ಬೀದರ್: ಲೆನೊವೊ ಕಂಪನಿ ಸೇರಿದ ಮೊಬೈಲ್ ರಿಪೇರಿ ಮಾಡುವಾಗ ಅದರ ಬ್ಯಾಟರಿ ಬ್ಲಾಸ್ಟ್ ಆಗಿದ್ದು ಭಾರಿ ಅನಾಹುತ ತಪ್ಪಿದೆ.
ಬೀದರ್ ಜಿಲ್ಲೆಯ ಕಮಲಾನಗರ ಪಟ್ಟಣದ ಓಂ ಶಿವ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಇಂದು ಕೆಲಸಗಾರ ಓಂಕಾರ್ ಮಠಪತಿ ಎಂದಿನಂತೆ ಮೊಬೈಲ್ ರಿಪೇರಿ ಮಾಡುವಾಗ ಸಣ್ಣದೊಂದು ಹೊಗೆ ಕಾಣಿಸಿಕೊಂಡ ಬಳಿಕ ಮೊಬೈಲ್ ಬ್ಯಾಟರಿ ಬ್ಲಾಸ್ಟ್ ಆಗಿದೆ.
ಇದರಿಂದ ಭಯಗೊಂಡ ರಿಪೇರಿ ಮಾಡುವವರು ಮೊಬೈಲ್ ದೂರ ಎಸೆದು ಘಟನೆಯಿಂದ ಪಾರಾಗಿದ್ದಾರೆ. ಓಂಕಾರ್ ರಿಪೇರಿ ಮಾಡುವಾಗ ಈ ಅವಘಡ ಸಂಭವಿಸಿದ್ದು, ಬದುಕಿದೆ ಬಡ ಜೀವ ಎನ್ನುವಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಿಪೇರಿ ಮಾಡುವಾಗ ಸಣ್ಣಗೆ ಹೊಗೆ ಬಂತು ಆದರೂ ರಿಪೇರಿ ಮಾಡಲು ಪ್ರಯತ್ನ ಮಾಡಿದಾಗ ಬ್ಯಾಟರಿ ಬ್ಲಾಸ್ಟ್ ಆಯ್ತು ಎಂದು ರಿಪೇರಿ ಮಾಡಿದ ಓಂಕಾರ್ ಹೇಳಿದ್ದಾರೆ.
ಬೆಂಗಳೂರು: ಯಾವುದೇ ಟೆಂಡರ್ ಕರೆಯದೆ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾಟರಿ ಖರೀದಿಗೆ ಮುಂದಾಗಿದ್ದು, ಈ ಮೂಲಕ ಬಿಎಂಆರ್‌ಸಿಎಲ್ ಅಧಿಕಾರಿಗಳು ಹಗಲು ದರೋಡೆಗಿಳಿದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ನಮ್ಮ ಮೆಟ್ರೋದಲ್ಲಿ ಬ್ಯಾಟರಿ ಖರೀದಿ ವಿಚಾರದಲ್ಲಿ ನಾಲ್ಕು ಕೋಟಿ ರೂಪಾಯಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಯಾವುದೇ ಟೆಂಡರ್ ಕರೆಯದೇ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಕಾನೂನು ಉಲ್ಲಂಘಿಸಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಬಿಎಂಆರ್‌ಸಿಎಲ್ ನ ಸೀನಿಯರ್ ಪಿಆರ್ ಒ ಯಶವಂತ್ ಚವ್ಹಾಣ್, ನೋ ಕಾಮೆಂಟ್ಸ್, ಲೋಗೋ ಹಿಂದಕ್ಕೆ ತೆಗೆಯಿರಿ ಅಂತ ಪೊಗರಿನಿಂದ ಕೈ ಬೆರಳ ಮೂಲಕ ಸನ್ನೆ ಮಾಡಿದ್ದಾರೆ.
