Tag: bbk 10

  • ಮುದ್ದಿನ ನಾಯಿಗೋಸ್ಕರ ಪವಿ ಪೂವಪ್ಪ ಲವ್ ಬ್ರೇಕಪ್ – ಕಣ್ಣೀರಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

    ಮುದ್ದಿನ ನಾಯಿಗೋಸ್ಕರ ಪವಿ ಪೂವಪ್ಪ ಲವ್ ಬ್ರೇಕಪ್ – ಕಣ್ಣೀರಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

    ‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ಪವಿ ಪೂವಪ್ಪ (Pavi Poovappa) ಅವರು ಮೊದಲ ಬಾರಿಗೆ ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನಾಯಿ ವಿಚಾರಕ್ಕೆ ಬಾಯ್‌ಫ್ರೆಂಡ್ ಡಿಜೆ ಮ್ಯಾಡಿ ಅವರೊಂದಿಗೆ ಬ್ರೇಕಪ್ (Breakup) ಮಾಡಿಕೊಂಡಿದ್ದರ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    ‘ಭರ್ಜರಿ ಬ್ಯಾಚುಲರ್ 2’ ಕಾರ್ಯಕ್ರಮದಲ್ಲಿ ಬ್ರೇಕಪ್ ಸ್ಟೋರಿಯನ್ನು ಹೇಳುತ್ತಾ ಪವಿ ಪೂವಪ್ಪ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾವು ಐದು ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ವಿ. ಅವರು ನಾರ್ಥ್ ಇಂಡಿಯನ್ ನಾನು ಸೌತ್ ಇಂಡಿಯನ್. ನನಗೆ ನನ್ನ ನಾಯಿ ಅಂದರೆ ಪಂಚಪ್ರಾಣ. ನನ್ನ ಹುಟ್ಟುಹಬ್ಬಕ್ಕೆ ಆ ನಾಯಿಯನ್ನು ಅವರೇ ಉಡುಗೊರೆಯಾಗಿ ನೀಡಿದ್ದರು. ಆದರೆ ನನ್ನನ್ನು ಬಿಟ್ಟು ಹೋಗಲು ನಾಯಿ ಕಾರಣವನ್ನು ಕೊಟ್ಟರು. ನಾಯಿಯನ್ನು ಮಾರಿಬಿಡು ಆಗಲೇ ನಿನ್ನನ್ನು ಮನೆಗೆ ಸೇರಿಸಿಕೊಳ್ಳುವುದು ಅಂತೆಲ್ಲಾ ಹೇಳಿದ್ದರು. ಇಲ್ಲ ಅಂದ್ರೆ ಮದುವೆ ಆಗಲ್ಲ ಎಂದು ಹೇಳಿದ್ದರು. ಆ ನಾಯಿ ನನಗೆ ಎಷ್ಟು ಇಷ್ಟ ಅನ್ನೋದು ಅವರಿಗೂ ಚೆನ್ನಾಗಿ ಗೊತ್ತಿತ್ತು. ಈಗಲೂ ಅವನು ನನ್ನನ್ನು ಬಿಟ್ಟು ಇರೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್‌ ನ್ಯೂಸ್

     

    View this post on Instagram

     

    A post shared by Zee Kannada (@zeekannada)

    ಬ್ರೇಕಪ್ ಮಾಡಿಕೊಳ್ಳುವ ಉದ್ದೇಶದಿಂದಲೇ ನಾಯಿ ವಿಚಾರ ಹೇಳಿ ಹೀಗೆ ಮಾಡಿದರಬಹುದು. ಬಹುಶಃ ಅವರಿಗೆ ಮದುವೆ ಆದಮೇಲೆ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಹಾಗಾಗಿ ನಾಯಿ ಕಾರಣ ಕೊಟ್ಟು ಬ್ರೇಕಪ್ ಮಾಡಿಕೊಂಡಿದ್ದಾರೆ. ಇದಾಗಿ 8 ತಿಂಗಳುಗಳಾಗಿದೆ. ಎರಡು ದಿನದ ಹಿಂದೆ ನಾನು ಅವರನ್ನು ನೋಡಿದೆ ಎನ್ನುತ್ತಾ ಪವಿ ಪೂವಪ್ಪ ಗಳಗಳನೆ ಅತ್ತಿದ್ದಾರೆ. ಆಗ `ಭರ್ಜರಿ ಬ್ಯಾಚುಲರ್ಸ್‌’ ತಂಡದವರು ಅವರನ್ನು ಸಂತೈಸಿದ್ದಾರೆ.

     

    View this post on Instagram

     

    A post shared by Pavi Poovappa (@pavipoovappa3)

    ‘ಬಿಗ್ ಬಾಸ್’ ಕನ್ನಡ 10ರಲ್ಲಿ ಪವಿ ಪೂವಪ್ಪ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಕೆಲವೇ ದಿನ ಇದ್ದರೂ ಜನರ ಮನಗೆದ್ದಿದ್ದರು. ಇದೀಗ ‘ಭರ್ಜರಿ ಬ್ಯಾಚುಲರ್ 2’ ಉಲ್ಲಾಸ್‌ಗೆ ಪವಿ ಮೆಂಟರ್ ಆಗಿದ್ದಾರೆ.

  • ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ

    ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಸ್ಪರ್ಧಿ ನಮ್ರತಾ ಗೌಡ (Namratha Gowda) ಕಿಡಿಗೇಡಿ ಕಿರುಕುಳದ ವಿರುದ್ಧ ತಿರುಗಿಬಿದ್ದಿದ್ದಾರೆ. ರಾಜಕಾರಣಿಗಳೊಂದಿಗೆ ಡೇಟಿಂಗ್ ಮಾಡುವಂತೆ ಹಿಂದೆ ಬಿದ್ದವನ ಬಂಡವಾಳವನ್ನು ನಟಿ ಬಯಲು ಮಾಡಿದ್ದಾರೆ. ಸಾಕ್ಷಿ ಸಮೇತ ಸ್ಕ್ರೀನ್ ಶಾಟ್ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ‘ಸಿತಾರೆ ಜಮೀನ್ ಪರ್’ ಬಾಯ್‌ಕಾಟ್‌ಗೆ ಆಗ್ರಹ- ಆಮೀರ್ ಖಾನ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು

    ರೋಷನ್ ಎಂಬಾತ, ರಾಕಿ ಜಿ43 ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಕೆಟ್ಟ ಸಂದೇಶಗಳನ್ನು ಕಳಿಸಿದ್ದಾನೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ತಿರುಗೇಟು ನೀಡಿದ್ದಾರೆ. ಕಿಡಿಗೇಡಿ ರೋಷನ್, ತಮಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟಿದೆ. ರಾಜಕಾರಣಿಗಳ ಜೊತೆಗೆ ಡೇಟಿಂಗ್ ಮಾಡುವಂತೆ ರೋಷನ್ ನಮ್ರತಾರನ್ನು ಕೇಳಿದ್ದಾನೆ. ನಾನು ವಿಐಪಿಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ. ನಿಮ್ಮ ಫೋನ್ ನಂಬರ್, ಫೋಟೋಗಳನ್ನು ಕಳುಹಿಸುವ ಅಗತ್ಯವಿಲ್ಲ. ಡೇಟಿಂಗ್‌ಗೆ ಬುಕ್ ಮಾಡ್ತೀನಿ, ಹೆಚ್ಚಿನ ಹಣ ಕೇಳಿದರು ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾನೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾರಿಗೂ ಗೊತ್ತಾಗುವುದಿಲ್ಲ. ಸೇಫ್ ಆಗಿರುತ್ತದೆ ಎಂದು 4 ಬಾರಿ ಸಂದೇಶವನ್ನು ನಟಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ:ಉಪೇಂದ್ರ ಪುತ್ರ ಚಿತ್ರರಂಗಕ್ಕೆ ಎಂಟ್ರಿ- ‘ಮೊದಲಾ ಸಲ’ ಖ್ಯಾತಿಯ ನಿರ್ದೇಶಕ ಆ್ಯಕ್ಷನ್ ಕಟ್

    ಇದು ನಮ್ರತಾಗೆ ಬೇಸರ ಮೂಡಿಸಿದೆ. ತಕ್ಕ ಪಾಠ ಕಲಿಸಬೇಕೆಂದೇ ಕಿಡಿಗೇಡಿ ರೋಷನ್ ಮಾಡಿದ ಸಂದೇಶವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಹೀಗೆಲ್ಲಾ ಮೆಸೇಜ್ ಮಾಡೋದು ನಿಲ್ಲಬೇಕು ಎಂದು ನಮ್ರತಾ ಧ್ವನಿಯೆತ್ತಿದ್ದಾರೆ. ನಟಿಯ ಈ ನಡೆಗೆ ಫ್ಯಾನ್ಸ್ ಬೆಂಬಲ ಸೂಚಿಸಿದ್ದಾರೆ.

    ನಮ್ರತಾ ಗೌಡ ಸದ್ಯ ‘ಕರ್ಣ’ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಯಕ ಕಿರಣ್ ರಾಜ್, ಭವ್ಯಾ ಗೌಡ ಜೊತೆ ಕಾಣಿಸಿಕೊಂಡಿದ್ದಾರೆ. ಶ್ರುತಿ ನಾಯ್ಡು ಸೀರಿಯಲ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

  • ತಮಿಳು ಚಿತ್ರದಲ್ಲಿ ಸೊಂಟ ಬಳುಕಿಸಿದ ತನಿಷಾ ಕುಪ್ಪಂಡ – ಬೆಂಕಿ ಡ್ಯಾನ್ಸ್ ಎಂದ ಫ್ಯಾನ್ಸ್

    ತಮಿಳು ಚಿತ್ರದಲ್ಲಿ ಸೊಂಟ ಬಳುಕಿಸಿದ ತನಿಷಾ ಕುಪ್ಪಂಡ – ಬೆಂಕಿ ಡ್ಯಾನ್ಸ್ ಎಂದ ಫ್ಯಾನ್ಸ್

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಖ್ಯಾತಿಯ ತನಿಷಾ ಕುಪ್ಪಂಡ (Tanisha Kuppanda) ಅವರು ತಮಿಳು ಸಿನಿಮಾವೊಂದರಲ್ಲಿ ಸೊಂಟ ಬಳುಕಿಸಿದ್ದಾರೆ. ಮಾದಕವಾಗಿ ನಟಿ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ- ಡಾಲಿ

    ಕನ್ನಡದ ಸಿನಿಮಾಗಳಲ್ಲಿ ತನಿಷಾ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮಿಳಿನಲ್ಲಿಯೂ ಕೆಲಸ ಮಾಡಿದ್ದಾರೆ. ‘ಎನ್ ಕಾಧಲೇ’ ಚಿತ್ರದ ರಾಸಾನಾ ಓತಾ ರೋಸಾ ಹಾಡಿನ ಮೇಕಿಂಗ್ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ಈ ಹಾಡು ಈಗಾಗಲೇ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಆದರೆ ಈ ಡ್ಯಾನ್ಸ್ ಮಾಡಲು ತೆರೆಹಿಂದಿನ ತಯಾರಿ ಹೇಗಿತ್ತು ಎಂಬುದರ ಝಲಕ್ ಅನ್ನು ನಟಿ ಹಂಚಿಕೊಂಡಿದ್ದಾರೆ. ಮಾದಕವಾಗಿ ಹೆಜ್ಜೆ ಹಾಕಿರೋ ತನಿಷಾರನ್ನು ನೋಡಿ ಬೆಂಕಿ ಡ್ಯಾನ್ಸ್ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ

     

    View this post on Instagram

     

    A post shared by Tanisha Kuppanda (@tanishakuppanda)

    ಅಂದಹಾಗೆ, ಕನ್ನಡದ ‘ಪೆನ್‌ಡ್ರೈವ್’ ಸಿನಿಮಾದಲ್ಲಿ ಮಾಲಾಶ್ರೀ ಜೊತೆ ತನಿಷಾ ನಟಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರೊಂದಿಗೆ ಕಿಶನ್ ಬಿಳಗಲಿ ಕೂಡ ನಟಿಸಿದ್ದಾರೆ.

    ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ತನಿಷಾ ನಟಿಸಿದ್ದರೂ ಕೂಡ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಕ್ಕಿರಲಿಲ್ಲ. ಕಳೆದ ಸೀಸನ್ ಬಿಗ್ ಬಾಸ್ ಕನ್ನಡ 10ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ್ಮೇಲೆ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಇದಷ್ಟೇ ಅಲ್ಲ, ನಟನೆಯ ಜೊತೆ ಹೋಟೆಲ್ ಉದ್ಯಮ, ಆಭರಣದ ಮಳಿಗೆ ಹಾಗೂ ನಿರ್ಮಾಣ ಸಂಸ್ಥೆ ಕೂಡ ಶುರು ಮಾಡಿದ್ದಾರೆ.

  • ರಕ್ಷಕ್ ಕೊಟ್ಟ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಗೌಡ ಕಣ್ಣೀರು

    ರಕ್ಷಕ್ ಕೊಟ್ಟ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಗೌಡ ಕಣ್ಣೀರು

    ‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ನಮ್ರತಾ ಗೌಡ (Namratha Gowda) ಅವರು 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಬರ್ತ್‌ಡೇಯನ್ನು ರಕ್ಷಕ್ ಮತ್ತಷ್ಟು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಅವರು ಕೊಟ್ಟಿರುವ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ನಮ್ರತಾ‌ ಗೌಡ ಹುಟ್ಟುಹಬ್ಬದ (ಏ.14) ಹಿನ್ನೆಲೆ ಸರ್ಪ್ರೈಸ್ ಆಗಿ ರಕ್ಷಕ್ ಮನೆಗೆ ಕರೆದುಕೊಂಡು ಹೋಗಿ ನಟಿಯ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಬರ್ತ್‌ಡೇಗೆ ಅಲಂಕರಿಸಿರುವ ರೀತಿ ಹಾಗೂ ಸಹೋದರ ರಕ್ಷಕ್  (Rakshak Bullet) ಪ್ರೀತಿ ನೋಡಿ ನಮ್ರತಾ ಕಣ್ಣೀರಿಟ್ಟಿದ್ದಾರೆ. ಇದು ನಟ ಹಂಚಿಕೊಂಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಯೋಗೆ ಹುಟ್ಟುಹಬ್ಬದ ಶುಭಾಶಯಗಳು ಪಾಪು. ನಿಮ್ಮೊಂದಿಗೆ ಎಂದೆಂದಿಗೂ ಎಂದು ರಕ್ಷಕ್‌ ಕ್ಯಾಪ್ಷನ್‌ ನೀಡಿದ್ದಾರೆ. ಇದನ್ನೂ ಓದಿ:ತಾಯಿ ಚಾಮುಂಡೇಶ್ವರಿಗೆ ಡೈಲಾಗ್‌ನಲ್ಲಿ ಅಪಮಾನ ಆರೋಪ- ರಕ್ಷಕ್ ವಿರುದ್ಧ ಸಿಡಿದೆದ್ದ ಹಿಂದೂ ಸಂಘಟನೆ

     

    View this post on Instagram

     

    A post shared by rakshak sena (@rakshak_bullet)

    ಅಂದಹಾಗೆ, ‘ಬಿಗ್ ಬಾಸ್ ಕನ್ನಡ 10’ರ ಕಾರ್ಯಕ್ರಮದಲ್ಲಿ ರಕ್ಷಕ್ ಮತ್ತು ನಮ್ರತಾ ಸ್ಪರ್ಧಿಗಳಾಗಿದ್ದರು. ಈ ಶೋ ಬಳಿಕ ಇಬ್ಬರ ಬಾಂಧವ್ಯ ಮುಂದುವರೆದಿದೆ.

  • ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಕಿರುತೆರೆಯತ್ತ ‘ಬಿಗ್‌ ಬಾಸ್‌’ ಖ್ಯಾತಿಯ ನಮ್ರತಾ ಗೌಡ

    ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಕಿರುತೆರೆಯತ್ತ ‘ಬಿಗ್‌ ಬಾಸ್‌’ ಖ್ಯಾತಿಯ ನಮ್ರತಾ ಗೌಡ

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಸ್ಪರ್ಧಿ ನಮ್ರತಾ ಗೌಡ (Namratha Gowda) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ನಟಿ ಕ್ಯಾಮೆರಾ ಮುಂದೆ ನಿಲ್ಲೋದಕ್ಕೆ ರೆಡಿಯಾಗಿದ್ದಾರೆ. ಹೊಸ ಸೀರಿಯಲ್‌ಗೆ ನಾಯಕಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡ್ತಿದ್ದಾರೆ. ಇದನ್ನೂ ಓದಿ:ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು

    ಕೊನೆಗೂ ನಮ್ರತಾ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಿದೆ. 2024ರಲ್ಲಿ ಬಿಗ್ ಬಾಸ್ ಶೋ ಮುಗಿದ ಬಳಿಕ ಒಂದು ವರ್ಷಗಳ ಕಾಲ ಯಾವುದೇ ಸಿನಿಮಾ ಅಥವಾ ಸೀರಿಯಲ್ ಬಗ್ಗೆ ನಟಿ ಗುಡ್ ನ್ಯೂಸ್ ಕೊಟ್ಟಿರಲಿಲ್ಲ. ಈಗ ಕಿರಣ್ ರಾಜ್ (Kiran Raj) ನಟನೆಯ ‘ಕರ್ಣ’ ಸೀರಿಯಲ್‌ಗೆ (Kaarna Serial) ನಮ್ರತಾ ನಾಯಕಿಯಾಗಿ ಬರಲು ರೆಡಿಯಾಗಿದ್ದಾರೆ. ಇದನ್ನೂ ಓದಿ:‘ಡೆವಿಲ್’ ಸಿನಿಮಾ ತುಂಬಾ ಡಿಫರೆಂಟ್ ಆಗಿದೆ: ಅಪ್‌ಡೇಟ್ ಕೊಟ್ಟ ವಿನಯ್

    ಕಿರಣ್ ರಾಜ್‌ಗೆ ಈ ಸೀರಿಯಲ್‌ನಲ್ಲಿ ಇಬ್ಬರೂ ನಾಯಕಿಯರಿದ್ದಾರೆ. ನಮ್ರತಾ ಜೊತೆ ಭವ್ಯಾ ಗೌಡ (Bhavya Gowda) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಮೂಲಕ ನಟಿ ಕಿರುತೆರೆಯತ್ತ ಮುಖ ಮಾಡಿದ್ದಾರೆ.

    ಅಂದಹಾಗೆ, ಆಕಾಶದೀಪ, ನಾಗಿಣಿ 2, ಬಿಗ್ ಬಾಸ್ ಕನ್ನಡ 10 ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಮ್ರತಾ ಕೆಲಸ ಮಾಡಿದ್ದಾರೆ. ಬಾಲನಟಿಯಾಗಿ ನಮ್ರತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

  • ಕೊನೆಯುಸಿರು ಇರೋವರೆಗೂ ಸುದೀಪ್ ಸರ್ ಋಣ ಮರೆಯೋದಿಲ್ಲ: ಲಾಂಗ್‌ ವಿವಾದದ ಬಗ್ಗೆ ವಿನಯ್‌ ಮಾತು

    ಕೊನೆಯುಸಿರು ಇರೋವರೆಗೂ ಸುದೀಪ್ ಸರ್ ಋಣ ಮರೆಯೋದಿಲ್ಲ: ಲಾಂಗ್‌ ವಿವಾದದ ಬಗ್ಗೆ ವಿನಯ್‌ ಮಾತು

    ಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದ ಕುರಿತು ಕೊನೆಗೂ ವಿನಯ್ ಗೌಡ (Vinay Gowda) ಮೌನ ಮುರಿದಿದ್ದಾರೆ. ಜೈಲಿನಿಂದ ಆಚೆ ಬಂದ ಬಳಿಕ ಈ ಸಂಕಷ್ಟದ ಸಂದರ್ಭದಲ್ಲಿ ಬೆನ್ನಿಗೆ ನಿಂತ ಕಿಚ್ಚ ಸುದೀಪ್‌ಗೆ (Kiccha Sudeep) ವಿನಯ್ ಧನ್ಯವಾದ ತಿಳಿಸಿದ್ದಾರೆ. ಕೊನೆ ಉಸಿರು ಇರೋವರೆಗೂ ಅವರ ಋಣ ಮರೆಯೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ: ವಿನಯ್ ಫಸ್ಟ್ ರಿಯಾಕ್ಷನ್

    ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಕೇಸ್ ಕುರಿತು ವಿನಯ್ ಗೌಡ ಮಾತನಾಡಿ ನಾನು ನಿರೀಕ್ಷೆನೇ ಮಾಡಿರಲಿಲ್ಲ, ಹಾಗೇ ರೀಲ್ಸ್ ಮಾಡೋದು ತಪ್ಪು ಅಂತ ಮೊದಲೇ ಗೊತ್ತಿದ್ರೆ ಮಾಡ್ತಿರಲಿಲ್ಲ. ಆ ರೀಲ್ಸ್ ಅಷ್ಟು ವೈರಲ್ ಆಗಿ ತೊಂದರೆ ಆಗುತ್ತೆ ಎಂದು ತಿಳಿದಿರಲಿಲ್ಲ. ತಿಳಿಯದೇ ಆಗಿರೋ ತಪ್ಪಿಗೆ ಕರ್ನಾಟಕದ ಜನತೆಯ ಬಳಿ ಕ್ಷಮೆ ಕೇಳಿದ್ದೀನಿ. ಇದರಿಂದ ನಮ್ಮ ಫ್ಯಾಮಿಲಿ ಹಾಗೂ ನನ್ನ ಮಗನಿಗೆ ನೋವು ಮಾಡಿದ್ದೀನಿ. ಪ್ರಚಾರಕ್ಕೆ ಎಂದು ಮಾಡಿದ ಲಾಂಗ್‌ ಹಿಡಿದ ರೀಲ್ಸ್‌ನಿಂದ ತೊಂದರೆ ಆಯ್ತು. ನನ್ನ ಜೀವನದಲ್ಲಿ ಪೊಲೀಸ್ ಸ್ಟೇಷನ್ ನೋಡದೇ ಇರೋನು, ಇದರಿಂದ ಜೈಲಿಗೆ ಹೋಗಿ ಬರುವಂತೆ ಆಯ್ತು. ನಮ್ಮ ಕುಟುಂಬದಲ್ಲಿಯೂ ಯಾರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ ಎಂದು ಬೇಸರದಿಂದ ಮಾತನಾಡಿದ್ದಾರೆ. ಇದನ್ನೂ ಓದಿ:ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ

    ಈ ಪ್ರಕರಣದ ವೇಳೆ, ಸುದೀಪ್ ಸರ್ ನಮ್ಮ ಫ್ಯಾಮಿಲಿ ಜೊತೆ ನಿಂತರು. ಈ ಕೇಸ್ ಬಗ್ಗೆ ಮನೆಯಲ್ಲಿ ಏನು ಗೊತ್ತಿರಲಿಲ್ಲ. ನನಗೆ ಜೈಲು ಅಂದಾಗ ಮನೆಯಲ್ಲಿ ಶಾಕ್ ಆಗಿದ್ದರು. ಆ ಟೈಮ್‌ನಲ್ಲಿ ಸುದೀಪ್ ಸರ್ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದ್ದಾರೆ. ಕಾನೂನು ಪ್ರಕಾರ ಏನು ಮಾಡಬೇಕು ಅದರಂತೆ ಸುದೀಪ್ ನಿಂತು ನಮಗೆ ಬೆಂಬಲಿಸಿದ್ದಾರೆ. ಆ ದಿನ ನಮ್ಮ ಕುಟುಂಬದ ಜೊತೆ ನಿಂತು ಸಹಾಯ ಮಾಡಿದ್ದಾರೆ. ಕೊನೆ ಉಸಿರು ಇರೋವರೆಗೂ ಅವರ ಋಣ ನಾನು ಮರೆಯೋದಿಲ್ಲ. ಈ ನಿಯತ್ತು ಕೊನೆವರೆಗೂ ಇರುತ್ತದೆ ಎಂದಿದ್ದಾರೆ.

    ಸುದೀಪ್ ಸರ್ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅವರು ನಟಿಸುತ್ತಿರೋ ‘ಬಿಲ್ಲ ರಂಗ ಬಾಷಾ’ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದ್ದಾರೆ ಎಂದು ವಿನಯ್ ಮಾಹಿತಿ ಹಂಚಿಕೊಂಡಿದ್ದಾರೆ.

    ಇನ್ನೂ ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಹಾಗೂ ರಜತ್‌ರನ್ನು ಬಂಧಿಸಲಾಗಿತ್ತು. ಮಾ.28ರಂದು ಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಬೇಲ್ ಪ್ರತಿ ಪೊಲೀಸರಿಗೆ ತಡವಾಗಿ ಸಿಕ್ಕ ಹಿನ್ನೆಲೆ ಮಾ.29ರಂದು ಜೈಲಿನಿಂದ ವಿನಯ್ ಮತ್ತು ರಜತ್‌ರನ್ನು ರಿಲೀಸ್‌ ಮಾಡಲಾಯಿತು.

  • ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ: ವಿನಯ್ ಫಸ್ಟ್ ರಿಯಾಕ್ಷನ್

    ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ: ವಿನಯ್ ಫಸ್ಟ್ ರಿಯಾಕ್ಷನ್

    ‘ಬಿಗ್ ಬಾಸ್’ ಖ್ಯಾತಿಯ ವಿನಯ್ (Vinay Gowda) ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಇಂದು (ಮಾ.29) ಜೈಲಿಂದ (Jail) ರಿಲೀಸ್‌ ಆದ ಬೆನ್ನಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ವಿನಯ್ ಕ್ಷಮೆಯಾಚಿಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ ಎಂದಿದ್ದಾರೆ. ಇದನ್ನೂ ಓದಿ:KD ಲೇಡಿ ರೀಷ್ಮಾಗೆ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎಂದ ಧ್ರುವ ಸರ್ಜಾ

    ‌ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್‌ ಮಾಡಿ, ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳ್ತೀನಿ. ಕಳೆದ ನಾಲ್ಕು ದಿನದಿಂದ ನೀವು ಟಿವಿಯಲ್ಲಿ ನೋಡಿರಬಹುದು. ಒಂದು ಮಚ್ಚಿನ ಕಥೆ ನಡೆಯುತ್ತಿದೆ. ಪ್ರತಿ ಒಬ್ಬರಿಗೂ ನನ್ನ ಫ್ಯಾಮಿಲಿ ಹಾಗೂ ಫ್ಯಾನ್ಸ್‌ಗೆ ಕ್ಷಮೆ ಕೇಳಬೇಕು ಅಂತಾನೇ ವಿಡಿಯೋ ಮಾಡ್ತಿದ್ದೀನಿ. ನನ್ನಿಂದ ನನ್ನ ಹೆಂಡತಿ, ಮಗ, ಸ್ನೇಹಿತರಿಗೆ ತೊಂದರೆ ಆಗಿದೆ, ದಯವಿಟ್ಟು ಕ್ಷಮಿಸಿ ಬಿಡಿ ಎಂದು ಸಂಕಷ್ಟದ ಸಮಯದಲ್ಲಿ ನಿಂತವರಿಗೆ ವಿನಯ್ ಕೃತಜ್ಞತೆ ಸಲ್ಲಿಸಿದ್ದಾರೆ. ನನ್ನಿಂದ ತಪ್ಪಾಗಿದೆ ಮಚ್ಚು ಇಟ್ಕೊಂಡು ರೀಲ್ಸ್ ಮಾಡಬಾರದಿತ್ತು. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್‌ಗೆ ಕೊಡಬಾರದಿತ್ತು ಕ್ಷಮಿಸಿ ಎಂದಿದ್ದಾರೆ. ಇದನ್ನೂ ಓದಿ:ಗೆಲುವಿನ ನಿರೀಕ್ಷೆಯಲ್ಲಿ ಸಲ್ಮಾನ್ ಖಾನ್- ರಶ್ಮಿಕಾ ಜೊತೆಗಿನ ‘ಸಿಕಂದರ್’ ಚಿತ್ರ ನಾಳೆ ರಿಲೀಸ್‌

