Tag: batsman

  • ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಲಂಡನ್: ಕ್ರಿಕೆಟ್‍ನಲ್ಲಿ ಮಹಿಳಾ ಮತ್ತು ಪುರುಷರ ಲಿಂಗ ಸಮಾನತೆ ಸಲುವಾಗಿ ಪ್ರಸ್ತುತ ಬಳಕೆಯಲ್ಲಿರುವ ಬ್ಯಾಟ್ಸ್‌ಮ್ಯಾನ್‌ ಪದದ ಬದಲಾಗಿ ಬ್ಯಾಟರ್ ಪದ ಬಳಸುವಂತೆ ಮಾರ್ಲೆಬೋನ್  ಕ್ರಿಕೆಟ್ ಸಂಸ್ಥೆ(ಎಂಸಿಸಿ) ತೀರ್ಮಾನಿಸಿದೆ.

    ಎಂಸಿಸಿ ಜಾರಿಗೊಳಿಸುವ ಕ್ರಿಕೆಟ್ ನಿಯಮಗಳನ್ನು ಪಾಲಿಸುವ ಐಸಿಸಿ ಇದೀಗ ಈ ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಎಂಸಿಸಿ ಕ್ರಿಕೆಟ್‍ನಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಕಾನೂನು ಉಪ ಸಮಿತಿಯ ಜೊತೆ ಚರ್ಚಿಸಿ ಕ್ರಿಕೆಟ್‍ನಲ್ಲಿ ನಿಯಮಗಳನ್ನು ಜಾರಿಗೊಳಿಸುತ್ತದೆ. ಇದೀಗ ಮಹಿಳಾ ಕ್ರಿಕೆಟ್ ಕೂಡ ಪುರುಷ ಕ್ರಿಕೆಟ್ ನಂತೆ ಜನಪ್ರಿಯತೆ ಗಳಿಸುತ್ತಿದೆ. ಆದರೆ ಕ್ರಿಕೆಟ್‍ನಲ್ಲಿ ಬ್ಯಾಟ್ಸ್‌ಮ್ಯಾನ್‌ ಎಂಬ ಪದ ಮಹಿಳಾ ಕ್ರಿಕೆಟ್‍ನಲ್ಲಿ ಸರಿಹೊಂದುತ್ತಿರಲಿಲ್ಲ. ಹಾಗಾಗಿ ಈ ಬದಲಾವಣೆಗೆ ಮುಂದಾಗಿದೆ. ಇದನ್ನೂ ಓದಿ: ಐಪಿಎಲ್‍ಗೂ ತಟ್ಟಿದ ಕೊರೊನಾ – ನಟರಾಜನ್‍ಗೆ ಸೋಂಕು, 6 ಮಂದಿ ಕ್ವಾರಂಟೈನ್

    ಈಗಾಗಲೇ ಕ್ರಿಕೆಟ್‍ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮನಾಗಿ ಬೌಲರ್ ಮತ್ತು ಫೀಲ್ಡರ್ ಎಂಬ ಪದ ಬಳಕೆಯಾಗುತ್ತಿದೆ. ಇದೀಗ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ಬ್ಯಾಟರ್ ಅಥವಾ ಬ್ಯಾಟರ್ಸ್ ಪದ ಬಳಕೆಗೆ ಎಂಸಿಸಿ ಮುಂದಾಗಿದ್ದು, ಈ ಮೂಲಕ ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಶ್ರಮಿಸಿದೆ. ಇದನ್ನೂ ಓದಿ: ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್

  • ಇದೇ ದಿನ 1994ರಲ್ಲಿ ಅಜೇಯ 501 ರನ್ ಸಿಡಿಸಿದ್ದ ಬ್ರಿಯಾನ್ ಲಾರಾ

    ಇದೇ ದಿನ 1994ರಲ್ಲಿ ಅಜೇಯ 501 ರನ್ ಸಿಡಿಸಿದ್ದ ಬ್ರಿಯಾನ್ ಲಾರಾ

    ಪೋರ್ಟ್ ಆಫ್ ಸ್ಪೇನ್: ದೊಡ್ಡ ಇನ್ನಿಂಗ್ಸ್ ಆಡುವ ವಿಷಯ ಬಂದಾಗ, ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಬ್ರಿಯಾನ್ ಲಾರಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಇತರ ಬ್ಯಾಟ್ಸ್‌ಮನ್‌ಗಳಿಗೆ ಅಸಾಧ್ಯವಾದ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.

    ಅಂತಹ ದಾಖಲೆ ಇದೇ ದಿನ 1994ರಲ್ಲಿ ಇತಿಹಾಸದ ಪುಟ ಸೇರಿತ್ತು. ಅಂದಿನ ಮಾಂತ್ರಿಕ ಬ್ಯಾಟಿಂಗ್‍ನಿಂದ ಬ್ರಿಯಾನ್ ಚಾರ್ಲ್ಸ್ ಲಾರಾ ಅವರು ಪ್ರಥಮ ದರ್ಜೆ ಕ್ರಿಕೆಟ್‍ನ ಇನ್ನಿಂಗ್ಸ್ ನಲ್ಲಿ 500 ರನ್ ಗಳಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಅಜೇಯ 501 ರನ್ ಗಳಿಸಿದ್ದರು.

    ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 100, 200, 300, 400 ಮತ್ತು 500 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ಲಾರಾ ಅವರಿಗೆ ಸಲ್ಲುತ್ತದೆ. ಈವರೆಗೂ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಈ ಸಾಧನೆ ಮಾಡಿಲ್ಲ.

    1958ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಮಾಜಿ ಕ್ರಿಕೆಟರ್ ಗ್ಯಾರಿ ಸೋಬರ್ಸ್ ಅವರು ಅಜೇಯ 365 ರನ್ ಗಳಿಸಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿ ದಾಖಲೆ ಬರೆದಿದ್ದರು. ಆದರೆ 1994 ಏಪ್ರಿಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಲಾರಾ 375 ರನ್ ಚಚ್ಚಿ ದಾಖಲೆ ಮುರಿದಿದ್ದರು. ಆದರೆ ಇಷ್ಟಕ್ಕೆ ನಿಲ್ಲಿಸದ ಅವರು ಎರಡು ತಿಂಗಳ ಬಳಿಕ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪ್ರಥಮ ದರ್ಜೆ ಕ್ರಿಕೆಟ್‍ನ ಇನ್ನಿಂಗ್ಸ್ ನಲ್ಲಿ ವಿಶೇಷ ದಾಖಲೆ ಬರೆದರು. ಅಂದು ವಾರ್ವಿಕ್‍ಷೈರ್ ಪರ ಆಡಿದ ಲಾರಾ ಡರ್ಹಾಮ್ ವಿರುದ್ಧ ಅಜೇಯ 501 ರನ್ ಗಳಿಸಿದ್ದರು.

