Tag: BBC

  • ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ – ಕಾಂಗ್ರೆಸ್‌ನವರು ಸಹ ಶಾಮೀಲು: ಸಿ.ಟಿ ರವಿ ಆರೋಪ

    ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ – ಕಾಂಗ್ರೆಸ್‌ನವರು ಸಹ ಶಾಮೀಲು: ಸಿ.ಟಿ ರವಿ ಆರೋಪ

    ಬೆಂಗಳೂರು: ಗುಜರಾತ್ ಗಲಭೆ ಕುರಿತ ಬಿಬಿಸಿ (BBC) ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಇದೆ‌ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಸಿ.ಟಿ ರವಿಯವರು, ಈಗ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಬಹಳ ಚರ್ಚೆ ಆಗುತ್ತಿದೆ. ಭಾರತ ಸರ್ಕಾರ ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿದೆ.‌ ಆದರೂ ಕೇರಳ, ದೆಹಲಿ ಸೇರಿ ಕೆಲ ರಾಜ್ಯಗಳು ಅದನ್ನು ಡೌನ್‌ಲೋಡ್ ಮಾಡಿ ತೋರಿಸುತ್ತಿವೆ. ಈ ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಇದೆ. ಮೋದಿ (Narendra Modi) ಯಶಸ್ಸು ಸಹಿಸದವರ ಪಿತೂರಿ ಇದಾಗಿದೆ. ಇಂಥ ಪಿತೂರಿ ಎದುರಿಸುವ ಸಾಮರ್ಥ್ಯ ಭಾರತಕ್ಕಿದೆ. ಸಾಕ್ಷ್ಯಚಿತ್ರದ ಹಿಂದೆ ಕಾಂಗ್ರೆಸ್‌ನವರೂ ಇದ್ದಾರೆ ಎಂದು ಆರೋಪಿಸಿದರು.

    ಕಾಂಗ್ರೆಸ್‌ನವರು ನಿರಂತರವಾಗಿ ಹತಾಶೆಗೊಂಡಿದ್ದಾರೆ. ತುಕ್ಡೇ ಗ್ಯಾಂಗ್, ಮೋದಿ ರಾಜಕೀಯ ವಿರೋಧಿಗಳ ಜತೆ ಕಾಂಗ್ರೆಸ್‌ನವರು ಶಾಮೀಲಾಗಿದ್ದಾರೆ. ಮೋದಿ ವಿರುದ್ಧದ ಅಂತಾರಾಷ್ಟ್ರೀಯ ಪಿತೂರಿಗೆ ಕಾಂಗ್ರೆಸ್‌ನವರು ಸಹ ಕೈ ಜೋಡಿಸಿದ್ದಾರೆ. ಮೋದಿಯವರು ಅತ್ಯಂತ ಲೋಕಪ್ರಿಯ ನಾಯಕ ಅಂತ ಹಲವು ಸರ್ವೇ ಹೇಳಿವೆ. ಕೋವಿಡ್ ಲಸಿಕೆ, ಯೋಗ ಮೂಲಕ ಭಾರತದ ಲೋಕಪ್ರಿಯತೆಯನ್ನು ಜಗತ್ತಿಗೆ ತೋರಿಸಿದ್ದಾರೆ. ಈಗ ಸಾಕ್ಷ್ಯಚಿತ್ರಕ್ಕೆ ಆ್ಯಂಟಿ ಮೋದಿ ಗ್ಯಾಂಗ್‌ಗಳ ಸಹಕಾರ ಪಡೆಯಲಾಗಿದೆ ಎಂದು ಹೇಳಿದರು.

    ನಾನಾವತಿ ಆಯೋಗ, ಷಾ ಕಮಿಟಿಗಳ ವರದಿಯನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಿಲ್ಲ.‌ ಗಲಭೆಯಲ್ಲಿ ಮೋದಿಯವರ ಪಾತ್ರ ಇಲ್ಲ ಅಂತ ಸಾಬೀತಾದ‌ ಮೇಲೂ ಪಿತೂರಿ ಮಾಡಲಾಗುತ್ತಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರ ಇಲ್ಲ ಅಂತ ಕ್ಲೀನ್ ಚಿಟ್ ಕೊಟ್ಟಿತ್ತು.‌ ಇಷ್ಟಾದರೂ ಈಗ ಈ ಸಾಕ್ಷ್ಯಚಿತ್ರ ತಂದಿರುವುದರ ಹಿಂದಿನ ಉದ್ದೇಶ ಅರ್ಥ ಮಾಡ್ಕೋಬೇಕು.‌ ಆ್ಯಂಟಿ ಮೋದಿ ಗ್ಯಾಂಗ್, ರಾಜಕೀಯ ವಿರೋಧಿಗಳು, ತುಕ್ಡೇ ಗ್ಯಾಂಗ್ ಸೇರಿ ರೂಪಿಸಿಸಿರುವ ಪಿತೂರಿ ಇದು. ವಿದೇಶಿಯರು ಭಾರತದ ಹೆಸರು ಹಾಳಾಗಬೇಕು ಅಂತ ಕಾಯುತ್ತಿದ್ದಾರೆ.‌ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ಮೋದಿ ಉತ್ತಮ ಬಾಂಧವ್ಯ, ಸಹಕಾರ ಸಂಬಂಧ ಹೊಂದಿದ್ದಾರೆ. ಭಾರತದ ಜತೆಗೂ ಸಂಬಂಧ ಉತ್ತಮವಾಗಿದೆ. ಇದನ್ನು ಕೆಲವು ಜಾಗತಿಕ ಶಕ್ತಿಗಳು ಸಹಿಸಿಕೊಳ್ಳುತ್ತಿಲ್ಲ. ‌ಭಾರತದ ಶಕ್ತಿವೃದ್ಧಿ ಸಹಿಸದ ಅಂತರಾಷ್ಟ್ರೀಯ ಶಕ್ತಿಗಳ ಜತೆ ನಮ್ಮ ತುಕ್ಡೇ ಗ್ಯಾಂಗ್, ಆ್ಯಂಟಿ ಮೋದಿ ಟೀಂ ಸೇರಿ ಪಿತೂರಿ ಹೆಣೆಯಲಾಗಿದೆ ಎಂದು ತಿಳಿಸಿದರು.