ಪವರ್ ಫೆಲ್ಯೂರ್ ಆಗಿ ಮೆಟ್ರೋ ಟ್ರೈನ್ ಎಲ್ಲಿಂದರಲ್ಲಿ ನಿಲ್ಲುತ್ತಿತ್ತು. ಇದೇ ನೆಪ ಮಾಡಿಕೊಂಡ ಬಿಎಂಆರ್‌ಸಿಎಲ್ ಅಧಿಕಾರಿಗಳು ಬ್ಯಾಟರಿ ಖರೀದಿ ಹೆಸರಲ್ಲಿ ಕೋಟಿ ಕೋಟಿ ಜೇಬಿಗಿಳಿಸಿದ್ದಾರೆ. ಈಗಾಗಲೇ ಖರೀದಿಸಿದ್ದ 20 ವರ್ಷ ಆಯಸ್ಸಿನ ಬ್ಯಾಟರಿಗಳು ಹತ್ತೇ ವರ್ಷಕ್ಕೆ ತನ್ನ ಗುಣಮಟ್ಟವನ್ನ ಕಳೆದುಕೊಂಡಿದೆ. ಇದರ ರಿಪ್ಲೇಸ್‍ಮೆಂಟ್ ಹೆಸರಲ್ಲಿ ದೋಖಾ ನಡೆದಿದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ನಮ್ಮ ಮೆಟ್ರೋ ಅಧಿಕಾರಿಗಳ ಹಗಲು ದರೋಡೆಗೆ ಬೆಂಗಳೂರು ಅಭಿವೃದ್ಧಿ ಸಚಿವರು ಕಡಿವಾಣ ಹಾಕುತ್ತಾರ ಎಂದು ಕಾದು ನೋಡಬೇಕಿದೆ.
ಕಾರವಾರ: ರಸ್ತೆ ಬದಿಯ ಸೋಲಾರ್ ಲೈಟಿನ ಬ್ಯಾಟರಿಗಳನ್ನು ಇಬ್ಬರು ಖದೀಮರು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ವಿವಿಧ ಗ್ರಾಮಗಳಲ್ಲಿ ಬ್ಯಾಟರಿ ಕಳ್ಳತನ ಮಾಡಿ ಈ ಕಳ್ಳರು ಎಸ್ಕೇಪ್ ಆಗುತ್ತಿದ್ದರು. ಇದರಿಂದಾಗಿ ಹಲವು ಗ್ರಾಮದಲ್ಲಿ ಬೀದಿ ದೀಪಗಳಿಲ್ಲದೇ ಕಳ್ಳರಿಗೆ ಜನರು ಹಿಡಿ ಶಾಪ ಹಾಕುತ್ತಿದ್ದರು. ಆದ್ರೆ ಒಂದಲ್ಲ ಒಂದು ದಿನ ಸಿಕ್ಕಿಹಾಕಿಕೊಳ್ಳಲೇ ಬೇಕು ಎನ್ನುವ ಹಾಗೆ ಶಿರಾಲಿ ಗ್ರಾಮದಲ್ಲಿ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು ಬುಧವಾರ ರಾತ್ರಿ ಶಿರಾಲಿ ಗ್ರಾಮದ ಕಂಚಿನಬಾಗಿಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸಮೀಪದಲ್ಲಿ ಇಬ್ಬರು ಯುವಕರು ಕಳ್ಳತನ ಮಾಡಿ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಕೂಟಿ ಮೇಲೆ ಬಂದ ಇಬ್ಬರು ಕಳ್ಳರು, ಮೊದಲು ರಸ್ತೆ ಬದಿ ಇದ್ದ ಸೋಲಾರ್ ಬ್ಯಾಟರಿಯ ಮೇಲಿನ ಕವಚವನ್ನು ಬಿಚ್ಚಿದ್ದಾರೆ. ನಂತರ ಒಬ್ಬ ಕಳ್ಳ ಲೈಟ್ ಕಂಬವನ್ನು ಹತ್ತಿ ಬ್ಯಾಟರಿ ಕೆಳಗೆ ಇಳಿಸಿ ಕೊಟ್ಟಿದ್ದಾನೆ. ಬಳಿಕ ಇಬ್ಬರು ಸೇರಿ ಅದನ್ನು ಎತ್ತಿಕೊಂಡು ಸ್ಕೂಟಿ ಮೇಲೆ ಇಟ್ಟುಕೊಂಡು ಪರಾರಿಯಾದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಹಿಂದೆ ತಾಲೂಕಿನ ಮಾರುಕೇರಿ, ಮುರ್ಡೇಶ್ವರದಲ್ಲಿ ಕೂಡ ಬ್ಯಾಟರಿ ಕದಿಯಲಾಗಿತ್ತು. ಈಗ ಬ್ಯಾಟರಿ ಕದ್ದ ಚಾಲಾಕಿ ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಡ: ತಿರುಮಲ ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಎಲೆಕ್ಟ್ರಿಕ್ ಕಾರ್ ಬಳಸಿದ ಮೊದಲ ದೇವಸ್ಥಾನ ಎಂದು ಪರಿಗಣಿತವಾಗಿದೆ.
