Tag: bbk 11

  • BBK 11: ದೊಡ್ಮನೆಯಲ್ಲಿ ಪತಿ ಜೊತೆ ಮದುವೆ ಆ್ಯನಿವರ್ಸರಿ ಆಚರಿಸಿದ ಗೌತಮಿ

    BBK 11: ದೊಡ್ಮನೆಯಲ್ಲಿ ಪತಿ ಜೊತೆ ಮದುವೆ ಆ್ಯನಿವರ್ಸರಿ ಆಚರಿಸಿದ ಗೌತಮಿ

    ಬಿಗ್ ಬಾಸ್ ಮನೆಯ 11ರ (Bigg Boss Kannada 11)  ಆಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಹೀಗಿರುವಾಗ ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಗೌತಮಿ (Gouthami) ಪತಿ ಅಭಿಷೇಕ್ (Abhishek Kasaragod) ಆಗಮಿಸಿದ್ದಾರೆ. ತಮ್ಮ ಮದುವೆ ಆ್ಯನಿವರ್ಸರಿಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

    ನಿನ್ನೆ (ಡಿ.31) ಭವ್ಯಾ, ತ್ರಿವಿಕ್ರಮ್ ಹಾಗೂ ರಜತ್ ಕುಟುಂಬ ಆಗಮಿಸಿತ್ತು. ಇಂದು ಮೋಕ್ಷಿತಾ, ಮಂಜು ಹಾಗೂ ಗೌತಮಿ ಕುಟುಂಬ ಆಗಮಿಸಿದೆ. ಮನೆಗೆ ಎಂಟ್ರಿ ಕೊಡುವಾಗಲೇ ಅಭಿಷೇಕ್ ಕೇಕ್ ಹಿಡಿದು ಬಂದರು. ಪತಿಯನ್ನು ನೋಡುತ್ತಿದ್ದಂತೆ ಗೌತಮಿ ಭಾವುಕರಾಗಿದ್ದಾರೆ. ಇದನ್ನೂ ಓದಿ:BBK 11: ತ್ರಿವಿಕ್ರಮ್‌ನಿಂದ ದೂರವಿರಲು ಪರೋಕ್ಷವಾಗಿ ಭವ್ಯಾಗೆ ಅಕ್ಕ ಸಲಹೆ

    ಬಳಿಕ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಹಾಗೂ ಮೋಕ್ಷಿತಾ, ಮಂಜು ಕುಟುಂಬದ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ, ಪತಿ ಜೊತೆ ನಟಿ ತರಲೆ ಮಾಡಿದ್ದಾರೆ. ಆ ನಂತರ ಮಂಜು ತಂದೆಯ ಕಾಲಿಗೆ ಬಿದ್ದು ಗೌತಮಿ ದಂಪತಿ ಆಶೀರ್ವಾದ ಪಡೆದಿದ್ದಾರೆ. ಪತ್ನಿ ಗೌತಮಿಗೆ ಕಾಲಿಗೆ ಗೆಜ್ಜೆ ಮತ್ತು ಸರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ವೇಳೆ ಪತಿಯನ್ನು ತಬ್ಬಿ ಮುದ್ದಾಡಿದ್ದಾರೆ.

    ಇನ್ನೂ ಅಭಿಷೇಕ್ ಕಾಸರಗೋಡು ಅವರನ್ನು 2018ರ ಡಿ.31 ಗೌತಮಿ ಮದುವೆಯಾದರು. ಚಿತ್ರರಂಗದಲ್ಲಿ ಕ್ಯಾಮರಾಮ್ಯಾನ್ ಆಗಿ ಗುರುತಿಸಿಕೊಂಡಿರುವ ಅಭಿಷೇಕ್ ಅವರು ಪುನೀತ್ ರಾಜ್‌ಕುಮಾರ್ ನಿರ್ಮಾಣದ ಮಾಯಾ ಬಜಾರ್, ಗ್ರಾಮಾಯಣ, ಕೃಷ್ಣ ಟಾಕೀಸ್ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಕೆಲಸ ಮಾಡಿದ್ದಾರೆ.

  • BBK 11: ತ್ರಿವಿಕ್ರಮ್‌ನಿಂದ ದೂರವಿರಲು ಪರೋಕ್ಷವಾಗಿ ಭವ್ಯಾಗೆ ಅಕ್ಕ ಸಲಹೆ

    BBK 11: ತ್ರಿವಿಕ್ರಮ್‌ನಿಂದ ದೂರವಿರಲು ಪರೋಕ್ಷವಾಗಿ ಭವ್ಯಾಗೆ ಅಕ್ಕ ಸಲಹೆ

    ಬಿಗ್ ಬಾಸ್ ಮನೆಯ ಆಟ (Bigg Boss Kannada 11) 94 ದಿನಗಳು ಪೂರೈಸಿವೆ. ಇದೀಗ ಸ್ಪರ್ಧಿಗಳ ಕುಟುಂಬದವರು ಮನೆಗೆ ಬರುತ್ತಿದ್ದಾರೆ. ಹೀಗೆ ಬರುವ ಕುಟುಂಬದವರು ಸ್ಪರ್ಧಿಗಳಿಗೆ ಒಂದೊಂದು ಟಿಪ್ಸ್ ನೀಡುವ ಕೆಲಸ ಮಾಡುತ್ತಾ ಇದ್ದಾರೆ. ಯಾವ ರೀತಿಯಲ್ಲಿ ಆಡಬೇಕು ಎಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇದೀಗ ಭವ್ಯಾ (Bhavya Gowda) ಅವರ ಅಕ್ಕ ದಿವ್ಯಾ ಬಿಗ್‌ ಬಾಸ್‌ಗೆ ಬಂದಿದ್ದಾರೆ. ಅವರು ತ್ರಿವಿಕ್ರಮ್‌ನಿಂದ ದೂರ ಇರುವಂತೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಇಲಿಯಾನಾ ಮತ್ತೆ ಪ್ರೆಗ್ನೆಂಟಾ?- ಹೊಸ ವರ್ಷದಂದು ಸುಳಿವು ಕೊಟ್ರಾ ನಟಿ?