    ಆ ಸಾಕ್ಷ್ಯ ಚಿತ್ರ ನಾನು ನೋಡಿಲ್ಲ. ಆದರೆ ನಾನು ತಿಳಿದುಕೊಂಡ ಪ್ರಕಾರ ಆ ಸಾಕ್ಷ್ಯಚಿತ್ರದಲ್ಲಿ ಮಾತಾಡ್ಸಿರೋದೆಲ್ಲ ಈ ತುಕ್ಡೇ ಗ್ಯಾಂಗ್‌ನವರನ್ನೇ ಎಂದು ಹೇಳಿದರು.

    ಗೋವಾ ಮಾಜಿ ಸಚಿವನ ಹೇಳಿದ್ರು ಅಂತ ನಾವು ದುರ್ಯೋಧನ ಆಗ್ತೀವಾ?: ಕರ್ನಾಟಕವನ್ನು ದುರ್ಯೋಧನನಿಗೆ ಹೋಲಿಸಿದ ಗೋವಾ ಬಿಜೆಪಿಯ ಮಾಜಿ ಸಚಿವ ದಯಾನಂದ ಮಾಂಡ್ರೇ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು, ಮಹದಾಯಿ ಯೋಜನೆ ವಿಚಾರದಲ್ಲಿ ಗೋವಾದವರ ಆತಂಕ ದೂರ ಮಾಡಬೇಕು. ಮಹದಾಯಿ ನದಿಯೇ ಬತ್ತಿ‌ ಹೋಗ್ತಿದೆ ಅಂತ ಅಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಆದರೆ ಇದು ಸುಳ್ಳು, ಹಾಗಿಲ್ಲ ಪರಿಸ್ಥಿತಿ. ನಾವು ಕುಡಿಯುವ ನೀರಿಗೆ ಮಾತ್ರ ಮಹದಾಯಿ ಯೋಜನೆಗೆ ಮುಂದಾಗಿದ್ದೇವೆ. ಇದನ್ನು ಗೋವಾದವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಬಿಜೆಪಿ ಮಾಜಿ ಸಚಿವ ಮಾಂಡ್ರೇ ಅವರು ದುರ್ಯೋಧನ ಅಂತ ಹೇಳಿದ್ದಾರೆ ಅಂದ್ರೆ ನಾವು ದುರ್ಯೋಧನ ಆಗ್ತೀವಾ? ದುರ್ಯೋಧನ ಆಗಲು ಸಾಧ್ಯನಾ? ಗೋವಾದವರಿಗೆ ಮಹದಾಯಿಯಿಂದ ತೊಂದರೆ ಆಗಲ್ಲ, ಅವರಿಗೆ ಏನೂ ಭಯ ಬೇಡ ಎಂದು ಸ್ಪಷ್ಟಪಡಿಸಿದರು.

    ಮಂಡ್ಯ ವಿದ್ಯಮಾನ ಗಂಭೀರ ಅಲ್ಲ: ಮಂಡ್ಯದಲ್ಲಿ ಅಶೋಕ್ ವಿರುದ್ಧ ಕಾರ್ಯಕರ್ತರ ಆಕ್ರೋಶ ವಿಚಾರವಾಗಿ ಮಾತಾಡಿದ ಸಿ ಟಿ ರವಿ, ಅಶೋಕ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಯಾರೋ ವಿರೋಧಿಸ್ತಾರೆ ಅಂದ್ರೆ ಅದನ್ನು ಗಂಭೀರವಾಗಿ ಪರಿಗಣಿಸೋದು ಬೇಡ. ಯಾರು ಇದ್ದಾರೆ ಇದರ ಹಿಂದೆ, ಹಿನ್ನೆಲೆ ಏನು ಅಂತ ನಾವೂ ಯೋಚನೆ ಮಾಡುತ್ತೇವೆ.‌ ನಮಗೆ ಯಾವ ಒಳ ಒಪ್ಪಂದವೂ ಯಾರ ಜತೆಗೂ ಇಲ್ಲ. ಅಶೋಕ್ ಅವರಿಗೆ ವಿರೋಧ ಬರುತ್ತಿದೆ ಅನ್ನೋದಕ್ಕಿಂತ ಅವರನ್ನು ದೊಡ್ಡ ಪ್ರಮಾಣದಲ್ಲಿ ಸ್ವಾಗತವನ್ನೂ ಮಂಡ್ಯ ಕಾರ್ಯಕರ್ತರು ಮಾಡಿಕೊಂಡರು. ಆ ಸ್ವಾಗತವನ್ನೂ ನಾವು ನೋಡಿದ್ದೇವೆ ಎಂದು ಹೇಳಿದರು.