ದೇವಸ್ಥಾನದ ಸಿಬ್ಬಂದಿಯ ದೈನಂದಿನ ಓಡಾಟಕ್ಕೆ ಎಲೆಕ್ಟ್ರಿಕ್ ಕಾರ್ ಗಳನ್ನು ಬಳಸಲಾಗುತ್ತದೆ. ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ರಾಜ್ಯ ನಿರ್ವಹಣೆಯ ಇಂಧನ ದಕ್ಷತಾ ಸೇವಾ ಕಂಪೆನಿ(ಇಇಎಸ್‍ಎಲ್)ಯು 350 ಎಲೆಕ್ಟ್ರಿಕ್ ಕಾರುಗಳನ್ನು ಸರ್ಕಾರಕ್ಕೆ ಸರಬರಾಜು ಮಾಡಿದೆ. ಇದರಲ್ಲಿ 50 ಕಾರುಗಳನ್ನು ತಿರುಪತಿ ದೇವಸ್ಥಾನದ ಸಿಬ್ಬಂದಿ ಬಳಕೆಗೆ ಕೊಡಲಾಗುತ್ತದೆ.
ಎಲೆಕ್ಟ್ರಿಕ್ ವಾಹನಗಳನ್ನು ತಿಂಗಳ ಆಧಾರದ ಮೇಲೆ ಒಪ್ಪಂದದ ಪ್ರಕಾರ ಇಇಎಸ್‍ಎಲ್ ನಿಂದ ಪಡೆಯಲಾಗುತ್ತದೆ. ಮೊದಲಿಗೆ 50 ವಾಹನಗಳನ್ನು ರಾಜ್ಯಾದ್ಯಂತ ಆಯ್ಕೆ ಮಾಡಲಾದ ಜಾಗಗಳಲ್ಲಿ ಬಳಸಲಾಗುತ್ತದೆ. ಪ್ರತಿ ವಾಹನಕ್ಕೆ ತಿಂಗಳಿಗೆ 20 ಸಾವಿರ ರೂಪಾಯಿಗಳನ್ನು ಮತ್ತು ಚಾಲಕ ಹಾಗೂ ವಾಹನದ ನಿರ್ವಹಣೆಗೆ 20 ಸಾವಿರ ರೂಪಾಯಿಗಳನ್ನು ನಿಗಮವು ಪಾವತಿ ಮಾಡುತ್ತದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಮುಖ್ಯಸ್ಥ ಎಂ ಕಮಲಾಕರ್ ಬಾಬು ತಿಳಿಸಿದ್ದಾರೆ.
ಬ್ಯಾಟರಿ ಮತ್ತು ಗೇರ್ ಗಳ ಬಗ್ಗೆ ಚಾಲಕರಿಗೆ ತರಬೇತಿಯನ್ನು ನೀಡಲಾಗುತ್ತದೆ. ಪ್ರತಿ ಕಾರಿನ ಬೆಲೆ 11 ಲಕ್ಷ ರೂ. ಆಗಿದ್ದು 6 ವರ್ಷಗಳ ಬಳಿಕ ಕಾರಿನ ಮಾಲೀಕತ್ವವನ್ನು ಸರ್ಕಾರಕ್ಕೆ ವಹಿಸಲಾಗುತ್ತದೆ. ತಿರುಪತಿ ದೇವಸ್ಥಾನ ಅಲ್ಲದೆ ತಿರುಪತಿ ಮುನಿಸಿಪಲ್ ಕಾರ್ಪೊರೇಶನ್, ಗ್ರೇಟರ್ ವಿಶಾಖಪಟ್ಟಣದ ಮುನಿಸಿಪಲ್ ಕಾರ್ಪೊರೇಶನ್ ಹಾಗೂ ಅಮರಾವತಿ ಕಾರ್ಯದರ್ಶಿಗಳ ಕಾರ್ಯಾಲಯದಲ್ಲಿ ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುತ್ತದೆ.
ಪ್ರಯಾಣದ ದರ ಒಂದು ಕಿಮೀ ಗೆ 2 ರೂ ಇರಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿಮೀ ಈ ಕಾರ್ ಚಲಿಸುತ್ತದೆ.
ಬೀಜಿಂಗ್: ವ್ಯಕ್ತಿಯೊಬ್ಬರು ಮೊಬೈಲ್ ಅಂಗಡಿಯಲ್ಲಿ ತನ್ನ ಫೋನ್ ಬ್ಯಾಟರಿ ಬದಲಾಯಿಸುವ ವೇಳೆ ಬ್ಯಾಟರಿ ಸ್ಫೋಟಗೊಂಡ ಘಟನೆ ಚೀನಾದಲ್ಲಿ ನಡೆದಿದೆ.
ವರದಿಗಳ ಪ್ರಕಾರ ವ್ಯಕ್ತಿ ಆನ್‍ಲೈನ್ ನಲ್ಲಿ ಹೊಸ ಬ್ಯಾಟರಿ ಖರೀದಿಸಿದ್ದರು. ತನ್ನ ಫೋನ್‍ನಲ್ಲಿದ್ದ ಹಳೇ ಬ್ಯಾಟರಿ ತೆಗೆದು ಹೊಸ ಬ್ಯಾಟರಿ ಅಳವಡಿಸಲು ಹತ್ತಿರದ ಮೊಬೈಲ್ ಅಂಗಡಿಗೆ ಹೋಗಿದ್ದರು. ಅಂಗಡಿಯವರಿಂದ ಟ್ವೀಜರ್ ಪಡೆದು ಹಳೇ ಬ್ಯಾಟರಿಯನ್ನ ತೆಗೆಯಲು ಪ್ರಯತ್ನಿಸಿದ್ರು. ಈ ವೇಳೆ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.
ವ್ಯಕ್ತಿಯ ಮುಖದ ಸಮೀಪವೇ ಬ್ಯಾಟರಿ ಸ್ಫೋಟಗೊಂಡಿದ್ದು, ಬೆಂಕಿ ಬಂದ ತಕ್ಷಣ ಅಲ್ಲಿಂದ ಎದ್ದು ಓಡಿಹೋಗಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಡಿಮೆ ಬೆಲೆಗೆ ಸಿಕ್ತು ಅಂತ ಆನ್‍ಲೈನ್ ನಿಂದ ಬ್ಯಾಟರಿ ಖರೀದಿಸಿದ್ದಾಗಿ ಆ ವ್ಯಕ್ತಿ ಹೇಳಿದ್ರು. ತಾನೇ ಬ್ಯಾಟರಿ ಬದಲಾಯಿಸಲು ಟ್ವೀಜರ್ ಕೇಳಿದ್ರು. ಬ್ಯಾಟರಿ ಸ್ಫೋಟಗೊಂಡಾಗ ಗ್ರಾಹಕರು ಅಂಗಡಿಯಿಂದ ಹೊರಗೆ ಓಡಿಹೋದ್ರು ಎಂದು ಮೊಬೈಲ್ ಅಂಗಡಿಯ ಮಾಲೀಕ ಹೇಳಿದ್ದಾರೆ. ಆ ವ್ಯಕ್ತಿ ಆಕಸ್ಮಿಕವಾಗಿ ಬ್ಯಾಟರಿಗೆ ತೂತು ಮಾಡಿದ್ದರಿಂದ ಅದು ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಬೀಜಿಂಗ್: ಸಾಮಾನ್ಯವಾಗಿ ವಸ್ತುಗಳನ್ನು ಖರೀದಿಸುವಾಗ ಅದನ್ನು ಪರಿಶೀಲಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಐಫೋನ್ ಗೆ ಹೊಸ ಬ್ಯಾಟರಿ ಖರೀದಿಸುವಾಗ ಅದನ್ನು ಪರಿಶೀಲಿಸಲು ಬ್ಯಾಟರಿಯನ್ನು ಕಚ್ಚಿದ್ದಾನೆ. ಬಾಯಿಂದ ಬ್ಯಾಟರಿ ತೆಗೆಯುತ್ತಿದ್ದಂತೆ ಅದು ಸ್ಪೋಟಗೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ತನ್ನ ಐಫೋನ್‍ಗೆ ಹೊಸ ಬ್ಯಾಟರಿ ಖರೀದಿಸಲು ಹೋಗಿದ್ದಾನೆ. ನಂತರ ಬ್ಯಾಟರಿ ಚೆನ್ನಾಗಿದ್ದೀಯಾ ಎಂದು ಪರಿಶೀಲಿಸಲೆಂದು ಅದನ್ನು ಕಚ್ಚಿದ್ದಾನೆ. ಬ್ಯಾಟರಿಯನ್ನು ಕಚ್ಚಿ ಬಾಯಿಂದ ತೆಗೆದ ತಕ್ಷಣ ಅದು ಸ್ಫೋಟಗೊಂಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬ್ಯಾಟರಿ ಸ್ಫೋಟಗೊಳ್ಳುವಾಗ ಗ್ರಾಹಕನ ಮುಖದಿಂದ ಕೊಂಚ ದೂರವಿದ್ದು, ಯಾವುದೇ ಗಾಯವಾಗಿಲ್ಲ. ಅಷ್ಟೇ ಅಲ್ಲದೇ ಅಂಗಡಿಯಲ್ಲಿ ತುಂಬಾ ಜನರಿದ್ದು, ಅವರಿಗೂ ಯಾವುದೇ ಗಾಯವಾಗಿಲ್ಲ ಎಂದು ವರದಿಯಾಗಿದೆ.
ಈ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಮಯೋಪಾಯೈ ಜನವರಿ 20ರಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ. ವರದಿಯ ಪ್ರಕಾರ ಈ ವಿಡಿಯೋ 45ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ.
ನವದೆಹಲಿ: ಭಾರತದ ಮಾರುಕಟ್ಟೆಗೆ ಲೆನೊವೊ ಮಾಲೀಕತ್ವದ ಮೋಟೋ ಇ4 ಪ್ಲಸ್ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ.
ಈ ಫೋನಿಗೆ 9,999 ರೂ. ನಿಗದಿ ಮಾಡಿದ್ದು, ಇಂದು ಮಧ್ಯರಾತ್ರಿ 11.59 ರಿಂದ ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಆರಂಭವಾಗಲಿದೆ.
5.5 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ 4ಜಿ ವೋಲ್ಟ್ ಗೆ ಸಪೋರ್ಟ್ ಮಾಡುವ ಕಾರಣ ಜಿಯೋ ಸಿಮ್ ಹಾಕಬಹುದಾಗಿದೆ. ಮೊಟೊರೊಲಾ ಮೊಬೈಲ್ ಕಂಪೆನಿಯನ್ನು ಈ ಹಿಂದೆ ಗೂಗಲ್ ಖರೀದಿಸಿತ್ತು. 2014ರಲ್ಲಿ ಗೂಗಲ್ ಮೊಟೊರೊಲಾವನ್ನು ಲೆನೊವೊ ಕಂಪೆನಿಗೆ ಮಾರಾಟ ಮಾಡಿತ್ತು.
ಗೂಗಲ್ ಆಂಡ್ರಾಯ್ಡ್ ಅಪ್‍ಡೇಟ್ ಬಿಡುಗಡೆ ಮಾಡುವಾಗ ಎಲ್ಲ ಸ್ಮಾರ್ಟ್ ಫೋನ್ ಗಳಿಗೆ ಬೇಗನೇ ಆಪ್‍ಡೇಟ್ ಸಿಗುವುದಿಲ್ಲ. ಆದರೆ ಮೋಟೋ ಫೋನ್ ಗಳಲ್ಲಿ ಶುದ್ಧವಾಘಿರುವ ಆಂಡ್ರಾಯ್ಡ್ ಓಎಸ್ ಇರುವ ಕಾರಣ ಬೇಗನೇ ಆಪ್‍ಡೇಟ್ ಸಿಗುತ್ತದೆ.
"focus on further growth in the e-commerce space, build premium experiences across price points & get aggressive on retail” – @mathursudhinpic.twitter.com/4NpCSj6iPJ
ಸಿಡ್ನಿ: ಬ್ಯಾಟರಿ ಚಾಲಿತ ಹೆಡ್‍ಫೋನ್ ಸ್ಫೋಟಗೊಂಡು ಮಹಿಳೆಯೊಬ್ಬರ ಮುಖ ಹಾಗೂ ಕೈಗಳಿಗೆ ಗಾಯವಾಗಿರೋ ಘಟನೆ ಆಸ್ಟ್ರೇಲಿಯಾಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದಿದೆ. ಇದರ ಫೋಟೋಗಳನ್ನ ಅಧಿಕಾರಿಗಳು ಬಿಡುಗಡೆ ಮಾಡಿ ಪ್ರಯಾಣಿಕರಿಗೆ ವಿಮಾನದಲ್ಲಿ ಬ್ಯಾಟರಿ ಬಳಕೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 19ರಂದು ಚೀನಾ ರಾಜಧಾನಿ ಬೀಜಿಂಗ್‍ನಿಂದ ಮೆಲ್ಬೋರ್ನ್‍ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬ್ಯಾಟರಿ ಚಾಲಿತ ಹೆಡ್‍ಫೋನ್‍ನಲ್ಲಿ ಸಂಗೀತ ಕೇಳುತ್ತಿದ್ದರು. ಈ ವೇಳೆ ಹೆಡ್‍ಫೋನ್ ಸ್ಫೋಟಗೊಂಡು ದೊಡ್ಡ ಶಬ್ದ ಕೇಳಿಸಿತ್ತು.
ನಾನು ಹಿಂದೆ ತಿರುಗಿ ನೋಡುವಷ್ಟರಲ್ಲಿ ನನ್ನ ಮುಖ ಸುಟ್ಟುಹೋಗಿತ್ತು. ನನ್ನ ಮುಖವನ್ನು ಒತ್ತಿ ಹಿಡಿದೆ. ನಂತರವೂ ಮುಖ ಉರಿಯುತ್ತಿದ್ದರಿಂದ ಹೆಡ್‍ಫೋನ್ ತೆಗೆದು ನೆಲದ ಮೇಲೆ ಎಸೆದೆ. ಹೆಡ್‍ಫೋನ್‍ನಲ್ಲಿ ಸಣ್ಣ ಮಟ್ಟದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಮಹಿಳೆ ಪ್ರಕರಣದ ತನಿಖೆ ನಡೆಸಿದ ಆಸ್ಟ್ರೇಲಿಯನ್ ಟ್ರಾನ್ಸ್ ಪೋರ್ಟ್ ಸೇಫ್ಟಿ ಬ್ಯೂರೋದ ಅಧಿಕಾರಿಗಳಿಗೆ ಹೇಳಿದ್ದಾರೆ.
ಘಟನೆ ನಡೆದ ವೇಳೆ ವಿಮಾನದ ಸಿಬ್ಬಂದಿ ಕೂಡಲೇ ಮಹಿಳೆಯ ಸಹಾಯಕ್ಕೆ ಮುಂದಾಗಿ, ಹೆಡ್‍ಫೋನ್ ಮೇಲೆ ನೀರು ಸುರಿದಿದ್ದಾರೆ. ಆದ್ರೆ ಬ್ಯಾಟರಿ ಮತ್ತು ಅದರ ಮೇಲ್ಭಾಗದ ಕವರ್ ಕರಗಿ ನೆಲಕ್ಕೆ ಅಂಟಿಕೊಂಡಿತ್ತು ಎಂದು ವರದಿಯಾಗಿದೆ.
ಹೆಡ್‍ಫೋನ್ ಯಾವ ಕಂಪೆನಿಗೆ ಸೇರಿದ್ದು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಆದ್ರೆ ಲಿಥಿಯಮ್ ಬ್ಯಾಟರಿಯಿಂದ ಈ ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ. ಹಾಗೂ ವಿಮಾನದಲ್ಲಿ ಬ್ಯಾಟರಿ ಬಳಕೆ ಬಗ್ಗೆ ಅಧಿಕಾರಿಗಳು ಪ್ರಯಾಣಿಕರಿಗೆ ಎಚ್ಚರಿಸಿದ್ದಾರೆ. ವಿಮಾನಗಳಲ್ಲಿ ಬ್ಯಾಟರಿ ಚಾಲಿತ ಸಾಧನಗಳನ್ನು ಬಳಸದಿರುವ ಸಂದರ್ಭದಲ್ಲಿ ಅವನ್ನು ಒಂದು ಕಡೆ ಜೋಪಾನವಾಗಿ ಇಡಬೇಕು. ಪ್ರತ್ಯೇಕವಾದ ಬ್ಯಾಟರಿಗಳನ್ನು ಲಗೇಜ್‍ಗಳಲ್ಲಿ ಇಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
2016ರಲ್ಲಿ ಸ್ಯಾಮ್‍ಸಂಗ್ ಗೆಲಾಕ್ಸಿ ನೋಟ್ 7 ಬ್ಯಾಟರಿ ಹಲವೆಡೆ ಸ್ಫೋಟಗೊಂಡ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಸ್ಯಾಮ್ ಸಂಗ್ ಕಂಪೆನಿ ನೋಟ್ 7 ಫೋನ್‍ಗಳನ್ನು ಗ್ರಾಹಕರಿಂದ ಹಿಂದಕ್ಕೆ ಪಡೆದುಕೊಂಡಿತ್ತು.
ನವದೆಹಲಿ: ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್, 4ಜಿ ರಾಮ್ ಹೊಂದಿರುವ ಝಡ್‍ಟಿಇ ಬ್ಲೇಡ್ ಪ್ಲೇಟ್ ಎ2 ಪ್ಲಸ್ ಫೋನನ್ನು ಈಗ ನೀವು ಖರೀದಿಸಬಹುದು. ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಈ ಫೋನ್ ಖರೀದಿಗೆ ಲಭ್ಯವಾಗಲಿದೆ.
4ಜಿಬಿ ರಾಮ್ 5000 ಎಂಎಎಚ್ ಬ್ಯಾಟರಿ ಹೊಂದಿರುವ ಈ ಫೋನಿಗೆ ಕಂಪೆನಿ 11,999 ರೂ. ಬೆಲೆಯನ್ನು ನಿಗದಿ ಪಡಿಸಿದೆ. ಮೆಟಲ್ ಬಾಡಿ, ಫಾಸ್ಟ್ ಚಾರ್ಜಿಂಗ್, ಅಕ್ಟಾ ಕೋರ್ ಪ್ರೊಸೆಸರ್ ಹೊಂದಿರುವ ಈ ಫೋನ್ ಆಂಡ್ರಾಯ್ಡ್ ಮಾರ್ಶ್‍ಮೆಲೋ ಆಪರೇಟಿಂಗ್ ಸಿಸ್ಟಂ ಹೊಂದಿದೆ.
ಎಲ್‍ಟಿ ನೆಟ್‍ವರ್ಕಿಗೆ ಸಪೋರ್ಟ್ ಮಾಡುವ ಕಾರಣ ಈ ಫೋನಿನಲ್ಲಿ ಜಿಯೋ ಸಿಮ್ ಹಾಕಬಹುದು.