Tag: BBCI

  • ಕೊಹ್ಲಿ ನಾಯಕತ್ವ ತ್ಯಜಿಸಲು ಇದೇ ಕಾರಣ!

    ಕೊಹ್ಲಿ ನಾಯಕತ್ವ ತ್ಯಜಿಸಲು ಇದೇ ಕಾರಣ!

    ಮುಂಬೈ: ಟೀಂ ಇಂಡಿಯಾದ ಮೂರು ಮಾದರಿ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ಗುಡ್ ಬೈ ಹೇಳಲು ಕಾರಣವಾದ ಅಂಶಗಳು ಈಗಾಗಲೇ ಚರ್ಚೆಯಾಗುತ್ತಿದೆ. ಕ್ರಿಕೆಟ್ ವಲಯದಲ್ಲಿ ಕೊಹ್ಲಿ ನಾಯಕತ್ವ ತ್ಯಜಿಸಲು ಈ ಮೂರು ಕಾರಣಗಳು ಬಲವಾಗಿ ಕೇಳಿಬರುತ್ತಿದೆ.

    ಹೌದು ಕೊಹ್ಲಿ ಟಿ20 ನಾಯಕತ್ವವನ್ನು ಸ್ವಇಚ್ಚೆಯಿಂದ ತ್ಯಜಿಸಿದರೆ, ಏಕದಿನ ನಾಯಕತ್ವದಿಂದ ಬಿಸಿಸಿಐ ಕೆಳಗಿಳಿಸಿತ್ತು. ಇದೀಗ ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ಸ್ವಇಚ್ಚೆಯಿಂದ ತ್ಯಜಿಸಿ ತಂಡದಲ್ಲಿ ಆಟಗಾರನಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಆದರೆ ಕೊಹ್ಲಿ ಟೆಸ್ಟ್ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಈ ಹಿಂದೆ ಹೇಳಿದ್ದರು. ಆದರೆ ಇದೀಗ ದಿಢೀರ್ ಆಗಿ ಗುಡ್ ಬೈ ಹೇಳಲು ಈ ಮೂರು ಕಾರಣಗಳು ಕೇಳಿಬರುತ್ತಿದೆ. ಇದನ್ನೂ ಓದಿ: ಸರಿಯಾಗಿ ನೆನಪಿದೆ.. ನೀವು ಭಾರತದ ನಾಯಕರಾಗ್ತೀರಿ ಎಂದಿದ್ದು: ಅನುಷ್ಕಾ ಶರ್ಮಾ

    ಕೊಹ್ಲಿ ಟಿ20 ವಿಶ್ವಕಪ್ ಸೋತಿದ್ದು ಮೊದಲ ಕಾರಣವಾದರೆ, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಸೋಲು 2ನೇ ಕಾರಣವೆಂದು ಈಗಾಗಲೇ ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಇನ್ನೂ ಕೊಹ್ಲಿ ಆಪ್ತ ಮೂಲಗಳ ಪ್ರಕಾರ ಟೀಂ ಇಂಡಿಯಾದಲ್ಲಿ ಮೂರು ಮಾದರಿ ತಂಡಕ್ಕೂ ಒಬ್ಬನೇ ನಾಯಕನಾಗಿದ್ದರೆ ಉತ್ತಮ ಎನ್ನುವ ಅಭಿಪ್ರಾಯ ಇದೆ. ಹಾಗಾಗಿ ತಂಡದ ಶ್ರೇಯಸ್ಸಿಗಾಗಿ ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಗಳಿವೆ. ಇದನ್ನೂ ಓದಿ: ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು

    ಏನೇ ಆದರೂ ಕೊಹ್ಲಿ ಮಾತ್ರ ತಂಡದ ಯಶಸ್ಸಿಗಾಗಿ ಆಟಗಾರನಾಗಿ ತಂಡದಲ್ಲಿ ಮುಂದುವರಿಯುವ ನಿರ್ಧಾರದ ಬಗ್ಗೆ ಅಭಿಮಾನಿಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಅಲ್ಲದೇ ಕೊಹ್ಲಿ ತನ್ನ ಕ್ಯಾಪ್ಟನ್ ಗುರು ಧೋನಿಯಂತೆ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬ ಮಾತು ಮಾರ್ದನಿಸುತ್ತಿದೆ. ಇದನ್ನೂ ಓದಿ: ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!

  • ಸರಿಯಾಗಿ ನೆನಪಿದೆ.. ನೀವು ಭಾರತದ ನಾಯಕರಾಗ್ತೀರಿ ಎಂದಿದ್ದು: ಅನುಷ್ಕಾ ಶರ್ಮಾ

    ಸರಿಯಾಗಿ ನೆನಪಿದೆ.. ನೀವು ಭಾರತದ ನಾಯಕರಾಗ್ತೀರಿ ಎಂದಿದ್ದು: ಅನುಷ್ಕಾ ಶರ್ಮಾ

    ಮುಂಬೈ: ನನಗೆ ಸರಿಯಾಗಿ ನೆನಪಿದೆ ನೀವು 2014ರಲ್ಲಿ ಧೋನಿ ನಿವೃತ್ತಿ ಘೋಷಿಸುತ್ತಾರೆ. ನಾನು ಟೀಂ ಇಂಡಿಯಾದ ನಾಯಕನಾಗುತ್ತೇನೆ ಎಂದಿದ್ದು ಎಂದು ನಟಿ ಅನುಷ್ಕಾ ಶರ್ಮಾ, ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಅವರ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

    ವಿರಾಟ್ ಕೊಹ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುಷ್ಕಾ ಶರ್ಮಾ, ನೀವು 2014ರಲ್ಲಿ ನನಗೆ ಸಂದೇಶ ಕಳುಹಿಸಿದ್ರಿ, ಎಮ್‍ಎಸ್, ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಹೇಳುತ್ತಿದ್ದಾರೆ. ನಾನು ಟೀಂ ಇಂಡಿಯಾದ ನಾಯಕನಾಗುತ್ತಿದ್ದೇನೆ ಎಂದು ಸಂದೇಶ ಕಳುಹಿಸಿ ನಾನು, ನೀವು, ಎಮ್‍ಎಸ್ ಮಾತನಾಡಿ ನಿಮ್ಮ ಗಡ್ಡ ಎಷ್ಟು ಬೇಗ ಬಿಳಿಯಾಗುತ್ತಿದೆ ಎಂದು ಜೋಕ್ ಮಾಡಿದ್ದೆ. ಇದೀಗ ನಿಮ್ಮ ಗಡ್ಡ ತುಂಬಾ ಬಿಳಿಯಾಗಿದೆ. ಜೊತೆಗೆ ನಿಮ್ಮ ಬೆಳವಣಿಗೆ ಕೂಡ ಹೆಚ್ಚಾಗಿದೆ. ನೀವು ಭಾರತ ರಾಷ್ಟ್ರೀಯ ತಂಡದ ನಾಯಕರಾದ ಬಳಿಕ ತಂಡದ ಬೆಳವಣಿಗೆ ಕಂಡು ನನಗೆ ತುಂಬಾ ಹೆಮ್ಮೆ ಇದೆ. ಇದನ್ನೂ ಓದಿ: ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು

     

    View this post on Instagram

     

    A post shared by AnushkaSharma1588 (@anushkasharma)

    ನಿಮ್ಮ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. 2014ರಲ್ಲಿ ನೀವು ನಾಯಕತ್ವ ವಹಿಸಿಕೊಂಡಾಗ ತುಂಬಾ ಅಗ್ರೆಸ್ಸಿವ್ ಆಗಿ ಇದ್ರಿ, ತಂಡಕ್ಕಾಗಿ ಶ್ರಮಿಸಿದ್ದೀರಿ ನಿಮ್ಮ ಪ್ರದರ್ಶನ ನನಗೆ ತುಂಬಾ ಖುಷಿ ನೀಡಿದೆ. ನನಗೆ ನಿಮ್ಮ ಮೇಲೆ ತುಂಬಾ ಹೆಮ್ಮೆಯ ಮನೋಭಾವವಿದ್ದು, ಇದೀಗ ನಿಮ್ಮ ಮಗಳು ನಿಮ್ಮ 7 ವರ್ಷಗಳ ಸಾಧನೆಯನ್ನು ಮುಂದೆ ನೋಡಿ ಖುಷಿ ಪಡುತ್ತಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!

  • ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು

    ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು

    ಮುಂಬೈ: ಟೀಂ ಇಂಡಿಯಾದ ಎಲ್ಲಾ ಮಾದರಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ ಹೇಳಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ನಾಯಕತ್ವ ಅಂತ್ಯದ ಬಗ್ಗೆ ಕಿಚ್ಚು ಹೆಚ್ಚಿದೆ.