    ಪಕ್ಷದ ನೀತಿ, ಸಿದ್ಧಾಂತ ಕೆಲವರಿಗೆ ಅರ್ಥವಾಗೋದು ನಿಧಾನ: ಬೆಳಗಾವಿ ಬಣ ಸಂಘರ್ಷಕ್ಕೆ ತೆರೆ ಎಳೆಯಲು ಇಂದು (ಶನಿವಾರ) ರಾತ್ರಿ ಅಮಿತ್ ಶಾ ಸಭೆ ಕರೆದ ಬಗ್ಗೆ ಮಾತಾಡಿದ ಅವರು, 2006ರವರೆಗೂ ನಮ್ಮ ಪಕ್ಷ ನೀತಿ ಅವಲಂಬಿಸಿತ್ತು. ಆ ನಂತರ ಜಾತಿ ಪ್ರಭಾವ ಹೆಚ್ಚಾಯ್ತು, ಉಪ ಜಾತಿಗಳ ಪ್ರಭಾವ ಹೆಚ್ಚಾಯ್ತು. ಆಮೇಲೆ ವ್ಯಕ್ತಿ ಕೇಂದ್ರಿತ ರಾಜಕಾರಣ ಬಂತು. ಈ ಎಲ್ಲ ನೀತಿಗೆ ಕೆಲವರನ್ನು ತಯಾರು ಮಾಡ್ಬೇಕಾಗುತ್ತೆ. ಕೆಲವರಿಗೆ ನಮ್ಮ ಪಕ್ಷದ ನೀತಿ ಸಿದ್ಧಾಂತಗಳನ್ನು ಅರ್ಥ ಮಾಡಿಸಬೇಕಾಗುತ್ತೆ. ಇದರಲ್ಲಿ ‌ಅವು ಯಶಸ್ವಿಯಾಗುವ ವಿಶ್ವಾಸ ಇದೆ. ನಮಗೆ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ರಾಜಕಾರಣ ಅಗತ್ಯ. ವ್ಯಕ್ತಿಗತ ಹಿತಾಸಕ್ತಿಯ ರಕ್ಷಣೆಯೂ ಇದರಿಂದ ಆಗುತ್ತದೆ. ಪಕ್ಷದ ನೀತಿ ಸಿದ್ಧಾಂತಗಳನ್ನು ಕೆಲವರು ಬೇಗ ಅರ್ಥ ಮಾಡ್ಕೋತಾರೆ, ಕೆಲವರು ನಿಧಾನ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಮಾತಾಡಿದರು.‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ಕುರಿತ BBC ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾದ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

    ಮೋದಿ ಕುರಿತ BBC ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾದ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಂಬಂಧಿಸಿದ ಬಿಬಿಸಿ (BBC) ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ (Jamia Millia Islamia University) ಮೂವರು ಎಡಪಂಥೀಯ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾವು ಕ್ಯಾಂಪಸ್‌ನಲ್ಲಿ ಸಾಕ್ಷ್ಯಚಿತ್ರ ಸ್ಕ್ರೀನಿಂಗ್‌ ಮಾಡಲಾಗುವುದು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದನ್ನು ಗಮನಿಸಿ ತಕ್ಷಣ ಎಚ್ಚೆತ್ತ ವಿವಿ ಆಡಳಿತ ಮಂಡಳಿ, ಕ್ಯಾಂಪಸ್‌ನಲ್ಲಿ ಯಾವುದೇ ಅನಧಿಕೃತ ಕೂಟಗಳಿಗೆ ಅವಕಾಶ ಕಲ್ಪಿಸದಿರಲು ಕ್ರಮವಹಿಸಿದೆ. ಜೊತೆಗೆ ಪೊಲೀಸರು, ಅಶ್ರುವಾಯು ದಳ ಸಿಬ್ಬಂದಿ ಕೂಡ ದೆಹಲಿ ಕಾಲೇಜು ಗೇಟ್‌ ಬಳಿ ಜಮಾಯಿಸಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರಕ್ಕೆ ವಿರೋಧ – ಟೀಕೆಗೆ ಗುರಿಯಾಗಿದ್ದ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್‌ಗೆ ರಾಜೀನಾಮೆ