    ಹನೀಫ್ ಮೊಹಮ್ಮದ್:
    ಪಾಕಿಸ್ತಾನ ಮಾಜಿ ಕ್ರಿಕೆಟರ್ ಹನೀಫ್ ಮೊಹಮ್ಮದ್ 1959ರಲ್ಲಿ ವಹಾವಲ್ಪುರ್ ವಿರುದ್ಧ ಕರಾಚಿ ಪರ ಆಡುತ್ತಿದ್ದರು. ಕುತೂಹಲಕಾರಿಯಾಗಿ ರನ್ ಗಳಿಸಿದ ಅವರು ಇನ್ನೇನು 3 ರನ್ ಗಳಿಸಿದ್ದರೆ ಲಾರಾ ಅವರ ದಾಖಲೆ ಮುರಿಯುತ್ತಿದ್ದರು. ಆದರೆ 499 ರನ್ ಗಳಿಸಿದ್ದಾಗ ರನೌಟ್ ಆಗಿದ್ದರು.

    ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ ಆಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಡೇ ನೈಟ್ ಟೆಸ್ಟ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅಜೇ 335 ರನ್ ಚಚ್ಚಿದ್ದರು. ಈ ವೇಳೆಯಲ್ಲಿ ಆಸೀಸ್ ಡಿಕ್ಲೇರ್ ಘೋಷಿಸಿದ್ದ ಪರಿಣಾಮ ವಾರ್ನರ್‌ಗೆ ದಾಖಲೆ ಬರೆಯುವ ಅವಕಾಶ ಕೈತಪ್ಪಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಲಾರಾ, ನಾನು ಡೇವಿಡ್ ವಾರ್ನರ್ ಜತೆಗೆ ಮಾತನಾಡಿದ್ದೇನೆ. ಇದು ತಂಡದ ನಿರ್ಧಾರವಾಗಿತ್ತು. ಅಲ್ಲಿ ಮಳೆ ಬರುವ ಸಾಧ್ಯತೆಗಳಿದ್ದವು ಎಂದು ಲಾರಾ ತಿಳಿಸಿದ್ದರು.

  • ಕೊರೊನಾ ವಾರಿಯರ್ಸ್‍ಗೆ ದುಬಾರಿ ಶೂ ಕೊಡಿಸಿ ಮಾನವೀಯತೆ ಮೆರೆದ ‘ಮಿಸ್ಟರ್ 360’

    ಕೊರೊನಾ ವಾರಿಯರ್ಸ್‍ಗೆ ದುಬಾರಿ ಶೂ ಕೊಡಿಸಿ ಮಾನವೀಯತೆ ಮೆರೆದ ‘ಮಿಸ್ಟರ್ 360’

    ಬೆಂಗಳೂರು: ಕೋವಿಡ್-19 ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮುಂಚೂಣಿಯಲ್ಲಿದ್ದಾರೆ. ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಧನ್ಯವಾದ ತಿಳಿಸಿ, ಉಡುಗೊರೆ ನೀಡಿದ್ದಾರೆ.

    ಕೆ.ಎಲ್ ರಾಹುಲ್ ಅವರು ಬೆಂಗಳೂರಿನಲ್ಲಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಪೂಮಾ ಶೂಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್ ನಿಸ್ವಾರ್ಥ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಟೆಸ್ಟ್‌ಗೆ ವಿರಾಟ್, ಏಕದಿನಕ್ಕೆ ಕೆ.ಎಲ್.ರಾಹುಲ್ ನಾಯಕತ್ವ

    ಈ ಕುರಿತು ಟ್ವೀಟ್ ಮಾಡಿರುವ ಕೆ.ಎಲ್.ರಾಹುಲ್, ಕೊರೊನಾ ವಿರುದ್ಧ ಹಗಲಿರುಳು ದುಡಿಯುತ್ತಿರುವಿರಿ. ಹೆಮ್ಮಾರಿ ಕೊರೊನಾವನ್ನು ನಮ್ಮ ದೇಶದಿಂದ ಹೋಗಲಾಡಿಸಲು ಎಲ್ಲ ಅಪಾಯವನ್ನು ಮೆಟ್ಟಿನಿಂತು ದುಡಿಯುತ್ತಿರುವ ನಿಮಗೆ ಧನ್ಯವಾದಗಳು. ನಿಮ್ಮ ಹೋರಾಟಕ್ಕೆ ನನ್ನದೊಂದು ಪುಟ್ಟ ಕೊಡುಗೆ, ಸಣ್ಣ ಕೃತಜ್ಞತೆ. ಹೋರಾಟವನ್ನು ಮುಂದುವರಿಸಿ. ಧನ್ಯವಾದಗಳು,’ ಎಂದು ರಾಹುಲ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ‘ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಮುಂದಿನ ನಾಯಕ’

    ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್‌ಗೆ ಏನಾದರೂ ನೀಡಬೇಕು ಎಂದು ನನಗೆ ಅನಿಸಿತ್ತು. ಹಾಗಾಗಿ ಅವರಿಗೆ ಪೂಮಾ ಶೂಗಳನ್ನು ನೀಡಲು ಬಯಸಿದ್ದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸುವುದು ಮುಖ್ಯವಾಗಿದೆ. ಕೊರೊನಾ ವಿರುದ್ಧದ ಹೋರಾಟವು ಸಾಮೂಹಿಕವಾಗಿದೆ’ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಕನ್ನಡಿಗ ಕೆಎಲ್ ರಾಹುಲ್ ತಮ್ಮ ಬ್ಯಾಟ್, ಹೆಲ್ಮೇಟ್, ಗ್ಲೌಸ್, ಪ್ಯಾಡ್ ಸೇರಿದಂತೆ ಕಿಟ್ ಅನ್ನು ಹರಾಜಿಗೆ ನೀಡಿದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ಅವರ ಬ್ಯಾಟ್ 2.64 ಲಕ್ಷ ರೂ.ಗೆ ಮಾರಾಟವಾಗಿತ್ತು. ಕ್ರಿಕೆಟ್ ಕಿಟ್‍ಗಳಿಂದ ಕೆ.ಎಲ್.ರಾಹುಲ್ ಒಟ್ಟು 8 ಲಕ್ಷ ರೂ.ಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಣವನ್ನು ಅವೇರ್ ಫೌಂಡೇಷನ್ ಮೂಲಕ ಬಡ ಮಕ್ಕಳ ಕಲ್ಯಾಣಕ್ಕಾಗಿ ಬಳಸಲು ನೀಡಿ ಮಾನವೀಯತೆ ಮೆರೆದಿದ್ದರು.