     

    View this post on Instagram

     

    A post shared by Vinay Gowda (@vinaygowdaactor)

    ಪೊಲೀಸ್ ಇಲಾಖೆ ಅವರು ಸರಿಯಾಗಿ ತನಿಖೆ ಮಾಡಿದ್ದಾರೆ. ಕಾಮನ್ ಮ್ಯಾನ್ ಸೆಲೆಬ್ರಿಟಿ ಅಂತ ನೋಡದೆ, ತನಿಖೆ ಮಾಡಿದ್ದಾರೆ. ನಮ್ಮನ್ನು ಚೆನ್ನಾಗಿ ಟ್ರೀಟ್ ಮಾಡಿದ್ದಾರೆ. ದಯವಿಟ್ಟು ಪೊಲೀಸ್ ಅವರ ಮೇಲೆ ಯಾವುದೇ ಆರೋಪ ಮಾಡಬೇಡಿ. ಕಾಮನ್ ಮ್ಯಾನ್ ಹಾಗೆಯೇ ನಮ್ಮನ್ನ ಟ್ರೀಟ್ ಮಾಡಿದ್ದಾರೆ. ಇನ್ನೂ ಪೊಲೀಸ್ ಅವರು ನಮ್ಮಿಂದ ಹಣ ಪಡೆದಿದ್ದಾರೆ ಅನ್ನೋದೆಲ್ಲ ಸುಳ್ಳು ವದಂತಿ ಎಂದಿದ್ದಾರೆ. ಪೊಲೀಸರು ನಮಗೆ ಹಾಗೆಯೇ ಮಾಡಿಲ್ಲ. ಕಾನೂನು ಬದ್ಧವಾಗಿ ತನಿಖೆ ಮಾಡಿದ್ದಾರೆ ಎನ್ನುತ್ತಾ ಅಧಿಕಾರಿ ಎಸಿಪಿ ಚಂದನ್ ಸರ್ ಅವರ ತಂಡಕ್ಕೆ ವಿನಯ್ ಧನ್ಯವಾದ ಹೇಳಿದ್ದಾರೆ.

    ನಮ್ಮಿಂದ ಗೊತ್ತಿಲ್ಲದೇ ಆಗಿರೋ ತಪ್ಪಿಗೆ ತಿದ್ದಿ ಬುದ್ಧಿ ಹೇಳಿದ್ದೀರಾ. ಇನ್ನೊಂದು ಸಲ ಈ ತರ ತಪ್ಪು ನಾನೆಂದು ಮಾಡಲ್ಲ. ಸಾಮಾನ್ಯರೊಂದಿಗೆ ಪೊಲೀಸರು ಹೇಗೆ ನಡೆದುಕೊಳ್ತಾರೋ, ಹಾಗೆ ನಮ್ಮೊಂದಿಗೂ ನಡೆದುಕೊಳ್ತಾರೆ. ಎಲ್ಲೂ ನಮ್ಮೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ. ಮತ್ತೊಮ್ಮೆ ಅಭಿಮಾನಿಗಳಿಗೆ ನಟ ಕ್ಷಮೆಯಾಚಿಸಿದ್ದಾರೆ. ರೀಲ್ಸ್‌ ನಾನು ಫೈಬರ್ ಮಚ್ಚು ಬಳಸಿದ್ದೆ, ಆ ಪ್ರಾಪರ್ಟಿ ನನ್ನದಲ್ಲ. ಅದು ರಜತ್ ಅವರದಾಗಿತ್ತು. ನನಗೆ ಕೊಟ್ಟಿದ್ದು ಪುಷ್ಪರಾಜ್ ಕ್ಯಾರೆಕ್ಟರ್, ಅದಕ್ಕೆ ನಾನು ಬೀಡಾ ಬಳಸಿ ರೀಲ್ಸ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

    ಇನ್ನೂ ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಹಾಗೂ ರಜತ್‌ರನ್ನು ಬಂಧಿಸಲಾಗಿತ್ತು. ನಿನ್ನೆ ಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಜಾಮೀನು ಮಂಜೂರು ಮಾಡಿತ್ತು. ಬೇಲ್ ಪ್ರತಿ ಪೊಲೀಸರಿಗೆ ತಡವಾಗಿ ಸಿಕ್ಕ ಹಿನ್ನೆಲೆ ಇಂದು ಜೈಲಿನಿಂದ ವಿಜಯ್ ಮತ್ತು ರಜತ್ ರಿಲೀಸ್ ಆಗಿದ್ದಾರೆ.