    ಭವ್ಯಾಗೆ ಕನ್ಫೆಷನ್ ಕೊಠಡಿಗೆ ಬರುವಂತೆ ಬಿಗ್ ಬಾಸ್ ಹೇಳಿದ್ದಾರೆ. ದಿವ್ಯಾ (Divya Gowda) ಅವರು ಕನ್‌ಫೆಷನ್ ರೂಂನಲ್ಲೇ ಇದ್ದರು. ಅವರು ವೈದ್ಯರ ಡ್ರೆಸ್‌ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಕುಳಿತಿದ್ದರು. ಭವ್ಯಾ ಹೋಗಿ ಕುಳಿತ ಬಳಿಕ, ಹೇಗಿದ್ದೀರಿ ಎಂದು ಕೇಳಿದರು. ಭವ್ಯಾ ಒಮ್ಮೆ ಗೊಂದಲಕ್ಕೆ ಒಳಗಾದರು. ಆ ನಂತರ ಅಕ್ಕ ಬಂದಿರುವ ರಿಯಾಲಿಟಿ ಅರಿತುಕೊಂಡ ಅವರು ಖುಷಿಯಿಂದ ಕುಣಿದಾಡಿದರು. ಅಕ್ಕನನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಇದನ್ನೂ ಓದಿ:BBK 11: ಅಕ್ಕನ ಮರೆತ ವಿಶೇಷ ಚೇತನ ಸಹೋದರ- ಮೋಕ್ಷಿತಾ ಕಣ್ಣೀರು

    ಬಳಿಕ ಭವ್ಯಾ ಅವರು ನಾನು ಏನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಅಕ್ಕ ದಿವ್ಯಾಗೆ ಕೇಳಿದರು. ಇದಕ್ಕೆ ಉತ್ತರಿಸಿದ ದಿವ್ಯಾ, ಜನರು ಕಡಿಮೆ ಆಗುತ್ತಿದ್ದಾರೆ. ನೀನು ಎಲ್ಲರ ಜೊತೆಯೂ ಬೆರೆಯಬೇಕು. ಕಂಫರ್ಟ್ ಜೋನ್‌ನಲ್ಲಿ ಇದ್ದೀಯಾ, ತೊಂದರೆ ಇಲ್ಲ. ಎಲ್ಲದಕ್ಕೂ ಒಂದು ಬ್ಯಾರಿಕೇಡ್ ಇರಬೇಕು. ನೀನು ಇರೋದು ತಪ್ಪು ಎನ್ನುತ್ತಿಲ್ಲ. ವೈಯಕ್ತಿಕವಾಗಿ ಹೇಗೆ ಆಟ ಆಡಬೇಕು ಎಂಬುದನ್ನು ಯೋಚನೆ ಮಾಡು. ಗೇಮ್ ಕಡೆ ಫೋಕಸ್ ಮಾಡು. ಬೇರೆ ಅವರಿಗೆ ಸಲಹೆ ಕೇಳಬಾರದು. ನೀನೇ ನಿರ್ಧಾರ ತೆಗೆದುಕೊಳ್ಳಬೇಕು. ನೀನು ನಿರ್ಧಾರ ತೆಗೆದುಕೊಳ್ಳಲು ಅಪ್ರಬುದ್ಧ ಎಂದು ಕಾಣಿಸಬಾರದು ಎಂದರು.

    ಭವ್ಯಾಗೆ ಅಕ್ಕ ದಿವ್ಯಾ ಕೊಟ್ಟಿರುವ ಟಿಪ್ಟ್‌ ನೋಡಿ ಪ್ರೇಕ್ಷಕರು, ತ್ರಿವಿಕ್ರಮ್‌ನಿಂದ ದೂರ ಇರು ಎಂದು ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ ಎಂದು  ಅಭಿಪ್ರಾಯಪಟ್ಟಿದ್ದಾರೆ.

  • BBK 11: ಅಕ್ಕನ ಮರೆತ ವಿಶೇಷ ಚೇತನ ಸಹೋದರ- ಮೋಕ್ಷಿತಾ ಕಣ್ಣೀರು

    BBK 11: ಅಕ್ಕನ ಮರೆತ ವಿಶೇಷ ಚೇತನ ಸಹೋದರ- ಮೋಕ್ಷಿತಾ ಕಣ್ಣೀರು

    ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಶೋ 94 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವಾರ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಬಂದು ಹೋಗುತ್ತಿದ್ದಾರೆ. ಇಂದು ಮೋಕ್ಷಿತಾ (Mokshitha Pai) ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದ್ದು, ಅಕ್ಕ ತಮ್ಮನ ಭಾವನಾತ್ಮಕ ಕ್ಷಣಗಳನ್ನು ಕಂಡು ಬಿಗ್ ಬಾಸ್ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ.

    ಭವ್ಯಾ ಹಾಗೂ ತ್ರಿವಿಕ್ರಮ್ ಕುಟುಂಬದವರು ಮನೆಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದರು. ಇವರ ಬಳಿಕ ರಜತ್ ಅವರ ಕುಟುಂಬ ಆಗಮಿಸಿತ್ತು. ಇದರ ಬೆನ್ನಲ್ಲೇ ಇಂದು ಮನೆಗೆ ಮೋಕ್ಷಿತಾ ಅವರ ಫ್ಯಾಮಿಲಿ ಆಗಮಿಸಿದೆ. ಹೊಸ ವರ್ಷದಂದೇ ಮೋಕ್ಷಿತಾ ಫ್ಯಾಮಿಲಿ ಬಂದಿದೆ. ಪೋಷಕರ ಜೊತೆ ಸಹೋದರನ ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಹೋದರನನ್ನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:BBK 11: ‘ರಾಧಾ ಕೃಷ್ಣ’ರಂತೆ ಇದ್ದೀರಾ: ಭವ್ಯಾಗೆ ನೇರವಾಗಿ ಹೇಳಿದ ತ್ರಿವಿಕ್ರಮ್‌ ತಾಯಿ