    ಟಿ20 ಮತ್ತು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ಕೊಹ್ಲಿ ನಿನ್ನೆ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. 7 ವರ್ಷಗಳ ಕಾಲ ಟೀಂ ಇಂಡಿಯಾವನ್ನು ಮುನ್ನಡೆಸಿದ ಕೊಹ್ಲಿ ಹಲವು ಸಾಧನೆಗಳನ್ನು ಮಾಡಿದ್ದು, ತಮ್ಮ ಅಗ್ರೆಸ್ಸಿವ್ ನಾಯಕತ್ವದಿಂದ ಟೀಂ ಇಂಡಿಯಾವನ್ನು ಯಶಸ್ಸಿನ ಮೆಟ್ಟಿಲಿಗೆ ಏರಿಸಿದ್ದರು. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಟಸ್ಟ್ ಸರಣಿ ಸೋತ ಬೆನ್ನಲ್ಲೇ ನಾಯಕತ್ವ ತ್ಯಜಿಸಿ ಆಟಗಾರನಾಗಿ ತಂಡದಲ್ಲಿ ಮುನ್ನಡೆಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!

    ಕೊಹ್ಲಿ ಟೀಂ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಯ ಚರ್ಚೆ ನಡೆಯುತ್ತಿದ್ದು, ಟೀಂ ಇಂಡಿಯಾದ ಲಯ ಬದಲಿಸಿದ ಶ್ರೇಷ್ಠ ನಾಯಕನ ಯುಗ ಅಂತ್ಯವಾಗಿದೆ. ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ರಾಜೀನಾಮೆ ಕೊಹ್ಲಿ ವೈಯಕ್ತಿಕ ವಿಚಾರ: ಸೌರವ್ ಗಂಗೂಲಿ

    ನಾಯಕನಾಗಿ ನೀವು ಅಭಿಮಾನಿಗಳ ಮನಗೆದ್ದಿದ್ದೀರಿ ಮುಂದೆ ಬ್ಯಾಟಿಂಗ್ ಕಡೆ ಗಮನ ಹರಿಸಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ. ಕೊಹ್ಲಿಗೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಾಸಿಂ ಜಾಫರ್, ಸುನೀಲ್ ಗವಾಸ್ಕರ್ ಸೇರಿದಂತೆ ಹಲವು ದಿಗ್ಗಜ ಆಟಗಾರರು ಶುಭಕೋರಿದ್ದಾರೆ.  ಇದನ್ನೂ ಓದಿ: ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ

    ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. ಒಟ್ಟು 68 ಟೆಸ್ಟ್‌ಗಳಲ್ಲಿ ನಾಯಕನಾಗಿ ಮುನ್ನಡೆಸಿರುವ ಕೊಹ್ಲಿ 40 ಜಯ, 17 ಸೋಲು ಕಂಡು, 58.52% ಗೆಲುವಿನ ಸರಾಸರಿಯೊಂದಿಗೆ ಯಶಸ್ವಿ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. ಧೋನಿ 60 ಪಂದ್ಯಗಳಲ್ಲಿ ನಾಯಕನಾಗಿ 27 ಪಂದ್ಯ ಜಯ ಗಳಿಸಿ ಕೊಹ್ಲಿ ಬಳಿಕದ ಸ್ಥಾನದಲ್ಲಿದ್ದಾರೆ.

    ಟೀಂ ಇಂಡಿಯಾವನ್ನು ಟೆಸ್ಟ್ ರ್‍ಯಾಕಿಂಗ್‍ನಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದ ಕೊಹ್ಲಿ, ಐಸಿಸಿ ಟ್ರೋಫಿ ಜಯಿಸಲು ಮಾತ್ರ ವಿಫಲವಾಗಿದ್ದರು. ಇದನ್ನು ಹೊರತು ಪಡಿಸಿ ಕೊಹ್ಲಿ ಉತ್ತಮವಾಗಿ ನಾಯಕತ್ವವನ್ನು ನಿರ್ವಹಿಸಿ ಇದೀಗ ಮೂರು ಮಾದರಿ ನಾಯಕತ್ವವನ್ನು ತ್ಯಜಿಸಿದ್ದಾರೆ.