  • ತಾಯಿ ಚಾಮುಂಡೇಶ್ವರಿ ದೇವಿ ಭಕ್ತರಿಗೆ ಕ್ಷಮೆ ಕೋರಿದ ‌’ಬಿಗ್‌ ಬಾಸ್’ ರಕ್ಷಕ್ ಬುಲೆಟ್

    ತಾಯಿ ಚಾಮುಂಡೇಶ್ವರಿ ದೇವಿ ಭಕ್ತರಿಗೆ ಕ್ಷಮೆ ಕೋರಿದ ‌’ಬಿಗ್‌ ಬಾಸ್’ ರಕ್ಷಕ್ ಬುಲೆಟ್

    ‘ಬಿಗ್ ಬಾಸ್’ (BBK 10) ರಕ್ಷಕ್ ಬುಲೆಟ್ (Rakshak Bullet) ಅವರು ಇತ್ತೀಚಿನ ಶೋವೊಂದರಲ್ಲಿ ಡೈಲಾಗ್ ಮೂಲಕ ನಾಡದೇವಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎಂದು ದೇವಿ ಆರಾಧಕರು ಮತ್ತು ಹಿಂದೂ ಸಂಘಟನೆಗಳು ತಿರುಗಿಬಿದ್ದಿದ್ದರು. ಈ ಬೆನ್ನಲ್ಲೇ ರಕ್ಷಕ್ ಕ್ಷಮೆಯಾಚಿಸಿದ್ದಾರೆ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಆಚಾತುರ್ಯ ನಡೆಯೋದಿಲ್ಲ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ

    ಸೋಶಿಯಲ್ ಮೀಡಿಯಾದಲ್ಲಿ ನಟ ಪೋಸ್ಟ್ ಮಾಡಿ ನಾನು ನಿಮ್ಮ ರಕ್ಷಕ್ ಬುಲೆಟ್, ಇತ್ತೀಚೆಗೆ ಒಂದು ರಿಯಾಲಿಟಿ ಶೋನಲ್ಲಿ ನಾನು ಒಂದು ಹೆಸರಾಂತ ಚಿತ್ರದ ಡೈಲಾಗ್ ಅನ್ನು ಒಂದು ಸ್ಕಿಟ್‌ನಲ್ಲಿ ಹೇಳಿದ್ದೆ, ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನನ್ನ ತಂದೆಯವರಾದ ದಿವಂಗತ ಬುಲೆಟ್ ಪ್ರಕಾಶ್ (Bullet Prakash) ಅವರು ನನ್ನ ತಾಯಿ ಹಾಗೂ ಕುಟುಂಬಸ್ಥರು ಪರಮ ಭಕ್ತರು. ನಮ್ಮ ತಂದೆಯವರು ಇದ್ದಾಗಿನಿಂದಲೂ ನಾವು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಾ ನಡೆದುಕೊಂಡು ಬಂದಿದ್ದೇವೆ.

    ನಾವು ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ಆ ತಾಯಿಯ ಆಶೀರ್ವಾದದಿಂದ ನಾನು ಬೆಳೆಯುತ್ತಿದ್ದೇನೆ. ನಾನು ಯಾವುದೇ ಕಾರ್ಯ ಪ್ರಾರಂಭಿಸಬೇಕಾದರೆ ಮೊದಲು ತಾಯಿ ಚಾಮುಂಡೇಶ್ವರಿಗೆ (Chamundeshwari) ಪೂಜೆ ಸಲ್ಲಿಸಿ ನಂತರ ಕೆಲಸವನ್ನು ಆರಂಭಿಸುತ್ತೇನೆ. ನಾನು ಭಕ್ತಾಧಿಗಳ ಭಾವನೆಗಳಿಗಾಗಲಿ ಮನಸ್ಸಿಗಾಗಲಿ ನೋವುಂಟು ಮಾಡುವ ಕೆಲಸ ಮಾಡುವುದಿಲ್ಲ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಆಚಾತುರ್ಯ ನಡೆಯೋದಿಲ್ಲ ಎಂದು ರಕ್ಷಕ್ ಕ್ಷಮೆ ಕೋರಿದ್ದಾರೆ.

     

    View this post on Instagram

     

    A post shared by rakshak sena (@rakshak_bullet)

    ಅಂದಹಾಗೆ, ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ರಿಯಾಲಿಟಿ ಶೋವೊಂದರ ಸ್ಕಿಟ್‌ವೊಂದರಲ್ಲಿ ತಾಯಿ ಚಾಮುಂಡೇಶ್ವರಿ ವಿಚಾರ ಸಂಬಂಧ ಹೇಳಿದ್ದ ಡೈಲಾಗ್ ಒಂದು ವಿವಾದಕ್ಕೆ ಕಾರಣವಾಗಿತ್ತು. ಇದು ಸೋಷಿಯಲ್ ಮಿಡಿಯಾದಲ್ಲೂ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದು ಹಿಂದೂ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಶೋನಲ್ಲಿ ಸ್ಟೇಜ್ ಮೇಲೆ ರಕ್ಷಕ್ ಬುಲೆಟ್ ಅವರು ಸಹನಟಿಗೆ ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟು ಶರ್ಟು ಹಾಕೊಂಡು ಸ್ವಿಜರ್‌ಲ್ಯಾಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾರೆ ಅನ್ನಿಸ್ತಿದೆ ಎಂದು ಡೈಲಾಗ್ ಹೊಡೆದಿದ್ದರು. ಸಹನಟಿಗೆ ಡೈಲಾಗ್ ಮೂಲಕ ಹೊಗಳುವ ಭರದಲ್ಲಿ ರಕ್ಷಕ್ ಯಡವಟ್ಟು ಮಾಡಿಕೊಂಡಿದ್ದರು. ಇದು ಹಿಂದೂ ಹೋರಾಟಗಾರರ ಕೋಪಕ್ಕೆ ಕಾರಣವಾಗಿತ್ತು.

  • ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ

    ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ

    ಚ್ಚು ಹಿಡಿದು ರೀಲ್ಸ್ ಮಾಡಿದ ಹಿನ್ನೆಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ (Vinay Gowda) ಹಾಗೂ ರಜತ್‌ರನ್ನು (Rajath) ಅರೆಸ್ಟ್ ಮಾಡಲಾಗಿದೆ. ಹಾಗಾಗಿ ಪ್ರಕರಣದ ಕುರಿತು ವಿನಯ್ ಸ್ಪಷ್ಟನೆ ನೀಡಿದ್ದಾರೆ. ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದು ವಿಡಿಯೋದಲ್ಲಿ ವಿನಯ್ ಕ್ಲ್ಯಾರಿಟಿ  ಕೊಟ್ಟಿದ್ದಾರೆ.

    ರೀಲ್ಸ್‌ನಲ್ಲಿ ಹಿಡಿದ ಮಚ್ಚಿಗೂ ಪೊಲೀಸರ ವಶದಲ್ಲಿರೋ ಮಚ್ಚಿಗೂ ವ್ಯತ್ಯಾಸವಿದೆ. ಹಾಗಾಗಿ ಈ ಕುರಿತು ವಿನಯ್ ಮಾತನಾಡಿ, ನಾವು ನಿನ್ನೆ ಪೊಲೀಸ್ ಸ್ಟೇಷನ್‌ನಲ್ಲಿದ್ದಾಗ ಅವರು ತಂದಿರೋ ಲಾಂಗ್ ಎಕ್ಸ್‌ಚೇಂಜ್ ಆಗಿರಬಹುದು. ಇದರ ಬಗ್ಗೆ ನಮಗೆ ತಿಳಿದಿಲ್ಲ. ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶ ಇರಲಿಲ್ಲ. ಸೆಟ್‌ನಲ್ಲಿ ಸಾಕಷ್ಟು ಆ ರೀತಿ ಮಚ್ಚುಗಳಿರುತ್ತವೆ. ಇದನ್ನೂ ಓದಿ:ವಿನಯ್ ರೀಲ್ಸ್ ತಂದ ಆಪತ್ತು: ‘ಡೆವಿಲ್’ ಚಿತ್ರೀಕರಣಕ್ಕೆ ಮತ್ತೆ ತೊಂದರೆ?

    ಪೊಲೀಸರಿಗೆ ಕೊಟ್ಟಿರೊ ಮಚ್ಚು ಬೇರೆ ಆಗಿರೋದು ನನಗೆ ಗೊತ್ತಿಲ್ಲ. ಇದರಲ್ಲಿ ತುಂಬಾ ಕನ್ಪ್ಯೂಷನ್ ಇದೆ. ರೀಲ್ಸ್ ವೇಳೆ, ರಜತ್ ಹಿಡಿದುಕೊಂಡಿದ್ದ ಮಚ್ಚಿನಲ್ಲೇ ನಾನು ರೀಲ್ಸ್ ಮಾಡಿದ್ದೇನೆ. ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿಲ್ಲ ಎಂದು ಆ ಕಾರಣಕ್ಕೆ ಈ ವಿಡಿಯೋ ಮಾಡ್ತಿರೋದಾಗಿ ವಿನಯ್ ಗೌಡ ಹೇಳಿಕೆ ನೀಡಿದ್ದಾರೆ.

    ಇನ್ನೂ ಆರೋಪಿಗಳಾದ ವಿನಯ್ ಮತ್ತು ರಜತ್‌ರನ್ನು ರೀಲ್ಸ್ ಮಾಡಿದ ಜಾಗದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಇಂದೇ ಇಬ್ಬರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

  • ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ಚ್ಚು ಹಿಡಿದು ರೀಲ್ಸ್ ಮಾಡಿದಕ್ಕೆ ಬಂಧನಕ್ಕೊಳಗಾಗಿರುವ ವಿನಯ್ (Vinay Gowda) ಮತ್ತು ರಜತ್‌ರನ್ನು (Rajath) ಬಸವೇಶ್ವರ ನಗರದ ಪೊಲೀಸರು ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಇದನ್ನೂ ಓದಿ:ರೀಲ್ಸ್‌ ವಿವಾದ: ಬಿಡುಗಡೆಯಾಗಿದ್ದ ರಜತ್‌, ವಿನಯ್‌ರನ್ನು ಮತ್ತೆ ಬಂಧಿಸಿದ ಪೊಲೀಸರು

    ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸುವಾಗ ಯಾವ ಜಾಗದಲ್ಲಿ ವಿಡಿಯೋ ಮಾಡಿದ್ದು? ನಿಮಗೆ ಮಚ್ಚು ಕೊಟ್ಟೋರು ಯಾರು? ಅನ್ನೋದನ್ನು ವಿನಯ್ ಮತ್ತು ರಜತ್‌ರಿಂದ ಕೇಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ, ಮಹಜರಿನ ದೃಶ್ಯವನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

    ಮಹಜರಿನ ಬಳಿಕ ರೀಲ್ಸ್‌ಗೆ ಬಳಸಿದ್ದ ಲಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಕೋರ್ಟ್‌ಗೆ ಇಬ್ಬರನ್ನೂ ಹಾಜರು ಪಡಿಸಲಿದ್ದಾರೆ.