    ಅಕ್ಕ ಮತ್ತು ತಮ್ಮ ಒಂದಾಗೋ ಭಾವನಾತ್ಮಕ ಘಟಳಿಗೆಯಲ್ಲಿ ಇಡೀ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ. ವಿಶೇಷ ಚೇತನ ಸಹೋದರನನ್ನು ನೋಡಿದ ತಕ್ಷಣ ಮೋಕ್ಷಿತಾ ಅಳುತ್ತಾ ಓಡೋಡಿ ಬಂದರು. ಇಷ್ಟು ದಿನ ಬಿಟ್ಟು ಇದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ನನ್ನನ್ನು ಮರೆತು ಹೋಗಿಬಿಟ್ಟಿದ್ದಾನೆ ಎಂದು ತಮ್ಮನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಸುರಿಸಿದ್ದಾರೆ. ಅವನು ನನ್ನಾ ನೋಡ್ತಾನೇ ಇಲ್ಲ. ನನ್ನನ್ನು ಮರೆತು ಬಿಟ್ಟಿದ್ದಾರೆ ಎಂದು ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಈ ಚಿಕ್ಕ ಕುಟುಂಬವನ್ನು ನೋಡಿದ ರಜತ್, ಹನುಮಂತು, ಮಂಜು, ಚೈತ್ರಾ, ಗೌತಮಿ, ತ್ರಿವಿಕ್ರಮ್, ಭವ್ಯಾ ಎಲ್ಲರೂ ಫುಲ್ ಸೈಲೆಂಟ್ ಆಗಿದ್ದರು. ಮೋಕ್ಷಿತಾ ಅಳುವುದನ್ನು ನೋಡಿ ತಡೆಯಲಾಗದೇ ಗೌತಮಿ ಕೂಡ ಅತ್ತಿದ್ದಾರೆ. ಸಹೋದರನ ಜೊತೆಗಿನ ಭಾವನಾತ್ಮಕ ಕ್ಷಣ ನೋಡಿ ಇಡೀ ಮನೆಯೇ ದುಃಖದಲ್ಲಿ ಮುಳುಗಿದೆ. ಮೋಕ್ಷಿತಾ ಕಣ್ಣೀರಿಗೆ ಪ್ರೇಕ್ಷಕರ ಕರುಳು ಕಿವುಚಿದೆ.

  • BBK 11: ಐಶ್ವರ್ಯಾ ಸಖತ್ ಆಗಿದ್ದಾಳೆ ಎಂದ ರಜತ್‌ಗೆ ಪತ್ನಿ ಕ್ಲಾಸ್

    BBK 11: ಐಶ್ವರ್ಯಾ ಸಖತ್ ಆಗಿದ್ದಾಳೆ ಎಂದ ರಜತ್‌ಗೆ ಪತ್ನಿ ಕ್ಲಾಸ್

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 93 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ರಜತ್ (Rajath) ಅವರ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದೆ. ತರಲೆ ಮಾಡೋ ಪತಿ ರಜತ್‌ಗೆ ಪತ್ನಿ ಸಖತ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ಕುರಿತ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ರಶ್ಮಿಕಾ ಸಿನಿಮಾ ಕೆರಿಯರ್‌ಗೆ 8 ವರ್ಷ- ಫ್ಯಾನ್ಸ್‌ಗೆ ಥ್ಯಾಂಕ್ಯೂ ಎಂದ ನಟಿ

    ಮೊದಲು ಬಿಗ್ ಬಾಸ್‌ಗೆ ರಜತ್ ಪತ್ನಿ ಅಕ್ಷಿತಾ ಬಂದಿದ್ದರು. ಆಗ ರಜತ್ ಹೆಂಡತಿಗೆ ನನ್ನ ಮಗಳು ಎಲ್ಲಿ ಅಂತ ಕೇಳಿದರು. ಆಗ ಅಕ್ಷಿತಾ ಬಂದಿಲ್ಲ ಅಂತ ಸುಳ್ಳು ಹೇಳಿದ್ದರು. ಆಗ ರಜತ್ ಬಿಗ್ ಬಾಸ್ ಇವರನ್ನು ಆಚೆ ಕಳುಹಿಸಿ ಡೋರ್ ಓಪನ್ ಮಾಡಿ ಅಂತ ಹೇಳಿದ್ದಾರೆ. ಬಳಿಕ ಮನೆ ಮಂದಿಯ ಎದುರು ಏನು ಎಲ್ಲರ ತೊಡೆ ಮೇಲೆ ಹೋಗಿ ಕುಳಿತುಕೊಳ್ಳುತ್ತೀದ್ದೀರಾ? ಏನ್ ಕಥೆ ಎಂದು ರಜತ್ ಪತ್ನಿ ಪ್ರಶ್ನೆ ಮಾಡಿದ್ದಾರೆ. ಅದಷ್ಟೇ ಅಲ್ಲ, ಐಶ್ವರ್ಯಾ ನೋಡಿ ಏನ್ ಅಂದ್ರಿ ಅವತ್ತು ಎಂದು ಕೇಳಿದ್ದಾರೆ. ಅದಕ್ಕೆ ರಜತ್, ಐಶ್ವರ್ಯಾ (Aishwarya Shindogi) ಸಖತ್ ಆಗಿದ್ದಾಳೆ, ಅದಕ್ಕೆ ಹಾಗೆ ಅಂದೆ ಅದರಲ್ಲಿ ಏನಿದೆ ಎಂದು ಪ್ರತಿಯುತ್ತರ ನೀಡಿದ್ದಾರೆ. ಅದಕ್ಕೆ ಪತ್ನಿ (Akshita Rajath) ನಗುತ್ತಲೇ ರಜತ್‌ಗೆ ಪೆಟ್ಟು ಕೊಡಲು ಮುಂದಾಗಿದ್ದಾರೆ.

    ಇದಾದ ಕೆಲವು ನಿಮಿಷಕ್ಕೆ ಬಿಗ್ ಬಾಸ್ ಮನೆಗೆ ರಜತ್ ಅವರ ಇಬ್ಬರು ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ನೋಡುತ್ತಿದ್ದಂತೆ ರಜತ್ ಕಣ್ಣಲ್ಲಿ ನೀರು ಬಂದಿದೆ. ಅಪ್ಪ ಮಾತಾಡಿ ಅಪ್ಪ ಅಂತ ಮಗಳು ರಜತ್‌ರನ್ನು ಅಪ್ಪಿಕೊಂಡಿದ್ದಾರೆ. ಇದನ್ನೂ ನೋಡಿದ ಮನೆ ಮಂದಿ ಭಾವುಕರಾಗಿದ್ದಾರೆ.

    ಇನ್ನೂ 50 ದಿನಗಳನ್ನು ಪೂರೈಸಿದ್ದ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ರಜತ್ ಕಿಶನ್. ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಾ ಉತ್ತಮವಾಗಿ ರಜತ್ ಆಟ ಆಡುತ್ತಿದ್ದಾರೆ.