    ಪ್ರಧಾನಿ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಗಲಭೆ (2002 – ಗೋಧ್ರಾ ಹತ್ಯಾಕಾಂಡ) ಆಧರಿಸಿ ಬಿಬಿಸಿ ಸಾಕ್ಷ್ಯಚಿತ್ರ ಮಾಡಿದೆ. ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದು, ಸಾಮಾಜಿಕ ಮಾಧ್ಯಮ ಕಂಪನಿಗಳು ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಆದರೆ ಕೇಂದ್ರದ ಧೋರಣೆಗೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿವೆ. ಇದು ಘೋರ ಸೆನ್ಷಾರ್‌ಶಿಪ್‌ ಎಂದು ಕಿಡಿಕಾರಿವೆ.

    ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸಂಜೆ ವಿದ್ಯಾರ್ಥಿಗಳ ವಿಭಾಗವು ಸಾಕ್ಷ್ಯಚಿತ್ರ ಸ್ಕ್ರೀನಿಂಗ್ ಮಾಡಲು ಮುಂದಾಗಿತ್ತು. ಆದರೆ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಇಂಟರ್ನೆಟ್ ಮತ್ತು ವಿದ್ಯುತ್ ಎರಡೂ ಸ್ಥಗಿತಗೊಂಡಿದ್ದರಿಂದ ತೊಂದರೆಯಾಯಿತು. ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಜೆಎನ್‌ಯು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಈ ಕ್ರಮವು ಕ್ಯಾಂಪಸ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ದಂಗಲ್ – ಜೆಎನ್‍ಯುನಲ್ಲಿ ಇಂಟರ್‌ನೆಟ್, ವಿದ್ಯುತ್ ಸ್ಥಗಿತ

    ಏನಿದು ಗೋಧ್ರಾ ಹತ್ಯಾಕಾಂಡ?
    ಗುಜರಾತ್‌ನ ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 59 ಕರಸೇವಕರು ಸುಟ್ಟು ಹೋಗಿದ್ದರು. ಇದಕ್ಕೆ ಪ್ರತಿಕಾರವಾಗಿ ಗುಜರಾತ್‌ನ ಅನೇಕ ಕಡೆಗಳಲ್ಲಿ ಕೋಮು ಗಲಭೆ ನಡೆಯಿತು. ಅದರಲ್ಲಿ 1,200 ಮಂದಿ ಹತ್ಯೆಯಾದರು. ಸತ್ತವರ ಪೈಕಿ ಬಹುತೇಕರು ಮುಸ್ಲಿಮರು. ಗುಜರಾತ್‌ ಗಲಭೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದರು. ಗಲಭೆ ನಿಯಂತ್ರಣಕ್ಕೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ಸಾಕ್ಷ್ಯಚಿತ್ರಕ್ಕೆ ವಿರೋಧ – ಟೀಕೆಗೆ ಗುರಿಯಾಗಿದ್ದ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್‌ಗೆ ರಾಜೀನಾಮೆ

    ಮೋದಿ ಸಾಕ್ಷ್ಯಚಿತ್ರಕ್ಕೆ ವಿರೋಧ – ಟೀಕೆಗೆ ಗುರಿಯಾಗಿದ್ದ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್‌ಗೆ ರಾಜೀನಾಮೆ

    ನವದೆಹಲಿ: 2002ರ ಗುಜರಾತ್‌ ಗಲಭೆಗೆ (Gujarat Riots) ಸಂಬಂಧಿಸಿದ ಬಿಬಿಸಿ (BBC) ವಿವಾದಾತ್ಮಕ ಸಾಕ್ಷ್ಯಾಚಿತ್ರದ ವಿರುದ್ಧ ಮಾತನಾಡಿ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದ, ಕಾಂಗ್ರೆಸ್‌ ಹಿರಿಯ ನಾಯಕ ಎ.ಕೆ.ಆ್ಯಂಟನಿ (A.K.Antony) ಪುತ್ರ ಅನಿಲ್‌ ಕೆ.ಆ್ಯಂಟನಿ (Anil k Antony) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

    ಕೇರಳದಲ್ಲಿ (Kerala) ಕಾಂಗ್ರೆಸ್‌ನ (Congress) ಸಾಮಾಜಿಕ ಮಾಧ್ಯಮ ಕೋಶದ ಭಾಗವಾಗಿದ್ದ ಅನಿಲ್ ಆ್ಯಂಟನಿ, ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದಂತೆ ಬಿಬಿಸಿ ನಿರ್ಮಿಸಿರುವ ʼಇಂಡಿಯಾ: ದಿ ಮೋದಿ ಕ್ವೆಶ್ಚನ್‌ʼ (India: The Modi Question) ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಟ್ವೀಟ್‌ ಮಾಡಿದ್ದರು. ಅದಕ್ಕೆ ಕಾಂಗ್ರೆಸ್‌ ಪಕ್ಷದಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅನಿಲ್‌ ಆ್ಯಂಟನಿ ಪಕ್ಷದ ತಮ್ಮ ಎಲ್ಲಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ದಂಗಲ್ – ಜೆಎನ್‍ಯುನಲ್ಲಿ ಇಂಟರ್‌ನೆಟ್, ವಿದ್ಯುತ್ ಸ್ಥಗಿತ