  • ಪಾಕ್ ಮಾಜಿ ಓಪನರ್ ಬ್ಯಾಟ್ಸ್‌ಮನ್‌ಗೆ ಕೊರೊನಾ

    ಪಾಕ್ ಮಾಜಿ ಓಪನರ್ ಬ್ಯಾಟ್ಸ್‌ಮನ್‌ಗೆ ಕೊರೊನಾ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟರ್, ಓಪನರ್ ಬ್ಯಾಟ್ಸ್‌ಮನ್‌ ತೌಫೀಕ್ ಉಮರ್ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

    ಜ್ವರ ಕಾಣಿಸಿಕೊಂಡಿದ್ದರಿಂದ ತೌಫೀಕ್ ಅವರು ಶನಿವಾರ ಕೋವಿಡ್-19 ಟೆಸ್ಟ್‌ಗೆ ಒಳಗಾಗಿದ್ದರು. ಭಾನುವಾರ ಸಂಜೆ ಅವರ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    “ಶುಕ್ರವಾರ ರಾತ್ರಿ ಸ್ವಲ್ಪ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಕೊರೊನಾ ಟೆಸ್ಟ್ ಮಾಡಿಸಿಕೊಂಡೆ. ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ನನ್ನಲ್ಲಿ ಕೊರೊನಾ ಗುಣಲಕ್ಷಣಗಳು ತೀವ್ರವಾಗಿಲ್ಲ” ಎಂದು ತೌಫೀಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    2001ರಲ್ಲಿ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ತೌಫೀಕ್, 13 ವರ್ಷದ ವೃತ್ತಿಜೀವನದಲ್ಲಿ 44 ಟೆಸ್ಟ್ ಮತ್ತು 22 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ 37.98 ಸರಾಸರಿಯಲ್ಲಿ 2,963 ರನ್ ಗಳಿಸಿದರೆ, ಏಕದಿನ ಕ್ರಿಕೆಟ್‍ನಲ್ಲಿ ಕೇವಲ 504 ರನ್ ಗಳಿಸಿದ್ದಾರೆ.

    ಕೊರೊನಾದಿಂದಾಗಿ ವಿಶ್ವಾದ್ಯಂತ ಅನೇಕ ಟೂರ್ನಿಗಳು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ರದ್ದುಗೊಂಡಿವೆ. ಕೋವಿಡ್-19 ಸಾಂಕ್ರಾಮಿಕ ರೋಗವು ಜಾಗತಿಕ ಕ್ರೀಡಾ ಕ್ಯಾಲೆಂಡರ್‍ನಲ್ಲಿ ಪ್ರಮುಖ ಪರಿಣಾಮ ಬೀರಿದೆ. ಟೋಕಿಯೊ ಒಲಿಂಪಿಕ್ಸ್, ವಿಂಬಲ್ಡನ್ ಟೆನ್ನಿಸ್ ಸೇರಿದಂತೆ ಹಲವಾರು ಪ್ರಮುಖ ಪಂದ್ಯಾವಳಿಗಳು ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಮುಂದೂಡಲ್ಪಟ್ಟಿವೆ ಅಥವಾ ರದ್ದುಗೊಂಡಿವೆ.

    ಕೊರೊನಾ ವೈರಸ್‍ನಿಂದಾಗಿ ಕ್ರಿಕೆಟ್ ಸಹ ಪರಿಣಾಮ ಬೀರಿದೆ. ಅನೇಕ ಪ್ರವಾಸಗಳನ್ನು ಈಗಾಗಲೇ ಮುಂದೂಡಲಾಗಿದೆ ಅಥವಾ ರದ್ದುಪಡಿಸಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ಅನ್ನು ಫೈನಲ್ ಪಂದ್ಯದಲ್ಲೇ ರದ್ದುಗೊಳಿಸಲಾಗಿದೆ. ಇತ್ತ ಅನಿರ್ದಿಷ್ಟಾವಧಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಅನ್ನು ಮುಂದೂಡಲಾಗಿದೆ.

    ಜುಲೈನಿಂದ ಅಂತಾರಾಷ್ಟ್ರೀಯ ಪ್ರವಾಸಗಳು ಪುನರಾರಂಭಗೊಳ್ಳಲಿವೆ. ಈ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನಕ್ಕೆ ಆತಿಥ್ಯ ವಹಿಸಲು ಸಿದ್ಧವಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ.

  • 8 ಲಕ್ಷಕ್ಕೆ ರಾಹುಲ್ ಕಿಟ್ ಸೇಲ್- ಬಡ ಮಕ್ಕಳ ಕಲ್ಯಾಣಕ್ಕೆ ಮಿಡಿದ ಕನ್ನಡಿಗ

    8 ಲಕ್ಷಕ್ಕೆ ರಾಹುಲ್ ಕಿಟ್ ಸೇಲ್- ಬಡ ಮಕ್ಕಳ ಕಲ್ಯಾಣಕ್ಕೆ ಮಿಡಿದ ಕನ್ನಡಿಗ

    ನವದೆಹಲಿ: ಟೀಂ ಇಂಡಿಯಾ ಬ್ಯಾಟ್ಸ್‌ಮನ್, ಕನ್ನಡಿಗ ಕೆ.ಎಲ್.ರಾಹುಲ್ ತಮ್ಮ ಕ್ರಿಕೆಟ್ ಕಿಟ್‍ಗಳನ್ನು ಹರಾಜು ಮಾಡುವ ಮೂಲಕ ಸುಮಾರು 8 ಲಕ್ಷ ರೂ.ವನ್ನು ಬಡ ಮಕ್ಕಳ ಕಲ್ಯಾಣಕ್ಕಾಗಿ ನೀಡಿದ್ದಾರೆ.