  • ಬೇರೇ ಹೀರೋಗಳಿಗೆ ಟಾಂಟ್ ಮಾಡಬೇಡಿ: ಸ್ಟಾರ್ಸ್‌ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ರಿಯಾಕ್ಷನ್

    ಬೇರೇ ಹೀರೋಗಳಿಗೆ ಟಾಂಟ್ ಮಾಡಬೇಡಿ: ಸ್ಟಾರ್ಸ್‌ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ರಿಯಾಕ್ಷನ್

    ಟ ಸುದೀಪ್ (Sudeep) ಅವರು ‘ಮ್ಯಾಕ್ಸ್’ (Max) ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಬೆಂಗಳೂರಿನ ನರ್ತಕಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆ ‘ಮ್ಯಾಕ್ಸ್’ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಸ್ಟಾರ್ಸ್ ಫ್ಯಾನ್ಸ್ ವಾರ್ ಜಾಸ್ತಿ ಆಗಿರುವ ಬಗ್ಗೆ ಮಾತನಾಡಿದ್ದಾರೆ. ಬೇರೇ ಹೀರೋಗಳು ನನ್ನ ಸಹಕಲಾವಿದರು ಅವರಿಗೆ ಟಾಂಟ್ ಕೊಡೋದು ಮಾಡಬೇಡಿ ಎಂದು ನಟ ಹೇಳಿದ್ದಾರೆ.

    ನಾವು ಹೇಳೋದ್ರಿಂದ ಅವರು ಕೇಳೋ ಹಾಗೆ ಇದಿದ್ರೆ, ವಾರ್ ಅಂತಾ ನೀವೇನು ಹೇಳ್ತಿದ್ದೀರಾ, ಅದು ಯಾರು ಮಾಡ್ತಿದಾರೆ ಅಂತ ಗೊತ್ತಾಗಲ್ಲ. ನಮ್ಮ ಫ್ಯಾನ್ಸ್‌ಗಳು ಮಾಡ್ತಿದ್ದಾರಾ? ಬೇರೆ ಅವರ ಫ್ಯಾನ್ಸ್ ಮಾಡ್ತಿದ್ದಾರೋ ಗೊತ್ತಿಲ್ಲ. ಯಾರ್ ಯಾರೋ ತಂದು ಹಾಕೋಕೆ ಮಾಡಬಹುದು. ಅದು ನಮಗೆ ಗೊತ್ತಾಗಲ್ಲ ಎಂದಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಸಿನಿಮಾ ಕೆರಿಯರ್‌ಗೆ 8 ವರ್ಷ- ಫ್ಯಾನ್ಸ್‌ಗೆ ಥ್ಯಾಂಕ್ಯೂ ಎಂದ ನಟಿ

    ಸಿನಿಮಾ ಮಾಡಬೇಕು ಅನ್ನೋದು ಏಕಾಗ್ರತೆ ಇದೆ. ಪ್ರತಿಯೊಬ್ಬ ಕಲಾವಿದರಿಗೂ ಅದೇ ಇರೋದು. ನಾನು ನನ್ನ ಅಭಿಮಾನಿಗಳಿಗೆ ಹೇಳುತ್ತೇನೆ. ಬೇರೇ ಹೀರೋಗಳು ನನ್ನ ಸಹ ಕಲಾವಿದರು ಅವರೆಲ್ಲಾ ಹಾಗಾಗಿ ಅವರ ಬಗ್ಗೆ ಟಾಂಟ್ ಕೊಡೋದು ಮಾಡಬೇಡಿ. ನಮ್ಮ ಸಿನಿಮಾ ಹೊಗಳುವ ಭರದಲ್ಲಿ ಬೇರೇ ಅವರ ಜೊತೆ ಕಂಪೇರ್ ಮಾಡಿ ಮಾತನಾಡೋದು ಬೇಡ ಎಂದು ಫ್ಯಾನ್ಸ್‌ಗೆ ಹೇಳುತ್ತೇನೆ. ಮಿಕ್ಕಿದ ಫ್ಯಾನ್ಸ್‌ಗೆ ಅವರವರ ಹೀರೋಗಳು ನೋಡ್ಕೊಬೇಕು ಎಂದು ಸ್ಟಾರ್ಸ್‌ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

    ಅಂದಹಾಗೆ, ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿ, ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಅದರ ಹೊರತಾಗಿ ನಾವು ಯಾರಿಗೂ ಟಾಂಟ್ ಕೊಡಲ್ಲ, ಯಾಕೆ ಕೊಡಬೇಕು ಎಂದು ಹೇಳಿದರು. ‘ಮ್ಯಾಕ್ಸ್’ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಸುದೀಪ್, ‘ಬಾಸ್ ಕಾಲ ಮುಗಿತು ಮ್ಯಾಕ್ಸ್ ಮಾಸ್ ಆಟ ಶುರು’ ಕೇಕ್ ಕಂಟ್ರವರ್ಸಿಗೆ ಕ್ಲ್ಯಾರಿಟಿ ನೀಡಿದರು.

    ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಇದೆ ದರ್ಶನ್ ಫ್ಯಾನ್ಸ್ ಬಗ್ಗೆ ಹೇಳ್ದಾಗ ನಾನು ಫ್ಯಾನ್ಸ್‌ಗೆ ಬೈಬೇಡಿ ಅಂದಿದ್ದೆ. ಅವರು ನೋವಿನಲ್ಲಿದ್ದಾರೆ ಏನ್ ಮಾತಡಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳಿದೆ. ನಾವ್ಯಾಕೆ ಟಾಂಟ್ ಕೊಡಬೇಕು ಯಶ್, ಶಿವಣ್ಣ, ಧ್ರುವ ಉಪ್ಪಿಗೆ ಬಾಸ್ ಅಂತ ಕರಿಯೋದಿಲ್ವಾ? ನನಗೂ ದರ್ಶನ್‌ಗೂ ಏನು ಇಲ್ಲ ಸರ್. ದರ್ಶನ್ ನಾನು ಇಬ್ರು ಕಷ್ಟ ಪಟ್ಟು ಮೇಲೆ ಬಂದಿದ್ದೀವಿ. ನನ್ನ ಫ್ಯಾನ್ಸ್ ಎಲ್ಲಾ ಹೀರೋಗಳ ಸಿನಿಮಾ ನೋಡ್ತಾರೆ. ಕೆಟ್ಟ ಅಹಂಕಾರ ನಮ್ಮಲಿ ಇದೆ ಅಂದು ಕೊಂಡಿರೋದೇ ತಪ್ಪು ಎಂದು ಹೇಳಿದ್ದರು.