    ಟ್ವೀಟ್‌ ಮೂಲಕ ರಾಜೀನಾಮೆ ಘೋಷಿಸಿರುವ ಅನಿಲ್. “ನಾನು ಕಾಂಗ್ರೆಸ್‌ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದೇನೆ. ಬಿಬಿಸಿ ಸಾಕ್ಷ್ಯಚಿತ್ರ ವಿರುದ್ಧ ಟ್ವೀಟ್‌ ಮಾಡಿದ್ದಕ್ಕೆ ಅಸಹಿಷ್ಣುತೆ ಕರೆಗಳು ಮತ್ತು ಫೇಸ್‌ಬುಕ್‌ನಲ್ಲಿ ದ್ವೇಷ/ನಿಂದನೆ ಬರುತ್ತಿದೆ” ಎಂದು ತಿಳಿಸಿದ್ದಾರೆ.

    “ಭಾರತದ ವಿರುದ್ಧ ಪೂರ್ವಾಗ್ರಹಗಳ ಸುದೀರ್ಘ ಇತಿಹಾಸ ಹೊಂದಿರುವ ರಾಜ್ಯ ಪ್ರಾಯೋಜಿತ ಚಾನೆಲ್ ಬಿಬಿಸಿ” ಎಂದು ಅನಿಲ್‌ ಆ್ಯಂಟನಿ ಸಾಕ್ಷ್ಯಚಿತ್ರದ ವಿರುದ್ಧ ಟ್ವೀಟ್‌ ಮಾಡಿ ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಅನಿಲ್ ಆ್ಯಂಟನಿ ತಂದೆ ಎ.ಕೆ.ಆ್ಯಂಟನಿ ಅವರು ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಒಬ್ಬರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕೇಂದ್ರ ರಕ್ಷಣಾ ಸಚಿವರಾಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಬಿಬಿಸಿ (BBC) ರಚಿಸಿರುವ ಸಾಕ್ಷ್ಯಚಿತ್ರ (Documentary) ಪ್ರಸಾರವನ್ನು ಕೇಂದ್ರ ನಿರ್ಬಂಧಿಸಿದ್ದರೂ ಹೈದರಾಬಾದ್ ವಿಶ್ವವಿದ್ಯಾಲಯದ (Hyderabad University) ಕ್ಯಾಂಪಸ್‌ನಲ್ಲಿ ಪ್ರದರ್ಶನ ಮಾಡಿರುವುದಾಗಿ ದೂರು ದಾಖಲಾಗಿದೆ.

    ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ (India: The Modi Question) ಹೆಸರಿನ ಸಾಕ್ಷ್ಯಚಿತ್ರ 2002ರ ಗಲಭೆಯ ಸಂದರ್ಭದ ಗುಜರಾತ್ ನಾಯಕತ್ವದ ಬಗ್ಗೆ ತಪ್ಪು ವರದಿ ಮಾಡಿರುವುದಾಗಿ ವಿವಾದಕ್ಕೀಡಾಗಿತ್ತು. ಈ ಹಿನ್ನೆಲೆ ಕಳೆದ ಶನಿವಾರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಯೂಟ್ಯೂಬ್‌ನಲ್ಲಿ ಬಿಬಿಸಿ ರಚಿಸಿರುವ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದೆ.

    ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸೋಮವಾರ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಭದ್ರತಾ ಇಲಾಖೆಯಿಂದ ವರದಿಯನ್ನು ನಿರೀಕ್ಷಿಸಲಾಗಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

    ಕೆಲ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನದ ಬಗ್ಗೆ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ನಿರ್ಬಂಧವನ್ನು ಹೇರುವುದಕ್ಕೂ ಮೊದಲೇ ಸ್ಕ್ರೀನಿಂಗ್ ಅನ್ನು ಆಯೋಜನೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಆದೇಶದ 1 ದಿನದ ನಂತರ ಎಂದರೆ ಭಾನುವಾರ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿಲ್ಪಾ ಶೆಟ್ಟಿಗೆ ಹೊಸ ಹೆಸರಿಟ್ಟ ಪತಿ ಕುಂದ್ರಾ

    ಶಿಲ್ಪಾ ಶೆಟ್ಟಿಗೆ ಹೊಸ ಹೆಸರಿಟ್ಟ ಪತಿ ಕುಂದ್ರಾ

    ಮುಂಬೈ: ಬಾಲಿವುಡ್ ಚೆಲುವೆ, ಕುಡ್ಲದ ಶಿಲ್ಪಾ ಶೆಟ್ಟಿಗೆ ಪತಿ ರಾಜ್ ಕುಂದ್ರಾ ಅವರು ‘ಬಿಬಿಸಿ’ ಎಂದು ಹೆಸರನ್ನು ಇಟ್ಟಿದ್ದಾರೆ.

