (Gouthami) ಹೊರಟ್ರಾ ಎಂಬ ಅನುಮಾನ ಮೂಡಿದೆ. ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬ ಟಾಸ್ಕ್‌ನಲ್ಲಿ ತಮ್ಮ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡುವಾಗ ಮೋಕ್ಷಿತಾರ ಹೆಸರನ್ನು ಗೌತಮಿ ಉಲ್ಲೇಖಿಸಿದ್ದಾರೆ. ಮೋಕ್ಷಿತಾರ ಆಟದ ಬಗ್ಗೆ ಗುಣಗಾನ ಮಾಡಿದ್ದಾರೆ. ಗೌತಮಿ ಮಾತು ಕೇಳಿ ಮೋಕ್ಷಿತಾ ನಾಚಿದ್ದಾರೆ.

  • BBK 11: ಅತಿಥಿಗಳ ಮುಂದೆ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು- ಅಷ್ಟಕ್ಕೂ ಆಗಿದ್ದೇನು?

    BBK 11: ಅತಿಥಿಗಳ ಮುಂದೆ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು- ಅಷ್ಟಕ್ಕೂ ಆಗಿದ್ದೇನು?

    ‘ಬಿಗ್ ಬಾಸ್ ಕನ್ನಡ 11’ರ ಕಾರ್ಯಕ್ರಮಕ್ಕೆ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಮತ್ತು ನಮ್ರತಾ ಗೌಡ (Namratha Gowda) ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಧನರಾಜ್ ಅವರು ರಜತ್‌ರನ್ನು ನಾಮಿನೇಟ್ ಮಾಡಿದ್ದಕ್ಕೆ ಸಿಟ್ಟಾಗಿದ್ದಾರೆ. ಇಬ್ಬರೂ ಮಾತಿನ ಚಕಮಕಿ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.

    ನಿನ್ನೆಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಮನೆಗೆ ಆಗಮಿಸಿ ನಾಮಿನೇಷನ್ ಪಾಸ್ ಟಾಸ್ಕ್ ಮಾಡಿಸಿದರು. ಇದೀಗ ಇಂದಿನ ಸಂಚಿಕೆಯಲ್ಲಿ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಆಗಮಿಸಿದ್ದಾರೆ. ಈ ವೇಳೆ ನಾಮಿನೇಷನ್ ಪ್ರಕ್ರಿಯೆ ಜರುಗಿದ್ದು, ಧನರಾಜ್ ಈ ಹಿಂದಿನ ಟಾಸ್ಕ್‌ ಕಾರಣ ಕೊಟ್ಟು ನಾಮಿನೇಟ್ ಮಾಡಿರೋದು ಕೋಪ ತರಿಸಿದೆ. ಇದನ್ನೂ ಓದಿ:ಅಣ್ಣಾವ್ರ ಅಪಹರಣದ ಸಂದರ್ಭ ಹೇಗಿತ್ತು?: ಎಸ್‌ಎಂ ಕೃಷ್ಣ ಸಹಾಯ ನೆನೆದ ಶಿವಣ್ಣ

    ನನ್ನ ಹತ್ರ ಹೀಗೆಲ್ಲಾ ಆಟ ಆಡಬೇಡ. ನಿನಗೆ ಮಗು ಅಂತ ಹೇಳೋದು ಇದೇ ಕಾರಣಕ್ಕೆ ಎಂದು ಧನರಾಜ್‌ಗೆ ರಜತ್ ಟೀಕಿಸಿದ್ದಾರೆ. ಏ ಪಾಪು ಎನ್ನುತ್ತಾರೆ. ಅದಕ್ಕೆ ಅಂಕಲ್ ಅಂಕಲ್ ಎನ್ನುತ್ತಾ ಧನರಾಜ್ ತಿರುಗೇಟು ನೀಡಿದ್ದಾರೆ. ಮೈ ಮುಟ್ಟಿ ರಜತ್‌ನ್ನು ಮಾತನಾಡಿಸುತ್ತಾರೆ. ಈ ವೇಳೆ, ಇಬ್ಬರ ವಾಕ್ಸಮರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ಜಗಳ ತಪ್ಪಿಸಲು ಉಗ್ರಂ ಮಂಜು ಮಧ್ಯೆಕ್ಕೆ ಹೋಗಿದ್ದಾರೆ. ಆ ನಂತರ ಎನ್ ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

    ಮನೆಗೆ ಗೆಸ್ಟ್ ಆಗಿ ಬಂದಿರುವ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಯಾವ ಟಾಸ್ಕ್ ಮಾಡಿಸುತ್ತಾರೆ. ಎನೆಲ್ಲಾ ತಿರುವು ಸಿಗಲಿದೆ ಎಂಬುದು ಕಾದುನೋಡಬೇಕಿದೆ.

  • BBK 11: ದೊಡ್ಮನೆ ಆಟದ ಬಗ್ಗೆ ಹೊರಬಿತ್ತು ಬಿಗ್ ನ್ಯೂಸ್- ಫ್ಯಾನ್ಸ್‌ಗೆ ಸಿಹಿ ಸುದ್ದಿ

    BBK 11: ದೊಡ್ಮನೆ ಆಟದ ಬಗ್ಗೆ ಹೊರಬಿತ್ತು ಬಿಗ್ ನ್ಯೂಸ್- ಫ್ಯಾನ್ಸ್‌ಗೆ ಸಿಹಿ ಸುದ್ದಿ

    ಳೆದ 10 ಸೀಸನ್‌ಗಳ ಮೂಲಕ ಮನರಂಜನೆ ಕೊಡುವಲ್ಲಿ ಯಶಸ್ವಿಯಾದ ರಿಯಾಲಿಟಿ ಶೋ ಬಿಗ್‌ಬಾಸ್. ಇದೀಗ 11ನೇ ಸೀಸನ್ ಪ್ರತಿ ಮನೆ ಮನಗಳನ್ನ ಸೆಳೆದಿದೆ. ಏನೇ ಮಿಸ್ ಮಾಡಿದ್ರೂ ಈ ಕಾರ್ಯಕ್ರಮ ಮಿಸ್ ಮಾಡೊಲ್ಲ ಎನ್ನುವಷ್ಟರ ಮಟ್ಟಿಗೆ ವೀಕ್ಷಕರನ್ನ ಆಕರ್ಷಿಸಿದೆ ಈ ಬಾರಿಯ ಬಿಗ್ ಬಾಸ್ ಶೋ. ಅಂತಹ ಕಾರ್ಯಕ್ರಮದ ಬಗ್ಗೆ ಬಿಗ್ ನ್ಯೂಸ್ ಒಂದು ಭಾರೀ ಸದ್ದು ಮಾಡ್ತಿದೆ. ಅದೇನಪ್ಪ ಬಿಗ್ ನ್ಯೂಸ್ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ. ಇದನ್ನೂ ಓದಿ:ಗರ್ಲ್‌ಫ್ರೆಂಡ್‌ ರಶ್ಮಿಕಾ ಮಂದಣ್ಣಗೆ ಲಕ್ಕಿ ಚಾರ್ಮ್‌ ಎಂದ ವಿಜಯ್‌ ದೇವರಕೊಂಡ

    ‘ಬಿಗ್ ಬಾಸ್ ಸೀಸನ್ 11’ (Bigg Boss Kannada 11) ಮನರಂಜನೆಯ ಇತಿಹಾಸದಲ್ಲಿ ಮೈಲುಗಲ್ಲು ಸಾಧಿಸಿದೆ. ಕಳೆದ ಸೀಸನ್ ಕೊಟ್ಟ ಮನರಂಜನೆಗೆ ಕರುನಾಡು ಕಳೆದು ಹೋಗಿತ್ತು. ಅಲ್ಲದೇ, ಬಿಗ್ ಬಾಸ್ ಶೋಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಹೀಗಾಗಿ ಕಳೆದ ಬಾರಿ ಬಿಗ್ ಬಾಸ್ ಶೋವನ್ನ ಎರಡು ವಾರಗಳ ಕಾಲ ಜಾಸ್ತಿ ಮಾಡಿ ಮತ್ತಷ್ಟು ಮನರಂಜನೆಯನ್ನ ನೀಡಲಾಗಿತ್ತು. ಇದೀಗ ಸೀಸನ್ 11ರ ಶೋವನ್ನ ಇನ್ನೆರಡು ವಾರಗಳ ಕಾಲ ಮುಂದುವರೆಸುವುದಕ್ಕೆ ನಡೆಯುತ್ತಿದೆಯಂತೆ ಭರ್ಜರಿ ಪ್ಲ್ಯಾನ್‌.

    ಹೀಗೊಂದು ಸುದ್ದಿ ಭಾರೀ ಸದ್ದು ಮಾಡ್ತಿದೆ. ಕಾರಣ ಬಿಗ್ ಬಾಸ್ ಸೀಸನ್ 11ಕ್ಕೆ ಕರುನಾಡ ಜನರು ಕೊಡ್ತಿರುವ ರೆಸ್ಪಾನ್ಸ್. ಈ ಕಾರಣದಿಂದ ಈ ಬಾರಿ ಕೂಡಾ ಬಿಗ್ ಬಾಸ್ ಶೋವನ್ನ ಇನ್ನೆರಡು ವಾರಗಳ ಕಾಲ ಮುಂದುವರೆಸುವುದಕ್ಕೆ ಪ್ಲ್ಯಾನ್ ಮಾಡಲಾಗಿದೆ ಎನ್ನಲಾಗ್ತಿದೆ. ಆದರೆ ಬಿಗ್ ಬಾಸ್ ಟೀಮ್ ಆಗಲಿ, ವಾಹಿನಿಯಾಗಲಿ ಅಧಿಕೃತ ಮಾಹಿತಿ ನೀಡಿಲ್ಲ.

    ‘ಬಿಗ್ ಬಾಸ್ 11’ನೇ ಸೀಸನ್ ವಾರದಿಂದ ವಾರಕ್ಕೆ ಕೌತುಕತೆಯನ್ನ ಮೂಡಿಸುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಟಾಸ್ಕ್, ರಿಸ್ಕ್, ಫೈಟ್, ಎಂಟರ್‌ಟೈನ್ಮೆಂಟ್ ಯಾವುದಕ್ಕೂ ಕೊರತೆ ಇಲ್ಲ. ಇನ್ನೂ ವಾರ ಪೂರ್ತಿ ನಡೆಯುವ ಕಾರ್ಯಕ್ರಮ ಒಂದು ಕಡೆಯಾದ್ರೆ, ಸುದೀಪ್ ನಡೆಸಿಕೊಡುವ ವೀಕೆಂಡ್ ಶೋ ಮತ್ತೊಂದು ಕಡೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

    ಕೆಲವೊಂದು ಬಾರಿ ಎಪಿಸೋಡ್ ನೋಡೋದನ್ನ ಮರೆತರೂ ಸುದೀಪ್ ಬರುವ ಎರಡು ದಿನಗಳನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ ಜನ. ವೀಕೆಂಡ್‌ನಲ್ಲಿ ಕಿಚ್ಚನ ಪಂಚಾಯ್ತಿ ಏನಾಗುತ್ತೆ? ಕಿಚ್ಚ ಯಾರನ್ನ ಬೈಯ್ತಾರೆ? ಯಾರನ್ನ ಹೊಗಳ್ತಾರೆ ಅನ್ನೋದನ್ನೇ ಎದುರು ನೋಡ್ತಿರುತ್ತೆ ಕರುನಾಡು. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವನ್ನ ಇನ್ನೆರಡು ವಾರಗಳ ಕಾಲ ಎಕ್ಸ್ಟೆಂಡ್ ಮಾಡುವ ಪ್ಲ್ಯಾನ್‌ಗಳು ಕೂಡ ನಡೆಯುತ್ತಿವೆ ಅಂತ ಗುಮಾನಿ ಎದ್ದಿದೆ.