    ಟಾಂಟ್ ಯಾಕ್ ಕೊಡ್ಬೇಕು ನಾವು.. ನಾವೇನು ಚಕ್ರವರ್ತಿಗಳಾ..? ಸಿನಿಮಾ ಮಾಡೋಣ ಖುಷಿ ಪಡೋಣ ಅಷ್ಟೇ. ಯಾರಿಗೆ ಟಾಂಗ್ ಕೊಡ್ತಾರೋ..? ಯಶ್‌ಗೆ ಯಶ್ ಬಾಸ್ ಅಂತಾ ಕರಿಯೊಲ್ವಾ..? ಧ್ರುವಗೆ ಧ್ರುವ ಬಾಸ್ ಅಂತಾ ಕರಿಯಲ್ವಾ? ಶಿವಣ್ಣಗೆ ಶಿವಣ್ಣ ಬಾಸ್ ಅಂತಾ ಕರಿಯಲ್ವಾ? ಉಪ್ಪಿ ಬಾಸ್ ಅಂತಾ ಕರಿಯಲ್ವಾ..? ಒಂದು ಸಿನಿಮಾ ಹಿಟ್ ಆದಾಗ ಇನ್ನಷ್ಟು ಒಳ್ಳೆ ಸಿನಿಮಾ ಮಾಡೋಣ, ಚಿತ್ರರಂಗದ ಬೆಳವಣಿಗೆಗೆ ಶ್ರಮಿಸೋಣ. ನಾನು ನಮ್ ತಂದೆಗೆ ಬಾಸ್ ಅಂತಾ ಕರಿಯೋದು.. ಕನ್ನಡ ಚಿತ್ರರಂಗ ಮುಖ್ಯನಾ..? ನಾನು ಮುಖ್ಯನಾ..? ಇದೆಲ್ಲವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸುದೀಪ್ ಹೇಳಿದ್ದರು.

  • BBK 11: ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಯಾವಾಗ?- ಇಲ್ಲಿದೆ ಅಪ್‌ಡೇಟ್

    BBK 11: ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಯಾವಾಗ?- ಇಲ್ಲಿದೆ ಅಪ್‌ಡೇಟ್

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ 93ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್’ ಆಟಕ್ಕೆ ತೆರೆ ಬೀಳಲಿದೆ. ಹಾಗಾದ್ರೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ? ಎಂಬ ಪ್ರೇಕ್ಷಕರ ಕಾತರಕ್ಕೆ ಇಲ್ಲಿದೆ ಉತ್ತರ. ಇದನ್ನೂ ಓದಿ:ಯಾರು ಏನೇ ಹೇಳಿದ್ರೂ ಅಮ್ಮನೇ ನನ್ನ ಹೀರೋ: ಮಧ್ಯರಾತ್ರಿ ಅಮ್ಮನ ನೆನೆದ ಪವಿತ್ರಾ ಗೌಡ ಮಗಳು

    ಬಿಗ್ ಬಾಸ್‌ಗೆ 17 ಮಂದಿ ಸ್ಪರ್ಧಿಗಳು ಕಾಲಿಟ್ಟಿದ್ದರು. ಪ್ರತಿ ವಾರ ಒಬ್ಬೊಬ್ಬ ಸ್ಪರ್ಧಿಗಳು ದೊಡ್ಮನೆ ಆಟದಿಂದ ಎಲಿಮಿನೇಟ್ ಆಗಲಿದ್ದಾರೆ. ಕಳೆದ ವಾರಾಂತ್ಯ ಐಶ್ವರ್ಯಾ ಶಿಂಧೋಗಿ ಔಟ್ ಆದರು. ಈಗ ಮನೆಯಲ್ಲಿ 9 ಸ್ಪರ್ಧಿಗಳಿದ್ದಾರೆ. ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ಉಗ್ರಂ ಮಂಜು, ಧನರಾಜ್, ರಜತ್, ಗೌತಮಿ, ಹನುಮಂತ, ಚೈತ್ರಾ ಕುಂದಾಪುರ ದೊಡ್ಮನೆಯಲ್ಲಿದ್ದಾರೆ.

    9 ಸ್ಪರ್ಧಿಗಳ ನಡುವೆ ಉಳಿವಿಗಾಗಿ ಫೈಟ್ ನಡೆಯುತ್ತಿದೆ. ಹೀಗಿರುವಾಗ ಇನ್ನೂ 2 ವಾರಗಳ ಕಾಲ ಬಿಗ್ ಬಾಸ್ ಆಟ ಮುಂದುವರೆಯಲಿದೆ ಎನ್ನಲಾಗಿದೆ. 11ರ ಸೀಸನ್ ‘ಬಿಗ್ ಬಾಸ್’ ಹೊಸ ಅದ್ಯಾಯದೊಂದಿಗೆ ಶುರು ಆಗಿತ್ತು. ಈ ಬಾರಿ ಟಿರ್‌ಆರ್‌ಪಿ ವಿಚಾರದಲ್ಲೂ ‘ಬಿಗ್ ಬಾಸ್’ ಅಗ್ರ ಸ್ಥಾನದಲ್ಲಿದೆ. ಹಾಗಾಗಿ 125 ದಿನಗಳ ಕಾಲ ಶೋ ನಡೆಸಬೇಕು ಎಂಬ ಪ್ಲ್ಯಾನ್‌ನಲ್ಲಿದೆ ಬಿಗ್‌ ಬಾಸ್‌ ಟೀಮ್‌ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಇದು ನಿಜವೇ ಆಗಿದ್ದಲ್ಲಿ ಬಿಗ್ ಬಾಸ್ ನೋಡುವ ಪ್ರೇಕ್ಷಕರಿಗೆ ಖುಷಿ ಆಗೋದು ಗ್ಯಾರಂಟಿ.

    ಇನ್ನೂ ಈ ಹಿಂದೆ ಶೋಗೆ ಉತ್ತಮ ರೆಸ್ಪಾನ್ಸ್‌ ಬಂದ ಹಿನ್ನೆಲೆ 100ಕ್ಕೂ ಹೆಚ್ಚು ದಿನ ಬಿಗ್‌ ಬಾಸ್‌ ಆಟವನ್ನು ಮುಂದುವರೆಸಿದ್ದು ಇದೆ. ಹಾಗಾಗಿ ತಂಡದ ಕಡೆಯಿಂದ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾಯಬೇಕಿದೆ.

    ಇನ್ನೂ ಕಳೆದ 11 ಸೀಸನ್ ಬಿಗ್ ಬಾಸ್ ಅನ್ನು ನಿರೂಪಣೆ ಮಾಡಿರುವ ಸುದೀಪ್ (Sudeep) ಅವರು ಮುಂದಿನ ಸೀಸನ್ ನಿರೂಪಣೆ ಮಾಡಲ್ಲ ಎಂದು ಅಧಿಕೃತವಾಗಿ ಹೇಳಿರೋದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ. ಈ ನಿರ್ಧಾರವನ್ನು ಬದಲಿಸಿ ಗುಡ್ ನ್ಯೂಸ್ ಕೊಡುತ್ತಾರಾ? ಎಂದು ಸುದೀಪ್ ಫ್ಯಾನ್ಸ್ ಕಾಯುತ್ತಿದ್ದಾರೆ.

  • BBK 11: ‘ರಾಧಾ ಕೃಷ್ಣ’ರಂತೆ ಇದ್ದೀರಾ: ಭವ್ಯಾಗೆ ನೇರವಾಗಿ ಹೇಳಿದ ತ್ರಿವಿಕ್ರಮ್‌ ತಾಯಿ

    BBK 11: ‘ರಾಧಾ ಕೃಷ್ಣ’ರಂತೆ ಇದ್ದೀರಾ: ಭವ್ಯಾಗೆ ನೇರವಾಗಿ ಹೇಳಿದ ತ್ರಿವಿಕ್ರಮ್‌ ತಾಯಿ

    ‘ಬಿಗ್ ಬಾಸ್ ಕನ್ನಡ 11’ರ ಶೋ (Bigg Boss Kannada 11) ಇದೀಗ 100ನೇ ದಿನದತ್ತ ಮುನ್ನುಗ್ಗುತ್ತಿದೆ. ದೊಡ್ಮನೆಯಲ್ಲಿ ಈಗ ಫ್ಯಾಮಿಲಿ ರೌಂಡ್‌ ಶುರುವಾಗಿದೆ. ಎಲ್ಲರ ಮುಖದಲ್ಲಿ ಖುಷಿ ಮೂಡಿದ್ದು, ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಟಾಸ್ಕ್‌ ಗೆದ್ದವರಿಗೆ ತಮ್ಮ ಮನೆಯವರನ್ನು ಭೇಟಿ ಮಾಡುವ ಅವಕಾಶ ಕೊಡುತ್ತಾರೆ ಬಿಗ್‌ ಬಾಸ್. ಈ ಮೂಲಕ ‘ಬಿಗ್‌ ಬಾಸ್‌’ ಸ್ಪರ್ಧಿಗಳಿಗೆ ಟ್ವಿಸ್ಟ್‌ ಕೊಟ್ಟಿದ್ದಾರೆ.

    ಮನೆಯಲ್ಲಿ ‘ಬಿಗ್ ಬಾಸ್’ ವಿಶೇಷ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ, ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ (Trivikram) ಅವರು, ಒಂದು ಚಿತ್ರವನ್ನು ಜೋಡಿಸುವ ಟಾಸ್ಕ್ ಅನ್ನು ಫುಲ್ ಟೆನ್ಷನ್‌ನಲ್ಲಿ ಬೇಗ ಪೂರ್ಣಗೊಳಿಸಿದರು. ಟಾಸ್ಕ್ ಮುಗಿದಿದ್ದೆ ತಡ ಮುಖ್ಯದ್ವಾರ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್ ಅವರ ತಾಯಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್, ಯಶ್, ಉಪ್ಪಿ ಸರ್, ಶಿವಣ್ಣ ಸೇರಿದ್ರೆನೆ ಕನ್ನಡ ಚಿತ್ರರಂಗ – ಸುದೀಪ್‌

    ಈ ವೇಳೆ ತ್ರಿವಿಕ್ರಮ್, ಅವರ ತಾಯಿಯ ಆಶೀರ್ವಾದವನ್ನು ಎಲ್ಲಾ ಸ್ಪರ್ಧಿಗಳು ಪಡೆದರು. ತ್ರಿವಿಕ್ರಮ್‌ ಅವರ ತಾಯಿಯನ್ನು ಭವ್ಯಾ ತಬ್ಬಿಕೊಂಡು ಖುಷಿಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನಿಗೆ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಬೆಂಬಲವಾಗಿ ನಿಂತಿದ್ದೀಯಾ. ರಾಧಾ ಕೃಷ್ಣನ ತರ ಇದ್ದೀರಿ ಎಂದು ತ್ರಿವಿಕ್ರಮ್ ತಾಯಿ ಭವ್ಯಾರನ್ನು (Bhavya Gowda) ಮೆಚ್ಚಿದ್ದಾರೆ. ಅವರ ಮಾತಿನಿಂದ ಭವ್ಯಾ ನಾಚಿ ನೀರಾಗಿದ್ದಾರೆ.

    ಇನ್ನು ಅಮ್ಮ ಮನೆಯಿಂದ ಹೊರ ಹೋಗುವಾಗ ತ್ರಿವಿಕ್ರಮ್ ಅವರು ಇನ್ನು 10 ನಿಮಿಷ ಅನುಮತಿ ಕೊಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬಿಗ್ ಬಾಸ್ ನೀಡದ ಹಿನ್ನೆಲೆ ಅವರ ತಾಯಿ ಮನೆಯಿಂದ ಹೊರನಡೆದರು. ಆಗ ತ್ರಿವಿಕ್ರಮ್ ಕಣ್ಣೀರು ಹಾಕಿದ್ದಾರೆ. ಅದಷ್ಟೇ ಅಲ್ಲ, ಬಿಗ್ ಬಾಸ್ ಮನೆಗೆ ಭವ್ಯಾ ಅವರ ತಾಯಿ ಮತ್ತು ಸಹೋದರಿ ಕೂಡ ಎಂಟ್ರಿ ಕೊಟ್ಟಿದ್ದಾರೆ.