    ಈ ವಿಚಾರ ಸ್ವತಃ ಶಿಲ್ಪಾ ಶೆಟ್ಟಿ ಅವರೇ ಒಪ್ಪಿಕೊಂಡಿದ್ದು, ಹೌದು ನನ್ನ ಪತಿ ರಾಜ್ ಕುಂದ್ರಾ ನನನ್ನು ಬಿಬಿಸಿ ಎಂದು ಕರೆಯುತ್ತಾರೆ. ಬಿಬಿಸಿ ಎಂದರೆ ಬೇರೆ ಅರ್ಥ ಏನೂ ಇಲ್ಲ ಬಿಬಿಸಿ ಎಂದರೆ ಕಂಪ್ಯೂಟರ್ ಬರುವುದಕ್ಕೆ ಮುಂಚೆ ಹುಟ್ಟಿರುವವರು (ಬಾರ್ನ್ ಬಿಫೋರ್ ಕಂಪ್ಯೂಟರ್) ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

    ಇತ್ತೀಚೆಗೆ ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ದಿ ಕಪಿಲ್ ಶರ್ಮಾ ಶೋನಲ್ಲಿ ಈ ವಿಚಾರವನ್ನು ಶಿಲ್ಪಾ ಹಂಚಿಕೊಂಡಿದ್ದಾರೆ. ನನ್ನ ಪತಿ ನನ್ನನ್ನು ಬಿಬಿಸಿ ಎಂಬ ಹೆಸರಿನಿಂದ ಕರೆಯುತ್ತಾರೆ. ಯಾಕೆಂದರೆ ನಾನು ತಂತ್ರಜ್ಞಾನವನ್ನು ಬಳಕೆ ಮಡುವುದರಲ್ಲಿ ಸ್ವಲ್ಪ ಹಿಂದೆ ಇದ್ದೇನೆ. ಆದರಿಂದ ನನ್ನನ್ನು ರಾಜ್ ಕುಂದ್ರಾ ಬಾರ್ನ್ ಬಿಫೋರ್ ಕಂಪ್ಯೂಟರ್ ಎಂದು ಕರೆಯುತ್ತಾರೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.

    ಈ ವೇಳೆ ಈ ಶೋನಲ್ಲಿ ಇದ್ದ ನಟಿ ಅರ್ಚನಾ ಪುರಾನ್ ಸಿಂಗ್ ಅವರು, ನಿಮಗೆ ತಂತ್ರಜ್ಞಾನವನ್ನು ಬಳಸಲು ಬರಲ್ಲ ಎಂದು ಹೇಳುತ್ತೀರಿ. ಆದರೆ ಯಾವಗಲೂ ಇನ್‍ಸ್ಟಾಗ್ರಾಮ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಎಂದು ಶಿಲ್ಪಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಿಲ್ಪಾ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಲು ಬೇಸಿಕ್ ಮಾಹಿತಿ ಇದ್ದರೆ ಸಾಕು ಅದಕ್ಕೆ ಹೆಚ್ಚು ಶ್ರಮ ಹಾಕಬೇಕಿಲ್ಲ ಎಂದಿದ್ದಾರೆ.

    ಆದರೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವಷ್ಟು ಸುಲಭದಲ್ಲಿ ಇಂಟರ್ ನೆಟ್‍ನಲ್ಲಿ ಬೇರೆ ಕೆಲಸ ಮಾಡಲು ನನಗೆ ಬರುವುದಿಲ್ಲ. ಉದಾಹರಣೆಗೆ ನನ್ನ ಮಕ್ಕಳ ಹೋಮ್‍ವರ್ಕ್ ಅನ್ನು ಶಾಲೆಯವರು ನಮಗೆ ಮೇಲ್ ಮಾಡುತ್ತಾರೆ. ನನಗೆ ಅದನ್ನು ತೆಗೆದು ಓದಿ ಅದನ್ನು ಪ್ರಿಂಟ್‍ಔಟ್ ತೆಗೆಯುವ ಕೆಲಸ ಸಖತ್ ಬೇಸರ ತರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪೆನ್, ಬುಕ್‍ಗಳನ್ನು ಯಾರೂ ಬಳುಸುತ್ತಿಲ್ಲ. ಬದಲಿಗೆ ಮೇಲ್, ಪಿಡಿಎಫ್ ಎಂಬ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಿಲ್ಪಾ ಹೇಳಿದ್ದಾರೆ.

    ಆಗ ಮಾತನಾಡಿದ ಅರ್ಚನಾ ಪುರಾನ್ ಸಿಂಗ್ ನನ್ನ ಮಗಳು ಬೆಳೆಯುತ್ತಿದ್ದಾಳೆ. ನಾನು ಕೂಡ ಈ ರೀತಿಯ ಸಂದರ್ಭಕ್ಕೆ ಸಿದ್ಧವಾಗಬೇಕು ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಕಪಿಲ್, ನನಗೆ ಮಕ್ಕಳ ಹೋಮ್‍ವರ್ಕ್ ಅನ್ನು ಪೋಷಕರ ಮೇಲ್‍ಗೆ ಕಳುಹಿಸುತ್ತಾರೆ ಎಂದರೆ ನನಗೆ ನಂಬಲಾಗುತ್ತಿಲ್ಲ. ಹಾಗಾದರೆ ಮೇಲ್ ಐಡಿ ಇಲ್ಲದ ಪೋಷಕರ ಕಥೆ ಏನು ಎಂದು ಹಾಸ್ಯ ಮಾಡಿದ್ದಾರೆ.