    ವರದಿಯ ಪ್ರಕಾರ, ಕೆ.ಎಲ್.ರಾಹುಲ್ ಅವರ ಬ್ಯಾಟ್ 2,64,228 ರೂ.ಗಳಿಗೆ ಹರಾಜು ಹಾಕಿದರೆ, ಅವರ ಟೆಸ್ಟ್ ಜರ್ಸಿ 1,32,774 ರೂ.ಗಳಿಗೆ ಮಾರಾಟ ಮಾಡಲಾಗಿದೆ. ಅವರ ಏಕದಿನ ಪಂದ್ಯದ ಜರ್ಸಿ 1,13,240 ರೂ., ಹೆಲ್ಮೆಟ್ 1,22,677 ರೂ., ಪ್ಯಾಡ್‍ಗಳು 33,028 ರೂ. ಮತ್ತು ಟಿ20 ಜರ್ಸಿ 1,04,824 ರೂ.ಗೆ ಹರಾಜು ಮಾಡಿ, ಬಡ ಮಕ್ಕಳಿಗಾಗಿ ಹಣವನ್ನು ಸಂಗ್ರಹಿಸಲಾಗಿದೆ. ಈ ಮೂಲಕ ರಾಹುಲ್ ಕಿಟ್‍ಗಳಿಂದ ಒಟ್ಟು 7,99,553 ರೂ. ಸಿಕ್ಕಿದೆ.

    ಏಪ್ರಿಲ್ 18ರ ತಮ್ಮ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಕೆ.ಎಲ್.ರಾಹುಲ್, ಇದೇ ದಿನ ಬಡತನದಲ್ಲಿರುವ ಮಕ್ಕಳಿಗೆ ನೆರವಾಗುವ ಸಂಸ್ಥೆಗೆ ತಾವು ಸಹಾಯ ಮಾಡಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದರು. ”ನನ್ನ ಕ್ರಿಕೆಟ್ ಪ್ಯಾಡ್‍ಗಳು, ಗ್ಲೌಸ್‍ಗಳು, ಹೆಲ್ಮೆಟ್‍ಗಳು ಮತ್ತು ಕೆಲವು ಜೆರ್ಸಿಗಳನ್ನು ನಮ್ಮ ಸಹಯೋಗ ಪಾಲುದಾರ ಭಾರತ್ ಆರ್ಮಿಗೆ ಕೊಡುಗೆಯಾಗಿ ನೀಡಲು ಬಯಸಿದ್ದೇನೆ. ಅವರು ಇವೆಲ್ಲವನ್ನೂ ಹರಾಜಿಗಿಟ್ಟು ಅವೇರ್ ಫೌಂಡೇಶನ್‍ಗೆ ದೇಣಿಗೆ ಸಂಗ್ರಹಿಸಲಿದ್ದಾರೆ” ಎಂದು ಹೇಳಿದ್ದರು.

    ‘ಅವೇರ್ ಫೌಂಡೇಶನ್ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದೆ. ಹೀಗಾಗಿ ಈ ನಿರ್ಧಾರ ನನ್ನ ಪಾಲಿಗೆ ವಿಶೇಷವೆನಿಸಿದೆ. ಮಕ್ಕಳಿಗೆ ನೆರವು ನೀಡುವುದಕ್ಕಾಗಿ ಇದಕ್ಕಿಂತ ಉತ್ತಮವಾದ ಬೇರೆ ದಾರಿ ನನಗೆ ಕಾಣಿಸುತ್ತಿಲ್ಲ,’ ಎಂದು ರಾಹುಲ್ ಖುಷಿ ವ್ಯಕ್ತಪಡಿಸಿದ್ದರು.

    ಚೊಚ್ಚಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. 2016ರಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಏಕದಿನ ಪಂದ್ಯವನ್ನು ಆಡಿದ್ದರು. ಟೂರ್ನಿಯಲ್ಲಿ 361 ರನ್ ಗಳಿಸಿದ್ದರಿಂದ 2019ರ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದರು. ರಾಹುಲ್ ಅವರನ್ನು ರಿಸರ್ವ್ ಓಪನರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ತಂಡದ ಆಡಳಿತ ಮಂಡಳಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಸಿತು. ನಂತರ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ರಾಹುಲ್ ಅವರಿಗೆ ಸಿಕ್ಕಿತು.

    ರಾಹುಲ್ 36 ಟೆಸ್ಟ್ ಪಂದ್ಯಗಳಲ್ಲಿ 2,006 ರನ್ ಗಳಿಸಿದ್ದಾರೆ. ಅವರು ಈಗ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಪ್ರಸ್ತುತ ತಂಡದಲ್ಲಿ ನಾಲ್ವರು ಆರಂಭಿಕ ಬ್ಯಾಟ್ಸ್‌ಮನ್‍ಗಳು ಇರುವುದರಿಂದ ಒಂದೆರಡು ವರ್ಷ ಕಾಯಬೇಕಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

    ಲಾಕ್‍ಡೌನ್‍ನಿಂದಾಗಿ ಇತರ ಆಟಗಾರರಂತೆ ರಾಹುಲ್ ಕೂಡ ತಮ್ಮ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಐಪಿಎಲ್ 2020ರಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಕೊರೊನಾ ವೈರಸ್‍ನಿಂದಾಗಿ ಟೂರ್ನಿ ಇದೀಗ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಐಪಿಎಲ್ 2018ರ ಹರಾಜಿನಲ್ಲಿ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 11 ಕೋಟಿ ರೂ.ಗೆ ಖರೀದಿಯಾಗಿದ್ದರು.

  • ಟೆಸ್ಟ್ ದಾಖಲೆಯಲ್ಲಿ ಕಾಂಬ್ಳಿ ಫಸ್ಟ್, ಸಚಿನ್ ಸೆಕೆಂಡ್, ಕೊಹ್ಲಿಗೆ ಮೂರನೇ ಸ್ಥಾನ

    ಟೆಸ್ಟ್ ದಾಖಲೆಯಲ್ಲಿ ಕಾಂಬ್ಳಿ ಫಸ್ಟ್, ಸಚಿನ್ ಸೆಕೆಂಡ್, ಕೊಹ್ಲಿಗೆ ಮೂರನೇ ಸ್ಥಾನ

    ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಪರಿಗಣಿಸಲಾಗಿದೆ. ಸಚಿನ್ ಎರಡು ಎಕದಿನ, ಟೆಸ್ಟ್ ಎರಡೂ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅವರು 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಮತ್ತು 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.

    ಸಚಿನ್ ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಉತ್ತಮ ಸರಾಸರಿಯನ್ನು ಹೊಂದಿರುವ ಭಾರತೀಯ ಬ್ಯಾಟ್ಸ್‌ಮನ್‌ ದಾಖಲೆಯನ್ನು ತಪ್ಪಿಸಿಕೊಂಡರು. ಈ ಪಟ್ಟಿಯಲ್ಲಿ ಅವರ ಬಾಲ್ಯದ ಸ್ನೇಹಿತ ವಿನೋದ್ ಕಾಂಬ್ಳಿ ಅಗ್ರಸ್ಥಾನದಲ್ಲಿದ್ದಾರೆ.

    ಹೌದು, ವಿನೋದ್ ಕಾಂಬ್ಳಿ ಅವರ ಹೆಸರು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಆದರೆ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಭಾರತೀಯರ ಪಟ್ಟಿಯಲ್ಲಿ ವಿನೋದ್ ಕಾಂಬ್ಳಿ ನಂಬರ್ 1 ಸ್ಥಾನದಲ್ಲಿದ್ದಾರೆ. ಅವರು ಕೇವಲ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಸಚಿನ್ ಅವರಿಗಿಂತ ಭಿನ್ನವಾಗಿ, ಕಾಂಬ್ಳಿ ಪ್ರಾರಂಭದಲ್ಲಿಯೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ತಮ್ಮ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಡಬಲ್-ಶತಕ ಸಿಡಿಸಿದ್ದರು. ಬಳಿಕ ಮುಂದಿನ ಎರಡು ಟೆಸ್ಟ್ ಗಳಲ್ಲಿ ಇನ್ನೂ ಎರಡು ಶತಕಗಳನ್ನು ಗಳಿಸಿದ್ದರು.

    ಕಾಂಬ್ಳಿ ಅವರು ಆಡಿದ ನಂತರದ 13 ಇನ್ನಿಂಗ್ಸ್‌ಗಳಲ್ಲಿ ಮೂರು ಅಂಕಿ ರನ್ ಗಳಿಸಲು ಹೆಣಗಾಡಿದರು. 1995ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಮೂಲಕ ಕಾಂಬ್ಳಿ ತಮ್ಮ ವೃತ್ತಿ ಜೀವನದ ಟೆಸ್ಟ್ ಕ್ರಿಕೆಟ್‍ನಲ್ಲಿ 54.20ರ ಸರಾಸರಿಯಲ್ಲಿ ಒಟ್ಟು 1,084 ರನ್ ಗಳಿಸಿದರು. 2000ದಲ್ಲಿ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಆದರೆ 1995ರ ನಂತರ ಎಂದಿಗೂ ಟೆಸ್ಟ್ ತಂಡಕ್ಕೆ ಕಮ್‍ಬ್ಯಾಕ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.

    ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸರಾಸರಿ ಹೊಂದಿದ ಬ್ಯಾಟ್ಸ್‌ಮನ್‍ಗಳ ಪಟ್ಟಿಯಲ್ಲಿ ಕಾಂಬ್ಳಿ ನಂತರದ ಸ್ಥಾನದಲ್ಲಿ ಬಾಲ್ಯದ ಸ್ನೇಹಿತ ಸಚಿನ್ ಇದ್ದಾರೆ. ಮಾಸ್ಟರ್ ಬ್ಲಾಸ್ಟರ್ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 52.62 ಸರಾಸರಿಯಲ್ಲಿ 7,240 ರನ್ ದಾಖಲಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ 52.63 ಸರಾಸರಿಯಲ್ಲಿ 13,265 ರನ್ ಗಳಿಸಿದರೆ, ಸುನಿಲ್ ಗವಾಸ್ಕರ್ 51.12 ಸರಾಸರಿಯಲ್ಲಿ 10,122 ರನ್ ದಾಖಲಿಸಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

  • ಕೊಹ್ಲಿ-ರೋಹಿತ್ ಇಬ್ಬರಲ್ಲಿ ಟಿ20 ಉತ್ತಮ ಆಟಗಾರ ಯಾರು? ಇಲ್ಲಿದೆ ಅಂಕಿ ಅಂಶ

    ಕೊಹ್ಲಿ-ರೋಹಿತ್ ಇಬ್ಬರಲ್ಲಿ ಟಿ20 ಉತ್ತಮ ಆಟಗಾರ ಯಾರು? ಇಲ್ಲಿದೆ ಅಂಕಿ ಅಂಶ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅಭಿಮಾನಿಗಳ ಮಧ್ಯೆ ಇಬ್ಬರು ಆಟಗಾರರಲ್ಲಿ ಟಿ20ಯಲ್ಲಿ ಯಾರು ಉತ್ತಮ ಎನ್ನುವ ಬಗ್ಗೆ ಈಗ ಚರ್ಚೆ ಜೋರಾಗಿದೆ.

    ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ ಮೊದಲ ಪಂದ್ಯದಲ್ಲೇ ವಿರಾಟ್ ವೀರಾವೇಷ ತೋರಿಸಿದ್ದಾರೆ. 50 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸೇರಿ 94 ರನ್ ಗಳಿಸಿದ ಕೊಹ್ಲಿ ತಂಡಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಉಳಿದರು. ಆದರೆ ರೋಹಿತ್ ಶರ್ಮಾ 8 ರನ್‍ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಇದನ್ನೂ ಓದಿ: 16 ಎಸೆತಗಳಲ್ಲಿ 50 ರನ್ – ಕೊಹ್ಲಿಯ ‘ನೋಟ್ ಬುಕ್ ಸೆಲಬ್ರೇಷನ್’ ಹಿಂದಿದೆ ಒಂದು ಕಥೆ

    ಅಂತರಾಷ್ಟ್ರೀಯ ಟಿ20 ರನ್ ನಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿ ಅವರಿಗೆ ನಾಲ್ಕು ರನ್‍ಗಳ ಅಗತ್ಯವಿದೆ. ಅಂತರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ 2,544 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 2,547 ರನ್ ದಾಖಲಿಸಿದ್ದಾರೆ. ಈ ಮೂಲಕ ರೋಹಿತ್‍ಗಿಂತ ಅತಿ ಕಡಿಮೆ ಪಂದ್ಯದಲ್ಲಿ ವಿರಾಟ್ 2,500 ರನ್‍ಗಳ ಗಡಿ ದಾಟಿದ್ದಾರೆ.

    ಅಂತರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ ಒಟ್ಟು 76 ಪಂದ್ಯಗಳಲ್ಲಿ 68 ಇನ್ನಿಂಗ್ಸ್ ಆಡಿದ್ದಾರೆ. ಈ ಪೈಕಿ 19 ಇನ್ನಿಂಗ್ಸ್ ಗಳಲ್ಲಿ ಅಜೇಯರಾಗಿ ಉಳಿದ ವಿರಾಟ್, ಟೀಂ ಇಂಡಿಯಾ ಪರ 51.91 ಸರಾಸರಿಯಲ್ಲಿ 2,544 ರನ್ ಸಿಡಿಸಿದ್ದಾರೆ. ವಿಂಡೀಸ್ ವಿರುದ್ಧ ಶುಕ್ರವಾರ ಗಳಿಸಿದ 94 ರನ್ ಕೊಹ್ಲಿ ಟಿ20 ವೃತ್ತಿ ಜೀವನ ಶ್ರೇಷ್ಠ ರನ್ ರೇಟ್ ಆಗಿದೆ. ಟಿ20ಯಲ್ಲಿ ವಿರಾಟ್ 23 ಅರ್ಧಶತಕ ಬಾರಿಸಿದ್ದು, 241 ಬೌಂಡರಿ ಹಾಗೂ 64 ಸಿಕ್ಸರ್ ದಾಖಲಿಸಿದ್ದಾರೆ.

    ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20ಯಲ್ಲಿ 102 ಪಂದ್ಯಗಳ ಪೈಕಿ 94 ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದಾರೆ. ಇದರಲ್ಲಿ 14 ಇನ್ನಿಂಗ್ಸ್ ಗಳಲ್ಲಿ ಔಟಾಗದೆ ಉಳಿದಿದ್ದು, 31.83 ಸರಾಸರಿಯಲ್ಲಿ 2,547 ರನ್ ಗಳಿಸಿದ್ದಾರೆ. ನಾಲ್ಕು ಶತಕ ಹಾಗೂ 18 ಅರ್ಧಶತಕವನ್ನು ರೋಹಿತ್ ದಾಖಲಿಸಿದ್ದಾರೆ. ಈವರೆಗೆ ಹಿಟ್‍ಮ್ಯಾನ್ 226 ಬೌಂಡರಿ ಹಾಗೂ 115 ಸಿಕ್ಸರ್ ಸಿಡಿಸಿದ್ದಾರೆ.

    50+ ರನ್ ಕೊಹ್ಲಿ ಟಾಪ್:
    ಅಂತರಾಷ್ಟ್ರೀಯ ಟಿ20ಯಲ್ಲಿ 50ಕ್ಕಿಂತ ಹೆಚ್ಚು ರನ್ ಸಿಡಿದ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 23 ಬಾರಿ ಈ ಸಾಧನೆ ಮಾಡಿದರೆ, ರೋಹಿತ್ ಶರ್ಮಾ 22 ಬಾರಿ 50+ ರನ್ ಸಿಡಿದ್ದಾರೆ. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್‍ನ ಆಟಗಾರ ಮಾರ್ಟಿನ್ ಗಪ್ಟಿಲ್ ಮೂರನೇ ಸ್ಥಾನದಲ್ಲಿದ್ದು, ಅವರು 17 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಐರ್ಲೆಂಡ್‍ನ ಬ್ಯಾಟ್ಸ್‍ಮನ್ ಪಾಲ್ ಸ್ಟಿರ್ಲಿಂಗ್ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ತಲಾ 16 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ.

  • 7 ರನ್‍ಗೆ ಆಲೌಟ್ – 754 ರನ್‍ಗಳ ಭರ್ಜರಿ ಜಯ ಸಾಧಿಸಿ ದಾಖಲೆ

    7 ರನ್‍ಗೆ ಆಲೌಟ್ – 754 ರನ್‍ಗಳ ಭರ್ಜರಿ ಜಯ ಸಾಧಿಸಿ ದಾಖಲೆ

    – ಎಲ್ಲ ಆಟಗಾರರು ಶೂನ್ಯಕ್ಕೆ ಔಟ್
    – 7 ರನ್ ಬಂದಿದ್ದು ಇತರೇ ರನ್‍ಗಳಿಂದ

    ಮುಂಬೈ: ಅಂತರ್ ಶಾಲಾ ಕ್ರಿಕೆಟ್ ಟೂರ್ನಿಯೊಂದರಲ್ಲಿ ತಂಡವೊಂದು ಏಳು ರನ್‍ಗೆ ಆಲೌಟ್ ಆಗಿ ಎದುರಾಳಿ ತಂಡ 754 ರನ್‍ಗಳ ಭರ್ಜರಿ ಜಯ ಸಾಧಿಸಿ ದಾಖಲೆ ಬರೆದಿರುವ ಘಟನೆ ಅಧೇರಿ ಪ್ರದೇಶದಲ್ಲಿ ನಡೆದಿದೆ.

    ಅಂಧೇರಿ ಮೂಲದ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಮತ್ತು ಬೊರಿವಲಿಯಲ್ಲಿ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ (ಎಸ್‍ವಿಐಎಸ್) ನಡುವೆ ಈ ಪಂದ್ಯ ನಡೆದಿದ್ದು, ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಏಳು ರನ್‍ಗೆ ಆಲೌಟ್ ಆಗಿದೆ. ಪಂದ್ಯದ ಇನ್ನೊಂದು ವಿಶೇಷವೆಂದರೆ ಎದುರಾಳಿ ತಂಡದ ಬೌಲರ್ ನ ಎಡವಟ್ಟಿನಿಂದ ಈ ಏಳು ರನ್ ಬಂದಿದೆ.

    ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ಮೀತ್ ಮಯೇಕರ್ ಅಜೇಯ ತ್ರಿಶತಕದ 338 ರನ್ ನೆರವಿನಿಂದ 39 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 761 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು. ಇದರಲ್ಲಿ ಕೇವಲ 134 ಎಸೆತಗಳನ್ನು ಎದುರಿಸಿದ ಮಯೇಕರ್ 56 ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್ ಗಳೊಂದಿಗೆ 338 ರನ್ ಸಿಡಿಸಿದರು.

    ನಿಗದಿತ ಮೂರು ಗಂಟೆಯ ಒಳಗಡೆ 45 ಓವರ್ ಬೌಲಿಂಗ್ ಮಾಡಬೇಕಿತ್ತು. ಆದರೆ ಮೂರು ಗಂಟೆಯಲ್ಲಿ 39 ಓವರ್ ಮಾತ್ರ ಎಸೆದಿದ್ದಕ್ಕೆ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಗೆ ಟೂರ್ನಿ ಆಯೋಜಕರು 156 ರನ್ ಪೆನಾಲ್ಟಿಯನ್ನು ಹಾಕಿದ್ದರು. ಮಯೇಕರ್ ತ್ರಿಶತಕದ ಹೊರತಾಗಿ ಕೃಷ್ಣ ಪಾರ್ಟೆ 95 ರನ್ ಹಾಗೂ ಇಶಾನ್ ರಾಯ್ 67 ರನ್ ಹೊಡೆದು ಬ್ಯಾಟಿಂಗ್‍ನಲ್ಲಿ ಮಿಂಚಿದರು.

    761 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ಬಂದ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಬ್ಯಾಟ್ಸ್ ಮ್ಯಾನ್‍ಗಳು ಎದುರಾಳಿ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋದರು. 6 ಓವರ್ ಗಳಲ್ಲಿ ಎಲ್ಲಾ ಆಟಗಾರರನ್ನು ಡಕ್ ಔಟ್ ಮಾಡಿದ ಎಸ್‍ವಿಐಎಸ್ ಶಾಲೆ ಬೌಲರ್ ಗಳು ಎದುರಾಳಿ ತಂಡದ ಬ್ಯಾಟ್ಸ್ ಮ್ಯಾನ್ ಗಳನ್ನು ಪೆವಿಲಿಯನ್ ಪರೆಡ್ ಮಾಡಿಸಿದರು. ಇದರ ಎಸ್‍ವಿಐಎಸ್ ಸ್ಕೂಲ್ ತಂಡದ ವೇಗಿ ಅಲೋಕ್ ಪಾಲ್ ಮೂರು ಓವರಿನಲ್ಲಿ ಮೂರು ಇತರೇ ರನ್ ನೀಡಿ ಆರು ವಿಕೆಟ್ ಪಡೆದರು. ಇದಕ್ಕೆ ಸಾಥ್ ನೀಡಿದ ನಾಯಕ ವರೋದ್ ವೇಜ್ ಮೂರು ಓವರ್ ಎಸೆದು ಎರಡು ವಿಕೆಟ್ ಕಿತ್ತರು. ಇಬ್ಬರು ಆಟಗಾರರು ರನೌಟ್ ಆಗಿದ್ದಾರೆ.

    ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಒಂದು ರನ್ ಕೂಡ ಬ್ಯಾಟಿನಿಂದ ಬರಲಿಲ್ಲ. ತಂಡ ಗಳಿಸಿದ 7 ರನ್ ಕೂಡ ಎದುರಾಳಿ ತಂಡ ನೀಡಿದ ಗಿಫ್ಟ್ ಆಗಿತ್ತು. ಇದರಲ್ಲಿ ಅಲೋಕ್ ಪಾಲ್ ಮೂರು ವೈಡ್ ಎಸೆದರೆ ವರೋದ್ ಮೂರು ವೈಡ್ ಬಾಲ್ ಮಾಡಿದ್ದರು. ಇನ್ನೊಂದು ರನ್ ಬೈ ಮೂಲಕ ಬಂದಿದೆ. ಈ ಮೂಲಕ ಎಸ್‍ವಿಐಎಸ್ ತಂಡ 754 ರನ್‍ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ದಾಖಲೆ ಬರೆದಿದೆ.

  • ದಿಢೀರ್ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ದಿಗ್ಗಜ ಆಟಗಾರ

    ದಿಢೀರ್ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ದಿಗ್ಗಜ ಆಟಗಾರ

    ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರವಾಗಿ ಕಳೆದ ಮೂರು ದಿನಗಳ ಅವಧಿಯಲ್ಲಿ ಮತ್ತೊಬ್ಬ ದಿಗ್ಗಜ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. ಸೋಮವಾರ ಡೇಲ್ ಸ್ಟೇಯ್ನ್ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಆ ಬಳಿಕ ಅನುಭವಿ ಆಟಗಾರ ಹಾಶೀಮ್ ಆಮ್ಲಾ ವಿದಾಯ ಘೋಷಿಸಿದ್ದಾರೆ.

    ತಮ್ಮ ವಿಶೇಷ ಬ್ಯಾಟಿಂಗ್ ಶೈಲಿ ಮತ್ತು ಏಕಾಗ್ರತೆ 36 ವರ್ಷದ ಅಮ್ಲಾ ಅವರಿಗೆ ಕ್ರಿಕೆಟ್‍ನಲ್ಲಿ ವಿಶೇಷ ಸ್ಥಾನಮಾನ ಲಭಿಸುವಂತೆ ಮಾಡಿತ್ತು. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿರುವ ಅವರು ದೇಶಿಯ ಟೂರ್ನಿಗಳಲ್ಲಿ ಆಡುವುದಾಗಿ ಹೇಳಿದ್ದಾರೆ.

    ಇತ್ತೀಚೆಗೆ ಫಾರ್ಮ್ ಸಮಸ್ಯೆ ಎದುರಿಸಿದ್ದ ಆಮ್ಲಾ ಅಂತಿಮ 29 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ 1 ಶತಕವನ್ನು ಗಳಿಸಿರಲಿಲ್ಲ. ಅಲ್ಲದೇ ವಿಶ್ವಕಪ್ ಕ್ರಿಕೆಟ್‍ನಲ್ಲೂ 7 ಇನ್ನಿಂಗ್ಸ್ ಗಳಿಂದ ಕೇವಲ 203 ರನ್ ಸಿಡಿಸಿದ್ದರು. ಇದುವರೆಗೂ 124 ಟೆಸ್ಟ್ ಆಡಿರುವ ಆಮ್ಲಾ 9,282 ರನ್ ಗಳಿಸಿದ್ದಾರೆ. ವಿಶೇಷ ಎಂದರೆ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ಏಕೈಕಾ ಆಟಗಾರರಾಗಿದ್ದಾರೆ. ಅಜೇಯ 311 ರನ್ ಅವರ ಟೆಸ್ಟ್ ಕ್ರಿಕೆಟ್‍ನ ಅಧಿಕ ಸ್ಕೋರ್. 181 ಏಕದಿನ ಪಂದ್ಯಗಳಿಂದ 8,113 ರನ್ ಗಳಿಸಿದ್ದು, ಇದರಲ್ಲಿ 27 ಶತಕ, 39 ಅರ್ಧ ಶತಕಗಳು ಸೇರಿದೆ. ಉಳಿದಂತೆ 44 ಟಿ20 ಪಂದ್ಯಗಳನ್ನು ಆಡಿದ್ದು, 8 ಅರ್ಧ ಶತಕ ಗಳಿಸಿ 1,277 ರನ್ ಗಳಿಸಿದ್ದಾರೆ.

    ಭಾರತದಲ್ಲಿ ನಡೆದ ಕ್ರಿಕೆಟ್ ಸರಣಿಗಳಲ್ಲಿ ಭಾಗವಹಿಸಿದ್ದ ಆಮ್ಲಾ 2004 ರಲ್ಲಿ ವಿಫಲವಾದರು 2008ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2010ರ ಸರಣಿಯಲ್ಲಿ ಆಡಿದ ಮೂರು ಇನ್ನಿಂಗ್ಸ್ ಗಳಲ್ಲಿ ಅಜೇಯ 253 ರನ್, 114 ರನ್, ಅಜೇಯ 123 ರನ್ ಗಳಿಸಿ ಸರಣಿಯನ್ನು ಸ್ಮರಣೀಯವಾಗಿಕೊಂಡಿದ್ದರು. ಅಲ್ಲದೇ 2015 ರಲ್ಲಿ ತಂಡದ ನಾಯಕತ್ವದೊಂದಿಗೆ ಆಗಮಿಸಿ ಸರಣಿಯನ್ನು 0-3 ಅಂತರದಲ್ಲಿ ಗೆದ್ದುಕೊಂಡಿದ್ದರು. ಅದರಲ್ಲೂ ದೆಹಲಿಯಲ್ಲಿ ನಡೆದಿದ್ದ, ಟೆಸ್ಟ್ ಪಂದ್ಯದಲ್ಲಿ ತಂಡದ ಗೆಲುವಿಗಾಗಿ 244 ಎಸೆತಗಳಲ್ಲಿ 25 ರನ್ ಗಳಿಸಿದ್ದರು ಮಾತ್ರ ಯಾರು ಮರೆಯಲು ಸಾಧ್ಯವಿಲ್ಲ. ಉಳಿದಂತೆ ಐಪಿಎಲ್ ನಲ್ಲೂ ಆಡಿದ್ದ ಆಮ್ಲಾ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಗಿದ್ದರು. ಉಳಿದಂತೆ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿಯೂ ಆಡಿದ್ದರು.

  • ಅತಿ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟ್ಸ್‌ಮನ್ – ವಿಡಿಯೋ ನೋಡಿ

    ಅತಿ ಆತ್ಮವಿಶ್ವಾಸದಿಂದ ಎಡವಟ್ಟು ಮಾಡಿಕೊಂಡ ಪಾಕ್ ಬ್ಯಾಟ್ಸ್‌ಮನ್ – ವಿಡಿಯೋ ನೋಡಿ

    ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕ್ ಹಾಗೂ ಆಸೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್‌ಮನ್ ಅಝರ್ ಅಲಿ ಹಾಸ್ಯಾಸ್ಪದ ರೀತಿಯಲ್ಲಿ ಔಟಾಗುವ ಮೂಲಕ ಸುದ್ದಿಯಾಗಿದ್ದಾರೆ.

    ಟೆಸ್ಟ್ 3ನೇ ದಿನದಾಟದ 53ನೇ ಓವರ್ ಬೌಲ್ ಮಾಡುತ್ತಿದ್ದ ಪೀಟರ್ ಸಿಡ್ಲ್ ಎಸೆತವನ್ನ ಅಲಿ ಬೌಂಡರಿಯತ್ತ ಬಾರಿಸಿದ್ದರು. ವೇಗವಾಗಿ ಸಾಗುತ್ತಿದ್ದ ಚೆಂಡನ್ನು ಕಂಡ ಅಲಿ ಬೌಂಡರಿ ತಲುಪುತ್ತದೆ ಎಂಬ ಅತಿ ಆತ್ಮವಿಶ್ವಾದಿಂದ ರನ್ ಗಳಿಸದೇ ಮತ್ತೊಂದು ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಅಸಾದ್ ಶಫಿಕ್ ರೊಂದಿಗೆ ಮಾತುಕತೆಗಿಳಿದಿದ್ದರು.

    https://twitter.com/floz_11/status/1052815846907596801

    ಈ ವೇಳೆ ಬೌಂಡರಿಯಲ್ಲಿದ್ದ ಮಿಚಲ್ ಸ್ಟರ್ಕ್ ಬಾಲ್ ಪಡೆದು ಕೀಪರ್ ನತ್ತ ಎಸೆದರು. ಬಾಲ್ ಪಡೆದ ಕೀಪರ್ ಟಿಮ್ ಪೈನೆ ರನೌಟ್ ಮಾಡಿ ಸಂಭ್ರಮಿಸಲು ಆರಂಭಿಸಿದರು. ಯಾವುದರ ಅರಿವು ಇಲ್ಲದ 64 ರನ್ ಗಳಿಸಿದ್ದ ಅಲಿ ಅಂಪೈರ್ ಔಟ್ ನೀಡುತ್ತಿದಂತೆ ಪೆವಿಲಿಯನ್ ಕಡೆ ಮುಖ ಮಾಡಿದರು. ಇದರೊಂದಿಗೆ ಪಾಕ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ 4ನೇ ವಿಕೆಟ್ ಕಳೆದುಕೊಂಡಿತ್ತು.

    ಪಂದ್ಯದ ಮೇಲೆ ಎರಡು ತಂಡಗಳು ಬಿಗಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ಪಾಕ್ 538 ರನ್ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇತ್ತ ಮೊದಲ ಇನ್ನಿಂಗ್ಸ್ ನಲ್ಲಿ 145 ರನ್ ಗಳಿಗೆ ಅಲೌಟ್ ಆಗಿದ್ದ ಆಸೀಸ್ 2ನೇ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ತಿರುಗೇಟು ನೀಡುವ ವಿಶ್ವಾಸದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/floz_11/status/1052812986325204992