  • ಶಿಶಿರ್‌ ತುಂಬಾ ಒಳ್ಳೆಯ ವ್ಯಕ್ತಿ: ಮದುವೆ ಬಗ್ಗೆ Bigg Boss ಐಶ್ವರ್ಯಾ ರಿಯಾಕ್ಷನ್‌

    ಶಿಶಿರ್‌ ತುಂಬಾ ಒಳ್ಳೆಯ ವ್ಯಕ್ತಿ: ಮದುವೆ ಬಗ್ಗೆ Bigg Boss ಐಶ್ವರ್ಯಾ ರಿಯಾಕ್ಷನ್‌

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ವಾರಾಂತ್ಯ ಐಶ್ವರ್ಯಾ ಶಿಂಧೋಗಿ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇನ್ನೂ ಬಿಗ್ ಬಾಸ್‌ನಲ್ಲಿ ಶಿಶಿರ್ ಶಾಸ್ತ್ರಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಐಶ್ವರ್ಯಾ ಮದುವೆ ಕುರಿತಯ ಮಾತನಾಡಿದ್ದಾರೆ. ಶಿಶಿರ್ (Shishir Shastry) ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಐಶ್ವರ್ಯಾ ರಿಯಾಕ್ಷನ್ ಏನು? ಎಂಬುದನ್ನು ಮಾತನಾಡಿದ್ದಾರೆ.

    ನನ್ನ ಮತ್ತು ಶಿಶಿರ್ ಮಧ್ಯೆ ಇರೋದು ಜೆನ್ಯೂನ್ ಆಗಿರುವಂತಹ ಫ್ರೆಂಡ್‌ಶಿಪ್. ಅದು ಬಿಟ್ಟು ಇನ್ನೇನು ಇಲ್ಲ. ನಾವಿಬ್ಬರೂ 2016ರಲ್ಲಿ ಒಟ್ಟಿಗೆ ಮೂವಿ ಮಾಡಿದ್ದೇವೆ. ಅಲ್ಲಿಂದ ನಾವಿಬ್ಬರಿಗೂ ಪರಿಚಯ ಆಗಿತ್ತು. ಆವಾಗ ಶಿಶಿರ್ ಅವರ ವ್ಯಕ್ತಿತ್ವ ಹೇಗಿತ್ತೋ, ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಬಂದಾಗಲೂ ಹಾಗೇ ಇತ್ತು. ಅದರ ನಂತರ ನಮಗೆ ಫೋನ್ ಸಂಪರ್ಕ ಏನು ಇರಲಿಲ್ಲ. ಬಿಗ್ ಬಾಸ್‌ಗೆ ಬಂದ್ಮೇಲೆಯೇ ಮತ್ತೆ ಪರಿಚಯ ಆಯ್ತು. ನನಗೆ ಅವರು ಸ್ಟ್ರಾಂಗ್ ಎಮೋಷನಲಿ ಬೆಂಬಲ ಕೊಟ್ಟಿದ್ದಾರೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ನನ್ನ ಮನಸ್ಸಿಗೆ ನೋವು ಮಾಡಬೇಡಿ: ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್

    ನನಗೆ ಹಲವಾರು ಕಡೆ ಅನ್ಯಾಯ ಆದಾಗ ನನ್ನ ಪರ ಶಿಶಿರ್ ನಿಂತಿದ್ದಾರೆ. ಅಷ್ಟು ಬಿಟ್ಟರೇ ನಮ್ಮ ನಡುವೆ ಏನಿಲ್ಲ. ಶಿಶಿರ್ ನನಗೆ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ಫ್ಯಾನ್ಸ್‌ಗೆ ಬೇಸರ ಆಗಿದ್ರೆ ಸಾರಿ, ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಐಶ್ವರ್ಯಾ ಶಿಂಧೋಗಿ (Aishwarya Shindogi) ಮಾತನಾಡಿದ್ದಾರೆ.

  • ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

    ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

    ಬಿಗ್‌ ಬಾಸ್‌ ಮನೆಯ ಆಟ (Bigg Boss Kannada 11) ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. 90 ದಿನಗಳನ್ನು ಪೂರೈಸಿ ಮುನ್ನಗ್ಗುತ್ತಿರುವ ಆಟ ಮತ್ತಷ್ಟು ರೋಚಕವಾಗಿದೆ. 3ನೇ ಬಾರಿ ಭವ್ಯಾ (Bhavya Gowda) ಕ್ಯಾಪ್ಟನ್ ಆಗಿದ್ದಾರೆ. ಆದರೆ ಈ ಬಾರಿ ಅವರು ಮೋಸದಿಂದ ಕ್ಯಾಪ್ಟನ್ ಆಗಿದ್ದಾರೆ.ಈ ಮೋಸದಾಟವನ್ನು ಸುದೀಪ್ ಹೊರಗೆಳೆದರು. ಆದರೆ ಭವ್ಯಾ ಸಿಕ್ಕಿಬಿದ್ದರೂ ಸುಳ್ಳು ಹೇಳುವುದು ಬಿಟ್ಟಿರಲಿಲ್ಲ. ಆಗ ಸುದೀಪ್ ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಟಾಸ್ಕ್‌ವೊಂದರಲ್ಲಿ 9ನೇ ಸಂಖ್ಯೆಯ ಬುಟ್ಟಿಯಲ್ಲಿರುವ ಚೆಂಡುಗಳನ್ನು ಬುಟ್ಟಿಗೆ ಹಾಕುವ ಟಾಸ್ಕ್ ಅನ್ನು ಕ್ಯಾಪ್ಟೆನ್ಸಿ ಟಾಸ್ಕ್ ಆಗಿ ನೀಡಲಾಗಿತ್ತು. ರಜತ್, ಮೋಕ್ಷಿತಾ, ಭವ್ಯಾ, ತ್ರಿವಿಕ್ರಮ್, ಧನರಾಜ್ ಅವರುಗಳು ಆಟದ ರೇಸ್‌ನಲ್ಲಿದ್ದರು. ಉಗ್ರಂ ಮಂಜು, ಚೈತ್ರಾ ಅವರುಗಳು ಉಸ್ತುವಾರಿ ಆಗಿದ್ದರು. ಈ ವೇಳೆ ಭವ್ಯಾ, ಬೇರೆ ಸಂಖ್ಯೆಯ ಡಬ್ಬಿಯಿಂದ ಬಿದ್ದ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿ ಟಾಸ್ಕ್ ಗೆದ್ದರು ಮಾತ್ರವಲ್ಲದೆ ಮನೆಯ ಕ್ಯಾಪ್ಟನ್ ಸಹ ಆದರು. ಭವ್ಯಾ ರೂಲ್ಸ್‌ ಬ್ರೇಕ್‌ ಮಾಡಿದನ್ನು ರಜತ್ ನೋಡಿದರೂ ಸಹ ಹೇಳಿರಲಿಲ್ಲ. ಈಗ ಎಲ್ಲರೆದುರು ಸುದೀಪ್ (Sudeep) ವಿಡಿಯೋ ತೋರಿಸಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಸಾಕ್ಷಿ ಸಮೇತ ತೋರಿಸಿದರೂ ಸಹ ಸುದೀಪ್‌ ಮುಂದೆ ಭವ್ಯಾ ಅದೇ ಸುಳ್ಳುಗಳನ್ನು ಮುಂದುವರೆಸಿದರು. ಆ ಚೆಂಡು ಎಲ್ಲಿಂದ ಬಿದ್ದಿದ್ದು ಎಂಬುದನ್ನು ನಾನು ನೋಡಿರಲಿಲ್ಲ ಎಂದರು. ಆ ನಂತರ ಇನ್ನೊಂದು ವಿಡಿಯೋ ಅನ್ನು ಸುದೀಪ್ ಹಾಕಿದರು. ಅದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಉಸ್ತುವಾರಿಗಳಾದ ಚೈತ್ರಾ ಹಾಗೂ ಮಂಜು ಕೇಳಿದ ಪ್ರಶ್ನೆಗಳಿಗೆ ಭವ್ಯಾ ಬೇಕೆಂದೇ ಸುಳ್ಳು ಹೇಳಿದರು. ಮೋಸ ಮಾಡಿ ಕ್ಯಾಪ್ಟನ್ ಆಗಿದ್ದಲ್ಲದೆ, ಸುದೀಪ್ ಎದುರು ಆ ಸುಳ್ಳನ್ನೇ ಸತ್ಯ ಮಾಡುವ ಪ್ರಯತ್ನ ಮಾಡಿದರು.