    ಸ್ವಲ್ಪ ಸಮಯದಿಂದ ಚಿತ್ರಲೋಕದಿಂದ ದೂರ ಇದ್ದ ಶಿಲ್ಪಾ ಶೆಟ್ಟಿ ಬೆಳ್ಳಿ ತೆರೆ ಮೇಲೆ ಬರಲು ಸಿದ್ಧವಾಗಿದ್ದಾರೆ. ಅವರ ನಟನೆಯ ಹಂಗಾಮಾ-2 ಮತ್ತು ನಿಕಮ್ಮಾ ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿವೆ.

  • ಬಿಬಿಸಿ ಮೇಲೆ 5 ವರ್ಷ ನಿಷೇಧ ಹೇರಿದ ಭಾರತ ಸರ್ಕಾರ

    ಬಿಬಿಸಿ ಮೇಲೆ 5 ವರ್ಷ ನಿಷೇಧ ಹೇರಿದ ಭಾರತ ಸರ್ಕಾರ

    – 5 ವರ್ಷಗಳವರೆಗೆ ದೇಶದ ಯಾವುದೇ ಹುಲಿ ಸಂರಕ್ಷಿತ ಅರಣ್ಯದಲ್ಲಿ ಶೂಟಿಂಗ್ ನಡೆಸುವಂತಿಲ್ಲ

    ನವದೆಹಲಿ: ಮುಂದಿನ 5 ವರ್ಷಗಳವರೆಗೆ ದೇಶದ ಯಾವುದೇ ಹುಲಿ ಸಂರಕ್ಷಿತ ಅರಣ್ಯದಲ್ಲಿ ಚಿತ್ರೀಕರಣ ಮಾಡದಂತೆ ಜಾಗತಿಕ ಸುದ್ದಿ ಸಂಸ್ಥೆ ಬಿಬಿಸಿ ಹಾಗೂ ಪತ್ರಕರ್ತ ಜಸ್ಟಿನ್ ರೋಲಟ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿದೆ.

    ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‍ಟಿಸಿಎ) ಸೋಮವಾರದಂದು ಈ ಆದೇಶ ನೀಡಿದ್ದು, ದೇಶದಲ್ಲಿರುವ 50 ಹುಲಿ ಸಂರಕ್ಷಿತಾರಣ್ಯದಲ್ಲಿ ಮುಂದಿನ 5 ವರ್ಷಗಳ ಕಾಲ ಬಿಬಿಸಿ ಚಿತ್ರೀಕರಣ ಮಾಡುವಂತಿಲ್ಲ ಎಂದು ಹೇಳಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯವೂ ಕೂಡ ರಾಷ್ಟ್ರೀಯ ಉದ್ಯಾನವನ ಹಾಗೂ ಅಭಯಾರಣ್ಯಗಳಿಂದ ಬಿಬಿಸಿಗೆ ನಿಷೇಧ ಹೇರಲು ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕಾರಿಗಳು ಈ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ವರದಿಯಾಗಿದೆ.

    ನಿಷೇಧಕ್ಕೆ ಕಾರಣವೇನು: ಬಿಬಿಸಿ ತಯಾರಿಸಿದ್ದ ಒಂದು ಸಾಕ್ಷ್ಯಚಿತ್ರದಲ್ಲಿ ಕಾಝೀರಂಗಾ ಹುಲಿ ಸಂರಕ್ಷಿತ ಅರಣ್ಯವನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿತ್ತು. ಕಾಝೀರಂಗಾ: ದಿ ಪಾರ್ಕ್ ದಟ್ ಶೂಟ್ಸ್ ಪೀಪಲ್ ಟು ಪ್ರೊಟೆಕ್ಟ್ ರಿನೋಸ್ (ಘೇಂಡಾಮೃಗಗಳನ್ನು ಉಳಿಸಲು ಮನುಷ್ಯರನ್ನು ಶೂಟ್ ಮಾಡೋ ಕಾಝೀರಂಗಾ ಸಂರಕ್ಷಿತಾರಣ್ಯ) ಎಂದು ಬಿಬಿಸಿ ಹೇಳಿತ್ತು. ಸಂರಕ್ಷಿತಾರಣ್ಯದ ಈ ನೀತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

    ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್‍ನ 197ನೇ ಸೆಕ್ಷನ್ ಅಡಿಯಲ್ಲಿ ಶಸ್ತ್ರಾಸ್ತ್ರ ಹೊಂದಿದ ಬೇಟೆಗಾರರನ್ನು ಹತ್ತಿಕ್ಕಲು ಕಾಝೀರಂಗಾ ಅರಣ್ಯದ ಗಾರ್ಡ್‍ಗಳಿಗೆ ಅಸ್ಸಾಂ ಸರ್ಕಾರ ನೀಡಿರುವ ವಿನಾಯಿತಿಯನ್ನು ಸಾಕ್ಷ್ಯ ಚಿತ್ರದಲ್ಲಿ ಕೊಲೆ ಮಾಡಲು ಗುಂಡು ಹಾರಿಸುತ್ತಾರೆ ಎಂಬಂತೆ ತೋರಿಸಲಾಗಿದೆ ಎಂದು ಆರೋಪಿಸಿ ಎನ್‍ಟಿಸಿಎ ಬಿಬಿಸಿಗೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರಿಸಿದ್ದ ಪತ್ರಕರ್ತ ರೋಲಟ್, ನಾವು ಚಿತ್ರೀಕರಣ ಮಾಡುವ ವೇಳೆ ಯಾರಿಗೂ ಮೋಸ ಮಾಡುವ ಪ್ರಯತ್ನ ಮಾಡಿಲ್ಲ. ಸಂರಕ್ಷಿತಾರಣ್ಯದ ಪ್ರಾಣಿ ರಕ್ಷಣಾ ತಂತ್ರವನ್ನು ಕೊಲ್ಲವುದಕ್ಕೆ ಶೂಟ್ ಮಾಡುವುದು ಎಂಬ ಅರ್ಥದಲ್ಲಿ ತೋರಿಸಿಲ್ಲ. ಆದರೆ ನಾವು ಚಿತ್ರೀಕರಣ ಮಾಡುವ ವೇಳೆ ಅನುಮಾನಾಸ್ಪದ ಬೇಟೆಗಾರರನ್ನು ಕೊಲ್ಲುವಂತಹ ಸಂಗತಿ ತಿಳಿಯಿತು ಎಂದು ಹೇಳಿದ್ದಾರೆ. ನೋಟಿಸ್‍ಗೆ ಬಿಬಿಸಿ ಸಮಾಧಾನಕರವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಎನ್‍ಟಿಸಿಎ ನಿಷೇಧ ಹೇರಿದೆ.

    ಬಿಬಿಸಿಯ ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಅಸ್ಸಾಂ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆವು. ಮುಂದೆ ದೇಶದ ಹುಲಿ ಸಂರಕ್ಷಿತಾರಣ್ಯದಲ್ಲಿ ಬಿಬಿಸಿ ಚಿತ್ರೀಕರಣ ಮಾಡದಂತೆ ನಿಷೇಧ ಹೇರಬೇಕೆಂದು ಶಿಫಾರಸ್ಸು ಮಾಡಿದ್ದೆವು. ಚಿತ್ರೀಕರಣ ಮಾಡಲು ಅನುಮತಿ ಪಡೆಯುವ ವೇಳೆ ಅವರು ಯಾವ ವಿಷಯದ ಮೇಲೆ ಚಿತ್ರೀಕರಣ ಮಾಡುತ್ತೇವೆ ಎಂದು ಹೇಳಿದ್ದರೋ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಬಿಸಿಯ ಅಂತಿಮ ಸಾಕ್ಷ್ಯ ಚಿತ್ರ ಸಂಪೂರ್ಣ ಭಿನ್ನವಾಗಿತ್ತು ಎಂದು ಕಾಝೀರಂಗಾ ಸಂರಕ್ಷಿತಾರಣ್ಯದ ಅಧಿಕಾರಿ ಸಂತ್ಯೇಂದ್ರ ಸಿಂಗ್ ಹೇಳಿದ್ದಾರೆ. ಬಿಬಿಸಿ ಯವರು ಅನುಮತಿ ಪಡೆಯುವ ವೇಳೆ ಪ್ರಾಣಿ ಸಂರಕ್ಷಣೆಯಲ್ಲಿ ಭಾರತದ ಪರಿಣಿತಿ ಮತ್ತು ಎದುರಿಸುತ್ತಿರುವ ಸವಾಲಗಳು ಎಂಬ ವಿಷಯದ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿರುವುದಾಗಿ ಹೇಳಲಾಗಿತ್ತು ಎಂದು ವರದಿಯಾಗಿದೆ.

    ಅಸ್ಸಾಂನ ಕಾಝೀರಂಗಾ ಹುಲಿ ಸಂರಕ್ಷಿತಾರಣ್ಯ 800 ಚದರ ಅಡಿಗಳಷ್ಟು ವಿಸ್ತೀರ್ಣವಿದ್ದು. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕೊಂಬಿನ ಘೇಂಡಾ ಮೃಗಗಳಿರುವ ಪ್ರದೇಶವಾಗಿದೆ. ಎನ್‍ಟಿಸಿಎ ನ ಇತ್ತೀಚಿನ ಸಮೀಕ್ಷೆಯ ಪ್ರಕಾರ ಇಲ್ಲಿ 103 ಹುಲಿಗಳಿವೆ.