    ಸುಮ್ಮನೆ ಇರು ಎಂದು ನೀವು ಹೇಳಿದ್ದು, ಬೇರೆ ಕಾರಣಕ್ಕೆ ಅಲ್ಲ ಬದಲಿಗೆ ನಾನು ಮೋಸ ಮಾಡುತ್ತಿದ್ದೀನಿ, ನೀನು ನೋಡಿದರೂ ನೋಡದಂತೆ ಇರು ಎಂದು ಸುಮ್ಮನೆ ಇರು, ಸುಮ್ಮನೆ ಇರು ಎಂದು ಮೆಲುದನಿಯಲ್ಲಿ ರಜತ್‌ಗೆ ಹೇಳಿದ್ದು ಎಂದು ಸ್ಪಷ್ಟವಾಗಿ ಸುದೀಪ್‌ ಹೇಳಿದರು. ಇಷ್ಟ ಆದರೂ ತಪ್ಪನ್ನು ಒಪ್ಪಿಕೊಳ್ಳದ ಭವ್ಯಾಗೆ ಸರಿಯಾಗಿ ಸುದೀಪ್‌ ಕ್ಲಾಸ್‌ ತೆಗೆದುಕೊಂಡರು. ಜೊತೆಗೆ ಭವ್ಯಾ ಪರ ನಿಂತಿದ್ದಕ್ಕೆ ರಜತ್‌ಗೂ ಸುದೀಪ್‌ ತರಾಟೆಗೆ ತೆಗೆದುಕೊಂಡರು.

  • BBK 11: ಸ್ಪರ್ಧಿಗಳಿಗೆ ಮಿಡ್ ವೀಕ್ ಎಲಿಮಿನೇಷನ್ ಶಾಕ್?- ದೊಡ್ಮನೆಯಿಂದ ಔಟ್ ಆಗಿದ್ಯಾರು?

    BBK 11: ಸ್ಪರ್ಧಿಗಳಿಗೆ ಮಿಡ್ ವೀಕ್ ಎಲಿಮಿನೇಷನ್ ಶಾಕ್?- ದೊಡ್ಮನೆಯಿಂದ ಔಟ್ ಆಗಿದ್ಯಾರು?

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು 90ನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಿರುವಾಗ ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಶಾಕ್ ಕೊಟ್ಟಿದೆ ಎನ್ನಲಾಗ್ತಿದೆ. ದೊಡ್ಮನೆಯಿಂದ ಸ್ಟ್ರಾಂಗ್ ಸ್ಪರ್ಧಿಯೇ ಹೊರ ನಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಿಗ್ ಬಾಸ್ ಮನೆಯಲ್ಲಿ ಪ್ರಸ್ತುತ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಹನುಮಂತ, ಧನರಾಜ್, ಭವ್ಯಾ, ಮೋಕ್ಷಿತಾ, ಗೌತಮಿ, ಐಶ್ವರ್ಯಾ‌, ಚೈತ್ರಾ ಈ ಸ್ಪರ್ಧಿಗಳ ನಡುವೆ ಅಳಿವು ಮತ್ತು ಉಳಿವಿಗಾಗಿ ಜಟಾಪಟಿ ನಡೆಯುತ್ತಿದೆ. ಹೀಗಿರುವಾಗ ಇವರ ಪೈಕಿ ಒಬ್ಬರು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಶುರುವಾಗಿದೆ.

    ಮಿಡ್ ವೀಕ್ ಎಲಿಮಿನೇಷನ್ ಬಗ್ಗೆ ಪರ ಮತ್ತು ವಿರೋಧದ ಚರ್ಚೆ ಶುರುವಾಗಿದ್ದು, ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ (Chaithra) ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಬಿಗ್ ಬಾಸ್ ಸಂಚಿಕೆಯ ಮೂಲಕವೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

    ಕಳೆದ ಬಾರಿ ಶಿಶಿರ್ ಎಲಿಮಿನೇಷನ್ ಬಳಿಕ ಗೋಲ್ಡ್ ಸುರೇಶ್ ಅವರು ಕುಟುಂಬದ ತುರ್ತು ಪರಿಸ್ಥಿತಿ ಹಿನ್ನೆಲೆ ಶೋನಿಂದ ನಿರ್ಗಮಿಸಿದ್ದರು. ಹಾಗಾಗಿ ಕಳೆದ ವಾರಾಂತ್ಯ ತ್ರಿವಿಕ್ರಮ್ ಅವರ ಫೇಕ್ ಎಲಿಮಿನೇಷನ್ ನಡೆದಿತ್ತು. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿರುವ ಹಿನ್ನೆಲೆ ಈಗ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ.